ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸ್ನೇಹಾಲಯ ಹಾಗೂ ಜನಮೈತ್ರಿ ಪೊಲೀಸ್ ಸಂಘಟನೆಯಿಂದ ಉಪ್ಪಳ–ಹೊಸಂಗಡಿಯಲ್ಲಿ ಡ್ರಗ್ ವಿರೋಧಿ ಜನಜಾಗೃತಿ ಕಾರ್ಯಕ್ರಮ

— ಪ್ರತಿನಿಧಿಯಿಂದ, ಕಾಸರಗೋಡು | ಏಪ್ರಿಲ್ 17, 2025ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳು, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದ ಮೇಲೆ ಬೀರುವ ಪರಿಣಾಮಗಳನ್ನು ಸ್ಪಷ್ಟವಾಗಿ ಸಾರ್ವಜನಿಕರಿಗೆ ಪರಿಚಯಿಸುವುದು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯಶಾಸ್ತ್ರ (MSW) ವಿದ್ಯಾರ್ಥಿಗಳು ಸ್ನೇಹಾಲಯ ತಂಡದೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಕಲಾತ್ಮಕವಾಗಿ ತಮ್ಮ ಸಂದೇಶವನ್ನು ಸಾರ್ವಜನಿಕರ ಮುಂದಿಟ್ಟು ಜನಮನ ಗೆದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯ ಅತಿಥಿಗಳಲ್ಲಿ ಕಾಸರಗೋಡು ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ (ಎಎಸ್ಪಿ) ಶ್ರೀ ಪಿ. ಬಾಲಕೃಷ್ಣ ನಾಯರ್, ಹೊಸದುರ್ಗ್ ಠಾಣೆಯ ವೃತ್ತ ನಿರೀಕ್ಷಕ (ಸಿ.ಐ) ಅಜಿತ್ ಕುಮಾರ್, ಮಂಜೇಶ್ವರ ಠಾಣೆಯ ಸಿ.ಐ ಶ್ರೀ ಅನುಪ್ ಹಾಗೂ ಸ್ನೇಹಾಲಯ ಡಿ ಅಡಿಕ್ಶನ್ ಕೇಂದ್ರದ ಕಾರ್ಯನಿರ್ವಾಹಕ, ನಿರ್ದೇಶಕ ಶ್ರೀ ಜೋಸೆಫ್ ಕ್ರಾಸ್ತಾ ಅವರು ಪ್ರಮುಖರಾಗಿ ಉಪಸ್ಥಿತರಿದ್ದರು.ಸಂಭಾಷಣೆಯ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳು, ಕಾಸರಗೋಡು ಜಿಲ್ಲೆಯಲ್ಲಿನ ಮಾದಕವಸ್ತು ಬಳಕೆಯಲ್ಲಿರುವ ಯುವಜನತೆಗೆ ಸೂಕ್ತ ಚಿಕಿತ್ಸೆ ನೀಡಲು ಇರುವ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸ್ನೇಹಾಲಯವು ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಅಮೋಘ ಸೇವೆಗಳಿಗೆ ಪ್ರಶಂಶೆ ಅರ್ಪಿಸಿದರು. ಜೊತೆಗೆ, ಇತ್ತೀಚೆಗೆ ಈ ಸಂಸ್ಥೆಯು ಸ್ಥಾಪಿಸಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಯುಕ್ತಗೊಂಡಿರುವ ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಕುರಿತು ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಮಾತನಾಡಿದ ಶ್ರೀ ಜೋಸೆಫ್ ಕ್ರಾಸ್ತಾ, ಸ್ನೇಹಾಲಯದಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸೆ ವಿಧಾನಗಳು, ವೈಯಕ್ತಿಕ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಕುಟುಂಬ ಜವಾಬ್ದಾರಿಗಳ ಜತೆಗೆ ಒಡನಾಡಿ ಬೆಳೆಸುವ ದಿಶೆಯ ಸೇವೆಗಳ ಬಗ್ಗೆ ವಿವರಿಸಿದರು. ಮಾದಕವಸ್ತುಗಳ ಮೋಹದಿಂದ ಮುಕ್ತವಾಗಿರುವ ಸಮುದಾಯ ನಿರ್ಮಾಣಕ್ಕೆ ಸ್ನೇಹಾಲಯ ತೊಡಗಿಸಿಕೊಂಡಿರುವ ನಿಷ್ಠೆ ಹಾಗೂ ಸೇವಾಭಾವನೆಗೆ ಅವರು ಬದ್ಧರಾಗಿರುವುದನ್ನು ಸ್ಪಷ್ಟಪಡಿಸಿದರು.ಸಮಾರಂಭದ ಅಂತ್ಯದಲ್ಲಿ ಸಾರ್ವಜನಿಕರು, ಉದ್ಯೋಗಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ನೇಹಾಲಯ ತಂಡದ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವನ್ನು ಶ್ರದ್ದೆಯಿಂದ ವೀಕ್ಷಿಸಿ ಎಲ್ಲಾ ಕಲಾವಿದರನ್ನು ತುಂಬು ಹ್ರದಯದಿಂದ ಅಭಿನಂದಿಸಿದರು

ಪ್ರಾದೇಶಿಕ ವಾರ್ತೆಗಳು

‘ಸಮಾಜಮುಖಿ ಸಂಘಟನೆಗಳಿಗೆ ಪ್ರೋತ್ಸಾಹ ಅಗತ್ಯ’ ಎಂಆರ್‌ಪಿಎಲ್ ನ ಸಿಜಿಎಂ ಮನೋಜ್ ಕುಮಾರ್ ಆಶಯ

ಮಂಗಳೂರು: ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ 31ನೇ ವಾರ್ಷಿಕೋತ್ಸವ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಎಂಆರ್‌ಪಿಎಲ್ ನ ಚೀಫ್ ಜನರಲ್ ಮೆನೇಜರ್ ಮನೋಜ್ ಕುಮಾರ್ ಮಾತನಾಡಿ ‘ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಿರುವ ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಮಾದರಿ ಸಂಸ್ಥೆಯಾಗಿದೆ. ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವುದು ಜನರ ಕರ್ತವ್ಯ. ಸ್ಪಂದನಾ ಸಂಸ್ಥೆಯ ಬಗ್ಗುಂಡಿ ಕೆರೆ ಉಳಿಸಿ ಅಭಿಯಾನಕ್ಕೆ ಎಂಆರ್‌ಪಿಎಲ್ ನ ಸಂಸ್ಥೆಯಿಂದ ಪೂರಕ ಬೆಂಬಲ ನೀಡಲಾಗುವುದು ಎಂದರು.ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಸಮಾಜ ಸೇವೆಯ ಜತೆಗೆ ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ’ಎಂದರು.ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘವನ್ನು ಹಾಗೂಯಕ್ಷಗಾನ ಪ್ರತಿಭೆ ರೇವತಿ ನವೀನ್ ಮತ್ತು ಪ್ರತಿಭಾವಂತ ವಿದ್ಯಾರ್ಥಿ ಅನಘ ಐತಾಳ್ ಇವರುಗಳನ್ನು ಸನ್ಮಾನಿಸಲಾಯಿತು. ಸುರೇಖ ಹರಿಶ್ಚಂದ್ರ, ಪೂರ್ಣಿಮಾ ಐತಾಳ್ ಮತ್ತು ಅನುಶ್ರೀ ಹರ್ಷಿತ್ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು.ಸಂಸ್ಥೆಯ ಗೌರವ ಸಲಹೆಗಾರ ಎಂ. ಜೆ. ಶೆಟ್ಟಿ , ಅಧ್ಯಕ್ಷ ದೀಪಕ್ ಕುಳಾಯಿ, ಗೌರವಾಧ್ಯಕ್ಷ ರಾಜೇಂದ್ರನ್, ಉದ್ಯಮಿ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ವರದಿ ವಾಚಿಸಿದರು. ಯಜ್ಞೇಶ್ ಐತಾಳ್ ಸ್ವಾಗತಿಸಿ, ಕೋಶಾಧಿಕಾರಿ ಆಶಿತ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ನಾಟಕ ಪ್ರದರ್ಶನಗೊಂಡಿತು. ಫೋಟೋ : ಸ್ಪಂದನಾ

ಪ್ರಾದೇಶಿಕ ವಾರ್ತೆಗಳು

Rohan EthosLaunching on April 19, 2025

Mangaluru: Rohan Corporation proudly unveils its latest residential masterpiece, Rohan Ethos, in the prestigious locale of Kankanady, Next to Father Muller Hospital, Father Muller Road, Mangaluru. Set to launch on April 19, 2025, this project epitomizes timeless elegance and contemporary sophistication, offering a harmonious blend of modern architecture and beautiful surroundings. Designed for discerning individuals, Rohan Ethos features meticulously curated details, transforming houses into homes where families can thrive and create cherished memories.The project spans 15 floors, with a total of 28 units each of 3BHK and 4BHK configurations, catering to diverse lifestyle needs. The floor plans highlight spacious layouts, with 4BHK units ranging from 2515 to 2975 sq. ft. and 3BHK units from 1640 to 2025 sq. ft. Additionally, the development includes ample parking, and plans for road widening to enhance accessibility.Rohan Ethos offers a luxurious living experience with world-class amenities, including an infinity swimming pool, a modern gym, indoor games, a yoga room, and automatic elevators with ARD (Automatic Rescue Device) for added safety. The spacious and exquisitely designed super luxury flats ensure unmatched comfort and style. Strategically located, Rohan Ethos provides easy access to hospitals, worship places, railway stations, supermarkets, public gardens, and renowned educational institutions, making it an ideal choice for those seeking convenience, wellness, and premium living. Rohan Ethos boasts world-class specifications, including high-quality construction materials, designer finishes, and state-of-the-art amenities. The project also emphasizes sustainability and convenience, with thoughtful design elements like balcony safety measures and efficient drainage systems.This development not only offers a luxurious lifestyle but also ensures a timeless sanctuary for generations to come, solidifying Rohan Corporation’s reputation as a leader in premium residential projects. Rohan Corporation, known for its legacy of excellence, continues to redefine luxury living in Mangaluru. With Rohan Ethos, the company reaffirms its commitment to innovation, quality, and creating spaces that resonate with the aspirations of modern homeowners. With more than three decades of expertise and over 35 landmark Residential, Commercial and layout projects, Rohan Corporation continues to elevate coastal Karnataka’s real estate sector.Prospective homeowners are invited to explore the project at the Sales Office, Rohan City, Bejai Main Road, Mangalore or email: info@rohancorporation.in or website: www.rohancorporation.in or contact 98454 90100, 98456 07725, 90363 92628.

ಪ್ರಾದೇಶಿಕ ವಾರ್ತೆಗಳು

‘ರೋಹನ್ ಇಥೋಸ್’ ಎಪ್ರಿಲ್ 19 ರಂದು ಭೂಮಿ ಪೂಜೆ

ಅತ್ಯುತ್ತಮ ಗುಣಮಟ್ಟ ಮತ್ತು ಸೇವಾಬದ್ಧತೆಯೊಂದಿಗೆ ಕಳೆದ 32 ವರ್ಷಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿಸುವ ಪ್ರತಿಷ್ಠಿತ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಎಪ್ರಿಲ್ 19ರಂದು ಕಂಕನಾಡಿಯ ಫಾದರ್ ಮುಲ್ಲರ್ ಬಳಿ ನಡೆಯಲಿದೆ.ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯು 15 ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 1640 ರಿಂದ 2025 ಚದರ ಅಡಿಗಳ 3 ಬಿಎಚ್ಕೆಯ ಮತ್ತು 2515 ರಿಂದ 2975 ಚದರ ಅಡಿಗಳ 4 ಬಿಎಚ್ಕೆಯ ಎರಡು ಫ್ಲ್ಯಾಟ್ ಗಳಿದ್ದು, ಒಟ್ಟು 28 ಅಪಾರ್ಟ್’ಮೆಂಟ್’ಗಳಿರಲಿವೆ. ರೋಹನ್ ಇಥೋಸ್ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಇನ್ಫಿನಿಟಿ ಸ್ವಿಮ್ಮಿಂಗ್ ಫೂಲ್, ಆಧುನಿಕ ಜಿಮ್, ಇಂಡೋರ್ಗೇಮ್ಸ್, ಯೋಗಾ ರೂಮ್, ಮಕ್ಕಳ ಆಟದ ವಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಹೊಂದಿದೆ. ತಳ ಮತ್ತು ಕೆಳ ಅಂತಸ್ತುಗಳಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಅಪಾರ್ಟ್’ಮೆಂಟ್’ಗಳು ವಾಸ್ತು ಪ್ರಕಾರವಾಗಿದ್ದು ಸಿಸಿ ಕೆಮರಾ, ಸ್ವಯಂಚಾಲಿತ ಲಿಫ್ಟ್, ಜನರೇಟರ್ ಮತ್ತು ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.ಆಸ್ಪತ್ರೆಗಳು, ಪೂಜಾ ಸ್ಥಳಗಳು, ರೈಲ್ವೆ ಸ್ಟೇಶನ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಉದ್ಯಾನ ಮತ್ತು ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ಸಮೀಪದಲ್ಲೇ ಇವೆ.ರೋಹನ್ ಕಾರ್ಪೊರೇಶನ್ ಮಂಗಳೂರಿನಲ್ಲಿ ಐಶಾರಾಮಿ ಅಪಾರ್ಟ್’ಮೆಂಟ್’ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ರೋಹನ್ ಇಥೋಸ್ ಯೋಜನೆ ಹೊಸ ಟ್ರೆಂಡ್, ಗುಣಮಟ್ಟ ಮತ್ತು ಗ್ರಾಹಕರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿದೆ.ಮೂರು ದಶಕಗಳಿಗೂ ಹೆಚ್ಚು ಕಾಲದ ಉನ್ನತ ಪರಂಪರೆಯನ್ನು ಹೊಂದಿರುವ ರೋಹನ್ ಕಾರ್ಪೊರೇಶನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರನ್ನು ಗಳಿಸಿದೆ. ಸಂಸ್ಥೆಯು ಕರಾವಳಿಯಲ್ಲಿ ಅನೇಕ ರೆಸಿಡೆನ್ಶಿಯಲ್, ಕಮರ್ಶಿಯಲ್ ಮತ್ತು ಲೇಔಟ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ

ಪ್ರಾದೇಶಿಕ ವಾರ್ತೆಗಳು

‘ಸಚ್ಚಾರಿತ್ರೃ ಬೆಳೆಸುವುದು ಸಾಹಿತ್ಯದ ಉದ್ದೇಶವಾಗಲಿ’ ಸ್ವಾತಂತ್ರೃ ಹೋರಾಟಗಾರ ಮಟ್ಟಾರ ವಿಟ್ಠಲ ಕಿಣಿ ಆಶಯ

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರೃ ಹೋರಾಟಗಾರ, ಹಿರಿಯ ಸಾಹಿತಿ ಮಟ್ಟಾರ ವಿಟ್ಠಲ ಕಿಣಿ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಗುರುವಾರ ನಗರದ ಅಳಕೆಯಲ್ಲಿರುವ ಸ್ವಗೃಹದಲ್ಲಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಮಟ್ಟಾರ ವಿಟ್ಠಲ ಕಿಣಿ ಮಾತನಾಡಿ ‘ಯುವ ಸಮುದಾಯದಲ್ಲಿ ಸಚ್ಚಾರಿತ್ರೃ ಮತ್ತು ದೇಶಾಭಿಮಾನ ರೂಪಿಸಿ ಬೆಳೆಸುವುದು ಕೂಡಾ ಭಾರತೀಯ ಸಾಹಿತ್ಯದ ಉದ್ದೇಶವಾಗಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ದೇಶದ ಉನ್ನತಿಸಾಧ್ಯ. ಸಾವಿರಾರು ದೇಶ ಭಕ್ತರ ಬಲಿದಾನದಿಂದ ದೇಶ ಸ್ವಾತಂತ್ರೃ ಪಡೆದಿದೆ ಎನ್ನುವುದು ಸದಾ ನಮ್ಮ ಸ್ಮರಣೆಯಲ್ಲಿರಬೇಕು ಎಂದರು.ಸನ್ಮಾನ ನೆರವೇರಿಸಿದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ವಿದ್ಯಾರ್ಥಿ ದೆಸೆಯಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿ ಬಳಿಕ ಗೋವಾ ವಿಮೋಚನೆ ಹೋರಾಟದಲ್ಲಿ ಭಾಗವಹಿಸಿದ ಮಟ್ಟಾರ ವಿಟ್ಠಲ ಕಿಣಿ ಅವರ ಅಪ್ರತಿಮ ರಾಷ್ಟ್ರಭಕ್ತಿ , ಸಾಹಿತ್ಯ ಸೇವೆ ಸಮಾಜಕ್ಕೆ ಸದಾ ಪ್ರೇರಣೆಯಾಗಿದೆ ಎಂದರು.ಹಿರಿಯ ಪರ್ತಕರ್ತ ಕೆ.ಆನಂದ ಶೆಟ್ಟಿ, ಅಭಾಸಾಪ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಜತೆ ಕಾರ್ಯದರ್ಶಿಲತೇಶ್ ಬಾಕ್ರಬೈಲ್, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿಯ ಖಜಾಂಜಿ ಭಾಸ್ಕರ ರೈ ಕಟ್ಟಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ವಂದಿಸಿದರು. ಫೋಟೋ : ಮಟ್ಟಾರ ವಿಠಲ ಕಿಣಿ……………………..

ಪ್ರಾದೇಶಿಕ ವಾರ್ತೆಗಳು

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮಕ್ಕಳು ಬೆಳೆಸಿದ ತರಕಾರಿಯನ್ನು ನೀಡಿದರು. ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ಮಕ್ಕಳು ನಡೆಸುವ ಕೃಷಿ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶೀಘ್ರವೇ ಶಾಲೆಗೂ ಭೇಟಿ ನೀಡುವುದಾಗಿ ತಿಳಿಸಿದರು. ಈ ವೇಳೆ ಶಾಲಾಭಿವೃದ್ಫಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಎ. ಎನ್, ಹಳೆ ವಿದ್ಯಾರ್ಥಿ ಸಂಘದ ಶಿವರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಬಳಿಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಯತೀಶ್ ಅವರನ್ನು ಭೇಟಿ ಮಾಡಿ ಅವರಿಗೂ ವಿದ್ಯಾರ್ಥಿಗಳು ತರಕಾರಿ ನೀಡಿದರು.ವಾರದ ಹಿಂದೆ ಈ ಶಾಲೆಯ ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಮೂಲಕ ಭೇಟಿ ಮಾಡಿ ಶಾಲೆಯಲ್ಲಿ ಬೆಳೆದ ತರಕಾರಿ ನೀಡಿದ್ದರು. ಮುಖ್ಯಮಂತ್ರಿ ಅವರು ಶಾಲೆಗೆ 2 ಕಂಪ್ಯೂಟರ್ ಹಾಗೂ ಒಂದು ಪ್ರೊಜೆಕ್ಟರ್ ಗಿಫ್ಟ್ ನೀಡಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಾಭಾಗೀತ್ವದಲ್ಲಿ ಅಕ್ಟೋಬರ್ 23,2018 ರಂದು ಈ ಶಾಲೆಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿತ್ತು. ಈ ಶಾಲೆಯಲ್ಲಿ ಆಗ ವಿದ್ಯಾರ್ಥಿಗಳ ಸಂಖ್ಯೆ 38 ಇದ್ದು ಈಗ 100 ಸನಿಹದಲ್ಲಿದೆ.

ಪ್ರಾದೇಶಿಕ ವಾರ್ತೆಗಳು

Blood Donation Camp at P.A. College

On 15 April 2025, Youth Red Cross, NSS, and IQAC, of PA First Grade College in collaboration with the Red Cross Society Blood Bank, Government Lady Goschen Hospital, Mangalore organised a Blood Donation Camp. Dr. Sukhesh, Medical Officer of Dakshina Kannada Indian Red Cross Society was the chief guest. He stated that among all forms of donations, blood donation is the greatest, as it not only saves lives but also plays a crucial role in maintaining our own health. Dr. Sarfraz J. Hasim, Principal of P.A. First Grade College, presided over the event and delivered the presidential address. The event was attended by several distinguished guests, including Mr Praveen Kumar, Coordinator, Indian Red Cross Society, Dakshina Kannada District; Mr. Abbas Uchchil, Former Sales and Marketing Manager, Eco-Lab K.S.E.; Dr. Ramiz M. K., Principal, P.A. College of Engineering; Ms. Afeef, Principal, P.A. Institute of Physiotherapy; Prof. Ismail Khan, Vice Principal, P.A. Polytechnic; Mr. Harris T.D., Purchase Manager, P.A.E.T.; Heads of various departments. Youth Red Cross Coordinators, Mr. Saara Maskurunnis and Dr. Shijin N., NSS Coordinators, Ms. Chaitra N.V. and Ms. Itashree, and IQAC Coordinator,Ms. Vanishree V., were also seated on the dais.Ms. Shafna Shireen, from 3rd year BCA welcomed the gathering while Ms Fowz Fatima from 2nd year BCA proposed vote of thanks. Ms Hiba Mariam served as the MC for the program. A total of 150 students voluntarily donated blood during the camp

ಪ್ರಾದೇಶಿಕ ವಾರ್ತೆಗಳು

ಪಿ.ಎ ಕಾಲೇಜಿನ ಬ್ಲಡ್ ಡೊನೇಶನ್ ಕ್ಯಾಂಪ್

ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಸರಕಾರಿ ಲೇಡಿಗೋಶನ್ ಹಾಸ್ಪಿಟಲ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಬ್ಲಡ್ ಡೊನೇಶನ್ ಕ್ಯಾಂಪ್ ಎಪ್ರಿಲ್ 15, 2025 ರಂದು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನೆರವೇರಿತು‌. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಅಧಿಕಾರಿಗಳಾದ ಡಾ. ಸುಖೇಶ್ ಮಾತನಾಡಿ “ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಆದರೂ ಅದು ಇನ್ನೊಂದು ಜೀವ ಉಳಿಸುವುದಲ್ಲದೆ ರಕ್ತದಾನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುವುದು” ಎಂದರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಅತಿಥಿಗಳಾದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆಯ ನಿರೂಪಕರಾದ ಪ್ರವೀಣ್ ಕುಮಾರ್, ಇಕೋಲಾಬ್ ಕೆ.ಎಸ್‌.ಎ. ಇದರ ಮಾಜಿ ಸೇಲ್ಸ್ ಎಂಡ್ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ಬಾಸ್ ಉಚ್ಚಿಲ್, ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ.ರಮೀಝ್ ಎಂ ಕೆ, ಪಿ.ಎ ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲರಾದ ಅಫೀಫ, ಪಿ.ಎ ಪಾಲಿಟೆಕ್ನಿಕ್ ಉಪಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, ಪಿ.ಎ.ಇ.ಟಿಯ ಖರೀದಿ ವ್ಯವಸ್ಥಾಪಕರಾದ ಹಾರೀಸ್ ಟಿ.ಡಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಯೂತ್ ರೆಡ್ ಕ್ರಾಸಿನ ನಿರ್ವಾಹಕರಾದ ಸಾರ ಮಸ್ಕುರುನ್ನೀಸ ಮತ್ತು ಡಾ. ಶಿಜಿನ್ ಎನ್, ಎನ್.ಎಸ್‌.ಎಸ್‌ ನಿರ್ವಾಹಕರಾದ ಚೈತ್ರಾ ಎನ್‌‌.ವಿ‌. ಮತ್ತು ಇತಾಶ್ರೀ, ಹಾಗೂ ಐ.ಕ್ಯೂ.ಎ.ಸಿ ಯ ನಿರೂಪಕರಾದ ವಾಣಿಶ್ರೀ ವೈ ವೇದಿಕೆಯಲ್ಲಿ ಆಸೀನರಾಗಿದ್ದರು.ವಿದ್ಯಾರ್ಥಿಗಳಾದ ಶಫ್ನಾ ಶಿರೀನ್ ಸ್ವಾಗತಿಸಿದರೆ ಫೌಝ ಫಾತಿಮ ವಂದಿಸಿದರು‌. ಹಿಬಾ ಮರಿಯಂ ಕಾರ್ಯಕ್ರಮವನ್ನು ನಿರೂಪಿಸಿದರು.೧೫೦ ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಗಾಯನ ಮಂಡಳಿಯಿಂದ ಸುಶ್ರಾವ್ಯ ಭಕ್ತಿ ಗೀತೆ

ಮಂಗಳೂರು: ಮಂಗಳೂರಿನ ಕಳವಾರು ಪೆಜಾರ್‌ ಸಂತ ಜೋಸೆಫರ ಚರ್ಚ್ ವತಿಯಿಂದ ಮಂಗಳವಾರ ನಡೆದ 241 ನೇ ಶಿಲುಬೆಯ ಹಾದಿ ಕಾರ್ಯಕ್ರಮದ ಬಲಿಪೂಜೆಯ ವೇಳೆ ಚರ್ಚ್ ನ ಗಾಯನ ಮಂಡಳಿಯ ಸದಸ್ಯರು ಸುಶ್ರಾವ್ಯ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿ ಮೆಚ್ಚುಗೆಗೆ ಪಾತ್ರರಾದರು. ಗಾಯನ ತಂಡದಲ್ಲಿ ಅಧ್ಯಕ್ಷೆ ಸೆಲಿನ್‌ ಕೊರೆಯಾ, ಸದಸ್ಯರಾದ ಪ್ರೀತಂ ಡಿ’ಸೋಜಾ, ಪ್ರೀವಲ್‌ ಡಿ’ಸೋಜಾ, ಡಯಾನಾ ಪಿರೇರಾ, ಜನೀಶಾ ಸಿಕ್ವೇರಾ, ಲೀಶಾ ಪಿರೇರಾ, ಕೆನಿತ್‌ ಕ್ರಾಸ್ತಾ, ಮೆಟಿಲ್ಡಾ ಕ್ರಾಸ್ತಾ, ಮರಿಯಾ ಪಿರೇರಾ, ಅನ್ಸ್‌ಯಾ ಫೆರಾವೊ, ಅನಿತಾ ಪೆರಿಸ್‌, ರೋಶಲ್‌ ಡಿ’ಸೋಜಾ, ಸ್ವೀಡಲ್‌ ಡಿ’ಸೋಜಾ ಅವರಿದ್ದರು. ಆಲ್ವಿನ್‌ ನೊರೊನ್ಹಾ ಅವರು ಕೀ ಬೋರ್ಡ್‌ ನಲ್ಲಿ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂಬೇಡ್ಕರ್ ದಿನಾಚರಣೆ ಪ್ರಯುಕ್ತ ಬಂಟ್ವಾಳದ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ತಾ. 14-04-2025ನೇ ಸೋಮವಾರ ಡಾ| ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆ ಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೈದ್ಯರು ಸಮೀಕ್ಷಾ, ಶ್ರೀಮತಿ ವಾಣಿ ಕೆ. ಮತ್ತು ಸಿಬ್ಬಂದಿ ವರ್ಗ, ತಾಲೂಕು ಅಧ್ಯಕ್ಷರಾದ ಸಂತೋಷ್ ಭಂಡಾರಿಬೆಟ್ಟು, ಗೌರವಾಧ್ಯಕ್ಷರು ಧರ್ಣಪ್ಪ ಬಡಗಬೆಳ್ಳೂರು, ಗೌರವ ಸಲಹೆಗಾರರಾದ ರಾಜ ಚೆಂಡ್ತಿಮಾರ್, ಮೋಹನ್ ಬಡಗಬೆಳ್ಳೂರು, ಉಪಾಧ್ಯಕ್ಷರಾದ ಚಂದ್ರಹಾಸ್ ಅರ್ಬಿಗುಡ್ಡೆ, ಕೋಶಾಧಿಕಾರಿ ಜಯಂತಿ ವಾಮದಪದವು, ಸಂಘಟನ ಕಾರ್ಯದರ್ಶಿ ನಾರಾಯಣ ಬೊಂಡಲ, ಜಾನಕಿ ವಾಮದಪದವು ಉಪಸ್ಥಿತರಿದ್ದರು.

Scroll to Top