ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಧರ್ಮ, ಆರಾಧನೆಯ ಜೊತೆಗೆ ಕುಟುಂಬ ಸ್ನೇಹವೂ ಬೇಕು: ಮೋಹನ್ ಚೌಟ

ಸುರತ್ಕಲ್ : ಮನುಷ್ಯನ ಜೀವನದಲ್ಲಿ ಹಲವು ಸವಾಲುಗಳಿರುತ್ತದೆ ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನಮ್ಮಲ್ಲಿರಬೇಕು ಧರ್ಮ, ಆರಾಧನೆ ಜತೆಗೆ ಕುಟುಂಬ ಸ್ನೇಹ ನಮ್ಮಲಿರಬೇಕು ಎಂದು ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ ನುಡಿದರು.ಅವರು ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ಸೇವಾ ಸಂಘ ಮಧ್ಯ ಇವರ 53 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಭಿವೃದ್ದಿ ನಮ್ಮ ಗುರಿಯಾಗ ಬೇಕು: ಅನಿಲ್ ಶೆಟ್ಟಿ ಸೂರಿಂಜೆ.ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ ಮಾತನಾಡಿ ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಅಯೋಜಿಸಬೇಕು, ಮಾನವ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆ ನಾವು ಮಾಡಬೇಕು, ಅಭಿವೃದ್ಧಿ ನಮ್ಮ ಗುರಿಯಾಗಬೇಕು ಎಂದರು.ಮುಂಬಯಿ ವಕೀಲರಾದ ದಿನಕರ ಕೆ ಶೆಟ್ಟಿ ಮಧ್ಯ, ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಮುಂಬಯಿ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ, ಮುಂಬಯಿ ಉದ್ಯಮಿ ಕುಟ್ಟಿ ಶೆಟ್ಟಿ ಬಗ್ಗಣ್ಣಮನೆ ಮಧ್ಯ, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ಕಾಳದೂಮಣ್ಣ ಮನೆ ಮಧ್ಯ, ಉದ್ಯಮಿ ಅಶೋಕ್ ದೇವಾಡಿಗ ಕಾಟಿಪಳ್ಳ, ಜಯಂತ್ ದೇವಾಡಿಗ ಮಧ್ಯ, ಮಧ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಪ್ರಭಾಲಾಕ್ಷಿ ಶೆಟ್ಟಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ವಜ್ರಾಕ್ಷಿ ಪಿ ಶೆಟ್ಟಿ, ಮಧ್ಯ ಪ್ರೆಂಡ್ಸ್ ಅಧ್ಯಕ್ಷ ಡಿಶಾಂತ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಯಶೋದ ಪೂಜಾರಿ , ಪ್ರಮೀತ್ ಬಿ ಶೆಟ್ಟಿ, ಗ್ರಾಮ ಸೇವಾ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ದೀಪಕ್ ಶೆಟ್ಟಿ, ಚರಣ್ ಶೆಟ್ಟಿ, ಅಶೋಕ್, ಸಂತೋಷ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತವನ್ನು ಸಂಘದ ಜತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ ಮಾಡಿದರು. ಸಂಘದ ಉಪಾಧ್ಯಕ್ಷ ದಿನೇಶ್ ದೇವಾಡಿಗ ಧನ್ಯವಾದ ‌ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ವಕೀಲರಾದ ದಿನಕರ ಕೆ ಶೆಟ್ಟಿ ಮಧ್ಯ ಕುಂಜರಬಾಳಿಕೆ ಅವರು ನೋಟರಿಯಾಗಿ ಅಯ್ಕೆ ಅದ ಬಗ್ಗೆ ಅವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಪಜೀರು ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾಗಿ ಪ್ರದೀಪ್ ಆಳ್ವ ನೇಮಕ

ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಮಂಗಳೂರಿನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಿರುತ್ತಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಪಜೀರು ಅಜೆಕಳಗುತ್ತು ಪ್ರದೀಪ್ ಆಳ್ವ ಕದ್ರಿ ಆಯ್ಕೆ ಮಾಡಲಾಗಿದೆ.ಸದಸ್ಯರಾಗಿ ಸುಬ್ರಾಯ ಪೂಜಾರಿ ಭಂಡಾರಮನೆ, ಜಗದೀಶ್ ಆಳ್ವ ಕುವೆತ್ತಬೈಲು, ವಿಶ್ವಾಸ್ ರೈ ಬಂಗದಾರೆಗುತ್ತು, ಪುರಂದರ ವಜಲಗುಡ್ಡೆ, ಸರಸ್ವತಿ ಅಡ್ಕ, ಭಾರತಿ ಗಟ್ಟಿ ಕೊರಂತೋಡಿ, ರಂಗನಾಥ ಪೂಂಜ ಅಜೆಕಳಗುತ್ತು, ರಮೇಶ್ ಸಪಲ್ಯ ಗಾಣದಮನೆ ಇವರುಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ: ಮೊಗಾರ್ನಾಡ್ ಚರ್ಚ್ ನಲ್ಲಿ 26 ಮಕ್ಕಳಿಗೆ ಪ್ರಥಮ ಪರಮ ಪವಿತ್ರ ಪ್ರಸಾದ

ಬಂಟ್ವಾಳ ತಾಲೂಕು ಮೊಗರ್ನಾಡ್ ದೇವ ಮಾತಾ ಚರ್ಚ್ ನ 26 ಮಂದಿ ಮಕ್ಕಳು ಮೇ 11 ರಂದು ನಡೆದ ಸಮಾರಂಭದಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.ಚರ್ಚ್ ನ ಧರ್ಮಗುರು ಫಾ. ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾ. ನವೀನ್ ಪಿಂಟೊ, ಫಾ. ಆಸ್ಟಿನ್ ಫೆರ್ನಾಂಡಿಸ್, ನೂತನ ಧರ್ಮಗುರು ಫಾ. ಮೆಲ್ವಿನ್ ಡಿ ಸೋಜಾ, ಅಥಿತಿ ಗುರು ಉರ್ವ ಚರ್ಚಿನ ಧರ್ಮ ಗುರು ಫಾ. ಬೆಂಜಮಿನ್ ಪಿಂಟೊ ಅವರು ಬಲಿ ಪೂಜೆಯನ್ನು ನಡೆಸಿದರು. ಹೊಸ ಗುರು ಫಾ ಮೆಲ್ವಿನ್ ಡಿ ಸೋಜಾ ಅವರು ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು. ಪರಮ ಪ್ರಸಾದದ ಮಹತ್ವವನ್ನು ವಿವರಿಸಿದ ಅವರು, ಪ್ರತಿ ಬಾರಿ ನಾವು ಪರಮ ಪವಿತ್ರ ಪ್ರಸಾದ ಸ್ವೀಕರಿಸಿದಾಗ ನಾವು ಯೇಸು ಕ್ರಿಸ್ತರಂತೆ ಆಗುತ್ತೇವೆ ಎಂದು ಹೇಳಿ ಪ್ರಥಮ ಬಾರಿಗೆ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದ ಮಕ್ಕಳಿಗೆ ಶುಭ ಹಾರೈಸಿದರು.ಪ್ರಥಮ ಬಾರಿಗೆ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದ ಬಳಿಕ ಮಕ್ಕಳು ಸ್ತುತಿ ಗೀತೆಯನ್ನು ಹಾಡಿ ಕೃತಜ್ಞತೆ ಸಲ್ಲಿಸಿದರು.ಚರ್ಚಿನ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆಂಜೆಲೋರ್‌ ಚರ್ಚ್ ಪಾಲನಾ ಸಮಿತಿಯಿಂದ ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮ

ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್‌ ಏಂಜಲ್ಸ್‌ ಚರ್ಚ್, ಆಂಜೆಲೋರ್‌, ಇದರ ಚರ್ಚ್ ಪಾಲನಾ ಸಮಿತಿಯ ಸದಸ್ಯರು ‘ಪ್ರಕೃತಿಯಲ್ಲಿ ಒಂದು ದಿನ’ ವನ್ನು ಬ್ರಹ್ಮಾವರದ ರಮಣೀಯ ತಾಣದಲ್ಲಿ ಕಳೆದರು.ಚರ್ಚ್ ಗಳಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಚರ್ಚ್ ಪಾಲನಾ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಈ ಸಮಿತಿಯ ಸೇವಾವಧಿ 2025 ಡಿಸೆಂಬರ್ 31 ರ ವರೆಗೆ ಇರುತ್ತದೆ. ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫೆಡ್ರಿಕ್‌ ಮೊಂತೇರೊ, ವಾಸ್ತವ್ಯ ಧರ್ಮಗುರು ವಂ. ಫಾ. ಸ್ಟೇನಿ ಫೆರ್ನಾಂಡಿಸ್‌, ಚರ್ಚ್ ಉಪಾಧ್ಯಕ್ಷ ಪಾವುಲ್‌ ರೊಡ್ರಿಗಸ್‌, ಕಾರ್ಯದರ್ಶಿ ಲೊಲಿನಾ ಡಿ’ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್‌, ಕಪಿತಾನಿಯೋ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಪ್ರೆಸಿಲ್ಲಾ ಮಿನೇಜಸ್‌, ಬೆಲ್ವದೆರೆ ಕಾನ್ವೆಂಟೊನ ಸುಪೀರಿಯರ್ ಭಗಿನಿ ಸ್ಟೆಫಾನಿಯೋ ಕುವೆಲ್ಲೊ, ಕಾಸಾಗಯಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಪ್ರಮಿಳಾ ಡಿ’ಸೋಜಾ ಮುಂತಾದವರು ಭಾಗವಹಿಸಿದ್ದರು.ಈ ಪ್ರಕೃತಿ ಪ್ರವಾಸದ ಸಂದರ್ಭದಲ್ಲಿ ಪ್ರಕೃತಿಯ ಸೌಂದಯರ್ವನ್ನು ಸವಿಯುವುದರ ಜತೆಗೆ ಚರ್ಚ್ ನ ಸಮಗ್ರ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ವಿವಿಧ ಆಟೋಟಗಳನ್ನು ಕೂಡಾ ಆಯೋಜಿಸಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

“ಟಾಸ್” ತುಳು ಮತ್ತು ಕನ್ನಡ ಸಿನಿಮಾಕ್ಕೆ ಮುಹೂರ್ತ. ಅರ್ಜುನ್ ಕಾಪಿಕಾಡ್ ನಿರ್ದೇಶನ

ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ “ಟಾಸ್” ತುಳು ಮತ್ತು ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.ಶರವು ಶ್ರೀ ಮಹಾಗಣಪತಿ ದೇವಸ್ಥಾದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು.ಡಾ ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸುತ್ತೇಜ್ ಶೆಟ್ಟಿ, ಕ್ಯಾಟ್ಕಾದ ಅಧ್ಯಕ್ಷ ಲಂಚೂಲಾಲ್, ಶರ್ಮಿಳಾ ಕಾಪಿಕಾಡ್, ಸುತ್ತೇಜ್ ಶೆಟ್ಟಿ, ಶೋಭರಾಜ್ ಪಾವೂರು, ಬಾಳ ಜಗನ್ನಾಥ ಶೆಟ್ಟಿ, ಮಣಿಕಾಂತ್ ಕದ್ರಿ, ಅನೂಪ್ ಸಾಗರ್, ಯತೀಶ್ ಪೂಜಾರಿ, ನಿತೇಶ್ ಸುವರ್ಣ, ಕೃತಿ ಶೆಟ್ಟಿ, ಚೈತ್ರ ಶೆಟ್ಟಿ ಉಪಸ್ಥಿತರಿದ್ದರು.ರಾಜ್ಯ ಪ್ರಶಸ್ತಿ ಪುರಸ್ಜೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ಕಾಪಿಕಾಡ್ ನಿರ್ದೇಶನ ಮತ್ತು ಅಭಿನಯದ ಟಾಸ್ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.ನಿರ್ಮಾಪಕರು: ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ, ಸಂಗೀತ ಮಣಿಕಾಂತ್ ಕದ್ರಿ, ಕ್ಯಾಮರಾ ಜಾಯಿಲ್ ಶಮನ್ ಡಿಸೋಜಾ, ಸಂಕಲನ ಯಶ್ವಿನ್ ಶೆಟ್ಟಿಗಾರ್, ಸಹ-ನಿರ್ದೇಶಕರು ಪ್ರಶಾಂತ್ ಅಲ್ವಾ, ಅನೂಪ್ ಸಾಗರ್, ವಿಕ್ರಮ್ ದೇವಾಡಿಗ, ಸುನಿಲ್, ಸೌರವು, ಎಸ್ಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ಮ್ಯಾನೇಜರ್ ಶಬರೀಶ್ ಕಬ್ಬಿನಳೆ, ಪ್ರೊಡಕ್ಷನ್ – ಸಂತೋಶ್ ಪಂಜಿಕಲ್,ತಾರಾಗಣದಲ್ಲಿ ಡಾ ||ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಶಶಿರಾಜ್ ಕಾವೂರು, ಸುತ್ತೆಜ್ ಶೆಟ್ಟಿ ಶೋಭರಾಜ್ ಪಾವೂರ್, ಚೈತ್ರ ಶೆಟ್ಟಿ, ಕೃತಿ ಶೆಟ್ಟಿ ಅಭಿನಯಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಆಯ್ಕೆ

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26 ನೇ ಸಾಲಿನ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ಇಂದು ಮೇ 11ರಂದು ಆದಿತ್ಯವಾರ ನಡೆಯಿತು. ನೂತನ ಕೇಂದ್ರೀಯ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಸರ್ವಾನುಮತದಿಂದ ಆಯ್ಕೆಯಾದರು.ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾರವರು ಚುನಾವಣೆಯ ಮೊದಲು ನೂತನ ಪೋಪ್ ಲಿಯೋ 14ರವರ ಚುನಾವಣೆಯನ್ನು ಸ್ಮರಿಸಿ ಅದೇ ರೀತಿ ಪ್ರಾರ್ಥನೆಯ ಮೂಲಕ ಚುನಾವಣೆಯನ್ನು ನಡೆಸಲು ಮಾರ್ಗದರ್ಶನ ನೀಡೀದರು. ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಥಮ ಉಪಾಧ್ಯಕ್ಷ ಲೋರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೇರೆಬೈಲ್, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್ ಮೂಡಬಿದಿರೆ ಅಲಂಗಾರ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ ರಾಣಿಪುರ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಚುನಾವಣಾಧಿಕಾರಿಯಾಗಿ ಮತ್ತು ಜೆರಿ ಪೀಟರ್ ರೊಡ್ರಿಗಸ್ ಚುನಾವಣಾ ವೀಕ್ಷಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ, ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಾಜಿ ಕೇಂದ್ರೀಯ ಅಧ್ಯಕ್ಷರುಗಳಾದ ವಾಲ್ಟರ್ ಡಿಸೋಜ, ಮಾರಿಟೊ ಸಿಕ್ವೇರಾ, ಎಲ್.ಜೆ. ಫೆರ್ನಾಂಡಿಸ್, ಜೆರಾಲ್ಡ್ ಡಿಕೋಸ್ತ, ಜೆರಿ ಪೀಟರ್ ರೊಡ್ರಿಗಸ್, ಆಂಡ್ರು ನೊರೊನ್ಹಾ, ಲ್ಯಾನ್ಸಿ ಡಿಕುನ್ಹಾ, ನೈಜಿಲ್ ಪಿರೇರಾ, ಅನಿಲ್ ಲೋಬೊ, ಪ್ಲೇವಿ ಡಿಸೋಜ, ಪಾವ್ಲ್ ರೋಲ್ಫಿ ಡಿಕೋಸ್ತ, ಸ್ಟ್ಯಾನಿ ಲೋಬೊ, ವಲಯ ಅಧ್ಯಕ್ಷರುಗಳಾದ ರೋಷನ್ ಬೊನಿಫಾಸ್ ಮಾರ್ಟಿಸ್, ಲಿಯೋ ಸಿಕ್ವೇರಾ, ಸ್ಟ್ಯಾನಿ ಮಿರಾಂದ, ಆಲ್ಬರ್ಟ್ ಸುನಿಲ್ ಮೊನಿಸ್, ಜೋನ್ ಲಸ್ರಾದೊ, ಐಡಾ ಫುಡ್ತಾದೊ, ಡೋಲ್ಫಿ ಡಿಸೋಜ, ಜೆರಾಲ್ಡ್ ಮಸ್ಕರೇನ್ಹಸ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಹೊಸ ಪೋಪ್ ಲಿಯೋ XIV ಅವರಿಗೆ ಕೃತಜ್ಞತಾರ್ಪಣೆಗೆ ಕರೆ ಮತ್ತು ನಮ್ಮ ರಾಷ್ಟ್ರದ ಸೈನಿಕರಿಗಾಗಿ ಪ್ರಾರ್ಥನೆ

ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಯಾಗಿ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್ ಅವರು ಹೊಸ ಪೋಪ್ ಆಗಿ ಆಯ್ಕೆಗೊಂಡಿದ್ದು, ಈ ಬಗ್ಗೆ ಕ್ಯಾಥೊಲಿಕ್ ಧರ್ಮ ಸಭೆ ಸಂತೋಷ ಪಡುತ್ತದೆ. ಪೋಪ್ ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್ ಅವರು ಪೋಪ್ ಲಿಯೋ XIV ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಇದು ಜಾಗತಿಕ ಕ್ಯಾಥೊಲಿಕ್‌ ಧರ್ಮ ಸಭೆಗೆ ಅತೀವ ಸಂತೋಷ ಮತ್ತು ನವೀಕೃತ ಭರವಸೆಯ ಕ್ಷಣವಾಗಿದೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಬಯಕೆಯ ಪ್ರಕಾರ ಧರ್ಮ ಸಭೆಯನ್ನು ಮುನ್ನಡೆಸಲು ಹೊಸ ಪೋಪ್ ಸ್ವಾಮಿಯನ್ನು ಆಯ್ಕೆ ಮಾಡುವಲ್ಲಿ ಕಾರ್ಡಿನಲ್‌ ಗಳ ಮಂಡಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನಾವು ದೇವರಿಗೆ ಧನ್ಯವಾದಗಳನ್ನು ಅರ್ಪಿಸೋಣ. ಧರ್ಮ ಸಭೆಯನ್ನು ಮುನ್ನಡೆಸುವಲ್ಲಿ ಪರಮೋಚ್ಛ ಗುರುಗಳನ್ನು ಬಲಪಡಿಸಲು ನಾವು ದೇವರ ಮುಂದೆ ಪ್ರಾರ್ಥನೆ ಸಲ್ಲಿಸೋಣ.ಇದೇ ವೇಳೆ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಮತ್ತು ಹೇಡಿತನದ ಭಯೋತ್ಪಾದಕ ದಾಳಿಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ಸಂಕಷ್ಟಕ್ಕೀಡಾಗಿದ್ದೇವೆ. ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡು, ಅನೇಕ ಜನರನ್ನು ಗಾಯಗೊಳಿಸಿದ ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುಃಖದ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡು ಸಂತ್ರಸ್ತರಾದವರ ಮತ್ತು ಅವರ ಕುಟುಂಬಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ಬಲವಾಗಿ ವ್ಯಕ್ತಪಡಿಸುತ್ತೇವೆ. ಒಂದು ವಿಶ್ವಾಸಾರ್ಹ ಸಮುದಾಯವಾಗಿ, ಈ ದಾಳಿಗಳಲ್ಲಿ ಸಾವನ್ನಪ್ಪಿದವರ ಆತ್ಮಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ.ಅದೇ ಸಮಯದಲ್ಲಿ ನಮ್ಮ ದೇಶದ ಗಡಿಗಳನ್ನು ಕಾಯುತ್ತಾ ನಮ್ಮ ಜನರನ್ನು ರಕ್ಷಣೆ ಮಾಡುತ್ತಿರುವ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಿಟ್ಟತನದ ಪ್ರಯತ್ನಗಳಿಗೆ ನಾವು ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ನಾಗರಿಕರು ಮತ್ತು ಸೈನಿಕರ ಸುರಕ್ಷತೆಗಾಗಿಯೂ ನಾವು ಪ್ರಾರ್ಥನೆಗಳನ್ನು ಸಲ್ಲಿಸೋಣ.ಈ ಎರಡು ಮಹತ್ವದ ಬೆಳವಣಿಗೆಗಳು ಅಂದರೆ ಹೊಸ ಪೋಪ್ ಆಯ್ಕೆಯ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಕೆ ಮತ್ತು ಇನ್ನೊಂದು ರಾಷ್ಟ್ರೀಯ ಶೋಕಾಚರಣೆ ಈಗ ನಮ್ಮ ಮುಂದೆ ಇದೆ. ನಾವು ನೆರೆಯ ರಾಷ್ಟ್ರಗಳ ನಡುವೆ ಶಾಂತಿಗಾಗಿ ಪ್ರಾರ್ಥಿಸೋಣ. ಪರಮ ಪವಿತ್ರ ಸಂಸ್ಕಾರದ ಆರಾಧನೆಯ ಸಮಯದಲ್ಲಿ ನಮ್ಮ ಕೃತಜ್ಞತೆ ಮತ್ತು ನಮ್ಮ ಮನವಿಯನ್ನು ಭಗವಂತನ ಮುಂದೆ ಇಡೋಣ. ಈ ಉದ್ದೇಶಗಳಿಗಾಗಿ ನಮ್ಮ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳ ಧರ್ಮಗುರುಗಳು ಮತ್ತು ಚಾಪ್ಲಿನ್‌ಗಳು 2025 ಮೇ II ರಂದು ಭಾನುವಾರದ ಬಲಿ ಪೂಜೆಯ ಬಳಿಕ ಆರಾಧನೆಯನ್ನು ನಡೆಸ ಬೇಕೆಂದು ನಾನು ವಿನಂತಿಸುತ್ತೇನೆ.ಪ್ರಾರ್ಥನಾಪೂರ್ವಕ ಶುಭಾಶಯಗಳೊಂದಿಗೆ,ಪೀಟರ್ ಪಾವ್ಲ್ ಸಲ್ಡಾನ್ಹಾಧರ್ಮಾಧ್ಯಕ್ಷರು, ಮಂಗಳೂರುಕೋಡಿಯಾಲ್‌ಬೈಲ್, ಮಂಗಳೂರು-575 003ದಕ್ಷಿಣ ಕನ್ನಡ.

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠ, ಮಂಗಳೂರು “ಗಡಿ ಕಾಯುವ ಯೋಧರಿಗಾಗಿ ವಿಶೇಷ ಪ್ರಾರ್ಥನೆ.”

ಭಾರತೀಯ ಸೇನೆಯು ಗಡಿಯಲ್ಲಿ ನೆರೆ ರಾಷ್ಟ್ರ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶತ್ರು ರಾಷ್ಟ್ರದ ವಿವಿಧ ರೀತಿಯ ದಾಳಿಗಳನ್ನು ಸಮರ್ಥವಾಗಿ‌ ಎದುರಿಸುತ್ತಾ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ನಮ್ಮ ಸೇನೆಗಳ ಸಾಧನೆಗಾಗಿ ಮತ್ತು ಶ್ರೀ ದೇವರ ಅನುಗ್ರಹ ಪ್ರಾಪ್ತಿಗಾಗಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಸುಮಂಗಲೆಯರು ಅಮೃತ ಜ್ಯೋತಿ, ಪುಷ್ಪ ಹಾಗೂ ಕುಂಕುಮಗಳೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರದಕ್ಷಿಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಈ ಸಂದರ್ಭದಲ್ಲಿ ದೇಶದ ಸೇನೆಯಲ್ಲಿ ಸೇವೆಗೈದ ನಿವೃತ್ತ ಸೇನಾನಿಗಳು ಭಾಗವಹಿಸಿದ್ದರು.ವಾಯು ಸೇನೆಯ ನಿವೃತ್ತ ಯಶವಂತ ಗೋಪಾಲ ಶೆಟ್ಟಿ,, ನೌಕಾಪಡೆಯ ನಿವೃತ್ತ ಕಮಾಂಡರ್ ಜಯರಾಂ ನೋಂಡ, ಮತ್ತು ಭೂಸೇನೆಯ ಲ್ಯಾನ್ಸ್ ದಫೇದಾರ್ ಸೋಮಶೇಖರ್ ಇವರುಗಳನ್ನು ಈ ಸಂದರ್ಭದಲ್ಲಿಮೂರೂ ಸೇನೆಗಳಿಗೆ ಗೌರವಾರ್ಪಣೆಯ ಸಂಕೇತವಾಗಿಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.ಯಶವಂತ ಶೆಟ್ಟಿಯವರು ನೆರೆದಿದ್ದ ಭಕ್ತವೃಂದವನ್ನು ಉದ್ದೇಶಿಸಿ ಮಾತನಾಡಿ ” ನಮ್ಮ ಸೇನೆಯಲ್ಲಿ ಮಂಗಳೂರಿನ ಐವರು ಸೇವಾನಿರತರಾಗಿದ್ದಾರೆ ,ಅದರಲ್ಲೂ ನಾಲ್ಕು ಮಹಿಳೆಯರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಈ ದಿವ್ಯ ಕ್ಷೇತ್ರದಲ್ಲಿ ಭಾರತೀಯ ಸೇನೆಯವರಿಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಂಡಿರುವುದು ನಿಜವಾಗಿಯೂ ಅತ್ಯಂತ ಅರ್ಥ ಪೂರ್ಣ ಹಾಗೂ ಅಗತ್ಯವಾದ ಕಾರ್ಯಕ್ರಮವಾಗಿದೆ.ದೇಶದ ರಕ್ಷಣೆಗಾಗಿ ನಿಂತಿರುವ ಅಮೃತ ವಿದ್ಯಾಲಯಂನ ಹಳೇ ವಿದ್ಯಾರ್ಥಿಯು ಹೊಂದಿರುವ ದೇಶಪ್ರೇಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ದೇಶದ ವಿಜಯ ಪತಾಕೆ ಹಾರಿಸುವ ಬಗ್ಗೆ ಯಾವುದೇ ಸಂಶಯ ಬೇಡ.ಕೆಲವೇ ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ.ಮಹಿಳೆಯರು ಅಂದರೆ ಸ್ತ್ರೀ ಶಕ್ತಿ ಈಗ ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ.ಈ ಬಾರಿ ಎಲ್ಲಾ ಧರ್ಮದವರು ಒಕ್ಕೊರಲಿನಲ್ಲಿ‌ ಹೇಳಿದ ಮಾತು ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ ಎಂದು.ಇಂದು ಇಲ್ಲಿ ಮಾಡಿದ ಪ್ರಾರ್ಥನೆಯ ಫಲ ನ್ಯಾಯಕ್ಕೆ ಸಿಗುತ್ತದೆ,ಸತ್ಯಕ್ಕೆ ಸಿಗುತ್ತದೆ,ಎಲ್ಲರಲ್ಲೂ ದೇಶ ಭಕ್ತಿ ಜಾಗೃತ ಗೊಂಡು ದೇಶ ಸೇವೆ ಮಾಡೋಣ ಎಂದು ಸಂತೃಪ್ತಿಯಿಂದ ನುಡಿದರು.ಸಾಮೂಹಿಕ ಶನಿದೋಷ ನಿವಾರಣಾ ಪೂಜೆಯ ನಂತರನಡೆದ ಈ ಸರಳ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯಅಧ್ಯಕ್ಷ ಸುರೇಶ್ ಅಮೀನ್, ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ, ಡಾ.ವೈ.ಸನತ್ ಹೆಗ್ಡೆ,ಶ್ರುತಿ ಸನತ್ ಹೆಗ್ಡೆ , ಸೇವಾ ಸಮಿತಿಯ ಪದಾಧಿಕಾರಿಗಳು, ಶ್ರೀ ಭೋಜರಾಜ್ ಕರ್ಕೇರ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ ಪದಾಧಿಕಾರಿಗಳು, ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಯುವ ರೆಡ್‌ಕ್ರಾಸ್ ಪ್ರೇರಣಾ ಶಿಬಿರ ಸಮಾರೋಪ. ‘ಮಾನವೀಯ ಸೇವೆಯಿಂದ ಬದುಕಿಗೆ ಸಾರ್ಥಕತೆ’-ಸತ್ಯನಾರಾಯಣ ನಾಯ್ಕ್

ಮಂಗಳೂರು: ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕದ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಮತ್ತು ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ಮಂಗಳೂರು ವಿ.ವಿ. ಮಟ್ಟದ ಯುವ ರೆಡ್‌ಕ್ರಾಸ್ ಸದಸ್ಯರಿಗೆ ಆಯೋಜಿಸಿದ ಮೂರು ದಿನಗಳ ಪ್ರೇರಣಾ ಶಿಬಿರದ ಸಮಾರೋಪ ಸಮಾರಂಭ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಡಿಜಿಎಂ ಸತ್ಯನಾರಾಯಣ ನಾಯ್ಕ್ ಮಾತನಾಡಿ” ಮಾನವೀಯ ಸೇವೆಯಿಂದ ಬದುಕಿನಲ್ಲಿ ಸಾರ್ಥಕತೆ ಪಡೆಯಬಹುದು. ವಿದ್ಯಾರ್ಥಿಗಳು ಅಂತಹ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡು ನಾಡಿನ ಸತ್ಪ್ರಜೆಗಳಾಗ ಬೇಕು ಎಂದರು.ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ನವೀನ್ ಕಿಲ್ಲೆ, ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ರೋಶನ್ ಮೋನಿಸ್ ಮುಖ್ಯ ಅತಿಥಿಗಳಾಗಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಪಿ.ಬಿ.ಹರೀಶ್ ರೈ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಯುವ ರೆಡ್‌ಕ್ರಾಸ್ ಸಂಯೋಜನಾಧಿಕಾರಿಗಳಾದ ನಟೇಶ್ ಆಳ್ವ ಸಂತೋಷ್ ಪಿಂಟೊ, ದೀಕ್ಷಿತಾ, ಶಿಬಿರದ ಸಂಯೋಜಕ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.ಶಿಬಿರದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಹಾಗೂ ಉತ್ತಮ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.ಯುವ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಯೋಗೀಶ್ ಶ್ಯಾನ್ ಭೋಗ್, ಮಂಗಳೂರು ವಿ.ವಿ. ಘಟಕದ ನೋಡಲ್ ಆಫೀಸರ್ ಡಾ.ಗಾಯತ್ರಿ.ಎನ್. ವಂದಿಸಿದರು.ಡಾ.ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು

ಪ್ರಾದೇಶಿಕ ವಾರ್ತೆಗಳು

MCC Bank Ltd Celebrates 113 th Founders Day

MCC Bank Ltd celebrated its 113th Founders Day at the Administrative Office Campus on 10.05.2025 with a solemn and spirited gathering that highlighted the institution’s unwavering commitment to society since its inception. The celebration paid tribute to the legacy of the founder, Mr. P.F.X. Saldanha, and recognized thebank’s continued progress and resilience in the cooperative sector.The program began with a prayer conducted by Deale Dsouza and team. Documentary on the history and progress of the bank was presented.The event was presided over by Sahakara Ratna Mr Anil Lobo, Chairman of the Bank.Distinguished guests on the dais included Rev. Fr Denis D’Sa, PRO, Udupi Diocese; Rev. Sr Clara Menezes, UFC, Provincial Superior, Mangalore Province; Mr Lionel Aranha, Chartered Accountant; Prof. Hilda Rayappan, Director, Prajna Counselling Centre; Mr Stephen Menezes, President, Mangalore Konkans, Dubai andMr Sunil Menezes, General Manager of the Bank. In his welcome address, Mr Anil Lobo warmly greeted the dignitaries, board members, staff, and guests. He highlighted MCC Bank’s transformation and its parity with nationalized banks in service and performance. He expressed deep admiration for Rev. Fr Denis D’Sa, lauding him as a source of inspiration and a symbol of professionalism. Mr Lobo humbly refrained from detailing the Bank’s accomplishments, acknowledging that they had already been well communicated.The program included a touching tribute to the Bank’s founder, as dignitaries and member of Mr P.F.X. Saldanha’s family offered floral respects to his portrait. In his keynote address, Rev. Fr Denis D’Sa congratulated the Bank and delivered aninspiring message rooted in three core principles:1.Looking Back with Gratitude – Celebrating the legacy and foundational valuesof the institution.2.Looking Within for Self-Evaluation – Encouraging introspection through SWOTanalysis and the courage to take risks.3.Looking Forward with Trust in God – Emphasizing faith and perseverance,drawing parallels with astronaut Sunitha Williams’ journey.He urged the staff members to remain diligent, serve with empathy, and approachcustomers with a smile.Charity contributions were distributed by the Chairman to De Mercede Orphanage,Panir, and Shalom Trust®️, Kankanady, underlining the Bank’s commitment tosocial responsibility.Rev. Sr Clara Menezes released the annual bulletin, joined by Editor Dr Gerald Pintoand Sub-Editor Ms Shery Ashna. In her address, she praised the Bank’s legacy and emphasized the importance of opportunity, patience, professionalism, and hard work in achieving sustainable growth. Newly qualified Chartered Accountants, children of esteemed customers were felicitated.Prof. Dr Edmund J. B. Frank, St Aloysius college and Ex-chairman of MCC bank, Mr Marcel M. Dsouza, Ex Director of MCC Bank, Konkani Writer and Mr Stephen Menezes, newly elected President of Mangalore Konkans, Dubai, for theircommendable service to the community were felicitated. CA Lionel Aranha presented a brief history of the Bank, reminding attendees that success is not merely about results, but about the integrity and principles upheld in achieving them.The customers who celebrated their birthdays in the month of May were honoured. Prof Hilda Rayappan, Director of Prajna Counselling Centre, who has served the Society for the last 50 years was also felicitated during the occasion. In responseshe thanked the Bank and emphasized the importance of empathy in service. Directors Andrew Dsouza, Herold Monteiro, Anil Patrao, Roshan Dsouza, Melwyn Vas, Freeda Dsouza, Irene Rebello, Alwyn P. Montiero, Sharmila Menezes, Felix DCruz, Dr Gerald Pinto, and C G Pinto were present.General Manager Sunil Menezes proposed the vote of thanks and Ms Grishma Melisha Saldanha, Neermarga compered.

Scroll to Top