ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

‘ಮಹಾ ಪರ್ವ’ ಗ್ರಂಥ ಬಿಡುಗಡೆ. ಸಾಧನಶೀಲರ ಬದುಕು – ಬವಣೆ ನಾಳಿನ ಜನಾಂಗಕ್ಕೆ ಪಾಠ: ಕೃಷ್ಣ ಜೆ.ಪಾಲೆಮಾರ್

ಮಂಗಳೂರು: ‘ಸಾಧಕರ ಬದುಕಿನಲ್ಲಿ ಏಳು ಬೀಳುಗಳು ಸಹಜ. ಅವರ ಸಾಧನೆಯನ್ನು ಕೃತಿ ರೂಪದಲ್ಲಿ ದಾಖಲಿಸಿದರೆ ಅದು ಮುಂದಿನ ಪೀಳಿಗೆಗೆದಾರಿದೀಪವಾಗುತ್ತದೆ. ಹಾಗೆಯೇ ಅಂಥವರ ಬದುಕು ಬವಣೆಗಳಿಂದ ನಾಳಿನ ಜನಾಂಗ ಸಾಕಷ್ಟು ಪಾಠವನ್ನೂ ಕಲಿತಂತಾಗುವುದು’ ಎಂದು ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್ ಹೇಳಿದರು.ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಪ್ರಿಲ್ 4,ಶುಕ್ರವಾರ ನಡೆದ ಸಮಾರಂಭದಲ್ಲಿ ಹರಿದಾಸ ‘ದೇವಕಿ ತನಯ’ ಮಹಾಬಲ ಶೆಟ್ಟಿ ಕೂಡ್ಲು ಅವರ ‘ಮಹಾಪರ್ವ’ ಅಭಿನಂದನಾ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಹರಿಕಥಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹಾಬಲ ಶೆಟ್ಟಿ ಅವರ ಸಾಧನೆಗಳು ‘ಮಹಾಪರ್ವ’ ದಲ್ಲಿ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮನೆ ಮನ ತಲುಪಲು ಸಾಧ್ಯವಾಗಲಿದೆ. ಭವಿಷ್ಯದ ಜನಾಂಗದ ಸಾಧನೆಗೆ ಅದುವೇ ಸ್ಫೂರ್ತಿಯಾಗುವುದು’ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ ‘ಮಕ್ಕಳಿಗೂ ಹರಿಕಥೆ ಕಲಿಸಿ ಅವರನ್ನು ಹರಿದಾಸರನ್ನಾಗಿ ಮಾಡುವ ಮೂಲಕ ಮಹಾಬಲ ಶೆಟ್ಟಿಯವರು ಧರ್ಮಜಾಗೃತಿಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.‘ಮಹಾಪರ್ವ’ ಸಂಪಾದಕ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, ‘ಮಹಾಬಲ ಶೆಟ್ಟಿ ಅವರು ಅನೇಕ ಸಂಕಷ್ಟಗಳನ್ನು ಅನುಭವಿಸಿ ಸಾಧನೆಯ ಶಿಖರವೇರಿದ್ದಾರೆ. 50 ವರ್ಷಗಳ ಹರಿಕಥಾಯಾನ ಪೂರೈಸಿದ ಅಪರೂಪದ ಹರಿದಾಸರು. ಹರಿಕಥೆ ಕಲೆಯನ್ನು ಉಳಿಸಿ, ಬೆಳೆಸಲು ಪ್ರಥಮ ಬಾರಿಗೆ ಹರಿಕಥಾ ಪರಿಷತ್ ಹುಟ್ಟು ಹಾಕಿದ್ದಾರೆ. ಹಲವಾರು ಹರಿದಾಸರನ್ನು ಸೃಷ್ಟಿಸಿದ್ದಾರೆ. ಅವರಿಗೆ ಎಂಭತ್ತು ತುಂಬಿದ ಸಂದರ್ಭದಲ್ಲಿ ಅವರ ಬದುಕಿನ ಚಿತ್ರಣದೊಂದಿಗೆ ಹರಿಕಥೆ ಮತ್ತದರ ಸೋದರ ಕಲೆಗಳ ಬಗ್ಗೆ ವಿದ್ವಾಂಸರು ಬರೆದ ಮಹತ್ವದ ಲೇಖನಗಳನ್ನೊಳಗೊಂಡ ಅಭಿನಂದನಾ ಸಂಪುಟ ಒಂದು ಸಂಗ್ರಾಹ್ಯ ಗ್ರಂಥವಾಗಿ ಹೊರಬರುತ್ತಿದೆ’ ಎಂದರು..ಮಹಾಬಲ ಶೆಟ್ಟಿ ಕೂಡ್ಲು ಅವರು ಮಾತನಾಡಿ, ‘ಶೇಣಿ ಗೋಪಾಲಕೃಷ್ಣ ಭಟ್ ಅವರಿಂದಾಗಿ ಹರಿದಾಸನಾದೆ. ಹರಿಕಥೆ ನಶಿಸುವ ಕಲೆ ಅಲ್ಲ. ಅದು ಇನ್ನಷ್ಟು ಪ್ರಭಾವಶಾಲಿ ರೂಪದಲ್ಲಿ ಮೂಡಿಬರುವಂತಾಗಬೇಕು’ ಎಂದರು. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ವಕೀಲ ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಹರಿಕಥಾ ಪರಿಷತ್‌ನ ಖಜಾಂಜಿ ಡಾ.ಎಸ್.ಪಿ.ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಪ್ರೊ.ಜಿ.ಕೆ.ಭಟ್ ವಂದಿಸಿದರು. ಹರಿಕಥಾ ಪರಿಷತ್‌ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅಭಿವೃದ್ಧಿಯ ಮುಂಚೂಣಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್. 110.40 ಕೋಟಿ ರೂಪಾಯಿ ಲಾಭ. 2025-26ನೇ ಸಾಲಿಗೆ 19,250 ಕೋಟಿ ರೂಪಾಯಿ ವ್ಯವಹಾರದ ಗುರಿ – ಡಾ. ಎಂ. ಎನ್ .ರಾಜೇಂದ್ರ ಕುಮಾರ್.

ಮಂಗಳೂರು: ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಸಹಕಾರಿ ರಂಗದಲ್ಲಿ ವಿಶಿಷ್ಟ ಹಾಗೂ ವಿನೂತನ ಬ್ಯಾಂಕಿಂಗ್ ಸೇವೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತನ್ನ 113 ಶಾಖೆಗಳ ಮೂಲಕ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಸಾರ್ವಕಾಲಿಕ ದಾಖಲೆಯ ರೂ 110.40 ಕೋಟಿ ಲಾಭ:111 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಗೈದು, ದಿನಾಂಕ 31-03-2025ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ. 110.40 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ. 79.09 ಕೋಟಿ) ಕ್ಕಿಂತ ಶೇಕಡಾ 39.59 ಏರಿಕೆಯಾಗಿದೆ. ಇದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಹಾಗೂ ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು 3.52 ಶೇಕಡಾದಿಂದ 2.71 ಶೇಕಡಾಕ್ಕೆ ಇಳಿಕೆಯಾಗಿರುವುದು ಒಂದು ಗಮನಾರ್ಹ ಸಾಧನೆಯಾಗಿದೆ. ಇದು ಬ್ಯಾಂಕಿನ ಪ್ರಗತಿಯನ್ನು ಸೂಚಿಸುತ್ತದೆ. ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ವರದಿ ವರ್ಷದಲ್ಲಿ ರೂ. 17366.68 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (ರೂ.15544.34)ಕ್ಕಿಂತ ಈ ಬಾರಿ ಶೇ. 11.72 ಏರಿಕೆಯನ್ನು ಕಂಡಿದೆ. 2025-26ನೇ ಸಾಲಿಗೆ ರೂ.19250.00 ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರು ಕೊಡಿಯಾಲುಬೈಲ್ ನಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿ ಕರೆದು ಬ್ಯಾಂಕಿನ ಸಮಗ್ರ ಅಭಿವೃದ್ಧಿ ಬಗ್ಗೆ ಸವಿವರ ಮಾಹಿತಿ ನೀಡಿದ್ದಾರೆ.ರೂ. 7882.76 ಕೋಟಿ ಠೇವಣಿ:ಠೇವಣಿಗಳ ಸಂಗ್ರಹಣೆಯಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು ರೂ. 7882.76 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜೀವಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ.9.11 ಏರಿಕೆಯಾಗಿದೆ.ಸರಕಾರದ ಅಧಿಸೂಚನೆಯಂತೆ ಕೃಷಿಯೇತರ ಸಹಕಾರ ಸಂಘಗಳ ಕ್ಷೇಮನಿಧಿಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲ, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಠೇವಣಿಗಳನ್ನು ಕೂಡಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವಂತೆ ವಿಜ್ಞಾಪಿಸಲಾಗಿದೆ.ರೂ.7775.44 ಕೋಟಿ ಮುಂಗಡ ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ ರೂ.7775.44 ಕೋಟಿ ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.2130.95 ಕೋಟಿ ರೂಪಾಯಿ, ಮಧ್ಯಮಾವಧಿ ಸಾಲ ರೂ.169.79 ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ರೂ.2300.74 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು. ಕೃಷಿಯೇತರ ಕ್ಷೇತ್ರಕ್ಕೆ ರೂ. 5474.70 ಕೋಟಿ ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ.9483.92 ಕೋಟಿಯಾಗಿರುತ್ತದೆ.ಸತತ 30 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇಕಡಾ 100ರ ಸಾಧನೆಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ 100ರ ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿ ಸಾಧನೆಗೈದಿದೆ. ಇಂತಹ ಸಾಧನೆಯನ್ನು ಕಳೆದ 30 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಬ್ಯಾಂಕಿನ ಆರ್ಥಿಕ ತಖ್ತೆ:ಬ್ಯಾಂಕ್‌ಗೆ ಒಟ್ಟು 1086 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ ರೂ.476.00 ಕೋಟಿ ಆಗಿರುತ್ತದೆ. ದುಡಿಯುವ ಬಂಡವಾಳ ರೂ. 12873.14 ಕೋಟಿ ಆಗಿದ್ದು. ಇದು ಕಳೆದ ವರ್ಷಕ್ಕಿಂತ (ರೂ.11418.68 ಕೋಟಿ) ಶೇಕಡ 12.74 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ರೂ.270.15 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ. ಶೇಕಡ 8.02 ರಷ್ಟು ಏರಿಕೆ ಕಂಡಿದೆ.“ರುಪೇ” (RuPay) ಕಿಸಾನ್ ಕ್ರೆಡಿಟ್ ಕಾರ್ಡ್:ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ (RuPay) ಕಿಸಾನ್ ಕಾರ್ಡ್ ನ್ನು ನೀಡಿದೆ. ಈಗಾಗಲೇ 1,41,266 ರುಪೇ ಕಿಸಾನ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗಿದೆ 86,887 ರುಪೇ ಡೆಬಿಟ್ ಕಾರ್ಡ್ ಗಳನ್ನು ಬ್ಯಾಂಕ್ ಇತರ ಗ್ರಾಹಕರಿಗೆ ನೀಡಲಾಗಿದೆ.ಮುಂದಿನ ಯೋಜನೆಗಳು:

ಪ್ರಾದೇಶಿಕ ವಾರ್ತೆಗಳು

ಎ.9-11ರವರೆಗೆ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ “ನಡಾವಳಿ ಉತ್ಸವ“

ಮಂಗಳೂರು: ನಗರದ ಹೃದಯ ಭಾಗವಾದ ಕೊಡಿಯಲ್‌ ಬೈಲ್‌ ಸ್ಥಿತವಾಗಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಸುಮಾರು ಹತ್ತು ಶತಮಾನಗಳಿಗೂ ಹೆಚ್ಚು ಭವ್ಯ ಇತಿಹಾಸವಿದ್ದು ಆದಿಶಕ್ತಿ ಶ್ರೀ ಭಗವತೀ ಮಾತೆಯು ಹದಿನಾಲ್ಕು ಸ್ವರೂಪಗಳಲ್ಲಿ ಶ್ರೀ ಚೀರುಂಭ ಭಗವತೀ – ನಾಲ್ವರು, ಶ್ರೀ ಪಾಡಾಂಗರ ಭಗವತೀ – ಐವರು, ಶ್ರೀ ಪುಲ್ಲೂರಾಳಿ ಭಗವತೀ – ಐವರು ಕಾರಣೀಕ ಮೆರೆದು ಭಕ್ತ ರಕ್ಷಕಿಯಾಗಿ ನೆಲೆನಿಂತುದರಿಂದ “ಕೂಟಕ್ಕಳ” ಎಂಬುದಾಗಿ ಖ್ಯಾತಿ ಪಡೆದಿದೆ. ತೀಯಾ ಸಮುದಾಯಆರಾಧಿಸಿಕೊಂಡು ಬಂದಿದ್ದರೂ ಶ್ರೀ ಮಾತೆಯರು ಜಾತಿಯ ಚೌಕಟ್ಟನ್ನು ಮೀರಿ ಶರಣುಬಂದ ಭಕ್ತರನ್ನು ಹರಸಿಕಾಯುತ್ತಿರುವುದರಿಂದ ಸ್ಥಳೀಯ ಭಕ್ತಾದಿಗಳಿಂದ ಶ್ರೀ ಕ್ಷೇತ್ರವು “ಗುತ್ಯಮ್ಮ ಸ್ಥಾನ’ವೆಂದೇ ಪ್ರಸಿದ್ಧಿ ಪಡೆದಿದೆ ಎಂದು ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಶ್ರೀ ಕ್ಷೇತ್ರದ ವ್ಯಾಪ್ತಿಗೆ ಕೊಡಿಯಾಲ್‌ ಬೈಲ್, ಕದ್ರಿ, ಜೆಪ್ಪು, ಬೋಳಾರ, ಕಂಕನಾಡಿ, ನೆತ್ತರೆಕೆರೆ, ಸಜಿಪ, ಚೇಳೂರು, ಇರಾ ಕಲ್ಲಾಡಿ,ಪಜೀರು, ನೀರುಮಾರ್ಗ, ಪಡುಬೊಂಡಂತಿಲ, ಬೆಳ್ಳೂರು ಮೊದಲಾದ 13 ಗ್ರಾಮಗಳು, ಕೆಳಗಿನ ಮನೆ ತರವಾಡು, ಜಪ್ಪು, ವಿಷ್ಣುಮೂರ್ತಿ ಆದಿಕ್ಷೇತ್ರ, ಕಡವಿನ ಬಳಿ ಬೋಳಾರ ತರವಾಡು ಹಾಗೂ ಕದ್ರಿ ಕಣ್ಣಬೆಟ್ಟು ತರವಾಡು ಹೀಗೆ 4 ತರವಾಡುಗಳು ಒಳಪಟ್ಟಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಭೇಟಿ ನೀಡಿದ ಪರಮ ಪಾವನ ಕ್ಷೇತ್ರವಾಗಿದ್ದು, ಪ್ರಸ್ತುತ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.ಕಳೆದ 18 ವರ್ಷಗಳಿಂದ ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಷೇತ್ರದಲ್ಲಿ ಶ್ರೀ ಮಾತೆಯರ ಪ್ರಸಾದ ರೂಪವಾಗಿ ಭಕ್ತಾದಿಗಳಿಗೆಅನ್ನಸಂತರ್ಪಣೆ ಜರಗುತ್ತಿದ್ದು, ಸ್ಥಳೀಯ ವಿವಿಧ ವಿದ್ಯಾ ಸಂಸ್ಥೆಗಳ ಸುಮಾರು 700 ವಿದ್ಯಾರ್ಥಿಗಳ ಸಮೇತ 3000ಕ್ಕೂ ಹೆಚ್ಚುಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದರು.ಶ್ರೀ ಕ್ಷೇತ್ರದಲ್ಲಿ ಶ್ರೀ ಮಾತೆಯರಿಗೆ ಭರಣಿ ಮಹೋತ್ಸವ, ಪೆರುಂಕಳಿಯಾಟ, ನಡಾವಳಿ ಉತ್ಸವಗಳು ಕಾಲಕಾಲಕ್ಕೆನಡೆಯುತ್ತಿದ್ದು, ಈ ಸಾಲಿನ ನಡಾವಳಿ ಉತ್ಸವವು ದಿನಾಂಕ ಎಪ್ರಿಲ್ 9ರಿಂದ 11ರವರೆಗೆ ವಿವಿಧ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳು, ಭಜನಾ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳವಿಜೃಂಭಣೆಯಿಂದ ಜರಗಲಿದೆ. ಈ ಸಂದರ್ಭದಲ್ಲಿ ಶ್ರೀ ಮಾತೆಯರ ಭವ್ಯ ಶೋಭಾಯಾತ್ರೆ ಹಾಗೂ ಪಾರಂಪರಿಕ ಪವಿತ್ರ ಕೆಂಡ ಸೇವೆ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣಾ ಸೇವೆ ಜರಗಲಿದೆ ಎಂದರು.ವೇದಿಕೆಯಲ್ಲಿ ವಿಶ್ವನಾಥ್ ಕುಡುಪು, ಸುಧೀರ್ ಬಿ.ಜೆಪ್ಪು, ಲೋಕೇಶ್ ಬೋಳಾರ್,ಸ್ರಜನ್ ದಾಸ್, ಮೋಹನ್, ಪುರುಷ ಸಾಲಿಯಾನ್, ರವೀಂದ್ರ ಕೊಡಿಯಾಲ್ ಬೈಲ್, ಉಷಾ ಪ್ರಭಾಕರ್, ಆಶಾ ಚಂದ್ರಮೋಹನ್,ಪುರುಷ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.Photo: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

“ತುಳು ಸಂಘಟನೆಗಳ ಪ್ರತಿನಿಧಿಗಳಿಂದ ಸ್ಪೀಕರ್ ಖಾದರ್ ಗೆ ಮನವಿ

ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ 27 ದೇಶಗಳ ತುಳು ಸಂಘಟನೆಗಳ ಪ್ರತಿನಿಧಿಗಳು ಅಖಿಲ ಅಮೆರಿಕ ತುಳುವರ ಅಂಗಣ ಇದರ ಅಧ್ಯಕ್ಷೆ ಶ್ರೀವಲ್ಲಿ ರೈ ಮತ್ತು ಭಾಸ್ಕರ ಶೇರಿಗಾರ್‌, ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಖಾದರ್ ಅವರು ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಸಿಯೆಲ್‌ ಮರ್ಲಿನ್‌ ಮೊಂತೇರೊಗೆ ಪ್ರಥಮ ರ್ಯಾಂಕ್‌

ಮಂಗಳೂರು: ಭಾರತದ ನಂ.1 ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ ನಡೆಸಿದ 2024- 25 ನೇ ಸಾಲಿನ ರಾಜ್ಯ ಮಟ್ಟದ ಗ್ರ್ಯಾಂಡ್‌ ಫಿನಾಲೆಯಲ್ಲಿ ಮಂಗಳೂರಿನ ಮೇರಿಹಿಲ್‌ ಮ ಮೌಂಟ್‌ ಕಾರ್ಮೆಲ್‌ ಸೆಂಟ್ರಲ್‌ ಸ್ಕೂಲ್‌ ನ 10 ನೇ ತರಗತಿ ವಿದ್ಯಾರ್ಥಿನಿ ಸಿಯೆಲ್‌ ಮರ್ಲಿನ್‌ ಮೊಂತೇರೊ ಅವರು ಪ್ರಥಮ ರ್ಯಾಂಕ್‌ ಪಡೆದಿದ್ದಾರೆ. ಸಿಯೆಲ್‌ ಮರ್ಲಿನ್‌ ಮೊಂತೇರೊ ಅವರು ಬಜಪೆ ಕರಂಬಾರಿನ ವಾಲ್ಟರ್ ಮೊಂತೇರೊ ಮತ್ತು ಕಿರಣ್‌ ಶರ್ಲಿ ಡಿ’ಸೋಜಾ ಅವರ ಪುತ್ರಿ.

ಪ್ರಾದೇಶಿಕ ವಾರ್ತೆಗಳು

ಪ್ರಕೃತಿಯ ಸಂರಕ್ಷಣೆ ಗಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಅಗತ್ಯ -ಆರ್.ಕೆ.ನಾಯರ್

ಮಂಗಳೂರು,ಎ.3;ಪ್ರಕೃತಿಯನ್ನು ಸಂರಕ್ಷಣೆ ಮಾಡಬೇಕಾದರೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಅಗತ್ಯವಾಗಿ ಆಗಬೇಕು.ಪರಿಸರ ಸಂರಕ್ಷಣೆ ನಮ್ಮ ಮೊದಲ ಆಧ್ಯತೆ ಯಾಗ ಬೇಕು.ಎಂದು ಗ್ರೀನ್ ಹಿರೋ ಆಫ್ ಇಂಡಿಯಾ ಖ್ಯಾತಿಯ ಆರ್.ಕೆ.ನಾಯರ್ ತಿಳಿಸಿದ್ದಾರೆ.ಅವರು ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಕೋ ಕ್ಲಬ್‌ ,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಸಹಯೋಗ ದೊಂದಿಗೆ ಬುಧವಾರ ಹಮ್ಮಿಕೊಂಡಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ ಇಂತಹ ಪ್ರಕೃತಿಯಲ್ಲಿ ಬುದ್ದಿವಂತ ಜೀವಿ ಎಂದು ಕರೆಸಿಕೊಂಡ ಮನುಷ್ಯನ ಸೃಷ್ಟಿ ಕೊನೆಯಲ್ಲಿ ಆಗಿದೆ ಆದಕಾರಣ ಈ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲಾ ಜೀವಿಗಳಿ ಗಿಂತ ಹೆಚ್ಚು ಮನುಷ್ಯ ನ ಮೇಲಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಅದೊಂದು ಅದ್ಭುತ ಸೃಷ್ಟಿ.ಅಲ್ಲಿನ ನಡೆಯುವ ಕ್ರೀಯೆಗಳನ್ನು ನಮಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ‌.ಇಲ್ಲಿ ಇರುವ ಪ್ರತಿ ಜೀವಿಗಳಿಗೂ ಈ ಭೂಮಿಯಲ್ಲಿ ವಾಸಿಸುವ ಹಕ್ಕಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.ಒಂದು ಬಾರಿ ರಸ್ತೆ ಕಾಮಗಾರಿ ಮಾಡುತ್ತಿದ್ದಾಗ ಮರವೊಂದನ್ನು ಉರುಳಿ ನಾಶವಾದಾಗ ಅದನ್ನು ಆಶ್ರಯಿಸಿ ಕೊಂಡಿದ್ದ ಹಕ್ಕಿಗಳ ಗೂಡು ಬಿದ್ದು ಅದರ ಸಂಸಾರ ನಾಶವಾಯಿತು. ಆ ಹಕ್ಕಿಗಳ ರೋಧನ ನನಗೆ ಅರಣ್ಯ ನಿರ್ಮಿಸಲು ಪ್ರೇರಣೆಯಾಯಿತು ಹೀಗೆ ಆರಂಭಗೊಂಡ ಅಭಿಯಾನದ ಮೂಲಕ 12 ರಾಜ್ಯಗಳಲ್ಲಿ 122 ಕಾಡು ನಿರ್ಮಿಸಲು ಸಾಧ್ಯವಾಗಿದೆ. ವಿಶ್ವದ ಅತೀ ದೊಡ್ಡ ಮಿಯಾವಾಕಿ ಅರಣ್ಯ ಗುಜರಾತಿನ ಸ್ಮೃತಿ ವನ ನಿರ್ಮಾಣ ಮಾಡಿರು ವುದು ನನಗೆ ತೃಪ್ತಿ ತಂದಿದೆ ಎಂದು ಆರ್.ಕೆ.ನಾಯರ್ ವಿವರಿಸಿದರು.ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಸಮಾರಂಭದಲ್ಲಿ ಬಲ್ಮಠ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಬಾಳ,ಉಪನ್ಯಾಸಕಿ ಮಂಜುಳಾ ಮಲ್ಯ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ,ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್ ಗ್ರಾಹಕರ ಕ್ಲಬ್ ಸಂಯೋಜಕಿ ಮಂಜುಳಾ ಮಲ್ಯ,, ಇಕೋ ಕ್ಲಬ್ ಕಾರ್ಯದರ್ಶಿ ವೈಶಾಲಿ ಹಾಗೂ ಪದಾಧಿಕಾರಿಗಳು ಸದಸ್ಯರು ಉಪ ಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೋರೇಶನ್ ಸಂಸ್ಥೆಯ ಹೊಸ ರೆಸಿಡೆನ್ಶಿಯಲ್ ಯೋಜನೆ ‘ರೋಹನ್ ಮಿರಾಜ್’ಗೆ ನಾಳೆ ಭೂಮಿ ಪೂಜೆ

ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ತನ್ನ ಮತ್ತೊಂದು ಹೊಸ ಅಪಾರ್ಟ್’ಮೆಂಟ್ ಯೋಜನೆ ‘ರೋಹನ್ ಮಿರಾಜ್’ಗೆ ನಾಳೆ (ಶನಿವಾರ 05, 2025ರಂದು) ಸಂಜೆ 5.00 ಗಂಟೆಗೆ ಭೂಮಿಪೂಜೆಯನ್ನು ನಡೆಸಲಿದೆ. ಈ ಹೊಸ ಯೋಜನೆಯು ಕುಲಶೇಖರ ಬೈತುರ್ಲಿಯ ಪ್ರಧಾನ ರಸ್ತೆಯ ರೋಹನ್ ಎಸ್ಟೇಟ್ ಬಡಾವಣೆಯ ಮುಖ್ಯದ್ವಾರದಲ್ಲಿ ತಲೆ ಎತ್ತಲಿದೆ.ರೋಹನ್ ಮಿರಾಜ್:ರೋಹನ್ ಮಿರಾಜ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಅತ್ತ್ಯುತ್ತಮ ರೆಸಿಡೆನ್ಶಿಯಲ್ ಯೋಜನೆಯಾಗಿ ಈ ಪ್ರಾಜೆಕ್ಟ್ 50 ಉತ್ತಮವಾಗಿ ವಿನ್ಯಾಸಗೊಳಿಸಲಾದ 2 ಬಿ.ಎಚ್.ಕೆ. ಅಪಾರ್ಟ್’ಮೆಂಟ್’ಗಳನ್ನು ಒಳಗೊಂಡಿದೆ, ಇದು ಹತ್ತು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪ್ರತಿ ಘಟಕವು ಸ್ಥಳಾವಕಾಶ ಮತ್ತು ಸೊಗಸನ್ನು ಹೊಂದಿದೆ. 1060 ರಿಂದ 1080 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್’ಮೆಂಟ್’ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಹಾಗೂ ಸೌಕರ್ಯ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ಹೊಂದಿದೆ.ಸ್ವಯಂಚಾಲಿತ ಲಿಫ್ಟ್’ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಮತ್ತು ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಮಳೆನೀರಿನ ಕೊಯಿಲು ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ಪದ್ಧತಿಗಳನ್ನು ಒಳಗೊಂಡಿದೆ. ಅತ್ತ್ಯುತ್ತಮ ದರ್ಜೆಯ ಕಟ್ಟಡ ನಿರ್ಮಾಣ ಪರಿಕರಗಳನ್ನು ಉಪಯೋಗಿಸಲಿದ್ದು, ಸಧೃಡ ಬಹುಮಹಡಿ ರೆಸಿಡೆನ್ಶಿಯಲ್ ಕಟ್ಟಡವು ನಿರ್ಮಾಣಗೊಳ್ಳಲಿದೆ.ಕುಲಶೇಖರ ಬೈತುರ್ಲಿಯಲ್ಲಿನ ರೋಹನ್ ಮಿರಾಜ್, ಮಂಗಳೂರಿನ ಹಚ್ಚಹಸುರಿನ ಪರಿಸರದಲ್ಲಿದ್ದು, ಶಿಕ್ಷಣಸಂಸ್ಥೆಗಳು, ಚರ್ಚ್ ಪೂಜಾ ಸ್ಥಳಗಳು ಮತ್ತು ಮಂಗಳೂರು-ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿದ್ದು ಕೆಲವೇ ನಿಮಿಷಗಳಲ್ಲಿ ನಂತೂರ್ ಜಂಕ್ಷನ್ ತಲುಪಬಹುದಾಗಿದೆ. ರೋಹನ್ ಕಾರ್ಪೊರೇಶನ್‌:ಮೂರು ದಶಕಗಳಿಗೂ ಹೆಚ್ಚು ಕಾಲದ ಉನ್ನತ ಪರಂಪರೆಯನ್ನು ಹೊಂದಿರುವ ರೋಹನ್ ಕಾರ್ಪೊರೇಶನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರನ್ನು ಗಳಿಸಿದೆ. ಕಂಪನಿಯು ಕರಾವಳಿ ಕರ್ನಾಟಕದಾದ್ಯಂತ ಅನೇಕ ರೆಸಿಡೆನ್ಶಿಯಲ್, ಕಮರ್ಶಿಯಲ್ ಮತ್ತು ಲೇಔಟ್ ಪ್ರಾಜೆಕ್ಟ್’ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಗುಣಮಟ್ಟ ಮತ್ತು ವಿನ್ಯಾಸಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ರೋಹನ್ ಕಾರ್ಪೊರೇಶನ್ನಿನ ಹಲವು ಯೋಜನೆಗಳು ಸದ್ಯದಲ್ಲೇ ಆರಂಭಗೊಳ್ಳಲಿವೆ, ಅಲ್ಲದೆ ರೋಹನ್ ಮಿರಾಜ್ ಅಪಾರ್ಟ್ಮೆಂಟ್ಗಳು ಅತ್ಯಾಕರ್ಷಕ ಕಂತುಗಳಲ್ಲಿ ದೊರೆಯಲಿವೆ. ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

Rohan Corporation Unveils ‘Rohan Mirage’: A New Benchmark in Luxury Living in Mangaluru

Mangaluru, Karnataka – Rohan Corporation, a pioneer in reshaping coastal Karnataka’s real estate landscape, is thrilled to announce the grand launch of ‘Rohan Mirage’, an ultra-luxury residential project in the serene locale of Kulshekar, Mangaluru on Saturday, April 5, 2025 at 5.00 pm. Set to redefine modern living, this 10-story high-rise offers 50 meticulously designed 2 BHK apartments, blending sophisticated architecture with world-class amenities. Nestled amidst lush greenery, Rohan Mirage promises a tranquil retreat while ensuring seamless connectivity to key city hubs. Its prime location—just five minutes from Nanthoor Junction—combines urban convenience with the serenity of nature. Each apartment, spanning 1060 to 1080 square feet, features spacious living areas with premium vitrified flooring, modern kitchens with granite platforms and utility provisions, balconies designed for safety and relaxation, and smart home-ready electrical and connectivity setups.Rohan Mirage boasts cutting-edge construction standards, including an RCC structure with laterite and solid block masonry, UPVC/Aluminium windows with MS grills for safety, leak-proof bathrooms with anti-skid tiles and branded fittings, and dual elevators (8-passenger and 13-passenger) with emergency features. The flats are available on easy instalments too.A leader in luxury real estate, Rohan Corporation is renowned for timely delivery, quality craftsmanship, and visionary projects across Karnataka. With nearly three decades of expertise and over 30 landmark Residential, Commercial and layout projects, Rohan Corporation continues to elevate coastal Karnataka’s real estate sector. Rohan Mirage embodies this commitment, merging innovative design with timeless Vastu principles. Few more prestigious projects will be launched soon.Prospective homeowners are invited to explore the project at the Sales Office, Rohan City, Bejai Main Road, Mangalore or email: info@rohancorporation.in or website: www.rohancorporation.in or contact 98454 90100, 98456 07725, 90363 92628.

ಪ್ರಾದೇಶಿಕ ವಾರ್ತೆಗಳು

ಪಠ್ಯ- ಪಠ್ಯೇತರ ಚಟುವಟಿಕೆಗಳು ಪರಸ್ಪರ ಪೂಕರವಾಗಿರ ಬೇಕು: ವಂ. ಫಾ. ಡಿ’ಕೋಸ್ಟಾ

ಮಂಗಳೂರು; ಕೆಲರಾಯ್:ಶಾಲಾ ಅವಧಿಯಲ್ಲಿ ಕಲಿಯುವ ಪಾಠಗಳು ಹಾಗೂ ನಡೆಸುವ ಪಠ್ಯೇತರ ಚಟುವಟಿಕೆಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕೆಲರಾಯ್‌ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಂದನೀಯ ಗುರು ಸಿಲ್ವೆಸ್ಟರ್ ಡಿ’ಕೋಸ್ಟಾ ಹೇಳಿದರು.ಕೆಲರಾಯ್‌ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಐದು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜೂನ್ ತಿಂಗಳಿನಿಂದ ಮಾರ್ಚ್ ವರೆಗೆ ವಿದ್ಯಾರ್ಥಿಗಳು ಶಾಲಾ ಕೊಠಡಿಯ ನಾಲ್ಕು ಗೋಡೆಗಳ ನಡುವೆ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆಗೆ ತೆರಳುವ ಮುನ್ನ ಒತ್ತಡಗಳಿಂದ ಮುಕ್ತಗೊಳಿಸಿ ಅವರ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಈ ಶಿಬಿರ ನಿಜವಾಗಿಯೂ ಪ್ರಶಂಸಾರ್ಹ ಎಂದರು.ವೇದಿಕೆಯಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಂದನೀಯ ಗುರು ರೋಶನ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ಜಾನ್‌ ಪಾಯ್ಸ್‌, ಐರಿನ್‌ ಮಿನೇಜಸ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವೀಡಲ್‌ ಫೆರ್ನಾಂಡಿಸ್‌ ಸ್ವಾಗತಿಸಿ, ದಿಶಾ ಎಸ್..ಎನ್. ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಏಪ್ರಿಲ್ 5 ರಿಂದ 6 ರ ವರೆಗೆ ಸುರತ್ಕಲ್ ಸ್ಪೋರ್ಟ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಹಿರಿಯರ ಕ್ರಿಕೆಟ್ ಹಬ್ಬ…!

ಮಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಸುರತ್ಕಲ್ ಸ್ಪೋಟ್ಸ್೯ ಆ್ಯಂಡ್ ಕಲ್ಚರಲ್ ಕ್ಲಬ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಹಿರಿಯರ ಕ್ರಿಕೆಟ್ ಹಬ್ಬವನ್ನು ನಡೆಸಿಕೊಂಡು ಬಂದಿದ್ದು, ಅದರಂತೆಯೆ ಏಪ್ರಿಲ್ 5 ರಿಂದ 6 ರ ವರೆಗೆ ರಾಜ್ಯಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ಓವರ್ ಆರ್ಮ್ ಪಂದ್ಯಾ ಕೂಟ ಸುರತ್ಕಲ್ ಗೋವಿಮದದಾಸ ಕಾಲೇಜ್ ಮೈದಾನಲ್ಲಿ ನಡೆಯಲಿದೆ. ಈ ಕೂಟದಲ್ಲಿ 14 ತಂಡಗಳು ಭಾಗವಹಿಸಲಿದೆ ಎಂದು ಸುರತ್ಕಲ್ ಸ್ಪೋಟ್ಸ್೯ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.5 ಓವರ್‌ ನ ಪಂದ್ಯಾಟ ಇದಾಗಿದ್ದು ಈ ಪಂದ್ಯಾಟದ ವಿಜೆತರಿಗೆ ಪ್ರಥಮ ಬಹುಮಾನ ಟ್ರೋಫಿ ಹಾಗೂ 1 ಲಕ್ಷ ನಗದು, ದ್ವೀತಿಯ ಬಹುಮಾನ ಟ್ರೋಫಿ ಹಾಗೂ 50000 ನಗದು,ತೃತೀಯ ಮತ್ತು ಚತುರ್ಥ ಬಹುಮಾನ ಟ್ರೋಫಿ ಹಾಗೂ ನಗದನ್ನು ನಿಗದಿಪಡಿಸಲಾಗಿದೆ.ಎ. 5 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯುವ ಈ ಪಂದ್ಯಾಟದ ಅಧ್ಯಕ್ಷತೆಯನ್ನು ಕರಾವಳಿ ಕಾಲೇಜ್ ನ ಸಂಸ್ಥಾಪಕ ಎಸ್.ಗಣೇಶ್ ರಾವ್, ದ್ವೀಪ ಪ್ರಜ್ವಲನೆಯನ್ನು ವೇದಮೂರ್ತಿ ಬಿ.ರಮಾನಂದ ಭಟ್, ಹಾಗೂ ಪಂದ್ಯಾಟದ ಉಧ್ಘಾಟನೆ ಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಶಾಸಕ ಡಾ.ವೈ ಭರತ್ ಶೆಟ್ಟಿಯವರು ನಡೆಸಲಿದ್ದಾರೆ.ಈ ಪಂದ್ಯಾವಳಿಯ ಸಮಾರೋಪ ಸಮಾರಂಭ ಏಪ್ರಿಲ್ 6 ರಂದು ಅದಿತ್ಯವಾರ ಸಂಜೆ 5 ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಮುಲ್ಕಿ ಮೂಡಬಿದರೆ ಶಾಸಕ ಉಮನಾಥ ಕೋಟ್ಯಾನ್, ಕೃಷ್ಣ .ಜೆ.ಪಾಲೆಮಾರ್,ಹಾಗೂ ಇನಾಯತ್ ಆಲಿ ಹಾಗೂ ಇನ್ನಿತರರು ಉಪಸ್ಥಿತರಿರುವರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಂಚಾಲಕ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನೀಲ್ ಶೆಟ್ಟಿ ತೇವು ಸೂರಿಂಜೆ, ,ಸುರೇಂದ್ರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮಧ್ಯ, ಕಿರಣ್ ಆಚಾರ್ಯ ಉಪಸ್ಥಿತರಿದ್ದರು.

Scroll to Top