ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಇಂದು ವಿಶ್ವ ಶ್ರವಣ ದಿನಾಚರಣೆ

ಮಂಗಳೂರು: ಯುವ ರೆಡ್ ಕ್ರಾಸ್ ಮಂಗಳೂರು ವಿ.ವಿ., ಫಾದರ ಮುಲ್ಲರ್ ಮೆಡಿಕಲ್ ಕಾಲೇಜಿನ ಸ್ಪೀಚ್ ಮತ್ತು ಹಿಯರಿಂಗ್ ವಿಭಾಗ, ಸೈಂಟ್ ಆಗ್ನೆಸ್ ( ಸ್ವಾಯತ್ತ) ಕಾಲೇಜು ಇವುಗಳ ಸಹಯೋಗದಲ್ಲಿ ಮಾ.4 ರಂದು ಬೆಳಗ್ಗೆ 10.30ಕ್ಕೆ ಸೈಂಟ್ ಆಗ್ನೆಸ್ ಕಾಲೇಜು ಸಭಾಂಗಣದಲ್ಲಿ ವಿಶ್ವ ಶ್ರವಣ ದಿನಾಚರಣೆ, ಶ್ರವಣ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಸೈಂಟ್ ಆಗ್ನೆಸ್ ಕಾಲೇಜಿನ ಉಪ ಪ್ರಾಂಶುಪಾಲೆ ಸಿ.ರೂಪಾ ರಾಡ್ರಿಗಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಫಾದರ್ ಮುಲ್ಲರ್ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ನ ಪ್ರಾಂಶುಪಾಲೆ ಪ್ರೊ.ಸಿಂತಿಯಾ ಸಾಂತಮಯರ್ ಮತ್ತು ಆಡಿಯಾಲಜಿ ವಿಭಾಗದ ಮುಖ್ಯಸ್ಥೆ ಪ್ರೊ.ಪ್ರಶಾಂತಿ ಪೂವಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಯೂತ್ ರೆಡ್ ಕ್ರಾಸ್ ಮಂಗಳೂರು ವಿ.ವಿ.ಯ ನೋಡಲ್ ಅಧಿಕಾರಿ ಡಾ.ಗಾಯತ್ರಿ. ಎನ್.‌ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಿಸೆಂಬರ್ ನಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಲೋಕಾರ್ಪಣೆ: ಐಕಳ ಹರೀಶ್ ಶೆಟ್ಟಿ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆ

ಮಂಗಳೂರು: ನಿರಂತರ ಸಮಾಜ ಕಾರ್ಯಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ತೊಡಗಿಸಿಕೊಂಡಿದೆ. ಮುಲ್ಕಿಯಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಮಹಾದಾನಿ ಡಾ ಕನ್ಯಾನ ಸದಾಶಿವ ಶೆಟ್ಟಿಯವರ ಆಶಯ, ಆಶೀರ್ವಾದಿಂದ ಸಂಕೀರ್ಣದ ಕೆಲಸ ಪ್ರಗತಿಯಲ್ಲಿದೆ. ಸಂಕೀರ್ಣದಲ್ಲಿ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಅವರ ಹೆಸರಿನಲ್ಲಿ ವೇದಿಕೆ ಇದೆ. ಇದರ ಜೊತೆಗೆ ಕಿರು ಸಭಾಂಗಣ, ಧರ್ಮಚಾವಡಿ, ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯೂ ಇದೆ. ಡಿಸೆಂಬರ್ ತಿಂಗಳಲ್ಲಿ “ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ” ಲೋಕಾರ್ಪಣೆಗೊಳ್ಳಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟ ಅವರು ತಿಳಿಸಿದರು. ಅವರು ಬಂಟ್ಸ್ ಹಾಸ್ಟೆಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಒಕ್ಕೂಟದ ಮಹಾ ನಿರ್ದೇಶಕ ತೋನ್ಸೆ ಆನಂದ ಶೆಟ್ಟಿ ಅವರು ಸಭೆಯನ್ನು ಉದ್ಘಾಟಿಸಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಮಧ್ಯಮವರ್ಗದವರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ. 40 ವರ್ಷಗಳ ಇತಿಹಾಸ ಇರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾದ ಬಳಿಕ‌ ಒಕ್ಕೂಟದ ಚಿತ್ರಣವನ್ನೇ ಬದಲಾಯಿಸಿದರು ಎಂದರು.ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಐಕಳರ ಸಂಘಟನಾ ಚತುರತೆ, ದಿನನಿತ್ಯ ಓಡಾಟ, ದಾನಿಗಳ ಸಂಪರ್ಕದಿಂದ ಒಕ್ಕೂಟ ಎತ್ತರಕ್ಕೆ ಬೆಳೆದಿದೆ ಎಂದರು.ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ ಒಕ್ಕೂಟಕ್ಕೆ ಯುವಕರನ್ನು ಸೆಳೆಯುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷರೊಂದಿಗೆ ಚರ್ಚಿಸಿ ಯುವ ಸಮಾವೇಶ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಉದ್ಯಮಿ, ದಾನಿಗಳಾದ ರಾಜೇಂದ್ರ ವಿ ಶೆಟ್ಟಿ ಪಂಜುರ್ಲಿ ಗ್ರೂಪ್ಸ್, ಶಶಿಧರ್ ಶೆಟ್ಟಿ ಇನ್ನಂಜೆ, ರಾಜೇಶ್ ಶೆಟ್ಟಿ ರಾಕ್ಷಿ ಡೆವಲಪರ್ಸ್, ಬೆಳ್ಳಾಡಿ ಅಶೋಕ್ ಶೆಟ್ಟಿ, ಅರವಿಂದ್ ಆನಂದ್ ಶೆಟ್ಟಿ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ ಪಡುಕುದೂರು, ವಸಂತ ಶೆಟ್ಟಿ, ರತ್ನಾಕರ ಶೆಟ್ಟಿ ಎಕ್ಕಾರ್, ಸಂತೋಷ್ ಕುಮಾರ್ ಹೆಗ್ಡೆ, ರತ್ನ ಪಿ. ಶೆಟ್ಟಿ, ಚಿತ್ರ ಆರ್. ಶೆಟ್ಟಿ, ಆರತಿ ಆಳ್ವ, ಹುಂತ್ರಿಕೆ ಸುಧಾಕರ್ ಶೆಟ್ಟಿ, ಅಕ್ಕುಂಜೆ ಸತೀಶಚಂದ್ರ ಶೆಟ್ಟಿ, ಸನ್ಮಿತ್ ಬಾಬು ಶೆಟ್ಟಿ, ಸುದೇಶ್ ವಿ.ಶೆಟ್ಟಿ, ರಾಜೇಶ್ ಶೆಟ್ಟಿ ತೆಳ್ಳಾರ್, ಹರಿಪ್ರಸಾದ್ ರೈ, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಶ್ರೀಧರ್ ಶೆಟ್ಟಿ ಆರೂರು, ಆನಂದ್ ಶೆಟ್ಟಿ ಕಾವೂರು ಸೇರಿದಂತೆ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು.ಸಭೆಯಲ್ಲಿ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರು ಉಪಸ್ಥಿತರಿದ್ದರು.ಸುರೇಶ್ ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು.ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ‌ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್ ನಲ್ಲಿ ಸೈಬರ್ ಕ್ರೈಮ್ ಮಾಹಿತಿ ಕಾರ್ಯಕ್ರಮ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ನಲ್ಲಿ ಸೈಬರ್‌ ಕ್ರೈಮ್‌ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಬೆಳಗ್ಗಿನ ಬಲಿ ಪೂಜೆಯ ಬಳಿಕ ಚರ್ಚ್ ನ ತೆರೆದ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ವಾಮಂಜೂರಿನಲ್ಲಿರುವ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಪ್ರದೀಪ್ ನಾಗನ ಗೌಡ ಅವರು ಮಾಹಿತಿ ನೀಡಿದರು. ಸೈಬರ್ ಅಪರಾಧಗಳು ಹೇಗೆ ನಡೆಯುತ್ತವೆ, ಸಾರ್ವಜನಿಕರು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕು, ಮೊಬೈಲ್‌ ಫೋನ್‌ ಗಳಿಗೆ ಅಪರಿಚಿತ ಆ್ಯಪ್‌ ಗಳು, ಸಂದೇಶಗಳು, ವಾಟ್ಸಪ್ ಲಿಂಕ್ ಗಳು ಬಂದಾಗ ಅವುಗಳನ್ನು ನಿಭಾಯಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರು ವಿವರಿಸಿದರು. ಜನರ ಖಾತೆಗಳಲ್ಲಿರುವ ಹಣವನ್ನು ಸೈಬರ್ ಕಳ್ಳರು ಕಸಿದು ಕೊಳ್ಳುವ ಕುರಿತು ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಚರ್ಚ್ ನ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಅವರ ಪ್ರಶ್ನೆ ಮತ್ತು ಸಂಶಯಗಳಿಗೆ ಉತ್ತರ ನೀಡಿದರು.ಚರ್ಚ್ ನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್, ಪೊಲೀಸ್ ಸಿಬಂದಿ ಬೀರೇಂದ್ರ, ಹನುಮಂತ ಅವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮುಲ್ಲಕಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ದತ್ತು ಪಡೆದಿರುವ ರೋಟರಿ ಕ್ಲಬ್ ಹಿಲ್‌ಸೈಡ್ ಮಂಗಳೂರು ಇವರು ಮಕ್ಕಳಿಗೆ ಮತ್ತು ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ನೆರವು ನೀಡುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿರುತ್ತಾರೆ. ಈ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ರೋಟರಿ ಅನುದಾನದಲ್ಲಿ ಶಾಲೆಯ ಮುಂಭಾಗದಲ್ಲಿ ಮಕ್ಕಳಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಲೋಹದ ತಗಡಿನ ಮೇಲ್ಛಾವಣಿಯನ್ನು ಅಳವಡಿಸಲಾಯಿತು. ಇದರ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3181 ಇದರ ಗವರ್ನರ್ ಆದ ರೋ. ಶ್ರೀ ರಾಮಕೃಷ್ಣ.ಪಿ.ಕೆ ಇವರು ನೆರವೇರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮೀಶ್ ಅವರು ಮಾತನಾಡುತ್ತಾ, “ಇದೊಂದು ಉತ್ತಮ ಯೋಜನೆಯಾಗಿದ್ದು, ಶಾಲೆಗೆ ಅನುಕೂಲವಾಗಲಿದೆ” ಎಂದು ತಿಳಿಸಿ, ಶಾಲಾ ಪರವಾಗಿ ರೋಟರಿ ಕ್ಲಬ್ ಹಿಲ್‌ಸೈಡ್ ಇದರ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಹಿಲ್ಸ್ ನ ಅಧ್ಯಕ್ಷರಾದ ರೋ.ಪೀಟರ್ , ಕಾರ್ಯದರ್ಶಿ ರೋ.ವಾಸದೇವ ಶೆಟ್ಟಿಗಾರ್, ರೋ. ಶ್ರೀನಿವಾಸ್ ಕಿಣಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಿ ಉಸ್ಮಾನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.Photos:Sathish Kapikad

ಪ್ರಾದೇಶಿಕ ವಾರ್ತೆಗಳು

ಕೌಶಲ್ಯಾಭಿವೃದ್ಧಿಯಿಂದ ವೃತ್ತಿ ಜೀವನಕ್ಕೆ ನೆರವು-ಉಪನ್ಯಾಸಕಿ ಡಾ.ಸುಮನ.ಬಿ.

ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ರಕ್ತನಿಧಿ ಕೇಂದ್ರದಲ್ಲಿ ಒಂದು ತಿಂಗಳು ಪ್ರಾಯೋಗಿಕ ತರಬೇತಿ ಪಡೆದ ದ್ವಿತೀಯ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಲಾಯಿತು.ಪ್ರಮಾಣ ಪತ್ರ ವಿತರಿಸಿದ ಉಪನ್ಯಾಸಕಿ, ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯೆ ಡಾ.ಸುಮನ.ಬಿ. ಮಾತನಾಡಿ ” ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ನೀಡುವ ಸೇವೆಯೊಂದಿಗೆ ದಾದಿಯರು ಹಾಗೂ ಸಹಾಯಕ ಸಿಬ್ಬಂದಿ ನೀಡುವ ಸೇವೆಯೂ ಅತ್ಯಮೂಲ್ಯವಾಗಿದೆ. ಅರೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಸಂಬAಧಿಸಿ ಪಡೆಯುವ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಭವಿಷ್ಯದಲ್ಲಿ ವೃತ್ತಿ ಜೀವನಕ್ಕೆ ನೆರವಾಗುತ್ತದೆ ‘ ಎಂದರು.ರಕ್ತನಿಧಿ ಕೇಂದ್ರದ ತಾಂತ್ರಿಕ ಮೇಲ್ವಿಚಾರಕಿ ಮರಿಯಾ ಆರತಿ ಸೋನ್ಸ್ ಮಾತನಾಡಿ ” ವಿದ್ಯಾರ್ಥಿಗಳು ರಕ್ತ ಸಂಗ್ರಹ, ವರ್ಗೀಕರಣ, ರಕ್ತ ಹೊಂದಾಣಿಕೆ ಪರೀಕ್ಷೆ, ರಕ್ತದ ಘಟಕಗಳ ವರ್ಗೀಕರಣ ಸಹಿತ ಬ್ಲಡ್‌ಬ್ಯಾಂಕ್‌ಗೆ ಪೂರಕವಾದ ಪ್ರಾಯೋಗಿಕ ತರಬೇತಿ ಪಡೆದಿದ್ದು ಉದ್ಯೋಗಕ್ಕೆ ನೆರವಾಗಲು ಪ್ರಮಾಣ ಪತ್ರ ನೀಡಲಾಗಿದೆ ‘ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯರಾದ ಗುರುದತ್ ನಾಯಕ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ರಕ್ತನಿಧಿ ಕೇಂದ್ರದ ತಂತ್ರಜ್ಞರಾದಪ್ರಿಯಾ, ಪ್ರತ್ಯಕ್ಷಿ, ನಾಗಭೂಷಣ್, ಪ್ರಿಯದರ್ಶಿನಿ, ವತ್ಸಲಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಯೆನೆಪೋಯ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು: ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಶಿಕ್ಷಣ ವಿಭಾಗ ಮತ್ತು ಪ್ರಥಮ ವರ್ಷದ ಎಂ.ಎಸ್ಸಿ ನರ್ಸಿಂಗ್ ವಿಭಾಗದ ವತಿಯಿಂದ ಡಿಜಿಟಲ್ ಶಿಕ್ಷಣಶಾಸ್ತ್ರ ಬೋಧನ -ಕಲಿಕೆಯಲ್ಲಿ ಕಲೆ ವಿಷಯದ ಬಗ್ಗೆ ಸಂಸ್ಥೆಯ ಯೆಂಡೋರೆನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು.ಸಮ್ಮೇಳನ ಉದ್ಘಾಟಿಸಿದ ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಮಾತನಾಡಿ “ವಿದ್ಯಾರ್ಥಿಗಳು ಮತ್ತು ಬೋಧಕರು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು . ಡಿಜಿಟಲ್ ನೈತಿಕತೆ ಮತ್ತು ಆಧುನಿಕ ಶಿಕ್ಷಣದಲ್ಲಿ ಲಭ್ಯವಿರುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದರು.ಮುಖ್ಯ ಅತಿಥಿಯಾಗಿದ್ದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಶ್ವಿನಿ ದತ್ .ಆರ್.ಅವರು ಪರಿವರ್ತನಾಶೀಲ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜ್ಯಗಳ ೩೫೦ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದ ಅಧ್ಯಕ್ಷೆ ಡಾ. ಪ್ರಿಯಾ ರೇಷ್ಮಾ ಅರಾನ್ಹಾ ಸ್ವಾಗತಿಸಿ, ಕಾರ್ಯದರ್ಶಿ ನಿತ್ಯಶ್ರೀ ಬಿ.ವಿ.ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮಸಂಗೀತ ಗುರುಗಳಿಂದ ಚಾಲನೆ

ನಗರದ ಸಂಗೀತ ಭಾರತಿ ಫೌಂಡೇಶನ್ ದ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಗುರುಗಳಾದ ಶ್ರೀಮತಿ ಬಸ್ತಿ ಕವಿತಾ ಶೆಣೈ, ಶ್ರೀಮತಿ ವಿಭಾ ನಾಯಕ್, ಶ್ರೀಮತಿ ಶ್ರೀಲತಾ ಫ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಗೀತ ಭಾರತಿ ಫೌಂಡೇಶನ್ ದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ , ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್ ನಾಯಕ್ , ಕಾರ್ಯದರ್ಶಿ ಡಾ ಉಷಾಪ್ರಭಾ ಎನ್ ನಾಯಕ್ , ಟ್ರಸ್ಟಿ ರಮೇಶ್ ಕೆಜಿ, ಖಚಾಂಚಿ ಕರುಣಾಕರ ಬಳ್ಕೂರು, ಸದಸ್ಯೆ ಶ್ರೀ ಸೌಮ್ಯ ಕಾಮತ್ ಉಪಸ್ಥಿತರಿದ್ಧರು. ಪೂರ್ವಾರ್ಧಸಲ್ಲಿ ವಿಭಾ ಹೆಗ್ಡೆ ಮತ್ತು ಶಿವಾನಿ ಮಿರಾಜ್ ಕರ್ ಇವರಿಂದ ಶಾಸ್ತ್ರೀಯ ಜುಗಲ್ ಬಂಧಿ ಖಾರ್ಯಕ್ರಮ ನಡೆಯಿತು. ಇವರಿಗೆ ಹಾರ್ಮೋನಿಯಂ ನಲ್ಲಿ ಮೇಧಾ ಭಟ್, ತಬ್ಲದಲ್ಲಿ ವಿಜೇತಾ ಹೆಗ್ಡೆ, ತಂಬೂರದಲ್ಲಿ ಪ್ರತೀಕ್ಷ ಪ್ರಭು, ಶಾವರಿ ಸಾಥ್ ನೀಡಿದರು. ಉತ್ತರಾರ್ಧದಲ್ಲಿ ವಯೋಲಿನ್ ಟ್ರಯೋ ಕಾರ್ಯಕ್ರಮವನ್ನು ಸಂಗೀತಾ ಶಂಕರ್ ಮತ್ತು ನಂದಿನಿ ಶಂಕರ್ , ರಾಗಿಣಿ ಶಂಕರ್ ನಡೆಸಿಕೊಟ್ಟರು. ಇವರಿಗೆ ತಬ್ಲದಲ್ಲಿ ಅನುರಾಧ ಪಾಲ್ ಸಾಥ್ ನೀಡಿದರು. ಈ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ , ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್, ಡಾ ದಯಾನಂದ ಫೈ, ಕರ್ಣಾಟಕ ಬ್ಯಾಂಕ್ , ಮುದ್ರಾ ಪ್ರಿಂರ್ಟಸ್ ಸಹ ಪ್ರಾಯೋಜಕತ್ವವನ್ನು ನೀಡಿದ್ದಾರೆ

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ದ.ಕ.ಜಿಲ್ಲಾ ಆಡಳಿತ ಮಂಡಳಿ ಚುನಾವಣೆ-ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ

ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.ಸಿಎ ಶಾಂತಾರಾಮ ಶೆಟ್ಟಿ -1005, ಡಾ.ಸುಮನ.ಬಿ.-876, ಡಾ.ಸತೀಶ್ ರಾವ್-870,ಡಾ. ಬಿ.ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844,ಪುಷ್ಪರಾಜ್ ಜೈನ್-835, ಪಿ.ಬಿ.ಹರಿಪ್ರಸಾದ್ ರೈ-810, ಯತೀಶ್ ಬೈಕಂಪಾಡಿ-797, ಸಚೇತ್ ಸುವರ್ಣ- 762, ಗುರುದತ್ .ಎಂ.ನಾಯಕ್-762. ಮತ ಗಳಿಸಿ ಜಯಶಾಲಿಗಳಾದರು.ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ.22 ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ .ಯು. ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ .ಬಿ. ಕಾರ್ಯ ನಿರ್ವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಯೂನಿವರ್ಸಲ್ ಕೋಚಿಂಗ್ ಸೆಂಟರ್ ಬೆಳ್ಳಿಹಬ್ಬ. ಐಎಎಸ್, ಐಪಿಎಸ್, ಕೆಎಎಸ್ ಉಚಿತ ಪರೀಕ್ಷಾ ತರಬೇತಿ

ಮಂಗಳೂರು: ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆ 25ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಕರ್ನಾಟಕ ಸೇರಿ ಭಾರತದಾದ್ಯಂತ 8036 ಕ್ಕೂ ಹೆಚ್ಚು IAS/IPS/KAS/PDO/ESI/PSI ಮತ್ತು ಇತರೇ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಕರ್ನಾಟಕದ 100 ಅಭ್ಯರ್ಥಿ ಗಳಿಗೆ ಉಚಿತ IAS/KAS ಪರೀಕ್ಷಾ ಪೂರ್ವ ತರಬೇತಿ ನೀಡಲು ನಿರ್ಧರಿಸಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದೆ. ಅಧಿಕಾರಿಗಳಾಗಲು ಬಯಸುತ್ತಿರುವ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಪಡೆದುಕೊಳ್ಳಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಯೂನಿವರ್ಸಲ್ ಕೋಚಿಂಗ್ ಸೆಂಟರ್, ಅತ್ತಿಗುಪ್ಪೆ, ವಿಜಯನಗರ, ಬೆಂಗಳೂರು :9686664983, 080-23396403/409 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆಯ ನಿರ್ದೇಶಕರಾದ ಆರ್. ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ.

ಬೆಂಗಳೂರು_ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಕನ್ನಡ ಪ್ರಭ, ಏಷ್ಯಾನೆಟ್ ಸುವರ್ಣ ಟಿವಿ ನ್ಯೂಸ್ ವತಿಯಿಂದ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಚೆಲುವರಾಯ ಸ್ವಾಮಿ,ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಗಣ್ಯರು ಹಲವರು ಉಪಸ್ಥಿತರಿದ್ದರು.

Scroll to Top