ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಜನವರಿ 11 ರಂದು ಸುರತ್ಕಲ್ ನಲ್ಲಿ ಬಂಟರ ಕ್ರೀಡೋತ್ಸವ. ಡಾ ಪಿ.ವಿ ಶೆಟ್ಟಿ ಮುಂಬೈ ಅವರಿಗೆ ಗೌರವ ಸನ್ಮಾನ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇವರ ಸಹಯೋಗದಲ್ಲಿ ಬಂಟರ ಕ್ರೀಡೋತ್ಸವ ಜನವರಿ 11 ರಂದು ಭಾನುವಾರ ಸುರತ್ಕಲ್ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 8.30 ಕ್ಕೆ ನಡೆಯುವ ಬಂಟರ ಕ್ರೀಡೋತ್ಸವ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕರಾದ ವಸಂತ ಶೆಟ್ಟಿ ಉದ್ಘಾಟಿಸಲಿದ್ದಾರೆ‌. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಕ್ಕಾರು ಬಂಟರ ಸಂಘದ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ಎಕ್ಕಾರು, ಉದ್ಯಮಿ ಹರೀಶ್ ಶೆಟ್ಟಿ ಪೆರ್ಮುದೆ, ಮಂಗಳೂರು ಯಥಾಥ್೯ ಸೋಶಿಯಲ್ ನ ಈಶ್ವರ್ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಘದ ಸ್ಥಾಪಕಾಧ್ಯಕ್ಷ ರೋಹಿತಾಕ್ಷ ರೈ ಕುಳಾಯಿಗುತ್ತು ಉಪಸ್ಥಿತರಿರುವರು.ಮಧ್ಯಾಹ್ನ 12 ಗಂಟೆಗೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ 2025 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ ಪಿ ವಿ ಶೆಟ್ಟಿ ಮುಂಬೈ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಸಮಾರಂಭವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಂಬೈ ವಿ ಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಚಿತ್ರನಟ, ನಿರ್ದೇಶಕ ರೂಪೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷರಾದ ಎಂ ದೇವಾನಂದ ಶೆಟ್ಟಿಯವರ ಉಪಸ್ಥಿತಿಯಲ್ಲಿ ವಿಶ್ವಕಪ್ ವಿಜೇತ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿ ಕುಮಾರಿ ಧನಲಕ್ಷಿ ಪೂಜಾರಿ ಸುರತ್ಕಲ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು.ಸಂಜೆ 5.30 ಕ್ಕೆ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ನ ಕಾರ್ಯಾಧ್ಯಕ್ಚ ದೇವಿಚರಣ್ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ (ನಿ) ಅಧ್ಯಕ್ಷ ಲಯನ್ ಸುರೇಶ್ ರೈ, ಸುರತ್ಕಲ್ ಬಾಲಾಜಿ ಐಕಾನ್ ಸಂಸ್ಥೆಯ ಆಡಳಿತ ನಿರ್ದೇಶಕ ಹರೀಶ್ ಶೆಟ್ಟಿ ಕಾವೂರು ಭಾಗವಹಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷರುಗಳಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸುಧಾಕರ ಎಸ್ ಪೂಂಜ, ಎಂ‌ ಲೋಕಯ್ಯ ಶೆಟ್ಟಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಪುರುಷರಿಗೆ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ದೆಗಳನ್ನು ಆಯೋಜಿಸಲಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಂಧುತ್ವ ಕ್ರಿಸ್ಮಸ್ 2025 ಮತ್ತು ಬೃಹತ್ ರಕ್ತದಾನ ಶಿಬಿರ

ವಿಟ್ಲ: ಒಬ್ಬರ ಜೀವ ಉಳಿಸುವ ಪುಣ್ಯವೇ ಬಂಧುತ್ವ-ಸಹೋದರತ್ವ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂ.ಫಾ. ಸೈಮನ್ ಡಿಸೋಜ ಅವರು ಹೇಳಿದರು.ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯ ಮುಚ್ಚಿರಪದವಿನಲ್ಲಿ ಫಾತಿಮಾ ಮಾತೆಯ ದೇವಾಲಯ ಇದರ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಹಾಗೂ ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ, ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಘ ಮುರುವ-ಮಾಣಿಲ ಹಾಗೂ ಟಾಸ್ಕ್ ಬಳಗ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ ಬಂಧುತ್ವ ಕ್ರಿಸ್ಮಸ್-2025 ಹಾಗೂ ಬೃಹತ್ ರಕ್ತದಾನ ಶಿಬಿರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರು ವಂ.ಫಾ. ಸೈಮನ್ ಡಿಸೋಜ ಅವರು, ಕತ್ತಲೆಯಲ್ಲಿ, ಪಾಪ, ಮೌಢ್ಯ, ಅಹಂನಲ್ಲಿದ್ದ ಜನರಿಗೆ ರಕ್ಷಣೆ, ಬೆಳಕು ಹಾಗೂ ಬಿಡುಗಡೆ ನೀಡಲು ದೇವರು ತಮ್ಮ ಪುತ್ರನನ್ನೇ ಈ ಮನುಕುಲಕ್ಕೆ ನೀಡಿದರು. ದೇವರು ಎಲ್ಲವನ್ನೂ ನೀಡಿದಾಗ ನಾವೇನು ನೀಡಬಹುದು ಎಂದು ಯೋಚಿಸಿದಾಗ ಸರ್ವಧರ್ಮೀಯರೊಂದಿಗೆ ನಾವು ರಕ್ತದಾನ ಶಿಬಿರದ ಕಾರ್ಯಕ್ರಮ ಹಮ್ಮಿಕೊಂಡೆವು. ರಕ್ತದಾನ ಎಂಬುವುದು ಮತ್ತೊಬ್ಬರೊಂದಿಗೆ ಹಂಚುವ ಸಂಭ್ರಮ. ಇತರರ ಜೀವನ ಉಳಿಸಲು ನಮ್ಮನ್ನೇ ನೀಡುವುದು ರಕ್ತದಾನದ ಮಹತ್ವ. ನಾವು ನೀಡುವ ರಕ್ತ ಯಾವ ಧರ್ಮದ ವ್ಯಕ್ತಿಗೆ ಹೋಗುತ್ತೆ ಗೊತ್ತಿಲ್ಲ. ಆದರೆ ಒಂದು ಜೀವ ಉಳಿಸುವ ಪುಣ್ಯದ ಕಾರ್ಯ ಆಗತ್ತೆ ಅಂದರೆ ಸಂತೋಷಪಡಬೇಕು. ಇದುವೇ ನಿಜವಾದ ಬಂಧುತ್ವ, ಇದೇ ನಿಜವಾದ ಭ್ರಾತೃತ್ವ, ಇದೇ ನಿಜವಾದ ಸಹೋದರತ್ವ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಯ್ಯದ್ ಹಬೀಬುಲ್ಲಾ ಪೂಕೋಯ ತಂಙಲ್ ಪೆರುವಾಯಿ ಇವರು ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಯೇಸುಕ್ರಿಸ್ತ ಎಂದು ಆರಾಧಿಸುವ ಮಹಾನ್ ವ್ಯಕ್ತಿಯನ್ನು ಮುಸಲ್ಮಾನರೂ ಕೂಡ ಅವರನ್ನು ಗೌರವಿಸುತ್ತಾರೆ. ನಮ್ಮ ಧರ್ಮದಲ್ಲೂ ಯೇಸುಕ್ರಿಸ್ತರಿಗೆ ಮಹತ್ತರವಾದ ಸ್ಥಾನವಿದೆ. ಅವರ ಹೆಸರಿನಲ್ಲಿ ಈ ರಕ್ತದಾನ ಶಿಬಿರ ಆಯೋಜಿಸಿದ್ದು ಸಂತೋಷ. ದಾನಗಳಲ್ಲಿ ಪವಿತ್ರ ದಾನವೆಂದರೆ ಮತ್ತೊಬ್ಬರಿಗೆ ಬದುಕು ಕೊಡುವ ದಾನ. ರಕ್ತದಾನಕ್ಕೆ ಜಾತಿ, ಮತ ಬೇಧದ ಹಂಗಿಲ್ಲ. ರಕ್ತವನ್ನು ಯಾರಿಗೂ ಸೃಷ್ಟಿಸಲು ಸಾಧ್ಯವಿಲ್ಲ. ನಾವು ವೈಜ್ಙಾನಿಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಪ್ರಾರ್ಥನೆಯ ದಾನಕ್ಕಿಂತ ಕೈಗಳಿಂದ ಕೊಡುವ ದಾನವು ಶ್ರೇಷ್ಠವಾದದ್ದು ಎಂಬ ಮಾತಿದೆ. ಅದೇ ರೀತಿ ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತವನ್ನು ಮತ್ತೊಬ್ಬರ ಜೀವ ಉಳಿಸಲು ನೀಡುವ ಕಾಣಿಕೆಗಿಂತ ಮಿಗಿಲಾದದ್ದು ಬೇರಾವುದೇ ಇಲ್ಲ. ಧರ್ಮವನ್ನು ನೋಡಿ ಯಾರೂ ರಕ್ತ ಕೊಡುವುದಿಲ್ಲ ಮತ್ತು ತೆಗೆದುಕೊಳ್ಳುವುದಿಲ್ಲ.ಅದೇ ರೀತಿ ಸಾಮಾಜಿಕ ಬದುಕಿನಲ್ಲಿ ಧರ್ಮದ ಗೋಡೆಗಳನ್ನು ತರುವುದು ಅಕ್ಷಮ್ಯ ಅಪರಾಧ. ಧರ್ಮಗಳ ಮಧ್ಯೆ ನಡೆಯುವ ಹೊಡೆದಾಟ, ಸಂಶಯ, ಅಪನಂಬಿಕೆಯ ಈ ಕಾಲಘಟ್ಟದಲ್ಲಿ ಇಂತಹ ಬಂಧುತ್ವ ಕಾರ್ಯಕ್ರಮವು ಸಕಾಲಿಕ ಬೇಡಿಕೆಯಾಗಿದ್ದು ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಸರ್ವಧರ್ಮೀಯರಿಗೆ ಚರ್ಚ್ ಹಾಗೂ ಸ್ತ್ರೀ ಸಂಘಟನೆ ವತಿಯಿಂದ ಕುಸ್ವಾರ್ ಹಂಚಲಾಯಿತು. 40ಕ್ಕೂ ಅಧಿಕ ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ಜೊತೆಗೆ ಅಭಿನಯ ಹಾಗೂ ಕ್ಯಾರಲ್ಸ್ ಗಾಯನದ ಮೂಲಕ ಕ್ರಿಸ್ಮಸ್ ಸಂದೇಶದ ಸಾರಿದರು.ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸ್ತ್ರೀ ಸಂಘಟನೆಯ ಘಟಕ ಅಧ್ಯಕ್ಷೆ ರೇಷ್ಮಾ ಡಿಸೋಜ, ಐಸಿವೈಎಂ ಘಟಕ ಅಧ್ಯಕ್ಷ ಸ್ಟ್ಯಾನಿ ಡಿಸೋಜ, ಟಾಸ್ಕ್ ಸಂಘಟನೆ ಗೌರವ ಅಧ್ಯಕ್ಷ ಹಮೀದ್‌ ಹಾಜಿ ದರ್ಖಾಸ್‌, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ ಇದರ ಸ್ಥಾಪಕ ರವಿಚಂದ್ರ ಕುಲಾಲ್, ಹ್ಯುಮಾನಿಟಿ ಅಭಿಮಾನಿ ಬಳಗದ ಮೌರಿಸ್ ಡಿಸೋಜ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇದರ ಸಂಪರ್ಕಾಧಿಕಾರಿ ಡಾ.ಶೇಖ್ ಇಕ್ಬಾಲ್ ಹುಸೇನ್, ಸರ್ವ ಆಯೋಗಗಳ ಸಂಚಾಲಕ ರಾಲ್ಫ್ ಡಿಸೋಜ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜ.10: ಸ್ವರಾನುಬಂಧ ಸಂಗೀತ ಉತ್ಸವ

ಮಂಗಳೂರು,ಜ.6;ನಗರದ ನವ ಭಾರತ್ ಸರ್ಕಲ್ ಬಳಿಯಿರುವ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜನವರಿ 10 ರಂದು ಶನಿವಾರ ದಂದುಮಧ್ಯಾಹ್ನ 3.00 ರಿಂದ ರಾತ್ರಿ 8 ಗಂಟೆಯ ವರೆಗೆ ಸ್ವರಾನುಬಂಧ ಸಂಗೀತ ಉತ್ಸವ ನಡೆಯಲಿದೆ.ಈ ಉತ್ಸವದಲ್ಲಿ ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಬಳಿಕಶ್ರೀಮತಿ ವಿಭಾ ಎಸ್. ನಾಯಕ್ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.ತಬಲಾದಲ್ಲಿ ವಿಘ್ನೇಶ್ ಪ್ರಭು, ಹಾಗೂ ಹಾರ್ಮೋನಿಯಂ:ನಲ್ಲಿ ಮೇಧಾ ಜಿ. ಭಟ್ ಸಾಥ್ ನೀಡಲಿದ್ದಾರೆ. ಸಿತಾರ್-ಕೊಳಲು-ತಬಲಾ ಜುಗಲ್ ಬಂಧಿಉಸ್ತಾದ್ ರಫೀಕ್ ಖಾನ್ ಮತ್ತು ಪಿ. ಸಮೀರ್ ರಾವ್ ಅವರಿಂದ ಸಿತಾರ್ ಮತ್ತು ಕೊಳಲು ಜುಗಲ್ಬಂದಿ, ಪಂ. ರಾಜೇಂದ್ರ ನಾಕೋಡ್ ಅವರೊಂದಿಗೆ ನಡೆಯಲಿದೆ.ಯುವ ಕಲಾವಿದರಲ್ಲಿ ಸಂಗೀತದ ಕುರಿತು ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ವೇದಿಕೆ ಕಲ್ಪಿಸಲು ಪ್ರತೀ ವರ್ಷ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾರತೀಯ ಹಿಂದುಸ್ಥಾನಿ ಸಂಗೀತ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಗಳನ್ನು ಪ್ರತೀ ವರ್ಷ ಆಯೋಜಿಸಲಾಗುತ್ತಿದೆ. ಸಂಗೀತ ಕಾರ್ಯಕ್ರಮ ದಲ್ಲಿ ಎಲ್ಲರಿಗೂ ಉಚಿತ ಪ್ರವೇಶ ವಿದೆ ಎಂದು ಕಲಾ ಸಾಧನ ಸಂಸ್ಥೆ ನಿರ್ದೇಶಕಿ ಶ್ರೀಮತಿ ವಿಭಾ ನಾಯಕ್ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿ ಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಕಲಾವಿದರ ಪರಿಚಯ:ಉಸ್ತಾದ್ ರಫೀಕ್ ಖಾನ್ ಧಾರವಾಡ ಘರಾನಾಕ್ಕೆ ಸೇರಿದ ಪ್ರಸಿದ್ಧ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಿವಂಗತ ಉಸ್ತಾದ್ ಅಬ್ದುಲ್ ಕರೀಮ್ ಖಾನ್, ಅವರ ಕಾಲದ ಪ್ರಸಿದ್ಧ ಸಿತಾರ್ ವಾದಕರಾಗಿದ್ದರು; ಅವರ ಅಜ್ಜ ದಿವಂಗತ “ಸಿತಾರ್ ರತ್ನ ಉಸ್ತಾದ್ ರಹೀಮತ್ ಖಾನ್” ಸಿತಾರ್‌ನಲ್ಲಿ ಮೂಲ ಅಷ್ಟಮವನ್ನು ಸೇರಿಸಿದ್ದಕ್ಕಾಗಿ ಮಾನ್ಯತೆ ಪಡೆದಿದ್ದರು.ತಮ್ಮ ಕುಟುಂಬದ ಏಳು ತಲೆಮಾರುಗಳನ್ನು ಒಳಗೊಂಡ ಇಂತಹ ಪರಂಪರೆಯನ್ನು ಹೊಂದಿರುವ ಯುವ ರಫೀಕ್ ಖಾನ್, ಒಂಬತ್ತು ವರ್ಷ ವಯಸ್ಸಿನಲ್ಲೇ ಸಿತಾರ್ ವಾದನವನ್ನು ಕಲಿತರು. ಅವರ ಹಿರಿಯ ಸಹೋದರ ಉಸ್ತಾದ್ ಬೇಲ್ ಖಾನ್ ಕೂಡ ಅವರಿಗೆ 3.00ಪಾಠ ಕಲಿಸಿದರು.ರಫೀಕ್ ಖಾನ್ ಭಾರತ ಮತ್ತು ವಿದೇಶಗಳಾದ್ಯಂತದ ಹೆಚ್ಚಿನ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಅವರು ಮೈಸೂರಿನ ಡಾ. ಗಂಗುಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ಅವರ ವಿವಾಹ ಸಮಾರಂಭಕ್ಕಾಗಿ ಅವರು ಆಯ್ಕೆಯಾದ ಸಿತಾರ್ ವಾದಕರೂ ಆಗಿದ್ದರು.ಅವರ ನುಡಿಸುವಿಕೆಯ ವಿಶಿಷ್ಟ ಲಕ್ಷಣವೆಂದರೆ ಅವರು “ಗಾಯಕಿ ಅಂಗ್” ಮತ್ತು “ತಂತಕರಿ ಅಂಗ್” ರಾಗದಲ್ಲಿ ರಾಗದ ಶುದ್ಧತೆಯನ್ನು ಕಾಪಾಡುತ್ತಾರೆ ಮತ್ತು ಎರಡು ಮಿಶ್ರ ಶೈಲಿಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ.ಅವರ ಚುರುಕಾದ ಬೆರಳುಗಳ ಚಲನೆಯಿಂದ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಪ್ರಸ್ತುತ ಅವರು ಮಂಗಳೂರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಸಿಬ್ಬಂದಿ ಯಾಗಿದ್ದಾರೆ.ರಾಜೇಂದ್ರ ನಾಕೋಡ್ ತಬಲಾವನ್ನು ಮೊದಲು ತಮ್ಮ ತಂದೆ ಪಂಡಿತ್ ಅರ್ಜುನ್ ನಾಕೋಡ್ ಅವರಿಂದ ಕಲಿತರು, ನಂತರ ಅವರ ಹಿರಿಯ ಸಹೋದರ ಪಂಡಿತ್ ರಘುನಾಥ್ ನಾಕೋಡ್ ಮತ್ತು ಇನ್ನೊಬ್ಬ ಸಹೋದರ ಪಂಡಿತ್ ವಿಶ್ವನಾಥ್ ನಾಕೋಡ್ ಅವರಿಂದ ಕಲಿತರು. ರಾಜೇಂದ್ರ ನಾಕೋಡ್ ಅವರು ಆಲ್ ಇಂಡಿಯಾ ರೇಡಿಯೋ ಮತ್ತು ಟೆಲಿವಿಷನ್‌ನ ಉನ್ನತ ಶ್ರೇಯಾಂಕಿತ ಕಲಾವಿದರಾಗಿದ್ದಾರೆ. ರಾಜೇಂದ್ರ ಭಾರತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದರು. ಗಣಭಾನು ಪಂಡಿತ್ ಪುಟ್ಟರಾಜ್ ಗವಾಯಿ ಪ್ರಶಸ್ತಿ, ಅನುಗ್ರಹ ಯಲಗುರೇಶ ಪ್ರಶಸ್ತಿ, ಸಂಗೀತ ಶ್ರೀ ಪ್ರಶಸ್ತಿ, ಉಸ್ತಾದ್ ಬಾಲೇಖಾನ್ ಪ್ರಶಸ್ತಿ, ಭಕ್ತಿ ತಾಳ ಸುಡಾನ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ರಾಜೇಂದ್ರ ಪಡೆದಿದ್ದಾರೆಅಲ್ಲದೆ ರಾಜೇಂದ್ರ ಅವರು ಪದ್ಮಭೂಷಣ, ಬಸವರಾಜ ರಾಜಗುರು, ಪದ್ಮಭೂಷಣ, ಬೇಗಂ ಪರ್ವೀನ್ ಸುಲ್ತಾನ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಪಂ. ವಿಶ್ವಮೋಹನ ಭಟ್, ಪದ್ಮಭೂಷಣ ಪಂ. ಶಿವಕುಮಾರ ಶರ್ಮಾ, ವಿಧುಷಿ ಡಾ.ಪ್ರಭಾ ಆತ್ರೆ, ವಿಧುಷಿ ವೀಣಾ ಸಹಸ್ರ ಬುಧೆ, ಪಂ. ವೆಂಕಟೇಶಕುಮಾರ್, ಪಂ. ವಿನಾಯಕ ತೊರ್ವಿ, ಪಂ, ಗಣಪತಿ ಭಟ್, ಪಂ. ಪರಮೇಶ್ವರ ಹೆಗಡೆ, ವಿಧುಷಿ ಡಾ.ಶ್ಯಾಮಲನ್ ಭಾವೆ, ಪಂ., ಜಯತೀರ್ಥರ ಮೇಯುಂಡಿ ಪದ್ಮಶ್ರೀ ಪಂ. ರೋಣು ಮುಜುಂದಾರ್, ಕಲೈಮಾಮಣಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್, ವಿದ್ವಾನ್ ಮೈಸೂರು ನಾಗರಾಜ್ ಮತ್ತು ವಿದ್ವಾನ್ ಮೈಸೂರು ಮಂಜುನಾಥ್ ಜೊತೆ ಸಾಥ್ ನೀಡಿದವರು.ಸಮೀರ್ ರಾವ್ ಅವರು ಮೈಸೂರಿನಲ್ಲಿ ಪಂಡಿತ್ ವೀರಭದ್ರಯ್ಯ ಹಿರೇಮಠ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭಿಸಿದ ಹನ್ನೊಂದನೇ ವಯಸ್ಸಿನಿಂದಲೂ ಬಾನ್ಸುರಿಯ ಮೂಲಕ ಉಸಿರಾಡುವುದು ಸಮೀರ್ ಅವರ ಆಯ್ಕೆ ಮಾರ್ಗವಾಗಿದೆ. 2002 ರಲ್ಲಿ, ಅವರು ವಿಶ್ವವಿಖ್ಯಾತ ಬಾನ್ಸುರಿ ಮಾಂತ್ರಿಕರಾದ ಪದ್ಮವಿಭೂಷಣ ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ ಜಿಯವರ ಶಿಷ್ಯರಾಗಲು ಆಶೀರ್ವಾದ ಪಡೆದರು. 2004 ರಿಂದ 2010 ರವರೆಗೆ.೨೦೧೦ ರಲ್ಲಿ, ಪಂಡಿತ್ ಚೌರಾಸಿಯಾ ಜಿ ಅವರು ಒಡಿಶಾದ ಭುವನೇಶ್ವರದಲ್ಲಿ ಹೊಸದಾಗಿ ಸ್ಥಾಪಿಸಲಾದ ವೃಂದಾಬನ ಗುರುಕುಲದಲ್ಲಿ ನಿರ್ವಹಣೆ ಮತ್ತು ಬೋಧನೆಯ ಜವಾಬ್ದಾರಿಯನ್ನು ಸಮೀರ್ ಅವರಿಗೆ ವಹಿಸಿದರು, ೨೦೧೨ ರವರೆಗೆ ಅವರು ಈ ಪಾತ್ರವನ್ನು ನಿರ್ವಹಿಸಿದರು.ಆಲ್ ಇಂಡಿಯಾ ರೇಡಿಯೋದಲ್ಲಿ ‘ಎ’ ಶ್ರೇಣಿಯ ಕಲಾವಿದರಾಗಿರುವ ಸಮೀರ್, ಭಾರತದಾದ್ಯಂತ ಮತ್ತು ಅಂತರರಾಷ್ಟ್ರೀಯವಾಗಿ ಚೀನಾ, ಸ್ವಿಟ್ಜರ್ಲೆಂಡ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್, ದಕ್ಷಿಣ ಕೊರಿಯಾ, ನಾರ್ವೆ, ಯುಕೆ ಮತ್ತು ಯುಎಸ್ಎ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಸದಸ್ಯರಾಗಿದ್ದಾರೆ.ಅವರ ಪುರಸ್ಕಾರಗಳಲ್ಲಿ ಚೆನ್ನೈನ ಗುರು ಗಾನಯೋಗಿ ಟ್ರಸ್ಟ್‌ನಿಂದ ‘ಶ್ರೇಷ್ಠತಾ ಪ್ರಶಸ್ತಿ’, ಮೈಸೂರಿನ ನಾದ ಬ್ರಹ್ಮ ಸಂಗೀತ ಸಭಾದಿಂದ ‘ನಾದ ಕಿಶೋರ್’, ಮುಂಬೈನ ಸುರ್ ಸಿಂಗಾರ್ ಸಂಸದ್‌ನಿಂದ ‘ಸುರ್ಮಣಿ’, ನಾಟ್ಯ ತರಂಗದಿಂದ ‘ಸಂಸ್ಕೃತಿಕಾ ಸಾರಥಿ, ಸಾಗರ ಮತ್ತು ಇನ್ನೂ ಅನೇಕವು ಸೇರಿವೆ.ಮೈಸೂರಿನಲ್ಲಿ ನೆಲೆಸಿರುವ ಸಮೀರ್, ಭುವನೇಶ್ವರದ ವೃಂದಾವನ ಗುರುಕುಲದಲ್ಲಿ ಪ್ರದರ್ಶನ ನೀಡುವುದು, ಕೆಲವು ಸಮರ್ಪಿತ ವಿದ್ಯಾರ್ಥಿಗಳಿಗೆ ಕಲಿಸುವುದು ಮತ್ತು ಸಂದರ್ಶಕ ಅಧ್ಯಾಪಕರಾಗಿ ಸೇವೆ ಸಲ್ಲಿಸುವುದನ್ನು ಮುಂದುವರೆಸಿದ್ದಾರೆ.ಕಲಾಸಾಧನ ಸ್ವರಅನುಬಂಧ ಸಂಗೀತ ಉತ್ಸವಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ.

ಪ್ರಾದೇಶಿಕ ವಾರ್ತೆಗಳು

HORE KANIKE PROCESSION FLAGS OFF INFANT JESUS NOVENA PREPARATIONS

Report & Pics: Carmel Kiran MediaIn preparation for the forthcoming Novena and Annual Feast of the Infant Jesus, a solemn Hore Kanike (votive offering) procession was held on Saturday, January 3, 2026, from Cordel Church to the Infant Jesus Shrine, Bikarnakatte. The devotion-filled procession witnessed the participation of numerous faithful who offered their votive gifts in a spirit of gratitude, faith, and hope.The votive offerings were blessed by Rev. Fr. Vijay Monteiro, Assistant Parish Priest of Cordel Church, and the procession was formally flagged off by Mrs. Ruth Castelino, Vice President of Cordel Church. The faithful then proceeded prayerfully towards the shrine, marking the spiritual beginning of the novena celebrations.On arrival, Rev. Fr. Melwyn D’Cunha, Superior of St. Joseph’s Monastery, and Rev. Fr. Stephen Pereira, Shrine Director of the Infant Jesus Shrine, expressed their heartfelt gratitude to the gathering and assured continuous prayers for all devotees and benefactors. As part of the celebrations, the unique programme “Sahaballve”, aimed at promoting harmonious and fraternal living in society, was held. The programme was graced by Mr. Muneer Katipalla, noted social activist; Mrs. Shalet Pinto, Chairperson of the Karnataka Eco-Tourism Development Board; and Mr. Dinesh Hegde of Ulepady, Advocate and Human Rights activist.Sharing his personal experience, Mr. Muneer Katipalla remarked that harmonious living is natural to human beings and cautioned against divisive political narratives. He observed that people often stop listening to their neighbours while giving attention to politically motivated stories, urging society instead to share real-life stories of fraternity and coexistence. The event was also attended by Rev. Fr. Praveen Martis, Vice Chancellor of St. Aloysius Deemed to be University; Sr. Reena D’Souza, Superior of Santa Cruz Convent, Kulshekar; and local corporators Mr. Keshav and Mr. Naveen. All groups who participated in the procession with votive offerings were later honoured.At the conclusion, Rev. Fr. Praveen Martis offered prayers over all the forthcoming activities. He blessed the flag and, by ceremonially hoisting it, officially declared the Novena and Annual Feast of the Infant Jesus open. The spiritual theme for the year, “Called to Carmel, to the Wedding Feast of the Lamb,” invites the faithful to reflect on the soul’s journey towards union with God, inspired by the teachings of St. John of the Cross. The year holds special significance as the Church commemorates 300 years of his sainthood and 100 years since he was declared a Doctor of the Church.The Novena Masses will be held from January 5 to January 13, with nine Masses celebrated daily, along with Eucharistic Adoration attended by devotees. The Annual Feast of the Infant Jesus will be celebrated on January 14 and 15, 2026, drawing thousands of pilgrims to the shrine in faith and devotion.

ಪ್ರಾದೇಶಿಕ ವಾರ್ತೆಗಳು

ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ

ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜನವರಿ 3, 2026 ಶನಿವಾರ, ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಸಾಮಾಜಿಕ ಸೌಹಾರ್ದತೆ ಯನ್ನು ಉತ್ತೇಜಿಸುವ “ಸಹಬಾಳ್ವೆ” ಕಾರ್ಯಕ್ರಮ ಪುಣ್ಯಕ್ಷೇತ್ರದ ಆಂಗಣದಲ್ಲಿ ನಡೆಯಿತು. ಮುನೀರ್ ಕಾಟಿಪಳ್ಳ (ಸಾಮಾಜಿಕ ಕಾರ್ಯಕರ್ತ ), ಶ್ರೀಮತಿ ಶಾಲೇಟ್ ಪಿಂಟೊ (ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ) ಹಾಗೂ ಶ್ರೀ ದಿನೇಶ್ ಹೆಗಡೆ, ಉಳೇಪಾಡಿ (ಮಾನವ ಹಕ್ಕುಗಳ ಹೋರಾಟಗಾರ, ವಕೀಲರು) ಭಾಗವಹಿಸಿದರು. ಸಮಾಜದಲ್ಲಿ ಸಹೋದರತ್ವ ಮತ್ತು ಏಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ವಂ. ಪ್ರವೀಣ್ ಮಾರ್ಟಿಸ್ (ಉಪಕುಲಪತಿ, ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯ); ಸಿಸ್ಟರ್ ರೀನಾ ಡಿಸೋಜಾ, (ಸಾಂತಾ ಕ್ರೂಸ್ ಕಾನ್ವೆಂಟ್, ಕುಲಶೇಖರ); ಹಾಗೂ ಕಾರ್ಪೊರೇಟರ್ ಗಳಾದ ಕೇಶವ್ ಮತ್ತು ನವೀನ್ ಉಪಸ್ಥಿತರಿದ್ದರು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ವಂ. ಮೆಲ್ವಿನ್ ಡಿ’ಕುನ್ನಾ, ಸಂತ ಜೋಸೆಫ್ ಮಠದ ಮಠಾಧೀಶರು) ಮತ್ತು ವಂ. ಸ್ಟೀಫನ್ ಪಿರೇರಾ, ಪುಣ್ಯಕ್ಷೇತ್ರದ ನಿರ್ದೇಶಕರು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆಯ ಭರವಸೆ ನೀಡಿದರು. ಅಂತಿಮವಾಗಿ ವಂ. ಪ್ರವೀಣ್ ಮಾರ್ಟಿಸ್ ಧ್ವಜಕ್ಕೆ ಆಶೀರ್ವಾದ ನೀಡಿ ಧ್ವಜಾರೋಹಣ ಮಾಡುವ ಮೂಲಕ ನವೆನಾ ಮತ್ತು ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು.ಈ ವರ್ಷದ ಮಹೋತ್ಸವದ ಧ್ಯಾನದ ವಿಷಯ “ ಕರೆದಿಹರು ಕಾರ್ಮೆಲ್ ಗಿರಿಗೆ, ಕುರಿಮರಿಯ ಲಗ್ನ ಉತ್ಸವಕೆ” ಎಂಬುದಾಗಿದ್ದು, ಶಿಲುಬೆಯ ಸಂತ ಯೊವಾನ್ನರ ಉಪದೇಶಗಳಿಂದ ಪ್ರೇರಿತವಾಗಿದೆ. ಅವರ ಸಂತತ್ವದ 300ನೇ ರ‍್ಷ ಮತ್ತು ಪವಿತ್ರ ರ‍್ಮಸಭೆಯ ಪಂಡಿತರೆಂದು ಘೋಷಿಸಲಾದ 100ನೇ ರ‍್ಷದ ಸ್ಮರಣೆಯೂ ಈ ವರ್ಷ ಆಚರಿಸಲಾಗುತ್ತಿದೆ.ಜನವರಿ 5 ರಿಂದ 13ರವರೆಗೆ ದಿನವಿಡೀ ನವೆನಾವಿಧಿಗಳು, 9 ಪೂಜಾಕರ‍್ಯಗಳು ಹಾಗೂ ಪವಿತ್ರ ಸಂಸ್ಕಾರದ ಆರಾಧನೆ ನಡೆಯಲಿದ್ದು, ವರ್ಷದ ಜಾತ್ರೆ ಜನವರಿ 14 ಮತ್ತು 15, 2026ರಂದು ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಧರ್ಮ ಒಂದೇ ಅದುವೆ ವಿಶ್ವ ಮಾನವ ಧರ್ಮ- ಡಾ ಸುರೇಶ ನೆಗಳಗುಳಿ

ಕುವೆಂಪು ಜನ್ಮ ದಿನದ ನೆನಪಿನಲ್ಲಿ ಓ ನನ್ನ ಚೇತನಾ ವಿಚಾರಗೋಷ್ಠಿ, ಕವಿಗೋಷ್ಠಿಯು ಜನವರಿ ನಾಲ್ಕರ ಭಾನುವಾರ ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಸಭಾಭವನದಲ್ಲಿ ವಿಜೃಂಭಣೆ ಯಿಂದ ನಡೆಯಿತು.ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ(KSSAP)ದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಅವರು ಕುವೆಂಪು ಅವರ ಬಗ್ಗೆ ಮಾತನಾಡಿ ವಿಶ್ವ ಮಾನವಧರ್ಮ ಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು. ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದು ಕುವೆಂಪು ಅವರ ಬಗೆಗೆ ಸವಿವಾರವಾಗಿ ಮಾತನಾಡಿದರು.ಸಮಾಜಿಕ ಚಿಂತಕ ರಂಜನ್ ಕುಮಾರ್,ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧೀ, ಮತ್ತು NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ.ಇಲಿಯಾಸ್ ಮುಖ್ಯ ಅತಿಥಿಗಳಾಗಿದ್ದರು.ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿmy ಜ್ಯೋತಿ ಮಹದೇವ್ ವಹಿಸಿದ್ದರು. ಅವರು ಕುವೆಂಪು ಹಾಗೂ ಕಾವ್ಯಗಳ ಕುರಿತು ಮಾತನಾಡಿದರು.ಇದಲ್ಲದೆ ರಾಣಿ ಪುಷ್ಪಲತಾ ದೇವಿಯವರು ನೆಗಳಗುಳಿ ಹಾಗೂ ಜ್ಯೋತಿ ಮಹದೇವ್ ರನ್ನು ಶಾಲು ಹಾರ ಪೇಟ ನೆನಪಿನ ಕಾಣಿಕೆ ಸಹಿತವಾಗಿ ಗೌರವಿಸಿದರು.ಕವಿಗಳಾದ ಅಶ್ವಿನಿ ಕೊಂಜಾಡಿ, ,ವಾಣಿಶ್ರೀ ಅಶೋಕ್ ಐತಾಳ್ ಕೆ , ಡಾ. ಪ್ಲಾವಿಯ ಕ್ಯಾಸ್ಟಲಿನೊ , ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ, ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ.,ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್ ಪಿ, ಆಯಿಷಾ ಪೆರ್ನೆ, ವಿನೋದಾ ಪ್ರಕಾಶ್ ಪಡುಬಿದ್ರಿ, ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ, ಸುಲೋಚನ ನವೀನ್, ತನ್ಸೀರಾ ಆತೂರ್, ಸುಮಯ್ಯಾ ಎಂ ಪಾಟೀಲ್ ದೇರಳಕಟ್ಟೆ, ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ, ಪೂರ್ಣಿಮಾ ಅನಿಲ್‌ ಮಣಿಪಾಲ, ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ ಮಂಗಳೂರು,ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ಭಾಗವಹಿಸಿದ ಕವಿಗಳೆಲ್ಲರಿಗೂ ಪ್ರಶಂಶನ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು.ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಣೆ ಗೈದರು.

ಪ್ರಾದೇಶಿಕ ವಾರ್ತೆಗಳು

ವಲ್ಲಿ ವಗ್ಗ ಅವರಿಗೆ ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ

ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ, ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿ’ಸೋಜಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯ ಮೌಲ್ಯ ರೂ. 25,000, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಜನವರಿ 11, 2026 ರಂದು ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20 ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವ್ಜೊ ಅವರು ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಿದ್ದಾರೆ.ಕೊಂಕಣಿ-ಕನ್ನಡ ಕವಿ ಮತ್ತು ಸಣ್ಣ ಕಥೆಗಾರ ವಲೇರಿಯನ್ ಡಿಸೋಜಾ ಅವರು ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುತ್ತಾರೆ. ಅವರು 1947 ಜುಲೈ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ವಗ್ಗ ಎಂಬ ಸಣ್ಣ ಪಟ್ಟಣದಲ್ಲಿ ಪೀಟರ್ ಮತ್ತು ಮೇರಿ ಡಿ’ಸೋಜಾ ಅವರಿಗೆ ನಾಲ್ಕನೇ ಮಗುವಾಗಿ ಜನಿಸಿದರು. ಹದಿನೇಳನೇ ವಯಸ್ಸಿನಲ್ಲಿ, ಅವರ ಮೊದಲ ಕಥೆ ‘ಸೊರ‍್ಯಾವರ್ವಿಂ ಚುರ್ಚುರೆ’, ರಾಕ್ಣೊ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಅಂದಿನಿಂದ, ಕಳೆದ ಆರು ದಶಕಗಳಲ್ಲಿ, ಅವರು ನೂರಾರು ಕವನಗಳನ್ನು ಮತ್ತು ವಿವಿಧ ನಿಯತಕಾಲಿಕೆಗಳು, ವೆಬ್‌ಸೈಟ್‌ಗಳು ಮತ್ತು ಸಂಕಲನಗಳಲ್ಲಿ ಕಥೆಗಳು, ಬರಹಗಳು ಮತ್ತು ಸಂಕಲನಗಳನ್ನು ಪ್ರಕಟಿಸಿದ್ದಾರೆ.‘ದೊಂಗ್ರಾ ವಯ್ಲಿ ವಾಟ್’ (2007) ಮತ್ತು ‘ನೆಕೆತ್ರಾಂ’ (2013) ಅವರ ಕವನ ಸಂಕಲನಗಳು. ‘ಜಿನ್ನಿ ಕೊಣಾಚೆಂ?’ (1966), ‘ಸತ್ ಆನಿ ಜಿವಿತ್’ (1967), ‘ಧುಳ್’ (1990) ಮತ್ತು ‘ಖಾಂದಿ ಖುರಿಸ್’ (2015) ಅವರ ಕಥಾ ಸಂಕಲನಗಳಾಗಿವೆ. ಅಭಿರುಚಿ ಪ್ರಕಾಶನ, ಮೈಸೂರು 2013 ರಲ್ಲಿ ‘ಹೆಗಲ ಶಿಲುಬೆ’ ಎಂಬ ಶೀರ್ಷಿಕೆಯ ಹದಿನೇಳು ಕಥೆಗಳ ಸಂಕಲನವನ್ನು ಕನ್ನಡದಲ್ಲಿ ಪ್ರಕಟಿಸಿದೆ.2001 ರಲ್ಲಿ, ಅವರ ‘ಕಾಡಾಡಿ’ ಕಥೆ ಕರ್ನಾಟಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿತು.ವಲ್ಲಿ ವಗ್ಗ ಒಬ್ಬ ಬರಹಗಾರರಷ್ಟೇ ಅಲ್ಲ, ಕೊಂಕಣಿ ಭಾಷೆಯ ಉತ್ಸಾಹಿ ಕಾರ್ಯಕರ್ತರೂ ಆಗಿದ್ದಾರೆ. ಮೈಸೂರಿನಲ್ಲಿ ಸ್ಥಾಪಿಸಲಾದ ಕೊಂಕಣಿ ಕ್ರಿಶ್ಚಿಯನ್ ಸಂಘದ ಮೊದಲ ಜಂಟಿ ಕಾರ್ಯದರ್ಶಿ ಮತ್ತು ಆರು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದರು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2010), ಕೊಂಕಣಿ ಕುಟಮ್ ಬಾಹ್ರೇನ್ ಪ್ರಶಸ್ತಿ (2012), ದಾಯ್ಜಿ ದುಬಾಯ್ ಪ್ರಶಸ್ತಿ (2019), ಸಂದೇಶ ಸಾಹಿತ್ಯ ಪ್ರಶಸ್ತಿ (2020) – ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2020 ರಲ್ಲಿ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶ್ರೀಮತಿ ನಾಗಿಣಿಭರಣ ಅವರ ನಿರ್ದೇಶನದಲ್ಲಿ ವಲ್ಲಿ ವಗ್ಗ ಅವರ ಕೊಂಕಣಿ-ಕನ್ನಡ ಸಾಹಿತ್ಯ ಕೃತಿಯ ಕುರಿತು 7 ನಿಮಿಷಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಿತು. ನವೆಂಬರ್ 2020 ರಲ್ಲಿ, ಅವರಿಗೆ ಕರ್ನಾಟಕದ ಮುಖ್ಯಮಂತ್ರಿಗಳು 1 ಲಕ್ಷ ರೂ. ಮತ್ತು ಇಪ್ಪತ್ತು ಗ್ರಾಂ ಚಿನ್ನದ ಪದಕದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿಯನ್ನು ಮಂಗಳೂರು ಬಳಿಯ ಕುಪ್ಪೆಪದವುವಿನ ಜೋಸೆಫ್ ಮಥಾಯಸ್ ಅವರು ಸ್ಥಾಪಿಸಿದರು, ಅವರು ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್‌ಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹದಿನೇಳು ಕವಿಗಳಿಗೆ ನೀಡಲಾಗಿದೆ. ವಲ್ಲಿ ವಗ್ಗ 18 ನೇ ಪ್ರಶಸ್ತಿ ವಿಜೇತರು.

ಪ್ರಾದೇಶಿಕ ವಾರ್ತೆಗಳು

BREAKING NEWS. ಮುಂಬಯಿಯ ಖ್ಯಾತ ಉದ್ಯಮಿಯೊಬ್ಬರಿಗೆ ಹನಿ ಟ್ರ್ಯಾಪ್. 5 ಕೋಟಿ ಡೀಲ್

ಬೆಂಗಳೂರು – ಮುಂಬಯಿ ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್ ಮಾಡಿದ ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಡಲಾಗಿದೆ. ಈ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದೆ. ಇದರ ಡೀಟೇಲ್ ವರದಿ ನಿರೀಕ್ಷಿಸಿ

ಪ್ರಾದೇಶಿಕ ವಾರ್ತೆಗಳು

ನಿಟ್ಟೆ ವಿನಯ ಹೆಗ್ಡೆ ನಿಧನ

ಮಂಗಳೂರು: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ, ಶಿಕ್ಷಣ ತಜ್ಞ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕ ಎನ್. ವಿನಯ ಹೆಗ್ಡೆ (86) ಗುರುವಾರ ನಸುಕಿನ 2 ಗಂಟೆ ಸುಮಾರಿಗೆ ಕದ್ರಿ ಶಿವಬಾಗ್‍ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪತ್ನಿ ಸುಜಾತಾ ಹೆಗ್ಡೆ, ಪುತ್ರ ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಪುತ್ರಿ ಬೆಂಗಳೂರಿನ ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಅಶ್ವಿತಾ ಪೂಂಜ, ಸಹೋದರ ನಿವೃತ್ತ ಕರ್ನಾಟಕ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಸಹಿತ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಆಗಿದ್ದ ಕೆ.ಎಸ್. ಹೆಗ್ಡೆ (ಕೌಡೂರು ಸದಾನಂದ ಹೆಗ್ಡೆ) ಅವರ ದ್ವಿತೀಯ ಪುತ್ರರಾದ ವಿನಯ ಹೆಗ್ಡೆ ಅವರು ಕರಾವಳಿ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಶಿಕ್ಷಣ ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು ಧಾರ್ಮಿಕ, ಸಾಮಾಜಿಕ ಸೇವೆಯ ಮೂಲಕವೂ ಅಪಾರ ಖ್ಯಾತಿ ಗಳಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.*ಎರಡು ದಿನ ಹಿಂದೆ ಅಯೋಧ್ಯೆ ರಾಮನ ದರ್ಶನ*ವಿನಯ ಹೆಗ್ಡೆ ಕುಟುಂಬ ಸಹಿತ ಡಿ. 28ರಂದು ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿ, ಶ್ರೀರಾಮಚಂದ್ರನ ದರ್ಶನ ಪಡೆದು ಬಂದಿದ್ದರು. ಅಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಜತೆಯಲ್ಲೇ ಶ್ರೀರಾಮನ ದರ್ಶನ ಮಾಡಿದ್ದರು. ಈ ವೇಳೆ ಅವರು, ಜೀವನದ ಆಸೆ ಈಡೇರಿದೆ ನನಗೆ ಇನ್ನೇನು ಬೇಕು’ ಎನ್ನುವ ಮಾತನ್ನು ಹೇಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅಯೋಧ್ಯೆಯಿಂದ ಬಂದವರಿಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ಡಿ. 30ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಡಿ. 31ರಂದು ಮನೆಯಲ್ಲೇ ಇದ್ದು, ರಾತ್ರಿ ಮಲಗಿದವರು ಎದ್ದು ಶೌಚಾಲಯಕ್ಕೆ ಹೋಗಿ ಮರಳಿ ಬಂದು ಹಾಸಿಗೆಯಲ್ಲಿ ಕುಳಿತವರು ಅಲ್ಲೇ ಮಲಗಿ ನಿಧನ ಹೊಂದಿದರು.

ಪ್ರಾದೇಶಿಕ ವಾರ್ತೆಗಳು

ಹರೀಶ್ ಮೋಟುಕಾನ ಅವರಿಗೆ ಕನ್ನಡ ಕಸ್ತೂರಿ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದಿಂದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ಡಿ.30ರಂದು ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ ಅವರು ಕನ್ನಡ ಕಸ್ತೂರಿ ಪುರಸ್ಕಾರ ಸ್ವೀಕರಿಸಿದರು.

Scroll to Top