ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

MRPL ನ CSR ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಯ ನೂತನ ಸೌಲಭ್ಯದ ಉದ್ಘಾಟಣೆ.

ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ಇಂದು ದಿ. 5-6-2025 ರಂದು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು. ಈ ಸೌಲಭ್ಯವನ್ನು ಮಂಗಳೂರಿನ MRPLಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ( CSR ಉಪಕ್ರಮದ ಅಡಿಯಲ್ಲಿ) ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರಿರಿಕ್ ಹಾಗು ಮನಾಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದು. .ಉದ್ಘಾಟನಾ ಸಮಾರಂಭವು ಬಹಳ ಅರ್ಥಪೂರ್ಣವಾಗಿತ್ತು ಮತ್ತು ಹೃದಯಸ್ಪರ್ಶಿ ಕಾರ್ಯಕ್ರಮವಾಗಿತ್ತು, ಹಲವಾರು ಗಣ್ಯ ಅತಿಥಿಗಳ ಉಪಸ್ಥಿತಿಯಿಂದ ಕಾರ್ಯಕ್ರಮದ ಮೆರುಗು ಅಲಂಕರಿಸಲ್ಪಟ್ಟಿತು. MRPL ನ CSR ವಿಭಾಗದ ಹಿರಿಯ ವ್ಯವಸ್ಥಾಪಕ ಶ್ರೀ ಕೆ. ನಾಗರಾಜ್ ರಾವ್ ಅವರು ಮುಖ್ಯ ಅತಿಥಿಯಾಗಿ ಹಾಜರಿದ್ದು MRPL-ONGC ಮಂಗಳೂರಿನ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣ ಹೆಗ್ಡೆ ಮಿಯಾರ್ ಅವರ ಪರವಾಗಿ ರಿಬ್ಬನ್ ಕತ್ತರಿಸುವ ಮೂಲಕ ಹೊಸ ಸೌಲಭ್ಯವನ್ನು ಉದ್ಘಾಟಿಸಿದರು.ನೆರೆದ ಅತಿಥಿಗಳು ದೀಪ ಬೆಳಗಿಸ್ಸಿ, ಹಾಗೂ ವನಮಹೋತ್ಸವ ಸಾಂಕೇತಿಸಲು ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇತರ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವವರು:*ಶ್ರೀ ಜಾನ್ ಬಿ. ಮೊಂತೆರೊ, ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಮಂಗಳೂರು*ಪೂಜ್ಯಶ್ರೀ ರಾಜ ಬಲ್ಚಡ, ಅರಸು ಮಂಜಿಹ್ನಾರ್ ಕ್ಷೇತ್ರ, ಉದ್ಯಾವರ ಮಾಡ*ಸ್ನೇಹಾಲಯದ ಚಾಪ್ಲಿನ್ ರೆವರೆಂಡ್ ಫಾದರ್ ಸಿರಿಲ್ ಡಿ’ಸೋಜಾ*ಮಂಗಳೂರಿನ ಪ್ರೇರಣಾ ಭಾಷಣಕಾರರಾದ ಶ್ರೀ ರಫೀಕ್ ಮಾಸ್ಟರ್ಸ್ನೇಹಾಲಯದ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು ಮತ್ತು ಸಂಸ್ಥೆಯ ಧ್ಯೇಯದ ಆಶಯ ವ್ಯಕ್ತ ಪಡಿಸಿದರು. ಸ್ನೇಹಾಲಯವನ್ನು ವ್ಯಸನದಿಂದ ಮುಕ್ತಿ ಬಯಸುವವರಿಗೆ ಒಂದು ಪವಿತ್ರ ಸ್ಥಳವನ್ನಾಗಿ ರೂಪಿಸಿದ ಸಮರ್ಪಣೆಯನ್ನು ಅವರ ಮಾತುಗಳು ಪ್ರತಿಧ್ವನಿಸಿದವು.ಕಾರ್ಯಕ್ರಮವನ್ನು ಸೊಗಸಾಗಿಶ್ರೀ ಜಿಯೋ ಡಿಸಿಲ್ವಾ ಅವರು ನೀರೂಪಿಸಿದರು. ಶ್ರೀಮತಿ ಒಲಿವಿಯಾ ಕ್ರಾಸ್ತಾ ಸ್ನೇಹಾಲಯದ ಕಾರ್ಯದರ್ಶಿಗಳು ಅತಿಥಿಗಳಿಗೆ, ವಿಶೇಷವಾಗಿ MRPL ಮಂಗಳೂರು ಇವರಿಗೆ ಮತ್ತು ಈ ಕನಸನ್ನು ನನಸಾಗಿಸಲು ಬೆಂಬಲ ನೀಡಿದ ಎಲ್ಲರಿಗೂ ಅಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.ಜೀವನ ಪರಿವರ್ತನೆಗೆ ಸ್ನೇಹಾಲಯದ ಅಚಲ ಬದ್ಧತೆಯನ್ನು ಅತಿಥಿ ಭಾಷಣಕಾರರು ಶ್ಲಾಘಿಸಿದರು, ಹೊಸ ಟೆರೇಸ್ ಜಾಗವು ಸೃಜನಶೀಲತೆ ಮತ್ತು ಅಭಿವ್ಯಕ್ತಿಯ ಮೂಲಕ ಗುಣಪಡಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು. ಅವರ ಹೃತ್ಪೂರ್ವಕ ಸಂದೇಶಗಳು ಸಹಾನುಭೂತಿಯ ಸೇವೆ ಮತ್ತು ಜವಾಬ್ದಾರಿಯುತ ಕಾರ್ಪೊರೇಟ್ ಪೌರತ್ವವು ಇಲ್ಲಿ ಸ್ವರ್ಗವನ್ನು ರೂಪಿಸಬಹುದು ಎಂಬ ಪ್ರಭಾವದ ಸಂದೇಶ ವನ್ನು ಸಾರಿದವು.

ಪ್ರಾದೇಶಿಕ ವಾರ್ತೆಗಳು

Snehalaya Inaugurates Another facility: A CSR initiative of MRPL

Snehalaya, a home for psycho social rehabilitation, a beacon of compassion and love , had yet another day to mark in golden letters. On 5-6-2025 Snehalaya marked the inauguration of their newly constructed terrace roofing and flooring at its De-Addiction Cente. This facility is provided through the generous support of MRPL Mangalore under their CSR initiative. This facility will be utilised and dedicated space for expressive art therapy and various healing activities aimed at empowering individuals on their path to recovery. The inauguration ceremony was very meaningful and a touching event, graced by the presence of several distinguished guests. Mr. K. Nagaraj Rao, Senior Manager of the CSR Department at MRPL, had the honor of cutting the ceremonial ribbon, symbolizing the opening of a new chapter for the center on behalf of Shri Krishna Hegde Miyar, Group GM, HR MRPL-ONGC Mangalore in his absencia as chief guest.Other esteemed attendees included:*Mr. John B. Monteiro, President of Rachana Catholic Chamber of Commerce and Industry, Mangalore*Mr. Raja Balchada, Arasu Manjihnar Kshetra, Udyavara Mada*Rev. Fr. Cyril D’Souza, Chaplain of Snehalaya*Mr. Rafeeq Master, Motivational Speaker from Mangalore Br. Joseph Crasta, the founder and Executive Director of Snehalaya, warmly welcomed the guests and shared the heart and soul behind the organization’s mission. His words echoed the dedication that has shaped Snehalaya into a sanctuary for those seeking freedom from addiction.The event’s proceedings were seamlessly conducted by Mr. Geo Dsilva whose vibrant presence kept the gathering engaged and inspired.  and Mrs. Olivia Crasta joined in expressing profound gratitude to the guests especially to MRPL Mangalore and all those whose support made this dream a reality.The guest speakers praised Snehalaya’s unwavering commitment to transforming lives, emphasizing how the new terrace space would play a vital role in healing through creativity and expression. Their heartfelt messages served as powerful reminders of the ripple effect that compassionate service and responsible corporate citizenship can form a paradise here.

ಪ್ರಾದೇಶಿಕ ವಾರ್ತೆಗಳು

ರೋಟರಾಕ್ಟ್ ಜಿಲ್ಲಾಮಟ್ಟದ ವಾರ್ಷಿಕ ರಸಪ್ರಶ್ನೆ ಸ್ಪರ್ಧಾಕೂಟ

ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಮತ್ತು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ.ರೋ. ಶಾಂತಾರಾಮ್ ವಾಮಂಜೂರು ಸ್ಮಾರಕ 19ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್‌ಕ್ಲಬ್ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನೇತೃತ್ವದಲ್ಲಿ ಶನಿವಾರ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ರೋ.ಸಾತ್ವಿಕ್ ಕೊಟೆಕಾರ್ ಮತ್ತು ರೋ.ಶಮನ್ ಜೋಡಿ ತಂಡ ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಕ್ಲಬ್ ವನಚೈತನ್ಯ, ಬೆಂಗಳೂರು ಸಂಸ್ಥೆಯನ್ನು ಪ್ರತಿನಿಧಿಸಿದ ರೋ. ಶ್ರೀಖರ್ ದ್ವಿತೀಯ ಸ್ಥಾನ ಪಡೆದರು.ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ದಿವಂಗತ ಸಹೋದರ ರೋ.ಶಾಂತಾರಾಮ್ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟವನ್ನು ಆಯೋಜಿಸುವ ರೋಟರಾಕ್ಟ್ ಸಂಸ್ಥೆಯ ನಿಸ್ವಾರ್ಥ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದು ನುಡಿದು ರೋಟರಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಶಸ್ತಿ ಪ್ರಮಾಣ ಪತ್ರ ಪ್ರದಾನ ಮಾಡಿ ಅವರ ಸಾಧನೆಯನ್ನು ಅಭಿನಂದಿಸಿದರು.ಅಂತಾರಾಷ್ಟ್ರೀಯ ರೋಟರಾಕ್ಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಗುಂಟೂರು ನಗರದ ರೋ.ರವಿ ವಡ್ಲಮಣಿಯವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.ರೋಟರಾಕ್ಟ್ ಜಿಲ್ಲಾ ಚುನಾಯಿತ ಪ್ರತಿನಿಧಿ ಮೈಸೂರು ನಗರ ಮೂಲದ ರೋ. ಪ್ರಜ್ವಲ್, ರೋಟರಾಕ್ಟ್ ದಕ್ಷಿಣ ಏಷ್ಯಾ ಸಂಸ್ಥೆಯ ಅಧ್ಯಕ್ಷ ಡೇರಿಲ್ ಡಿಸೋಜ, ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಚುನಾಯಿತ ಅಧ್ಯಕ್ಷ ರೋ.ಭಾಸ್ಕರ್ ರೈ, ವಾಣಿ ವಾಮಂಜೂರ್ ಉಪಸ್ಥಿತರಿದ್ದರು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ರೋ.ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಮಟ್ಟದ 10 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿತ್ತು. ಈ ಸ್ಪರ್ಧಾಕೂಟವನ್ನು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನಿರೂಪಿಸಿದರು. ಕಾರ್ಯದರ್ಶಿ ರೋ. ಅಕ್ಷಯ್ ರೈ ವಂದಿಸಿದರು.ರೋ. ದಿ. ಶಾಂತಾರಾಮ್ ವಾಮಂಜೂರ್‌ರವರು ಸಂಸ್ಥೆಯ ನಿಷ್ಠಾವಂತ ಸದಸ್ಯರಾಗಿದ್ದು, ನಿಸ್ವಾರ್ಥ ಸೇವಾ ಮನೋಭಾವ ಹೊಂದಿದ್ದು, 2006 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಕಸ್ಮಿಕ ವಾಹನ ರಸ್ತೆ ಅಪಘಾತದ ದುರಂತದಲ್ಲಿ ವಿಧಿವಶರಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ವಾರ್ಷಿಕ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟವನ್ನು ಆಯೋಜಿಸಲಾಗುವುದು ಎಂದು ಡಾ.ದೇವದಾಸ್ ರೈಯವರು ಮಾಹಿತಿ ನೀಡಿದರು.

ಪ್ರಾದೇಶಿಕ ವಾರ್ತೆಗಳು

“ನಾನು ಪಟ್ಲರ ಮೇಳಕ್ಕೆ ಬೆಳ್ಳಿ ತೊಟ್ಟಿಲು ನೀಡಿದ ಬಳಿಕ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ!” -ಡಾ.ಕೆ.ಪ್ರಕಾಶ್ ಶೆಟ್ಟಿ. ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗೆ ಮಹಾಪೋಷಕ ಪ್ರಶಸ್ತಿ ಪ್ರದಾನ!

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮ ಸಂಭ್ರಮದ ಸಭಾ ಕಾರ್ಯಕ್ರಮ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಮಾತಾಡಿದ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ಸತೀಶ್ ಪಟ್ಲರಿಗೆ ಅವರ ಕಂಠವೇ ದೇವರು, ಆದರೆ ಯಕ್ಷಗಾನ ಕಲಾವಿದರಿಗೆ ಸತೀಶ್ ಪಟ್ಲರೇ ದೇವರು. ಯಕ್ಷಗಾನ ಕಲಾವಿದರು ತಮ್ಮ ಕಷ್ಟವನ್ನು ಬದಿಗಿರಿಸಿ ಜನರಿಗೆ ಮನೋರಂಜನೆ ನೀಡುತ್ತಾರೆ ಎಂದಿಗೂ ಯಾರ ಮುಂದೆಯೂ ಕೈಚಾಚುವುದಿಲ್ಲ. ಅವರ ಸ್ವಾಭಿಮಾನದ ಬದುಕು ಹಾಗಿರುತ್ತದೆ, ಇಂತಹ ಕಲಾವಿದರಿಗೆ ನೆರವಾಗಲು ಯಕ್ಷಧ್ರುವ ಪಟ್ಲ ಟ್ರಸ್ಟ್ ಸ್ಥಾಪಿಸಿ ರಾತ್ರಿ ಹಗಲು ಕಲಾವಿದರ ನೋವಿಗೆ ಸ್ಪಂದಿಸಿದರು. ಅವರು ಪ್ರಾರಂಭದಲ್ಲಿ ನನ್ನ ಬಳಿ ತೊಟ್ಟಿಲು ಕೇಳಿದಾಗ ನಾನು ಹಿಂದೆ ಮುಂದೆ ಯೋಚಿಸದೆ ಬೆಳ್ಳಿ ತೊಟ್ಟಿಲು ನೀಡಿದೆ. ಆದರೆ ನಂತರ ನನ್ನ ಜೀವನದಲ್ಲಿ ವ್ಯವಹಾರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ. ನಾವೆಲ್ಲರೂ ಅವರು ಮಾಡುವ ಒಳ್ಳೆಯ ಕೆಲಸಕ್ಕೆ ಕೈಜೋಡಿಸೋಣ. ಅವರ ಸಮಾಜಮುಖಿ ಚಿಂತನೆ, ಕಾರ್ಯಗಳು ಹೀಗೆಯೇ ಮುಂದುವರಿಯಲಿ“ ಎಂದರು.2025ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ-ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಐಕಳ ಹರೀಶ್ ಶೆಟ್ಟಿ ಅವರು, “ಪಟ್ಲ ಸತೀಶ್ ಶೆಟ್ಟಿಯವರು ಕಟೀಲು ದುರ್ಗೆಯ ದೊಡ್ಡ ಭಕ್ತರು. ವರ್ಷದಲ್ಲಿ 6 ತಿಂಗಳು ಯಕ್ಷಗಾನ ಕಲಾವಿದರಾಗಿ ದುಡಿಯುವವರು ನಂತರದ 6 ತಿಂಗಳು ಜೀವನ ನಿರ್ವಹಣೆಗೆ ಕಷ್ಟ ಪಡುವುದನ್ನು ನೋಡುತ್ತೇವೆ. ಅಂತಹ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಪಟ್ಲ ಫೌಂಡೇಶನ್ ಸ್ಥಾಪಿಸಿ ಸಾವಿರಾರು ಕಲಾವಿದರಿಗೆ ನೆರವು ನೀಡಿದ್ದಾರೆ. ನಾನು ಜೀವನ ಪೂರ್ತಿ ಈ ಸಂಘಟನೆಯ ಜೊತೆಯಲ್ಲಿ ಇರುತ್ತೇನೆ. ಸನ್ಮಾನ ಮಾಡುವುದಕ್ಕಿಂತ ಅದರ ಹಿಂದಿರುವ ಪ್ರೀತಿ ಮುಖ್ಯವಾದುದು. ಎಲ್ಲಾ ಧರ್ಮಗಳು ಕೂಡಾ ಸಹಬಾಳ್ವೆಯಿಂದ ತುಳುನಾಡಿನಲ್ಲಿ ಬದುಕುವಂತಾಗಲಿ. ಪಟ್ಲ ಒಂದು ಶಕ್ತಿ ಅದಕ್ಕೆ ಇನ್ನಷ್ಟು ಶಕ್ತಿ ತುಂಬಲು ಯುವಕರು ಮುಂದೆ ಬರಲಿ“ ಎಂದರು.ವೇದಿಕೆಯಲ್ಲಿ ವಕ್ವಾಡಿ ಪ್ರವೀಣ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ದುಬೈ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತಲ್ಲೂರ್ ಶಿವರಾಮ ಶೆಟ್ಟಿ, ಬಿಬಿಎಂಪಿ ಅಪರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಶಶಿಧರ್ ಶೆಟ್ಟಿ ಬರೋಡ, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಥಾಣೆ, ಬೆಳ್ಳಾಡಿ ಅಶೋಕ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ರವೀಂದ್ರ ನಾಥ್ ಭಂಡಾರಿ, ಶಶಿಧರ್ ಶೆಟ್ಟಿ ಇನ್ನಂಜೆ, ಗಿರೀಶ್ ಶೆಟ್ಟಿ ತೆಳ್ಳಾರ್, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಪೆರಾರ ಬಾಬಣ್ಣ, ಪುತ್ತಿಗೆ ಮಠ ಯುಎಸ್ ಎ ಅರ್ಚಕ ಕಿರಣ್ ರಾವ್, ಗಿರೀಶ್ ಎಂ ಶೆಟ್ಟಿ ಕಟೀಲ್, ಸುಧಾಕರ ಎಸ್ ಪೂಂಜ ಸುರತ್ಕಲ್, ದಯಾನಂದ ಶೆಟ್ಟಿ ಆಸ್ಟ್ರೇಲಿಯಾ, ಡಾ.ಆರ್.ಕೆ.ಶೆಟ್ಟಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಕದ್ರಿ ನವನೀತ ಶೆಟ್ಟಿ, ಕದ್ರಿ ಪ್ರದೀಪ್ ಆಳ್ವ, ಬಾಳ ಜಗನ್ನಾಥ ಶೆಟ್ಟಿ, ರವಿಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠ-ಅಯುಧ್ ಮಂಗಳೂರು ಇವರಿಂದ ವಿಶ್ವ ಪರಿಸರ ದಿನಾಚರಣೆ.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಯುವ ಸೇವಾ ವಿಭಾಗ ಅಯುಧ್ ಮಂಗಳೂರು ಇವರಿಂದ ನಗರದ ಬೊಕ್ಕಪಟ್ನದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರದಿನವನ್ನು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಆಯುಷ್ ಇಲಾಖೆಯ ನಿವೃತ್ತ ಅಧಿಕಾರಿ ಡಾ.ದೇವದಾಸ್ ಪುತ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಠದ ಯುವ ಸೇವಾ ವಿಭಾಗವಾದ “ಅಯುಧ್” ಮೂಲಕ ವಿಶ್ವದಾದ್ಯಂತ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸ್ಪೂರ್ತಿ ನೀಡುತ್ತಿದ್ದಾರೆ.ಅಮ್ಮನವರ ಅನುಗ್ರಹದೊಂದಿಗೆ ಅಯುಧ್ ಮಂಗಳೂರು ತಂಡವು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ಅಮಲ ಭಾರತ ಸ್ವಚ್ಛತಾ ಜನಜಾಗರಣ ಅಭಿಯಾನ, ಗಿಡಗಳನ್ನು ಬೆಳೆಸುವುದು, ಬೀಜದ ಉಂಡೆಗಳನ್ನು ಮಾಡಿ ಉಪಯುಕ್ತ ಫಲಗಳ ಮರಗಳು ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದರು. ಮಕ್ಕಳಿಗೆ ಬಾಲ್ಯದಲ್ಲೇ ಔಷಧೋಪಯೋಗಿ ಸಸ್ಯಗಳ ಪರಿಚಯವನ್ನು ಮಾಡಿ ಅದರ ಉಪಯೋಗದ ಮಾಹಿತಿ ನೀಡಿದಲ್ಲಿ ಪ್ರಾಥಮಿಕ ಆರೋಗ್ಯ ಸಮಸ್ಯೆ ಹಾಗೂ ಸ್ವಾಸ್ಥ್ಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ನುಡಿದರು. ಅಮೃತ ಜ್ಯೋತಿ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿರುವ ಸಸ್ಯದ ಬೀಜವನ್ನೊಳಗೊಂಡ ಪರಿಸರಸ್ನೇಹಿ ಪೆನ್ಸಿಲ್ ಬಗ್ಗೆ ಮಾಹಿತಿ ನೀಡಿದರು.ಈ ಶಾಲೆಯಲ್ಲಿಮುಂದೆ ಅಡುಗೆಗೆ ಉಪಯುಕ್ತವಾಗುವ ತರಕಾರಿ ಗಿಡಗಳನ್ನು ಬೆಳೆಸುವ ಯೋಜನೆ ಇದೆ ಎಂದರು.ಈ ಸಂದರ್ಭದಲ್ಲಿ ಸಸಿಗಳನ್ನು ಹಾಗೂ ಬೀಜಯುಕ್ತ ಪೆನ್ಸಿಲ್ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿಶಾಲಾಮುಖ್ಯ ಶಿಕ್ಷಕಿ ಡ್ರೆಸಿಲ್ ಲಿಲ್ಲಿ ಮೆನೆಜಸ್,ಅಯುಧ್ ಅಧ್ಯಕ್ಷರಾದ ಅಡ್ವೊಕೇಟ್ ಸ್ವಸ್ತಿ ಶೆಟ್ಟಿ,ಕಾರ್ಯದರ್ಶಿ ಡಾ.ರಿಷಿಕೇಶ್ ಪ್ರೇಮರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ವೀಣಾ ಧಾರಿಣಿ ನಿರೂಪಿಸಿದರು.ಅಯುಧ್ ಸದಸ್ಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ವತಿಯಿಂದ ಪರಿಸರ ದಿನಾಚರಣೆ. ‘ಪೃಥ್ವಿಯ ಉಳಿವಿಗೆ ಪ್ಲಾಸ್ಟಿಕ್ ನಿರ್ಮೂಲನೆ ಅಗತ್ಯ’-ಡಾ.ಆರ್.ಕೆ.ನಾಯರ್

ಮಂಗಳೂರು: ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯಾಗದಿದ್ದರೆ ಪೃಥ್ವಿಯ ಅವನತಿಯೂ ಸನಿಹವಾಗಲಿದೆ. ಪರಿಸರ ಸಂರಕ್ಷಣೆಯಾದಲ್ಲಿ ಮಾತ್ರ ಮನುಷ್ಯನ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಪರಿಸರವಾದಿ, ಗುಜರಾತ್ ನ ಸ್ಮೃತಿ ವನದ ರೂವಾರಿ ಡಾ.ಆರ್.ಕೆ.ನಾಯರ್ ಹೇಳಿದರು.ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಗುರುವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರುಯುವಜನತೆ, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಆಂದೋಲನದ ರೀತಿಯಲ್ಲಿ ಪಣ ತೊಡಬೇಕು. ರೆಡ್ ಕ್ರಾಸ್ ಸಂಸ್ಥೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು. ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಡಾ. ಸಚ್ಚಿದಾನಂದ ರೈ, ಎ.ವಿಠ್ಠಲ, ಡಾ.ಸುಮನಾ ಬೋಳಾರ್, ಸಲಹೆಗಾರರಾದ ಪ್ರಭಾಕರ ಶರ್ಮ, ಕೆ.ಎನ್. ಸುಧಾಕರ, ಸದಸ್ಯರಾದ ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಡ್ಮಿನ್ ಅಧಿಕಾರಿ ಸ್ಮಿತಾ ಶೆಣೈ ಉಪಸ್ಥಿತರಿದ್ದರು.ರೆಡ್ ಕ್ರಾಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಸ್ವಾಗತಿಸಿ, ನಿರ್ದೇಶಕ ಗುರುದತ್ ನಾಯಕ್ ವಂದಿಸಿದರು. ಪಿ.ಬಿ. ಹರೀಶ್ ರೈ ನಿರೂಪಿಸಿದರು. ಮುಖ್ಯ ಅತಿಥಿಗಳು ಮತ್ತು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೆಡ್ ಕ್ರಾಸ್ ಕಚೇರಿ ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಇದೇ ಸಂದರ್ಭ ಡಾ.ಆರ್.ಕೆ.ನಾಯರ್ ಅವರನ್ನು ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಜೂನ್ 7ಮತ್ತು 8ರಂದು ಮಂಗಳೂರಿನ ಅವತಾರ ಹೋಟೆಲ್ ನಲ್ಲಿ RSAMDIO ಪದಗ್ರಹಣ ಸಮಾರಂಭ

ಮಂಗಳೂರು -ರೋಟಾರೆಕ್ಟ್ ಎಂಬುದು ರೋಟರಿ ಇಂಟರ್‌ನ್ಯಾಷನಲ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ, ನಾಯಕತ್ವ, ಸೇವೆ ಮತ್ತು ಸ್ನೇಹ ಸಂಬಂಧಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲಿರುವ ಯುವ ನಾಯಕರ ಜಾಗತಿಕ ಚಲನೆಯಾಗಿದೆ. ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರಬಿಂದು RSAMDIO – ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್‌ಫರ್ಮೇಶನ್ ಆರ್ಗನೈಸೇಷನ್, ಇದು 8 ದೇಶಗಳು ಮತ್ತು 44 ಸದಸ್ಯ ಜಿಲ್ಲೆಗಳನ್ನು ಒಳಗೊಂಡಿದೆ, ಹಾಗೂ 79,000 ಕ್ಕೂ ಹೆಚ್ಚು ರೋಟಾರೆಕ್ಟರ್‌ಗಳು ಇದರ ಭಾಗವಾಗಿದ್ದಾರೆ.ಈ ಸಂಭ್ರಮದಲ್ಲಿ, 2025–26ನೇ ಸಾಲಿನ RSAMDIO ಇನ್‌ಸ್ಟಾಲೇಶನ್ ಸಮಾರಂಭ – ITTEHAD ಹಾಗೂ ROAR (RSAMDIO ಉತ್ತಮ ಪ್ರಶಸ್ತಿ ಪ್ರಧಾನ) ಜೂನ್ 7 ಮತ್ತು 8, 2025 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿ ಮಂಗಳೂರಿನ ಆವತಾರ್ ಹೋಟೆಲ್‌ನಲ್ಲಿ ಜರುಗಲಿದೆಂದು ಡಾ.ಬಿ.ದೇವದಾಸ್ ರೈಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ. ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ, RSAMDIO ಗೆ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆ ಆದವರಲ್ಲಿ ಡೇರಲ್ ಎರಡನೆಯವರು., ಹಾಗೂ ಅವರು ಈ ಸಂಸ್ಥೆಯ 16ನೇ ಅಧ್ಯಕ್ಷರಾಗಲಿದ್ದಾರೆಂದವರು ಹೇಳಿದರು.3 ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಇಂಟರ್‌ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ Rtn. ವಿಕ್ರಮದತ್ತ ಅವರು ಭಾಗವಹಿಸಲಿದ್ದಾರೆ. ITTEHAD 2025 ಕಾರ್ಯಕ್ರಮವು ನಾಯಕತ್ವ, ಸಂಸ್ಕೃತಿ ಮತ್ತು ಸೇವೆಯ ಮಹತ್ವದ ಉತ್ಸವವಾಗಲಿದೆ. ಕರಾವಳಿಯ ಹೃದಯ ಮಂಗಳೂರು ನಗರವು ಈ ಪ್ರತಿಷ್ಟಿತ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದು ಇತಿಹಾಸ ನಿರ್ಮಾಣದ ಕ್ಷಣವನ್ನು ಎದುರಿಸುತ್ತಿದೆಂದು ಡಾ.ದೇವದಾಸ್ ರೈಯವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಎಂ.ವಿ. ಮಲ್ಯ, ಭಾಸ್ಕರ್ ರೈ – ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷರು; ಪಿಡಿಜಿ ಎಂಡಿ ಡಾ. ಬಿ. ದೇವದಾಸ್ ರೈ – Chairman, ಮಂಗಳೂರು ನಗರದ ರೋಟರಾಕ್ಟ್ ಕ್ಲಬ್‌ನ; ಮತ್ತು ಪಿಡಿಆರ್‌ಆರ್ ಎಂದು ಪಿಎಚ್‌ಎಫ್ ಡ್ಯಾರಿಲ್ ಸ್ಟೀವನ್ ಡಿಸೋಜಾ – ರೋಟರಾಕ್ಟ್ ದಕ್ಷಿಣ ಏಷ್ಯಾ ಎಂಡಿಐಒದ ಚುನಾಯಿತ ಅಧ್ಯಕ್ಷರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.Photo- sathish Kapikad

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ಗೌರವಾಧ್ಯಕ್ಷರಾಗಿ ಎಂಎಲ್‌ಸಿ ಐವನ್ ಡಿಸೋಜ ಆಯ್ಕೆ

ಮಂಗಳೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಬೆಂಗಳೂರು ಇದರ ರಾಜ್ಯದ ಮಹಾ ಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಗಯ್ಯ ಅವರ ಘನ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಸಂಚಾಲಕರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರನ್ನು ವೇದಿಕೆಯ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ದ.ಕ ಜಿಲ್ಲಾ ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ಪದಾಧಿಕಾರಿಗಳು ಮತ್ತು‌ವೇದಿಕೆಯ ನಿವೃತ್ತ ಸರಕಾರಿ ನೌಕರರು ಅವರಿಗೆ ಶುಭ ಹಾರೈಸುವ ಜತೆಗೆ ತಮ್ಮ ವೇದಿಕೆಯ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಮಾರಕ -ಆರ್.ಕೆ.ನಾಯರ್

ಮಂಗಳೂರು,ಜೂ.5: ಅತಿಯಾದ ಪ್ಲಾಸ್ಟಿಕ್ ಬಳಸುವುದರಿಂದ ಉಂಟಾಗುತ್ತಿರುವ ತ್ಯಾಜ್ಯ ನಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸೇರಿ ಸಮಸ್ತ ಜೀವ ಸಂಕುಲಕ್ಕೆ ಹಾನಿ ಯುಂಟು ಮಾಡುತ್ತಿದೆ ಈ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದು ಗ್ರೀನ್ ಹೀರೋ ಓಫ್ ಇಂಡಿಯಾ ಆರ್.ಕೆ. ನಾಯರ್ ತಿಳಿಸಿದ್ದಾರೆ.ಬಲ್ಮಠ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜುನಲ್ಲಿ ಅರಣ್ಯ ಇಲಾಖೆ, ಮಂಗಳೂರು, ಪರಿಸರ ಅಧ್ಯಯನ ಕೇಂದ್ರ ಹಾಗೂ ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೃಷಿ ಚಟುವಟಿಕೆ ಯಲ್ಲಿ ರಾಸಾಯನಿಕ ಬಳಕೆ ಮಾಡುವುದರಿಂದ ಪರಿಸರದ ಮೇಲೆ ಬಹಳಷ್ಟು ಹಾನಿ ಉಂಟಾಗುತ್ತಿದೆ. ರಾಸಾಯನಿಕ ಬಳಕೆ ಸಂಪೂರ್ಣ ನಿಲ್ಲಿಸಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಹಾಯಕ ವಲಯ ಅರಣ್ಯಧಿಕಾರಿ ಮೋಹನ್, ಉದ್ಯಮಿ ರಮೇಶ್ ನಾಯಕ್, ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನಿಯೋಜಿತ ಅಧ್ಯಕ್ಷ ಭಾಸ್ಕರ್ ರೈ, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜುನ ವನಿತಾ ದೇವಾಡಿಗ, ರೆಡ್ ಕ್ರಾಸ್ ಸೊಸೈಟಿ ಸದಸ್ಯ ಪುಷ್ಪರಾಜ್ ಬಿ ಎನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Scroll to Top