ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆ

ಮಂಗಳೂರು: ನಾಟಕಗಳು ಅಥವಾ ರಂಗಭೂಮಿ ಹೊಸ ದೃಷ್ಟಿಕೋನದತ್ತ ತೆರೆದುಕೊಂಡಾಗ ಮಾತ್ರ ಅದು ಪ್ರೇಕ್ಷಕನನ್ನ ತಲುಪಲು ಸಾಧ್ಯ ಎಂದು ರಂಗಕರ್ಮಿ, ನಾಟಕ ರಚನೆಕಾರ,ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.ಅವರು ತ್ರಿನೇತ್ರ ಕಲಾವಿದರು ಮಂಗಳೂರು ಅಭಿನಯಿಸುವ ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.ನಾಟಕಕಾರ ಶಶಿ ರಾಜ್ ಕಾವೂರು, ಯಶವಂತ ಬೋಳೂರೂ, ಪರಮಾನಂದ ಸಾಲ್ಯಾನ್ ಸಸಿಹಿತ್ಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಷುದ್ರ ಶಕ್ತಿಯೊಂದರ ಕಥೆಯಾಧರಿಸಿಕೊಂಡಿರುವಂಹ ಬ್ರಹ್ಮ ರಕ್ಕಸೆ ಭಯಾನಕ ನಾಟಕ ವಿಭಿನ್ನವಾದಂತ ರಂಗ ಸಜ್ಜಿಕೆ, 3ಡಿ ಪರಿಕಲ್ಪನೆ ಯೊಂದಿಗೆ ರಂಗಭೂಮಿಗೆ ಬರಲಿದೆ. ತ್ರಿನೇತ್ರ ಕಲಾವಿದರು ಮಂಗಳೂರು ನಾಟಕವನ್ನು ಅಭಿನಯಿಸುತ್ತಿದ್ದು, ಕಥೆ ಸಾಹಿತ್ಯ ಸಂಭಾಷಣೆ ಪರಿಕಲ್ಪನೆ ನಿರ್ದೇಶನವನ್ನು ನರೇಶ್ ಕುಮಾರ್ ಮಾಡಿದ್ದು ಭಾಸ್ಕರ್ ಸಸಿಹಿತ್ಲು ಸಾರಥ್ಯದಲ್ಲಿ ಸಂಜೀತ್ ಚಿತ್ರಾಪುರ ಇವರ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮರಕ್ಕಸೆ ರಂಗಭೂಮಿಗೆ ಬರಲಿದ್ದು ಒಂದು ವಿಭಿನ್ನ ಪ್ರಯೋಗ ಎನಿಸಿಕೊಳ್ಳಲಿದೆ.

ಪ್ರಾದೇಶಿಕ ವಾರ್ತೆಗಳು

Strategic MoU Signed Between St. Aloysius (Deemed to be University), AIMIT Centre and IBM to Enhance IT and Management Education

A Memorandum of Understanding (MoU) was formally signed on 03 July 2025 between St. Aloysius (Deemed to be University), AIMIT Centre, and IBM. The signing ceremony was graced by Dr. Fr. Kiran Coth, Director of the AIMIT Centre; Mr. Jagdisha Bhat, Country Manager – Software Services, IBM; Mr. Madhusudhana, Regional Manager, IBM; Mr. Jithesh, Regional Manager, Techpath; and the Deans of AIMIT, Dr. Rajani Suresh and Dr. Hemalatha N.This MOU is1.Opportunity to emerge as one of the competent entities in the academic circles in various areas of Information technology.2.Opportunity to be recognized by the industry and academic circles as one of the preferredlocation/institutions for acquiring training and skills in the latest technology and software.3.Opportunity to students and faculty members to increase their knowledge and acquire skills on best-in-class IBM software.4.Opportunity to design innovative curriculum and various industry specializations using relevant IBM software.5.Opportunity to learn from the practitioners in the industry from IBM or business partners.6.Opportunity for students and faculty members to avail professional and global certification on IBM software. IBM and St. Aloysius Institute of Management & Information Technology (AIMIT) acknowledge the need for IBM software skills in the IT/MBA education and training sector. The objective is to have a number of graduating professionals skilled in IBM Software. Both IBM and St. Aloysius Institute of Management & Information Technology (AIMIT) are keen to cooperate in a way that shall benefit St. Aloysius Institute of Management & Information Technology (AIMIT) students pursuing a career in the industry.

ಪ್ರಾದೇಶಿಕ ವಾರ್ತೆಗಳು

AIMIT ಕೇಂದ್ರ ಮತ್ತು IBM ನಡುವಿನ ತಂತ್ರಜ್ಞಾನ ಮತ್ತು ನಿರ್ವಹಣಾ ಶಿಕ್ಷಣದ ಉನ್ನತಿಗಾಗಿ ಸಹಿ

2025ರ ಜುಲೈ 03ರಂದು ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), AIMIT ಕೇಂದ್ರ ಮತ್ತು IBM ನಡುವಿನ ಒಡಂಬಡಿಕೆಯನ್ನು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ AIMIT ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, IBM ನ ಸಾಫ್ಟ್‌ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, IBMನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್‌ಪಾಥ್‌ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ AIMITನ ಡೀನ್‌ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಉಪಸ್ಥಿತರಿದ್ದರು. ಈ ಒಡಂಬಡಿಕೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳಾಗಿ ಗುರುತಿಸಿಕೊಳ್ಳುವ ಮಹತ್ವದ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ಗಳ ಶಿಕ್ಷಣ ಹಾಗೂ ತರಬೇತಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ವಲಯಗಳಲ್ಲಿ ಆದ್ಯತೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುವ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು IBMನ ಶ್ರೇಷ್ಠ ಸಾಫ್ಟ್‌ವೇರ್‌ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. IBM ಸಾಫ್ಟ್‌ವೇರ್‌ಗಳನ್ನು ಆಧಾರವಾಗಿಟ್ಟುಕೊಂಡು ನವೀನ ಪಠ್ಯಕ್ರಮಗಳನ್ನೂ ಉದ್ಯಮ ಸಂಬಂಧಿತ ವಿಭಿನ್ನ ತಂತ್ರಜ್ಞಾನಗಳನ್ನೂ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ IBM ಅಥವಾ ಅದರ ವ್ಯವಹಾರ ಪಾಲುದಾರ ಸಂಸ್ಥೆಗಳ ಉದ್ಯಮ ತಜ್ಞರಿಂದ ನೈಜ ಅನುಭವದಿಂದ ಕಲಿಯುವ ಅವಕಾಶವೂ ಲಭ್ಯವಾಗುತ್ತದೆ. ಅಂತೆಯೇ, ವಿದ್ಯಾರ್ಥಿಗಳು ಹಾಗೂ ಬೋಧಕರು IBM ಸಾಫ್ಟ್‌ವೇರ್ ಆಧಾರಿತ ವೃತ್ತಿಪರ ಮತ್ತು ಜಾಗತಿಕ ಪ್ರಮಾಣಪತ್ರಗಳನ್ನು ಪಡೆದು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಈ ಒಡಂಬಡಿಕೆ ನೆರವಾಗಲಿದೆ. IBM ಹಾಗೂ ಸೈಂಟ್ ಅಲೋಶಿಯಸ್ ನಿರ್ವಹಣಾ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (AIMIT) IT/ಎಂಬಿಎ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ IBM ಸಾಫ್ಟ್‌ವೇರ್ ಕೌಶಲ್ಯದ ಅಗತ್ಯವನ್ನು ಅರಿತಿವೆ. ಈ ಸಹಯೋಗದ ಉದ್ದೇಶ, IBM ಸಾಫ್ಟ್‌ವೇರ್‌ನಲ್ಲಿ ತಜ್ಞರಾಗಿರುವ ಪದವೀಧರರನ್ನು ಹೆಚ್ಚಿಸುವುದು. IBM ಮತ್ತು AIMIT ಎರಡು ಸಂಸ್ಥೆಗಳು ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದ ಕ್ಷೇತ್ರದಲ್ಲಿ ಯಶಸ್ವಿ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶಿಸಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಜೂ.5ರಂದು ಒಡಿಯೂರಿನಲ್ಲಿ ಗಿಡ ನೆಡುವ ಸ್ಪರ್ಧೆಗೆ ಚಾಲನೆ

ಮಂಗಳೂರು: ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗವು ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಮಂಗಳೂರು ವಿಭಾಗ ಮಟ್ಟದ ಗಿಡ ನೆಡುವ ಸ್ಪರ್ಧೆಯನ್ನು ಜೂ.5 ರಂದು ಬೆಳಗ್ಗೆ 9.30ಕ್ಕೆ ಕನ್ಯಾನದ ಒಡಿಯೂರು ಶ್ರೀ ಗುರುದೇವ ಐಟಿಐ ಸಭಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೊ. ಕೆ.ಆರ್.ಕವಿತಾ ಅಧ್ಯಕ್ಷತೆ ವಹಿಸಲಿದ್ದಾರೆ.ಶಿಕ್ಷಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ ಕೆ ಆಶಯ ಭಾಷಣ ಮಾಡಲಿದ್ದಾರೆ.ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಂಗಳೂರು ವಿ.ವಿ.ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಅಮೀನ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪರಿಸರ ಸಂರಕ್ಷಣೆಯ ಕಾಳಜಿ ಮುಖ್ಯ-ಕೆ.ವಿ.ಪ್ರಭಾಕರ್

ಮಂಗಳೂರು, ಮೇ.30; ಜನ ಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಸುವುದು ಮುಖ್ಯ ಈ ನಿಟ್ಟಿನಲ್ಲಿ ಸಾಮೂಹಿಕ ಗಿಡ ನೆಡುವ ಕಾರ್ಯಕ್ರಮಗಳ ಅಗತ್ಯ ವಿದೆ ಎಂದು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.ಅವರು ನಗರದ ಇಂದಿರಾ ಪ್ರೀಯದರ್ಶಿನಿ ವನಿತಾ ಪಾರ್ಕ ನಲ್ಲಿಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಕೆಪಿಟಿ ಮಂಗಳೂ ರು, ಸಂತ ಅಲೋಶಿಯಸ್ ಐಟಿಐ ಹಾಗೂ ಗ್ಲೋಬಲ್ ಗ್ರೀನ್ ಫೌಂಡೇಶನ್ ಸಹಯೋಗ ದೊಂದಿಗೆ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.ಈ ಸಂದ ರ್ಭದಲ್ಲಿ ರೋಟರಿ ಸೆಂಟ್ರಲ್ ಮಂಗಳೂರು ಘಟಕದ ಅಧ್ಯಕ್ಷ ಬ್ರಿಯಾನ್ ಪಿಂಟೊ,ಮಾಜಿರೋಟರಿ ಸಹಾಯಕ ಗವರ್ನರ್ ರಾಜ ಗೋಪಾಲ್ ರೈ,, ಉದ್ಯಮಿ ರಮೇಶ್ ನಾಯಕ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಸಂತ ಅಲೋಶಿಯಸ್ ಐಟಿಐ ಕಾಲೇಜು,ಕೆಪಿಟಿ ಮಂಗಳೂರಿನ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ನ ಪದಾಧಿಕಾ ರಿಗಳು,ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಪದಾಧಿ ಕಾರಿಗಳು,ಮನಪಾ ಮಾಜಿ ಸದಸ್ಯೆ ಸಂಧ್ಯಾ ಆಚಾರ್ಯ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್,ವಲಯ ಅರಣ್ಯ ಅಧಿಕಾರಿ ರಾಜೇಶ್ ಮೊದಲಾದವರು ಉಪಸ್ಥಿತ ರಿದ್ದರು. ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು.

ಪ್ರಾದೇಶಿಕ ವಾರ್ತೆಗಳು

ಅನಂತಾಡಿ ಹಿರ್ತಂದಬೈಲು ವಿಶ್ವನಾಥ ರೈ ನಿಧನ

ಅನಂತಾಡಿ ಹಿರ್ತಂದಬೈಲು ವಿಶ್ವನಾಥ ರೈ(84) ಶ್ರೀ ವಿಶ್ವನಾಥ ರೈ ಇವರು ತಾ/30/05/25 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಶ್ರೀಯುತರು ಪುತ್ತೂರು ಸರ್ವೆ, ನೇರಳಕಟ್ಟೆ,ಅನಂತಾಡಿ ಸರಕಾರಿ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ಅನಂತಾಡಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು.ಜನಾನುರಾಗಿ ಪರೋಪಕಾರಿಯಾಗಿ ಜೀವನ ನಡೆಸುತ್ತಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಿರು. ಪುತ್ರರಾದ ಶಶಿಧರ್ ರೈ ಹಾಗೂ ಬಿ.ಸಿ. ರೋಡಿನ ಪ್ರಸಿದ್ದ ದಂತ ವೈದ್ಯರಾದ ಮುರಳೀಧರ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕೊಡಿಯಾಲ್‌ಬೈಲ್‌ ಬಿಷಪ್ ಹೌಸ್‌ನ ನವೀಕೃತ ಶೋಕ ಮಾತಾ ಚಾಪೆಲ್‌ ಆಶೀರ್ವಚನ, ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕೊಡಿಯಾಲ್‌ ಬೈಲ್ ಬಿಷಪ್ಸ್ ಹೌಸ್‌ ನ ಶೋಕ ಮಾತೆಗೆ ಸಮರ್ಪಿಸಿದ ಚಾಪೆಲ್‌ ನವೀಕರಣಗೊಂಡಿದ್ದು, ಅದರ ಆಶೀರ್ವಚನ ಮತ್ತು ಲೋಕಾರ್ಪಣೆಯನ್ನು ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್‌ ಸಲ್ಡಾನ್ಹಾ ಅವರು ಮೇ 31 ರಂದು ನೆರವೇರಿಸಿದರು.ಇದರ ಪ್ರಯುಕ್ತ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಹಲವಾರು ಮಂದಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ಕ್ಯಾಥೊಲಿಕ್‌ ವಿಶ್ವಾಸಿಗಳು ಭಾಗವಹಿಸಿದ್ದರು.ಪ್ರಥಮವಾಗಿ 1857 ರಲ್ಲಿ ಆಶೀರ್ವದಿಸಲಾಗಿದ್ದ ಈ ಚಾಪೆಲ್ 1963 ರಲ್ಲಿ ನವೀಕರಣಗೊಂಡಿತ್ತು. ಬಳಿಕ ಒಂದು ದಶಕದ ಹಿಂದೆ ನೆಲಹಾಸಿನ ನವೀಕರಣ ಮಾಡಲಾಗಿತ್ತು. ಇದೀಗ ಆಕರ್ಷಕ ವಾಸ್ತು ಶಿಲ್ಪ ಶೈಲಿಯನ್ನು ಅಳವಡಿಸಿಕೊಂಡು ಛಾವಣಿಯ ದುರಸ್ತಿ, ಗೋಡೆಗಳ ಪ್ಲಾಸ್ಟರಿಂಗ್, ತಾಜಾ ಪೈಂಟಿಂಗ್‌, ವಿದ್ಯುದೀಕರಣ, ಧ್ವನಿ ವ್ಯವಸ್ಥೆ ಮತ್ತು ಸುಧಾರಿತ ಬೆಳಕಿನ ವ್ಯವಸ್ಥೆಯನ್ನು ಪರಂಪರೆ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನವೀಕರಿಸಲಾಗಿದೆ. ಆಶೀರ್ವಚನ ಮತ್ತು ಬಲಿ ಪೂಜೆಯ ಸಂದರ್ಭದಲ್ಲಿ ನಿವೃತ್ತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ, ವಿಕಾರ್ ಜನರಲ್‌ ಅತಿ ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಛಾನ್ಸಲರ್‌ ಅತಿ ವಂ. ಡಾ. ವಿಕ್ಟರ್ ಜಾರ್ಜ್ ಡಿ’ಸೋಜಾ, ಹಣಕಾಸು ಆಧಿಕಾರಿ ರೆ. ಫಾ. ಜಗದೀಶ್ ಪಿಂಟೊ, ರಾಕ್ಣೊ ವಾರಪತ್ರಿಕೆಯ ಸಂಪಾದಕ ರೆ. ಫಾ.ರೂಪೇಶ್ ಮಾಡ್ತಾ, ಫಾ. ಮ್ಯಾಕ್ಸಿಮ್ ರೊಸಾರಿಯೊ, ಫಾ. ತ್ರಿಶಾನ್ ಡಿ’ಸೋಜಾ ಮತ್ತು ಫಾ. ಜೇಸನ್ ಲೋಬೊ, ಫಾ. ವಲೇರಿಯನ್ ಡಿ’ಸೋಜಾ, ಮೊ. ಲೆಸ್ಲಿ ಎಫ್. ಶೆಣೈ, ರೆ. ಡಾ. ರೊನಾಲ್ಡ್ ಸೆರಾವೊ ಮತ್ತು ಎಪಿಸ್ಕೋಪಲ್ ಹಾಗೂ ಸಿಟಿ ಒಲಯದ ಗುರುಗಳು ಭಾಗವಹಿಸಿದ್ದರು. ಬಲಿ ಪೂಜೆಯ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ದಾನಿಗಳನ್ನು ಗೌರವಿಸಲಾಯಿತು.ಅಬುಧಾಬಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಮೈಕೆಲ್ ಡಿ’ಸೋಜಾ ಮತ್ತು ಮಂಗಳೂರಿನ ಸೊಡ್ಯಾಲಿಟಿ ಆಫ್ ದಿ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಆಫ್ ದಿ ಬ್ಲೆಸ್ಡ್ ವರ್ಜಿನ್ ಮೇರಿಯ ಸದಸ್ಯರನ್ನು ಒಳಗೊಂಡಂತೆ ಪ್ರಮುಖ ದಾನಿಗಳನ್ನು ಹಾಗೂ ಆರ್ಥಿಕ ಬೆಂಬಲ ನೀಡಿದ ಇತರ ದಾನಿಗಳನ್ನು ಬಿಷಪ್ ಪೀಟರ್ ಪಾವ್ಲ್‌ ಸಲ್ಡಾನ್ಹಾ ಅವರು ಸನ್ಮಾನಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂಗನವಾಡಿಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಗಮನ-ಕೆ.ವಿ.ಪ್ರಭಾಕರ್

ಮಂಗಳೂರು,ಮೇ.31;ಅಂಗನವಾಡಿಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರಕಾರ ಗಮನಹರಿಸುತ್ತಿದೆ ಎಂದು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.ಅವರು ನಗರದ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಗೆ ಕೊಡೆ ವಿತರಿಸಿ ಮಾತನಾಡುತ್ತಿದ್ದರು.ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಶಾಲಾ ಪೂರ್ವ ಮಕ್ಕಳ ಮಾನಸಿಕ ದೈಹಿಕ ವಿಕಸನ ಕೇಂದ್ರಗಳಾಗಿವೆ ಎಂದರು.ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಮಂಗಳೂರು ಘಟಕದ ಅಧ್ಯಕ್ಷ ಬ್ರಿಯಾನ್ ಪಿಂಟೊ, ಮಾಜಿ ರೋಟರಿ ಸಹಾಯಕ ಗವರ್ನರ್ ರಾಜ ಗೋಪಾಲ್ ರೈ,ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮಹಾ ಪ್ರಬಂಧಕ ಅರುಣ್ ಪ್ರಭಾ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಅಂಗನವಾಡಿ ಕಾರ್ಯಕರ್ತೆ ನಂದಾ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ನೆತ್ತರಕೆರೆ” ತುಳು ಸಿನಿಮಾದ ಟೀಸರ್ ಬಿಡುಗಡೆ. ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ ಟೀಸರ್

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ನೆತ್ತರೆಕೆರೆ ತುಳು ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ನೆತ್ತರಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ. ಹೀಗಾಗಿ ಸಿನಿಮಾವನ್ನು ಜೂನ್ ಕೊನೆಯ ವಾರದಲ್ಲಿ ತೆರೆಕಾಣಿಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾಕ್ಕೆ ಚೇಳಾರ್, ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ , ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸುಮನ್ ತಲ್ವಾರ್, ಲಂಚುಲಾಲ್ ಕೆ ಎಸ್ ಅಭಿನಯಿಸಿದ್ದಾರೆಸಿನಿಮಾದಲ್ಲಿ ಪೃಥ್ವಿನ್ ಪೊಳಲಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳೂರು, ವಿಜಯ ಮಯ್ಯ, ನೀತ್ ಪೂಜಾರಿ, ಉತ್ಸವ ವಾಮಂಜೂರು, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ ಉಪಿರ, ಭವ್ಯಾ ಪೂಜಾರಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಇದ್ದಾರೆ.ಸಿನಿಮಾಕ್ಕೆ ಚಿತ್ರಕತೆ ನಿರ್ದೇಶನ ಸ್ವರಾಜ್ ಶೆಟ್ಟಿ, ಕ್ಯಾಮರಾ: ಉದಯ ಬಲ್ಲಾಳ್, ಸಂಗೀತ: ವಿನೋದ್ ರಾಜ್ ಕೋಕಿಲಾ, ಸಂಕಲನ: ಗಣೇಶ್ ನೀರ್ಚಾಲ್, ಸಾಹಸ: ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯುಸರ್ : ಯತೀಶ್ ಪೂಜಾರಿ, ಲೈನ್ ಪ್ರೊಡ್ಯುಸರ್: ವಿಜಯ ಮಯ್ಯ, ಪ್ರೊಡಕ್ಷನ್ ಮ್ಯಾನೇಜರ್: ರಾಜೇಶ್ ಕುಡ್ಲ, ನಿರ್ದೇಶನ ವಿಭಾಗದಲ್ಲಿ ಅವಿನಾಶ್ ಎಸ್ ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳಸಿದಾಸ್ ಮಂಜೇಶ್ವರ್, ಮೇಕಪ್ : ಚೇತನ್, ಆಟ್೯: ವಿಪಿನ್,ಸಿನಿಮಾ ತುಳುವಿನ ಜೊತೆಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲಿದ್ದು, ಇದೊಂದು ಪಾನ್ ಇಂಡಿಯಾ ಸಿನಿಮಾ ಆಗಿದೆ.

ಪ್ರಾದೇಶಿಕ ವಾರ್ತೆಗಳು

ಇಂದು ಡಾ.ಮಿಜಾರುಗುತ್ತು ಮೋಹನ್ ಆಳ್ವರಿಗೆ 73ನೇ ಹುಟ್ಟುಹಬ್ಬದ ಸಂಭ್ರಮ

ಮೂಡಬಿದ್ರೆ-ಇಂದು ಮೇ 31 ಡಾ.ಮಿಜಾರುಗುತ್ತು ಮೋಹನ್ ಆಳ್ವರಿಗೆ 73ನೇ ಹುಟ್ಟುಹಬ್ಬದ ಸಂಭ್ರಮ. ಅದ್ವಿತೀಯ ಸಂಘಟಕ,ನಿಸ್ವಾರ್ಥ ಸಮಾಜ ಸೇವಕ,ವಾಗ್ಮಿ, ಸಾಹಿತ್ಯ-ಕಲಾರಂಗದ ಸವ್ಯಸಾಚಿ,ಸೌಹಾರ್ದ ನಾಯಕ,ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ,ಮೂಡಬಿದ್ರೆ ಅಭಿವೃದ್ದಿಯ ಶಿಲ್ಪಿ,ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನೇತಾರ ಡಾ.ಮೋಹನ್ ಆಳ್ವರ ಹುಟ್ಟುಹಬ್ಬಕ್ಕೆ Mp mlas News ಪತ್ರಿಕೆ ಮತ್ತು mpmlasnewstv 247 ನ್ಯೂಸ್ ಪೋರ್ಟಲ್ ನ ಸಂಪಾದಕ ಡಾ.ಅಶೋಕ್ ಶೆಟ್ಟಿ ಬಿ. ಎನ್ ಅವರು ಶುಭಾಶಯ ಸಲ್ಲಿಸಿದ್ದಾರೆ.

Scroll to Top