ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

SPORTS COLUMNIST S. JAGADISHCHANDRA ANCHAN HONOURED WITH ‘BASAVASHREE’ STATE AWARD

Mangaluru:* Senior sports columnist *S. Jagadishchandra Anchan, Sooterpete, Mangaluru*, has been conferred with the prestigious *‘Basavashree’ State Award* by Sri Jnana Mandara Educational and Cultural Trust, Bengaluru, during its Silver Jubilee celebrations held at J.S.S. Auditorium, Bengaluru on August 29th.Anchan has been recognized for his *32 years of dedicated service* in sports journalism, with over 4,500 sports articles and columns* published in Kannada dailies and magazines at district, state and interstate levels. Two Special Highlights:* 1. Author of ‘Thyagamayi Molahalli’:* Along with sports writing, Anchan is also active in the literary field. He has recently authored and released the book *‘Thyagamayi Molahalli’*, which has received wide appreciation across the state. 2. First Major Honour by MPMLAs NEWS:* It is a proud moment for MP MLAs NEWS as we had identified his talent much earlier. *In 2013, MPMLAs NEWS honoured S. Jagadishchandra Anchan with the ‘MP MLAs News Media Award’ for his contribution to sports literature. It was one of the first major state-level media awards he received,Complete List of Awards Received:* – 2013 – Media Award (by MPMLAs NEWS) – 2014 – Samaja Ratna State Award – 2016 – District Rajyotsava Award – 2018 – Gadinada Rajyotsava Award – 2019 – Janapada Loka State Award & Namma Kudla Sadhaka Award – 2020 – K.A. Nettakallappa State Award – 2022 – Siddaganga Shree State Award – 2023 – Karnataka Kalashree State Award – 2025 – Basavashree State Award MPMLA’S NEWS &mp mlasnewstv 24×7 News portal  congratulates Anchan on his 10th major award.All the best Sir

ಪ್ರಾದೇಶಿಕ ವಾರ್ತೆಗಳು

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ

ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ನೀಡಿ ಬೆಂಗಳೂರಿನಲ್ಲಿ ಗೌರವಿಸಲಾಯಿತು. ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ), ಬೆಂಗಳೂರು ಇದರ ರಜತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಬನಶಂಕರಿಯ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಫಣಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ  ಮಾಡಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು  ಆರ್.ಎನ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಶಂಕರ್ ಬಿ.ವಿ. ಅವರು ಎಸ್. ಜಗದೀಶ್ಚಂದ್ರ  ಅಂಚನ್ ಅವರಿಗೆ ಬೆಳ್ಳಿ ಹಾಗೂ ಚಿನ್ನದ ಪದಕದೊಂದಿಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.ಕ್ರೀಡಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡೆಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ತಮ್ಮ ಅಂಕಣ ಬರಹಗಳ ಮೂಲಕ ನಿರಂತರವಾಗಿ ದಾಖಲಿಸುತ್ತಿರುವ ಎಸ್. ಜಗದೀಶ್ಚಂದ್ರ ಅಂಚನ್  ಅವರ ಸೇವೆಯನ್ನು ಸಮಾರಂಭದಲ್ಲಿ ಶ್ಲಾಘಿಸಲಾಯಿತು.ಇದೇ ಸಂದರ್ಭದಲ್ಲಿ ಬೆಂಗಳೂರು ಆರ್.ಎನ್.ಎಸ್. ಕಾಲೇಜು ಹಾಗೂ ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಎಸ್. ಜಗದೀಶ್ಚಂದ್ರ ಅಂಚನ್  ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.ಬಸವ ವೇದಿಕೆ (ರಿ.), ಬೆಂಗಳೂರು ಹಾಗೂ ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀ ವಚನ ಜ್ಯೋತಿ  ಸಹಕಾರಿ ಬ್ಯಾಂಕ್ ಅಧ್ಯಕ್ಷ ದಾನಪ್ರಕಾಶ ಎನ್. ತಿಮ್ಮಪ್ಪ, ಬೆಂಗಳೂರು ಎಂ.ಎನ್.ಆರ್. ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹನ್ ಕುಮಾರ್ ಆರ್., ಸಾರ್ವಜನಿಕ  ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಜ್ಞಾನ  ಮಂದಾರ ಟ್ರಸ್ಟ್‌ನ ಸಂಸ್ಥಾಪಕ ಸೋಮಶೇಖರ್,  ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಎಂ.ಎಸ್. ಆರತಿ ಸುರೇಶ್, ಪ್ರೊ. ಕಾಂತಪ್ಪ,  ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹಾಗೂ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು ಇದರ ಕಾರ್ಯದರ್ಶಿ ತಿಲಕ್ ರಾಜ್ ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಂಚನ್ ಪಡೆದ ಪ್ರಶಸ್ತಿಗಳುಇವರ  ಕ್ರೀಡಾ ಬರವಣಿಗೆಗಾಗಿ 2013ರಲ್ಲಿ ‘ಮೀಡಿಯಾ ಅವಾರ್ಡ್’, 2014ರಲ್ಲಿ ‘ಸಮಾಜ ರತ್ನ ‘ ರಾಜ್ಯ ಪ್ರಶಸ್ತಿ , 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ,2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ; 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ  ; ನಮ್ಮ ಕುಡ್ಲ ಸಾಧಕ ಪ್ರಶಸ್ತಿ, 2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ  ಕೆ.ಎ.ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ , 2021ರಲ್ಲಿ ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ , 2022ರಲ್ಲಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಘಟಕದಿಂದ ಕೆ.ಆರ್.ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ,  ಸಾಧನ ಪ್ರಶಸ್ತಿ -2023,  2024ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, 2026ರಲ್ಲಿ ಜಾನಪದ ರತ್ನ ಪ್ರಶಸ್ತಿ, ಹಾಗೂ ಕನ್ನಡ ಪಯಸ್ವಿನಿ ಅವಾರ್ಡ್ -2026 ಅಂತರ್ ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವು ಸನ್ಮಾನ ಪುರಸ್ಕಾರವನ್ನು ಇವರು ಪಡೆದಿದ್ದಾರೆ .

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನಲ್ಲಿ ‘ಹಲ್ಕಾ ಡಾನ್’ ಚಿತ್ರೀಕರಣ ಬಹುತೇಕ ಪೂರ್ಣ. ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಚಿತ್ರತಂಡ ಭೇಟಿ; ತುಳು ಭಾಷೆಯಲ್ಲೂ ಚಿತ್ರ ಬಿಡುಗಡೆಗೆ ನಿರ್ಧಾರ

ಉಳ್ಳಾಲ: ವೀನಸ್ ಎಂಟರ್ ಟೈನರ್ ಬ್ಯಾನರ್ ಅಡಿಯಲ್ಲಿ “ಸಲಗ” ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ಹಾಗೂ ವೆಂಕಟಾಚಲ (ಚಲಂ) ನಿರ್ದೇಶನದಲ್ಲಿ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಚಿತ್ರೀಕರಣಗೊಳ್ಳುತ್ತಿರುವ ಕನ್ನಡ-ತೆಲುಗು ದ್ವಿಭಾಷಾ ಆ್ಯಕ್ಷನ್ ಹಾಸ್ಯಚಿತ್ರ ‘ಹಲ್ಕಾ ಡಾನ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.ಈ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ ಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದಿತು. ಬಳಿಕ ಅಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು. ಚಿತ್ರದಲ್ಲಿ ಪ್ರಮೋದ್ ಪಂಜು, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಅರವಿಂದ್ ಬೋಳಾರ್ ಸೇರಿದಂತೆ ಸಾಯಿ ಕುಮಾರ್, ಜ್ಯೋತಿ ಪೂರ್ವಜ್ ಹಾಗೂ ರಮೇಶ್ ಇಂದಿರಾ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.ನಾಯಕ ನಟ ಪ್ರಮೋದ್ ಪಂಜು ಮಾತನಾಡಿ, ಮಂಗಳೂರಿನಲ್ಲಿ ನಡೆಯುವ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು. ಚಿತ್ರದಲ್ಲಿ ಅನುಭವಿ ಕಲಾವಿದರಾದ ಅರವಿಂದ್ ಬೋಳಾರ್ ಹಾಗೂ ರೂಪೇಶ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುತ್ತಿರುವುದು ಉತ್ತಮ ಅನುಭವ ನೀಡಿದೆ ಎಂದು ಹೇಳಿದರು. ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನರಿಗೆ ತಮ್ಮದೇ ಭಾಷೆಯಲ್ಲಿ ಚಿತ್ರವನ್ನು ತಲುಪಿಸುವ ಉದ್ದೇಶದಿಂದ ತುಳು ಭಾಷೆಯಲ್ಲೂ ಚಿತ್ರವನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.ನಟ ರೂಪೇಶ್ ಶೆಟ್ಟಿ ಮಾತನಾಡಿ, ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದರೂ ಉತ್ತಮ ಬ್ಯಾನರ್‌ನೊಂದಿಗೆ ಕೆಲಸ ಮಾಡಬೇಕು ಎಂಬ ಆಸೆಯಿತ್ತು. ಇದೀಗ ‘ಹಲ್ಕಾ ಡಾನ್’ ಮೂಲಕ ಆ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.“ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಕಥೆ ಹೇಳಿದಾಗಲೇ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ನಿರ್ದೇಶಕ ಚಲಂ ಅವರೊಂದಿಗೆ ಮೊದಲ ಭೇಟಿಯಲ್ಲೇ ಸಾಕಷ್ಟು ನಕ್ಕಿದ್ದೆ. ‘ಹಲ್ಕಾ ಡಾನ್’ ಎಂಬ ಶೀರ್ಷಿಕೆಯೇ ಕುತೂಹಲ ಮೂಡಿಸುತ್ತದೆ. ಮಂಗಳೂರಿನ ಡಾನ್ ಒಬ್ಬನ ಕಥೆಯನ್ನು ವಿಭಿನ್ನ ಹಾಗೂ ಹಾಸ್ಯಮಯವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದ ಪ್ರಚಾರವನ್ನೂ ವಿಭಿನ್ನ ರೀತಿಯಲ್ಲಿ ನಡೆಸುವ ಆಲೋಚನೆ ಇದೆ,” ಎಂದು ಹೇಳಿದರು.ನಿರ್ದೇಶಕ ವೆಂಕಟಾಚಲ (ಚಲಂ) ಮಾತನಾಡಿ, ‘ಹಲ್ಕಾ ಡಾನ್’ ಒಬ್ಬ ಆಕರ್ಷಕ ಆದರೆ ಮುಗ್ಧ ಸ್ವಭಾವದ ವ್ಯಕ್ತಿ ಅನಿರೀಕ್ಷಿತವಾಗಿ ಪ್ರಬಲ ಗ್ಯಾಂಗ್‌ನ ಮುಖವಾಗುವ ಕಥೆಯನ್ನು ಒಳಗೊಂಡಿದೆ. ಬಳಿಕ ಸ್ಥಳೀಯ ಭೂಗತ ಲೋಕದ ಪೈಪೋಟಿಯಲ್ಲಿ ಸಿಲುಕಿಕೊಳ್ಳುವ ನಾಯಕ, ತನ್ನ ಬುದ್ಧಿವಂತಿಕೆ, ಅನಿರೀಕ್ಷಿತ ಮೈತ್ರಿಗಳು ಹಾಗೂ ಅಮೃತಾ ಅವರ ಪಾತ್ರದ ನೆರವಿನಿಂದ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಹಾಸ್ಯ ಹಾಗೂ ಆಕ್ಷನ್‌ನೊಂದಿಗೆ ಚಿತ್ರಿಸಲಾಗಿದೆ ಎಂದರು.“ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಇಷ್ಟು ದೊಡ್ಡ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ನಿರ್ಮಾಪಕರು ಹಾಗೂ ಇಡೀ ಚಿತ್ರತಂಡಕ್ಕೆ ನಾನು ಕೃತಜ್ಞ,” ಎಂದು ಚಲಂ ಹೇಳಿದರು.ಈಗಾಗಲೇ ಕನ್ನಡದಲ್ಲಿ ಮೈಲಾರಿ, ಟಗರು, ಸಲಗ, U I, ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿ, ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಿಸುವ ಉದ್ದೇಶವಿತ್ತು. ಆದರೆ ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿರುವುದರಿಂದ ಇಲ್ಲಿನ ಜನರ ಭಾಷೆಯಾದ ತುಳುವಿನಲ್ಲೂ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಆಶಯ ಮೂಡಿತು. ಈ ಹಿನ್ನೆಲೆಯಲ್ಲಿ ತುಳು ಭಾಷೆಯಲ್ಲೂ ಚಿತ್ರವನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.“ಕುತ್ತಾರು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇವೆ. ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಚಿತ್ರವನ್ನು ಇಲ್ಲಿನ ಜನರ ಭಾಷೆಯಾದ ತುಳುವಿನಲ್ಲಿ ನೀಡಬೇಕು ಎಂಬುದು ನಮ್ಮ ಆಶಯ. ಮಂಗಳೂರಿನಲ್ಲಿ ಚಿತ್ರ ಯಶಸ್ವಿಯಾದರೆ ಇಡೀ ಕರ್ನಾಟಕದಲ್ಲೇ ಯಶಸ್ವಿಯಾದಂತೆ ಎಂಬ ನಂಬಿಕೆ ನಮ್ಮದು. ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಕರು ಉತ್ತಮ ಸಿನಿಮಾಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿತ್ರಕ್ಕೆ ಪರಶುರಾಮನ ಆಶೀರ್ವಾದ ಸದಾ ಇರಲಿ ಎಂಬುದು ನಮ್ಮ ಆಶಯ,” ಎಂದು ಕೆ ಪಿ ಶ್ರೀಕಾಂತ್ ಹೇಳಿದರು.ಹಾಸ್ಯ ನಟ ಅರವಿಂದ್ ಬೋಳಾರ್ ಮಾತನಾಡಿ, ಕೆ.ಪಿ. ಶ್ರೀಕಾಂತ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಹಯೋಗದಲ್ಲಿ ಉತ್ತಮ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಚಿತ್ರತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ತಮಗೆ ನಾಯಕಿಯ ಪಾತ್ರ ಸಿಕ್ಕಿಲ್ಲ ಎಂದು ಹಾಸ್ಯವಾಗಿ ಹೇಳಿದ ಬೋಳಾರ್, ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಾಯಕ ಇಂದು ದೊಡ್ಡ ನಾಯಕನಾಗಿ ಬೆಳೆದಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಚಿತ್ರದ ಸೆಟ್‌ನ ವಾತಾವರಣ ತುಂಬಾ ಉತ್ತಮವಾಗಿದೆ. ಒಳ್ಳೆಯ ತಂಡದೊಂದಿಗೆ ಉತ್ತಮ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸಂತೋಷವಿದೆ. ‘ಹಲ್ಕಾ ಡಾನ್’ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಅವರು ವಿಶ್ವಾಸ ವ್ಯಕ್ತಪ…

ಪ್ರಾದೇಶಿಕ ವಾರ್ತೆಗಳು

ಮುಂಬೈಯಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಹಾಗೂ ಜೋನ್ ವಿಲ್ಸನ್ ಲೋಬೋ ಅವರ “ಲೋಬೋ ಪ್ರೋಡಕ್ಷನ್” ಲೋಕಾರ್ಪಣೆ :ಕೊಂಕಣಿ ಭಾಷಾಭಿಮಾನಕ್ಕೆ ಹೊಸ ಸ್ಫೂರ್ತಿ: ಜೆನೆವೀವ್ ಪಿ. ವಾಸ್

ಮುಂಬೈ: ಮಾಯಾನಗರಿ ಮುಂಬೈಯಲ್ಲಿ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ನೂತನವಾಗಿ ನಿರ್ಮಾಣವಾಗಿರುವ “ವೇಳ್ ಘಡಿ” ಕೊಂಕಣಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಸಮಾಜ ಸೇವಕ ಜೋನ್ ವಿಲ್ಸನ್ ಲೋಬೋ ಅವರ ಸಾರಥ್ಯದ “ಲೋಬೋ ಪ್ರೊಡಕ್ಷನ್” ಸಂಸ್ಥೆಯ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು.ಅಂಧೇರಿ ಪೂರ್ವದ ಸಾಕಿನಾಕದಲ್ಲಿರುವ ಶುಕ್ರಾನ್ ಲಾಂಜ್ ಬ್ಯಾಂಕ್ವೆಟ್‌ನಲ್ಲಿ ಸ್ವರ್ಗೀಯ ಸಂಗೀತ ಸಾಮ್ರಾಟ್ ಹೆನ್ರಿ ಡಿ’ಸೋಜಾ ವೇದಿಕೆಯಲ್ಲಿ ನಡೆದ ೩೪ನೇ ಕೊಂಕಣಿ ಮಾನ್ಯತಾ ದಿವಸ್ ಅಂಗವಾಗಿ “ಸ್ಫೂರ್ತಿದಾಯಕ ಸ್ವಾಭಿಮಾನದ ಕೊಂಕಣಿ ಸಂಜೆ” ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ, ಬಾಂಬೆ ಹೈಕೋರ್ಟ್ ವಕೀಲೆ ಹಾಗೂ ಮೆ| ಪಿ. ವಾಸ್ & ಕಂಪನಿಯ ಪಾಲುದಾರೆ ಅಡ್ವೊಕೇಟ್ ಜೆನೆವೀವ್ ಪಿ. ವಾಸ್ ಅವರು, ಮಾತನಾಡಿ, ಚಲನಚಿತ್ರಗಳು ಭಾಷಾಭಿಮಾನದ ಜಾಗೃತಿಗೆ ಪೂರಕವಾಗಿವೆ. ಕೊಂಕಣಿ ಸಿನಿರಸಿಕರನ್ನು ಒಂದೆಡೆ ಸೇರಿಸಿ ಭಾಷಾಭಿಮಾನವನ್ನು ಮೆರೆಯುತ್ತಿರುವುದು ಸ್ತುತ್ಯರ್ಹ. ಇದು ಕೊಂಕಣಿ ಭಾಷೆಯ ವೈಭವ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿದೆ. ಮಾತೃಭಾಷೆಯ ಪರಂಪರೆಯನ್ನು ಜೀವಂತವಾಗಿರಿಸಲು ಹಾಗೂ ಕೊಂಕಣಿ ಚಿತ್ರರಂಗದ ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ಚಿತ್ರ ಪ್ರದರ್ಶನಗಳು ಮಹತ್ವದ ಸೇತುವೆಯಾಗಿವೆ. “ವೇಳ್ ಘಡಿ” ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಇತಿಹಾಸದ ಪುಟ ಸೇರುವಂತಾಗಲಿ ಎಂದು ಶುಭ ಹಾರೈಸಿದರು.ಡೈಜಿವರ್ಲ್ಡ್ ಹಾಗೂ ವಿಷನ್ ಕೊಂಕಣಿ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಜನ್ ಹಿಂದಿ ಸಿನಿಮಾದ ನಿರ್ಮಾಪಕ ಲಾರೆನ್ಸ್ ಡಿಸೋಜಾ, ಹ್ಯಾರಿ ಫೆರ್ನಾಂಡಿಸ್, ಡೈಜಿವರ್ಲ್ಡ್ ಫೌಂಡರ್ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಯುವ ಲೇಖಕ ಹಾಗೂ ಕಲಾ ನಿರ್ದೇಶಕ ಸ್ಟ್ಯಾನಿ ಬೇಳಾ, ಮೈಕಲ್ ಡಿ’ಸೋಜಾ, “ವೇಳ್ ಘಡಿ” ಸಿನಿಮಾದ ನಿರ್ಮಾಪಕ ಜೋನ್ ವಿಲ್ಸನ್ ಲೋಬೊ, ಪ್ರೊಡಕ್ಷನ್ ಮ್ಯಾನೇಜರ್ ರೋನ್ಸ್ ಬಂಟ್ವಾಳ, ಸಹ ನಿರ್ಮಾಪಕ ಆಲ್ವಿನ್ ಸಿಕ್ವೇರ, ಕಥೆ ಹಾಗೂ ಸಹ ನಿರ್ದೇಶಕ ಸೋನುಲವಿ ಸಿನೇ ಕ್ರಿಯೇಶನ್‌ನ ಪ್ರವರ್ತಕ ರೋಷನ್ ನೆಲ್ಲಿಗುಡ್ಡೆ, ಸಿನಿಮಾದ ಛಾಯಾಗ್ರಾಹಕರಾದ ಫೆಸ್ವಿತ್ ಡಿಸೋಜ ಹಾಗೂ ರಾಯನ್ ಡಿಸೋಜ. ಸಹಾಯಕ ನಿರ್ದೇಶಕಿ ಲವೀನ ಬೆಳ್ಮಣ್. ಕಲಾವಿದರಾದ ಜಾಸ್ಲೀನ್ ನೋರೋನ್ಹಾ ಶಿರ್ವಾ. ಲೂವಿಸ್ ಪಿಂಟೋ ಕಟೀಲು. ಮೊನೀಕಾ ಅಂದ್ರಾದೆ ಬೆಳ್ಮಣ್. ಲಿಯೋ ರಾಣಿಪುರ. ಸುನಿಲ್ ನೆಲ್ಲಿಗುಡ್ಡೆ. ವಿಲ್ಫೆಡ್ ಕೊಲ್ಲೂರು. ನರೇಂದ್ರ ಕೆರೆಕಾಡು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಬಿಡುಗಡೆಗೊಳಿಸುವುದರ ಜೊತೆಗೆ “ಲೋಬೋ ಪ್ರೊಡಕ್ಷನ್” ಸಂಸ್ಥೆಯನ್ನೂ ಅಧಿಕೃತವಾಗಿ ಲೋಕಾರ್ಪಣೆಗೊಳಸಿಲಾಯಿತು. ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಅಭಿಮಾನಿಗಳು ಹಾಗೂ ಚಿತ್ರರಸಿಕರ ಉತ್ಸಾಹಭರಿತ ವಾತಾವರಣದಲ್ಲಿ ಅದ್ದೂರಿಯಾಗಿ ನಡೆದು, “ವೇಳ್ ಘಡಿ” ಸಿನಿಮಾದ ಟ್ರೇಲರ್ ಜನಾಕರ್ಷಣೆ ಪಡೆಯಿತು. ಮುಂದಿನ ನವೆಂಬರ್ ಅಥವ ಡಿಸೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರುವ ಬಗ್ಗೆ ಪ್ರಕಟಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

*MPMLA’S NEWS Requests PM Narendra Modi to Honour Mangalore Star Sarvotham Shetty of Abu Dhabi, Originally from Pareeka Village Near Manipal, Udupi, as the Most Eligible Person for Padma Shri Award

Achievements of Mangalore star Sarvottham shetty.Hometown: Pareeka (Pareekha) Village, Near Manipal, Udupi District, Karnataka. Son of Mattaru Parari Soorappa Shetty and Pareeka Saraswati Hegde.Childhood: Born and brought up in a simple middle-class Bunt family in a tiny hamlet. Known for his down-to-earth nature and clear oratory skills from childhood. Education: Abu Dhabi Journey: Positions Held: Major Contributions: Awards: Inspiration: World Leader Nelson Mandela and Padma Shri Dr. B.R. Shetty Family: Wife – Smt. Usha Shetty, Children – Samarth & Samyuktha Shetty MPMLA’S NEWS TV Requests Padma Shri for Sarvotham Shetty – The Most Eligible Person – Appeals to PM Narendra Modi Ji

ಪ್ರಾದೇಶಿಕ ವಾರ್ತೆಗಳು

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

ಮಂಗಳೂರು/ಅಬುಧಾಬಿ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ, ವಿಶ್ವ ತುಳು ಆಯನೋದ ಅಂತರಾಷ್ಟ್ರೀಯ ಗೌರವಾಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸರ್ಕಾರಿ ನಾಮನಿರ್ದೇಶಿತ ಸದಸ್ಯ ಸರ್ವೋತ್ತಮ ಶೆಟ್ಟಿ ಅವರ ಬದುಕು, ಸಾಧನೆ, ಹೋರಾಟದ ಕಥೆ ರಾಷ್ಟ್ರ-ಅಂತರಾಷ್ಟ್ರೀಯ ಜನ ಮಾನಸದಲ್ಲಿ ಬಹು ದೊಡ್ಡ ಸುದ್ದಿಯಾಗಿದೆ.ಅವರು ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಮಹಾನ್ ಸಾಧಕ, ಅಜಾತ ಶತ್ರು, ಬಹುಮುಖ ಪ್ರತಿಭೆ .ಸಮಾಜಕ್ಕೆ ನಿಸ್ವಾರ್ಥವಾಗಿ ತನ್ನನ್ನು ಸಕ್ರಿಯವಾಗಿಸಿದ ತುಳುನಾಡಿನ ಅಮೂಲ್ಯ ಬಂಟ ರತ್ನವಾಗಿದ್ದಾರೆ. ಸರ್ವೋತ್ತಮ ಶೆಟ್ಟಿ*- -1980ರ ದಶಕದಲ್ಲಿ ಉದ್ಯೋಗ ಅರಸಿ ಅಬುಧಾಬಿಗೆ ತೆರಳಿದ ಕರಾವಳಿ ಮೂಲದ ಈ ಯುವಕ, ಇಂದು UAE ಯಲ್ಲಿ ಕನ್ನಡಿಗರಿಗೆ ಅನಿವಾರ್ಯ ನಾಯಕರಾಗಿದ್ದಾರೆ. ಅವರೇ ನಮ್ಮ ಎಲ್ಲರ ಪ್ರೀತಿಯ ಕರುಣಾಮಯಿ, ವಿಶ್ವ ಸಮಾಜ ಬಂಧು,, ಜಗತ್ತಿನಲ್ಲಿ ವಿಶೇಷ ಮತ್ತು ಮಹತ್ಸಾಧನೆ ಮಾಡಿದ ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿ.“ಸಂಘಟನಾ ಚತುರ: ಸರ್ವೋತ್ತಮ ಶೆಟ್ಟಿ ಅವರು ಅಬುಧಾಬಿ ಕರ್ನಾಟಕ ಸಂಘವನ್ನು ಕಟ್ಟಿ ಬೆಳೆಸಿ, ಸಾವಿರಾರು ಕನ್ನಡಿಗರನ್ನು ಒಂದುಗೂಡಿಸಿದ ಅದ್ವಿತೀಯ ಸಂಫಟನಾ ರೂವಾರಿಯಾಗಿದ್ದಾರೆ. ಸಂದರ್ಶನದಲ್ಲಿ ಏನು ಹೇಳಿದರು? “ನಾನು ಬೆಳೆದು ಬಂದ ರೀತಿ, ಕಾಲೇಜು ದಿನಗಳಿಂದಲೇ ಕಲೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿದೇಶದಲ್ಲಿ ಕನ್ನಡ ಉಳಿಸುವ ಸವಾಲು”ಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.ತಮ್ಮ ಸ್ಫೂರ್ತಿ ಇಬ್ಬರು ಮಹಾನಾಯಕರ ಯಾರು ಎಂದು ಅವರು ಹೇಳಿದ್ದಾರೆ: ಸರ್ವೋತ್ತಮ ಶೆಟ್ಟಿಯವರ ಸಾಧನೀಯ ಹೆಜ್ಜೆಗಳು. Leader ship & SERVICE (ನಾಯಕತ್ವ ಮತ್ತು ಸೇವೆ):* HONORS & RECOGNITIONS (ಗೌರವ ಮತ್ತು ಪ್ರಶಸ್ತಿಗಳು): CULTURAL CONTRIBUTION (ಸಾಂಸ್ಕೃತಿಕ ಕೊಡುಗೆ): FAMILY (ಕುಟುಂಬ): ಪತ್ನಿ ಉಷಾ ಮತ್ತು ಮಕ್ಕಳಾದ ಸಮರ್ಥ್ & ಸಂಯುಕ್ತಾ ಅವರೊಂದಿಗೆ ಸಂತೃಪ್ತ ಜೀವನ. ಸರ್ವೋತ್ತಮ ಶೆಟ್ಟಿ – ಹುಟ್ಟೂರಿನಿಂದ ಅಬುಧಾಬಿಯ ಸಿಂಹಾಸನದವರೆಗೆ!* ಹುಟ್ಟೂರು ಮತ್ತು ಬಾಲ್ಯ: ಶಿಕ್ಷಣದ ಹೋರಾಟ – Earn and Learn: ಅಬುಧಾಬಿ ಪಯಣ: ತುಳುನಾಡಿನ ಹೆಮ್ಮೆಯ ಸುಪುತ್ರ ಸರ್ವೋತ್ತಮ ಶೆಟ್ಟಿ ಅವರ ಅತ್ಯುನ್ನತ ಸಾಧನೆಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಿ ಎಂದು Mp MLA’s news ಕೇಂದ್ರ ಸರಕಾರದ ಗಮನಕ್ಕೆ ತರುತ್ತದೆ

ಪ್ರಾದೇಶಿಕ ವಾರ್ತೆಗಳು

Achievements of Mangalore star Sarvottham shetty.

Hometown: Pareeka (Pareekha) Village, Near Manipal, Udupi District, Karnataka. Son of Mattaru Parari Soorappa Shetty and Pareeka Saraswati Hegde. Childhood: Born and brought up in a simple middle-class Bunt family in a tiny hamlet. Known for his down-to-earth nature and clear oratory skills from childhood. Education: Abu Dhabi Journey: Positions Held: Major Contributions: Awards: Inspiration: World Leader Nelson Mandela and Padma Shri Dr. B.R. Shetty Family: Wife – Smt. Usha Shetty, Children – Samarth & Samyuktha Shetty MPMLA’S NEWS TV Requests Padma Shri for Sarvotham Shetty – The Most Eligible Person – Appeals to PM Narendra Modi Ji

ಪ್ರಾದೇಶಿಕ ವಾರ್ತೆಗಳು

ಬೈಂದೂರು ಚಾತುರ್ಮಾಸ್ಯ. ಸಾಂಪ್ರದಾಯಿಕತೆ ಮತ್ತು ಧಾರ್ಮಿಕ ಭಾವನೆಯ ಸಮ್ಮಿಲನ

​ಬೈಂದೂರು: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮಿ ವ್ರತ ಮತ್ತು ರಕ್ಷಾಬಂಧನ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಸುಮಾರು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಭಾಗೀನ ನೀಡಿ ವರಲಕ್ಷ್ಮಿ ವ್ರತಾಚರಣೆ ಆಚರಿಸಲಾಯಿತು.ಇಂದಿನ ಆಧುನಿಕ ಯುಗದಲ್ಲಿ ಹಾಗೂ ಜೆನ್-ಝಿ (GenZ) ಯುವಜನರು ನಮ್ಮ ಸಂಪ್ರದಾಯಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ, ಬೈಂದೂರು ಚಾತುರ್ಮಾಸ್ಯವು ಪ್ರತಿದಿನವೂ ಹಿಂದೂ ಸಂಸ್ಕಾರಗಳ ಜೀವಂತ ಪಾಠಶಾಲೆಯಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಧಾರ್ಮಿಕ ವೇದಿಕೆಯಲ್ಲಿ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಭಾಗಿನ ನೀಡಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಯಿತು. ಇದು ಜನರ ಮನಸ್ಸಿನಲ್ಲಿ ಭಕ್ತಿ ಭಾವನೆಯನ್ನು ಇಮ್ಮಡಿಗೊಳಿಸುವುದರ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಶಾಸಕರಾದ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನೆಡೆಯುತ್ತಿರುವ ಚಾತುರ್ಮಾಸ್ಯ ಅತ್ಯಂತ ಪ್ರಸಿದ್ದಿ ಪಡೆಯುತ್ತಿದ್ದೂ ರಾಜ್ಯದ ಮೂಲೆ ಮೂಲೆಯಿಂದ ಗಣ್ಯತಿಗಣ್ಯರು ಮತ್ತು ಹೊರ ಜಿಲ್ಲೆಯಿಂದಲೂ ಭಕ್ತಾದಿಗಳು ಬರುತ್ತಿರುವುದರಿಂದ ಧಾರ್ಮಿಕ ಹಬ್ಬವಾಗಿ ಹಿಂದೂಗಳು ಸಂಭ್ರಮಿಸುತ್ತಿದ್ದಾರೆ.ಈ ಸಂಧರ್ಭದಲ್ಲಿ ಬೈಂದೂರು ಚಾತುರ್ಮಾಸ್ಯ ಅಧ್ಯಕ್ಷರಾದ ಗುರುರಾಜ್ ಗಂಟಿಹೊಳೆ, ಉಪಾಧ್ಯಕ್ಷರಾದ ಎಸ್ ರಾಜು ಪೂಜಾರಿ,ಸಂಚಾಲಕರಾದ ಶಿವರಾಜ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಜ್ಯೋತಿ ಪೂಜಾರಿ, ಅನಿತಾ ಮರವಂತೆ, ಶ್ಯಾಮಲಾ ಕುಂದರ್,ರಮೇಶ್ ಪೂಜಾರಿ, ನರಸಿಂಹ ಪೂಜಾರಿ ಮತ್ತು ಇತರ ಧಾರ್ಮಿಕ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

Manipal Arogya Card 2026 Registration Closes on August 31

Mangaluru, August 27, 2026: Dr. Dilip G Naik, Pro-Vice Chancellor, Manipal Academy of Higher Education (MAHE), Mangalore Campus announced that “August 31, 2026, is the final date to register for the Manipal Health Card 2026 and we invite the public to make full use of this opportunity”.Further addressing the media personnel, he said that “As one of the region’s most trusted healthcare benefit programs, the Manipal Health Card has served communities for the past 26 years by making quality medical care more affordable and accessible.This initiative reflects the vision of Manipal’s founder, Dr. T.M.A. Pai, whose mission was to bring quality healthcare within reach of every segment of society, especially rural communities. Launched in 2000 under the guidance of Dr. Ramdas M. Pai, the current Chancellor of MAHE Manipal, the program has witnessed remarkable growth over the past 26 years. From enrolling just 3,200 families in its inaugural year, the scheme has expanded significantly. In the last financial year, approximately 2 lakh (200,000) families registered, and around 6.5 lakh (650,000) members are currently benefiting from this program across Karnataka and Kerala states”.Dr. Unnikrishnan B – Dean, KMC Mangalore spoke on this occasion and said that “Manipal Arogya Card is a one-year membership program designed to provide affordable healthcare to individuals and families under the tagline ‘For a Complete Family, Great Value, Trusted Service’. It aims to provide comprehensive healthcare benefits to all members.The card holder can avail benefits of medical services at KMC Hospital Attavar, KMC Hospital Dr. B.R. Ambedkar Circle (Jyothi Circle), Durga Sanjeevani Manipal Hospital Kateel, Kasturba Hospital Manipal, Dr. TMA Pai Hospital Udupi, Dr. TMA Pai Rotary Hospital Karkala and 2 dental colleges Manipal College of Dental Sciences Manipal and Mangalore respectively”.Dr. Chakrapani M – Medical Superintendent, KMC Hospital Attavar explained about the membership and said “Individual membership is available at Rs.350, family membership, which includes the individual, their spouse, and any number of unmarried children below 25 years, is priced at Rs.700. The family plus membership, which covers the individual, their spouse, any number of unmarried children below 25 years, and up to four parents, including in-laws, is available at Rs.900. This structured approach ensures that comprehensive healthcare is accessible and affordable for individuals and families alike. Benefits come into effect from the 15th of the month following enrolment and remain valid until August 15, 2027”.Dr. Deepak Madi, Deputy Medical Superintendent of KMC Hospital Attavar said “The Manipal Arogya Card holder can avail discount upto 50% on consultation, upto 20% discount on Laboratory investigations, upto 20% discount on Radiology investigation like CT, MRI, Ultrasound, X-ray etc, upto 10% discount on the OP Medicines purchased from Hospital Pharmacy & upto 25% concession on Inpatient bill excluding consumables and packages across various ward categories. As there is no upper age Limit for Enrolment, this scheme has helped lot of senior citizens for their health care needs”.Mr. Raviraj, Group Manager, Operations said “For over 25 years, we’ve been dedicated to providing quality healthcare services to millions at discounted rates. The media’s support in promoting enrolment has been instrumental in reaching a wider audience. The public can obtain the Manipal Health Card at KMC Hospital Attavar, Durga Sanjeevani Manipal Hospital Kateel, and through authorized agents across Dakshina Kannada District and Northern Kerala. Since August 31, 2026, is the final date to register for the Manipal Health Card 2026, we request the public to make full use of this opportunity”.For Information on Manipal Arogya card agents at different locations or enrolments, public can contact: 7022078002, 0824 2285214.Mr. Ganesh Hegde, Associate Manager of the Marketing Department at KMC Hospital Attavara , Mangaluru was present at the press meet

ಪ್ರಾದೇಶಿಕ ವಾರ್ತೆಗಳು

ಮಣಿಪಾಲ ಆರೋಗ್ಯ ಕಾರ್ಡ್ 2026: ನೋಂದಣಿಗೆ ಆ. 31 ಕೊನೆಯ ದಿನ

ಮಂಗಳೂರು,ಆ.27;ಮಣಿಪಾಲ ಆರೋಗ್ಯ ಕಾರ್ಡ್ 2026,ನೋಂದಣಿಗೆ ಆ. 31 ಕೊನೆಯ ದಿನವಾಗಿರುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಏಜುಕೇಶನ್ (ಮಾಹೆ) ಮಂಗಳೂರು ಕ್ಯಾಂಪಸ್‌ನ ಸಹ-ಕುಲಾಧಿಪತಿಗಳಾದ ಡಾ. ದಿಲೀಪ್ ಜಿ. ನಾಯಕ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.ಸಾರ್ವಜನಿಕರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ದೃಷ್ಟಿಕೋನದ ಪ್ರಕಾರ ,ಸಮಾಜದ ಪ್ರತಿಯೊಂದು ವರ್ಗಕ್ಕೂ, ವಿಶೇಷವಾಗಿ ಗ್ರಾಮೀಣ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವುದು ಅವರ ಧ್ಯೇಯ. ಮಾಹೆ ಮಣಿಪಾಲದ ಪ್ರಸ್ತುತ ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ 2000ನೇ ಇಸವಿಯಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ಕಳೆದ 26 ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆರಂಭಿಕ ವರ್ಷದಲ್ಲಿ ಕೇವಲ 3,200 ಕುಟುಂಬಗಳನ್ನು ಮಾತ್ರ ಹೊಂದಿದ್ದ ಈ ಯೋಜನೆಯು ಈಗ ಗಣನೀಯವಾಗಿ ವಿಸ್ತರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 2 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಪ್ರಸ್ತುತ ಕರ್ನಾಟಕ ಮತ್ತು ಕೇರಳ ರಾಜ್ಯಗಳಾದ್ಯಂತ ಸುಮಾರು 6.5 ಲಕ್ಷ ಸದಸ್ಯರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಕಾರ್ಡ್ ಹೊಂದಿರುವವರು ಕೆಎಂಸಿ ಆಸ್ಪತ್ರೆ ಅತ್ತಾವರ,ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ), ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ,,ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಮಣಿಪಾಲ ಮತ್ತು ಮಂಗಳೂರಿನ ಎರಡು ದಂತ ಮಹಾವಿದ್ಯಾಲಯಗಳಲ್ಲಿ ವೈದ್ಯಕೀಯ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.ನೋಂದಣಿ ಬಳಿಕ 2027ರ ಆಗಸ್ಟ್ 15ರವರೆಗೆ ಮಾನ್ಯವಾಗಿರುತ್ತವೆ ಬಿಲ್ ಮೇಲೆ ಶೇ. 25ರವರೆಗೆ ರಿಯಾಯಿತಿ ಪಡೆಯಬಹುದು ಎಂದರು,ಸದಸ್ಯತ್ವದ ಬಗ್ಗೆ ಮಾಹಿತಿ ಕೆಎಂಸಿ ಅತ್ತಾವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ ಎಂ ಮಾತನಾಡುತ್ತಾ,ವೈಯಕ್ತಿಕ ಸದಸ್ಯತ್ವ ರೂ.350.00 ,ಸಂಗಾತಿ ಮತ್ತು 25ವರ್ಷ ದೊಳಗಿನ ಅವಿವಾಹಿತ ಮಕ್ಕಳ ಕೌಟುಂಬಿಕ ಸದಸ್ಯತ್ವ ಶುಲ್ಕ ರೂ700.00,ಇದಲ್ಲದೆ 25 ವರ್ಷದೊಳಗಿನ ಯಾವುದೇ ಸಂಖ್ಯೆಯ ಅವಿವಾಹಿತ ಮಕ್ಕಳು ಹಾಗೂ ಅತ್ತೆ ಮಾವಂದಿರು ಸೇರಿದಂತೆ ನಾಲ್ಕು ಪೋಷಕರನ್ನು ಒಳಗೊಂಡ ಕೌಟುಂಬಿಕ ಪ್ಲಸ್ ಸದಸ್ಯತ್ವ ರೂ.900.00ಕ್ಕೆ ಲಭ್ಯವಿದೆ ಎಂದರು‌.ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ಮಾತನಾಡುತ್ತಾ,ಕಾರ್ಡ್ ಹೊಂದಿರುವವರು ಶೇ 50 ಸಮಾಲೋಚನಾ ಶುಲ್ಕದ ಮೇಲೆ ರಿಯಾಯಿತಿ, ಲ್ಯಾಬ್ ಪರೀಕ್ಷೆ ಯಲ್ಲಿ ಶೇ.20 ರಿಯಾಯಿತಿ,ಸಿ.ಟಿ,ಎಂಆರ್ಐ,ಅಲ್ಟ್ರಾಸೌಂಡ್, ಎಕ್ಸರೇ,ರೇಡಿಯಾಲಜಿ ಪರೀಕ್ಷೆ ಮೇಲೆ ಶೇ,20 ,ಹೊರರೋಗಿ ಔಷಧಿ ಮೇಲೆ ಶೇ,10 ಮತ್ತು ವಿವಿಧ ವಾರ್ಡ್ ಗಳಲ್ಲಿ ಒಳರೋಗಿ ಬಿಲ್ ಮೇಲೆ ಶೇ.25 ರಿಯಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.ಅಪರೇಷನ್ಸ್ ವಿಭಾಗದ ಗ್ರೂಪ್ ಮ್ಯಾನೇಜರ್ ರವಿರಾಜ್ ಮಾತನಾಡಿ, 28 ವರ್ಷಗಳಿಂದ ನಾವು ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಆರೋಗ್ಯದ ನೆರವು ನೀಡಲಾಗಿದೆ ಮುಖ್ಯವಾಗಿ ಸಾರ್ವಜನಿಕರು ಕೆಎಂಸಿ ಆಸ್ಪತ್ರೆ ಅತ್ತಾವರ,ದುರ್ಗಾ ಸಂಜೀವಿನಿ ಮಣಪಾಲ ಆಸ್ಪತ್ರೆ ಕಟೀಲು ಹಾಗೂ ಪುದು ಕನ್ನಡ ಜಿಲ್ಲೆ ಮತ್ತು ಉತ್ತರ ಕೇರಳದಾದ್ಯಂತ ಅಧಿಕೃತ ಎಜೆಂಟ್‌ಗಳ ಮೂಲಕ ಸದಸ್ಯತ್ವ ಪಡೆಯಬಹುದು,ಮಾಹಿತಿಗಾಗಿ 7022078002, 0824 2285214 ಸಂಖ್ಯೆಯ ಮೂಲಕ ಕರೆಮಾಡಿ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಗಣೇಶ್ ಹೆಗ್ಡೆ, ಉಪಸ್ಥಿತರಿದ್ದರು.

Scroll to Top