ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿರಾಸತ್ : ಗೋದೂಳಿಯಲ್ಲಿ ಗಜಲ್ -ಭಜನ್ ಸುಧೆ ಹರಿಸಿದ ಒಸ್ಮಾನ್ -ಅಮೀರ್ ಮೀರ್, ಸಾಥ್ ನೀಡಿದ ಪಾರತಿ ವ್ಯಾಸ್. ಪ್ರೀತಿ, ಭಕ್ತಿ, ದೇಶಪ್ರೇಮ ಹೊನಲಾಗಿಸಿದ ‘ಸೌಹರ‍್ದತೆಯ ಗಾನ ಸಂತ’

ವಿದ್ಯಾಗಿರಿ (ಮೂಡುಬಿದಿರೆ): ಗುರುವಾರ ಬಿದಿರೆಯ ಆಗಸದಲ್ಲಿ ಹೊಂಗಿರಣ ಮೂಡಿದ್ದರೆ, ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ‘ಸಬ್ ಕಾ ಶುಕ್ರಿಯಾ’ ಎಂದು ವಿನಮ್ರತೆ ವ್ಯಕ್ತಪಡಿಸಿ ಒಸ್ಮಾನ್ ಮೀರ್ ಧನ್ಯರಾದರು, ‘ತುಜ್ ಸೇ ಮೇರಾ ಜೀನಾ ರ‍್ನಾ… ಮೈ ಮುಸಾಫಿರ್ ತು ಮುಸಾಫಿರ್’ ಎಂದು ಅವರ ಪುತ್ರ ಅಮೀರ್ ಮೀರ್ ವೈರಲ್ ಆದ ತಮ್ಮ ಆಲ್ಬಂನ ಗಾನದ ಹೊನಲು ಹರಿಸಿದರು. ‘ತೇರೆ ಬಿನಾ ಸೋನ ಹೀ ಸಕ್ತೇ….’ ಎಂದಾಗ ಸಭಾಂಗಣ ಕಿಕ್ಕಿರಿದ ವಿದ್ಯರ‍್ಥಿಗಳ ಉದ್ಘಾರ ನಿದ್ದೆಗೆಡಿಸಿತು.ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ೩೦ನೇ ರ‍್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಕರ‍್ಯಕ್ರಮದ ಗೋದೂಳಿ ಸೊಬಗು. ಅದು ಸೌಹರ‍್ದತೆಯ ಮೆರುಗು.ಬಳಿಕ ಅಮೀರ್ ಮೀರ್ ಅವರು ‘ಸಂತ್ … ಸಜ್ ನಾ ತೇರೆ ಬಿನಾ…’ ಎಂದು ಹಾಡಿದಾಗ ತಂದೆ ಒಸ್ಮಾನ್ ಗಾಯನದಲ್ಲಿ ಜೊತೆಯಾದರು. ಪಾರತಿ ವ್ಯಾಸಿ ಸಾಥ್ ನೀಡಿದರು.ದರ‍್ಘ ಅಗಲುವಿಕೆಯ ‘ಮೌತ್ ನಾ ಆಯಿ.. ಲಂಬೀ ಜುದಾಯಿ…’ ಎಂಬ ನಟಿ ರೇಖಾ ನೆಚ್ಚಿನ ಹಾಡನ್ನು ಅಮೀರ್ ಉಲಿದಾಗ, ಎಲ್ಲ ಜನಸ್ತೋಮ ‘ ಲಂಬೀ ಜುದಾಯಿ’ ಎಂದು ಕೋರಸ್ ನೀಡಿದರು. ‘ಹೀರೋ’ ಸಿನಿಮಾದ ನೆನಪಿಗೆ ಜನರನ್ನು ಕೊಂಡೊಯ್ಯಿತು. ಹಿರಿಯರಿಗೆ ಜಾಕಿ- ಮೀನಾಕ್ಷಿ ನೆನಪು.‘ಸಜ್ ದಾ ತೆರಾ ಸಜ್ ದಾ’ ಸಾಲಿನ ‘ಮೈ ನೇಮ್ ಈಸ್ ಖಾನ್’ ಸಿನಿಮಾದ ಗಾನಕ್ಕೆ ವಿದ್ಯರ‍್ಥಿಗಳೂ ಜೊತೆ ಹಾಡಿದರು. ತಕ್ಷಣವೇ ‘ಮಿಥುವಾ…’ ಗಾನಸುಧೆ. ‘ ಚಾಂದ್ ನಜರ್ ಆಯಾ..ಆಯಾ ಆಯಾ…‘ತೇರಿ ಯಾದ್ ಸಾಥ್ ಹೇ’ ಹಾಡಿನ ಮೂಲಕ ಗಜಲ್ ಗಾಯಕ ನಸ್ರುತ್ ಫತೇ ಆಲಿಖಾನ್ ಹಾಗೂ ‘ನಮಸ್ತೇ ಲಂಡನ್’ ನೆನಪಿಸಿದರು.‘ವಿರಾಸತ್ ಪ್ರೇಕ್ಷಕರು, ಪ್ಯಾರಾ(ಪ್ರೀತಿ), ಸಂಯಮ್ (ತಾಳ್ಮೆ)ಯಿಂದ ಆಲಿಸುತ್ತಿದ್ದೀರಿ. ನಿಮ್ಮ ಮುಸ್ಸಂಜೆಯ ಭಾವಕ್ಕೆ ನಿಮ್ಮನ್ನು ನಾನು ‘ರ‍್ಭಾರಿ’ ರಾಗದಲ್ಲಿ ಸ್ವಾಗತಿಸುತ್ತೇನೆ’ ಎಂದು ‘ತೇರೆ ಸಖೀ’ ಹಾಡಿದರು. ‘ನನ್ನ ಜೊತೆ ಹಾಡ್ತೀರಾ’ ಎಂದ ಒಸ್ಮಾನ್ ‘ತೆರೆ ನಾಮ್ ಸೇ ಜೀಲೂ .. ‘ ಹಾಡಿದಾಗ ‘ತೇರೀ ದೀವಾನಿ’ ಎಂದು ಪ್ರೇಕ್ಷಕರು ಸ್ವರ ನೀಡಿದರು. ಕೈಲಾಶ್ ಖೇರ್ ನೆನಪು…ಇಷ್ಕ್ ಜುನೂನ್ ಜಬ್ ಹಾತ್ ಸೇ ಬಡ್ ಜಾಯೇ…ಶೇರ್ ಹೇಳಿದಾಗ ಎಲ್ಲೆಲ್ಲೂ ‘ವ್ಹಾ ವ್ಹಾ ವ್ಹಾ’. ಇನ್ನಷ್ಟು ಶೇರ್ ಹೇಳಿ ಹುರಿದುಂಬಿಸಿದರು. ‘ಇಷ್ಕ್ ಸಚ್ಚಾ ಹೋ ತೋ ಖುದಾ ಮಿಲ್ ತಾ ಹೇ’ ಎಂದಾಗ ಪ್ರೀತಿಯ ಭಕ್ತಿ ಅಲೆ ಸಭಾಂಗಣದಲ್ಲಿ ಉಕ್ಕೇರಿತು.‘ಮರ್ ಮನ್ ಮೋಹಿ ಘರ್’ ಎಂದು ಪಾರತಿ ವ್ಯಾಸ್ ಗುಜರಾತಿ ಹಾಡನ್ನು ಢೋಲಕ್ ನಿನಾದದ ಜೊತೆ ಹಾಡಿದಾಗ ಅಮೀರ್ ಯುಗಳ ಹಾಡಿದರು.ಪಾರತಿ ವ್ಯಾಸ್ ಅವರು ಗರ‍್ಭಾದ ಹಾಡನ್ನು ‘ಮನಿಯಾರೋ’ ಎಂದಾಗ ‘ ಹೋವೇ ಹೋವೇ’ ಎಂದು ಶ್ರೋತ್ರುಗಳು ದನಿಯಾದರು. ಅಮೀರ್, ‘ಜೋಗಾಡಾ ತಾರಾ…ರಂಗೀಲಾ ತಾರಾ… ಹೇ…’ ಹಾಡಿ ಉದ್ಘಾರ ಹೆಚ್ಚಿಸಿದರು.‘ನೀವು ಖುಷಿಯಾಗಿದ್ದೀರಿ’ ಎಂದ ಒಸ್ಮಾನ್ ಮೀರ್, ಕರಾವಳಿಯ ಬೆಡಗಿ ದೀಪಿಕಾ ಪಡುಕೋಣೆ ‘ಗೋಲಿಯೋಂಕಿ ರಾಸಲೀಲಾ ರಾಮ್‌ಲೀಲಾ’ ಸಿನಿಮಾದಲ್ಲಿ ರಣವೀರ್ ಜತೆ ಹೆಜ್ಜೆ ಹಾಕಿದ ‘ಮನ್ ಮೋರ್ ಬನಿ ತಾಂಗಟ್‌ಕರೇ’ ಹಾಡನ್ನು ಹಾಡಿದರು. ೨೦೧೩ರಲ್ಲಿ ಈ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಒಸ್ಮಾನ್ ಮೀರ್ ಬಾಲಿವುಡ್ ಪ್ರವೇಶಿಸಿದ್ದರು. ಹೇಮು ಗಾಢ್ವಿ ಈ ಹಾಡನ್ನು ಸಂಯೋಜಿಸಿದ್ದರು. ‘ನಾಲ್ಕೂ ದಿಕ್ಕಿನಲ್ಲಿ ಸುರಿವ ಮಳೆ ಕಂಡಾಗ ನನ್ನ ಹೃದಯ ಅಚ್ಚರಿ ಪಡುತ್ತಿದೆ. ನನ್ನ ಹೃದಯ ನವಿಲಿನಂತೆ ರ‍್ತಿಸುತ್ತಿದೆ’ ಎಂಬ ಭಾವರ‍್ಥದ ‘ಮನ್ ಮೋರ್ ಬನಿ ತಾಂಗಟ್‌ಕರೇ…’ ಸಾಲುಗಳನ್ನು ಹಾಡಿದಾಗ ವಿರಾಸತ್ ನ ವಿದ್ಯುದ್ದೀಪಗಳಿಂದ ಅಲಂಕೃತ ಗೊಂಡ ಸಭಾಂಗಣದಲ್ಲಿ ನೆರೆದ ಜನರೇ ಕುಳಿತಲ್ಲೇ ನವಿಲಿನಂತೆ ಸಂಭ್ರಮಿಸಿದರು. ಆಗಸದಲ್ಲಿ ಮೋಡ ಕವಿದಿದ್ದು, ಇನ್ನೇನು ಮಳೆ ಸಿಂಚನ ಸುರಿಸುವಂತಿತ್ತು ನೀಲನಭ. ಪ್ರೇಕ್ಷಕರೆಲ್ಲ ಕೈ ಎತ್ತಿ ಚಪ್ಪಾಳೆ ಹೊಡೆದರು.ಬಾಲಿವುಡ್‌ ನರ‍್ದೇಶಕ ಸಂಜಯ ಲೀಲಾ ಭನ್ಸಾಲಿ ಅವರು ಒಸ್ಮಾನ್ ಅವರನ್ನು ಈ ಹಾಡಿಗೆ ಮೆಚ್ಚಿಕೊಂಡಿದ್ದರು.ನಂತರ ದೇವದಾಸ್ ಸಿನಿಮಾದ ‘ಡೋಲ್ ಬಾಜೆ…’ ಸಡಗರ. ‘ಬಂ ಬಂ ಬಂ’ ಎಂಬ ರಾಗಕ್ಕೆ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್ ಮೊಣಕೈ ಬಳಸಿ ತಬಲಾ ನುಡಿಸಿದರು.ಅವರ ತಬಲಾ ಚಳಕಕ್ಕೆ ಉದ್ಘಾರದ ಅಲೆ.ವಾಡಿಯಾ ಸಹೋದರರ ಖ್ಯಾತಿಯ ‘ಓ ತೂ ಮಾನೆ ಯ ಮಾನೆ ದಿಲ್ ದಾರಾ…ಆಸಾನ್ ತೇನು ರಬ್ ಮಾನಿಯಾ…’ ಹಾಡಿದಾಗ ವಯೋಲಿನ್ ನಲ್ಲಿ ಪಿಂಟೂಭಾಯಿ ಮಂತ್ರಮುಗ್ಧಗೊಳಿಸಿದರು.‘ಖಾಲಿ ಖಾಲಿ ಜುಲ್ಫೋಂಕಿ ಫಂದೇ ನಾ ಡಾಲೋ….ತುಮಾರಿ ಜವಾನಿ ತುಮ್ ಕೋ ಮುಬಾರಕ್’ ಎಂದು ಹಾಡಿದ ಮೀರ್ ತಂದೆ- ಮಗ, ಮತ್ತೆ ನಸ್ರುತ್ ಫತೇ ಆಲಿಖಾನ್ ಘಜಲ್ ಅನುರಣಿಸಿದರು. ‘ಹಮೇ ಜಿಂದ ರೆಹೆನೋ ದೋ ಹೇ ಹುಸ್ ನ್ ವಾಲೋ…’೧೯೬೫ರಲ್ಲಿ ಲತಾ ಮಂಗೇಶ್ಕರ್ ಹಾಡಿದ ‘ವೋ ಕೌನ್ ತಿ’ ಸಿನಿಮಾದ ‘ಲಗ್ ಜಾ ಗಲೇ ..’ ಪಾರತಿ ಹಾಡಿದರು. ಆಗ ಅಮೀರ್, ‘ ತುಹಿರೇ ತುಹಿರೇ.. ತೇರೆ ಬಿನಾ ಮೈ ಕೈಸೇ ಜೀವೂ’ ಮೂಲಕ ಹರಿಹರನ್ ಹಾಡಿದ ‘ಬಾಂಬೆ’ ಕಾಲ ನೆನಪಿಸಿದರು. ಅರವಿಂದ ಸ್ವಾಮಿ -ಮನಿಷಾ ಕೊಯಿರಾ ನಟನೆಯ ಮೆಲುಕು.ಸೂಫಿ ಪರಂಪರೆಯ ಜ್ಞಾನದ ಅತ್ಯುನತ ಸಂತ ಖಲಂದರ್ (ಆಧ್ಯಾತ್ಮಿಕ ಪ್ರೀತಿ) ಅವರನ್ನು ಭಜಿಸಿ ಘಜಲ್ ಪಿತಾಮಹ ಅಮೀರ್ ಖುಸ್ರೋ ಬರೆದ ಘಜಲ್, ‘ಮಸ್ತ್ ಖಲಂದರ್… ಲಾಲ್ ಖಲಂದರ್.. ‘ ಹೊಮ್ಮಿಸಿದಾಗ ಭಾಂಗಣದಲ್ಲಿ ಸಂಚಲನ ಮೂಡಿಸಿತು. ‘ಪ್ರತಿ ಉಸಿರಿನ ಭಾವಪರವಶತೆ…’ ಸಾಲುಗಳನ್ನು ಜನ ಒಂದೇ ಉಸಿರಿನಲ್ಲಿ ಆಲಿಸಿದಂತೆ ಪರವಶರಾದರು.ಬಳಿಕ, ‘ಅಖಿಯಾ ಉಜಿಯಾ ದಿಯಾ ವಜಾ ಮಾರ್ ದಾ’ ಹಾಡಿದರು.ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಯನ್ನು ಆರಾಧಿಸುವ ಒಸ್ಮಾನ್ ಮೀರ್ ಅವರಿಗೆ ಗಜಲ್ ಖ್ಯಾತಿಯ ನಸ್ರುತ್ ಫತೇ ಆಲಿಖಾನ್, ಜಗ್‌ಜಿತ್ ಸಿಂಗ್., ಮೆಹಂದಿ ಹಸನ್, ಗುಲಾಂ ಆಲಿ ಖಾನ್ ಗಾನಗಳು ಬಲು ಇಷ್ಟ. ಹೀಗಾಗಿ ಅವರು ‘ ಮಾ ತುಜೇ ಸಲಾಂ, ವಂದೇ ಮಾತರಂ’ ಹಾಡಿದಾಗ ಪ್ರೇಕ್ಷಕರೆಲ್ಲ ಮೊಬೈಲ್ ಬೆಳಗಿ ಬೀಸಿದರು. ‘ತೆರೀ ಮಿಠೀ ಮೇ ಮಿಲ್ ಜಾವಾ..’ ಸಾಲನ್ನು ಮಧ್ಯೆ ಸಂಯೋಜಿಸಿದರು. ‘ವಿರಾಸತ್’ನಲ್ಲಿ ದೇಶಭಕ್ತಿಯ ಅಲೆ ಉಕ್ಕಿಸಿತು. ‘ಭಾರತ್ ಮಾತಾ ಕೀ ಜೈ ‘ ಘೋಷಣೆ ಕೂಗಿದರು.ಶೇರ್ ಮೂಲಕ ‘ ನಿಮ್ಮೆಲ್ಲರ ಪ್ರೀತಿ ನಮ್ಮ ಜೊತೆ ಇರಲಿ’ ಎಂದು ಸಂದೇಶ ಸಾರಿದರು.ಮೇ ತೊ ಚುಂಡಾಡಿ ಒದಿ ತಾರಾ ನಾಮ್ ನಿ’ ಹಾಡಿನ ಮೂಲಕ “ಧೋಲಿವುಡ್’ (ಗುಜರಾತಿ ಸಿನಿಮಾ)ಗೆ ಕಾಲಿಟ್ಟ ಒಸ್ಮಾನ್ ಮೀರ್ ಹಾಡಿಗೆ ಸ್ಯಾಂಡಲ್‌ವುಡ್ ರಾಜ್ಯದ ಕೋಸ್ಟಲ್‌ವುಡ್ ಜನತೆ ತಲೆದೂಗಿದರು.ಧೋಲಿವುಡ್ ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕರಾದ ಅವರು ೨೪ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಛೇರಿ ನೀಡಿದ್ದಾರೆ. ಅವರನ್ನು ‘ಸೌಹರ‍್ದತೆಯ ಸಂಕೇತ’ ಎಂದು ಉಲ್ಲೇಖಿಸಲಾಗುತ್ತದೆ.ಅರೇಬಿಯಾದಲ್ಲಿ ಹುಟ್ಟಿದ ಪ್ರಗಾಥ ಅಥವಾ ಮೇಳಗೀತೆಯಾದ ‘ಗಜಲ್’, ಹಿಂದೂ ಭಕ್ತಿರಸದ ‘ಭಜನ್’, ದೇಶದ ನೆಲದ ಸೊಗಡಿನ ‘ಜಾನಪದ’ ಹಾಗೂ ಭಾರತದ ‘ಶಾಸ್ತ್ರೀಯ ’ ಗಾಯನದಲ್ಲೂ ಒಸ್ಮಾನ್ ಮೀರ್ ಸ್ವರಮಾಧರ‍್ಯ ಹರಿಸಿದ್ದಾರೆ.ತಬಲಾದಲ್ಲಿ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್, ಡೋಲಕ್ ನಲ್ಲಿ ಹಾರೂನ್ ಮೀರ್, ಒಕ್ಟೊವಾದಲ್ಲಿ ಸಾಫಿಲ್ ಮೀರ್, ಬಂಜೋದಲ್ಲಿ ನಜೀರ್ ಮೀರ್, ವಯೋಲಿನ್ ಪಿಂಟು ಭಾಯಿ, ಗಿಟಾರ್ ನಲ್ಲಿ ಉತ್ರ‍್ಷ್, ಕೀ ಬರ‍್ಡ್ ನಲ್ಲಿ ಚಂದನ್ ವಘೇಲಾ ಸಾಥ್ ನೀಡಿದರು. ಹೀರಂ ಖಾನ್ ಕರ‍್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿರಾಸತ್ ನೆಲದಲ್ಲಿ ನೃತ್ಯದ ರಾಸಲೀಲೆ, ‘ತ್ರಿಪರ್ಣ’ ಶಾಂತಿಯ ಮಂತ್ರ

ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ವಿರಾಸತ್‌ನ ನಾಲ್ಕನೇ ದಿನವಾದ ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶೈಕ್ಷಣಿಕ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಂಸ್ಕೃತಿಕ ಸಂಚಲನ ಸೃಷ್ಟಿಸಿದರು.ಬಡಗುತಿಟ್ಟಿನ ಯಕ್ಷ ವೇಷಧಾರಿಗಳು ಕೃಷ್ಣನ ರಾಸಲೀಲೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು.ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ’ ಯಕ್ಷ ರೂಪಕವು ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು.‘ರಂಗನೇತಕೆ ಬಾರನೇ..’ ‘ಕೊಳಲನೂದುತ ಬಂದ ಕೃಷ್ಣ’ ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ ಸೃಷ್ಟಿಸಿತು. ಚೆಂಡು, ನೀರಾಟ, ಉಯ್ಯಾಲೆ, ಕೋಲಾಟವನ್ನುಬಯಕ್ಷ ರೂಪಕದಲ್ಲಿ ಬಿಂಬಿಸಿದರು. ಕೃಷ್ಣನ ಬಾಲ ಲೀಲೆ ಸಾರುವ ಕಾಳಿಂಗ ಮರ್ಧನ, ಕಂಸ ವಧೆ, ರಾಧೆಯರು, ವಸುದೇವ, ಪೂತನಿ ಸಂಹಾರದ ದೃಶ್ಯಾವಳಿಗಳನ್ನು ಅಂತಿಮವಾಗಿ ಮೂಡಿಸಿದ್ದು, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು.ನಂತರ ವೇದಿಕೆಯಲ್ಲಿ ಮೊಳಗಿದ್ದು ಡೊಳ್ಳಿನ ಸದ್ದು. ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ನೆಲದ ದೇಸಿ ಕಲೆಯನ್ನು ಉಳಿಸುವ ಸಲುವಾಗಿ ರೂಪಿಸಿದ ಸಾಂಸ್ಕೃತಿಕ ತಂಡವು ಡೊಳ್ಳಿನ ಅಬ್ಬರದ ಅಲೆಯನ್ನೇ ಸೃಷ್ಟಿಸಿತು. ಡೊಳ್ಳು ಹಾಗೂ ತಾಳದ ಜೊತೆ ಕಸರತ್ತು ಮೈ ನವಿರೇಳಿಸಿತು. ಡೊಳ್ಳಿನಲ್ಲೂ ಹುಡುಗ- ಹುಡುಗಿಯರು ಸವಾಲ್ ಜವಾಬ್ ನಡೆಸಿದರು.ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ನ ತಾಂತ್ರಿಕ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಹುಡುಗ- ಹುಡುಗಿಯರ ಸ್ಪರ್ಧೆಯೇ ಏರ್ಪಟ್ಟು, ಕನ್ನಡ ಧ್ವಜ ಹಾರಾಡಿತು.ನಂತರ ದಾಂಡಿಯಾ ಗಾರ್ಭಾದ ಹೊಳಪು. ಗುಜರಾತ್‌ನಲ್ಲಿ ನವರಾತ್ರಿ ಸಂದರ್ಭದಲ್ಲಿ ದಾಂಡಿಯಾ ನರ್ತನ ಮಾಡುತ್ತಾರೆ. ಈ ದಾಂಡಿಯಾದಲ್ಲಿ ಕೃಷ್ಣ -ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ-ಶ್ಯಾಮ ನರ್ತನವು ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು.‘ರಾಧೆ ಶ್ಯಾಮ್’ ಹಾಡಿಗೆ ಹೆಜ್ಜೆ ಹಾಕಿದರು. ಕೋಲಾಟದ ಕೋಲು ದುರ್ಗಾ ದೇವಿಯ ದುಷ್ಟ ಸಂಹಾರದ ಕತ್ತಿಯ ಪ್ರತೀಕವಾಯಿತು.ಕೆಂಪು, ಗುಲಾಬಿ, ಹಳದಿ, ಕಿತ್ತಳೆ ಸೇರಿದಂತೆ ಪ್ರಖರ ಬಣ್ಣಗಳ ಚಾನ್ಯ, ಚೋಲಿ ಅಥವಾ ಘಾಗ್ರ ಚೋಲಿ, ಬಾಂದನಿ, ಅಭ್ಲಾ (ಕನ್ನಡಿ) ಸಹಿತ ದಪ್ಪನೆಯ ಗುಜರಾತಿ ಅಂಚನ್ನು ಹೊಂದಿದ ದುಪ್ಪಟ್ಟ ತೊಟ್ಟ ಹುಡುಗಿಯರು ಹೊಳೆವ ನೆಕ್ಲೆಸ್, ಬಳೆ, ಸೊಂಟ ಪಟ್ಟಿ, ಕಿವಿಯೋಲೆ ಸೇರಿದಂತೆ ಭಾರಿ ಆಭರಣಗಳನ್ನು ಧರಿಸಿ ಹೆಜ್ಜೆ ಹಾಕಿದಾಗ, ಸಾಂಪ್ರದಾಯಿಕ ಕೆಡಿಯಾ ಹಾಗೂ ಪೈಜಾಮ(ಧೋತಿ) ತೊಟ್ಟ ಶ್ವೇತ ವರ್ಣಧಾರಿ ಪುರುಷರು ಸಾಥ್ ನೀಡಿದ್ದು, ಅವರ ನರ್ತನಕ್ಕೆ ವರ್ಣಮಯ ಲೋಕವೇ ಸೃಷ್ಟಿಯಾಗಿತ್ತು.ಆಳ್ವಾಸ್ ತಂಡದ ಬಳಿಕ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ಪಟುಗಳು ವಿದ್ವಾನ್ ವೀಣಾ ಮೂರ್ತಿ ವಿಜಯ ಅವರ ನಿರ್ದೇಶನದಲ್ಲಿ ಸಂತ ನಾರಾಯಣ ತೀರ್ಥರ ‘ಶಿವ ತರಂಗA’ ಪ್ರಸ್ತುತ ಪಡಿಸಿದರು. ಭಕ್ತಿ, ಕರ್ಮ, ರಾಜ ಯೋಗದ ಮಿಶ್ರಣದ ಈ ನೃತ್ಯಲಾಸ್ಯವು ಶಿವಾರಾಧನೆಯ ಭಾಗವಾಗಿದೆ. ಆಂಧ್ರಪ್ರದೇಶದ ಕೂಚುಪುಡಿಯಲ್ಲಿ ಹುಟ್ಟಿದ ಈ ನೃತ್ಯ ಪ್ರಕಾರವು ಭಾರತೀಯ ಪ್ರಮುಖ 8 ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪ್ರಮುಖವಾಗಿದೆ.ಮಡಿಕೆ ಮೇಲೆ ನಿಂತು ಹಾಗೂ ತಲೆಯ ಮೇಲೆ ತಂಬಿಗೆ ಇರಿಸಿ ತಟ್ಟೆ ಮೇಲೆ ನರ್ತಿಸಿದ ಸಮತೋಲನ ಆಕರ್ಷಕವಾಗಿ ಮೂಡಿಬಂತು.ಬೆAಗಳೂರಿನ ಕಾರ್ತಿಸ್ ಪರ್ಫಾಮಿಂಗ್ ಆರ್ಟ್ಸ್ ಬೆಂಗಳೂರಿನ ಕಾರ್ತಿಕ್ ಶೆಟ್ಟಿ ಸಂಯೋಜನೆಯಲ್ಲಿ ಭಕ್ತಿ, ಭಾವಗಳನ್ನು ಪ್ರದರ್ಶಿಸುವ, ಕೃಷ್ಣನ ಲೀಲೆಗಳನ್ನು ಅನಾವರಣಾಗೊಳಿಸುವ ‘ಕೃಷ್ಣರಾಸ್’ ಅಪೂರ್ವ ನೃತ್ಯ ವೈಭವ ಸಾದರ ಪಡಿಸಿದರು. ನವಿಲು ಗರಿ, ನೀರ ಅಲೆ, ಒಡಿಸ್ಸಿ ವೇಷಭೂಷಣದಲ್ಲಿ ಗಮನ ಸೆಳೆದರು.ಅನಂತರ ಶಾಂತಿ, ಏಕತೆಯ ಮಂತ್ರದ ಜಪ.ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಮಾರ್ಗದರ್ಶನದಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ನೃತ್ಯ ಸಂಗಮದ ‘ತ್ರಿಪರ್ಣ’ ಮೂಡಿ ಬಂತು.ಭರತನಾಟ್ಯ, ಕಥಕ್ ಹಾಗೂ ಒಡಿಸ್ಸಿ ಮೂರೂ ಭಾರತೀಯ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರವೇ ಆಗಿದ್ದರೂ, ಮೂಲ, ಶೈಲಿ, ತಂತ್ರ, ಹಿನ್ನೆಲೆ, ವೇಷಭೂಷಣ, ವಾದ್ಯಮೇಳ, ಕೇಶವಿನ್ಯಾಸ ಇತ್ಯಾದಿಯಲ್ಲಿ ವಿಭಿನ್ನತೆಯನ್ನು ಹೊಂದಿದೆ.ಪರ್ವತಶ್ರೇಣಿಯ ಒಡಿಶಾ ಮೂಲದ ಒಡಿಸ್ಸಿ, ಉತ್ತರ ಪ್ರದೇಶದ ಕಥಕ್ ಹಾಗೂ ತಮಿಳುನಾಡಿನ ಮೂಲದ ಭರತನಾಟ್ಯಂ ಮೂಡುಬಿದಿರೆಯ ಆಳ್ವಾಸ್ ವಿರಾಸತ್‌ನಲ್ಲಿ ಸಂಗಮಿಸಿ ನೃತ್ಯಲೋಕವನ್ನೇ ಸೃಷ್ಟಿಸಿತು.ಕಥಕ್ ಮುಖಭಾವ, ವೇಗ, ಶೈಲಿಯಲ್ಲಿದ್ದರೆ, ಒಡಿಶಾ ತನ್ನ ಆಂಗಿಕ ಹಾಗೂ ಹಸ್ತ ಚಲನೆಯಲ್ಲಿ ಗಮನ ಸೆಳೆಯಿತು.‘ಆನಂದ ಮಂಗಳದಾಯಕ’ ಎಂಬ ಪ್ರೀತಿಯ ಆಧ್ಯಾತ್ಮಿಕ ಸಂದೇಶ ಹಾಗೂ ರವೀಂದ್ರನಾಥ ಠಾಗೋರ್ ಸಂದೇಶ ನೀಡಿದರು.ಬೇಧಭಾವ, ಹಿಂಸೆ, ಮೌಢ್ಯ ತೊಡೆದು ಹಾಕಿ, ಕ್ರೋಧ ದ್ವೇಷ ಹೊರ ಹಾಕಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲವೂ ಒಂದೇ ನಮ್ಮದು ಏಕತೆಯ ಮಂತ್ರ, ಅನಂತ ಪ್ರೇಮ, ಶಾಂತಿಯ ಮಂತ್ರ ಸಾರಿ ಎಂಬ ಸಂದೇಶವನ್ನು ತ್ರಿಪರ್ಣ ಮೂಲಕ ನೀಡಿದರು.ನಿತೇಶ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ. ವ್ಯಕ್ತಿತ್ವ ರಚನಾ ವ್ಯವಸ್ಥೆಯೇ ಶಿಸ್ತು

ಮೂಡುಬಿದಿರೆ: ವ್ಯಕ್ತಿತ್ವ ರಚನಾ ವ್ಯವಸ್ಥೆಯೇ ಶಿಸ್ತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಲು ಕಲಿಸುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುಬ್ಬಿಗೂಡು ರಮೇಶ್ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗಿತ್ವದಲ್ಲಿ ೩೦ ನೇ ಆಳ್ವಾಸ್ ವಿರಾಸತ್ ಸಂಧರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ ಸಾಂಸ್ಕೃತಿಕ ಉತ್ಸವ-೨೦೨೪ರ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಈ ಯುಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆಯೇ ಹುಟ್ಟಿದವರು ಹಾಗಾಗಿ ಇವರಿಗೆ ಸಂಪೂರ್ಣ ಜಗತ್ತಿನ ಪರಿಚಯವಿದೆ. ಅಂಗೈಯಲ್ಲಿ ಆಕಾಶವಿದೆ, ಜಾಗತೀಕರಣದ ಅರಿವಿದೆ. ಅದರಲ್ಲೂ ಕರ್ನಾಟಕ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.ಪಾಠ, ಪರೀಕ್ಷೆಯ ಜೊತೆಗೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಒಡನಾಟ ಬೇಕು. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ ನಾಟಕ ಮುಂತಾದ ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾವು ನಮ್ಮನ್ನು ಸಾಂಸ್ಕೃತಿಕ ಒಡನಾಟಗಳಲ್ಲಿ ತೊಡಗಿಸಿರುವುದರಿಂದ ನಮ್ಮನ್ನು ಅಖಂಡ ಕರ್ನಾಟಕ ಗುರುತಿಸಿದೆ ಎಂದರು.ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳಿಸಿಕೊಳ್ಳಿ. ನೀವು ಕಾಣುವ ಕನಸುಗಳಿಗೆ ಪ್ರತಿಫಲದ ನಿರೀಕ್ಷೆ ಇಟ್ಟುಕೊಳ್ಳಿ. ನಿಮ್ಮ ಆಸಕ್ತಿಯ ಮಜಲನ್ನು ಆರಿಸಿಕೊಳ್ಳಿ. ಜೀವನದ ಹೆದ್ದಾರಿಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.ನಾಲ್ವಡಿ ಕೃಷ್ಣರಾಜರ ಕೊಡುಗೆಗಳನ್ನು ನೆನಪಿಸಿ ಸಮಾಜಮುಖಿಯಾಗಿರುವವರನ್ನು ಸಮಾಜ ನೆನಪಿಸಿಕೊಳುತ್ತದೆ. ಬಯಸಿದ್ದನ್ನು ಸಾಧಿಸಲು ಜೀವನದಲ್ಲಿ ಸಾತ್ವಿಕ ಸಿಟ್ಟನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.ಗುಬ್ಬಿ ಗೂಡು ಸಾಂಸ್ಕೃತಿಕ ಸಿರಿ ಎಲ್ಲಾ ಕಡೆಗಳಲ್ಲೂ ಅಸ್ತಿತ್ವಕ್ಕೆ ಬರಲಿದೆ. ಕರ್ನಾಟಕ ಸಾಂಸ್ಕೃತಿಕ ಗೂಡನ್ನು ಕರ್ನಾಟಕದಲ್ಲಿ ಕಟ್ಟುತ್ತೇನೆ ಎಂಬ ಭರವಸೆ ನೀಡಿದರು.ಸ್ಕೌಟ್ಸ್ – ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧಿಯಾ ಮಾತನಾಡಿ ಭಾರತಕ್ಕೆ ಮಾದರಿಯಾಗುವ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನ ಮಂಗಳೂರಿನ ಪಿಲಿಕುಳದಲ್ಲಿ ನಿರ್ಮಾಣವಾಗಿದೆ. ಗುಣಮಟ್ಟದ ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್ ರೇಂಜರ್ಸ್ ಸಾಂಸ್ಕೃತಿಕ ಉತ್ಸವ ಆಳ್ವಾಸ್ ನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಮತ್ತು ನಿತಿನ್ ಅಮೀನ್, ಬೆಂಗಳೂರಿನ ಚಲ್ಲಯ್ಯ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ರಂಜಿಸಿದ ‘ಸ್ಟೆಕೇಟೋ’. ದ್ರಾವಿಡ ಸಂಗೀತದ ಅಬ್ಬರ, ತೀವ್ರ ಸ್ವರಗಳ ಮಾರ್ದನ

ವಿದ್ಯಾಗಿರಿ (ಮೂಡುಬಿದಿರೆ): ’30 ನೇ ಆಳ್ವಾಸ್ ವಿರಾಸತ್’ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನ. ಸ್ವಲ್ಪ ಹಿಂದಿ ಮಿಶ್ರಣ.ಇದು ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯ ಸಂಪ್ರೀತಿ.ಆರಂಭದಲ್ಲಿ ವಯೋಲಿನ್ ನಲ್ಲಿ ಸಾಯಿ ರಕ್ಷಿತ್ ಅವರು ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾದ ‘ರೋಜಾ ಜಾನೇ ಮನ್’ ನುಡಿಸುವ ಮೂಲಕ ಸಂಗೀತ ರಸ ಸಂಜೆಗೆ ನಾಂದಿ ಹಾಡಿದರು.ಬಳಿಕ ‘ ಅಲೈಪಾಯಿದೆ’ ‘ಕಚ್ಚೇ ಮಿರಮೇ’ ಪ್ರೇಮ ಗೀತೆಯನ್ನು ಗೌತಮ್ ಭಾರಧ್ವಾಜ್ ಹಾಡಿದಾಗ ‘ಎಲ್ಫ್’ ತಂಡವು ‘ಸಾಥಿಯೇ’ ಎಂದು ಕೋರಸ್ ನೀಡಿತು. ಸಿನಿಮಾದ ಮಾಧವನ್ -ಶಾಲಿನಿಯ ಪ್ರೇಮದ ಭಾವಕ್ಕೆ ಯುವಮನಸ್ಸುಗಳು ಜಾರಿದವು.ಏರುದನಿಯಲ್ಲಿ ಹಾಡುತ್ತಲೇ ವೇದಿಕೆ ಬಂದದ್ದು ಗಾಯಕ ದೀಪಕ್, ಕರಾವಳಿ ಕುವರ ರಕ್ಷಿತ್ ಶೆಟ್ಟಿಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ, ‘ಚರಿತ್ರೆ ಸೃಷ್ಟಿಸೋ ಅವತಾರ’ ಹಾಡಿದರು. ‘ಹೇಗಿದ್ದೀರಿ… ಜೋಶ್’ ಎಂದು ಹುರಿ ದುಂಬಿಸಿದರುಮತ್ತೆ ಬಂದದ್ದು ಗಾಯಕಿ ನಿರಂಜನಾ ರಮಣನ್, ‘ದಿಲ್ ಸೇ’ ಸಿನಿಮಾಗೆ ಲತಾಮಂಗೇಷ್ಕರ್ ಹಾಡಿದ ‘ಜಿಯಾ ಝಲೇ ಜಾನ್ ಝಲೇ’ ಹಾಗೂ ಅದರ ತಮಿಳು ಅವತರಣಿಕೆಯ ಮಿಶ್ರಣ ಮಾಡಿ ಹಾಡಿದರು. ‘ನಮಸ್ಕಾರ ಆಳ್ವಾಸ್’ ಎಂದು ಸ್ವಾಗತಿಸಿದರು.ಅಲಿ ಸೇತಿ ಬರೆದ ಹಾಗೂ ಶಾಯ್ ಗಿಲ್ ಹಾಡಿದ ಪಂಜಾಬಿ ಹಾಗೂ ಉರ್ದು ಭಾಷೆಯ ‘ಪಸೂರಿ, ಕೋಕ್ ಸ್ಟುಡಿಯೋ ಹಾಡನ್ನು ಗೌತಮ್ ಭಾರಧ್ವಾಜ್ ಹಾಗೂ ನಿರಂಜನಾ ರಮಣನ್ ಹಾಡಿದರು. ಬಳಿಕ ದೀಪಕ್ ‘ಪುಷ್ಪ’ ಸಿನಿಮಾದ ‘ನೋಟ ಬಂಗಾರವಾಯಿತೇ ಶ್ರೀವಲ್ಲಿ ಮಾತೇ ಮಾಣಿಕ್ಯವಾಯಿತೇ’ಯ ತೆಲುಗು ಹಾಡು ಹಾಡಿದರು.‘ಈ ಹಾಡು ಮಹಿಳೆಯರಿಗಾಗಿ’ ಎಂದ ನಿರಂಜನಾ ರಮಣನ್ ‘ಜಬ್ ತಕ್ ಹೇ ಜಾನ್’ ಸಿನಿಮಾದ ‘ ಜಿಯಾ ಜಿಯಾ ರೇ ಜಿಯಾ’ ಹೆಜ್ಜೆ ಹಾಕುತ್ತಲೇ ಹಾಡಿದರು.ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಹೆಚ್ಚಿನ ಹಾಡುಗಳನ್ನು ಆಯ್ಕೆ ಮಾಡಿಕೊಂಡರು.ನಂತರ ಕನ್ನಡ ಮಧುರ ಗೀತೆಗೆ ಬಂದ ಗಾನ ಮಂಜರಿಯು, ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾದ ‘ನಗುವಾ ನಯನಾ ಮಧುರಾ ಮೌನ’, ಹಾಡನ್ನು ಹಾಡಿದರು. ಇಳೆಯರಾಜ ಸಂಗೀತ ಸಂಯೋಜಿಸಿದ ಸಿನಿಮಾದ ಹಾಡು ಸಂಚಲನ ಸೃಷ್ಟುಸಿತು. ಪ್ರೇಕ್ಷಕರೂ, ‘ನಗುವಾ ನಯನಾ’ ಎಂದು ಜೊತೆಯಾದರು.ಬಳಿಕ, ‘ಜೀವ ಹೂವಾಗಿದೆ… ಸಂಜೆ ತಂಗಾಳಿ’ ಹಾಡಿದರು. ಪ್ರೇಕ್ಷಕರೆಲ್ಲ ಮೊಬೈಲ್ ಬೆಳಕನ್ನು ಬೀಸಿದಾಗ ಹೊಸ ಲೋಕ ಸೃಷ್ಟಿಯಾಯಿತು. ನಂತರ ಶಂಕರನಾಗ್ ಅವರ ‘ಗೀತಾ’ ಸಿನಿಮಾದ ‘ ಜೊತೆಯಲಿ ಜೊತೆಯಲಿ’ ಹಾಡಿದರು. ಪ್ರೇಕ್ಷಕರೂ ಹಾಡಿದರು. ನಂತರ ತೆಲುಗಿನಲ್ಲಿ ‘ಪುಷ್ಪ’ ಸಿನಿಮಾದ ‘ಪುಷ್ಪ ಪುಷ್ಪ ಪುಷ್ಪ’ ಹಾಡು ದೀಪಕ್ ಹಾಡಿದರು.ವೈರಲ್ ಆಗಿರುವ ಮೊಬೈಲ್ ರಿಂಗ್ ಟೋನ್ ನಾದವನ್ನು ಸಾಯಿ ರಕ್ಷಿತ್ ವಯೋಲಿನ್ ನಲ್ಲಿ ನುಡಿಸಿದರು. ತಮಿಳು ಹಾಡನ್ನು ಗೌತಮ್ ಹಾಡಿದರು.ನಂತರ ಗೌತಮ್ ಅವರು ರಾಜ್ ಕುಮಾರ್ ನಟಸಿ, ಹಾಡಿದ ಆಕಸ್ಮಿಕ ಸಿನಿಮಾದ ಹಂಸಲೇಖ ಸಂಯೋಜನೆಯ ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡಿದರು.ಮತ್ತೆ ‘ಅಲೈಪಾಯಿದೆ’ ಸಿನಿಮಾದ ಮತ್ತೊಂದು ಹಾಡನ್ನು ನಿರಂಜನಾ ಹಾಡಿದರು. ಗೌತಮ್ ಜೊತೆಯಾಗಿ, ಮಾಧುರಿ ದೀಕ್ಷಿತ್ ಮಾಂತ್ರಿಕತೆಯ ‘ಪುಕಾರ್’ ಸಿನಿಮಾದ ‘ಹೇ ನವ್ ಜವಾನೋ ಬಾತ್ ಮಾನೋ’ ಹಾಡಿದರು. ಗೌತಮ್ ‘ಅಲ್ಫೋ ಅಲ್ಲಾ ಅಲ್ಲಾ’ ಹಾಡಿದರು. ಬಳಿಕ ‘ಉಫ್ ತೇರಿ ಅದಾ…’ ಅಬ್ಬರ.ನಿರಂಜನಾ ‘ದಿಲ್ ಸೇ’ ಸಿನಿಮಾದ ‘ ಚಲೇ ಛಯ್ಯಾಂ ಛಯ್ಯಾಂ’ ಹಾಡಿದಾಗ ಕೇಳುಗರೆಲ್ಲ ರೈಲಿನ ಪ್ರಯಾಣದ ಸಂಭ್ರಮದಲ್ಲಿ ಮುಳುಗಿದರು.ಅನನೂಪ್ ಭಂಡಾರಿ ನಿರ್ದೇಶನದ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ತುಳು ಶಬ್ದ ಭಂಡಾರಗಳನ್ನು ಹೊಂದಿದ ‘ಎಕ್ಕಸಕ್ಕ ರಾ ರಾ’ ಹಾಡಿದಾಗ ಮಕ್ಕಳೆಲ್ಲ ಕುಳಿತಲ್ಲೆ ನರ್ತನ.ಬಳಿಕ ನಿರಂತರವಾಗಿ ‘ಏ ಜವಾನಿ ಏ ದಿವಾನಿ’ ‘ಜುಂಕಾ ಗಿರಾದೇ’ ‘ ಓ ರಾಧಾ ಮೇರಾ ಜುಮ್ಕಾ’ , ‘ದೇಸಿ ಗರ್ಲ್’ ಹಾಡುಗಳ ಫ್ಯೂಜನ್ ಹಾಡಿದರು. ‘ಯಾಮಿ ಯಾಮಿ ಟೂಟ್ ಗಯಾ’ ಪಂಜಾಬಿ ಸಂಗೀತವನ್ನು ಗೌತಮ್ ಉಣಬಡಿಸಿದರು.ಬಳಿಕ ಸ್ಟೆಕೇಟೋ ಮಲೆಯಾಳದತ್ತ ಹೊರಳಿತು.’ಓಲುಲ್ಲೇರ್ ಓಲುಲ್ಲೇರ್ ಮಾಣಿನಗೇರ್’ ಎಂಬ ಮಲೆಯಾಳಿ ಸಿನಿಮಾದ (ಅಜಗಜಾಂತರಂ) ಹಾಡು ನಿರಂಜನಾ ಹಾಡಿದರು. ಕಣ್ಣೂರು ಮತ್ತು ಕಾಸರಗೋಡಿನ ಬೆಟ್ಟಗಾಡಿನಲ್ಲಿ ಬದುಕುವ ತುಳು ಭಾಷಿಕ ಮಾವಿಳ್ಳನ್ ಸಮುದಾಯದ ಜಾನಪದ ಹಾಡು ಇದಾಗಿದ್ದು, ಹಾಡು ಮಲೆಯಾಳದಲ್ಲಿದ್ದರೂ ತುಳು ಪದಗಳಿಂದಲೇ ತುಂಬಿದೆ. ತಮಿಳು, ಕನ್ನಡ, ಮಲೆಯಾಳದಂತೆ ತುಳು ಕೂಡಾ ದ್ರಾವಿಡ ಭಾಷೆಯಾಗಿದೆ. ಇದನ್ನು ಶುದ್ಧ ತುಳುವಿನ ಪಾಡ್ದನಗಳಲ್ಲಿ ‘ಓಲುಲ್ಲೇರ್ ಓಲುಲ್ಲೇರ್ ಮಾಣಿನಾಗೇರ್, ಮೂಲುಲ್ಲೇರ್ ಮೂಲುಲ್ಲೇರ್ ಮಾಣಿನಾಗೇರ್, ಮಾಣಿನಾಗೇರ್ ಪೆತ್ತ ಕೈಕಂಜಿ’ ಎಂದು ಹಾಡುತ್ತಾರೆ. ಬಳಿಕ ‘ಮಿನಾಟಿ’ ‘ಅಡಿ ಅಡಿ’ ಸಾಲುಗಳ ಅಬ್ಬರ. ಮಲೆಯಾಳದ ಬಳಿಕ ತಮಿಳು ಮಧುರಗೀತೆಗಳ ಫ್ಯೂಜನ್ ಗಾಯನ ತೇಲಿ ಬಂತು.ಬಳಿಕ ಪುನೀತ್ ರಾಜ್ ಕುಮಾರ್ ಸ್ಮರಣೆಗೆ ವೇದಿಕೆ ಜಾರಿತು. ವಿಜಯ್ ಪ್ರಕಾಶ್ ಹಾಡಿದ, ‘ಗೊಂಬೆ ಹೇಳುತ್ತೈತೆ…’ ಹಾಡಿದಾಗ ಎಲ್ಲ ವೀಕ್ಷಕರು ಹಾಡಿಗೆ ಜೊತೆಯಾದರು. ಭಾವನಾತ್ಮಕ ಲೋಕವೊಂದಕ್ಕೆ ಬೆಳದಿಂಗಳು ಸೂಸಿ ಆಗಸದ ಪೂರ್ಣ ಚಂದ್ರನೂ ಸಾಥ್ ನೀಡಿದ.‘ಸರೈನೋಡು’ ವಿನ ‘ಬ್ಲಾಕ್ ಬಾಸ್ಟರ್’, ‘ರಾನು ರಾನು’, ‘ಕುರ್ಚಿ ಮಡತಪೆಟ್ಟಿ’, ಹಾಡುಗಳ ಜೋಶ್ ಗೆ ಜನರೂ ಕೈಬೀಸಿ ಸಂತಸ ಪಟ್ಟರು. ಬಳಿಕ ವಿಜಯ್ ‘ಗಿಲ್ಲಿ’ ಹಾಡಿನ ಗೀಳಿನಲ್ಲಿ ಯುವಜನತೆ ಮುಳುಗಿದಾಗ ಡ್ರಮ್ಸ್ ನಲ್ಲಿ ಸಂದೀಪ್ ರಮಣನ್ ಚಮತ್ಕಾರ ಮಾಡಿಸಿದರು. ವಿದ್ಯಾರ್ಥಿಗಳ ‘ಹೇ ಹೇ’ ಉದ್ಘಾರ ಹೊಮ್ಮಿತು.ನಂತರ ಬಾಲಿವುಡ್‌ ಗೆ ತೆರಳಿದ ಗಾನಲೋಕ, ದೀಪಕ್ ‘ ‘ಆಂಕ್ ಮಾರೇ’ ಹಾಡಿನ ಮೂಲಕ ತೆರೆದುಕೊಂಡಿತು. ನಿರಂಜನಾ ‘ ಪರಂ ಪರಂ ಸುಂದರಿ…’ ಹಾಡಿದರು.ಬಳಿಕ ಪುಷ್ಪದ ‘ರೌಡಿ ಬೇಬಿ’, ‘ಬೀಟ್’ ಹಾಡುಗಳನ್ನು ಹಾಡಿದರು. ಕೊನೆಯಲ್ಲಿ”ಸಾಮೇ ಸಾಮೇ’ ‘ ಆರ್ ಆರ್ ಆರ್’ ಸಿನಿಮಾದ ‘ನಾಟು, ನಾಟು,’ ಮೂಲಕ ಜನರ ಹುಚ್ಚೆಬ್ಬಿಸಿದರು. ಡ್ರಮ್ಸ್, ಗಿಟಾರ್ ಅಬ್ಬರದ ಜೊತೆ ಸಂಗೀತ ಸಂಜೆಗೆ ತೆರೆಬಿತ್ತು.‘ಸ್ಟೆಕೇಟೋ’ ಎಂದರೆ ಪ್ರತಿ ಸ್ವರವನ್ನು ತೀವ್ರವಾಗಿ ನಿರ್ವಹಿಸುವುದು ಎಂದರ್ಥ. ಹೆಸರಿಗೆ ತಕ್ಕಂತೆ ತಂಡವು ಪ್ರದರ್ಶನ ನೀಡಿದ್ದು, ಸುಮಾರು 75 ಸಾವಿರಕ್ಕೂ ಅಧಿಕ ಜನ ಹಿಡಿಯುವ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಜನ ಸಾಗರ ಲಕ್ಷದ ಲಕ್ಷ್ಯ ಹರಿಸಿತು.ಶಾಸ್ತ್ರೀಯ ಸಂಗೀತ, ಆಧುನಿಕ ಸಂಗೀತ, ಸಿನಿಮಾ ಸಂಗೀತ, ಲಘು ಸಂಗೀತಗಳ ಮಿಶ್ರಣದ ಜೊತೆ ಆಧುನಿಕ ಸಂಗೀತದ ರಸದೌತಣ ದೊರೆಯಿತು2011ರಲ್ಲಿ ಆರಂಭಗೊಂಡ ಸ್ಟೆಕೇಟೋ ತಂಡ, ಲಂಡನ್ ಒಲಿಂಪಿಕ್ಸ್ ನಲ್ಲಿ ಪ್ರದರ್ಶನ ನೀಡಿದ್ದು,, ರಿಯೊ ಡಿ ಜನಿರೊ, ಬಾಲಿ, ಮಿಲಾನ್ ಸಾಂಸ್ಕೃತಿಕ ನಗರಿಗಳು ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಕಛೇರಿಗಳನ್ನು ನೀಡಿದೆ. ‘ಇಲೆ’ ಸ್ಟೆಕೇಟೋ ತಂಡದ ಆಲ್ಬಂ.ಸಂಸ್ಥಾಪಕರಾದ ಆರ್.ಎಚ್. ವಿಕ್ರಂ ಅವರ ಸಂಗೀತ ಸಂಯೋಜನೆ ಹಾಗೂ ಕೀ ಬೋರ್ಡ್ ನಲ್ಲಿ ಶಲ್ಲು ವರುಣ್ (ಬೇಸ್ ಗಿಟಾರ್), ಅಭಿನಂದನ್ (ಗಿಟಾರ್ ವಾದಕ), ಸಂದೀಪ್ ರಮಣನ್ (ಡ್ರಮ್ಸ್), ಸೌರಭ್ ಜೋಶಿ (ವಾದ್ಯಮೇಳ ), ಸಾಯಿ ರಕ್ಷಿತ್ (ವಯೋಲಿನ್) ವಿಕ್ರಂ ಸಾರದಿ (ಕೀ ಬೋರ್ಡ್) ಹಾಗೂ ಹಾನೆಸ್ಟ್, ಶರತ್ ಹಾಗೂ ಗೋಕುಲ್ ಧ್ವನಿ ನಿರ್ವಹಣೆಯಲ್ಲಿ ಸಹಕರಿಸಿದರು. ‘ಎಲ್ಫೆ’ ಕೋರಸ್ ನೀಡಿತು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿದ್ಯಾರ್ಥಿಗಳ ಸಾಧನೆಯ ಗುಟ್ಟು ಸಂಜೆ 5 ಘಂಟೆಯ ನಂತರದ ಕಲಿಕೆ: ವಿವೇಕ್ ಆಳ್ವ

ಮೂಡುಬಿದಿರೆ: ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ಮತ್ತು ಶಿಕ್ಷಕರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೋಷಕರ ಮತ್ತು ಶಿಕ್ಷಕರ ತ್ಯಾಗವನ್ನು ಮರೆಯಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಅವರು ಮಂಗಳವಾರ ವಿದ್ಯಾಗಿರಿಯ ವಿ.ಎಸ್ ಆಚರ‍್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪ.ಪೂ ಕಾಲೇಜಿನ ಸಾಂಸ್ಕೃತಿಕ ಸಂಘದ ಪ್ರತಿಭಾ ಪುರಸ್ಕಾರ ಕರ‍್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ಕೆಲಸವನ್ನು ಶ್ರದ್ಧೆಯಿಂದ, ಮನಸ್ಸಿಟ್ಟು ನಿರ್ವಹಿಸಿ. ಆಗ ಅಭ್ಯುದಯ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಕೆಲವು ಸಂಧರ್ಭದಲ್ಲಿ ನಮ್ಮ ನಡುವೆ ಇರುವ ವ್ಯವಸ್ಥೆ ನಮಗೆ ಕಟ್ಟುನಿಟ್ಟಾಗಿ ಇದ್ದಾಗ ಕಷ್ಟವೆನಿಸಿದರೂ, ಅವುಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಆಳ್ವಾಸ್‌ನ ವಿದ್ಯಾರ್ಥಿಗಳು ಅದೃಷ್ಟಶಾಲಿಗಳು. ಡಾ ಎಂ ಮೋಹನ್ ಆಳ್ವರವರಂತವರ ಮಾರ್ಗದರ್ಶನ, ನಿಮ್ಮನ್ನು ಶ್ರೇಷ್ಠ ವಿದ್ಯಾರ್ಥಿಗಳನ್ನಾಗಿಸುತ್ತದೆ. ಎಳವೆಯಲ್ಲಿಯೆ ಇಂಗ್ಲೆAಡ್‌ನ ಆಕ್ಸಫರ್ಢ್ ವಿವಿಯಿಂದ ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಯನ್ನು ಪಡೆದವರು ಡಾ ಆಳ್ವರು. ಆಳ್ವಾಸ್‌ನಲ್ಲಿ 5 ಗಂಟೆಯ ನಂತರ ಆರಂಭವಾಗುವ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಯೋಚನೆ ಮತ್ತು ಯೋಜನೆಯ ಹಿಂದಿನ ವ್ಯಕ್ತಿ ಡಾ ಎಂ ಮೋಹನ್ ಆಳ್ವರು. ಪ್ರತಿ ವಿದ್ಯಾಸಂಸ್ಥೆಗೂ ಅರ್ಥ ಬರುವುದು ವಿದ್ಯಾರ್ಥಿಗಳಿಂದ. ನಾವು ಗೆಲುವಿನಿಂದ ಏನನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಹೆಚ್ಚಿನ ಪಾಠ ಕಲಿಸುತ್ತದೆ. ಆಳ್ವಾಸ್‌ನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಸಂಸ್ಥೆಯ ಹೆಸರಿಗಷ್ಟೇ ಅಲ್ಲ. ವಿದ್ಯಾರ್ಥಿಗಳು ಅದರಿಂದ ಶಿಕ್ಷಣವನ್ನು ಪಡೆಯಬೇಕು ಎಂದರು.ಕರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚರ‍್ಯ ಪ್ರೋ. ಸದಾಕತ್, ಜಗತ್ತು ವೇಗವಾಗಿ ಬದಲಾವಣೆ ಹೊಂದುತ್ತಿದೆ. ಆ ಬದಲಾವಣೆಗೆ ನಾವು ಸಿದ್ದರಾಗಬೇಕಿದೆ. ಡಾ. ಮೋಹನ್ ಆಳ್ವರ ಉದ್ದಾತ ಗುಣ ಎಂದರೆ ಅವರು ಏನನ್ನು ಯೋಚಿಸಬೇಕೆಂದು ಹೇಳುವುದಿಲ್ಲ ಬದಲಾಗಿ ಹೇಗೆ ಯೋಚಿಸಬೇಕೆಂಬುದನ್ನು ತಿಳಿಸುತ್ತಾರೆ. ಅವರ ಅಂತರ್ಗತ ಗುಣಗಳನ್ನ ನಮ್ಮಲ್ಲಿ ಅಳವಡಿಸಿಕೊಂಡಾಗ ನಾವು 21 ನೇ ಶತಮಾನದ ಎಲ್ಲಾ ಸವಾಲುಗಳನ್ನು ಸ್ವೀಕರಿಸಲು ಸದೃಢರಾಗುತ್ತವೆ ಎಂದರು.ಕರ‍್ಯಕ್ರಮದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಹಾಗೂ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್‌ನ ಪರಿಣಾಮಕಾರಿ ಎಂಜಿನಿಯರಿAಗ್‌ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರುಚಿ ಥೋಮೊಶಿಗೆ, ಸೋಜೊ ಅಂತರರಾಷ್ಟಿçÃಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕ್ಯಾನಿಕಲ್ ಎಂಜಿನಿಯರಿAಗ್ ಪ್ರಾಧ್ಯಾಪಕ ಡಾ.ಅಕಿಸಾ ಮೊರಿ ಬಹುಮಾನ ವಿತರಿಸಿದರು. ಕರ‍್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್ ಇದ್ದರು.ಉಪನ್ಯಾಸಕಿ ಡಾ ಸುಧಾರಾಣಿ ಕರ‍್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಂಘದ ಸಹಸಂಚಾಲಕಿ ಪ್ರಿಯಾ ಎಚ್ ಎಸ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು -ವಿಚಾರ ಶಿಬಿರ 2024. ‘”ದೇಶ ಉಳಿಯಲು ಗಾಂಧಿ ಮನಸ್ಸಿನ ಯುವಜನತೆಯ ಅವಶ್ಯ ಹೆಚ್ಚಿದೆ”

ವಿದ್ಯಾಗಿರಿ: ದೇಶ ಬಿಟ್ಟು ಗಾಂಧಿಯಿಲ್ಲ, ಗಾಂಧಿ ಬಿಟ್ಟು ಭಾರತವಿಲ್ಲ ಎಂಬುದನ್ನು ಎಲ್ಲರು ಅರಿತುಕೊಳ್ಳುವ ಅಗತ್ಯವಿದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ ಕೃಷ್ಣ ಹೇಳಿದರು.ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆದ ‘ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ‘ ಎರಡು ದಿನಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಾಂತಿಯುತವಾಗಿ ಸ್ವಾತಂತ್ರ‍್ಯವನ್ನು ತಂದುಕೊಟ್ಟು, ನೈತಿಕತೆಯ ಉತ್ತುಂಗದಲ್ಲಿ ಬದುಕಿ ಬಾಳಿದ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ ಎಂದರು. ಗಾಂಧೀಜಿ ಅವರ ಬಗ್ಗೆ ಅಧಿಕೃತ ಸಾಹಿತ್ಯ ಓದಿ ಅರ್ಥೈಸಿಕೊಳ್ಳಿ. ನಂತರ ಪ್ರಶ್ನಿಸಿ. ಆದರೆ ಗೊತ್ತಿಲ್ಲದೇ ಟೀಕಿಸಬೇಡಿ ಎಂದರು. ಅಹಿಂಸಾತ್ಮಕ ಮತ್ತು ಸಾಮುದಾಯಿಕ ಸಮಾಜದ ಪರಿಕಲ್ಪನೆಯ ಆಲೋಚನೆಯನ್ನು ಮೈಗೂಡಿಸಿ ಬದುಕಿದರೆ ಗಾಂಧಿಗೆ ಸಲ್ಲಿಸುವ ಗೌರವವಾಗುತ್ತದೆ ಎಂದು ತಿಳಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ , ಗಾಂಧೀಜಿ ಕುರಿತ ಅಪಾರ ಗೌರವ , ಚಿಂತನ ಮಂಥನ ಮತ್ತು ವಿಚಾರಧಾರೆಗಳು ಇನ್ನಷ್ಟು ಹೆಚ್ಚಾಗಬೇಕು. ಜಗತ್ತಿನ ಯಾವುದೇ ದೇಶದಲ್ಲೂ ಇಂತಹ ಮಹಾತ್ಮರು ಸಿಗಲು ಸಾಧ್ಯವಿಲ್ಲ. ಆದ್ದರಿಂದ, ಗಾಂಧೀಜಿಯ ಕುರಿತ ಅಧ್ಯಯನ, ವಿಚಾರ, ವಿಶ್ಲೇಷಣೆಗಳು ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು ಎಂದು ಹೇಳಿದರು.ಕವಯಿತ್ರಿ ಸವಿತಾ ನಾಗಭೂಷಣ ಮಾತನಾಡಿ, ಗಾಂಧಿ ವಿರೂಪಗೊಳಿಸುವ ಮನಸ್ಥಿತಿಗಳನ್ನು ದೂರ ಮಾಡುವುದೇ ನಾವು ಭೂಮಿಗೆ ನೀಡುವ ದೊಡ್ಡ ಗೌರವ ಎಂದರು. ಮಾತು ಮತ್ತು ಕೃತಿಗೆ ಸಂಬAಧ ಇದ್ದರೆ ಮಾತ್ರ ನಡವಳಿಕೆ ಮೇಲೆ ನಂಬಿಕೆ ಬರುತ್ತದೆ. ಆದರೆ, ನಮ್ಮ ನಡುವೆ ಗಾಂಧಿ ಮಸುಕಾಗುತ್ತಿದ್ದಾರೆ. ಭೂಮಿ ಅಗತ್ಯ ಪೂರೈಸಬಹುದೇ ಹೊರತು ಆಸೆಗಳನ್ನಲ್ಲ ಎಂದು ಗಾಂಧಿ ಹೇಳಿದ್ದರು ಎಂದರು.ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವ ಶ್ರೇಷ್ಠ: ಚೊಕ್ಕಾಡಿತಪ್ಪನ್ನು ತಪು, ಸರಿಯನ್ನು ಸರಿ ಎಂದು ಒಪ್ಪಿಕೊಳ್ಳುವ ಮನೋಭಾವ ಗಾಂಧೀಜಿಯಲ್ಲಿತ್ತು ಎಂದು ಅಧ್ಯಾಪಕ, ಲೇಖಕ ಅರವಿಂದ ಚೊಕ್ಕಾಡಿ ನುಡಿದರು.ಅನನ್ಯತೆ ಹಾಗೂ ಸ್ವಂತಿಕೆಯನ್ನು ಅಳವಡಿಸಿಕೊಂಡು ಅಂತರ್ವಾಣಿಯ ಮಾತಿನಂತೆ ನಡೆದವರು ಗಾಂಧಿ. ಗಾಂಧೀಜಿಯವರು ನಮ್ಮ ಹಾಗೇ ಇದ್ದ ವ್ಯಕ್ತಿ. ಆದರೆ ಜೀವನದ ಪ್ರತಿ ಘಟ್ಟದಲ್ಲಿ ತನ್ನನ್ನು ಸತ್ಯದ ಜೊತೆ ಪ್ರಯೋಗ ಮಾಡುತ್ತಾ ಮಹಾತ್ಮರೆನಿಸಿಕೊಂಡರು. ಅವರು ಪ್ರತಿ ಸನ್ನವೇಶವನ್ನು ಹೇಗೆ ತನ್ನ ಅಭ್ಯುದಯಕ್ಕೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತಿದ್ದರು ಎಂದರು.ಸ್ವರಾಜ್: ಹಾಗೆಂದರೇನು? ಡಾ ಸಮನಸ್ ಕೌಲಗಿಆಕ್ಸ್ಫರ್ಡ್ನ ಇಂದಿರಾಗಾAಧಿ ಸ್ಕಾಲರ್, ಯೂನಿವರ್ಸಿಟಿ ಆಫ್ ಆಕ್ಸ್ಫರ್ಡ್ನ ಡಾ. ಸುಮನಸ್ ಕೌಲಗಿ ಮಾತನಾಡಿ ಒಳ್ಳೆಯ ಜೀವನದ ಕಲ್ಪನೆಯೆ ಸ್ವರಾಜ್ಯ. ನೈತಿಕತೆ, ರಾಜಕೀಯ, ಮನುಷ್ಯ ಸಂಬAಧ, ಆರ್ಥಿಕತೆ ಇವುಗಳ ಅರಿವು ಕೂಡ ಸ್ವರಾಜ್ಯದ ಕಲ್ಪನೆ ಎಂದರು. ಮುಂದುವರಿದ ದೇಶ ಎನ್ನಲು ಮುಖ್ಯ ಕಾರಣ ಆ ದೇಶದ ಜನರ ನೆಮ್ಮದಿ. ಮನುಷ್ಯರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಬಾರದಂತೆ ಕಾಪಾಡಿಕೊಳ್ಳುಕೊಳ್ಳಲು ಸ್ವರಾಜ್ಯ ಒಂದು ಮೂಲ ಎಂದರು.ಅಟೆನ್ ಬರೋರವರ ಗಾಂಧಿ ಸಿನೆಮಾ : ಡಾ ವಿಷ್ಣುಮೂರ್ತಿ ಪ್ರಭು.ಮಹಾತ್ಮಗಾಂಧಿಯವರುಇಡೊಈ ಜಗತ್ತನ್ನು ಪ್ರಭಾವಿಸಿದ ಏಕೈಕ ಮಹಾ ನಾಯಕ. ಇವರು ಮಹಾನ್ ನಾಯಕನಿಂದ ಮಹಾತ್ಮ ಪಟ್ಟವನ್ನು ಅಲಂಕರಿಸಿದ ಬಗೆಯನ್ನು ಅಟೆನ್ ಬರೋ ತನ್ನ ಗಾಂಧಿ ಸಿನೆಮಾದಲ್ಲಿ ಸೆರೆ ಹಿಡಿದವೊರಿ ಅನನ್ಯ.ಎಲ್ಲಿಯೂ ಗಾಂಧಿಯ ಪಾತ್ರವನ್ನು ವೈಭವೀಕರಿಸದಂತೆ, ಗಾಂಧಿಯು ಅನುಸರಿಸಿದ ತತ್ವಗಳಿಗೆ ಸಣ್ಣ ಭಂಗವೂ ಆಗದಂತೆ ಇವರು ಸಿನೆಮಾ ಮಾಡಿದ ಪರಿ ಅದ್ಭುತವೇ ಹೌದು.ಗಾಂಧಿಯವರಿಗೆ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಆದ ಅವಮಾನವು ಭಾರತಕ್ಕೆ ಹೇಗೆ ಲಾಭವಾಯಿತು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಈ ಸಿನೆಮಾವನ್ನು 1962ರಲ್ಲಿ ಆರಂಭಿಸಿ 1982ರಲ್ಲಿ ಮುಗಿಸಿದರು. ಇದಕ್ಕೂ ಮುಂಚೆ ಬಿಬಿಸಿ, ಗಾಂಧಿಯ ಕುರಿತಂತೆ ಅವರ ಒಡನಾಡಿಗಳನ್ನು ಕೂರಿಸಿ ಮಾಡಿದ ಡಾಕ್ಯುಮೆಂಟರಿ ಬಿಟ್ಟರೆ ಬೇರೆ ಯಾರಿಂದಲೂ ಸಿನೆಮಾ ಮಾಡಲಾಗಿರಲಿಲ್ಲ. ಹಾಗಾಗಿ ಅಟೆನ್‌ಬರೋರವರ ಸಾಧನೆ ಅತ್ಯದ್ಭುತವೇ ಸರಿ. ಬಹುಶಃ ಗಾಂಧಿಯವರನ್ನ ಕೇಳಿದ್ದರೆ ಇಂತಹ ಸಿನೆಮಾ ಮಾಡಲು ಒಪ್ಪುತ್ತಿರಲಿಲ್ಲ. ಸಿನೆಮಾದಲ್ಲಿ ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಎರಡು ಲಕ್ಷ ಜನ ಸೇರಿಸಿದ್ದು, ಅವರಿಗೆ 1948ರ ವೇಷಭೂಷಣ, ಕೇಶವಿನ್ಯಾಸ, ನಡೆ ನಿಲುವುಗಳನ್ನು ಒದಗಿಸುವುದು ಸುಲಭವಲ್ಲ. ಸಿನೆಮಾದಲ್ಲಿ ಉಪ್ಪಿನ ಸತ್ಯಾಗ್ರಹ, ಗಾಂಧಿಯ ವಿವಾಹದಂತಹ ಕೆಲವು ಸನ್ನಿವೇಶಗಳಲ್ಲಿ ಕೊಂಚ ಕೃತಕತೆ ಇಣುಕಿದರೂ ಒಟ್ಟಂದಲಿ ಸಿನೆಮಾ ಅದ್ಬುತ ಪ್ರಯತ್ನವೇ ಸರಿ ಎಂದರು.ಅಜ್ಜರಕಾಡು ಉಡುಪಿ ಸ.ಪ್ರ.ದ. ಕಾಲೇಜಿನ ಇತಿಹಾಸ ವಿಭಾಗದ ಸಹ-ಪ್ರಾಧ್ಯಾಪಕ ಡಾ. ರಾಮದಾಸ ಪ್ರಭು ‘ದೇಶ ವಿಭಜನೆ’ಯಲ್ಲಿ ಮಹಾತ್ಮರ ಪಾತ್ರ ಇದೆಯೇ? ಎನ್ನುವ ವಿಷಯದ ಕುರಿತು ವಿಚಾರ ಮಂಡಿಸಿದರು.ಕರ‍್ಯಕ್ರಮದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮತ್ತಿತರರು ಇದ್ದರು. ಮುಖ್ಯ ಅತಿಥಿಗಳಿಗೆ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ ಯೋಗೀಶ್ ಕೈರೋಡಿ ಸ್ವಾಗತಿಸಿ , ಕನ್ನಡ ವಿಭಾಗ ಪ್ರಾಧ್ಯಾಪಕರಾದ ಡಾ. ಕೃಷ್ಣರಾಜ್ ಕರಬ, ಹರೀಶ್ ಟಿ.ಜಿ, ವಿದ್ಯಾರ್ಥಿನಿ ಮಾಧವಿ ಎನ್‌ಎಸ್ ಕರ‍್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು. ಶೈಕ್ಷಣಿಕ ವಿನಿಮಯ: ಜಪಾನ್ ಸೋಜೊ ವಿಶ್ವವಿದ್ಯಾಲಯ ಜೊತೆ ಆಳ್ವಾಸ್ ಒಡಂಬಡಿಕೆ.

ಮೂಡುಬಿದಿರೆ: ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್ ಜೊತೆ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು ಮಹತ್ವದ ಶೈಕ್ಷಣಿಕ ವಿನಿಮಯ ಒಡಂಬಡಿಕೆ ಸೋಮವಾರ ಮಾಡಿಕೊಂಡಿತು.ಶಿಕ್ಷಣ, ಸಂಶೋಧನೆ, ಬೋಧಕ, ಆಡಳಿತ ವರ್ಗ, ಸಂಶೋಧನಾ ಪ್ರಕಟಣೆಗಳು ಸೇರಿದಂತೆ ವಿವಿಧ ವಲಯದಲ್ಲಿ ಪರಸ್ಪರ ಸ್ವಾತಂತ್ರö್ಯವನ್ನು ಕಾಯ್ದುಕೊಂಡು ವಿನಿಮಯ, ಬೌದ್ಧಿಕ ಆಸ್ತಿಗಳ ರಕ್ಷಣೆ ಸೇರಿದಂತೆ ಶೈಕ್ಷಣಿಕ ಅಭ್ಯುದಯದ ದೃಷ್ಟಿಯ ಐದು ವರ್ಷಗಳ ಒಪ್ಪಂದಕ್ಕೆ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಹಾಗೂ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್ ಅಧ್ಯಕ್ಷ ಡಾ.ನಗಾಟೊ ಒನೊ ಸಹಿ ಮಾಡಿದರು.ಶೈಕ್ಷಣಿಕ ವಿನಿಮಯಕ್ಕೆ ಸಂಬAಧಿಸಿದ ಬೋಧನೆ, ವಸತಿ ಸೌಕರ್ಯ, ಆರ್ಥಿಕ ಜವಾಬ್ದಾರಿ, ಬೌದ್ಧಿಕ ಆಸ್ತಿ ರಕ್ಷಣೆ, ಅವಧಿ, ತಿದ್ದುಪಡಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಒಡಂಬಡಿಕೆ ಒಳಗೊಂಡಿದೆ.ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್‌ನ ಪರಿಣಾಮಕಾರಿ ಎಂಜಿನಿಯರಿAಗ್‌ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರುಚಿ ಥೋಮೊಶಿಗೆ, ಸೋಜೊ ಅಂತರರಾಷ್ಟಿçÃಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕ್ಯಾನಿಕಲ್ ಎಂಜಿನಿಯರಿAಗ್ ಪ್ರಾಧ್ಯಾಪಕ ಡಾ.ಅಕಿಸಾ ಮೊರಿ ಹಾಗೂ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು ಮ್ಯಾಕಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಇದ್ದರು. ಡಾ ಗುರಶಾಂತ್ ವಗ್ಗರ್ ಕರ‍್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿರಾಸತ್ ಸಮಾಪನ. ಭಾಗವಹಿಸಿದ ಸರ್ವರಲ್ಲೂ ‘ಅಧ್ಬುತ ಅತ್ಯಧ್ಬುತ’ ಉದ್ಗಾರ

ಮೂಡುಬಿದಿರೆ: 30ನೇ ಆಳ್ವಾಸ್ ವಿರಾಸತ್ 5 ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ 6 ದಿನವೂ ನಡೆದ ಮಹಾಮೇಳ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಮೂಲಕ ಆಯೋಜಕರು ಹಾಗೂ ಸಾರ್ವಜನಿಕರಲ್ಲಿ ಸರ್ವ ಶ್ರೇಷ್ಠ ವಿರಾಸತ್ ಎಂಬ ಭಾವ ಮೂಡಿಸಿ ಸಮಾಪನವಾಯಿತು. ವಿರಾಸತ್‌ನ ಮುಖ್ಯ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸುತ್ತಾ ಅಭಿವ್ಯಕ್ತ ಪಡಿಸಿದ ಅಂಶಗಳು.ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್ ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ರ‍್ಯಕ್ರಮ ಯಶಸ್ಸಿಗೆ ಕಾರಣ. ಈ ಉತ್ಸವ ಎಲ್ಲಾ ವರ್ಗದ ಜನರು – ಮಕ್ಕಳು, ಯುವಕ ಯುವತಿಯರು, ಪ್ರಬುದ್ಧರು, ವಯೋವೃದ್ಧರಾಧಿಯಾಗಿ ಸರ್ವರನ್ನು ಆಕರ್ಷಿಸಿ, ಪಾಲ್ಗೊಳ್ಳುವಂತೆ ಮಾಡಿದೆ. ಭಾಗವಹಿಸಿದ ಎಲ್ಲರೂ ಮುಕ್ತ ಕಂಠದಿAದ ಶ್ಲಾಘಿಸಿದ್ದು, ಅಧ್ಬುತ ಎಂಬ ಉದ್ಘಾರದ ಭಾವ ಮೂಡಿಸಿರುವುದು ಸಂಘಕರಾದ ನಮಗೆ ಸಂಪೂರ್ಣ ತೃಪ್ತಿ ನೀಡಿದೆ. ಈ ರ‍್ಯಕ್ರಮ ಯಾವುದೇ ಒಂದು ಸಮುದಾಯದ ರ‍್ಯಕ್ರಮವಾಗದೇ ಎಲ್ಲಾ ವರ್ಗಗಳ, ಎಲ್ಲಾ ಸಮುದಾಯದ ಜನರನ್ನು ರ‍್ಯಕ್ರಮದತ್ತಾ ಸೆಳೆದದ್ದು, ಇದರ ಇನ್ನೊಂದು ವಿಶೇಷತೆ. ಆರು ದಿನದ ರ‍್ಯಕ್ರಮದಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷದಂತೆ ಜನ ಭಾಗವಹಿಸಿದರೆ, ಶನಿವಾರ ಹಾಗೂ ಭಾನುವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು. ಒಟ್ಟು ರ‍್ಯಕ್ರಮ 4000ಕ್ಕೂ ಅಧಿಕ ಕಲಾವಿದರಿಗೆ ವೇದಿಕೆಯಾಗಿ, ಪ್ರತೀ ದಿನ ಸರಾಸರಿ 1500 ದಷ್ಟು ಕಲಾವಿದರು ತಮ್ಮ ಪ್ರತಿಭೆ ವ್ಯಕ್ತ ಪಡಿಸಲು ವೇದಿಕೆಯಾಗಿ ಮೂಡಿ ಬಂತು.ಜಾತಿ ಧರ್ಮ ಮತ ಹಾಗೂ ರಾಜಕೀಯ ಹಿನ್ನಲೆ ಹಾಗೂ ಮೋಜಿನ ರ‍್ಯಕ್ರಮಗಳಿಗೆ ಜನ ಸೇರುವುದು ಮಾಮೂಲಿ. ಆದರೆ ಸಾಂಸ್ಕೃತಿಕ ಹಿನ್ನಲೆಯಲ್ಲಿ ಈ ಪರಿಯ ಜನ ಸೇರುವುದು, ಹರ್ಷ ವ್ಯಕ್ತಪಡಿಸುವುದು ವಿರಾಳತಿ ವಿರಳ. ಈ ಹಿನ್ನಲೆಯಲ್ಲಿ ಸಂಘರಾದ ನಮಗೆ ಮುಂದಿನ ವರ್ಷದ ರ‍್ಯಕ್ರಮವನ್ನು ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಈಡೇರಿಸುವಂತೆ ಮಾಡಿದೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿ ರ‍್ಯಕ್ರಮದಲ್ಲೂ ಸ್ವಚ್ಛತೆಗೆ ಅತೀ ಹೆಚ್ಚಿನ ಒತ್ತನ್ನ ನೀಡಲಾಗುತ್ತದೆ. ಅಂತೆಯೇ ಈ ಭಾರಿಯ ವಿರಾಸತ್‌ನಲ್ಲೂ ಸ್ಚಚ್ಛತಾ ಸೇನಾನಿಗಳು ರಾತ್ರಿ ಹಗಲುಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದು, ರ‍್ಯಕ್ರಮ ಮುಗಿದ 15ರಂದೆ ಇಡೀ ಆಳ್ವಾಸ್ ಆವರಣವನ್ನು ಸ್ವಚ್ಚಗೊಳಿಸಲಾಗಿದ್ದು, ಆರು ದಿನದ ರ‍್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದ ಜಾಗವೆಂದು ಊಹಿಸಲಾಗದಷ್ಟು ಪರಿಸರವನ್ನು ಸ್ವಸ್ಥಿತಿಗೆ ತರಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯ ವಿರಾಸತ್ ಸಾವಿರಾರು ಸಂದೇಶವನ್ನು ಜಗತ್ತಿಗೆ ನೀಡಿದ್ದು, ಪ್ರತಿಯೊಬ್ಬರ ಮುಖದಲ್ಲೂ ಆತ್ಮ ತೃಪ್ತಿಯ ಭಾವ ಮೂಡಿಸಿದೆ. ಕರ್ನಾಟಕ ರಾಜ್ಯಕ್ಕೆ ಶ್ರೇಷ್ಠವೆಂಬAತೆ ನಡೆದ ರ‍್ಯಕ್ರಮ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ರ‍್ಯಕ್ರಮಕ್ಕೆ ಆಗಮಿಸಿದ ಸರ್ವರಲ್ಲೂ ವ್ಹಾವ್ ಎನ್ನುವಂತ ಉದ್ಗಾರ ಮೂಡಿಸಿದೆ. ಇಲ್ಲಿವರೆಗೆ ನಡೆದೆ ಎಲ್ಲಾ ವಿರಾಸತ್‌ನಲ್ಲೂ ಪಾಲು ಪಡೆದ ಸಾವಿರಾರು ಜನರು 30ನೇ ಆಳ್ವಾಸ್ ವಿರಾಸತ್‌ನಲ್ಲೂ ಸಂತೋಷದಿAದ ತಮ್ಮ ಮನೆಯ ರ‍್ಯಕ್ರಮದಂತೆ ಪಾಲ್ಗೊಂಡರು. ಇಷ್ಟು ದೊಡ್ಡ ಸಂಖ್ಯೆಯ ಜನಸಮೂಹ ಸೇರಿದರು ಯಾರೊಬ್ಬರಿಗೂ ಕಿಂಚಿತ್ತು ತೊಂದರೆಯಾಗದAತೆ ಸಾಂಗವಾಗಿ ನಡೆದದ್ದು ಖುಷಿ ಕೊಟ್ಟಿದೆ. ಈ ಭಾರಿ, ವಿರಾಸತ್‌ಗಾಗಿ ವಿದ್ಯಾಗಿರಿ ಹಾಗೂ ಪುತ್ತಿಗೆ ಪ್ರವೇಶಿಸಲಿರುವ 8 ಮಾರ್ಗಗಳನ್ನು ಡಾಂಬರೀಕರಣ ಹಾಗೂ ಅಗಲೀಕರಣಗೊಳಿಸಿ, ಬರುವ ಪ್ರತಿಯೊಬ್ಬರಿಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಸುಮಾರು 2000ಕ್ಕೂ ಅಧಿಕ ಜನರು ವಿರಾಸತ್‌ಗಾಗಿ ದುಡಿದಿದ್ದು, ಎಲ್ಲವೂ ಸೂಸುತ್ರವಾಗಿ ನೆರೆವೇರಲು ಸಹಕರಿಸಿದ್ದಾರೆ. ಇದರ ಜೊತೆಗೆ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ ಮತ್ತು ರೇರ‍್ಸ್ ರಾಜ್ಯ ಮಟ್ಟ÷ದ ಸಾಂಸ್ಕೃತಿಕ ಉತ್ಸವವು 1500 ವಿದ್ಯಾರ್ಥಿಗಳು ಪಾಲ್ಗೊಂಡು ಸ್ಕರ‍್ಸ್ಗಳ ಹೊಸ ಹುಮ್ಮಸ್ಸನ್ನು ಮೂಡಿಸಿತು.

ಪ್ರಾದೇಶಿಕ ವಾರ್ತೆಗಳು

ರಾಜ್ಯ ಮಟ್ಟದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್- ರೇಂಜರ್ಸ್ ಸಾಂಸ್ಕೃತಿಕ ಉತ್ಸವ-2024ರ ಸಮಾರೋಪ ಸಮಾರಂಭ. ‘ಸಮೃದ್ಧ – ಸಮರ್ಥ ಕರ್ನಾಟಕಕ್ಕೆ ಸಮರ್ಥ ಪ್ರಜೆಗಳ ನಿರ್ಮಾಣ’

ವಿದ್ಯಾಗಿರಿ: ‘ಸಮೃದ್ಧ ಮತ್ತು ಸಮರ್ಥ ಕರ್ನಾಟಕ ಕಟ್ಟುವ ಉದ್ದೇಶದಿಂದ ದೇಶದ ಭವಿಷ್ಯದ ಪ್ರಜೆಗಳಿಗೆ ಹಮ್ಮಿಕೊಂಡ ಕಾರ್ಯಕ್ರಮ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ ಆರ್ ಸಿಂಧ್ಯಾ ಹೇಳಿದರು.ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗಿತ್ವದಲ್ಲಿ 30 ನೇ ಆಳ್ವಾಸ್ ವಿರಾಸತ್ ಸಂಧರ್ಭದಲ್ಲಿ ನಡೆದ ರಾಜ್ಯ ಮಟ್ಟದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ರೇಂಜರ್ಸ್ ಸಾಂಸ್ಕೃತಿಕ ಉತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ನ ಕಲಿಕಾ ಅನುಭವವನ್ನು ಜೀವನ ಪದ್ಧತಿಗಾಗಿ ಅಳವಡಿಸಿಕೊಳ್ಳಬೇಕು..ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿ ಅನೇಕ ಬದಲಾವಣೆಯನ್ನು ತಂದಿದೆ. ಆದ್ದರಿಂದ, ಆರಂಭದಲ್ಲಿ ಇದ್ದಂತಹ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಚಟುವಟಿಕೆಗಳ ಕಲಿಕಾಕ್ರಮವನ್ನು ಬದಲಾಯಿಸುವುದು ತೀರ ಅವಶ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.ಇಂದಿನ ಮಕ್ಕಳಲ್ಲಿ ಸಾಂಸ್ಕೃತಿಕ , ಕ್ರೀಡೆ , ಕಲೋತ್ಸವ ಮತ್ತು ಪ್ರಕೃತಿ ಅಧ್ಯಯನಕ್ಕೆ ಹೆಚ್ಚು ಮಹತ್ವ ಸಿಗಬೇಕಿದೆ. ಈ ರೀತಿಯ ಸಾಂಸ್ಕೃತಿಕ ಉತ್ಸವದಲ್ಲಿ ಸಾಹಸಮಯ ಕ್ರೀಡೆಗಳನ್ನು ಆಯೋಜಿಸಿದ್ದರಿಂದ , ಸೇನೆಗೆ ಪ್ರವೇಶಿಸುವ ಆಕಾಂಕ್ಷಿಗಳಿಗೆ ಉತ್ತಮ ಮೂಲ ವೇದಿಕೆಯನ್ನು ಕಲ್ಪಿಸಿದಂತಾಗಿದೆ ಎಂದರು.ಸಂಸ್ಥೆಯಿAದ ಕೈಗೊಂಡಿರುವ ಪ್ರೇರಣಾ ಕಾರ್ಯಕ್ರಮ ಹೆಣ್ಣುಮಕ್ಕಳಿಗೆ ಪೂರಕವಾಗಿ ಸ್ವಚ್ಛತೆ , ಜ್ಞಾನ ಮಟ್ಟವನ್ನು ಹೆಚ್ಚಿಸಲು ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ . ಇಂತಹ ಕಾರ್ಯಕ್ರಮ ರಾಜ್ಯದ ವಿವಿಧ ಭಾಗಗಳಲ್ಲಿಯೂ ಸವಿಸ್ತಾರವಾಗಿ ಮುಂದುವರೆಯಬೇಕು . ಪ್ರತಿ ಜಿಲ್ಲೆಯಲ್ಲೂ ಸೇವಾ ಶಿಬಿರಗಳು ಹೆಚ್ಚೆಚ್ಚು ಆಯೋಜಿಸಬೇಕು ಎಂದು ಸಲಹೆ ನೀಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತಕ ಪಿ.ಜಿ ಆರ್ ಸಿಂಧ್ಯ , ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಮತ್ತು ನಿತಿನ್ ಅಮೀನ್ , ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ , ಮೈಸೂರು ವಿಭಾಗ ಸಹಾಯಕ ರಾಜ್ಯ ಆಯುಕ್ತಕ ಬಸವರಾಜ್ , ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತೆ ವಿಮಲಾ ರಂಗಯ್ಯ , ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ರಾಜ್ಯ ಸಂಘಟನಾ ಅಯುಕ್ತ ಪ್ರಭಾಕರ್ ಭಟ್ , ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತಕ ಬಿ ಎಂ ತುಂಬೆ ಇದ್ದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದ ವರದಿಯನ್ನು ಬೆಂಗಳೂರು ಉತ್ತರದ ಶಿಬಿರದ ಮೇಲ್ವಿಚಾರಕ ನಿತಿನ್ ಅಮೀನ್ ವಾಚಿಸಿದರು.ಶಿಬಿರದಲ್ಲಿ ಭಾಗಿಯಾದ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದರು.ಶಿಬಿರದ ಯಶಸ್ಸಿಗೆ ಸಹಕರಿಸಿದ ವ್ಯಕ್ತಿಗಳನ್ನು ಮತ್ತು ಪ್ರತಿ ಜಿಲ್ಲೆಯ ಪ್ರತಿನಿಧಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಡಿಸೆಂಬರ್ 21ರಂದು ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇವರ ವತಿಯಿಂದ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಆಶಕ್ತರಿಗೆ ಸಹಾಯನಿಧಿ ನೀಡುವ ಕಾರ್ಯಕ್ರಮ ಮತ್ತು ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ. ಡಿಸೆಂಬರ್ 1 ರಂದು ಕ್ರೀಡಾಕೂಟ ನಡೆದಿದೆ.

ಕಳಸಗುರಿ: ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇವರ ವತಿಯಿಂದ ಡಿಸೆಂಬರ್ 01,2024ರ ಭಾನುವಾರ ಕಳಸಗುರಿ ಬಾರ್ ಲಚ್ಚಿಲ್ ಇಲ್ಲಿ ಕ್ರೀಡಾಕೂಟ ನಡೆಸಲಾಯಿತು.. ಸಂಸ್ಥೆಯ ಗೌರವಾಧ್ಯಕ್ಪರಾದ ರುಕ್ಮಯ ಸಪಳಿಗ ಉಳಿಯ, ಸಂಸ್ದೆಯ ಅಧ್ಯಕ್ಷರಾದ ಭೋಜ ಕುಲಾಲ್, ರಾಜೇಶ್ ರಾವ್, ಗೀತಾ ಬಾರ್ಲಚ್ಚಿಲ್ ಇವರು ದೀಪ ಪ್ರಜ್ವಲನೆಯ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಿಭಾಗವಾರು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.ಸಂಸ್ಥೆಯ ಸದಸ್ಯರು, ಪರಿಸರದ ಎಲ್ಲಾ ಬಂಧುಗಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಂಸ್ದೆಯ ಅಧ್ಯಕ್ಷರು ಮತ್ತು ಸಂಸ್ಥೆಯ ಹಿರಿಯರ ಉಪಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಎಲ್ಲಾ ಸದಸ್ಯರ ಪೂರ್ಣ ಸಹಕಾರದೊಂದಿಗೆ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು. ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇದರ ವತಿಯಿಂದ ಡಿಸೆಂಬರ್ 21 ರ ಶನಿವಾರ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಮತ್ತು ಅಶಕ್ತ ಬಂಧುಗಳಿಗೆ ಸಹಾಯನಿಧಿ ನೀಡುವ ಕಾರ್ಯಕ್ರಮ ನಡೆಯಲಿದೆ.

Scroll to Top