Author name: editor

ಪ್ರಾದೇಶಿಕ ವಾರ್ತೆಗಳು

ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಲೋಕೋಪಕಾರಿ, ಜನಪರ ಚಿಂತಕ, ನೇರ ನಡೆ ನುಡಿಯ ಸರದಾರ, ನಿರ್ಭೀತ ಮಾತಿನ ಹೃದಯಸ್ಪರ್ಶಿ ವಾಗ್ಮಿ, ನಿಸ್ವಾರ್ಥ ಸಮಾಜ ಸೇವಕ, ಕೊಡುಗೈ ದಾನಿ, ಬಂಟ ಸಮಾಜದ ಪ್ರತಿಷ್ಠಿತ ಯಶಸ್ವಿ ಉದ್ಯಮಿ, ಸೌಹಾರ್ದ ನಾಯಕ ಶಶಿಧರ್ ಶೆಟ್ಟಿ ಬರೋಡ ಅವರಿಗೆ Mp mla’s News ನಿಂದ ಹುಟ್ಟುಹಬ್ಬದ ಶುಭಾಶಯಗಳು.

ಮಂಗಳೂರು – ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ, ಸೂಪರ್ ಹಿಟ್ ಕನ್ನಡ ಚಲನಚಿತ್ರ ಸು ಫ್ರಮ್ ಸೋ ದ ಸಹ ನಿರ್ಮಾಪಕ, ಬರೋಡ ತುಳು ಸಂಘದ ಅಧ್ಯಕ್ಷರಾಗಿದ್ದ ಶಶಿಧರ್ ಶೆಟ್ಟಿ ಬರೋಡ ಅವರಿಗೆ Mp mla’s news ಸಂಪಾದಕ ಡಾ, ಅಶೋಕ್ ಶೆಟ್ಟಿ ಬಿ. ಎನ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ವೇದಿಕೆಯಲ್ಲಿ ಭಾಷಣ ಮಾಡಲು ನಿಂತರೆ ನೇರನುಡಿಗಳಿಂದ , ಅದ್ಭುತವಾಗಿ, ಹೃದಯಸ್ಪರ್ಶಿಯಾಗಿ ಜನರ ಮನಸ್ಸು ಮುಟ್ಟುವಂತೆ ಮಾತಾಡಬಲ್ಲ ಶಶಿಧರ್ ಶೆಟ್ಟಿ ಬರೋಡ ಅವರು ಆಡಂಬರ ಮತ್ತು ಪ್ರಚಾರ ಬಯಸಿ ಸಮಾಜ ಸೇವೆ ಮಾಡಿದವರಲ್ಲ. ಸಮಾಜ ಸೇವೆ ಎಂಬುದು ಅವರಿಗೆ ರಕ್ತಗತವಾಗಿ ಬಂದಿದೆ. ಅವರ ನಿರಾಡಂಬರ ವ್ಯಕ್ತಿತ್ವ ಯುವ ಜನರಿಗೆ ಸ್ಪೂರ್ತಿಯಾಗಿದೆ. ಶಶಿಧರ್ ಶೆಟ್ಟಿ ಬರೋಡ ಅವರು ಶಶಿಯಣ್ಣಎಂದೇ ಜನಜನಿತರಾಗಿದ್ದಾರೆ. ಅರ್ಹರನ್ನು ಗುರುತಿಸಿ ಸಮಾಜ ಸೇವೆ ಮಾಡುವ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯವರು. 1992ರಲ್ಲಿ ಗುಜರಾತ್ ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮ ಸಂಸ್ಥೆ ಆರಂಭಿಸಿ ಸಾವಿರಾರು ಉದ್ಯೋಗಿಗಳಿಗೆ ಅನ್ನದಾತರಾಗಿ ಉದ್ಯಮರಂಗದಲ್ಲಿ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಮಹಾನ್ ಸಾಧಕ, ಸಮಾಜಪರ ಚಿಂತನೆಯ ಜನಸೇವಕ,ಬಡವರ ಬಂಧು, ಸಮಾಜ ರತ್ನ,ಕರುಣಾಮಯಿ ಶಶಿಧರ್ ಶೆಟ್ಟಿ ಬರೋಡ ಅವರು ಯಾವುದೇ ಪ್ರಶಸ್ತಿ, ಬಿರುದು, ಸನ್ಮಾನ ಬಯಸದ ಉದ್ಯಮರಂಗದ ಸೂಪರ್ ಸ್ಟಾರ್. ಸಮಾಜ ಕಂಡ ಅಪ್ಪಟ ಅಪರಂಜಿ ಮತ್ತು ಜನ ಮೆಚ್ಚಿದ ಸಮಾಜ ಸೇವಕ. ತುಳುನಾಡಿನ ಹೆಮ್ಮೆಯ ಸುಪುತ್ರ.ಅವರಿಗೆ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. Mp MLA’s news ಕೂಡಾ ಶುಭಾಶಯ ಸಲ್ಲಿಸುತ್ತಿದೆ . ಶಶಿಯಣ್ಣ ಇರೆಗ್ ಎಂಕ್ಲೆನ ಉಡಲ್ ದಿಂಜಿನಾ ಪುಟ್ಟು ಪರ್ಬದ ಶುಭಾಶಯಲು ❤️🙏

ಪ್ರಾದೇಶಿಕ ವಾರ್ತೆಗಳು

ಕದ್ರಿಯಲ್ಲಿ ಸಂಸ್ಕೃತಿ ಸಂಭ್ರಮ.

ಸಂಸ್ಕೃತಿ ಎಂದರೆ ಮಾನವನು ತನ್ನ ಜೀವನವನ್ನು ಸುಧಾರಿಸಲು ಹಾಗೂ ಸಮಾಜದಲ್ಲಿ ಒಗ್ಗಟ್ಟಿನಿಂದ ಬಾಳಲು ರೂಢಿಸಿಕೊಂಡಿರುವ ಜ್ಞಾನ, ನಂಬಿಕೆ, ಕಲೆ ಆಚಾರ ವಿಚಾರ, ಸಂಪ್ರದಾಯ ಮತ್ತು ಮೌಲ್ಯಗಳ ಒಟ್ಟು ಮೊತ್ತ ಎಂದು ವೈಟ್ ಲೋಟಸ್ ಫೌಂಡೇಶನ್ ಅಧ್ಯಕ್ಷೆ ಪ್ರಮೀಳಾ ಮನೂರು ಹೇಳಿದರು.ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕದ್ರಿಯಲ್ಲಿ ಆಯೋಜಿಸಿದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿಯು ವಂಶ ಪಾರಂಪರ್ಯವಾಗಿ ಬರುವುದಿಲ್ಲ. ಸಮಾಜದಲ್ಲಿ ಬದುಕುತ್ತಾ ಕಲಿಯುವಂತದ್ದು. ಇದು ಒಬ್ಬ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ. ಸಮುದಾಯದ ಎಲ್ಲರೂ ಇದನ್ನು ಹಂಚಿಕೊಳ್ಳುತ್ತಾರೆ. ಸಂಸ್ಕೃತಿ ನಿರಂತರವಾಗಿ ಬದಲಾಗುತ್ತಿರುತ್ತದೆ.ಸಂಸ್ಕಾರವು ಸಮಾಜದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ನೈತಿಕ ಮೌಲ್ಯವನ್ನು ಕಲಿಸುತ್ತದೆ. ಹಿಂದಿನ ಇತಿಹಾಸ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುತ್ತದೆ. ಮತ್ತು ಸಂಪ್ರದಾಯಗಳ ಮೂಲಕ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.ಇಂತಹ ಕಾರ್ಯಕ್ರಮ ವನ್ನು ಆಯೋಜಿಸಿದ ರಾಷ್ಟೀಯ ಸಾಮಾಜಿಕ ಸಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ದ ಅಧ್ಯಕ್ಷ ಗಂಗಾಧರ ಗಾಂಧಿ ಮತ್ತು ಬಳಗದವರ ಕಾರ್ಯ ಶ್ಲಾಘನಿಯ ಎಂದರು.NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿದ್ದ ಇನ್ಫೋಸಿಸ್ ಲೆಕ್ಕ ಪರಿಶೋಧಕಿ ಶ್ರೀಮತಿ ರಶ್ಮಿ ಸನಿಲ್ ಮಾತನಾಡಿ ನಾನು ನೂರಾರು ಕಾರ್ಯಕ್ರಮ ನಿರೂಪಣೆ ಮಾಡಿದ್ದೇನೆ ಆದರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಇದೇ ಮೊದಲು ಎಂದು ಹೇಳಿದ ಅವರು ಇದು ನನ್ನ ಜೀವನದ ಅವಿಸ್ಮರಣೀಯ ಕಾರ್ಯಕ್ರಮ ಎಂದು ಹೇಳಿದರು. ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಮಾತನಾಡಿ ಸಂಸ್ಕೃತಿ ಸಂಭ್ರಮದಂತಹ ಕಾರ್ಯಕ್ರಮಗಳು ಜಗತ್ತಿನಾದ್ಯoತ ನಡೆಯ ಬೇಕು ಎಂದು ಅಭಿಪ್ರಾಯ ಪಟ್ಟರು ಉಪಸ್ಥಿತರಿದ್ದರು.ಕು. ಶರಣ್ಯ ಬೆಳುವಾಯಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಜಯಂತಿ ಎಸ್. ನಂದಳಿಕೆ ಕಾರ್ಕಳ, ಆಂಟೋನಿ ಲೂಯಿಸ್ ಮಣಿಪಾಲ, ಪ್ರಶಾಂತ್ ಆಚಾರ್ಯ ಎಡಪದವು, ಗಿರೀಶ್ ಪೆರಿಯಡ್ಕ, ಎಂ.ಎ.ಮುಸ್ತಫಾ ಬೆಳ್ಳಾರೆ, ಸುಳ್ಯ, ಸುಮಯ್ಯಾ ಎಂ ಪಾಟೀಲ್, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ರಶ್ಮಿ ಸನಿಲ್, ಕಸ್ತೂರಿ ಜಯರಾಮ್, ಆಕೃತಿ ಐ ಎಸ್ ಭಟ್, ಮಂಗಳೂರು, ನಿಶಾನ್ ಅಂಚನ್ ಮೊದಲಾದ ಕವಿಗಳು ತಮ್ಮ ಚುಟುಕು ವಾಚಿಸಿದರು.ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ನಡೆಸಿಕೊಟ್ಟ ವಿವಿಧ ನೃತ್ಯಗಳು ಜನಮನ ಸೂರೆಗೊಂಡವು.ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಆಯಿಷಾ ಪೆರ್ನೆ ನಿರೂಪಿಸಿದರೇ , ಕವಿಗೋಷ್ಠಿ ನಿರೂಪಣೆಯನ್ನು ರಶ್ಮಿ ಸನಿಲ್ ಮಾಡಿದರು, ರಾಣಿ ಪುಷ್ಪಲತಾ ದೇವಿ ವಂದಿಸಿದರು.ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಲಾವಿದರಿಂದ ಗೀತಾ ನೃತ್ಯ ಕಾರ್ಯಕ್ರಮ ನೆರದ ಪ್ರೇಕ್ಷಕರ ಮನಸೊರೆಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಸಂತ ಅನ್ಸ್ ಪ್ರೌಢ ಶಾಲಾ ಮುಂಭಾಗದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಬಾಲಕ -ಬಾಲಕಿಯರ ಚದುರಂಗ ಪಂದ್ಯಾಟದ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಸಂತ ಆನ್ಸ್ ಪ್ರೌಢಶಾಲೆ, ಬೋಳಾರ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2026/2027 ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಚದುರಂಗ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸಂತ ಆನ್ಸ್ ಪ್ರೌಢಶಾಲೆಯ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಆನ್ಸ್ ಸಮೂಹ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಮಾರಿ ಇವ್ಲಿನ್ ಎ.ಸಿ. ವಹಿಸಿದ್ದರು. ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಜೀವನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಬಳಿಕ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಚದುರಂಗ ಪಂದ್ಯಾಟವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳು ಚದುರಂಗ ಆಟವನ್ನು ಸಾಂಕೇತಿಕ ವಾಗಿ ಆಡಿ. ಪಂದ್ಯಾಟಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ ಆರ್. ಪುತ್ರನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ರೈ, ಗ್ರೇಡ್–1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಚೆಲುವಮ್ಮ, ಸಂತ ಆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಅನೆಟ್ ಎ.ಸಿ, ಸಂತ ಅನ್ನರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ರೋಸ್ಮಿಟ ಎ.ಸಿ., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಮಹಮ್ಮದ್ ಕಾಸಿಂ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿ ವೀಣಾ ಲೋಬೋ ಅವರು ನಿರೂಪಿಸಿದರು. ಮುಖ್ಯ ಶಿಕ್ಷಕಿ ಭಗಿನಿ ಅನೆಟ್ ಎ. ಸಿ . ಯವರು ಸ್ವಾಗತಿಸಿದರು. ಶಿಕ್ಷಕಿ ಸಾರ ನತಾಶಾ ವಂದನಾರ್ಪಣೆ ಸಲ್ಲಿಸಿದರು.ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಮೊಳಹಳ್ಳಿಯವರು ಆರು ದಶಕಗಳ ಕಾಲ ಸಹಕಾರಿ ರಂಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆ ಮಹಾನ್ ಸಾಧಕ ತೋರಿದ ಹಾದಿಯಲ್ಲಿ ನಾವು ನಡೆಯೋಣ. ಅವರ ಆದರ್ಶ ಸಮಸ್ತ ಸಹಕಾರಿ ಕ್ಷೇತ್ರಕ್ಕೆ ಸ್ಫೂರ್ತಿಯಾಗಲಿ -ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್

ಮಂಗಳೂರು; ಸಹಕಾರ ರಂಗದ ಮೂಲಕ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮೊಳಹಳ್ಳಿ ಶಿವರಾಯರು ತೋರಿಸಿಕೊಟ್ಟಿದ್ದಾರೆ. ಅವರು ಸಹಕಾರಿ ರಂಗದ ಮೂಲಕ ಮಾಡಿದ ಕೆಲಸಗಳು ನಮಗೆ ಇಂದಿಗೂ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ಎಸ್ ಸಿಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ಮೊಳಹಳ್ಳಿ ಶಿವರಾಯರ ಜನ್ಮ ದಿನಾಚರಣೆಗೆ ಚಾಲನೆ ನೀಡಿ, ಅರವಿಂದ ಚೊಕ್ಕಾಡಿಯವರು ಬರೆದ ಮೊಗೆದಷ್ಟು ಬೆಳೆಯುವ ಮೊಳಹಳ್ಳಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ, ಮೊಳ ಹಳ್ಳಿ ಶಿವರಾಯರು ಆರು ದಶಕಗಳ ಕಾಲ ಸಹಕಾರಿ ರಂಗವನ್ನು ಕಟ್ಟಿ ಬೆಳೆಸಿ, ಸಹಕಾರಿ ರಂಗದ ಮೂಲಕ ಏನೆಲ್ಲಾ ಮಾಡಬಹುದು ಅದನ್ನು ಮಾಡಿ ತೋರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಇತರ ವಾಣಿಜ್ಯ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು ಒಂದರೊಳಗೆ ಒಂದು ವಿಲೀನಗೊಳ್ಳುವ ಸಮಯದಲ್ಲೂ, ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿ ದೃಢವಾಗಿ ಬೇರೂರಿವೆ.ಗ್ರಾಹಕರಿಗೆ ಸೇವೆ ನೀಡುತ್ತಿವೆ. ಇದರ ಹಿಂದೆ ಮೊಳಹಳ್ಳಿ ಶಿವರಾಯರ ಮಹತ್ವದ ಕೊಡುಗೆ ಇದೆ.ಅವರ ಆದರ್ಶಗಳು ಮುಂದೆಯೂ ಸಹಕಾರಿ ರಂಗದ ಬೆಳವಣಿಗೆಗೆ ಸಹಕಾರಿ ಯಾಗಲಿ ಎಂದು ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಹಾರೈಸಿದರು. ಆಕರ ಗ್ರಂಥ ರಚಿಸಿದ ಲೇಖಕ ಅರವಿಂದ ಚೊಕ್ಕಾಡಿಯವರು ಮಾತನಾಡುತ್ತಾ,,ಮಿತಭಾಷಿ ಮೊಳಹಳ್ಳಿ ಶಿವರಾಯರು ಕರಾವಳಿಯನ್ನು ಕಟ್ಟಿದ ಮೂವರು ಮಹನೀಯರಾದ ಸಾಮಾಜಿಕ ಮುಖಂಡ ಕುದ್ಮುಲ್ ರಂಗರಾವ್, ಸ್ವಾತಂತ್ರ ಹೋರಾಟಗಾರ ಕಾರ್ನಾಡ್ ಸದಾಶಿವರಾವ್, ಅವರ ಜೊತೆ ಸಹಕಾರಿ ರಂಗದ ಮೂಲಕ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿದವರು ಮೊಳಹಳ್ಳಿ ಶಿವರಾಯರು. ಸಹಕಾರಿ ಕ್ಷೇತ್ರ ಸೂಕ್ಷ್ಮ ಕ್ಷೇತ್ರ, ಎಲ್ಲಾ ಜಾತಿ,ಧರ್ಮದ ಜನರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಮೊಳಹಳ್ಳಿ ಯವರು ಅದನ್ನು ನಡೆಸಿ ಕೊಂಡು ಬಂದಿದ್ದಾರೆ. ಅದನ್ನು ಡಾ.ಎಂ.ಎನ್ ರಾಜೇಂದ್ರ ಕುಮಾರ್ ವಿಸ್ತರಿಸಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೊಳಹಳ್ಳಿ ಶಿವರಾಯರ ಸಹಕಾರಿ ರಂಗದ ಚಿಂತನೆಯ ಮೂಲಕ ಸಮಗ್ರ ಅಭಿವೃದ್ಧಿಯಪರಿಕಲ್ಪನೆ ಇತ್ತು.ಅದರಿಂದ ಪುತ್ತೂರಿನಲ್ಲಿ ಬೀದಿ ದೀಪ ಆರಂಭಿಸಲು ಕಾರಣ ರಾದರು, ಪಾಣೆ ಮಂಗಳೂರು ಸೇತುವೆ ನಿರ್ಮಾಣಕ್ಕೆ ಜನರಿಂದ ದೇಣಿಗೆ ಸಂಗ್ರಹಿದರು.ದಸರಾ ಉತ್ಸವವನ್ನು ಪುತ್ತೂರಿನಲ್ಲಿ ಆರಂಭಿಸಿದರು, ಹೈನುಗಾರಿಕೆ ಯನ್ನು ಸಹಕಾರಿ ರಂಗದ ಮೂಲಕ ಆರಂಭಿಸಿದರು. ಮುದ್ರಣಾಲಯವನ್ನು ಆರಂಭಿಸಿದರು.ಸಹಕಾರಿ ರಂಗ ಬಲಿಷ್ಠ ರಂಗವಾಗಿ ಬೆಳೆಯಲು ಪೂರಕವಾದ ಎಲ್ಲಾ ಕೆಲಸವನ್ನು ಮೊಳಹಳ್ಳಿ ಮಾಡಿ ಮಾದರಿಯಾಗಿದ್ದಾರೆ ಎಂದರು.ಸಮಾರಂಭದಲ್ಲಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಜಯರಾಮ ರೈ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,ಎಸ್ ಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್, ಕ್ಯಾಂಪೋ ಅಧ್ಯಕ್ಷ ಎಸ್ ಎನ್ ಸತೀಶ್ಚಂದ್ರ, ಹಾಗೂ ಇತರ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲೋಟ್ಟು ಸ್ವಾಗತಿಸಿದರು.ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಪುರಾಣಲೋಕ – ನೀರಾಜನ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ. ನಮ್ಮ ಪೌರಾಣಿಕ ಮೌಲ್ಯಗಳು ಸಾರ್ವಕಾಲಿಕ: ಡಾ| ಎಂ. ಮೋಹನ ಆಳ್ವ

ಮಂಗಳೂರು: ‘ಭಾರತೀಯ ಪುರಾಣಗಳಲ್ಲಿ ಅಪಾರವಾದ ಜೀವನ ಮೌಲ್ಯಗಳಿವೆ. ಅವು ಸಾರ್ವಕಾಲಿಕವಾದುವುಗಳು. ಪೌರಾಣಿಕ ಕಾವ್ಯಗಳ ಅಧ್ಯಯನದಲ್ಲಿ ಎಳೆಯರಿಗೆ ಆಸಕ್ತಿ ಮೂಡಿಸಿದರೆ ಇಂದಿನ ಪೀಳಿಗೆಯವರಲ್ಲೂ ಪುರಾಣ ಪುರುಷರ ಆದರ್ಶಗಳನ್ನು ಪಾಲಿಸುವ ಮನಸ್ಥಿತಿಯನ್ನು ಬೆಳೆಸಬಹುದಾಗಿದೆ’ ಎಂದು ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ.ನಮ್ಮ ಕುಡ್ಲ ವಾಹಿನಿಯಲ್ಲಿ ನೂತನವಾಗಿ ಪ್ರಸಾರವಾಗುವ ‘ಪುರಾಣ ಲೋಕ’ ಕಾವ್ಯ ವಾಚನ – ಪ್ರವಚನದ ಶುಭಾರಂಭ ಮತ್ತು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ನೀರಾಜನ’ ಕನ್ನಡ – ತುಳು ಭಕ್ತಿಗೀತೆಗಳ ಸಂಕಲನ ಬಿಡುಗಡೆಯ ಅವಳಿ ಕಾರ್ಯಕ್ರಮವನ್ನು ಆ.3ರಂದು ನಮ್ಮ ಕುಡ್ಲ ಬಿ.ಪಿ. ಕರ್ಕೇರ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಸಮಾರಂಭದಲ್ಲಿ ಟಿವಿ ರಿಮೋಟ್ ಒತ್ತುವ ಮೂಲಕ ‘ಪುರಾಣ ಲೋಕ’ದ ಟ್ರೇಲರನ್ನು ಡಾ| ಮೋಹನ ಆಳ್ವ ಬಿಡುಗಡೆಗೊಳಿಸಿದರು. ‘ಹಿಂದಿನ ಕಾಲದಲ್ಲಿ ಮನೆ ಮನೆಗಳಲ್ಲಿ, ಮಠ ಮಂದಿರಗಳಲ್ಲಿ ಆಗುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮಗಳು ಈಗ ಕಡಿಮೆಯಾಗುತ್ತಿವೆ. ನಮ್ಮ ಕುಡ್ಲದ ಮೂಲಕ ಅದು ಮತ್ತೊಮ್ಮೆ ಮನೆ ಮಾತಾಗಲಿ’ ಎಂದವರು ಹಾರೈಸಿದರು‘ನೀರಾಜನ’ ಅನಾವರಣ:ಇದೇ ಸಂದರ್ಭದಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ದೈವ – ದೇವರ ಭಕ್ತಿ – ಸುಗಿಪು ಗೀತಾ ಸಂಕಲನವನ್ನು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರು ಅನಾವರಣಗೊಳಿಸಿದರು. ‘ಕಲಿಯುಗದಲ್ಲಿ ಕೇವಲ ಭಕ್ತಿಪೂರ್ವಕವಾದ ಸ್ತುತಿ ಮತ್ತು ನಾಮಸ್ಮರಣೆಗಳಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ನೀರಾಜನ ಹೆಸರೇ ಸುಂದರ; ಈ ಕೃತಿಯೊಳಗಿನ ಅಪೂರ್ವ ಭಕ್ತಿಗೀತೆಗಳನ್ನು ಸ್ವರ ಸಂಯೋಜಿಸಿ ಆಸ್ತಿಕರೆಲ್ಲರೂ ಅಲ್ಲಲ್ಲಿ ಹಾಡುವಂತಾಗಲಿ’ ಎಂದವರು ಶುಭ ಕೋರಿದರು.ದ್ವಿಭಾಷಿಕ ಅವಳಿತನದ ಸ್ತುತಿ-ಸುಗಿಪು: ಪ್ರೊ| ಶಿವರಾಮ ಶೆಟ್ಟಿಕೃತಿ ಪರಿಚಯ ಮಾಡಿದ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಬಿ.ಶಿವರಾಮ ಶೆಟ್ಟಿ ಅವರು ‘ನೀರಾಜನ ಕೃತಿ ದೈವ ದೇವರುಗಳ ಕನ್ನಡ – ತುಳು ಭಾಷೆಗಳ ದ್ವಿಭಾಷಿಕ ಅವಳಿತನದ ಭಕ್ತಿ ಸ್ತುತಿ – ಸುಗಿಪು ಗೀತ ಸಂಕಲನ. ಭಕ್ತಿ ಪರಂಪರೆಯ ಶೈವ,ವೈಷ್ಣವ, ಗಾಣಪತ,ಶಾಕ್ತ ಮುಂತಾದ ಪೂಜಾ ಪರಂಪರೆಯ ದೇವರುಗಳನ್ನು ಹಾಗೂ ಇದಕ್ಕೆ ಸಮಾನವಾಗಿ ತುಳುನಾಡಿನ ಜನಪದೀಯ ದೈವ ಮತ್ತು ನಾಗನನ್ನು ಆರಾಧಿಸುವ ಗೀತೆಗಳು, ಜೊತೆಗೆ ಕ್ಷೇತ್ರ ಪುರಾಣ, ಸ್ಥಳ ಮಹಾತ್ಮೆಯ ಸ್ತುತಿ – ಸುಗಿಪು ಹಾಡುಗಳು ಸಮೃದ್ಧವಾಗಿದ್ದು ದೇವಸ್ಥಾನ, ಪೂಜಾ ಮಂದಿರ ಮತ್ತು ಹಬ್ಬ ಹರಿದಿನಗಳಲ್ಲಿ ಹಾಡಲು ಯೋಗ್ಯವಾಗಿವೆ’ ಎಂದರು.ಕೃತಿ ಕರ್ತರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅರ್ಥವತ್ತಾಗಿ ಆಯೋಜಿಸಲಾದ ಅವಳಿ ಕಾರ್ಯಕ್ರಮಗಳ ಹಿನ್ನೆಲೆ ಮತ್ತು ಸ್ವರೂಪಗಳನ್ನು ವಿವರಿಸಿದರು. ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಸ್ವಾಗತಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ವಂದಿಸಿದರು. ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.ಆ.9 ‘ಪುರಾಣ ಲೋಕ’ ಪ್ರಸಾರ:ಪುರಾಣ ಲೋಕದ ಮೊದಲ ಸಂಚಿಕೆಗಳಲ್ಲಿ ಸಂತಕವಿ ಕನಕದಾಸರ ‘ನಳ ಚರಿತ್ರೆ’ ಕಾವ್ಯದ ತುಳು – ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿ ಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ.ರಾವ್ ಇರಾ ವಾಚಿಸಿದ್ದಾರೆ. ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದ್ದಾರೆ. ಆಗಸ್ಟ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ ಗಂ.9.00ಕ್ಕೆ ಕಾರ್ಯಕ್ರಮ ನಮ್ಮ ಕುಡ್ಲದಲ್ಲಿ ಪ್ರಸಾರವಾಗುವುದು; ಮಂಗಳವಾರ ರಾತ್ರಿ ಗಂ.9.30 ಕ್ಕೆ ಇದು ಮರುಪ್ರಸಾರವಾಗಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

“ಪಿಚ್ಚರ್” ತುಳು-ಕನ್ನಡ ಸಿನಿಮಾ ಆಗೋಸ್ಟ್ 7 ರಂದು ರಾಜ್ಯಾದ್ಯಂತ ತೆರೆಗೆ. ಗೋಲ್ಡನ್ ಮೂವೀ ನಿರ್ಮಾಣದ ಸಿನಿಮಾ

ಮಂಗಳೂರು: ಗೋಲ್ಡನ್‌ ಮೂವಿ ನಿರ್ಮಾಣದ ಕನ್ನಡ ಮತ್ತು ತುಳು ಭಾಷೆಯ ಚಿತ್ರ ‘ಪಿಚ್ಚರ್’ ಆ. 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕರಾವ‍ಳಿಯಲ್ಲಿ ತುಳು ಭಾಷೆaಯಲ್ಲಿ ಮತ್ತು ಹೊರ ಜಿಲ್ಲೆಗಳಲ್ಲಿ ಕನ್ನಡದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ನಿರ್ಮಾಪಕ ಗೋಲ್ಡನ್‌ ಸ್ಟಾರ್‌ ಗಣೇಶ್‌ ತಿಳಿಸಿದ್ದಾರೆ.ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.ಕರಾವಳಿ ಮಾತ್ರವಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಕರಾವಳಿಯ ಎಲ್ಲ ಹಿರಿಯ, ಕಿರಿಯ ಅನುಭವಿ ಕಲಾವಿದರಲ್ಲದೆ, ಹೊಸ ಕಲಾವಿದರೂ ನಟಿಸಿದ್ದಾರೆ. ಉಡುಪಿ ಮತ್ತು ಪುತ್ತೂರಿನಲ್ಲಿ ಚಿತ್ರದ ಪ್ರೀಮಿಯರ್‌ ಶೋ ನಡೆದಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.ಮುಂದಿನ ದಿನಗಳಲ್ಲಿ ಗಡಿನಾಡು ಕಾಸರಗೋಡು, ಗಲ್ಫ್‌ ರಾಷ್ಟ್ರ ಮಾತ್ರವಲ್ಲದೆ ಒಟಿಟಿಯಲ್ಲೂ ಈ ಚಿತ್ರ ಕಾಣಿಸಲಿದೆ ಎಂದರು. ತುಳುವರಿಗೆ ಹ್ಯಾಟ್ಸ್‌ಅಪ್‌ತುಳುವಿನ ಕಾಮಿಡಿ, ಕನ್ನಡದ ಭಾವನಾತ್ಮಕತೆಯ ಸಮ್ಮಿಳಿತ ಈ ಚಿತ್ರವಾಗಿದ್ದು, ತುಳುವಿನ ದೊಡ್ಡ ಕಲಾವಿದರು ನಟಿಸಿರುವುದು ಖುಷಿ ತಂದಿದೆ. ನನ್ನ ಮೊದಲ ಚಿತ್ರದ ನಿರ್ದೇಶಕರೂಕರಾವಳಿಯವರೇ ಎಂಬುದು ಅಭಿಮಾನದ ಸಂಗತಿ. ಇಲ್ಲಿನ ಕಲಾವಿದರು ತುಳು ಭಾಷೆಗೆ ನೀಡುವ ಕೊಡುಗೆಗೆ ಹ್ಯಾಟ್ಸ್‌ಅಪ್‌ ಎಂದರು.ಈ ಚಿತ್ರಕ್ಕೆ ತುಳು ಭಾಷಿಕರೂ ಉತ್ತಮ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಹಾಗಾಗಿ ಈ ಚಿತ್ರದ ಸೂಪರ್‌ ಹಿಟ್‌ ಎಂರೆ ಪ್ರೇಕ್ಷಕರೇ. ಯಾವುದೇ ಸಿನಿಮಾಗೆ ಹೂಡಿದಬಂಡವಾಳ ಶೇ.ನೂರರಷ್ಟು ವಾಪಸ್‌ ಸಿಗುವುದಿಲ್ಲ. ಶೇ.5ರಿಂದ ಶೇ.6ರಷ್ಟು ಮಾತ್ರ ಲಾಭ ಸಿಗುತ್ತದೆ. ಸಿನಿಮಾ ಸೂಪರ್‌ಹಿಟ್‌ ಆದರೆ ಮಾತ್ರ ಇನ್ನಷ್ಟು ಹೂಡಿಕೆದಾರರು ಒಲವು ತೋರಿಸಲು ಸಾಧ್ಯವಿದೆ ಎಂದರು. ಒಳ್ಳೆ ಸಿನಿಮಾ ಸಿಕ್ಕಿದರೆ ತುಳುವಲ್ಲಿ ನಟನೆಒಳ್ಳೆಯ ಸಿನಿಮಾ ಸಿಕ್ಕಿದರೆ ತುಳು ಭಾಷೆಯಲ್ಲಿ ನಟಿಸಲು ಸಿದ್ಧ ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದರು. ಮುಂದಿನ ಸಿನಿಮಾವನ್ನು ಸ್ಕ್ರಿಪ್ಟ್‌ ನೋಡಿ ನಿರ್ಧರಿಸುತ್ತೇನೆ. ಇಲ್ಲಿನ ಸಿನಿ ಪ್ರಿಯರಿಗೆ ಬೇಕಾಗುವ ಸಿನಿಮಾವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಕೃತಕಬುದ್ಧಿ ಮತ್ತೆ (ಎಐ) ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಏನೂ ತೊಂದರೆ ಆಗದು. ನಾವು ಎಐ ಅನ್ನು ಹೇಗೆ ಸ್ವೀಕರಿಸುತ್ತೇನೆ ಎನ್ನುವುದರ ಮೇಲೆ ಒಳಿತು, ಕೆಡುಕು ಅವಲಂಬಿತವಾಗಿದೆ ಎಂದರು.ನಿರ್ಮಾಪಕಿ ಶಿಲ್ಪಾ ಗಣೇಶ್‌ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಈ ಸಿನಿಮಾಗೆ ನಿರ್ಧಾರ ಮಾಡಿದ್ದೆ. ಪ್ರೀಮಿಯರ್‌ ಶೋಗಳಲ್ಲಿ ಪ್ರೇಕ್ಷಕರ ಉತ್ತಮ ಸ್ಪಂದನೆವ್ಯಕ್ತವಾಗಿದೆ. ಸಣ್ಣದರಲ್ಲಿ ಆರಂಭಿಸಿದ ಸಿನಿಮಾ ಈಗ ದೊಡ್ಡ ಬಜೆಟ್‌ ಆಗಿದೆ.ಸಿನಿಮಾದ ಎಲ್ಲ ಹಾಡುಗಳೂ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಯಭೇರಿ ಕಂಡರೆ ಇನ್ನಷ್ಟು ಸಿನಿಮಾ ಮಾಡುವ ಹುಮ್ಮಸ್ಸು ಇದೆ ಎಂದರು.ಹಿರಿಯ ನಟ ಡಾ ದೇವದಾಸ್ ಕಾಪಿಕಾಡ್, ಭೋಜರಾಜ್‌ ವಾಮಂಜೂರು, ನಟ ಅರ್ಜುನ್‌ ದೇವ್‌, ಸಂಗೀತ ನಿರ್ದೇಶಕ ಸಾಮ್ಯುವೆಲ್‌, ಸಿನಿಮಾ ವಿತರಕರಾದ ಸಚಿನ್‌ ಎ ಎಸ್ ಉಪ್ಪಿನಂಗಡಿ, ಮುನೀಂದ್ರ ಮತ್ತಿತರರಿದ್ದರು. ಅನುರಾಗ್‌ ನಿರೂಪಿಸಿದರು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ*ಗೋಲ್ಡನ್‌ ಮೂವಿ ನಿರ್ಮಾಣದ ಈ ‘ಪಿಚ್ಚರ್‌’ ಸಿನಿಮಾದಲ್ಲಿ ಮೊದಲ ಬಾರಿನಟಿಸುತ್ತಿದ್ದು, ಈ ಸಿನಿಮಾ ಬಹಳ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಪ್ರೀಮಿಯರ್‌ ಶೋ ನೋಡಿದವರು ಹೇಳುತ್ತಿದ್ದಾರೆ. ಸಿನಿಮಾ ನೋಡಿ ಇನ್ನಷ್ಟು ಪ್ರೋತ್ಸಾಹ ಇರಲಿ.ನಿತ್ಯಪ್ರಕಾಶ್‌ ಬಂಟ್ವಾಳ್‌, ನಾಯಕ ನಟ ಉತ್ತಮ‌ ಪಾತ್ರ ಲಭಿಸಿದೆರಾಜ್‌ ಬಿ. ಶೆಟ್ಟಿ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಧುಮುಕಿದ್ದು, ಈ ಸಿನಿಮಾದಲ್ಲಿ ಉತ್ತಮ ರೀತಿಯಲ್ಲಿ ನಟಿಸಿದ್ದೇನೆ. ಜನತೆ ಈ ಸಿನಿಮಾ ಇಷ್ಟಪಡುವ ನಂಬಿಕೆ ಇದೆ. ಜನರಪ್ರೋತ್ಸಾಹವೇ ಚಿತ್ರ ತಂಡಕ್ಕೆ ನೀಡುವ ಶ್ರೀರಕ್ಷೆ.-ಅಮೃತಾ, ನಾಯಕಿ ನಟಿ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಾರೆತುಳು ಚಿತ್ರ ರಂಗದ ಎಲ್ಲ ಕಲಾವಿದರನ್ನು ಸೇರಿಸಿ ಈ ಸಿನಿಮಾ ನಿರ್ಮಿಸಿರುವುದು ಹೆಗ್ಗಳಿಕೆ. ಕನ್ನಡ ಚಿತ್ರರಂಗದ ಅಜಾತಶತ್ರು ಗೋಲ್ಡನ್‌ ಸ್ಟಾರ್‌ ಗಣೇಶ್‌-ಶಿಲ್ಪಾಗಣೇಶ್‌ ದಂಪತಿ ಇದನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಒಳ್ಳೆಯ ಸಿನಿಮಾ ಕೊಟ್ಟರೆ ಜನತೆ ನೋಡುತ್ತಾರೆ.-ದೇವದಾಸ್‌ ಕಾಪಿಕಾಡ್‌,ತುಳು ಚಿತ್ರ ನಟ, ನಿರ್ಮಾಪಕ

ಪ್ರಾದೇಶಿಕ ವಾರ್ತೆಗಳು

ಮುಂದಿನ ತಲೆಮಾರಿಗೆ ಪ್ರಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ: ಡಾ| ಜಿ. ಸಂತೋಷ್

ಮಹಾನಗರ, ಆ. 2: ನಮ್ಮ ಸುತ್ತಲಿನ ಪರಿಸರ ನಾವೇ ಹಾಳು ಮಾಡುತ್ತಿದ್ದೇವೆ. 2019ರಲ್ಲಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ದುರಂತಕ್ಕೆ ನಮ್ಮ ಸ್ವಾರ್ಥ ಮತ್ತು ಬೇಜವಾಬ್ದಾರಿತನವೇ ಮೂಲ ಕಾರಣ ಎಂದು ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಯೋಜನಾ ನಿರ್ದೇಶಕ ಡಾ| ಜಿ. ಸಂತೋಷ್ ಕುಮಾರ್‌ ಹೇಳಿದರು.ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಪರಿಸರ ಆಯೋಗದ ನೇತೃತ್ವದಲ್ಲಿ ನಗರದ ಬೆಂದೂರ್ ಚರ್ಚ್‌ನ ಸಭಾಂಗಣದಲ್ಲಿ ಪರಿಸರ ಆಯೋಗದ ಸಂಚಾಲಕರು ಹಾಗೂ ಕಾರ್ಯದರ್ಶಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಪರಿಸರ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಪರಿಸರವನ್ನು ಉಳಿಸಿ, ಸಂರಕ್ಷಿಸುವ ಕಾರ್ಯ ಯುದ್ಧೋಪಾದಿಯಲ್ಲಿ ಆಗಬೇಕು. ಪ್ರಕೃತಿಯನ್ನು ಹಾಳು ಮಾಡಿದ್ದರಿಂದಲೇ ಇಂದು ನಾವು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪರಿಸರವನ್ನು ಕಾಪಾಡಿ, ಅದನ್ನು ನಮ್ಮ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ| ರಾಜೇಂದ್ರ ಕಲ್ಬಾವಿ ಹಾಗೂ ಹಸಿರು ದಳದ ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜ್ ಬಜಾಲ್ ಅವರು ಪರಿಸರ ಸಂರಕ್ಷಣೆಯ ಪ್ರಾಯೋಗಿಕ ಮಾರ್ಗಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಪರಿಸರ ಆಯೋಗದ ಕಾರ್ಯದರ್ಶಿ ಲುವಿಸ್ ಜೆ. ಪಿಂಟೊ, ಪರಿಸರ ಆಯೋಗದ ಕಾರ್ಯಕಾರಿ ಸಮಿತಿ ಸದಸ್ಯ ವಂ| ಡಾ| ಮೈಕಲ್ ಸಾಂತುಮಾಯೋರ್, ಫಾದರ್ ಮುಲ್ಲರ್‌ ಸಂಸ್ಥೆಗಳ ನಿರ್ದೇಶಕ ವಂ| ಫಾ| ಫಾವುಸ್ಟಿನ್ ಲೋಬೊ, ಭ| ಪ್ಲಾವಿಯ ವಿಲ್ಮಾ, ಸೆಲೆಸ್ತಿನ್ ಡಿಸೋಜ, ಕ್ಲೇಮಂಟ್ ಪಿಂಟೊ, ಫ್ರಾನ್ಸಿಸ್ ಮಿನೇಜಸ್ ಬಾಲ್ಕುಟಜೆ, ಜೀತ್ ಮಿಲನ್ ರೋಚ್, ಚಾರ್ಲ್ಸ್ ಪಾಯ್ಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

The responsibility of saving nature for the next generation is on us: Dr. G. Santhosh

Mahanagara (City), Aug. 2: “We ourselves are destroying the environment around us. Our selfishness and irresponsibility are the root cause of the terrible natural disasters that occurred in Chikkamagaluru and Kodagu in 2019,” said Dr. G. Santhosh Kumar, Project Director of the District Urban Development Cell. He was speaking after inaugurating a special environmental information camp organized for the conveners and secretaries of the Environment Commission, held under the leadership of the Environment Commission of the Catholic Diocese of Mangalore at the Bendur Church hall in the city.“The work of saving and conserving the environment in our country must happen on a war footing. We are facing difficult situations today precisely because we have ruined nature. The responsibility of protecting the environment and handing it over safely to our next generation rests upon all of us,” he stated.Prof. Rajendra Kalbhavi, Executive Director of the Dakshina Kannada District Nirmiti Kendra, and Nagaraj Bajal, Project Manager of Hasiru Dala, provided information on practical ways of environmental conservation. The program was attended by Louis J. Pinto, Secretary of the Environment Commission of the Mangalore Diocese, Rev. Dr. Michael Santhumayor, Executive Committee Member of the Environment Commission, Rev. Fr. Faustine Lobo, Director of Father Muller Institutions, Sr. Flavia Wilma, Celestine D’Souza, Clement Pinto, Francis Menezes Balkutaje, Jeet Milan Roche, and Charles Pais.

ಪ್ರಾದೇಶಿಕ ವಾರ್ತೆಗಳು

ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದಲ್ಲಿ ಸಂತ ಲಾರೆನ್ಸರ ಹಬ್ಬದ ನೊವೆನಾ ಆರಂಭ. ಹಬ್ಬದ ವಿಷಯ: “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸೋಣ” (ಯೋಹಾನ 15:12). ಸಂದೇಶ: “ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ.”

ಮಂಗಳೂರು: ಮಂಗಳೂರಿನ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬದ ಆಚರಣೆಗಳು ಮಂಗಳೂರು ನಗರ ವಲಯದ ವಿಕಾರ್ ವಾರ್ ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರ ವಿಧ್ಯುಕ್ತ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಅವರನ್ನು ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ರೆಕ್ಟರ್ ವಂದನೀಯ ಫಾ. ಬೇಸಿಲ್ ವಾಸ್ ಅವರು ಪುಷ್ಪಗುಚ್ಛ ಮತ್ತು ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.ತಮ್ಮ ಸಂದೇಶದಲ್ಲಿ, ಫಾ.ರಿಚಾರ್ಡ್ ಕುವೆಲ್ಲೊ ಅವರು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು ಮತ್ತು ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ” ಎಂಬ ಹಬ್ಬದ ಸಂದೇಶವನ್ನು ನೀಡಿದರು. ಬಡವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಧ್ಯೇಯ ಮತ್ತು ಕ್ಯಾಥೊಲಿಕರ ನಂಬಿಕೆಯ ಅತ್ಯಗತ್ಯ ಅಭಿವ್ಯಕ್ತಿ ಯಾಗಿದೆ ಎಂದು ಹೇಳಿದರು.ಸ್ವಾಗತಿಸಿದ ವಂದನೀಯ ಫಾ. ಬೇಸಿಲ್ ವಾಸ್ ಅವರು ಒಂಬತ್ತು ದಿನಗಳ ನೊವೆನಾದಲ್ಲಿ ಭಾಗವಹಿಸಲು ಮತ್ತು ಸಂತ ಲಾರೆನ್ಸ್ ಅವರ ಆಶೀರ್ವಾದವನ್ನು ಪಡೆಯಲು ಎಲ್ಲರನ್ನೂ ಆಹ್ವಾನಿಸಿದರು. ಹಬ್ಬದ ವಿಷಯವನ್ನು ಉಲ್ಲೇಖಿಸಿ, ಈ ವರ್ಷ ರೋಗಿಗಳು ಮತ್ತು ಅಶಕ್ತರಿಗೆ ವೈದ್ಯಕೀಯ ನಿಧಿ ಆರಂಭಿಸಲು ಉದ್ದೇಶಿಸಿದ್ದು, ಈ ಯೋಜನೆಗೆ ಜನರು ಬೆಂಬಲಿಸ ಬೇಕೆಂದರು.ಸಮಾರಂಭದಲ್ಲಿ ಸಹಾಯಕ ಧರ್ಮಗುರು ವಂದನೀಯ ಫಾ. ಲಾರೆನ್ಸ್ ಕುಟಿನ್ಹಾ; ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ಫಾ. ಪೀಟರ್ ಗೊನ್ಸಾಲ್ವಿಸ್, ವಂದನೀಯ ಫಾ. ಬಿಜು ಬೆತ್ರಮ್, ವಂದನೀಯ ಫಾ. ಜೇಮ್ಸ್ ಬ್ರಿಟ್ಟೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವಾ; ಕಾರ್ಯದರ್ಶಿ ಅಲ್ವಿನ್ ಸಲ್ಡಾನ್ಹಾ; ಸರ್ವ ಆಯೋಗಗಳ ಸಂಯೋಜಕಿ ಅವಿತಾ ಮಸ್ಕರೇನ್ಹಸ್; ಪುಣ್ಯಕ್ಷೇತ್ರದ ಸಂಚಾಲಕ ಜೇಸನ್ ಫೆರ್ನಾಂಡಿಸ್; ಮತ್ತು ಮಾಧ್ಯಮ ಸಂಚಾಲಕಿ ಮೀನಾ ಬಾರ್ಬೋಜಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಿಯಾ ವೇಗಸ್ ನಿರೂಪಿಸಿದರು.ಧ್ವಜಾರೋಹಣದ ಬಳಿಕ ವಂದನೀಯ ಫಾ . ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪರಮ ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು ಮತ್ತು ಎಲ್ಲಾ ಭಕ್ತರ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದರು. ಬಳಿಕ ಅವರು ಮೊದಲ ದಿನದ ನೊವೆನಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. “ಮಕ್ಕಳು ದೇವರ ರಾಜ್ಯದ ಫಲಗಳು” ಎಂಬ ವಿಷಯದ ಕುರಿತು ಪ್ರಬೋಧನೆ ನೀಡಿದ ಅವರು ಪೋಷಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ಚರ್ಚ್‌ಗೆ ಕರೆತರ ಬೇಕು. ಇದರಿಂದ ಅವರು ದೇವರ ಪ್ರೀತಿ ಮತ್ತು ಉಪಸ್ಥಿತಿಯನ್ನು ಅನುಭವಿಸ ಬಹುದು. ಮಕ್ಕಳು ದೇವರಿಂದ ಬಂದ ಅಮೂಲ್ಯ ಉಡುಗೊರೆ. ಅವರನ್ನು ನಂಬಿಕೆ ಮತ್ತು ಕ್ರಿಶ್ಚಿಯನ್ ಮೌಲ್ಯಗಳಲ್ಲಿ ಬೆಳೆಸಬೇಕು ಎಂದು ಅವರು ಪೋಷಕರಿಗೆ ನೆನಪಿಸಿದರು.ಪಾಲ್ದನೆ ಚರ್ಚ್ ನ ಲೀಝಿ ಫೆರ್ನಾಂಡಿಸ್ ನೇತೃತ್ವದ ಗಾಯನ ತಂಡವು ಪರಮ ಪ್ರಸಾದದ ಆರಾಧನೆ ಮತ್ತು ಬಲಿಪೂಜೆಯ ಸಂದರ್ಭ ಭಕ್ತಿ ಗಾಯನದೊಂದಿಗೆ ಸಹಕರಿಸಿತು.

ಪ್ರಾದೇಶಿಕ ವಾರ್ತೆಗಳು

ಪೇಸ್‌ನಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಕುರಿತು ಎಫ್‌ಡಿಪಿ ಉದ್ಘಾಟನೆ

ಮಂಗಳೂರು, ಆ. 3: ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ (ಪೇಸ್), ಮಂಗಳೂರಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್: ಪ್ರೆಸೆಂಟ್ & ಫ್ಯೂಚರ್’ ವಿಷಯದ ಕುರಿತು ಆಯೋಜಿಸಿರುವ ಒಂದು ವಾರದ AICTE ATAL Academy ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಸೋಮವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ಆಗಸ್ಟ್ 3ರಿಂದ 8ರವರೆಗೆ ನಡೆಯಲಿದೆ.ಬೆಂಗಳೂರು ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಟಿ. ಲಮಾಣಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲೆಕ್ಟ್ರಿಕ್ ವಾಹನ (ಇವಿ) ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳ ಮಹತ್ವ ಹೆಚ್ಚುತ್ತಿದೆ. ಬ್ಯಾಟರಿಯ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಬಾಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಥರ್ಮಲ್ ಮ್ಯಾನೇಜ್‌ಮೆಂಟ್ ತಂತ್ರಜ್ಞಾನಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದು ಅವರು ಹೇಳಿದರು.ಗೌರವ ಅತಿಥಿಯಾಗಿದ್ದ ಪೇಸ್‌ನ ವಿದ್ಯಾರ್ಥಿ ವ್ಯವಹಾರಗಳ ಡೀನ್ ಹಾಗೂ CMSR ನಿರ್ದೇಶಕ ಡಾ. ಸಯ್ಯದ್ ಅಮೀನ್ ಅಹಮ್ಮದ್ ಮಾತನಾಡಿ, ಇವಿ ಉದ್ಯಮ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಹಯೋಗವನ್ನು ಬಲಪಡಿಸಬೇಕಾಗಿದೆ ಎಂದರು. ಉದ್ಯಮದ ನೈಜ ಅಗತ್ಯಗಳಿಗೆ ಪೂರಕವಾದ ನವೀನ ಮತ್ತು ಪ್ರಾಯೋಗಿಕ ಸಂಶೋಧನೆಗಳಿಗೆ ಅಧ್ಯಾಪಕರು ಹಾಗೂ ಸಂಶೋಧಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.ಪೇಸ್ ಉಪ ಪ್ರಾಂಶುಪಾಲೆ ಡಾ. ಶರ್ಮಿಳಾ ಕುಮಾರಿ ಎಂ. ಮಾತನಾಡಿ, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಧ್ಯಾಪಕರ ಜ್ಞಾನ ಮತ್ತು ಕೌಶಲ ವೃದ್ಧಿಗೆ AICTE ATAL Academyಯ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪೇಸ್ ಪ್ರಾಂಶುಪಾಲ ಡಾ. ರಾಮಿಸ್ ಎಂ.ಕೆ. ಮಾತನಾಡಿ, ಆಧುನಿಕ ಬ್ಯಾಟರಿ ಚಾಲಿತ ವ್ಯವಸ್ಥೆಗಳ ಸುರಕ್ಷತೆ, ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 50 ಮಂದಿ ಎಫ್‌ಡಿಪಿಯಲ್ಲಿ ಭಾಗವಹಿಸಿದ್ದಾರೆ.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಪೈ ಎಂ. ಸ್ವಾಗತಿಸಿದರು. ಎಫ್‌ಡಿಪಿ ಸಂಯೋಜಕ ಡಾ. ಅಬ್ದುಲ್ ರಝಾಕ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಮಹಮ್ಮದ್ ಸಲ್ಮಾನ್ ವಾರಿಮಣಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಶಹಬಾಝ್ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು.

Scroll to Top