ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

Alani Melody Nite Enchants a Packed Audience

277th Program of Mandd Sobhann’s Monthly Theatre Series took place on January 5 at Kalaangann, Shaktinagar. At the Amphitheatre packed with audience, nine-year-old Alani D’Souza presented her Musical Nite and Enthralled everyone, singing nine songs.At the event, first, the Chairman of Kalangann, Ronald Mendonca, unveiled the banner for the Konkani play ‘Sardar Simanv,’ which will be presented by Mandd Drama team on the occasion of their Silver Jubilee celebrations. Eric Ozario, the Gurkar of Mandd Sobhann, handed over the ‘Gumatt’ (musical instrument) to Alani, encouraging her to carry forward the Konkani singing tradition and wished her well. Dubai-based businessman and philanthropist Vijay Dsouza rang the bell to inaugurate the event. Mandd Sobhann office bearers Louis J Pinto, Keron Madtha, and, on behalf of the Mandd Drama team, Arun Raj Rodrigues, Viddu Uchil, and Vikas Kalakul were present on the stage. Later, nine-year-old singing sensation Alani Leora Dsouza delighted the packed audience at Kalaangann by singing nine songs written/composed by renowned Artistes Chafra Dcosta, Wilfy Rebimbus, Claude Dsouza, Chris Perry, Eric Ozario, Melwin Peris, and Lloyd Rego. Music Director Mavish lead the Band of Musical geniuses Sachin Sequeira (Drums), Jason Dsouza (Lead Guitar), Ashwin Correa (Bass Guitar), Shawn Braslin (Violin), and Ashwil Colaco (Keyboard).Alani’s Trainer Shilpa Cutinha and young singer Arvin Dcunha accompanied Alani and the Blue Angels Choir backed her Singing. The event was beautifully Compeered by Roshan Kulshekar along with children Sanjana Mathias, Angel Cutinha, Anika Dsouza, and Shannon Dcosta. Alani’s mother, Lolita Saldanha, presented mementos to those who contributed to the success of the program and her father, Ajay Glen Dsouza, expressed gratitude.

ಪ್ರಾದೇಶಿಕ ವಾರ್ತೆಗಳು

ಸಂದೇಶ ಪ್ರಶಸ್ತಿ ಪ್ರದಾನ ಪೂರ್ವಭಾವಿ ಸಭೆ

ಮಂಗಳೂರು: ಕರ್ನಾಟಕ ಪ್ರಾಂತೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಆಶ್ರಯದಲ್ಲಿ ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕೊಡ ಮಾಡುವ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭವು 2025 ಫೆಬ್ರವರಿ 10 ರಂದು ಸಂದೇಶದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ಸಂದೇಶದ ಸಭಾಂಗಣದಲ್ಲಿ ನಡೆಯಿತು.ಪ್ರತಿಷ್ಠಾನದ ನಿರ್ದೇಶಕ ವಂದನೀಯ ಡಾ. ಸುದೀಪ್ ಪಾವ್ಲ್, ಟ್ರಸ್ಟಿ ರೋಯ್ ಕ್ಯಾಸ್ತಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕ್ಯಾಥೊಲಿಕ್ ಸಭಾ ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ ಮತ್ತು ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದು, ಮುಂದಿನ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಪ್ರಾದೇಶಿಕ ವಾರ್ತೆಗಳು

ವಿಶ್ವಮಾನವನಾಗಬೇಕೆಂಬುದು ಕುವೆಂಪುರವರ ಕನಸಾಗಿತ್ತು – ಕುಸುಮಾ ಕೆ.ಆರ್ ಕನ್ನಡ ಶಿಕ್ಷಕಿ

ಹುಟ್ಟುವ ಪ್ರತಿ ಮಗು ವಿಶ್ವ ಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪುರವರಿಗಿತ್ತು ಎಂದು ಶಿಕ್ಷಕಿ ಕುಸುಮಾ ಕೆ. ಆರ್ ಹೇಳಿದರು. ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP) ಮಂಗಳೂರು ಸಾರಥ್ಯದಲ್ಲಿ ದಿನಾಂಕ 05/01/2025ರಂದು ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕ್ನಲ್ಲಿ ಕುವೆಂಪು ಜನ್ಮ ದಿನದ ಪ್ರಯುಕ್ತ ನಡೆದ “ಕನ್ನಡವೇ ಸತ್ಯ” ವಿಚಾರಗೋಷ್ಠಿ-ಕವಿಗೋಷ್ಠಿ ಮತ್ತು ಗೀತಗಾಯನ ಉದ್ಘಾಟಿಸಿ ಮಾತನಾಡಿದರು.ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಅವರ ಕನಸನ್ನು ನನಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ ಓಹ್ ಬನ್ನಿ ಸೋದರರೇ ವಿಶ್ವಪಥಕೆ. . . ಕನ್ನಡವೇ ಸತ್ಯ ಕನ್ನಡವೇ ನಿತ್ಯ . ಇಂದಿನ ಈ ಕನ್ನಡವೇ ಸತ್ಯ ಕಾರ್ಯಕ್ರಮವು ನಿಜಕ್ಕೂ ರಸಋಷಿಗೆ ಸಮರ್ಪಣೆ ಎಂದು ನುಡಿದರು. ಇದೇ ಕಾರ್ಯಕ್ರಮದಲ್ಲಿ ಹೊಸ ಕನ್ನಡ ಎಂಬ ಪತ್ರಿಕೆಯನ್ನು ಮಂಗಳೂರಿನ ಜನಪ್ರಿಯ ವೈದ್ಯ, ಸಾಹಿತಿ ಡಾ.ಸುರೇಶ್ ನೆಗಳಗುಳಿ ಬಿಡುಗಡೆಗೊಳಿಸಿ ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಇದ್ದರೂ ಪತ್ರಿಕೆ ಓದುವ ಹವ್ಯಾಸ ಈಗಲೂ ಇರುವುದರಿಂದ ಇಂತಹ ಪತ್ರಿಕೆಗಳು ಮೂಡಿಬರಲು ಸಾಧ್ಯ. ಪತ್ರಿಕೆ ತನ್ನ ವಸ್ತುನಿಷ್ಠತೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಕರ್ತವ್ಯ ನಿರ್ವಹಿಸಬೇಕು. ಹಾಗೇನೇ ಪತ್ರಿಕೆ ಬೆಳೆಯಬೇಕಾದರೆ ಪತ್ರಿಕೆಯನ್ನು ಕೊಂಡು ಓದುವ ಮನಸ್ಥಿತಿ ಹೆಚ್ಚಾಗಬೇಕು ಎಂದು ಮಾರ್ಮಿಕವಾಗಿ ನುಡಿದರು. ಅಧ್ಯಕ್ಷತೆ ವಹಿಸಿದ್ದ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮಾತನಾಡಿ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರು ಒಂದು ದೊಡ್ಡ ಜ್ಞಾನ ಭಂಡಾರವೇ ಸರಿ. ಅವರ ಒಂದೊಂದು ಸಾಹಿತ್ಯವು ಕೂಡಾ ಒಂದೊಂದು ಗ್ರಂಥಗಳು ಎಂದು ಹೇಳಬಹುದು. ಅವರು ಒಂದು ಗ್ರಂಥಾಲಯವಲ್ಲ ಅವರು ಒಂದು ವಿಶ್ವವಿದ್ಯಾನಿಲಯವೇ ಸರಿ. ಅಂತಹ ಮಹಾನ್ ಚೇತನರನ್ನು ನೆನಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಮತ್ತು ಜವಾಬ್ಧಾರಿ ಎಂದು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ, ಪುತ್ತೂರು ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶಾಂತಾ ಕುಂಟಿನಿ, NSCDF ಅಧ್ಯಕ್ಷ ಗಂಗಾಧರ್ ಗಾಂಧಿ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಮತ್ತು ಪತ್ರಕರ್ತ ಲೋಕಯ್ಯ ಶಿಶಿಲ ಉಪಸ್ಥಿತರಿದ್ದರು.ಕಬಕ ಸರಕಾರಿ ಪದವಿಪೂರ್ವ ಕಾಲೇಜು ಶಿಕ್ಷಕಿ ಶ್ರೀಮತಿ ಶಾಂತ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಅನುರಾಧ ರಾಜೀವ ಸುರತ್ಕಲ್ , M.S.ವೆಂಕಟೇಶ್ ಗಟ್ಟಿ , ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್, ವೀಣಾ ರಾವ್ ವಾಮಂಜೂರು, ಸಲೀಂ ಅನಾರ್ಕಲಿ, ಉಮೇಶ್ ಕಾರಂತ್, ಬದ್ರುದ್ದೀನ್ ಕೂಳೂರು, ಸುಕಲತ ಶೆಟ್ಟಿ, ಜುಲಿಯೆಟ್ ಫೆರ್ನಾಂಡಿಸ್ ತಮ್ಮ ಸ್ವರಚಿತ ಕವನ ವಾಚಿಸಿದರು. KSSAP ಖಜಾಂಚಿ ವರ್ಷ ನಿಖಿಲ್‌ರಾಜ್ ಪ್ರಾರ್ಥನೆ ಗೈದರು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ವಂದಿಸಿದರು, ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ಅ ಬಳಿಕ ಗಾಯನ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧಿ ಬಳಗದಿಂದ ಗೀತಗಾಯನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಜನವರಿ 11 ರಂದು ಸುರತ್ಕಲ್ ನಲ್ಲಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ, ವೀರಕೇಸರಿ ಟ್ರೋಫಿ 2025

ಸುರತ್ಕಲ್: ವೀರ ಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ 2025 ಜನವರಿ 11 ಶನಿವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದ ಹತ್ತಿರ ನಡೆಯಲಿದೆ.ಉದ್ಘಾಟನಾ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಬಿಎಎಸ್ ಎಫ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸುರತ್ಕಲ್ ಶ್ರೀ ಸದಾಶಿವ ಮಹಾಗಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್ ಗಣಪತಿ ಮಯ್ಯ, ಶ್ರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಅರುಣ್ ಪೈ, ಮೋಹನ್ ಪೂಜಾರಿ ಅಗರಮೇಲು, ಸಚ್ಚೀಂದ್ರ ಮೆಂಡನ್ ದೊಡ್ಡಕೊಪ್ಲ, ಕಾರ್ಪೋರೇಟರ್ ಗಳಾದ ಸರಿತಾ ಶಶಿಧರ್, ನಯನ ಕೋಟ್ಯಾನ್, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ, ಉದ್ಯಮಿ ಉಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.ಸಂಜೆ 7 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಬಿಎಎಸ್ ಎಫ್ ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಬೃಜೇಶ್ ಚೌಟ, ಶಾಸಕರಾದ ಡಾ ವೈ ಭರತ್ ಶೆಟ್ಟಿ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೇಯರ್ ಮನೋಜ್ ಕುಮಾರ್, ಎಸಿಪಿ ಶ್ರೀಕಾಂತ ಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸತೀಶ್ ಮುಂಚೂರು, ಅಂಜನಾ ಎಂ ಶೆಟ್ಟಿ, ಯಜ್ಞೇಶ್ವರ ಬರ್ಕೆ, ಶ್ರೀಕರ ಶೆಟ್ಟಿ ಕಾಪು, ವಾಲಿಬಾಲ್ ಅಸೋಸಿಯೇಶನ್ ನ ಅಧ್ಯಕ್ಷ ಸತೀಶ್, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಕಟೀಲು ಶ್ರೀ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ಭಾಗವಹಿಸಿದ್ದಾರೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಿವಿಲ್ ಕಂಟ್ರಾಕ್ಟರ್ ಪಾಂಡುರಂಗ ವಿ ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಪುತ್ತೂರು ಪಿಡಬ್ಲ್ಯು ಇಂಜಿನಿಯರ್ ರಾಜೇಶ್ ರೈ ಭಾಗವಹಿಸಲಿದ್ದಾರೆ.ವೀರ ಕೇಸರಿ ಸಂಸ್ಥೆಯ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ,ಗೌರವಾಧ್ಯಕ್ಷ ಸುಧಾಕರ ಸುರತ್ಕಲ್, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಉಪಸ್ಥಿತರಿರುವರು.ಪಂದ್ಯಾಟದಲ್ಲಿ ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ಸಿಐಎಸ್ ಎಫ್ ರಾಂಚಿ, ಕೇರಳ ಕಸ್ಟಮ್ಸ್, ಡೇಂಜಸ್೯ ಬಾಯ್ಸ್, ಪಂಜ ಫ್ರೆಂಡ್ಸ್ ತಂಡಗಳು ಭಾಗವಹಿಸಲಿದೆ. ವಿಜೇತರಿಗೆ ಪ್ರಥಮ 77,777 ದ್ವಿತೀಯ 55,555 ತೃತೀಯ 22,222 ಚತುರ್ಥ 11,111 ನಗದಿನೊಂದಿಗೆ ವೀರಕೇಸರಿ ಟ್ರೋಫಿ 2025 ನೀಡಲಾಗುವುದು ಎಂದು ವೀರ ಕೇಸರಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪುಣೆ ಬಂಟರ ಸಂಘದ ಸುವರ್ಣಮಹೋತ್ಸವಕ್ಕೆ ಸುರತ್ಕಲ್ ಬಂಟರ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮುಹೂರ್ತ ಸಮಾರಂಭ

ಸುರತ್ಕಲ್: ಜನವರಿ 26 ರಂದು ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವಕ್ಕೆ ಸುರತ್ಕಲ್ ಬಂಟರ ಸಂಘದಿಂದ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂಟರಭವನದಲ್ಲಿ ಮಹೂರ್ತ ನೆರವೇರಿತು. ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿ ಚೆಯರ್ ಮೆನ್ ಕರುಣಾಕರ ಎಂ ಶೆಟ್ಟಿ ಮದ್ಯಗುತ್ತು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಾವು ನೀಡುವ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು ಏಕಾಗ್ರತೆ ಛಲಗಳಿಂದ ಸಾಧಿಸಿದಾಗ ಯಶಸ್ಸು ನಮ್ಮದಾಗುತ್ತದೆ. ಪುಣೆಯಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಲಿ, ಕಾರ್ಯಕ್ರಮಕ್ಕೆ ತನ್ನಿಂದಾದ ಸಹಾಯ ಮಾಡುವುದಾಗಿ ಶುಭ ಹಾರೈಸಿದರು.ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ ಮಾತನಾಡಿ ಸತತ ಪರಿಶ್ರಮ ಪಟ್ಟಾಗ ನಮ್ಮ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಂಗದಲ್ಲಿ ಸುರತ್ಕಲ್ ಬಂಟರ ಸಂಘವು ಪ್ರತಿಯೊಂದು ಪ್ರದೇಶದಲ್ಲೂ ಒಳ್ಳೆಯ ಸಾಧನೆ ಮಾಡಿದೆ. ಪುಣೆಯಲ್ಲಿ ಎಲ್ಲಾ ಸದಸ್ಯ ಕಲಾವಿದರು ಉತ್ತಮ ಪ್ರದರ್ಶನ ನೀಡುವಂತಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಒಳ್ಳೆಯ ಹೆಸರಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದರು.ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಮಾತನಾಡಿ ಒಂದು ಗಂಟೆಯ ಪ್ರದರ್ಶನಕ್ಕೆ ತುಂಬಾ ಶ್ರಮವಹಿಸ ಬೇಕಾಗುತ್ತದೆ. ಕಲಾವಿದರೆಲ್ಲರೂ ಶಿಸ್ತನ್ನು ಅಳವಡಿಸಿ ಪ್ರದರ್ಶನ ನೀಡಬೇಕು. ಮುಖ್ಯವಾಗಿ ಸಮಯದ ಪರಿಪಾಲನೆ ಅಗತ್ಯ ಎಂದರು. ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ಮಾತನಾಡಿ, ಪುಣೆ ಬಂಟರ ಸಂಘದ ಸುವರ್ಣಮಹೋತ್ಸವಕ್ಕೆ ಯಾವುದಾದರೂ ನಾಟಕ ತಂಡವನ್ನು ಕರೆಸಿ ಪ್ರದರ್ಶನ ಕೊಡಿಸಬಹುದಿತ್ತು. ಆದರೆ ಪುಣೆ ಬಂಟರ ಸಂಘವು ಸುರತ್ಕಲ್ ಬಂಟರ ಸಂಘದ ಮೇಲೆ ವಿಶ್ವಾಸ ಇರಿಸಿ ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ಸದುಪಯೋಗ ಪಡಿಸಿ ಉತ್ತಮ ಪ್ರದರ್ಶನ ನೀಡ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿಯವರು ಸಾಂಸ್ಜೃತಿಕ ಕಾರ್ಯಕ್ರಮದ ಸ್ವರೂಪವನ್ನು ತಿಳಿಸಿ, ಇದು ಎಲ್ಲರ ಜವಾಬ್ದಾರಿ, ಸಮಯ ಪರಿಪಾಲನೆ ಅಗತ್ಯ ಎಂದರು.ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕಾರ್ಯದರ್ಶಿ ಲೀಲಾದರ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಮ್ ಶೆಟ್ಟಿ, ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತಾ ಹರೀಶ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷ ಭವ್ಯಾ ಶೆಟ್ಟಿ, ಪ್ರವೀಣ್ ಶೆಟ್ಟಿ, ಕಿರಣ್ ಪ್ರಸಾದ್ ರೈ, ದಿವಾಕರ ಸಾಮಾನಿ ಚೇಳಾರ್, ದೇವೇಂದ್ರ ಶೆಟ್ಟಿ, ಮಾಧವ ಶೆಟ್ಟಿ ತಡಂಬೈಲ್, ರಮೇಶ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್, ಅಕ್ಷಯ್ ಶೆಟ್ಟಿ, ಸುಕೇಶ್ ಶೆಟ್ಟಿ ಚೇಳಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

TANISHQ ORGANIZES DIAMOND EXHIBITION AND SALE IN MANGALORE

JANURAY 2025: Tanishq, India’s largest jewellery retail brand from the house of Tata is delighted to announce an exclusive Wedding Diamond Exhibition and Sale in Mangalore, showcasing an exquisite high value studded collection, the perfect addition to every woman’s jewellery trousseau box. Adding to the allure, Tanishq will be offering up to 20% off* on diamond jewellery value. The exhibition is inaugurated by U.T Khader speaker of the Karnataka legislative assembly, Rohan Monteiro Chairman Rohan Corporation , Wencita Dias Actress. The exhibition will be hosted from 3rd Jan to 5th jan 2025 at Tanishq showroom 15-1-12 LIYA SYNERGY Opp domino’s pizza Lower Bendoorwell Mangalore pin code- 575002Tanishq views diamonds as a reflection of every woman’s unique journey, embodying their innate brilliance and elegance. In the tapestry of life, weddings stand as significant milestones that weave together love, commitment, and dreams for the future. Recognizing its cherished role in these moments, Tanishq offers an extensive diamond jewellery collection. Each piece is crafted to captivate with its exceptional sparkle, radiance, and fire, echoing the multifaceted beauty of a woman’s life path.Visitors to the exhibition will have the chance to experience Tanishq’s exquisite diamond jewellery collection, price range starting from 2 lakhs to 50 lakhs, thoughtfully curated to highlight the brand’s remarkable craftsmanship. The display will feature an enchanting selection of designs, showcasing the intricate artistry and unparalleled quality that define Tanishq. With options ranging from timeless classics to contemporary creations, the collection caters to a variety of tastes. Whether seeking traditional elegance or modern flair, the exhibition promises to offer something special for everyone, enabling patrons to find jewellery that perfectly complements their style and personality.Tanishq believes that every precious moment in life deserves to be celebrated with a diamond. The brand’s expansive collection of diamond jewellery upholds the trust and quality synonymous with its name, offering both enthusiasts and collectors a remarkable selection of premium-grade diamonds. This diverse range is a testament to brilliance and craftsmanship, presenting options to suit the most discerning tastes. The exhibition invites visitors to immerse themselves in an atmosphere of elegance and radiance, where each piece stands as a tribute to the wearer’s unique style and timeless grace.A must-visit for jewellery enthusiasts, the exhibition offers an opportunity to explore the finest diamond jewellery and find the perfect addition to any trousseau. Held in the heart of MANGALORE this luxurious showcase promises an exceptional shopping experience, making it the ultimate destination for jewellery connoisseurs.About Tanishq:Tanishq, India’s most-loved jewellery brand from the TATA Group, has been synonymous with superior craftsmanship, exclusive designs and guaranteed product quality for over two decades. It has built for itself the envious reputation of being the only jewellery brand in the country that strives to understand the Indian woman and provide her with jewellery that meets her traditional and contemporary aspirations and desires. To stress their commitment to offer the purest jewellery, all Tanishq stores are equipped with the Karatmeter which enables customers to check the purity of their gold in the most efficient manner. The Tanishq retail chain currently spreads across 450+ exclusive boutiques in more than 250+ cities.

ಪ್ರಾದೇಶಿಕ ವಾರ್ತೆಗಳು

ತನಿಶ್ಕ್ ಮಂಗಳೂರಿನಲ್ಲಿ ಆಭರಣ ಪ್ರದರ್ಶನ ಮತ್ತು ಮಾರಾಟ ಆಯೋಜನೆ

ಜನವರಿ 2025: ತನಿಶ್ಕ್, ಟಾಟಾ ಹೌಸ್‌ನಿಂದ ಹೊರಹೊಮ್ಮಿದ ಭಾರತದ ಅತಿದೊಡ್ಡ ಆಭರಣ ಬ್ರ್ಯಾಂಡ್, ಇದೀಗ ಮಂಗಳೂರಿನಲ್ಲಿ ವಿಶೇಷ ವೆಡ್ಡಿಂಗ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ. ಇದು ಪ್ರತಿಯೊಬ್ಬ ಮಹಿಳೆಯ ಆಭರಣ ಸಂಗ್ರಹವನ್ನು ಸಂಪೂರ್ಣಗೊಳಿಸುವ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ರದರ್ಶನದಲ್ಲಿ ತನಿಶ್ಕ್ 20% ವರೆಗೆ ಡೈಮಂಡ್ ಆಭರಣಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಈ ಪ್ರದರ್ಶನವು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಶ್ರೀ ಯು.ಟಿ. ಖಾದರ್, ರೋಹನ್ ಕಾರ್ಪೊರೇಶನ್ನಿನ ಶ್ರೀ ರೋಹನ್ ಮೊಂತೇರೊ, ನಟಿ ಕುಮಾರಿ ವೆನ್ಸಿಟಾ ಡಯಸ್ ಇವರಿಂದ ಉದ್ಘಾಟಿಸಲ್ಪಟ್ಟು, ಮಂಗಳೂರಿನ ಬೆಂದೂರ್’ವೆಲ್’ನಲ್ಲಿರುವ ಡೊಮಿನೋಸ್ ಪಿಜ್ಜಾ ಎದುರಿನ 15-1-12 ಲಿಯಾ ಸೈನರ್ಜಿನಲ್ಲಿರುವ ತನಿಶ್ಕ್ ಶೋ ರೂಮಿನಲ್ಲಿ 2025 ಜನವರಿ 3ರಿಂದ 5ರವರೆಗೆ ನಡೆಯುತ್ತದೆ.ಜೀವನದ ವಿವಿಧ ಹಂತಗಳಲ್ಲಿ, ವಿವಾಹವು ಪ್ರೇಮ ಮತ್ತು ಭವಿಷ್ಯಕ್ಕಾಗಿ ಕನಸುಗಳನ್ನು ಸೇರಿಸುವ ಮಹತ್ವಪೂರ್ಣ ಹಂತವಾಗಿದೆ. ಇದಕ್ಕಾಗಿ ತನಿಶ್ಕ್ ತನ್ನ ವಿಶಿಷ್ಟ ಡೈಮಂಡ್ ಆಭರಣ ಕಲೆಕ್ಷನನ್ನು ಆಯ್ಕೆಮಾಡಿದೆ. ಪ್ರತಿಯೊಂದು ಆಭರಣವು ತನ್ನ ಅಲಂಕಾರಿಕ ಚೌಕಟ್ಟು, ಪ್ರಕಾಶ ಮತ್ತು ಅಗಾಧತೆಯನ್ನು ಹೊಂದಿದೆ. 2 ಲಕ್ಷರಿಂದ 50 ಲಕ್ಷ ರೂಪಾಯಿವರೆಗಿನ ವ್ಯಾಪಕವಾದ ಬೆಲೆಯೊಂದಿಗೆ, ಈ ಪ್ರದರ್ಶನವು ತನಿಶ್ಕ್‌ನ ಅದ್ಭುತ ಕೌಶಲ್ಯವನ್ನು ಪ್ರತಿಬಿಂಬಿಸುವಂತೆ ತಯಾರಿಸಿದ, ಆಕರ್ಷಕ ವಿನ್ಯಾಸಗಳ ಆಯ್ಕೆಯನ್ನು ಒಳಗೊಂಡಿದ್ದು, ತನಿಶ್ಕ್‌ನ ಅತ್ಯುತ್ತಮ ಕಲೆಯು ಅದ್ಭುತವಾಗಿ ಪ್ರತಿಬಿಂಬಿಸುತ್ತದೆ. ಹಳೆಯ ವಿನ್ಯಾಸದಿಂದ ಇತ್ತೀಚಿನ ಆದರ್ಶ ವಿನ್ಯಾಸಗಳವರೆಗಿನ ಈ ಕಲೆಕ್ಷನ್ ಪ್ರತಿಯೊಬ್ಬರ ವೈವಿಧ್ಯಮಯ ಅಭಿರುಚಿಗೆ ತಕ್ಕಂತೆ ಆಯ್ಕೆಯನ್ನು ನೀಡುತ್ತದೆ.ತನಿಶ್ಕ್, ಜೀವನದ ಪ್ರತಿ ಅಮೂಲ್ಯ ಕ್ಷಣವನ್ನು ಡೈಮಂಡ್‌ನೊಂದಿಗೆ ಆಚರಿಸಬೇಕೆಂದು ನಂಬುತ್ತದೆ. ಬ್ರ್ಯಾಂಡ್‌ನ ವಿಶಾಲ ಡೈಮಂಡ್ ಆಭರಣ ಕಲೆಕ್ಷನ್ ತನ್ನ ಹೆಸರಿನೊಂದಿಗೆ ಸಂಬಂಧಿಸಿದ ವಿಶ್ವಾಸ ಮತ್ತು ಗುಣಮಟ್ಟವನ್ನು ಗುರುತಿಸಿಕೊಂಡು, ಉತ್ಕೃಷ್ಟ ಗುಣಮಟ್ಟವನ್ನು ಬಯಸುವ ಗ್ರಾಹಕರಿಗಾಗಿ ಅಪರೂಪದ ಆಯ್ಕೆಯನ್ನು ಒದಗಿಸುತ್ತದೆ.ಈ ಪ್ರದರ್ಶನವು ಆಭರಣ ಪ್ರಿಯರಿಗೆ ತಾವು ಬಯಸಿದ ನಿಖರವಾದ ಆಭರಣವನ್ನು ಹುಡುಕಲು ಒಂದು ಮಹತ್ವಪೂರ್ಣ ಅವಕಾಶವಾಗಿದೆ. ಮಂಗಳೂರಿನ ಹೃದಯದಲ್ಲಿ ನಡೆಯುವ ಈ ಪ್ರದರ್ಶನವು ಅಪೂರ್ವ ಶಾಪಿಂಗ್ ಅನುಭವವನ್ನು ಒದಗಿಸುವ ಭರವಸೆ ನೀಡುತ್ತದೆ.ತನಿಶ್ಕ್, ಟಾಟಾ ಗುಂಪಿನಿಂದ ಭಾರತದ ಅತ್ಯಂತ ಪ್ರಸಿದ್ಧ ಆಭರಣ ಬ್ರ್ಯಾಂಡ್, ಎರಡು ದಶಕಗಳ ಕಾಲ ಅತ್ಯುತ್ತಮ ವಿಶಿಷ್ಟ ವಿನ್ಯಾಸಗಳು ಮತ್ತು ಖಚಿತ ಗುಣಮಟ್ಟಕ್ಕಾಗಿ ಪ್ರಸಿದ್ಧವಾಗಿದೆ. ಇದು ಭಾರತೀಯ ಮಹಿಳೆಯನ್ನು ಅರ್ಥಮಾಡಿಕೊಳ್ಳುವ, ಸಂಪ್ರದಾಯ ಮತ್ತು ಆಧುನಿಕ ಆಸಕ್ತಿಗಳೊಂದಿಗೆ ಹೊಂದಿಕೊಳ್ಳುವ ಆಭರಣವನ್ನು ನೀಡಲು ಪ್ರಯತ್ನಿಸುವ ಏಕೈಕ ಆಭರಣ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ತನಿಶ್ಕ್ ಶೋರೂಮ್’ನಲ್ಲಿ ಕಾರಟ್’ಮೀಟರ್ ಬಳಸಿ ಗ್ರಾಹಕರಿಗೆ ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಅನುವು ಮಾಡಲಾಗಿದೆ. ಪ್ರಸ್ತುತ ತನಿಶ್ಕ್ 250+ ನಗರಗಳಲ್ಲಿ 450+ ಶೋರೂಮ್’ಗಳಿವೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಗೆಡ್ಡೆ ಗೆಣಸು ಸೊಪ್ಪಿನ ಮೇಳದಲ್ಲಿ ಕಿಕ್ಕಿರಿದ ಜನ ಸಂದಣಿ…..

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಶನಿವಾರ ಮತ್ತು ರವಿವಾರ ಮಂಗಳೂರಿನ ಸಂಘ ನಿಕೇತನದಲ್ಲಿ ಆಯೋಜಿಸಲಾದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದಲ್ಲಿ ಶನಿವಾರ ದೇಶದ ಗಿನ್ನೆಸ್ ದಾಖಲೆ ಹಾಗೂ ಲಿಮ್ಕಾ ದಾಖಲೆಯ ಗೆಡ್ಡೆ ಗೆಣಸು ಬೆಳೆಗಾರರು ತಾವು ಬೆಳೆದ ಬೃಹತ್ ಗೆಡ್ಡೆ ಗೆಣಸು ಸಂಗ್ರಹದೊಂದಿಗೆ ಮೇಳದಲ್ಲಿ ಭಾಗವಹಿಸಿದ್ದರು.ಜೊತೆಗೆ ಜೊಯಿಡಾದ ಕುಡುಬಿ ಜನಾಂಗದ ರೈತರು ಬೆಳೆದ ಮೂಡ್ಲಿ ಹೆಸರಿನ ಗೆಡ್ಡೆ, ಕೇರಳದ ಕೃಷಿಕರ ತಂಡದ ಬಳಿ ಗೆಣಸಿನ ಗೆಡ್ಡೆ ಗಳ ಸಂಗ್ರಹ ಮೇಳದ ವಿಶೇಷ ಆಕರ್ಷಣೆ ಯಾಗಿದೆ. *ಟ್ಯೂಬರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿ ಯ ಕೇರಳದ ಶಾಜಿ ಎನ್ ಎಂ 2021ರಲ್ಲಿ ಭಾರತ ಸರಕಾರದಿಂದ ಜೀವ ವೈವಿಧ್ಯ ಸಂರಕ್ಷಣೆ ಗಾಗಿ ಪ್ರಶಸ್ತಿ ಪಡೆದವರು ಸುಮಾರು 300 ಬಗೆಯ ಗೆಡ್ಡೆ ಗೆಣಸು,ಧಾನ್ಯ, ಬೀಜಗಳ ಸಂಗ್ರಹಣೆ ಯೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. *ಗಿನ್ನೆಸ್,ಲಿಮ್ಕಾ ದಾಖಲೆ ಬರೆದ ಕೃಷಿಕ ರಿಜಿ ಜೊಸೆಫ್ ತಾವು ಬೆಳೆದ ಸುಮಾರು 100 ಮಾದರಿಯ ಗೆಡ್ಡೆ ಗೆಣಸು ಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದಾರೆ.ಅತ್ಯಂತ ದೊಡ್ಡ ಕೆಸುವಿನ ಎಲೆ ಬೆಳೆದು ಗಿನ್ನೆಸ್ ದಾಖಲೆ ಮಾಡಿರುವ ಕೇರಳದ ರಿಜಿ ಜೋಸೆಫ್ ಬೃಹತ್ ಗಾತ್ರದ ಅರಸಿನ ಗಡ್ಡೆ ಬೆಳೆದು ಲಿಮ್ಕಾ ದಾಖಲೆ ಮಾಡಿದ್ದಾರೆ ‌ಅವರು ಬೆಳೆದ ಬೃಹತ್ ಗಾತ್ರದ ಸುವರ್ಣ ಗೆಡ್ಡೆ,ಬಳ್ಳಿ ಗೆಣಸು,ಮರಗೆಣಸು ಶಿಬಿರದ ವಿಶೇಷ ಆಕರ್ಷಣೆ ಯಾಗಿದೆ. ಮೇಳದಲ್ಲಿ 370 ಕ್ಕೂ ಅಧಿಕ ಜಾತಿಯ ಗೆಡ್ಡೆ ಗೆಣಸು ಹಾಗೂ 100ಕ್ಕೂ ವಿವಿಧ ಸೊಪ್ಪುಗಳು ಪ್ರದರ್ಶನಗೊಂಡಿದೆ.ಕರ್ನಾಟಕ ಮಹಾರಾಷ್ಟ್ರ ಒರಿಸ್ಸಾ ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ಬೆಳೆಸಿದ,ವಿವಿಧ ತಳಿಗಳ ಅರಸಿನ ,ಶುಂಠಿ, ಕೂವೆಗೆಡ್ಡೆ, ಬೇರು,ಔಷದೀಯ ಗುಣದ ಗೆಡ್ಡೆ ಗಳು ಕೆಸುವಿನ ಗೆಡ್ಡೆ,ಉತ್ತರಿ, ಪರ್ಪಲ್ ಯಾಮ್, ಮರ ಗೆಣಸು,ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸು ಹಾಗೂ ವಿವಿಧ ಜಾತಿಯ ಗೆಡ್ಡೆ ಸಾವಯವ ಸಸಿ,ಸಬ್ಬಿಗೆ,ಕೊತ್ತಂಬರಿ,ಒಂದೆಲಗ,ಹರಿವೆ,ತರಕಾರಿ ಬೀಜ ಸ್ಥಳೀಯ ಬಸಳೆ,ಬದನೆ, ನವಧಾನ್ಯ ಬೀಜಗಳು,ಜೇನು ತುಪ್ಪ ಮೇಳದ ವಿಶೇಷ ಆಕರ್ಷಣೆಯಾಗಿದೆ.ಸೊಪ್ಪು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೆಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಸೊಪ್ಪು ತರಕಾರಿ ಸಸಿ,ಬೀಜಗಳ ಮಾರಾಟದ ಜೊತೆ ಗೆಣಸುಗಳಿಂದ ತಯಾರಿಸಿದ ಕರಿದ ತಾಜಾ ಖಾದ್ಯ, ತಿನಿಸುಗಳ ಮಾರಾಟ ದಲ್ಲಿಯೂ ಜನ ಜಂಗುಳಿ ಕಂಡು ಬಂತು.ಈ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ ಎಂದು ಸಾವಯವ ಗ್ರಾಹಕ ಬಳಗದ ಅಧ್ಯಕ್ಷ ಎಸ್.ಎ.ಪ್ರಭಾಕರ ಶರ್ಮಾ ಹಾಗೂ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಡವರ ಧ್ವನಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕೆಲಸ ಮಾಡುತ್ತಿದೆ: ಐಕಳ ಹರೀಶ್ ಶೆಟ್ಟಿ. ಸಮಾಜಕಲ್ಯಾಣ ಸಹಾಯಧನ ವಿತರಣೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇರುವುದೇ ಬಡವರ ಕಣ್ಣೀರು ಒರೆಸುವುದಕ್ಕೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಒಕ್ಕೂಟ ನಿರಂತರವಾಗಿ ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತಾ ಬಂದಿದೆ. ಮುಂದೆಯೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಸಹಾಯಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಂಟ ಸಮಾಜ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಪ್ರವೃತ್ತವಾಗುತ್ತದೆ. ಅದೇ ರೀತಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇತರೆ ಸಮಾಜದವರಿಗೂ ನೆರವಿನ ಹಸ್ತ ನೀಡುತ್ತಿದೆ ಎಂದರು.ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕವಾಗಿ ಮಾತನಾಡಿ 37 ವರ್ಷಗಳ ಇತಿಹಾಸ ಇರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಹಲವು ಕಾರ್ಯಗಳು ನಿರಂತರವಾಗಿ ನಡೆದಿದೆ. ದಾನಿಗಳ ನೆರವಿನಿಂದ ಮತ್ತು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳ ಶ್ರಮದಿಂದ ಸಹಾಯಹಸ್ತ ನೀಡಲು ಸಾಧ್ಯವಾಯಿತು. ಈ ಬಾರಿ 16 ಲಕ್ಷ ರೂಪಾಯಿ ಹಣವನ್ನು ವಿತರಿಸಲಾಯಿತು ಎಂದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಒಕ್ಕೂಟಕ್ಕೆ ಯಾರೇ ಅರ್ಜಿ ಸಲ್ಲಿಸಿದರೂ ಅರ್ಜಿಯನ್ನು ತಿರಸ್ಕರಿಸದೆ ಪರಿಶೀಲಿಸಿ ನೆರವನ್ನು ನೀಡಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆಸ್ಟ್ರೇಲಿಯದ ಉದ್ಯಮಿ ದಯಾನಂದ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಸಮಾರಂಭದಲ್ಲಿ ಚಂದ್ರಹಾಸ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ, ಸುಧಾಕರ ಪೂಂಜ ಸುರತ್ಕಲ್, ಹರ್ಷಕುಮಾರ್ ರೈ, ಗೀತಾ ರೈ, ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು. ಉದಯಕುಮಾರ್ ಪ್ರಾರ್ಥನೆಗೈದರು. ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಜ. 5: ಮಂಗಳೂರು ಧರ್ಮ ಪ್ರಾಂತ್ಯದ ಪರಮ ಪವಿತ್ರ ಪ್ರಸಾದ ಮೆರವಣಿಗೆ

ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಪರಮ ಪವಿತ್ರ ಪ್ರಸಾದ ಮೆರವಣಿಗೆಯು ಜನವರಿ 5 ರಂದು ಸಂಜೆ ನಡೆಯಲಿದೆ. ಅಪರಾಹ್ನ 3.30 ಕ್ಕೆ ಮಿಲಾಗ್ರಿಸ್ ಚರ್ಚ್ ನಲ್ಲಿ ಬಲಿ ಪೂಜೆ ನಡೆದು ಬಳಿಕ ಅಲ್ಲಿಂದ ಪರಮ ಪವಿತ್ರ ಪ್ರಸಾದ ಮೆರವಣಿಗೆ ರೊಜಾರಿಯೊ ಕ್ಯಾಥೆಡ್ರಲ್ ಗೆ ತೆರಳಲಿದೆ. ರೊಜಾರಿಯೊ ಕ್ಯಾಥೆಡ್ರಲ್ ನ ತೆರೆದ ಮೈದಾನದಲ್ಲಿ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಪರಮ ಪವಿತ್ರ ಪ್ರಸಾದದ ಆರಾಧನೆ, ಪ್ರವಚನ ಹಾಗೂ ಆಶೀರ್ವಚನ ನೆರವೇರಲಿದೆ ಎಂದು ಧರ್ಮ ಪ್ರಾಂತ್ಯದ ಪ್ರಕಟಣೆ ತಿಳಿಸಿದೆ.

Scroll to Top