ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬೊಳಾಂತುರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ವಿಲೇವಾರಿ ಶಿಬಿರ. ರಮಾನಾಥ ರೈ ರವರ ಇಚ್ಚೆಯಂತೆ ವಲಯ ಮಟ್ಟದಲ್ಲಿ ಶಿಬಿರ: ಜಯಂತಿ ವಿ.ಪೂಜಾರಿ. ಕ್ರಿಯಾಶೀಲ ಅಧ್ಯಕ್ಷರಿಂದ ಉತ್ತಮ ಕಾರ್ಯಕ್ರಮ: ಚಂದ್ರಪ್ರಕಾಶ್ ಶೆಟ್ಟಿ ತುಂಬೆ. ರಾಜ್ಯದಲ್ಲಿಯೇ ಪ್ರಥಮ ಕಾರ್ಯಕ್ರಮ: ಅಬ್ಬಾಸ್ ಆಲಿ.

ಬಂಟ್ವಾಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಬಾಳ್ತಿಲ,ಗೋಳ್ತಮಜಲು,ವೀರಕಂಭ,ಬೊಳಾಂತುರು ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಬೊಳಾಂತುರು ಗ್ರಾ.ಪಂ ಕಛೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತಿ ವಿ.ಪೂಜಾರಿರವರು ನನ್ನ ಮೇಲೆ ವಿಶ್ವಾಸ ಇಟ್ಟು ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ ಮಾಜಿ ಸಚಿವರಾದ ರಮಾನಾಥ ರೈ ರವರು ನೇಮಕಮಾಡಿರುತ್ತಾರೆ.ಅವರ ಇಚ್ಚೆ ಏಂದರೆ ಪ್ರತೀ ಗ್ರಾಮದ ಬಡವರಿಗೂ ಪಂಚ ಗ್ಯಾರಂಟಿ ಯೋಜನೆಯ ಪ್ರಯೋಜನ ದೊರೆಯಬೇಕು.ಇದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ಆಶಯ.ಅದಕ್ಕೆ ಪೂರಕವಾಗಿ ಪ್ರತಿ ವಲಯದಲ್ಲಿ ಇದರ ಶಿಬಿರ ನಡೆಸಬೇಕು ಎಂದು ಸಲಹೆ ಸೂಚನೆ ನೀಡಿದ್ದರು ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಹಾಯದಿಂದ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತ ಇದೆ.ಇದು ನಾಲ್ಕನೇ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 10 ವಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.ಮುಖ್ಯ ಅತಿಥಿಯಾಗಿ ಅಗಮಿಸಿದ ಜಿಲ್ಲಾ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ರವರು ಮಾತನಾಡಿ ಕ್ರಿಯಾಶೀಲ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ರವರ ನೇತೃತ್ವದಲ್ಲಿ ಉತ್ತಮವಾದ ಕಾರ್ಯಕ್ರಮ ಇದು.ಪ್ರತೀ ಬಡವರ ಕಲ್ಯಾಣ ಈ ಶಿಬಿರದ ಮೂಲಕ ನಡೆಯಲಿ ಎಂದು ಶುಭಹಾರೈಸಿದರು.ತಾಲೂಕು ಪಂ ಮಾಜಿ ಉಪಾದ್ಯಕ್ಷರಾದ ಅಬ್ಬಸ್ ಆಲಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿಯೇ ಇಂತಹ ಕಾರ್ಯಕ್ರಮ ಪ್ರಥಮವಾಗಿ ಬಂಟ್ವಾಳದಲ್ಲಿ ನಡೆಯುತ್ತ ಇರೊದು ಇದರ ಪ್ರಯೋಜನ ಪ್ರತಿಯೋಬ್ಬರು ಪಡೆಯಿರಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು..ಮಾಜಿ ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ ಶುಭಹಾರೈಸಿದರು. ಬೊಳಂತುರು ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ಶಾಲಿನಿ ರವರ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಾ‌ಪಂ ಉಪಾದ್ಯಕ್ಷರಾದ ಯಾಕುಬ್, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ರೈ,ಅಶ್ರಫ್,ಅನ್ಸಾರ್,ಹಿತಾ ಶೆಟ್ಟಿ, ಮಹಾಲಕ್ಷ್ಮೀ,ಅನಿತಾ,ಸಂಧ್ಯಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ,ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರಾದ ನಾರಾಯಣ ನಾಯ್ಕ,ಅಲೆಸ್ಟರ್,ಪ್ರಮುಖರಾದ ವಿಶ್ವಾಜೀತ್ ರೈ,ತಾಲೂಕು ಗ್ಯಾರಂಟಿ ಯೋಜನೆಗಳ ಸದಸ್ಯರಾದ ಐಡಾ ಸುರೇಶ್,ಕಾಂಚಾಲಕ್ಷಿ,ಅಬ್ದುಲ್ ಕರೀಂ,ಕೃಷ್ಣಪ್ಪ ಪೂಜಾರಿ, ವಿನಯ್ ಕುಮಾರ್ ಸಿಂಧ್ಯಾ,ಸಿರಾಜ್ ಮದಕ,ಹರ್ಷನ್ ಬಿ,ಚಂದ್ರಶೇಖರ್ ಆಚಾರ್ಯ,ಸತೀಶ್ ಕೆ,. ಉಪಸ್ಥರಿದ್ದರು.ಬೊಳಾಂತುರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿ ,ಧನ್ಯವಾದ ಸಲ್ಲಿಸಿದರು..ಸುಮಾರು 200 ರಿಂದ 250 ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು..ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳುಉಪಸ್ಥಿತರಿದ್ದರು.ಚಿತ್ರ-ವರದಿ :ಸತೀಶ್, ಕಾರ್ತಿಕ್ ಸ್ಟುಡಿಯೋ, ಬಿ. ಸಿ. ರೋಡು

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳದಲ್ಲಿ ವಕೀಲರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆ.

ಬಂಟ್ವಾಳ: ವಕೀಲರ ಸಂಘ(ರಿ), ಬಂಟ್ವಾಳ ಮತ್ತು ಅಧಿವಕ್ತಾ ಪರಿಷತ್ ಕರ್ನಾಟಕ – ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ – ಬಂಟ್ವಾಳ ಘಟಕ ಇವರ ಜಂಟಿ ಅಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರವನ್ನು ದಿನಾಂಕ 3/12/2024ನೇ ಮಂಗಳವಾರ ಸಂಜೆ ಗಂಟೆ 4.00 ಗೆ ಸರಿಯಾಗಿ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಭಾಗ್ಯಮ್ಮ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದಲ್ಲಿ ಕಾರ್ಕಳದ ಹಿರಿಯ ನ್ಯಾಯವಾದಿ ಎಂ ಕೆ ವಿಜಯ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರೊಫೆಸನಲ್ ಏಥಿಕ್ಸ್ ನ ಬಗ್ಗೆ ತಮ್ಮ ಅಪಾರ ಅನುಭವ ಮತ್ತು ಹಿರಿತನದ ಅನುಭವಗಳನ್ನು ಸೇರಿಸಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ. ಎನ್ ಹಾಗೂ ಅಧಿವಕ್ತಾ ಪರಿಷತ್ ಬಂಟ್ವಾಳದ ಅಧ್ಯಕ್ಷರು ಶ್ರೀಮತಿ ಉಮಾ.ಎನ್ ಸೋಮಯಾಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿದಲ್ಲಿ ಅಧಿವಕ್ತಾ ಪರಿಷತ್ ನ ಸಾಮಾಜಿಕ ಕಾರ್ಯದ ಅಂಗವಾಗಿ ವಕೀಲರ ದಿನಾಚರಣೆಯ ಪ್ರಯುಕ್ತ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಳ, ಪರಂಗಿಪೇಟೆ ಆಶ್ರಮಕ್ಕೆ 32,000/ ಮೌಲ್ಯದ ಫ್ರಿಜ್ ನ್ನು ಆಶ್ರಮದ ಸ್ಥಾಪಕರಾದ ಹರೀಶ್ ಪೆರ್ಗಡೆ ಯವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ ಕೆ ವಿಜಯ್ ಕುಮಾರ್ ಅವರನ್ನು ವಕೀಲರ ಸಂಘ (ರಿ) ಬಂಟ್ವಾಳದ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿ ಅಭ್ಯಾಗತರನ್ನು ಯುವ ವಕೀಲರು ಅದ ಸ್ವರ್ಣ ಗೌರಿಯವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಅಧಿವಕ್ತಾ ಪರಿಷತ್ ನ ಜಿಲ್ಲೆಯ ಸದಸ್ಯರಾದ ವೀರೇಂದ್ರ ಎಂ ಸಿದ್ದಕಟ್ಟೆ ಧನ್ಯವಾದ ಸಲ್ಲಿಸಿದರು. ನಿತಿನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು.ಚಿತ್ರ-ವರದಿ :ಸತೀಶ್ ಕಾರ್ತಿಕ್ ಸ್ಟುಡಿಯೋ, ಬಿ. ಸಿ. ರೋಡು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ

ಬಂಟ್ವಾಳ:ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ 2025ನೇ ಸಾಲಿನ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ ಪೂಂಜಾ ಮಾತನಾಡಿ,ನಾವು ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು. ಆ ಮೂಲಕ ಜೀವನ ಸಾರ್ಥಕ ಪಡಿಸಿದಾಗ ಮನಸ್ಸು ಉಲ್ಲಾಸಭರಿತ ವಾಗಿ ಶಾರೀರಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದು ಹೇಳುತ್ತಾ ಇದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು. ಇನ್ನೊರ್ವ ಮುಖ್ಯಅತಿಥಿ ನಿವೃತ್ತ ಪ್ರೊಫೆಸರ್ ಆಗಿರುವ ಡಾ.ಟಿ.ಕೆ ರವೀಂದ್ರನ್ ಮಾತನಾಡಿ,ನಿವೃತ್ತರಾದ ಮೇಲೆ ನಿಂತ ನೀರಾಗದೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಸಹಪಾಠಿಗಳೊಂದಿಗೆ ಬೆರೆಯುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುವುದರ ಮೂಲಕ ಕೆಲವೊಂದು ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಾಗ ಒತ್ತಡ ರಹಿತ ಜೀವನ ಸಾಧ್ಯ ಎಂದು ಹೇಳುತ್ತಾ ಈಗ ಕುಟುಂಬಗಳಲ್ಲಿ ಗಂಡ-ಹೆಂಡತಿ ಮಾತ್ರ ಇರುತ್ತಾರೆ, ಮಕ್ಕಳು ದೂರದಲ್ಲಿ ಉದ್ಯೋಗದಲ್ಲಿದ್ದಾಗ ಸಹಜವಾಗಿಯೇ ಮಾನಸಿಕ ಖಿನ್ನತೆ ಉಂಟಾಗುತ್ತದೆ ಅದಕ್ಕೆಇಂತಹ ಸಭೆಗಳಲ್ಲಿ ಸ್ನೇಹಿತರೊಂದಿಗೆ ಜೊತೆಯಾದಾಗ ಮನಸ್ಸು ಪ್ರಫುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾದ ಲ. ಪಿ. ಲೋಕನಾಥ ಶೆಟ್ಟಿ ಎಂ ಜೆ ಎಫ್ ರವರು ಮಾತನಾಡಿ ಒಂದೇ ಕುಟುಂಬದವರಂತೆ ನಮ್ಮ ಸಂಘಟನೆಯಲ್ಲಿ ನಾವು ತೊಡಗಿಸಿಕೊಂಡು ಕಾರ್ಯಪ್ರವೃತ್ತ ರಾಗುತ್ತಿದ್ದೇವೆ. ಇದರಿಂದ ನಮಗೆ ಸಂತೋಷದೊಂದಿಗೆ ನೆಮ್ಮದಿ ಸಿಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಗತ ವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ಓದಿ ಹೇಳಿದರು. ಸಂಘದ ಸದಸ್ಯರಲ್ಲಿ 75ವರ್ಷ ತುಂಬಿದ ಸದಸ್ಯರಾದ ಪ್ರಾರಂಭದಲ್ಲಿ ವಿ ಶಂಕರ್ ಪ್ರಾರ್ಥನೆ ಮಾಡಿದರು. ಗೋಪಾಲ ರಾವ್ ಸಂಚಯಗಿರಿ, ಕೆ ಎಚ್. ವಸಂತ ಕುಮಾರ್, ಅಪ್ಪಯ್ಯ ಶೆಟ್ಟಿ, ನರಸಿಂಹ ಭಟ್, ವೆಂಕಟ್ರಮಣ ಭಟ್, ಕು. ಆನಂದಿ, ಟಿ ಕೆ ದಯಾನಂದ, ದಾಮೋದರ ಶೆಟ್ಟಿಗಾರ್, ಶ್ರೀಮತಿ ಲಕ್ಶ್ಮಿ ನೇರಳಕಟ್ಟೆ, ಪದ್ಮನಾಭ ರಾವ್ ಕೈಕುಂಜೆ, ಮಾಧವ ಮಾರ್ಲ ಮೊಡಂಕಾಪು, ಜಿ ಎ ಭಾವ ಆಮುಂಜೆ, ಶ್ರೀಮತಿ ವನಿಲಾ ಅಲೆತ್ತೂರು, ಗೋಪಾಲಕೃಷ್ಣ ರೈ ಬರಿಮಾರ್, ಗೋವರ್ಧನ್ ಶೆಣೈ, ಶ್ರೀಮತಿ ಲಕ್ಶ್ಮಿ ಅಮ್ಮ ಬೊಕ್ಕಸ ಇವರನ್ನು ಶಾಲು ಪಲಪುಷ್ಪ ಸ್ಮರಣಿಕೆ (ಪುಸ್ತಕ )ಹಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಹೆಸರನ್ನು ಮಹಾಬಲೇಶ್ವರ ಹೆಬ್ಬಾರ್, ಜಯಂತ ಶೆಟ್ಟಿ, ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬಂಗೇರ, ಚಂದು ನಾಯ್ಕರವರು ಓದಿ ಹೇಳಿದರು ಸನ್ಮಾನಗೊಂಡವರಲ್ಲಿ ಜಿ ಎ ಬಾವ ಹಾಗೂ ಶ್ರೀಮತಿ ಲಕ್ಶ್ಮಿ ಅಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅನಂತರಾಮ ಹೆರಳೆಯವರು ಸಭಿಕರ ಭಾಷಣ ಮಾಡಿ ಸಲಹೆ ನೀಡಿದರು. ಉಪಾಧ್ಯಕ್ಷರರಾದ ಸಂಕಪ್ಪ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿ ರಾವ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಜತೆಕಾ ರ್ಯದರ್ಶಿ ಜಯರಾಮ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಟ್ಟಿ ಸಹಕರಿಸಿದರು. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲರಿಗೂ ಸಂಘದ ವತಿಯಿಂದ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮ.

ಮಂಗಳೂರು: ಮಂಗಳೂರಿನ ಸಂತ ತೆರೆಜಾ ಚರ್ಚು ಪಾಲ್ದನೆಯ ಕಾಲ್ವಾರಿ ವಾರ್ಡಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಹಾಗೂ ಇತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ ಆಲ್ಬನ್ ಡಿ’ಸೋಜಾ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾರ್ಡಿನ ಮುಖ್ಯಸ್ಥೆ ಜೆಸಿಂತಾ ಫೆರ್ನಾಂಡಿಸ್, ಪ್ರತಿನಿಧಿಗಳಾದ ವೆಲೆಂಟಾಯ್ನ್ ರೊಡ್ರಿಗಸ್, ವಿನ್ಸೆಂಟ್ ಬರೆಟ್ಟೊ ಸಹಕರಿಸಿ, ವಾರ್ಡಿನ ಮರಿಯೊ ರೇಗೊ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಅರುವ ಕೊರಗಪ್ಪ ಶೆಟ್ಟಿಯವರಿಗೆ ಸುಂದರ ರಾವ್ ಪ್ರಶಸ್ತಿ. ಕುಂಬ್ಳೆ ಸುಂದರ ರಾವ್ ಅವರದು ಪ್ರೇರಣಾದಾಯಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರದ ಸಾಧಕರಾಗಿದ್ದರು. ಅವರದು ಪ್ರೇರಣಾದಾಯಿ ವ್ಯಕ್ತಿತ್ವ’ ಎಂದು ಕರ್ನಾಟಕ ಜಾನಪದ – ಯಕ್ಷಗಾನ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಜಂಟಿಯಾಗಿ ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ಆಯೋಜಿಸಿದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಕುಂಬ್ಳೆ ಅವರು ವಾಕ್ ಸಾಹಿತಿ, ವಿದ್ವಾಂಸ, ಕಲಾವಿದರು; ಅವರ ಮಾತುಗಾರಿಕೆಯಲ್ಲಿ ಸಾಹಿತ್ಯಿಕ ಅಂಶ ಅಡಗಿತ್ತು. ತಾಳಮದ್ದಳೆಯಲ್ಲಿ ಅವರ ಮಾತುಗಾರಿಕೆ ಅಸಾಧಾರಣ. ಹವ್ಯಾಸಿ, ವೃತ್ತಿ ಕಲಾವಿದರೊಂದಿಗೆ ಒಡನಾಟ ಹೊಂದಿದ್ದ ಅವರದು ಸಾಮಾಜಿಕ ಜೀವನದಲ್ಲಿ ಸರಳ ವ್ಯಕ್ತಿತ್ವ, ಅವರ ಪಾತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಅಡಗಿತ್ತು. ಯುವಕರಿಗೆ ಸ್ಫೂರ್ತಿಯಾಗಿದ್ದ ಅವರು ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿ ಕುಂಬ್ಳೆತನವನ್ನು ಎತ್ತಿ ತೋರಿಸಿದ್ದಾರೆ’ ಎಂದರು. ಸಂಘ ಮತ್ತು ಸಾಂಸ್ಕೃತಿಕ ಒಡನಾಟ:ಕುಂಬ್ಳೆ ಸುಂದರ ರಾವ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, ‘ಕುಂಬ್ಳೆ ಮತ್ತು ನಾನು ಹಳೆ ಕಾಲದ ಒಡನಾಡಿಗಳು. ಅವರಿಂದಲೇ ನನಗೆ ಸಂಘದ ಮತ್ತು ಸಾಂಸ್ಕೃತಿಕ ಒಡನಾಟ ಸಿಕ್ಕಿತ್ತು’ ಎಂದು ಹೇಳಿದರು. ಕುಂಬ್ಳೆಯವರ ಸಹೋದರ ಮತ್ತು ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಗರಿ ಎಂಟರ್ಪ್ರೈಸಸ್ ಮಾಲಕ ಅಗರಿ ರಾಘವೇಂದ್ರರಾವ್, ಹಿರಿಯ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ, ಕುಂಬ್ಳೆ ಸುಂದರ್ ರಾವ್ ಕುಟುಂಬಸ್ಥರು ಇದ್ದರು.ಕೆನರಾ ಪದವಿ ಪೂರ್ವ ಕಾಲೇಜು ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಬಳ್ಕೂರು ಸನ್ಮಾನ ಪತ್ರ ವಾಚಿಸಿದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಲ್ಲಿ ಉಚ್ಚ ನ್ಯಾಯಾಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ.

ಬೆಂಗಳೂರು: ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕರರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ ಸೋಜರವರ ನೇತ್ರತ್ವದಲ್ಲಿ ವಿಧಾನ ಸಭೆಯ ಸಭಾದಕ್ಷರಾದ ಯು ಟಿ ಖಾದರ್ ರವರ ಸಮುಕ್ಷಮದಲ್ಲಿ ಮುಖ್ಯಮಂತ್ರಿಯವರಿಗೆ ಮಂಗಳೂರು ವಕೀಲರ ಸಂಘದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಮತ್ತು ಹಿರಿಯ ವಕೀಲರಾದ ಎಂ.ಪಿ ನೊರೂಂನ್ಹ ರವರು ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠ ವನ್ನು ಜರೂರಾಗಿ ಸ್ಥಾಪಿಸುವ ಬಗ್ಗೆ ಮನವರಿಕೆ ಮಾಡಿದರು . ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಾಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತಾರೆ. ನಿಯೋಗದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್,. ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ವಕೀಲರಾದ ಮೋನಪ್ಪ ಭಂಡಾರಿ, ಹಾಗೂ ಹಿರಿಯ ವಕೀಲರಾದ ಟಿ. ನಾರಾಯಣ ಪೂಜಾರಿ, ಯಶವಂತ ಮರೋಳಿ,ಉಪಾಧ್ಯಕ್ಷರಾದ ಸುಜಿತ್ ಕುಮಾರ್,ಬ0ಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಡಿ ಕೊಸ್ತಾ ಶ್ರೀಮತಿ ಶಾಲಿನಿ, ಶ್ರೀಮತಿ ಸುಮನಾ ಶರಣ್, ಸಂತೋಷ್ ಕುಮಾರ್, ದಿನಕರ್ ಶೆಟ್ಟಿ, ರಾಘವೇಂದ್ರ ರಾವ್, ಪ್ರಮೋದ್ ಕೆರ್ವಾಶೆ, ಜಗದೀಶ್ ಕೆ ಆರ್, ವಿಜಯ್ ಮಹಾತೇಶ್ ಸತೀಶ್ ಕುಮಾರ್, ವೀರೇಂದ್ರ ಸಿದ್ದಕಟ್ಟೆ ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ತೂಗು ಸೇತುವೆಗಳ ಜತೆ ಜನತೆ ಭಾವನಾತ್ಮಕ ಸಂಪರ್ಕ-ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್

ಮಂಗಳೂರು: ಹಲವು ಸವಾಲುಗಳ ನಡುವೆಯೂ ಜನರ ಪ್ರೀತಿ, ವಾತ್ಸಲ್ಯದಿಂದಾಗಿ 140ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ . ನಾನು ನಿರ್ಮಿಸಿದ ತೂಗು ಸೇತುವೆಗಳ ಜತೆ ಜನರು ಈಗಲೂ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ 40 ವರ್ಷಗಳ ವೃತ್ತಿ ಜೀವನದ ಸಾಧನೆಗಳನ್ನು ಮೆಲುಕು ಹಾಕಿದರು.ಹುಟ್ಟೂರು ಸುಳ್ಯದ ಅರಂಬೂರು ಗ್ರಾಮದಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರೂ ಸಿವಿಲ್ ಇಂಜಿನಿಯರ್ ಆದೆ. ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದೇನೆ. ಅತ್ಯಂತ ಕುಗ್ರಾಮದಲ್ಲಿ ನಿರ್ಮಿಸಿದ ತೂಗು ಸೇತುವೆಗಳು ಆ ಹಳ್ಳಿಗರಿಗೆ ಹೊರ ಪ್ರಪಂಚದ ಸಂಪರ್ಕ ಒದಗಿಸುವ ಜತೆಗೆ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಇದು ಸಂತಸ ತಂದುಕೊಟ್ಟ ವಿಚಾರ ಎಂದು ಅವರು ಹೇಳಿದರು.ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದಾಗ ನಕ್ಸಲರ ಮುಖಾಮುಖಿಯೂ ಆಗಿತ್ತು. ಆದರೆ ಅಲ್ಲಿನ ಬಡ ಜನರಿಗೆ ಸಹಾಯ ಮಾಡಬೇಕಾದ ಕಾರಣ ಹಿಂದೆ ಸರಿಯಲಿಲ್ಲ. ಒಂದು ಪ್ರದೇಶದಲ್ಲಂತೂ ಸೇತುವೆ ನಿರ್ಮಿಸುವುದು ಅತ್ಯಂತ ಸವಾಲಾಗಿತ್ತು. ಆ ಹಳ್ಳಿಗರು ದೇವರ ಮೇಲೆ ಭಾರ ಹಾಕಿ ಹೊಳೆ ದಾಟುವ ದುಃಸ್ಥಿತಿಯು ಮನ ಮುಟ್ಟಿತು. ಎಲ್ಲ ಸವಾಲುಗಳನ್ನು ಮೀರಿ ತೂಗು ಸೇತುವೆ ನಿರ್ಮಿಸಿದೆ. ಇದಾದ ಬಳಿಕ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ದೊಡ್ಡದು .ನನ್ನ ಇಂಜಿನಿಯರಿಂಗ್ ೆಲಸದಿಂದ ನಾನು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಜನರ ಸಂತೋಷದ ಕಣ್ಣೀರು ದೊಡ್ಡ ಪ್ರಶಸ್ತಿ ಎಂದು ಭಾರದ್ವಾಜ್ ಸ್ಮರಿಸಿದರು.ಅರಂಬೂರು ಗ್ರಾಮದಲ್ಲಿ 40 ವರ್ಷಗಳ ಹಿಂದೆ ಮೊದಲ ತೂಗು ಸೇತುವೆ ನಿರ್ಮಿಸಿದ್ದೆ. ಎರಡು ವರ್ಷಗಳ ಹಿಂದಷ್ಟೇ ಅಲ್ಲಿ ಕಾಂಕ್ರಿಟ್ ಸೇತುವೆ ನಿರ್ಮಿಸಲು ಮುಂದಾದಾಗ ತೂಗುಸೇತುವೆ ತೆಗೆದುಹಾಕಲು ಗ್ರಾಮಸ್ಥರು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ. ಪ್ರವಾಸಿಗರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ತೂಗು ಸೇತುವೆ ನೋಡಲು ಬರುತ್ತಿದ್ದಾರೆ .ಈಗ ತಂತ್ರಜ್ಞಾನ ಮುಂದುವರಿದಂತೆ ತೂಗು ಸೇತುವೆಗಳು ಕನಿಷ್ಠ 100 ವರ್ಷ ಬಾಳ್ವಿಕೆ ಬರುವಂತೆ ನಿರ್ಮಿಸಲಾಗುತ್ತಿದೆ ಎಂದರು.ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಸಂತ ತೆರೆಜಾ ಚರ್ಚು ಪಾಲ್ದನೆಯ ಕಾಲ್ವಾರಿ ವಾರ್ಡಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಹಾಗೂ ಇತರ ಕಾರ್ಯಕ್ರಮ

ಮಂಗಳೂರಿನ ಸಂತ ತೆರೆಜಾ ಚರ್ಚು ಪಾಲ್ದನೆಯ ಕಾಲ್ವಾರಿ ವಾರ್ಡಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಹಾಗೂ ಇತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ ಆಲ್ಬನ್ ಡಿ’ಸೋಜಾ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾರ್ಡಿನ ಮುಖ್ಯಸ್ಥೆ ಜೆಸಿಂತಾ ಫೆರ್ನಾಂಡಿಸ್, ಪ್ರತಿನಿಧಿಗಳಾದ ವೆಲೆಂಟಾಯ್ನ್ ರೊಡ್ರಿಗಸ್, ವಿನ್ಸೆಂಟ್ ಬರೆಟ್ಟೊ ಸಹಕರಿಸಿ, ವಾರ್ಡಿನ ಮರಿಯೊ ರೇಗೊ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಸಿತಾರ್-ಝಿತಾರ್: ಕುಮಾರ್ ಬೆರಳ ಮಾಂತ್ರಿಕತೆಗೆ ಕಿವಿಯಾದ ಶ್ರೋತೃಗಳು. ವಿರಾಸತ್‌ನಲ್ಲಿ ನೀಲಾದ್ರಿ ತರಂಗ, ಸಂಗೀತದ ಅಲೆಗಳ ಅನುರಣನ

ವಿದ್ಯಾಗಿರಿ (ಮೂಡುಬಿದಿರೆ): ವೈಭವದಿಂದ ಅಲಂಕೃತಗೊಂಡ ಆಳ್ವಾಸ್ ವಿರಾಸತ್ ಸಭಾಂಗಣದ ಮೇಲೆ ಪಶ್ಚಿಮದಿಂದ ಸರ‍್ಯ ಹೊಂಗಿರಣ ಬೀರಿದರೆ, ಇತ್ತ ಪರ‍್ವದ ಕೋಲ್ಕತ್ತಾದಿಂದ ಬಂದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ತರಂಗಗಳ ಕಂಪನದ ಅಲೆ ಸೃಷ್ಟಿಸಿದರು. ದೃಶ್ಯ-ಶ್ರವ್ಯಕ್ಕೆ ಬೆರಗಾದ ಜನತೆ ತಲೆದೂಗಿದರು. ನೀಲಾದ್ರಿಯ ಬೆರಳುಗಳ ಸಂಚಲನದ ಕಂಪನ- ತರಾಂಗಂತರಂಗಕ್ಕೆ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರವೇ ನಿನಾದಲ್ಲಿ ತುಂಬಿತ್ತು.ತಾವೇ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ರ‍್ಣದ ‘ಝಿತಾರ್’ ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ ಸಂಯೋಜನೆಯ ‘ಸಮ್ಮಿಲನ’ (ಫ್ಯೂಜನ್) ಮೂಲಕ ಕಛೇರಿಗೆ ನಾಂದಿ ಹಾಡಿದರು. ಇದು ‘ಸೌಂಡ್ ಚೆಕ್’ ಎಂದು ಹಾಸ್ಯವಾಡಿದ ನೀಲಾದ್ರಿ, ‘ರಾಗಗಳು ಇನ್ನಷ್ಟೇ ಶುರುವಾಗ ಬೇಕು’ ಎಂದು ಪ್ರೇಕ್ಷಕರಿಗೆ ಪಂಚ್ ನೀಡಿದರು.‘ಗ್ರೇಟ್ ಗ್ಯಾಂಬ್ಲರ್’ ಸಿನಿಮಾದ ‘ದೋ ಲಬ್ಜೋ ಕೀ ಹೇ’ ನಾದದ ಮೂಲಕ ಮತ್ತೆ ಚಾಲನೆ ನೀಡಿದ ಅವರು, ಬಳಿಕ ‘ರ‍್ಜ್’ ಸಿನಿಮಾದ ‘ ಏಕ್ ದಿವಾನಾ ಥಾ..’ ಸ್ವರ ನುಡಿಸಿದರು.ಮಹಾತ್ಮ ಗಾಂಧೀಜಿಯ ನೆಚ್ಚಿನ ‘ವೈಷ್ಣವ ಜನತೋ..’ ನುಡಿಸಿದರು. ಇದರ ಕನ್ನಡ ಅವತರಣಿಕೆ, ‘ ಪರಹಿತ ಬಯಸೋ’ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಮೆಚ್ಚಿನ ಹಾಡಾಗಿದ್ದು, ಆಳ್ವಾಸ್ ಧ್ಯೇಯ ಗೀತೆಯಂತಿದೆ. ಹೀಗಾಗಿ ನೆರೆದಿದ್ದ ಮಕ್ಕಳು ತಕ್ಷಣವೇ ಗುರುತಿಸಿದರು.ಇಡೀ ವೇದಿಕೆಯಲ್ಲಿ ‘ ವೈಷ್ಣವ ಜನತೋ’ ಅನುರಣಿಸಿತು. ‘ರಘುಪತಿ ರಾಘವ ರಾಜಾ ರಾಂ’ ಎನ್ನುತ್ತಲೇ ಗಾಂಧಿ ‘ಸತ್ಯ- ಅಹಿಂಸೆ’ ತತ್ವಗಳ ಜೈನಕಾಶಿ ಜನತೆ ಭಜಿಸಿದರು. ಆಳ್ವಾಸ್ ನೆಲದಲ್ಲಿ ಸಾಬರಮತಿ ಆಶ್ರಮದ ಸ್ಮರಣೆಯ ಮಾಡಿದರು.‘ಸವಾಲ್ ಜವಾಬ್’ ಮಾದರಿಯಲ್ಲಿ ತಬಲಾ ವಾದಕ ಅಮಿತ್ ಕವ್ಟೇಕರ್ ಜೊತೆ ಕಿರು ಜುಗಲ್ ಬಂಧಿ ನಡೆಸಿದರು. ಶಿಖರ್ ನಾದ್ ಖುರೇಷಿ ಅವರು ತಬಲಾ ನಾದ ಮಿಶ್ರಿತ ಆಫ್ರಿಕನ್ ಜಂಬೆಯಲ್ಲಿ ಜೊತೆಯಾದರು. ತಕ್ಷಣವೇ ವಯೋಲಿನ್ ನಲ್ಲಿದ್ದ ಯಾದ್ನೇಶ್ ರಾಯ್ಕರ್ ‘ಸವಾಲ್’ ಸ್ವೀಕರಿಸಿದರು. ಶಿಖರ್ ನಾದ್ ಖುರೇಷಿ ಜಂಬೆಯಲ್ಲಿ ‘ಜವಾಬ್’ ನೀಡಿದರು. ಪ್ರೇಕ್ಷಕರು ಕರತಾಡನ ಮೂಲಕ ತಾಳ ಹಾಕಿದರು.ನೀಲಾದ್ರಿ ಬೆರಳ ಸ್ರ‍್ಶವು ಶ್ರೋತೃಗಳ ರ‍್ಣದಲ್ಲಿ ಅನುರಣಿಸುತ್ತಿತು. ಮುಂಗುರುಳ ಸರಿಸಿದ ತರುಣಿಯರು, ಚುಮುಚುಮು ಚಳಿಗೆ ಕೆನ್ನೆಗೆ ಕೈ ಇಟ್ಟ ಮಕ್ಕಳು, ತಲೆಗೆ ಕೈ ಇಟ್ಟು ಕುಳಿತ ಹಿರಿಯರು.. ಎಲ್ಲರೂ ಮಂತ್ರ ಮುಗ್ಧ ಗೊಂಡು ನಿನಾದಕ್ಕೆ ಕಿವಿಯಾದರು. 30ನೇ ರ‍್ಷದ ಆಳ್ವಾಸ್ ವಿರಾಸತ್‌ನಲ್ಲಿ ಬುಧವಾರ ಉತ್ತರದ ಹಿಂದೂಸ್ತಾನಿ ಗಾನ ಹೊಮ್ಮಿದರೆ, ಗುರುವಾರ ಪಶ್ಚಿಮದ ಗುಜರಾತಿನ ಗಜಲ್-ಭಜನ್ ನಿನಾದ. ಶುಕ್ರವಾರದ ಮುಸ್ಸಂಜೆಯಲ್ಲಿ ಪರ‍್ವದ ಕೋಲ್ಕತ್ತಾದ ನೀಲಾದ್ರಿ ಕುಮಾರ್ ಅವರ ಸಿತಾರ್ ತರಂಗಗಳ ಕಂಪನ.ಭಾರತೀಯ ಶಾಸ್ತ್ರೀಯ ಸಂಗೀತದ ಸ್ವತಂತ್ರ ಚಿಂತಕ, ಉತ್ಸಾಹದ ಚಿಲುಮೆ, ಪ್ರಯೋಗಮತಿ ಎಂಬ ಖ್ಯಾತಿಯ ನೀಲಾದ್ರಿ ಕುಮಾರ್, ರಾಗ ತಾಳ ಮಾತ್ರವಲ್ಲ ಪ್ರೇಕ್ಷಕರ ಜೊತೆಯೂ ಚಪ್ಪಾಳೆ ಮೂಲಕ ತಾಳ ಪ್ರಯೋಗ ನಡೆಸಿದರು.ಐದನೇ ತಲೆಮಾರಿನ ಸಿತಾರ್ ವಾದಕರಾದ ನೀಲಾದ್ರಿ ಮಿಶ್ರ ಗರಾ ರಾಗದಲ್ಲಿ ನಂತರ ಸಿತಾರ್ ನುಡಿಸಿದರು. ಕೇವಲ ಪ್ರಯೋಗಶೀಲ ಮಾತ್ರವಲ್ಲ, ಸಾಂಸ್ಕೃತಿಕ- ಸಾಂಪ್ರದಾಯಿಕ ಪಟ್ಟುಗಳನ್ನು ಲೀಲಾಜಾಲವಾಗಿ ಪ್ರಯೋಗಿಸಬಲ್ಲ ಅವರು ಮಿಶ್ರ ಗರಾ ರಾಗವನ್ನು ವಿಸ್ತರಿಸುತ್ತಾ ಹೋದರು. ಮಿಶ್ರ ಗರಾ ರಾಗವು ತುಳಸೀ ದಾಸರ ಮೆಚ್ಚಿನ ರಾಗ ವಾಗಿದ್ದು, ಕೋಲ್ಕತ್ತಾದಲ್ಲಿ ಭಜನೆಯಲ್ಲಿ ಹೆಚ್ಚಾಗಿ ನುಡಿಸುತ್ತಾರೆ. ಇದರ ಮೂಲ ರಾಗ ‘ಗರಾ’ ಮೂಲಕ ‘ರಘುಪತಿ ರಾಘವ ರಾಜಾರಾಂ’ ಧುನ್ ಭಜನ್ ನುಡಿಸಿದ್ದರು. ಸಿತಾರ್ ನ ‘ಜಾಲಾ’ ಮೂಲಕ ಪ್ರೇಕ್ಷಕರ ಮನ ಸೆಳೆದರು.ನಂತರ ‘ವೈಷ್ಣವ ಜನತೋ… ಖಮಾಜ್’ ರಾಗದಲ್ಲಿ ನೀಲಾದ್ರಿ ಹಾಗೂ ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಜುಗಲ್ ಬಂಧಿ ನಡೆಸಿದರು. ನೀಲಾದ್ರಿ ಕೇವಲ ಎಡ ಕೈಯಲ್ಲಿ ಮಾತ್ರ ಝಿತಾರ್ ನುಡಿಸಿ, ಚಕಿತಗೊಳಿಸಿದರು.ಅನಂತರ, ತಮಿಳಿನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಜಾನಕಿ ಹಾಡಿದ ಯುಗಳ ‘ಮಲರೇ ಮೌನಮೇ’ ನುಡಿಸಿದರು.ಬಳಿಕ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇ…’ ಗೆ ಹೊರಳಿದರು.ಬಳಿಕ ‘ಚಾರುಕೇಶಿ’ ರಾಗದ ಮೂಲಕ ಶುರು ಮಾಡಿ ಭೈರವಿ ರಾಗಮಾಲಿಕೆ ಪ್ರಸ್ತುತ ಪಡಿಸಿದರು. ಶುದ್ಧ ಸಾಣಿಕೆ ನುಡಿಸಾಣಿಲೆ ಮೂಲಕ ಎರಡು ಗಂಟೆಗಳ ಕಛೇರಿ ಮುಕ್ತಾಯಗೊಳಿಸಿದರು.ನೀಲಾದ್ರಿ ಸಿತಾರ್ ತರಂಗಗಳನ್ನು ಸೃಷ್ಟಿಸಿದರೆ, ಝಿತಾರ್ ಅಲೆಗಳನ್ನೇ ಸೃಷ್ಟಿಸಿ ಹೊನಲಾಗಿಸಿತು. ಆ ಮೂಲಕ ಯುವಜನತೆಯನ್ನು ಶಾಸ್ತ್ರೀಯ ಸಂಗೀತದೆಡೆಗೆ ಸೆಳೆದರು.ತಬಲಾದಲ್ಲಿ ಅಮಿತ್ ಕವ್ಟೇಕರ್, ಕೀ ಪ್ಯಾಡ್ ನಲ್ಲಿ ಆ್ಯಂಜಲೋ ಫರ‍್ನಾಂಡಿಸ್, ಡ್ರಮ್ಸ್ ಮತ್ತು ಸ್ವರಮೇಳದಲ್ಲಿ ಉಸ್ತಾದ್ ಅಲ್ಲಾ ರಖಾ ಖಾನ್ ಪರಂಪರೆ ಹಾಗೂ ಝಾಕೀರ್ ಹುಸೇನ್ ಸಂಬಂಧಿ ಶಿಖರ್ ನಾದ್ ಖುರೇಷಿ, ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಸಾಥ್ ನೀಡಿದರು.ಪಶ್ಚಿಮ ಬಂಗಾಳದ ಕೋಲ್ಕತ್ತಾದ ನೀಲಾದ್ರಿ, ಅವರ ತಂದೆ ಪಂಡಿತ ಕರ‍್ತಿಕ್ ಕುಮಾರ್ ಮೂಲಕ ಸಿತಾರ್ ಕಲಿತರು. ತಂದೆ ಕರ‍್ತಿಕ್ ಕುಮಾರ್ ಪಂಡಿತ ರವಿಶಂಕರ್ ಅವರ ಶಿಷ್ಯರಾಗಿದ್ದರು.6 ರ‍್ಷ ಇದ್ದಾಗಲೇ ಸಂಗೀತ ಕಛೇರಿ ನೀಡಿದ್ದ ಕುಮಾರ್, 15 ರ‍್ಷದಲ್ಲೇ ತನ್ನ ಆಲ್ಪಂ ಮಾಡಿದ್ದರು.ಎ.ಆರ್. ರೆಹಮಾನ್, ಸೆಲ್ವಗಣೇಶ್ ಮತ್ತಿತರ ಸಂಗೀತ ನರ‍್ದೇಶಕರ ಜೊತೆ ಕೆಲಸ ಮಾಡಿದ್ದು, ಝಾಕೀರ್ ಹುಸೇನ್ ಅವರ ಜೊತೆ ತಾಳವಾದ್ಯ ನುಡಿಸಿದ್ದಾರೆ.ಪ್ಲಕ್‌ಡ್ (2014), ಸುರ್ ಯಜ್ಞ (2013), ಟುಗೆದರ್ (2011), ಔರ್ (2010), ಪ್ರಿಯಾರಿಟಿ (2008), ಝಿತಾರ್ (2007), ಸಿತಾರ್ ಗೇಜ್ (2004), ಸಂಜಾ ಸುರ್ (2003), ಐಎಫ್ (2002), ಧಾರೋಹರ್ (2000), ರೆವೆಲೇಷನ್ (1998), ಟುಗೆದರ್ (1995) ಹಾಗೂ ಟಚ್ ಈಸ್ ಆಲ್ ಟೇಕ್, ಹೆಡ್ ಟು ಹರ‍್ಟ್ ನೀಲಾದ್ರಿ ಅವರ ಪ್ರಮುಖ ಆಲ್ಬಂಗಳಾಗಿವೆ.ಅವರು ಮನೋಹರಿ (ಬಾಹುಬಲಿ), ಚುಪ್ ಚುಪ್ ಕೇ (ಬಂಟಿ ಔರ್ ಬಬ್ಲಿ),. ಮೇಕ್ ಸಮ್ ನಾಯಿಸ್ (ದೇಸಿ ಬಾಯಿಸ್), ನಾ ಜಾನೇ ಕೋಯಿ (ಗ್ಯಾಂಗ್‌ಸ್ಟರ್), ಅಲ್‌ವಿದಾ, ಇನ್ ದಿನೋ, ಕಾರ್ ಸಲಾಮ್ (ಲೈಫ್ ಇನ್ ಮೆಟ್ರೋ) ಬಾಲಿವುಡ್ ಹಾಡುಗಳಿಗೆ ಝಿತಾರ್ ನುಡಿಸಿದ್ದಾರೆ.ಸುನ್‌ರಹಾಹೇನಾ ತೂ (ಆಶಿಕಿ-2, ಅಂಕಿತ್ ತಿವಾರಿ ಹಾಡಿದ), ಕ್ರೇಜಿ ಕಿಯಾ ರೇ (ಧೂಮ್-2, ಅಭಿಷೇಕ್ ಬಚ್ಚನ್, ಹೃತಿಕ್ ರೋಷನ್, ಬಿಪಾಷಾ ಬಸು), ಜಾಗವೇ ಸಾರಿ ರೆಯ್ನಾ (ದೇದೇ ಇಷ್ಕ್ಕಿಯಾ), ದೀರೇ ಜಲ್ನಾ (ಪಹೇಲಿ- ಶಾರೂಕ್ ಖಾನ್, ರಾಣಿ ಮುರ‍್ಜಿ), ಎಕ್ ಓ ದಿನ್ (ಚಾಚಿ 420), ದೋಲ್ನಾ (ದಿಲ್ ತೋ ಪಾಗಲ್ ಹೇ), ಬಾದಲ್ ಉಟಿಯಾ (ಮಾತ್ರು ಕೀ ಬಿಜಿಲೀ ಕಾ ಮಂಡೋಲಾ), ನೈನಾ (ಓಂಕಾರ್), ಆವಾರಾ (ಸಾತ್ ಕೂನ್ ಮಾಫ್), ಪಿಯಾ ಬಸಂತೀ ರೇ (ಉಸ್ತಾದ್ ಸುಲ್ತಾನ್ ಖಾನ್), ಶಾಯದ್ ಏ ತೋ ಪ್ಯಾರ್ ಹೇ (ಲಕ್ಕಿ ನೋ ಟೈಮ್ ಫಾರ್ ಲವ್) ಸಿತಾರ್ ನುಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್‌ಗೆ ಅವಳಿ ಪ್ರಶಸ್ತಿ. ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್

ಮೂಡುಬಿದಿರೆ: ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯನ್ ಹಾಗೂ ತುಮಕೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಮಧುಗಿರಿ ಸ್ಪೋಟ್ಸ್ ಕ್ಲಬ್ ಮಧುಗಿರಿಯಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗದ ಪ್ರಥಮ ಪ್ರಶಸ್ತಿ ಹಾಗೂ ಬಾಲಕಿಯರ ದ್ವಿತೀಯ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಬಾಲಕರ ವಿಭಾಗದ ಪೈನಲ್ಸ್ನಲ್ಲಿ ಆಳ್ವಾಸ್ ಬಾಲಕರ ತಂಡ ಬೆಂಗಳೂರಿನ ರಾಜೇಶ್ವರಿ ಯುತ್ ಕ್ಲಬ್ (ಆರ್‌ವೈಸಿ) ತಂಡವನ್ನು 35-31 ಹಾಗೂ 35-27 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗಳಿಸಿತು. ಆಳ್ವಾಸ್ ಬಾಲಕಿಯರ ತಂಡ ಫೈನಲ್ಸ್ ಹಣಾಹಣಿಯಲ್ಲಿ ಆಳ್ವಾಸ್‌ನ ಎ ತಂಡವನ್ನು, ಆಳ್ವಾಸ್‌ನ ಬಿ ತಂಡವು 35-29 ಹಾಗೂ 35-33 ನೇರ ಸೆಟ್‌ಗಳಿಂದ ಸೋಲಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನÀ್ವನ್ನು ಪಡೆದುಕೊಂಡವು. ಬಾಲಕರ ವಿಭಾಗದಲ್ಲಿ ರಾಜ್ಯದ ಸುಮಾರು 24 ತಂಡಗಳು ಹಾಗೂ ಬಾಲಕಿಯರ ವಿಭಾದಲ್ಲಿ 16 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Scroll to Top