ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸೌತ್ ಕೆನರಾ ಫೋಟೋಗ್ರಾಫರ್ಸ್ ಆಸೋಸಿಯೇಶನ್ಸ್ ಬಂಟ್ವಾಳ ವಲಯದಿಂದ ನಿವೃತ್ತ ಸೇನಾನಿ ಡಿ ಶಿವರಾಮ್ ರಾವ್ ಬೈರಿಕಟ್ಟೆ ಸನ್ಮಾನ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದ. ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯದಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಿವೃತ್ತ ಸೇನಾನಿ ಡಿ. ಶಿವರಾಮ್ ರಾವ್ ಬೈರಿಕಟ್ಟೆ ಯವರನ್ನು ಭಾರತ ಸೇವಾಶ್ರಮ ಕನ್ಯಾನ ದಲ್ಲಿ ವಲಯದಿಂದ ಗೌರವವಿಸಲಾಯಿತು. ನಂತರ ಸೇನಾನಿಯವರು ಭಾರತಾಂಬೆಯ ರಕ್ಷಣೆಯಲ್ಲಿ ಸೈನಿಕನಾಗಿ ಸೇವೆಯನ್ನು ನೀಡಿದ ವಿವರವನ್ನು ಸದಸ್ಯರಿಗೆ ನೀಡಿದರು.ಈ ಸಂಧರ್ಭದಲ್ಲಿ ಭಾರತ ಸೇವಾಶ್ರಮ ಕನ್ಯಾನದ ಕಾರ್ಯದರ್ಶಿ ಈಶ್ವರ್ ಭಟ್, ವಲಯಧ್ಯಕ್ಷ ರಾಜೇಂದ್ರ ಕೆ. ಸೇನಾನಿ ಧರ್ಮಪತ್ನಿ ಶ್ರೀಮತಿ ಸುನಂದಾ, ಮನೋಹರ ದೇಸಾಯಿ ಬಿಜಾಪುರ, ಅರುಂದತಿ ಬಿಜಾಪುರ, ಮಾಜಿ ಅಧ್ಯಕ್ಷರು ಗಳಾದ ಕುಮಾರಸ್ವಾಮಿ, ದಯಾನಂದ್ ಬಂಟ್ವಾಳ್, ಆನಂದ್ ಯಾನ್, ಹರೀಶ್ ಕುಂದರ್, ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ರವಿಕಲ್ಪನೆ, ಉಪಾಧ್ಯಕ್ಷ ಹರೀಶ್ ನಾಟಿ, ಸದಸ್ಯರಾದ ವಿಕೇಶ್,ಗೋಪಾಲ ಕೃಷ್ಣ ವಿಟ್ಲ, ವಿವೇಕ್, ಶ್ರೀಕೃಷ್ಣ ಭಟ್ ಯಸ್, ಮೋಹನ್ ದಾಸ್ ರವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಫೋಟೋಗ್ರಾಫೋಫರ್ಸ್ ಆಸೋಸಿಯೇಶನ್ಸ್ ವತಿಯಿಂದ ಛಾಯಾಗ್ರಾಹಣ ದಿನಾಚರಣೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದ. ಕ. ಉಡುಪಿ ಜಿಲ್ಲೆ. ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ವಿಟ್ಲ ದ ಐಬಿ (ನಿರೀಕ್ಷಣಾ ಮಂದಿರ )ಯಲ್ಲಿ ನಡೆಸಲಾಯಿತು. ವಲಯದ ಹಿರಿಯ ಛಾಯಾಗ್ರಾಹಕರಾದ ಕೃಷ್ಣ ಭಟ್ ರವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ವಲಯದ ಅಧ್ಯಕ್ಷ ರಾದ ರಾಜೇಂದ್ರ ಕೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕಟ್ಟದ ಸಮಿತಿ ಅಧ್ಯಕ್ಷ ರಾದ ಆನಂದ್ ಯಾನ್,ಗೌರವಧ್ಯಕ್ಷರಾದ ಕಿಶೋರ್, ಪ್ರ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ವಲಯದ ಮಾಜಿ ಅಧ್ಯಕ್ಷರು ಗಳು ಹಾಗೂ ಹೆಚ್ಚಿನ ಸದಸ್ಯರುಗಳು ಉಪಸ್ಥಿತರಿದ್ದರು.ದಯಾನಂದ್ ಬಂಟ್ವಾಳ ಸ್ವಾಗತಿಸಿ, ರಂಜು ಧಾಮ ಧನ್ಯವಾದವಿತ್ತರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಬೆಂಗಳೂರು ಆಯ್ಕೆಯಾಗಿದ್ದಾರೆ.ಸಿ ಎ ಸುನಿಲ್ ಭಂಡಾರಿ ಅವರ ನಾಯಕತ್ವ, ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವು ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇನೆ. ಈ ಹೊಸ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.ಸಿ ಎ ಸುನಿಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿ ದಿ ಕಾಂತಣ್ಣ ಭಂಡಾರಿ ಹಾಗೂ ಪೆಲಪಾಡಿ ವಸಂತಿ ಕೆ ಭಂಡಾರಿ ಯವರ ಸುಪುತ್ರರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

Thumbay Group Enters 30th Year in UAE, Announces Major Expansion PlansFounder Dr. Thumbay Moideen briefs media at Thumbay Hills on healthcare, education milestones and future projects

MANGALURU, Aug 14: Thumbay Group, founded in 1997 and headquartered in Dubai, has successfully entered its 30th year of operations in the United Arab Emirates, announced Dr. Thumbay Moideen, Founder and President of Thumbay Group, at a press conference held at Thumbay Hills on Thursday.Dr. Moideen said the group has grown into one of the region’s leading conglomerates in medical education, healthcare and community initiatives over the past three decades. The journey began in 1998 when Dr. Moideen was invited by the ruling family of Ajman to establish a private medical college. The Gulf Medical College later evolved into Gulf Medical University (GMU), now recognised as the No.1 private medical university in the Gulf.Key Milestones*GMU currently operates seven colleges with over 50 accredited programs. It has around 5,000 students from 111 nationalities and academic and research collaborations with more than 70 international universities and institutions. The group invests nearly 10 million AED annually in research grants.Thumbay Group’s healthcare network has treated over 19 million patients from 175 nationalities and conducted more than 100,000 deliveries. The network includes academic hospitals, clinics, medical centres, diagnostic laboratories and 46 pharmacies.At the centre of this ecosystem is Thumbay Medicity in Al Jurf, Ajman — a 25-acre integrated health and education hub. It houses the 350-bed Thumbay University Hospital, the largest private academic hospital in the region, along with Thumbay Dental Hospital and Thumbay Physical Therapy and Rehabilitation Hospital. The facility receives approximately 15,000 visitors daily. Future Projects*The group has laid the foundation for a 120-bed psychiatry and rehabilitation hospital in Sharjah Healthcare City. Other upcoming projects include Thumbay Veterinary Teaching Hospital, Thumbay Veterinary College and the Thumbay International Research Centre for Precision Medicine.The upcoming Thumbay Medicity in Dubai is expected to create nearly 1,000 jobs. In partnership with Geneva College of Longevity Science, Switzerland, the group has also announced the UAE’s first academic programs in longevity medicine.Through the Thumbay International Pathway Program, students can complete foundation studies in the UAE and clinical training at partner universities in Europe.Dr. Moideen also said the group plans to create employment opportunities in villages like Thumbay in Karnataka in the next 2-3 years. Honours*Dr. Moideen was conferred the Rajyotsava Award, Karnataka’s second-highest civilian honour, in October 2024. In January 2026, he received the New Year Award jointly instituted by the Academy of General Education and MAHE, Manipal. He holds five honorary doctorates from universities across three continents.About Thumbay Group*

ಪ್ರಾದೇಶಿಕ ವಾರ್ತೆಗಳು

ಶೀಘ್ರದಲ್ಲಿಯೇ ಪತ್ರಕರ್ತರಿಗೆ ನಿವೇಶನ-ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ.

ಮಂಗಳೂರು, ಶೀಘ್ರದಲ್ಲಿಯೇ ಪತ್ರಕರ್ತರಿಗೆ ನಿವೇಶನ ಒದಗಿಸಲು ಎಲ್ಲಾ ಪ್ರಯತ್ನ ಗಳು ಮುಂದುವರಿದಿದೆ ಎಂದು ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದ್ದಾರೆ.ಮಂಗಳೂರು ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಮಂಗಳೂರು ಹೊರವಲಯದಲ್ಲಿ ಕಂದಾಯ ಭೂಮಿಯನ್ನು ಮಂಜೂರು ಮಾಡುವಂತ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅತೀ ಶೀಘ್ರವೇ ಮಂಜೂರಾತಿ ಸಿಗುವ ವಿಶ್ವಾಸ ಇದೆ. ಆದ್ಯತೆಯ ಮೇಲೆ ಸಂಘದ ಷೇರು ಹೊಂದಿದ ಸದಸ್ಯರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಅವರು ಕೂಡಾ ಪತ್ರಕರ್ತರಿಗೆ ನಿವೇಶನ ನೀಡಲು ಮುಂದಾಗಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಿ ಆದ್ಯತೆಯ ಮೇಲೆ ಪತ್ರಕರ್ತರಿಗೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರ ಸಂಘ 36 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಪಾಂಡುರಂಗ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ ವರದಿ ವಾಚಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಪುಷ್ಪರಾಜ್ ಬಿ ಎನ್ ವಂದಿಸಿದರು.ಸಹಕಾರ ಸಂಘದ ನಿರ್ದೇಶಕರಾದ ಮೊಹಮ್ಮದ್ ಆರಿಫ್, ಸತ್ಯವತಿ. ಕೆ, ಇಬ್ರಾಹಿಂ ಅಡ್ಕಸ್ಥಳ ಜಿತೇ0ದ್ರ ಕುಂದೇಶ್ವರ, ವಿರ್ಲ್ಫ್ರೆಡ್ ಡಿ ಸೋಜಾ, ವಿಜಯ್ ಪಡು,ಸುರೇಶ್ ಪಳ್ಳಿ, ಹರೀಶ್ ಮೋಟುಕಾನ,ಕುಮಾರಿ ಶಿಲ್ಪಾ ಆತ್ಮಭೂಷಣ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಮಂಗಳೂರು ಪ್ರೆಸ್ ಕ್ಲಬ್ ಸ್ಟಾಪಕಾಧ್ಯಕ್ಷ ಆನಂದ್ ಶೆಟ್ಟಿ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

The Indian Tricolor hoisted by Dr.Rohan Monis on Bharat’s 80th Swatantrata Diwas

Deralakatte: Independence Day was celebrated with nationalistic fervor & spirit at Mangalore Group of Institutions on August 15.Hon’ble Chief guest – Dr Rohan S Monis – Chief Administrative Officer, Kanachur Hospital and Research Centre, hoisted the National flag. Delivering his address on the 80th Independence Day to the Gen Z healthcare students, he briefly stressed about “how British monarchy beat us down for over 200 years and with resilience and persistence over the last 80 years Bharat is a No.# 3 global power. Reigniting the freedom fighter slogans into their minds – because our freedom has been paid for and prayed for. Dr Monis stressed that Bharat scores the best in ‘Youth Power’ and encouraged them to lead with the Upper Brain tactfully with competence, intelligence & humility and with these traits they can radically transform whatever moment you are in – thereby leaving a LEGACY! Jai Hind.“ Dr Anita Titto – College Trustee and Director (Admissions and Communication), Dr Beena Benito D’Souza – Principal, Mangaluru College of Allied Health Sciences and Dr Mohammad Rameez, Principal – Mangaluru College of Physiotherapy were present among the dignitaries. Aleena John – Lecturer, compered the programme. Khateejath Sahla delivered a vote of thanks.

ಪ್ರಾದೇಶಿಕ ವಾರ್ತೆಗಳು

ದೇರಳಕಟ್ಟೆ: ದೇಶಭಕ್ತಿಯ ಉತ್ಸಾಹದಲ್ಲಿ ಮಂಗಳೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವ

ದೇರಳಕಟ್ಟೆ: ಮಂಗಳೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು.ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೋನಿಸ್ ಮುಖ್ಯ ಅತಿಥಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿದ ಅವರು, 200ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಯಿಂದ ಭಾರತ ಅನುಭವಿಸಿದ ಸಂಕಷ್ಟಗಳನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಹೋರಾಟ ಮತ್ತು ನಿರಂತರ ಪ್ರಯತ್ನದಿಂದ ದೊರೆತ ಸ್ವಾತಂತ್ರ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಳೆದ 80 ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿರುವುದನ್ನು ಉಲ್ಲೇಖಿಸಿದರು. ಇಂದಿನ ಯುವಜನತೆ ಭಾರತದ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆ, ಸಾಮರ್ಥ್ಯ, ವಿನಯ ಹಾಗೂ ವಿವೇಚನೆಯೊಂದಿಗೆ ನಾಯಕತ್ವ ವಹಿಸಬೇಕು. ತಮ್ಮ ಮುಂದೆ ಇರುವ ಯಾವುದೇ ಪರಿಸ್ಥಿತಿಯನ್ನು ಧನಾತ್ಮಕವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡು, ಸಮಾಜ ಮತ್ತು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಶಾಶ್ವತವಾದ ಛಾಪು ಮೂಡಿಸಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಹಾಗೂ ಪ್ರವೇಶಾತಿ ಮತ್ತು ಸಂವಹನ ವಿಭಾಗದ ನಿರ್ದೇಶಕಿ ಡಾ. ಅನಿತಾ ಟಿಟ್ಟೋ, ಮಂಗಳೂರು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲೆ ಡಾ. ಬೀನಾ ಬೆನಿಟೊ ಡಿಸೋಜಾ ಹಾಗೂ ಮಂಗಳೂರು ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಮೊಹಮ್ಮದ್ ರಮೀಜ್ ಉಪಸ್ಥಿತರಿದ್ದರು.ಅಲೀನಾ ಜಾನ್ ಕಾರ್ಯಕ್ರಮ ನಿರೂಪಿಸಿದರು. ಖತೀಜತ್ ಸಹ್ಲಾ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಬೆಳಗ್ಗಿನ ಬಲಿ ಪೂಜೆಯ ಬಳಿಕ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮ ಪ್ರಾಂತ್ಯದ ಐ ಸಿ ವೈ ಎಂ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ರಾಯನ್ ಮಾರ್ಸೆಲ್ ನೊರೊನ್ಹಾ ಅವರು ದಿನದ ಮಹತ್ವವನ್ನು ವಿವರಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಕ್ರೈಸ್ತರ ಪಾತ್ರವನ್ನು ಉದಾಹರಣೆ ಸಹಿತ ವಿವರಿಸಿದರು.ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ, ಸಹಾಯಕ ಧರ್ಮ ಗುರು ವಂದನೀಯ ಫಾ . ಜೋಸೆಫ್ ಕುವೆಲ್ಲೊ, ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮ ಗುರು ವಂದನೀಯ ಫಾ. ರೋಶನ್ ಡಿ ಸೋಜಾ, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಸಿ. ಮೊಂತಿ, ಸಿ. ವಿನುತಾ, ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನಾಗದೇವನೆ ..’ ಹಾಡು ‘ನಮ್ಮ ಕೊಂಬಾರು ‘ ಯೂ ಟ್ಯೂಬ್ ನಲ್ಲಿ ಬಿಡುಗಡೆ

ಮಂಗಳೂರು: ಕಲಿಯುಗದಲ್ಲಿ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ನಾಗ. ಅದರ ಮಹಿಮೆಯ ಬಗ್ಗೆ ಕವಿ, ಸಾಹಿತಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ‘ನಾಗದೇವನೆ.. ಪ್ರೇಮಸ್ವರೂಪನೆ..’ ಭಕ್ತಿಯ ಹಾಡು ನಾಗರಪಂಚಮಿಯ ಶುಭಾವಸರದಲ್ಲಿ ‘ನಮ್ಮ ಕೊಂಬಾರು ಯೂ ಟ್ಯೂಬ್ ಚ್ಯಾನಲ್ ನಲ್ಲಿ ಬಿಡುಗಡೆಗೊಂಡಿದೆ.ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿದವರು ಗಾಯಕ ತೋನ್ಸೆ ಪುಷ್ಕಳ ಕುಮಾರ್. ಸಹಗಾಯನದಲ್ಲಿ ನಯನಾ ರಾಜಗೋಪಾಲ್ ಅವರಿದ್ದಾರೆ. ಧ್ವನಿಸುರುಳಿಯ ನಿರ್ಮಾಣ ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿಯವರದು. ವಿಡಿಯೋ ನಿರ್ಮಾಣ ಮಾಡಿ ಪ್ರಸ್ತುತಪಡಿಸಿದವರು ಬೆಂಗಳೂರಿನ ಹಿರಿಯ ವಕೀಲ ಮತ್ತು ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ಯೂ ಟ್ಯೂಬ್ ವಾಹಿನಿಯ ಪ್ರವೀಣ್ ಕುಮಾರ್ ಕಟ್ಟೆ. ಸಂಸ್ಕೃತಿ ಪ್ರಿಯರು ನಾಗದೇವತೆಯನ್ನು ಸ್ತುತಿಸುವ ಈ ಭಕ್ತಿ ಗೀತೆಯನ್ನು ತಮ್ಮ ವಾಹಿನಿಯ ಮೂಲಕ ನೋಡಿ ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದ್ದಾರೆ. ನಾಗದೇವನೆ .. ಪ್ರೇಮಸ್ವರೂಪನೆ.. ನಾಗದೇವನೆ ಪ್ರೇಮ ಸ್ವರೂಪನೆನಿಗಮಾಗಮ ಗೋಚರನೆ |ಸುಗುಣ ದಿವ್ಯ ಸಂತಾನ ಪ್ರದಾಯಕಝಗಝಗಿಸುವ ಮಣಿ ಭೂಷಿತನೆ ||೧|| ಹರನಾ ಕಂಠದ ಸಿರಿ ವರ್ಧಿತನೆಹರಿಗೆ ಹಾಸಿಗೆ ಮಿದು ಮೈಯವನೆ ||ಉರಗ ರೂಪಿಯೆ ನಾಗಬ್ರಹ್ಮನೆವರವಿಶ್ವಂಭರ ಸುಬ್ರಹ್ಮಣ್ಯನೆ ||೨|| ನಾರಿಕೇಳ ಜಲ ಕ್ಷೀರಾಭಿಷೇಕಸಾರಸ ಫಲ ಶುಭ ತಾಂಬೂಲ ||ಅರಿಶಿಣ ಸಂಪಿಗೆ ಸಿಂಗಾರ ಕೇದಗೆವರ ಪುಷ್ಪಾರ್ಚನೆ ಸಮರ್ಪಣೆ ||೩|| ಅಶ್ವತ್ಥ ಮೂಲದಿ ವಲ್ಮೀಕ ತಾಣವುವಿಶ್ವಾಧಾರನು ಫಣಿಪತಿ ಮಹಿಮ |ಐಶ್ವರ್ಯ ನಿಧಿಯ ಕಾಯುವ ದೇವನಶ್ವರರೆಲ್ಲರ ಪೊರೆ ಸಂಜೀವ ||೪||*ಭಾಸ್ಕರ ರೈ ಕುಕ್ಕುವಳ್ಳಿ

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನದ ಕಾಮಗಾರಿ ಪ್ರಗತಿ ಪರಿಶೀಲನೆ

ಮುಲ್ಕಿ: ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಿರ್ಮಾಣ ಹಂತದಲ್ಲಿ ಇರುವ ಹವಾ ನಿಯoತ್ರಿತ ಸಭಾ ಭವನದ ಕಾಮಗಾರಿಯ ಪ್ರಗತಿಯ ಬಗ್ಗೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಸಭೆ ಜರಗಿ ಕಾಮಗಾರಿಯ ವೀಕ್ಷಣೆಯನ್ನು ಮಾಡಲಾಯಿತು. ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಭಾಭವನದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲರ ಸಹಕಾರ ಬೇಕು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,, ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ಆರ್ಕಿಟೆಕ್ಟ್ ಗೋಪಾಲ್ ಭಟ್ ಎ ಜಿ, ಅಸೋಸಿಯೇಟ್ ಉಡುಪಿ ತಾರಾನಾಥ್ ಶೆಟ್ಟಿ ಮುಂಬೈ, ಸಹಾಯಕ ಇಂಜಿನಿಯರ್ ಧೀರಜ್ ಉಡುಪಿ,ನಿರ್ಮಾಣ ಕಾಮಗಾರಿಯ ಕಂಟ್ರಾಕ್ಟರ್ ಶಿವಪ್ರಸಾದ್ ರೈ, ರವಿ ರಾಜ್ ಶೆಟ್ಟಿ ಜತ್ತಬೆಟ್ಟು ಹಾಗೂ ಹವಾ ನಿಯಂತ್ರಣ ಸರಬರಾಜುದಾರ ಎಲೆಕ್ಟ್ರಿಕಲ್ ಕಾಮಗಾರಿಯ ಮುಖ್ಯಸ್ಥರು ಹಾಗೂ ಕನ್ಸಲ್ಟೆಂಟ್ ಫಾಲ್ಸ್ ಸೀಲಿಂಗ್, ಸೌಂಡ್ ಸಿಸ್ಟಮ್, ಅಕೋಸ್ಟಿಕ್ ಅಳವಡಿಕೆದಾರರು ಉಪಸ್ಥಿತರಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಿಂಕ್ ನೋಡಿಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಿಂಕ್ ನೋಡಿ

Scroll to Top