ಪೊಳಲಿ-ಕಳಸಗುರಿ ಅಡ್ಡೂರಿನ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ನ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಡಿ.13ರ ಶನಿವಾರ ಸಂಜೆ ಗಂಟೆ 5 ರಿಂದ ಕುಣಿತ ಭಜನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.00 ರಿಂದ ಸಭಾ ಕಾರ್ಯಕ್ರಮ,ಸಹಾಯ ನಿಧಿ ವಿತರಣೆ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ನಂತರ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯ ನಾಟಕ “ರಾಘು ಮಾಸ್ಟ್ರ್”ಪ್ರದರ್ಶನವಿದೆ.





ಡಿ.14ರ ಭಾನುವಾರ ಬೆಳಿಗ್ಗೆ 11.00 ರಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.00 ರಿಂದ ಬಪ್ಪನಾಡು ಮೇಳದವರಿಂದ ಯಕ್ಷಗಾನ “ನಾಗತಂಬಿಲ”ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಬೇಕೆಂದು ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಆತ್ಮೀಯವಾಗಿ ವಿನಂತಿಸಿದೆ



























































































































