ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ತುಳು ಸಿನಿಮಾಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಎಂಟ್ರಿ

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಅಭಿನಯಿಸಲು ಬಾಲಿವುಡ್ ನಟ ಸುನೀಲ್ ಶೆಟ್ಟಿ ಜನವರಿ 14 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ.ಅನೆಕ ವರ್ಷಗಳಿಂದ ತುಳು ಸಿನಿಮಾದಲ್ಲಿ ಅಭಿನಯಿಸ ಬೇಕೆಂಬ ಇಚ್ಛೆ ಅವರಲ್ಲಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಜನವರಿ 15 ರಿಂದ ಸುನೀಲ್ ಶೆಟ್ಟಿ ಅವರ ಚಿತ್ರೀಕರಣ ನಡೆಯಲಿದೆ. ಇದು ಜೈ ಸಿನಿಮಾಕ್ಕೆ ಕೊನೆಯ ಹಂತದ ಚಿತ್ರೀಕರಣ ಆಗಿದೆ.“ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಕುತ್ತಾರ್, ದಂಬೇಲ್, ಮರಕಡ, ಶೂಲಿನ್ ಪ್ಯಾಲೇಸ್ ಮರವೂರು, ಬೊಂದೇಲ್ ಪಣಂಬೂರು, ಬೈಕಂಪಾಡಿಯಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ.ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.“‘ಜೈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೂರನೇ ಹಂತದ ಚಿತ್ರೀಕರಣ ಜನವರಿಯಲ್ಲಿ ನಡೆಯಲಿದೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲಿ ಸಂಘಟನೆ ತೊಡಗಿಸಿ ಕೊಂಡಿರುವುದು ಶ್ಲಾಘನೀಯ”: ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು. “ವೀರಕೇಸರಿ ಟ್ರೊಫಿ-2025” ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

ಸುರತ್ಕಲ್: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ|ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ಸುರತ್ಕಲ್ ಬಂಟರ ಭವನದ ಬಳಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಮಧ್ಯಗುತ್ತು ಕರುಣಾಕರ ಶೆಟ್ಟಿ ಮಧ್ಯಗುತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಬಳಿಕ ಮಾತಾಡಿದ  ಅವರು, “ನನಗೆ ಕ್ರೀಡೆಯಲ್ಲಿ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ನನ್ನಿಂದಾದ ಸಹಕಾರ ನೀಡುತ್ತಾ ಬಂದಿದ್ದೇನೆ. ಬರೀ ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವೀರಕೇಸರಿ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಪರ ಕಾಳಜಿಯೊಂದಿಗೆ ಕೆಲಸ ಮಾಡಲಿ“ ಎಂದರು.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಾತನಾಡಿ, “ರಾಜ್ಯದಲ್ಲಿ ಬೇರೆಲ್ಲೂ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಶಿಸ್ತುಬದ್ಧವಾಗಿ ವಾಲಿಬಾಲ್ ಪಂದ್ಯಾಟ ನಡೆಯುವುದಿಲ್ಲ. ಕೇರಳದಲ್ಲಿ ಕ್ರೀಡಾಕೂಟಗಳು ಸಾಮಾನ್ಯವಾಗಿ ನಡೆಯುತ್ತದೆ. ಯಾಕೆಂದರೆ ನಮ್ಮಲ್ಲಿ ಕ್ರೀಡೆಗೆ ಸಹಕಾರ ನೀಡುವವರು ಕಡಿಮೆ. ಆದರೆ ಇಲ್ಲಿ ಬಹಳಷ್ಟು ಮಂದಿ ಬೆಂಬಲ ನೀಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ವಿಚಾರ“ ಎಂದರು. ವೇದಿಕೆಯಲ್ಲಿ ಬಿಎಎಸ್ ಎಫ್ ನ  ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ,   ವೈದ್ಯ ಶಶಿರಾಜ್ ಶೆಟ್ಟಿ, ಅಂಜನಾ ಎಂ. ಶೆಟ್ಟಿ, ಯಜ್ನೇಶ್ವರ್ ಬರ್ಕೆ, ಉದ್ಯಮಿ ಸತೀಶ್ ಮುಂಚೂರು, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಚೂರು, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲ್, ಜನನಿ ಕನ್ಸ್ಟ್ರಕ್ಷನ್ ಮಾಲಕ ಸುಧಾಕರ್ ಪೂಂಜಾ, ಯಕ್ಷಧ್ರುವ  ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್  ರೈ, ಸಂಘಟನೆಯ ಗೌರವಾಧ್ಯಕ್ಷ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಕೈಲಾಸ್ ತಡಂಬೈಲ್, ಪದ್ಮನಾಭ ಕರ್ಕೇರ, ರಾಘವೇಂದ್ರ ಶೆಟ್ಟಿ ತಡಂಬೈಲ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತುಮಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ಡಾ ವೈ ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ , ಪಾಂಡುರಂಗ ಕೆ ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಭಾಗವಹಿಸಿದ್ದರು.ಅನುಪ್ ಶೆಟ್ಟಿ   ಸ್ತುತಿಸಿದರು. ಅಶೋಕ್ ಶೆಟ್ಟಿ ತಡಂಬೈಲ್ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಬಿಂದಿಯ ಶೆಟ್ಟಿ,  ಅನೂಪ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್ ಕಾರ್ಯಕ್ರಮ ನಿರೂಪಿಸಿದರು.ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸಿದ್ದು ಪ್ರಥಮ‌ ಬಹುಮಾನವನ್ನು ಪಂಜ ಫ್ರೆಂಡ್ಸ್, ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸುರತ್ಕಲ್  ಸ್ಟೈಕರ್ಸ್ ತೃತೀಯ ಪ್ರಶಸ್ತಿಯನ್ನು ಐಎಎಮ್ ಟೈಗರ್ ತಂಡ ಚತುರ್ಥ ಪ್ರಶಸ್ತಿಯನ್ನು ಎಂಎಫ್ ಸಿ ಮುಂಚೂರು ತಂಡ ಪಡೆದುಕೊಂಡಿತು.ಮಹಿಳಾ ವಿಭಾಗದಲ್ಲಿ ಉಜಿರೆ ಪ್ರಥಮ ಉಡುಪಿ ದ್ವಿತೀಯ ಪ್ರಶಸ್ತಿ ಪಡೆಯಿತು.

ಪ್ರಾದೇಶಿಕ ವಾರ್ತೆಗಳು

“ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲಿ ಸಂಘಟನೆ ತೊಡಗಿಸಿ ಕೊಂಡಿರುವುದು ಶ್ಲಾಘನೀಯ”: ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು “ವೀರಕೇಸರಿ ಟ್ರೊಫಿ-2025” ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

ರಾಷ್ಟ್ರೀಯ ಯುವ ದಿನಾಚರಣೆ. ‘ಮಾನವೀಯ ಸೇವೆಗೆ ಸ್ವಾಮಿ ವಿವೇಕಾನಂದರ ಸಂದೇಶ ಸ್ಪೂರ್ತಿ’-ಶಾಸಕ ಡಿ.ವೇದವ್ಯಾಸ ಕಾಮತ್

ಮಂಗಳೂರು: ಮಾನವೀಯ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಯುವ ಜನತೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಸ್ಪೂರ್ತಿಯಾಗಿದೆ ಎಂದು ಶಾಸಕ ಡಿ,.ವೇದವ್ಯಾಸ ಕಾಮತ್ ಹೇಳಿದರು.ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಮತ್ತು ಯೇನೆಪೊಯ ಪರಿಗಣಿತ ವಿ.ವಿ. ವತಿಯಿಂದ ನಗರದ ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ ೧೬೩ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ -೨೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸೇವೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪ್ರತಿಯೊಬ್ಬರು ರಕ್ತದಾನ ಮಾಡುವ ಸಂಕಲ್ಪ ತಳೆದು ರೆಡ್‌ಕ್ರಾಸ್ ಸಂಸ್ಥೆಯ ಮಾನವೀಯ ಕಾರ್ಯಗಳಿಗೆ ನೆರವಾಗಬೇಕು ಎಂದು ಶಾಸಕ ಕಾಮತ್ ಹೇಳಿದರು.ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ.ಯ ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಯೇನೆಪೊಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ ಛಾತ್ರ, ಮಂಗಳೂರು ವಿ.ವಿ. ಕಾಲೇಜು ಪ್ರಾಂಶುಪಾಲ ಡಾ.ಗಣಪತಿ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ಜಿಲ್ಲಾ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕರಾದ ಗುರುದತ್ ಕಾಮತ್, ಡಾ.ಸುಮನಾ ಬೋಳಾರ್, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಮಂಗಳೂರು ವಿ.ವಿ.ಮಟ್ಟದ ಯೂತ್ ರೆಡ್‌ಕ್ರಾಸ್ ಪ್ರಶಸ್ತಿಗಳನ್ನು ವಿತರಿಸಲಾಯಿತು.ಮಂಗಳೂರು ವಿ.ವಿ.ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಅಮೀನ್ ಪ್ರಶಸ್ತಿ ವಿಜೇತರ ವಿವರ ನೀಡಿದರು.ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿ, ಯುವ ರೆಡ್‌ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ ವಂದಿಸಿದರು. ಪಾದುವ ಕಾಲೇಜಿನ ವಿದ್ಯಾರ್ಥಿನಿ ಜೆನಿಷಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ರಂಗಪ್ರವೇಶ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಸಂತೋಷದ ಸಂಗತಿ. ಫೌಂಡೇಶನ್‌ನಿಂದ ಇಂತಹ ಕೆಲಸಗಳು ನಿರಂತರ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಗಂಜಿಮಠದ ಒಡ್ಡಿರು ಫಾರ್ಮ್‌ನಲ್ಲಿ ಆಯೋಜಿಸಿದ ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪಟ್ಟ ಫೌಂಡೇಶನ್‌ನ ಪದಾಧಿಕಾರಿ ಪುರುಷೋತ್ತಮ `ಭಂಡಾರಿ ಅಡ್ಯಾರು ಸ್ವಾಗತಿಸಿದರು.ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಯಕ್ಷಧ್ರುವ-ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ ಘಟಕದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಸರಪಾಡಿ, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ್ ಶೆಟ್ಟಿ ವಿಟ್ಲ ಘಟಕದ ರಾಧಾಕೃಷ್ಣ ಭಂಡಾರಿ ಚೆಲ್ಲಡ್ಕ, ಎಕ್ಕಾರು ಘಟಕದ ಗಿರೀಶ್ ಎಂ. ಶೆಟ್ಟಿ ಕಟೀಲು, ಸಂತೋಷ್ ಶೆಟ್ಟಿ ಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಶೆಟ್ಟಿ ನಿರೂಪಿಸಿ, ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ‌‌ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ.ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಅವಕಾಶವನ್ನು ನೀಡಲಾಗುವುದು. ಅರ್ಹತಾ ಸುತ್ತು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು ಅಂತಿಮ ಸುತ್ತು ಅಡ್ಯಾರ್ ಗಾರ್ಡನ್ ನಲ್ಲಿ ಜೂನ್ 1 ರಂದು ನಡೆಯುವ ಪಟ್ಲ ಸಂಭ್ರಮದ ದಶಮಾನೋತ್ಸವ ಆಚರಣೆಯ ಸಂದರ್ಭ ನಡೆಯಲಿದೆ.ವಿಜೇತ ತಂಡಕ್ಕೆ ಪ್ರಥಮ ಬಹುಮಾನ ( 1 ಲಕ್ಷ) ದ್ವಿತೀಯ ಬಹುಮಾನ (75,000) ತೃತೀಯ ಬಹುಮಾನ (50,000) ಸಹಿತ ಒಂದು ಶಿಸ್ತಿನ ತಂಡ (25,000) ಪ್ರಶಸ್ತಿಯು ದೊರೆಯಲಿದೆ. ಸ್ಪರ್ಧೆಗೆ ಮಾದರಿ ಪ್ರವೇಶ ಪತ್ರ ಕಳುಹಿಸಲು 31/01/2025 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061), ಉದಯಾನಂದ ಶೆಟ್ಟಿ (9535862709 ), ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಅಂಬಲಪಾಡಿ: ವಾಹನ ಸವಾರರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮಂಜುನಾಥ ಭಂಡಾರಿ ಮನವಿ!

ಉಡುಪಿ: ಜಿಲ್ಲೆಯ ಉಡುಪಿ ನಗರಸಭಾ ವ್ಯಾಪ್ತಿಯ ಅಂಬಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ಸೂಕ್ತ ಬ್ಯಾರಿಕೇಡ್ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ಪ್ರಯಾಣಿಕರ ಜೀವಕ್ಕೆ ಸಂಕಷ್ಟವಾಗಿರುತ್ತದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪತ್ರ ಮುಖೇನ ಮನವಿ ಮಾಡಿದ್ದಾರೆ.ಈಗಾಗಲೇ ಉಡುಪಿ ಹತ್ತಿರದ ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯಿಂದಾಗಿ ಅನೇಕ ಅವಘಡಗಳು ಸಂಭವಿಸಿದ್ದರೂ ಕೂಡಾ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿಗಳು ಅಂಬಲಪಾಡಿ ಫ್ಲೈ ಓವರ್ ಕಾಮಗಾರಿ ಪ್ರಾರಂಭದ ಹಂತದಲ್ಲಿ ಮುಂಜಾಗ್ರತೆ ವಹಿಸಿರುವುದಿಲ್ಲ.ಇದರಿಂದಾಗಿ ನಿರ್ಮಾಣವಾದ ದೊಡ್ಡ ಗಾತ್ರದ ಹೊಂಡಗಳಲ್ಲಿ ವಾಹನಗಳು ಉರುಳಿ ಅಪಘಾತವಾಗುತ್ತಿದ್ದು ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಕಾಮಗಾರಿ ಹಂತದಲ್ಲಿ ನಿರ್ಲಕ್ಷ್ಯತೆ ವಹಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಸುರಕ್ಷತಾ ದೃಷ್ಟಿಯಿಂದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಚನ ಫಲಕಗಳನ್ನು ಅಳವಡಿಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಕೋಸ್ಟಲ್ ಬಿಗ್ ಭಾಷ್ ಲೀಗ್” ಕ್ರಿಕೆಟ್ ಪಂದ್ಯಾಟ, ಹರಾಜು ಮೂಲಕ ಆಟಗಾರರ ಆಯ್ಕೆ!

ಮಂಗಳೂರು: ಮಂಗಳೂರಿನಲ್ಲಿ ಇದೇ ತಿಂಗಳ 25ರಿಂದ ಫೆ.1ರವರೆಗೆ ನಡೆಯಲಿರುವ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಜರುಗಿತು.ಕುಳಾಯಿ ರೆಡ್ ಹಾಕ್ಸ್ ತಂಡಕ್ಕೆ ಕೆಸಿ ಕರಿಯಪ್ಪ, ನವೀನ್ ಎಂಜಿ, ಕಾರ್ತಿಕ್ ಎಸ್ ಯು, ಜಹಾನ್ ಪಿಸಿ, ಕೆಎಸ್ ದೇವಯ್ಯ, ನಿಖಿಲ್ ಐತಾಳ್, ನಿಶ್ಚಿತ್ ಎನ್ ಪೈ, ಸ್ವಸ್ತಿಕ್ ಸುಂದರ ಎಂ, ಪವನ್ ಜೆ ಗೋಖಲೆ, ಗೌರವ್ ಅಪ್ಪಣ್ಣ, ಮೋಹಿತ್ ಎಂ, ಶ್ರೀರಾಜನ್ ಪಿ ಅಮೀನ್, ಪ್ರಸನ್ನ ಕುಮಾರ್, ಪ್ರಣವ್ ರಾಜ್, ಲೋಕೇಶ್ ಐ, ಧ್ರುವಿರಾಜ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.ಮತ್ಸ್ಯರಾಜ್ ಗ್ರೂಪ್ ಮಲ್ಪೆ ತಂಡಕ್ಕೆ ಭರತ್ ಧುರಿ, ರಕ್ಷಿತ್ ಶಿವಕುಮಾರ್, ಆದಿತ್ಯ ಸೋಮಣ್ಣ, ಸಚಿನ್ ವಿ ಭಟ್, ಲಾಲ್ ಸಚಿನ್, ಭರತ್ ಕೋಟ, ಇಮ್ರಾನ್ ನಝಿರ್, ಅದ್ವಿತ್ ಶೆಟ್ಟಿ, ಶ್ರೀಶ ಎಸ್ ಆಚಾರ್ಯ, ಸುಪ್ರೀತ್ ಕುಮಾರ್, ನಯನ್ ಸಿಹೆಚ್, ತೇಜಸ್ ಆರ್ ನಾಯ್ಕ್, ಸೋಮನಾಥ್ ಶೆಟ್ಟಿ, ಅಭಿಜಿತ್ ಕೋಟ್ಯಾನ್, ಪುನೀತ್, ಸಚಿನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.ಯುನೈಟೆಡ್ ಉಳ್ಳಾಲ್ ತಂಡಕ್ಕೆ ನಿಶಿತ್ ರಾಜ್, ಲಂಕೇಶ್ ಕೆಎಸ್, ದರ್ಶನ್ ಎಂಬಿ, ಸಚೇತ್ ಕುಮಾರ್, ಶಬರೀಶ, ಶ್ರೀವತ್ಸ ಆರ್ ಆಚಾರ್ಯ, ಹೃಷಿತ್ ಶೆಟ್ಟಿ, ಅಶ್ವಿಜ್ ಹೆಗ್ಡೆ, ವಿನಾಯಕ್ ಹೊಳ್ಳ, ನಿಖಿಲ್ ಬರೆತ್, ಆದಿತ್ಯ ರೈ, ಋಷಿ ಬಿ ಶೆಟ್ಟಿ, ಅಧೋಕ್ಷ್ ಹೆಗ್ಡೆ, ಸುರೇನ್ ಎಂಯು, ರಿಷಭ್, ವಿರಲ್ ಕಿಶೋರ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ಲಯನ್ಸ್ ತಂಡಕ್ಕೆ ನಿಹಾಲ್ ಉಳ್ಳಾಲ್, ಆನಂದ್ ಡಿ, ಕುಮಾರ್ ಎಲ್ ಆರ್, ಸೂರಜ್ ಎಸ್ ಎ, ಅಕ್ಷಯ್ ಅಜಯ್ ಕಾಮತ್, ನಿಶ್ಚಿತ್ ಎನ್ ರಾವ್, ದೀಪಕ್ ದೇವಾಡಿಗ, ಮನೋಜ್ ಎಂ, ರೋಹಿತ್ ವಿನಾಯಕ್, ಅದಿತ್ ಎಂ, ಆರ್ಯನ್, ರಾಹುಲ್ ಎಎಸ್, ಭಾರ್ಗವ್ ಎಸ್, ಎಂಎನ್ ವಿಕಾಸ್, ಇಸ್ಮಾಯಿಲ್ ಮೊಹತೆಸಾ, ತುಷಾರ್ ಮಂದಾರ್ ಅವರನ್ನು ಆಯ್ಕೆ ಮಾಡಲಾಯಿತು.ಕರಾವಳಿ ಟೈಗರ್ಸ್ ತಂಡಕ್ಕೆ ಶುಭಂಗ್ ಹೆಗ್ಡೆ, ಚೇತನ್ ಎಲ್ ಆರ್, ಶರತ್ ಬಿಆರ್, ಅಮೃತ್ ಪ್ರವೀಣ್, ಗಗನ್ ರಾವ್ ಎಸ್, ರೋಹನ್ ಆರ್ ರೇವಣ್ಕರ್, ಪ್ರಥಮ್ ರಾಜೇಶ್, ಅಭಿಲಾಷ್ ಶೆಟ್ಟಿ, ನಿಹಾಲ್ ಡೇನಿಯಲ್ ಡಿಸೋಜ, ಪ್ರವೇಶ್ ಕೆಎಂ, ವಿಕ್ರಂ ಪಿಎಸ್, ಅಮೋಘ ಶಿವಕುಮಾರ್, ಹೃದ್ದಿಮಾನ್ ಬಾಸು, ಶರತ್ ಪೂಜಾರಿ, ಅದ್ವಿಕ್, ಚರಣ್ ರಾಜ್ ರನ್ನು ಆಯ್ಕೆ ಮಾಡಲಾಯಿತು.ಇನ್ನು ಟೀಮ್ ಬಾವಾ ತಂಡಕ್ಕೆ ಕಾರ್ತಿಕ್ ಸಿಎ, ಲೋಚನ್, ಲವೀಶ್ ಕೌಶಲ್, ರಾಣೆ ಕುರುಂಬಯ್ಯ, ಮನೀಶ್ ಬಿ ಪ್ರದೀಪ್, ರಾಹುಲ್ ಜೆ ಶೆಟ್ಟಿ, ನಿಹಾಂಶ್ ನರೇಂದ್, ಭುವನ್ ಭಟ್, ನತನ್ ಡಿಮೆಲ್ಲೋ,. ಶಾನ್ ನೋರೋನ್ಹ, ಅಂಕಿತ್ ವಿ ಪೂಜಾರಿ, ರೆಹನ್ ಅಲರಿಕ್, ರಿತಿನ್ ಕ್ರಿಷ್ಟಿ, ಮಶೂಕ್, ಅಜಿತ್, ನಿತಿನ್ ಶೆಟ್ಟಿ ಅವರನ್ನು ಹರಾಜು ಮೂಲಕ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಶಬರಿ ಉಪಸ್ಥಿತರಿದ್ದರು.ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ಫ್ರಾಂಚೈಸಿ ಆಧಾರಿತ ಟೂರ್ನಮೆಂಟ್ ಅಗಿದೆ.ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ‌‌ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ.ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಅವಕಾಶವನ್ನು ನೀಡಲಾಗುವುದು. ಅರ್ಹತಾ ಸುತ್ತು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು ಅಂತಿಮ ಸುತ್ತು ಅಡ್ಯಾರ್ ಗಾರ್ಡನ್ ನಲ್ಲಿ ಜೂನ್ 1 ರಂದು ನಡೆಯುವ ಪಟ್ಲ ಸಂಭ್ರಮದ ದಶಮಾನೋತ್ಸವ ಆಚರಣೆಯ ಸಂದರ್ಭ ನಡೆಯಲಿದೆ.ವಿಜೇತ ತಂಡಕ್ಕೆ ಪ್ರಥಮ ಬಹುಮಾನ ( 1 ಲಕ್ಷ) ದ್ವಿತೀಯ ಬಹುಮಾನ (75,000) ತೃತೀಯ ಬಹುಮಾನ (50,000) ಸಹಿತ ಒಂದು ಶಿಸ್ತಿನ ತಂಡ (25,000) ಪ್ರಶಸ್ತಿಯು ದೊರೆಯಲಿದೆ. ಸ್ಪರ್ಧೆಗೆ ಮಾದರಿ ಪ್ರವೇಶ ಪತ್ರ ಕಳುಹಿಸಲು 31/01/2025 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061), ಉದಯಾನಂದ ಶೆಟ್ಟಿ (9535862709 ), ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ರಂಗಪ್ರವೇಶ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಸಂತೋಷದ ಸಂಗತಿ. ಫೌಂಡೇಶನ್‌ನಿಂದ ಇಂತಹ ಕೆಲಸಗಳು ನಿರಂತರ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್  ನಾಯ್ಕ್ ಹೇಳಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಗಂಜಿಮಠದ ಒಡ್ಡಿರು ಫಾರ್ಮ್‌ನಲ್ಲಿ ಆಯೋಜಿಸಿದ ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮದ  ಸಮಾರೋಪದಲ್ಲಿ ಮಾತನಾಡಿದರು ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪಟ್ಟ ಫೌಂಡೇಶನ್‌ನ ಪದಾಧಿಕಾರಿ ಪುರುಷೋತ್ತಮ `ಭಂಡಾರಿ ಅಡ್ಯಾರು ಸ್ವಾಗತಿಸಿದರು.ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಯಕ್ಷಧ್ರುವ-ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ ಘಟಕದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಸರಪಾಡಿ, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ್ ಶೆಟ್ಟಿ ವಿಟ್ಲ ಘಟಕದ ರಾಧಾಕೃಷ್ಣ ಭಂಡಾರಿ ಚೆಲ್ಲಡ್ಕ, ಎಕ್ಕಾರು ಘಟಕದ ಗಿರೀಶ್ ಎಂ. ಶೆಟ್ಟಿ ಕಟೀಲು, ಸಂತೋಷ್ ಶೆಟ್ಟಿ ಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಶೆಟ್ಟಿ ನಿರೂಪಿಸಿ, ವಂದಿಸಿದರು.

Scroll to Top