ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಹಿರಿಯ ನಾಟಕಕಾರ, ಸಿನಿಮಾ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

ಬೆಂಗಳೂರು: ಕಳೆದ ಬಾರಿ ಸುವರ್ಣ ಸಂಭ್ರಮವನ್ನಾಚರಿಸಿದ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026 ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ದೀಪ ಬೆಳಗಿ ಉದ್ಘಾಟಿಸಿದರು.ಸಮಾರಂಭದಲ್ಲಿ ತುಳು ರಂಗಭೂಮಿ ಸಿನಿಮಾರಂಗ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬಯ್ಯಮಲ್ಲಿಗೆ ಖ್ಯಾತಿಯ ಹಿರಿಯ ನಾಟಕಕಾರ ಡಾ.ಸಂಜೀವ ದಂಡಕೇರಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದಂಡಕೇರಿಯವರ ಪತ್ನಿ ಜಲಜಾಕ್ಷಿ ದಂಡಕೇರಿ ಮತ್ತು ಕುಟುಂಬ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್. ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ, ಖ್ಯಾತ ವಿದ್ವಾಂಸ, ವಿದ್ಯಾ ವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಡಾ. ಕೆ.ಎನ್ ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಸುಮಾ, ವಿ.ನಾಗೇಂದ್ರ, ಮಂಗಳೂರಿನ ಪ್ರತಿನಿಧಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.ಆರ್ಯಭಟ ನೃತ್ಯೋತ್ಸವದೊಂದಿಗೆ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 72ಮಂದಿ ಹಿರಿಯ ಸಾಧಕರಿಗೆ 2025 – 26 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಲ್.ಯನ್.ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ.ಬಸವರಾಜು ವಂದಿಸಿದರು. ಸಾರ್ಥವಳ್ಳಿ ನಾರಾಯಣಸ್ವಾಮಿ ಮತ್ತು ಆರ್.ವೆಂಕಟರಾಜು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಂಗಳೂರು : ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ “ಐಡಿಯಾದಿಂದ ಪ್ರಕಟಣೆಯವರೆಗೆ” ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ.ಚಾನ್ಸೆಲರ್ ಡಾ.ಎಂ. ಶಾಂತಾರಾಮ್ ಶೆಟ್ಟಿ ಮಾತನಾಡಿ ” ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ರೋಗಿಗಳ ಆರೈಕೆಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಗುಣಮಟ್ಟದ ವೈಜ್ಞಾನಿಕ ಪ್ರಕಟಣೆಗಳ ಪ್ರಾಮುಖ್ಯತೆ ಹೆಚ್ಚಿದೆ. ಯುವ ಸಂಶೋಧಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಶೈಕ್ಷಣಿಕ ಬರವಣಿಗೆ ಹಾಗೂ ಪುರಾವೆ ಆಧಾರಿತ ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕು’ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರ್ಥೋಪೆಡಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಮಾತನಾಡಿ ” ವೈದ್ಯಕೀಯ ಸಂಶೋಧನೆ ಮತ್ತು ವೈಜ್ಞಾನಿಕ ಪ್ರಕಟಣೆಗಳಲ್ಲಿ ಆಸಕ್ತಿ ಹೊಂದಿರುವ ಅಧ್ಯಾಪಕರು, ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ’ ಎಂದರು.ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮೂಳೆಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಕ್ರಮ್ ಶೆಟ್ಟಿ ಸ್ವಾಗತಿಸಿದರು. ಸಂಶೋಧನಾ ವಿಧಾನ, ಹಸ್ತಪ್ರತಿ ತಯಾರಿಕೆ, ನೈತಿಕ ಪ್ರಕಾಶನ ಅಭ್ಯಾಸಗಳು ಮತ್ತು ಸೂಚ್ಯಂಕಿತ ನಿಯತಕಾಲಿಕೆಗಳಲ್ಲಿ ಯಶಸ್ವಿ ಪ್ರಕಟಣೆಗಾಗಿ ತಂತ್ರಗಳ ಕುರಿತು ತಜ್ಞರು ಮಾಹಿತಿ ನೀಡಿದರು.

ಪ್ರಾದೇಶಿಕ ವಾರ್ತೆಗಳು

ಉರ್ವದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

ಮಂಗಳೂರು : ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ನಗರದ ಉರ್ವದ ಕಬಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಿತು.ಕರ್ನಾಟಕ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ದಿನಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ “ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಉರ್ವಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ ಸಂಘಟಿಸುವ ಮೂಲಕ ಎಳೆಯ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿತ್ತು. ಈಗ ಸಾರ್ವಜನಿಕರಿಗೆ ಅನುಕೂಲವಾಗಲುಅಂಚೆ ಜನಸಂಪರ್ಕ ಮತ್ತು ಅಪಘಾತ ವಿಮೆ ಹಾಗೂ ಆಧಾರ್ ತಿದ್ದುಪಡಿಯ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವ ಸಲಹೆಗಾರರಾದ ಪುರುಷೋತ್ತಮ್ ಪೂಜಾರಿ ಮತ್ತು ರತನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಿಲ್ಲವ ಸಂಘದ ಉಪಾಧ್ಯಕ್ಷವೆಂಕಟೇಶ್‌ದಾಸ್ , ಯೋಗೀಶ್ ಬೋಳೂರು. ಸಚಿನ್ ಬಂಗೇರ. ಯಶವಂತ ಮಾಡ. ವಿಕ್ರಂ ಹೊಯ್ಗೆಬೈಲ್. ಜೀವನ್ ಪೂಜಾರಿ ಹೊಯ್ಗೆಬೈಲ್. ಕಬೀರ್ ಕೊಂಚಾಡಿ. ರಂಜನ್ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಅಶೋಕನಗರ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪತ್ತನಾಜೆಯಲ್ಲಿ ಕೃಷಿ ಸಂಸ್ಕೃತಿ ಅಂತರ್ಗತ – ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ

ಮಂಗಳೂರು : ಪತ್ತನಾಜೆ ಆಚರಣೆಯ ಹಿಂದೆ ಈ ನೆಲದ ನಂಬಿಕೆ ಮತ್ತು ಕೃಷಿ ಸಂಸ್ಕೃತಿ ಅಂತರ್ಗತವಾಗಿದೆ. ಸಾಂಪ್ರದಾಯಿಕ ಜಾತ್ರೆ, ಉತ್ಸವ, ದೈವಾರಾಧನೆ, ಯಕ್ಷಗಾನ ಮೇಳಗಳ ತಿರುಗಾಟಕ್ಕೆ ತೆರೆ ಎಳೆಯುವ ಕೃಷಿ ವರ್ಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಗಡುವಿನಂತೆ ಪತ್ತನಾಜೆಯನ್ನು ಆಚರಿಸುತ್ತಾರೆ. ಇದೊಂದು ಕಾಲ ನಿರ್ಣಯದ ಮಹತ್ವವನ್ನು ಪಡೆದಿದೆ ಎಂದು ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಹಾಗೂ ಥಿಯಾಸೋಫಿಕಲ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ನಗರದ ಥಿಯಾಸೋಫಿಕಲ್ ಸೊಸೈಟಿ ಸಭಾಂಗಣದಲ್ಲಿನಡೆದ ಕಾರ್ಯಕ್ರಮದಲ್ಲಿ ಅವರು ಪತ್ತನಾಜೆ ಆಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಯಾಗಿದ್ದ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಮಾತನಾಡಿ ” ಚೆನ್ನಾಗಿ ಫಸಲು ಬರಲು ನೈಸರ್ಗಿಕ ಕ್ರಮವನ್ನು ಅಳವಡಿಸುವ ಮಹತ್ವದ ವಿಚಾರ ಪತ್ತನಾಜೆ ಆಚರಣೆಯ ಹಿಂದೆ ಇದೆ ಎಂದರು.ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ, ವಿದ್ವಾಂಸ ಡಾ. ಪ್ರಭಾಕರ ಜೋಷಿಉಪಸ್ಥಿತರಿದ್ದರು. ಅಭಾಸಾಪ ಕಾರ್ಯದರ್ಶಿ ಪ್ರೊ. ಶೈಲಜಾ ಪುದುಕೋಳಿ ಸ್ವಾಗತಿಸಿ, ಯಶೋದಾ ಕುಮಾರಿ ವಂದಿಸಿದರು. ಉಷಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಸೆಂಟ್ರಲ್ ವತಿಯಿಂದ ಯುವ ಕ್ರೀಡಾ ಪ್ರತಿಭೆ ದೀಕ್ಷಿತ ರಾಮಕೃಷ್ಣ ಗೌಡಗೆ ಸನ್ಮಾನ

ಮಂಗಳೂರು,ಮೇ.24;ಮಂಗಳೂರು ರೋಟರಿ ಸೆಂಟ್ರಲ್ ವತಿಯಿಂದ ಆಳ್ವಾಸ್ ಕಾಲೇಜು ಮೂಡುಬಿದಿರೆ ಇಲ್ಲಿನ ವಿದ್ಯಾರ್ಥಿರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಯುವ ಕ್ರೀಡಾ ಪ್ರತಿಭೆ ಅಥ್ಲೆಟ್ ದೀಕ್ಷಿತ ರಾಮಕೃಷ್ಣ ಗೌಡ ಇವರನ್ನು ರವಿವಾರ ನಗರದ ಸಿ ವ್ಯೂವ್ ಹೊಟೇಲ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ , ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ , ರೋಟರಿ 3180 ಜಿಲ್ಲಾ ಮಾಜಿ ಗವರ್ನರ್ ಡಾ ದೇವದಾಸ್ ರೈ , ಝೋನಲ್ ಲೆಫ್ಟಿನೆಂಟ್ ರವಿ ಜಲನ್ ,ಕೋಶ ಧಿಕಾರಿ ರಾಜೇಶ್ ಸೀತಾರಾಂ, ನಿಕಟ ಪೂರ್ವ ಅಧ್ಯಕ್ಷ ಬ್ರಾಯನ್ ಪಿಂಟೋ, ನಿಯೋಜಿತ ಅಧ್ಯಕ್ಷ ರವೀಂದ್ರ ಬಿ. ಎನ್. , ರೋಟರಿ ಸದಸ್ಯ ರಾದ ಗೀತಾ ಬಿ ರೈ, ರೂಪಾ ಶೆಟ್ಟಿ, , ನೀಲo ಜಲನ್ , ಆರತಿ ಶೇಟ್ ರೂಪ ಶೆಟ್ಟಿ ,ಡಾ. ಜ್ಯೋತಿ ,ವಿದ್ಯಾ.ಆರ್ ವೀಣಾ , ಪ್ರಮೀಳಾ ಶೆಟ್ಟಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಮೀಸಲು ಸಂಭವ. ನವೀನ್ ಡಿಸೋಜ ಹೆಸರು ಮುಂಚೂಣಿಯಲ್ಲಿ?

ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದೆ. ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸಿಗಲಿದೆ ಎಂಬುದು ಗ್ಯಾರಂಟಿಯಾಗಿದೆ. ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಈ ಬಾರಿ ಮೀಸಲಿರಿಸುವ ಸಂಭವ ಹೆಚ್ಚಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಒಂದು ರಾಜ್ಯಸಭಾ ಸದಸ್ಯ ಸ್ಥಾನ ಒಲಿದು ಬಂದಿತ್ತು. ಈ ಬಾರಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಲಿದು ಬರಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಹುದ್ದೆ ಸಿಗಬಹುದು ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಈ ಪೈಕಿ ಕಾಂಗ್ರೆಸ್ ನ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಾಗೂ ಹಿರಿಯ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿರುವ ನವೀನ್ ಡಿಸೋಜಾ ರವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.ಈ ಬಾರಿಯ ಕೇರಳದ ಚುನಾವಣೆಯಲ್ಲಿ ಸಹ ನವೀನ್ ಡಿಸೋಜ ಕಾರ್ಯನಿರ್ವಹಣೆ ಪಕ್ಷದ ಹೈಕಮಾಂಡ್ ಗಮನ ಸೆಳೆದಿದೆ ಎನ್ನಲಾಗಿದೆ. ಈ ಮೊದಲು ತನಗ ನೀಡಿರುವ ಹಲವಾರು ಜವಾಬ್ದಾರಿಗಳನ್ನು ಎಲ್ಲಿಯೂ ಪ್ರಚಾರ ಬಯಸದೆ ಚಾಚು ತಪ್ಪದೇ ನಿರ್ವಹಿಸಿದ ಕೀರ್ತಿ ನವೀನ್ ಡಿಸೋಜ ರವರಿಗೆ ಇದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಈ ಬಾರಿ ಅವರನ್ನು ರಾಜ್ಯಸಭೆ ಕಳಿಸುವ ಬಗ್ಗೆ ಪಕ್ಷದ ಉನ್ನತ ಮೂಲಗಳು ಗಂಭೀರ ಚಿಂತನೆಯಲ್ಲಿದೆ ಎಂದು ತಿಳಿದು ಬಂದಿದೆ.ಇನ್ನೊಂದು ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಕಾಂಗ್ರೆಸ್ ತನ್ನ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಾಂಗ್ರೆಸ್ನ ಶಾಸಕರಗಳ ಬಲ 3 ರಾಜ್ಯಸಭೆಗೆ ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ರಾಜ್ಯಸಭಾ ಚುನಾವಣೆ ಜೂನ್ 18ರಂದು ನಡೆಯಲಿದ್ದು, ಜೂನ್ ಎಂಟಕ್ಕೆ ನಾಮಿನೇಷನ್ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಪ್ರಾದೇಶಿಕ ವಾರ್ತೆಗಳು

ಪುತ್ತೂರು: ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮ ಉದ್ಘಾಟನೆ.

ಪುತ್ತೂರು -ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮವನ್ನು ಪುತ್ತೂರು ನಗರ ಸಭಾ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿಯವರು ಉದ್ಘಾಟಿಸಿ,ಕಾಯಕಲ್ಪ ಚಿಕಿತ್ಸೆಗೆ ಜಗತ್ತಿನಲ್ಲಿಯೇ ಅತೀ ಮಾನ್ಯತೆಯಿದೆಂದರು. ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ,ಅಧ್ಯಕ್ಷ ಪಿ. ಕೆ. ಮಹಮ್ಮದ್, ಉಪಾಧ್ಯಕ್ಷ ಸದಾಶಿವ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು. ಮಾಲಕ ಲಕ್ಷ್ಮಣ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಸಂತಿ ಕೆ. ಅವರು ಸಹಕರಿಸಿದರು

ಪ್ರಾದೇಶಿಕ ವಾರ್ತೆಗಳು

ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ಡಾ. ಎ.ಸದಾನಂದ ಶೆಟ್ಟಿ ಚಾಲನೆ.

ಮಂಗಳೂರು- ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ನಗರದ ಕುಡ್ಲ ಕಚೇರಿಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂಪಿಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ದೀಪಕ್.ಜಿ. ಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ. ಪತ್ರಕರ್ತರಿಂದ ಸಮಾಜದ ಸ್ವಾಸ್ಥ್ಯ ರಕ್ಷಣೆ-ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ

ಮಂಗಳೂರು : ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತರು ನಿಭಾಯಿಸುತ್ತಿದ್ದಾರೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.ನಗರದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ ಅವರು ” ಪೊಲೀಸರಷ್ಟೇ ವೇಗವಾಗಿ ಘಟನಾ ಸ್ಥಳಗಳಿಗೆ ತೆರಳಿ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ವಿವೇಚನೆಯಿಂದ ವರದಿ ಮಾಡುವ ಪತ್ರಕರ್ತರ ಬದ್ಧತೆ ಶ್ಲಾಘನೀಯ’ಎಂದರು.ಸಮಾಜ ಸೇವಕ, ರಾಜಕೇಸರಿ ಟ್ರಸ್ಟ್ ನ ಸಂಸ್ಥಾಪಕ ದೀಪಕ್.ಜಿ. ಬೆಳ್ತಂಗಡಿ ಅವರಿಗೆ ೨೦೧೬ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಎಚ್. ಎನ್. ಮಿಥುನ್ ಮಾತನಾಡಿ ” ಮಂಗಳೂರಿನ ಪತ್ರಕರ್ತರು ಸಂಯಮ ಮತ್ತು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವಕರನ್ನು ಗುರುತಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ’ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅವರು ಪ್ರೆಸ್ ಗೌರವ ಸನ್ಮಾನಕ್ಕೆ ಆಯ್ಕೆಯಾದವರನ್ನು ಗೌರವಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ.ಪೂಜಾರಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಮಹಮ್ಮದ್ ಆರಿಫ್ ಪಡುಬಿದ್ರಿ, ಆತ್ಮಭೂಷಣ್ ಭಟ್, ವಿಲ್ಫ್ರೆ ಡ್ ಡಿಸೋಜಾ, ದಯಾ ಕುಕ್ಕಾಜೆ, ವಿಜಯ ಕೋಟ್ಯಾನ್ ಪಡು ಸನ್ಮಾನಿತರನ್ನು ಪರಿಚಯಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. . ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಗೌರವ ಸನ್ಮಾನ: ಪ್ರೆಸ್ ಗೌರವ ಸನ್ಮಾನಕ್ಕೆ ಆಯ್ಕೆಯಾದ ಬಾಲಸುಬ್ರಹ್ಮಣ್ಯ ಕಾಯಾರ, ರಾಮಣ್ಣ .ವೈ., ಹರ್ಷ, ರೇಮಂಡ್ ಡಿಕೂನಾ ಮತ್ತು ಆರ್.ಎಂ.ರಾಜೇAದ್ರನ್ ಇವರುಗಳನ್ನುಗೌರವಿಸಲಾಯಿತು. ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಪುರಸ್ಕೃತ ಆನಂದ ಶೆಟ್ಟಿ, ಕೆಯುಡಬ್ಲುö್ಯಜೆ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ.ಆರ್., ರಾಜೇಶ್.ಶೆಟ್ಟಿ ದೋಟ,ಅಬ್ದುಲ್ ರಹಿಮಾನ್ .ಟಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಇರಾ, ರಾಜೇಶ್ ಶೆಟ್ಟಿ ದಡ್ಡಂಗಡಿ, ಎ.ಕೆ.ಕುಕ್ಕಿಲ, ಸುಳ್ಯ ತಾಲೂಕು ಕಸಾಪ ಪ್ರಶಸ್ತಿ ಪುರಸ್ಕೃತ ಹರೀಶ್ ಮೋಟುಕಾನ ಇವರುಗಳನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಂಗಳೂರು: ಬಡತನ ನಿರ್ಮೂಲನೆ, ಸಮಾಜದಲ್ಲಿ ಸಮಾನತೆಗೆ ಶಿಕ್ಷಣ ಪ್ರಮುಖ ಅಸ್ತ್ರ. ಶಿಕ್ಷಣಕ್ಕೆ ಆದ್ಯತೆ ನೀಡುವ ಕೃಷ್ಣ ಜೆ. ಪಾಲೆಮಾರ್ ಅವರ ಗುಣ ಶ್ಲಾಘನೀಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆ ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾಭವನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಬಹುಮುಖ ಪ್ರತಿಭೆ. ಕೈಗಾರಿಕೋದ್ಯಮಿ, ಬಿಲ್ಡರ್, ಶಿಕ್ಷಣ ಕ್ಷೇತ್ರ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅರ್ಹರಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸಿದ್ದಾರೆ ಎಂದರು.ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸಾಮುದಾಯಿಕ ಒಳಗೊಳ್ಳುವಿಕೆ, ವಿಚಾರ ಸಂಕಿರಣಗಳು, ಆರ್ಥಿಕ ಸಂವಾದಗಳು, ಕೌಶಲ್ಯಾಭಿವೃದ್ಧಿ ಕುರಿತಾದ ಕಾರ್ಯಕ್ರಮಗಳು ನಡೆಯಲಿ. ಸಾಮಾಜಿಕ ಜಾಗೃತಿ, ಸೌಹಾರ್ದಾತೆಗೆ ಕೇಂದ್ರವಾಗಲಿ. ಇಲ್ಲಿ ವಿವಾಹಕ್ಕೊಳಗಾದವರಿಗೆ ಶ್ರೇಯಸ್ಸು ಉಂಟಾಗಲಿ ಎಂದು ಶುಭ ಹಾರೈಸಿದರು. ಅತಿಥಿಯಾಗಿದ್ದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಕರ್ತವ್ಯನಿಷ್ಠೆ, ಉತ್ತಮ ನಡವಳಿಕೆ, ತಂದೆ ತಾಯಿ ಆಶೀರ್ವಾದ ಇದ್ದರೆ ಜೀವನದಲ್ಲಿ ಪ್ರಗತಿ ಸಾಽಸಬಹುದು ಎಂಬುದಕ್ಕೆ ಕೃಷ್ಣ ಪಾಲೆಮಾರ್ ಅವರ ಜೀವನವೇ ದೃಷ್ಟಾಂತವಾಗಿದೆ. ಒಂದು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ತನ್ನ ಕೈಂಕರ್ಯದ ಮೂಲಕ ಏಕಕಾಲದಲ್ಲಿ ನಾಲ್ಕು ಸಭಾಭವನಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದು, ಅದರಿಂದ ಬಂದ ಆದಾಯವನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಸಂಕಲ್ಪ ತೊಟ್ಟಿರುವುದು ಅಪೂರ್ವ ಸಂಗತಿ. ಈ ಮೂಲಕ ರಾಷ್ಟ್ರದ ಪ್ರಗತಿಗೂ ಅವರು ಕೊಡುಗೆ ನೀಡಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಇರುವ ಅವರ ವ್ಯಕ್ತಿತ್ವ ‘ಕೋಟಿಗೊಬ್ಬ ಪಾಲೆಮಾರ್’ ಎನ್ನುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ತುಳುನಾಡಿನ ಸೌಂದರ್ಯದ ಕಿರೀಟವಾಗಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ಮೂಡಿಬಂದಿದೆ. ಆರ್ಥಿಕ ವ್ಯವಸ್ಥೆ ಚಲನಶೀಲವಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಂದು ಉದ್ಘಾಟನೆಗೊಂಡಿರುವ ನಾಲ್ಕು ಸಭಾಭವನಗಳು ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ. ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ, ಬದ್ದತೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮೂಲಕ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಪಾಲೆಮಾರ್ ಅವರು ತೋರಿಸಿಕೊಟ್ಟಿದ್ದಾರೆ. ಪಾಲೆಮಾರ್ ಅವರ ವ್ಯಕ್ತಿತ್ವ ಯುವಜನತೆಗೆ ಮಾದರಿಯಾದುದು. ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬಿಡುಗಡೆ ಆಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಲ್ಯಾಂಡ್ ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಜನರ ಪ್ರೀತಿ, ವಿಶ್ವಾಸದಿಂದ ಈ ಕಾರ್ಯಸಾಧನೆ ಆಗಿದೆ. ಪಾಲೆಮಾರ್ ಕನ್ವೆನ್ಶನ್ ಸೆಂಟರ್ ವಿಕಾಸ್ ಎಜುಕೇಶನ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ವಿದ್ಯೆಗೆ ಪ್ರೋತ್ಸಾಹ ನೀಡಲಾಗುವುದು. ಬಡವರ್ಗದ ಜನರಿಗೆ ಉಪಯೋಗ ಆಗುವ ದೃಷ್ಟಿಯಿಂದ ನಾಲ್ಕು ಸಭಾಂಗಣಗಳನ್ನು ನಿರ್ಮಿಸಲಾಗಿದೆ ಎಂದರು.ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅತಿಥಿಗಳಾಗಿದ್ದರು. ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದರು.ಈ ವೇಳೆ ವಿವಿಧ ಸೇವಾ ಕಾರ್ಯ ನಡೆಸಲಾಯಿತು. ಶಕ್ತಿನಗರದ ಭಿನ್ನಸಾಮರ್ಥ್ಯದ ಮಕ್ಕಳ ಶಾಲೆ ಸಾನಿಧ್ಯದ ವಿದ್ಯಾರ್ಥಿಗಳಿಗೆ, ಸ್ನೇಹದೀಪ ಸಂಸ್ಥೆ ಸಂಸ್ಥಾಪಕಿ ತಬಸ್ಸುಮ್, ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಽಕ ಅಂಕ ಗಳಿಸಿದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮೀ ಭಾರ್ಗವ್, ದಿವ್ಯಾಂಗ ಕಲಾವಿದ ಕೌಶಿಕ್ ಆಚಾರ್ಯ, ಸಮಾಜ ಸೇವಕಿ ಗೀತಾ ಶೆಟ್ಟಿ ಹಾಗೂ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ಟ್ರಸ್ಟಿ ಜೆ. ಕೊರಗಪ್ಪ ಅವರಿಗೆ ಗೌರವಾಭಿನಂದನೆ ಅರ್ಪಿಸಲಾಯಿತು. ಇಂಜಿನಿಯರ್ ಪ್ರವೀಣ್‌ಕುಮಾರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ನಿತಿನ್ ಸಾಲ್ಯಾನ್, ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್, ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೆಮಾರ್ ಫಾರ್ಮ್ಸ್ ಸಭಾಭವನ, ಜೆಪ್ಪಿನಮೊಗರು ಕಡೆಕಾರ್‌ನ ನೇತ್ರಾವತಿ ಸಭಾಭವನವನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು.ಉದ್ಘಾಟನೆಗೊಂಡ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ ಎಂದು ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ೭೪೧೧೩೯೪೭೫೯, ೭೪೮೩೫೭೪೭೫೯, ೯೧೪೮೪೩೫೭೫೯ ಸಂಪರ್ಕಿಸಬಹುದು.

Scroll to Top