ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೂಲ್ಕಿಯಲ್ಲಿ 23ನೇ ವರ್ಷದ ಆಟಿಡೊಂಜಿ ದಿನ. ಕಷ್ಟದ ದಿನಗಳನ್ನು ಯುವ ಸಮುದಾಯಕ್ಕೆ ತಿಳಿಹೇಳಿ: ಜಯಂತ್ ನಡುಬೈಲ್

ಮೂಲ್ಕಿ: ಆಷಾಢ ತಿಂಗಳ ಕೃಷಿ ಬದುಕಿನ ಬಗ್ಗೆ ಯುವ ಸಮುದಾಯಕ್ಕೆ ತಿಳಿಹೇಳಬೇಕು, ಅಂದಿನ ಕಷ್ದದ ದಿನಗಳಲ್ಲಿ ಗ್ರಾಮೀಣ ಬದುಕು, ಸೊಗಡು, ಪರಂಪರೆ, ಸಂಪ್ರದಾಯ ನಮಗೆ ಮಾರ್ಗದರ್ಶಕವಾಗಿದೆ ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲ್ ಹೇಳಿದರು.ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದಿಂದ ನಡೆದ 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದರು. ರಥದಲ್ಲಿ ಬಂದ ಅಕ್ಕಿ ಮುಡಿಯಲ್ಲಿನ ಅಕ್ಕಿಯನ್ನು ತೆಗೆದು ಊಟದ ವ್ಯವಸ್ಥೆ ಮಾಡಲು ಅನುವು ಮಾಡಿಕೊಡುವ ಮೂಲಕ ಉದ್ಘಾಟಿಸಲಾಯಿತು.“ತರವಾಡು” ತುಳು ಸಿನಿಮಾದ ನಿರ್ಮಾಪಕ, ನಾಯಕ ಶೋಧನ್ ಶೆಟ್ಟಿ ಪಡುಬಿದ್ರಿ ತಮ್ಮ‌ ಸಿನಿಮಾದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.ಜನಪದ ವಿದ್ವಾಂಸ ದಿನೇಶ್ ಸುವರ್ಣ ರಾಯಿ ಆಟಿದ ಮದಿಪು ವಿಷಯದಲ್ಲಿ ಮಾತನಾಡಿದರು.ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ವಿನಯಕುಮಾರ್ ಮಟ್ಟು ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕಾರ್ಯಕ್ರಮ ಸಂಚಾಲಕಿ ಶಕೀಲಾ ಹರೀಂದ್ರ ಸುವರ್ಣ, ಕೋಶಾಧಿಕಾರಿ ಪ್ರತೀಕ್ಷ್ ಸಾಲ್ಯಾನ್ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷ ಜಯಕುಮಾರ್ ಕುಬೆವೂರು ಪ್ರಸ್ತಾವನೆಗೈದರು, ಮಹೀಂ ಮೂಲ್ಕಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರೇರಣಾ ವಂದಿಸಿದರು, ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ನಡೆಯಿತು, ಸುಮಾರು ಒಂದೂವರೆ ಸಾವಿರ ಮಂದಿಗೆ ತುಳುನಾಡ ಖಾದ್ಯಗಳನ್ನು ಉಣಬಡಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ರೂ.1300 ಕೋಟಿ ವ್ಯವಹಾರದ 113 ವರ್ಷಗಳ ಇತಿಹಾಸವಿರುವ ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

ಕರ್ನಾಟಕದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ ಮಂಡಳಿ ವಹಿಸಿಕೊಂಡ ನಂತರ ಇಡೀ ಕರ್ನಾಟಕ ರಾಜ್ಯದ್ಯಂತ ವಿಸ್ತರಿಸಿದೆ. ಎಮ್.ಸಿ.ಸಿ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೊರೆಯುತ್ತಿವೆ. ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ. ಸಹಕಾರ ರತ್ನ ಶ್ರೀ ಅನಿಲ್ ಲೋಬೊರವರ ಆಡಳಿತ ಮಂಡಳಿಯು 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ದಾಖಲಿಸಿದೆ. 2017ರಲ್ಲಿ ರೂ. 304 ಕೋಟಿ ಇದ್ದ ಬ್ಯಾಂಕಿನ ಠೇವಣಿಯು 2025ರಲ್ಲಿ ರೂ. 728 ಕೋಟಿಗೆ ತಲುಪಿದ್ದು, ಶೇಕಡಾ 139ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 191 ಕೋಟಿ ಇದ್ದ ಸಾಲ ಮತ್ತು ಮುಂಗಡಗಳು ರೂ. 572 ಕೋಟಿಗೆ ತಲುಪಿದ್ದು, ಶೇಕಡಾ 199ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 13 ಕೋಟಿ ಇದ್ದ ಪಾಲು ಬಂಡವಾಳ ರೂ. 33 ಕೋಟಿಗೆ ತಲುಪಿದ್ದು, ಶೇಕಡಾ 154ರಷ್ಟು ಪ್ರಗತಿಯನ್ನು ದಾಖಲಿಸಿದೆ. ಬ್ಯಾಂಕಿನ ರಿಸರ್ವ್ ರೂ. 29 ಕೋಟಿಯಿಂದ ರೂ. 79 ಕೋಟಿಗೆ ತಲುಪಿದ್ದು, ಶೇಕಡಾ 172ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 496 ಕೋಟಿ ಇದ್ದ ವ್ಯವಹಾರ ರೂ. 1300 ಕೋಟಿಗೆ ತಲುಪಿದ್ದು, ಶೇಕಡಾ 162ರಷ್ಟು ಪ್ರಗತಿಯನ್ನು ದಾಖಲಿಸಿದೆ. ಶೇಕಡಾ 11.70 ಇದ್ದ ಬ್ಯಾಂಕಿನ ಅಖಂಖ CRAR (Capital to Risk Assets Ratio) ಪ್ರಮಾಣವು ಶೇಕಡಾ 19.82 ತಲುಪಿದ್ದು ಶೇಕಡಾ 62 ರಷ್ಟು ಪ್ರಗತಿಯನ್ನು ದಾಖಲಿಸಿದೆ. ಶೇಕಡಾ 0.56 ಇದ್ದ ಬ್ಯಾಂಕಿನ ರಿಟರ್ನ್ ಅನ್ ಅಸೆಟ್ಸ್ ಮೌಲ್ಯವು ಶೇಕಡಾ 1.40 ಗೆ ತಲುಪಿ ಶೇಕಡಾ 150 ಪ್ರಗತಿಯನ್ನು ದಾಖಲಿಸಿದೆ.ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಶ್ರಮ ಹಾಗೂ ಬ್ಯಾಂಕಿನ ಆರ್ಥಿಕ ಪ್ರಗತಿಯತ್ತ ಗಮನಹರಿಸಿ ಕಾರ್ಯಯೋಜನೆಯನ್ನು ಹಮ್ಮಿಕೊಂಡಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪೂರೈಸಿ ಎಮ್.ಸಿ.ಸಿ. ಬ್ಯಾಂಕ್ 22 ವರ್ಷಗಳ ನಂತರ ಬ್ರಹ್ಮಾವರ, ಬೆಳ್ತಂಗಡಿ ಮತ್ತು ಬೆಳ್ಮಣ್ನಲ್ಲಿ ಮೂರು ಶಾಖೆಗಳನ್ನು ತೆರೆದಿದ್ದು, ಶಾಖೆಗಳ ಒಟ್ಟು ಸಂಖ್ಯೆಯು 16ರಿಂದ 19ಕ್ಕೆ ತಲುಪಿದ್ದು, ಬೈಂದೂರಿನಲ್ಲಿ ತನ್ನ 20ನೇ ಶಾಖೆಯನ್ನು ದಿನಾಂಕ 03.08.2025ರಂದು ಉದ್ಘಾಟಿಸಲಿದೆ ಎಂದು ಎಮ್.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶ್ರಿ ಅನಿಲ್ ಲೋಬೊ ಜುಲೈ 30ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅವರು ಮುಂದುವರಿದು ಅಕ್ತೋಬರ್ 5, 2025 ರಂದು 21ನೇ ಶಾಖೆಯನ್ನು ಸಂತೆಕಟ್ಟೆಯಲ್ಲಿ ತೆರೆಯಲಿದೆ ಎಂದು ತಿಳಿಸಿದರು.ಬೈಂದೂರು ಶಾಖೆಯ ಉದ್ಘಾಟಣಾ ಕಾರ್ಯಕ್ರಮದಲ್ಲಿ ಎಮ್.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ, ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಅಧ್ಯಕ್ಷತೆ ವಹಿಸುವರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಹೊ ಶಾಖೆಯನ್ನು ಆಶೀರ್ವದಿಸಲಿದ್ದಾರೆ. ಬೈಂದೂರಿನ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ. ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರಿನ ಆಡಳಿತ ಧರ್ಮದರ್ಶಿ ಶ್ರೀ ಬಾಬು ಶೆಟ್ಟಿ, ಬೈಂದೂರು ಸೇಂಟ್ ಥಾಮಸ್ ರೆಸಿಡೆನ್ಶಿಯಲ್ ಸ್ಕೂಲ್, ಇದರ ಪ್ರಾಂಶುಪಾಲ ವಂದನೀಯ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಶ್ರೀ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಕಾಪ್ಸಿ ನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ಶ್ರೀ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮೋಬಿ ಪಿ.ಸಿ. ಇವರು ಗೌರವ ಅತಿಥಿಗಳಾಗಲಿದ್ದಾರೆ.ಇದರ ಜೊತೆಗೆ, 09.08.2025ರಂದು ಬೆಳ್ಮಣ್ನಲ್ಲಿ 9ನೇ ಎಟಿಎಮ್, 10.08.2025ರಂದು ಸುರತ್ಕಲ್ನಲ್ಲಿ 10ನೇ ಎಟಿಎಮ್, 17.08.2025ರಂದು ಕುಲಶೇಖರ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು ಉದ್ಘಾಟನೆ ಹಾಗೂ 11ನೇ ಎಟಿಎಮ್ ಉದ್ಘಾಟನೆ, 14.09.2025ರಂದು ಕಿನ್ನಿಗೋಳಿಯಲ್ಲಿ 12ನೇ ಎಟಿಎಮ್, 27.09.2025ರಂದು ಉಡುಪಿ ಶಾಖೆಯಲ್ಲಿ 13ನೇ ಎಟಿಎಮ್, ಮತ್ತು 05.10.2025ರಂದು 14ನೇ ಎಟಿಎಮ್ ಸಂತೆಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ.ಪ್ರಸ್ತುತ ಬ್ಯಾಂಕಿನಲ್ಲಿ ಗ್ರಾಹಕರಿಗೆ ಕಡಿಮೆ ಬಾಡಿಗೆ ದರದಲ್ಲಿ ಲಾಕರ್ ಸೌಲಭ್ಯ, ಸ್ಪರ್ಧಾತ್ಮಕ ಬಡ್ದಿ ದರದಲ್ಲಿ ದೇಶ ವಿದೇಶ ವಿಧ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಎಟಿಎಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ನಿಂದ (DICGC) ವಿಮಾ ಸೌಲಭ್ಯವಿದೆ.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:ಅನಿಲ್ ಲೋಬೊ – ಅಧ್ಯಕ್ಷರು; ಜೆರಾಲ್ಡ್ ಜೂಡ್ ಡಿ’ಸಿಲ್ವಾ – ಉಪಾಧ್ಯಕ್ಷರು; ಆಂಡ್ರ್ಯೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ರಾಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿ’ಕ್ರೂಜ್, ಶರ್ಮಿಳಾ ಮಿನೇಜಸ್ – ನಿರ್ದೇಶಕರು ಮತ್ತು ಸುನಿಲ್ ಮಿನೇಜಸ್ – ಮಹಾಪ್ರಬಂಧಕರು.ಪತ್ರಿಕಾಗೋಷ್ಠಿ: ಬುಧವಾರ, ಜುಲೈ 30, 2025ರಂದು ಮಧ್ಯಾಹ್ನ 12.15 ಗಂಟೆಗೆ, ಪ್ರದಾನ ಕಛೇರಿ, ಎಂ.ಸಿ.ಸಿ. ಬ್ಯಾಂಕ್, ಹಂಪನಕಟ್ಟೆ, ಮಂಗಳೂರಿನಲ್ಲಿರುವ ಆಡಳಿತ ಮಂಡಳಿ ಸಭಾಂಗಣದಲ್ಲಿ.ಕನ್ನಡ ಮತ್ತು ಇಂಗ್ಲಿಷ್ ಪತ್ರಿಕಾ ಪ್ರಕಟಣೆಗಳನ್ನು ಸಂಬಂಧಿತ ಇಮೇಲ್ ಐಡಿಗಳಿಗೆ ಇಮೇಲ್ ಮಾಡಲಾಗಿದೆ.

ಪ್ರಾದೇಶಿಕ ವಾರ್ತೆಗಳು

MCC Bank with a GB History of 113 years and a Business Turnover of Rs. 1300 Crore inaugurates its 20th branch at Byndoor

MCC Bank Ltd, popularly known as MCC Bank, has completed 113 years of dedicated service this year and accomplished noteworthy progress across all business metrics for the financial year ending 31st March 2025.The Bank reached a milestone of INR 1300 Crore in total business turnovers showing a growth of 20%. Boasting an enhanced net worth of INR 83.76 Crore compared to the previous INR 76.00 Crore, the Bank continues to benefit from NRI support. Under the present Board, the bank’s area of operations has expanded from Dakshina Kannada and Udupi to all state of Karnataka. It operates entirely on core banking technology and offers a full range of products and services comparable to those of private and public sector banks. The bank is also actively working on expanding its branch network across the state.Ever since Sahakara Ratna Shri Anil Lobo and his team took charge of MCC Bank in 2018, the Bank has achieved demonstrated remarkable growth in its business performance.Deposits increased from ₹304 Crores to ₹728 Crores, marking a growth of 139%, Loans and advances rose from ₹191 Crores to ₹572 Crores, reflecting a growth of 199%. Share capital increased from ₹13 Crores to ₹33 Crores, registering a growth of 154%. Reserves grew from ₹29 Crores to ₹79 Crores, showing a growth of 172%. Business turnover expanded from ₹496 Crores to ₹1,300 Crores, an increase of 162%. CRAR improved from 11.70% to 18.92%, showing a growth of 62%. Return on Assets increased from 0.56% to 1.40%, indicating a growth of 150%.With the constant efforts of an efficient management team, dedicated staff, and a well-defined strategic plan, the Bank has successfully met all regulatory requirements set by the Reserve Bank of India. Notably, after a gap of 22 years, the Bank opened three new branches at Brahmavar, Belthangady, and Belman.MCC Bank is now set to inaugurate its 20th branch at Byndoor on August 3, 2025, announced Sahakara Ratna Shri Anil Lobo at a press meet held on July 30, 2025. He further stated that the 21st branch will be opened on October 5, 2025.The programme will be presided over by Sahakara Ratna Shri Anil Lobo, Chairman of MCC Bank. Rev. Fr Vincent Coelho, Parish Priest of Holy Cross Church, Byndoor will bless the branch premises, Mr Gururaj Gantehole, MLA, Byndoor, will be the chief guest. Shri Babu Shetty, Managing Trustee, Shri Mookambia Temple, Kollur, Rev. Fr Philip Nelivilla, Principal St Thomas Residential School, Byndoor, Shri Raju Poojari, Ex-president, Udupi Zilla Panchayath, Shri Sadashiva D. Paduvari, Nominated Member, Town Panchayath, Byndoor, Shri Kapsi Noor Mohammed, Vice President, Shiroor Grama Panchayath, Shri Nagesh Kharvi, President, Nadadoni State Association, Shri Mobi P.C. President, Bar Association, Byndoor, will be the Guests of honour.Apart from this the 9th ATM will be inaugurated at Belman on 09.08.2025, 10th ATM at Surathkal on 10.08.2025 and shifting of Kulshekar Branch to own premises & 11th ATM inauguration on 17.08.2025, 12th ATM at Kinnigoli on 14.09.2025, 13th ATM at Udupi on 27.09.2025 and 14th ATM at Santhekatte on 05.10.2025.The bank has been providing various financial products, including locker facilities at low cost, affordable education loans for domestic and international studies, MSME loans, vehicle loans, housing loans, loans for house repairs, wedding, and purchase of household items. It offers gold loans without processing fees and provides ATM and mobile banking services free of charge. Deposits in the bank are insured by the Deposit Insurance and Credit Guarantee Corporation (DICGC), as per the guidelines of the Reserve Bank of India (RBI).Present in the meeting:Anil Lobo – Chairman, Jerald Jude D’Silva – Vice Chairman, Andrew D’Souza, Dr Gerald Pinto, Anil Patrao, J.P. Rodrigues, David D’Souza, Elroy Kiran Crasto, Herald Monteiro, Roshan D’Souza, Melvyn Vas, Vincent Lasrado, C.G. Pinto, Sushanth Saldanha, Irene Rebello, Dr Freeda D’Souza, Alwyn Monteiro, Felix D’Cruz, Sharmila Menezes – Directors and Sunil Menezes – General Manager. Press Meet: Wednesday, July 30, 2025 at 12.15 pm, Board meeting hall, HO, MCC Bank, Hampankatta, Mangaluru. Kannada and English Press Notes have been emailed to the respective email IDs too.

ಪ್ರಾದೇಶಿಕ ವಾರ್ತೆಗಳು

ಗುರುಪುರ ಕಾಲೇಜು – ಪಿಂಗಾರ ತುಳು ಸಂಘದ ಆಟಿದ ಕೂಟ. ‘ಆಟಿ ಅನಿಷ್ಟವಲ್ಲ; ಬದುಕಿಗೆ ನಿಷ್ಠ’: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಅನ್ಯ ಉದ್ಯೋಗವಿಲ್ಲದೆ ಕೇವಲ ಕೃಷಿ ಕಾಯಕದಲ್ಲಿ ತೊಡಗಿದ್ದ ನಮ್ಮ ಹಿರಿಯರು ತೀರಾ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿದ್ದ ಕಾಲ ಆಟಿ. ಆಗ ತೀವ್ರ ಬಡತನ, ನಿರುದ್ಯೋಗ ಮತ್ತು ರೋಗರುಜಿನಗಳಿಂದ ಜನ ನರಳುತ್ತಿದ್ದರು. ಆದರೆ ಆಟಿ ಅನಿಷ್ಟವೆಂದು ಅವರೆಂದೂ ಭಾವಿಸಿರಲಿಲ್ಲ; ಅದು ಅವರ ಬದುಕಿಗೆ ನಿಷ್ಠವಾಗಿತ್ತು. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನೇ ಸೇವಿಸಿ ದಿನ ದೂಡುತ್ತಿದ್ದವರಿಗೆ ಆಹಾರವೇ ಔಷಧಿಯೂ ಆಗಿತ್ತು’ ಎಂದು ವಿಶ್ರಾಂತ ಪ್ರಾಧ್ಯಾಪಕ, ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ‘ಪಿಂಗಾರ’ ತುಳು ಸಂಘದ ಆಶ್ರಯದಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಟಿಪಳ್ಳ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನುಸೂಯ ಕೆ.ಪಿ. ತೆಂಗಿನ ಗರಿ ಅರಳಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಾಲ್ಯಪದವು ಸರಕಾರಿ ಕಿರಿಯ ಕಾಲೇಜಿನ ಇತಿಹಾಸ ಉಪನ್ಯಾಸಕ ಕೇಶವ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕಿಶೋರಿ ಬಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕಿ ವಯೋಲಾ ಸಿಕ್ವೇರಾ, ವಿದ್ಯಾರ್ಥಿ ನಾಯಕರಾದ ಚರಣ್ ರಾಜ್ ಮತ್ತು ಚೈತನ್ಯ ವೇದಿಕೆಯಲ್ಲಿದ್ದರು.‘ಪಿಂಗಾರ’ ತುಳು ಸಂಘದ ಸಂಚಾಲಕ, ಉಪನ್ಯಾಸಕ ಗಿರೀಶ್ ಎಂ. ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ವೇದಾ ಎಂ. ವಂದಿಸಿದರು. ವಿಧ್ಯಾರ್ಥಿನಿ ವೈದೇಹಿ ರಾವ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ಆಟಿ ವಿಶೇಷತೆ ಬಗ್ಗೆ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯ್ತು.

ಪ್ರಾದೇಶಿಕ ವಾರ್ತೆಗಳು

ಎನ್. ನಾಗೇಂದ್ರ ಅವರಿಗೆ ಕುವೆಂಪು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ದರ್ಶನ್ ಸೋಶಿಯಲ್ ಕಲ್ಚರ್ ಅಕಾಡೆಮಿ ಬೆಂಗಳೂರು ಫಿಟ್ ಇಂಡಿಯಾ ಎನ್ ವೈ ಕೆ ಎಸ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಪ್ರತಿ ವರ್ಷ ಆಚರಿಸುವ ಕುವೆಂಪು ರವರ ಸರ್ವ ಜನಾಂಗದ ಶಾಂತಿಯ ತೋಟ ಸಮಾರಂಭದ 99ನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಎನ್ ನಾಗೇಂದ್ರ ರವರ ಗಾಯನ ಕ್ಷೇತ್ರ ಹಾಗೂ ಬಹುಮುಖ ಪ್ರತಿಭೆ ಸಾಧನೆ ಸೇವೆ ಇವುಗಳನ್ನು ಪರಿಗಣಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಮಾನವ ಕುವೆಂಪು ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ 2025 ನೀಡಿ ಗೌರವಿಸಿರುತ್ತಾರೆ. ಈ ಸಂದರ್ಭದಲ್ಲಿ ಹೆಸರಾಂತ ವೈದ್ಯರಾದ ಡಾ. ಅಂಜನಪ್ಪ, ಖ್ಯಾತ ಗಾಯಕರಾದ ಶಶಿಧರ್ ಕೋಟೆ,ಚಲನಚಿತ್ರ ನಟರಾದ ಗಣೇಶ್ ರಾವ್ ಕೆ ಸರ್ಕಾರ್, ನವೀನ್ ಶಂಕರ್,ರಾಜೀವ್ ಹನು,ದೀಪಿಕಾ ಆರಾಧ್ಯ,ಚಲನಚಿತ್ರ ನಿರ್ಮಾಪಕ ಶ್ರೀ ಮಹೇಂದ್ರ ಮುನೋತ್ ಹಾಗೂ DCA ಸಂಸ್ಥೆಯ ಅಧ್ಯಕ್ಷರಾದ ದರ್ಶನ್ ಮತ್ತು ರೇಣುಕಾ ಇವರು ಹಾಜರಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಜ್ಞಾನ ಪ್ರಸರಣ ಮಾಲಿಕೆ ಕಾರ್ಯಕ್ರಮ. ‘ಶಾಲಾ ಶಿಕ್ಷಣದ ಜತೆಗೆ ಸಂಸ್ಕಾರ ಕೂಡಾ ಅಗತ್ಯ’-ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಅಧ್ಯಕ್ಷ ಹರೀಶ್ ಅಡ್ಯಾರ್

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಗಳೂರು ತಾಲೂಕು ಸಮಿತಿ ವತಿಯಿಂದ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಸಹಯೋಗದಲ್ಲಿ ಸಂಸ್ಕಾರ, ಸಂಸ್ಕೃತಿ ಜ್ಞಾನ ಪ್ರಸರಣ ಮಾಲಿಕೆ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಪುಸ್ತಕಗಳ ಕೊಡುಗೆ ಕಾರ್ಯಕ್ರಮ ನಗರದ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಅಧ್ಯಕ್ಷ ಹರೀಶ್ ಅಡ್ಯಾರ್ ಮಾತನಾಡಿ ‘ ಶಿಕ್ಷಣದ ಜತೆಗೆ ಸಂಸ್ಕಾರ ಕೂಡಾ ಅಗತ್ಯ. ಶಿಕ್ಷಣ ಜ್ಞಾನ ನೀಡಿದರೆ, ಒಳ್ಳೆಯ ಸಂಸ್ಕಾರ ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ ಎಂದರು.ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ನಿಖಿಲ್ ಸುವರ್ಣ, ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಡಿಸೋಜಾ, ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಭಾಸಾಪ ಮಂಗಳೂರು ತಾಲೂಕು ಸಮಿತಿ ಉಪಾಧ್ಯಕ್ಷೆ ಚಂದ್ರಪ್ರಭಾ ದಿವಾಕರ್, ಜತೆ ಕಾರ್ಯದರ್ಶಿ ರವಿಕಲಾ ಸುಂದರ್, ರೋಟರಿ ಸದಸ್ಯರಾದ ಗೋಪಾಲಕೃಷ್ಣ ಶೆಟ್ಟಿ, ನಿತಿನ್ ಅತ್ತಾವರ, ಅಶೋಕ್ ಉಜ್ಜೋಡಿ, ಶಾಲಾ ಶಿಕ್ಷಕಿಯರಾದ ಶೋಭಾ.ಎಂ., ಜೆಸಿಂತಾ ಲೋಬೊ, ರಾಜೇಶ್ವರಿ ಪ್ರಭು, ನಮಿತಾ.ಬಿ., ಶಿವರಂಜನಿ, ಸುನೀತಾ, ಶೋಭಾ, ವಿನಯ ಉಪಸ್ಥಿತರಿದ್ದರು.ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಡಾ.ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಕೋಶಾಧಿಕಾರಿ ಬೀನಾ ವಂದಿಸಿದರು. ಶಿಕ್ಷಕಿ ಮಮತಾ.ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಜು.31ರಂದು ಬಿ.ಕೆ.ದೇವ ರಾವ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಜು.31ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭತ್ತದ ತಳಿ ಸಂರಕ್ಷಕ, ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಬಿ.ಕೆ.ದೇವ ರಾವ್ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಸ್ವಸ್ತಿಕಾ ನ್ಯಾಶನಲ್ ಬ್ಯುಸಿನೆಸ್ ಸ್ಕೂಲ್‌ನ ಚೇರ್ಮನ್ ಡಾ.ರಾಘವೇಂದ್ರ ಹೊಳ್ಳ .ಎನ್.ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್.ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

Gratitude is the Best Attitude: Bishop Peter Paul Saldanha at Educare Scholarship Event

Mangalore, July 27, 2025 – “Gratitude is the best attitude. Never forget the sacrifices of your parents, the support of your teachers, and the guidance of your priests. You are the shining stars of the Mangalorean Konkani Catholic community, known globally for its talent and generosity,” said Most Rev. Dr. Peter Paul Saldanha, Bishop of Mangalore. He was addressing scholars and their parents at the symbolic distribution of the Educare interest-free loan scholarship, managed by the Catholic Organization for Development and Peace (CODP), Diocese of Mangalore, at Rosario Cathedral.The Educare scholarship, instituted in 2013 by NRI entrepreneur, philanthropist, and founder of the Vision Konkani program, Michael D’Souza, and his family, has completed 12 years. To date, it has disbursed ₹29 crore in interest-free loans to students pursuing higher education. The beneficiaries include 125 doctors, 762 engineers, 491 nurses, 904 postgraduates, 1,013 graduates, and 137 diploma holders. Of this, ₹20 crore has been repaid by beneficiaries, with ₹9 crore in ongoing loans.For the academic year 2025–26, ₹1,90,10,000 was distributed to 220 students, including 87 graduates, 43 postgraduates, 52 engineering students, 31 nursing students, and 7 medical students. For the academic year 2024–25, ₹2,45,47,000 was awarded to 284 students, comprising 46 graduates, 58 postgraduates, 72 engineering students, 84 nursing students, and 24 medical students.Citing the example of Thomas Alva Edison, whose mother’s unwavering support shaped his career despite a teacher labeling him “addled,” Bishop Saldanha urged scholars to remember Michael D’Souza’s unconditional support, likening him to a parental figure.Rev. Fr. Vincent D’Souza, Director of CODP, welcomed the gathering and led the prayer, describing Michael D’Souza as a “missionary of social development” for the Diocese of Mangalore. In a motivational talk, Mr. D’Souza shared insights from his life, stating, “In our time, a graduation was considered higher education. Today, higher education is common but costly, often unaffordable for middle-class families. CODP has processed 9,000 loans under the Educare program.” He added, “Wealth comes and goes, but knowledge stays. Ensure money and qualifications don’t go to your head. Always practice gratitude, and never forget your parents, mother tongue, and motherland.”Scholars Melisha Priya Quadras (Kinnigoli), Shallet Rebello (Mulky), Joyce Sharal D’Souza (Pangala), Nirmala (Kadaba), Pradeep Pinto (Bejai), Sharal D’Souza (Mariashram), Nishmitha (Vittal), and Anish D’Souza (Germany) expressed heartfelt gratitude to Michael D’Souza, his family, and CODP.Educare panel member Prof. Richard Alvares addressed the students, emphasizing the “5G philosophy” – God, Goal, Gratefulness, Growth, and Gift. “Invest time wisely and believe in yourself – that’s the mantra for success,” he said, citing recent regional achievers.The event was attended by Mrs. Flavia D’Souza, Mr. Manu, Educare advisor Prof. CA Lionel Aranha, former banker Stephen Pinto, educationist Oswald Rodrigues, and Henry D’Souza.Ms. Shiny D’Souza, an Educare scholar, compered the program, and Rev. Fr. Lawrence Cutinha, Assistant Director of CODP, proposed the vote of thanks. Over 500 students and parents attended the event.

ಪ್ರಾದೇಶಿಕ ವಾರ್ತೆಗಳು

ಮೈಕಲ್ ಡಿ ಸೊಜಾ – ಸಿಒಡಿಪಿ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನ ವಿತರಣೆ

ಮಂಗಳೂರು, ಜುಲೈ 27, 2025 – “ಕೃತಜ್ಞತೆಗಿಂತ ಶ್ರೇಷ್ಠ ಗುಣಧರ್ಮವಿಲ್ಲ. ನಿಮ್ಮ ಪೋಷಕರ ತ್ಯಾಗ, ಶಿಕ್ಷಕರ ಬೆಂಬಲ ಮತ್ತು ಧರ್ಮಗುರುಗಳ ಮಾರ್ಗದರ್ಶನವನ್ನು ಎಂದಿಗೂ ಮರೆಯಬೇಡಿ. ಇಂದಿನ ವಿದ್ಯಾರ್ಥಿಗಳಾದ ನೀವು ಭವಿಷ್ಯದ ಸಮಾಜದ ಉಜ್ವಲ ಹೊಳೆಯುವ ನಕ್ಷತ್ರಗಳಾಗಿರುತ್ತೀರಿ.” ಎಂದು ಮಂಗಳೂರಿನ ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ದಾನ್ಹಾ ಹೇಳಿದರು. ಥಾಮಸ್ ಆಲ್ವಾ ಎಡಿಸನ್‌ರ ಉದಾಹರಣೆಯನ್ನು ಉಲ್ಲೇಖಿಸಿ, ಶಿಕ್ಷಕರು “ಮಂದಬುದ್ಧಿ” ಎಂದು ಕರೆದರೂ ಅವರ ತಾಯಿಯ ಅಚಲ ಬೆಂಬಲವು ಅವರನ್ನು ಶ್ರೇಷ್ಠ ವಿಜ್ಞಾನಿಯನ್ನಾಗಿ ರೂಪಿಸಿತು ಎಂದು ಬಿಷಪ್ ಸಲ್ದಾನ್ಹಾ, ವಿದ್ಯಾರ್ಥಿಗಳಿಗೆ ಮೈಕಲ್ ಡಿ’ಸೋಜಾರವರ ನಿಃಸ್ವಾರ್ಥ ಬೆಂಬಲವನ್ನು ಮರೆಯದಿರಲು, ಅವರನ್ನು ಪೋಷಕರ ಸ್ಥಾನದಲ್ಲಿ ಗುರುತಿಸಲು ಒತ್ತಾಯಿಸಿದರು. ಅವರು ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಕ್ಯಾಥೊಲಿಕ್ ಆರ್ಗನೈಸೇಶನ್ ಫಾರ್ ಡೆವಲಪ್‌ಮೆಂಟ್ ಆಂಡ್ ಪೀಸ್ (CODP), ಮಂಗಳೂರು ಧರ್ಮಪ್ರಾಂತದಿಂದ ನಿರ್ವಹಿಸಲ್ಪಡುವ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನದ ವಿತರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.ಎಡ್ಯುಕೇರ್ ವಿದ್ಯಾರ್ಥಿವೇತನವನ್ನು 2013 ರಲ್ಲಿ ಎನ್‌ಆರ್‌ಐ ಉದ್ಯಮಿ, ದಾನಿ ಮತ್ತು ವಿಷನ್ ಕೊಂಕಣಿ ಕಾರ್ಯಕ್ರಮದ ಸಂಸ್ಥಾಪಕ / ಪ್ರವರ್ತಕ ಮೈಕಲ್ ಡಿ’ಸೋಜಾ ಮತ್ತು ಅವರ ಕುಟುಂಬವು ಸ್ಥಾಪಿಸಿದ್ದು, ಇದು 12 ವರ್ಷಗಳನ್ನು ಪೂರೈಸಿದೆ. ಇದುವರೆಗೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ₹29 ಕೋಟಿ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನ ವಿತರಿಸಿದೆ. ಫಲಾನುಭವಿಗಳಲ್ಲಿ 125 ವೈದ್ಯರು, 762 ಎಂಜಿನಿಯರ್‌ಗಳು, 491 ನರ್ಸ್‌ಗಳು, 904 ಸ್ನಾತಕೋತ್ತರ ವಿದ್ಯಾರ್ಥಿಗಳು, 1,013 ಪದವೀಧರರು ಮತ್ತು 137 ಡಿಪ್ಲೊಮಾ ಹೊಂದಿದವರು ಸೇರಿದ್ದಾರೆ. ಇದರಲ್ಲಿ ₹20 ಕೋಟಿಯನ್ನು ಫಲಾನುಭವಿಗಳು ಮರುಪಾವತಿಸಿದ್ದಾರೆ, ಮತ್ತು ₹9 ಕೋಟಿ ಪ್ರಸ್ತುತ ಚಾಲ್ತಿಯಲ್ಲಿದೆ.2024–25 ಶೈಕ್ಷಣಿಕ ವರ್ಷಕ್ಕೆ, 284 ವಿದ್ಯಾರ್ಥಿಗಳಿಗೆ ₹2,45,47,000 ವಿತರಿಸಲಾಗಿದ್ದು, ಇದರಲ್ಲಿ 46 ಪದವೀಧರರು, 58 ಸ್ನಾತಕೋತ್ತರ ವಿದ್ಯಾರ್ಥಿಗಳು, 72 ಎಂಜಿನಿಯರಿಂಗ್ ವಿದ್ಯಾರ್ಥಿಗಳು, 84 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 24 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಪ್ರಸ್ತುತ 2025–26 ಶೈಕ್ಷಣಿಕ ವರ್ಷಕ್ಕೆ, 220 ವಿದ್ಯಾರ್ಥಿಗಳಿಗೆ ₹1,90,10,000 ವಿತರಿಸಲಾಗಿದ್ದು , ಇದರಲ್ಲಿ 87 ಪದವೀಧರರು, 43 ಸ್ನಾತಕೋತ್ತರ ವಿದ್ಯಾರ್ಥಿಗಳು, 52 ಎಂಜಿನಿಯರಿಂಗ್ ವಿದ್ಯಾರ್ಥಿಗಳು, 31 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 7 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಸಿಒಡಿಪಿ ಯ ನಿರ್ದೇಶಕ ವಂ. ವಿನ್ಸೆಂಟ್ ಡಿ’ಸೋಜಾ ಸ್ವಾಗತಿಸಿ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾದಾನಿ ಮೈಕಲ್ ಡಿ’ಸೋಜಾರವರನ್ನು ಮಂಗಳೂರು ಧರ್ಮಪ್ರಾಂತ್ಯದ “ಸಾಮಾಜಿಕ ಅಭಿವೃದ್ಧಿಯ ಮಿಷನರಿ” ಎಂದು ವಂ| ವಿನ್ಸೆಂಟ್ ಡಿ ಸೊಜಾ ಬಣ್ಣಿಸಿದರು.ಪ್ರೇರಕ ಭಾಷಣದಲ್ಲಿ, ಶ್ರೀ ಮೈಕಲ್ ಡಿ’ಸೋಜಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, “ನಮ್ಮ ಕಾಲದಲ್ಲಿ ಪದವಿಯೇ ಉನ್ನತ ಶಿಕ್ಷಣವಾಗಿತ್ತು. ಇಂದು ಉನ್ನತ ಶಿಕ್ಷಣ ಸಾಮಾನ್ಯವಾಗಿದೆ ಆದರೆ ದುಬಾರಿಯಾಗಿದೆ, ಮಧ್ಯಮ ವರ್ಗದವರಿಗೆ ಕೈಗೆಟುವುದು ಕಷ್ಟವಾಗಿದೆ. ಎಡುಕೇರ್ ಕಾರ್ಯಕ್ರಮದಡಿಯಲ್ಲಿ ಸಿಒಡಿಪಿ ಈ ವರೆಗೆ 9,000 ಸಾಲರೂಪದ ವಿದ್ಯಾರ್ಥಿ ವೇತನಗಳನ್ನು ನೀಡಿದೆ.” ಎಂದರು. ಅವರು ಮುಂದುವರೆದು, “ಸಂಪತ್ತು ಬಂದು ಹೋಗುತ್ತದೆ, ಆದರೆ ಗಳಿ ಸಿದ ಜ್ಞಾನವು ಉಳಿಯುತ್ತದೆ. ಹಣ ಮತ್ತು ಶಿಕ್ಷಣದ ಅಹಂಕಾರ ತಲೆಗೇರದಂತೆ ಎಚ್ಚರವಹಿಸಬೇಕಾಗಿದೆ. ಯಾವಾಗಲೂ ಕೃತಜ್ಞತೆಯನ್ನು ಆಚರಿಸಿ, ಮತ್ತು ಪೋಷಕರು, ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಎಂದಿಗೂ ಮರೆಯಬೇಡಿ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಾದ ಮೆಲಿಶಾ ಪ್ರಿಯಾ ಕ್ವಾಡ್ರಸ್ (ಕಿನ್ನಿಗೋಳಿ), ಶಾಲೆಟ್ ರೆಬೆಲ್ಲೋ (ಮುಲ್ಕಿ), ಜಾಯ್ಸ್ ಶರಲ್ ಡಿ’ಸೋಜಾ (ಶಂಕರಪುರ), ನಿರ್ಮಲಾ (ಕಡಬ), ಪ್ರದೀಪ್ ಪಿಂಟೋ (ಬಿಜೈ), ಶರಲ್ ಡಿ’ಸೋಜಾ (ಮರಿಯಾಶ್ರಮ), ನಿಶ್ಮಿತಾ (ವಿಟ್ಲ), ಮತ್ತು ಅನೀಶ್ ಡಿ’ಸೋಜಾ (ಜರ್ಮನಿ) ಮೈಕಲ್ ಡಿ’ಸೋಜಾ, ಅವರ ಕುಟುಂಬ ಮತ್ತು ಸಿಒಡಿಪಿಗೆ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಮೈಕಲ್ ಡಿ ಸೊಜಾ ಅವರ ಪತ್ನಿ ಶ್ರೀಮತಿ ಫ್ಲೇವಿಯಾ ಡಿ’ಸೋಜಾ, ಮಗ ಶ್ರೀ ಮನು, ಎಡುಕೇರ್ ಸಲಹಾ ಸಮಿತಿ ಸದಸ್ಯರಾದ ಲೈನಲ್ ಅರಾನ್ಹಾ, ಸ್ಟೀಫನ್ ಪಿಂಟೋ, ಒಸ್ವಲ್ಡ್ ರೊಡ್ರಿಗಸ್ ಮತ್ತು ಹೆನ್ರಿ ಡಿ’ಸೋಜಾ ಉಪಸ್ಥಿತರಿದ್ದರು.ಎಡ್ಯುಕೇರ್ ಫಲಾನುಭವಿ ಶೈನಿ ಡಿ’ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಒಡಿಪಿ ಸಹಾಯಕ ನಿರ್ದೇಶಕ ವಂ. ಲಾರೆನ್ಸ್ ಕುಟಿನ್ಹಾ ವಂದಿಸಿದರು. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಮಾನವೀಯ ಸೇವೆಗೆ ಸಮಾಜದಲ್ಲಿ ಮನ್ನಣೆ-ಡಾ.ಕೆ.ಆರ್.ಕಾಮತ್

ಮಂಗಳೂರು : ಮಾನವೀಯ ಸೇವೆಯಲ್ಲಿ ತೊಡಗುವ ಸಂಘ ಸಂಸ್ಥೆಗಳಿಗೆ ಸಮಾಜದಲ್ಲಿ ಮನ್ನಣೆ ಇದೆ. ಪರರ ನೋವಿಗೆ ಸ್ಪಂದಿಸಿ ಕೈಲಾದ ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಆರ್ಥೋ ಸರ್ಜನ್ ಡಾ.ಕೆ.ಆರ್.ಕಾಮತ್ ಹೇಳಿದರು.ಅಪಘಾತದಲ್ಲಿ ಕಾಲು ಕಳೆದುಕೊಂಡ ಬೆಳ್ತಂಗಡಿಯ ಪದ್ಮಾವತಿ ಎಂಬವರಿಗೆ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಉಚಿತವಾಗಿ ನೀಡಲಾದ ಕೃತಕ ಕಾಲು ವಿತರಿಸಿ ಅವರು ಮಾತನಾಡಿದರು.ಮಂಗಳೂರು ಪ್ರೆಸ್ ಕ್ಲಬ್‌ನ ಸಮಾಜ ಸೇವಾ ಕಾರ್ಯದ ಅಂಗವಾಗಿ ಈ ವರ್ಷ ಒಟ್ಟು ಎರಡು ಮಂದಿಗೆ ಕೃತಕ ಕಾಲು ನೀಡಲಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ತಿಳಿಸಿದರು.ಲಯನ್ಸ್ ಲಿಂಬ್ ಸೆಂಟರ್‌ನ ಮ್ಯಾನೇಜರ್ ಕೆ.ಸುರೇಶ್ ,ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಪ್ರಧಾನಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಖಜಾಂಜಿ ಪುಷ್ಪರಾಜ್.ಬಿ.ಎನ್, ಸದಸ್ಯೆ ಲಲಿತಾಶ್ರೀ ಪ್ರೀತಂ ಉಪಸ್ಥಿತರಿದ್ದರು.

Scroll to Top