ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೇ 27ರಂದು ನವೀನ್.ಡಿ.ಪಡೀಲ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮೇ 27ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ತುಳು ರಂಗಭೂಮಿ ಹಾಗೂ ಸಿನಿಮಾ ನಟ ನವೀನ್.ಡಿ.ಪಡೀಲ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಚಿತ್ರ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜ್ ನಿಂದ ಪೀಡಿಯಾಕಾನ್-2025

ಬಂಟ್ವಾಳ: ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಅಧೀನದಲ್ಲಿರುವ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-೨೦೨೫ ಪ್ರಾದೇಶಿಕ ಸಮ್ಮೇಳನ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ನಡೆಯಿತು.ಮಕ್ಕಳ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನರ್ಸ್ ಗಳ ಕೌಶಲ್ಯ ವೃದ್ಧಿಯ ದೃಷ್ಟಿಯಿಂದ ಆಯೋಜಿಸಿದ್ದ ಈ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿ ಫಾದರ್ ಮುಲ್ಲರ್ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ಅವರು, ಗರ್ಭಾಶಯದಿಂದ ನವಜಾತ ಶಿಶುವಿನವರೆಗಿನ ಸೂಕ್ಷ್ಮ ಆರೈಕೆಯ ಕುರಿತು ವಿವರಿಸಿದರು.ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿರ್ದೇಶಕ ರೆ|ಫಾ| ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮಕ್ಕಳ ಆರೈಕೆ, ಆರೋಗ್ಯದ ಸಮಯೋಚಿತ ನಿರ್ವಹಣೆ ಅತಿ ಅಗತ್ಯವಾಗಿದೆ ಎಂದರು.ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿಯೋಜಿತ ನಿರ್ದೇಶಕ ರೆ|ಫಾ| ಪಾವೋಸ್ತಿನ್ ಲುಕಾಸ್ ಲೋಬೊ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ಆಯೋಜನಾ ಸಮಿತಿ ಕಾರ್ಯದರ್ಶಿ ಜಾಯ್ಸ್ ಫೆನಾಂಡೀಸ್ ಉಪಸ್ಥಿತರಿದ್ದರು.ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸಿ| ಜೂಡಿ ಸ್ವಾಗತಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ| ಎಡ್ವಿನಾ ಫಿಲಿಪ್ ಮೊನಿಸ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಿನ್ಸಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಾಲೇಜುಗಳ ಒಟ್ಟು ೨೧೧ ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್ ಸಭಾ ಕೂಳೂರು ಘಟಕದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಮಂಗಳೂರು: ಕ್ಯಾಥೊಲಿಕ್ ಸಭಾ ಕೂಳೂರು ಘಟಕವು ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಆಚರಣೆಯ ಶುಭ ಸಂದರ್ಭದಲ್ಲಿ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬವೊಂದಕ್ಕೆ ಬಂಗ್ರ ಕೂಳೂರಿನಲ್ಲಿ ಅವರ ಸ್ವಂತ ಜಾಗದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದು, ಈ ಮನೆಯ ಉದ್ಘಾಟನೆ, ಆಶೀರ್ವಚನ ಹಾಗೂ ಹಸ್ತಾಂತರ ಕಾರ್ಯಕ್ರಮ ಮೇ 25 ರಂದು ಬೆಳಗ್ಗೆ 11 ಗಂಟೆಗೆ ಬಂಗ್ರ ಕುಳೂರಿನಲ್ಲಿ ನೆರವೇರಲಿದೆ.ಆಶೀರ್ವಚನ ಮತ್ತು ಉದ್ಘಾಟನೆಯನ್ನು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ನೆರವೇರಿಸಲಿದ್ದು, ಅಧ್ಯಕ್ಷತೆಯನನ್ರು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಕುಳೂರು ಸಂತ ಅಂತೋನಿ ಚರ್ಚ್ ನ ಧರ್ಮಗುರು ವಂದನೀಯ ವಿಕ್ಟರ್‌ ವಿಜಯ್‌ ಲೋಬೋ ಅವರು ವಹಿಸಲಿದ್ದಾರೆ. ಎಪಿಸ್ಕೋಪಲ್‌ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಜಾನ್‌ ವಾಸ್‌, ದಾಯ್ಜಿ ವರ್ಲ್ಡ್ ಮೀಡಿಯಾ ಸಂಸ್ಥೆಯ ಸ್ಥಾಪಕ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್‌ ಲೋಬೊ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್‌ ಡಿ’ಸೋಜಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸ್ಟಾನ್ಲಿ ಲೈಫ್‌ಸ್ಟೈಲ್ಸ್ ವಿಶಿಷ್ಟ ಹೈಬ್ರಿಡ್ ಪರಿಕಲ್ಪನೆಯನ್ನು ಹೊಂದಿರುವ ಮೊದಲ ಶೋರೂಮ್ ಅನ್ನು VK ಗ್ರೂಪ್ ಜೊತೆಗೆ ಪಾಲುದಾರಿಕೆಯಲ್ಲಿ ಅನಾವರಣಗೊಳಿಸಿದೆ: ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟು

ಮಂಗಳೂರು, ಮೇ 2025: ಭಾರತದ ಪ್ರಮುಖ ಐಷಾರಾಮಿ ಪೀಠೋಪಕರಣಗಳು ಮತ್ತು ಗೃಹಾಲಂಕಾರ ಬ್ರಾಂಡ್ ಆದ ಸ್ಟಾನ್ಲಿ ಲೈಫ್‌ಸ್ಟೈಲ್ಸ್, ಮಂಗಳೂರಿನಲ್ಲಿ ತನ್ನ ಮೊದಲ ಅಂಗಡಿಯನ್ನು *VK ಗ್ರೂಪ್ ಜೊತೆಗೆ ಪಾಲುದಾರಿಕೆಯಲ್ಲಿ ತೆರೆಯುವುದಾಗಿ* ಘೋಷಿಸಲು ಉತ್ಸುಕವಾಗಿದೆ. ಈ ಹೈಬ್ರಿಡ್ ಅಂಗಡಿಯು ಡಿ.ನಂ. 3-9-51, ಶರ್ಬತ್‌ಕಟ್ಟೆ, ಯೆಯ್ಯಾಡಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಲ್ಲಿರುವ ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟುಗಳ ಸಂಸ್ಕರಿಸಿದ ಸೊಬಗನ್ನು ಸಂಯೋಜಿಸುತ್ತದೆ. ಹೊಸ ಅಂಗಡಿಯು ಮಂಗಳೂರಿನ ವಿವೇಚನಾಶೀಲ ಮನೆಮಾಲೀಕರಿಗೆ ವಿಶಿಷ್ಟವಾದ, ಎಲ್ಲವನ್ನೂ ಒಳಗೊಳ್ಳುವ ಪೀಠೋಪಕರಣಗಳ ಶಾಪಿಂಗ್ ಅನುಭವವನ್ನು ನೀಡುತ್ತದೆ.ಹೈಬ್ರಿಡ್ ಅಂಗಡಿ ಪರಿಕಲ್ಪನೆಯು ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟುಗಳನ್ನು ಒಂದೇ ಸೂರಿನಡಿ ಒಂದುಗೂಡಿಸುತ್ತದೆ, ಮೌಲ್ಯ-ಪ್ರೀಮಿಯಂ ಮತ್ತು ಸೂಪರ್-ಪ್ರೀಮಿಯಂ ವಿಭಾಗಗಳಿಗೆ ಸೂಕ್ತವಾದ ಅನುಭವವನ್ನು ನೀಡುತ್ತದೆ. ಅಸಾಧಾರಣ ಶಾಪಿಂಗ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಈ ಅಂಗಡಿಯು ಮಂಗಳೂರಿನ ಮಹತ್ವಾಕಾಂಕ್ಷೆಯ ಮನೆಮಾಲೀಕರ ವಿಕಸಿಸುತ್ತಿರುವ ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸೋಫಾಗಳು, ರೆಕ್ಲೈನರ್‌ಗಳು, ಹಾಸಿಗೆಗಳು, ಹಾಸಿಗೆಗಳು, ಊಟದ ಟೇಬಲ್‌ಗಳು, ಆರ್ಮ್‌ಚೇರ್‌ಗಳು ಮತ್ತು ಪರಿಕರಗಳ ಸಂಗ್ರಹಿಸಲಾದ ಸಂಗ್ರಹವನ್ನು ಪ್ರದರ್ಶಿಸುತ್ತದೆ. ಸ್ಟಾನ್ಲಿ ಲೈಫ್‌ಸ್ಟೈಲ್ಸ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುನಿಲ್ ಸುರೇಶ್ ಅವರು ಹೀಗೆ ಹೇಳಿದರು: “ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅದರ ಪ್ರಮುಖ ಪಾತ್ರಕ್ಕೆ ಹೆಸರುವಾಸಿಯಾದ ಮಂಗಳೂರಿನೊಂದಿಗಿನ ನಮ್ಮ ಸಂಪರ್ಕವನ್ನು ಗಾಢವಾಗಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಹೊಸ ಅಂಗಡಿಯು ಐಷಾರಾಮಿ ಜೀವನವನ್ನು ಮರು ವ್ಯಾಖ್ಯಾನಿಸುವ ಮತ್ತು ಪ್ರೀಮಿಯಂ ಪೀಠೋಪಕರಣ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಮ್ಮ ಬದ್ಧತೆಯನ್ನು ಸಂಕೇತಿಸುತ್ತದೆ. ಮಧ್ಯಮ-ಪ್ರೀಮಿಯಂ ಮತ್ತು ಉನ್ನತ-ಮಟ್ಟದ ಪೀಠೋಪಕರಣ ವರ್ಗಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೊಗಸಾದ, ಕ್ರಿಯಾತ್ಮಕ ಮತ್ತು ಕಾಲಾತೀತ ವಿನ್ಯಾಸಗಳನ್ನು ನೀಡಲು ಸ್ಟಾನ್ಲಿ ಲೈಫ್‌ಸ್ಟೈಲ್ಸ್ ಹೆಮ್ಮೆಪಡುತ್ತದೆ.”ಸ್ಟಾನ್ಲಿ ಲೈಫ್‌ಸ್ಟೈಲ್ಸ್ ಅತ್ಯಾಧುನಿಕ ಸೌಂದರ್ಯವನ್ನು ಉನ್ನತ ಕರಕುಶಲತೆಯೊಂದಿಗೆ ಸಂಯೋಜಿಸುವ ತಲ್ಲೀನಗೊಳಿಸುವ ವಿನ್ಯಾಸ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ಪ್ರತಿಯೊಂದು ಉತ್ಪನ್ನವು ಗುಣಮಟ್ಟ ಮತ್ತು ನಾವೀನ್ಯತೆಗೆ ಬ್ರ್ಯಾಂಡ್‌ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ, ಇದು ಉನ್ನತ ದರ್ಜೆಯ ಆಮದು ಮಾಡಿದ ನಿಜವಾದ ಚರ್ಮ ಮತ್ತು ಬೆಸ್ಪೋಕ್ ಗ್ರಾಹಕೀಕರಣ ಆಯ್ಕೆಗಳನ್ನು ಒಳಗೊಂಡಿದೆ. ಗ್ರಾಹಕರು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ವಾಸಸ್ಥಳಗಳನ್ನು ಸಮಯಾತೀತ ಆಕರ್ಷಣೆಯೊಂದಿಗೆ ಕ್ರಿಯಾತ್ಮಕತೆಯನ್ನು ಸಂಯೋಜಿಸುತ್ತದೆ.ವಿಕೆ ಗ್ರೂಪ್‌ನ ಮಾಲೀಕರು ಮತ್ತು ಮಂಗಳೂರು ಅಂಗಡಿಯ ಪಾಲುದಾರರಾದ ಶ್ರೀ ವಿಠಲ್ ಕುಲಾಲ್ ಕೊಣಾಜೆ ಅವರು ಹಂಚಿಕೊಂಡಿದ್ದಾರೆ: “ವಿಶ್ವ ದರ್ಜೆಯ ಪೀಠೋಪಕರಣಗಳು ಮತ್ತು ಮನೆ ಪರಿಹಾರಗಳನ್ನು ವಿಶಾಲ ಪ್ರೇಕ್ಷಕರಿಗೆ ತಲುಪಿಸುವ ಸ್ಟಾನ್ಲಿ ಲೈಫ್‌ಸ್ಟೈಲ್‌ನ ದೃಷ್ಟಿಕೋನಕ್ಕೆ ಮಂಗಳೂರಿನ ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಸಾಮರ್ಥ್ಯವು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಸ್ಟಾನ್ಲಿ ಲೈಫ್‌ಸ್ಟೈಲ್‌ನ ಉಪಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ ಅವರ ಜೀವನಶೈಲಿಗೆ ಪೂರಕವಾದ ಪೀಠೋಪಕರಣಗಳನ್ನು ಬಯಸುವ ಗ್ರಾಹಕರನ್ನು ತಲುಪಲು ಈ ಅಂಗಡಿಯು ನಮಗೆ ಸಹಾಯ ಮಾಡುತ್ತದೆ.27 ವರ್ಷಗಳ ಪರಂಪರೆಯೊಂದಿಗೆ, ಅಂತರರಾಷ್ಟ್ರೀಯ ದೈತ್ಯರೊಂದಿಗೆ ಸ್ಪರ್ಧಿಸುತ್ತಾ, ಭಾರತದ ಮೊದಲ ಸ್ವದೇಶಿ ಐಷಾರಾಮಿ ಪೀಠೋಪಕರಣ ಬ್ರಾಂಡ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಬೆಂಗಳೂರಿನಲ್ಲಿ ಬ್ರ್ಯಾಂಡ್‌ನ ಲಂಬವಾಗಿ ಸಂಯೋಜಿತ ಉತ್ಪಾದನಾ ಸೌಲಭ್ಯಗಳು ಜರ್ಮನ್ ನಿಖರತೆ, ಫ್ರೆಂಚ್ ಕರಕುಶಲತೆ ಮತ್ತು ಇಟಾಲಿಯನ್ ವಿನ್ಯಾಸದ ಪ್ರಭಾವದೊಂದಿಗೆ ವಿವರಗಳಿಗೆ ಗಮನವನ್ನು ಖಚಿತಪಡಿಸುತ್ತವೆ. ಗ್ರಾಹಕೀಕರಣ ಮತ್ತು ನಾವೀನ್ಯತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಸ್ಟಾನ್ಲಿ ಐಷಾರಾಮಿ ಜೀವನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರೆಸಿದೆ.ಸ್ಟಾನ್ಲಿ ಬಗ್ಗೆ:1999 ರಲ್ಲಿ ಸ್ಥಾಪನೆಯಾದ ಸ್ಟಾನ್ಲಿ ಭಾರತದ ಮೊದಲ ಸ್ವದೇಶಿ ಐಷಾರಾಮಿ ಪೀಠೋಪಕರಣ ಬ್ರಾಂಡ್ ಆಗಿದ್ದು, ಅದರ ದೋಷರಹಿತ ಕರಕುಶಲತೆ ಮತ್ತು ಕಸ್ಟಮೈಸ್ ಮಾಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. ಮೂರು ವಿಭಿನ್ನ ಸ್ವರೂಪಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ – ಸ್ಟಾನ್ಲಿ ಲೆವೆಲ್ ನೆಕ್ಸ್ಟ್, ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಮೋರ್ – ಬೆಂಗಳೂರಿನಲ್ಲಿರುವ ಬ್ರ್ಯಾಂಡ್‌ನ ಲಂಬವಾಗಿ ಸಂಯೋಜಿತ ಉತ್ಪಾದನಾ ಸೌಲಭ್ಯಗಳು ಹೆಚ್ಚಿನವುಗಳಿಂದ ಚಾಲಿತವಾಗಿವೆ 1,500 ನುರಿತ ಕುಶಲಕರ್ಮಿಗಳು.ಆರಂಭದಿಂದಲೂ, ಸ್ಟಾನ್ಲಿ ಲೈಫ್‌ಸ್ಟೈಲ್ಸ್ ಭಾರತದಲ್ಲಿ ಐಷಾರಾಮಿ ಪೀಠೋಪಕರಣ ವಿಭಾಗಕ್ಕೆ ಪ್ರವರ್ತಕವಾಗಿದೆ, ಸಾಂಪ್ರದಾಯಿಕ ಕರಕುಶಲತೆಯನ್ನು ನವೀನ ವಿನ್ಯಾಸದೊಂದಿಗೆ ಸರಾಗವಾಗಿ ಬೆರೆಸುವ ಉತ್ಪನ್ನಗಳನ್ನು ನೀಡುತ್ತದೆ. 24+ ನಗರಗಳಲ್ಲಿ 70 ಕ್ಕೂ ಹೆಚ್ಚು ಮಳಿಗೆಗಳ ದೃಢವಾದ ಉಪಸ್ಥಿತಿಯೊಂದಿಗೆ, ಸ್ಟಾನ್ಲಿ ಐಷಾರಾಮಿ ಮನೆ ಪರಿಹಾರಗಳಲ್ಲಿ ಟ್ರೇಲ್‌ಬ್ಲೇಜರ್ ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಈ ಹೊಸ ಉಡಾವಣೆಯು ಬ್ರ್ಯಾಂಡ್‌ನ ನಾಯಕತ್ವ ಮತ್ತು ಆಧುನಿಕ ಮನೆಮಾಲೀಕರ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳನ್ನು ಪೂರೈಸುವ ಅದರ ಅಚಲ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.ಗುಣಮಟ್ಟ, ಗ್ರಾಹಕೀಕರಣ ಮತ್ತು ವಿನ್ಯಾಸ ನಾವೀನ್ಯತೆಗೆ ಸ್ಟಾನ್ಲಿಯ ಸಮರ್ಪಣೆಯು ಐಷಾರಾಮಿ ಪೀಠೋಪಕರಣ ಉದ್ಯಮದಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜಾಗತಿಕ ದೈತ್ಯರೊಂದಿಗೆ ಸ್ಪರ್ಧಿಸುವಾಗ, ಸ್ಟಾನ್ಲಿ ತನ್ನ ಭಾರತೀಯ ಬೇರುಗಳಿಗೆ ನಿಜವಾಗಿ ಉಳಿಯುವಲ್ಲಿ ದೃಢವಾಗಿದೆ.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್ ಸಭಾ ಕೂಳೂರು ಘಟಕದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಮಂಗಳೂರು: ಕ್ಯಾಥೊಲಿಕ್ ಸಭಾ ಕೂಳೂರು ಘಟಕವು ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಆಚರಣೆಯ ಶುಭ ಸಂದರ್ಭದಲ್ಲಿ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬವೊಂದಕ್ಕೆ ಬಂಗ್ರ ಕೂಳೂರಿನಲ್ಲಿ ಅವರ ಸ್ವಂತ ಜಾಗದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದು, ಈ ಮನೆಯ ಉದ್ಘಾಟನೆ, ಆಶೀರ್ವಚನ ಹಾಗೂ ಹಸ್ತಾಂತರ ಕಾರ್ಯಕ್ರಮ ಮೇ 25 ರಂದು ಬೆಳಗ್ಗೆ 11 ಗಂಟೆಗೆ ಬಂಗ್ರ ಕುಳೂರಿನಲ್ಲಿ ನೆರವೇರಲಿದೆ.ಆಶೀರ್ವಚನ ಮತ್ತು ಉದ್ಘಾಟನೆಯನ್ನು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ನೆರವೇರಿಸಲಿದ್ದು, ಅಧ್ಯಕ್ಷತೆಯನನ್ರು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಕುಳೂರು ಸಂತ ಅಂತೋನಿ ಚರ್ಚ್ ನ ಧರ್ಮಗುರು ವಂದನೀಯ ವಿಕ್ಟರ್‌ ವಿಜಯ್‌ ಲೋಬೋ ಅವರು ವಹಿಸಲಿದ್ದಾರೆ. ಎಪಿಸ್ಕೋಪಲ್‌ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಜಾನ್‌ ವಾಸ್‌, ದಾಯ್ಜಿ ವರ್ಲ್ಡ್ ಮೀಡಿಯಾ ಸಂಸ್ಥೆಯ ಸ್ಥಾಪಕ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್‌ ಲೋಬೊ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್‌ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್‌ ಡಿ’ಸೋಜಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ

ಮಂಗಳೂರು: ಶೈಕ್ಷಣಿಕ ಪದವಿ ಪಡೆಯುವುದು ಒಂದು ಸ್ಮರಣೀಯ ಸಂದರ್ಭ. ಅದು ನಮ್ಮ ಜೀವನದ ಪ್ರಯಾಣದ ಒಂದು ಭಾಗ. ನಮ್ಮ ಯಶಸ್ಸನ್ನು ಸಂಭ್ರಮಿಸಬೇಕು ಜತೆಗೆ ನಮ್ಮ ವೃತ್ತಿ ಜೀವನ ಪಯಣ ಮುಂದುವರಿಸಬೇಕು ಎಂದು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ ಹೇಳಿದರು.ಅವರು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಜರಗಿದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 129 ಪದವೀದರರಿಗೆ ಮತ್ತು 26 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರದಾನ ಮಾಡಿ ಘಟಕೋತ್ಸವ ಭಾಷಣ ಮಾಡಿದರು. ನೂತನ ಪದವಿದರರು ತೆಗೆದುಕೊಂಡ ಪ್ರತಿಜ್ಞೆಗೆ ಬದ್ಧವಾಗಿ, ಪ್ರಾಮಾಣಿಕತೆಯಿಂದ, ಶ್ರದ್ಧೆ, ಶ್ರಮ, ಕರ್ತವ್ಯ ನಿಷ್ಟೆಯಿಂದ ವೃತ್ತಿ ಜೀವನ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದೆಂದು ಸಲಹೆ ನೀಡಿದರು. ಕಣಚೂರು ಇಸ್ಲಾಮಿಕ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ ಯು.ಕೆ. ಮೋನು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್ ಅವರು ಪಾಲ್ಗೊಂಡು ಸಂದೋರ್ಬಿಜಿತವಾಗಿ ಮಾತನಾಡಿದರು.ಕಾಲೇಜಿನ ಪ್ರಿನ್ಸಿಪಾಲ್ ಡಾ. ಶಹನವಾಜ್ ಮನಿಪಾಡಿಯವರು ನೂತನ ಪದವಿದದರಿಗೆ ಪ್ರತಿಜ್ಞಾ ವಿಧಿವಿಧಾನವನ್ನು ನೆರವೇರಿಸಿ ಯುಶಸ್ಸು ಹಾರೈಸಿದರು.ಈ ಸಂದರ್ಭದಲ್ಲಿ ಸ್ನಾತಕೋತ್ತರ ಮೂಳೆ ಶಾಸ್ತç ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಡಾ. ಚೇತನ್ ಕುಮಾರ್ ಅವರ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಯೋಜಿಸಿದ ಅಂತಿಮ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಮತ್ತು ರ‍್ಯಾಂಕ್ ಪಡೆದ ಡಾ. ಅಯಿಮಾನ್ ಫೈಜಾ ಫಾತಿಮಾ ಅವರಿಗೆ ಕಣಚೂರು ಮೋನು ಸ್ವರ್ಣ ಪದಕ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು.ಈ ಸಂದರ್ಭ ನಿರ್ದೇಶಕರಾದ ಝೊಹಾರ ಮೋನು, ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿಯ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್, ಸದಸ್ಯ ಡಾ. ವೆಂಕಟ್‌ರಾAiÀi ಪ್ರಭು, ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್, ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು. ನಿಶ್ಚಿತಾ ಸಾಲಿನ್ಸ್ ಮತ್ತು ಪ್ರೀವಲ್ ಶ್ರೇಯಾ ಕ್ರಾಸ್ತ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಶಹನವಾಜ್ ಮನಿಪಾಡಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ -ಬದ್ರುದ್ಧೀನ್ *ಪ.ಗೋ ಪ್ರಶಸ್ತಿ ವಿತರಣೆ

ಮಂಗಳೂರು,ಮೇ.24: ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ಧೀನ್ ಮಾಣಿ ತಿಳಿಸಿದ್ದಾರೆ.ಅವರು ಪತ್ರಿಕಾ ಭವನದಲ್ಲಿ ಶನಿವಾರ 2024ನೆ ಸಾಲಿನ ಪ.ಗೋ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜಯವಾಣಿ ಹಿರಿಯ ಉಪಸಂಪಾದಕ ರಾಜೇಶ್ ಶೆಟ್ಟಿ ದೋಟ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾಲ ಕಳೆದಂತೆ ಪತ್ರಿಕೋದ್ಯಮದ ಸವಾಲುಗಳು ಭಿನ್ನವಾಗುತ್ತಾ ಸಾಗಿದೆ.ಈಗ ತಂತ್ರಜ್ಞಾನ ಬೆಳೆದಿದೆ ಎಂದರು.ಪದ್ಯಾಣ ಗೋಪಾಲಕೃಷ್ಣರಂತಹ ಹಿರಿಯ ಪತ್ರಕರ್ತರನ್ನು ನೆನಪಿಸಿಕೊಳ್ಳುವುದು ತುಂಬಾ ಅಗತ್ಯ ಕಿರಿಯ ಪತ್ರಕರ್ತರಿಗೆ ಅವರು ನಿಜವಾದ ಮಾರ್ಗದರ್ಶಕರು ಎಂದು ಪರಿಗಣಿಸ ಬೇಕಾಗಿದೆ. ಆಡಳಿತದಲ್ಲಿ ಪಾರದರ್ಶಕವಾಗಿರಬೇಕು.ಭೃಷ್ಟಾಚಾರ ಮುಕ್ತವಾಗಿರಬೇಕು ಎನ್ನುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದಿದೆ.ಇಂತಹ ಕಾಯ್ದೆ ದುರ್ಬಳಕೆ ಆಗಬಾರದು,ಮಾಹಿತಿ ಹಕ್ಕು ಕಾಯಿದೆ ಪತ್ರಕರ್ತರಿಗೆ ಸಾರ್ವಜನಿಕರಿಗೆ ಒಂದು ಅಸ್ತ್ರ. ಜನರಿಗೆ ನೆರವಾಗಲು ಮಾಹಿತಿ ಹಕ್ಕು ಕಾಯಿದೆ ಒಂದು ವರದಾನ ಈ ನಿಟ್ಟಿನಲ್ಲಿ ಮಾಧ್ಯಮ ಗಳ ಸಹಕಾರ ಅಗತ್ಯ ಎಂದರು.ಪ.ಗೋ ಪ್ರಶಸ್ತಿ ಪಡೆದ ರಾಜೇಶ್ ಶೆಟ್ಟಿ ದೋಟ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಾನು ಕಂಡ ಸಮಸ್ಯೆಯ ಬಗ್ಗೆ ವರದಿ ಮಾಡಿದೆ.ಅದರಿಂದ ಅಲ್ಲಿನ ಜನರಿಗೆ ದಾರಿ ನಿರ್ಮಾಣವಾಗಲು ಸಾಧ್ಯವಾಯಿತು ಅದು ನನಗೆ ತೃಪ್ತಿ ತಂದಿದೆ ಎಂದರು.ಮೊರಂಟೆ ಬೈಲು ಪ್ರದೇಶದ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ಪ್ರಶಸ್ತಿಯ ಮೊತ್ತ 10 ಸಾವಿರ ನೀಡಲಾಗುತ್ತಿದ್ದು, ಎದುಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಮೋಹದಾಸ್ ಮಾರಕಡ ಅವರಿಗೆ ಹಸ್ತಾಂತರಿಸಿದರು.ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಸಿಬ್ಬಂದಿ ವಿಶ್ವ ನಾಥ ಜೋಗಿಯ ವರನ್ನು ವೃತ್ತಿ ನಿವೃತ್ತಿಯ ಹಿನ್ನೆಲೆಯಲ್ಲಿ ಗೌರವಿಸಲಾಯಿತು.ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ,ಮಂಗಳೂರು ಸ್ಮಾರ್ಟ್ ಸಿಟಿ ಮಹಾ ಪ್ರಭಂದಕ ಅರುಣ್ ಪ್ರಭ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪರಾಜ್ ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ, ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕಾರ್ಯದರ್ಶಿವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಕುತ್ಲೂರು ಶಾಲಾ ಮಕ್ಕಳಿಗೆ ನೋಟ್ ಬುಕ್, ಕಲಿಕಾ ಸಾಮಾಗ್ರಿ ವಿತರಣೆ

ಮಂಗಳೂರು, ಮೇ.23;ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗ ದೊಂದಿಗೆ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಕುತ್ಲುರು ಸರಕಾರಿ ಶಾಲಾ ಮಕ್ಕಳಿಗೆ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ನ ಸಿಎಸ್ ಆರ್ ನಿಧಿಯಿಂದ ನೋಟ್ ಬುಕ್, ಕಲಿಕಾ ಸಾಮಾಗ್ರಿ ವಿತರಣಾ ಹಾಗೂ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಗರದ ಪತ್ರಿಕಾ ಭವನಸಲ್ಲಿ ಶುಕ್ರವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಜೇಂದ್ರ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಸ್ತಾಂತರ ಮಾಡಿ ಮಾತನಾಡುತ್ತಾ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ವಾತವರಣ, ಪ್ರೋತ್ಸಾಹ ಅಗತ್ಯ ಈ ನಿಟ್ಟಿನಲ್ಲಿ ಕುತ್ಲೂರು ಶಾಲೆಯ ಅಭಿವೃದ್ಧಿಗೆ ನಡೆಯುತ್ತಿರುವ ಸಾಮೂಹಿಕ ಪ್ರಯತ್ನ ಶ್ಲಾಘನೀಯ ಎಂದರು.ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಂಡ್ ಸೆಟ್ ಹಾಗೂ ಕಲಿಕಾ ಸಾಮಾಗ್ರಿ ವಿತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜಲಕ್ಷ್ಮಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ತೋಟ ನಿರ್ಮಿಸಿ ಅದರ ಆದಾಯದಿಂದ ಶಾಲೆಗೆ ವಾಹನ ಖರೀದಿಸಿ ಸಾಕಷ್ಟು ಅಭಿವೃದ್ಧಿ ಆದ ಶಾಲೆಗಳ ಸಾಲಿನಲ್ಲಿ ಕುತ್ಲೂರು ಶಾಲೆಯೂ ಸೇರ್ಪಡೆಯಾಗಿದೆ.ಇದರಿಂದ ಶಿಕ್ಷಣದ ಗುಣಮಟ್ಟದಲ್ಲೂ ಉನ್ನತಿಯಾಗಲು ಸಾಧ್ಯವಾಗಿದೆ. ಕುತ್ಲೂರು ಶಾಲೆಯ ಅಭಿವೃದ್ಧಿ ಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಸಮುದಾಯ ಸಂಘ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸೈಟ್ ಡೈರೆಕ್ಟರ್ ಶ್ರೀನಿವಾಸ್ ಪ್ರಾಣೇಶ್ ಮಾತನಾಡುತ್ತಾ, ಸಂಸ್ಥೆ ಈ ಹಿಂದೆಯೂ ಸ್ಥಳೀಯ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿ ವೇತನದ ಮೂಲಕ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಬಾರಿ ಕುತ್ಲೂರು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಾಗ್ರಿ ಒದಗಿಸಲು ಸಾಧ್ಯ ವಾಗಿರುವುದು ಸಂತಸ ತಂದಿದೆ ಎಂದರು.ಕುತ್ಲೂರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಶಾಲಾ ಅಭಿವೃದ್ಧಿ ಯಲ್ಲಿ ಕೊಡುಗೆ ನೀಡಿದ ಸಂಘ ಸಂಸ್ಥೆಗಳು, ಪತ್ರಕರ್ತರ ಸಂಘದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆವಹಿಸಿದ್ದರು.ಸಮಾರಂಭದಲ್ಲಿ ಬಿಎಎಸ್ ಎಫ್ ಎಚ್ ಆರ್ ವಿಭಾಗದ ಮುಖ್ಯಸ್ಥ ಸಂತೋಷ್ ಪೈ, ಮತ್ತು ಮೈಕಲ್ ಡಿ ಸೋಜ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು . ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕುತ್ಲುರು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಾಕ್ಸ್ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೀಡಲಾಗುವ ದತ್ತಿನಿಧಿ ಪ್ರಶಸ್ತಿ ಮೊತ್ತ 10 ಸಾವಿರ ರೂಪಾಯಿ ಯನ್ನು ಕುತ್ಲುರು ಸರಕಾರಿ ಶಾಲೆಯ ಬ್ಯಾಂಡ್ ಸೆಟ್ ಸಮವಸ್ತ್ರಕ್ಕೆ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜ್ ನ ವತಿಯಿಂದ ಪೀಡಿಯಾಕಾನ್ -2025 ಪ್ರಾದೇಶಿಕ ಸಮ್ಮೇಳನ

ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಎಂಬ ಪ್ರಾದೇಶಿಕ ಸಮ್ಮೇಳನ ಮೇ 24ರಂದು ಬೆಳಗ್ಗೆ 9ರಿಂದ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಮಕ್ಕಳ ಆರೋಗ್ಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ನರ್ಸ್ ಗಳ ಕೌಶಲ್ಯವೃದ್ಧಿಗೆ ಈ ಸಮ್ಮೇಳನ ಪೂರಕವಾಗಲಿದೆ ಎಂದು ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನಿರ್ದೇಶಕ ರೇ|ಫಾ| ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.ಅವರು ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಸಮ್ಮೇಳನದ ಆಮಂತ್ರಣ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಜತೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ನಿರ್ವಹಣೆ, ನವಜಾತ ಶಿಶುಗಳ ಆರೈಕೆ ಮೊದಲಾದ ವಿಚಾರದಲ್ಲಿ ನರ್ಸ್ಗಳ ವೃತ್ತಿಪರತೆಯನ್ನು ಹೆಚ್ಚಿಸಲು ಉಪನ್ಯಾಸ ನೀಡಲಿದ್ದಾರೆ ಎಂದರು.ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಅವರು ಪ್ರಸ್ತಾವನೆಗೈದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸಿ| ಜೂಡಿ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ, ಕಾರ್ಯದರ್ಶಿ ಜಾಯ್ಸ್ ಫೆನಾಂಡೀಸ್, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ: ಸೇಕ್ರೆಡ್ ಹಾರ್ಟ್ ವಾರ್ಡಿನ ಸದಸ್ಯರಿಂದ ಪುಣ್ಯ ಕ್ಷೇತ್ರ ಭೇಟಿ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಸೇಕ್ರೆಡ್ ಹಾರ್ಟ್ ವಾರ್ಡಿನ ಸದಸ್ಯರು ಪುಣ್ಯ ಕ್ಷೇತ್ರ ಭೇಟಿಯ ಅಂಗವಾಗಿ ಉಡುಪಿಯ ಪೆರಂಪಳ್ಳಿ, ಕಲ್ಮಾಡಿ, ಉದ್ಯಾವರ ಮತ್ತಿತರ ಚರ್ಚ್ ಗಳಿಗೆ ಭೇಟಿ ನೀಡಿದರು.ವಾರ್ಡಿನ ಮುಖ್ಯಸ್ಥರಾದ ಮೊಲಿ ರೊಡ್ರಿಗಸ್, ಪ್ರತಿನಿಧಿಗಳಾದ ಬ್ಯಾಪ್ಟಿಸ್ಟ್ ಡಿ ಕುನ್ಹಾ, ಅನಿಲ್ ಮಸ್ಕರೇನ್ಹಸ್, ರಿಚಾರ್ಡ್ ಮಾರ್ಟಿಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ವಾರ್ಡಿನ ಸದಸ್ಯರು ಭಾಗವಹಿಸಿದ್ದರು. ಪುಣ್ಯ ಕ್ಷೇತ್ರ ಭೇಟಿಯ ಜತೆಗೆ ಸಮುದ್ರ ತೀರಕ್ಕೂ ಭೇಟಿ ಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿದರು. ಇದೇ ವೇಳೆ ತಮ್ಮ ವಾರ್ಡಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮುಂದಿನ ಯೋಜನೆಗಳ ರೂಪು ರೇಷೆಗಳ ಬಗೆಗೂ ಸಮಾಲೋಚನೆ ನಡೆಸಿದರು.

Scroll to Top