ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

2028ರ ಅಸೆಂಬ್ಲಿ ಚುನಾವಣೆಯಲ್ಲಿ ವೇದವ್ಯಾಸ ಕಾಮತ್ ಗೆ ಟಿಕೆಟ್ ಇಲ್ಲ. ಜಿಎಸ್ ಬಿ ಬದಲು ಮಂಗಳೂರು ದಕ್ಷಿಣದಲ್ಲಿ ಬಂಟ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿ ಹೈಕಮಾಂಡ್ ಚಿಂತನೆ. SHOCKING NEWS BY DR ASHOK SHETTY BN

ಮಂಗಳೂರು – ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸಕಾರ್ಯಗಳಿಂದ ಜನಾನುರಾಗಿಯಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ವೇದವ್ಯಾಸ ಕಾಮತ್ ಅವರಿಗೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಇಲ್ಲ ಎಂಬ ಮಹತ್ವದ ಮಾಹಿತಿ MP MLA*S NEWS ಗೆ ಸಿಕ್ಕಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣದಲ್ಲಿ ಜಿಎಸ್ ಬಿ ಅಭ್ಯರ್ಥಿ ಬದಲು ಬಂಟ ಅಭ್ಯರ್ಥಿಗೆ ಬಿಜೆಪಿಯಿಂದ ಎಂಎಲ್ ಎ ಟಿಕೆಟ್ ನೀಡಲಾಗುವುದು. ಈ ಕಾರಣಕ್ಕೆ ಜಿಎಸ್ ಬಿ ಸಮುದಾಯದ ವೇದವ್ಯಾಸ ಕಾಮತ್ ಅವರಿಗೆ ಟಿಕೆಟ್ ಇಲ್ಲ ಎಂಬ ಸ್ಪಷ್ಟ ಮಾಹಿತಿ ಹೊರ ಬಿದ್ದಿದೆ. ಪುತ್ತೂರಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರಿಗೆ ಬೆಂಬಲಿಸಿದ ಬಾಮಿ ಫ್ಯಾಮಿಲಿ ಅಂದರೆ ಜಿ ಎಸ್ ಬಿ ಸಮುದಾಯದ ಪ್ರಬಲ ಅಭ್ಯರ್ಥಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗುವುದೆಂದು ಮಾಹಿತಿ ಹೇಳಿದೆ.

ಪ್ರಾದೇಶಿಕ ವಾರ್ತೆಗಳು

ಹಳೆಯಂಗಡಿ ಕದಿಕೆ ಸಾಲ್ಯಾನ್ ಮೂಲಸ್ಥಾನ ಸಮಿತಿಯ ಅಧ್ಯಕ್ಷರಾಗಿ ತಾರಾನಾಥ ಸಾಲ್ಯಾನ್ ಆಯ್ಕೆ

ಸುರತ್ಕಲ್: ಹಳೆಯಂಗಡಿ ಕದಿಕೆ ಸಾಲ್ಯಾನ್ ಮೂಲಸ್ಥಾನ ಸಮಿತಿಯ ಅಧ್ಯಕ್ಷರಾಗಿ ತಾರಾನಾಥ ಸಾಲ್ಯಾನ್ ಸುಭಾಷಿತನಗರ ಆಯ್ಕೆಯಾಗಿದ್ದಾರೆ.ತಾರಾನಾಥ ಸಾಲ್ಯಾನ್ ವಿವಿಧ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್: ಅಗರಮೇಲು ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಚರಣ್ ಜೆ ಶೆಟ್ಟಿ ಕುಳಾಯಿಗುತ್ತು

ಸುರತ್ಕಲ್: ಅಗರಮೇಲು ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಚರಣ್ ಜೆ ಶೆಟ್ಟಿ ಕುಳಾಯಿಗುತ್ತು ಆಯ್ಕೆಯಾಗಿದ್ದಾರೆ.ಕಾರ್ಯಾಧ್ಯಕ್ಷರಾಗಿ ಡಾ ಕೆ ಪಿ ಕೆ ಹೆಗ್ಡೆ, ಉಪಾಧ್ಯಕ್ಷರಾಗಿ ರವಿ ಶೆಟ್ಟಿ, ಎಸ್ ರತ್ನಾಕರ ಶೆಟ್ಟಿ, ಜಾರಪ್ಪ ಶೆಟ್ಟಿ, ಐ ಬಾಬುಚಂದ್ರ, ಸುಂದರ ಅಮೀನ್, ಐ ರಾಜೇಶ್ ಕುಡ್ವ ಕಾರ್ಯದರ್ಶಿಯಾಗಿ ಮೋಹನ್ ದಾಸ್ ಐ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಎನ್ ಎಂ ಪಿ ಎ ಆಯ್ಕೆಯಾದರು.

ಪ್ರಾದೇಶಿಕ ವಾರ್ತೆಗಳು

ಬಂಟ ಕಲಾ ಸಂಗಮ: ಸುರತ್ಕಲ್ ಬಂಟರ ಸಂಘ ರನ್ನರ್ಸ್ ಅಪ್. ಪ್ರೇಕ್ಷಕರು ಮೆಚ್ಚಿಕೊಂಡ ದಿನಪತ್ರಿಕೆಯ ಕಥಾವಸ್ತು, ಮತ್ತೆ ನೆನಪಾದ “ಉಳುವವನೇ ಭೂಮಿಯ ಒಡೆಯ”

ಸುರತ್ಕಲ್: ಬಂಟರ ಯಾನೆ ನಾಡವರ ಮಾತೃಸಂಘ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆದ “ಬಂಟ ಕಲಾ ಸಂಗಮ” ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ 75 ಸಾವಿರ ರೂಪಾಯಿ ನಗದಿನೊಂದಿಗೆ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಸುರತ್ಕಲ್ ಬಂಟರ ಸಂಘವು ಪ್ರಸ್ತುತ ಪಡಿಸಿದ ವಿಷಯ “ದಿನಪತ್ರಿಕೆ”. 1942 ಜುಲೈ 1 ರಂದು ಮಂಗಳೂರಿನಲ್ಲಿ ಹುಟ್ಟಿಕೊಂಡ ಮಂಗಳೂರ ಸಮಾಚಾರ ಪತ್ರಿಕೆಯ ಮೂಲಕ ಕತೆ ತೆರೆದುಕೊಳ್ಳುತ್ತದೆ. ನಿರೂಪಕರು ಪತ್ರಿಕೆಯ ಪಾತ್ರಧಾರಿಯಾಗಿ 20 ನಿಮಿಷಗಳ ಕಾಲ ಪತ್ರಿಕೆ ಆಯಾಯ ಕಾಲಘಟ್ಟದಲ್ಲಿ ನಡೆದುಕೊಂಡು ಬಂದಿರುವ ವಿಚಾರವನ್ನು ಪ್ರೇಕ್ಷಕರ ಮುಂದಿಡುತ್ತಾರೆ.1974 ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜಾರಿಗೆ ತಂದ ಕಾನೂನು ಉಳುವವನೇ ಭೂಮಿಯ ಒಡೆಯ, ಈ ವಿಚಾರವನ್ನು ಇಟ್ಟುಕೊಂಡು ಕತೆಗೆ ಸ್ಪರ್ಷ ನೀಡಿದರು. ಭೂಮಿಯ ಒಡೆಯ ಇಂದಿರಾಗಾಂಧಿ ತಂದ ಕಾನೂನಿಂದ ಹೇಗೆ ಹತಾಶನಾಗುತ್ತಾನೆ ಮತ್ತೆ ಹೇಗೆ ಮೈಗೆಡವಿ ನಿಲ್ಲುತ್ತಾನೆ ಎನ್ನುವ ಸಂದೇಶ, ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ, ಬಳಿಕ ಪತ್ರಿಕೆ ಕಪ್ಪು ಬಿಳುಪಿನಿಂದ ವರ್ಣರಂಜಿತವಾದದ್ದು, ಜನವರಿ 26 ಗಣರಾಜ್ಯೋತ್ಸವದ ಸಂಭ್ರಮ, ಯುವ ಸಮುದಾಯದ ದುಖ ದುಮ್ಮಾನ, ಕೊರೊನಾದಿಂದ ಹೈರಾಣಾಗುವ ಜನರು, ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಿಂದಾಗುವ ಪರಿಣಾಮ ಹೀಗೆ ಎಲ್ಲವನ್ನೂ ಪತ್ರಿಕೆ ಪಾತ್ರಧಾರಿಯ ಮೂಲಕ ಕತೆ ಹೇಳಿರುವುದು, ಇದೊಂದು ವಿಭಿನ್ನ ಕಥಾವಸ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಥಾವಸ್ತುವಿಗೆ ಪೂರಕವಾಗಿ ನೃತ್ಯ ಸಂಯೋಜನೆ, ಮೈಮ್ ಎಲ್ಲವೂ ಒಂದಕ್ಕೊಂದು ಜೋಡಣೆಯಾಯಿತು. ಕಥಾವಸ್ತುವಿನ ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕೆಯ ಪಾತ್ರಧಾರಿಯಾಗಿ ಗಮನ ಸೆಳೆದರು.ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಅವರ ಮಾರ್ಗದರ್ಶನದಲ್ಲಿ ರಾಜೇಶ್ವರಿ ಡಿ ಶೆಟ್ಟಿ ಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮಹಿಳಾ ವಿಭಾಗದ ಸಾಂಸ್ಕೃತಿಕ ಕಾರ್ಯದರ್ಶಿ ಆಶಾಕಿರಣ್ ಪ್ರಸಾದ್ ರೈ, ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಬಂಟರ ಭವನದಲ್ಲಿ ಸಸ್ಯೋತ್ಸವ, ಆಹಾರ ಮೇಳ ಆರಂಭ

ಸುರತ್ಕಲ್: ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಬಂಟರ ಸಂಘ (ರಿ) ಸುರತ್ಕಲ್ ಮತ್ತು ಲಯನ್ಸ್ ಕ್ಲಬ್ ಸುರತ್ಕಲ್ ಇವುಗಳ ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ ಸಸ್ಯೋತ್ಸವ, ಆಹಾರ ಮೇಳ ಹಾಗೂ ಹೋಳಿಗೆ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಬಂಟರ ಭವನದಲ್ಲಿ ಪ್ರಫ್ರಥಮ ಬಾರಿಗೆ ನಡೆಯುವ ಸಸ್ಯೋತ್ಸವ, ಆಹಾರ ಮೇಳಕ್ಕೆ ಜನತೆಯ ಪ್ರೋತ್ಸಾಹ ಹೆಚ್ಚು ಬೇಕು ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅವರು, “ರೈತ ಕುಡ್ಲ ಪ್ರತಿಷ್ಠಾನ,ಬಂಟರ ಸಂಘ, ಲಯನ್ಸ್ ಕ್ಲಬ್ ಇದರ ಸಹಯೋಗದಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಇಲ್ಲಿ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಬಟ್ಟೆಬರೆ, ಹೂವು ತರಕಾರಿ ಸಸ್ಯಗಳು, ತಿಂಡಿ ತಿನಿಸು, ನಾನಾ ಬಗೆಯ ಆಹಾರ ಖಾದ್ಯಗಳು ಸಿಗುತ್ತಿದೆ. ಎಲ್ಲರೂ ಆಗಮಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು“ಎಂದರು. ಬಳಿಕ ಮಾತಾಡಿದ ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಅವರು, “ರೈತ ಕುಡ್ಲ ಪ್ರತಿಷ್ಠಾನ ಒಂದು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಬೇಕಿದೆ” ಎಂದರು.ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸುರತ್ಕಲ್ ಇದರ ಅಧ್ಯಕ್ಷ ಜಯೇಶ್ ಗೋವಿಂದ್, ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜಾ ಟಿ. ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆಪದ್ಭಾಂಧವ ಸಂಘಟನೆಯ ಉಮೇಶ್ ಇಡ್ಯಾ, ರೈತಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮಳಲಿ ಮತ್ತಿತರರು ಉಪಸ್ಥಿತರಿದ್ದರು.ಬಂಟರ ಸಂಘದ ಕೃಷಿ ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಖಂಡಿಗೆ ಇವರನ್ನು ಸನ್ಮಾನಿಸಲಾಯಿತು.ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲಯನ್ ರಾಜಯ್ಯ ವಂದಿಸಿದರು. ರೈತಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

Mangaluru’s Real Hero.Human heart behind the White Stone Empire -Exclusive Story of Sharief Bolar. MP MLA’S NEWS SPECIAL STORY BY DR ASHOK SHETTY BN

MANGALURU-In the heart of Mangaluru, opposite Roopa Hotel on Balmata Road, Door No. 14-2-103/12, a small office gave birth to a big dream. The dreamers were Mr. Bolar Muhammed Sharief and Mrs. Mumthaz Sharief. The dream was named WHITE STONE DEVELOPERS.Today, White Stone is not just a builder, it is a synonym for TRUST in Coastal Karnataka.Registered as a Partnership firm,the company’s roots are deep in honesty, quality and humanity. Not Just a Builder, But a HumanitarianPeople lovingly call him “Whitestone Sharief”. He has not just built buildings, he has built dreams of thousands of families. But his real height is seen in his philanthropy.The Man Behind The Modern Marvel – Buhair MosqueThe recent viral image of the magnificent BUHAIR MOSQUE – a masterpiece of modern Islamic architecture with a soaring white minaret designed by GRAS Architects – stands as a testament to Whitestone Group’s vision for world-class quality. It is where faith meets futuristic design.Rs 41 Lakh Scholarship: Lighting Up 272 LivesIn March 2026, at Kudmul Rangarao Town Hall, Mangaluru, Whitestone Sharief Charitable Trust created history by distributing scholarships worth Rs 41 LAKH to 272 students pursuing professional courses.In association with Puttur Community Center and Team B-Human, the trust is currently supporting 836 students including 79 MBBS, 25 BDS, 26 BAMS, 85 CA and 35 Law students.The best part? This help is not limited to any single community. Students from ALL religions and castes are supported.Speaking on the occasion, White Stone Group CEO and Team B-Human President Mr. B.M. Shareef Bolar said, “Community development is the goal of our trust. We are extremely happy to support 272 students this year.”The program was lauded by Dr. U.T. Ifthikar Ali Fareed of Karnataka State Allied and Healthcare Professions Council.As Pure As White StoneLike the name White Stone, Sharief’s heart is pure white. No compromise in quality while building, no desire for publicity while donating.From a small office in Balmata to the minaret of Buhair Mosque, his journey is an inspiration.He builds a home, a family gets peace. He gives a scholarship, a student’s future is secured.Coastal Karnataka will never forget such achievers.

ಪ್ರಾದೇಶಿಕ ವಾರ್ತೆಗಳು

ಕಲ್ಲುಗಳಲ್ಲಿ ಕನಸು ಕಂಡವರು, ಮನಸ್ಸುಗಳಲ್ಲಿ ದೀಪ ಬೆಳಗಿದವರು – ವೈಟ್ ಸ್ಟೋನ್ ಶರೀಫ್. ಮಂಗಳೂರಿನ ಬಲ್ಮಠ ರಸ್ತೆಯಿಂದ ಆರಂಭವಾದ ಒಂದು ಸಾಮ್ರಾಜ್ಯದ ಕಥೆ. MPMLA’S NEWS SPECIAL REPORT BY DR ASHOK SHETTY BN

ಮಂಗಳೂರು ನಗರದ ರೂಪಾ ಹೋಟೆಲ್ ಎದುರುಗಡೆ, ಬಲ್ಮಠ ರಸ್ತೆಯ 14-2-103/12 ನಂಬರಿನ ಸಣ್ಣ ಕಚೇರಿಯಲ್ಲಿ ಒಂದು ದೊಡ್ಡ ಕನಸು ಹುಟ್ಟಿಕೊಂಡಿತು. ಆ ಕನಸು ಕಂಡವರು ಬೋಳಾರ್ ಮೊಹಮ್ಮದ್ ಶರೀಫ್ ಮತ್ತು ಮುಮ್ತಾಜ್ ಶರೀಫ್ ದಂಪತಿಗಳು. ಅವರ ಕನಸಿನ ಹೆಸರೇ “ವೈಟ್ ಸ್ಟೋನ್ ಡೆವಲಪರ್ಸ್”.ಇಂದು ವೈಟ್ ಸ್ಟೋನ್ ಎಂದರೆ ಮಂಗಳೂರಿನಲ್ಲಿ ನಂಬಿಕೆಯ ಇನ್ನೊಂದು ಹೆಸರು. ಪಾರ್ಟನರ್‌ಶಿಪ್ ಸಂಸ್ಥೆಯಾಗಿ 2017 ರಲ್ಲಿ GST ನೋಂದಣಿಯಾದರೂ, ಅದರ ಬೇರುಗಳು ತುಂಬಾ ಆಳವಾಗಿವೆ. ಬಿಲ್ಡರ್ ಅಲ್ಲ, ಒಬ್ಬ ಮಾನವತಾವಾದಿಶರೀಫ್ ಅವರನ್ನು ಜನರು “ವೈಟ್ ಸ್ಟೋನ್ ಶರೀಫ್” ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರು ಕಟ್ಟಿದ್ದು ಕೇವಲ ಕಟ್ಟಡಗಳಲ್ಲ, ಸಾವಿರಾರು ಕುಟುಂಬಗಳ ಕನಸುಗಳನ್ನು.ಆದರೆ, ಅವರ ನಿಜವಾದ ಎತ್ತರ ಗೊತ್ತಾಗುವುದು ಅವರ ಸಮಾಜ ಸೇವೆಯಲ್ಲಿ.41 ಲಕ್ಷದ ವಿದ್ಯಾದಾನ – 272 ವಿದ್ಯಾರ್ಥಿಗಳ ಬಾಳಿಗೆ ಬೆಳಕುಇತ್ತೀಚೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ವೈಟ್ ಸ್ಟೋನ್ ಶರೀಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 272 ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಬರೋಬ್ಬರಿ 41 ಲಕ್ಷ ರೂಪಾಯಿ ಸ್ಕಾಲರ್‌ಶಿಪ್ ವಿತರಿಸಲಾಯಿತು.ಪುತ್ತೂರು ಕಮ್ಯುನಿಟಿ ಸೆಂಟರ್ ಮತ್ತು ಟೀಂ ಬಿ-ಹ್ಯೂಮನ್ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, MBBS ನ 79, BDS ನ 25, BAMS ನ 26, CA ಯ 85, Law ನ 35 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 836 ವಿದ್ಯಾರ್ಥಿಗಳಿಗೆ ನೆರವಾಗಲಾಗುತ್ತಿದೆ.ವಿಶೇಷ ಏನೆಂದರೆ, ಈ ಸಹಾಯ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಶರೀಫ್ ಆಸರೆಯಾಗಿದ್ದಾರೆ.ವೇದಿಕೆಯಲ್ಲಿ ಮಾತನಾಡಿದ ವೈಟ್ ಸ್ಟೋನ್ ಗ್ರೂಪ್ CEO ಮತ್ತು ಟೀಂ ಬಿ-ಹ್ಯೂಮನ್ ಅಧ್ಯಕ್ಷ ಬಿ.ಎಂ. ಶರೀಫ್ ಬೋಳಾರ್ ಅವರು ಹೇಳಿದರು – “ಸಮುದಾಯದ ಅಭಿವೃದ್ಧಿಯೇ ನಮ್ಮ ಟ್ರಸ್ಟ್‌ನ ಗುರಿ. ಈ ವರ್ಷ 272 ವಿದ್ಯಾರ್ಥಿಗಳಿಗೆ ನೆರವಾಗಲು ನಮಗೆ ಅತೀವ ಸಂತೋಷವಾಗಿದೆ” ಎಂದು.ಬಿಳಿ ಕಲ್ಲಿನಂತೆ ಶುದ್ಧ ಮನಸ್ಸುವೈಟ್ ಸ್ಟೋನ್ ಎಂಬ ಹೆಸರಿನಂತೆ ಶರೀಫ್ ಅವರ ಮನಸ್ಸು ಕೂಡ ಬಿಳಿ ಕಲ್ಲಿನಂತೆ ಶುದ್ಧ. ಕಟ್ಟಡ ಕಟ್ಟುವಾಗ ಗುಣಮಟ್ಟದಲ್ಲಿ ರಾಜಿ ಇಲ್ಲ, ದಾನ ಮಾಡುವಾಗ ಪ್ರಚಾರದ ಹಂಬಲವಿಲ್ಲ.ಬಲ್ಮಠದಿಂದ ಆರಂಭವಾದ ಅವರ ಪಯಣ ಇಂದು ಮಂಗಳೂರಿನ ಹೆಮ್ಮೆಯಾಗಿ ಬೆಳೆದಿದೆ. ಅವರು ಕಟ್ಟುವ ಪ್ರತಿ ಮನೆಯಲ್ಲಿ ಒಂದು ಕುಟುಂಬದ ನೆಮ್ಮದಿ ಇದೆ, ಅವರು ನೀಡುವ ಪ್ರತಿ ಸ್ಕಾಲರ್‌ಶಿಪ್‌ನಲ್ಲಿ ಒಬ್ಬ ವಿದ್ಯಾರ್ಥಿಯ ಭವಿಷ್ಯವಿದೆ.ಇಂತಹ ಸಾಧಕರನ್ನು ನಮ್ಮ ಕರಾವಳಿ ಎಂದಿಗೂ ಮರೆಯುವುದಿಲ್ಲ.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನಲ್ಲಿ ಅ. 4ರಂದು ‘ನಾದ ನಂದನಂ’ ಭಜನಾ ಸಂಕೀರ್ತನೋತ್ಸವ.ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಸಂಗೀತದ ವಿಭಿನ್ನ ಪ್ರಸ್ತುತಿ

ಮಂಗಳೂರು, ಸೆ. 28: ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ನೋಂದಾಯಿತವಾಗಿರುವ ‘ನಾದ ನಂದನಂ’ (ರಿ.) ಸಂಸ್ಥೆಯ ಪ್ರಥಮ ಭಜನಾ-ಸಂಕೀರ್ತನೋತ್ಸವ ಹಾಗೂ ಉದ್ಘಾಟನಾ ಸಮಾರಂಭ ಅಕ್ಟೋಬರ್ 4ರಂದು ಸಂಜೆ 5 ಗಂಟೆಗೆ ಉರ್ವಾ ಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಕುರಿತು ಸೋಮವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿದರು.ಕರ್ನಾಟಕವನ್ನು ಕೇಂದ್ರವಾಗಿರಿಸಿಕೊಂಡು ರೂಪುಗೊಂಡಿರುವ ‘ನಾದ ನಂದನಂ’ ಸಂಸ್ಥೆಯು ಸಂಗೀತದ ಮೂಲಕ ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ಸಂಸ್ಥೆಯ ಮೊದಲ ಕಾರ್ಯಕ್ರಮದಲ್ಲಿ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆಗಳೊಂದಿಗೆ ಪುರಂದರದಾಸ, ಕನಕದಾಸ, ಬಸವಣ್ಣ ಹಾಗೂ ಶರಣರ ತತ್ವಪದಗಳನ್ನು ವಿವಿಧ ಸಂಗೀತ ಪ್ರಕಾರಗಳಲ್ಲಿ ಪ್ರಸ್ತುತಪಡಿಸಲಾಗುವುದು.ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ಶಂಕರ ಶ್ಯಾನುಭೋಗ್ ಹಾಗೂ ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ರಮೇಶ್ ಚಂದ್ರ, ಬೆಂಗಳೂರು ಅವರ ನೇತೃತ್ವದಲ್ಲಿ 19 ಕಲಾವಿದರ ತಂಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ.‘ನಾದ ನಂದನಂ’ ಸಂಸ್ಥೆಯನ್ನು ಖ್ಯಾತ ಗಾಯಕ ಶಂಕರ ಶ್ಯಾನುಭೋಗ್ ಅವರು ನಂದಾದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ನೇತೃತ್ವದಲ್ಲಿ ದೇಶ-ವಿದೇಶಗಳಲ್ಲಿಯೂ ಭಜನಾ-ಸಂಕೀರ್ತನೋತ್ಸವ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸಂಘಟಕ ಎಸ್.ಎಲ್. ಭಾರದ್ವಾಜ್ ತಿಳಿಸಿದರು.ಭಕ್ತಿ, ಭಾವ, ಜಾನಪದ ಹಾಗೂ ಚಿತ್ರಗೀತೆಗಳ ಸಂಗಮದೊಂದಿಗೆ ಬಹುಭಾಷಾ ಹಾಡುಗಳನ್ನು ಪ್ರಸ್ತುತಪಡಿಸುವುದು ಕಾರ್ಯಕ್ರಮದ ವಿಶೇಷತೆಯಾಗಿದೆ. ಪಕ್ವ ಹಾಡುಗಾರರು, ನುರಿತ ಸಂಗೀತಗಾರರು, ಎಲ್‌ಇಡಿ ಪರದೆ, ವಿಶೇಷ ಧ್ವನಿ ಮತ್ತು ಬೆಳಕಿನ ರಂಗ ವಿನ್ಯಾಸದೊಂದಿಗೆ ಕಾರ್ಯಕ್ರಮ ನಡೆಯಲಿದೆ.‘ನಾದ ನಂದನಂ’ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉಡುಪಿಯ ಶ್ಯಾಮಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ. ಶಂಕರ್, ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಸರ್ವೋತ್ತಮ ಶೆಟ್ಟಿ ಸೇರಿದಂತೆ ಬ್ಯಾಂಕಿಂಗ್, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.ಉಚಿತ ಪಾಸ್ ಲಭ್ಯಕಾರ್ಯಕ್ರಮದ ಉಚಿತ ಪಾಸ್‌ಗಳು ಮಂಗಳೂರಿನ ಓಷನ್ ಪರ್ಲ್ (ನವಭಾರತ್ ಸರ್ಕಲ್), ತಾಜ್ ಮಹಲ್, ಪತ್ತುಮುಡಿ (ಲಾಲ್‌ಬಾಗ್), ಅಯೋಧ್ಯಾ (ಕೊಡಿಯಾಲ್‌ಬೈಲ್) ಹಾಗೂ ಪದ್ಮಶ್ರೀ (ಪಂಪ್‌ವೆಲ್) ಹೋಟೆಲ್‌ಗಳ ಕೌಂಟರ್‌ಗಳಲ್ಲಿ ಲಭ್ಯವಿರುತ್ತವೆ. ಪಾಸ್ ಪಡೆಯಲು ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕಾಗಿದೆ.ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ನಾದ ನಂದನಂ’ ಸಂಸ್ಥೆಯ ಈ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಎಸ್.ಎಲ್. ಭಾರದ್ವಾಜ್ ಮನವಿ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಮುಲ್ಕಿ ರವೀಂದ್ರ ಪ್ರಭು, ರಮೇಶ್ ಚಂದ್ರ, ಜಗನ್ನಾಥ್ ಶಿರ್ಲಾಲು ಹಾಗೂ ಎಸ್.ಎಲ್. ಭಾರದ್ವಾಜ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮುಂಬಯಿ ಯಕ್ಷಗಾನ ಸಮ್ಮೇಳನದ ಕರೆಯೋಲೆ ಬಿಡುಗಡೆ. ಸಮ್ಮೇಳನ ಸಾಂಗವಾಗಲಿ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಮಂಗಳೂರು: ‘ಕರಾವಳಿಯ ಜನಪ್ರಿಯ ಕಲೆಯಾದ ಯಕ್ಷಗಾನವನ್ನು ಮುಂಬೈಯಲ್ಲಿ ಬಹುವಿಧವಾಗಿ ಮೆರೆಸಿದ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಸಂಬಂಧವಾಗಿ ಕಲಾಪೋಷಕರಾದ ಡಾ. ಟಿ.ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನವು ಸಾಂಗವಾಗಿ ನೆರವೇರಲಿ ‘ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶುಭ ಹಾರೈಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ರಜತ ಪರ್ವದ ಅಂಗವಾಗಿ ಅಕ್ಟೋಬರ 3, 4 ರಂದು ಮುಂಬೈಯಲ್ಲಿ ನಡೆಯುವ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.ಸಮ್ಮೇಳನ ಸಮಿತಿ ಸಲಹೆಗಾರರಾದ ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿಯವರು ಈ ಸಂದರ್ಭದಲ್ಲಿ ಮಾತನಾಡಿ, ‘ವಿಷ್ಣುಸಾಯುಜ್ಯವನ್ನೈದಿದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಕಾಲದಲ್ಲಿ ಯಕ್ಷಗಾನದ ತವರುಮನೆಯೆನಿಸಿಕೊಂಡಿದ್ದ ಎಡನೀರು ಮಠದಲ್ಲಿ ಅದೇ ಆಸಕ್ತಿಯಿಂದ ಯಕ್ಷಗಾನ ಕಾರ್ಯಕ್ರಮಗಳಿಗೆ ವಿಪುಲಾಶ್ರಯ ನೀಡುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳಿಂದ ಸಮ್ಮೇಳನದ ಕರಪತ್ರ ಲೋಕಾರ್ಪಣೆಗೊಳ್ಳುತ್ತಿರುವುದು ಕಲಾಸಂವರ್ಧನೆಯ ದೃಷ್ಟಿಯಿಂದ ಬಹಳ ಮಹತ್ವದ್ದು ‘ ಎಂದರು.ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸ್ವಾಮೀಜಿಯವರಿಗೆ ಫಲಕಾಣಿಕೆಯಿತ್ತು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಮಂತ್ರಾಕ್ಷತೆಯೊಂದಿಗೆ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನ ಸಮಿತಿಗೆ ಹಸ್ತಾಂತರಿಸಿದರು. ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಣೆ :ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ವಿವಿಧ ಕ್ಷೇತ್ರದ ಗಣ್ಯರಿಗೆ ಕರೆಯೋಲೆ ನೀಡಿ ಆಮಂತ್ರಿಸಿದರು.ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಡಿ.ಹೆಗ್ಗಡೆಯವರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರನ್ನು ಭೇಟಿಯಾದ ಸಂಘಟಕರು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ:ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ಎರಡು ದಿನ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರು ಯಕ್ಷಗಾನ ಕಲಾ ಪೋಷಕರು ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್. ಸೆಪ್ಟೆಂಬರ 26 ರಂದು ಕಾಸರಗೋಡಿನ ಎಡನೀರು ಮಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರನ್ನು ಭೇಟಿ ಮಾಡಿದ ಮುಖ್ಯ ಸಲಹೆಗಾರ ಡಾ.ಎಂ ಪ್ರಭಾಕರ ಜೋಶಿ ಮತ್ತು ಪ್ರಧಾನ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ವಿಧ್ಯುಕ್ತವಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಸಮಿತಿ ಸದಸ್ಯ ಹಾಗೂ ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಭಟ್ ಬಳಂತಿಮೊಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

### *SIRAJ AHAMED – The Man Who Built Mangaluru’s Skyline | 40 Years of IN-LAND Legacy* *Mangaluru’s Real Estate Doyen, The Visionary Behind The Apartment Revolution in Coastal Karnataka.               mpmlasnewstv Special REPORT by DR ASHOK SHETTY BN

Mangalure: If Mangaluru today stands tall with premium apartments, gated communities and luxury towers, one man’s vision is behind it – *Mr. Siraj Ahamed, Chairman & Managing Director of IN-LAND Builders.* In a short span of 40 years, he has come a long way from the desks of high finance at Grindlays Bank to becoming the undisputed king of Coastal Karnataka’s Real Estate industry. *HUMBLE BEGINNING IN 1986* The story started in 1986 with a small office and a big dream – to provide affordable, quality housing to his fellow citizens. What started as a small venture is today one of Karnataka’s most respected and trusted real estate developers – *The IN-LAND Group.* From Mangaluru to Bengaluru, Puttur to Mysuru, IN-LAND has transformed skylines and fulfilled the dreams of thousands of families with its core values: *Quality, Trust, Transparency & Excellence.* *THE VISIONARY LEADER* Mr. Siraj Ahamed is not just a builder, he is an institution. His personality reflects in his company: – An altruistic vision for affordable housing – Absolute sincerity in dealing with customers – Relentless, never-give-up energy – Ethical business practices and timely delivery This recognition is aptly reflected in his position as *Joint Secretary (South) of CREDAI – Karnataka*, the apex body of real estate developers. *40 GLORIOUS YEARS – A GRAND CELEBRATION* On July 11th, 2025, IN-LAND Group celebrated its 40th Anniversary at The Grand Bay, Mangaluru. The grand event was attended by IGP Amit Singh, Daijiworld Chairman Walter Nandalike, Supreme Court Senior Advocate Santosh Paul and hundreds of business leaders, customers and well-wishers. It was a celebration of 4 decades of trust. *NEW CHAPTER: INLAND EUPHORIA* Continuing the legacy, IN-LAND just performed Bhoomi Pooja for its latest premium project – *Inland Euphoria at Arya Samaj Road, Kadri, Mangaluru.* A 12-storeyed tower with spacious 3BHK luxury residences (2475 & 2740 sq ft), rooftop infinity pool, gym, and only 2 apartments per floor for ultimate privacy. This project is being led by Siraj Ahamed along with his dynamic Directors *Meraj Yusuf and Wahaj Yusuf*, who are taking the group to new heights. *A LEADER WITH A HEART* What makes Siraj Ahamed sir different is his secular and inclusive vision. For the Bhoomi Pooja of Euphoria, he invited Moulana, Father Walter D’Souza and Priest Giridhar Bhat together – showing Mangaluru’s true harmony and his respect for all religions. From a banker to a builder, from a dreamer to a doyen, Siraj Ahamed is not just building apartments – *He is building Mangaluru’s future.* *Team MP MLAs News TV salutes this legendary builder and wishes IN-LAND Group many more decades of success

Scroll to Top