ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟ

ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಅಗಿದೆ. ಇದರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್‌ಫಾರ್ಮ್ ಒಂದರಲ್ಲಿ ಬಿತ್ತರಗೊಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಲಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್‌ ಅನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು.ಮೊದಲ ಡಿವಿಷನ್ ಆಟಗಾರರು ಮಂಗಳೂರು ಝೋನ್ ಆಡಿದವರು ಕೆಟಗರಿ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಅದೇ ರೀತಿ ಕೆಟಗರಿ B ಯಲ್ಲಿ ದ್ವಿತೀಯ ಮತ್ತು ತೃತೀಯ ಡಿವಿಷನ್ ಆಟಗಾರರು KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು ಆಗಿರಬೇಕು.ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

“ಬಿಜೆಪಿಗೆ ಅಪಾಯಕಾರಿ ಆಗಿದ್ದಕ್ಕೆ ಪ್ರಿಯಾಂಕ್ ಖರ್ಗೆ ಟಾರ್ಗೆಟ್“-ಮಂಜುನಾಥ ಭಂಡಾರಿ

ಮಂಗಳೂರು: ”ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣವನ್ನು ಪ್ರಿಯಾಂಕ್ ಖರ್ಗೆ ಅವರ ತಲೆಗೆ ಕಟ್ಟಲು ಬಿಜೆಪಿ ಯತ್ನ ಮಾಡುತ್ತಿದೆ. ಅಮಿತ್‌ ಷಾ ಅಂಬೇಡ್ಕರ್‌ ಕುರಿತ ಹೇಳಿಕೆಯ ವಿವಾದವನ್ನು ಡೈವರ್ಟ್‌ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಹೆಣದ ಮೇಲೆ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ“ ಎಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಅವರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸುವ ಸಲುವಾಗಿ ಬಿಜೆಪಿ ಅವರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದೆ. ಬಿಜೆಪಿಗರ ಎಲ್ಲ ಭ್ರಷ್ಟಾಚಾರ, ಅನಾಚಾರಗಳನ್ನು ಅವರು ಬಯಲಿಗೆಳೆದಿದ್ದಾರೆ. ಮಾತ್ರವಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸಲು ಪ್ರಿಯಾಂಕ್ ಖರ್ಗೆ ಅವರು ಹೋರಾಟ ಮಾಡಿದ್ದಾರೆ. ಪಿಎಸ್ಐ ಹಗರಣ, 40% ಕಮೀಷನ್‌, ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ ಹೀಗೆ ಎಲ್ಲವನ್ನೂ ಬಯಲಿಗೆಳೆದು, ಅವುಗಳನ್ನು ತನಿಖೆಯಾಗುವಂತೆ ಮಾಡಿದ್ದಲ್ಲದೆ ಶಿಕ್ಷೆಯಾಗುವುದಕ್ಕೆ ಅವರು ಕಾರಣರಾಗಿದ್ದಾರೆ. ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಪ್ರತಿ ಭ್ರಷ್ಟಾಚಾರವನ್ನೂ ಅಂಕಿ ಅಂಶ, ದಾಖಲೆ ಸಹಿತ ಬೀದಿಗೆ ತಂದರು. ಮತ್ತು ಪ್ರಬಲವಾಗಿ ಹೋರಾಟ ಮಾಡಿದವರು. ಹಾಗಾಗಿ ಅನಗತ್ಯವಾಗಿ ಈಗ ಸಚಿನ್‌ ಆತ್ಮಹತ್ಯೆ ಪ್ರಕರಣಗಳನ್ನು ಅವರ ತಲೆಗೆ ಕಟ್ಟುವ ಪ್ರಯತ್ನವನ್ನು ಅನಗತ್ಯವಾಗಿ ಮಾಡಲಾಗುತ್ತಿದೆ ಎಂದವರು ದೂರಿದ್ದಾರೆ.ಸಚಿನ್ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಏನು ಎಂಬುದನ್ನು ತಿಳಿಯಲು ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಇನ್ನು ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೆ ಸಚಿನ್ ಡೆತ್‌ ನೋಟ್‌ನಲ್ಲಿ ಪ್ರಿಯಾಂಕ್ ಅವರ ಹೆಸರೂ ಇಲ್ಲ. ಆದರೂ ಬಿಜೆಪಿಗರು ರಾಜ್ಯಾದ್ಯಂತ ಬೊಬ್ಬೆ ಹೊಡೆಯತ್ತಿದ್ದಾರೆ. ತನಿಖೆ ನಡೆದು ಅದರ ವರದಿ ಬರಲಿ. ಆಗ ಎಲ್ಲ ಸತ್ಯಾಸತ್ಯತೆಯೂ ಹೊರಗೆ ಬರುತ್ತದೆ. ವರದಿ ಬರುವುದಕ್ಕೆ ಮೊದಲೇ ಇವರು ತೀರ್ಪು ಕೊಡುತ್ತಿದ್ದಾರೆ. ಇವರೇ ತನಿಖೆಯನ್ನೂ ಮಾಡಲು ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಗರು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಸ್ಕೃತಿಯಾಗಿದೆ ಎಂದು ಆರೋಪಿಸಿದ್ದಾರೆ.ಖಂಡಿತವಾಗಿಯೂ ಈ ಹೋರಾಟದಲ್ಲಿ ಅವರಿಗೆ ಫಲ ಸಿಗುವುದಿಲ್ಲ. ಇನ್ನು ಸಚಿನ್ ಅವರು ಗುತ್ತಿಗೆದಾರರೇ ಅಲ್ಲ ಎಂಬ ಅನುಮಾನ ಶುರುವಾಗಿದೆ. ಗುತ್ತಿಗೆದಾರರ ಸಂಘದವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ತನಿಖೆಯಿಂದ ಹೊರಗೆ ಬರುತ್ತದೆ. ಆದರೆ, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂಬುದು ಪದೇ ಪದೆ ಸಾಬೀತಾಗುತ್ತಲೆ ಇದೆ. ಅವರು ಹೆಣ ಬೀಳುವುದನ್ನೇ ಕಾಯುತ್ತಾ ಇರುತ್ತಾರೆ. ಈ ರೀತಿ ಮಾಡಿ ರಾಜಕೀಯ ಮಾಡಲು ಹೊರಟಿದ್ದಾರೆ.ಕೆ.ಎಸ್. ಈಶ್ವರಪ್ಪ ಅವರ ಪ್ರಕರಣವೇ ಬೇರೆ, ಈಗ ನಡೆದಿರುವ ಸಚಿನ್ ಆತ್ಮಹತ್ಯೆ ಪ್ರಕರಣವೇ ಬೇರೆ. ಆ ಪ್ರಕರಣದಲ್ಲಿ ಸಂತ್ರಸ್ತ ವಿಡಿಯೋ ಮಾಡಿ ಈಶ್ವರಪ್ಪ ಅವರ ಹೆಸರನ್ನು ಹೇಳಿದ್ದರು. ಜೊತೆಗೆ ಅವರ ಹೆಸರನ್ನು ಬರೆದಿಟ್ಟಿದ್ದರು. ಆದರೆ, ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಹೆಸರನ್ನು ಬರೆದಿಟ್ಟಿಲ್ಲ. ಜೊತೆಗೆ ವಿಡಿಯೋವನ್ನು ಮಾಡಲಾಗಿಲ್ಲ. ಇಷ್ಟಿದ್ದರೂ ವಿನಾಕಾರಣವಾಗಿ ಪ್ರತಿಪಕ್ಷದವರು ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದರಲ್ಲಿ ಎಷ್ಟೇ ಬೊಬ್ಬೆ ಹೊಡೆದರೂ ಖಂಡಿತವಾಗಿಯೂ ಯಾವುದೇ ರೀತಿಯ ಫಲ ಕಾಣುವುದಿಲ್ಲ.ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಗೆ ದೇಶಾದ್ಯಂತ ಕಿಡಿ ಹೊತ್ತಿಕೊಂಡಿದೆ. ತುಳಿತಕ್ಕೆ ಒಳಗಾದ ವರ್ಗದವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಡೈವರ್ಟ್ ಮಾಡಲು, ಮರೆಮಾಚುವ ಸಂಬಂಧ ಈ ಪ್ರಕರಣವನ್ನು ಬಿಜೆಪಿಗರು ಎತ್ತಿಕೊಂಡಿದ್ದಾರೆ. ಅಮಿತ್ ಷಾ ಹೇಳಿಕೆ ಸಂಬಂಧ ವಿಜಯಪುರ, ಯಾದಗಿರಿ, ಚಾಮರಾಜನಗರ ಬಂದ್ ಆಗಿದ್ದಲ್ಲದೆ, ರಾಜ್ಯಾದ್ಯಂತ ಆಕ್ರೋಶ ಮಡುಗಟ್ಟಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜನಪ್ರಿಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜನಾನುರಾಗಿ ನಾಯಕರಾಗಿರುವುದರಿಂದ ಇವರ ಮೇಲೆ ಜನರನ್ನು ಎತ್ತಿಕಟ್ಟಲು ಇಂಥ ಪ್ರಯತ್ನ ಮಾಡಲಾಗುತ್ತಿದೆ. ಈ ಎಲ್ಲ ಹುಳುಕುಳನ್ನು ಮುಚ್ಚಿಹಾಕುವುದಕ್ಕೋಸ್ಕರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಮುನ್ನೆಲೆಗೆ ತರಲು ಬಿಜೆಪಿ ಹೊರಟಿದ್ದಾರೆಯೇ ಹೊರತು. ಇಡೀ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಮೊದಲು ಅವರಲ್ಲಿರುವ ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ. ಇನ್ನು ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಸ್ಥಾನಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಶೋಕ್, ವಿಜಯೇಂದ್ರ, ಯತ್ನಾಳ್ ಸೇರಿದಂತೆ ಅವರವರಲ್ಲೇ ಎ,ಬಿ,ಸಿ ಬಣಗಳು ಆಗಿವೆ. ಆ ವೈಫಲ್ಯಗಳನ್ನು ಮುಚ್ಚಲು ಇಂಥ ಹೋರಾಟ ಮಾಡುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ದೂರಿದ್ದಾರೆ.

ಪ್ರಾದೇಶಿಕ ವಾರ್ತೆಗಳು

January 5th: Alani Melody Nite at Kalaangann

The 277th program of Mandd Sobhann’s Monthly Theatre series is scheduled to take place at Kalaangann on January 05 at 6:30 p.m. The event will feature nine-year-old Alani Leora Dsouza from Taccode, who will be presenting the program, thereby becoming the youngest artiste to lead a Monthly Theatre.Alani, a class 4 student at Carmel School Moodbidri, excels not only in her studies but has also received significant recognition on social media for her exceptional singing talent. She is undergoing training in multiple disciplines of Music, including Classical, Piano, Violin, Guitar and Keyboard. She has showcased her Talent on programs such as Daijiworld’s ‘Gayan Ani Gazali’, 286th Wilfy Nite, Nihal Tauro Music Concert and more. Recognizing her exceptional abilities, Mandd Sobhann has provided her with this esteemed opportunity.At the program, Alani will perform songs by renowned Konkani Lyricists and Composers such as Cha Fra Dcosta, Wilfy Rebimbus, Claude Dsouza, Chris Perry, Eric Ozario, Melwin Peris, and Lloyd Rego.The event will be graced by Dr. Mohan Alva, President of Alva’s Institutions, as the Chief Guest. Other distinguished guests include Ronald Mendonca from Mumbai, Chairman of Kalaangann, and Vijay Dsouza from Dubai. Mandd Sobhann Gurkar Eric Ozario and President Louis Pinto will also be in attendance.The program will be directed by young musician Mavish and will feature instrumental support from Sachin Sequeira (drums), Jason Dsouza (lead guitar), Ashwin Correa (bass guitar), Shaun Braslin (violin), and Ashwil Colaco (keyboard).Alani, trained by the renowned classical music teacher Shilpa Cutinha, Alani will be accompanied by Blue Angels Choir and Arvin Dcunha with the backing Vocals. Roshan Kulshekar, along with budding MCs Sanjana Riva Mathias, Angel Meghan Cutinha, Anika Dsouza, and Shaun Dcosta, will serve as the event’s emcees.This Musical Nite is organized in memory of the late Noreen Mendonca, who was the first to recognize and reward Alani for her singing. Intended to provide a stage for Konkani Performing Arts, the Monthly Theatre Series that began on January 6th 2002, has been a platform for several Artistes of Konkani for the last 23 years, promoting Music, Singing, Drama, Dance, Yakshagana, Comedy and several Folk Forms. Present at the Press Meet:Alani Leora Dsouza – ArtisteLouis J Pinto – President, Mandd SobhannShilpa Cutinha – TrainerMavish – Music DirectorAjay Dsouza – Event Organizer and Alani’s Father

ಪ್ರಾದೇಶಿಕ ವಾರ್ತೆಗಳು

ಜನವರಿ 05: ಕಲಾಂಗಣದಲ್ಲಿ ಆಲನಿ ಮೆಲೊಡಿ ನೈಟ್

ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277 ನೇ ಕಾರ್ಯಕ್ರಮವು ಜನವರಿ 05 ರಂದು ಶಕ್ತಿನಗರದ ಕಲಾಂಗಣದಲ್ಲಿ 6.30 ಗಂಟೆಗೆ ನಡೆಯಲಿದೆ. ಒಂಬತ್ತು ವರ್ಷ ಪ್ರಾಯದ ಮೂಡಬಿದ್ರೆ ತಾಕೊಡೆಯ ಆಲನಿ ಲಿಯೊರಾ ಡಿಸೋಜ ಈ ಕಾರ್ಯಕ್ರಮ ನೀಡಲಿದ್ದು, ಆಕೆ ತಿಂಗಳ ವೇದಿಕೆ ಮುನ್ನಡೆಸುವ ಅತೀ ಚಿಕ್ಕ ವಯಸ್ಸಿನ ಕಲಾವಿದೆಯಾಗಲಿದ್ದಾಳೆ.ಮೂಡಬಿದ್ರೆಯ ಕಾರ್ಮೆಲ್ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಬಹುಮುಖಿ ಪ್ರತಿಭಾವಂತೆ ಆಲನಿ ಕಲಿಕೆಯಲ್ಲಿ ಮುಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಡುಗಾರಿಕೆಯ ಮೂಲಕ ಜನಮೆಚ್ಚುಗೆ ಗಳಿಸಿದ್ದಾಳೆ. ಪಿಯಾನೊ, ವಯೊಲಿನ್, ಗಿಟಾರ್, ಕೀಬೋರ್ಡ್, ಶಾಸ್ತ್ರೀಯ ಗಾಯನ ಹೀಗೆ ಹಲವು ಸ್ತರಗಳಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ದಾಯ್ಜಿವರ್ಲ್ಡ್ ವಾಹಿನಿಯ `ಗಾಯಾನ್ ಆನಿ ಗಜಾಲಿ’, 286ನೇ ವಿಲ್ಫಿ ನೈಟ್, ನಿಹಾಲ್ ತಾವ್ರೊ ಸಂಗೀತ ರಸಮಂಜರಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತನ್ನ ಗಾಯನ ಪ್ರತಿಭೆಯನ್ನು ತೋರಿಸಿದ್ದಾಳೆ. ಅವಳ ಪ್ರತಿಭೆಯನ್ನು ಗುರುತಿಸಿ ಮಾಂಡ್ ಸೊಭಾಣ್ ಇಂತಹ ಬಹುದೊಡ್ಡ ಅವಕಾಶ ನೀಡಿದೆ.ಕಾರ್ಯಕ್ರಮದಲ್ಲಿ ಆಕೆ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಮತ್ತು ಲಾಯ್ಡ್ ರೇಗೊ ಹೀಗೆ ಕೊಂಕಣಿಯ ಮೇರು ಕವಿಗಳು ಹಾಗೂ ಸಂಗೀತಗಾರರ ರಚನೆಗಳನ್ನು ಹಾಡಲಿದ್ದಾಳೆ.ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಕಲಾಂಗಣ್ ಚೇರ್’ಮ್ಯಾನ್ ರೊನಾಲ್ಡ್ ಮೆಂಡೊನ್ಸಾ ಮುಂಬಯಿ ಮತ್ತು ವಿಜಯ್ ಡಿಸೋಜ ದುಬಾಯಿ ಇವರು ಗೌರವ ಅತಿಥಿಗಳಾಗಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಪರವಾಗಿ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿರುವರು.ಯುವ ಸಂಗೀತಗಾರ ಮೇವಿಶ್ ಇವರ ಸಂಗೀತ ನಿರ್ದೇಶನದಲ್ಲಿ ಸಚಿನ್ ಸಿಕ್ವೇರಾ (ಡ್ರಮ್ಸ್), ಜೇಸನ್ ಡಿಸೋಜ (ಲೀಡ್ ಗಿಟಾರ್), ಆಶ್ವಿನ್ ಕೊರೆಯಾ (ಬೇಸ್ ಗಿಟಾರ್), ಶೊನ್ ಬ್ರಾಸ್ಲಿನ್ (ವಯೊಲಿನ್), ಅಶ್ವಿಲ್ ಕುಲಾಸೊ (ಕೀಬೋರ್ಡ್) ಸಂಗೀತ ನೀಡಲಿದ್ದಾರೆ.ಖ್ಯಾತ ಹಿಂದೂಸ್ತಾನಿ ಗಾಯನ ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಇವರು ತರಬೇತಿ ನೀಡಿದ್ದು, ಬ್ಲೂ ಏಂಜಲ್ಸ್ ಕೊಯರ್ ತಂಡ ಮತ್ತು ಆರ್ವಿನ್ ಡಿಕುನ್ಹಾ ಹಿನ್ನೆಲೆಯಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮ ನಿರೂಪಣೆಯಲ್ಲಿ ರೋಶನ್ ಕುಲ್ಶೇಕರ್ ಇವರೊಡನೆ ಎಳೆಯರಾದ ಸಂಜನಾ ರಿವಾ ಮತಾಯಸ್, ಏಂಜಲ್ ಮೇಘನ್ ಕುಟಿನ್ಹಾ, ಅನಿಕಾ ಡಿಸೋಜ ಮತ್ತು ಶನನ್ ಡಿಕೋಸ್ತಾ ಸಹಕರಿಸುವರು.ಆಲನಿಯ ಗಾಯನಕ್ಕಾಗಿ ಪ್ರಪ್ರಥಮವಾಗಿ ಪಾರಿತೋಷಕ ನೀಡಿ ಪ್ರೋತ್ಸಾಹಿಸಿದ ನೋರಿನ್ ಮೆಂಡೊನ್ಸಾ ಇವರ ಸ್ಮರಣಾರ್ಥ ಈ ಸಂಗೀತ ಸಂಜೆ ಆಯೋಜಿಸಲಾಗಿದೆ. ಕೊಂಕಣಿ ಪ್ರದರ್ಶನ ಕಲೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ 2002 ಜನವರಿ 06 ರಿಂದ ಆರಂಭವಾದ ತಿಂಗಳ ವೇದಿಕೆಯಲ್ಲಿ, ಕಳೆದ 23 ವರ್ಷಗಳಲ್ಲಿ ಕೊಂಕಣಿ ಸಂಗೀತ, ಗಾಯನ, ನಾಟಕ, ನೃತ್ಯ, ಯಕ್ಷಗಾನ, ಹಾಸ್ಯ ಮತ್ತು ವಿವಿಧ ಜನಪದ ಕಲೆಗಳು ಹೀಗೆ ಎಲ್ಲಾ ರೀತಿಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಕಾಗೋಷ್ಠಿಯಲ್ಲಿ ಹಾಜರಿದ್ದವರು:ಆಲನಿ ಲಿಯೊರಾ ಡಿಸೋಜ – ಕಲಾವಿದೆಲುವಿ ಜೆ ಪಿಂಟೊ – ಅಧ್ಯಕ್ಷರು, ಮಾಂಡ್ ಸೊಭಾಣ್ಶಿಲ್ಪಾ ಕುಟಿನ್ಹಾ – ತರಬೇತುದಾರರುಮೇವಿಶ್ – ಸಂಗೀತ ನಿರ್ದೇಶಕಅಜಯ್ ಡಿಸೋಜ – ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಆಲನಿಯ ತಂದೆ

ಪ್ರಾದೇಶಿಕ ವಾರ್ತೆಗಳು

ಬಂಟ್ಸ್ ಪ್ರೀಮಿಯರ್ ಲೀಗ್ 2025 ಬ್ರೋಷರ್ ಬಿಡುಗಡೆ

ಮಂಗಳೂರು: ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಫೆ.7,8,9ರಂದು ನಡೆಯಲಿರುವ ಯುವ ಬಂಟರ ಸಂಘ ಮಂಗಳೂರು ಇದರ ವತಿಯಿಂದ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ 2025, ಸೀಸನ್ -2 ಟಿ-10 ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬ್ರೋಷರನ್ನು ನಗರದ ವುಡ್ ಲ್ಯಾಂಡ್ ಸಭಾಂಗಣದಲ್ಲಿ ಇತ್ತೀಚೆಗೆ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿಯವರು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬಿಪಿಎಲ್ ಟೂರ್ನಿಯ ಸಲಹೆಗಾರರಾದ ರಾಜ್ ಗೋಪಾಲ ರೈ ಮಾತನಾಡುತ್ತಾ,ಬಂಟ್ಸ್ ಪ್ರೀಮಿಯರ್‌ ಲೀಗ್ ಮೂಲಕ ಯುವ ಬಂಟರ ಜೊತೆ ಬಂಟ ಸಮಾಜದ ಸಂಘಟನೆ ಕ್ರೀಡೆ ಸಹಕಾರಿ ಯಾಗಲಿ.ಬಂಟ ಸಮಾಜ ತಮ್ಮ ಸಮಾಜದ ಅಭಿವೃದ್ಧಿಯ ಜೊತೆ ಇತರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದ ಸಮಾಜ ನಾವು ಬೆಳೆಯುತ್ತಾ ಇತರರನ್ನು ಬೆಳೆಸೋಣ ಎಂದರು,ಕಾವೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಕ್ರೀಡಾ ಪಟು ಆನಂದ ಶೆಟ್ಟಿಯವರು ಮಾತನಾಡುತ್ತಾ,ಕುಟುಂಬ,ಬಾಂಧವ್ಯ ಸಂಬಂಧ ಶಿಥಿಲವಾಗುತ್ತಿರುವ ಈ ಕಾಲ ಘಟ್ಟದಲ್ಲಿ ಕ್ರೀಡೆ ನಮ್ಮೆಲ್ಲರನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಮತ್ತು ದೈಹಿಕ ಮಾನಸಿಕ ಆರೋಗ್ಯ ದೃಷ್ಟಿಯಿಂದಲೂ ಕ್ರೀಡೆ ಒಂದು ಸಾಧನ ಎಂದರು. ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ,ಪುಷ್ಪ ರಾಜ್ ಬಿ.ಎನ್ ಶುಭ ಹಾರೈಸಿದರು, ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಬಿಪಿಎಲ್ ಟೂರ್ನಿಯ ಸಂಘಟಕರಾದ ಸಚಿನ್ ರೈ ಸ್ವಾಗತಿಸಿ,ಪ್ರಸಾದ್ ಶೆಟ್ಟಿ ಬಿಪಿಎಲ್ ಟೂರ್ನಿಯ ಮಾಹಿತಿ ನೀಡಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ವಯೋವೃದ್ಧ ದಂಪತಿಗೆ ಯಕ್ಷಾಂಗಣ ಗೌರವ. ಕಲ್ಪನೆ ಚಂದು ಗೌಡರಿಗೆ ಗ್ರಹ ಸಮ್ಮಾನ

ಮಂಗಳೂರು: ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಪನೆಯಲ್ಲಿ ನಾಲ್ಕು ದಶಕಗಳ ಹಿಂದೆ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸ್ಥಾಪಿಸಿದ ನಿವೃತ್ತ ಅರಣ್ಯ ರಕ್ಷಕ ಮತ್ತು ಯಕ್ಷಗಾನ ಕಲಾಪೋಷಕ ಕಲ್ಪನೆ ಚಂದು ಗೌಡರಿಗೆ ಮಂಗಳೂರಿನಲ್ಲಿ ಗ್ರಹ ಸಂಮಾನ ನೀಡಲಾಯಿತು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಶಕ್ತಿನಗರದಲ್ಲಿರುವ ಮಗಳ ಮನೆಯಲ್ಲಿ ವಯೋವೃದ್ಧ ಚಂದು ಗೌಡ ಮತ್ತು ನೀಲಮ್ಮ ದಂಪತಿಯನ್ನು ಶಾಲು ಸ್ಮರಣಿಕೆ ಮತ್ತು ಫಲ ವಸ್ತುಗಳೊಂದಿಗೆ ಸನ್ಮಾನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ಹವ್ಯಾಸಿ ಕಲಾವಿದರ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಿಗೆ ಚಂದು ಗೌಡರು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿ ಮಾತನಾಡಿದ ಭಾಸ್ಕರ ರೈ ಕುಕ್ಕುವಳ್ಳಿ ‘ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋಟೆಕಾರ್ ಶಂಕರ ಮಠದ ಧರ್ಮಾಧಿಕಾರಿ ಬೋಲ್ಲಾವ ಸತ್ಯ ಶಂಕರರು ನೀಡುತ್ತಿದ್ದ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ಮಿತ್ರ ಬೊಟ್ಯಾಡಿ ರಾಮಣ್ಣ ರೈಯವರೊಂದಿಗೆ ಆ ಕಾಲದ ಹವ್ಯಾಸಿ ಕಲಾವಿದರನ್ನು ಒಟ್ಟುಗೂಡಿಸಿ ಪ್ರದರ್ಶಿಸಿದ ಪೂರ್ಣ ಪ್ರಮಾಣದ ಬಯಲಾಟಗಳಿಗೆ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸಿದ ಚಂದು ಗೌಡರ ಯಕ್ಷಗಾನ ಕಲಾ ಪ್ರೇಮ ಹಾಗೂ ಧಾರ್ಮಿಕ ಸೇವಾ ಕಾರ್ಯಗಳು ಅನನ್ಯವಾದುದು’ ಎಂದರು.‘ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯ ವತಿಯಿಂದ ಶ್ರೀದೇವಿ ಮಹಾತ್ಮೆ, ಭಾರ್ಗವ ವಿಜಯ, ಅತಿಕಾಯ ಇಂದ್ರಜಿತು ಮೈರಾವಣ ಕಾಳಗ, ಕುಮಾರ ವಿಜಯ, ಸಮಗ್ರ ಕುರುಕ್ಷೇತ್ರ, ಶ್ವೇತಕುಮಾರ ಚರಿತ್ರೆ ಇತ್ಯಾದಿ ಪ್ರಸಂಗಗಳ ಇಡೀ ರಾತ್ರಿಯ ಬಯಲಾಟಗಳನ್ನು ಆಡಲಾಗಿತ್ತು. ಹವ್ಯಾಸಿಗಳೊಂದಿಗೆ ಹಿರಿಯ ಕಲಾವಿದರಾದ ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ದಿ. ಬಣ್ಣದ ಮಾಲಿಂಗ, ಕಾಂಚನ ಸಂಜೀವ ರೈ, ಪುತ್ರಕಳ ತಿಮ್ಮಪ್ಪ ಹಾಸ್ಯಗಾರ್, ಗುಬ್ಯ ರಾಮಯ್ಯ ರೈ,ಕುಂಬ್ಳೆ ಶ್ರೀಧರ ರಾವ್, ಕೆ.ಎಂ.ಕೃಷ್ಣ ಪಾಟಾಲಿ ಅಲ್ಲದೆ ಪ್ರಸಿದ್ಧ ಭಾಗವತರಾದ ದಿ.ದಾಸರಬೈಲು ಚನಿಯ ನಾಯ್ಕ, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಬೊಟ್ಯಾಡಿ ರಾಮಯ್ಯ ರೈ, ಆನೆಗುಂಡಿ ಗಣಪತಿ ಭಟ್ ಮುಂತಾದ ಹಿಮ್ಮೇಳ ದಿಗ್ಗಜರು ಭಾಗವಹಿಸಿದ್ದರು. ಆಗ ಚಂದು ಗೌಡರು ಕಲಾವಿದರಿಗೆ ತೋರಿದ ಗೌರವಾದರ ಸ್ಮರಣೀಯ’ ಎಂದವರು ನುಡಿದರು. ಈ ಸಂದರ್ಭದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡ ಹಾಗೂ ಚಂದು ಗೌಡರ ಪುತ್ರಿ ಸುಮಿತ್ರ ಮತ್ತು ಅಳಿಯ ಸುರೇಶ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದ. ಕ. ಜಿಲ್ಲಾ ಪ್ರದಾನ ಸರಕಾರಿ ವಕೀಲರಾಗಿ ಎಂ. ಪಿ. ನೊರೊನ್ಹಾ

ಬಿ.ಎ.(ಲಾ) ಹಾಗೂ ಎಲ್.ಎಲ್.ಬಿ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ವಿಜೇತರಾಗಿದ್ದು, ಕಳೆದ ೩೪ ವರ್ಷಗಳಿಂದ ನುರಿತ ಕಾನೂನು ತಜ್ಞರಾಗಿ ಸಾವಿರಾರು ಖಾಸಾಗಿ ವ್ಯಕ್ತಿಗಳಿಗೆ, ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಹಾಗೂ ವಿದ್ಯಾ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಅಪಾರ ಸೇವೆ ಸಲ್ಲಿಸುತ್ತಿರುವ ಖ್ಯಾತ ಹಿರಿಯ ವಕೀಲರಾದ ಎಂ.ಪಿ. ನೊರೊನ್ಹಾರವರನ್ನು ಕರ್ನಾಟಕ ಸರ್ಕಾರವು ಮುಂದಿನ ಮೂರು ವರ್ಷಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ದ.ಕ. ಜಿಲ್ಲಾ ಪ್ರಧಾನ ಸರಕಾರಿ ವಕೀಲರನ್ನಾಗಿ ನೇಮಕ ಮಾಡಿರುತ್ತಾರೆ. ಸರಕಾರಿ ವಕೀಲರಾಗಿ ಖಾಸಾಗಿ ಹಾಗೂ ಸರಕಾರದ ಪರವಾಗಿ ವ್ಯಾಜ್ಯಗಳನ್ನು ನಡೆಸಲು ಅವಕಾಶ ಇರುತ್ತದೆ.

ಪ್ರಾದೇಶಿಕ ವಾರ್ತೆಗಳು

ಮೊಗರ್ನಾಡು ದೇವ ಮಾತಾ ಚರ್ಚ್ ನಲ್ಲಿ ಹೊಸ ವರ್ಷದ ಬಲಿ ಪೂಜೆ.

ಬಂಟ್ವಾಳ: 250 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿ ಸಂಭ್ರಮಾಚರಣೆಯಲ್ಲಿರುವ ಬಂಟ್ವಾಳ ತಾಲೂಕಿನ ಮೊಗರ್ನಾಡು ದೇವ ಮಾತಾ ಚರ್ಚ್‌ ನಲ್ಲಿ ಹೊಸ ವರ್ಷದ ಬಲಿ ಪೂಜೆ ಸಂಭ್ರಮದಿಂದ ನಡೆಯಿತು. ಬಲಿಪೂಜೆಯ ನೇತೃತ್ವವನ್ನು ಆಸ್ಟ್ರೇಲಿಯಾದ ಅತಿ ವಂದನೀಯ ಮೊನ್ಸಿಂಜೋರ್‌ ಆಲ್ಫ್ರೆಡ್‌ ರಾಯನ್‌ ಡಿ’ಸೋಜಾ ಅವರು ವಹಿಸಿ ಮೇರಿ ಮಾತೆ ದೇವ ಮಾತೆ ಆಗಿದ್ದರಿಂದ ಅವರು ನಮ್ಮೆಲ್ಲರ ಮಾತೆ. ಅವರ ಆದರ್ಶ ನಮಗೆ ದಾರಿದೀಪವಾಗಿದೆ ಎಂದರು. ಬಲಿಪೂಜೆಯಲ್ಲಿ ಚರ್ಚ್ ನ ಪ್ರಧಾನ ಧರ್ಮ ಗುರು ವಂದನೀಯ ಫಾ. ಅನಿಲ್‌ ಕೆನ್ಯೂಟ್‌ ಡಿ’ಮೆಲ್ಲೊ ಅವರು ಭಾಗವಹಿಸಿ ಭಕ್ತರಿಗೆ ಹೊಸ ವರ್ಷದ ಶುಭಾಶಯ ಸಲ್ಲಿಸಿದರು.ಈ ಸಂದರ್ಭದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್‌ ಡಿ’ ಸೋಜಾ, ಕಾರ್ಯದರ್ಶಿ ವಿಲ್ಫ್ರೆಡ್‌ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾ ಡಿ’ ಕುನ್ಹಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವೆಂಕಟ್ ಭಾರಧ್ವಜ್ ನಿರ್ದೇಶನದ ಹೈನಾ ಚಿತ್ರದ ಸಾಂಗ್ ನಾಳೆ ಬಿಡುಗಡೆ.

ಬೆಂಗಳೂರು: ಖ್ಯಾತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ಹೈನಾ ಚಿತ್ರದ ಸಾಂಗು ಎಲ್ಲರಿಗೂ ಗೊತ್ತು ತಲೆಗೆ ಹತ್ತಿದೆ ಮತ್ತು ಅನ್ನುವ ಹಾಡು ನಾಳೆ ಬಿಡುಗಡೆಗೊಳ್ಳಲಿದೆ

ಪ್ರಾದೇಶಿಕ ವಾರ್ತೆಗಳು

Melwyn Peris’ PAYANN team jubilantly celebrates 100 days of success

“It is hopeful that a Konkani language regional film has been shown for 100 days when the entire global cinema industry is in decline. Rarely is a film released in Konkani due to the limited market and lack of resources. Films are made in Konkani not out of any profit expectation but out of sheer love for the mother tongue. Payann’ has emerged as an artistic film that inspires positive thoughts and is unlike any other Konkani film. We must congratulate Melwyn Peris and Neeta Peris ofSangeet Ghar Productions,’ said Mr Ivan D’Souza, a Member of the Legislative Council. He was speaking as the chief guest at the centenary celebrations of Payann’ Konkani film at Bharat Cinema in Bijai. On this occasion, the Rector of St. Aloysius Educational Institutions, Fr Melwin Joseph Pinto, non-resident businessman Mr. James Mendonca andMand Sobhann’ President Mr. Louis J. Pinto were the guests of honour. Payann Cinema director `Sangeet Guru’ Mr. Joel Pereira was present n the stage. Famous Konkani singer Mr Melwyn Peris, producer of Payann, thanked all the artists, technicians, sponsors, and viewers who contributed to the film’s success. Film actor, composer, and organizer Mr. Leslie Rego conducted the program. At the beginning of the program, the ‘Angelore Choir’ set a festive tone by singing a Christmas carol, bringing a lively Christmas spirit to the cinema hall. At the program’s end, the movie Payann’s last screening was arranged in a packed cinema hall.

Scroll to Top