ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬೆಂಗಳೂರಿನ ವಿಶಾಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯಲ್ಲಿ ಸೀನಿಯರ್ ಮೆನೇಜರ್ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಆಗಿ, ದೇಶದ ಮೂಲಸೌಕರ್ಯ ಅಭಿವೃದ್ಧಿಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಸೇವೆಗಯ್ಯುತ್ತಿರುವ ಕಾರ್ಕಳದ ಮುನಿಯಾಲಿನ ಅಪೂರ್ವ ಸಾಧಕ. ಗ್ರಾಮದ ಸಂಸ್ಕೃತಿ, ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗಜಿ. ಎಸ್. ಗಂಗಾಧರ ಆಚಾರ್ಯ ಮುನಿಯಾಲು.

ಪರಿಚಯ ಲೇಖನ :ಡಾ. ಅಶೋಕ್ ಶೆಟ್ಟಿ. ಬಿ. ಎನ್.ಬೆಂಗಳೂರು: ಕಾರ್ಕಳ ತಾಲೂಕಿನ ಮುನಿಯಾಲುವಿನ ಹೆಮ್ಮೆ ಯ ಸುಪುತ್ರ ಜಿ.ಎಸ್. ಗಂಗಾಧರ ಆಚಾರ್ಯ ಅವರು ಇಂದು ದೇಶದ ಪ್ರತಿಷ್ಠಿತ ಮೂಲಸೌಕರ್ಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಅಲಂಕರಿಸಿ ಮಾದರಿಯಾಗಿದ್ದಾರೆ.ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಶಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (VIL) ಸಂಸ್ಥೆಯಲ್ಲಿ ಸೀನಿಯರ್ ಮ್ಯಾನೇಜರ್ (ಮೆಕ್ಯಾನಿಕಲ್) – ಆಪರೇಷನ್ & ಮೆಂಟೆನೆನ್ಸ್,- ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಳ್ಳಿಯ ಸರಳ ಬದುಕಿನಿಂದ ಬಂದು, ತಮ್ಮ ಪರಿಶ್ರಮ, ತಾಂತ್ರಿಕ ಜ್ಞಾನದಿಂದ ಇಂದು ಭಾರತದಾದ್ಯಂತ ನಡೆಯುವ ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ರಾಜೆಕ್ಟ್ಗಳಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ವಾಯು ಸೇನಾ ನೆಲೆ, ಸೇನಾ ಶಸ್ತ್ರಾಗಾರ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮಿಲಿಟರಿ ಕಟ್ಟಡ ಇತ್ಯಾದಿ ಕೇಂದ್ರ ಸರಕಾರದ ಪ್ರಾಜೆಕ್ಟ್ಗಳಲ್ಲಿ ಜವಾಬ್ದಾರಿಯ ಹುದ್ದೆಯಲ್ಲಿ ಸೇವೆ ಗಯ್ಯುತ್ತಿದ್ದಾರೆ, ಕಾರ್ಕಳ ಭಾಗದ ಯುವಜನತೆಗೆ ಇವರು ಮಾದರಿ ವ್ಯಕ್ತಿ. ಗ್ರಾಮದ ಸಂಸ್ಕೃತಿ, ವಿನಯತೆಯನ್ನು ಕಾರ್ಪೊರೇಟ್ ಕ್ಷೇತ್ರದಲ್ಲೂ ಉಳಿಸಿಕೊಂಡಿರುವ ಹೆಮ್ಮೆಯ ತುಳುನಾಡ ಕನ್ನಡಿಗ. ಇವರು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೋಬೈಲ್ ಇಂಜಿನಿಯರಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಶೋಕ ನಗರದ ಬಿಸಿಯಂ ಹಾಸ್ಟೆಲ್ ನಲ್ಲಿದ್ದರು. ಇವರ ಸಾಧನೆ ಬಗ್ಗೆ Mp MLA’s News ಅಭಿನಂದನೆ ಸಲ್ಲಿಸಿದ್ದು, ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಇವರ ಕಾಲೇಜ್ ದಿನದ ಸಹಪಾಠಿಯಾಗಿದ್ದು, ಗಂಗಾಧರ್ ಅವರು ಬಾಲ್ಯದಿಂದಲೂ ನಾಯಕತ್ವದ ಗುಣ ಹೊಂದಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಟ.ಛಲ, ಧ್ಯೇಯ,ದೃಢ ಸಂಕಲ್ಪ ಉಳ್ಳವರಾಗಿದ್ದರು. ಅವರಲ್ಲಿ ನಿಸ್ವಾರ್ಥತೆ, ಅನ್ಯಾಯ ಪ್ರತಿಭಟಿಸುವ ಗುಣ, ನಿರ್ಮಲ ಮನಸ್ಸು, ನಿರ್ಧಾರದಲ್ಲಿ ಸ್ಪಷ್ಟತೆ, ಆಧ್ಯಾತ್ಮಿಕ ಜ್ಞಾನ, ಸಹನೆ, ರಾಷ್ಟ್ರೀಯತೆ, ಏಕತೆ, ಪರೋಪಕಾರಿ ಮನಸ್ಸು ಇದ್ದವು. ಅದೇ ಇವತ್ತು ಇಷ್ಟೊಂದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತ್ತೆಂದೂ ಸಂಪಾದಕರು ಗಂಗಾಧರ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ. ಅಲ್ ದಿ ಬೆಸ್ಟ್ ಗಂಗಾಧರ್ ಸರ್, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಶಕ್ತಿ ದೇವರು ನಿಮಗೆ ಅನುಗ್ರಹಿಸಲಿ ಎಂದು Mp MLA’s News ಶುಭ ಹಾರೈಸುತ್ತದೆ FROM MUNIYALU TO CORPORATE PINNACLE: THE INSPIRING JOURNEY OFG.S. GANGADHAR ACHARYAMangaluru / Bengaluru:*Mr. G.S. Gangadhar Acharya, a proud son of Muniyalu village in Karkala Taluk, has brought laurels to coastal Karnataka by securing a top leadership position in the infrastructure sector.Mr. Acharya is currently serving as Senior Manager (Mechanical) – Operation & Maintenance- Pan India Projects, at Vishal Infrastructure Limited (VIL), Basavanagudi, Bengaluru – one of nation’s leading infrastructure development companies , executing multi-crore projects like International Airports , Domestic Airports , Airforce Runways, Military Engineering Projects, DRDO Projects, Smart City Railway Stations , National Highways and Special purpose building projects across India.From a humble village background, through sheer hard work, technical expertise and dedication, he now shoulders the responsibility of managing critical operations nationwide.Mr. Acharya completed his Automobile Engineering at Karnataka Polytechnic, Mangaluru (KPT)* and stayed at BCM govt. Hostel, Ashok Nagar, during his college days.Later on in his professional life he studied MBA in Human Resources, in Sikkim Manipal University at Wisdom Institute, Dubai UAE. He is a true Role Model for the youth of Muniyalu and Karkala, who has retained the culture and humility of his village even in the corporate world. Dr. Ashok Shetty B.N., Editor of MP MLA’s News and his former classmate, lauded his achievement and said, “Gangadhar had leadership qualities since childhood to college days. He had the strong determination and ambition in life. His spiritual knowledge, selflessness, dedication, helping nature, nature of tolerance, patriotism, integrity helped him to achieve something in life. His fight against injustice, philanthropic mindset and hard work have taken him to this top position today.” MP MLA’s News congratulates Mr. Acharya and wishes him more success in the future.

ಪ್ರಾದೇಶಿಕ ವಾರ್ತೆಗಳು

ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರಿಗೆ IVRI ನ ಪ್ರತಿಷ್ಠಿತ ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಗೌರವ

ಮಂಗಳೂರು, ಸೆ. 6. ಮಂಗಳೂರಿನ ಖ್ಯಾತ ಪಶುವೈದ್ಯಕೀಯ ತಜ್ಞ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರಿಗೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ಯಿಂದ ಪ್ರತಿಷ್ಠಿತ ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಗೌರವ ನೀಡಿ ಸನ್ಮಾನಿಸಲಾಗಿದೆ.ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಡಿಯಲ್ಲಿ ಬರುವ ದೇಶದ ಅತ್ಯುನ್ನತ ಪಶುವೈದ್ಯಕೀಯ ಸಂಸ್ಥೆಯಾದ IVRI, ಡಾ. ಬೆಳ್ಳಿಪ್ಪಾಡಿ ಅವರ ಡೈರಿ ಮತ್ತು ಕೋಳಿ ಸಾಕಣೆ ಕ್ಷೇತ್ರದಲ್ಲಿನ ದೀರ್ಘಕಾಲದ ಸೇವೆ, ಆಧುನಿಕ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮ ಅಭಿವೃದ್ಧಿಯಲ್ಲಿನ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಿದೆ.ಉತ್ತರ ಪ್ರದೇಶದ ಬರೇಲಿಯ ಇಝತ್‌ನಗರದಲ್ಲಿರುವ ICAR-IVRI ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ICAR ನ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್, IVRI ನಿರ್ದೇಶಕ ಡಾ. ಎಸ್.ಕೆ. ಮೆಂದಿರ ಟ್ಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಡಾ. ಬೆಳ್ಳಿಪ್ಪಾಡಿ ಅವರು ಮಂಗಳೂರಿನ ರೈಸನ್ಸ್ ನ್ಯೂಟ್ರಿಷನ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್‌ನರ್ ಆಗಿದ್ದು, ಕರ್ನಾಟಕ ಕೋಳಿ ರೈತರು ಮತ್ತು ತಳಿಗಾರರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಅವರು ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯರಾಗಿ ಮತ್ತು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFSU) ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗೌರವವು ಅವರ ವೃತ್ತಿಪರ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ಶೈಕ್ಷಣಿಕ ಕ್ಷೇತ್ರಕ್ಕೆ ತರುವ ಮಹತ್ವದ ಹೆಜ್ಜೆಯಾಗಿದೆ

ಪ್ರಾದೇಶಿಕ ವಾರ್ತೆಗಳು

FROM MUNIYALU TO CORPORATE PINNACLE: THE INSPIRING JOURNEY OF GREAT ACHIEVER G.S. GANGADHARA ACHARYA 

Special Article by-DR ASHOK SHETTY BNMangaluru/Bengaluru: Mr. G.S. Gangadhar Acharya, a proud son of Muniyalu village in Karkala Taluk, Udupi District, has brought laurels to coastal Karnataka by securing a top leadership position in the national infrastructure sector.Mr. Acharya is currently serving as Senior Manager (Mechanical) – Operation & Maintenance – PAN India Projects* at *Vishal Infrastructure Limited (VIL), Basavanagudi, Bengaluru – one of India’s leading infrastructure development companies.From a humble village background,through sheer hard work, technical expertise and dedication, he now shoulders the responsibility of managing critical mechanical operations for multi-crore projects across India.KEY PROJECTS HANDLED:* – International Airports & Domestic Airports – Airforce Runways & Airforce Infrastructure – Military Engineering Projects & Military Arsenal Buildings – DRDO & Defence Technology Projects – Smart City Railway Stations – National Highways Development – Special Purpose Building Projects *EDUCATION:* – Diploma in Automobile Engineering – Karnataka Polytechnic, Mangaluru (KPT) – MBA in Human Resources – Sikkim Manipal University, Wisdom Institute, Dubai, UAE – Former resident of BCM Govt. Hostel, Ashok Nagar, Mangaluru *ROOTS & VALUES:*Born and raised in Muniyalu, Karkala, he was brought up with strong values of hard work, humility and community service. Despite reaching the corporate pinnacle, he has retained the culture and simplicity of his village. He is a true *Role Model for the youth of Muniyalu and Karkala.* *WHAT EDITOR SAYS:*Dr. Ashok Shetty B.N., Editor of MP MLA’s News and his former classmate, said, “Gangadhar had leadership qualities since childhood. He had strong determination, selflessness, dedication, spiritual knowledge, tolerance, patriotism and a philanthropic mindset. His fight against injustice and hard work have taken him to this top position.” MP MLA’s News congratulates Mr. Acharya and wishes him more success.For further more details please Contact:*Vishal Infrastructure Limited.Corporate office:#52, R V Road, Bengaluru – 560004Ph: 080-26254000Cell: 7795668102 (Co)         8971665047 (P)

ಪ್ರಾದೇಶಿಕ ವಾರ್ತೆಗಳು

BREAKING NEWS LATEST. ಸ್ಮಾರ್ಟ್ ಸಿಟಿ ಹೇಗಿದೆ ಎಂದು ನೋಡಲು ಮಂಗಳೂರಿನ ಜೆಪ್ಪು ಕುಡಪಾಡಿಗೆ ಬನ್ನಿ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲಿದೆ ಜೀವಂತ ಸಾಕ್ಷಿ. mpmlasnewstv 24×7 news portal Exclusive SPOT REPORT by DR ASHOK SHETTY BN. ಇದು ರಿಯಾಲಿಟಿ ಚೆಕ್

ಮಂಗಳೂರು :ಜೆಪ್ಪು ಕುಡಪಾಡಿ ರಸ್ತೆ ನಾ ದುರಸ್ತಿ ಸ್ಥಿತಿಯಲ್ಲಿದೆ. ಇದು ಭೂಲೋಕದಲ್ಲಿ ನರಕಲೋಕದ ಅನುಭವ. ಈ ಬಗ್ಗೆ ಹಲವು ಬಾರಿ ವರದಿ ಮಾಡಿದ್ದೇವೆ.ವರ್ಷ ಹದಿನೈದು ಕಳೆದರೂ ಯಾವುದೇ ಪ್ರಯೋಜನ ಇಲ್ಲ. ಇದರ ಬಗ್ಗೆ ಕಾಳಜಿ ವಹಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಕಾರ್ಪೊರೇಟರ್ ಭರತ್ ಮತ್ತು ಶೈಲೇಶ್ ಶೆಟ್ಟಿ ಅವರು ಏನು ಮಾಡುತ್ತಿದ್ದೀರಾ.ಈಗ ಅಧಿಕಾರವಿಲ್ಲ ನಿಜ. ಅಧಿಕಾರ ಇದ್ದಾಗ ಈ ರಸ್ತೆ ಯಾಕೆ ಸರಿ ಪಡಿಸಲಿಲ್ಲ.ಇವರಿಗೆ ಓಟು ಬೇಕು. ಇಲ್ಲಿನ ಜನರ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ. ಎಂಎಲ್ಎ ವೇದವ್ಯಾಸ ಕಾಮತ್ ರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ರಸ್ತೆ ಬರುತ್ತದೆ. ಆದರೆ,ಅವರು ಫಂಡ್ ಕಾಂಗ್ರೆಸ್ ನವರು ಕುಡ್ಸೆ oಪ್ ನವರಿಗೆ ಟ್ರಾನ್ಸ್ಫರ್ ಮಾಡಿದ್ದಾರೆ ಎಂದು ಹೇಳಿ ಒಂದು ವರ್ಷ ಆಯಿತು. ಯಾಕೆ ಕುಡುಪಾಡಿ ಎಂದರೆ ಇವರಿಗೆಲ್ಲಾ ಅಲರ್ಜಿ.ಇಲ್ಲಿನ ಜನರ ಓಟು ಇವರಿಗೆ ಬೇಡವೇ. ಈ ಬಗ್ಗೆ ತಕ್ಷಣ ಸ್ಪಂದಿಸದಿದ್ದರೆ Mp MLA’s News ಪಿಎಂ, ಸಿಎಂ ಅವರಿಗೂ ಪತ್ರ ಬರೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಸೆ. 6 ರಂದು ಸುರತ್ಕಲ್ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣೆ

ಸುರತ್ಕಲ್ : ಶ್ರೀ ಜಾರಂದಾಯ ದೈವಸ್ಥಾನ ಅಗರಮೇಲು ಸುರತ್ಕಲ್ ಶ್ರೀ ಕ್ಷೇತದ್ರಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತಂಭ (ಕೊಡಿಮರ) ಕ್ಕೆ ಎಳ್ಳೆಣ್ಣೆ ಸಮರ್ಪಣಾ ಸೇವೆ ಸೆಪ್ಟಂಬರ್ 6 ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ದೈವಸ್ಥಾನದ ಸಮಗ್ರ ಜೀರ್ಣೋದ್ದಾರ ಸಲುವಾಗಿ ಊರ ಹತ್ತು ಸಮಸ್ತರು ಸೇರಿ ಮುಷ್ಟಿ ಕಾಣಿಕೆ ಸಮರ್ಪಣೆ ಮತ್ತು ಗಂಟೆ 11.30ಕ್ಕೆ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ಸಮಾಲೋಚನ ಸಭೆ ನಡೆಯಲಿದೆ.ದೀಪ ಪ್ರಜ್ವಲನೆಯನ್ನು ವೇದಮೂರ್ತಿ ಕೆ. ಶ್ರೀ ಲಕ್ಷ್ಮಿನಾರಾಯಣ ಆಸ್ರಣ್ಣ, ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಟೀಲು ನೆರವೇರಿಸಲಿದ್ದಾರೆ.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ ವೈ ಭರತ್ ಶೆಟ್ಟಿ, ಕೊಡಿಪಾಡಿ ಬಾಳಿಕೆ ಜಗನ್ನಾಥ ಅತ್ತಾರ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ಕಾರ್ಯಧ್ಯಕ್ಷ ಡಾ.ಕೆ.ಪಿ.ಕೆ ಹೆಗ್ಡೆ ಭಾಗವಹಿಸಲಿದ್ದಾರೆ. ದೈವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಡಾ. ಟಿ.ರಮಾನಾಥ ಶೆಟ್ಟಿ, ಕಾರ್ಯದರ್ಶಿ ಐ. ಜಯ ಅಮೀನ್, ಕೋಶಾಧಿಕಾರಿ ಭೋಜ ದೇವಾಡಿಗ ಉಪಸ್ಥಿತರಿರುವರು.ಕೊಡಿಮರಕ್ಕೆ ಸಮರ್ಪಣೆಗೆ ಬೇಕಾಗುವ ಶುದ್ಧ ಎಳ್ಳೆಣ್ಣೆಯನ್ನು ಶ್ರೀ ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ವಿನಂತಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸೆ.6;ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ರಾಗ ಸುಧಾ’

ಮಂಗಳೂರು,ಸೆ.2;ಮಂಗಳೂರಿನ ಕಲಾಸಾಧನ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸೆ.6 ರಂದು ಸಂಜೆ 5ಗಂಟೆಗೆ ನಗರದ ಶ್ರೀರಾಮಕೃಷ್ಣ ಮಠದಲ್ಲಿ (ಮಂಗಳಾ ದೇವಿ ಬಳಿ )ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’ ಹಮ್ಮಿಕೊ ಳ್ಳಲಾಗಿದೆ.ಈ ಸಂಗೀತ ಸಂಭ್ರಮದಲ್ಲಿ ಗ್ವಾಲಿಯರ್ ಘರಾನಾ ಕಲಾಕಾರ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯಖ್ಯಾತ ಹಿಂದೂಸ್ತಾನಿ ಗಾಯಕರಾದ ಆದಿತ್ಯ ಮೋದಕ್ ,ಗ್ವಾಲಿಯರ್ ಕಿರಾಣಾ ಪದ್ಧತಿಯ ಗಾಯಕ ಮತ್ತು ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್,ಪಂಡಿತ್ ಮಾಣಿಕ್ ರಾವ್ ಅವರ ಶಿಷ್ಯ,ತಬಲಾ ವಾದಕ ಮತ್ತು ಗಾಯಕ ಅಕ್ಷಯ ಜೋಶಿ ಭಾಗವಹಿಸ ಲಿದ್ದಾರೆ.ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬಳಿಕ ಗಣ್ಯರು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಭಾಗವಹಿಸಲು ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.ಕಲಾ ಸಾಧನ ಸಂಸ್ಥೆ ಕಳೆದ 10 ವರ್ಷ ಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಚುರಪಡಿಸಲು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತ ಬಂದಿದೆ. ಅಲ್ಲದೆ,ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿದೆ. ತಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.ಕಲಾವಿದರ ಪರಿಚಯ:-*ಆದಿತ್ಯ ಮೋದಕ್: -ಎಳೆಯ ವಯಸ್ಸಿನಲ್ಲೇ ಚಂದ್ರಕಾಂತ್ ಪಾರ್ಕರ್ ಅವರಿಂದ ಐದು ವರ್ಷಗಳ ಕಾಲ ಸಂಗೀತ ಅಭ್ಯಾಸ ನಡೆಸಿ, ನಂತರ ಶ್ರೀ ಪ್ರದೀಪ್ ಧೋಂಡ್ ಅವರಿಂದ ನಾಲ್ಕು ವರ್ಷಗಳ ಕಾಲ ತರಬೇತಿ ಪಡೆದ ಅವರು ಗ್ವಾಲಿಯರ್ ಘರಾನಾ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯರಲ್ಲಿ ಒಬ್ಬರು,ಅವರು ಪಂ. ರಾಮ ಮರಾಠೆ ಪುರಸ್ಕಾರ, ಪುಣೆ, 2025,ಗಾನ್ ಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪುರಸ್ಕಾರ, ಧಾರವಾಡ,2025,ಕೇಂದ್ರ ಸರ್ಕಾರದಿಂದ ಪಂಡಿತ್ ವಸಂತರಾವ್ ದೇಶಪಾಂಡೆ ಪುರಸ್ಕಾರ, 2016,ವೇದಿಕ್ ಹೆರಿಟೇಜ್ ಇಂಕ್, (ಹೆಂಪ್‌ಸ್ಟೆಡ್, ಯು.ಎಸ್.ಎ.), 2008 ರಿಂದ ಅಂತರರಾಷ್ಟ್ರೀಯ ಸಂಗೀತ ಉತ್ಸವ ಗೌರವ,ಪಂ. ಸವಾಯಿ ಗಂಧರ್ವ ವಿದ್ಯಾರ್ಥಿವೇತನಪಂ. ಭೀಮಸೇನ ಜೋಶಿ ವಿದ್ಯಾರ್ಥಿವೇತನಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರೀಯ ವಿದ್ಯಾರ್ಥಿವೇತನರಂಗಸ್ವರ್ (ಮುಂಬೈ) ಆಯೋಜಿಸಿದ ವೈ.ಬಿ. ಚವಾಣ್ ಕೇಂದ್ರ ಕಾರ್ಯಕ್ರಮ, 2010 ಭಾಗವಹಸಿದ ಮೇರು ಕಲಾವಿದರಾಗಿದ್ದಾರೆ.*ಸತೀಶ್ ಭಟ್, ಹೆಗ್ಗಾರ್:-ಸೂರ್ಯಕಲಾ ಭಟ್ ಹಾಗೂ ಶ್ರೀಧರ್ ಭಟ್ ಸಪುತ್ರರಾಗಿರುವ ಇವರು ಪ್ರಾಥಮಿಕ ಅಭ್ಯಾಸ ಶ್ರೀಮತಿ ಜಾನಕಿ ಭಟ್ ಇವರಲ್ಲಿ ಪ್ರಾರಂಭಿಸಿ, ನಂತರ ಶ್ರೀ ವಿದ್ವಾನ್ ಗಣಪತಿ ಹೆಗಡೆ, ಯಲ್ಲಾಪುರ. ಇವರಲ್ಲಿ ಕಳೆದ 18 ವರ್ಷಗಳಿಂದ ಗ್ವಾಲಿಯರ್ ಕಿರಾಣಾ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮುಂದುವರಿಸುತ್ತಿದ್ದಾರೆ. ಕರ್ನಾಟಕ ಕಾಲೇಜ್, ಧಾರವಾಡದಲ್ಲಿ ಬಿ, ಮ್ಯೂಸಿಕ್ ಪದವಿಯನ್ನು ಮುಗಿಸಿದ್ದಾರೆ. ಅದೇ ರೀತಿ.ಹಾರ್ಮೋನಿಯಂ ಸ್ವತಂತ್ರ ವಾದನ ಕಾರ್ಯಕ್ರಮನ್ನೂ ಸಹ ನೀಡುತ್ತಿದ್ದು,CCRT ದೆಹಲಿ, ಇವರ ನ್ಯಾಷನಲ್ ಸ್ಕಾಲರ್ಷಿಪ್ ಪಡೆದಿದ್ದಾರೆ.. ಪುಣೆ, ಮುಂಬೈ, ದೆಹಲಿ, ಪಂಜಾಬ್, ಅಯೋಧ್ಯಾ, ಒರಿಸ್ಸಾ, ಹೈದ್ರಾಬಾದ್, ಚೆನ್ನೈ, ಕೇರಳ, ಗೋವಾ, ನಾಗಪುರ್ ಇನ್ನೂ ದೇಶದ ಹಲವಾರು ಕಡೆ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ.ಗಾನ ಯೋಗಿ ಚಲನ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.*ಅಕ್ಷಯ ಜೋಶಿ: -ಇವರು ಪಂಡಿತ್ ಮಾಣಿಕ್ ರಾವ್ ಗೋನ್ವಾರ್ ಅವರ ಶಿಷ್ಯ ರಾಗಿ ಪ್ರಸ್ತುತ ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಹಾಗೂ ಪಂಡಿತ್ ರಘುನಾಥ್ ನಕೋಡ್ ಅವರಿಂದ ಸಂಗೀತವನ್ನು ಕಲಿಯುತ್ತಿದ್ದಾರೆ. ಇವರು ತಬಲಾ ಸೋಲೋ (ಏಕವ್ಯಾಖ್ಯಾನ) ಪ್ರದರ್ಶನದ ಜೊತೆಗೆ ಗಾಯನ, ವಾದ್ಯ ಸಂಗೀತ, ಜುಗಲ್‌ಬಂದಿ ಮತ್ತು ಫ್ಯೂಷನ್ ಕಾರ್ಯಕ್ರಮಗಳಿಗೆ ಪಕ್ಕವಾದ್ಯವನ್ನೂ ನುಡಿಸುತ್ತಾರೆ.ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.ಬಿವಿವಿಎಸ್ (BVVS) ಬಾಗಲಕೋಟೆಯಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.ಪಂಡಿತ್ ಜಯತೀರ್ಥ ಮೇವುಂಡಿ ಅವರು ಆಯೋಜಿಸಿದ್ದ ಹುಬ್ಬಳ್ಳಿ, ಇಲಕಲ್ ಮತ್ತು ಧಾರವಾಡದ ‘ಸ್ವರತೀರ್ಥ’ ಉತ್ಸವದಲ್ಲಿ ಪ್ರದರ್ಶನ.ಕೇರಳದ ಪಯ್ಯನೂರಿನಲ್ಲಿ ನಡೆದ ‘ತುರಿಯಮ್’ ಉತ್ಸವದಲ್ಲಿ ಪ್ರದರ್ಶನ.ಅಮೆರಿಕದ ಕಲಾವಿದರ ಯೋಜನೆಯಾದ ‘ಲೀಪ್ ಇಯರ್ ಆಫ್ ಫೆಯಿತ್ ‘ (Leap Year of Faith) ಆಲ್ಬಮ್‌ಗಾಗಿ ತಬಲಾ ವಾದನ.ಮೈಸೂರು ದಸರಾ 2023ರ ಸಂದರ್ಭದಲ್ಲಿ ತಬಲಾ ಸೋಲೋ ಪ್ರದರ್ಶನ ನೀಡಿರುವ ಕಲಾವಿದರಾಗಿದ್ದಾರೆ.ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವ ಈ ಸಂಗೀತ ಸಂಭ್ರಮ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೆ.4; ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ; ಕೃಷ್ಣ ವೇಷ ಸ್ಪರ್ಧೆ

ಮಂಗಳೂರು,ಆ.28; ಸೆ.4ರಂದು ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ ;ಕೃಷ್ಣ ವೇಷ ಸ್ಪರ್ಧೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದುಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.ಈ ಬಾರಿ ಒಟ್ಟು 44 ವಿಭಾಗದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ,ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ನಡೆಯಲಿದೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (44ವರ್ಷ) ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ-“ಶ್ರೀ ಕೃಷ್ಣ ವೇಷ ಸ್ಪರ್ಧೆ”ಯ ನ್ನು ಕದ್ರಿ ಶ್ರೀ ಮಂಜುನಾಥ ದೇವ ಸ್ಥಾನದ ಪ್ರಾಂಗಣದಲ್ಲಿ ಈ ಬಾರಿಯೂ ಏರ್ಪಡಿಸ ಲಾಗಿದೆ. ಸಪ್ಟೆಂಬರ್ 4, ಶುಕ್ರವಾರ ಕೃಷ್ಣಾಷ್ಟಮಿ ಯಂದು ಬೆಳಗ್ಗೆ 9.00ರಿಂದ ಶ್ರೀ ಕೃಷ್ಣ ವರ್ಣ ವೈಭವ, ಬೆಳಿಗ್ಗೆ 10.30ಕ್ಕೆ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರು (ಮಜ್ಜಿಗೆ) ಕಡೆದು ಬೆಣ್ಣೆ ತೆಗೆಯುವುದು. ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಒಂದು ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿ ಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನ. ಮಹಿಳೆಯರು ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು. ಅವರ ಮನೆಮಂದಿ ಬಂಧುಬಳಗ ಇಷ್ಟ ಮಿತ್ರರೊಂದಿಗೆ, ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.ರಾತ್ರಿ 12.00ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 44 ವಿಭಾಗಗಳಲ್ಲಿ, 12 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸ ಲಾಗಿದೆ. ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ,ಸ್ಥಳದಲ್ಲಿ ಹೆಸರು ನೊಂದಾಯಿಸಲು ಅವಕಾಶವಿದೆಹೆಚ್ಚಿನ ವಿವರಗಳಿಗೆ ಕಲ್ಕೂರ ಪ್ರತಿಷ್ಠಾನದ ಕಚೇರಿ 0824-2492239, 9448125949, 9845083736 ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.ಸಂಘಟಕರಾದ ಕದ್ರಿ ನವನೀತ ಶೆಟ್ಟಿ, ಡಾ.ಪ್ರಭಾಕರ ಜೋಶಿ,ಸುಧಾಕರ ರಾವ್ ಪೇಜಾವರ,ದಯಾನಂದ ಕಟೀಲು, ವಿಜಯ ಲಕ್ಷ್ಮೀ ಶೆಟ್ಟಿ, ಮಂಜುಳಾ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ ಹಿನ್ನೆಲೆಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮಹತ್ವದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸುಮಾರು15 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಾಂತ್ರಿಕ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಸೋಸಿಯೇಟ್ ಪ್ರೊಫೆಸರ್ ವಿನೋದ್ ಟಿ. ಡಿಸೋಜ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ದೀಕ್ಷಾ ಆನಂದ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಯೋಜನೆಯ ತಾಂತ್ರಿಕ ಮಾರ್ಗದರ್ಶನ ನೀಡುತ್ತಿರುವ ಇಂಜಿನಿಯರ್ ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ದ್ವಾರವನ್ನು ಸ್ಥಳಾಂತರಿಸುವ ಅಗತ್ಯತೆ, ಅದರ ಐತಿಹಾಸಿಕ ಹಾಗೂ ತಾಂತ್ರಿಕ ಮಹತ್ವ ಮತ್ತು ಕಾಮಗಾರಿಯಲ್ಲಿ ಅನುಸರಿಸಲಾಗುತ್ತಿರುವ ವಿವಿಧ ಹಂತಗಳ ಕುರಿತು ವಿವರಿಸಿದರು.ದ್ವಾರವನ್ನು ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ಅದರ ರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಂಡು ಸ್ಥಳಾಂತರಿಸುವುದು ಈ ಯೋಜನೆಯ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೈಚಾಲಿತ ಜ್ಯಾಕ್‌ಗಳ ಸಹಾಯದಿಂದ ಹಂತ ಹಂತವಾಗಿ ಹಾಗೂ ನಿಯಂತ್ರಿತ ರೀತಿಯಲ್ಲಿ ದ್ವಾರವನ್ನು ಎತ್ತುವ ಪ್ರಕ್ರಿಯೆ, ಪ್ರತಿ ಹಂತದ ನಂತರ ನೀಡಲಾಗುವ ತಾತ್ಕಾಲಿಕ ಮತ್ತು ಪಾರ್ಶ್ವದ ಕಲ್ಲಿನ ಬೆಂಬಲ, ರಚನೆಯ ಸ್ಥಿರತೆ ಹಾಗೂ ಸುರಕ್ಷತೆಯ ಮೇಲ್ವಿಚಾರಣೆ ಸೇರಿದಂತೆ ವಿವಿಧ ತಾಂತ್ರಿಕ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ವಿವರಿಸಲಾಯಿತು.ಈಗಾಗಲೇ ದ್ವಾರವನ್ನು ಒಟ್ಟು 36 ಇಂಚು ಅಂದರೆ 3 ಅಡಿ ಎತ್ತರಕ್ಕೆ ಯಶಸ್ವಿಯಾಗಿ ಎತ್ತಲಾಗಿದ್ದು, ಕಾಮಗಾರಿಯ ಪ್ರಮುಖ ಹಂತವೊಂದು ಪೂರ್ಣಗೊಂಡಿದೆ.ಮುಂದಿನ ಹಂತದಲ್ಲಿ ದ್ವಾರವನ್ನು ಹೊಸ ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಚಲನಾ ಮಾರ್ಗ (Movement Track) ನಿರ್ಮಾಣ ಹಾಗೂ ಇತರ ತಾಂತ್ರಿಕ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯವಿರುವ ವಿದ್ಯುತ್ ತಂತಿಗಳ ಸ್ಥಳಾಂತರ ಮತ್ತು ಸುರಕ್ಷತಾ ಕ್ರಮಗಳಿಗಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯವೂ ನಡೆಯುತ್ತಿದೆ.ತಾಂತ್ರಿಕ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಚಾಲಿತ ಜ್ಯಾಕ್ ವ್ಯವಸ್ಥೆ, ಅಡಿಭಾಗದ ಬೆಂಬಲ ವ್ಯವಸ್ಥೆ, ದ್ವಾರವನ್ನು ಹಂತ ಹಂತವಾಗಿ ಎತ್ತುವ ವಿಧಾನ ಹಾಗೂ ಮುಂದಿನ ಸ್ಥಳಾಂತರ ಪ್ರಕ್ರಿಯೆಗಳನ್ನು ನೇರವಾಗಿ ವೀಕ್ಷಿಸಿದರು. ವಿದ್ಯಾರ್ಥಿಗಳು ಯೋಜನೆಯ ಕುರಿತು ಹಲವು ತಾಂತ್ರಿಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.ತರಗತಿಯಲ್ಲಿ ಕಲಿಯುವ ಸಿವಿಲ್ ಇಂಜಿನಿಯರಿಂಗ್ ತತ್ವಗಳನ್ನು ನೈಜ ಕಾಮಗಾರಿ ಸ್ಥಳದಲ್ಲಿ ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಇಂತಹ ತಾಂತ್ರಿಕ ಭೇಟಿಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ವಿಶೇಷವಾಗಿ ಅಸ್ತಿತ್ವದಲ್ಲಿರುವ ಹಾಗೂ ಐತಿಹಾಸಿಕ ರಚನೆಗಳನ್ನು ಸುರಕ್ಷಿತವಾಗಿ ಎತ್ತುವುದು, ಬಲಪಡಿಸುವುದು ಮತ್ತು ಸ್ಥಳಾಂತರಿಸುವಂತಹ ವಿಶೇಷ ಇಂಜಿನಿಯರಿಂಗ್ ಕಾರ್ಯಗಳ ಬಗ್ಗೆ ನೇರ ಅನುಭವ ಪಡೆಯಲು ಈ ಭೇಟಿ ಉತ್ತಮ ಅವಕಾಶವಾಯಿತು.ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಈ ವಿಶಿಷ್ಟ ಇಂಜಿನಿಯರಿಂಗ್ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ಥಳದಲ್ಲಿಯೇ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.“ತರಗತಿಯ ಜ್ಞಾನವು ನೈಜ ಕಾಮಗಾರಿಯ ಸವಾಲುಗಳೊಂದಿಗೆ ಬೆರೆತಾಗಲೇ ಇಂಜಿನಿಯರಿಂಗ್ ಶಿಕ್ಷಣ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.”

ಪ್ರಾದೇಶಿಕ ವಾರ್ತೆಗಳು

ಮೊಂತಿ ಫೆಸ್ತ್ ಗೆ ಸಿದ್ಧತೆ: ಪಾಲ್ದನೆ ಚರ್ಚ್ ನಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆ ಆರಂಭ

ಮಂಗಳೂರು: ಕರಾವಳಿಯ ಕ್ಯಾಥೊಲಿಕ್ ಕ್ರೈಸ್ತರು ಸಪ್ಟೆಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನದ ಪ್ರಯುಕ್ತ ಮೊಂತಿ ಫೆಸ್ತ್ ಆಚರಿಸುತ್ತಿದ್ದು, ಅದರ ಅಂಗವಾಗಿ 9 ದಿನಗಳ ನೋವೇನಾ ಪ್ರಾರ್ಥನೆ ಆಗಸ್ಟ್ 30 ರಂದು ರವಿವಾರ ಆರಂಭವಾಗಿದೆ.ನೋವೇನಾ ಸಂದರ್ಭ ಮೊದಲಿಗೆ ಬಲಿ ಪೂಜೆ ಹಾಗೂ ಬಳಿಕ ಮಕ್ಕಳು ವಿವಿಧೆಡೆಗಳಿಂದ ಸಂಗ್ರಹಿಸಿ ತಂದ ಹೂವುಗಳನ್ನು ಮೇರಿ ಮಾತೆಗೆ ಗಾಯನದೊಂದಿಗೆ ಭಕ್ತಿ ಪೂರ್ವಕವಾಗಿ ಅರ್ಪಿಸಲಾಗುತ್ತದೆ.ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಮೊದಲ ದಿನದ ನೋವೇನಾವನ್ನು ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ನಡೆಸಿ ಕೊಟ್ಟರು.ಸಕ್ಕಡ್ ಸಾಂಗಾತಾ ಮೇಳ್ಯಾಂ, ಸಕ್ಕಡ್ ಲಾಗಿಂ ಸರ್ಯಾಂ, ಆಮ್ಚೆ ತಾಳೆ ಏಕ್ ಕರ್ಯಾಂ, ಮರಿಯೆಕ್ ಹೊಗೊಳ್ಸಿಯಾಂ ಎಂಬ ಜನಪ್ರಿಯ ಕೊಂಕಣಿ ಭಕ್ತಿ ಗೀತೆಯೊಂದಿಗೆ ನೋವೇನಾ ಆರಂಭವಾಯಿತು. ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕ ಆಸ್ಟಿನ್ ಮೊಂತೇರೊ ಮುಂತಾದವರು ಉಪಸ್ಥಿತರಿದ್ದರು. ನೋವೇನಾ ಪ್ರಾರ್ಥನೆಯ ಬಳಿಕ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.

ಪ್ರಾದೇಶಿಕ ವಾರ್ತೆಗಳು

ನೇಪಾಳದ ಪ್ರವಾಹ ಪೀಡಿತ ಜನರೊಂದಿಗೆ ಮಂಗಳೂರು ಧರ್ಮಕ್ಷೇತ್ರದ ಆಳವಾದ ಸಂತಾಪ, ಸಹಾನುಭೂತಿ ಮತ್ತು ಐಕ್ಯತೆ

ಮಂಗಳೂರು, ಆಗಸ್ಟ್ 29, 2026: ನೇಪಾಳದ ಹಲವು ಪ್ರದೇಶಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾಗಿರುವ ಅಪಾರ ಜೀವಹಾನಿ, ವಿನಾಶ ಹಾಗೂ ಮಾನವೀಯ ಸಂಕಷ್ಟದ ಘಟನೆ ಮಂಗಳೂರು ಧರ್ಮಕ್ಷೇತ್ರವನ್ನು ತೀವ್ರವಾಗಿ ದುಃಖಿತಗೊಳಿಸಿದೆ. ಈ ಮಹಾದುರಂತದಿಂದ ಬಾಧಿತರಾಗಿರುವ ನೇಪಾಳದ ಜನರೊಂದಿಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ತಮ್ಮ ಆಳವಾದ ಸಂತಾಪ, ಸಹಾನುಭೂತಿ ಮತ್ತು ಪ್ರಾರ್ಥನಾಪೂರ್ವಕ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಗುರು. ಫಾ. ರೂಪೇಶ್ ಅಶೋಕ್ ಮಾಡ್ತಾ ಮತ್ತು ಶ್ರೀ ರಾಯ್ ಕ್ಯಾಸ್ಟಲಿನೊ ಅವರು ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ, ಈ ಭೀಕರ ಪ್ರಕೃತಿ ವಿಕೋಪದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಲಾಗಿದೆ. ಮನೆ-ಮಠ, ಜೀವನೋಪಾಯ ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಎಲ್ಲರ ನೋವಿನಲ್ಲೂ ಧರ್ಮಕ್ಷೇತ್ರವು ಪಾಲುದಾರವಾಗಿದೆ.“ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಉಂಟಾಗಿರುವ ಅಪಾರ ಜೀವಹಾನಿ, ವ್ಯಾಪಕ ಸ್ಥಳಾಂತರ ಮತ್ತು ಮೂಲಸೌಕರ್ಯಗಳ ವಿನಾಶದ ದುಃಖದ ಸುದ್ದಿಯನ್ನು ಕೇಳಿ ನಮ್ಮ ಹೃದಯಗಳು ಭಾರವಾಗಿವೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ನಾವು ಹಂಚಿಕೊಳ್ಳುತ್ತೇವೆ. ಇನ್ನೂ ನಾಪತ್ತೆಯಾಗಿರುವವರಿಗಾಗಿ ನಾವು ವಿಶೇಷವಾಗಿ ಪ್ರಾರ್ಥಿಸುತ್ತೇವೆ ಮತ್ತು ಅವರನ್ನು ಕಾತರದಿಂದ ನಿರೀಕ್ಷಿಸುತ್ತಿರುವ ಕುಟುಂಬಗಳೊಂದಿಗೆ ನಮ್ಮ ಹೃದಯಗಳು ಒಂದಾಗಿವೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.“ಪ್ರಕೃತಿ ವಿಕೋಪಗಳು ಧರ್ಮ, ಜಾತಿ, ಭಾಷೆ, ರಾಷ್ಟ್ರೀಯತೆ ಅಥವಾ ಸಾಮಾಜಿಕ ಹಿನ್ನೆಲೆಯ ಭೇದವನ್ನು ಗುರುತಿಸುವುದಿಲ್ಲ. ಆದ್ದರಿಂದ ನಮ್ಮ ಮಾನವೀಯ ಕರುಣೆ ಮತ್ತು ಐಕ್ಯತೆಯೂ ಯಾವುದೇ ಭೇದವನ್ನು ಹೊಂದಿರಬಾರದು. ನೇಪಾಳದ ಎಲ್ಲಾ ಧರ್ಮಗಳು, ಸಮುದಾಯಗಳು ಮತ್ತು ಹಿನ್ನೆಲೆಗಳಿಗೆ ಸೇರಿದ ನಮ್ಮ ಸಹೋದರ-ಸಹೋದರಿಯರೊಂದಿಗೆ ಈ ದುಃಖದ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯವು ದೃಢವಾಗಿ ನಿಂತಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ದುರಂತದ ನಡುವೆ ಜೀವಗಳನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ಸಿಬ್ಬಂದಿ, ಪೊಲೀಸ್ ಮತ್ತು ಭದ್ರತಾ ಪಡೆಗಳು, ವೈದ್ಯಕೀಯ ಸಿಬ್ಬಂದಿ, ಸ್ವಯಂಸೇವಕರು, ಸ್ಥಳೀಯ ಸಮುದಾಯಗಳು ಹಾಗೂ ವಿವಿಧ ಮಾನವೀಯ ನೆರವು ಸಂಸ್ಥೆಗಳ ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಧರ್ಮಕ್ಷೇತ್ರವು ಹೃತ್ಪೂರ್ವಕವಾಗಿ ಶ್ಲಾಘಿಸಿದೆ. ದುರ್ಗಮ ಪ್ರದೇಶಗಳು, ಹಾನಿಗೊಳಗಾದ ರಸ್ತೆಗಳು ಮತ್ತು ನಿರಂತರ ಅಪಾಯಗಳ ನಡುವೆಯೂ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮಾನವೀಯ ಸಹಾನುಭೂತಿಯ ಶ್ರೇಷ್ಠ ಉದಾಹರಣೆಯಾಗಿವೆ.ಮಂಗಳೂರು ಧರ್ಮಪ್ರಾಂತ್ಯವು ವಿಶ್ವಾಸಿಗಳು ಹಾಗೂ ಎಲ್ಲಾ ಜನಹಿತೈಷಿಗಳಿಗೆ ನೇಪಾಳದ ಪ್ರವಾಹ ಪೀಡಿತರಿಗಾಗಿ ವಿಶೇಷವಾಗಿ ಪ್ರಾರ್ಥಿಸುವಂತೆ ಮನವಿ ಮಾಡುತ್ತದೆ. ಈ ಮಹಾದುರಂತದಲ್ಲಿ ಮೃತಪಟ್ಟವರಿಗೆ ಸರ್ವಶಕ್ತ ದೇವರು ನಿತ್ಯಶಾಂತಿಯನ್ನು ಕರುಣಿಸಲಿ; ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ; ನಾಪತ್ತೆಯಾಗಿರುವವರು ಸುರಕ್ಷಿತವಾಗಿ ಪತ್ತೆಯಾಗಲಿ; ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಮತ್ತು ಶಕ್ತಿಯನ್ನು ನೀಡಲಿ; ಹಾಗೂ ಮನೆ-ಮಠ ಮತ್ತು ಜೀವನೋಪಾಯ ಕಳೆದುಕೊಂಡವರಿಗೆ ಪುನಃ ಬದುಕನ್ನು ಕಟ್ಟಿಕೊಳ್ಳುವ ಧೈರ್ಯ ಮತ್ತು ಅಗತ್ಯ ನೆರವು ದೊರಕಲಿ ಎಂದು ಧರ್ಮಕ್ಷೇತ್ರವು ಪ್ರಾರ್ಥಿಸುತ್ತದೆ.“ದುಃಖದ ಈ ಕ್ಷಣದಲ್ಲಿ ಪ್ರಾರ್ಥನೆ ಕೇವಲ ಮಾತಲ್ಲ; ಅದು ನಮ್ಮ ಸಹೋದರತ್ವದ ಅಭಿವ್ಯಕ್ತಿಯಾಗಿದೆ. ನೇಪಾಳದ ಜನರ ನೋವು ನಮ್ಮ ನೋವೂ ಹೌದು. ಅವರ ಕಣ್ಣೀರಿನಲ್ಲಿ ನಾವು ಮಾನವಕುಲದ ಸಾಮಾನ್ಯ ನೋವನ್ನು ಕಾಣುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ಗಡಿಗಳನ್ನು ಮೀರಿ ಮಾನವೀಯತೆ, ಕರುಣೆ ಮತ್ತು ಐಕ್ಯತೆ ಬೆಳಗಲಿ,” ಎಂದು ಮಂಗಳೂರು ಧರ್ಮಕ್ಷೇತ್ರವು ಆಶಿಸಿದೆ.ಮಂಗಳೂರು ಧರ್ಮಕ್ಷೇತ್ರವು ನೇಪಾಳದ ಜನರಿಗೆ ತನ್ನ ಪ್ರಾರ್ಥನೆ, ಸಹಾನುಭೂತಿ, ಮಾನವೀಯ ಕಾಳಜಿ ಮತ್ತು ಭ್ರಾತೃತ್ವದ ಐಕ್ಯತೆಯನ್ನು ಪುನರುಚ್ಚರಿಸುತ್ತಾ, ಈ ಕಠಿಣ ಸಂದರ್ಭದಲ್ಲಿ ಅವರು ಒಂಟಿಯಾಗಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.ಬಿಡುಗಡೆ ಮಾಡಿದವರು:ವಂದನೀಯ . ಫಾ. ರೂಪೇಶ್ ಅಶೋಕ್ ಮಾಡ್ತಾಶ್ರೀ ರಾಯ್ ಕ್ಯಾಸ್ಟಲಿನೊಸಾರ್ವಜನಿಕ ಸಂಪರ್ಕಾಧಿಕಾರಿಗಳು (PROs)ಮಂಗಳೂರು ಧರ್ಮಕ್ಷೇತ್ರ

Scroll to Top