ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ
ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ. ನವದೆಹಲಿ- ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ ಆಯ್ಕೆಯಾಗಿದ್ದಾರೆ
ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ. ನವದೆಹಲಿ- ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ ಆಯ್ಕೆಯಾಗಿದ್ದಾರೆ
ಮಂಗಳೂರು: ನಮ್ಮ ಜಿಲ್ಲೆ ಸೌಹಾರ್ದತೆಗೆ ಹೆಸರಾಗಿದೆ .ಆದರೆ, ಇತ್ತೀಚಿನ ದಿನಗಳಲ್ಲಿ ಹೆಸರು ಕೆಡುತ್ತಿದ್ದು ಜಾತೀಯತೆ ಎನ್ನುವುದು ಕೇವಲ ಬಾಯಲ್ಲಿ ಇರಬಾರದು .ಅದು ಹುಟ್ಟುವಾಗಲೇ ಬರಬೇಕು .ಸೌಹಾರ್ದ ಸಂಗಮ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ಜನರನ್ನು ತಲುಪಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರವರು ಹೇಳಿದರುಅವರು ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು, ವರ್ತಮಾನ ಕಾಲದಲ್ಲಿ ಇಡೀ ಜಗತ್ತಿಗೆ ಸೌಹಾರ್ದತೆಯ ಅಗತ್ಯವಿದೆ. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಹದಗೆಡುತ್ತಿರುವ ಇಂದಿನ ದಿನದಲ್ಲಿ ಸಾಮರಸ್ಯ ನಮ್ಮ ನಡುವಿನ ಸೇತುವೆಯಾಗಬೇಕು .ಈ ನಿಟ್ಟಿನಲ್ಲಿ ಸೌಹಾರ್ದ ಸಂಗಮ ವಿಶೇಷ ಕಾರ್ಯಕ್ರಮವಾಗಿ ನಮ್ಮೆದುರಿಗೆ ಇದೆ ಎಂದರು. ಇಡೀ ದೇಶದಲ್ಲಿ ಅಭಿವೃದ್ಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ ಹಿರಿಯರಾದ ಶ್ರೀನಿವಾಸ್ ಮಲ್ಯ ಸೇರಿದಂತೆ ಅನೇಕ ಗಣ್ಯರು ಈ ಜಿಲ್ಲೆಯನ್ನು ಮುನ್ನಲೆಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ,ಇಂದು ಸೌಹಾರ್ದತೆಯಲ್ಲಿ ಈ ಜಿಲ್ಲೆಯಲ್ಲಿ ಕೊರತೆ ಇದೆ .ನಮ್ಮ ನಡುವೆ ಸೌಹಾರ್ದತೆ ಸಹಬಾಳ್ವೆ ಮೆರೆದು ಹಿರಿಯರ ತ್ಯಾಗವನ್ನು ನಾವು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತರ ವಲಯದ ಮಾಜಿ ನಿರ್ದೇಶಕರಾದ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ಸೌಹಾರ್ದರತ್ನ ಪ್ರಶಸ್ತಿ, ಪುಣೆಯ ಖ್ಯಾತ ಮಕ್ಕಳ ತಜ್ಞರಾದ ಡಾ. ಸುಧಾಕರ್ ಶೆಟ್ಟಿ ಪುಣೆ ಮೂಡಬಿದ್ರೆ ಇವರಿಗೆ ಸಮಾಜ ರತ್ನ ಪ್ರಶಸ್ತಿ, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ಡಾ. ರೋಹನ್ ಮೊಂತೆರೋ ಅವರಿಗೆ ಉದ್ಯಮ ರತ್ನ ಪ್ರಶಸ್ತಿ, ಖ್ಯಾತ ಹಿರಿಯ ಶಸ್ತ್ರ ಚಿಕಿತ್ಸಾತಜ್ಞರಾದ ಡಾ. ಶ್ರೀರಾಮ್ ಭಟ್ ಎಂ ಅವರಿಗೆ ವೈದ್ಯರತ್ನ ಪ್ರಶಸ್ತಿ, ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಗಾಸ್ಟ್ರೋ ಎಂಟರಲಾಜಿ ಡಾ ಅನುರಾಗ್ ಜೆ .ಶೆಟ್ಟಿ ಇವರಿಗೆ ಬೆಸ್ಟ್ ಡಾಕ್ಟರ್ಸ್ ಅವಾರ್ಡ್, ಜನಪ್ರಿಯ ನಾಟಿವೈದ್ಯ ಬಂಟ್ವಾಳ ಅನಂತಾಡಿಯ ಗಂಗಾಧರ ಕರಿಯ ಪಂಡಿತ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿಈ ಸಮಾಜಕ್ಕೆ ಸೌಹಾರ್ದತೆ ಎನ್ನುವುದು ಬೀಜ ಮಂತ್ರವಾಗಲಿ .ಶಾಂತಿ ಸಾಮರಸ್ಯದ ಸಂದೇಶವನ್ನು ಇಂತಹ ಸೌಹಾರ್ದ ಸಂಗಮ ಕಾರ್ಯಕ್ರಮದ ಮೂಲಕ ರಾಷ್ಟ್ರ ವ್ಯಾಪಿಸಲಿ ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಹಿರಿಯ ನ್ಯಾಯವಾದಿ ಕೆ ದಯಾನಂದ ರೈ ಅವರು ಈ ದೇಶದ ಸಂವಿಧಾನದಲ್ಲಿ ನಾವೆಲ್ಲ ಒಂದಾಗಿ ಬ್ರಾತೃತ್ವದಿಂದ ಬದುಕಬೇಕು ಎಂದು ಬರೆದಿದೆ .ಈ ಸೌಹಾರ್ದತೆ ಎನ್ನುವುದು ಇಂತಹ ಕಾರ್ಯಕ್ರಮದ ಮೂಲಕ ಜಾತಿ ಮತ ಪಕ್ಷಗಳ ಭೇದವಿಲ್ಲದೆ ಪಸರಿಸಲಿ. ಜೊತೆಗೆ ವಿವಿಧ ಕ್ಷೇತ್ರದ ಸಾಧಕರುಗಳನ್ನು ಜಾತಿ ಮತ ಭೇದವಿಲ್ಲದೆ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ಅವರ ಮುಂದಿನ ನಡೆಗೆ ಪ್ರೇರಣೆಯಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಸಂಘಟಕರ ಪ್ರಯತ್ನ ಶ್ಲಾಘನೀಯವಾಗಿದೆ ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಮುನ್ನಲೆಗೆ ತಂದು ಗುರುತಿಸುವ ಜೊತೆಗೆ ಸೌಹಾರ್ದ ಸಂದೇಶವನ್ನು ನೀಡಿ ಶಾಂತಿ ಸಾಮರಸ್ಯಕ್ಕೆ ಕರೆ ನೀಡಿರುವುದು ಅಭಿನಂದನೀಯ ಕೆಲಸ. ಕಾರ್ಯಕ್ರಮದಲ್ಲಿ ಯುವ ವಾಹಿನಿ. ರಿ. ಕೇಂದ್ರ ಸಮಿತಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ನಾಟಕ ಸಿನಿಮಾ ಕಲಾವಿದೆ ಉಷಾ ದೇವರಾಜ್ ಕುಲಾಲ್ ಇವರಿಗೆ ಸೌಹಾರ್ದ ಪುರಸ್ಕಾರ ನೀಡಿ ಗೌರವಿಸಲಾಯಿತು ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯಾ ಆರ್.ಶೆಟ್ಟಿ, ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಶ್ ಬಿ ,ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯನ್ ಸಾಲ್ದಾನ, ಎಂಸಿಸಿ ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೋ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೂತ್ರ ರೋಗ ತಜ್ಞರಾದ ಡಾ. ಸದಾನಂದ ಪೂಜಾರಿ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್, ಮಂಗಳೂರು ಪ್ರೆಸ್ ಅಧ್ಯಕ್ಷ ಪಿ. ಬಿ .ಹರೀಶ್ ರೈ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ,ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮುಂತಾದವರು ಉಪಸ್ಥಿತರಿದ್ದರು .ಎಂಪಿ ಎಂ ಎಲ್ ಎ ನ್ಯೂಸ್ ನ ಸಂಪಾದಕರಾದ ಡಾ.ಅಶೋಕ್ ಶೆಟ್ಟಿ ಬಿ.ಎನ್. ಪ್ರಸ್ತಾವನೆ ಮಾತುಗಳನ್ನಾಡಿದರು. ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿ, ಎಸ್.ಆರ್ .ಪ್ರದೀಪ್ ಧನ್ಯವಾದ ಕಾರ್ಯಕ್ರಮ ನಿರೂಪಿಸಿದರು. ನರೇಶ್ ಸಸಿಹಿತ್ಲು, ಮಲ್ಲಿಕಾಶೆಟ್ಟಿ, ದಿನಕರ ಡಿ.ಬಂಗೇರ,ಡಾ.ಅಶೋಕ್ ಶೆಟ್ಟಿ ಬಿ .ಎನ್. ಪ್ರಶಸ್ತಿ ಪುರಸ್ಕೃತರ ವಿವರವನ್ನು ವಾಚಿಸಿದರು .ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು -,ಕನ್ನಡ ಚಲನ ಚಿತ್ರ ಹಿನ್ನೆಲೆ ಗಾಯಕರಾದ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸ ಮಂಜರಿ ಹಾಗೂ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಾಚಲನ. ರಿ. ಮಂಗಳೂರು ಕಲಾವಿದರಿಂದ ಯುವ ಜಾಗೃತಿ ಹಾಡುಗಳ ಮಿಶ್ರಣ ನಾಟಕ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು. ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ,ಡಿಸಿಪಿ ಸಿದ್ದಾರ್ಥ ಗೋಯಲ್,ಪಾಂಡೇಶ್ವರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ,ಪಾಂಡೇಶ್ವರ ಠಾಣಾ ಎಎಸ್ಐ ಹರೀಶ್, ಸುನಿಲ್ ಅವರಿಗೆ ಕಾರ್ಯಕ್ರಮದ ಸಂಘಟಕ ಡಾ.ಅಶೋಕ್ ಶೆಟ್ಟಿ ಬಿ. ಎನ್.ಅವರು ಧನ್ಯವಾದ ಸಲ್ಲಿಸಿದರು. 13ನೇ ಸೌಹಾರ್ದ ಸಂಗಮವು ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ನೇರಪ್ರಸಾರ ಗೊಂಡು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿಷ್ಠತ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ಟಿ. ತಾರಾನಾಥ ಕೊಟ್ಟಾರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಆನಂದ ಬಂಜನ್ ಪ್ರಕಟಿಸಿದ್ದಾರೆ.ಹಿರಿಯ ಜೇಸಿಗಳಾದ ಪಿ.ಮಹಮ್ಮದ್ (ಆಡಳಿತ) ಸಂದೀಪ್ ಸಾಲ್ಯಾನ್ (ಸಾರ್ವಜನಿಕ ಸಂಪರ್ಕ) ಮಹೇಶ ನಿಟಿಲಾಪುರ (ವ್ಯಕ್ತಿತ್ವವಿಕಸನ)ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್,ಜೊತೆಕಾರ್ಯದರ್ಶಿ ಯಾಗಿ ಯೋಗೀಶ ಬಂಗೇರ, ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಪಿಪಿಎಫ್ ಜಯಾನಂದ ಪೆರಾಜೆ, ಮಾಜಿಅಧ್ಯಕ್ಷ ಡಾ.ಆನಂದ ಬಂಜನ್ ನಿಯುಕ್ತಿಗೊಂಡಿದ್ದಾರೆ.ಹದಿನಾಲ್ಕು ಮಂದಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷ ಕೇದಿಗೆ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಗ್ರಹಣ ಸಮಾರಂಭವನ್ನು ಜು.29 ರಂದು ಬೆಳಿಗ್ಗೆ 10.25ಕ್ಕೆ ಬಿಸಿರೋಡಿನ ಪೊಳಲಿ ದ್ವಾರದ ಬಳಿ ನೂತನ ಸಭಾಂಗಣ ಅಕ್ಷಯ ಸಭಾಭವನ ಲೋಕಾರ್ಪಣೆ ಗೊಳ್ಳಲಿದೆ.ಪದಗ್ರಹಣ ಸಮಾರಂಭ11 ಗಂಟೆಗೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್ವಿಎಸ್ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಗಂಗಾಧರ ಆಳ್ವ ಮುಖ್ಯ ಅತಿಥಿಯಾಗಿ, ಗೌರವ ಅತಿಥಿಗಳಾಗಿ ಎಸ್ಸಿಐ ರಾಷ್ಟ್ರಾಧ್ಯಕ್ಷರಾದ ಎಂ.ಆರ್.ಜಯೇಶ್, ಮಾಜಿ ರಾಷ್ಟ್ರಾಧ್ಯಕ್ಷ ಡಾ.ಕೆ.ಅರವಿಂದ ರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು: ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ದೇರೆಬೈಲ್ ಘಟಕವು 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಜೂನ್ 28 ರಂದು ಸಂಜೆ 5 ಗಂಟೆಗೆ ದೇರೆಬೈಲ್ ಮೋಸ್ಟ್ ಹೋಲಿ ರೆಡೀಮರ್ ಚರ್ಚ್ ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಚರ್ಚ್ ನ ಗೋಲ್ಡನ್ ಜ್ಯೂಬಿಲಿ ಹಾಲ್ ನಲ್ಲಿ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮ ನಡೆಯಲಿದೆ.ಕ್ಯಾಥೊಲಿಕ್ ಸಭಾ ದೇರೆಬೈಲ್ ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಡಾ. ಜೋಸೆಫ್ ಮಾರ್ಟಿಸ್ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಘಟಕದ ಅಧ್ಯಕ್ಷ ನೆಲ್ಸನ್ ಕ್ಯಾಸ್ಟೆಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ವಿಗಾರ್ವಾರ್ ವಂದನೀಯ ಫಾ. ಜೇಮ್ಸ್ ಡಿ’ಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಫೆಡ್ರಿಕ್ ಮೊಂತೇರೊ, ಸ್ಥಾಪಕ ಆಧ್ಯಾತ್ಮಿಕ ನಿರ್ದೇಶಕ ಫೆರ್ಮಾಯ್ ಚರ್ಚ್ ಧರ್ಮಗುರು ವಂದನೀಯ ಫಾ. ಮಾರ್ಕ್ ಕ್ಯಾಸ್ಟೆಲಿನೊ, ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿ’ಸೋಜಾ, ದೇರೆಬೈಲ್ ಚರ್ಚ್ ಸಹಾಯಕ ಗುರು ವಂದನೀಯ ಫಾ. ನೆಲ್ಸನ್ ಸ್ಟೀವನ್ ಪೆರಿಸ್ ಅವರು ಉಪಸ್ಥಿತರಿರುವರು.ಕ್ಯಾಥೊಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷೆ ಹಾಗೂ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ದೇರೆಬೈಲ್ ಚರ್ಚ್ ಉಪಾಧ್ಯಕ್ಷೆ ಶೀಲಾ ಡಿ’ಸೋಜಾ, ಕಾರ್ಯದರ್ಶಿ ಡೆನ್ಝಿಲ್ ಪಿಂಟೊ, ಸರ್ವ ಅಯೋಗಗಳ ಸಂಯೋಜಕ ಆನಿಲ್ ಪತ್ರಾವೊ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್ ಸಭಾ ದೇರೆಬೈಲ್ ಘಟಕದ ಅದ್ಯಕ್ಷ ನೆಲ್ಸನ್ ಕ್ಯಾಸ್ಟೆಲಿನೊ, ಕಾರ್ಯದರ್ಶಿ ಶೈಲಾ ನೊರೊನ್ಹಾ ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಂಚಾಲಕ ವಿಕ್ಟರ್ ಕೊರೆಯಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ನೂತನ ಧರ್ಮಗುರುಗಳಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಜೂನ್ 20 ರಂದು ಹುದ್ದೆಯನ್ನು ವಹಿಸಿಕೊಂಡರು. ಅವರು ಕಳೆದ 17 ವರ್ಷಗಳಿಂದ ಕಂಕನಾಡಿ ಫಾದರ್ ಮುಲ್ಲರ್ ಸಮೂಹಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಶುಕ್ರವಾರ ಪಾಲ್ದನೆ ಚರ್ಚ್ ಗೆ ಆಗಮಿಸಿದ ಸಂದರ್ಭ ಧರ್ಮಗುರು ವಂದನೀಯ ಆಲ್ಬನ್ ಡಿ’ಸೋಜಾ, ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ,ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ಮತ್ತು ಪದಾಧಿಕಾರಿಗಳು ಹಾರ್ದಿಕ ಸ್ವಾಗತ ಕೋರಿದರು. ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಿಟಿ ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ ಅವರು ಹುದ್ದೆ ಸ್ವೀಕಾರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಚರ್ಚಿನನಿರ್ಗಮನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿ’ಸೋಜಾ ಅವರು ತನಗೆ ಇದುವರೆಗೆ ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.ಬಳಿಕ ಮಾತನಾಡಿದ ನೂತನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊಅವರು ತನ್ನ ಮುಂದಿನ ಸೇವೆಗೆ ಚರ್ಚ್ ಆಡಳಿತ ಮಂಡಳಿ ಮತ್ತು ವಿಶ್ವಾಸಿಗಳ ಸಹಕಾರ ಕೋರಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಅವರು ಸ್ವಾಗತಿಸಿ ನೂತನ ಧರ್ಮಗುರುಗಳ ಕಿರು ಪರಿಚಯ ನೀಡಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಹಾಗೂ ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ವೇದಿಕೆಯಲ್ಲಿದ್ದ ಧರ್ಮಗುರುಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫಾವುಸ್ತಿನ್ ಲೋಬೊ, ಫಾ. ಅಜಿತ್ ಮಿನೇಜಸ್, ಫಾ. ಜೀವನ್ ಸಿಕ್ವೇರಾ, ಫಾ. ನೆಲ್ಸನ್ ಪಾಯ್ಸ್, ಫಾ. ಸಿಲ್ವೆಸ್ಟರ್ ಲೋಬೊ, ಫಾ. ರುಡಾಲ್ಫ್ ರವಿ ಡೆಸಾ, ಫಾ. ನೀಲೇಶ್ ಕ್ರಾಸ್ತಾ, ಫಾ. ಅಶ್ವಿನ್ ಕ್ರಾಸ್ತಾ, ಫಾ. ಜಾನ್ ವಾಸ್, ಡಾ. ಆಂಟನಿ ಸಿಲ್ವಾನ್, ಡಾ. ಉದಯ್ ಕುಮಾರ್, ಡಾ. ಕಿರಣ್ ಶೆಟ್ಟಿ, ಎಂ.ಪಿ. ನೊರೊನಾ, ನವೀನ್ ಡಿ ಸೋಜಾ, ಡಾ. ಕೆಲ್ವಿನ್ ಪಾಯಸ್ ಮುಂತಾದವರು ಉಪಸ್ಥಿತರಿದ್ದರು. ಕು. ಜೆನಿಟಾ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು: ಮಂಗಳೂರು ನಗರದ ಪಾಲ್ದನೆ ಸಂತ ತೆರೆಸಾ ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ನಿವೃತ್ತಿ ಹೊಂದಿ ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಚರ್ಚಿನ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ (ತಿಸ್ರೀ ಓಡ್ಡ್) ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.ಮಂಗಳೂರು ಮತ್ತು ಅಖಿಲ ಕರ್ನಾಟಕ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ಇದರ ಪ್ರಾಂತೀಯ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಪ್ರಕಾಶ್ ಲೋಬೊ ಅವರು ನಿವೃತ್ತಿ ಹೊಂದಿದ ಫಾ. ಆಲ್ಬನ್ ಡಿ ಸೋಜಾ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪಾಲ್ದನೆ ಘಟಕದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸ್ವೀಬರ್ಟ್ ಡಿ ಸೋಜಾ ಸ್ವಾಗತಿಸಿದರು. ಅಥಿತಿಗಳಾಗಿ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಫಾ. ಆಲ್ಬನ್ ಡಿ ಸೋಜಾ ಅವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು: ಕೂಳೂರು ಸಂತ ಅಂತೋನಿ ಚರ್ಚಿನ ಕ್ಯಾಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಘಟಕದ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ರವಿವಾರ ಜೂನ್ 22 ರಂದು ಕೂಳೂರು ಮೇಲ್ ಕೊಪ್ಪಲ ಶ್ರೀಮತಿ ಮೇಝಿ ಟೀಚರ್ ಅವರ ಗದ್ದೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂದನೀಯ ಫಾ. ವಿಕ್ಟರ್ ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿದ್ದ ಎಪಿಸ್ಕೋಪಲ್ ಸಿಟಿ ವಲಯದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಐಡಾ ಪುರ್ಟಾಡೊ, ಐ.ಸಿ.ವೈ.ಎಂ. ಕೇಂದ್ರೀಯ ಸಮಿತಿ ಅಧ್ಯಕ್ಷ ವಿನ್ ಸ್ಟನ್ ಜೋಯಲ್ ಸಿಕ್ವೇರಾ ಮತ್ತು ತೀರ್ಪುಗಾರ ಪ್ರವೀಣ್ ಲೋಬೊ ಬಿಜೈ ಅವರು ಸಂಯುಕ್ತವಾಗಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗದ್ದೆಯಲ್ಲಿ ನಡೆದ ಸ್ಪರ್ಧಾ ಕೂಟದಲ್ಲಿ ಮೊದಲ ಬಹುಮಾನವನ್ನು ಸೈಂಟ್ ಅನ್ನಾ ವಾರ್ಡ್, ದ್ವಿತೀಯ ಬಹುಮವನ್ನು ಸಂತ ಅಂತೋನಿ 3 ನೇ ವಾರ್ಡ್ ಹಾಗೂ ತೃತೀಯ ಬಹುಮಾನವನ್ನು ಸಂತ ಜೋಸೆಫ್ ವಾರ್ಡ್ ಪಡೆದು ಕೊಂಡಿತು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ಸ್ವಾಗತಿಸಿ ಐ.ಸಿ.ವೈ. ಎಂ. ಅಧ್ಯಕ್ಷ ಆರ್ವಿನ್ ಮೊಂತೆರೊ ವಂದಿಸಿದರು. ರೀಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಹೈನಾ ಚಿತ್ರದ ಮೂಲಕ ಬಾಂಗ್ಲಾದೇಶದಿಂದ ನಡೆಯುವ ಗಡಿ ಮೀರಿ ಅಕ್ರಮ ಪ್ರವೇಶದಂತಹ ಗಂಭೀರ ವಿಷಯವನ್ನ ಎತ್ತಿಹಿಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇದೀಗ ಹೇ ಪ್ರಭು ಚಿತ್ರದ ಮೂಲಕ ಮತ್ತೊಂದು ಸಮಾಜಮುಖಿ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ವಿಷಯವನ್ನ ಓಲೈಸಿದ್ದಾರೆ.ಈ ಬಾರಿ ಅವರು ಸ್ಪರ್ಶಿಸಿರುವ ವಿಷಯ – ಫಾರ್ಮ ಲಾಬಿ ಮತ್ತು ವೈದ್ಯರ ಜೀವನ. ಹೇ ಪ್ರಭು ಎಂಬ ಚಿತ್ರವು ನಮ್ಮ ಗ್ರಾಮಗಳು ಮತ್ತು ಗ್ರಾಮಸ್ಥರು ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲವನ್ನ ಮತ್ತು ಅವರ ಮಹತ್ವವನ್ನ ತೀವ್ರವಾಗಿ ಒತ್ತಿಹೇಳುತ್ತದೆ. ಹೇ ಪ್ರಭು ಚಿತ್ರ ವೀಕ್ಷಕರನ್ನು ನಗೆಯ ಕಡಲಲ್ಲಿ ಮುಳುಗಿಸುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ . ಪ್ರಚಲಿತ ಸೋಶಿಯಲ್ ಮೀಡಿಯಾ ಎಂಬ ಮಾಯೆಯ ಅಲೆಯಲ್ಲಿ ಮೇಲೆದ್ದು ಹೆಸರು ಮಾಡಿರುವ ವ್ಯಕ್ತಿಗಳ ಪರಿಚಯ ಸಿನಿಮಾದಲ್ಲಿ ತೋರಿಸಲಾಗಿದೆ. “from scratch to success ” ಎಂಬಂತೆ ಕೆಲವು ನಿಜ ಘಟನೆ ಸಾರಾಂಶವನ್ನು ಇಲ್ಲಿ ಹೆಪ್ರಭು ಹೇಳುತ್ತಾನೆಇಂದು ಸಾಮಾಜಿಕ ಜಾಲತಾಣಗಳಲ್ಲಿ “ಹೇ ಪ್ರಭು” ಎಂಬ ಶಬ್ದವೇ ಟ್ರೆಂಡ್ ಆಗಿದೆ. ಹಿಂದೆ ನಾವು “ಹೇ ರಾಮಾ… ದೇವ್ರೆ ಕಾಪಾಡು” ಎಂಬುದನ್ನ ಕೂಗುತ್ತಿದ್ದೆವು. ಆದರೆ ಇಂದು “ಹೇ ಪ್ರಭು” ಎಂಬ ಶಬ್ದವು ಜಾಗತಿಕವಾಗಿ ಹರಡಿರುವ, ಹೃದಯಸ್ಪರ್ಶಿ ಪದ – ಇದು ನಂಬಿಕೆಯೂ ಹೌದು, ಒಬ್ಬೊಬ್ಬ ವ್ಯಕ್ತಿಯ ಸಂಕಟದ ಕೂಗೂ ಹೌದು.ಚಿತ್ರವು ಶೀಘ್ರದಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ, ಪ್ರಚಾರ ಕಾರ್ಯಗಳು ಜೋರಿನಲ್ಲಿ ನಡೆಯುತ್ತಿವೆ. ಬೆಂಗಳೂರುನಲ್ಲಿ ಮಹತ್ವದ ವಿಶ್ವ ಪ್ರಿಮಿಯರ್ ಕಾರ್ಯಕ್ರಮವನ್ನ ಆಯೋಜಿಸಲಾಗುತ್ತಿದೆ, ಇದೇ ವೇಳೆ ಪ್ರಮುಖ ಸಚಿವರು, ವೈದ್ಯರು ಮತ್ತು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.ಅಮೃತ ಫಿಲ್ಮ್ ಸೆಂಟರ್ ಮತ್ತು 24 ರೀಲ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕಥೆ, ಚಿತ್ರಕಥೆ, ನಿರ್ದೇಶನ: ವೆಂಕಟ್ ಭಾರದ್ವಾಜ್ಛಾಯಾಗ್ರಹಣ: ಪ್ರಮೋದ ಭಾರತೀಯಸಂಗೀತ: ಡ್ಯಾನಿ ಅಂಡರ್ಸನ್ಸಂಕಲನ : ಶಮೀಕ್ ಭಾರದ್ವಾಜ್ನಟರು: ಜಯ್, ಸಮ್ಹಿತಾ ವಿನ್ಯಾ, ಯಮುನಾ ಶ್ರೀನಿಧಿ, ಗಜಾನನ ಹೆಗಡೆ, ಡಾ. ಸೂರ್ಯ, ಡಾ. ಸುಧಾಕರ್ ಶೆಟ್ಟಿ ಡಾ ಆದರ್ಶ್ ಗೌಡ , ಲಕ್ಷ್ಮಣ ಶಿವಶಂಕರ್, ಅಕೀಲ ತಂಡೂರು, ಹರಿಧನಂಜಯ, ದಿಲೀಪ್ ರಾಜ್, ನಿರಂಜನ್ ಮತ್ತು ಇತರರು.ಹೇ ಪ್ರಭು – ಇದು ನಗೆಯ ಕುಂಭ ಮೇಳ
As part of its unwavering commitment to social responsibility and community development, MCC Bank has undertaken a series of impactful initiatives in the month of June 2025, reaching various schools, orphanages, and institutions across Mangalore, Udupi, and surrounding regions. These activities were spearheaded by the Bank’s Chairman Sahakara Ratna Mr Anil Lobo and the Board of Directors. The Bank has supported the students of St Antony Primary School, Padukone, Stella Maris High School, Gangolli, St Mary’s School, Kundapura, St Joseph Primary and High School, Kundapura, Nirmala High School, Brahmavara, Cosmopolitan Higher Primary School, Brahmavara, Kulur High School, Mangalore, St Anjela Home, Bejai, De Mercede Orphanage, Paneer, St Ignatius Loyola School, Paladka, St Rita Higher Primary School, Jeppu, Ladyhill Higher Primary School, Urwa and Mai De Deus Higher Primary School, Puttur, by way of distributing note books, Umbrellas and school bags to economically backward students of the school. The Bank also distributed Umbrellas to the inmates of St Antony Ashram, Jeppu. The heads of above institutions were overwhelmed by the noble gesture of the bank and thanked the Chairman and Directors of the Bank for their generosity and concern towards the poor children studying in the Institutions and the inmates of the Ashram.Through these heartening initiatives, MCC Bank has demonstrated its core values of compassion, inclusion, and service. The distribution of umbrellas, school bags, and notebooks, costing more than Rs.10 lakhs, across multiple institutions not only provided essential support to underprivileged students but also inspired a culture of gratitude and perseverance. MCC Bank remains committed to empowering the youth and strengthening the community through such meaningful outreach.While speaking on the occasion, the Chairman of the Bank Sahakara Ratna Mr Anil Lobo called upon the students to remember the Bank’s support. He also called upon the students to be empathetic towards the poor when they grow up and achieve social status. He also emphasized equality in education and encouraged self-belief. He expressed his happiness in engaging with the enthusiastic students and lauded the Institutions for providing a nurturing educational environment. He acknowledged their support to the Bank and reaffirmed MCC Bank’s commitment to support education for the underprivileged.Directors Dr Gerald Pinto, Mr Elroy Kiran Crasto, Mr Sushanth Saldanha, Mrs Sharmila Menezes, Mrs Irene Rebello, Mr Roshan Dsouza, Mr Herold J. Monteiro, Mr J.P. Rodrigues, Andrew Dsouza and Branch Manager of Kundapur, Brahmavara, Ashoknagar, Kankanady, Morgansgate, Puttur and Ullal branches have participated in the above programmes.
ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ 2025 ಜೂನ್ ತಿಂಗಳಲ್ಲಿ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸಲು ಬ್ಯಾಂಕಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ. ಪಡುಕೋಣೆಯ ಸೈಂಟ್ ಆಂಟನಿ ಪ್ರಾಥಮಿಕ ಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ, ಕುಂದಾಪುರದ ಸೈಂಟ್ ಮೇರಿ ಶಾಲೆ, ಕುಂದಾಪುರದ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆ ಮತ್ತು÷ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರಿನ ಕೂಳೂರು ಪ್ರೌಢಶಾಲೆ, ಬಿಜೈಯ ಸೈಂಟ್ ಅಂಜೆಲಾ ಹೋಂ, ಡಿ ಮರ್ಸಿಡ್ ಅನಾಥಾಶ್ರಮ, ಪಾನೀರ್, ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯೊಲಾ ಶಾಲೆ, ಜೆಪ್ಪುವಿನ ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಉರ್ವಾದದ ಲೇಡಿಹಿಲ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪುತ್ತೂರಿನ ಮಾಯ್ ದೆ ದೆವೂಸ್ ಹಿರಿಯ ಪ್ರಾಥಮಿಕ ಶಾಲೆಯ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ವಿತರಣೆ ಮಾಡಲಾಯಿತು. ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಬ್ಯಾಂಕಿನ ಈ ಉದಾತ್ತ ಕಾರ್ಯಕ್ಕೆ ಮೇಲ್ಕಂಡ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಮತ್ತು ಆಶ್ರಮದ ನಿವಾಸಿಗಳ ಬಗ್ಗೆ ಔದಾರ್ಯ ಮತ್ತು ಕಾಳಜಿಯನ್ನು ತೋರಿಸಿದ್ದಕ್ಕಾಗಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ಹೃದಯಸ್ಪರ್ಶಿ ಕೊಡುಗೆಗಳ ಮೂಲಕ, ಎಮ್.ಸಿ.ಸಿ. ಬ್ಯಾಂಕ್ ತನ್ನ ಸಹಾನುಭೂತಿ ಮತ್ತು ಸೇವೆಯ ಮೂಲ ಮೌಲ್ಯಗಳನ್ನು ಪ್ರದರ್ಶಿಸಿದೆ. ಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕೊಡೆಗಳು, ಶಾಲಾ ಬ್ಯಾಗ್, ಮತ್ತು ನೋಟ್ಬುಕ್ಗಳ ವಿತರಣೆಯು ಅನೇಕ ವಿದ್ಯಾಸಂಸ್ಥೆಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲವನ್ನು ನೀಡುವುದಲ್ಲದೆ, ಕೃತಜ್ಞತೆ ಮತ್ತು ಪರಿಶ್ರಮದ ಸಂಸ್ಕೃತಿಯನ್ನು ಪ್ರೇರೇಪಿಸಿತು. ಎಮ್.ಸಿ.ಸಿ. ಬ್ಯಾಂಕ್ ಇಂತಹ ಅರ್ಥಪೂರ್ಣ ಸಂಪರ್ಕದ ಮೂಲಕ ಯುವಕರನ್ನು ಸಬಲೀಕರಣಗೊಳಿಸಲು ಮತ್ತು ಸಮುದಾಯವನ್ನು ಬಲಪಡಿಸಲು ಬದ್ಧವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ, ವಿದ್ಯಾರ್ಥಿಗಳು ಬ್ಯಾಂಕಿನ ಬೆಂಬಲವನ್ನು ನೆನಪಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಬೆಳೆದು ಸಾಮಾಜಿಕ ಸ್ಥಾನಮಾನವನ್ನು ಸಾಧಿಸಿದಾಗ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ಸಹಾನುಭೂತಿ ಹೊಂದಬೇಕೆAದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣದಲ್ಲಿ ಸಮಾನತೆಯನ್ನು ಅವರು ಒತ್ತಿ ಹೇಳಿದರು ಮತ್ತು ಆತ್ಮ ವಿಶ್ವಾಸವನ್ನು ಪ್ರೋತ್ಸಾಹಿಸಿದರು. ಉತ್ಸಾಹಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಲು ಅವಕಾಶ ಸಿಕ್ಕಿದ್ದಕಾಗಿ ಅವರು ಸಂತೋಷ ವ್ಯಕ್ತಪಡಿಸಿ ಪೋಷಣೆಯ ಶೈಕ್ಷಣಿಕ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಸಂಸ್ಥೆಗಳನ್ನು ಶ್ಲಾಘಿಸಿದರು. ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲಿಸುವ ಎಂಸಿಸಿ ಬ್ಯಾಂಕಿನ ಧ್ಯೇಯವನ್ನು ಪುನರುಚ್ಚರಿಸಿದರು.ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ, ಶ್ರೀ ಎಲ್ರೊಯ್ ಕಿರಣ್ ಕ್ರಾಸ್ಟೊ, ಶ್ರೀ ಸುಶಾಂತ್ ಸಲ್ಡಾನಾ, ಶ್ರೀಮತಿ ಶರ್ಮಿಳಾ ಮಿನೇಜಸ್, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ರೋಶನ್ ಡಿಸೋಜಾ, ಶ್ರೀ ಹೆರಾಲ್ಡ್ ಜೆ. ಮಾಂತೆರೊ, ಶ್ರೀ ಜೆ.ಪಿ. ರೋಡ್ರಿಗಸ್, ಶ್ರೀ ಅಂಡ್ರೂ÷್ಯ ಡಿಸೋಜ ಮತ್ತು ಕುಂದಾಪುರ, ಬ್ರಹ್ಮಾವರ, ಅಶೋಕನಗರ, ಕಂಕನಾಡಿ, ಮಾರ್ಗನ್ಸ್ಗೇಟ್, ಪುತ್ತೂರು ಮತ್ತು ಉಳ್ಳಾಲ ಶಾಖೆಗಳ ಶಾಖಾ ವ್ಯವಸ್ಥಾಪಕ ಕೂಡ ಭಾಗವಹಿಸಿದ್ದರು.