ಕರಾವಳಿ ಸುದ್ದಿ

ಕರಾವಳಿ ಸುದ್ದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ.ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ.ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ‌‌ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ.ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4 ತಂಡಗಳಿಗೆ ಅಂತಿಮ ಸುತ್ತಿನಲ್ಲಿ ಅವಕಾಶವನ್ನು ನೀಡಲಾಗುವುದು. ಅರ್ಹತಾ ಸುತ್ತು ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು ಅಂತಿಮ ಸುತ್ತು ಅಡ್ಯಾರ್ ಗಾರ್ಡನ್ ನಲ್ಲಿ ಜೂನ್ 1 ರಂದು ನಡೆಯುವ ಪಟ್ಲ ಸಂಭ್ರಮದ ದಶಮಾನೋತ್ಸವ ಆಚರಣೆಯ ಸಂದರ್ಭ ನಡೆಯಲಿದೆ.ವಿಜೇತ ತಂಡಕ್ಕೆ ಪ್ರಥಮ ಬಹುಮಾನ ( 1 ಲಕ್ಷ) ದ್ವಿತೀಯ ಬಹುಮಾನ (75,000) ತೃತೀಯ ಬಹುಮಾನ (50,000) ಸಹಿತ ಒಂದು ಶಿಸ್ತಿನ ತಂಡ (25,000) ಪ್ರಶಸ್ತಿಯು ದೊರೆಯಲಿದೆ.ಸ್ಪರ್ಧೆಗೆ ಮಾದರಿ ಪ್ರವೇಶ ಪತ್ರ ಕಳುಹಿಸಲು 31/01/2025 ಅಂತಿಮ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061), ಉದಯಾನಂದ ಶೆಟ್ಟಿ (9535862709 ), ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಪ್ರಕಟಣೆ ತಿಳಿಸಿದೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಗೆಡ್ಡೆ ಗೆಣಸು ಸೊಪ್ಪಿನ ಮೇಳದಲ್ಲಿ ಕಿಕ್ಕಿರಿದ ಜನ ಸಂದಣಿ…..

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಶನಿವಾರ ಮತ್ತು ರವಿವಾರ ಮಂಗಳೂರಿನ ಸಂಘ ನಿಕೇತನದಲ್ಲಿ ಆಯೋಜಿಸಲಾದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದಲ್ಲಿ ಶನಿವಾರ ದೇಶದ ಗಿನ್ನೆಸ್ ದಾಖಲೆ ಹಾಗೂ ಲಿಮ್ಕಾ ದಾಖಲೆಯ ಗೆಡ್ಡೆ ಗೆಣಸು ಬೆಳೆಗಾರರು ತಾವು ಬೆಳೆದ ಬೃಹತ್ ಗೆಡ್ಡೆ ಗೆಣಸು ಸಂಗ್ರಹದೊಂದಿಗೆ ಮೇಳದಲ್ಲಿ ಭಾಗವಹಿಸಿದ್ದರು.ಜೊತೆಗೆ ಜೊಯಿಡಾದ ಕುಡುಬಿ ಜನಾಂಗದ ರೈತರು ಬೆಳೆದ ಮೂಡ್ಲಿ ಹೆಸರಿನ ಗೆಡ್ಡೆ, ಕೇರಳದ ಕೃಷಿಕರ ತಂಡದ ಬಳಿ ಗೆಣಸಿನ ಗೆಡ್ಡೆ ಗಳ ಸಂಗ್ರಹ ಮೇಳದ ವಿಶೇಷ ಆಕರ್ಷಣೆ ಯಾಗಿದೆ. *ಟ್ಯೂಬರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿ ಯ ಕೇರಳದ ಶಾಜಿ ಎನ್ ಎಂ 2021ರಲ್ಲಿ ಭಾರತ ಸರಕಾರದಿಂದ ಜೀವ ವೈವಿಧ್ಯ ಸಂರಕ್ಷಣೆ ಗಾಗಿ ಪ್ರಶಸ್ತಿ ಪಡೆದವರು ಸುಮಾರು 300 ಬಗೆಯ ಗೆಡ್ಡೆ ಗೆಣಸು,ಧಾನ್ಯ, ಬೀಜಗಳ ಸಂಗ್ರಹಣೆ ಯೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. *ಗಿನ್ನೆಸ್,ಲಿಮ್ಕಾ ದಾಖಲೆ ಬರೆದ ಕೃಷಿಕ ರಿಜಿ ಜೊಸೆಫ್ ತಾವು ಬೆಳೆದ ಸುಮಾರು 100 ಮಾದರಿಯ ಗೆಡ್ಡೆ ಗೆಣಸು ಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದಾರೆ.ಅತ್ಯಂತ ದೊಡ್ಡ ಕೆಸುವಿನ ಎಲೆ ಬೆಳೆದು ಗಿನ್ನೆಸ್ ದಾಖಲೆ ಮಾಡಿರುವ ಕೇರಳದ ರಿಜಿ ಜೋಸೆಫ್ ಬೃಹತ್ ಗಾತ್ರದ ಅರಸಿನ ಗಡ್ಡೆ ಬೆಳೆದು ಲಿಮ್ಕಾ ದಾಖಲೆ ಮಾಡಿದ್ದಾರೆ ‌ಅವರು ಬೆಳೆದ ಬೃಹತ್ ಗಾತ್ರದ ಸುವರ್ಣ ಗೆಡ್ಡೆ,ಬಳ್ಳಿ ಗೆಣಸು,ಮರಗೆಣಸು ಶಿಬಿರದ ವಿಶೇಷ ಆಕರ್ಷಣೆ ಯಾಗಿದೆ. ಮೇಳದಲ್ಲಿ 370 ಕ್ಕೂ ಅಧಿಕ ಜಾತಿಯ ಗೆಡ್ಡೆ ಗೆಣಸು ಹಾಗೂ 100ಕ್ಕೂ ವಿವಿಧ ಸೊಪ್ಪುಗಳು ಪ್ರದರ್ಶನಗೊಂಡಿದೆ.ಕರ್ನಾಟಕ ಮಹಾರಾಷ್ಟ್ರ ಒರಿಸ್ಸಾ ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ಬೆಳೆಸಿದ,ವಿವಿಧ ತಳಿಗಳ ಅರಸಿನ ,ಶುಂಠಿ, ಕೂವೆಗೆಡ್ಡೆ, ಬೇರು,ಔಷದೀಯ ಗುಣದ ಗೆಡ್ಡೆ ಗಳು ಕೆಸುವಿನ ಗೆಡ್ಡೆ,ಉತ್ತರಿ, ಪರ್ಪಲ್ ಯಾಮ್, ಮರ ಗೆಣಸು,ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸು ಹಾಗೂ ವಿವಿಧ ಜಾತಿಯ ಗೆಡ್ಡೆ ಸಾವಯವ ಸಸಿ,ಸಬ್ಬಿಗೆ,ಕೊತ್ತಂಬರಿ,ಒಂದೆಲಗ,ಹರಿವೆ,ತರಕಾರಿ ಬೀಜ ಸ್ಥಳೀಯ ಬಸಳೆ,ಬದನೆ, ನವಧಾನ್ಯ ಬೀಜಗಳು,ಜೇನು ತುಪ್ಪ ಮೇಳದ ವಿಶೇಷ ಆಕರ್ಷಣೆಯಾಗಿದೆ.ಸೊಪ್ಪು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೆಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಸೊಪ್ಪು ತರಕಾರಿ ಸಸಿ,ಬೀಜಗಳ ಮಾರಾಟದ ಜೊತೆ ಗೆಣಸುಗಳಿಂದ ತಯಾರಿಸಿದ ಕರಿದ ತಾಜಾ ಖಾದ್ಯ, ತಿನಿಸುಗಳ ಮಾರಾಟ ದಲ್ಲಿಯೂ ಜನ ಜಂಗುಳಿ ಕಂಡು ಬಂತು.ಈ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ ಎಂದು ಸಾವಯವ ಗ್ರಾಹಕ ಬಳಗದ ಅಧ್ಯಕ್ಷ ಎಸ್.ಎ.ಪ್ರಭಾಕರ ಶರ್ಮಾ ಹಾಗೂ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಕರಾವಳಿ ಸುದ್ದಿ

ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ 2025.

ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ವಿಜೃಂಭಣೆಯಿAದ ಆಚರಿಸಲಾಗುವುದು.ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳುಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ವಿಲ್ಫೆçÃಡ್ ಗ್ರೆಗೋರಿ ಮೊರಾಸ್, ಝಾನ್ಸಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರ್ಪಿಸುವರು. ಅದೇ ದಿ ಬೆಳಿಗ್ಗೆ 10.30 ಘಂಟೆಗೆ ಅತೀ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ನೆರವೇರಿಸುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪ್ರಾರ್ಥನಾವಿಧಿ.ಜನವರಿ 15ರಂದು ಬೆಳಿಗ್ಗೆ 10.30 ಘಂಟೆಗೆ ಪಶ್ಚಿಮ ಬಂಗಾಳದ ಅಸನ್‌ಸೋಲ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಎಲಿಯಾಸ್ ಫ್ರಾö್ಯಂಕ್ ಅರ್ಪಿಸಲಿರುವರು. ಇದು ವ್ಯಾದಿಷ್ಟರಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಕಾರ್ಮೆಲ್ ಸಭೆಯ ಅತೀ ವಂದನೀಯ ರುಡೋಲ್ಫ್ ಡಿಸೋಜಾ ಅರ್ಪಿಸಲಿರುವರು.ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 6.00 (ಕೊಂಕಣಿ), 7.30 (ಇಂಗ್ಲೀಷ್ ), 9.00 (ಕೊಂಕಣಿ), 1.00 (ಕನ್ನಡ). ಅದೇ ದಿನ 10.30 ಘಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರುವುದು. ಈ ದಿನದ ಆರಂಭಿಕ ಪೂಜಾವಿಧಿಯನ್ನು ಬೆಳಿಗ್ಗೆ 6.00 ಘಂಟೆಗೆ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಹೆನ್ರಿ ಡಿಸೋಜಾ – ಅವರು ನೆರವೇರಿಸಲಿರುವರು.ವಾರ್ಷಿಕ ಹಬ್ಬದ ಎರಡನೆಯ ದಿನ – ಜನವರಿ 15 ರಂದು ಬೆಳಿಗ್ಗೆ 6.30, 7.30, 9.00 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವ್ಯಾದಿಷ್ಟರಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.ನವದಿನಗಳ ನವೇನಾ ಪ್ರಾರ್ಥನೆಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾವಿಧಿಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲ್ಲಿ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು.ಪರಮ ಪ್ರಸಾದದ ಆರಾಧನೆ ಪ್ರತಿ ನವೆನಾ ದಿನಗಳಲ್ಲಿ 11.30 ರಿಂದ 12.45 ಘಂಟೆಯ ವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರಪ್ರಥಮವಾಗಿ ಪ್ರತಿದಿನ ಸಂಜೆಯ 6.00 ಘಂಟೆಯ ಬಲಿಪೂಜೆಯ ಬಳಿಕ ಹಮ್ಮಿಕೊಳ್ಳಲಾಗಿದೆ.ಹೊರೆಕಾಣಿಕೆ: ಮಹೋತ್ಸವದ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಘಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು.ಅನ್ನಸಂತರ್ಪಣೆ ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯುವುದು.ರಕ್ತದಾನ ಹಾಗೂ ಕೇಶದಾನ ಶಿಬಿರ: ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಹಾಗೂ ಕೇಶದಾನ ಶಿಬಿರವನ್ನು ಏರ್ಪಡಿಸಲಾಗಿದೆ.ಎರಡು ವಿಶೇಷ ಯೋಜನೆಗಳ ಅನಾವರಣ: ಯೇಸುಕ್ರಿಸ್ತರ ಜನನದ 2025 ನೇ ಜ್ಯುಬಿಲಿ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಒಂದು ಬಡ ಕುಟುಂಬಕ್ಕೆ ಸಂಪೂರ್ಣ ಮನೆಯನ್ನು ಕಟ್ಟಿಕೊಡುವ ಯೋಜನೆ (ಇನ್‌ಫೆಂಟ್ ಜೀಸಸ್ ಜ್ಯುಬಿಲಿ ಹೌಸಿಂಗ್ ಪ್ರೋಜೆಕ್ಟ್) ಹಾಗೂ ಕಾರ್ಮೆಲ್ ಸಭೆಯ ಲಿಸಿಯಾದ ಸಂತ ತೆರೇಸಾ ಅವರನ್ನು ಸಂತಪದವಿಗೆ ಏರಿಸಿ ಶತಮಾನೋತ್ಸವವನ್ನು ಆಚರಿಚುವ ಸಂದರ್ಭದಲ್ಲಿ ಸುಮಾರು 100 ವಿಧ್ಯಾರ್ಥಿವೇತನಗಳನ್ನು (ಸೆಂಟ್ ತೆರೇಸ್ ಸೆಂಟಿನರಿ ಮೆಮೋರಿಯಲ್ ಸ್ಕೋಲರ್‌ಶಿಪ್ ಪ್ರೋಜೆಕ್ಟ್) ವಿತರಿಸಲಾಗುವುದು.ಈ ಎರಡು ವಿಶಯಗಳನ್ನು ಆಧರಿಸಿ ಒಂದು ವಿಶೇಸ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು:ವಂದನೀಯ ಫಾ. ಮೆಲ್ವಿನ್ ಡಿಕುನ್ಹಾ, ಗುರುಮಠದ ಮುಖ್ಯಸ್ಥರು, ಬಾಲಯೇಸುವಿನ ಪುಣ್ಯಕ್ಷೇತ್ರವಂದನೀಯ ಫಾ. ಸ್ವೀವನ್ ಪಿರೇರಾ, ನಿರ್ದೇಶಕರು, ಬಾಲಯೇಸುವಿನ ಪುಣ್ಯಕ್ಷೇತ್ರವಂದನೀಯ ಫಾ. ದೀಪ್ ಫೆರ್ನಾಂಡೀಸ್, ಕಾರ್ಮೆಲ್ ಸಭೆಸಂಪರ್ಕಕ್ಕೆ: ವಂದನೀಯ ಫಾ. ಸ್ಟೀಫನ್ ಪಿರೇರಾ, ನಿರ್ದೇಶಕರು, ಬಾಲಯೇಸುವಿನ ಪುಣ್ಯಕ್ಷೇತ್ರ – ಫೋನ್: 9844503706

ಕರಾವಳಿ ಸುದ್ದಿ

Annual Feast of Infant Jesus 2025

Mangaluru: The Annual Feast of Infant Jesus at Infant Jesus Shrine, Carmel Hill, – Mangaluru will be celebrated on Jan 14 and 15, 2025.Festal Celebration:The Festal Mass on January 14 at 6.00 pm will be presided over by Rt. Rev. Wilfred Gregory Moras, Bishop of Jhansi Diocese. A special Mass for children will be offered at 10.30 am which will be presided over by Most Rev. Dr Aloysius Paul D’Souza, Bishop Emeritus of Mangalore Diocese.The Festal Mass on January 15 at 10.30 am will be presided over by Rt. Rev. Dr. Elias Frank, Bishop of Asansol and at 6.00 pm will be presided over by Most Rev. Rudolph D’Souza, Pioner of Carmelite Missions in Canada.There will be Masses all through the day too on January 14. Mass in Konkani will be celebrated at 6.00 am, 7.30 am in English, 9.00 am in Konkani and 1.00 am in Kannada. The inagural Mass of the Annual Feast at 6:00 am on January 14, will be presided over by Rt. Rev Dr Hery D’Souza, Bishop of Bellary.The Festal Mass on the Second day (January 15): 6.00 am, 7.30 am, 9.00 am in Konkani; 10.30 Mass for the Children and 1.00 pm in Malayalam (Latin Rite). Mass for the sick and the aged will be celebrated at 10.30 am in Konkani.Children’s Day: A special Mass will be offered for Children on January 11, Saturday at 6.00 pm.Formal InaugurationThe formal inauguration of the festivity will be held on January 4, 2025 at 4.30 pm with the votive offering procession beginning at Holy Cross Church, Kulshekar-Mangaluru. It will be followed by an inter-religious meet and flag hoisting at the Shrine Campus.Nine Days Novena in preparation for the Annual FeastNine days of Novena Prayers are held from January 5 to January 13 during which we have 9 Masses every day. Masses are as follows: In the morning at 6.00, 7.30, 9.00 and 10.30 in Konkani; At noon 1.00 pm in Konkani; In the evening at 4.00 in Malayalam, 5.00 in English and 7.30 in Kannada.Procession of Infant Jesus will be held every day after the evening Mass at 7.15 amEucharistic Adoration will be conducted daily from 11.30 am to 12.45 pm.Anna Santarpane vegetarian meal will be served to the devotees on all the days of the novena and feast days at noon.Blood Donation and Hair Donation Camp will be held on January 9 and 10 from 8.30 am to 1 pm.Two Projects to Mark the Jubilee Year 2025 and the Centenary of St. Thérèse of Lisieux’s CanonizationTo commemorate the Jubilee Year 2025, we are proud to launch the Infant Jesus Jubilee Housing Project. Through this initiative, a complete house will be constructed and gifted to a poor and deserving family, embodying the spirit of hope and service.In honor of the centenary of the canonization of St. Thérèse of Lisieux, we will introduce the St. Thérèse of Lisieux Centenary Scholarship Project. Under this program, 100 scholarships will be awarded to deserving children, supporting their educational aspirations and celebrating the legacy of this remarkable saint.Additionally, a special exhibition is planned to highlight the significance of Jubilee 2025 and to honor St. Thérèse of Lisieux, the Carmelite saint from France who, despite her brief life of just 24 years, became a Doctor of the Church and the Patroness of Missions. Present at the Press meet:Fr Melvin D’Cunha OCD, Superior, St. Joseph’s MonasteryFr Stifan Perera OCD, Director, Infant Jesus Shrine, MangaluruFr Deep Fernandes, Delegate Provincial for the OCDSFor Contact: Fr Stifan Perera, Director, Infant Jesus Shrine, Mangaluru 9844503706

ಕರಾವಳಿ ಸುದ್ದಿ

Grand Launching of Rohan Estate Mukka Riverside

Rohan Estate Mukka is a residential layout developed along the banks of the Nandini River, offering a perfect blend of natural beauty and security. This layout is designed for a comfortable lifestyle, harmonizing with nature, and has evolved into a resort-style residential development. The design and surroundings offer a peaceful retreat, ideal for luxurious living. Luxury Resort-Style Residential DevelopmentRohan Estate Mukka is not a resort itself but a residential layout designed in a resort style. It stands tall in the lap of nature, providing a high-end, luxurious living experience similar to that of a resort. This layout offers residents the opportunity to experience an elite resort-style life.The development is strategically located between the river, sea, and national highway, taking full advantage of the natural environment. The construction integrates natural wealth with luxurious amenities, creating a resort-like residential area. The riverfront has been developed with a specially designed boundary wall, adding to the aesthetic appeal and tourism potential of the area.Such a luxurious layout is unprecedented in the coastal region. The rare combination of riverfront location and an attractive development in a prime area makes Rohan Estate Mukka a highly sought-after residential community. Rohan Corporation’s developments stand out for their unique design and appeal compared to other real estate companies. Rohan Corporation: A Leader in Real EstateRohan Corporation, a pioneering name in Mangaluru’s real estate sector, is known for creating attractive and high-quality residential layouts in prestigious locations. The company emphasizes site selection before finalizing any project, ensuring the location is ideal for future developments.Rohan Corporation revolutionized the real estate market, especially during the COVID-19 pandemic, by introducing Rohan Square in Kapitanio, a massive project that attracted buyers quickly, selling up to 90% of homes and commercial spaces within a month. This innovative approach brought significant profits to investors. Later, the company created a massive residential development in Pakshikere, completing sales within the stipulated time. Rohan City near Bijai, offering 7.5% annual guaranteed returns, is another example of the corporation’s successful ventures. Through these projects, Rohan Corporation has been reshaping the cityscape of Mangaluru. Special Features of Rohan Estate Mukka:• Riverfront residential layout• Gated community for enhanced security• International-quality clubhouse• Marina for recreational boating activities (boating and kayaking)• Infinity swimming pool• Separate swimming pool for children• Family restaurant within the community• Cycling track• Walking track• Outdoor gym• Yoga lawn• Meditation center• Spa• Life-size chessboard• Children’s playground• Skating rink• Badminton court• Billiards• Multipurpose hall• Lodging facilities• Amphitheater• Security features: CCTV cameras, large compound wall, and secure entrance gate• 40-foot concrete main road• 30-foot concrete internal roads• Attractive solar street lighting• 24/7 security at the main entrance• Aesthetic landscaping• Vastu-compliant plots• Rainwater harvesting and water purification plant• Underground drainage system• Suitable for both investment and home construction• Bank loan facilities• Supermarket within the community• Special emphasis on greenery• Future layout management by the corporation itselfRohan Estate Mukka is not only an excellent residential option but also a prime investment opportunity. For more information please contact:ROHAN CORPORATIONRohan City, Main Road Bejai, Mangalore 575004Ph: 98456 07725, 98454 90100, 90363 92628, 98456 07724www.rohancorporation.in

ಕರಾವಳಿ ಸುದ್ದಿ

ಎಸ್ ಡಿ ಎಂ ಯಕ್ಷೋತ್ಸವ ನೂತನ ಸಮಿತಿಗೆ ಚಾಲನೆ. ಯಕ್ಷೋತ್ಸವದಿಂದ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಜಾಗೃತಿ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಶಾಲಾ ಕಾಲೇಜುಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಲಭಿಸುತ್ತಿರುವುದು ಇತ್ತೀಚಿನ ಒಂದು ಉತ್ತಮ ಬೆಳವಣಿಗೆ. ಮೂರೂವರೆ ದಶಕಗಳ ಹಿಂದೆ ಎಸ್ ಡಿ ಎಂ ಲಾ ಕಾಲೇಜಿನಲ್ಲಿ ಪ್ರಾರಂಭವಾದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವದಿಂದಾಗಿ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ವಿಶೇಷ ಜಾಗೃತಿ ಉಂಟಾಗಿದೆ’ ಎಂದು ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2024 – 25 ನೇ ಸಾಲಿನ ನೂತನ ಯಕ್ಷೋತ್ಸವ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಸ್ತುತ ಅಲ್ಲಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಯಕ್ಷೋತ್ಸವ ಎಂದು ಕರೆಯುವುದು ವಾಡಿಕೆಯಾಗಿದೆ. ಧರ್ಮಸ್ಥಳ ಸಂಸ್ಥೆಯ ಯಕ್ಷೋತ್ಸವವೇ ಅದಕ್ಕೆ ಮೂಲ ಪ್ರೇರಣೆ. ವಿವಿಧ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಯಕ್ಷಗಾನದ ಹವ್ಯಾಸಿ ಕಲಾವಿದರಲ್ಲಿ ಹೆಚ್ಚಿನವರು ಬೇರೆ ಬೇರೆ ಕಾಲೇಜು ತಂಡಗಳ ಮೂಲಕ ಯಕ್ಷೋತ್ಸವದಲ್ಲಿ ಭಾಗವಹಿಸಿದವರೇ ಆಗಿದ್ದಾರೆ’ ಎಂದ ಅವರು ಅದಕ್ಕೆ ಕಾರಣವಾದ ಸಂಘಟನಾ ಸಮಿತಿಯನ್ನು ಅಭಿನಂದಿಸಿದರು. ಯಕ್ಷೋತ್ಸವದ ನಿರ್ದೇಶಕರಾದ ಉಪನ್ಯಾಸಕ ಪ್ರೊ. ಪುಷ್ಪರಾಜ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷಗಾನ ತಂಡದ ಸದಸ್ಯರು, ಯಕ್ಷೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕರಾವಳಿ ಸುದ್ದಿ

ದರ್ಶನ್, ಪವಿತ್ರ ಗೌಡ ಸಹಿತ 7 ಮಂದಿ ಆರೋಪಿಗಳಿಗೆ ರೆಗ್ಯುಲರ್ ಜಾಮೀನು.

ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲ್ ಸೇರಿರುವ ದರ್ಶನ್, ಪವಿತ್ರಗೌಡ ಸಹಿತ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿದೆ. ಇದು ಶರ್ತಬದ್ದ ಜಾಮೀನು ಆಗಿದ್ದು, ದರ್ಶನ್ ಬೆನ್ನು ನೋವಿನ ಕಾರಣವೊಡ್ಡಿ ಬೆನ್ನು ಶಸ್ತ್ರ ಚಿಕಿತ್ಸೆ ಮಾಡಲಿಕ್ಕಿದೆಯೆಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ, ಮಧ್ಯಾoತರ ಜಾಮೀನು ಮೇಲೆ ಹೊರಗಿದ್ದಾರೆ. ರೆಗ್ಯುಲರ್ ಜಾಮೀನು ಇವತ್ತು ಸಿಕ್ಕಿರುವುದ್ದರಿಂದ ಅವರಿನ್ನೂ ಬೆನ್ನು ಆಪರೇಷನ್ ಮಾಡುವುದು ಡೌಟ್ ಎನ್ನಲಾಗುತ್ತಿದೆ. ದರ್ಶನ್ ಗೆ ಜಾಮೀನು ಸಿಕ್ಕ ಕೂಡಲೇ ಪೊಲೀಸ್ ಇಲಾಖೆ ಸಭೆ ಸೇರಿ ಮೇಲ್ಮನವಿ ಸಲ್ಲಿಸುವ ಕುರಿತು ಮುಂದಿನ ಹೆಜ್ಜೆಗಳ ಬಗ್ಗೆ ರೂಪುರೇಷೆ ಹಾಕಿ ಕೊಂಡಿದೆ. ಈ ಮದ್ಯೆ ರೇಣುಕಾಸ್ವಾಮಿ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ರೇಣುಕಾಸ್ವಾಮಿಯ ಚಿಕ್ಕಪ್ಪ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಕರಾವಳಿ ಸುದ್ದಿ, ಕರ್ನಾಟಕ ವಾರ್ತೆಗಳು

ಇಂದು ಪಿಡಿಓ ನೇಮಕಾತಿ ಪರೀಕ್ಷೆ. ಪರೀಕ್ಷಾ ಆಡಳಿತ ಮಂದಿ ವಿರುದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ.

ಬ್ರೇಕಿಂಗ್ ನ್ಯೂಸ್: ಡಾ. ಅಶೋಕ್ ಶೆಟ್ಟಿ ಬಿ. ಎನ್.ಕಲ್ಬುರ್ಗಿ: ಇಂದು ರಾಜ್ಯದಲ್ಲಿ ಪಿಡಿಓ ನೇಮಕಾತಿ ಪರೀಕ್ಷೆ ನಡೆದಿದ್ದು, ಕಲ್ಬುರ್ಗಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಆಡಳಿತ ಮಂದಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿ ಬಂದಿವೆ. ಕಲ್ಬುರ್ಗಿಯ ಇಸ್ಲಾಂಬಾದ್ ಕಾಲೋನಿಯಲ್ಲಿರುವ ಲಿಟಲ್ ಫ್ಲವರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿದ್ದರೂ,12 ವಿದ್ಯಾರ್ಥಿಗಳಿಗೆ ಮಾತ್ರ ಬೆಳಗಿನ ಸಾಮಾನ್ಯ ಪ್ರಶ್ನೆ ಪತ್ರಿಕೆಯನ್ನು 20 ನಿಮಿಷ ತಡವಾಗಿ ನೀಡಲಾಗಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದಾರೆ.ಪ್ರಶ್ನೆ ಪತ್ರಿಕೆ ಇಲ್ಲದೆ ಪರೀಕ್ಷೆ ಹೇಗೆ ಬರೆಯಲಿ? ನಮಗೆ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಅನುಮಾನವಿದೆಂದು ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು, ಬೀದರ್, ಕಲ್ಬುರ್ಗಿಯ 840 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಕರಾವಳಿ ಸುದ್ದಿ

ಜಿಲ್ಲಾ ಪ್ರಶಸ್ತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದೇವೆಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮಕ್ಕೆ Mp mla’s ನ್ಯೂಸ್ ಒತ್ತಾಯ

ಮಂಗಳೂರು: ಜಿಲ್ಲಾಡಳಿತ ಈ ಸಲ ಜಿಲ್ಲಾ ಪ್ರಶಸ್ತಿ ನೀಡಿದ್ದರೂ ಕೆಲವು ಸಾಧಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೆಂದು ಬಿಟ್ಟಿ ಪ್ರಚಾರ ಪಡೆದು ಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು Mp mla’s ನ್ಯೂಸ್ ಒತ್ತಾಯಿಸುತ್ತದೆ.

ಕರಾವಳಿ ಸುದ್ದಿ

‘ಪ್ಲಾಸ್ಟಿಕ್ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವ ಅಗತ್ಯ’ ದ.ಕ. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ .ಕೆ.

ಮಂಗಳೂರು: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚು ಬಳಸುವ ಮೂಲಕ  ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಬಹುದು. ಪ್ಲಾಸ್ಟಿಕ್ ನಿರ್ಮೂಲನೆಗೆ ಸ್ಥಳೀಯಾಡಳಿತ ಸಂಸ್ಥೆಗಳು ಶ್ರಮಿಸಿಸುತ್ತಿದ್ದು, ಇದರ ಯಶಸ್ವಿಗೆ  ಸಮುದಾಯದ ಸಹಭಾಗಿತ್ವ ಅಗತ್ಯ. ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರತಿನಿಧಿಗಳಾಗಿ ವಿದ್ಯಾರ್ಥಿಗಳು  ಕಾರ್ಯ ನಿರ್ವಹಿಸಬೇಕು ಎಂದು ದ.ಕ.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ .ಕೆ. ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯಿತಿ ಮತ್ತು ಬಲ್ಮಠದ ಸರ್ಕಾರಿ  ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಭಾಗಿತ್ವದಲ್ಲಿ ಮಂಗಳವಾರ ಬಲ್ಮಠದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಣೆ ಮಾಡದೆ ನೀಡುವ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡಿದರೆ ಸಮರ್ಪಕ ವಿಲೇವಾರಿ ಸಾಧ್ಯ. ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸುವುದರ ಜತೆಗೆ  ಮರುಬಳಕೆ ಮಾಡುವ ಉತ್ಪನ್ನಗಳ  ಬಗ್ಗೆ ಗಮನಹರಿಸಿದರೆ ಪರಿಸರಕ್ಕೆ ಹಾನಿಯಾಗುವುದನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ  ಪ್ರಾಂಶುಪಾಲ ಡಾ ಜಗದೀಶ ಬಾಳ ಅಧ್ಯಕ್ಷತೆ ವಹಿಸಿದ್ದರು.ಅದಾನಿ ಸಂಸ್ಥೆಯ ಎಜಿಎಂ ರವಿ ಜೇರಾ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ವಿತರಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ಅಧ್ಯಕ್ಷ ಬ್ರಾಯನ್ ಪಿಂಟೊ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪುಷ್ಪರಾಜ್ ಜೈನ್ , ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್  ಪೂರ್ವಾಧ್ಯಕ್ಷ ಸಂತೋಷ್ ಶೇಟ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,  ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್. ಉಪಸ್ಥಿತರಿದ್ದರು.  ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Scroll to Top