ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಡಿ.12ಕ್ಕೆ ಬಹುನಿರೀಕ್ಷಿತ “ಪಿಲಿಪಂಜ” ತುಳು ಸಿನಿಮಾ ಬಿಡುಗಡೆ

ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿಯಲ್ಲಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾ ಡಿಸೆಂಬರ್ 12 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಸಿನಿಮಾದ ಕಾರ್ಯಕಾರಿ ನಿರ್ಮಾಪಕ, ನಟ ರಮೇಶ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ನಿರ್ದೇಶಕ ಭರತ್ ಶೆಟ್ಟಿ, “ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ನಡೆದಿದ್ದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆ 5 ನಿಮಿಷಗಳ ಅವಧಿಯಲ್ಲಿ ಸಿನಿಮಾ ಇರಲಿದ್ದು ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ಬೋರ್ ಆಗದಂತೆ ಸಿನಿಮಾ ಮೂಡಿಬಂದಿದೆ. ಸಿನಿಮಾಕ್ಕೆ ರಾತ್ರಿಯ ಸನ್ನಿವೇಶ ಅಗತ್ಯವಿದ್ದ ಕಾರಣ ಹೆಚ್ಚಿನ ಶೂಟಿಂಗ್ ರಾತ್ರಿಯ ವೇಳೆ ಮಾಡಲಾಗಿದೆ. ಕಲಾವಿದರು ನಿರ್ಮಾಪಕರು ಸಿನಿಮಾಕ್ಕೆ ಸಾಕಷ್ಟು ಶ್ರಮವಹಿಸಿ ದುಡಿದಿದ್ದಾರೆ. ಎಲ್ಲರೂ ಡಿ.12ರಂದು ಥಿಯೇಟರ್ ನಲ್ಲಿ ಸಿನಿಮಾ ನೋಡಿ“ ಎಂದರು. ಪಿಲಿಪಂಜ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಮುಡಿಪುವಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾ ತೆರೆಕಾಣಲಿದೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ವರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಟಿ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ಜಯಶೀಲ, ಭಾಸ್ಕ‌ರ್ ಮಣಿಪಾಲ ಮುಂತಾದವರು ಅಭಿನಯಿಸಿದ್ದಾರೆ.ಸಹನಿರ್ಮಾಪಕಿ ಬಿಂದಿಯ ಪ್ರತೀಕ್, ಛಾಯಾಗ್ರಹಣ ಉದಯ್ ಬಳ್ಳಾಲ್, ಸಂಕಲನ ಶ್ರೀನಾಥ್ ಪವಾರ್, ಸಂಗೀತ ಎಲ್ ವಿ ಯಸ್, ಡಿ ಐ ಪ್ರಜ್ವಲ್ ಸುವರ್ಣ, ಸಿಜಿವರ್ಕ್ ಕಿರಣ್ ಬೆಂಗಳೂರು, ಸಹನಿರ್ದೇಶನ ಅಕ್ಷತ್ ವಿಟ್ಲ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಪ್ರೊಡಕ್ಷಣ್ ಮೆನೆಜರ್ ಕಾರ್ತಿಕ್ ಜೆ. ಶೆಟ್ಟಿ, ಸಾಹಿತ್ಯ ಕೆ ಕೆ ಪೇಜಾವರ, ರಜಿತ್ ಕದ್ರಿ, ರಕ್ಷಣ್ ಮಾಡೂರು, ಹಿನ್ನೆಲೆ ಗಾಯನ ನಿಹಾಲ್ ತಾವ್ರೋ, ಕೃತಿಕಾ ಅಖಿಲ್, ಸಂದೇಶ್ ನೀರ್ ಮಾರ್ಗ, ರಕ್ಷಣ್ ಮಾಡೂರುಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಪ್ರತೀಕ್ ಯು.ಪೂಜಾರಿ ಕಾವೂರು, ಕೆಮರಾಮ್ಯಾನ್ ಉದಯ ಬಳ್ಳಾಲ್, ನಟಿ ದಿಶಾ ರಾಣಿ, ಸಂಗೀತ ನಿರ್ದೇಶಕ ಎಲ್ವಿಯಸ್ ಉಪಸ್ಥಿತರಿದ್ದರು.ಚಿತ್ರಗಳು -ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ (CRC) ಉದ್ಘಾಟನೆ

ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯವು ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ (CRC)ವನ್ನು ಉದ್ಘಾಟಿಸಿದೆ. ಕ್ರಿಶ್ಚಿಯನ್ ಮಿಷನರಿಗಳು, ಪಂಡಿತರು ಮತ್ತು ಸಂಸ್ಥೆಗಳು ಕರ್ನಾಟಕ ಮತ್ತು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಬೌದ್ಧಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ. ಇಂದಿನ ಕಾಲದಲ್ಲಿ ಇತಿಹಾಸದ ದಾಖಲೆಗಳು ಅಳಿವಿನ ಅಂಚಿನಲ್ಲಿರುವ ಸಂದರ್ಭದಲ್ಲಿ, ಈ ಕೇಂದ್ರದ ಪ್ರಾರಂಭವು ಮಹತ್ವದ ಹೆಜ್ಜೆಯಾಗಿ ಕಂಡುಬಂದಿದೆ.ಉದ್ಘಾಟನಾ ಸಮಾರಂಭದಲ್ಲಿ ಅರ್ಚ್‌ಬಿಷಪ್ ಪೀಟರ್ ಮಚಾದೊ, ಪ್ರೊ. ಎಸ್. ಜಫೇತ್, ಪ್ರಾಂತ್ಯಾಧಿಕಾರಿ ರೆ. ಡಯೊನಿಷಿಯಸ್ ವಾಜ್, ಕುಲಪತಿ ಫಾ. ವಿಕ್ಟರ್ ಲೋಬೊ, ಫಾ. ಮೆಲ್ವಿನ್ ಪಿಂಟೊ, ಡಾ. (ಸಿ) ದೀಪ್ತಿ, ಇತಿಹಾಸಕಾರ ಅಲನ್ ಮಚಾದೊ ಪ್ರಭು ಹಾಗೂ CRC ನಿರ್ದೇಶಕ ಡಾ. ರೆ. ಬಾಲ ಕಿರಣ ಕುಮಾರ್ ಹೃದಯರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಬಾಲ ಕಿರಣ ಅವರು CRCಯ ಉದ್ದೇಶ ಮತ್ತು ಕಾರ್ಯಯೋಜನೆಗಳನ್ನು ವಿವರಿಸಿ ಸಭಿಕರನ್ನು ಸ್ವಾಗತಿಸಿದರು. ಅರ್ಚ್‌ಬಿಷಪ್ ಪೀಟರ್ ಮಚಾದೊ ಅವರು CRC ಕ್ರಿಶ್ಚಿಯನ್ ಪರಂಪರೆಯ ಸಂಗ್ರಹಾಗಾರವಾಗುವುದರ ಜೊತೆಗೆ ಸಂವಾದ ಮತ್ತು ಸಮರಸತೆಯ ವೇದಿಕೆಯಾಗಿ ಬೆಳೆಯಬೇಕೆಂದು ಉದ್ಧರಿಸಿದರು. ಇದು ಕೇವಲ ಸಂಶೋಧನಾ ಕೇಂದ್ರವಲ್ಲ, ಜೀವನ ಮತ್ತು ಅಧ್ಯಯನ ಒಂದೇ ಜಾಗದಲ್ಲಿ ಸೇರಿಸುವ ಬದುಕಿನ ತರಗತಿಯಾಗಿದೆ ಎಂದರು. ಸಮುದಾಯಗಳು ತಮ್ಮ ಮೂಲಗಳನ್ನು ಮರುಪಡೆಯಲು ಮತ್ತು ಭವಿಷ್ಯದತ್ತ ದೃಷ್ಟಿಸಿಕೊಳ್ಳಲು CRC ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಪ್ರೊ. ಜಫೇತ್ ಅವರು CRCಯ ಸ್ಥಾಪನೆ ಕರ್ನಾಟಕಕ್ಕೆ ಮಹತ್ವದ ತಿರುವಿನ ವಿಷಯವಾಗಿದ್ದು, ಇದರ ರಾಷ್ಟ್ರೀಯ ಪ್ರಭಾವ ಮುಂದಿನ ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾಗಲಿದೆಯೆಂದು ಅಭಿಪ್ರಾಯಪಟ್ಟರು. ಭಾರತದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಕ್ರಿಶ್ಚಿಯನ್ ಸಮುದಾಯಗಳ ಮೂಲಭೂತ ಪಾತ್ರವನ್ನು ನೆನಪಿಸಲು CRC ಅಗತ್ಯವಾಗಿದೆ ಎಂದರು.ಕುಲಪತಿ ರೆ. ವಿಕ್ಟರ್ ಲೋಬೊ ಅವರು CRCಯಿಂದ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗುವುದಾಗಿ ಹೇಳಿದರು. ಜ್ಞಾನ ಭಯವನ್ನು ನಿವಾರಿಸುತ್ತದೆ, ಸಂವಾದ ಶಾಂತಿಯನ್ನು ಬಲಪಡಿಸುತ್ತದೆ, ಪರಂಪರೆ ಹೊಣೆಗಾರಿಕೆಯನ್ನು ಕೇಳುತ್ತದೆ ಎಂಬ ಮೂರು ತತ್ವಗಳನ್ನು ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಮತ್ತು ಸಂಶೋಧಕರು ರಾಜ್ಯದ ಸಾಮಾಜಿಕ ಇತಿಹಾಸ ಮತ್ತು ಆರ್ಕೈವ್‌ಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಅವರು ಹೇಳಿದರು. ಪ್ರಾಂತ್ಯಾಧಿಕಾರಿ ರೆ. ಡಯೊನಿಷಿಯಸ್ ವಾಜ್ CRCಯನ್ನು ಜೆಸ್ಯೂಟ್‌ಗಳು ನಿರ್ವಹಿಸಬೇಕಾದ ಪ್ರಮುಖ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿದರು. CRCಯ ದೃಷ್ಟಿಕೋನ ಶೈಕ್ಷಣಿಕ, ವೃತ್ತಿಪರ ಮತ್ತು ವಿಮರ್ಶಾತ್ಮಕ. ಕರ್ನಾಟಕ ಹಾಗೂ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಕ್ರಿಶ್ಚಿಯನ್ ಮಿಷನ್‌ಗಳು, ಚರ್ಚ್‌ಗಳು, ಸಂಸ್ಥೆಗಳು ಮತ್ತು ಪಂಡಿತರ ಪಾತ್ರವನ್ನು ವಿಶ್ಲೇಷಿಸುವುದು ಇದರ ಮೂಲ ಉದ್ದೇಶ. ಸಂಶೋಧನೆ, ಪ್ರಕಟಣೆ, ಸಂವಾದ ಮತ್ತು ಸಾರ್ವಜನಿಕ ಚಿಂತನೆಗೆ ವೇದಿಕೆ ಒದಗಿಸುವ ಕೇಂದ್ರವಾಗಬೇಕೆಂಬ ಗುರಿಯಿದೆ. ಸಮಗ್ರ ಗ್ರಂಥಾಲಯ ಮತ್ತು ಆರ್ಕೈವ್ ನಿರ್ಮಾಣ, ಭವಿಷ್ಯದಲ್ಲಿ ಮ್ಯೂಸಿಯಂ ಸ್ಥಾಪನೆ, ಹಾಗೂ ಅಕಾಡೆಮಿಕ್ ಕಾರ್ಯಕ್ರಮಗಳನ್ನು ಆರಂಭಿಸುವ ಯೋಜನೆಯೂ ಇದಕ್ಕೆ ಸೇರಿದೆ. ತಜ್ಞರ ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ನಿಯಮಿತವಾಗಿ ನಡೆಸುವ ಉದ್ದೇಶವಿದೆ.ಮೂರು ತಿಂಗಳ ಹಿಂದೆ CRC ತನ್ನ ಕಾರ್ಯಚಟುವಟಿಕೆಗಳನ್ನು ಹೊಸ ಚೈತನ್ಯದಿಂದ ಆರಂಭಿಸಿದೆ. ಅಕ್ಟೋಬರ್ 16, 2025ರಂದು 32 ಮಂದಿ ಪಂಡಿತರ ಸಭೆಯೊಂದಿಗೆ ಮೊದಲ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಭೆಯಲ್ಲಿ CRCಯನ್ನು ರಾಜ್ಯದ ನೋಡ್ ಸೆಂಟರ್ ಆಗಿ ಗುರುತಿಸಲಾಯಿತು ಮತ್ತು KCCDCಯೊಂದಿಗೆ ಸಹಕಾರ ಆರಂಭವಾಯಿತು. ನಂತರ CRC ರಾಜ್ಯದ ಮಂಗಳೂರು–ಮೈಸೂರು, ಹುಬ್ಬಳ್ಳಿ–ಬೆಳಗಾವಿ ಮತ್ತು ರಾಯಚೂರು–ಕಲಬುರಗಿ ಪ್ರದೇಶಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಮೂಲಕ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. DVK, ಸೇಂಟ್ ಪೀಟರ್ಸ್ ಪೊಂತಿಫಿಕಲ್ ಸೆಮಿನರಿ, ಸೇಂಟ್ ಜೋಸೆಫ್ಸ್ ಸೆಮಿನರಿ, UTC ಮತ್ತು ಸುವಿದ್ಯಾ ಕಾಲೇಜುಗಳೊಂದಿಗೆ ಸಹಯೋಗದ ಮಾತುಕತೆ ಮುಂದುವರಿದಿದೆ.ರಾಷ್ಟ್ರೀಯ ಮಟ್ಟದಲ್ಲಿ ಗೋವಾದ ಜೆಸ್ಯೂಟ್ ಸೆಂಟರ್ ಫಾರ್ ಇಂಡಿಯನ್ ಮತ್ತು ಇಂಡೋ–ಕ್ರಿಶ್ಚಿಯನ್ ಸ್ಟಡೀಸ್, ದೆಹಲಿಯ ವಿದ್ಯಾಜ್ಯೋತಿ, ಪೂಣೆಯ ಜ್ಞಾನದೀಪ ಸಂಸ್ಥೆಗಳೊಂದಿಗೆ ಸಕ್ರಿಯ ಸಹಕಾರ ನಿರ್ಮಾಣವಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೋಫಿಯಾ ವಿಶ್ವವಿದ್ಯಾಲಯ (ಟೋಕಿಯೊ), ವಿಯೆನ್ನಾ ವಿಶ್ವವಿದ್ಯಾಲಯ ಮತ್ತು ಇನ್ಸ್‌ಬ್ರಕ್ ವಿಶ್ವವಿದ್ಯಾಲಯ (ಆಸ್ಟ್ರಿಯಾ), ಟ್ಯೂಬಿಂಗೆನ್ ವಿಶ್ವವಿದ್ಯಾಲಯ (ಜರ್ಮನಿ), ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯ (ನ್ಯೂಯಾರ್ಕ್) ಮತ್ತು ಬೋಸ್ಟನ್ ಕಾಲೇಜಿನಲ್ಲಿರುವ ರಿಕ್ಕಿ ಇನ್‌ಸ್ಟಿಟ್ಯೂಟ್‌ಗಳೊಂದಿಗೆ ಸಂವಾದ ಮುಂದುವರಿದಿದೆ.ಮುಂದಿನ ಆರು ತಿಂಗಳ ಕಾರ್ಯಯೋಜನೆಗೆ ಐದು ಉಪನ್ಯಾಸಗಳ ಸರಣಿ, ಕರ್ನಾಟಕ ಕ್ರಿಶ್ಚಿಯನ್ ಮಹಿಳಾ ಲೇಖಕಿಯರು ಮತ್ತು ಪಂಡಿತರ ವೇದಿಕೆಯ ಸ್ಥಾಪನೆ, ಕ್ರಿಶ್ಚಿಯನ್ ಕಲಾವಿದರ ವೇದಿಕೆ ಹಾಗೂ ಮಾನವಶಾಸ್ತ್ರ ತಜ್ಞರ ಚಿಂತಕ ವೇದಿಕೆ ಸೇರಿವೆ. ಜುಲೈನಲ್ಲಿ “ರಾಷ್ಟ್ರ ನಿರ್ಮಾಣದಲ್ಲಿ ಕ್ರಿಶ್ಚಿಯನ್ ಕೊಡುಗೆಗಳು: ಸ್ವಾತಂತ್ರ್ಯ ಹೋರಾಟ, ನಿಜಗಳು ಮತ್ತು ಭ್ರಾಂತಿಗಳು” ವಿಷಯದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವ ಯೋಜನೆ ಇದೆ. ದೀರ್ಘಕಾಲದಲ್ಲಿ ಹೋಲಿಕೆಧರ್ಮ ಅಧ್ಯಯನ ಶಾಲೆಯನ್ನು ಸ್ಥಾಪಿಸುವ ಗುರಿಯಿದ್ದು, ಹಲವು ಗಣ್ಯ ಪಂಡಿತರನ್ನು ತಜ್ಞ ಸಮಿತಿಗೆ ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ.CRCಯ ಬೆಳವಣಿಗೆ ರಾಜ್ಯದ ಕ್ರಿಶ್ಚಿಯನ್ ಪರಂಪರೆಯನ್ನು ಸಂಗ್ರಹಿಸುವಷ್ಟೇ ಅಲ್ಲ, ಅದನ್ನು ಭಾರತದ ವಿಶಾಲ ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂಧರ್ಭದಲ್ಲಿ ಅರ್ಥೈಸುವ ಪ್ರಭಾವಿ ಶೈಕ್ಷಣಿಕ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ಪ್ರಾದೇಶಿಕ ವಾರ್ತೆಗಳು

ಸಿದ್ದಕಟ್ಟೆ ಸಹಕಾರ ಸಂಘಕ್ಕೆ 5.70 ಕೋಟಿ ಬೆಳೆ ವಿಮಾ ಪರಿಹಾರ ಮೊತ್ತ ಬಿಡುಗಡೆ :ಪ್ರಭಾಕರ ಪ್ರಭು

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2024-25 ನೇ ಸಾಲಿಗೆ ಸಂಬಂಧಿಸಿದಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ 1771 ರೈತರ 2037 ಎಕ್ರೆ ಅಡಿಕೆ ಬೆಳೆಗೆ ಅಂದಾಜು ಒಟ್ಟಿಗೆ 5.70 ಕೋಟಿ ವಿಮಾ ಪರಿಹಾರ ಬಿಡುಗಡೆಗೊಂಡಿದ್ದು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ ಎಂದೂ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.2024- 25 ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ ರೈತರು ಒಟ್ಟಿಗೆ 53 ಲಕ್ಷ ವಿಮೆ ಪ್ರಿಮಿಯಂ ಪಾವತಿಸಿದ್ದು ಗ್ರಾಮವಾರು ಬಿದ್ದ ಮಳೆಯ ಪ್ರಮಾಣ ಹಾಗೂ ಹವಾಮಾನ ವೈಫರಿತ್ಯದ ಆಧಾರದಲ್ಲಿ ಪರಿಹಾರ ಮೊತ್ತ ನಿಗದಿಯಾಗುತ್ತಿದ್ದು ಸಿದ್ದಕಟ್ಟೆ ಸಂಫದ ವ್ಯಾಪ್ತಿಯಲ್ಲಿ 28 ಸಾವಿರ ದಿಂದ 30 ಸಾವಿರವರೆಗೂ ಪರಿಹಾರ ಬಿಡುಗಡೆ ಗೊಂಡಿರುತ್ತದೆ. ಈ ಕುರಿತು ಪ್ರಿಮಿಯಂ ಪಾವತಿಸಿದ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರೀಕ್ಸಿ ಸಬಹುದಾಗಿದೆ ಎಂದೂ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಹರೈನ್ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಜನಪ್ರಿಯ ವೈದ್ಯ, ಸಂಘಟಕ, ವಾಗ್ಮಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ವಿಶೇಷ ಅತಿಥಿ

ಸಮಾಜ ಮುಖೀ ವೈದ್ಯಕೀಯ ಸೇವೆಯ ಜೊತೆಗೆ, ಆರೋಗ್ಯ ಜಾಗೃತಿ, ನಾಡು ನುಡಿ ನೆಲ ಜಲ ಪರಿಸರ ಕಾಳಜಿ, ಗಡಿನಾಡ ಜಾಗೃತಿ ಹೋರಾಟ ಸಂಘಟನೆ ಸಾಹಿತ್ಯ ಭಾಷಣ ಪ್ರಾಯೋಜಕತ್ವ ಗಳಿಂದ ನಾಡಿನ ಉದ್ದಗಲಕ್ಕೂ ಗಟ್ಟಿ ಧ್ವನಿಯ ನೇರ ನಡೆ ನುಡಿಯ ಮೂಲಕ ಚಿರಪರಿಚಿತರಾಗಿರುವ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರೂ, ಪ್ರತಿಷ್ಠಿತ ಡಾ ಬಿ ಸಿ ರಾಯ್ ರಾಷ್ಟ್ರೀಯ ಸೇವಾ ಪುರಸ್ಕಾರ ಹಾಗೂ ದೇವರಾಜ ಅರಸು ರಾಜ್ಯ ಪುರಸ್ಕಾರ ಪಡೆದಿರುವ “ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು” ಅವರನ್ನು ವಿದೇಶದ ಖ್ಯಾತ “ಕನ್ನಡ ಸಂಘ ಬೆಹರೈನ್ “ ತನ್ನ 48 ನೇ ವರ್ಷದ ಕನ್ನಡ ವೈಭವ ಸಾಂಸ್ಕೃತಿಕ ಸಮ್ಮೇಳನಕ್ಕೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದೆ.

ಪ್ರಾದೇಶಿಕ ವಾರ್ತೆಗಳು

ಡಿ.13 ಮತ್ತು 14ರಂದು ನವಜ್ಯೋತಿ ಫ್ರೆಂಡ್ಸ್ ಕ್ಲಬ್ (ರಿ) ಕಳಸಗುರಿ ಅಡ್ಡೂರು ಪೊಳಲಿ ಇದರ ಸಹಾಯನಿಧಿಯ ದಶಮಾನೋತ್ಸವ ಕಾರ್ಯಕ್ರಮದ ಸಂಭ್ರಮ.

ಪೊಳಲಿ-ಕಳಸಗುರಿ ಅಡ್ಡೂರಿನ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ನ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಡಿ.13ರ ಶನಿವಾರ ಸಂಜೆ ಗಂಟೆ 5 ರಿಂದ ಕುಣಿತ ಭಜನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.00 ರಿಂದ ಸಭಾ ಕಾರ್ಯಕ್ರಮ,ಸಹಾಯ ನಿಧಿ ವಿತರಣೆ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ನಂತರ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯ ನಾಟಕ “ರಾಘು ಮಾಸ್ಟ್ರ್”ಪ್ರದರ್ಶನವಿದೆ. ಡಿ.14ರ ಭಾನುವಾರ ಬೆಳಿಗ್ಗೆ 11.00 ರಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.00 ರಿಂದ ಬಪ್ಪನಾಡು ಮೇಳದವರಿಂದ ಯಕ್ಷಗಾನ “ನಾಗತಂಬಿಲ”ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಬೇಕೆಂದು ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಆತ್ಮೀಯವಾಗಿ ವಿನಂತಿಸಿದೆ

ಪ್ರಾದೇಶಿಕ ವಾರ್ತೆಗಳು

ನಾಳೆಯಿಂದ ಹತ್ತು ದಿನಗಳ ಕಾಲ ಬೆಳಗಾವಿ ಚಳಿಗಾಲದ ಅಧಿವೇಶನ. BREAKNG NEWS

ಬೆಳಗಾವಿ – ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 8ರಿಂದ ಡಿಸೆಂಬರ್ 19ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಅಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ವಾಕ್ಸಮರಕ್ಕೆ ಸಿದ್ಧವಾಗಿದೆ

ಪ್ರಾದೇಶಿಕ ವಾರ್ತೆಗಳು

ಇಂದು ಶಾಸಕ ಡಿ.ವೇದವ್ಯಾಸ ಕಾಮತ್ ಮತ್ತು ಮಾಜಿ ಎಂಪಿ ನಳಿನ್ ಕುಮಾರ್ ಕಟೀಲು ಅವರ ಹುಟ್ಟುಹಬ್ಬ.

ಮಂಗಳೂರು – ಇಂದು ಡಿ.7 ಎಂಎಲ್ಎ ವೇದವ್ಯಾಸ ಕಾಮತ್ ಮತ್ತು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಹುಟ್ಟು ಹಬ್ಬವಾಗಿದ್ದು,Mpmlas news ಶುಭಾಶಯಗಳನ್ನು ಸಲ್ಲಿಸುತ್ತದೆ

ಪ್ರಾದೇಶಿಕ ವಾರ್ತೆಗಳು

ಹೈಕೋರ್ಟ್ ಪೀಠ ಸ್ಥಾಪನೆ ಮುಖ್ಯ ನ್ಯಾಯಮೂರ್ತಿಗಳ ಭೇಟಿ: ಪೂರಕವಾಗಿ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು

ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠ ಸ್ಥಾಪನೆ ಉದ್ದೇಶಕ್ಕಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಮೂರ್ತಿಗಳಾದ ಗೌರವಾನ್ವಿತ ವಿಭು ಬಖ್ರು ರವರನ್ನು ಉಡುಪಿ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಯಾಗಿ ಮನವಿಯನ್ನು ಸಲ್ಲಿಸಲಾಯಿತು ಹೋರಾಟ ಸಮಿತಿಯ ಸಂಚಾಲಕರು ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಐವನ್ ಡಿಸೋಜ ರವರು ಮನವಿಯನ್ನು ಸಲ್ಲಿಸಿ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಬಹಳ ಮುಖ್ಯವಾಗಿದ್ದು ಇದರಿಂದ ಸಾಮಾನ್ಯ ಜನರು ದೂರದ ಬೆಂಗಳೂರಿಗೆ ಹೋಗಿ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಾಗಿದ್ದು, ಹಾಗೂ ಮಳೆಗಾಲದ ಸಂದರ್ಭದಲ್ಲಿ ದೂರದ ಬೆಂಗಳೂರಿನ ಸಂಪರ್ಕ ಆಗಾಗ ಕಡಿತಗೊಳ್ಳುವುದರಿಂದ ಜನರು ಹೈಕೋರ್ಟಿಗೆ ಸಂಚರಿಸಲು ಕಷ್ಟವನ್ನು ಅನುಭವಿಸಬೇಕಾಗಿದ್ದು ಅಲ್ಲದೆ ಕರಾವಳಿ ಭಾಗ ಉಡುಪಿ ಚಿಕ್ಕಮಂಗಳೂರು ಕೊಡಗು ಜಿಲ್ಲೆಗಳ ದಾವೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಬಹಳ ತೊಂದರೆಯಾಗುತ್ತಿರುವುದರಿಂದ, ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವನ್ನು ತೋರಿಸಿರುವುದರಿಂದ, ಮೊದಲಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಸುಲು ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮಾನವೀಯ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಿತಿಯ ನಿಯೋಗದಲ್ಲಿ ಂಗಳೂರು ವಕೀಲ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಹೆಚ್‍. ವಿ. ಮಂಗಳೂರಿನ ಪ್ರಧಾನ ಜಿಲ್ಲಾ ಸರಕಾರಿ ವಕೀಲರಾದ ಶ್ರೀ ಎಂ ಪಿ ನರೋನ್ಹ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಪ್ರಧಾನ ಕಾರ್ಯದರ್ಶಿ ಶ್ರೀ, ಉಪಾಧ್ಯಕ್ಷ….. ಬ್ರಹ್ಮಾವರ ಅಧ್ಯಕ್ಷರಾದ…. ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

“Christian community’s contribution to education is immense – Response by AICU State President Alwyn D’Souza Paneer” Strong condemnation of remarks made on Christmas holidays and convent education “Why are prominent leaders who studied in Christian schools silent?”

In a press statement issued today, December 5, Karnataka State President of the All India Catholic Union, Alwyn D’Souza Paneer strongly condemned the recent statements made by Pramod Muthalik and Dr. Vijayalakshmi Balekundri. He stated, “Christians in India have made tremendous contributions in the fields of medicine, education, and humanitarian service.”Sharp response to the controversy over Christmas holidaysCriticising Muthalik’s warning that Christmas holidays should be reduced and schools would be locked up if not, Alwyn D’Souza said:“No one has the right to threaten to lock schools. The reason most students in India choose Christian institutions is because of their quality of education. Using threatening language regarding holidays is not an appropriate or civilized approach.”Condemnation of comments made about convent educationHe condemned the remarks made by Dr. Vijayalakshmi Balekundri about students studying in convent schools.“Students educated in convent schools have not betrayed the nation; they are contributing to nation-building,” he asserted.Calling these statements “derogatory and baseless,” he urged the government to take such remarks seriously. He demanded that the government file suo motu cases and take appropriate legal action against both individuals.Prominent leaders who studied in Christian schoolsHighlighting the many national and state leaders, administrators, and soldiers who have studied in Christian institutions, he questioned:“Senior BJP leaders, MPs, former Union Ministers, and many who serve in the defence sector are products of Christian education. Have they turned into terrorists? Are their achievements not a matter of pride for the nation?”He listed several leaders educated in Christian schools:Udupi MP Shobha Karandlaje, former Chief Minister D.V. Sadananda Gowda, former Union Home Minister L.K. Advani, J.P. Nadda, Arun Jaitley, Manohar Parrikar, Mangaluru MP and soldier Brijesh Chowta, Piyush Goyal – all studied in Christian institutions.He questioned, “According to the allegations made, are all these leaders terrorists? Why did they not become terrorists? These statements must be immediately withdrawn. And why are all these leaders silent?”Praise for Speaker U.T. KhaderHe described Karnataka Legislative Assembly Speaker U.T. Khader as a “soldier of discipline” and stated that “convent education is the foundation of his discipline, attitude, and personality.”Role of the Christian community in serviceHe recalled the significant service rendered by Christian institutions and doctors during crises like COVID-19, AIDS, and leprosy.“Christian doctors have worked day and night to save lives during critical times. Their service deserves respect, not insults,” he said.Appeal to the governmentHe urged the government to act against statements that create societal division.“Speeches that divide communities must be stopped immediately. If necessary, the government should file suo motu cases and initiate legal action,” he demanded.

Scroll to Top