ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

Gana Samrat Ravindra Prabhu: The Golden Voice Blessed by Goddess Saraswati

By Dr. Ashok Shetty B.N. | MangaluruFrom the sacred soil of Mulki, the temple town of Coastal Karnataka, rises a voice that sounds like a prayer. He is Ravindra Prabhu – revered by millions as ‘Gana Samrat’ and the ‘Golden Voice of Karavali’. A true Saraswati Putra, whose voice is not just heard, but felt in the soul.In an age of auto-tune and remixes, his voice remains pure, divine and eternal – a gift directly from Maa Saraswati.A Divine Offering at MP MLA’S NEWS Souharda SangamaOn June 24, 2025, at Mangalore Town Hall, history was created. At the 13th Souharda Sangama of MP MLA’S NEWS, Gana Samrat Ravindra Prabhu and his legendary troupe ‘Raag Rang’ presented a 3-hour-long musical yajna.Without asking for a single rupee, with only Bhakti and love for Kannada, he sang. Sponsored by the Department of Kannada and Culture, his performance was a Sangeeta Seva. Over 1 Lakh devotees of music witnessed it Live on Namma Kudla Channel, Facebook & Instagram and showered blessings.That is his greatness – Music is his Dharma, not business.From a Home Without Radio to 10,000 Divine StagesHis journey is a Hindu Sanatana inspiration. In his childhood, his home did not even have a radio. He would stand outside his neighbour’s house, listen to devotional songs, memorize them, and sing for Lord Krishna.No big Gurukula. No foreign training. Only Saraswati Sadhana and Guru Krupa. Today, the same boy has completed 40 years and 10,000+ stages – from village temples to Dubai, Abu Dhabi, Bahrain, Kuwait, Muscat, Doha.Voice of Bharat – Soul of Sanatana Dharma. He is a true Sanatani Singer: Honours for a Humble Bhakta

ಪ್ರಾದೇಶಿಕ ವಾರ್ತೆಗಳು

ಹಿರಿಯ ನಾಗರಿಕರ ಸಂಘ ಸ್ಥಾಪಿಸಲು ಚಿಂತನೆದ. ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾಹಿತಿ

ಮಂಗಳೂರು : ಯುವಜನರನ್ನು ಬೆಸೆಯಲು ರಾಜ್ಯ ಸರ್ಕಾರ ರೂಪಿಸಿರುವ ಭಾರತ್ ಜೋಡೋ ಯುವ ಸಂಘದ ಮಾದರಿಯಲ್ಲಿ ಪ್ರತೀ ಊರಿನಲ್ಲಿ ಹಿರಿಯ ನಾಗರಿಕರನ್ನು ಒಗ್ಗೂಡಿಸಲು ಸೀನಿಯರ್ ಸಿಟಿಜನ್ ಸಂಘಟನೆ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಮಂಗಳೂರು ನಗರದಲ್ಲೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಲು ಪ್ರಯತ್ನಿಸಲಾಗುವುದೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ರೋಟರಿ ಇಂಟರ್‌ನ್ಯಾಶನಲ್ ಜಿಲ್ಲೆ 3182, ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘ, ಮಂಥನ ಓಜಸ್ ಟ್ರಸ್ಟ್ ಮತ್ತು ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆದ “ಧನ್ಯತಾ” ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ನಮ್ಮ ಹಿರಿಯರ ತ್ಯಾಗ, ತಾಳ್ಮೆ, ಬದ್ಧತೆಯಿಂದಾಗಿ ಇಂದು ಉತ್ತಮ ಸಮಾಜ ನಿರ್ಮಾಣವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯರ ಅನುಭವ ಹಾಗೂ ಆದರ್ಶಗಳಿಂದ ಯುವ ಜನಾಂಗ ಪ್ರೇರಣೆ ಪಡೆಯಬೇಕು ಎಂದು ಸಚಿವರು ಹೇಳಿದರು.ರೋಟರಿ ಜಿಲ್ಲೆ 3181 ಗವರ್ನರ್ ಸತೀಶ್ ಬೋಳಾರ್ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಎ.ಕೆ.ಜಯಚಂದ್ರನ್, ಮಂಥನ ಓಜಸ್ ಟ್ರಸ್ಟ್ ನ ಅಧ್ಯಕ್ಷೆ ಮಂಗಳಾ ನಂದಕುಮಾರ್,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ರೋಟರಿ ಸಂಧ್ಯಾ ಸುರಕ್ಷಾ ಯೋಜನೆಯ ಚೇರ್ಮನ್ ಅನಿಲ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.*ಸಾಧಕರಿಗೆ ಸನ್ಮಾನವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಜ್ರ ರಾವ್, ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ರಾಧಾಕೃಷ್ಣ, ಟಿ.ಜಿ.ಶೆಣೈ, ರಾಬರ್ಟ್ ಫ್ರಾಂಕ್ಲಿನ್ ರೇಗೊ, ಕಟ್ಟ ಭಾಸ್ಕರ ರೈ, ಸುಮಂಗಲಾ ಪ್ರಭಾಕರ್, ಪಕ್ರುದ್ದೀನ್ ಕುಣಿಲ್, ಅರುವ ಕೊರಗಪ್ಪ ಶೆಟ್ಟಿ, ಉಷಾ ವಿಶ್ವನಾಥ್, ಸತೀಶ್ ರಾವ್ ಇಡ್ಯಾ ಇವರುಗಳನ್ನು ಸನ್ಮಾನಿಸಲಾಯಿತು. ಡಾ.ಶಿಲ್ಪಾ ದಿನೇಶ್ ಸಾಧಕರ ವಿವರ ನೀಡಿದರು. ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಧೀರಜ್.ಬಿ.ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.ಮಾಹಿತಿ ಶಿಬಿರಬಾಯಿಯ ಆರೋಗ್ಯದ ಬಗ್ಗೆ ಡಾ.ಚಾಂದಿನಿ.ಎಸ್. ಹಾಗೂ ಸೈಬರ್ ಕ್ರೈಂ ಜಾಗೃತಿ ಬಗ್ಗೆ ಪ್ರವೀಣ್ ಉಡುಪ ಅವರು ಹಿರಿಯ ನಾಗರಿಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಹಿರಿಯ ನಾಗರಿಕರಿಗಾಗಿ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಮಾದಕ ವ್ಯಸನ ಜಾಗೃತಿಗೆ ನಾಟಕ ಉತ್ತಮ ವೇದಿಕೆ – ಎಸಿಪಿ ವಿಜಯ ಕ್ರಾಂತಿ ಅಭಿಪ್ರಾಯ

ಮಂಗಳೂರು: ಯೂತ್ ರೆಡ್‌ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ ಇದರ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ವಿ.ವಿ.ಕಾಲೇಜಿನ ಯೂತ್ ರೆಡ್‌ಕ್ರಾಸ್, ಎನ್‌ಎಸ್‌ಎಸ್ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಕೋಶದ ಸಹಯೋಗದಲ್ಲಿ ಶನಿವಾರ ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ ವಿಷಯದ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಿರು ನಾಟಕ (ಸ್ಕಿಟ್) ಸ್ಪರ್ಧೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಎಸಿಪಿ ವಿಜಯಕ್ರಾಂತಿ ಮಾತನಾಡಿ ” ನಾಟಕಗಳ ಪ್ರದರ್ಶನದ ಮೂಲಕವೂ ಸಾರ್ವಜನಿಕರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿಮೂಡಿಸಬಹುದು. ಮಾದಕ ವ್ಯಸನದಿಂದಾಗುವ ಪರಿಣಾಮ ಹಾಗೂ ಕಾನೂನು ನಿಬಂಧನೆ ಸಂಬAಧ ಮಾಹಿತಿ ನೀಡುವುದು ಪೊಲೀಸರ ಕರ್ತವ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯವಂತ ನಾಯಕ್ ಮಾತನಾಡಿ ” ಮಾದಕ ವಸ್ತು ಸೇವನೆಯಷ್ಟೇ ಪರಿಣಾಮವನ್ನು ಮೊಬೈಲ್ ಬಳಕೆಯೂ ಉಂಟು ಮಾಡುತ್ತದೆ. ಮಾದಕ ವಸ್ತುಗಳು ವ್ಯಸನಿಗೆ ಮಾತ್ರವಲ್ಲದೆ ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದರು.ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ. ಗಾಯತ್ರಿ, ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಹಳೆ ವಿದ್ಯಾರ್ಥಿ ಸಂಘದ ಶ್ರೀನಿವಾಸ್ ನಾಯ್ಕ್,ಮುರಳೀಧರ ಕಾಮತ್, ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಸುರೇಶ್ ಉಪಸ್ಥಿತರಿದ್ದರು.*ಕಿರು ನಾಟಕ ಸ್ಪರ್ಧೆ ವಿಜೇತರು :ಪ್ರಥಮ : ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್, ಮಂಗಳೂರು, ದ್ವಿತೀಯ : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ತೃತೀಯ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ

ಪ್ರಾದೇಶಿಕ ವಾರ್ತೆಗಳು

ಸೆಪ್ಟೆಂಬರ್ 14ರಿಂದ ಬಂಟ್ಸ್ ಹಾಸ್ಟೆಲ್ ಸಾರ್ವಜನಿಕ ಗಣೇಶೋತ್ಸವ.ಸುದ್ದಿಗೋಷ್ಠಿಯಲ್ಲಿ ಇಲ್ಲಿನ ಗಣೇಶೋತ್ಸವದ ವೈಶಿಷ್ಟ್ಯತೆ, ಮಹತ್ವ, ಸೌಹಾರ್ದತೆ ಸೇರಿದಂತೆ ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಅಜಿತ್ ಕುಮಾರ್ ರೈ ಮಾಲಾಡಿ.

ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗ ಸೆಪ್ಟೆಂಬರ್ 14ರಿಂದ 16ರ ವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಜರಗಲಿದೆ. ಸೆಪ್ಟೆಂಬರ್ 13ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ರಾಮದಾಸ್ ಆಚಾರ‍್ಯ ಅವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲಿನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು. ಸೆಪ್ಟೆಂಬರ್ 14 ರಂದು ಬೆಳಿಗ್ಗೆ 8 ಗಂಟೆಗೆ ಮೂರ್ತಿ ಪ್ರತಿಷ್ಠೆ ನಡೆದು, 9 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ರಿಂದ ಪಾಂಚಜನ್ಯ ಪ್ರತಿಷ್ಠಾನ ಕುಡ್ಲ ಕಲಾವಿದರಿಂದ ‘ಶ್ರೀ ಮಂಗಳಾಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯ ನಾಟಕ ನಡೆಯಲಿದೆ. ಸಂಜೆ 5 ರಿಂದ 7 ಗಂಟೆಯವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8ರಿಂದ ‘ಬಂಟಕಲಾ ಸಂಗಮ-2026’ ವಿವಿಧ ಬಂಟರ ಸಂಘಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರಗಲಿರುವುದು ಎಂದು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮೇನೆಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಬಂಬ್ರಾಣ ಮಾತನಾಡಿ, ಸೆಪ್ಟೆಂಬರ್ 15ರಂದು ಬೆಳಿಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 8ರಿಂದ ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಯಾಗದ ಋತ್ವಿಜರಿಂದ ಯಾಗ ಶಾಲಾ ಪ್ರವೇಶ, ಗಣಪತಿ ಪೂಜೆ, ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ ನಡೆಯಲಿದೆ. ಸಂಜೆ 5 ರಿಂದ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. ರಾತ್ರಿ 8ರಿಂದ ಸ್ವರಲಯ ಸಿಂಪೋನಿ ಕಲಾ ಶಾಲೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಸೆಪ್ಟೆಂಬರ್ 16 ರಂದು ಬೆಳಿಗ್ಗೆ 8.30 ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು 11 ಗಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನಡೆದು ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯು ಓಂಕಾರನಗರದಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳ ಸೇವೆಯೊಂದಿಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್, ಪಿ.ವಿ.ಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ವಿವರಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಕೋಶಾಧಿಕಾರಿ ರಾಮ್‌ಮೋಹನ್ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

20th Year Sarvajanika Ganeshotsava at Bunts Hostel from Sept 14 to 16; Ajith Kumar Rai Maladi Addresses Press

Mangaluru, Sept 9: The 20th annual Sarvajanika Shri Ganeshotsava, Tene Habba and Ashtottara Sahasra Narikela Maha Ganayaga will be held from September 14 to 16 at Omkara Nagar, Bunts Hostel, Mangaluru.The festival is jointly organised by Buntara Yane Nadavara Mathru Sangha, Bunts Associations of Dakshina Kannada, Udupi and Kasaragod districts, Shri Siddhivinayaka Prathishtana and the Sarvajanika Shri Ganeshotsava Samithi.Addressing the media here on Tuesday, Managing Trustee of Shri Siddhivinayaka Prathishtana, Mr. Ajith Kumar Rai Maladi, said a mass prayer will be held at 5 pm on September 13 at Radhakrishna Temple near Sharavu Temple. The idol of Lord Siddhivinayaka, sculpted by the disciples of Shri Ramdas Acharya, will then be brought in a procession to Omkara Nagar. On September 14, idol installation will be held at 8 am, followed by flag hoisting, inauguration and Tene Vitarana at 9 am. A mythological dance-drama will be staged at 3 pm, a religious meeting will be held at 5 pm, Rangapuja at 7.30 pm and Bantakala Sangama-2026 at 8 pm.On September 15, Mudappa Seve will be held at 11.30 am, Ganayaga rituals from 4 pm, a religious meeting at 5 pm, Hoovina Puja at 7.30 pm and a musical evening at 8 pm.On September 16, the Ganayaga will begin at 8.30 am, Maha Poornahuti at 11 am, Maha Annasantharpane at 12.30 pm, pre-immersion puja at 3.30 pm and flagging off of the Shobhayatra.The Shobhayatra will start from Omkara Nagar and proceed via Bunts Hostel Circle, PVS Circle, New Chitra Talkies and Venkataramana Temple Road, with the participation of Bhajana teams, and will culminate with immersion at the Shri Mahammayi Temple lake.Vice President of the Mathru Sangha Hemanath Shetty Kavu, General Secretary M. Karunakara Shetty, Treasurer Ram Mohan Rai, Joint Secretary Padmanabha Shetty Punchame, President of the Ganeshotsava Samithi Jayasheel Adyantaya Adyar Guthu and General Secretary Sadashiva Shetty Bijai were present.

ಪ್ರಾದೇಶಿಕ ವಾರ್ತೆಗಳು

Retired Vijaya Bank officer Chandrahas Shetty passes away

MANGALURU, Sept 7: Chandrahas Shetty (76), a retired officer of Vijaya Bank and resident of Byrodi, Salettur, Puttur, passed away in Udupi on Saturday after suffering a cardiac arrest while attending a private function.He had served Vijaya Bank for 35 years.He is survived by his wife Shobha Chandrahas Shetty, son Tejas Shetty, daughter-in-law Sushmitha Shetty and a host of relatives. He was the brother-in-law of Retd. Col. Agari Jagajeevan Bhandari and former RBI Director Dr. Agari Naveen Bhandary.The last rites were held at Kadri in Mangaluru yesterday (Sunday).

ಪ್ರಾದೇಶಿಕ ವಾರ್ತೆಗಳು

ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಚಂದ್ರಹಾಸ ಶೆಟ್ಟಿ ಇನ್ನಿಲ್ಲ

ಪುತ್ತೂರು, ಸೆ. 7: ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ, ಸಾಲೆತ್ತೂರು ಬೈರೋಡಿ ನಿವಾಸಿ ಚಂದ್ರಹಾಸ ಶೆಟ್ಟಿ (76) ಅವರು ಶನಿವಾರ ಉಡುಪಿಯಲ್ಲಿ ನಿಧನರಾದರು.ಉಡುಪಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ವಿಜಯ ಬ್ಯಾಂಕ್‌ನಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಪತ್ನಿ ಶೋಭಾ, ಪುತ್ರ ತೇಜಸ್, ಸೊಸೆ ಸುಶ್ಮಿತಾ,ಭಾವoದಿರರಾದ ನಿವೃತ್ತ ಕರ್ನಲ್ ಅಗರಿ ಜಗಜೀವನ್ ಭಂಡಾರಿ ಮತ್ತು ಆರ್‌ಬಿಐ ಮಾಜಿ ನಿರ್ದೇಶಕ ಡಾ.ಅಗರಿ ನವೀನ್ ಭಂಡಾರಿ ಸೇರಿದಂತೆ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಸೆ. 7ರ (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಕದ್ರಿಯಲ್ಲಿ ನೆರವೇರಿತ್ತು

ಪ್ರಾದೇಶಿಕ ವಾರ್ತೆಗಳು

ಉದ್ಯಮಿ ಪಾದೆ ಅಜಿತ್ ರೈ ಅವರಿಗೆ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನ ಇದರ 30ನೇ ವಾರ್ಷಿಕ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ಕುಶಲ್.ಎಸ್.ಹೆಗ್ಡೆ ಅಧ್ಯಕ್ಷತೆಯಲ್ಲಿ ಸೆ.12ರಂದು ಮಧ್ಯಾಹ್ನ 12ಕ್ಕೆ ನಗರದ ಎ.ಜೆ. ಗ್ರ್ಯಾಂಡ್‌ನ ಸಭಾಂಗಣದಲ್ಲಿ ನಡೆಯಲಿದೆ. ಬಳಿಕ ನಡೆಯುವ ಸಮಾರಂಭದಲ್ಲಿ ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್ ನ ಅಧ್ಯಕ್ಷ ಪಾದೆ ಅಜಿತ್ ರೈ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನದ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಯಕ್ಷಗಾನ ಕಲಾವಿದ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಡಾ.ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 47ನೇ ರ‍್ಯಾಂಕ್ ಪಡೆದ ಆದಿತ್ಯ ಪೆರ್ಗಡೆ ಅವರಿಗೆ ದಿ.ಸಿಎ.ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುನೀತ್ ಶೆಟ್ಟಿ ಅವರಿಗೆ ಸಿಎ ಗೋಪಾಲ್ ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಸಾಧಮ್ಮ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಸಚ್ಚಿದಾನಂದ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಫೋಟೋ : ಅಜಿತ್ ರೈ

ಪ್ರಾದೇಶಿಕ ವಾರ್ತೆಗಳು

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯುವ ನಾಯಕ ಸಂತೋಷ್ ಕುಮಾರ್ ಶೆಟ್ಟಿಯವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಭೇಟಿಯಾಗಿ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.ಸಂತೋಷ್ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪಕ್ಷ ನಿಷ್ಠೆಯಲ್ಲಿ ಕೆಲಸ ಮಾಡಿಕೊಂಡು ಬಂದವರು. ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ರಾಜ್ಯ ಸರಕಾರ ಉನ್ನತ ಹುದ್ದೆಯನ್ನು ನೀಡಿದೆ. ಸಂತೋಷ್ ಶೆಟ್ಟಿ ಅವರು ಮೂಡಾ ಅಧ್ಯಕ್ಷರಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಲಿ ಎಂದು ಐಕಳ ಹರೀಶ್ ಶೆಟ್ಟಿ ಶುಭ ಹಾರೈಸಿದರು.

ಪ್ರಾದೇಶಿಕ ವಾರ್ತೆಗಳು

ಜಾತಿ ವಿಚಾರಣೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳು. MP MLA’S NEWS EXCLUSIVE PUBLIC VIEW By SREERAM DEEWANA

ಉಡುಪಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ ಸಿ, ಎಸ್ ಟಿ)ಗಳ ಜನರ ಹಕ್ಕುಗಳ ರಕ್ಷಣೆ ಹಾಗೂ ದೌರ್ಜನ್ಯ ತಡೆಯುವ ಸಲುವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿ ಸಿ ಆರ್ ಇ)ಗಳು ಪ್ರಸ್ತುತ ಸ್ವತಂತ್ರ ಪೊಲೀಸ್ ಠಾಣೆಗಳಾಗಿ ಬದಲಾಗಿದ್ದರೂ ಎಸ್ ಸಿ – ಎಸ್ ಟಿ ಜನರಿಗೆ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.ಪ್ರಕರಣ ಎಷ್ಟೇ ಗಂಭೀರವಾಗಿರಲಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳುತನಿಖೆಯಲ್ಲಿ ನಿಧಾನಗತಿ ಅನುಸರಿಸುವುದರಿಂದ ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ದೂರುದಾರರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.ತನಿಖೆಗಳಲ್ಲಿ ಆಗುತ್ತಿರುವ ವಿಳಂಬಗಳಿಗೆ ಸಿಬ್ಬಂದಿಗಳ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಇದು ಪೂರ್ಣ ಸತ್ಯವಲ್ಲ. ಇರುವ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಹಾಗೂ ಕಾಳಜಿ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸದೇ ಇರುವುದೂ ತನಿಖೆಯಲ್ಲಿನ ವಿಳಂಬಕ್ಕೆ ಬಹುಮುಖ್ಯ ಕಾರಣವಾಗಿದೆ.2025ರ ಮಾರ್ಚ್ ವರೆಗೆ ಯಾವುದೇ ದೂರರ್ಜಿಗಳ ಆಧಾರದಲ್ಲಿ ಎಫ್ ಐ ಆರ್ ದಾಖಲಿಸಲು ಡಿ ಸಿ ಆರ್ ಇ ಗೆ ಅಧಿಕಾರವಿರಲಿಲ್ಲ. ತನಿಖೆ ನಡೆಸಿ ಸಂಬಂಧಿಸಿದವರಿಗೆ / ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಷ್ಟೇ ಇವರ ಅಧಿಕಾರ ವ್ಯಾಪ್ತಿಯಲ್ಲಿತ್ತು. ಆದರೆ, 2025 ಎಪ್ರಿಲ್ 14ರ ನಂತರ ರಾಜ್ಯ ಸರಕಾರ ಡಿ ಸಿ ಆರ್ ಇ ಸೆಲ್ ಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನಾಗಿ ಮಾರ್ಪಡಿಸಿತು. ಆದರೆ, ಇಲ್ಲೂ ಕೆಲವೊಂದು ಲೋಪ ದೋಷಗಳು, ಗೊಂದಲಗಳಿಂದಾಗಿ, ಸ್ಪಷ್ಟತೆಯ ಕೊರತೆಯಿಂದಾಗಿ ಬಹುತೇಕ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣದೆ ನೆನೆಗುದಿಗೆ ಬಿದ್ದಿರುವುದು ಕಂಡುಬರುತ್ತದೆ.ಒಂದು ಉದಾಹರಣೆಯನ್ನು ಉಲ್ಲೇಖಿಸುವುದಾದರೆ, ಅದು ಕುಂದಾಪುರ ತಾಲೂಕು ಅಂಪಾರು ಗ್ರಾಮದ ನಿವಾಸಿಗಳಾದ, ಪಂಗಡಗಾರ ಜಾತಿಯ ಸಮಾಜಸೇವಾ ಸಂಘದ ಪ್ರಮುಖರಾದ ರಾಘವೇಂದ್ರ ಪಂಗಡಗಾರ ಹಾಗೂ ಸಂದೀಪ್ ಪಂಗಡಗಾರ ಅವರು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಹಕ್ಕುಗಳ ಜಾರಿ‌ನಿರ್ದೇಶನಾಲಯ (ಡಿ ಸಿ ಆರ್ ಇ ಪೊಲೀಸ್ ಠಾಣೆ)ಕ್ಕೆ ನೀಡಿದ ದೂರುಗಳು.ಸಾಮಾನ್ಯ ವರ್ಗಕ್ಕೆ ಸೇರಿದ ‘ಪಂಗಡಗಾರ’ ಜಾತಿಯ ಕೆಲವರು ತಾವು ವಾಲ್ಮೀಕಿ ನಾಯಕ ಜಾತಿಗೆ ಸೇರಿದ ನಾಯಕ ಪರಿವಾರದವರೆಂದು ಸುಳ್ಳು ಮಾಹಿತಿ ನೀಡಿ ಮೋಸದಿಂದ ಪರಿಶಿಷ್ಟ ಪಂಗಡದಡಿಯಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ರಾಘವೇಂದ್ರ ಹಾಗೂ ಸಂದೀಪ್ ಅವರು ಉಡುಪಿ ಜಿಲ್ಲಾಧಿಕಾರಿಗಳು,ಡಿ ಸಿ ಆರ್ ಇ ಮಂಗಳೂರು ಮತ್ತು ಡಿ ಸಿ ಆರ್ ಇ ಉಡುಪಿಗೆ ದೂರು ಸಲ್ಲಿಸಿದ್ದರು.ಇವರು ಹಾಗೂ ಇತರ ಕೆಲವರು ಸಲ್ಲಿಸಿದ ಇಂತಹ ಕೆಲವು ದೂರುಗಳಿಗೆ 2026ರ ಸೆಪ್ಟೆಂಬರ್ ತಿಂಗಳಿಗೆ ಅಮೋಘ ಎರಡು ವರ್ಷಗಳಾಗುತ್ತವೆ. ಆದರೂ ಇಂತಹ ದೂರುಗಳನ್ನು ಸಮಗ್ರವಾಗಿ ತನಿಖೆ ನಡೆಸಿ ಸ್ಪಷ್ಟವಾದ ಅಂತಿಮ ವರದಿ ಸಲ್ಲಿಸುವ ಕರ್ತವ್ಯ ನಿರ್ವಹಿಸುವಲ್ಲಿ ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತವೆ.ರಾಜ್ಯದಲ್ಲಿ ಜಿಲ್ಲೆಗೊಂದರಂತೆ 33 ಡಿ ಸಿ ಆರ್ ಇ ಪೊಲೀಸ್ ಠಾಣೆಗಳು ಕಾರ್ಯ‌ನಿರ್ವಹಿಸುತ್ತಿವೆ ಪ್ರತಿ ಠಾಣೆಗಳಲ್ಲೂ ಡಿ ಎಸ್ ಪಿ ಹಂತದ ಅಧಿಕಾರಿಯಿದ್ದು, ಇವರ ಸೂಚನೆ, ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ.ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾದ ಮತ್ತು ಆಗುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳು, ಸರಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಪರಿಶಿಷ್ಟರಿಗೆ ತಲುಪದೆ ವಂಚನೆಗೊಳಗಾದಾಗ, ತಲುಪುವಾಗ ಆಗುತ್ತಿರುವ ಸಮಸ್ಯೆಗಳ ಬಗ್ಗೆ, ಪರಿಶಿಷ್ಟರ ಮೂಲಭೂತ ಹಕ್ಕುಗಳಿಗೆ ಚ್ಯುತಿಯಿಂಟಾದಾಗ, ಜಾತಿ ವಿಚಾರದಲ್ಲಿ ಗೊಂದಲ, ಅನ್ಯಾಯ, ಸಮಸ್ಯೆಗಳುಂಟಾದಾಗ ಡಿ ಸಿ ಆರ್ ಇ ಪೊಲೀಸ್ ಠಾಣೆಗಳಿಗೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವ, ಚಾರ್ಜ್ ಶೀಟ್ (ದೋಷಾರೋಪಣಾ ಪಟ್ಟಿ) ಸಲ್ಲಿಸುವ ಅಧಿಕಾರವಿದೆ.ಆದರೆ, ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಡಿ ಸಿ ಆರ್ ಇ ಪೊಲೀಸ್ ಠಾಣೆಗಲ್ಲಿ ಮಹತ್ವದ ಪ್ರಕರಣಗಳ ಕಡತಗಳು ಒಂದು ಗತಿ ಕಾಣದೆ ಕಪಾಟುಗಳಲ್ಲಿ ಕೊಳೆಯವಂತಾಗಿದೆ. ನೊಂದ, ಶೋಷಿತ ಸಮುದಾಯಗಳಿಗೆ ನ್ಯಾಯ ಮರೀಚಿಕೆಯಾಗಿದೆ.ಯಾರು ಯಾವ ಜಾತಿ, ಯಾವ ಜಾತಿ ಯಾವ ವರ್ಗ: ವಿಚಾರಣೆ, ತೀರ್ಮಾನಿಸುವವರು ಯಾರು ?*ಯಾರು ಯಾವ ಜಾತಿ ? ಮತ್ತು ಯಾವ ಜಾತಿ ಯಾವ ವರ್ಗಕ್ಕೆ ಸೇರಬೇಕೆಂದು ಅಂತಿಮವಾಗಿ ವಿಚಾರಣೆ ನಡೆಸುವವರು, ತೀರ್ಮಾನಿಸುವವರು ಯಾರು ಎಂಬುದು ಸಾರ್ವಜನಿಕವಾಗಿ ಇನ್ನೂ ಗೊಂದಲಕಾರಿಯಾಗಿಯೇ ಉಳಿದಿರುವ ಒಂದು ಬಹುಮುಖ್ಯ, ಗಂಭೀರವಾದ ವಿಷಯ.ಈ ಸಂಬಂಧ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ, ವಿಶೇಷ ಸಂದರ್ಭಗಳಲ್ಲಿ ಜಿಲ್ಲಾ ಹಂತದಲ್ಲಿರುವ ಜಾತಿ ಪರಿಶೀಲನಾ ಸಮಿತಿ ಸ್ಥಳ ಪರಿಶೀಲನೆ ನಡೆಸಿ, ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತದೆ. ಜಿಲ್ಲಾಧಿಕಾರಿಗಳು ಮತ್ತೆ ಇಂತದ್ದೇ ಪ್ರಕರಣಗಳನ್ನು ಡಿ ಸಿ ಆರ್ ಇ ಗೆ ಹೆಚ್ಚಿನ ವಿಚಾರಣೆಗಾಗಿ ವರ್ಗಾಯಿಸುತ್ತಾರೆ. ಡಿ ಸಿ ಆರ್ ಇ ಅಧಿಕಾರಿಗಳು ವಿಚಾರಣೆ ನಡೆಸಿದರೆ ನಡೆಸಿದರು, ಬಿಟ್ಟರೆ ಬಿಟ್ಟರು. ವಿಚಾರಣೆ ನಡೆಸಿದರೆ, ತನಿಖಾ ವರದಿಯನ್ನು ಡಿ ಸಿ ಆರ್ ಇ ಉನ್ನತ ಅಧಿಕಾರಿಗಳಾದ ಎಡಿಜಿಪಿಯವರಿಗೆ ಸಲ್ಲಿಸುತ್ತದೆ. ಯಾವುದಕ್ಕೂ ಕಾಲಮಿತಿ ಇದ್ದಂತಿಲ್ಲ. ನಂತರ ಅಲ್ಲಿನ ಕಪಾಟುಗಳಲ್ಲಿ ಕೆಲ ವರ್ಷ ಕೊಳೆಯುತ್ತದೆ !ಹಿಂದುಳಿದ ವರ್ಗಗಳ ಆಯೋಗ ಜಾತಿ ವಿಚಾರಣೆ ನಡೆಸುತ್ತದೆ. ಸರಕಾರಕ್ಕೆ ವರದಿಯನ್ನೂ ಸಲ್ಲಿಸುತ್ತದೆ. ಆಯೋಗದ ವರದಿಗಳೂ ಸಹ ಸರಕಾರದ ಕಪಾಟುಗಳಲ್ಲಿ ಭದ್ರವಾಗಿ ಕೊಳೆಯುತ್ತಿರುತ್ತದೆ !ರಾಜ್ಯದಲ್ಲಿ ದಲಿತ ಪರ (!?) ಮುಖ್ಯಮಂತಿಗಳೇ ಇದ್ದರೂ, ಪರಿಶಿಷ್ಟ ಜಾತಿ – ಪಂಗಡಗಳಿಗೆ ಸೇರಿದವರೇ ಉಪ ಮುಖ್ಯಮಂತ್ರಿಗಳಾಗಿದ್ದರೂ, ಗೃಹ ಸಚಿವರು, ಸಮಾಜ ಕಲ್ಯಾಣ ಸಚಿವರುಗಳಾಗಿದ್ದರೂ ಪರಿಶಿಷ್ಟರಿಗಾದ, ಆಗುತ್ತಲೇ ಇರುವ ಅನ್ಯಾಯಗಳಿಗೆ, ದೌರ್ಜನ್ಯಗಳಿಗೆ, ಶೋಷಣೆಗಳಿಗೆ ಕಡಿವಾಣ ಹಾಕಲು, ಪರಿಶಿಷ್ಟರಿಗೆ ಸಂಬಂಧಿಸಿದ ವಿಷಯಗಳಲ್ಲಿನ ಗೊಂದಲಗಳಿಗೆ ಅಂತಿಮ ಪರಿಹಾರ ಒದಗಿಸಲು ಸಾಧ್ಯವಾಗದಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ನಿಜವಾದ ದೌರ್ಭಾಗ್ಯವೇ ಸರಿ.ವರದಿ: ಶ್ರೀರಾಮ ದಿವಾಣ ಉಡುಪಿ@ 8105749711.

Scroll to Top