ಡಿ ಗ್ರೂಪ್ ನೌಕರರ ಶೋಷಣೆ. ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಯವರಿಗೆ ದೂರು
ಪಡೀಲ್ -ಕೆಲವೊಂದು ವಿಚಾರಗಳಲ್ಲಿ ಅಧಿಕಾರಿಯವರ ಉದ್ದಟನದಿಂದ ಕೆಲವು ಸಿಬ್ಬಂದಿಗಳನ್ನು ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಂಡು ಅವರಲ್ಲಿ ಅವರಿಗೆ ಬೇಕಾಗುವ ರೀತಿಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಮತ್ತು ಡಿ ಗ್ರೂಪ್ ಅಲ್ಲಿ ಮಾಡುವ ಕೆಲಸಗಳನ್ನು ಯಾವುದನ್ನು ಕೂಡಾ ಅವರಿಗೆ ನೀಡದೆ ಅಧಿಕಾರಿಗಳ ಕೆಲಸಕ್ಕೆ ಇಟ್ಟಿದ್ದಾರೆ ಎನ್ನುವ ರೀತಿಯಲ್ಲಿ ಡಿ ಗ್ರೂಪ್ ಮಾಡುವ ಕೆಲಸವನ್ನೆಲ್ಲ ತಮ್ಮ ಮೇಲೆ ಏರುತ್ತಿರುವುದು ಡಿ ಗ್ರೂಪ್ ನೌಕರರ ಅಳಲು ಆಗಿರುತ್ತದೆ.ಇದನ್ನು ಕಡಿವಾಣ ಹಾಕಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಡಿ ಗ್ರೂಪ್ ಸರಕಾರಿ ನೌಕರರ ಸಂಘ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈ ಗೊಳ್ಳುವಂತೆ ವಿನಂತಿಸಿ ಮನವಿ ಮೂಲಕ ದೂರು ಸಲ್ಲಿಸಿದೆ.ಈ ಸಂದರ್ಭಡಲ್ಲಿ ದಕ್ಷಿಣ ಕನ್ನಡ ಜಿಲ್ಲಾ”ಡಿ”ವರ್ಗ ಸರ್ಕಾರಿ ನೌಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಸಂಘದ ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಸ್ ಇವರು ಅಭಿನಂದಿಸಿದರು.ಸಂಘದ ಮುಖ್ಯ ಸಲಹೆಗಾರರಾದ ಫ್ರಾಂಕಿ ಫ್ರಾನ್ಸಿಸ್,ಪ್ರಧಾನ ಕಾರ್ಯದರ್ಶಿ ನಾಗೇಶ್ ಎಸ್,ಕ್ರೀಡಾ ಕಾರ್ಯದರ್ಶಿ ಲೋಕೇಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು










