ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಚಿಂತೆಯ ಬದಲು ಧನಾತ್ಮಕ ಚಿಂತನೆ ಅಗತ್ಯ: ಕಯ್ಯೂರು ನಾರಾಯಣ ಭಟ್

ಹಿರಿಯರ ಸೇವಾ ಪ್ರತಿಷ್ಠಾನವು ಸೇವಾ ಚಟುವಟಿಕೆಗಳೊಂದಿಗೆ ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ಸದಾ ಸಿದ್ದವಿದೆ.ಪ್ರತಿಷ್ಠಾನದ ಸ್ಥಳೀಯ ಸಭೆಗಳಲ್ಲಿ ಭಾಗವಹಿಸುವ ಮೂಲಕ ಹಿರಿಯರು ಧನಾತ್ಮಕ ಚಿಂತನೆಯನ್ನು ಮೈ ಗೂಡಿಸಿಕೊಳ್ಳಬೇಕೆಂದು ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು.ಪುತ್ತೂರು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ.ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರೊ ವಿ. ಬಿ ಆರ್ತಿಕಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿನೀಡಿದರು.ಪ್ರತಿಷ್ಠಾನದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಬಂಟ್ವಾಳ ಘಟಕದ ಕೃಷ್ಣಶರ್ಮ ಅನಾರು ಚಟುವಟಿಕೆಗಳ ಮಾಹಿತಿ ನೀಡಿದರು.ಗುಂಡ್ಯಡ್ಕ ಈಶ್ವರ ಭಟ್, ಸೀತಾರಾಮ ಸಾಲೆತ್ತೂರು, ಭವಾನಿ ಶಂಕರ ಶೆಟ್ಟಿ ಪುತ್ತೂರು, ಪದ್ಮನಾಭ ನಾಯಕ್, ಚಂಚಲಾಕ್ಷಿ, ಸ್ವರ್ಣಲತಾ ಭಾಸ್ಕರ್,ಗೀತಾ ಕೆ ಭಟ್, ಕುಸುಮ ಎಸ್ ಭಟ್, ಕೃಷ್ಣ ಭಟ್ ಚೇಕೊಡು, ಡಾ. ಆದಿತ್ಯ ತಂತ್ರಿ, ರಂಗನಾಥರಾವ್ ಬೊಳುವಾರು ಉಪಸ್ಥಿತರಿದ್ದರು.ಕೃಷ್ಣವೇಣಿ ಎಸ್ ಭಟ್ ಪ್ರಾರ್ಥಿಸಿದರು. ಕೇಂದ್ರ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣಶರ್ಮ ವಂದಿಸಿದರು.ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

M.C.C. Bank records INR 13.00 cr profit, 20th Branch at Byndoor, Udupi District

MCC Bank Ltd, popularly known as MCC Bank, is set to complete 113 years of devoted service this year, having accomplished noteworthy progress across all business metrics for the financial year ending 31st March 2025.The Bank recorded an exceptional Gross Profit of INR 13.00 Crore for the fiscal year, consistently striving to reduce the Net NPA, and successfully decreasing it to 1.30% of the total advances. The Bank reached a milestone of INR 1240 Crore in total business turnovers showing a growth of 15%. Boasting an enhanced net worth of INR 86.68 Crore compared to the previous INR 76.00 Crore, the Bank continues to benefit from NRI support. Initially serving only the twin districts of coastal Karnataka—Dakshina Kannada and Udupi—the Bank expanded its operations statewide. During the financial year, the Bank opened its 18th branch in Belthangady and 19th Branch at Belman. The 2nd Urban Co. operative Bank in Karnataka having NRI facility.The bank’s operations have expanded across Karnataka. It operates fully on core banking and offers all the products and services available in other private and public sector banks. The bank is also working on expanding its branches across Karnataka state.During the FY 2024-25 the bank has recorded gross Profit of Rs. 13 Crore, with a total deposit of Rs.705.40 crore recording an increase of 11% over the previous year; the total advances of Rs.535.49 crore recording an increase of 20.37% over the previous year; working capital of Rs.836.73 crore (growth of 11.13%) and share capital of Rs.32.43 crore. The provision coverage ratio stood at 72.02% of the total NPAs. The bank is adequately maintaining the CRAR (Capital to Risk Assets Ratio), which stood at 22.81% as of 31st March 2025, well above the required level of 12.00% as per the Reserve Bank of India. The bank’s business turnover increased to Rs 1240 crore as of 31st March 2025. Upcoming projects:1.20th branch at Byndoor, Udupi District by July End2.Shifting of Kulshekar Branch to own premises by June End3.Google Pay, PhonePe, UPI Services4.Business turnover of Rs. 1500 Crore by March endThe bank has been providing various financial products, including locker facilities at low costs, affordable education loans for domestic and international studies, MSME loans, vehicle loans, housing loans, loans for house repairs, wedding, and purchase of household items. It offers gold loans without processing fees and provides ATM and mobile banking services free of charge. Deposits in the bank are insured by the Deposit Insurance and Credit Guarantee Corporation (DICGC), as per the guidelines of the Reserve Bank of India (RBI).Achieving such impressive growth can be attributed primarily to the unwavering support from members, customers trust, and dedicated efforts of employees. Looking ahead, the Bank aims to attain even greater success in the current financial year with continued backing from esteemed members and clients along with committed staff members. Present in the meeting:Anil Lobo – Chairman, Jerald Jude D’Silva – Vice Chairman, Andrew D’Souza, Dr Gerald Pinto, Anil Patrao, J.P. Rodrigues, David D’Souza, Elroy Kiran Crasto, Herald Monteiro, Roshan D’Souza, Melvyn Vas, Vincent Lasrado, C.G. Pinto, Sushanth Saldanha, Irene Rebello, Dr Freeda D’Souza, Alwyn Monteiro, Felix D’Cruz, Sharmila Menezes – Directors and Sunil Menezes – General Manager were present.Photos: Sathish Kapikad

ಪ್ರಾದೇಶಿಕ ವಾರ್ತೆಗಳು

ಎಮ್.ಸಿ.ಸಿ. ಬ್ಯಾಂಕ್ 2024–25 ವಿತ್ತೀಯ ವರ್ಷದಲ್ಲಿ 13.00 ಕೋಟಿ ಲಾಭ, ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ

ಕರ್ನಾಟಕದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13.00 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ 1.30% ಎನ್.ಪಿ.ಎ. ದಾಖಲಿಸಿದೆ.ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2024–2025ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್’ನಲ್ಲಿ ಕ್ರಮವಾಗಿ 18ನೇ ಮತ್ತು 19ನೇ ಶಾಖೆಯನ್ನು ತೆರೆದಿದ್ದು, ಬೈಂದೂರ್‌ನಲ್ಲಿ ಶೀಘ್ರದಲ್ಲೇ ಶಾಖೆಯನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಆಗಿರುತ್ತದೆ. ಬ್ಯಾಂಕಿನ ವ್ಯವಹಾರವು ರೂ. 1240 ಕೋಟಿ ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿರುತ್ತದೆ. ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದ್ದು, 2024–25 ವಿತ್ತೀಯ ವರ್ಷದಲ್ಲಿ ದಾಖಲೆಯ ರೂ. 13.00 ಕೋಟಿ ವ್ಯವಹಾರಿಕ ಲಾಭವನ್ನು ಗಳಿಸಿದೆ. 2024–25 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ (Net Worth) ರೂ. 76.00 ಕೋಟಿಯಿಂದ ರೂ.86.68 ಕೋಟಿಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ರೂ. 1240 ಕೋಟಿ ದಾಟಿದ್ದು ಕಳೆದ ವರ್ಷಕ್ಕಿಂತ ಶೇಕಡಾ 15 ಏರಿಕೆಯಾಗಿದೆ. ಒಟ್ಟು ಠೇವಣಿಯಲ್ಲಿ ಶೇಕಡಾ 11.00 ಪ್ರಗತಿ ಸಾಧಿಸಿದ್ದು, ರೂ.705.40 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 20.37 ಪ್ರಗತಿ ಸಾಧಿಸಿದ್ದು ರೂ.535.49 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.836.73 ಕೋಟಿ (ಪ್ರಗತಿ ಶೇಕಡಾ 11.13) ಮತ್ತು ಶೇರು ಬಂಡವಾಳ ರೂ.32.43 ಕೋಟಿ (ಪ್ರಗತಿ ಶೇಕಡಾ 3.91) ಆಗಿರುತ್ತದೆ. ಬ್ಯಾಂಕಿನ CRAR (Capital to Risk Assets Ratio) ಪ್ರಮಾಣವು ಶೇಕಡಾ 22.81 ಇದ್ದು ನಿಗದಿತ ಕನಿಷ್ಟ ಪ್ರಮಾಣ ಶೇಕಡಾ 12ಕ್ಕಿಂತ ಜಾಸ್ತಿಯಿರುತ್ತದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮುಖಾಂತರ ನಡೆಸುತ್ತಿದ್ದು, ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲೂ ದೊರೆಯುತ್ತವೆ. ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ಕಡಿಮೆ ದರದಲ್ಲಿ ದೇಶ ವಿದೇಶ ವಿಧ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಏಟಿಎಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ (DICGC) ವಿಮಾ ಸೌಲಭ್ಯವಿದೆ. ಮುಂದಿನ ಕಾರ್ಯಯೋಜನೆಗಳು:1) ಜುಲೈ ಅಂತ್ಯದೊಳಗೆ ಬೈಂದೂರಿನಲ್ಲಿ 20ನೇ ಶಾಖೆ2) ಜೂನ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಕುಲಶೇಖರ ಶಾಖೆಯ ಸ್ಥಳಾಂತರ3) ಗೂಗಲ್ ಪೇ, ಫೊನ್ ಪೇ, ಯುಪಿಎ ಸೌಲಭ್ಯಗಳು4) ಮಾರ್ಚ್ ಅಂತ್ಯದೊಳಗೆ ರೂ. 1500 ಕೋಟಿ ವ್ಯವಹಾರದ ಗುರಿಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿವರ್ಗ ಹಾಗೂ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ.ಪತ್ರಿಕಾ ಗೋಷ್ಠಿಯಲ್ಲಿ ಹಾಜರಿರುವವರುಅನಿಲ್ ಲೋಬೊ – ಅಧ್ಯಕ್ಷರು, ಜೆರಾಲ್ಡ್ ಜೂಡ್ ಡಿಸಿಲ್ವ – ಉಪಾಧ್ಯಕ್ಷರು, ನಿರ್ದೇಶಕರಾದ – ಆಂಡ್ರ್ಯೂ ಡಿಸೊಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೊಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕರು – ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಶಿವಬಾಗ್‌ನಲ್ಲಿ ರೋಹನ್ ಗಾರ್ಡನ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ

ಮಂಗಳೂರು: ರೋಹನ್ ಕಾರ್ಪೋರೇಶನ್‌ನ ಮತ್ತೊಂದು ವಸತಿ ಸಮುಚ್ಚಯ ರೋಹನ್ ಗಾರ್ಡನ್ ಯೋಜನೆಗೆ ನಗರದ ಕದ್ರಿ ಶಿವಬಾಗ್ 2ನೇ ಕ್ರಾಸ್‌ನಲ್ಲಿ ಶನಿವಾರ ಭೂಮಿಪೂಜೆ ನಡೆಯಿತು.ಬೆಂದೂರ್ ಸೈಂಟ್ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರುಗಳಾದ ಫಾದರ್ ವಾಲ್ಟರ್ ಡಿಸೋಜ ಭೂಮಿ ಪೂಜೆ ನೆರವೇರಿಸಿ, ದೇವರ ಮೇಲೆ ಅಚಲ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮಹತ್ಸಾಧನೆ ಮಾಡಿ ಸಮಾಜ ಸೇವೆ ಮಾಡುವ ಕನಸಿಗೆ ರೋಹನ್ ಮೊಂತೇರೊ ನಿದರ್ಶನ. ಅವರ ಎಲ್ಲ ಕನಸುಗಳೂ ನನಸಾಗಲಿ ಎಂದು ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ರೊಹನ್ ಮೊಂತೇರೊ ಜನರ ಅಪೇಕ್ಷೆಗೆ ಪೂರಕ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ, ಗ್ರಾಹಕರು ಸಂತೃಪ್ತರಾಗಿದ್ದರಿಂದ 15 ದಿನದಲ್ಲಿ ಮೂರನೇ ಯೋಜನೆಗೆ ಶಿಲಾನ್ಯಾಸ ನಡೆದಿದೆ. ಶೀಘ್ರ 50ನೇ ಯೋಜನೆ ಪೂರೈಸಲಿ ಎಂದು ಹಾರೈಸಿದರು.ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಿಯೊನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ದಾಯ್ಜಿವಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ, ಯುವ ಉದ್ಯಮಿ ಮೇಘರಾಜ್ ಜೈನ್ ಮುಖ್ಯ ಅತಿಥಿಗಳಾಗಿದ್ದರು.ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು. ರೋಹನ್ ಗಾರ್ಡನ್ ವೈಶಿಷ್ಟ್ಯ:ರೋಹನ್ ಗಾರ್ಡನ್ ಆಧುನಿಕ ವಸತಿ ಸಮುಚ್ಚಯವು ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದ್ದು, ಐಶಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆ ಒದಗಿಸಲಿದೆ.ಐದಂತಸ್ತುಗಳ ಕಟ್ಟಡದಲ್ಲಿ 28 ಅಪಾರ್ಟ್ಮೆಂಟ್‌ಗಳಿರಲಿವೆ. ಜಿಮ್ನೇಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟಿçಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ವಿಶಾಲ ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳ ಇದೆ. ಫೈರ್ ಫೈಟಿಂಗ್ ವ್ಯವಸ್ಥೆ, ವೀಡಿಯೊ ಡೋರ್ ಫೋನ್ ಮತ್ತು ಎಆರ್‌ಡಿ ಅಟ್ಯಾಚ್ಡ್ ಲಿಫ್ಟ್ಗಳ ಸುರಕ್ಷತೆ ಒದಗಿಸಿದೆ.1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿಎಚ್‌ಕೆ ಅಪಾರ್ಟ್ಮೆಂಟ್ ಒಳಗೊಂಡಿದ್ದು, ವಿಟ್ರಿಫೈಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣ ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು ಮತ್ತು ಸಮಕಾಲೀನ ವಾಸ್ತುಶಿಲ್ಪ ಹೊಂದಿದೆ.ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ಏಪ್ರಿಲ್ 15 ರಂದು ಪವಿತ್ರ ಶಿಲುಬೆ ಯಾತ್ರೆ

ಪ್ರಭು ಯೇಸುವಿನ ಜನನದ ಜುಬಿಲಿ ವರ್ಷದ ಪ್ರಯುಕ್ತ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಳವಾರು ಪೆಜಾರ್ ಸಂತ ಯೋಸಫರಿಗೆ ಸಮರ್ಪಿಸಿದ ಚರ್ಚಿನ ಮುಂದಾಳುತನದಲ್ಲಿ 240 ವರ್ಷಗಳ ಹಿಂದೆ ಬೂದಿ ಬುಧವಾರ (Ash Wednesday) ದಂದು ಪ್ರಾರಂಭಗೊಂಡು ನಿರಂತರವಾಗಿ ನಡೆಯುತ್ತಾ ಬಂದ ಪವಿತ್ರ ಶಿಲುಬೆ ಯಾತ್ರೆಯನ್ನು ಇದೇ ಬರುವ ತಾರೀಕು ಏಪ್ರಿಲ್ 15ರಂದು ಮಂಗಳವಾರ 241ನೇ ವರ್ಷದ ಚಾರಿತ್ರಿಕ ಶಿಲುಬೆಯ ಹಾದಿಯು “ಪವಿತ್ರ ಶಿಲುಬೆಯ ನೆರಳಲ್ಲಿ ಭರವಸೆಯ ಪಯಣಿಗರ ಈ ಧೈಯ ವಾಕ್ಯದೊಂದಿಗೆ” ನಡೆಯಲಿದೆ. ಆ ದಿನ ಬೆಳಗ್ಗೆ ಗಂಟೆ 9 ರಿಂದ ಸಂಜೆ 3ರ ವರೆಗೆ ದೇವರ ವಾಕ್ಯದ ಧ್ಯಾನಕೂಟ, ಸ್ತುತಿ ಆರಾಧನೆ ಹಾಗೂ ನಿರಂತರ ಬಿನ್ನಹ ಪ್ರಾರ್ಥನೆ ನಡೆಸಿಕೊಡುವವರು, ಕಾರಿಸ್ಮಾತಿಕ್ ಸಂಚಾಲನದ ಸದಸ್ಯರು ಸಂಜೆ 3 ಗಂಟೆಯಿಂದ ಕರುಣೆಯ ಜಪಸರ ಪ್ರಾರ್ಥನೆ ಹಾಗೂ 3.30 ಗಂಟೆಗೆ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್, ಕುಲಶೇಖರ ಕೊರ್ಡೆಲ್ ಚರ್ಚ್‌ನ ಧರ್ಮ ಗುರುಗಳು ನಡೆಸಿಕೊಡಲಿದ್ದಾರೆ. 5 ಗಂಟೆಗೆ ಸರಿಯಾಗಿ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಡಾ| ಪೀಟರ್ ಪಾಮ್ಸ್ ಸಲ್ದಾನರವರು ಅರ್ಪಿಸಲಿದ್ದಾರೆ. ತದನಂತರ ಚಾರಿತ್ರಿಕ ಶಿಲುಬೆಯ ಹಾದಿಯನ್ನು ಕಥೋಲಿಕ ಉಡುಪಿ ಧರ್ಮ ಪ್ರಾಂತ್ಯದ ತೊಟ್ಟಂ ಚರ್ಚಿನ ಧರ್ಮಗುರುಗಳು ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾ। ಡೆನಿಸ್ ಡೆಸಾರವರು ಪ್ರಭೋಧನೆಯನ್ನು ಭೋದಿಸುವರು. ನಂತರ ಪ್ರಭು ಯೇಸುವಿನ ಪವಿತ್ರ ಶರೀರಕ್ಕೆ ನಮನ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸರಿ ಸುಮಾರು 7 ಸಾವಿರ ಕಥೋಲಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಎಲ್ಲಾ ಕಾರ್ಯಕ್ರಮಗಳು ಶಿಸ್ತಿನಿಂದ ಹಾಗೂ ಸಾಂಗವಾಗಿ ನೆರವೇರಲಿವೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದ ನಂತರ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. 241ನೇ ವರ್ಷಗಳ ಹಿಂದೆ ವಿಭೂತಿಯ ಬುಧವಾರದಂದು ಈ ಚಾರಿತ್ರಿಕ ಶಿಲುಬೆಯ ಹಾದಿಯನ್ನು ಆರಂಭಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಚರ್ಚಿನ ಧರ್ಮಗುರುಗಳು ವಂ। ಫಾ। ಲಾರೆನ್ಸ್ ರೊನಾಲ್ಡ್ ಡಿಸೋಜಾ, ವಲಯದ ಶ್ರೇಷ್ಠ ಗುರು ವಂ। ಫಾ। ರೂಡಾಲ್ಫ್ ಡೆಸಾ, ಮಾಧ್ಯಮ ಸಲಹೆದಾರರು ಎಲಿಯಾಸ್ ಫೆರ್ನಾಂಡಿಸ್, ಉಪಾಧ್ಯಕ್ಷ ಅನಿಲ್ ಪೆರಿಸ್, ಕಾವ್ಯದರ್ಶಿ ಫಿಲೋಮೆನಾ ಫೆರ್ನಾಂಡಿಸ್, ವಲಯ ಪ್ರತಿನಿಧಿ ಪ್ರಮಿಳಾ ಪೆರಿಸ್, ವಾಲ್ಟರ್ ಮೊಂತೇರೊ, ಆಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಹಿಳಾ ಪ್ರಧಾನ “ಮೀರಾ” ತುಳು ಸಿನಿಮಾ ಬಿಡುಗಡೆ. ಮನೆಮಂದಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಿ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಕತೆ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ತುಳುವಿನಲ್ಲಿ ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ಬರುತ್ತಿದೆ. ಅದರಲ್ಲೂ ಮೀರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮನೆಮಂದಿ ಎಲ್ಲರೂ ಇಂತಹ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸ ಬೇಕೆಂದರು. ಫ್ಲೆಕ್ಸ್ ನಿಷೇಧ ಸಿನಿಮಾರಂಗದ ಮೇಲೆ ನೇರ ಪರಿಣಾಮ:ನಟ, ನಿರ್ದೇಶಕ ರಾಹುಲ್ ಮಾತನಾಡಿ ನಗರದಲ್ಲೀಗ ಫ್ಲೆಕ್ಸ್ ಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ನಿಷೇಧ ಏರಿರುವುದರಿಂದು ಇದು ತುಳು ಸಿನಿಮಾರಂಗದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ತುಳುಸಿನಿಮಾ ರಂಗದ ನಿರ್ಮಾಪಕರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದರು. ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂ ಗಳಿಕೆ:ನಿರ್ಮಾಪಕ ಲಂಚುಲಾಲ್ ಕೆ ಎಸ್ ಮಾತನಾಡಿ “ಮೀರಾ” ತುಳು ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂಪಾಯಿ ಗಳಿಸಿದೆ ಎಂದರು. ನನ್ನ ನೂರು ಮಂದಿ ಹಿತೈಷಿಗಳು ತಲಾ ಒಂದು ಲಕ್ಷ ರೂಪಾಯಿಯಂತೆ ನೂರು ಟಿಕೇಟುಗಳನ್ನು ಖರೀದಿಸಿದ್ದಾರೆ. ಪ್ರೀಮಿಯರ್ ಶೋ ವೀಕ್ಷಿಸಿದ ಅವರೆಲ್ಲರೂ ಸಿನಿಮಾದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.ಸಮಾರಂಭದಲ್ಲಿ ನಟ ವಿಜೆ ವಿನೀತ್ ಕುಮಾರ್, ರಾಹುಲ್ ಅಮೀನ್, ತ್ರಿಶೂಲ್ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ ಬೈಕಂಪಾಡಿ, ಮೋಹನ್ ಕೆ ಬೋಳಾರ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೊಮೇಶ್ವರ, ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಅನೀಶ್ ಪೂಜಾರಿ, ಅನಿಲ್ ದಾಸ್, ಶರಣ್ ಚಿಲಿಂಬಿ, ಜೆಪಿ ತುಮಿನಾಡ್, ಪುಷ್ಪರಾಜ್ ಬೊಳ್ಳೂರು, “ಮೀರಾ” ಸಿನಿಮಾದ ನಿರ್ದೇಶಕ ಅಶ್ವಥ್, ನಟಿಯರಾದ ಇತಿಶಾ ಶೆಟ್ಟಿ, ಲಕ್ಷ್ಯ ಎಲ್ ಮೊದಲಾದವರು ಉಪಸ್ಥಿತರಿದ್ದರು. ಯತೀಶ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ‌ ನಿರ್ವಹಿಸಿದರು.ಕರಾವಳಿಯಾದ್ಯಂತೆ ತೆರೆಗೆ:“ಮೀರಾ” ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಷಿ, ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.ಈ ಚಿತ್ರವನ್ನು ಲಂಚುಲಾಲ್ ಕೆ.ಎಸ್.ನಿರ್ಮಿಸಿದ್ದು, ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ, ಈ ಚಿತ್ರ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ ಎಂದು ನಿರ್ದೇಶಕ ಅಶ್ವಥ್ ತಿಳಿಸಿದರು.ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್. ರಕ್ಷಿತಾ ಶೆಟ್ಟಿ ಮುಂಬೈ ಅಭಿನಯಿಸಿದ್ದಾರೆ.ತನ್ನ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಲನಚಿತ್ರವು ಮಹಿಳೆಯರಿಗೆ ಅವರ ಕನಸನ್ನು ಜಯಿಸಲು ಮತ್ತು ಸಾಧಿಸಲು ಸ್ಫೂರ್ತಿ ನೀಡುತ್ತದೆ ಎಂದರು.ಇದು ತುಳುವಿನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಹೆಣ್ಣಿನ ಕನಸು, ನೋವು ನಲಿವನ್ನು ಕೇಂದ್ರೀಕರಿಸಿರುವ ಗಟ್ಟಿ ಕತೆಯನ್ನು ಒಳಗೊಂಡಿದೆ. ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಲು ಸವಾಲುಗಳನ್ನು ಎದುರಿಸಿ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದು ನಿರ್ಮಾಪಕ ಲಂಚುಲಾಲ್ ಕೆಎಸ್ ತಿಳಿಸಿದ್ದಾರೆ.ಫೋಟೊ – ಸತೀಶ್ ಕಾಪಿಕಾಡ್.

ಪ್ರಾದೇಶಿಕ ವಾರ್ತೆಗಳು

ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಪೂಂಜ ಇದರ ನೂತನ ವ್ಯವಸ್ತಾಪನ ಸಮಿತಿ ಆಯ್ಕೆಯಾಗಿದ್ದುಅಧ್ಯಕ್ಷರಾಗಿ ಶ್ರೀ ಸುದರ್ಶನ್ ಶೆಟ್ಟಿ ಹಕ್ಕೇರಿ, ಅರ್ಚಕರಾಗಿ ಶ್ರೀ ಪ್ರಕಾಶ ಆಚಾರ್ಯ ಪೂಂಜ, ಕೃಷ್ಣಪ್ರಸಾದ್‌ ಆಸ್ರಣ್ಣ, ಅಶೋಕ್‌ ಆಚಾರ್ಯ, ಸಿದ್ದಕಟ್ಟೆ. ಅರುಣ್ ಕುಮಾರ್. ಮಂಜಿಲ ಸುಧೀಂದ್ರ ಶೆಟ್ಟಿ, ಕಲಾಯಿದಡ್ಡ ಉಮೇಶ್ ಶೆಟ್ಟಿ, ಕೊನೆರೊಟ್ಟು ಸುರೇಶ್ ನೀರಪಲ್ಕೆ, ರಂಜಿನಿ ದಿವಾಕರ್ ಮಾದಾಯಿ, ಗೀತಾ ವಿಶ್ವನಾಥ್ ಉಮನೊಟ್ಟು ಆಯ್ಕೆಯಾಗಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

Rohan Garden Foundation StoneLaying ceremony on April 12

Rohan Corporation, a leading name in Coastal Karnataka’s real estate sector for more than three decades, is all set to launch its project Rohan Garden, Shivabagh on Saturday, April 12, 2025 at 5.00 pm. Located in the prime area of Shivabagh, Kadri, this new residential development promises to offer a perfect blend of modern luxury and serene living. The project features meticulously designed 2 and 3 BHK apartments ranging from 1,105 to 1,550 square feet, catering to diverse family needs. Each unit boasts high-quality construction with vitrified flooring, premium sanitary ware, and UPVC/Aluminium windows, ensuring both elegance and durability. Residents will enjoy spacious living areas, elegant balconies, and contemporary interiors designed for comfort and style. Rohan Garden is a modern residential complex that combines luxury, safety, and sustainability in a serene environment. Spread across five spacious floors, the building houses 28 elegantly designed apartments, offering a perfect blend of comfort and sophistication. Residents enjoy world-class amenities, including a fully-equipped gymnasium, 24/7 CCTV surveillance, and smart sensor lighting for enhanced security. Eco-conscious features like electric vehicle charging points promote sustainable living, while ample parking spaces with controlled access ensure convenience for both residents and visitors. The community-focused design includes a dedicated children’s play area and a relaxing seating zone for seniors, fostering a harmonious living experience for all age groups. Advanced safety systems such as intelligent fire detection, video door phones, and lifts with ARD (Automatic Rescue Device) attachments provide peace of mind. A visitors management system further enhances security by regulating entry. Strategically located, Rohan Garden offers easy access to urban conveniences while maintaining a tranquil, green ambiance. Whether it’s fitness, safety, or leisure, every detail has been thoughtfully planned to create an exceptional living space. With a legacy of more than 30 successful projects across coastal Karnataka, Rohan Corporation continues to raise the bar in real estate development. The launch of Rohan Garden marks another milestone in their commitment to delivering exceptional living spaces that combine innovation, quality, and timeless design.Prospective homeowners are invited to explore the project at the Sales Office, Rohan City, Bejai Main Road, Mangalore or email: info@rohancorporation.in or website: www.rohancorporation.in or contact 98454 90100

ಪ್ರಾದೇಶಿಕ ವಾರ್ತೆಗಳು

ರೋಹನ್ ಗಾರ್ಡನ್-ಶಿವಭಾಗ್, ಏಪ್ರಿಲ್ 12ರಂದು ಭೂಮಿಪೂಜೆ

ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಗೂ ಮಿಕ್ಕಿ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್, ತನ್ನ ಮತ್ತೊಂದು ವಸತಿ ಸಮುಚ್ಚಯ ‘ರೋಹನ್ ಗಾರ್ಡನ್’ ಯೋಜನೆಯ ಭೂಮಿಪೂಜೆಯನ್ನು, 2025ರ ಏಪ್ರಿಲ್ 12ರ ಶನಿವಾರ ಸಂಜೆ 5:00 ಗಂಟೆಗೆ ನಡೆಸಲಿದೆ. ಕದ್ರಿ -ಶಿವಬಾಗ್, ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ವಸತಿ ಸಮುಚ್ಚಯ ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದೆ. ರೋಹನ್ ಗಾರ್ಡನ್ ಐಶಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯವಾಗಿದೆ. ಐದು ಅಂತಸ್ತುಗಳ ಈ ಕಟ್ಟಡದಲ್ಲಿ 28 ಸುಂದರವಾಗಿ ವಿನ್ಯಾಸಗೊಳಿಸಲಾದ ಅಪಾರ್ಟ್‌ಮೆಂಟ್‌ಗಳು ಇದ್ದು, ಇದು ಆರಾಮ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಜಿಮ್ನೇಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳಗಳೂ ಇವೆ. ಫೈರ್ ಫೈಟಿಂಗ್ ವ್ಯವಸ್ಥೆ, ವೀಡಿಯೋ ಡೋರ್ ಫೋನ್ ಮತ್ತು ಎ.ಆರ್.ಡಿ. ಅಟ್ಯಾಚ್ಡ್ ಲಿಫ್ಟ್’ಗಳ ಸುರಕ್ಷತೆಯನ್ನು ಒದಗಿಸಿದೆ. ರೋಹನ್ ಗಾರ್ಡನ್ ನಗರದ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಹೊಂದಿರುವುದಲ್ಲದೆ, ಶಾಂತ ಮತ್ತು ಹಸಿರು ಪರಿಸರದ ಅನುಭವವನ್ನು ನೀಡಲಿದೆ. ಈ ಯೋಜನೆಯು 1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿ.ಎಚ್.ಕೆ. ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಅಪಾರ್ಟ್‌ಮೆಂಟ್‌ ವಿಟ್ರಿಫೈಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು, ಮತ್ತು ಸಮಕಾಲೀನ ವಾಸ್ತುಶಿಲ್ಪವನ್ನು ಹೊಂದಿದೆ. ಕರಾವಳಿ ಕರ್ನಾಟಕದಾದ್ಯಂತ 30ಕ್ಕೂ ಮಿಕ್ಕಿ ಯಶಸ್ವಿ ಯೋಜನೆಗಳನ್ನು ನಿರ್ಮಿಸಿರುವ ರೋಹನ್ ಕಾರ್ಪೋರೇಶನ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಿದೆ. ರೋಹನ್ ಗಾರ್ಡನ್‌ ಯೋಜನೆಯು – ನವೀನತೆ, ಗುಣಮಟ್ಟ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ತನ್ನ ಗ್ರಾಹಕರಿಗ ಅತ್ತ್ಯುತ್ತಮ ವಾಸ ಯೋಗ್ಯ ಅನುಭವವನ್ನು ನೀಡಲಿದೆ.ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್  ಸೊಸೈಟಿಯಿಂದ ವಿಶ್ವ ಆರೋಗ್ಯ ದಿನಾಚರಣೆ. ‘ಆರೋಗ್ಯಕರ ಜೀವನಶೈಲಿಯಿಂದ ನೆಮ್ಮದಿಯ ಬದುಕು’-ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ಯೂತ್ ರೆಡ್‌ಕ್ರಾಸ್ ಘಟಕ ಮಂಗಳೂರು ವಿ.ವಿ.,ಯನೆಪೋಯ ಪರಿಗಣಿತ ವಿ.ವಿ. ಮತ್ತು ವಿ.ವಿ.ಕಾಲೇಜು ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆ ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ  ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ರೆಡ್‌ಕ್ರಾಸ್ ದ.ಕ.ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ಮನುಷ್ಯನಿಗೆ ಬದುಕಿನಲ್ಲಿ ಆರೋಗ್ಯ ಎಲ್ಲಕ್ಕಿಂತಲೂ ಮುಖ್ಯ. ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ’  ಎಂದರು.ಅಧ್ಯಕ್ಷತೆ ವಹಿಸಿದ್ದ ವಿ.ವಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಮಾತನಾಡಿ ‘ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದ್ದತಿ ಅನುಸರಿಸುವುದು ಅಗತ್ಯ ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ಗುರುದತ್ ಕಾಮತ್ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೇನೆಪೊಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್  ಶ್ವೇತಾ ಪ್ರಭು ಮತ್ತು ಪ್ರತೀಕ್ಷಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಮಂಗಳೂರು ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್.ಸ್ವಾಗತಿಸಿ,  ಯೇನೆಪೊಯ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ.ಬಿ.ವಿ. ವಂದಿಸಿದರು. ವಿ.ವಿ.ಕಾಲೇಜಿನ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಭಾರತಿ ಪಿಲಾರ್ಕಾರ್ಯಕ್ರಮ ನಿರೂಪಿಸಿದರು. * ಬಹುಮಾನ ವಿಜೇತರು ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃಷಾ ಕಾಲೇಜು ತಂಡ ಪ್ರಥಮ, ಯೇನೆಪೋಯ ವಿ.ವಿ.ದ್ವಿತೀಯ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ತಂಡ ತೃತೀಯ ಸ್ಥಾನ ಗಳಿಸಿದವು. ಪೋಸ್ಟರ್ ತಯಾರಿಸ್ಪರ್ಧೆಯಲ್ಲಿ ಯೇನೆಪೋಯ ವಿ.ವಿ.ಯ ಹಿಬಾ ಪ್ರಥಮ, ಸುಲ್ತಾನ ದ್ವಿತೀಯ ಹಾಗೂ ಮುಸ್ತಾಫ ತೃತೀಯ ಬಹುಮಾನ ಪಡೆದರು.ಸಮಾರೋಪ ಸಮಾರಂಭದಲ್ಲಿ  ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸತೀಶ್ ರಾವ್, ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಉಪಸಮಿತಿಯ  ಚೇರ್ಮನ್ ಡಾ.ಸಚ್ಚಿದಾನಂದ ರೈ ಬಹುಮಾನ ವಿತರಿಸಿದರು.ಫೋಟೋ : ರೆಡ್‌ಕ್ರಾಸ್

Scroll to Top