ಉರ್ವ: ನವಾಕ್ಷರಿ ಯಾಗದ ಪ್ರಚಾರ ರಥಕ್ಕೆ ಚಾಲನೆ

119.8K Views 1w ago

ಮಂಗಳೂರು : ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಡಿ. ತಾ. 25 ಹಾಗೂ 26 ರಂದು ನಡೆಯಲಿರುವ ಶ್ರೀ ಮಾರಿಯಮ್ಮ ನವಾಕ್ಷರಿ ಮಹಾ ಮಂತ್ರ ಯಾಗದ ಪ್ರಚಾರ ರಥಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಆರಂಭದಲ್ಲಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಚಾರ ವಾಹನಕ್ಕೆ ಆರತಿ ಬೆಳಗಿಸಲಾಯಿತು. ವಾಹನದ ಮುಂದೆ ದೀಪ ಪ್ರಜ್ವಲನೆ ನೆರವೇರಿಸಿ ಶುಭ ಹಾರೈಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್, ಕೋಡಿಕಲ್, ಮೊಗವೀರ ಏಳು ಪಟ್ಟಣ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಮುಖ್ಯ ಅರ್ಚಕ ಶಿವಾನಂದ ಕನಡ, ಏಳು ಪಟ್ಟಣ ಸಂಯುಕ್ತ ಸಭಾ ಪ್ರಧಾನ ಕಾರ್ಯದರ್ಶಿ ಜಗದೀಶ ಬಂಗೇರ, ಯಾಗ ಸಮಿತಿ ಸಂಚಾಲಕ ಗೌತಮ್ ಸಾಲ್ಯಾನ್, ಕೋಡಿಕಲ್, ನಿಕಟ ಪೂರ್ವ ಕಾರ್ಪೊರೇಟರ್ ಗಣೇಶ್ ಕುಲಾಲ್, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ, ಕ್ಷೇತ್ರದ ಮೊಕ್ತೇಸರರು ಹಾಗೂ ಬೋಳೂರು ಮೊಗವೀರ ಸಭಾದ ಅಧ್ಯಕ್ಷ ಸುಭಾಸ್ ಕುಂದರ್, ಬೈಕಂಪಾಡಿ ಮೊಗವೀರ ಸಭಾದ ಅಧ್ಯಕರು ಕುಮಾರ್ ಮೆಂಡನ್, ಕುದ್ರೋಳಿ ೧ನೇ ಮೊಗವೀರ ಸಭಾದ ಅಧ್ಯಕ ದೇವದಾಸ್ ಕರ್ಕೇರ, ವಿವಿಧ ಗ್ರಾಮಗಳ ಗುರಿಕಾರರು, ಪದಾಧಿಕಾರಿಗಳು ಮತ್ತು ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

Read More News

Scroll to Top