ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠದವಿದ್ಯಾ ಸಂಸ್ಥೆ “ಅಮೃತ ವಿದ್ಯಾಲಯಂ” ಸಿ ಬಿ ಎಸ್ ಇ ಹತ್ತನೆಯ ತರಗತಿ ಶೇಕಡಾ 100 ಫಲಿತಾಂಶ

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ನಡೆಸಲ್ಪಡುವ ವಿದ್ಯಾಸಂಸ್ಥೆ ಅಮೃತ ವಿದ್ಯಾಲಯಂ ನಲ್ಲಿ ಸತತ 26 ನೆಯ ವರ್ಷವೂ ಶೇಕಡಾ 100 ಫಲಿತಾಂಶ ಬಂದಿರುತ್ತದೆ.ಶೇಕಡಾ 41 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ ಶೇಕಡಾ 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ 100 ಫಲಿತಾಂಶ ಬಂದಿರುತ್ತದೆ ಎಂದು ಶಾಲಾ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ಧ ಬ್ಯಾಷ್ಠಿಸ್ಟ್ ಡಿ’ಕುನ್ಹಾ ನಿಧನ

ಮಂಗಳೂರು, ಮೇ.21:ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ,ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.ಐವತ್ತು ದಶಕಗಳ ಹಿಂದೆಯೇ ಸುಮಾರು 37 ಧರ್ನಶಿಶು (ಮಕ್ಕಳ ಪೋಷಕ) ಹೊಂದಿ ಹಿತಪೋಷಕರೆಣಿಸಿ ಶ್ರೇಷ್ಠವ್ಯಕ್ತಿವೆಂದೇ ಗುರುತಿಸಿ ಜನಾನುರೆಸಿದ್ದರು. ಬಳಿಕ ಬಂಟ್ವಾಳ ಮೊಡಂಕಾಪು ಇಲ್ಲಿನ ಇನ್ಫೆoಟ್ ಜೀಸಸ್ ಚರ್ಚ್ ನಲ್ಲಿ ಪಾಲನಾ ಸಮಿತಿ ಸದಸ್ಯರಾಗಿ,ತಿಸ್ರಿ ಒಡ್ದ್ ಇದರ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಇದರ ಸಕ್ರಿಯ ಸದಸ್ಯರಾಗಿ, ಕೊಡುಗೈದಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸದ್ಯ ಮಂಗಳೂರು ಬಿಕರ್ಣಕಟ್ಟೆ ಇಲ್ಲಿನ ಜಯಶ್ರೀಗೇಟ್ ನ ಸ್ವನಿವಾಸದಲ್ಲಿ ನೆಲೆಸಿದ್ದರು.ಮೃತರು ಇಬ್ಬರು ಸುಪುತ್ರಿಯರು, ಮೂವರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯುನಾಳೆ ಗುರುವಾರ (ಮೇ. 22) ಮಧ್ಯಾಹ್ನ 2:00 ಗಂಟೆಗೆ ಸ್ವನಿವಾಸಕ್ಕೆ ತಂದು ಬಳಿಕ 2:45 ರಿಂದ 3:30ರ ವರೆಗೆ ಬಜ್ಜೋಡಿ ಅಲ್ಲಿನ ಇನ್ಫೆಂಟ್ ಮೇರಿ ಚರ್ಚ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು. 3:30 ಗಂಟೆಗೆ ಪೂಜೆ, ನಂತರ ಸೈoಟ್ ಸೆಬಾಸ್ಟಿಯನ್ ಚರ್ಚ್ (ಬೆಂದೂರು) ಇದರ ಸಮಾಧಿಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

The Joyous Reunion of Mr. Giri with Family in Tamil Nadu Kumbakonam,

May 17, 2025: In a heartwarming moment, Mr. Giri, a resident of Perumandi North Street, Melkavaeri village in Kumbakonam, Tanjavur district, was happily reunited with his family on May 15, 2025, after being missing for six months. The reunion, facilitated by Snehalaya Charitable Trust, Kasargod, brought immense joy to his father, mother, and two sisters. Mr. Giri, who is single, had been struggling with mental health issues for the past two years. Despite receiving treatment, his condition did not improve as he was not taking his prescribed medicines. This was not the first time he went missing; he had disappeared once before. On March 22, 2025, Mr. Giri was admitted to Snehalaya Charitable Trust. Thanks to the efforts of Eshwar Malpe, popularly known as Aqua Man, a self-taught underwater searcher and the Proud Son of Karnataka, who played a key role in admitting Mr. Giri to Snehalaya Charitable Trust. After the comprehensive treatment Mr. Giri was later shifted to Shraddha Foundation on April 11, 2025, for care and support. After weeks of dedicated efforts, the trust successfully reunited Mr. Giri with his family. His father, a painter, and their poor family were thrilled when he returned. The villagers and neighbors in Melkavaeri joined the celebration, warmly welcoming Mr. Giri. To help him recover, Mr. Giri received two months of medicines for aftercare. The community’s response was very positive, showing the village’s unity and kindness. This reunion highlights the hard work of Snehalaya Charitable Trust, which has reunited over 1,600 people across the country. It also shows the important role of caring citizens like Eshwar Malpe and the power of community support in bringing families together.

ಪ್ರಾದೇಶಿಕ ವಾರ್ತೆಗಳು

ತಮಿಳುನಾಡಿನ ಕುಂಬಕೋಣಂನಲ್ಲಿ ಶ್ರೀ ಗಿರಿ ಅವರ ಕುಟುಂಬದೊಂದಿಗೆ ಆನಂದದ ಪುನರ್ಮಿಲನ

ಕುಂಬಕೋಣಂ, ಮೇ 17, 2025: ತಂಜಾವೂರು ಜಿಲ್ಲೆಯ ಕುಂಬಕೋಣಂನ ಮೇಲಕವೇರಿ ಗ್ರಾಮದ ಪೆರುಮಂಡಿ ಉತ್ತರ ಬೀದಿಯ ನಿವಾಸಿ ಶ್ರೀ ಗಿರಿ ಅವರು ಆರು ತಿಂಗಳು ನಾಪತ್ತೆಯಾಗಿದ್ದ ನಂತರ, ಮೇ 15, 2025 ರಂದು ತಮ್ಮ ಕುಟುಂಬದೊಂದಿಗೆ ಅತೀ ಸಂತೋಷದಿಂದ ಪುನರ್ಮಿಲನಗೊಂಡರು. ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಹಾಯದಿಂದ ನಡೆದ ಈ ಪುನರ್ಮಿಲನವು ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ಅಪಾರ ಆನಂದ ತಂದಿತು.ವಿವಾಹವಾಗದಿರುವ ಶ್ರೀ ಗಿರಿ ಅವರು ಕಳೆದ ಎರಡು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿಲ್ಲ. ಇದು ಅವರು ಕಾಣೆಯಾದ ಮೊದಲ ಘಟನೆಯಲ್ಲ; ಈ ಹಿಂದೆಯೂ ಒಮ್ಮೆ ಕಾಣೆಯಾಗಿದ್ದರು. ಮಾರ್ಚ್ 22, 2025 ರಂದು ಶ್ರೀ ಗಿರಿ ಅವರನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ಗೆ ದಾಖಲಿಸಲಾಯಿತು. ಕರ್ನಾಟಕದ ಹೆಮ್ಮೆಯ ಪುತ್ರ, ಈಶ್ವರ್ ಮಲ್ಪೆ, ಜನಪ್ರಿಯವಾಗಿ “ಆಕ್ವಾ ಮ್ಯಾನ್” ಎಂದು ಕರೆಯಲ್ಪಡುವವರು, ಶ್ರೀ ಗಿರಿ ಅವರನ್ನು ಸ್ನೇಹಾಲಯಕ್ಕೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಮಗ್ರ ಚಿಕಿತ್ಸೆಯ ನಂತರ, ಏಪ್ರಿಲ್ 11, 2025 ರಂದು ಶ್ರೀ ಗಿರಿ ಅವರನ್ನು ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು. ಅಲ್ಲಿಂದ ಶ್ರದ್ದಾ ಸಂಸ್ಥೆಯವರು ಶ್ರೀ ಗಿರಿ ಅವರನ್ನು ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದರು. ಚಿತ್ರಕಾರರಾಗಿರುವ ಅವರ ತಂದೆ ಮತ್ತು ಬಡ ಕುಟುಂಬವು ಗಿರಿ ಅವರ ಮರಳುವಿಕೆಯಿಂದ ಆನಂದಭರಿತವಾಯಿತು. ಮೇಲಕವೇರಿ ಗ್ರಾಮದ ಗ್ರಾಮಸ್ಥರು ಮತ್ತು ನೆರೆಹೊರೆಯವರು ಈ ಸಂಭ್ರಮದಲ್ಲಿ ಭಾಗಿಯಾಗಿ, ಗಿರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಚೇತರಿಕೆಗೆ ಸಹಾಯವಾಗಲೆಂದು ಗಿರಿ ಅವರಿಗೆ ಎರಡು ತಿಂಗಳ ಔಷಧಿಗಳನ್ನು ಒದಗಿಸಲಾಯಿತು. ಗ್ರಾಮದ ಜನರ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿತ್ತು, ಇದು ಗ್ರಾಮದ ಒಗ್ಗಟ್ಟು ಮತ್ತು ಕರುಣೆಯನ್ನು ತೋರಿಸಿತು. ಈ ಪುನರ್ಮಿಲನವು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಶ್ರಮವನ್ನು ಎತ್ತಿ ತೋರಿಸುತ್ತದೆ, ಇದು ದೇಶಾದ್ಯಂತ 1,600 ಕ್ಕೂ ಹೆಚ್ಚು ಜನರನ್ನು ಪುನರ್ಮಿಲನಗೊಳಿಸಿದೆ. ಜೊತೆಗೆ ಈಶ್ವರ್ ಮಲ್ಪೆಯಂತಹ ಕಾಳಜಿಯುಳ್ಳ ನಾಗರಿಕರ ಪ್ರಮುಖ ಪಾತ್ರವನ್ನು ಮತ್ತು ಕುಟುಂಬಗಳನ್ನು ಒಂದುಗೂಡಿಸುವಲ್ಲಿ ಸಮುದಾಯದ ಬೆಂಬಲದ ಶಕ್ತಿಯನ್ನು ತೋರಿಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಕೆ.ಎಂ.ಸಿ ಮಣಿಪಾಲ್ ಕಾಲೇಜು ತಂಡಕ್ಕೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ 2025 ಪ್ರಶಸ್ತಿ

ಮಂಗಳೂರು: ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತç ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತç ಶಿಕ್ಷಣ ವಿದ್ಯಾರ್ಥಿಗಳಿಗಾಗಿ 4ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ 2025 ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.ಈ ಸ್ಪರ್ಧಾಕೂಟದಲ್ಲಿ ಕೆ.ಎಂ.ಸಿ. ಮಣಿಪಾಲ್ ತಂಡವನ್ನು ಪ್ರತಿನಿಧಿಸಿದ ಡಾ.ಅದಿತಿ ರಾವ್ ಮತ್ತು ಡಾ. ಸಾಯಿ ಭವಾನಿ ರೆಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಡಾ. ವಿನಾಯಕ್ ಎಸ್.ಕೆ. ಮತ್ತು ಡಾ. ರಾಘವೇಂದ್ರ ಡಿ. ತಂಡ ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ನಗರದ ಎ.ಜೆ. ವೈದ್ಯಕೀಯ ಕಾಲೇಜಿನ ಡಾ. ವರುಣ್ ಶೆಟ್ಟಿ ಮತ್ತು ಡಾ. ಅಭಿನ್ ರೈ ತಂಡ ಗಳಿಸಿತು. ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಪ್ರೊö.ಡಾ. ಮೊಹಮ್ಮದ್ ಇಸ್ಮಾಯಿಲ್ ಅತಿಥಿಯಾಗಿ ಮಾತನಾಡಿ, ವೈದ್ಯಕೀಯ ಶಿಕ್ಷಣ ವಿಧ್ಯಾರ್ಥಿಗಳು ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ, ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ಅಭಿನಂದಿಸಿದರು.ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ಪ್ರಿನ್ಸಿಪಾಲ್‌ರಾದ ಡಾ. ಶಹನವಾಜ್ ಮಣಿಪಾಡಿ ಮತ್ತು ಕಣಚೂರು ವೈದ್ಯಕೀಯ ಕಾಲೇಜಿನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯ ಪ್ರೊö.ಡಾ. ಎಂ.ವಿ. ಪ್ರಭು ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತç ವಿಭಾಗದ ಮುಖ್ಯಸ್ಥ ಪ್ರೊö.ಡಾ. ದೇವದಾಸ್ ರೈ ಸ್ಪರ್ಧಾಕೂಟವನ್ನು ನಿರೂಪಿಸಿದರು. ಅವಿಭಜಿತ ದ.ಕ.ಜಿಲ್ಲೆಯ ನಾನಾ ವೈದ್ಯಕೀಯ ಶಿಕ್ಷಣ ಕಾಲೇಜಿನ 28 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿತ್ತುö.ಡಾ. ದೇವದಾಸ್ ರೈ ಸ್ವಾಗತಿಸಿ ಸ್ಪರ್ಧಾಕೂಟದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮೊಹಮ್ಮದ್ ಶಹಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂ.ವಿ. ಮಲ್ಯರವರು ಬಹುಮಾನಗಳನ್ನು ಪ್ರಯೋಜಿಸಿದರು.

ಪ್ರಾದೇಶಿಕ ವಾರ್ತೆಗಳು

ಕಿಯಾ ಕಾರೆನ್ಸ್ ಕ್ಲಾವಿಸ್ ಕಾರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು ಮೇ 17: ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟರ್ಸ್ ಇಂಡಿಯಾ ಇವರ ನೂತನ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರನ್ನು ಕಿಯಾ ಇಂಡಿಯಾದ ಕರಾವಳಿ ಕರ್ನಾಟಕ ಮತ್ತು ಕೊಡಗು ಜಿಲ್ಲೆಯ ಪ್ರಥಮ ಅಧಿಕೃತ ಡೀಲರ್ ಎ.ಆರ್.ಎಂ ಮೋಟರ್ಸ್‌ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಮಾನಾಥ ಎಂಟರ್‌ಪ್ರೈಸಸ್ ಇದರ ವ್ಯವಸ್ಥಾಪಕ ನಿರ್ದೇಶಕರು ಪ್ರಸನ್ನ ಹಾಗೂ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರಿನ ಗ್ರಾಹಕರಾದ ಮಹಮ್ಮದ್ ರಶೀದ್‌ರವರು ನೂತನ ಕಾರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎ.ಆರ್.ಎಂ ಮೋಟರ್ಸ್‌ನ ಎಂ.ಡಿ ಆರೂರು ಗಣೇಶ್ ರಾವ್, ಡೈರೆಕ್ಟರ್ಸ್ ಆರೂರು ವರುಣ್ ರಾವ್ , ಆರೂರು ವಿಕ್ರಂ ರಾವ್ ಹಾಗೂ ಸಂಸ್ಥೆಯ ಜನರಲ್ ಮ್ಯಾನೇಜರ್- ಸೇಲ್ಸ್ ನಿತೀನ್ ಕೃಷ್ಣ, ಜನರಲ್ ಮ್ಯಾನೆಜರ್ ಸರ್ವೀಸ್- ಶಶಿಕುಮಾರ್, ಸೇಲ್ಸ್ ಮ್ಯಾನೇಜರ್ ಹರೀಶ್ ರಾವ್ ಉಪಸ್ಥಿತರಿದ್ದರು. ಬಿಡುಗಡೆಗೊಂಡ ನೂತನ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಕಾರು ಹೊಸ ವಿನ್ಯಾಸದೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳಾದ ಡ್ಯುಯಲ್ ಪ್ಯಾನರೋಮಿಕ್ ಸನ್‌ರೂಫ್, 26.62 ಡ್ಯೂಯಲ್ ಪ್ಯಾನರೋಮಿಕ್ ಡಿಸ್‌ಪ್ಲೇ, ಅಡಾಸ್ ಲೆವೆಲ್ 2 , ವೆಂಟಿಲೇಟೆಡ್ ಸೀಟ್, 17″ ಕ್ರಿಸ್ಟಲ್ ಕಟ್ ಅಲಾಯ್ ವೀಲ್, 8 ಬೋಸ್ ಪ್ರೀಮಿಯಂ ಸ್ಪೀಕರ್, ಐಸ್‌ಕ್ಯೂಬ್ LED ಹೆಡ್‌ಲ್ಯಾಂಪ್ಸ್ ಅಲ್ಲದೆ ಕ್ಲಾವೀಸ್ ಕಾರು 6 ಸೀಟರ್ ಮತ್ತು 7 ಸೀಟರ್‌ ಸೌಲಭ್ಯಗಳನ್ನು ಹೊಂದಿದೆ.ಸಂಸ್ಥೆಯ ಟೀಮ್ ಮ್ಯಾನೇಜರ್ ಡಿಂಪಲ್ ಸಾಲ್ಯಾನ್ ವಾಹನದ ವೈಶಿಷ್ಟ್ಯಗಳನ್ನು ವಿವರಿಸಿದರು. ಕಸ್ಟಮರ್ ಕೇರ್ ಮ್ಯಾನೇಜರ್ ದೀಕ್ಷಾ ಅಂಚನ್‌ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ನೂತನ ಕೀಯಾ ಕ್ಯಾರೆನ್ಸ್ ಕ್ಲಾವೀಸ್ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಅತ್ಯಾಧುನಿಕ ಸೇಫ್ಟಿ ವಿಶೇಷತೆಗಳೊಂದಿಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನಲ್ಲಿ ಲಭ್ಯವಿದೆ.ನೂತನ ವಾಹನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಟೆಸ್ಟ್ ಡ್ರೈವ್‌ಗಾಗಿ ಎ.ಆರ್.ಎಂ ಮೋಟಾರ್ಸ್‌ನ ಮಂಗಳೂರಿನ ಕದ್ರಿ, ಕಣ್ಣೂರು, ಕೂಳೂರು ಹಾಗೂ ಉಡುಪಿ ಮತ್ತು ಕುಶಾಲನಗರ ಶಾಖೆಯನ್ನು ಸಂಪರ್ಕಿಸಬಹುದು. ಗ್ರಾಹಕರ ವಿನಂತಿಯ ಮೇರೆಗೆ ಸಂಸ್ಥೆಯು ಎಲ್ಲಾ ಆದಿತ್ಯವಾರವೂ ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

ಪ್ರಾದೇಶಿಕ ವಾರ್ತೆಗಳು

ಚೆಂಗಳ ಗುತ್ತು ದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ – ಬ್ರಹ್ಮಕಲಶ. ತುಳುನಾಡಿನ ಗುತ್ತು ಮನೆತನಗಳಲ್ಲಿ ಕೌಟುಂಬಿಕ ಏಕತೆ: ಒಡಿಯೂರು ಶ್ರೀ

ಕಾಸರಗೋಡು: ‘ತುಳುನಾಡಿನ ಗುತ್ತು ಬಾಳಿಕೆಗಳು ತಮ್ಮ ಶಿಷ್ಟಾಚಾರವನ್ನು ಮೀರದೆ ಪರಂಪರಾಗತವಾದ ಆಚಾರ ವಿಚಾರಗಳನ್ನು ಗೌರವಿಸುತ್ತಿರುವುದು ಒಂದು ಉತ್ತಮ ಲಕ್ಷಣ. ದೈವಗಳ ಚಾವಡಿ, ನಾಗ ಸಾನಿಧ್ಯ, ತರವಾಡು ಮನೆಗಳನ್ನು ಪುನರ್ ನಿರ್ಮಿಸಿ ತಮ್ಮವರೆಲ್ಲರನ್ನೂ ಒಂದೆಡೆ ಸೇರಿಸಲು ಉಪಕ್ರಮಿಸಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬ ಹರಿದಿನಗಳನ್ನು ಒಂದೇ ಕಡೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿರುವುದು ಕೌಟುಂಬಿಕ ಏಕತೆಯನ್ನು ಬಲಪಡಿಸಿದೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.         ಕಾಸರಗೋಡಿನ ಪಾರಕಟ್ಟೆಯಲ್ಲಿ ಚೆಂಗಳ ಗುತ್ತು ಶ್ರೀ ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.’ಚೆಂಗಳ ಗುತ್ತು ಕುಟುಂಬಕ್ಕೆ ಸೇರಿದ 400ಕ್ಕೂ ಮಿಕ್ಕಿದ ಸದಸ್ಯರು  ಒಟ್ಟುಗೂಡಿ ನಿರ್ಮಿಸಿದ ನೂತನ ತರವಾಡು ಮನೆ ಮತ್ತು ದೈವಾಲಯಗಳು ಅವರ ಶ್ರದ್ಧಾಭಕ್ತಿಯ ಪ್ರತೀಕ’ ಎಂದವರು ನುಡಿದರು.      ಇದೇ ಸಂದರ್ಭದಲ್ಲಿ ಉಮೇಶ್ ಶೆಟ್ಟಿ ಮನ್ನಿಪ್ಪಾಡಿ ಸಂಪಾದಿಸಿದ ‘ ಜೀಟಿಗೆ ‘ ಸ್ಮರಣ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉಳಿಯುತ್ತಾಯ ವಿಷ್ಣು ಆಸ್ರರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ದೈವಾರಾಧನೆ ಕೇವಲ ನಂಬಿಕೆಯಲ್ಲ: ಕುಕ್ಕುವಳ್ಳಿ      ಧಾರ್ಮಿಕ ಸಭೆಯಲ್ಲಿ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಜಾನಪದ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಧಾನ ಭಾಷಣಕಾರರಾಗಿದ್ದರು. ಅವರು ಮಾತನಾಡಿ ‘ತುಳುವರ ಆರಾಧನಾ ಪರಂಪರೆಗಳಲ್ಲಿ ಪ್ರಮುಖವಾದ ದೈವರಾಧನೆ ಕೇವಲ ನಂಬಿಕೆಯಲ್ಲ; ಅದು ಆತ್ಮಾಭಿಮಾನದ ಪ್ರತೀಕ. ನಮಗೆ ದೈವದ ನುಡಿ ಮತ್ತು ಹಿರಿಯರ ಮಾತು ಎರಡೂ ಒಂದೇ. ಕೋರ್ಟು ಕಚೇರಿಗಳ ಬಾಗಿಲನ್ನು ಕಾಣದ ಅದೆಷ್ಟೋ ಸಮಸ್ಯೆಗಳು ದೈವದ ಕೊಡಿಯಡಿಯಲ್ಲಿ ಅಥವಾ ಗುತ್ತು ಮನೆಯ ಚಾವಡಿಯಲ್ಲಿ ಇತ್ಯರ್ಥವಾದ ನಿದರ್ಶನಗಳಿವೆ’ ಎಂದರು. ದೈವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.        ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ. ಶಾನುಭೋಗ್, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ , ನ್ಯಾಯವಾದಿ ಐ.ಸುಬ್ಬಯ್ಯ ರೈ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ., ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ ಶೆಟ್ಟಿ ತುಮಿನಾಡು,ಚೆಂಗಳ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಳಶೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಚೆಂಗಳ ದೊಡ್ಡಬೀಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.         ಶ್ರೀ ವಿಷ್ಣುಮೂರ್ತಿ ಧೂಮಾವತಿ ದೈವಸ್ಥಾನ ನಿರ್ಮಾಣ ಸಮಿತಿ ಕೋಶಾಧಿಕಾರಿ ಕೆ.ಶ್ರೀಶರಾಜ್ ಶೆಟ್ಟಿ ಸ್ವಾಗತಿಸಿದರು. ಶ್ರೀ ವಿಷ್ಣುಮೂರ್ತಿ ಧೂಮಾವತಿ ಸೇವಾ ಟ್ರಸ್ಟ್ ಕಾನೂನು ಸಲಹೆಗಾರ ನ್ಯಾಯವಾದಿ ಕೆ .ಶ್ರೀಕಾಂತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಟ್ರಸ್ಟ್ ಕೋಶಾಧಿಕಾರಿ ಕೆ. ಉಮೇಶ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ವಿಠಲ ಶೆಟ್ಟಿ, ಕೆ.ವಿಶ್ವನಾಥ ಶೆಟ್ಟಿ, ಮಧುಸೂದನ ಶೆಟ್ಟಿ, ಕೆ.ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.*ನಾಟಕ ‘ತನಿಯಜ್ಜೆ’:*   ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ‘ತುಳುವೆರೆ ಉಡಲ್’ಜೋಡುಕಲ್ಲು ಇವರಿಂದ ತುಳು ಜಾನಪದ ನಾಟಕ ‘ತನಿಯಜ್ಜೆ’ ಹಾಗೂ ಚೆಂಗಳ ಗುತ್ತು ಕುಟುಂಬದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

ಪ್ರಾದೇಶಿಕ ವಾರ್ತೆಗಳು

ಅಳಿಕೆ ಯಕ್ಷ ಸಹಾಯ ನಿಧಿಗೆ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆಮೇ 19ರಂದು ಗೃಹ ಸಮ್ಮಾನದೊಂದಿಗೆ ನಿಧಿ ಸಮರ್ಪಣೆ

ಮಂಗಳೂರು: ಯಕ್ಷಗಾನ ಕ್ಷೇತ್ರದ ಚರಿತ್ರ ನಟ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಮೇರು ಕಲಾವಿದ ದಿ|ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2024 – 25 ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅವರನ್ನೊಳಗೊಂಡ ಸಲಹಾ ಸಮಿತಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಸಹಾಯ ನಿಧಿ ನೀಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಪುತ್ರ ಹಾಗೂ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಅವರು ಮೇ 15 ರಂದು ನಗರದ ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್:ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಪ್ರಸ್ತುತ ಬಹುಬೇಡಿಕೆಯ ಕಲಾವಿದರಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು 1965 ದಶಂಬರ 17ರಂದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಜನಿಸಿದರು. ಬಾಬು ಶೆಟ್ಟಿಗಾರ್ ಮತ್ತು ಗಿರಿಜಮ್ಮ ಅವರ ಹೆತ್ತವರು. ಪ್ರಾಥಮಿಕ ಶಿಕ್ಷಣಕ್ಕಷ್ಟೇ ಓದು ನಿಲ್ಲಿಸಿ ತಮ್ಮ 18ನೇ ವಯಸ್ಸಿನಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಅವರು ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾಯರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು. ಬಣ್ಣದ ವೇಷದ ದಂತಕಥೆ ಎನಿಸಿದ್ದ ದಿ| ಬಣ್ಣದ ಮಾಲಿಂಗರಿಂದ ಹಲಬಗೆಯ ಬಣ್ಣದ ವೇಷಗಳ ಪಟ್ಟುಗಳನ್ನು ಅಭ್ಯಸಿಸಿ ಮೇಳದ ತಿರುಗಾಟಕ್ಕೆ ತೊಡಗಿದರು. ಅಗರಿ,ಬಲಿಪ,ಇರಾ, ಪದ್ಯಾಣ ಭಾಗವತರು ಹಾಗೂ ಹಲವು ಹಿರಿಯ ವೇಷಧಾರಿಗಳ ಒಡನಾಟದಲ್ಲಿ ಓರ್ವ ಪರಿಪೂರ್ಣ ಕಲಾವಿದರಾಗಿ ಬೆಳೆದರು. ಸುಮಾರು ನಾಲ್ಕೂವರೆ ದಶಕಗಳ ತಮ್ಮ ಕಲಾಯಾನದಲ್ಲಿ ಸದಾಶಿವ ಶೆಟ್ಟಿಗಾರರು ಕಟೀಲು (10 ವರ್ಷ), ಧರ್ಮಸ್ಥಳ (13 ವ.) ಹೊಸನಗರ (10 ವ.), ಎಡನೀರು (ಒಂದು ವರ್ಷ), ಮೇಳಗಳಲ್ಲಿ ಸಾರ್ಥಕ ಸೇವೆಗೈದು ಪ್ರಸ್ತುತ ಕಳೆದ 8 ವರ್ಷಗಳಿಂದ ಡಾ| ಕೆ.ಶ್ಯಾಮ ಭಟ್ ನೇತೃತ್ವದ ಹನುಮಗಿರಿ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿ ದುಡಿಯುತ್ತಿದ್ದಾರೆ. ಮಹಿಷಾಸುರ, ವರಾಹ, ಶೂರಪದ್ಮ, ರಾವಣ, ಕುಂಭಕರ್ಣ, ಸಿಂಹ, ಗಜೇಂದ್ರ, ಶೂರ್ಪನಖಿ, ಅಜಮುಖಿ, ಪೂತನಿ, ವೃತ್ರಜ್ವಾಲೆ ಮುಂತಾದ ಬಣ್ಣದ ವಿವಿಧ ಭೂಮಿಕೆಗಳಲ್ಲಿ ಅವರು ಜನಮನ ಸೆಳೆದಿದ್ದಾರೆ‌‌. ‘ಶ್ರೀರಾಮ ಕಾರುಣ್ಯ’ ಪ್ರಸಂಗದ ಕಾಕಾಸುರನ ಪಾತ್ರ ಅವರದೇ ಪರಿಕಲ್ಪನೆಯಲ್ಲಿ ವಿಶೇಷ ರೀತಿಯಿಂದ ಅಭಿವ್ಯಕ್ತಗೊಂಡಿದೆ.ಯಕ್ಷಗಾನ ರಂಗದ ಸಾಧನೆಗಾಗಿ ಪೇಜಾವರ ಶ್ರೀ ಪ್ರಶಸ್ತಿ, ಕಟೀಲು ಆಸ್ರಣ್ಣ ಪ್ರಶಸ್ತಿ, ಬಣ್ಣದ ಮಾಲಿಂಗ ಪ್ರಶಸ್ತಿ, ಕೀಲಾರು ಪ್ರಶಸ್ತಿ, ಪೊಳಲಿ ಯಕ್ಷಕಲಾ ಪ್ರಶಸ್ತಿ ಇತ್ಯಾದಿ ಗೌರವ – ಸಮ್ಮಾನಗಳನ್ನು ಶೆಟ್ಟಿಗಾರ್ ಪಡೆದಿದ್ದಾರೆ. ಪ್ರಸ್ತುತ ಪತ್ನಿ ಕಲಾವತಿ, ಮಕ್ಕಳಾದ ದಿಲೀಪ್, ಸಂದೀಪ್ ಮತ್ತು ಕವಿತಾರೊಂದಿಗೆ ಸಿದ್ಧಕಟ್ಟೆಯ ಸ್ವಗೃಹದಲ್ಲಿ ವಾಸವಾಗಿದ್ದಾರೆ. ಗೃಹ ಸನ್ಮಾನ – ನಿಧಿ ಸಮರ್ಪಣೆ:ಟ್ರಸ್ಟ್ ಸಲಹಾ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ 2025 ಮೇ19 ರಂದು ಸೋಮವಾರ ಪ್ರಸ್ತುತ ತೀವ್ರ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಸಿದ್ಧಕಟ್ಟೆಯ ನಿವಾಸಕ್ಕೆ ತೆರಳಿ ಗೃಹ ಸಮ್ಮಾನದೊಂದಿಗೆ ರೂ. 20,000/- ನಿಧಿ ಸಮರ್ಪಣೆ ಮಾಡಲಾಗುವುದು. ಈ ವೇಳೆ ಸಲಹಾ ಸಮಿತಿ ಸದಸ್ಯರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿರುವರು’ ಎಂದು ತಿಳಿಸಿದರು. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸದಸ್ಯರಾದ ಉಮೇಶ್ ಶೆಟ್ಟಿ ಉಬರಡ್ಕ, ಮಹಾಬಲ ರೈ ಬಜನಿ ಗುತ್ತು ಮತ್ತು ಲಕ್ಷ್ಮೀನಾರಾಯಣ ರೈ ಹರೇಕಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

Intercollegiate tech fest INFOVISION 2025 at AIMIT, St Aloysius university

On May 9, 2025, the PG Department of the School of Information Science & Technology at St Aloysius (Deemed to be University), AIMIT Centre, successfully organized its annual intercollegiate tech fest, INFOVISION 2025, under the creative theme “HELLO WORLD”, with the witty tagline: “We’ve been coding since 1950… and still stuck at ‘Hello World’.” The fest served as a vibrant platform for undergraduate students to exhibit their analytical, technical, and cultural talents. A total of 27 teams from various colleges across Karnataka and Kerala enthusiastically participated in the event, making it a day filled with energy, competition, and innovation. The event commenced with an inaugural ceremony that set the tone for the day. The ceremony was graced by distinguished dignitaries including the Chief Guest, Dr. Ronald Nazareth, Registrar of St Aloysius (Deemed to be University); Fr. Dr. Kiran Coth SJ, Director of AIMIT; Dr. Hemalatha N, Dean of the School of Information Science & Technology; along with Ms. Nausheeda B S and Ms. Gana K V, the Staff Coordinators; and Mr. Justin Martin and Ms. Abhiskha Shetty, the Student Coordinators. The day featured six thoughtfully curated events that challenged and celebrated the participants’ skills across various domains. INFOVISION 2025 was a testament to the university’s commitment to fostering innovation, collaboration, and excellence in technology education.

ಪ್ರಾದೇಶಿಕ ವಾರ್ತೆಗಳು

AIMIT ನಲ್ಲಿ ನವೋದ್ಯಮಕ್ಕೆ ನುರಿತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಇಗ್ನೈಟಿಂಗ್ ಇನೋವೇಷನ್: ಎಂಟರ್‌ಪ್ರೈನರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ 2025’

ಎಂಟರ್‌ಪ್ರೈನರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ (EDP) – 2025 ಅನ್ನು ಮೇ 8, 2025ರಂದು ಮಂಗಳೂರುದಲ್ಲಿರುವ ಸೇಂಟ್ ಅಲೋಶಿಯಸ್ (ಅಭ್ಯರ್ಥಿತ ವಿಶ್ವವಿದ್ಯಾಲಯ) ಯೂನಿಟ್‌ನ AIMIT ನಲ್ಲಿ ಶೆಣೈ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (ಎಂ.ಬಿ.ಎ) ವಿಭಾಗದ ವತಿಯಿಂದ ಈ ಪೂರ್ಣದಿನ ಕಾರ್ಯಕ್ರಮವನ್ನು ಬೆಳಗ್ಗೆ 9:00ರಿಂದ ಸಂಜೆ 4:15ರ ವರೆಗೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಲವಾರು ಗಣ್ಯರ ಸಮ್ಮುಖದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಖ್ಯಾತ ಉದ್ಯಮಿ ಮತ್ತು ಜ್ಯೋತಿ ಲ್ಯಾಬ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಉಲ್ಲಾಸ್ ಕಾಮತ್ ಅವರು ಪಾಲ್ಗೊಂಡರು. ಇವರೊಂದಿಗೆ ರೆ। ಫಾ| ಕಿರಣ್ ಕೊತ್ ಎಸ್‌ಜೆ (AIMIT ನಿರ್ದೇಶಕ), ಡಾ. ರಜನಿ ಸುರೇಶ್ (ಅಕಾಡೆಮಿಕ್ಸ್ ಮತ್ತು ಸಂಶೋಧನಾ ಡೀನ್), ಮಿಸ್ ಬೀನಾ ಡಯಸ್ (ವಿಭಾಗದ ಮುಖ್ಯಸ್ಥೆ), ಕಾರ್ಯಕ್ರಮ ಸಂಯೋಜಕ ಡಾ. ಸ್ವಪ್ನಾ ರೋಸ್ ಮತ್ತು ಕಾರ್ಯಕ್ರಮ ಸಹ ಸಂಯೋಜಕರಾದ ಮಿಸ್ ಪ್ರಥ್ವಿ ಪ್ರಕಾಶ್ ಮತ್ತು ಮಿಸ್ ಲವೀನಾ ನೈಟಿಂಗೇಲ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭವನ್ನು ಪರಂಪರೆಯಂತೆ ದೀಪ ಬೆಳಗಿಸುವ ಮೂಲಕ ಮಾಡಲಾಯಿತು. ಬಳಿಕ ಶ್ರೀ ಉಲ್ಲಾಸ್ ಕಾಮತ್ ಅವರು ವಿಶೇಷ ಭಾಷಣ ನೀಡಿದರು. ರೆ. ಫಾ. ಕಿರಣ್ ಕೊತ್ ಎಸ್‌ಜೆ ಅವರು ಅಧ್ಯಕ್ಷೀಯ ಭಾಷಣ ನೀಡಿದರು.ಕಾರ್ಯಕ್ರಮದಲ್ಲಿ ಹಲವು ಮಹತ್ವಪೂರ್ಣ ಭಾಷಣಗಳು ನಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಅನುಭವವಾಯಿತು. ಫೆಡರಲ್ ಬ್ಯಾಂಕ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್‌ ಆಗಿರುವ ಶ್ರೀ ಅಜಯ್ ಕಾಮತ್ ಕೆ. ಅವರು ತಜ್ಞ ಭಾಷಣ ನೀಡಿದರು. ನಂತರ ವಥಿಕಾವ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್‌ನ ಮಾಲಕಿಯಾದ ಮಿಸೆಸ್ ವಥಿಕಾ ಪೈ ಅವರು ಉಪನ್ಯಾಸ ನೀಡಿದರು. ಸಂಗೀತ ಮತ್ತು ಸಾಹಸ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಯುವ ಉದ್ಯಮಿ ಮಾಸ್ಟರ್ ಜಿತೇನ್ ಅರುಣ್ ಅವರು ಪ್ರೇರಣಾದಾಯಕ ಪ್ರಸ್ತುತಿ ನೀಡಿದರು.ಕಾರ್ಯಕ್ರಮದ ಕೊನೆಯ ಅಧಿವೇಶನ ‘ಮೆಂಟೋಪ್ರಿಚ್’ ಎಂದು ಕರೆಯಲ್ಪಟಿದ್ದು, ಓರಾಕಲ್‌ನ ಹಿರಿಯ ವಿಶ್ಲೇಷಕ ಮಿಸೆಸ್ ಶಿಫಾಲಿ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ನಡೆಯಿತು. ಈ ಸೆಷನ್‌ನಲ್ಲಿ AIMITನ ವಿದ್ಯಾರ್ಥಿ ಉದ್ಯಮಿಗಳಿಗೆ ನೇರ ಮಾರ್ಗದರ್ಶನ ನೀಡಲಾಯಿತು.

Scroll to Top