ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೈಕ್ರೋಬೈಯಾಲಜಿಯಲ್ಲಿ ಸಂಶೋಧನೆಗಾಗಿ ಡಾ. ಜುಲೈನ್ ವೈಲ್ ಪಿಂಟೊ ಅವರಿಗೆ ಪಿಎಚ್‌ಡಿ ಪದವಿ ಪ್ರಧಾನ

ಮಂಗಳೂರು, ಡಾ.ಜುಲೈನ್ ವೈಲ್ ಪಿಂಟೊ ಅವರಿಗೆ “ಲೆಪ್ಟೊಸ್ಪೆೈರೋಸಿಸ್‌ಗೆ ನವೀನ ಬಯೋಮಾರ್ಕರ್‌ಗಳಾಗಿ ಮೈಕ್ರೊಆರ್‌ಎನ್‌ಎಗಳನ್ನು ಪರಿಚಲನೆ ಮಾಡುವುದು” ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧಕ್ಕಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ. ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಸೂಕ್ಷ್ಮಜೀವಿ ಜೀನೋಮಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೃಷ್ಣ ಕುಮಾರ್ ಬಿ. ಅವರ ಮಾರ್ಗದರ್ಶನದಲ್ಲಿ ತಮ್ಮ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿದ್ದರು.ನಗರದ ಕುಲಶೇಖರ ನಿವಾಸಿಯಾಗಿರುವ ಡಾ.ಜುಲೈನ್ ಪಿಂಟೋ ಅವರು ರೋನಾಲ್ಡ್ ಜೆ. ಪಿಂಟೋ ಮತ್ತು ನೊರೀನ್ ಪಿಂಟೋ ದಂಪತಿಯ ಪುತ್ರಿ ಹಾಗೂ ರೈನರ್ ಗೆವೆನ್ ಪಿಂಟೋ ಅವರ ಸಹೋದರಿ.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡ ಮಾದರಿ -ಸಚಿವ ದಿನೇಶ್ ಗುಂಡೂರಾವ್ ಶ್ಲಾಘನೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣವಾಗಿರುವ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡವನ್ನು ಶುಕ್ರವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವೀಕ್ಷಿಸಿ‌ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ಕೇಂದ್ರದಲ್ಲಿ ದ.ಕ.ರೆಡ್ ಕ್ರಾಸ್ ಸಂಸ್ಥೆ ಸಭಾಂಗಣ ಸಹಿತ ಸುಸಜ್ಜಿತ ಕಟ್ಟಡ ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ರೆಡ್ ಕ್ರಾಸ್ ನ ಸೇವಾಕಾರ್ಯಗಳಿಗೆ ನೂತನ ಕಟ್ಟಡ ಇನ್ನಷ್ಟು ಶಕ್ತಿ ನೀಡಲಿ ಎಂದು ಸಚಿವರು ಹಾರೈಸಿದರು.ರೆಡ್ ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ಸಚಿವರನ್ನು ಗೌರವಿಸಿದರು.ಎಂಎಲ್ ಸಿ ಐವನ್ ಡಿಸೋಜಾ, ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್, ಖಜಾಂಜಿ ಮೋಹನ್ ಶೆಟ್ಟಿ.ಕೆ., ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ , ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಪಿ.ಬಿ.ಹರೀಶ್ ರೈ , ಮಾಜಿ ಕಾರ್ಪೋರೇಟರ್ ಎ.ಸಿ.ವಿನಯರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ,ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್ .ಡಿ.ಎಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ ಕ್ಷೇತ್ರ:ಪ್ರಮೋದ್ ಮಧ್ವರಾಜ್

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಭಾಗವಹಿಸಿ ಮಠದ ಆವರಣದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆಗೊಳಿಸಿದರು.ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರತಿಷ್ಠಿತ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರವು ದೇವಸ್ಥಾನಗಳ ಪರಿಕಲ್ಪನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟ ವಿಗ್ರಹ ಅಮ್ಮನವರ ಸಂಕಲ್ಪದಿಂದಬಹಳ ಸುಂದರವಾಗಿ ಮೂಡಿಬಂದಿದೆ. ಇದು ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆಅಮ್ಮನ ಅನುಗ್ರಹದಿಂದ ಇಲ್ಲಿ ನಡೆಯುತ್ತಿರುವ ಮಾನವೀಯ ಸೇವಾ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯರವರು ಅತಿಥಿಯಾಗಿ ಭಾಗವಹಿಸಿ ಆಶ್ರಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಮಾಜಮುಖಿ ಸೇವಾಕಾರ್ಯದಲ್ಲಿ ಸಹಕಾರ ನೀಡುವ ಭರವಸೆ ನೀಡಿದರು. ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಗೌರವಾರಪಣೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.ಡಾ.ದೇವದಾಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಡಾ.ವಸಂತ ಕುಮಾರ್ ಪೆರ್ಲ,ಮುರಳೀಧರ್ ಶೆಟ್ಟಿ, ಡಾ ಸನತ್ ಹೆಗ್ಡೆ,ಶ್ರುತಿ ಹೆಗ್ಡೆ,ಸಿ.ಎ.ರಾಮನಾಥ್ ,ಡಾ ಸುಚಿತ್ರಾ ರಾವ್,ಪ್ರೇಮರಾಜ್,ಪ್ರವೀಣ್ ಶಬರೀಶ್ ಮೊದಲಾದ ಪದಾಧಿಕಾರಿಗಳು ಭಾಗವಹಿಸಿದ್ದರು.ಮಹಾಗಣಪತಿ ಹೋಮ,ಮಹಾ ಮೃತ್ಯುಂಜಯ ಹೋಮ,ಗುರುಹೋಮ, ಸರ್ವೈಶ್ವರ್ಯ ಸೌಭಾಗ್ಯ ಪೂಜೆ :ಗುರು ಪೂರ್ಣಿಮಾ ಪ್ರಯುಕ್ತ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಪೂರ್ವಾಹ್ನ ಮಹಾ ಗಣಪತಿ‌ಹೋಮ,ಗುರು ಹೋಮ, ಮಹಾ ಮೃತ್ಯುಂಜಯ ಹೋಮ ಹಾಗೂ ಸರ್ವೈಶ್ವರ್ಯ ಸೌಭಾಗ್ಯ ಪೂಜೆ ನೆರವೇರಿಸಲಾಯಿತು. ಗುರು ಪೂಜಾ ಸಮಾರೋಪ:48ದಿನಗಳ ಗುರು ಪೂಜಾ ಕಾರ್ಯಕ್ರಮದ ಸಮಾರೋಪವು ಶ್ರದ್ಧಾ ಭಕ್ತಿಗಳಿಂದ ನಡೆಯಿತು.ಸ್ವಾಮಿನಿ ಮಂಗಳಾಮೃತ ಪ್ರಾಣರವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಮಾರ್ಗದರ್ಶನವಿತ್ತರು.ಅವರು ಆಶೀರ್ವಚನವಿತ್ತುಗುರುಪೂರ್ಣಿಮಾ ಪ್ರಯುಕ್ತ ಆಚರಣೆ ಮಾಡುವ‌ ಗುರು ಪೂಜೆಯ ಮಹತ್ವವನ್ನು ತಿಳಿಸಿದರು.ಸದ್ಗುರುವಿನೊಂದಿಗೆ ಭಕ್ತರ ಬಾಂಧವ್ಯವನ್ನು ಸುಭದ್ರ ಗೊಳಿಸಲು ಗುರುಪೂಜೆ ಅತ್ಯುತ್ತಮ ಮಾರ್ಗ ಎಂದರು.ಕಳೆದ ನಲ್ವತ್ತೆಂಟು ದಿನಗಳಿಂದ ಮನೆಯಲ್ಲಿಯೇ ಕುಳಿತು ಶ್ರದ್ಧೆಯಿಂದ ಗುರುಪೂಜೆಯನ್ನು ಇಲ್ಲಿ ನೀಡಲ್ಪಟ್ಟ ಮಾರ್ಗದರ್ಶನದಂತೆ ನಡೆಸುತ್ತಾ ಬಂದ ಭಕ್ತರು ತಮ್ಮ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಗುರುಪೂಜೆಯಲ್ಲಿ ಭಾಗವಹಿಸಿದವರಿಗೆ ಅಮೃತಪುರಿಯ ವಿಶೇಷ ಪ್ರಸಾದ ವಿತರಣೆ, ಭಕ್ತರಿಂದ ಕ್ಷೀರಾಭಿಷೇಕ, ಗುರು ಪಾದುಕಾ ಪೂಜೆ ಹಾಗೂ ಸುಶ್ರಾವ್ಯ ಭಜನೆಗಳು ಭಕ್ತರನ್ನು ಸಂತೃಪ್ತಗೊಳಿಸಿತು.ಆಗಮಿಸಿದ ಎಲ್ಲರಿಗೂ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕರಾವಳಿ ಕರ್ನಾಟಕದ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ನೀರು ಮಾರ್ಗದ ಕೆಸರು ಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ

ಮಂಗಳೂರು, ಜು.27;ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಹಾಗೂ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು, ರೋಶನಿ ನಿಲಯ ಸಹಭಾಗಿತ್ವದಲ್ಲಿ ಪತ್ರಕರ್ತರ ತಾಲೂಕು ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ರವಿವಾರ ನೀರುಮಾರ್ಗ ಪಡು ಬದಿನಡಿ ಸಮೀಪದ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ ಕಾರ್ಯಕ್ರಮ ನಡೆಯಿತು.ವಿಡಿಯೋ ಜರ್ನಲಿಸ್ಟ್ ದಿ. ನಾಗೇಶ್ ಪಡು ವೇದಿಕೆಯಲ್ಲಿ ಬೆಳಗ್ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಪತ್ರಕರ್ತರು,ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದರು.ಈ ಸಂದರ್ಭದಲ್ಲಿ ವಿಶೇಷವಾಗಿ ತುಳುನಾಡಿನ ತಿಂಡಿ- ತಿನಸುಗಳು ವಿಶೇಷ ಆಕರ್ಷಣೆ ಯಾಗಿತ್ತು. ಪ್ರಗತಿಪರ ಕೃಷಿಕ ಪದ್ಮನಾಭ ಕೋಟ್ಯಾನ್, ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿ ಸಿದರು‌.ನೀರು ಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಚಿಕ್ಕ ಬೆಟ್ಟು ಅಧ್ಯಕ್ಷತೆ ವಹಿಸಿ ದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಿವಿಧ ಸ್ಪರ್ಧೆ ಗಳಿಗೆ ಚಾಲನೆ ನೀಡಿದರು.ಪಡು ಶ್ರೀ ವಿಘ್ನೇಶ್ವರ ಗ್ರಾಮೀಣಾ ಭಿವೃದ್ಧಿ ಸೇವಾಸಮಿತಿಯ ಅಧ್ಯಕ್ಷ ಜಯಂತ್ ಅಮೀನ್ ಕೋರೆಟ್ಟು ವೈಯಕ್ತಿಕ ಸ್ಪರ್ಧೆ ಗಳಿಗೆ ಚಾಲನೆ ನೀಡಿದರು.ಮುಖ್ಯ ಅತಿಥಿಗಳಾಗಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ಶುಭ ಹಾರೈಸಿದರು.ರಾಜ್ ಕುಮಾರ್ ಶೆಟ್ಟಿ ತಿರುವೈಲು,ಸತೀಶ್ ಅಂಚನ್ ಕಂಪ, ಸಂತೋಷ್ ಕುಮಾರ್, ಗೋಪಾಲ ಕೃಷ್ಣ ಭಂಡಾರಿ ಪಡು,ಕುಂಞಣ್ಣ ಶೆಟ್ಟಿ ಕೋರೆಟ್ಟುಗುತ್ತು,ತಿಲಕ ರಾಜ್ ಕೋರಟ್ಟು,.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್,ಮಂಗಳೂರು ಪ್ರೆಸ್ ಕ್ಲಬ್ ನ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ, ಕಾರ್ಯಕಾರಿ ಸಮಿತಿ ಸದಸ್ಯ ವಿಲ್ಫ್ರೆಡ್ ಡಿ ಸೋಜ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕಾರ್ಯದರ್ಶಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಡಾ. ಸದಾನಂದ ಪೂಜಾರಿ ಯವರಿಗೆ ಡಾಕ್ಟರ್ಸ್ ಅವಾರ್ಡ್

ಬೆಂಗಳೂರು – ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿಯವರಿಗೆ ಸುವರ್ಣ ನ್ಯೂಸ್ ಚಾನಲ್ ಮತ್ತು ಕನ್ನಡ ಪ್ರಭ ಪತ್ರಿಕೆಯು ಡಾಕ್ಟರ್ಸ್ ಅವಾರ್ಡ್ ನೀಡಿ ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

The Skin Clinic Introduces South India’s First Lumenis Legend Pro Device

Mangaluru: The Skin Clinic, located at Kadri Kambla in Mangaluru, has installed Legend Pro, an advanced dermatological device from Lumenis, a leading global medical technology company. This marks the first installation of its kind in South India.The new equipment was formally inaugurated by Anand G. Pai, Executive Director of the Bharath Group of Institutions. Also present on the occasion were Navdeep Sharma, Country Head of Lumenis BE India, and Dr. Vindhya Anand Pai, Chief Dermatologist and Head of The Skin Clinic.Speaking at the event, Dr. Vindhya Pai said that the clinic has introduced this next-generation technology to help individuals experience a more youthful appearance through advanced, non-invasive treatments.The Legend Pro device is approved by the U.S. FDA and offers a safe, painless, and downtime-free solution for achieving instant, radiant, and flawless skin.In addition, The Skin Clinic has also launched a new treatment called SmoothGlo, a result-oriented procedure based on Lumenis technologies including IPL, ResurFX, and Legend Pro. Introduced for the first time in India, SmoothGlo is designed to enhance skin texture, fine lines, wrinkles, and age-related facial changes.

ಪ್ರಾದೇಶಿಕ ವಾರ್ತೆಗಳು

ನಾಳೆ ದ.ಕ. ಜಿಲ್ಲಾ  ಪತ್ರಕರ್ತರ  ಸಂಘದಿಂದ ಮಾನ್ಸೂನ್ ಸಂಭ್ರಮ

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಹಾಗೂ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಸಹಭಾಗಿತ್ವದಲ್ಲಿ ಪತ್ರಕರ್ತರ ತಾಲೂಕು ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಜು.27ರಂದು ನೀರುಮಾರ್ಗ ಪಡು ಬದಿನಡಿ ಸಮೀಪದ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.ಹಿರಿಯ ವಿಡಿಯೋ ಜರ್ನಲಿಸ್ಟ್ ದಿ. ನಾಗೇಶ್ ಪಡು ವೇದಿಕೆಯಲ್ಲಿ ಬೆಳಗ್ಗೆ  9.45ಕ್ಕೆ ಕಾರ್ಯಕ್ರಮ ಆಂಭವಾಗಲಿದ್ದು,  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ.*ನಾನಾ ಸ್ಪರ್ಧೆಗಳು:* ಮಾನ್ಸೂನ್ ಸಂಭ್ರಮದಲ್ಲಿ  100ಮೀಟರ್ ಓಟ, ತೆಂಗಿನಕಾಯಿ ಬಿಸಾಡುವುದು, ಓಟ-ಸುತ್ತಾಟ, ಚೆಂಡಾಟ, ಮಡಕೆ ಒಡೆಯುವುದು, ಹಾಳೆ ಓಟ, ತಪ್ಪಂಗಾಯಿ, ನಿಧಿಹುಡುಕಾಟ, ಹಗ್ಗ-ಜಗ್ಗಾಟ, ಪಾಸಿಂಗ್ ಬಾಲ್, ಪಿಲಿನಲಿಕೆ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಲಿದೆ.ತುಳುನಾಡಿನ ತಿಂಡಿ-ತಿನಸುಗಳು:ಬೆಳಗ್ಗಿನಿಂದ ಊಟೋಪಚಾರದಲ್ಲಿ  ಪತ್ರೊಡೆ, ಪೆಲಕಾಯಿ ಗಟ್ಟಿ, ಪದೆಂಗಿ ನೀರು, ಹಲಸಿನ ರಚ್ಚೆ ಚಟ್ನಿ, ಹುರುಳಿ ಚಟ್ನಿ, ತೊಜಂಕ್-ಹಲಸಿನ ಬೀಜ ಪಲ್ಯ, ಚಿಕನ್ ಸುಕ್ಕ, ಒಣಮೀನು ಗಸಿ, ರಾಗಿ ಕಷಾಯ ಸೇರಿದಂತೆ ತುಳುನಾಡಿನ ತಿಂಡಿ-ತಿನಸುಗಳು, ಖಾದ್ಯಗಳು, ಪಾನಿಯದ ವ್ಯವಸ್ಥೆ ಮಾಡಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಎಂಸಿಸಿ ಬ್ಯಾಂಕ್ ‘ಐಡಿಯಾ ಸಮ್ಮಿತ್ 2025’ ಆಯೋಜನೆ

ಬ್ಯಾಂಕಿಂಗ್‌’ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 24, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿತ್ 2025’ (Idea Summit 2025) ಅನ್ನು ಆಯೋಜಿಸಲಾಗಿತ್ತು.ಈ ಸಮ್ಮಿತ್‌’ನ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ವಹಿಸಿದ್ದರು. ಗಣ್ಯ ಭಾಷಣಕಾರರಲ್ಲಿ ಹೆಸರಾಂತ ಎನ್‌ಆರ್‌ಐ ಉದ್ಯಮಿ ಮತ್ತು ಉದಾರ ದಾನಿ ಶ್ರೀ ಮೈಕಲ್ ಡಿಸೋಜಾ, ಎನ್‌ಐಟಿಕೆ ಸುರತ್ಕಲ್‌ನ ನಿವೃತ್ತ ಪ್ರಾಧ್ಯಾಪಕರು (HAG) ಪ್ರೊ. ಡಾ| ಅಲೋಶಿಯಸ್ ಸಿಕ್ವೇರಾ, ಆರ್‌ಎಂಸಿಆರ್ & ಕಂ., ಪಾಲುದಾರರಾದ ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್, ಚಾರ್ಟರ್ಡ್ ಅಕೌಂಟೆಂಟ್, ಆರ್ಬಿಟ್ರೇಟರ್ ಮತ್ತು IIM kozhikode ಇದರ ಅತಿಥಿ ಪ್ರಾಧ್ಯಾಪಕ ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಮತ್ತು ಅನುಭವಿ ಬ್ಯಾಂಕರ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಲೆನ್ ಸಿ. ಪಿರೇರಾ ಉಪಸ್ಥಿತರಿದ್ದರು.ಕಳೆದ ಏಳು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್‌’ನ ಗಮನಾರ್ಹ ಬೆಳವಣಿಗೆ ಮತ್ತು ಕಳೆದ 105 ವರ್ಷಗಳ ಪ್ರಗತಿಯನ್ನು ಪ್ರಸ್ತುತಪಡಿಸಲಾಯಿತು.ಮಂಗಳೂರಿನ ಬಿಷಪ್ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮತ್ತು ಉಡುಪಿಯ ಬಿಷಪ್ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಉಪಸ್ಥಿತರಿದ್ದ ಗಣ್ಯರೊಂದಿಗೆ ಸಭೆಯನ್ನು ಉದ್ಘಾಟಿಸಿದರು.ತಮ್ಮ ಉದ್ಘಾಟಣಾ ಭಾಷಣದಲ್ಲಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರು ಬ್ಯಾಂಕ್‌’ನ 113 ವರ್ಷದ ಪ್ರಯಾಣವನ್ನು ಸ್ಮರಿಸಿ 105 ವರ್ಷಗಳಲ್ಲಿ ಗಳಿಸಿದ ವ್ಯವಹಾರವನ್ನು ಕೇವಲ ಏಳು ವರ್ಷಗಳಲ್ಲಿ ದ್ವಿಗುಣಗೊಳಿಸಲು ಸಾಧ್ಯವಾದ ಪ್ರಸಕ್ತ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಕಳೆದ ಏಳು ವರ್ಷಗಳಲ್ಲಿ ಬಂದಿರುವ ಈ ವೇಗ ಮುಂದುವರಿಯಬೇಕು ಎಂದು ಹೇಳಿ ಮುಂದಿನ ಹತ್ತು ವರ್ಷಗಳಲ್ಲಿ ಬ್ಯಾಂಕ್ 100% ಬೆಳವಣಿಗೆ ಸಾಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.ಬ್ಯಾಂಕ್ ಕಳೆದ 105 ವರ್ಷಗಳ ಕಷ್ಟ-ತೊಡಕುಗಳು, ತ್ಯಾಗಗಳು ಮತ್ತು ಸಾಧನೆಗಳನ್ನು ನೆನೆಸಿ ದೇವರಿಗೆ ಧನ್ಯವಾದ ಹೇಳಬೇಕು. ಜೊತೆಗೆ, ಕಳೆದ ಏಳು ವರ್ಷಗಳಲ್ಲಿ ನಡೆದ ಪ್ರಗತಿ ಮತ್ತು ಬದಲಾವಣೆಗಳನ್ನು ಪರಿಶೀಲಿಸಬೇಕು. ಮುಂದಿನ ಹತ್ತು ವರ್ಷಗಳ ಗುರಿ ನಿಜವಾಗಿಸಲು ಆಶಾವಾದ ಮತ್ತು ದೃಢನಿಶ್ಚಯದಿಂದ ಮುಂದಿನತ್ತ ನೋಡುವಂತೆ ಅವರು ಹೇಳಿದರು. ಮುಂದಿನ ದಶಕದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ತಯಾರಿ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿ, ಬ್ಯಾಂಕ್ ತನ್ನ ದೃಷ್ಟಿಕೋನ (vision) ಮತ್ತು ಗುರಿಯನ್ನು (mission) ಮರುಪರಿಶೀಲಿಸಿ, ಇನ್ನಷ್ಟು ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಬ್ಯಾಂಕ್ ಈಗಾಗಲೇ ಪಾರದರ್ಶಕತೆ (transparency) ಮತ್ತು ಹೊಣೆಗಾರಿಕೆ (accountability) ಅಳವಡಿಸಿಕೊಂಡಿರುವುದನ್ನು ನೋಡಿ ಅವರು ಸಂತೋಷ ವ್ಯಕ್ತಪಡಿಸಿದರು. ಸಮಾಜದತ್ತ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕವೆಂದು ಅವರು ಹೇಳಿದರು. ಹೊಸ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), ಕಡೆಗೆ ಬ್ಯಾಂಕ್ ತಕ್ಕ ರೀತಿಯಲ್ಲಿ ಹೊಂದಿಕೊಳ್ಳಬೇಕು ಮತ್ತು ಭವಿಷ್ಯಮುಖಿ ದೃಷ್ಟಿಕೋನವನ್ನು ಹೊಂದಬೇಕೆಂದು ಈ ಸಭೆಯ ಮೂಲಕ ಪ್ರೇರಣೆ ನೀಡಿದರು.ಮಂಗಳೂರು ಧರ್ಮಾಧ್ಯಕ್ಷರಾದ ಬಿಷಪ್ ಡಾ| ಪೀಟರ್ ಪಾಲ್ ಸಲ್ದಾನ್ಹಾ ಅವರು ತಮ್ಮ ಭಾಷಣದಲ್ಲಿ, ಕಳೆದ ಏಳು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿದ ಯಶಸ್ಸಿಗೆ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಅವರು ನಗು ಮುಖದಿಂದ ಉತ್ತಮ ಸೇವೆ ನೀಡುವುದನ್ನು ಮುಂದುವರಿಸಲು ಸೂಚಿಸಿದರು,ಬ್ಯಾಂಕ್ ನೀಡುತ್ತಿರುವ ವಿಶೇಷ ಸೇವೆಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಹಕರಿಗೆ ಮನಸ್ಸಿಗೆ ಹತ್ತಿರವಾದ ಭಾಷೆಯಲ್ಲಿ ಮಾತನಾಡುವುದು ಬಹಳ ಮುಖ್ಯವೆಂದು ಸಲಹೆ ನೀಡಿದರು. ಭಾಷಣಕಾರರ ಒಳ್ಳೆಯ ಮಾತುಗಳಿಗೆ ಧನ್ಯವಾದ ಹೇಳಿ, ಯುವಜನರಿಗೆ ಬ್ಯಾಂಕಿಂಗ್ ಬಗ್ಗೆ ಅರಿವು ನೀಡಲು ಮತ್ತು ಎಂಎಸ್‌ಎಂಇ ಸಾಲಗಳ ಮೂಲಕ ಅವರ ಶಕ್ತಿಗೆ ಬಲ ನೀಡಲು ಚಿಂತನೆಯನ್ನು ಪ್ರಾರಂಭಿಸಲು ಸಲಹೆ ನೀಡಿದರು.ಬ್ಯಾಂಕಿನ ಎಲ್ಲ ಸಿಬ್ಬಂದಿಯೂ ಸ್ಪರ್ಧಾತ್ಮಕವಾಗಿ ಕೆಲಸ ಮಾಡಲು ಸಿದ್ಧರಾಗಿರಬೇಕು. ಮನೆಮನೆಗೂ, ಹಳ್ಳಿಗಳಿಗೂ ಹೋಗಿ ಬ್ಯಾಂಕ್‌’ನ ಸೇವೆಗಳನ್ನು ಎಲ್ಲೆಡೆ ಪರಿಚಯಿಸಬೇಕು ಎಂದು ಹೇಳಿದರು. ಜೊತೆಗೆ, ಪ್ರತಿ ಸಮುದಾಯದ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ಹೇಳಿದರು.ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ಎಲ್ಲಾ ಗಣ್ಯರಿಗೆ ಅವರ ಅಮೂಲ್ಯ ಸಲಹೆ ಮತ್ತು ಸೂಚನೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ, ಬ್ಯಾಂಕ್ ತನ್ನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಯೋಜಿತ ಗುರಿಗಳನ್ನು ಸಾಧಿಸಿದೆ ಎಂದು ಅವರು ಹೇಳಿದರು. ಪ್ರಸ್ತುತ ನಾಯಕತ್ವದ ಅಡಿಯಲ್ಲಿ ಬ್ಯಾಂಕಿನ ಸಾಧನೆಗಳು ಮತ್ತು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವಲ್ಲಿ ಆದ ಯಶಸ್ಸನ್ನು ಅವರು ವಿವರಿಸಿದರು. ಸಭೆಯನ್ನು ಅದ್ಭುತ ಯಶಸ್ಸಿಗೆ ತರುವಲ್ಲಿ ಎಲ್ಲರ ಉಪಸ್ಥಿತಿ ಮತ್ತು ಕೊಡುಗೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.ಪ್ರಮುಖ ಭಾಷಣವನ್ನು ನೀಡಿದ ಶ್ರೀ ಮೈಕಲ್ ಡಿಸೋಜಾ ಅವರು ಬ್ಯಾಂಕಿನ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಬ್ಯಾಂಕಿನ ದೀರ್ಘಕಾಲೀನ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅಗತ್ಯವಾದ ಒಳಹರಿವುಗಳನ್ನು ಸಂಗ್ರಹಿಸುವಲ್ಲಿ ಸಮ್ಮಿತ್‌’ನ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಬಿಷಪ್‌ಗಳ ಉಪಸ್ಥಿತಿಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಇದು ಎಂಸಿಸಿ ಬ್ಯಾಂಕಿಗೆ ಅವರ ಬೆಂಬಲ ಮತ್ತು ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು. ಸವಾಲನ್ನು ಎದುರಿಸಿ ಸಾಧನೆಗೈದ ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸಮಗ್ರತೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು. ಗುಣಮಟ್ಟದ ಗ್ರಾಹಕ ಸೇವೆಯನ್ನು ಒದಗಿಸುವುದು, ಠೇವಣಿಗಳನ್ನು ಹೆಚ್ಚಿಸುವುದು, ಸಾಲ ನೀಡುವಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ವಸೂಲಾತಿ ಪ್ರಕ್ರಿಯೆಯನ್ನು ಬಲಪಡಿಸುವುದು ಮತ್ತು ಶಾಖಾ ಕಾರ್ಯಾಚರಣೆಗಳನ್ನು ನವೀಕರಿಸುವುದು ಮತ್ತು ವಿಸ್ತರಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ವಿಶ್ವಾಸವನ್ನು ಸೃಷ್ಟಿಸಲು ಎಲ್ಲಾ ಹಂತಗಳಲ್ಲಿ ಗ್ರಾಹಕರನ್ನು ತಲುಪುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಮೆ ಮತ್ತು ಮ್ಯೂಚುವಲ್ ಫಂಡ್‌ ಗಳಂತಹ ಕ್ಷೇತ್ರಗಳಲ್ಲಿ ವ್ಯಾಪಾರ ಸಹಯೋಗಗಳನ್ನು ಅನ್ವೇಷಿಸಲು ಬ್ಯಾಂಕ್’ಅನ್ನು ಪ್ರೋತ್ಸಾಹಿಸಿದ ಅವರು, ಬ್ಯಾಂಕಿಗೆ ಬ್ರ್ಯಾಂಡ್ ರಾಯಭಾರಿಗಳಾಗುವಂತೆ ಸಭೆಯಲ್ಲಿ ಹಾಜರಿದ್ದವರಿಗೆ ಕರೆ ನೀಡಿದರು.ಪ್ರೊ. ಡಾ| ಅಲೋಶಿಯಸ್ ಸಿಕ್ವೇರಾ ಅವರು ಹಿಂದಿನ ಕಾರ್ಯಾಗಾರಗಳಲ್ಲಿ ಮಾಡಿದ ಪ್ರಗತಿಯ ಬಗ್ಗೆ, ವಿಶೇಷವಾಗಿ ಬ್ಯಾಂಕ್‌’ನ ದೃಷ್ಟಿ ಕೋನ, ದ್ಯೇಯ ಮತ್ತು ಪ್ರಮುಖ ಮೌಲ್ಯಗಳನ್ನು ರೂಪಿಸುವಲ್ಲಿನ ಪ್ರಗತಿಯ ಬಗ್ಗೆ ವಿವರಿಸಿದರು. ಮುಂದಿನ 10 ವರ್ಷಗಳಲ್ಲಿ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಹೆಚ್ಚಿನ ಗುರಿಗಳನ್ನು ಹೊಂದಲು ಮತ್ತು ಈ ಮಾರ್ಗದರ್ಶಿ ತತ್ವಗಳಿಗೆ ಬದ್ಧವಾಗಿರಲು ಅವರು ಪ್ರೋತ್ಸಾಹಿಸಿದರು.ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್ ಅವರು ಪಟ್ಟಣ ಸಹಕಾರಿ ಬ್ಯಾಂಕ್ ಆಗಿರುವ ಎಮ್‌ಸಿಸಿ ಬ್ಯಾಂಕಿನ ಅನುಕೂಲಗಳನ್ನು ಎತ್ತಿ ತೋರಿಸಿದರು: ಸಮುದಾಯ-ಕೇಂದ್ರಿತ ಬ್ಯಾಂಕಿಂಗ್, ಪ್ರವೇಶದ ಸುಲಭತೆ, ವೈಯಕ್ತಿಕ ಸೇವೆ, ಸದಸ್ಯತ್ವ-ಆಧಾರಿತ ಲಾಭ ಹಂಚಿಕೆ, ಸ್ಥಳೀಯ ಅಭಿವೃದ್ಧಿಗೆ ಬೆಂಬಲ, ಮತ್ತು ಆರ್‌ಬಿಐ ಮತ್ತು ಸಹಕಾರಿ ಇಲಾಖೆ ಎರಡರಿಂದಲೂ ದ್ವಿ-ನಿಯಂತ್ರಣ. ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿನ ವೃತ್ತಿಪರ ಚಿತ್ರಣ ಮತ್ತು ಪರಿಣಾಮಕಾರಿ ಎನ್‌ಪಿಎ ನಿರ್ವಹಣೆಗಾಗಿ ಅವರು ಬ್ಯಾಂಕ್ ಅನ್ನು ಶ್ಲಾಘಿಸಿದರು. ಯುವ ಉದ್ಯಮಿಗಳಿಗೆ, ವಿಶೇಷವಾಗಿ ಎಂಎಸ್‌ಎಂಇ ವಲಯದಲ್ಲಿ, ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಬ್ಯಾಂಕಿನ ಉತ್ತಮ ಭವಿಷ್ಯಕ್ಕಾಗಿ ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದರು.ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಅವರು ಎಲ್ಲಾ ಸಮುದಾಯ ಸದಸ್ಯರಿಗೆ ಖಾತೆಗಳನ್ನು ತೆರೆಯಲು ಮತ್ತು ಸಮುದಾಯ ಅಭಿವೃದ್ಧಿಯನ್ನು ಉತ್ತೇಜಿಸಲು ಬದಲಾಗುತ್ತಿರುವ ಪ್ರವೃತ್ತಿಗಳಿಗೆ ಹೊಂದಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಬ್ಯಾಂಕ್’ಅನ್ನು ಪ್ರೋತ್ಸಾಹಿಸಿದರು. ವಿಮಾ ಸೇವೆಗಳು, ಡಿಮ್ಯಾಟ್ ಖಾತೆಗಳು, ಗುತ್ತಿಗೆ ಕೃಷಿ ಮತ್ತು ರಿವರ್ಸ್ ಅಡಮಾನಗಳಂತಹ ಹೊಸ ಆದಾಯದ ಮೂಲಗಳನ್ನು ಅನ್ವೇಷಿಸಲು ಸಲಹೆ ನೀಡಿದರು ಮತ್ತು ಉತ್ತಮವಾಗಿ ವ್ಯಾಖ್ಯಾನಿಸಲಾದ ಬೆಳವಣಿಗೆಯ ತಂತ್ರಗಳ ಅಗತ್ಯವನ್ನು ಒತ್ತಿ ಹೇಳಿದರು.ಶ್ರೀ ಅಲೆನ್ ಸಿ. ಪಿರೇರಾ ಅವರು ಪ್ರಗತಿಗೆ ಒಂದು ಸಾಧನವಾಗಿ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಸಾಮಾನ್ಯ ಜನರ ಸಾಮರ್ಥ್ಯವನ್ನು ಗುರುತಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭವಿಷ್ಯದ ಪಾಲುದಾರರಾಗಿ ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳಲು ಅವರು ಬ್ಯಾಂಕ್‌ಗೆ ಸಲಹೆ ನೀಡಿದರು.ಹಾಜರಿದ್ದ ಕೆಲವು ಗ್ರಾಹಕರು ಬ್ಯಾಂಕಿನ ಮುಂದಿನ ಬೆಳವಣಿಗೆಗೆ ಸಹಾಯ ಮಾಡಲು ತಮ್ಮ ಸಲಹೆಗಳನ್ನು ಹಂಚಿಕೊಂಡರು.ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರು ಬ್ಯಾಂಕಿನ ಪ್ರಭಾವಶಾಲಿ ಸಾಧನೆಗಳನ್ನು ಶ್ಲಾಘಿಸಿದರು ಮತ್ತು ಯಾವಾಗಲೂ ನಗುಮುಖದಿಂದ ಗುಣಮಟ್ಟದ ಸೇವೆಯನ್ನು ಮುಂದುವರಿಸುವಂತೆ ಸಿಬ್ಬಂದಿಗಳನ್ನು ಒತ್ತಾಯಿಸಿದರು.ಸಭೆಯಲ್ಲಿ ಉಪಾಧ್ಯಕ್ಷರು, ನಿರ್ದೇಶಕರು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಹಿರಿಯ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ಬ್ಯಾಂಕ್ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉನ್ನತ ಠೇವಣಿದಾರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ರೀ ಫ್ಲಾಯ್ಡ್ ಡಿಮೆಲ್ಲೋ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ

ಮಂಗಳೂರು, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರತಿನಿಧಿ ಪತ್ರಿಕೆಯ ಮಂಗಳೂರು ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಪ್ರದಾನ ಮಾಡಲಾಯಿತು.ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ನನ್ನ ಜವಾಬ್ದಾರಿ ಇನ್ನಷ್ಟ್ಟು ಹೆಚ್ಚಾಗಿದೆ. ಪತ್ರಕರ್ತರು ಸಮಾಜಮುಖಿ ಚಿಂತನೆಗಳನ್ನು ಮಾಡಿದಾಗ ಹಾಗೂ ಆಶಕ್ತರ ನೋವುಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಅಭಿವೃದ್ಧಿ ಹಾಗೂ ಬದಲಾವಣೆ ಕಾಣಬಹುದಾಗಿದೆ ಎಂದು ಹೇಳಿದರು. ನಾನು ವಿದೇಶದಲ್ಲೂ ಪ್ರಶಸ್ತಿ ಸ್ವೀಕರಿಸಿದ್ದೇನೆ. ಆದರೆ ನನ್ನ ಕೆಲಸ ಗುರುತಿಸಿ ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘ ಪ್ರಶಸ್ತಿ ನೀಡಿರುವುದು ತುಂಬಾ ಖುಷಿ ತಂದಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬದ್ರುದ್ದಿನ್ ಮಾಣಿ, ದೇರಳಕಟ್ಟೆ ವಿದ್ಯಾ ರತ್ನ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೋಟ್ಟು, ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಲ್ ಬೈಲ್, ಗಡಿನಾಡು ಪ್ರಾಧಿಕಾರದ ಸದಸ್ಯ ಸುಬ್ಬಯ್ಯ ಕಟ್ಟೆ, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಫದ ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್,ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಪ್ರಮುಖರಾದ ಗಂಗಾಧರ್, ಅಖಿಲೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಹುಬ್ಬಳ್ಳಿ ಅವ್ವ ಸೇವಾ ಟ್ರಸ್ಟ್ ನ ದತ್ತಿ ನಿಧಿ ಪ್ರಶಸ್ತಿಯ ಮೊತ್ತವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಲಾಗಿರುವ ಕುತ್ಲುರು ಸರಕಾರಿ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ನ ಸಮವಸ್ತ್ರಕ್ಕೆ ನೀಡುವುದಾಗಿ ಹೇಳಿದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಐ ಸಿ ವೈ ಎಂ ಘಟಕದಿಂದ ‘ಬುಕ್ ಡ್ರೈವ್’ ಕಾರ್ಯಕ್ರಮ

ಮಂಗಳೂರು: ಯುವ ಜನರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಮಂಗಳೂರಿನ ಪಾಲ್ದನೆಯ ಸಂತ ತೆರೆಸಾ ಚರ್ಚಿನ ಐ ಸಿ ವೈ ಎಂ ಘಟಕವು ‘ಬುಕ್ ಡ್ರೈವ್’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ಐ ಸಿ ವೈ ಎಂ ಸದಸ್ಯರು ಚರ್ಚಿನ ಸದಸ್ಯರಿಂದ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಚರ್ಚಿನ ಆಸಕ್ತ ಸದಸ್ಯರಿಗೆ ಅವರವರಿಗೆ ಬೇಕಾಗಿರುವ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಾರೆ.ಈ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಐಸಿವೈಎಂ ಸಂಘಟನೆಯು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ಮೊಬೈಲ್‌ ಯುಗದಲ್ಲಿ ಪುಸ್ತಕದ ಓದುವಿಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಐಸಿವೈಎಂ ‘ಬುಕ್‌ ಡ್ರೈವ್’ ಎಂಬ ಯೋಜನೆ ಹಮ್ಮಕೊಂಡಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್‌ ಮೊಂತೇರೊ, ಐಸಿವೈಎಂ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡಿನ ಮುಖ್ಯಸ್ಥ ರೋಶನ್‌ ಮೊಂತೇರೊ, ಘಟಕದ ಅಧ್ಯಕ್ಷ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ವಿಶೆಲ್‌ ಲೋಬೊ ಉಪಸ್ಥಿತರಿದ್ದರು.ಬುಕ್ ಡ್ರೈವ್ ಅಂಗವಾಗಿ ಮೊದಲ ಹಂತದಲ್ಲಿ ಕಥೆ, ಕಾದಂಬರಿ, ಮಾರ್ಕೆಟಿಂಗ್, ಡಿಜಿಟಲ್‌ ಸಂಬಂಧಿತ ಪುಸ್ತಕಗಳು, ಮಕ್ಕಳ ಚಾರ್ಟ್ ಗಳು, ಧಾರ್ಮಿಕ ಮತ್ತು ಆರೋಗ್ಯ ಸಂಬಂಧಿತ ಪುಸ್ತಕಗಳು, ವಿಡಂಬನಾತ್ಮಕ ಬರಹಗಳು ಮತ್ತಿತರ ಸುಮಾರು 800 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.

Scroll to Top