ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ನಡೆದು ಬಂದ ದಾರಿಯನ್ನು ಮರೆಯದೆ ಸಮಾಜ ಸೇವೆ ಮಾಡೋಣ – ಕೆ.ಡಿ.ಶೆಟ್ಟಿ. ಪುಣೆ ಬಂಟ್ಸ್ ಅಸೋಸಿಯೇಷನ್ಸ್ ನ 12ನೇ ವಾರ್ಷಿಕ ಸಮಾರಂಭದ ಸಂಪೂರ್ಣ ವರದಿ

ನಮಗೆ ಜೀವನದಲ್ಲಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕ್ರತಿಯನ್ನು ತಿಳಿ ಹೇಳಿ ಸುಸಂಸ್ಕ್ರತರನ್ನಾಗಿ ಮಾಡಿದ ಮಾತಾ ಪಿತರ ಸೇವೆ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಹಾಗೆಯೇ ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವುದು ಕೂಡಾ ನಮ್ಮ ಧರ್ಮ ಎಂದು ಅರಿಯಬೇಕು. ನಾವು ನೀಡುವ ಯಾವುದೇ ದಾನ, ಧರ್ಮ, ಸೇವೆ ಯಾವುದೇ ಇರಲಿ ಅದು ನಮ್ಮ ತಂದೆ ತಾಯಿಯವರ ಆಶೀರ್ವಾದ ಮತ್ತು ದೈವ ದೇವರ ಕೃಪೆಯಿಂದ ಸಾಧ್ಯವಾಗಿದೆ. ನಾವು ಮಾಡಿದ ಸೇವೆಯ ಫಲ ನಮ್ಮ ಮಕ್ಕಳಿಗೆ ಸಿಗಬಹುದು. ಬಂಟ ಸಮಾಜಕ್ಕೆ ಸಂಘದ ಮೂಲಕ ಮಾನವೀಯತೆಯ ಸೇವೆ ಸಿಗಲಿ. ತಾವುಗಳು ಸಂಘದ ಮೂಲಕ ಹಾಕಿದ ಮೂರು ಯೋಜನೆಗಳು ಇಂದಿನ ದಿನಕ್ಕೆ ನಮ್ಮ ಸಮಾಜಕ್ಕೆ ಖಂಡಿತವಾಗಿ ಬೇಕಾಗಿದೆ. ದೈವ ದೇವರ ಆಶೀರ್ವಾದ ಹಿಡಿದುಕೊಂಡು ಬಂದಿದ್ದೇವೆ. ಇಲ್ಲಿ ನೆಲೆ ನಿಂತು ಬೆಳೆದಿದ್ದೇವೆ. ಬಂಟ ಸಮಾಜಕ್ಕಾಗಿ ನಮ್ಮ ಸಂಸ್ಕ್ರತಿಯನ್ನು ಬೆಳೆಸಬೇಕು. ಯಾವುದೇ ದ್ವೇಷ ಬೇದ ಭಾವ ಎನ್ನದೆ ಒಗ್ಗಟ್ಟಿನಿಂದಾಗಿ ನಾವು ಇನ್ನಷ್ಟು ಬೆಳೆಯಬೇಕು. ಸುಖ ಸಂಪತ್ತಿನಲ್ಲಿರುವ ನಾವು ಜೀವನದಲ್ಲಿ ಹಿಂದೆ ನಡೆದು ಬಂದ ದಾರಿಯನ್ನು ಮರೆಯದೆ ತಮ್ಮಿಂದಾದಷ್ಟು ಸಮಾಜ ಸೇವೆಯನ್ನು ಮಾಡೋಣ ಎಂದು ಮುಂಬಯಿ ಭವಾನಿ ಶಿಪ್ಪಿಂಗ್ ಪ್ರೈ ಲಿಮಿಟೆಡ್ ನ ಚೇರ್ಮನ್ ಕೆ.ಡಿ ಶೆಟ್ಟಿಯವರು ನುಡಿದರು. ಪುಣೆ ಬಂಟ್ಸ್ ಅಸೋಸಿಯೇಷನ್ ನ 12 ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 8 ರಂದು ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನ ಬಂಟರ ಭವನ ಬಾಣೇರ್ ಇಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಕೆ.ಡಿ ಶೆಟ್ಟಿಯವರು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿಯವರು ಸಮಾಜಕ್ಕಾಗಿ ಹಾಕಿಕೊಂಡ ಯೋಜನೆಗಳು ಸಂಘದ ಮಾಜಿ ಅಧ್ಯಕ್ಷರುಗಳು ಸಮಾಜ ಬಾಂಧವರ ಬಲದಿಂದ ದೊಡ್ಡ ಮರವಾಗಿ ಬೆಳೆಯಲಿದೆ. ಸ್ವಂತ ಕಟ್ಟಡ ಆಗಬೇಕೆಂಬ ಇಚ್ಛೆ ಕೂಡಾ ಪೂರ್ಣಗೊಳ್ಳಲಿದೆ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಪುಣೆಯ ಮುಕುಟದಂತಿರುವ ಈ ಸುಂದರ ಭವನ ನಿರ್ಮಾಣ ಮಾಡುವಲ್ಲಿ ಅವರ ಶ್ರಮ, ಸಮಾಜದ ಮೇಲಿನ ಕಾಳಜಿ, ಹಿಡಿದ ಕಾರ್ಯ ಮಾಡಿಯೇ ತೀರುತ್ತೇನೆ ಎಂಬ ಛಲದಿಂದ ಆಗಿದೆ. ಇಂದು ಈ ಭವನದ ಚಾವಡಿಯಲ್ಲಿರುವ ಶಕ್ತಿಗಳ ಕೃಪೆ, ಅವರ ತಂದೆ ತಾಯಿಯವರ ಆಶೀರ್ವಾದ, ಸಮಾಜದ ಹಿರಿಯ ಬಾಂಧವರ ಪ್ರೋತ್ಸಾಹ ಸಹಕಾರದಿಂದ ಅವರ ಕೈಯಲ್ಲಿ ಈ ಭವನ ಆಗಿದೆ. ಅದರ ಹಿಂದಿರುವ ಕಷ್ಟ ಅವರಿಗೆ ಮಾತ್ರ ತಿಳಿದಿದೆ. ನಮ್ಮ ಜನ್ಮ ಭೂಮಿಯ ಮಣ್ಣಿನ ಗುಣದ ಶಕ್ತಿ, ದೈವ ದೇವರ ಆಶೀರ್ವಾದ ಮತ್ತು ನಮ್ಮ ನಾಯಕತ್ವ ಗುಣದಿಂದ ಎಲ್ಲರನ್ನು ಸೇರಿಸಿಕೊಂಡು ಸಮಾಜವನ್ನು ಬೆಳೆಸುವ ಶಕ್ತಿ ನಮಗಿದೆ. ಸಮಾಜಮುಖಿಯಾದ ಸೇವೆಯೊಂದಿಗೆ ಮುಂದುವರಿಯೋಣ ಎಂದರು. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಾಲಿವುಡ್ ಖ್ಯಾತ ನಟಿ ಅಮೃತಾ ರಾವ್, ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್, ಉಪಾಧ್ಯಕ್ಷರುಗಳಾದ ಡಾ. ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಟಿ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಲ್ಪವೃಕ್ಷ ಹೂ ಅರಳಿಸಿ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಿನಿ ಎಂ ಶೆಟ್ಟಿ, ತೇಜಸ್ವಿನಿ ಶೆಟ್ಟಿ, ರಕ್ಷಿತಾ ಶೆಟ್ಟಿಯವರು ಪ್ರಾರ್ಥನೆಗೈದರು. ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಓದಿದರು.ರೋಹಿತ್ ಶೆಟ್ಟಿಯವರು ಮಾತನಾಡಿ, ಪುಣೆಯ ನಗರ ದೊಡ್ಡದಾದಂತೆ ನಮ್ಮ ಸಮಾಜದ ಅಭಿವೃದ್ದಿಗಾಗಿ ಪುಣೆ ಬಂಟ್ಸ್ ಅಸೋಸಿಯೇಷನ್ ಸ್ಥಾಪನೆಯ ಉದ್ದೇಶ ಆಗಿದ್ದರೂ ಕೂಡಾ ಪುಣೆಯ ಎಲ್ಲಾ ಬಂಟ ಸಮಾಜ ಬಾಂಧವರಿಗಾಗಿ ಸೇವೆ ಮಾಡುವ ದ್ಯೇಯ ನಮ್ಮದು. ಬಂಟ ಸಮಾಜದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ತಂದೆ ತಾಯಿಯಿಂದ ಸಿಗುತ್ತದೆ. ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ನಾವು ಮುಂದುವರಿದವರು. ದೈವ ದೇವರ ಆಶೀರ್ವಾದ ಪಡೆದ ನಾವು ಶ್ರದ್ದೆಯಿಂದ ಕಾರ್ಯ ಕೈಗೊಂಡರೆ ಸಮಾಜದ ಸಂಘಟನೆ ಗಟ್ಟಿಯಾಗಿ ಸಮಾಜದ ಅಭಿವ್ರದ್ದಿಗೆ ಪೂರಕವಾಗಿ ಕೆಲಸ ಮಾಡಲು ಸಾದ್ಯ ಎಂಬುದನ್ನು ಗಣೇಶ್ ಹೆಗ್ಡೆ ಮತ್ತು ಮಾಜಿ ಅಧ್ಯಕ್ಷರುಗಳು ತೋರಿಸಿಕೊಟ್ಟಿದ್ದಾರೆ. ಉತ್ತಮ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜ ಮುಖಿಯಾದ ಸೇವೆ ಮಾಡುವ ಉದ್ದೇಶ ನಮ್ಮದು. ಬಂಟ್ಸ್ತ್ ಅಸೋಸಿಯೇಷನ್ ವಿವಾಹ ವೇದಿಕೆ, ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಾವಕಾಶ ಸಮಿತಿ, ಆಪತ್ಭಾಂದವ ಸಮಿತಿ ಎಂಬ ಮೂರು ಸಮಾಜಮುಖಿ ಯೋಜನಾ ಸಮಿತಿಗಳನ್ನು ರಚಿಸಿದ್ದೇವೆ. ಹಾಗೆಯೇ ಸಮಾಜದ ಹೆಣ್ಣು ಮಕ್ಕಳ ಮದುವೆಗೆ ಪೂರಕವಾಗಿ ಸಾಮೂಹಿಕ ವಿವಾಹ ಮಾಡುವ ಯೋಜನೆ ಕೂಡ ನಮ್ಮದು. ನಮ್ಮ ಸಮಾಜದ ಬಾಂಧವ್ಯ ಮತ್ತು ಸಂಘಟನೆಗಳನ್ನು ಬೆಳೆಸುವ ಈ ಯೋಜನೆಗಳಿಗೆ ತಮ್ಮೆಲ್ಲರ ಸಹಕಾರ ಸಿಗಲಿ. ಮಾತೃ ಪ್ರಧಾನವಾದ ಸಮಾಜದಲ್ಲಿ ಕಾರ್ಯ ಮಾಡುವವರು ನಮ್ಮ ಜೊತೆ ನಿಂತವರು ಬಹಳಷ್ಟು ಮಂದಿ ಇದ್ದಾರೆ. ನಮ್ಮ ಅತಿಥಿಗಳು ಕೆ.ಡಿ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ ಉತ್ತಮ ಪ್ರೇರಣಾತ್ಮಕ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಬಂಟರ ಭವನದ ರೂವಾರಿ ಸಂತೋಷ್ ಶೆಟ್ಟಿಯವರ ಸಹೋದರತ್ವದ ಉತ್ತಮ ಸಹಕಾರ ಮತ್ತು ಪ್ರೋತ್ಸಾಹ ಸಿಕ್ಕಿದೆ. ಗಣೇಶ್ ಹೆಗ್ಡೆಯವರ ಸಲಹೆ, ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳ ಸಹಕಾರ, ನಮ್ಮ ಮಹಿಳಾ ಶಕ್ತಿ, ನಮ್ಮ ಎಲ್ಲಾ ಸದಸ್ಯರು, ಯುವ ವಿಭಾಗ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ ಎಂದರು.ಮುಖ್ಯ ಅತಿಥಿ ಕೆ.ಡಿ ಶೆಟ್ಟಿಯವರನ್ನು ಬಂಟ್ಸ್ ಅಸೋಸಿಯೇಷನ್ ವತಿಯಿಂದ ಶಾಲು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಗೌರವ ಅತಿಥಿಗಳಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಟಿ ಅಮೃತಾ ರಾವ್ ರವರನ್ನು ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತಿಥಿಗಳನ್ನು ಕ್ರಮವಾಗಿ ಸ್ನೇಹಾ ರೋಹನ್ ಶೆಟ್ಟಿ, ಭವ್ಯರಾಣಿ ಎಸ್ ಶೆಟ್ಟಿ, ನಿಧಿ ರೋಹಿತ್ ಶೆಟ್ಟಿಯವರು ಪರಿಚಯಿಸಿದರು. ವಿಶೇಷವಾಗಿ ಬಂಟ್ಸ್ ಅಸೋಸಿಯೇಷನ್ ದಶಮ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿ ಎರಡು ವರ್ಷಗಳ ತಮ್ಮ ಕಾರ್ಯಾವಧಿಯಲ್ಲಿ ನಿಜಕ್ಕೂ ಉತ್ತಮ ಕಾರ್ಯಗೈದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರ್ ದಂಪತಿಗಳನ್ನು ಶಾಲು ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘಕ್ಕಾಗಿ ನಿರಂತರ ಉತ್ತಮ ಸೇವೆ ನೀಡಿದ ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತುರವರನ್ನು ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಡುಪಿಯ ಖ್ಯಾತ ವಕೀಲರಾದ ರತ್ನಾಕರ್ ಹೆಗ್ಡೆ ಮಟ್ಟಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ನ ಮೂಲಕ ಮೂರು ಸಮಾಜಮುಖಿ ಸೇವಾಕಾರ್ಯಗಳ ನೂತನ ಸಮಿತಿಯನ್ನು ರಚನೆ ಮಾಡಿ ಸಂಘದ ಅಧ್ಯಕ್ಷ ರೋಹಿತ್ ಶೆಟ್ಟಿ ಸಭೆಯಲ್ಲಿ ಘೋಷಿಸಿದರು. ಮೊದಲದನೆಯದಾಗಿ ಬಂಟ್ಸ್ತ್ ಅಸೋಸಿಯೇಷನ್ ವಿವಾಹ ವೇದಿಕೆ ಇದರ ಕಾರ್ಯಾಧ್ಯಕ್ಷರಾಗಿ ಮಹೇಶ್ ಹೆಗ್ಡೆ ಪೊಳಲಿ, ಬಂಟ್ಸ್ ಅಸೋಸಿಯೇಷನ್ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಾವಕಾಶ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ್ ರೈ ಹಾಗೂ ಆಪತ್ಭಾಂದವ ಸಮಿತಿಯ ಕಾರ್ಯಾಧ್ಯಕ್ಷರಾಗಿ ರಂಜಿತ್ ಶೆಟ್ಟಿಯವರನ್ನು ಆಯ್ಕೆ ಮಾಡಿ ಅವರನ್ನು ವೇದಿಕೆಯಲ್ಲಿ ಗೌರವಿಸುವ ಮೂಲಕ ಜವಾಬ್ದಾರಿ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಗಣ್ಯರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು. ಪುಣೆ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿಯವರನ್ನು ಸ್ಮರಣಿಕೆ ನೀಡಿ ಸತ್ಕರಿಸಿದರು. ಅಲ್ಲದೇ ಬಂಟ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು, ವಿಧ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಬಂಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಅತಿಥಿ ಗಣ್ಯರು ಟ್ರೋಫಿ ನೀಡಿ ಗೌರವಿಸಿದರು. ಅತಿಥಿ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬಂಟ್ಸ್ ಅಸೋಸಿಯೇಷನ್ ನ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ಮತ್ತು ಪ್ರಶಂಸ ಕಾಪು ತಂಡದವರಿಂದ ಬಲೆ ತೆಲಿಪುಲೆ ಹಾಸ್ಯಮಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ಅಕ್ಷತಾ ಸುಜೀತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ರವರು ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಧನ್ಯವಾದಗೈದರು. ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ವರದಿ: ಹರೀಶ್ ಮೂಡಬಿದ್ರಿ ಪುಣೆ

ಪ್ರಾದೇಶಿಕ ವಾರ್ತೆಗಳು

ಕೆಎಂಸಿ ಮಂಗಳೂರಿನಲ್ಲೊಬ್ಬರು ಸೂಪರ್ ಡಾಕ್ಟರ್ ದೀಪಕ್ ಆರ್. ಮಡಿ. ರೋಗಿಗಳ ಪಾಲಿಗೆ ಇವರೇ ಪ್ರತ್ಯಕ್ಷ ದೇವರು.

ವಿಶೇಷ ವರದಿ-ಡಾ.ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: ಕೆಎಂಸಿ ಆಸ್ಪತ್ರೆಯು ಹಲವು ಪ್ರಖ್ಯಾತ ವೈದ್ಯರುಗಳನ್ನೊಳಗೊಂಡಿದ್ದು ,ಅತ್ಯಾಧುನಿಕ ಮಾದರಿಯ ಚಿಕಿತ್ಸಾ ವಿಧಾನಗಳಿಂದ ಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಜನಮನ್ನಣೆ ಪಡೆದಿದೆ. ಕೆಎಂಸಿ ಅತ್ತಾವರ ಮತ್ತು ಕೆಎಂಸಿ ಜ್ಯೋತಿ ಆಸ್ಪತ್ರೆಗಳಲ್ಲಿ ವಿವಿಧ ಖಾಯಿಲೆಗಳಿಗೆ ಹಲವು ನುರಿತ ತಜ್ಞರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು ಇದು ಜನಮನ್ನಣೆ ಗಳಿಸಿದೆ. ಮಂಗಳೂರಲ್ಲಿ ಬಹುತೇಕ ಮಂದಿಗೆ ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಸಾಮಾನ್ಯ ಕಾಯಿಲೆಗಳು ಇದ್ದು ,ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಉತ್ತಮ ವೈದ್ಯಕೀಯ ತಜ್ಞರ ಅಗತ್ಯತೆ ಇರುತ್ತದೆ. ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಜ್ಯೋತಿಯಲ್ಲಿ ಹಲವು ಉತ್ತಮ ವೈದ್ಯಕೀಯ ತಜ್ಞರಿದ್ದು ಇವರ ಪೈಕಿ ,ಮೆಡಿಸಿನ್ ವಿಭಾಗದ ಅಡಿಷನಲ್ ಪ್ರೊಫೆಸರ್ ಮತ್ತು ಕೆಎಂಸಿ ಆಸ್ಪತ್ರೆಯ ಉಪ ಅಧೀಕ್ಷಕರಾಗಿರುವ ದೀಪಕ್ ಆರ್. ಮಡಿಯವರು ಗಮನಸೆಳೆಯುತ್ತಾರೆ. ಜನಮನ್ನಣೆ ಗಳಿಸಿದ್ದಾರೆ. ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ, ಮಂಗಳವಾರ, ಗುರುವಾರ, ಶನಿವಾರದಂಡು ಓಪಿಡಿ ವಿಭಾಗದಲ್ಲಿ ಹೊರರೋಗಿಗಳಿಗೆ ಲಭ್ಯವಿರುವ ದೀಪಕ್ ಮಡಿಯವರು ವೈದ್ಯಕೀಯ ಜಗತ್ತು ಕಂಡಿರುವಂತಹ ಅತ್ಯುತ್ತಮ ಮತ್ತು ಅನುಭವೀ ತಜ್ಞ ವೈದ್ಯರಾಗಿದ್ದರೆ. ಇವರು ರೋಗಿಗಳನ್ನು ಪರೀಕ್ಷಿಸುವ ರೀತಿ ಮತ್ತು ಅವರಿಗೆ ಧೈರ್ಯ ತುಂಬುವ ಹಾಗೂ ವಿಶ್ವಾಸ ಭರಿಸುವ ವಿಧಾನ ಎಲ್ಲರಿಗೂ ಇಷ್ಟವಾಗುತ್ತದೆ. ಎಂತಹ ಕ್ಲಿಷ್ಕಕರ ಕಾಯಿಲೆ ಇದ್ದರೂ ದೀಪಕ್ ಮಡಿಯವರು ರೋಗಿಗಳನ್ನು ಪರೀಕ್ಷಿಸಿದರೆಂದರೆ ರೋಗಿಗಳ ಮುಕ್ಕಾಲು ಪಾಲು ಕಾಯಿಲೆ ವಾಸಿಯಾದದ್ದಂತೆ. ಅಷ್ಟೊಂದು ಧೈರ್ಯವನ್ನು ಅವರು ತುಂಬುತ್ತಾರೆ. ತನ್ನ ಬಳಿಗೆ ಬರುವ ರೋಗಿಗಳನ್ನು ಆತ್ಮೀಯತೆಯಿಂದ ಕಾಣುವ ಇವರು ರೋಗಿಗಳ ಪಾಲಿಗೆ ಪ್ರತ್ಯಕ್ಷ ದೇವರಿದ್ದಂತೆ. ನಿಸ್ವಾರ್ಥ ವೈದ್ಯಕೀಯ ಸಮಾಜಸೇವಾ ಮನೋಭಾವದ ದೀಪಕ್ ಮಡಿಯವರು ಸಾವಿರಾರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಅವರ ಕೈಗುಣವು ಉತ್ತಮವಾಗಿದೆ. “ವೈದ್ಯೋ ದೇವೋಭವ” ಎನ್ನುತ್ತೇವೆ. ಇದು ದೀಪಕ್ ಮಡಿಯವರ ಪಾಲಿಗೆ ಅಕ್ಷರಶಃ ಸತ್ಯವಾಗಿದೆ.

ಪ್ರಾದೇಶಿಕ ವಾರ್ತೆಗಳು

ಡಾ. ಅಗರಿ ನವೀನ್ ಭಂಡಾರಿಯವರಿಗೆ ಸಮಾಜಶ್ರೀ ರಾಜ್ಯ ಪ್ರಶಸ್ತಿ.

ಬೆಂಗಳೂರು -ಅನ್ವೇಷಣೆ ಸಾಂಸ್ಕತಿಕ ಅಕಾಡೆಮಿ (ರಿ) ಬೆಂಗಳೂರು ಇವರು ಮಾರ್ಚ್ 2ರ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರಿ ರತ್ನ, ಹಿರಿಯ ಸಮಾಜ ಸೇವಕ, ರಾಜಕೀಯ ಮುಂದಾಳು, ಪುತ್ತೂರಿನ ಡಾ.ಅಗರಿ ನವೀನ್ ಭಂಡಾರಿ ಬೆಂಗಳೂರು ಇವರಿಗೆ ಸಮಾಜಶ್ರೀ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆಯನ್ನು ಡಾ. ಅಗರಿ ನವೀನ್ ಭಂಡಾರಿ ಅವರು ನೀಡಲಿ ಎಂದು ಈ ಸಂದರ್ಭ ಅನ್ವೇಷಣೆ ಸಾಂಸ್ಕತಿಕ ಅಕಾಡೆಮಿ (ರಿ) ಬೆಂಗಳೂರು ಇವರು ಶುಭ ಹಾರೈಸಿದ್ದಾರೆ.ಸಮಾಜಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ನವೀನ್ ಭಂಡಾರಿ ಅವರಿಗೆ Mp mla ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಕಾಶ್ಮೀರ್ ಮಿನೇಜಸ್ ಇನ್ನಿಲ್ಲ. ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ಡಾ. ಜೆ.ಬಿ. ಸಲ್ಡಾನ್ಹಾ ಹಾಗೂ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರಿಂದ ತೀವ್ರ ಸಂತಾಪ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 1991-93 ಅವಧಿಯ ಕೇಂದ್ರೀಯ ಮಾಜಿ ಅಧ್ಯಕ್ಷ, ಸಮಾಜ ಸೇವಕ, ಸಂಘಟನಾ ಚತುರ ಹಾಗೂ ನಿವೃತ್ತ ಶಿಕ್ಷಕ ಬೆಳ್ತಂಗಡಿ ನಿವಾಸಿ 79 ವರ್ಷ ಪ್ರಾಯದ ಕಾಶ್ಮೀರ್ ಮಿನೇಜಸ್ ರವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರಂದು ಬುಧವಾರ ನಿಧನ ಹೊಂದಿದರು.ಉಜಿರೆಯ ರತ್ನಮಾನಸದ ಮುಖ್ಯ ಪಾಲಕರಾಗಿ 1972 ರಿಂದ 2012 ಕಾರ್ಯನಿರ್ವಹಿಸಿರುವ ಇವರು ಉಜಿರೆ ಶ್ರೀ ಧರ್ಮಸ್ಥಳ ಸೆಕೆಂಡರಿ ಶಾಲೆ, ಧರ್ಮಸ್ಥಳ ಎಸ್.ಡಿ.ಎಂ. ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ, ಎಸ್.ಡಿ.ಎಂ. ರೆಸಿಡೆನ್ಸಿಯಲ್ ಕಾಲೇಜಿನ ನಿರ್ದೇಶಕರಾಗಿ, ಕೃಷಿ ತಜ್ಞರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಸಂಘಟನೆಯಲ್ಲಿ ನಿಷ್ಟಾವಂತರಾಗಿ ಸೇವೆಯನ್ನು ಸಲ್ಲಿಸಿ ಸಂಘಟನೆ ಬಲಿಷ್ಠಗೊಳಿಸುವುದರೊಂದಿಗೆ ಅದರ ಅಭಿವೃದ್ಧಿಗೆ ಕಾರಣಕರ್ತರಾದ ಇವರ ನಿಧನಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ, ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ ಬಂಟ್ವಾಳ, ಮಾಜಿ ಅಧ್ಯಕ್ಷರಾದ ಎಲ್.ಜೆ. ಫೆರ್ನಾಂಡಿಸ್, ಜೆರಾಲ್ಡ್ ಡಿಕೋಸ್ತ ಹಾಗೂ ಎಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ತಾಲೂಕು ಬಿಲ್ಲವ ಸಂಘ – ಅಧ್ಯಕ್ಷರಾಗಿ ಜಿತೇಂದ್ರ ಪುನರಾಯ್ಕೆ

ಮಂಗಳೂರು: ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಜಿತೇಂದ್ರ ಜೆ. ಸುವರ್ಣ ಪುನರಾಯ್ಕೆಯಾಗಿದ್ದಾರೆ. ರವಿವಾರ ನಡೆದ ಸಂಘದ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಪದಾಧಿಕಾರಿಗಳ ಪಟ್ಟಿ ಇಂತಿವೆ: ರಂಜನ್ ಮಿಜಾರ್ (ಗೌರವಾಧ್ಯಕ್ಷ), ಸುರೇಶ್‌ ಪೂಜಾರಿ ಕುಳಾಯಿ (ಪ್ರಧಾನ ಕಾರ್ಯದರ್ಶಿ), ಶ್ರೀನಿವಾಸ್ (ಜೊತೆ ಕಾರ್ಯದರ್ಶಿ), ಪ್ರಜ್ವಲ್ (ಸಂಘಟನಾ ಕಾರ್ಯದರ್ಶಿ), ಶೋಭಾ ಕೇಶವ್ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಕೋಟ್ಯಾನ್, ಅವಿನಾಶ್ ಪಾಲ್ದಾನೆ, ಮೀನಾಕ್ಷಿ ಆರ್.ಕೆ., ವೆಂಕಟೇಶ್ ದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಚಂದ್ರ, ಪದ್ಮನಾಭ ಮರೋಳಿ, ತುಕರಾಮ, ಲಕ್ಷ್ಮಣ ಸಾಲ್ಯಾನ್, ಸಾಧು ಪೂಜಾರಿ, ಸುನೀತಾ ಗೋಪಾಲಕೃಷ್ಣ ಪಾರ್ವತಿ ಅಮಿನ್, ಕೇಶವ, ಸಲಹೆಗಾರರಾಗಿ ಚರಣ್ ಕೆ., ರಾಘವ ಕೆ., ರಾಮಚಂದ್ರ ಸಾಲ್ಯಾನ್, ಮೋಹಿತ್ ಸುವರ್ಣ, ಅಶೋಕ್ ಕುಮಾ‌ರ್, ಪುರುಷೋತ್ತಮ ಪೂಜಾರಿ, ಲೋಕನಾಥ್ ಪೂಜಾರಿ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕುಂಪಲ ರಥೋತ್ಸವ-2025 ಆಮಂತ್ರಣ ಪತ್ರಿಕೆ ಬಿಡುಗಡೆ

ಉಳ್ಳಾಲ: ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಕುಂಪಲ ರಥೋತ್ಸವ-2025 ಇದರ ಆಮಂತ್ರಣ ಪತ್ರಿಕೆಯನ್ನು ಕಂಕನಾಡಿ ಗರಡಿ ಕ್ಷೇತ್ರದ ಶ್ರೀ ಗಂಗಾಧರ ಶಾಂತಿ ಭಾನುವಾರ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಸೇವಾ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ : ನೆಲಮೂಲ ಸಂಸ್ಕೃತಿಗೆ ಒತ್ತು ನೀಡಿ: ಸಮ್ಮೇಳನಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕರೆ

ಒಡಿಯೂರು: ‘ತುಳುನಾಡಿನಲ್ಲಿ ಧಾರ್ಮಿಕ, ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಭಾಷೆಯ ಜಾಗೃತಿ ಮೂಡಿಸಲಾಗುತ್ತದೆ. ನಾಲ್ಕು ಕಾಲ ಬದುಕುವ, ಉಳಿಯುವಂತಹ ಸಾಹಿತ್ಯ ರಚನೆಯಾಗಬೇಕು. ನೆಲಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತಹ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕು’ ಎಂದು ತುಳು – ಕನ್ನಡ ಸಾಹಿತಿ, ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕರೆ ನೀಡಿದ್ದಾರೆ.ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ರಥೋತ್ಸವ ಹಾಗೂ ತುಳುನಾಡು ಜಾತ್ರೆಯ ಸಂದರ್ಭದಲ್ಲಿ ‘25ನೇ ತುಳು ಸಾಹಿತ್ಯ ಸಮ್ಮೇಳನ’ ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಬಂಗಾರದ ಬಟ್ಟಲಾಗಿದ್ದ ತುಳುನಾಡು ಈಗ ಬರಡು ನೆಲವಾಗುತ್ತಿದೆ. ಯುವಕರು ಕೃಷಿ ತ್ಯಜಿಸಿ ಪೇಟೆ ಕಡೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ವಿಚಾರ. ಇಂದು ತುಳು ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಆಗುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ’ ಎಂದವರು ವಿಷಾದಿಸಿದರು. ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುವರು – ಒಡಿಯೂರು ಶ್ರೀಗಳು:ಕಾರ್ಯಕ್ರಮವನ್ನು ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ‘ತುಳು ಭಾಷೆ ಮತ್ತು ತುಳು ಸಂಸ್ಕೃತಿ ವಿಶ್ವ ಮಾನ್ಯವಾಗಿದೆ. ತುಳುವರಿಗೆ ಎಲ್ಲೆಡೆಯೂ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ತುಳುವರು ತುಳು ಭಾಷೆಯನ್ನು ಮರೆಯಬಾರದು. ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು. ಇಂದು ತುಳುವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದು, ತುಳು ಭಾಷೆಯ ಮಾನ್ಯತೆಗೆ ಒಗ್ಗಟ್ಟಿನ ಹೋರಾಟ ನಡೆಸಬೇಕು’ ಎಂದರು.ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳುಲಿಪಿಯಲ್ಲಿ ಬರೆದ ‘ಶ್ರೀಮದ್ಭಗವದ್ಗೀತೊ’ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ‘ಮಾಯಿಪ್ಪಾಡಿ ವೀರ ಪುಳ್ಕೂರ ಬಾಚೆ’ ತುಳು ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ ಮತ್ತು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅತಿಥಿಗಳಾಗಿದ್ದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ತುಲಿಪು ಕಾರ್ಯಕ್ರಮ:‘ತುಳು ಬಾಸೆ – ಸಂಸ್ಕೃತಿದ ಜಾಗೃತಿಗಾದ್’ ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಿದ ಸಮ್ಮೇಳದ ವಿಚಾರಗೋಷ್ಠಿ, ತುಲಿಪು ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ಅರುಣ್ ಕುಮಾರ್ (ತುಳುನಾಡ್ದ ಸಂತ ಪರಂಪರೆ), ಡಾ.ನವೀನ್ ಕುಮಾರ್ ಮರಿಕೆ (ತುಳುನಾಡ್ದ ಜಾನಪದ ಪರಂಪರೆ), ಮಲ್ಲಿಕಾ ಜೆ.ರೈ ಗುಂಡ್ಯಡ್ಕ (ತುಳುನಾಡ್ದ ಸಾಹಿತ್ಯ ಪರಂಪರೆ) ಪ್ರಬಂಧಗಳನ್ನು ಮಂಡಿಸಿದರು.‘ತುಳುಸಿರಿ’ ಸಮ್ಮಾನ:ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪಾಡ್ದನ ಕಲಾವಿದೆ ಕರ್ಗಿ ಶೆಡ್ತಿ, ತುಳು-ಕನ್ನಡ ಸಿನಿಮಾ ನಿರ್ಮಾಪಕ ಪುಷ್ಪರಾಜ ರೈ ಮಲಾರುಬೀಡು, ಸಮಾಜ ಸೇವಕ ಹರೀಶ ಶೆಟ್ಟಿ ಮಾಡ, ಸಾವಯವ ಕೃಷಿಕ ಕೃಷ್ಣಪ್ಪ ಪುರುಷ ಕೇಪು ಮತ್ತು ಆರಕ್ಷಕ ಸೇವೆಗಾಗಿ ಪ್ರವೀಣ್ ರೈ ನಡುಕೂಟೇಲು ಅವರಿಗೆ ‘ತುಳುಸಿರಿ ಮಾನಾದಿಗೆ’ ನೀಡಿ ಸನ್ಮಾನಿಸಲಾಯಿತು. ಬಳಿಕ ಸಮ್ಮೇಳನಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಫಲ – ಮಂತ್ರಾಕ್ಷತೆ, ಸ್ಮರಣಿಕೆ ನೀಡಿ, ಶಾಲು – ಪೇಟ ತೊಡಿಸಿ ಸ್ವಾಮೀಜಿ ಸನ್ಮಾನಿಸಿದರು.ನಿತ್ಯಶ್ರೀ ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳುಸಿರಿ ಪುರಸ್ಕೃತರನ್ನು ಪರಿಚಯಿಸಿದರು.ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿ, ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾದೇಶ್ ಭಂಡಾರಿ ವಂದಿಸಿದರು. ಕೊನೆಯಲ್ಲಿ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ಜರಗಿತು.

ಪ್ರಾದೇಶಿಕ ವಾರ್ತೆಗಳು

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ್ ಶೆಟ್ಟಿ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.ಉಳಿದಂತೆ ಸಮಿತಿ ಸದಸ್ಯರಾಗಿ ಪ್ರಧಾನ ಅರ್ಚಕರಾದ ವೇ.ಮೂ.ಮಹೇಶ್ ಭಟ್,ದೇವಿಪ್ರಸಾದ್ ಪೂಂಜಾ ಬರಂಗರೆ,ಸುಧೀರ್ ಕುಮಾರ್, ಕೆ.ಕಾನ್ಸಲೆ,ಕೆ.ಮೋಹನದಾಸ್ ಪೂಜಾರಿ,ನವೀನ್ ಕುಮಾರ್ ಪಣೋಲಿಬೈಲ್, ಅಣ್ಣುನಾಯ್ಕ್ ನಗ್ರಿ,ಸುಜಾತಗಣೇಶ್ ಶೆಟ್ಟಿ,ಬೇಬಿ ಯೋಗೀಶ್ ಪೂಜಾರಿ ಅವರು ನೇಮಕಗೊಂಡಿದ್ದಾರೆ.ನೂತನ ವ್ಯವಸ್ಥಾಪನಾ ಸಮಿತಿ ಸೋಮವಾರ ದೇವಳದಲ್ಲಿ ಅಧಿಕಾರ ಸ್ವೀಕರಿಸಿದೆ.ಈ ಸಂದರ್ಭ ದೇವಳದ ಆಡಳಿತಾಧಿಕಾರೊಯಾಗಿದ್ದ ತಾರನಾಥ ಸಾಲಿಯಾನ್ ಪಿ.,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್,ವ್ಯವಸ್ಥಾಪನಾ ಸಮಿತಿಯ ಮಾಜಿ‌ಅಧ್ಯಕ್ಷ ಎ.ಸಿ.ಭಂಡಾರಿ,ಸಜೀಪಮುನ್ನೂರು ಮೂರ್ತೆದಾರರ ಸೇ.ಸ.ಸಂಘದ ಅಧ್ಯಕ್ಷ ಸಂಜೀವಪೂಜಾರಿ ಬೊಳ್ಳಾಯಿ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ-ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ

ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಸಿಟಿವಿಎಸ್ ತಂಡ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡಿಗೆ ಸೇರಿದ ತೆಂಗಿನಗರಿ ಹಾಗೂ ಬಾಲಕನ ಕುತ್ತಿಗೆಗೆ ಹಾಕಿಕೊಂಡಿದ್ದ ಚೈನ್ ಹೊರತೆಗೆಯುವ ಮೂಲಕ ಜೀವದಾನ ನೀಡಿರುವ ವೈದ್ಯರ ಸಾಧನೆಯನ್ನು ಗುರುತಿಸಿ ವೈದ್ಯರ ತಂಡವನ್ನು ಸನ್ಮಾನಿಸಿ ಮಾತನಾಡಿದರು.ವೆನ್ಲಾಕ್ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಸುರೇಶ್ ಪೈ ನೇತೃತ್ವದ ತಂಡ ಅಪೂರ್ವ ಶಸ್ತ್ರಚಿಕಿತ್ಸೆ ಮೂಲಕ ಬಾಲಕನಿಗೆ ಜೀವದಾನ ನೀಡುವ ಮೂಲಕ ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾದ ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗೂ ಪೈಪೋಟಿ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುರೇಶ್ ಪೈ, ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಇಲ್ಲಿನ ಚಿಕಿತ್ಸೆ ಬಗ್ಗೆ ಯಾವುದೇ ಮುಜುಗರಬೇಡ. ಖಾಸಗಿ ಆಸ್ಪತ್ರೆಗೂ ಮೀರುವಂತಹ ಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ. ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇವೆ ಎಂದರು.ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ ಕ್ಯುಲರ್ ಸರ್ಜರಿ ವಿಭಾಗದ ಡಾ.ಸುರೇಶ್ ಪೈ, ಡಾ.ಸೂರಜ್ ಪೈ, ನಸಿರ್ಂಗ್ ಅಧಿಕಾರಿ ವಹೀದಾ , ಡಾ.ಪ್ರಣವ್, ಡಾ.ಶುಭಂ ಗುಪ್ತಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ಡಾ.ಸುಧಾಕರ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪದ್ಮನಾಭ ಅಮೀನ್, ಪ್ರಮೀಳಾ ಈಶ್ವರ್, ಶಶೀಧರ ಕೊಠಾರಿ, ಅನೀಲ್, ನಾಮನಿದೇಶೀತ ಪಾಲಿಕೆ ಸದಸ್ಯ ಸತೀಶ್, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಸಮರ್ಥ್ ಭಟ್, ಕಾರ್ಮಿಕ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ವಹಬ್ ಕುದ್ರೋಳಿ, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಟಿ.ಸಿ ಗಣೇಶ್ , ಕಾರ್ಮಿಕ ಘಟಕದ ಮುಖಂಡರಾದ ಜಯರಾಜ್ ಅಂಚನ್, ಸೀತಾರಾಮ್ ಶೆಟ್ಟಿ , ನೀತ್ ಶರಣ್ ಮತ್ತಿತರು ಉಪಸ್ತಿತರಿದ್ದರು.ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಶನಿವಾರ ಕಮಲ್ ಹುಸೇನ್ (12) ಎಂಬಾತ ಆಟವಾಡುತ್ತಿದ್ದಾಗ ಹತ್ತಿರದಲ್ಲಿದ್ದ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು. ಇದರಿಂದ ತೆಂಗಿನಗರಿಯ (ಅಂದಾಜು 20 ಸೆಂ.ಮೀ. ಉದ್ದ) ಭಾಗ ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯೊಳಗೆ ಹೊಕ್ಕಿತ್ತು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ತಕ್ಷಣವೇ ಮಂಗಳೂರಿನ ವೆನ್ಸಾಕ್ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಂಗಿನ ಗರಿಯ ತುಂಡು ಹಾಗೂ ಚೈನ್ ಹೊರತೆಗೆದು ಬಾಲಕನಿಗೆ ಹೊಸ ಬದುಕು ನೀಡಲಾಗಿತ್ತು.ಚಿತ್ರಗಳು- ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಚಿತ್ರೀಕರಣ ಪೂರೈಸಿದ “ಪಿಲಿಪಂಜ” ಸಿನಿಮಾ

ಮಂಗಳೂರು: ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ನಾನದ ತುಳು ಸಿನಿಮಾ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿದೆ.ಒಟ್ಟು ಮೂರು ಹಂತಗಳಲ್ಲಿ ಚಿತ್ರೀಕರಣ ಮಾಡಿದ್ದ ಈ ಸಿನಿಮಾ ಫೇ: 2ರಿಂದ ಸಾಲೆತ್ತೂರು, ಕುಳಾಲು, ಕಾಡುಮಠ, ಕುಡ್ತಮುಗೇರು ಪರಿಸರದಲ್ಲಿ 5ದಿನ ಹಾಡಿನ ಚಿತ್ರೀಕರಣವನ್ನು ಮಾಡಿ ಫೆ:6ರಂದು ಕುಂಬಳಕಾಯಿ ಹೊಡೆಯುವ ಮೂಲಕ ಯಶಸ್ವಿಯಾಗಿ ಚಿತ್ರೀಕರಣವನ್ನು ಮುಗಿಸಿದೆ.ಒಟ್ಟು 3 ಹಂತಗಳಲ್ಲಿ ದ.ಕ ಜಿಲ್ಲೆಯ ಬೇರೆ ಬೇರೆ ಪ್ರದೇಶದಲ್ಲಿ ಯಶಸ್ವಿಯಾಗಿ ಚಿತ್ರೀಕರಣವನ್ನು ಮಾಡಿ ಮುಗಿಸಿದ ಚಿತ್ರತಂಡ ಬೇಗನೆ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.ಚಿತ್ರದಲ್ಲಿ ಒಟ್ಟು 2 ಹಾಡುಗಳಿದ್ದು, 2 ಫೈಟುಗಳಿವೆ. ದ.ಕ ಜಿಲ್ಲೆಯ ರಮಣೀಯ ಸ್ಥಳದಲ್ಲಿ ಚಿತ್ರೀಕರಣ ಮಾಡುವುದರೊಂದಿಗೆ, ಕರಾವಳಿಯ ಮನಮೋಹಕ ದೃಶ್ಯಗಳನ್ನು ಛಾಯಾಗ್ರಹಕ ಉದಯ ಬಳ್ಳಾಲ್ ಬಹಳ ಸುಂದರವಾಗಿ ಸೆರೆ ಹಿಡಿದಿದ್ದಾರೆ, ಹಾಡಿನ ಚಿತ್ರೀಕರಣದಲ್ಲಿ ರಾಜೇಶ್ ಕಣ್ಣೂರು ನೃತ್ಯ ನಿರ್ದೇಶನ ಮಾಡಿದ್ದಾರೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜ ಹರೇಕಳ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು,ವಿಜಯಹರಿ ರೈ ಕುರಿಯ, ದಯಾನಂದ ಬೆಟ್ಟಂಪಾಡಿ, ಭಾಸ್ಕರ ಮಣಿಪಾಲ, ರೂಪಶ್ರೀ ವರ್ಕಾಡಿ, ಶ್ರೀಮತಿ ಜಯಶೀಲ, ರಾಧಿಕಾ, ದಿಶಾರಾಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.ನಿರ್ಮಾಪಕ ಪ್ರತೀಕ್ ಯು ಪೂಜಾರಿ, ಕಥೆ ನಿರ್ದೇಶನ ಭರತ್ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಷರ್ ರಮೇಶ್ ರೈ ಕುಕ್ಕುವಳ್ಳಿ, ಕ್ಯಾಮೆರಾ ಉದಯ್ ಬಳ್ಳಾಲ್, ಸಂಗೀತ ಎಲ್ ವಿ ಯಸ್, ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶಕ, ಸಜೇಶ್ ಪೂಜಾರಿ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಜಗನ್ನಾಥ ಶೆಟ್ಟಿ ಬಾಳ, ಸಾಹಸ ಸುರೇಶ್ ಶೆಟ್ಟಿ ಮತ್ತು ನವೀನ್ ಲೋಬೋ, ನೃತ್ಯ ರಾಜೇಶ್ ಕಣ್ಣೂರು, ಪ್ರೊಡಕ್ಷನ್ಸ್‌ ಮೆನೇಜರ್ ಕಾರ್ತಿಕ್ ಶೆಟ್ಟಿ.

Scroll to Top