ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಮೀಸಲು ಸಂಭವ. ನವೀನ್ ಡಿಸೋಜ ಹೆಸರು ಮುಂಚೂಣಿಯಲ್ಲಿ?

ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದೆ. ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸಿಗಲಿದೆ ಎಂಬುದು ಗ್ಯಾರಂಟಿಯಾಗಿದೆ. ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಈ ಬಾರಿ ಮೀಸಲಿರಿಸುವ ಸಂಭವ ಹೆಚ್ಚಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಒಂದು ರಾಜ್ಯಸಭಾ ಸದಸ್ಯ ಸ್ಥಾನ ಒಲಿದು ಬಂದಿತ್ತು. ಈ ಬಾರಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಲಿದು ಬರಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಹುದ್ದೆ ಸಿಗಬಹುದು ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಈ ಪೈಕಿ ಕಾಂಗ್ರೆಸ್ ನ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಾಗೂ ಹಿರಿಯ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿರುವ ನವೀನ್ ಡಿಸೋಜಾ ರವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.ಈ ಬಾರಿಯ ಕೇರಳದ ಚುನಾವಣೆಯಲ್ಲಿ ಸಹ ನವೀನ್ ಡಿಸೋಜ ಕಾರ್ಯನಿರ್ವಹಣೆ ಪಕ್ಷದ ಹೈಕಮಾಂಡ್ ಗಮನ ಸೆಳೆದಿದೆ ಎನ್ನಲಾಗಿದೆ. ಈ ಮೊದಲು ತನಗ ನೀಡಿರುವ ಹಲವಾರು ಜವಾಬ್ದಾರಿಗಳನ್ನು ಎಲ್ಲಿಯೂ ಪ್ರಚಾರ ಬಯಸದೆ ಚಾಚು ತಪ್ಪದೇ ನಿರ್ವಹಿಸಿದ ಕೀರ್ತಿ ನವೀನ್ ಡಿಸೋಜ ರವರಿಗೆ ಇದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಈ ಬಾರಿ ಅವರನ್ನು ರಾಜ್ಯಸಭೆ ಕಳಿಸುವ ಬಗ್ಗೆ ಪಕ್ಷದ ಉನ್ನತ ಮೂಲಗಳು ಗಂಭೀರ ಚಿಂತನೆಯಲ್ಲಿದೆ ಎಂದು ತಿಳಿದು ಬಂದಿದೆ.ಇನ್ನೊಂದು ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಕಾಂಗ್ರೆಸ್ ತನ್ನ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಾಂಗ್ರೆಸ್ನ ಶಾಸಕರಗಳ ಬಲ 3 ರಾಜ್ಯಸಭೆಗೆ ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ರಾಜ್ಯಸಭಾ ಚುನಾವಣೆ ಜೂನ್ 18ರಂದು ನಡೆಯಲಿದ್ದು, ಜೂನ್ ಎಂಟಕ್ಕೆ ನಾಮಿನೇಷನ್ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಪ್ರಾದೇಶಿಕ ವಾರ್ತೆಗಳು

ಪುತ್ತೂರು: ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮ ಉದ್ಘಾಟನೆ.

ಪುತ್ತೂರು -ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮವನ್ನು ಪುತ್ತೂರು ನಗರ ಸಭಾ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿಯವರು ಉದ್ಘಾಟಿಸಿ,ಕಾಯಕಲ್ಪ ಚಿಕಿತ್ಸೆಗೆ ಜಗತ್ತಿನಲ್ಲಿಯೇ ಅತೀ ಮಾನ್ಯತೆಯಿದೆಂದರು. ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ,ಅಧ್ಯಕ್ಷ ಪಿ. ಕೆ. ಮಹಮ್ಮದ್, ಉಪಾಧ್ಯಕ್ಷ ಸದಾಶಿವ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು. ಮಾಲಕ ಲಕ್ಷ್ಮಣ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಸಂತಿ ಕೆ. ಅವರು ಸಹಕರಿಸಿದರು

ಪ್ರಾದೇಶಿಕ ವಾರ್ತೆಗಳು

ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ಡಾ. ಎ.ಸದಾನಂದ ಶೆಟ್ಟಿ ಚಾಲನೆ.

ಮಂಗಳೂರು- ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ನಗರದ ಕುಡ್ಲ ಕಚೇರಿಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂಪಿಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ದೀಪಕ್.ಜಿ. ಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ. ಪತ್ರಕರ್ತರಿಂದ ಸಮಾಜದ ಸ್ವಾಸ್ಥ್ಯ ರಕ್ಷಣೆ-ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ

ಮಂಗಳೂರು : ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತರು ನಿಭಾಯಿಸುತ್ತಿದ್ದಾರೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.ನಗರದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ ಅವರು ” ಪೊಲೀಸರಷ್ಟೇ ವೇಗವಾಗಿ ಘಟನಾ ಸ್ಥಳಗಳಿಗೆ ತೆರಳಿ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ವಿವೇಚನೆಯಿಂದ ವರದಿ ಮಾಡುವ ಪತ್ರಕರ್ತರ ಬದ್ಧತೆ ಶ್ಲಾಘನೀಯ’ಎಂದರು.ಸಮಾಜ ಸೇವಕ, ರಾಜಕೇಸರಿ ಟ್ರಸ್ಟ್ ನ ಸಂಸ್ಥಾಪಕ ದೀಪಕ್.ಜಿ. ಬೆಳ್ತಂಗಡಿ ಅವರಿಗೆ ೨೦೧೬ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಎಚ್. ಎನ್. ಮಿಥುನ್ ಮಾತನಾಡಿ ” ಮಂಗಳೂರಿನ ಪತ್ರಕರ್ತರು ಸಂಯಮ ಮತ್ತು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವಕರನ್ನು ಗುರುತಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ’ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅವರು ಪ್ರೆಸ್ ಗೌರವ ಸನ್ಮಾನಕ್ಕೆ ಆಯ್ಕೆಯಾದವರನ್ನು ಗೌರವಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ.ಪೂಜಾರಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಮಹಮ್ಮದ್ ಆರಿಫ್ ಪಡುಬಿದ್ರಿ, ಆತ್ಮಭೂಷಣ್ ಭಟ್, ವಿಲ್ಫ್ರೆ ಡ್ ಡಿಸೋಜಾ, ದಯಾ ಕುಕ್ಕಾಜೆ, ವಿಜಯ ಕೋಟ್ಯಾನ್ ಪಡು ಸನ್ಮಾನಿತರನ್ನು ಪರಿಚಯಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. . ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಗೌರವ ಸನ್ಮಾನ: ಪ್ರೆಸ್ ಗೌರವ ಸನ್ಮಾನಕ್ಕೆ ಆಯ್ಕೆಯಾದ ಬಾಲಸುಬ್ರಹ್ಮಣ್ಯ ಕಾಯಾರ, ರಾಮಣ್ಣ .ವೈ., ಹರ್ಷ, ರೇಮಂಡ್ ಡಿಕೂನಾ ಮತ್ತು ಆರ್.ಎಂ.ರಾಜೇAದ್ರನ್ ಇವರುಗಳನ್ನುಗೌರವಿಸಲಾಯಿತು. ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಪುರಸ್ಕೃತ ಆನಂದ ಶೆಟ್ಟಿ, ಕೆಯುಡಬ್ಲುö್ಯಜೆ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ.ಆರ್., ರಾಜೇಶ್.ಶೆಟ್ಟಿ ದೋಟ,ಅಬ್ದುಲ್ ರಹಿಮಾನ್ .ಟಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಇರಾ, ರಾಜೇಶ್ ಶೆಟ್ಟಿ ದಡ್ಡಂಗಡಿ, ಎ.ಕೆ.ಕುಕ್ಕಿಲ, ಸುಳ್ಯ ತಾಲೂಕು ಕಸಾಪ ಪ್ರಶಸ್ತಿ ಪುರಸ್ಕೃತ ಹರೀಶ್ ಮೋಟುಕಾನ ಇವರುಗಳನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಂಗಳೂರು: ಬಡತನ ನಿರ್ಮೂಲನೆ, ಸಮಾಜದಲ್ಲಿ ಸಮಾನತೆಗೆ ಶಿಕ್ಷಣ ಪ್ರಮುಖ ಅಸ್ತ್ರ. ಶಿಕ್ಷಣಕ್ಕೆ ಆದ್ಯತೆ ನೀಡುವ ಕೃಷ್ಣ ಜೆ. ಪಾಲೆಮಾರ್ ಅವರ ಗುಣ ಶ್ಲಾಘನೀಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆ ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾಭವನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಬಹುಮುಖ ಪ್ರತಿಭೆ. ಕೈಗಾರಿಕೋದ್ಯಮಿ, ಬಿಲ್ಡರ್, ಶಿಕ್ಷಣ ಕ್ಷೇತ್ರ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅರ್ಹರಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸಿದ್ದಾರೆ ಎಂದರು.ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸಾಮುದಾಯಿಕ ಒಳಗೊಳ್ಳುವಿಕೆ, ವಿಚಾರ ಸಂಕಿರಣಗಳು, ಆರ್ಥಿಕ ಸಂವಾದಗಳು, ಕೌಶಲ್ಯಾಭಿವೃದ್ಧಿ ಕುರಿತಾದ ಕಾರ್ಯಕ್ರಮಗಳು ನಡೆಯಲಿ. ಸಾಮಾಜಿಕ ಜಾಗೃತಿ, ಸೌಹಾರ್ದಾತೆಗೆ ಕೇಂದ್ರವಾಗಲಿ. ಇಲ್ಲಿ ವಿವಾಹಕ್ಕೊಳಗಾದವರಿಗೆ ಶ್ರೇಯಸ್ಸು ಉಂಟಾಗಲಿ ಎಂದು ಶುಭ ಹಾರೈಸಿದರು. ಅತಿಥಿಯಾಗಿದ್ದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಕರ್ತವ್ಯನಿಷ್ಠೆ, ಉತ್ತಮ ನಡವಳಿಕೆ, ತಂದೆ ತಾಯಿ ಆಶೀರ್ವಾದ ಇದ್ದರೆ ಜೀವನದಲ್ಲಿ ಪ್ರಗತಿ ಸಾಽಸಬಹುದು ಎಂಬುದಕ್ಕೆ ಕೃಷ್ಣ ಪಾಲೆಮಾರ್ ಅವರ ಜೀವನವೇ ದೃಷ್ಟಾಂತವಾಗಿದೆ. ಒಂದು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ತನ್ನ ಕೈಂಕರ್ಯದ ಮೂಲಕ ಏಕಕಾಲದಲ್ಲಿ ನಾಲ್ಕು ಸಭಾಭವನಗಳನ್ನು ಲೋಕಾರ್ಪಣೆಗೊಳಿಸುತ್ತಿರುವುದು, ಅದರಿಂದ ಬಂದ ಆದಾಯವನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಸಂಕಲ್ಪ ತೊಟ್ಟಿರುವುದು ಅಪೂರ್ವ ಸಂಗತಿ. ಈ ಮೂಲಕ ರಾಷ್ಟ್ರದ ಪ್ರಗತಿಗೂ ಅವರು ಕೊಡುಗೆ ನೀಡಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಇರುವ ಅವರ ವ್ಯಕ್ತಿತ್ವ ‘ಕೋಟಿಗೊಬ್ಬ ಪಾಲೆಮಾರ್’ ಎನ್ನುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ತುಳುನಾಡಿನ ಸೌಂದರ್ಯದ ಕಿರೀಟವಾಗಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ಮೂಡಿಬಂದಿದೆ. ಆರ್ಥಿಕ ವ್ಯವಸ್ಥೆ ಚಲನಶೀಲವಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಂದು ಉದ್ಘಾಟನೆಗೊಂಡಿರುವ ನಾಲ್ಕು ಸಭಾಭವನಗಳು ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ. ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ, ಬದ್ದತೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮೂಲಕ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಪಾಲೆಮಾರ್ ಅವರು ತೋರಿಸಿಕೊಟ್ಟಿದ್ದಾರೆ. ಪಾಲೆಮಾರ್ ಅವರ ವ್ಯಕ್ತಿತ್ವ ಯುವಜನತೆಗೆ ಮಾದರಿಯಾದುದು. ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬಿಡುಗಡೆ ಆಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಲ್ಯಾಂಡ್ ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಜನರ ಪ್ರೀತಿ, ವಿಶ್ವಾಸದಿಂದ ಈ ಕಾರ್ಯಸಾಧನೆ ಆಗಿದೆ. ಪಾಲೆಮಾರ್ ಕನ್ವೆನ್ಶನ್ ಸೆಂಟರ್ ವಿಕಾಸ್ ಎಜುಕೇಶನ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ವಿದ್ಯೆಗೆ ಪ್ರೋತ್ಸಾಹ ನೀಡಲಾಗುವುದು. ಬಡವರ್ಗದ ಜನರಿಗೆ ಉಪಯೋಗ ಆಗುವ ದೃಷ್ಟಿಯಿಂದ ನಾಲ್ಕು ಸಭಾಂಗಣಗಳನ್ನು ನಿರ್ಮಿಸಲಾಗಿದೆ ಎಂದರು.ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅತಿಥಿಗಳಾಗಿದ್ದರು. ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದರು.ಈ ವೇಳೆ ವಿವಿಧ ಸೇವಾ ಕಾರ್ಯ ನಡೆಸಲಾಯಿತು. ಶಕ್ತಿನಗರದ ಭಿನ್ನಸಾಮರ್ಥ್ಯದ ಮಕ್ಕಳ ಶಾಲೆ ಸಾನಿಧ್ಯದ ವಿದ್ಯಾರ್ಥಿಗಳಿಗೆ, ಸ್ನೇಹದೀಪ ಸಂಸ್ಥೆ ಸಂಸ್ಥಾಪಕಿ ತಬಸ್ಸುಮ್, ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಽಕ ಅಂಕ ಗಳಿಸಿದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮೀ ಭಾರ್ಗವ್, ದಿವ್ಯಾಂಗ ಕಲಾವಿದ ಕೌಶಿಕ್ ಆಚಾರ್ಯ, ಸಮಾಜ ಸೇವಕಿ ಗೀತಾ ಶೆಟ್ಟಿ ಹಾಗೂ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ಟ್ರಸ್ಟಿ ಜೆ. ಕೊರಗಪ್ಪ ಅವರಿಗೆ ಗೌರವಾಭಿನಂದನೆ ಅರ್ಪಿಸಲಾಯಿತು. ಇಂಜಿನಿಯರ್ ಪ್ರವೀಣ್‌ಕುಮಾರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ನಿತಿನ್ ಸಾಲ್ಯಾನ್, ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಮೇರಿಹಿಲ್ ಪಾಲೆಮಾರ್ ಕನ್ವೆನ್ಶನ್, ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೆಮಾರ್ ಫಾರ್ಮ್ಸ್ ಸಭಾಭವನ, ಜೆಪ್ಪಿನಮೊಗರು ಕಡೆಕಾರ್‌ನ ನೇತ್ರಾವತಿ ಸಭಾಭವನವನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು.ಉದ್ಘಾಟನೆಗೊಂಡ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ ಎಂದು ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ೭೪೧೧೩೯೪೭೫೯, ೭೪೮೩೫೭೪೭೫೯, ೯೧೪೮೪೩೫೭೫೯ ಸಂಪರ್ಕಿಸಬಹುದು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

ಮಂಗಳೂರು: ಕರಾವಳಿಯ ಹೆಮ್ಮೆಯ ಹಾಗೂ ಅತ್ಯಂತ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್, ಕರಾವಳಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ತನ್ನ ಪ್ರಾಮಾಣಿಕ ಮತ್ತು ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ, ನಾಡಿನ ಜನತೆಗೆ ಯೋಗ್ಯವಾದ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ.ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಜ| ಎಸ್. ಅಬ್ದುಲ್ ನಜೀರ್ ಅವರು ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.ಅತ್ಯಾಧುನಿಕ ಸೌಲಭ್ಯಗಳು, ಐಷಾರಾಮಿ ವಿನ್ಯಾಸ ಹಾಗೂ ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ಈ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಮಹಾ ಲೋಕಾರ್ಪಣಾ ಸಮಾರಂಭವು ಮೇ 23, 2026 ರ ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ. ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಗಣ್ಯರ ಮಹಾಸಂಗಮ:ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು. ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಸೇರಿದಂತೆ ಕರಾವಳಿ ಮತ್ತು ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ.ಸಮಾಜಕ್ಕೆ ವಾಪಸ್ ನೀಡುವ ಉದಾತ್ತ ಧ್ಯೇಯ :ಈ ಮಹತ್ವಾಕಾಂಕ್ಷಿ ಯೋಜನೆಯು ಲ್ಯಾಂಡ್ ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರ ಕನಸಿನ ಕೂಸಾಗಿದೆ. ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಅವರ ಮೂಲ ಉದ್ದೇಶವಾಗಿದೆ. ಈ ಸಭಾಭವನಗಳು ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ. ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಕೃಷ್ಣ ಜೆ. ಪಾಲೆಮಾರ್ ಅವರು “ಈ ನಾಲ್ಕು ಸಭಾಭವನಗಳನ್ನು ನಾನು ಕೇವಲ ಒಬ್ಬ ಉದ್ಯಮಿಯ ಲಾಭದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ. ಕರಾವಳಿಯ ಜನತೆ ಕಳೆದ 45 ವರ್ಷಗಳಿಂದ ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಯಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಸದುದ್ದೇಶದಿಂದ ಇವುಗಳನ್ನು ರೂಪಿಸಿದ್ದೇನೆ. ಬಡ ಕುಟುಂಬಗಳ ಸಾಮೂಹಿಕ ವಿವಾಹದಂತಹ ಸಂದರ್ಭದಲ್ಲಿ ಹೆತ್ತವರ ಕಣ್ಣಲ್ಲಿ ಕಾಣುವ ಸಾರ್ಥಕತೆ ಮತ್ತು ನೆಮ್ಮದಿಯ ಭಾವವೇ ನನಗೆ ನಿಜವಾದ ಸಂಪತ್ತು. ನಮ್ಮ ಈ ಸಂಸ್ಥೆ ಸದಾ ಸಾರ್ವಜನಿಕರ ಹಿತವನ್ನು ಬಯಸುತ್ತದೆ” ಎಂದು ತಿಳಿಸಿದ್ದಾರೆ. ಸಾಮಾಜಿಕ ಬದ್ಧತೆ ಮತ್ತು ಉಚಿತ ಸೇವೆ :ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಸದಾ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದೆ. ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿ, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲಾ ಸಭಾಂಗಣಗಳನ್ನು ನಿಯಮಾನುಸಾರವಾಗಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.ಶೈಕ್ಷಣಿಕ ಸಾಧಕರಿಗೆ ಗೌರವ :ಲೋಕಾರ್ಪಣಾ ಸಮಾರಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಮೂಲಕ ಯುವ ಪೀಳಿಗೆಯು ದೇಶದ ಪ್ರಗತಿಗೆ ಮತ್ತಷ್ಟು ಕೊಡುಗೆ ನೀಡಲು ಸ್ಫೂರ್ತಿ ತುಂಬಲಾಗುವುದು.ನಾಲ್ಕು ಸಭಾಭವನಗಳ ವಿಶಿಷ್ಟತೆ ಮತ್ತು ಅತ್ಯಾಧುನಿಕ ಸೌಲಭ್ಯಗಳು :ಪ್ರತಿಯೊಂದು ಸಭಾಭವನವನ್ನು ಅತ್ಯಂತ ಚಿಂತನಶೀಲವಾಗಿ ರೂಪಿಸಲಾಗಿದ್ದು, ಸರ್ವ ಧರ್ಮದವರೂ ತಮ್ಮ ಇಷ್ಟದ ಶೈಲಿಯಲ್ಲಿ ಅತ್ಯಂತ ಆರಾಮದಾಯಕವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಬಂದ ಅತಿಥಿಗಳು ಪ್ರಶಾಂತ ಹಾಗೂ ನಿರಾಳ ವಾತಾವರಣದಲ್ಲಿ ಕಾಲ ಕಳೆಯಲು ಇವು ಸೂಕ್ತ ತಾಣಗಳಾಗಿವೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ :ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಾರಂಭಕ್ಕೆ ತೆರಳುವಾಗ ಸಾರ್ವಜನಿಕರನ್ನು ಕಾಡುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ವಾಹನ ಪಾರ್ಕಿಂಗ್. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ನೂರಾರು ವಾಹನಗಳು ಏಕಕಾಲದಲ್ಲಿ ಯಾವುದೇ ಗೊಂದಲವಿಲ್ಲದೆ ಬಂದು ಹೋಗಲು ಇಲ್ಲಿ ಮುಕ್ತ ಅವಕಾಶವಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಮುಖ್ಯರಸ್ತೆಗಳ ಸಂಪರ್ಕ :ಎಲ್ಲಾ ನಾಲ್ಕು ಸಭಾಭವನಗಳನ್ನು ನಗರದ ಪ್ರಮುಖ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಹಾಗಾಗಿ ದೂರದ ಊರುಗಳಿಂದ ಬರುವ ಅತಿಥಿಗಳು ಹೆಚ್ಚಿನ ಹುಡುಕಾಟವಿಲ್ಲದೆ, ಉತ್ತಮ ರಸ್ತೆ ಸಂಪರ್ಕದ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸರಾಗವಾಗಿ ನಿಗದಿತ ಸಮಯಕ್ಕೆ ಸಭಾಭವನಗಳನ್ನು ತಲುಪಬಹುದು. ಬಡವ-ಬಲ್ಲಿದನೆಂಬ ಭೇದವಿಲ್ಲ, ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯ :ಕಾರ್ಪೊರೇಟ್ ಶೈಲಿಯ ಅದ್ದೂರಿ ಈವೆಂಟ್‌ಗಳಿಂದ ಹಿಡಿದು ಜನಸಾಮಾನ್ಯರ ಸಣ್ಣ ಬಜೆಟ್‌ನ ಕಾರ್ಯಕ್ರಮಗಳವರೆಗೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ. ಬಡವ-ಬಲ್ಲಿದನೆಂಬ ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೂ ಒಪ್ಪುವ ಮತ್ತು ಸಲ್ಲುವ ಸುಂದರ ತಾಣಗಳಿವು. ಇಂದಿನ ದಿನಗಳಲ್ಲಿ ಮದುವೆಗಳು ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ, ಗೌರವಯುತ ಹಾಗೂ ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದ ಸಭಾಂಗಣಗಳನ್ನು ಇಲ್ಲಿ ರೂಪಿಸಲಾಗಿದೆ.ಸರ್ವಧರ್ಮ ಸಮನ್ವಯ :ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ಧರ್ಮ, ಜಾತಿ, ಸಮುದಾಯ ಹಾಗೂ ಎಲ್ಲಾ ಆರ್ಥಿಕ ಹಂತದ ಕುಟುಂಬಗಳಿಗೆ ಇಲ್ಲಿ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶ ಹೊಂದಲಾಗಿದೆ. ಇದು ಸಭಾಭವನ ಮಾತ್ರವಲ್ಲ, ಸಾಮಾಜಿಕ ಕ್ರಾಂತಿ :ಇದು ಕೇವಲ ಕಟ್ಟಡಗಳ ಉದ್ಘಾಟನೆಯಲ್ಲ, ಮದುವೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಹೊಸ ಚಿಂತನೆ ಹಾಗೂ ಸಮಾನತೆಯನ್ನು ಪರಿಚಯಿಸುವ ಐತಿಹಾಸಿಕ ಸಾಮಾಜಿಕ ಚಳವಳಿಯಾಗಿದೆ. ಈ ಬೃಹತ್ ಯೋಜನೆಯಿಂದಾಗಿ ಕರಾವಳಿಯ ಡೆಕೋರೇಶನ್, ಕ್ಯಾಟರಿಂಗ್, ಫೋಟೋಗ್ರಾಫಿ, ಲೈಟಿಂಗ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಥಳೀಯ ಯುವಕರಿಗೆ ವ್ಯಾಪಕ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಲಿವೆ. ಸ್ಥಳೀಯ ಆರ್ಥಿಕತೆಗೆ ಈ ಸಭಾಭವನಗಳು ಮಹತ್ತರ ಕೊಡುಗೆ ನೀಡಲಿವೆ. ಈ ನಿಟ್ಟಿನಲ್ಲಿ ಇದು ಅಭಿವೃದ್ಧಿ ಪಥದಲ್ಲಿ ಸಾಗುವ ಹೊಸ ಅಧ್ಯಾಯದ ಆರಂಭವೂ ಹೌದು.ಅತೀ ಶೀಘ್ರದಲ್ಲಿಯೇ ಮಂಗಳೂರಿನ ಕಡಲ ತೀರದಲ್ಲಿ ತೆರೆದ ಸಭಾಂಗಣ :ಇದೇ ಮೊದಲ ಬಾರಿಗೆ, ಕಡಲ ನಗರಿ ಮಂಗಳೂರಿನ ಸಮುದ್ರ ತೀರದಲ್ಲಿ ಅದ್ದೂರಿ, ಭವ್ಯ ಸಮಾರಂಭಗಳನ್ನು ನಡೆಸಲು ಸುಸಜ್ಜಿತ ತೆರೆದ ಸಭಾಂಗಣ ಸಿದ್ಧಗೊಳ್ಳುತ್ತಿದೆ. ಶೀಘ್ರದಲ್ಲೇ ಈ ಸಭಾಂಗಣವೂ ಸಾರ್ವಜನಿಕರಿಗಾಗಿ ಲಭ್ಯವಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 741394759.7483574759.9148435759 ಭೇಟಿ ನೀಡಿ: ಅಧಿಕೃತ ವೆಬ್‌ಸೈಟ್: www.palemar.com.

ಪ್ರಾದೇಶಿಕ ವಾರ್ತೆಗಳು

ಕಾಳಜಿ ವಿಚಾರ ಬಂದಾಗ ತಾಯಿ ಪ್ರಧಾನ ಪಾತ್ರ ನಿರ್ವಹಿಸುತ್ತಾಳೆ. ಮಹಿಳಾ ಸಂಭ್ರಮ ಉದ್ಘಾಟಿಸಿ DMO – ಡಾ. ಶಿವಪ್ರಕಾಶ್

ಹೆಣ್ಣು ತಾಯಿಯಾಗಿ ತಂಗಿಯಾಗಿ ಗೆಳತಿಯಾಗಿ ಸಹೋದರಿಯಾಗಿ ಪತ್ನಿಯಾಗಿ ಅತ್ತೆಯಾಗಿ ನಾದಿನಿಯಾಗಿ ಅತ್ತಿಗೆಯಾಗಿ ಬದುಕಿನಲ್ಲಿ ವಿವಿಧ ಸಂಬಂಧಗಳನ್ನು ನಿರ್ವಹಿಸುತ್ತಾಳೆ ಆದರೆ ಕಾಳಜಿ ವಿಚಾರ ಬಂದಾಗ ತಾಯಿ ಮಾತ್ರನೇ ಪ್ರಧಾನ ಪಾತ್ರ ವಹಿಸುತ್ತಾಳೆ ಒಂದು ಕೈ ಹೆಚ್ಛೇ ತೋರಿಸುತ್ತಾಳೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಶಿವಪ್ರಸಾದ್ ಡಿ.ಎಸ್ ಹೇಳಿದರುಅವರು ಸೌಮ್ಯ ಶೆಟ್ಟಿ ಸಾರಥ್ಯದ” ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ. ಬೆಂಗಳೂರು” ಇವರು ಮಂಗಳೂರನಲ್ಲಿ ದಿನಾಂಕ 20.05.2026 ರಂದು ಆಯೋಜಿಸಿದ “ಮಹಿಳಾ ಸಂಭ್ರಮ” ಕವಿಗೋಷ್ಠಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವೆಲ್ಲ ಸಣ್ಣವರಿದ್ದಾಗಿನಿಂದಲೂ ಪುರುಷ ಪ್ರಧಾನ ಸಮಾಜವನ್ನು ನೋಡಿಕೊಂಡು ಬೆಳೆದವರು. ಮನೆ ಯಜಮಾನ ಪತ್ರಿಕೆ ಹಿಡಿದುಕೊಂಡು ಕೂತರೆ ಮನೆ ಕೆಲಸವನ್ನೆಲ್ಲ ಹೆಂಡತಿಯೇ ಮಾಡಬೇಕಾಗಿತ್ತು . ಆದರೆ ಈಗ ಕೊಂಚ ಬದಲಾಗಿದೆ.60:40 ಅನುಪಾತಕ್ಕೆ ಬಂದು ನಿಂತಿದೆ. ಅದು 50: 50 ಅನುಪಾತಕ್ಕೆ ಬರಬೇಕಾದರೆ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದು ಎಂದು ಅಭಿಪ್ರಾಯ ಪಟ್ಟರು. ಅತ್ತೆ ಸೊಸೆ ಶಾಂತಿಯಿಂದ ಇರಬೇಕಾದರೆ ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ಮಾಡಿ ಸಂಸಾರವನ್ನು ಹಾಳು ಮಾಡಬಾರದು. ಅತ್ತೆ ಸೊಸೆ ಚೆನ್ನಾಗಿ ಬಾಳಿದರೆ ಪುರುಷರಿಗೆ ಅದೇ ದೊಡ್ಡ ಸಂಭ್ರಮ ಎಂದು ಹೇಳಿದ ಇವರು ತುತ್ತ ಮುತ್ತದಂತಹ ಅನೇಕ ಸಿನಿಮ ಬಂದಿದೆ. ಆದರೆ ಅತ್ತೆ ಮತ್ತು ಸೊಸೆ ಸಂಬಂಧದ ಬಗ್ಗೆ Phd ಬಹುಷ್ಯ ಯಾರು ಮಾಡಿಲ್ಲ ಎಂದ ಡಾ. ಶಿವ ಪ್ರಕಾಶ್ ವೇದಿಕೆಯಲ್ಲಿದ್ದ ಮುಖ್ಯ ಅತಿಥಿ ರಾಮಾಂಜಿ ಅವರನ್ನ ಅತ್ತೆ ಸೊಸೆ ಸಂಬಂಧ ಯಾಕೆ ಹೀಗೆ ಎಂಬುದರ ವಿಚಾರದಲ್ಲಿ PhD ಮಾಡುವಂತೆ ಕೇಳಿಕೊಂಡರು. ಐಶ್ವರ್ಯ ಎಷ್ಟೇ ಇದ್ದರೂ ಸಂಸಾರ ಸರಿ ಇಲ್ಲದಿದ್ದರೆ ಯಾವ ಸಂಭ್ರಮವು ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.ಇದಕ್ಕೂ ಮುನ್ನ ಅನುರಾಧ ರಾಜೀವ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ತಂನ್ಸಿರಾ ಆತುರು, ರೇಖಾ ಸುರೇಶ್ ರಾವ್, ಆಯಿಷಾ ಪೆರ್ನೆ, ರಶ್ಮಿ ಸನಿಲ್,ಸಿಹಾನ ಬಿ.ಎಮ್. ಮತ್ತು ಕಸ್ತೂರಿ ಜಯರಾಮ್ ಮಹಿಳೆ ಮಹಿಳಾ ಸ್ವಾಭಿಮಾನ, ಮಹಿಳಾ ಸ್ವಾಭಿಮಾನ,ಮಹಿಳಾ ಹೋರಾಟದ ಬಗೆಗಿನ ಕವನಗಳನ್ನು ವಾಚಿಸಿದರು.ಇದಕ್ಕೂ ಮುನ್ನ ಸಂಜೆ ಗಂಟೆ 4:00 ರಿಂದ 5:30 ತನಕ ಕನ್ನಡ ಗೀತಗಾಯನ ನಡೆಯಿತು. ರಾಣಿ ಪುಷ್ಪಲತಾದೇವಿ, ,ಪವಿತ್ರ ಮತ್ತು ಗಂಗಾಧರ್ ಗಾಂಧಿ ಬೆಳ್ಳಿ ತೆರೆಯ ಬಂಗಾರದ ಗೀತೆಗಳಿಗೆ ದ್ವನಿಯಾಗಿದ್ದು ನೆರೆದ ಪ್ರೇಕ್ಷಕರನ್ನು ರಂಜಿಸಿತು.ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಉಪಾನ್ಯಸಕ ರಾಮಾಂಜಿ ನಮ್ಮ ಭೂಮಿ, ಸಾಮಾಜಿಕ ಕಾರ್ಯಕರ್ತ ರಂಜನ್ ಕುಮಾರ್ ಉಪಸ್ಥಿತರಿದ್ದರು.ಗಂಗಾಧರ್ ಗಾಂಧೀ ಸ್ವಾಗತಿಸಿ, ರೇಖಾ ಸುದೇಶ ರಾವ್ ವಂದೇ ಮಾತರಂ ಗೀತೆ ಹಾಡುವ ಮೂಲಕ ಪ್ರಾರ್ತಿಸಿದರು.ಮಹಿಳಾ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮದ ನಿರೂಪಣೆಯನ್ನ ಗಂಗಾಧರ್ ಗಾಂಧೀ ನಿರ್ವಹಿಸಿದರೆ, ಸಭಾ ಕಾರ್ಯಕ್ರಮದ ನಿರೂಪಣೆ ರಶ್ಮಿ ಸನಿಲ್ ನಿರೂಪಿಸಿದರು. ರಾಣಿ ಪುಷ್ಪಲತಾ ದೇವಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಧುಗಳೇ ನಿಮ್ಮ ಒಂದು ರೂಪಾಯಿ ಒಬ್ಬ ರಂಗ ಜೀವಿಯ ಬದುಕಿಗೆ ಬೆಳಕಾಗಬಹುದು. ನೂರು ರೂಪಾಯಿ ಹೊಸ ಬದುಕು ಕಟ್ಟಿಕೊಡಬಹುದು

ಪರಮಾನಂದ ವಿ. ಸಾಲ್ಯಾನ್ ಶಿಷ್ಯ ವೃಂದಫೇಸ್ ಟ್ರಸ್ಟ್ (ರಿ.) ಮಂಗಳೂರುಜಂಟಿಯಾಗಿ ಆಯೋಜಿಸಿದೆಕರುಣಾಳು ಬಾ ಬೆಳಕೇನಿಮ್ಮ ಮುಂದೆ ಅಂಗೈ ಹಿಡಿದಿದ್ದೇವೆ ನೆರವಿನ ಹಸ್ತ ಚಾಚಿಸಹೃದಯಿ ಬಾಂಧವರೇ,ಸಾಹಿತ್ಯ ಲೋಕದ ಅರ್ನಘ್ಯ ರತ್ನವಾಗಿ, ಪತ್ರಿಕೋದ್ಯಮದ ಭೀಷ್ಮನಾಗಿ, ರಂಗಭೂಮಿಯ ಅದ್ಭುತ ನಿರ್ದೇಶಕನಾಗಿ, ಸಂಗೀತ ಮಾಂತ್ರಿಕನಾಗಿ, ಅಪೂರ್ವ ಸಂಘಟಕನಾಗಿ, ವಾಗ್ಮಿಯಾಗಿ, ನಿರೂಪಕನಾಗಿ ನಾಲ್ಕು ದಶಕಗಳ ಕಾಲ ಕ್ರಿಯಾಶೀಲ ಚಿಂತನೆ ಪಾದರಸದಂತಹ ಓಡಾಟದಿಂದ ತುಳುನಾಡ ಮೇರು ಪ್ರತಿಭೆಯಾಗಿ ಮೆರೆದವರು ಸಸಿಹಿತ್ಲು ಪರಮಾನಂದ ವಿ ಸಾಲ್ಯಾನ್. ತನ್ನ ಬಹುಮುಖ ಪ್ರತಿಭಾ ಲೋಕದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಸಾವಿರ ಸಾವಿರ ಪ್ರತಿಭೆಗಳನ್ನು ಬೆಳೆಸಿದವರು. ರಂಗಭೂಮಿಯಿAದ ಸಂಪಾದನೆ ಸಾಧ್ಯ ಇಲ್ಲ ಎನ್ನುವುದರ ಅರಿವಿದ್ದರೂ, ತನ್ನ ಬದುಕನ್ನು ಪ್ರಾಮಾಣಿಕವಾಗಿ ಕಲಾಮಾತೆ ಶಾರದೆಗೆ ಅರ್ಪಿಸಿ, ರಂಗಭೂಮಿಯಲ್ಲೇ ಜೀವನ ಕಳೆದವರು. ತನ್ನ ಅಲ್ಪ ಸ್ವಲ್ಪ ದುಡಿಮೆಯನ್ನೂ ರಂಗಭೂಮಿಗೆ ಸಮರ್ಪಿಸಿ ರಂಗಚೇತನವಾಗಿ ಬದುಕುತ್ತಿರುವವರು. ರಂಗಭೂಮಿ, ಸಾಹಿತ್ಯ, ಸಂಘಟನೆ ಎಂದು ತನ್ನ ಆರೋಗ್ಯವನ್ನೇ ಮರೆತು, ರಾತ್ರಿ ಹಗಲಿನ ಪರಿವೇ ಇಲ್ಲದಂತೆ ಓಡಾಟ ಮಾಡಿದ ಪರಮಾನಂದ ವಿ. ಸಾಲ್ಯಾನ್, ಇಂದು ಅನಾರೋಗ್ಯದ ಜೊತೆ ಹೋರಾಡುವ ಅನಿವಾರ್ಯತೆಯಲ್ಲಿದ್ದಾರೆ. ಸಾವಿರ ಸಾವಿರ ಅಭಿಮಾನಿ, ಶಿಷ್ಯವೃಂದ ಸಂಪಾದಿಸಿದ್ದ ಸಾಲ್ಯಾನ್ ಅವರು ಇದಕ್ಕಿಂತ ಹೊರತಾಗಿ ಗಳಿಸಿದ್ದು ಕೂಡಿಟ್ಟಿದ್ದು ಏನೂ ಇಲ್ಲ. ಹಾಗಾಗಿ ಇಂದು ತೀರಾ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಂದೊಮ್ಮೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಆರು ತಿಂಗಳು, ಕತ್ತಲಬದುಕು ಕಳೆದ ಸಾಲ್ಯಾನ್ ಇಂದಿಗೂ ಪರಿಪೂರ್ಣ ದೃಷ್ಟಿ ಇಲ್ಲದೆ ಜೀವನ ಕಳೆಯುತ್ತಿದ್ದಾರೆ. ಬೆಂಬಿಡದ ಮಧುಮೇಹದಿಂದಾಗಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಒಂದಷ್ಟು ರೋಗಸಮೂಹ ಆವರಿಸಿಕೊಂಡ ಪರಿಣಾಮ ವಾರದ ಮೂರು ದಿನ ಡಯಾಲಿಸಿಸ್ ಮಾಡಲೇಬೇಕಾದ ಅನಿವಾರ್ಯತೆ. ಡಯಾಲಿಸಿಸ್, ವೈದ್ಯರ ವೆಚ್ಚ, ಔಷಧಿ ವೆಚ್ಚ, ಸ್ಕಾö್ಯನಿಂಗ್, ಓಡಾಟದ ವೆಚ್ಚ, ದಿನನಿತ್ಯದ ಖರ್ಚು ಎಂದು ತಿಂಗಳಿಗೆ ಲಕ್ಷದ ಮೇಲಿನ ವೆಚ್ಚ. ಒಂದಷ್ಟು ದಿನ ಹಿತೈಷಿಗಳು, ಬಂಧುಗಳು, ಸ್ನೇಹಿತರು ನೆರವಾದರು. ಆದರೆ ಜೀವನ ಭದ್ರತೆಗೆ ಕಷ್ಟವಾಗಿದೆ. ಪ್ರತಿದಿನದ ನಿರಂತರ ಚಿಕಿತ್ಸೆಯಿಂದ ಸಾಲ್ಯಾನ್ ಮತ್ತೆ ಮೊದಲಿನಂತ್ತಾಗುತ್ತಾರೆ ಎನ್ನುವುದು ವೈದ್ಯರ ಭರವಸೆ. ಸಾಲ್ಯಾನ್ ಅವರ ಆತ್ಮಸ್ಥೆöÊರ್ಯ, ಆದರೆ ಅದಕ್ಕೆ ಬೇಕಾಗಿರುವುದು ಈಗ ನಮ್ಮ ನಿಮ್ಮ ಆರ್ಥಿಕ ನೆರವು.ಅದಕ್ಕೆ ಅವರ ಶಿಷ್ಯ ವೃಂದ ಮತ್ತು ಫೇಸ್ ಟ್ರಸ್ಟ್ ಮಂಗಳೂರು ಒಂದಾಗಿ, ‘ಕರುಣಾಳು ಬಾ ಬೆಳಕೆ’ ಎನ್ನುವ ಪರಿಕಲ್ಪನೆಯಡಿ ಸಾಲ್ಯಾನ್ ಅವರ ಚಿಕಿತ್ಸೆಗಾಗಿ ಒಂದು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ನೀಡುವ ಕಾರ್ಯಕ್ಕೆ ಮುಂದಾಗಿದೆ. ಇದು ಸಾದ್ಯವಾಗುವುದು ಎಲ್ಲರೂ ಕೈ ಜೋಡಿಸಿದಾಗ ಮಾತ್ರ. ನಾವು ನೀವು ನೀಡುವ ಒಂದು ಪುಟ್ಟ ದೇಣಿಗೆ, ಪರಮಾನಂದ ಸಾಲ್ಯಾನ್ ಅವರಿಗೆ ಹೊಸ ಬದುಕು ನೀಡಬಲ್ಲುದು ಎನ್ನುವುದು ಸತ್ಯ.ಹಾಗಾಗಿ ನಾವು ಜೋಳಿಗೆ ಹಿಡಿದು ಸಾಗಿದ್ದೇವೆ, ಪರಮಾನಂದ ಸಾಲ್ಯಾನ್ ಅವರಿಗೆ ಆರ್ಥಿಕ ನೆರವಿನ ಕ್ರೂಡೀಕರಣಕ್ಕೆ. ಅದಕ್ಕಾಗಿ ಇದೇ ಮೇ 27 ರಂದು ಸಂಜೆ 6.00 ಗಂಟೆಗೆ ಮಂಗಳೂರು ಪುರಭವನದಲ್ಲಿ ‘ತ್ರಿನೇತ್ರ’ ಕಲಾವಿದರ ‘ಬ್ರಹ್ಮ ರಕ್ಕಸ’ ಎನ್ನುವ ನಾಟಕವನ್ನು ಆಯೋಜಿಸಿದ್ದೇವೆ. ಈ ನಾಟಕದಿಂದ ಸಂಗ್ರಹವಾಗುವ ಮೊತ್ತವನ್ನು ಸಾಲ್ಯಾನ್ ಅವರಿಗೆ ನೀಡಿ ಅವರ ಬದುಕಿಗೆ ಬೆಳಕಾಗುವ ಯೋಚನೆ ನಮ್ಮದು. ಅದಕ್ಕಾಗಿ ಒಂದು ಟಿಕೆಟ್ ಖರೀದಿಸಿ ಸಹಕರಿಸಿ ಎನ್ನುವ ಕೋರಿಕೆ ನಮ್ಮದು.ನಾವು ದೇವರಾಗಲು ಸಾಧ್ಯವಿಲ್ಲ, ದೇವಸ್ಥಾನ ಕಟ್ಟಲೂ ಸಾಧ್ಯವಿಲ್ಲ. ಆದರೆ ದೇವರ ಅನುಗ್ರಹ ಪಡೆಯಲು ಸಾಧ್ಯವಿದೆ. ನಮ್ಮ ಸಣ್ಣ ಕಾಣಿಕೆ ಒಬ್ಬ ಸಾಹಿತಿಯ ಬಾಳಿಗೆ ಬೆಳಕಾಗಬಹುದು.ಅದೇ ‘ಕರುಣಾಳು ಬಾ ಬೆಳಕೇ’. ನಿಮ್ಮ ಸಹಾಯಧನವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ನೀಡಬಹುದು.FACE MANGALOREBank of IndiaKulai branchA/c. No. 844820110000165IFSC : BKID0008448

ಪ್ರಾದೇಶಿಕ ವಾರ್ತೆಗಳು

ಅಮರ್ಥ’ ಕನ್ನಡ ಚಲನಚಿತ್ರದ ಲಿರಿಕಲ್‌ ವೀಡಿಯೋ ಬಿಡುಗಡೆ

ಪಡುಬಿದ್ರಿ: ಡಾ.ಕನ್ಯಾನ ಸದಾಶಿವ ಶೆಟ್ಟಿ ಅವರ ಜತೆಯಲ್ಲಿ ಚಿತ್ರ ತಯಾರಿಕೆಯ ಸಾಹಸಕ್ಕಿಳಿದಿರುವ ಕರಾವಳಿ ಕರ್ನಾಟಕದ ಪಡುಬಿದ್ರಿಯ ಹುಟ್ಟು ಪ್ರತಿಭೆ, ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಗುರು ಹೆಗ್ಡೆ ಅವರು ಮುಂದೆ ಚಿತ್ರ ನಿರ್ಮಾಣದಲ್ಲೂ ಇನ್ನಷ್ಟು ಮಿಂಚಲಿ ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಜೀಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಹೇಳಿದರು.ಅವರು ಪಡುಬಿದ್ರಿ ದೇಗುಲದ ಬ್ರಹ್ಮಕಲಶೋತ್ಸವದಲ್ಲಿ ವಿಜಯಪ್ರಕಾಶ್ ಸಂಗೀತ ರಸಸಂಜೆಯ ಕಾರ್ಯಕ್ರಮದಲ್ಲಿ ‘ಪಂಚರಂಗಿ ಫಿಲಂಸ್’ ಸಂಸ್ಥೆಯಿಂದ ಡಾ. ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಾಣದಲ್ಲಿನ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡು ಬಿಡುಗಡೆಯಹಂತದಲ್ಲಿರುವ ಕನ್ನಡ ಚಲನಚಿತ್ರ ‘ಅಮರ್ಥ’ದ ಲಿರಿಕಲ್ ವೀಡಿಯೋ ಬಿಡುಗಡೆ ಸಂದರ್ಭ ಮಾತನಾಡಿದರು. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಶ್ರೀನಗರ್ ಕಿಟ್ಟಿ ಮೇಘನಾ ರಾಜ್, ಗುರು ಹೆಗ್ಡೆ ಮಂಜು ಭಾಷಿಣಿ, ಉಷಾ ಬಂಡಾರಿ, ಹರೀಶ್ ಹಿರಿಯೂರು ಅವರೊಂದಿಗೆ ಕರ್ನಾಟಕ ಕರಾವಳಿಯ ಪ್ರಮುಖ ಕಲಾವಿದರು, ತಂತ್ರಜ್ಞರು ಭಾಗಿಗಳಾಗಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರೇ ಹಾಡಿರುವ ಲಿರಿಕಲ್ ವೀಡಿಯೋವನ್ನು ಸ್ವತಹಾ ವಿಜಯಪ್ರಕಾಶ್ ಬಿಡುಗಡೆಗೊಳಿಸಿದರು. ದೇವಸ್ಥಾನದ ಆನುವಂಶಿಕ ಮೊಕೇಸರ ಭವಾನಿಶಂಕರ ಹೆಗ್ಡೆ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ವೈ. ಎನ್. ಶೆಟ್ಟಿ ಸಹ ಸಂಚಾಲಕ ನಟರಾಜ್ ಪಿ. ಎಸ್., ಯಶೋದಾ ಪೂಜಾರಿ, ಚಿತ್ರನಟ ಪಡುಬಿದ್ರಿ ಗುರು ಹೆಗ್ಡೆ ಮತ್ತಿತರರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಶಿಷ್ಟ ಚೇತನರಿಗೆ ಸ್ವಾವಲಂಬಿ ಬದುಕು -ಡಾ.ಎಂ. ಶಾಂತರಾಮ ಶೆಟ್ಟಿ

ಮಂಗಳೂರು: ವಿಶಿಷ್ಟ ಚೇತನರು ಯಾರನ್ನೂ ಅವಲಂಬಿಸದೆ ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಿದೆ ಎನ್ನುವುದನ್ನು ಹಲವಾರು ಮಂದಿ ಸಾಧಿಸಿ ತೋರಿಸಿದ್ದಾರೆ. ಅಂತಹ ಸಾಧಕರು ವಿಶಿಷ್ಟ ಚೇತನರಿಗೆ ಮಾತ್ರವಲ್ಲ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ. ಶಾಂತರಾಮ ಶೆಟ್ಟಿ ಹೇಳಿದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ವತಿಯಿಂದ ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾ ಶಾಖೆ ಹಾಗೂಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಭಾನುವಾರ ನಗರದ ರೆಡ್‌ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದವಿಶಿಷ್ಟ ಚೇತನರ ಸಂಘದ ೩೪ನೇ ವಾರ್ಷಿಕ ಸಮಾವೇಶ, ದಿವ್ಯಾಂಗರಿಗೆ ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ರೆಡ್‌ ಕ್ರಾಸ್ ದ.ಕ.ಜಿಲ್ಲಾ ಶಾಖೆಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ರೆಡ್‌ ಕ್ರಾಸ್ ಸಂಸ್ಥೆ ವಿಶಿಷ್ಟ ಚೇತನರಿಗೆ ಸವಲತ್ತು ವಿತರಣೆ ಜತೆಗೆ ಅವಶ್ಯ ಇರುವ ಸೇವೆಗಳನ್ನು ನೀಡಲು ಸದಾ ಬದ್ಧವಾಗಿದೆ ಎಂದರು.ಕೆಎಂಸಿಯ ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ಕಾಮತ್, ಚೇತನಾ ವಿಶೇಷ ಮಕ್ಕಳ ಶಾಲೆಯ ಸಂಚಾಲಕ ವಿನೋದ್ ಶೆಣೈ, ವಿ.ವಿ.ಕಾಲೇಜಿನ ಯುವ ರೆಡ್‌ ಕ್ರಾಸ್ ಸಂಯೋಜನಾಧಿಕಾರಿ ಡಾ.ಭಾರತಿ ಪಿಲಾರ್, ರೆಡ್‌ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ರೆಡ್‌ ಕ್ರಾಸ್‌ನ ಉಪಾಧ್ಯಕ್ಷ ಡಾ.ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಪಿ.ಬಿ.ಹರೀಶ್ ರೈ, ಡಾ.ಸುಮನ .ಬಿ. ಉಪಸ್ಥಿತರಿದ್ದರು.ಸಂಘದ ಕೋಶಾಧಿಕಾರಿ ಸದಾಶಿವ ಲೆಕ್ಕಪತ್ರ ಮಂಡಿಸಿದರು. ಶಾಲೆಟ್ ಮತ್ತು ಜಯಕಲಾ ಫಲಾನುಭವಿಗಳ ವಿವರ ನೀಡಿದರು.ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ವಿ. ಮುರಳೀಧರನಾಯ್ಕ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು. ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.

Scroll to Top