ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ ) ಇದರ ಮಂದಾಳತ್ವದಲ್ಲಿಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ ), ಉಡುಪಿ;ಕಾಸರಗೋಡು 400 KV ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ, ಉಡುಪಿ, ದ.ಕ.;ರೈತ ಸಂಘ -ಹಸಿರು ಸೇನೆ; ಭಾರತೀಯ ಕಿಸಾನ್ ಸಂಘ (ರಿ) ಕರ್ನಾಟಕ ಪ್ರದೇಶ;ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ;ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ -ಸಂಸ್ಥೆಗಳು, ದ.ಕ., ಉಡುಪಿ,ಐ ಸಿ ವೈ ಎಂ ಮಂಗಳೂರು ಧರ್ಮ ಪ್ರಾಂತ್ಯ ಮತ್ತುಕಾಸರಗೋಡು ಜಿಲ್ಲೆ ಇದರ ಸಹಭಾಗಿತ್ವದಲ್ಲಿಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆ ಕುರಿತು ಸುದ್ದಿಗೋಷ್ಠಿಯಲ್ಲಿ ನೀಡಲಾದ ವಿವರ.

ಮಂಗಳೂರು: ಆತ್ಮೀಯರೇ , ಈಗಾಗಲೇ ತಮಗೆಲ್ಲರಿಗೂ ತಿಳಿದಿರುವಂತೆ ಉಡುಪಿ-ಕಾಸರಗೋಡು 400 KV ವಿದ್ಯುತ್ ಲೈನ್ ಯೋಜನೆ (UKTL ) ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿಯೆನಿಸಿಕೊಂಡಿರುವ UKTL-ಸ್ಟೆರ್ ಲೈಟ್ ಪವರ್ (Sterlite Power) ಕಂಪನಿಯವರು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆನೇ ಕಾನೂನು ಬಾಹಿರ ಕಾರ್ಯ ನಡೆಸುತ್ತಾ ಬರುತ್ತಿದ್ದಾರೆ. ಇದೇ ಮಾದರಿಯಲ್ಲಿ, ಪಾಲಡ್ಕ-ಕಡಂದಲೆ 400/220KV KPTCL ವಿದ್ಯುತ್ ಪ್ರಸರಣ ಮಾರ್ಗ (KPTCL) ಕಾಮಗಾರಿಯಲ್ಲಿಯೂ ಸ್ಪಷ್ಟ ಕಾನೂನಾತ್ಮಕ ಮಾನದಂಡಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ, ಬಲಾತ್ಕಾರ ತಂತ್ರಗಳ ಮೂಲಕ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತಾವಿತ ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನೇ ನಡೆಸದೇ, ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರುಗಳಿಗೆ ಯಾವುದೇ ಕಾನೂನು ಮಾನ್ಯತಾ ನೋಟಿಸು, ತಿಳುವಳಿಕೆ ಪತ್ರಗಳನ್ನು ನೀಡದೆಯೇ, ಭೂಮಾಲಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಭೂಮಾಲಕರು, ಸಾರ್ವಜನಿಕರು ಮತ್ತು ಯೋಜನಾ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ತೀವ್ರ ವಿರೋಧವನ್ನು ದಿಕ್ಕರಿಸಿ, ಸೌಜನ್ಯ ಮೀರಿ ದಬ್ಬಾಳಿಕೆ ಹಾಗೂ ಅಮಾನವೀಯ ವರ್ತನೆ ಮೂಲಕ ಕಾಮಗಾರಿ ನಡೆಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ.ನಮ್ಮ ಫಲವತ್ತಾದ ಕೃಷಿ ಭೂಮಿ, ಸಮೃದ್ಧ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು, ಬೃಹತ್ ಗಾತ್ರದ ವಿವಿಧ ಅಪರೂಪದ ಜಾತಿಯ ಮರಗಳನ್ನೊಳಗೊಂಡ ಸಂರಕ್ಷಿತ ಅರಣ್ಯ ಸಂಪತ್ತನ್ನು ಸರ್ವನಾಶಗೊಳಿಸುವ ಈ ಯೋಜನಾ ಮಾರ್ಗಕ್ಕೆ ನಮ್ಮೆಲ್ಲರ ತೀವ್ರ ವಿರೋಧವಿದ್ದು ಪರ್ಯಾಯ ಮಾರ್ಗಗಳಾದ ಸಮುದ್ರ ಮಾರ್ಗ, ಹೆದ್ದಾರಿ, ಸಾರ್ವಜನಿಕ ರಸ್ತೆ ಅಥವಾ ರೈಲ್ವೆ ಹಳಿ ಪಕ್ಕ, ಇಲ್ಲವೇ ಭೂಗತ ಮಾರ್ಗದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ನಮ್ಮೆಲ್ಲರ ಹಕ್ಕೋತ್ತಾಯ, ಪ್ರತಿಭಟನೆ, ಕಾನೂನು ಹೋರಾಟ ಕಳೆದ 5 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗಲೂ ನಮ್ಮ ಈ ಸ್ಪಷ್ಟ ಬೇಡಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ.ಈ ಕುರಿತು ಉಭಯ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಶಾಸಕರುಗಳು, ಸಂಸದರುಗಳು, ಜಿಲ್ಲಾಧಿಕಾರಿಗಳು, ಗೌರವಾನ್ವಿತ ರಾಷ್ಟ್ರಪತಿಯವರು, ಮಾನ್ಯ ಪ್ರಧಾನ ಮಂತ್ರಿಯವರು, ಘನತೆವೆತ್ತ ರಾಜ್ಯಪಾಲರು, ಮುಖ್ಯಮಂತ್ರಿಯವರು, ರಾಜ್ಯ ಮತ್ತು ಕೇಂದ್ರದ ಇಂಧನ ಸಚಿವರುಗಳು, ವಿರೋಧ ಪಕ್ಷಗಳ ನಾಯಕರುಗಳಯಾದಿಯಾಗಿ ಈ ಯೋಜನೆಯಿಂದ ಆಗುತ್ತಿರುವ ಮತ್ತು ಮುಂದೆ ಆಗಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ನಮ್ಮ ಸ್ಪಷ್ಟ ವಿರೋಧದ ಹಕ್ಕೋತ್ತಾಯ ಮನವಿಗಳನ್ನು ಹಲವಾರು ಬಾರಿ ಸಲ್ಲಿಸಿ, ನ್ಯಾಯಯುತ ನಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚಿಕೊಂಡಿದ್ದೇವೆ. ಆದರೆ ಈವರೆಗೂ ಯಾರಿಂದಲೂ ಪರಿಣಾಮಕಾರೀ ಸ್ಪಂದನೆ ಶೂನ್ಯವಾಗಿರುವ ಜೊತೆಗೆ ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರಕಾರ, ಉಭಯ ಜಿಲ್ಲಾಡಳಿತ, ಜನಪ್ರತಿನಿದಿಗಳ ಕೃಪಾ ಕಟಾಕ್ಷದಿಂದ UKTL-Sterlite ಕಂಪನಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಹಾಗೂ ಪಾಲಡ್ಕ-ಕಡಂದಲೆ (KPTCL) ಯೋಜನೆಯ ಗುತ್ತಿಗೆದಾರರಿಂದ ದಿನಕ್ಕೊಂದು ಕಡೆ ಸಮಸ್ಯೆಯನ್ನು ನಮ್ಮ ಜನ ಅನುಭವಿಸುತ್ತಿದ್ದಾರೆ.ಈ ಪ್ರಕೃತಿ ವಿರೋಧಿ ಯೋಜನೆಯಿಂದಾಗಲಿರುವ ಜ್ವಲಂತ ಸಮಸ್ಯೆಗಳು1) ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರಿನಿಂದ ದ.ಕ. ಜಿಲ್ಲೆಯ ಪುಣಚದ ವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ ಮೀ ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್,ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೂಡಾ ಅವಕಾಶವಾಗದೆ, ಸುಮಾರು 2300 ಎಕರೆ ಜಮೀನು ಸೇರಿ ಒಟ್ಟು 3450 ಕ್ಕಿಂತ ಹೆಚ್ಚು ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ.2) ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರ ಗನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ.3) ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳ ಮಾರಣ ಹೋಮವಾಗಲಿದೆ.4) ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾಗಲಿದೆ.5) ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ.6) ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿದ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ.7) ಲಕ್ಷಾಂತರ ಸಂಖ್ಯೆಯ ಬಾಳೆ, ಪೇರಳೆ, ಸಪೋಟ ಮುಂತಾದ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ.8) ಬಹುಮುಖ್ಯವಾಗಿ 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, ಮತ್ತು 13 ಕ್ರೈಸ್ತ ಧರ್ಮದ ಇಗರ್ಜಿ-ಪ್ರಾರ್ಥನಾ ಮಂದಿರಗಳು ಈ ಯೋಜನಾ ಮಾರ್ಗಕ್ಕಾಗಿ ಬಲಿಯಾಗಲಿವೆ.9) ಇವೆಲ್ಲದರ ಜೊತೆಗೆ ಈ ಪ್ರಾಕೃತಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ಕೋಟ್ಯಂತರ ಪಶು-ಪಕ್ಷಿಗಳು, ಜಲಚರ ಜೀವಿಗಳು, ಜೀವ ವೈವಿದ್ಯ ಸಂಕುಲಗಳನ್ನೆಲ್ಲಾ ಸರ್ವ ನಾಶಗೊಳಿಸಲಿದೆ.10) ಈ ಯೋಜನೆಯಿಂದ ಹರಿದಾಡಲಿರುವ ಬೃಹತ್ ಪ್ರಮಾಣದ ವಿದ್ಯುತ್ಶಕ್ತಿಯಿಂದ ಸೃಷ್ಟಿಯಾಗಲಿರುವ ವಿಕಿರಣ, ವಿದ್ಯುತ್ ಕಾಂತೀಯ ಅಲೆಗಳಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗಲಿರುವ ಕ್ಯಾನ್ಸರ್, ಬಂಜೆತನ ಮುಂತಾದ ಹಲವಾರು ಮಾರಣಾoತಿಕಾ ಕಾಯಿಲೆಗಳಿಂದ ಆಗಲಿರುವ ಸಾವು ನೋವುಗಳು.ಇನ್ನೂ ಹತ್ತು ಹಲವು ಕಾರಣಗಳಿಂದಾಗಿ ಪ್ರಕೃತಿ ವಿರೋಧಿಯಾಗಲಿರುವ ಇಂತಹ ವಿನಾಶಕಾರೀ ಯೋಜನೆಯ ಪ್ರಸ್ತಾವಿತ ಮಾರ್ಗವನ್ನು ಬದಲಾವಣೆ ಮಾಡಿ ಅತೀ ಕಡಿಮೆ ಸಮಸ್ಯೆಯಾಗುವ ಪರ್ಯಾಯ ಮಾರ್ಗಗಳ ಮೂಲಕ ಯೋಜನೆ ಅನುಷ್ಠಾನಗೊಳಿಸುವರೇ ಒತ್ತಾಯಿಸಿ “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆಯನ್ನು” ಮಂಗಳೂರು ಕೇಂದ್ರ ಭಾಗದಲ್ಲಿ ನಡೆಸಲು ತೀರ್ಮಾನ ಮಾಡಿದ್ದೇವೆ. ದಿನಾಂಕ: 20-02-2025ನೇ ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಮಂಗಳೂರಿನ ಬಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ “ಹಕ್ಕೋತ್ತಾಯ ಜಾಥಾ” ನಡೆಸಿ ನಂತರ 11.00 ಗಂಟೆಗೆ “ಬೃಹತ್ ಪ್ರತಿಭಟನಾ ಸಭೆ”ಯನ್ನು ಮಿನಿ ವಿಧಾನ ಸೌಧದ ಎದುರು ಸುಮಾರು 15 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಜನಾ ಸಂತ್ರಸ್ತರು, ಕೃಷಿಕರು ಹಾಗೂ ರೈತ ಪರ, ಪರಿಸರಪರ ಕಾಳಜಿ ಉಳ್ಳ ಸಮಾನ ಮನಸ್ಕ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಬಂಧುಗಳೆಲ್ಲರನ್ನು ಜೊತೆಯಾಗಿಸಿಕೊಂಡು ಘನ ಸರಕಾರಗಳನ್ನು, ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕಾರ್ಯ ನಡೆಸಲಾಗುವುದು.ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ನಮ್ಮ ಪ್ರಮುಖ ಹಕ್ಕೋತ್ತಾಯಗಳು:1) ಈಗಾಗಲೇ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿರುವ ಕೃಷಿ ಭೂಮಿ ಮತ್ತು ಸಮೃದ್ಧ ಕೃಷಿ ಸಂಪತ್ತು, ಅರಣ್ಯ ಸಂಪತ್ತು ಸರ್ವ ನಾಶವಾಗುವುದನ್ನು ತಪ್ಪಿಸಿ ಯೋಜನೆ ಅನಿವಾರ್ಯವೇ ಆಗಿದ್ದಲ್ಲಿ “ಪರ್ಯಾಯ ಮಾರ್ಗದ” ಮೂಲಕ ಮಾತ್ರವೇ ಅನುಷ್ಠಾನಗೊಳಿಸುವುದು. 2) ಬ್ರಿಟಿಷರ ಕಾಲದ ಟೆಲಿಗ್ರಾಫ್ ಕಾಯ್ದೆ-1885ನ್ನು ಸಂಪೂರ್ಣ ರದ್ದುಗೊಳಿಸಿ, 2003ರ ಎಲೆಕ್ಟ್ರಿಸಿಟಿ ಕಾಯ್ದೆಯನ್ನು ಮಾತ್ರ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗಳಿಗೆ ಅನ್ವಯಗೊಳಿಸುವುದು.3) ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ಪಷ್ಟ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು.4) ಉಡುಪಿ-ಕಾಸರಗೋಡು 400 KV ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆದಾರರಾದ UKTL -STERLITE ಕಂಪನಿಗೆ ನೀಡಲಾದ ಏಕ ಸ್ವಾಮ್ಯ ಪರಮಾಧಿಕಾರವನ್ನು ರದ್ದುಪಡಿಸಿ ಸರಕಾರವೇ ಜವಾಬ್ದಾರಿಯುತ ಪ್ರಮುಖ ಭಾಗಿದಾರರಾಗುವುದು.ಆತ್ಮೀಯರೇ, ನಮ್ಮೆಲ್ಲರ ಉಸಿರಾಗಿರುವ ನೆಲ-ಜಲ-ಪ್ರಕೃತಿ-ಪರಿಸರ ಮತ್ತು ಅಗಾಧ ಕೃಷಿ ಸಂಪತ್ತನ್ನು ಜಾಗ್ರತೆಯಿಂದ ಉಳಿಸಿ, ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಘನ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಈ ನಿಟ್ಟಿನಲ್ಲಿ ನಮ್ಮ ಈ ನ್ಯಾಯಯುತ, ರಾಜಕೀಯ ರಹಿತ, ಧರ್ಮಾತೀತ, ಜಾತ್ಯತೀತವಾದ ಪ್ರತಿರೋಧವನ್ನು ಅರ್ಥೈಸಿಕೊಂಡು ಬೆಂಬಲಿಸಿ. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು:

ಪ್ರಾದೇಶಿಕ ವಾರ್ತೆಗಳು

ವೈವಿಧ್ಯಮಯ ಸಾಹಿತ್ಯದಿಂದ ಭಾಷೆ ಸಮೃದ್ಧ *ಮುದ್ದು ಮೂಡುಬೆಳ್ಳೆ ಅಭಿಮತ *ತುಲುವೆರೆ ಕಲ ‘ಉದಿಪು ನೇಸರೆ’ ಕವಿಗೋಷ್ಠಿ

ಮಂಗಳೂರು: ವೈವಿಧ್ಯತೆಯಿಂದ ಕೂಡಿದ ಸಾಹಿತ್ಯ ಪ್ರಕಾರಗಳ ರಚನೆ ಭಾಷೆಯ ಬೆಳವಣಿಗೆಗೆ ಪೂರಕ. ಈ ನಿಟ್ಟಿನಲ್ಲಿ ಕವಿ, ಸಾಹಿತಿಗಳು ಗಮನವಹಿಸಬೇಕು. ಭಾಷೆಯ ಬಗೆಗಿನ ತುಡಿತ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗುತ್ತದೆ ಎಂದು ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಹೇಳಿದರು.ತುಲುವೆರೆ ಕಲ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಆಶ್ರಯದಲ್ಲಿ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್‌ನಲ್ಲಿ ‘ಉದಿಪು ನೇಸರೆ’ ತುಳು ಕವಿಗೋಷ್ಠಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಉದ್ಯಾನದಲ್ಲಿ ಅರಳುವ ಪುಷ್ಪಗಳ ರೀತಿ ಬಹುಬಗೆಯ ಸಾಹಿತ್ಯ ರಚನೆಯಿಂದ ಕವಿ, ಸಾಹಿತಿಗಳು ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಹಿರಿಯ ಸಾಹಿತಿ ಸದಾನಂದ ನಾರಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಗಲಿದ ಪತ್ರಕರ್ತ ಶಶಿ ಬಂಡಿಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ‘ತುಲುವೆರೆ ಕಲ’ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ ಎಂದರು.ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ಜತೆ ಕಾರ್ಯದರ್ಶಿ ಪ್ರಭಾ ಚಂದ್ರಶೇಖರಯ್ಯ ಉಪಸ್ಥಿತರಿದ್ದರು. ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ದೋಟ ವಂದಿಸಿದರು. ಶ್ರೀಶಾವಾಸವಿ ಕಾರ್ಯಕ್ರಮ ನಿರೂಪಿಸಿದರು.ಭಾಗವಹಿಸಿದ ಕವಿಗಳು:ಕವಿಗೋಷ್ಠಿಯಲ್ಲಿ ಜಯರಾಮ ಪಡ್ರೆ, ಅಶ್ವಿಜಾ ಶ್ರೀಧರ್, ಉಮೇಶ್ ಶಿರಿಯ, ರಂಜಿತ್ ಸಸಿಹಿತ್ಲು, ಸತೀಶ್ ಬಿಳಿಯೂರು, ಬಾಲಿನಿ ಎನ್.ಕರ್ಕೇರಾ, ಅಶೋಕ ಎನ್.ಕಡೇಶಿವಾಲಯ, ಅಶ್ವತ್ಥ್ ಬರಿಮಾರು, ಶಶಿಕಲಾ ಭಾಸ್ಕರ್ ದೈಲಾ, ಆಕೃತಿ ಭಟ್, ನಿಶಾನ್ ಅಂಚನ್, ಅಶ್ವಿನಿ ತೆಕ್ಕುಂಜ, ಮಲ್ಲಿಕಾ ಜೆ.ರೈ ಗುಂಡ್ಯಡ್ಕ, ಪದ್ಮನಾಭ ಪೂಜಾರಿ ಬಂಟ್ವಾಳ, ಪರಿಮಳಾ ಮಹೇಶ್ ರಾವ್, ಶ್ರೀಶಾವಾಸವಿ ತುಳುನಾಡ್, ಮುರಳೀಧರ ಆಚಾರ್ಯ, ಅನುರಾಧಾ ರಾಜೀವ್ ಸುರತ್ಕಲ್, ವಿಶ್ವನಾಥ ಕುಲಾಲ್ ಮಿತ್ತೂರು, ರೇಮಂಡ್ ಡಿ’ಕುನ್ಹ ತಾಕೊಡೆ, ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ರಾಜೇಶ್ ಶೆಟ್ಟಿ ದೋಟ, ಶ್ಯಾಮ್‌ಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಪ್ರಶಾಂತ್ ಆಚಾರ್ಯ, ಅನನ್ಯಾ ಕರ್ಕೇರ, ಸವಿತಾ ಕರ್ಕೇರ, ವೈಷ್ಣವಿ ಸುಧೀಂದ್ರ ರಾವ್ ಭಾಗವಹಿಸಿದ್ದರು.…….

ಪ್ರಾದೇಶಿಕ ವಾರ್ತೆಗಳು

“ದೇವರಿಗೆ ಹತ್ತಿರವಾದ ಸಮಾಜ ದೇವಾಡಿಗ ಸಮಾಜ”-ಶಾಸಕ ಉಮಾನಾಥ್ ಕೋಟ್ಯಾನ್. ಹಳೆಯಂಗಡಿ ದೇವಾಡಿಗ ಭವನ ಲೋಕಾರ್ಪಣೆ

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಹಳೆಯಂಗಡಿ ಇದರ ದೇವಾಡಿಗ ಭವನದ ನೆಲ ಅಂತಸ್ತು ಲೋಕಾರ್ಪಣಾ ಸಮಾರಂಭ ಆದಿತ್ಯವಾರ ಬೆಳಗ್ಗೆ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು, “ನಾವೆಲ್ಲರೂ ಹಿಂದೂಗಳು, ಹಿಂದಿನ ಕಾಲದಲ್ಲಿ ಆಯಾ ಕುಲಕಸುಬಿಗೆ ಅನುಗುಣವಾಗಿ ಜಾತಿಗಳನ್ನು ವಿಂಗಡಿಸಲಾಯಿತು. ಅದರಲ್ಲಿ ದೇವರಿಗೆ ಪ್ರಿಯವಾದ ಹತ್ತಿರವಾದ ದೇವಾಡಿಗ ಸಮಾಜ ಕೂಡ ಒಂದು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಒಂದು ಕೋಟಿ ರೂ. ಅನುದಾನವನ್ನು ಸಂಘದ ಕಟ್ಟಡಕ್ಕೆ ಘೋಷಿಸಲಾಗಿತ್ತು. ಆದರೆ ಈಗಿನ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ಮಂಜೂರಾದ ಹಣ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ನನ್ನ ಶಾಸಕರ ನಿಧಿಯಿಂದ 25 ಲಕ್ಷ ರೂ. ನೀಡುತ್ತೇನೆ ಮತ್ತು ಸರಕಾರದ ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಲ್ಲಿ ನಿರ್ಮಾವಾಗಿರುವ ಭವ್ಯವಾದ ದೇವಾಡಿಗ ಭವನ ಮುಂದಿನ ದಿನಗಳಲ್ಲಿ ಸಂಪೂರ್ಣಗೊಂಡು ಸಮಾಜದ ಜನರಿಗೆ ಅನುಕೂಲವಾಗುವ ರೀತಿ ಬೆಳೆಯಲಿ. ಇದಕ್ಕಾಗಿ ಶ್ರಮಿಸಿದ ಸಮಾಜದ ಎಲ್ಲರಿಗೂ ಅಭಿನಂದನೆಗಳು“ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತಾಡಿ, “ರಾಜ್ಯದ ಚುಕ್ಕಾಣಿ ಹಿಡಿದಂತಹ ಒಬ್ಬ ನಾಯಕನನ್ನು ಕೊಟ್ಟ ಸಮಾಜ ಇದ್ದರೆ ಅದು ದೇವಾಡಿಗ ಸಮಾಜ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಡವರ ಶೋಷಣೆ ನಿರಂತರವಾಗಿ ನಡೆಯುತ್ತಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ಬಳಿಕ ಆದ ಸಾಮಾಜಿಕ ಬದಲಾವಣೆಯಲ್ಲಿ ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವೀರಪ್ಪ ಮೊಯಿಲಿಯಂತ ನಾಯಕರು ರಾಜ್ಯದ ಮುಖ್ಯಮಂತ್ರಿಯಾದರು. ಎಂಆರ್ ಪಿಎಲ್ ನಂತಹ ಬೃಹತ್ ಕಂಪೆನಿ ಜಿಲ್ಲೆಗೆ ಅವರ ಕೊಡುಗೆಯಾಗಿದೆ. ಅಷ್ಟೇ ಅಲ್ಲದೆ ಶಿಕ್ಷಣ, ಉದ್ಯಮ, ಕೈಗಾರಿಕಾ ಕ್ಷೇತ್ರದಲ್ಲಿ ಅವರ ಕೊಡುಗೆ ಗಮನಾರ್ಹವಾದುದು“ ಎಂದು ಸ್ಮರಿಸಿದರು.ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮಾತಾಡಿ, ”ದೇವಾಡಿಗ ಸಮಾಜದ ಕನಸು ಇಂದು ಭಾಗಶ ಪೂರ್ಣವಾಗಿದೆ. ಆದರೆ ಇನ್ನುಳಿದ ಕೆಲಸಗಳು ಸುಸೂತ್ರವಾಗಿ ನಡೆದು ಸರಕಾರದ ಅನುದಾನ ದೊರೆತು ಆದಷ್ಟು ಬೇಗನೆ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿ. ಕಟ್ಟಡ ನಿರ್ಮಾಣ ಮಾತ್ರವಲ್ಲದೆ ಸಮಾಜದ ಮಕ್ಕಳ ಶಿಕ್ಷಣಕ್ಕೂ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸಮಾಜಕ್ಕೆ ಹಣ ಕೊಟ್ಟರೆ ವ್ಯರ್ಥವಾಗುವುದಿಲ್ಲ ಅದರ ಪ್ರತಿಫಲ ನಮಗೆ ಇನ್ನೊಂದು ರೂಪದಲ್ಲಿ ಸಿಕ್ಕೇ ಸಿಗುತ್ತದೆ. ಹೀಗಾಗಿ ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ದಾನ ಮಾಡಿ“ ಎಂದು ಕರೆ ನೀಡಿದರು.ವೇದಿಕೆಯಲ್ಲಿ ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಇದರ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕೃಷ್ಣ ಹೆಗ್ಡೆ ಮಿಯಾರು, ವಸಂತ್ ಬೆರ್ನಾರ್ಡ್, ರವಿ ಎಸ್. ದೇವಾಡಿಗ ಮಾಜಿ ಅಧ್ಯಕ್ಷರು ಮುಂಬೈ ದೇವಾಡಿಗ ಸಂಘ, ಗ್ರಾಮ ಪಂಚಾಯತ್ ಹಳೆಯಂಗಡಿ ಅಧ್ಯಕ್ಷೆ ಪೂರ್ಣಿಮಾ, ನಾಸಿಕ್ ಹೋಟೆಲ್ ಉದ್ಯಮಿ ರವೀಶ್ ಮೂಲ್ಕಿ, ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷ ಪ್ರವೀಣ್ ನಾರಾಯಣ್‌, ಮಾಜಿ ಅಧ್ಯಕ್ಷ ವಾಸು ದೇವಾಡಿಗ, ಉದ್ಯಮಿ ನಾಗರಾಜ್ ಪಡುಕೋಣೆ, ಕೊಲ್ಲೂರು ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಅಶೋಕ್ ಮೊಯಿಲಿ, ರತ್ನಾಕರ್ ಜಿ.ಎಸ್., ಹಿರಿಯಡ್ಕ ಮೋಹನ್‌ದಾಸ್, ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಆಂಬ್ಲಮೊಗರು, ಕೆ.ಜೆ.ದೇವಾಡಿಗ, ದೇವಾಡಿಗರ ಸೇವಾ ಸಂಘ ಉಡುಪಿ ಇದರ ಅಧ್ಯಕ್ಷ ಗಣೇಶ್ ದೇವಾಡಿಗ ಅಂಬಲಪಾಡಿ, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ಧನ್, ಯುವವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ, ಕಟ್ಟಡ ಸಮಿತಿಯ ಪರಮೇಶ್ವರ್, ಮೀರಾ ಬಾಯಿ ಕೆ., ವಿಜಯಲಕ್ಷ್ಮಿ ಜನಾರ್ಧನ್, ರಮೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಸಂತಿ ದೇವಾಡಿಗ ಪಡುಮನೆ ಹಾಗೂ ಗಂಗಾ ಡಿ. ದೇವಾಡಿಗ ಪಾವಂಜೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನೇಹಾ ಯಾದವ ದೇವಾಡಿಗ ಹಳೆಯಂಗಡಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಯಾದವ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು. ಜನಾರ್ಧನ್ ಪಡುಪಣಂಬೂರು ಪ್ರಾಸ್ತಾವಿಕ ಮಾತನ್ನಾಡಿದರು.ಬೆಳಗ್ಗೆ ಗಣಪತಿ ಹೋಮ, ಪ್ರವೇಶ, ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಮಹಾ ಅನ್ನಸಂತರ್ಪಣೆ ಜರುಗಿತು.

ಪ್ರಾದೇಶಿಕ ವಾರ್ತೆಗಳು

ಫೆ. 19 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣ. ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್, ಸ್ಪೀಕರ್ ಖಾದರ್ ಉಪಸ್ಥಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣ ಫೆ. 19 ರಂದು ಬೆಳಿಗ್ಗೆ 11 ಗಂಟೆಗೆ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸುವರ್ಣ ಸಂಭ್ರಮ ಲೋಗೋ ಅನಾವರಣ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆ ಸಭಾಪತಿ ಯು ಟಿ ಖಾದರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ್ ಭಂಡಾರಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಛೇರ್ಮನ್ ಸಿಎ ಶಾಂತರಾಮ ಶೆಟ್ಟಿ, ಎಂ. ಆರ್. ಪಿ. ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರಘುರಾಮ್, ಆನಂದ್ ಶೆಟ್ಟಿ, ರವೀಂದ್ರ ಶೆಟ್ಟಿ, ಹರ್ಷ, ಜಗನ್ನಾಥ ಶೆಟ್ಟಿ ಬಾಳ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಗೌರವ ಉಪಸ್ಥಿತರಿಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಂಪೂರ್ಣವಾಗಿ ಸಾರ್ವಜನಿಕ ಸೇವೆಯಲ್ಲಿ ತೂಡಗಿಸಿಕೊಂಡ ಕ್ಷೇತ್ರ ಯಾವುದಾದರು ಇದ್ದಲ್ಲಿ, ಅವು ಪತ್ರಿಕಾರಂಗ ಮತ್ತು ರಾಜಕಾರಣ: ಸಭಾಧ್ಯಕ್ಷ ಯು.ಟಿ ಖಾದರ್

ಸಂಪೂರ್ಣವಾಗಿ ಸಾರ್ವಜನಿಕ ಸೇವೆಯಲ್ಲಿ ತೂಡಗಿಸಿಕೊಂಡ ಕ್ಷೇತ್ರ ಯಾವುದಾದರು ಇದ್ದಲ್ಲಿ ,ಅವು ಪತ್ರಿಕಾರಂಗ ಮತ್ತು ರಾಜಕಾರಣ ಇವೆರೆಡರ ಮೇಲೆ ಸಾಮನ್ಯ ಪ್ರಜೆಗಳು ಬಹಳಷ್ಟು ವಿಶ್ವಾಸ ಮತ್ತು ನಿರೀಕ್ಷೆ ಎರಡನ್ನೂ ಇಟ್ಟಿದ್ದಾರೆ, ನಾವು ಈ ನೆಲದ ಹಿತ ದೃಷ್ಟಿಯಿಂದ ಒಂದಾಗಿ ಸಾಗಿದಲ್ಲಿ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಹೇಳಿದರು. ಫೇಬ್ರವರಿ 14ರಂದು ಅವರು ಗೋವಾ ರಾಜ್ಯದ ಕೋಲ್ವಾದಲ್ಲಿನ ಕೋಲ್ಮಾರ್ ಬೀಚ್ ರೆಸಾರ್ಟೀನ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಇದರ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೀಟಿಂಗ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ -2025 ಉದ್ಘಾಟಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವದ ಕಾವಲು ಕಾಯುವವರೇ ಪತ್ರಕರ್ತರು. ನಿಮ್ಮ ಕೆಲಸದಲ್ಲಿ ಏರಿಳಿತ ಇರಬಹುದು. ದೇಶದಲ್ಲಿ ಇವತ್ತು ಸಂವಿಧಾನದ ಸತ್ವವನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೀರಿ. ಮಾದ್ಯಮ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ನಡುವೆಯೂ ಅನೇಕ ಮಾಧ್ಯಮಗಳು ವೃತ್ತಿಪರತೆ ಮರೆಯದೇ ಸಾಗುತ್ತಿರೋದು ಪ್ರಶಂಸಾರ್ಹ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗುತ್ತಿರಬೇಕು. ದೇಶದ ವಿವಿಧ ರಾಜ್ಯಗಳಿಂದ ಬಂದ ನಿಮಗೆಲ್ಲ ಶುಭ ಹಾರೈಕೆಗಳು ಎಂದು ಹೇಳಿದ ಖಾದರ್ ನಿಮಗೆ ಸರ್ಕಾರದಿಂದ ಹೆಚ್ಚಿನ ಸಹಕಾರ ಸಿಗಬೇಕು. ಈ ವಿಚಾರದಲ್ಲಿ ನಾನು ಗಮನ ಹರಿಸುತ್ತೇನೆ ಎಂದು ಹೇಳಿದರು. ಇಳಕಲ್ ಮಠದ ಶ್ರೀ ಮಹಾಂತೇಶ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಅಧ್ಯಕ್ಷ ಕೆ ಪಿ ಪಂಡೀತ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ , ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಉಪಸ್ಥಿತರಿದ್ದರು.ಹಾಗೂ ಈ ಒಂದು ರಾಷ್ಟ್ರೀಯ ಸಭೆಯಲ್ಲಿ ಬೇರೆಬೇರೆ ರಾಜ್ಯದ ಅಧ್ಯಕ್ಷರುಗಳು ಪತ್ರಿಕಾ ರಂಗದ ಸವಾಲುಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು.ಸುಮಾರು 20 ರಾಜ್ಯಗಳಿಂದ ಬಂದ 250 ಪತ್ರಕರ್ತರು ಮದ್ಯಾನ್ಹ ದ ನಂತರ ಪ್ರಿಂಟ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾ ಎಂಬ ವಿಷಯ ದ ಬಗ್ಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ,ನುರಿತ ಸೀನಿಯರ್ ಜರ್ನಲಿಸ್ಟ್ ಗಳ ಅನುಭವದ ಮಾತುಗಳೊಂದಿಗೆ ಆ ದಿನದ ವಿಚಾರ ದಾರೆಗೆ ಪೂರ್ಣ ವಿರಾಮ.ಈ ಸಂದರ್ಭದಲ್ಲಿ ವೈದ್ಯಕೀಯ (ಕಣ್ಣಿನ)ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಹಿರಿಯ ಡಾಕ್ಟರ್ ಸುಬ್ಬಣ್ಣ ಶೆಟ್ಟಿ (81)ಅವರಿಗೆ IJU ನ್ಯಾಷನಲ್ ಅಚೀವ್mಮೆಂಟ್ -2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಿಯಾ ಸುದೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಅದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಅಂಕಲಿ ಮಠದ ಸ್ವಾಮೀಜಿ, ಗೋವಾ ಕನ್ನಡ ಸಂಘದ ಅಧ್ಯಕ್ಷ ಬಸವರಾಜ್ ಮೇಟಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.ಸಭೆಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಕುಂಭ ನಿಧಿಯ ಉದ್ಘಾಟನೆ

ಶ್ರೀ ರಕ್ತೇಶ್ವರೀ ದೇವೀ ಸನ್ನಿಧಿ ಬಿ ಸಿ ರೋಡ್ ಇಲ್ಲಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಂಭ ನಿಧಿಯ ಉದ್ಘಾಟನೆ ಮತ್ತು 48 ದಿವಸಗಳ ಸಂಧ್ಯಾ ಭಜನೆ ಯ ಪ್ರಾರಂಭೋತ್ಸವ ಇಂದು ಸನ್ನಿಧಿಯಲ್ಲಿ ನಡೆಯಿತು. ಬ್ರಹ್ಮ ಕಲಶ ಸಮಿತಿಯ ಕೋಶಾಧಿಕಾರಿ ಯವರಾದ ಶ್ರೀ ನಾರಾಯಣ ಹೆಗ್ಡೆ ಬಿ ಸಿ ರೋಡ್ ಇವರು ಕುಂಭ ನಿಧಿಯ ಉದ್ಘಾಟನೆ ಯ ನ್ನು ನೆರವೇರಿಸಿದರು. ಸಂಧ್ಯಾ ಭಜನೆಯ ದೀಪ ಪ್ರಜ್ವಲನೆಯನ್ನು ಶ್ರೀಮತಿ ಮತ್ತು ಶ್ರೀ ರಘುಪತಿ ಭಟ್ ,ಅರ್ಚಕರು ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿ. ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ಸೇವಾ ಸಮಿತಿ ಯ ಮಾಜಿ ಅಧ್ಯಕ್ಷರು ಗಳಾದ , ಶ್ರೀಮತಿ ಮತ್ತು ಶ್ರೀ ಗೋಪಾಲ ಸುವರ್ಣ,ಶ್ರೀಮತಿ ಮತ್ತು ಶ್ರೀ ರಾಜೇಶ್ ಎಲ್ ನಾಯಕ್, ಶ್ರೀಮತಿ ಮತ್ತು ಶ್ರೀ ಸೋಮನಾಥ ನಾಯ್ಡು , ಮತ್ತು ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಶ್ರೀಧರ ಮಲ್ಲಿ ನೆರವೇರಿಸಿದರು. ಸಮಾರಂಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ವಿಶ್ವನಾಥ , ಕಾರ್ಯದರ್ಶಿ ಶ್ರೀ ಶಿವಶಂಕರ್,ಕೋಶಾಧಿಕಾರಿ ಶ್ರೀ ಮೋಹನ್, ಸದಸ್ಯರಾದ ಶ್ರೀ ಸತೀಶ್ ಕುಮಾರ್, ಬ್ರಹ್ಮ ಕಲಶ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಗುರುಕೃಪ ,ಸಹ ಕೋಶಾಧಿಕಾರಿ ಶ್ರೀ ವಸಂತ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಶ್ರೀವತ್ಸ ಭಟ್ ಮತ್ತು ಶ್ರೀ ಸುದರ್ಶನ್ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಹಾಸ್ಯಗಾರ ವಳಕುಂಜರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ.ಪೋಷಕರಿಂದ ಯಕ್ಷಗಾನಕ್ಕೆ ಮನ್ನಣೆ: ಬಿ.ರಮಾನಾಥ ರೈ

ಬಂಟ್ವಾಳ: ‘ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮನೆ ಮಾತು. ಇಲ್ಲಿನ ಕಲಾಪೋಷಕರಿಂದ ಯಕ್ಷಗಾನಕ್ಕೆ ವಿಶೇಷ ಮನ್ನಣೆ ಪ್ರಾಪ್ತವಾಗಿದೆ. ಅದರಲ್ಲೂ ಕಟೀಲು ಕ್ಷೇತ್ರದ ಹರಿಕೆ ಬಯಲಾಟ ಸಂದರ್ಭದಲ್ಲಿ ಮನೋರಂಜನೆಯೊಂದೇ ಮುಖ್ಯ ಉದ್ದೇಶವಾಗಿರದೆ ಅದನ್ನೊಂದು ಆರಾಧನೆಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸುವುದು ಒಂದು ಉತ್ತಮ ಸಂಪ್ರದಾಯ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಶನಿವಾರ ಶಂಬೂರು ಗ್ರಾಮದ ಬೊಂಡಾಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ಕಲಾಪೋಷಕರಾದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಅವರ ಸಂಸ್ಮರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಟೀಲು ಕ್ಷೇತ್ರದ ಪ್ರಧಾನಾರ್ಚಕ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಿ ಆಶೀರ್ವಚನ ನೀಡಿದರು. ಪ್ರಶಸ್ತಿ ಪ್ರದಾನ:ಸಮಾರಂಭದಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು‌ ಮೇಳದ ಹಿರಿಯ ಕಲಾವಿದ ಹಾಸ್ಯಗಾರ ರವಿಶಂಕರ ವಳಕುಂಜ ಅವರಿಗೆ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸ್ಮರಣಾರ್ಥ 2024 – 25 ನೇ ಸಾಲಿನ ‘ಬೊಂಡಾಲ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯ್ತು.ಧಾರ್ಮಿಕ ಪರಿಷತ್ತು ರಾಜ್ಯ ಸದಸ್ಯ ಎ.ರವಿಶಂಕರ ಶೆಟ್ಟಿ ಬಡಾಜೆ ಗುತ್ತು ಮತ್ತು ಅಹಮದ್ ನಗರದ ಉದ್ಯಮಿ ಹಾಗೂ ಕುಂಬಳೆ ಮುಂಡಪಲ್ಲ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣ ಭಾಷಣ ಮಾಡಿದರು. ರವಿಶಂಕರ ವಳಕ್ಕುಂಜ ಸನ್ಮಾನ ಸ್ವೀಕರಿಸಿ ಮಾತನಾಡಿ ಬೊಂಡಾಲ ಮನೆತನದವರು ಯಕ್ಷಗಾನ ಹಾಗೂ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ‌ ಪಂಚಾಯತ್ ಅಧ್ಯಕ್ಷ ಸಂತೋಷ್ ‌ಕುಮಾರ್, ಬೊಂಡಾಲ ಕುಟುಂಬಸ್ಥರು ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಯಲಾಟ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ‘ ಶ್ರೀ ದೇವಿ ಮಹಾತ್ಮೆ’ ಬಯಲಾಟ ಪ್ರದರ್ಶನವಾಯಿತು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಮಹಾನಗರ ಪಾಲಿಕೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ರೂ 10-00 ಲಕ್ಷ ಫ್ರೋತ್ಸಾಹಧನ ವಿತರಣೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ರಾಜ್ಯಾದ್ಯಂತ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನಿನ *ಯಕ್ಷಗಾನಂ ವಿಶ್ವಗಾನಂ* ಯೋಜನೆಯಡಿ 2024-25ನೇ ಸಾಲಿನ ಬಜೆಟ್ ನಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಇವರು ಘೋಷಿಸಿದ ರೂ 10.00 ಲಕ್ಷದ ಪ್ರೋತ್ಸಾಹ ಧನವನ್ನುಮೇಯರ್ ಮನೋಜ್ ಕುಮಾರ್ ಇವರು ಪಟ್ಲ ಫೌಂಡೇಶನಿನ ಕೇಂದ್ರೀಯ ಸಮಿತಿಯ ಜತೆಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಇವರ ಮೂಲಕ ಟ್ರಸ್ಟಿಗೆ ನೀಡಿದರು.ಈ ಸಂದರ್ಭದಲ್ಲಿ ಮಹಾಗರಪಾಲಿಕೆಯ ಉಪಮೇಯರ್ ಭಾನುಮತಿ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕರಾದ ಅನಿಲ್ ಕುಮಾರ್ ವಿವಿಧ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ  ಮನೋಹರ್ ಶೆಟ್ಟಿ,  ಸುಮಿತ್ರ ಕರಿಯ,  ಸರಿತಾ ಶಶಿಧರ್,  ವೀಣಾ ಮಂಗಳ ಮಾಜಿ ಮೇಯರ್ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.ಪಟ್ಲ ಫೌಂಡೇಶನ್ ಗೆ ಈ ಅನುದಾನವನ್ನು ಕೊಡಿಸುವಲ್ಲಿ ವಿಶೇಷವಾಗಿ ಸ್ಪಂದಿಸಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಮೇಯರ್, ಮಾಜಿ ಮೇಯರ್ ಗಳು, ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲಾ ಕಾರ್ಪೊರೇಟರ್ ಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ  ಸತೀಶ್ ಶೆಟ್ಟಿಯವರು ಹಾಗೂ ಕೇಂದ್ರೀಯ ಹಾಗೂ ಎಲ್ಲಾ ಪ್ರಾದೇಶಿಕ ಘಟಕಗಳು ಅಭಿನಂದನೆಗಳನ್ನು ಸಲ್ಲಿಸಿದೆ

ಪ್ರಾದೇಶಿಕ ವಾರ್ತೆಗಳು

ಫೆ.22ರಂದು ದುಬೈಯಲ್ಲಿ “ವಿಂಶತಿ ಭಜನಾಟ್ಯ ಸಂಭ್ರಮ-2025

ಮಂಗಳೂರು: ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ ಕಳೆದ 20 ವರುಷಗಳಿಂದ ಕೊಲ್ಲಿ ರಾಷ್ಟ್ರ ಯುಎಇಯಲ್ಲಿ ಸಹಸ್ರಾರು ಮನೆಗಳ ಹಾಗೂ ಸಂಘ ಸಂಸ್ಥೆಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಪ್ರತಿಫಲ ಆಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಭಜನಾ ಸೇವೆ ಮಾಡುತ್ತಾ ಬಂದಿದ್ದು ಈ ನಿಸ್ವಾರ್ಥ ಭಜನಾ ಸಂಘಟನೆಗೆ ಈಗ ವಿಂಶತಿಯ ಸಂಭ್ರಮ. ಈ ಸಂಭ್ರಮವನ್ನು ಸಧ್ಯಕ್ತ ಬಾಂಧವರ ಜೊತೆ ಹಂಚಿಕೊಳ್ಳಲು, ನಮ್ಮ ಮುಂದಿನ ಪೀಳಿಗೆಗೆ ಭಜನಾ ಸಂಸ್ಕೃತಿಯನ್ನು ಪರಿಚಯಮಾಡಲು ವಿಶೇಷ ಕಾರ್ಯಕ್ರಮವನ್ನು ಫೆ.22ರಂದು ದುಬಾಯಿಯ ಅಲ ನಾಸರ್ ಲೀಸಲ್ಯಾಂ೯ಡ್ ಅನ್ನೋ ಬೃಹತ್ ಸಭಾಂಗಣದಲ್ಲಿ “ವಿಂಶತಿ ಭಜನಾಟ್ಯ ಸಂಭ್ರಮ-2025“ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ರಾಜೇಶ್ ಕುತ್ತಾರ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಈ ಕಾರ್ಯಕ್ರಮದ ವಿಶೇಷತೆಯಾಗಿ ಕುಣಿತ ವಿಂಶತಿ, ಗಾನ ವಿಂಶತಿ, ನೃತ್ಯ ವಿಂಶತಿ, ಕುಣಿತ ವಿಂಶತಿ ಅನ್ನುವ ಭಕ್ತಿಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುಎಇ ಯಲ್ಲಿ ನಮ್ಮಂತೆ ಸೇವೆ ಮಾಡುವ ಹಲವಾರು ಉತ್ತಮ ಭಜನಾ ತಂಡಗಳಿವೆ, ಆ ತಂಡಗಳಲ್ಲಿ 8 ತಂಡಗಳನ್ನು ಆಯ್ದು ಪ್ರಪಥಮ ಬಾರಿಗೆ ಯುಎಇ ಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಬಾಲ್ಯದಲ್ಲೇ ಭಕ್ತಿಗಾನದ ಮೂಲಕ ಜನಮನ್ನಣೆ ಗಳಿಸಿ ಪಂಚಭಾಷೆಗಳಲ್ಲಿ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿ ದೇಶವಿದೇಶಗಲ್ಲಿ ಕೂಡ ತನ್ನ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಕೇರಳದ ಪ್ರಖ್ಯಾತ ಯುವ ಗಾಯಕಿ ಕು.ಸೂರ್ಯ ಗಾಯತ್ರಿಯವರಿಂದ ಭಕ್ತಿ ಗಾಯನ, ಯುಎಇ ಯಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಖ್ಯಾತ ನೃತ್ಯ ವಿಧುಷಿ ರೂಪ ಕಿರಣ್ ಬಳಗದವರಿಂದ ಕರ್ನಾಟಕದ ಪುಣ್ಯ ಸ್ಥಳಗಳ ಕಾರಣಿಕ ದೇವತೆಗಳ ಪೌರಾಣಿಕ ನೃತ್ಯ ರೂಪಕವನ್ನು ಬೆಳಕು, ದೃಶ್ಯಸಂಯೋಜನೆಯ ಮೂಲಕ ಸಾದರಪಡಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸುವರ್ಣ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಅಡ್ಯಾರ್ ನಲ್ಲಿ ಧಾರ್ಮಿಕ ವಿಧಿ ಚಪ್ಪರ ಮುಹೂರ್ತ

ಮಂಗಳೂರು: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಡ್ಯಾರ್ ಇಲ್ಲಿನ ಗ್ರಾಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಾಚ್೯ 1 ರಿಂದ 9 ರ ತನಕ ನಡೆಯಲಿರುವ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರಥಮ ಧಾರ್ಮಿಕ ವಿಧಿ ಚಪ್ಪರ ಮುಹೂರ್ತ ಕ್ಷೇತ್ರದ ತಂತ್ರಿವರೇಣ್ಯರಾದ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ಆಡಳಿತ ಸಮಿತಿ, ಪುನಃ ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Scroll to Top