ಹೊರ ರಾಜ್ಯ ವಾರ್ತೆಗಳು

ಹೊರ ರಾಜ್ಯ ವಾರ್ತೆಗಳು

ಫೆಬ್ರವರಿ 8ಕ್ಕೆ ಬಂಟ್ಸ್ ಅಸೋಸಿಯೇಶನ್ ಪುಣೆ ಇದರ 12ನೇ ವಾರ್ಷಿಕ ಸಮ್ಮಿಲನ.

ಪುಣೆ -ಬಂಟರ ಭವನ ಮರ್ಸಿಡಿಸ್ ಶೋ ರೂಂನ ಹತ್ತಿರ ಪೂಣೆ-ಬೆಂಗಳೂರು ಹೈವೇ ಬಳಿ ಬಂಟ್ಸ್ ಅಸೋಸಿಯೇಶನ್ ಪುಣೆ ಇವರ 12ನೇ ವಾರ್ಷಿಕ ಸಮ್ಮಿಲನವು ಫೆಬ್ರವರಿ 8ರ ಶನಿವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ಚೇರ್‍ಮೇನ್ ಕೆ.ಡಿ. ಶೆಟ್ಟಿ ಚೆಲ್ಲಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೈಂದೂರು ಎಂಎಲ್‍ಎ ಗುರುರಾಜ್ ಗಂಟಿಹೊಳೆ ಮತ್ತು ಸುಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿ ಮಿಸಸ್ ಅಮಿತಾ ರಾವ್ ಪಾಲ್ಗೊಳ್ಳಲಿದ್ದಾರೆ. ಬಂಟ್ಸ್ ಅಸೋಸಿಯೇಶನ್ ಪುಣೆಯು ಇದರ ಅಧ್ಯಕ್ಷ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಇವರ ಸಾರಥ್ಯದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳಿಂದ ಬಂಟ ಸಮಾಜದಲ್ಲಿ ವಿಶಿಷ್ಟವಾದ ಪಾತ್ರ, ಹೆಗ್ಗಳಿಕೆ,ಬಂಟ ಬಾಂಧವರ ಪ್ರೀತಿ – ವಿಶ್ವಾಸಗಳಿಗೆ ಪಾತ್ರವಾಗಿದೆ.

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವ ಸಂಭ್ರಮ: ಶಶಿಕಿರಣ್ ಶೆಟ್ಟಿಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿ

ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ಪುಣೆ-ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ನಿಟ್ಟೆ ಡಿಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಷ್ಕ್ರತ, ಬೆಲ್ಜಿಯಮ್‌ನ ಕಿಂಗ್ ಫಿಲಿಪ್ ಅವರಿಂದ ರ‍್ಡರ್ ಆಫ್ ಲಿಯೋಪೋಲ್ಡ್ ಕಮಾಂಡರ್ ಪದಕವನ್ನು,ಪಡೆದ ಬಂಟ ಸಮಾಜದ ದಿಗ್ಗಜ ವಿಶ್ವ ಶ್ರೇಷ್ಟ ಉದ್ಯೋಗಪತಿ ,ಅಗ್ರಮಾನ್ಯ ಸಮಾಜ ಸೇವಾ ಸಾಧಕರಾದ ಆಲ್ ಕರ‍್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ .ಆಲ್‌ಕರ‍್ಗೊ ಲಾಜಿಸ್ಟಿಕ್ಸ್‌ನ ಸಿ.ಎಸ್.ಆರ್ ವಿಭಾಗ ಅವಶ್ಯ ಫೌಂಡೇಶನ್‌ನ ಮುಖ್ಯಸ್ಥರಾದ ಶಶಿಕಿರಣ್ ಶೆಟ್ಟಿ ಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿಪ್ರಧಾನ ಮಾಡಿ , ವಿವಿಧ ಬಗೆಯ ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ರೀತಿಯಲ್ಲಿ ಫಲ ಪುಷ್ಪ ತರಕಾರಿ ಸೇರಿದಂತೆ, ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ ಶಾಲು, ಹಾರ , ದೇವರ ಮೂರ್ತಿ, ಶಿವಾಜಿ ಪ್ರತಿಮೆ ಸನ್ಮಾನ ಪತ್ರ ಸ್ಮರಣಿಕೆ ನೀಡಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ . ಡಾ ಕೆ .ಪ್ರಕಾಶ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯಾತಿಗಣ್ಯರು ಸನ್ಮಾನಿಸಿದರು.ಇವರ ಪರಿಚಯ ಹಾಗೂ ಸನ್ಮಾನ ಪತ್ರವನ್ನು ರಾಮಕೃಷ್ಣ ಶೆಟ್ಟಿ ಓದಿದರು.ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಯವರು ಕಾರ‍್ಯಕ್ರಮ ನಿರೂಪಿಸಿ ವಂದಿಸಿದರು.ವರದಿ: ಹರೀಶ್ ಮೂಡಬಿದ್ರಿ ಪುಣೆ

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವ ಸಂಭ್ರಮ: ಡಾ.ಕೆ ಪ್ರಕಾಶ್ ಶೆಟ್ಟಿಯವರಿಗೆ ‘’ಬಂಟ ಛತ್ರಪತಿ’’ ಬಿರುದು ಸನ್ಮಾನ.

ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಬೆಂಗಳೂರು ಎಂ ಅರ್ ಜಿ ಗ್ರೂಪ್ ನ ಸಿ ಎಂ ಡಿ ,ಬಂಟ ಸಮಾಜದ ಮೇರು ವ್ಯಕ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಂಗಳೂರು ವಿಶ್ವ ವಿದ್ಯಾನೀಲಯದ ಡಾಕ್ಟರೇಟ್ ಪದಕ ಪುರಸ್ಕ್ರತ, ವಿಶ್ವ ಖ್ಯಾತಿಯ ಸಮಾಜ ಸೇವಕ ,ಕೊಡುಗೈ ದಾನಿ, ಎಲ್ಲಾ ಸಮಾಜದ ಶಕ್ತಿಯಾಗಿರುವ ಸಮಾಜೋದ್ದಾರಕ ಹಾಗೂ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಸಾಧನೆಯ ದಾರಿ ದೀಪ ,ಪ್ರೇರಣಾ ಶಕ್ತಿಯಾಗಿರುವ ಡಾ .ಕೆ ಪ್ರಕಾಶ್ ಶೆಟ್ಟಿಯವರನ್ನು ಸುವರ್ಣ ಮಹೋತ್ಸವ‘’ಬಂಟ ಛತ್ರಪತಿ ‘’ ಎಂಬ ಬಿರುದು ನೀಡಿ ,ಬಂಟ ಸಮಾಜದ ಇತಿಹಾಸದಲ್ಲೇ ದಾಖಲಾಗುವ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಯವರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ನೆರೆದ ಸಾವಿರಾರು ಸಂಖ್ಯೆಯ ಸಮಾಜ ಬಾಂಧವರ ನಡುವೆ ವಾದ್ಯಘೋಷ ,ನೃತ್ಯ ,ಪುಷ್ಪಾರ್ಚನೆ ,ವಿವಿದ ಸಮಿತಿಗಳ ಅಭಿನಂದನೆಗಳೊಂದಿಗೆ ಶಾಲು ಹಾರ ಪಂಡಪುರ ವಿಟ್ಟಲ್ ರುಕ್ಮಿಣಿ ಮೂರ್ತಿ ಶಿವಾಜಿ ಪ್ರತಿಮೆ ,ಸನ್ಮಾನ ಪತ್ರ ಸ್ಮರಣಿಕೆ ನೀಡಿ ಸನ್ಮಾನಿಸಿದರು .ಈ ಸಂದರ್ಭದಲ್ಲಿ ಇವರ ಸಮಾಜ ಸೇವಾ ಕಾರ್ಯದ ಸಾಕ್ಷಚಿತ್ರವನ್ನು ತೋರಿಸಲಾಯಿತು ,ಡಾ ಪ್ರಕಾಶ್ ಶೆಟ್ಟಿ ಯವರ ಪರಿಚಯ ,ಸನ್ಮಾನ ಪತ್ರವನ್ನು ಕು .ಶ್ರಾವ್ಯ ಸಂತೋಷ್ ಶೆಟ್ಟಿ ಯವರು ಓದಿದರು .ಈ ಸಂದರ್ಭದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ ಶಶಿಕಿರಣ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ , ರೂಪಿ ಬಾಸ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ ಲಿ ನ ಎನ್ ಬಿ .ಶೆಟ್ಟಿ ,ಬಿಸಿಸಿಐ ಕಾರ್ಯಕರಿ ಸಮಿತಿ ಸದಸ್ಯ ಪಿ ವಿ ಶೆಟ್ಟಿ, ವಿ ಕೆ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ಕರುಣಾಕರ್ ಎಂ ಶೆಟ್ಟಿ , ,ಸಾಯಿ ರಾಧ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ರವಿ ಶೆಟ್ಟಿ ,ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ ,ಮಸ್ಕತ್ ಮಲ್ಟಿ ಟ್ರೇಡ್ ಅಂಡ್ ಕನ್ಷ್ಟ್ರಕ್ಶನ್ ಎಲ್ ಎಲ್ ಪಿ ಯ ಸಿ ಎಂ ಡಿ ದಿವಾಕರ್ ಶೆಟ್ಟಿ , ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ ,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ , ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ , ಮಾಲ್ವನ್ ತಡ್ಕ ಹಾಸ್ಪಿಟಾಲಿಟಿ ನ ಎಂ ಡಿ ಹಾಲಾಡಿ ಆದರ್ಶ್ ಶೆಟ್ಯಿ ,ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಹಿಳಾ ಕಾರ್ಯಧ್ಯಕ್ಷೆ ಚಿತ್ರಾ ರವಿ ಶೆಟ್ಟಿ,, ಸಾಗರ ಬಂಟರ ಸಂಘದ ಸುಧೀರ್ ಶೆಟ್ಟಿ,ಮುಂಬಯಿ ಬಂಟರ ಸಂಘದ ಸಿಟಿ ರಿಜಿನಲ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಜಯರಾಂ ಶೆಟ್ಟಿ ,ಹುಬಳ್ಳಿ ದಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ ,ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ,ಉಳ್ಳಾಲ ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ , ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಯವರು ಉಪಸ್ಥಿತರಿದ್ದರು .ಹಾಗೂ ಬಂಟರ ಸಂಘದ ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ ,ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ,ಸುವರ್ಣ ಮಹೋತ್ಸವ ಸಮಿತಿಯ ಎಲ್ಲ ಸಮಿತಿಗಳ ಸಮನ್ವಯಕರಾದ ಸುಧೀರ್ ಶೆಟ್ಟಿ ಕಣಂಜಾರು ,ಕೋಶಾಧಿಕಾರಿ ಹೆರ್ಡೆಬೀಡು ಪ್ರಶಾಂತ್ ಶೆಟ್ಟಿ ,ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ವರದಿ: ಹರೀಶ್ ಮೂಡಬಿದ್ರಿ ಪುಣೆ

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ನೇತೃತ್ವದಲ್ಲಿ ಡಾ. ಸುಧಾಕರ್ ಶೆಟ್ಟಿ ಸಂಯೋಜನೆಯಲ್ಲಿ ಪುಣೆಯಲ್ಲಿ ಜ. 19 ರಂದು ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪುಣೆ: ಬಂಟ್ಸ್ ಅಸೋಸಿ ಯೇಶನ್ ಪುಣೆ ವತಿಯಿಂದ ಸಮಾಜ ಕಲ್ಯಾಣ ಸೇವಾ ಕಾರ್ಯದ ಪ್ರಯುಕ್ತ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣ ಶಿಬಿರವು ಜ. 19ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಗುರುನಾನಕ್ ಮೆಡಿಕಲ್ ಫೌಂಡೇಶನ್‌ನ ಗುರುನಾನಕ್ ದರ್ಬಾರ್ ಹಾಲ್, ಹಾಲಿವುಡ್ ಗುರುದ್ವಾರ ಕ್ಯಾಂಪ್ ಪುಣೆ ಇಲ್ಲಿ ನಡೆಯಲಿದೆ.ಪುಣೆ ಬಂಟ್ಸ್ ಅಸೋಸಿಯೇಶನ್ ಅಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗ ದೊಂದಿಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ತ್ರೀರೋಗ ಶಾಸ್ತ್ರ ಮಕ್ಕಳ ರೋಗ ತಪಾಸಣೆ, ಕಣ್ಣು ಹಲ್ಲು ತಪಾಸಣೆ, ಔಷಧ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ಇಸಿಜಿ ಮತ್ತು ಉಚಿತ ಸಕ್ಕರೆ ತಪಾಸಣೆ ನಡೆಯಲಿದೆ. ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ನಡೆಯಲಿರುವ ಶಿಬಿರವು ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ. ಸುಧಾಕ‌ರ್ ಶೆಟ್ಟಿ ಸಂಯೋಜನೆಯಲ್ಲಿ ನಡೆಯಲಿದೆ.ಆರೋಗ್ಯ ತಪಾಸಣಾ ಶಿಬಿರದ ವೈದ್ಯ ಕೀಯ ಸಲಹೆಗಾರರ ಬೋರ್ಡ್‌ನ ಪ್ರಮುಖರಾದ ಡಾ. ಹಂಸರಾಜ್ ಶೆಟ್ಟಿ ಎಂಬಿಎ, ಡಾ.ಸಂಜಯ್ ಕುಲಕರ್ಣಿ, ಡಾ. ಸುಜಯ್ ಹೆಗ್ಡೆ, ಡಾ. ಜ್ಯೋತಿ ಶೆಟ್ಟಿ, ಡಾ. ಪ್ರವೀಣ್ ಆರ್. ಶೆಟ್ಟಿ, ಡಾ.ವಿವೇಕ್ ಹೆಗ್ಡೆ, ಡಾ. ಸಂಜಯ್ ತೆಕವಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರಾದ ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ಉರ್ವಿ ಕೊಠಾರಿ, ಡಾ. ರೋಬರ್ಟ್ ಲೋಬೊ, ವಿಕಾಸ್ ಮಂತೋಲೆ, ಡಾ.ಸಮಿತಾ ಮೂಲಾನಿ, ಡಾ. ಸತ್ಯಶೀಲ ನ್ಯಾಕ್ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ರೋಹಿತ್ ಶೆಟ್ಟಿ (9960337625), ಡಾ.ಸುಧಾಕರ್ ಶೆಟ್ಟಿ (9657616322), ದಿನೇಶ್ ಶೆಟ್ಟಿ (9823019020), ರೇಷ್ಮಾಆರ್. ಶೆಟ್ಟಿ (9881461181) ಅವರನ್ನು ಸಂಪರ್ಕಿಸಬಹುದು.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳು ವಂತೆ ಪುಣೆ ಬಂಟ್ಸ್ ಅಸೋಸಿಯೇ ಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿ ಗುತ್ತು, ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಣೂರು, ಉಪಾ ಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ,ಸತೀಶ್ ರೈ ಕಲ್ಲಂಗಳಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೋಶಾಧಿಕಾರಿ ಸಿಎ ಮನೋಹರ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೊರ ರಾಜ್ಯ ವಾರ್ತೆಗಳು

ಉದ್ಯಮಿ, ಸಮಾಜ ಸೇವಕ ಶಶಿಧರ ಶೆಟ್ಟಿ ಬರೋಡ ಅವರಿಗೆ ಬಂಟರತ್ನ ಪ್ರಶಸ್ತಿ.

ಅಹ್ಮದ್ ಬಾದ್,:ನಿರ್ಭಿತ ಮಾತಿನ, ನೇರನಡೆ ನುಡಿಯ ನಿರಾಡಂಬರಿ ಸಮಾಜ ಸೇವಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರಿಗೆ ಅಹ್ಮದ್ ಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್ ಬಾದ್ ಬಂಟರ ಸಂಘವು ಬಂಟರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅವರಿಗೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

ಹೊರ ರಾಜ್ಯ ವಾರ್ತೆಗಳು

ಕನ್ನಡ ಭವನ ಕಾಸರಗೋಡಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿ ಸಂಘಟಕಿ, ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಆಯ್ಕೆ.

ಕಾಸರಗೋಡು: ವಿವಿಧ ಸಂಘಟನೆಗಳ ಪದಾಧಿಕಾರಿಯಾಗಿ, ವಿಶ್ವ ಸಾಹಿತ್ಯ ಬಳಗದ ಸಂಚಾಲಕಿಯಾಗಿ, ಸಾಹಿತ್ಯ, ಸಾಮಾಜಿಕ ಸೇವಾ ಧರ್ಮವನ್ನು ನಿರಂತರತೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರೇಖಾ ಸುದೇಶ್ ರಾವ್ ಅವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷಯಾಗಿ ಆಯ್ಕೆ ಮಾಡಲಾಗಿದೆ.ಕನ್ನಡ ಭವನದ “ರಜತ ಸಂಭ್ರಮ “ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡಪರ ಕಾರ್ಯಕ್ರಮ ಹಾಗೂ “ಮನೆಗೊಂದು ಗ್ರಂಥಾಲಯ,-ಪುಸ್ತಕ ಸತ್ಯ -ಪುಸ್ತಕ ನಿತ್ಯ, ಜನಜಾಗೃತಿ ಮೂಡಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು ಕಾಸರಗೋಡು ಕನ್ನಡ ಭವನದ ನಿರ್ದೇಶಕ ಡಾ. ಕೊಲಚಪ್ಪೆ ಗೋವಿಂದ ಭಟ್ ನಾಮನಿರ್ದೇಶನ ಮಾಡಿದ್ದು ಕನ್ನಡ ಭವನದ ಗೌರವ ಅಧ್ಯಕ್ಷ ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅನುಮೋದಿಸಿದರು.ಸರ್ವಾನುಮತಿಯಿಂದ ಆಯ್ಕೆಯಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರು ಕನ್ನಡ ಭವನ ಮತ್ತು ಗ್ರಂಥಾಲಯ(ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಕನ್ನಡ ಭವನ “ರಜತ ಸಂಭ್ರಮ “2025 ಈ ಮೇಲಿನ ಕಾರ್ಯಕ್ರಮ ಸಂಯೋಜನೆಯ ಜವಾಬ್ದಾರಿ ಸ್ವೀಕರಿಸಿ, ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ನಿರ್ವಹಿಸಬೇಕೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ ವಾಮನ್ ರಾವ್ ಬೇಕಲ್ ಹಾಗೂ ಕೋಶಾಧಿಕಾರಿ ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ಹೊರ ರಾಜ್ಯ ವಾರ್ತೆಗಳು

ಖ್ಯಾತ ಉದ್ಯಮಿ, ನಿಸ್ವಾರ್ಥ ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳಿಗೆ ತುಳುಕೂಟ ಬೆಳ್ಳಿಹಬ್ಬ ಸಂಭ್ರಮದಲ್ಲಿ ಸನ್ಮಾನ

ಪುಣೆ: ಪುಣೆ ಬಂಟರ ಸಂಘದ ಉಪಾಧ್ಯಕ್ಷ, ತುಳುಕೂಟ ಪುಣೆಯ ಬೆಳ್ಳಿ ಹಬ್ಬ ಸಂಭ್ರಮದ ಗೌರವಾಧ್ಯಕ್ಷ,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 2024 ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ, ಆರ್ಯಭಟ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಉದ್ಯಮಿ, ನಿಸ್ವಾರ್ಥ ಸಮಾಜಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳನ್ನು ತುಳುಕೂಟ ಪುಣೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಇವರುಗಳು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ದ.ಕ.ಸಂಸದ ಬ್ರಜೇಶ್ ಚೌಟ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹೊರ ರಾಜ್ಯ ವಾರ್ತೆಗಳು

ಶಿಕ್ಷಣ ಸೇವೆ ಪವಿತ್ರ ಕಾರ್ಯ – ಜಮೀರ್ ಅಹಮದ್ ಖಾನ್. ಕಾಸರಗೋಡು ಜಾಮಿಯಾ ಸ -ಆದಿಯ ‘ಕ್ವೀನ್ಸ್ ಲ್ಯಾಂಡ್’ ಹಾಸ್ಟೆಲ್ ಉದ್ಘಾಟನೆ

ಕಾಸರಗೋಡು : ಸಮುದಾಯಕ್ಕೆ ಶಿಕ್ಷಣ ನೀಡುವುದು ಪವಿತ್ರ ಕಾರ್ಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.ಕಾಸರಗೋಡು ಜಾಮಿಯಾ ಸ -ಆದಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ‘ಕ್ವೀನ್ಸ್ ಲ್ಯಾಂಡ್’ ಹಾಸ್ಟೆಲ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆತಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಹೇಳಿದರು. ಜಾಮಿಯಾ ಸ -ಆದಿಯ ಸಂಸ್ಥೆ ಎಂಟು ಸಾವಿರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ದವರೆಗೆ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಶಾಫಿ ಸಾದಿ ಅವರು ಇಲ್ಲಿನ ವಿದ್ಯಾರ್ಥಿ ಆಗಿರುವುದು ಸಂತಸದ ವಿಚಾರ. ಎಪಿ ಉಸ್ತಾದ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮತ್ತಷ್ಟು ಶಿಕ್ಷಣ ಸೇವೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.ಕರ್ನಾಟಕ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಜೆಜ್ ನಲ್ಲಿ 540 ಕೋಟಿ ರೂ. ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್, ವಿದೇಶಿ ವ್ಯಾಸಂಗಕ್ಕೂ 20 ಲಕ್ಷ ರೂ. ವರೆಗೆ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.ಮಾಜಿ ಸಚಿವ ಸಿ. ಟಿ. ಅಹಮದ್, ಬಾದಷಾ ಶಾಕಾಫಿ,ಮೌಲಾನಾ ಶಾಫಿ ಸಾದಿ, ನೌಫಲ್, ಅಬೂ ಬಕರ್ ಹಾಜಿ, ಮಹಮದ್ ಅಲಿ ಶಾಕಾಫಿ, ಮಹಿನಾ ಹಾಜಿ, ಹುಸೇನ್ ಸಯಿದಿ, ಜಿ ಎ ಬಾವಾ ಉಪಸ್ಥಿತರಿದ್ದರು.

ಹೊರ ರಾಜ್ಯ ವಾರ್ತೆಗಳು

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ(ಪುಣೆ) ಅವರಿಗೆ ‘ತುಳುನಾಡ ಧನ್ವoತರಿ’ ಬಿರುದು, ಪ್ರಶಸ್ತಿ ಪ್ರಧಾನ

ಪುಣೆ :ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರಿಗೆ ಪುಣೆ ಬಾಣಿರ್ ಬಂಟರ ಭವನದಲ್ಲಿ ನಡೆದ ತುಳುಕೂಟದ ರಜತ ಸಂಭ್ರಮ ಮತ್ತು ತುಳುನಾಡ ಜಾತ್ರೆ ಸಂದರ್ಭದಲ್ಲಿ ‘ತುಳುನಾಡ ಧನ್ವoತರಿ’ ಬಿರುದು ಪ್ರಧಾನ ಮಾಡಲಾಯಿತು. ಒಡಿಯೂರು ಗುರುದೇವಾನಂದ ಸ್ವಾಮೀಜಿ ಮತ್ತು ಕಟೀಲು ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾ ಲಗತ್ತಿ ಐಪಿಎಸ್,ಡಾ. ಜಿ. ಶಂಕರ್, ದಿನೇಶ್ ಶೆಟ್ಟಿ ಕಳತ್ತೂರು,ಪ್ರವೀಣ್ ಶೆಟ್ಟಿ ಪುತ್ತೂರು, ರೋಹಿತ್ ಶೆಟ್ಟಿ ನಗ್ರಿಗುತ್ತು ಮೊದಲಾದ ಗಣ್ಯರ ಸಮ್ಮುಖದಲ್ಲಿ ಡಾ. ಸುಧಾಕರ ಶೆಟ್ಟಿ ಅವರಿಗೆ ಬಿರುದು ಪ್ರಧಾನ ಮಾಡಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಮೂರುವರೆ ದಶಕಗಳ ನಿಸ್ವಾರ್ಥ ಸಮಾಜ ಸೇವೆಗಾಗಿ ಅವರಿಗೆ ತುಳುನಾಡ ಧನ್ವoತರಿ ಬಿರುದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ. ಸುಧಾಕರ ಶೆಟ್ಟಿಯವರಿಗೆ ಈ ಹಿಂದೆ ಹೊರನಾಡ ಕನ್ನಡ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022,ಚಾರ್ ಸಹಿಬಜಾದೆ ಅವಾರ್ಡ್ ದೊರಕಿರುತ್ತದೆ. ಅಷ್ಟೇ ಅಲ್ಲದೆ, ಅವರು ಸತತ ನಾಲ್ಕು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ವೈದ್ಯಕೀಯ ತಂಡದ ಸದಸ್ಯರಾಗಿದ್ದಾರೆ

Scroll to Top