Author name: editor

ಪ್ರಾದೇಶಿಕ ವಾರ್ತೆಗಳು

ರೋಟರಿ ಕ್ಲಬ್ ಮಂಗಳೂರು ಮೆಟ್ರೋ ವತಿಯಿಂದ ಅಲಂಬನ ವೃದ್ದಾಶ್ರಮಕ್ಕೆ 6.5 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಸಾಮಾಗ್ರಿ ಕೊಡುಗೆ

ಮಂಗಳೂರು ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಸಂಸ್ಥೆ ವತಿಯಿಂದ “ಚಿರಂತನ ಚ್ಯಾರಿಟೇಬಲ್ ಟ್ರಸ್ಟ್” ನಡೆಸುವ ವಿಟ್ಲ ವೃದ್ಧಾಶ್ರಮ *ಆಲಂಬನಕ್ಕೆ* 6.5 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಸಾಮಾಗ್ರಿಗಳ ಕೊಡುಗೆಯನ್ನು  ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಸತೀಶ್ ಬೋಳಾರ್   ಹಸ್ತಾಂತರಿಸಿದರು. ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಅಧ್ಯಕ್ಷ ರೋಟೆರಿಯನ್ ಶ್ಯಾಮ್ ಪ್ರಕಾಶ್ ರೊಟೇರಿಯನ್ ಗಳಾದ ಸಹಾಯಕ ಗವರ್ನರ್ ಡಾ. ಅರವಿಂದ್ ಪಿ.,  ಮಾಜಿ ಜಿಲ್ಲಾ ಗವರ್ನರ್ ಪಿ. ರಂಗನಾಥ್ ಭಟ್, ಕಾರ್ಯದರ್ಶಿ ರೊಟೇರಿಯನ್ ನರೇಂದ್ರ ಪ್ರಭು ಜೊತೆಯಾದರು. ಮಾಜಿ ಜಿಲ್ಲಾ ಗವರ್ನರ್ ಪಿ. ರಂಗನಾಥ್ ಭಟ್  ತನ್ನ ಕ್ಲಬ್ ನ ಪರವಾಗಿ ರುಪಾಯಿ ಒಂದು ಲಕ್ಷದ ದೇಣಿಗೆಯನ್ನು ನೀಡಿದರು. ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷರಾದ ರೊಟೇರಿಯನ್ ಕ್ಯಾಪ್ಟನ್ ದಾಸಪ್ಪ ಪೂಜಾರಿ,  ಕಾರ್ಯದರ್ಶಿ ರೊಟೇರಿಯನ್ ಕ್ಲಿಫರ್ಡ್ ವೇಗಸ್ ಭಾಗಿಯಾದರು. ರೋಟರಿ ಕ್ಲಬ್   ಮಂಗಳೂರು ಮೆಟ್ರೊ ಹಾಗೂ ರೋಟರಿ ಕ್ಲಬ್ ವಿಟ್ಲದ ಹಲವು ಸದಸ್ಯರುಗಳು ಹಾಗೂ ಬಂಟ್ವಾಳದ ರೊಟೇರಿಯನ್ ರಿತೇಶ್ ಬಾಳಿಗ ಉಪಸ್ಥಿತರಿದ್ದರು. ಚಿರಂತನದ ಆಡಳಿತ ಟ್ರಸ್ಟೀ  ಭಾರಾವಿ ದೇರಾಜೆ  ಸಂಸ್ಥೆ ನಡೆದು ಬಂದ ದಾರಿಯನ್ನು ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿನ ರೋಟರಿ ಕ್ಲಬ್ ಬೆಳ್ತಂಗಡಿಯ  ಡಾ. ಗೋವಿಂದ ಕಿಶೋರ್ ಅವರ ದೇಣಿಗೆ,  ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ  ಕಾರ್ಯದರ್ಶಿ ಜಗನ್ನಾತ್ ಅರಿಯಡ್ಕ  ಇವರ ರೇಖಾಚಿತ್ರಗಳ ಕೊಡುಗೆಯನ್ನು  ಸ್ಮರಿಸಿ,  ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಪ್ರತಿಷ್ಟಿತ ಈಶ್ವರಾ ನುಗ್ರಹ ಗೌರವ ಪುರಸ್ಕಾರ

ಸಾಮಾಜಿಕ ಕಳಕಳಿಯ ವೈದ್ಯರು, ಪ್ರಾಧ್ಯಾಪಕರು, ಪತ್ರಕರ್ತ-ಸಾಹಿತಿಗಳು, ಯಶಸ್ವಿ ಸಂಘಟಕರು ಹಾಗೂ ಸಮಾಜ ವಿಜ್ಞಾನಿಯೂ ಆಗಿರುವ ಬಹುಮುಖ ಪ್ರತಿಭೆಯ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಪ್ರತಿಷ್ಠಿತ ಈಶ್ವರಾನುಗ್ರಹ ಗೌರವ ಪುರಸ್ಕಾರ’ ನೀಡಿ ಭಕ್ತಿಪೂರ್ವಕವಾಗಿ ಗೌರವಿಸಲಾಯಿತು.ಶ್ರೀ ಕ್ಷೇತ್ರ ಶಂಕರಪುರದ ಶ್ರೀ ದ್ವಾರಕಾ ಮಠ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರದ ದರ್ಬಾರಿನಲ್ಲಿ ಜರುಗಿದ ಈ ವಿಶೇಷ ಗೌರವ ಸನ್ಮಾನ ಸಮಾರಂಭವನ್ನು ಶ್ರೀ ಸಾಯಿ ಸಾಂತ್ವನ ಮಂದಿರದ ರೂವಾರಿಗಳಾದ ಶ್ರೀ ಸಾಯಿ ಈಶ್ವರ ಗುರೂಜಿ ಹಾಗೂ ಅವರ ಬಳಗ ಅತ್ಯಂತ ವೈಭವದಿಂದ ಆಯೋಜಿಸಿತ್ತು. ಕಳೆದ ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದ ಜೊತೆಗೆ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಡಾ. ಅಣ್ಣಯ್ಯ ಕುಲಾಲ್ ಅವರ ನಿಷ್ಕಾಮ ಸೇವೆಯನ್ನು ಗುರುತಿಸಿ ಈ ಗೌರವವನ್ನು ಸಮರ್ಪಿಸಲಾಗಿದೆ. ಇವರ ನಿಸ್ವಾರ್ಥ ಸಮಾಜಸೇವೆಯನ್ನು ಪರಿಗಣಿಸಿ ಈಗಾಗಲೇ ರಾಷ್ಟ್ರ ಮಟ್ಟದ ಅತ್ಯುನ್ನತ ‘ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ,’ದೇವರಾಜ ಅರಸು’ ಪುರಸ್ಕಾರ ಲಭಿಸಿರುವುದು ಇವರ ಸೇವಾ ನಿಷ್ಠೆಗೆ ಸಾಕ್ಷಿಯಾಗಿದೆ.ಮಂದಿರದ ಸಭಾಂಗಣದಲ್ಲಿ ನಡೆದ ಈ ಅಪರೂಪದ ಕ್ಷಣಕ್ಕೆ ಮಂದಿರದ ಧರ್ಮದರ್ಶಿಗಳು, ದಾನಿಗಳು ಹಾಗೂ ನೂರಾರು ಸಾಯಿ ಭಕ್ತಾದಿಗಳು ಸಾಕ್ಷಿಯಾದರು. ಈ ಮಂಗಲಕರ ಸಮಾರಂಭದಲ್ಲಿ ಶ್ರೀ ಸಾಯಿ ಈಶ್ವರ ಗುರೂಜಿ ಅವರ ದಿವ್ಯ ಉಪಸ್ಥಿತಿಯೊಂದಿಗೆ ಶ್ರೀಮತಿ ವೀಣಾ ಶೆಟ್ಟಿ, ಶ್ರೀಮತಿ ಗೀತಾಂಜಲಿ ಸುವರ್ಣ, ವಿನೋದ ಜೋಗಿ, ಪ್ರಗತಿಪರ ಕೃಷಿಕ, ಸಮಾಜ ಸೇವಕ, ಜಯಕರ ಪೂಜಾರಿ ಹೆಜಮಾಡಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿ, ಡಾ. ಕುಲಾಲ್ ಅವರ ಮುಂದಿನ ಸಮಾಜಮುಖಿ ಕಾಯಕಕ್ಕೆ ಭಾವಪೂರ್ಣ ಶುಭ ಹಾರೈಸಿದರು.

ಪ್ರಾದೇಶಿಕ ವಾರ್ತೆಗಳು

ಆಟಿ ಕೂಟಗಳಿಗೆ ಯುವವಾಹಿನಿಯೇ ಪ್ರೇರಣೆ

ಮೂಲ್ಕಿ : ಆಟಿಡೊಂಜಿ ದಿನ ಕಾರ್ಯಕ್ರಮವನ್ನು ದಯಾನಂದ ಹೆಜ್ಜಾಡಿ ಉದ್ಘಾಟಿಸಿದರು.ಇಂದು ಕರಾವಳಿಯಾದ್ಯಂತ ಆಟಿ ಕೂಟ ಗಳು ಅದ್ದೂರಿಯಾಗಿ ನಡೆಯುತ್ತಿದ್ದರೆ ಅದಕ್ಕೆ ಮೂಲ್ಕಿ ಯುವವಾಹಿನಿಯೇ ಮೂಲ ಕಾರಣ ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಅಡಳಿತ ಮೊತ್ತೇಸರ ದಯಾನಂದ ಹೆಜ್ಜಾಡಿ ಹೇಳಿದರು.ಆಟಿ ಕೂಟಗಳ ನಿರ್ಮಾತೃ ಮೂಲ್ಕಿ ಯುವವಾಹಿನಿ 24 ವರ್ಷದ ಆಟಿಡೊಂಜಿ ದಿನ ಕಾಠ್ಯಕ್ರಮವನ್ನು ಮೂಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಚಿಮಿಣಿ ಲ್ಯಾಂಪ್ ಬೆಳಗಿಸುವ ಮೂಲಕ ಹಿಂದಿನ ಕಾಲಘಟ್ಟದ ನೆನಪನ್ನು ಮಾಡಿಕೊಂಡು ವಿಶಿಷ್ಣವಾಗಿ ಉದ್ಘಾಟಿಸಿ ಮಾತನಾಡಿದರು.ಆಟಿದ ಮದಿಪು ನೀಡಿದ ಉಗ್ಗೆಲ್‌ಬೆಟ್ಟು ಶ್ರೀ ಬ್ರಹ್ಮಬೈದೇರು ಮತ್ತು ಚಿಕ್ಕಮ್ಮ ದೇವಿ ಗರೋಡಿ ಅಧ್ಯಕ್ಷ ದಯಾನಂದ ಕರ್ಕೇರ ಮಾತನಾಡಿ, ಮರೆಯಾಗುತ್ತಿರುವ ತುಳುನಾಡ ಸಂಪ್ರದಾಯಗಳು ಇದೀಗ ವೇದಿಕೆಯ ಮೂಲಕ ಪ್ರಚುರ ಪಡಿಸಲಾಗುತ್ತಿದೆ ಈ ಪರಂಪರೆ ಉಳಿಯಬೇಕಾದರೆ ಯುವ ಸಮುದಾಯವನ್ನು ಯುವವಾಹಿನಿ ಸಂಸ್ಥೆಯಲ್ಲಿ ಬೆಳೆಸಬೇಕಾಗಿದೆ ಎಂದರು.ಹರಿಯ ಸಮಾಜ ಸೇವಕ ವಾಸು ಪೂಜಾರಿ ಚಿತ್ರಾಪು ಅವರನ್ನು ಆಟಿದ ತಮ್ಮನದೊಂದಿಗೆ ಸನ್ಮಾನಿಸಲಾಯಿತು.ಕುಡ್ಲ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಮೂಲ್ಕಿ ರೋಟರಿ ಕ್ಲಬ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿದರು. ಕಾರ್ಯಕ್ರಮ ನಿರ್ದೇಶಕಿ ಚಿತ್ರಾ ಸುರೇಶ್ ಜತ್ತನ್ನ ಮತ್ತು ಯುವವಾಹಿನಿ ಕೋಶಾಧಿಕಾರಿ ಭವಿಷ್ ಬಿ. ಸಾಲ್ಯಾನ್ ಇದ್ದರು.ಮೂಲ್ಕಿ ಯುವವಾಹಿನಿ ಘಟಕ ಅಧ್ಯಕ್ಷೆ ಚರಿಷ್ಠಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಜಯಕುಮಾರ್ ಕುಬೆವೂರು ಯಕ್ಷಗಾನ ಭಾಗವತಿಗೆ ಮೂಲಕ ಪ್ರಸ್ತಾವಿಸಿದರು. ನರೇಂದ್ರ ಕೆರೆಕಾಡು ಮತ್ತು ಮೋಹನ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.ಯುವವಾಹಿನಿ ಕಾರ್ಯದರ್ಶಿ ವೇದಾವತಿ ಜಯಕುಮಾರ್ ವಂದಿಸಿದರು. ಮೂಲ್ಕಿ ಯುವವಾಹಿನಿ ಕಲಾವಿದರಿಂದ ಆಟಿದ ನಲಿಕೆ- ಪದರಂಗಿತ, ಸಿನೆಮಾ ನಟರಾದ ಪ್ರಜ್ವಲ್ ಭಂಡಾರಿ, ಶಶಿರಾಜ್ ಆಚಾರ್ಯ ಪಡುಕುತ್ಯಾರು, ವಿನಾಯಕ ಜೆಪ್ಪು ಅವರಿಂದ ಆಟಿದ ತೆಲಿಕೆ ಹಾಸ್ಯ ಪ್ರಹಸನಗಳು : ನಡೆಯಿತು. ಬಳಿಕ ನಡೆದ ‘ಆಟಿದ ಅಟಿಲ್ಲದ ಕಮೈನೊ’ದಲ್ಲಿ 1,500ಕ್ಕೂ ಅಧಿಕ ಮಂದಿ ಆಟಿ ಊಟ ಸವಿದರು.ಹಿರಿಯ ಸಮಾಜ ಸೇವಕ ಶಿಕ್ಷಣ ತಜ್ಞ ಶ್ರೀ ವಾಸು ಪೂಜಾರಿ ಚಿತ್ರಾಪು ಅವರನ್ನು ಆಟಿದ ತಮ್ಮನದಲ್ಲಿ ವಿಶೇಷವಾಗಿ ಗೌರವಿಸಲಾಯಿತು

ಪ್ರಾದೇಶಿಕ ವಾರ್ತೆಗಳು

ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು

ಬಂಟ್ವಾಳ :ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ರಚನೆಯು ರಕ್ತೇಶ್ವರಿ ದೇವಸ್ಥಾನದ ನಡೆಯಿತು.ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ ಟೈಲರ್ ಕಾಮಾಜೆ,ಚರಣ್ ಜುಮಾದಿ ಗುಡ್ಡೆ, ಕಾರ್ಯದರ್ಶಿಯಾಗಿ ಎಂ.ಸತೀಶ್ ಶೆಟ್ಟಿ,ಜತೆ ಕಾರ್ಯದರ್ಶಿಯಾಗಿ ರಾಜೇಶ್ ಬಿ.ಮಹಾಕಾಳಿಬೆಟ್ಟು, ಪ್ರದೀಪ್ ಕೆ. ಎನ್. ಬಿ. ಸಿ. ರೋಡ್, ಕೋಶಾಧಿಕಾರಿಯಾಗಿ ಆಶಾ ಪಿ.ರೈ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿರಣ್ ಕುಮಾರ್,ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್,ಶರತ್ ಕುಮಾರ್. ಪ್ರಣಾಮ್ ಅಜ್ಜಿಬೆಟ್ಟು. ಗೀತಾ ವೈ.ಶೆಟ್ಟಿ, ಲಕ್ಷ್ಮಣ್ ರಾಜ್,. ಮಾಧವ ಕೈಕುಂಜೆ ನವೀನ್ ಶೆಟ್ಟಿ ಮಿತ್ತಬೈಲ್. ನಾಗೇಶ್ ಟೈಲರ್,ಭೋಜ ಸಾಲ್ಯಾನ್. ಶೈಲೇಶ್ ಕೈಕುಂಜೆ. ಅಕ್ಷಯ್ ಕಾಮಾಜೆ ಮೊದಲಾದವರು ಆಯ್ಕೆಯಾಗಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆ ಸಮಾಜಕ್ಕೆ ಒಳ್ಳೆಯ ಸಂದೇಶ -ಮುರಗೇಂದ್ರ ಬಸವರಾಜ ಶಿರೋಳಕರ

ಮಂಗಳೂರು,ಜು.29;ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆಯ ಮೂಲಕ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದಂತಾಗುತ್ತದೆ ಎಂದು ಉಪ ಸಾರಿಗೆ ಆಯುಕ್ತರು,ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆಅಧಿಕಾರಿ (ಪ್ರಭಾರ) ಮುರಗೇಂದ್ರ ಬಸವರಾಜ ಶಿರೋಳಕರ ತಿಳಿಸಿದ್ದಾರೆ.ಅವರು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ಮತ್ತು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ(ರಿ)ದ ವತಿಯಿಂದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡ ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆ ಮತ್ತು ಬಸ್ ಪಾಸ್ ವಿತರಣೆ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಾ, ಸಾರಿಗೆ ವ್ಯವಸ್ಥೆ ದೇಶದ ಜೀವನಾಡಿಗಳಿದ್ದಂತೆಮಂಗಳೂರು ಶತಮಾಗಳಿಂದಲೂ ಖಾಸಗಿ ಸಾರಿಗೆ ಸೇವೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಜಿಲ್ಲೆಯಲ್ಲಿ ಸುಮಾರು ಒಟ್ಟು 900 ಅಧಿಕ ಖಾಸಗಿ ಬಸ್ಸುಗಳು ಸಾರಿಗೆ ಸೌಲಭ್ಯ ವನ್ನು ಒದಗಿಸುತ್ತಿದೆ ಎಂದರು.ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನಜ್ಮಾ ಫಾರೂಕಿ ಮಾತನಾಡುತ್ತಾ,30 ವರ್ಷ ಗಳಿಂದಲೂ ಅಧಿಕ ವರ್ಷ ಚಾಲಕರಾಗಿ ಅಪಘಾತ ನಡೆಸದೆ ಇರುವುದು ಮಹತ್ವದ ಸಾಧನೆ.ಈ ಸಾಧನೆ ಇತರರಿಗೆ ಪ್ರೇರಣೆ ಯಾಗಬೇಕು.ಅಪಘಾತ ಸಂದರ್ಭದಲ್ಲಿ ಜನರಿಗೆ ತುರ್ತು ಸಹಾಯ ನೀಡಲು ಜಾರಿಯಾಗಿರುವ ಪ್ರಧಾನ ಮಂತ್ರಿ ರಾಹತ್ ಯೋಜನೆಯ ಬಗ್ಗೆ ಜನರಿಗೆ ಇನ್ನಷ್ಟು ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಿ ಮಾತನಾಡುತ್ತಾ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಮಾದರಿಯಾಗಿ ಸಾರಿಗೆ ಸೌಲಭ್ಯವನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಳೆದ 110 ವರ್ಷಗಳಿಂದಲೂ ನೀಡುತ್ತಾ ಬಂದಿದೆ. ಕೊರೋನಾ ಕಾಲದ ಸಂಕಷ್ಟದ ಸಂದರ್ಭದಲ್ಲೂ ಸಾಕಷ್ಟು ಕಷ್ಟ -ನಷ್ಟಗಳ ನಡುವೆ ಜನರಿಗೆ ಸೇವೆ ನೀಡುತ್ತಾ ಬಂದಿದೆ.ಇಂತಹ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ಬಸ್ಸುಗಳ ನಡುವೆ ಆರೋಗ್ಯ ಕರ ಸ್ಪರ್ಧೆ ಇದ್ದರೆ ಉತ್ತಮ.ಅನಾರೋಗ್ಯಕರ ಸ್ಪರ್ಧೆ ಬೇಡ ಎಂದರು.ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಾದ ಎಂ.ಪಿ.ಅಶೋಕ,ಶಶಿಕುಮಾರ್,ಅಲೆಕ್ಸ್ ಕ್ರಾಸ್ತಾ,ಪ್ರವೀಣ್ ಕುಮಾರ ಇವರನ್ನು ಸಮಾರಂಭದಲ್ಲಿ ಅತಿಥಿಗಳು ಮತ್ತು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ರಾಜ್ಯ ಸಮಿತಿ ಸದಸ್ಯರಾದ ಶ್ರೀನಿವಾಸ ನಾಯಕ್ ಇಂದಾಜೆಅಪಘಾತ ರಹಿತ ಚಾಲಕರನ್ನು ಗೌರವಿಸಿ ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ (ರಿ)ದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಲ್‌ಫ್ರೆಡ್ ಡಿ’ಸೋಜ,ಕಾರ್ಯದರ್ಶಿಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್ ಜಾರ ಮತ್ತು ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ,ಜೀವನ್ ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ (ರಿ)ದ ಉಪಾಧ್ಯಕ್ಷ ರಾಮಚಂದ್ರ ನಾಯಕ್ ,ಪ್ರಧಾನ ಕಾರ್ಯದರ್ಶಿರಾಮಚಂದ್ರ ಪಿಲಾರುಕೋಶಾಧಿಕಾರಿ ದಿಲ್ ರಾಜ್ ಫೆರ್ನಾಂಢೀಸ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

Bank of Baroda Q1FY27 Financial Results: Comprehensive Overview

Bank of Baroda has released its financial results for the quarter ended 30th June 2026, showcasing a sustained and strong growth momentum coupled with a healthy asset quality. The bank’s global business expanded significantly, reaching INR 30,50,457 crore and registering a year-on-year (YoY) growth of 15.4%. On the business performance front, the bank’s global advances grew by 17.4% YoY, while domestic advances recorded a 16.1% YoY increase, touching INR 11,50,906 crore. Total global advances stood at INR 14,16,898 crore, bolstered by international advances which grew by 23.3% YoY to reach INR 2,65,992 crore. Organic retail advances witnessed an impressive 18.4% YoY growth, driven by robust performances across segments including auto loans at 25.3%, mortgage loans at 27.4%, home loans at 14.7%, and education loans at 10.8%. Furthermore, the retail, agriculture, and MSME (RAM) portfolio grew by 16.5% YoY, accounting for 62.9% of total advances, with agriculture loans rising by 18.7% YoY to INR 1,91,989 crore, organic MSME portfolios growing by 20.3% YoY to INR 1,63,264 crore, and corporate advances increasing by 15.3% YoY to INR 4,27,082 crore. Deposit growth remained equally robust, with global deposits rising by 13.8% YoY to INR 16,33,559 crore and domestic deposits advancing by 14.7% YoY to INR 13,81,535 crore. Domestic CASA deposits registered a solid 10% YoY growth, reaching INR 5,21,149 crore, while international deposits grew by 8.9% YoY to stand at INR 2,52,024 crore. Regarding profitability and income metrics, the Net Interest Income (NII) for the quarter expanded by 9.5% YoY to INR 12,524 crore. Non-interest income was recorded at INR 3,470 crore, which was augmented by a treasury income of INR 893 crore, recovery from written-off accounts amounting to INR 1,006 crore, and PSLC income of INR 280 crore. Operating expenses remained well-controlled at INR 7,868 crore, marking a slight decline of 0.1% YoY, resulting in an operating profit of INR 8,127 crore. The bank’s quarterly net profit stood at INR 1,278 crore after absorbing the impact of a one-off exceptional settlement payout item; excluding this payout, the net profit would have been INR 5,528 crore. Consequently, the Return on Assets (ROA) was 0.25% (or 1.10% excluding the exceptional item), and the Return on Equity (ROE) stood at 3.89% (or 16.57% excluding the exceptional item). The cost of deposits for Q1FY27 improved to 4.66%, reducing by 12 basis points sequentially and 39 basis points YoY. The global Net Interest Margin (NIM) stood at 2.77% and the domestic NIM at 2.93%. Asset quality indicators showed continued strength as the Gross NPA ratio improved by 29 basis points YoY down to 1.99% from 2.28% in Q1FY26, while the Net NPA ratio decreased by 10 basis points YoY to 0.50%. The bank’s balance sheet remains highly robust, supported by a healthy Provision Coverage Ratio (PCR) of 93.28% including written-off accounts (TWO) and 75.07% excluding TWO. Additionally, the slippage ratio declined by 25 basis points YoY to 0.91%, and credit costs moderated to 0.29% compared with 0.55% in Q1FY26. Finally, in terms of capital adequacy, the bank maintained a solid capital position with a CRAR ratio of 16.30% as of 30th June 2026. Tier-I capital stood at 14.41% (comprising CET-1 at 13.90% and AT1 at 0.51%) and Tier-II capital stood at 1.89%. On a consolidated basis, the CRAR and CET-1 stood at 16.70% and 14.36% respectively, while the standalone quarterly average Liquidity Coverage Ratio (LCR) was approximately 127%.

ಪ್ರಾದೇಶಿಕ ವಾರ್ತೆಗಳು

ಬ್ಯಾಂಕ್ ಆಫ್ ಬರೋಡಾದ 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಣಕಾಸು ಫಲಿತಾಂಶಗಳು: ಪ್ರಮುಖ ಮುಖ್ಯಾಂಶಗಳು

ಬ್ಯಾಂಕ್ ಆಫ್ ಬರೋಡಾವು 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಬಲಿಷ್ಠ ಆಸ್ತಿ ಗುಣಮಟ್ಟದೊಂದಿಗೆ ತನ್ನ ನಿರಂತರ ಸದೃಢ ಬೆಳವಣಿಗೆಯನ್ನು ಯಶಸ್ವಿಯಾಗಿ ಮುಂದುವರೆಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಜಾಗತಿಕ ವ್ಯವಹಾರವು ಗಣನೀಯವಾಗಿ ಏರಿಕೆಯಾಗಿ ₹30,50,457 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 15.4 ಪ್ರತಿಶತದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್‌ನ ಒಟ್ಟು ಜಾಗತಿಕ ಮುಂಗಡಗಳು 17.4 ಪ್ರತಿಶತ ಹಾಗೂ ದೇಶೀಯ ಮುಂಗಡಗಳು 16.1 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿವೆ. ಪ್ರಮುಖವಾಗಿ ಆಟೋ ಸಾಲದಲ್ಲಿ 25.3 ಪ್ರತಿಶತ, ಮಾರ್ಟ್‌ಗೇಜ್ ಸಾಲದಲ್ಲಿ 27.4 ಪ್ರತಿಶತ, ಗೃಹ ಸಾಲದಲ್ಲಿ 14.7 ಪ್ರತಿಶತ ಹಾಗೂ ಶಿಕ್ಷಣ ಸಾಲ ವಿಭಾಗದಲ್ಲಿ 10.8 ಪ್ರತಿಶತದಷ್ಟು ಉತ್ತಮ ಪ್ರಗತಿ ಕಂಡುಬಂದಿದೆ. ಇದರ ಪರಿಣಾಮವಾಗಿ ಬ್ಯಾಂಕ್‌ನ ಸಾವಯವ ಚಿಲ್ಲರೆ ಮುಂಗಡಗಳು 18.4 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿವೆ. ಇದರೊಂದಿಗೆ ಚಿಲ್ಲರೆ, ಕೃಷಿ ಹಾಗೂ ಎಂಎಸ್‌ಎಂಇ (RAM) ಮುಂಗಡಗಳ ಪೋರ್ಟ್‌ಫೋಲಿಯೊ 16.5 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದ್ದು, ಒಟ್ಟು ಮುಂಗಡಗಳಲ್ಲಿ RAM ವಿಭಾಗದ ಪಾಲು ಶೇಕಡಾ 62.9ರಷ್ಟಿದೆ. ವ್ಯವಹಾರ ಸಾಧನೆಯ ವಿವರಗಳನ್ನು ಗಮನಿಸುವುದಾದರೆ, ದೇಶೀಯ ಮುಂಗಡಗಳು ₹11,50,906 ಕೋಟಿಗೆ ತಲುಪಿ 16.1 ಪ್ರತಿಶತ ಬೆಳವಣಿಗೆಯನ್ನು ದಾಖಲಿಸಿದ್ದರೆ, ಜಾಗತಿಕ ಮುಂಗಡಗಳು ₹14,16,898 ಕೋಟಿಗೆ ತಲುಪಿ 17.4 ಪ್ರತಿಶತ ಬೆಳವಣಿಗೆ ಸಾಧಿಸಿವೆ. ಅಂತರರಾಷ್ಟ್ರೀಯ ಮುಂಗಡಗಳು 23.3 ಪ್ರತಿಶತದಷ್ಟು ಪ್ರಗತಿಯೊಂದಿಗೆ ₹2,65,992 ಕೋಟಿಗೆ ಮುಟ್ಟಿವೆ. ಜಾಗತಿಕ ಠೇವಣಿಗಳು 13.8 ಪ್ರತಿಶತ ಹಾಗೂ ದೇಶೀಯ ಠೇವಣಿಗಳು 14.7 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿವೆ. ದೇಶೀಯ ಠೇವಣಿಗಳು ₹13,81,535 ಕೋಟಿಗೆ ತಲುಪಿದ್ದರೆ, ಜಾಗತಿಕ ಠೇವಣಿಗಳು ಒಟ್ಟು ₹16,33,559 ಕೋಟಿಗೆ ಮುಟ್ಟಿವೆ. ಇದರ ಜೊತೆಗೆ, ದೇಶೀಯ CASA ಠೇವಣಿಗಳು 10 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ ₹5,21,149 ಕೋಟಿಗೆ ತಲುಪಿದ್ದು, ಅಂತರರಾಷ್ಟ್ರೀಯ ಠೇವಣಿಗಳು 8.9 ಪ್ರತಿಶತ ಬೆಳವಣಿಗೆಯೊಂದಿಗೆ ₹2,52,024 ಕೋಟಿಯಾಗಿವೆ. ಕೃಷಿ ಸಾಲ ಪೋರ್ಟ್‌ಫೋಲಿಯೊ 18.7 ಪ್ರತಿಶತ ಬೆಳವಣಿಗೆಯೊಂದಿಗೆ ₹1,91,989 ಕೋಟಿಗೆ, ಸಾವಯವ ಎಂಎಸ್‌ಎಂಇ ಪೋರ್ಟ್‌ಫೋಲಿಯೊ 20.3 ಪ್ರತಿಶತ ಬೆಳವಣಿಗೆಯೊಂದಿಗೆ ₹1,63,264 ಕೋಟಿಗೆ ಮತ್ತು ಕಾರ್ಪೊರೇಟ್ ಮುಂಗಡಗಳು 15.3 ಪ್ರತಿಶತ ಬೆಳವಣಿಗೆಯೊಂದಿಗೆ ₹4,27,082 ಕೋಟಿಗೆ ತಲುಪಿವೆ. ಲಾಭದಾಯಕತೆ ಮತ್ತು ಆದಾಯದ ಮಗ್ಗಲುಗಳನ್ನು ಪರಿಶೀಲಿಸಿದಾಗ, ಸಮೀಕ್ಷೆಗೆ ಒಳಪಟ್ಟ ತ್ರೈಮಾಸಿಕದ ನಿವ್ವಳ ಬಡ್ಡಿ ಆದಾಯವು (NII) ಶೇಕಡಾ 9.5ರಷ್ಟು ಹೆಚ್ಚಳ ಕಂಡು ₹12,524 ಕೋಟಿಯಾಗಿದೆ. ತ್ರೈಮಾಸಿಕದ ಬಡ್ಡಿಯೇತರ ಆದಾಯವು ₹3,470 ಕೋಟಿಯಷ್ಟಿದ್ದು, ಇದರಲ್ಲಿ ಖಜಾನೆ ಆದಾಯ ₹893 ಕೋಟಿ, ಬರೆದುಹಾಕಲಾದ ಖಾತೆಗಳಿಂದ ವಸೂಲಾತಿ ₹1,006 ಕೋಟಿ ಹಾಗೂ ಪಿಎಸ್‌ಎಲ್‌ಸಿ ಆದಾಯ ₹280 ಕೋಟಿ ಸೇರಿವೆ. ಕಾರ್ಯಾಚರಣಾ ವೆಚ್ಚವು ₹7,868 ಕೋಟಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 0.1ರಷ್ಟು ಇಳಿಕೆಯಾಗಿದೆ. ಒಟ್ಟಾರೆ ಕಾರ್ಯಾಚರಣಾ ಲಾಭವು ₹8,127 ಕೋಟಿಯಷ್ಟಿದೆ. ಒಮ್ಮೆ ಮಾತ್ರ ಉಂಟಾದ ವಿಶೇಷ ವೆಚ್ಚದ ಪರಿಣಾಮವನ್ನು ಒಳಗೊಂಡ ಬಳಿಕ ತ್ರೈಮಾಸಿಕದ ನಿವ್ವಳ ಲಾಭವು ₹1,278 ಕೋಟಿಯಾಗಿದೆ. ಒಂದು ವೇಳೆ ಈ ವಿಶೇಷ ವೆಚ್ಚವನ್ನು ಪರಿಗಣಿಸದೆ ಇದ್ದಲ್ಲಿ ನಿವ್ವಳ ಲಾಭವು ₹5,528 ಕೋಟಿಯಾಗುತ್ತಿತ್ತು. ಜಾಗತಿಕ ನಿವ್ವಳ ಬಡ್ಡಿ ಮಾರ್ಜಿನ್ (NIM) ಶೇಕಡಾ 2.77ರಷ್ಟಿದ್ದರೆ, ದೇಶೀಯ NIM ಶೇಕಡಾ 2.93ರಷ್ಟಿದೆ. ಠೇವಣಿಗಳ ವೆಚ್ಚವು ಶೇಕಡಾ 4.66ರಷ್ಟಿದ್ದು, ಹಿಂದಿನ ತ್ರೈಮಾಸಿಕಕ್ಕಿಂತ 12 ಬೇಸಿಸ್ ಪಾಯಿಂಟ್‌ಗಳು ಹಾಗೂ ಕಳೆದ ವರ್ಷಕ್ಕೆ ಹೋಲಿಸಿದರೆ 39 ಬೇಸಿಸ್ ಪಾಯಿಂಟ್‌ಗಳಷ್ಟು ಗಣನೀಯವಾಗಿ ಕಡಿಮೆಯಾಗಿದೆ. ವಿಶೇಷ ವೆಚ್ಚವನ್ನು ಹೊರತುಪಡಿಸಿ ಆಸ್ತಿಗಳ ಮೇಲಿನ ಆದಾಯವು (ROA) ಶೇಕಡಾ 1.10ರಷ್ಟ (ಒಳಕೊಂಡ ಬಳಿಕ 0.25%) ಹಾಗೂ ಇಕ್ವಿಟಿಯ ಮೇಲಿನ ಆದಾಯವು (ROE) ಶೇಕಡಾ 16.57ರಷ್ಟ (ಒಳಕೊಂಡ ಬಳಿಕ 3.89%) ಇರುತ್ತಿತ್ತು. ಬ್ಯಾಂಕ್ ತನ್ನ ಅತ್ಯುತ್ತಮ ಆಸ್ತಿ ಗುಣಮಟ್ಟವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ. ಒಟ್ಟು ನಿರ್ವಹಣೆಯಲ್ಲದ ಆಸ್ತಿಗಳ (GNPA) ಅನುಪಾತವು 29 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಕೆಗೊಂಡು ಶೇಕಡಾ 1.99ಕ್ಕೆ ತಲುಪಿದೆ (ಕಳೆದ ವರ್ಷ ಇದು ಶೇಕಡಾ 2.28ರಷ್ಟಿತ್ತು). ಹಾಗೆಯೇ ನಿವ್ವಳ ನಿರ್ವಹಣೆಯಲ್ಲದ ಆಸ್ತಿಗಳ (NNPA) ಅನುಪಾತವು 10 ಬೇಸಿಸ್ ಪಾಯಿಂಟ್‌ಗಳಷ್ಟು ತಗ್ಗಿ ಶೇಕಡಾ 0.50ಕ್ಕೆ ತಲುಪಿದೆ. ಬ್ಯಾಂಕ್‌ನ ಪ್ರಾವಿಷನ್ ಕವರೇಜ್ ಅನುಪಾತವು (PCR) TWO ಸೇರಿದಂತೆ ಶೇಕಡಾ 93.28ರಷ್ಟು ಹಾಗೂ TWO ಹೊರತುಪಡಿಸಿ ಶೇಕಡಾ 75.07ರಷ್ಟಿದ್ದು, ಬ್ಯಾಲೆನ್ಸ್ ಶೀಟ್ ಅತ್ಯಂತ ದೃಢವಾಗಿದೆ. ಸ್ಲಿಪೇಜ್ ಅನುಪಾತವು 25 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿದು ಶೇಕಡಾ 0.91ಕ್ಕೆ ತಲುಪಿದೆ. ಕ್ರೆಡಿಟ್ ವೆಚ್ಚವು ಪ್ರಸಕ್ತ ತ್ರೈಮಾಸಿಕದಲ್ಲಿ ಶೇಕಡಾ 0.29ರಷ್ಟಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 0.55ರಷ್ಟಿತ್ತು. ಬಂಡವಾಳ ಸಮರ್ಪಕತೆಗೆ ಸಂಬಂಧಿಸಿದಂತೆ, 2026ರ ಜೂನ್ 30ರ ವೇಳೆಗೆ ಬ್ಯಾಂಕ್‌ನ ಬಂಡವಾಳ ಸಮರ್ಪಕತೆ ಅನುಪಾತವು (CRAR) ಶೇಕಡಾ 16.30ರಷ್ಟಿದ್ದು, ಬಲಿಷ್ಠ ಬಂಡವಾಳ ಸ್ಥಿತಿಯನ್ನು ಪ್ರದರ್ಶಿಸಿದೆ. ಇದರಲ್ಲಿ ಟೈರ್-I ಬಂಡವಾಳವು ಶೇಕಡಾ 14.41ರಷ್ಟಿದ್ದರೆ (ಸಿಇಟಿ-1: ಶೇಕಡಾ 13.90, ಎಟಿ-1: ಶೇಕಡಾ 0.51) ಹಾಗೂ ಟೈರ್-II ಬಂಡವಾಳವು ಶೇಕಡಾ 1.89ರಷ್ಟಿದೆ. ಏಕೀಕೃತ ಘಟಕದ CRAR ಶೇಕಡಾ 16.70 ಹಾಗೂ CET-1 ಶೇಕಡಾ 14.36ರಷ್ಟಿದೆ. ಅಲ್ಲದೆ, ತ್ರೈಮಾಸಿಕ ಸರಾಸರಿ ಲಿಕ್ವಿಡಿಟಿ ಕವರೇಜ್ ಅನುಪಾತವು (LCR) ಸುಮಾರು ಶೇಕಡಾ 127ರಷ್ಟಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ. ಅಕಾಡೆಮಿ ಸಾಹಿತ್ಯಕ್ಕೆ ಮೀಸಲಾಗಬೇಡಿ, ಸಂಸ್ಕೃತಿ, ಸಂಸ್ಕಾರ ಪಸರಿಸಿ : ಉಮಾನಾಥ ಕೋಟ್ಯಾನ್

ಮೂಲ್ಕಿ: ಪ್ರಶಸ್ತಿಗೆ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿತ್ವ ಪ್ರಾಮುಖ್ಯ, ಅಕಾಡೆಮಿಗಳು ಸಾಹಿತ್ಯಕ್ಕೆ ಸೀಮಿತವಾಗದೇ ತುಳುನಾಡಿನ ಸಂಸ್ಕಾರ, ಸಂಸ್ಕೃತಿಯನ್ನು ಪಸರಿಸಬೇಕು, ಸಮಾಜದಲ್ಲಿ ಸಾಹಿತ್ಯದ ಜೊತೆ ಜೊತೆಗೆ ಸಮಾಜ ಸ್ಪಂದನೆಯೂ ಮುಖ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣ ಸಮಾರಂಭದಲ್ಲಿ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಕಟೀಲು ದೇವಳದ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.ಕಸಾಪದ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರರವರು ಸಂಸ್ಮರಣ ಭಾಷಣ ಮಾಡಿದರು.ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಿ.ವಿ.ಪ್ರದೀಪ್‌ಕುಮಾರ್ ಕಥಾಬಿಂದು ರಚಿತ ಅದಿತಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರಿಗೆ ಹತ್ತು ಸಾವಿರ ನಗದು ಸಹಿತ ಕೊ. ಅ. ಉಡುಪ ಪ್ರಶಸ್ತಿ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು.ಕಾವೇರಿ, ಡೆನ್ಸಿಕಾ ಪಿರೇರಾ, ಆಯುಷ್, ಚೇತನ್ ವೈ ಶೆಟ್ಟಿಗಾರ್, ಯಜ್ಞ, ಕಿರಣ್ ದೇವಾಡಿಗ, ಲಕ್ಷ್ಮೀ ಉಡುಪ, ಅಂಜಲಿ, ಮನ್ವಿತಾ, ಸಿಂಚನಾ ಆಚಾರ್ಯ, ಸುಪ್ರಿತಾ, ಶ್ರಿಯಾ ಪೂಜಾರಿ, ಖುಷಿ, ತ್ರಿಶಾ ಪೂಜಾರಿ, ಕಿರಣ್ ಅವರಿಗೆ ವಿದ್ಯಾ ನಿಧಿಯನ್ನು ವಿತರಿಸಲಾಯಿತು.ಅನ್ಯ ಆಚಾರ್ಯ ಹಾಗೂ ಸ್ವಾತಿ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು.ಮುಂಬಯಿ ಉದ್ಯಮಿ ತಾಳಿಪಾಡಿ ರಾಮಚಂದ್ರ ಶೆಟ್ಟಿ, ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಹರಿಶ್ಚಂದ್ರ ಸಾಲ್ಯಾನ್, ಜಯರಾಂ ಉಡುಪ, ಕೃತಿಕಾರ ಪಿ.ವಿ.ಪ್ರದೀಪ್‌ಕುಮಾರ್, ಡಾ| ನಯನಾಭಿರಾಮ ಉಡುಪ ಇದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಕಲಾವಿದರಿಂದ ಶ್ರೀ ಹರಿ ಲೀಲಾರ್ವಣ ಯಕ್ಷಗಾನ ಪ್ರಸಂಗ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಅನುಷಾ ಕರ್ಕೇರ, ಗುರುರಾಜ್ ಭಟ್,ಶರತ್ ಶೆಟ್ಟಿ ನಿರೂಪಿಸಿದರು.

Scroll to Top