ಕರಾವಳಿ ಸುದ್ದಿ

ಕರಾವಳಿ ಸುದ್ದಿ

Mangaluru: Unity Hospital launches state-of-the-art Philips Azurion Cathlab for cardiac and neurovascular care

Mangaluru, Sep 1: Unity Hospital, Highland, Falnir Road, proudly announces the launch of the Philips Azurion Cathlab – Version 3.0, the most advanced interventional suite with exceptional image quality for cardiac, neuro, and radiology procedures.Available for the first time in coastal Karnataka, this cutting-edge, ceiling-mounted Cathlab brings world-class precision and innovation to cardiac, neurovascular, and interventional radiology procedures.Designed to deliver superior patient outcomes with reduced procedure time and improved safety, the Philips Azurion system represents a significant leap in minimally invasive treatment options. Key features & advantages:*Advanced imaging & accuracy: Offers exceptional image quality that enhances precision during complex cardiac and neurovascular procedures.*Radiation safety: Reduces radiation exposure and contrast medium usage by up to 30% compared to conventional cath labs—improving patient and clinician safety.*Dynamic Coronary Roadmap (DCR): Provides real-time, accurate visual guidance, allowing for faster and more accurate stent placement, reducing overall treatment time.*Global coronary guidance tools: Includes Stent Boost Live for enhanced stent visualization and DCR Live Guidance—making procedures safer and more predictable.*Future-ready infrastructure: Ceiling-mounted design provides a streamlined, flexible workspace ideal for complex interventions in cardiology, neurology, and radiology. With the introduction of the Philips Azurion 3.0, Unity Hospital reinforces its commitment to delivering world-class healthcare to the people of Mangaluru and beyond.

ಕರಾವಳಿ ಸುದ್ದಿ

ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ. *ತಿರುವನಂತಪುರದಲ್ಲಿ ಬಹುಭಾಷಾ ಕವಿ ಸಂಗಮ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಭಾರತ್ ಭವನ ತಿರುವನಂತಪುರ ಕೇರಳ ಸರಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಿರುವನಂತಪುರದ ಸಿ.ವಿ.ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ಒಂದು ದಿನದ ‘ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ’ ಇತ್ತೀಚೆಗೆ ಜರಗಿತು. ಕೇರಳ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ. ಆರ್. ಅನಿಲ್ ಉತ್ಸವವನ್ನು ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಶಿಕ್ಷಣ ಸಚಿವ ಶಿವನ್ ಕುಟ್ಟಿ, ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಪ್ರದೀಪ ಕುಮಾರ್ ಕಲ್ಕೂರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕನ್ನಡ ಸಂಸ್ಕೃತಿ ಉತ್ಸವದ ಅಂಗವಾಗಿ ಅಖಿಲ ಭಾರತ ವ್ಯಾಪ್ತಿಯ ಬಹುಭಾಷಾ ಕವಿಸಂಗಮವನ್ನು ಏರ್ಪಡಿಸಲಾಗಿತ್ತು. ಕಾಸರಗೋಡಿನ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾಗಿ ಭಾಗವಹಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ( ತುಳು), ಗಿರೀಶ್ ಪುಲಿಯೂರು (ಮಲಯಾಳಂ), ಎಡ್ವರ್ಡ್ ಲೋಬೋ ತೊಕ್ಕೊಟ್ಟು (ಕನ್ನಡ), ಎನ್‌.ಡಿ. ರಾಜಕುಮಾರ್ ತಿರುವನಂತಪುರಂ (ತಮಿಳು), ಡಾ.ಶೋಭನ್ ಕುಮಾರ್ ಕೊಂಪಳ್ಳಿ (ತೆಲುಗು ), ಡಾ.ಹೆಚ್.ಪೂರ್ಣಿಮ ತಿರುವನಂತಪುರಂ (ಸಂಸ್ಕೃತ), ಡಾ. ಕವಿತಾ ಮಂಗಳೂರು (ಹಿಂದಿ), ಸರಿತಾ ಮೋಹನ್ ಭಾಮ ತಿರುವನಂತಪುರಂ (ಇಂಗ್ಲಿಷ್), ವಿಲ್ಸನ್ ಕಟೀಲು (ಕೊಂಕಣಿ), ರಶೀದ್ ನಂದಾವರ (ಬ್ಯಾರಿ), ಮುಹಮ್ಮದ್ ಅಝೀಮ್ ಮಣಿಮುಂಡ (ಉರ್ದು), ಸಂಧ್ಯಾ ಗೀತ ಬಾಯಾರು (ಕರಾಡ), ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಪುರುಷೋತ್ತಮ ಭಟ್ ಕೆ. (ಹವ್ಯಕ) ಹೀಗೆ ವಿವಿಧ ಭಾಷೆಗಳಲ್ಲಿ ಸ್ವರಚಿತ ಕವಿತೆಗಳನ್ನು ಓದಿದರು.ಪತ್ರಕರ್ತ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು. ನ್ಯಾಯವಾದಿ ಎಂ.ಎಸ್. ಥೋಮಸ್ ಡಿ’ಸೋಜ ನಿರೂಪಿಸಿದರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಕಾರ್ಯಕ್ರಮ ಸಯೋಜಿಸಿದ್ದರು.

ಕರಾವಳಿ ಸುದ್ದಿ

ಬಂಟ್ವಾಳ ತಾಲೂಕು ಬಂಟರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಆಯ್ಕೆ

ಬಂಟ್ವಾಳ – ಜಗನ್ನಾಥ್ ಚೌಟ ಮಾಣಿ – ಬದಿಗುಡ್ಡೆ ಅವರು ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳಲ್ಲಿ ಜವಾಬ್ದಾರಿ ಹೊಂದಿರುವ ಅವರು ಧಾರ್ಮಿಕ ಪರಿಷತ್ ನ ಸದಸ್ಯರಾಗಿ, ಪ್ರಗತಿಪರ ಕೃಷಿಕರಾಗಿ, ಸಮಾಜಸೇವಕರಾಗಿ ಜನಜನಿತರಾಗಿದ್ದಾರೆ.

ಕರಾವಳಿ ಸುದ್ದಿ

ಸೇವಾ ಕಾರ್ಯಗಳಿಗೆ ಯೂತ್ ರೆಡ್‌ಕ್ರಾಸ್ ಪ್ರೇರಣೆ-ಉಪನ್ಯಾಸಕ ಸಚೇತ್ ಸುವರ್ಣ

ಮಂಗಳೂರು: ವಿದ್ಯಾರ್ಥಿಗಳು ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯೂತ್ ರೆಡ್ ಕ್ರಾಸ್ ಪ್ರೇರಣೆ ನೀಡುತ್ತಿದೆ. ಮಂಗಳೂರು ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳಲ್ಲಿ ಯೂತ್ ರೆಡ್ ಕ್ರಾಸ್ ಘಟಕಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವುದು ಅವಶ್ಯಎಂದು ಯೂತ್ ರೆಡ್ ಕ್ರಾಸ್ ನಿರ್ದೇಶಕ , ಉಪನ್ಯಾಸಕ ಸಚೇತ್ ಸುವರ್ಣ ಹೇಳಿದರು.ಯೇನೆಪೊಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ಯೇನೆಪೊಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಸಭಾಂಗಣದಲ್ಲಿ ಗುರುವಾರ ನಡೆದ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿಗಳ ಸಾಮರ್ಥ್ಯ ವರ್ಧನೆ ಕಾರ್ಯಾಗಾರದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪಿ.ಬಿ.ಹರೀಶ್ ರೈ ಕಾರ್ಯಾಗಾರ ಉದ್ಘಾಟಿಸಿದರು.ರೆಡ್ ಕ್ರಾಸ್ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು. ಯೇನೆಪೊಯ ಪರಿಗಣಿತ ವಿ.ವಿ.ಯ ಕುಲಪತಿ ಡಾ.ಎಂ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಯೋಜನಾಧಿಕಾರಿ ಡಾ.ಹರಿ ನಾರಾಯಣನ್ ಸ್ವಾಗತಿಸಿ, ಯೂತ್ ರೆಡ್‌ಕ್ರಾಸ್ ಘಟಕದ ನೋಡಲ್ ಅಧಿಕಾರಿ ನಿತ್ಯಶ್ರೀ .ಬಿ.ವಿ. ವಂದಿಸಿದರು.ಅದ್ರಿಜಾ ಭೂನಿಯ ಮತ್ತು ಡಾ.ಪ್ರತೀಕ್ಷಾ ಕಾರ್ಯಕ್ರಮ‌ ನಿರೂಪಿಸಿದರು.ಸ್ವಸ್ತಿಕಾ ನ್ಯಾಶನಲ್ ಬ್ಯುಸಿನೆಸ್ ಕಾಲೇಜಿನ ಚೇರ್ಮನ್ ಡಾ.ರಾಘವೇಂದ್ರ ಹೊಳ್ಳ, ಅಸಿಸ್ಟೆಂಟ್ ಪ್ರೊಫೆಸರ್ ಪ್ರೀತಿ ಶೆಟ್ಟಿಗಾರ್, ಸಿಐಎಲ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್, ಯೇನೆಪೊಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮಹಮ್ಮದ್ ಗುತ್ತಿಗಾರ್, ಯೇನೆಪೊಯ ನರ್ಸಿಂಗ್ ಕಾಲೇಜಿನ ಡೀನ್ ಡಾ.ಲೀನಾ ಕೆ.ಸಿ.‌, ಮಂಗಳೂರು ವಿ.ವಿ. ಎನ್ ಎಸ್ ಎಸ್ ಯೋಜನಾಧಿಕಾರಿ ಡಾ.ಶೇಷಪ್ಪ ಅಮೀನ್.ಕೆ. ಎರಡು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಕರಾವಳಿ ಸುದ್ದಿ

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ 2025-27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ , ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್,ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರುಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವೇಂದ್ರ ಕೆ ಶೆಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಮದ್ಯ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿಶ್ರೀಕಾಂತ್ ಶೆಟ್ಟಿ ಕಾಟಿಪಳ್ಳ, ಸುಜೀರ್ ಶೆಟ್ಟಿ ಸೂರಿಂಜೆ, ಗಿರೀಶ್ ಎಂ ಶೆಟ್ಟಿ ಪೆರ್ಮುದೆ, ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಸುಕೇಶ್ ಶೆಟ್ಟಿ ಚೇಳಾರ್, ರಾಮಚಂದ್ರ ಶೆಟ್ಟಿ ಕುಳಾಯಿ, ದಾಮೋದರ ಶೆಟ್ಟಿ ತೋಕೂರು, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಜ್ಯೋತಿ ಜೆ ಶೆಟ್ಟಿ ಸುರತ್ಕಲ್ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಉಲ್ಲಾಸ್ ಶೆಟ್ಟಿ ಪೆರ್ಮುದೆ, ದಿವಾಕರ ಸಾಮಾನಿ ಚೇಳಾರ್ ಗುತ್ತು ಕರ್ತವ್ಯ ನಿರ್ವಹಿಸಿದ್ದರು.ಸಂಘದ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರಾವಳಿ ಸುದ್ದಿ

ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಪ್ರದಾನ

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್) ದಲ್ಲಿ ನಡೆಯಿತು.ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು, ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು 13ನೇ ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು.ದಿನಕರ ಡಿ. ಬಂಗೇರ ಅವರು ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.ಈ ಸೌಹಾರ್ದ ಸಂಗಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರು ಮತ್ತು ಮೂಲ್ಕಿ ಸುಂದರರಾಮ್ ಶೆಟ್ಟಿ ಸೌಹಾರ್ದ ಸಹಕಾರಿ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ *ಅನುಪಮ ಜನಸೇವಕ, ಸಾಮಾಜಿಕ, ಸಹಕಾರಿ ರಂಗದ ಸಾಧಕ, ಅಪೂರ್ವ ಸಂಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕ, ಮೂಲ್ಕಿ ಸುಂದರರಾಮ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ. ಬೆಂಗಳೂರ ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮತ್ತು ಪಾವೂರು ಗುತ್ತು ಬಂಟ ಮನೆತನದ ಹಿರಿಯ ನಾಯಕರಾಗಿದ್ದಾರೆ.ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ, ಅನುಪಮ ನಿಸ್ವಾರ್ಥ ಸೇವೆ ಗೈದಿರುವ ಸನ್ಮಾನಿತರು ಪ್ರತಿಷ್ಠಿತ ಮಲೇಷಿಯಾದ ಇಂಟರ್‍ನ್ಯಾಷನಲ್ ಅವಾರ್ಡ್, ಇಂದಿರಾ ಗಾಂಧಿ ಸದ್ಭಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋಪರೇಟಿವ್ ಸೊಸೈಟಿಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ, ಸಮಾಜ ಸೇವಾರತ್ನ ಅವಾರ್ಡ್, ಡಾ. ರಾಜ್‍ಕುಮಾರ್ ಅವಾರ್ಡ್ ಸಹಿತ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುತ್ತಾರೆ.ಆರ್ ಬಿ ಐ ನ ನಿರ್ದೇಶಕರಾಗಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿ, ಸುಂದರರಾಮ್ ಶೆಟ್ಟಿ ವೆಲ್ಫೇರ್ ಅಸೋಸಿಯೇಸನ್ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸನ್ಮಾನಿತರು ಬೆಂಗಳೂರಿನಲ್ಲಿ 535 ಮಾದರಿ ವಸತಿ ಸಂಕೀರ್ಣ ಸೊಸೈಟಿ ಮುಖಾಂತರ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ.ವಿಜಯಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಮುಖಾಂತರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬಿಳೇಕ ಹಳ್ಳಿಯಲ್ಲಿ 111.31 ಗುಂಟ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ನಿರ್ಮಾಣದಲ್ಲಿ ಸೊಸೈಟಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ,1991ರಿಂದ 2015ರವರೆಗೆ ಪ್ರಮುಖ ಪಾತ್ರ ವಹಿಸಿರುತ್ತಾರೆ.ಬೆಂಗಳೂರಿನ ಸುಂದರರಾಮ ಶೆಟ್ಟಿ ನಗರದಲ್ಲಿ ಅಯ್ಯಪ್ಪ ದೇವಾಲಯ, ಶಿವನ ದೇವಾಲಯ ಮತ್ತು ಇತರ ಗುಡಿಗಳ ನಿರ್ಮಾಣ ಕಾರ್ಯ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಗಾಗಿ ಸನ್ಮಾನಿತರಿಗೆ ಕರ್ನಾಟಕ ಸರಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.ಕೊಡುಗೈದಾನಿ, ನಿಸ್ವಾರ್ಥ ಸಮಾಜಸೇವಕ, ನುಡಿದಂತೆ ನಡೆವ ಅಪರೂಪದ ಅದ್ವಿತೀಯ ಸಾಧಕ, ಸೌಹಾರ್ದ ನಾಟಕ ಸನ್ಮಾನ್ಯ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಗಣ್ಯರ ಸಮ್ಮುಖದಲ್ಲಿ ‘ಸೌಹಾರ್ದ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕರಾವಳಿ ಸುದ್ದಿ

ಕೂಳೂರು ಚರ್ಚ್: ಕ್ಯಾಥೋಲಿಕ್ ಸಭಾ ಮತ್ತು ಐ .ಸಿ.ವೈ.ಎಂ. ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ

ಮಂಗಳೂರು: ಕೂಳೂರು ಸಂತ ಅಂತೋನಿ ಚರ್ಚಿನ ಕ್ಯಾಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಘಟಕದ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ರವಿವಾರ ಜೂನ್ 22 ರಂದು ಕೂಳೂರು ಮೇಲ್ ಕೊಪ್ಪಲ ಶ್ರೀಮತಿ ಮೇಝಿ ಟೀಚರ್ ಅವರ ಗದ್ದೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂದನೀಯ ಫಾ. ವಿಕ್ಟರ್ ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿದ್ದ ಎಪಿಸ್ಕೋಪಲ್ ಸಿಟಿ ವಲಯದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಐಡಾ ಪುರ್ಟಾಡೊ, ಐ.ಸಿ.ವೈ.ಎಂ. ಕೇಂದ್ರೀಯ ಸಮಿತಿ ಅಧ್ಯಕ್ಷ ವಿನ್ ಸ್ಟನ್ ಜೋಯಲ್ ಸಿಕ್ವೇರಾ ಮತ್ತು ತೀರ್ಪುಗಾರ ಪ್ರವೀಣ್ ಲೋಬೊ ಬಿಜೈ ಅವರು ಸಂಯುಕ್ತವಾಗಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗದ್ದೆಯಲ್ಲಿ ನಡೆದ ಸ್ಪರ್ಧಾ ಕೂಟದಲ್ಲಿ ಮೊದಲ ಬಹುಮಾನವನ್ನು ಸೈಂಟ್ ಅನ್ನಾ ವಾರ್ಡ್, ದ್ವಿತೀಯ ಬಹುಮವನ್ನು ಸಂತ ಅಂತೋನಿ 3 ನೇ ವಾರ್ಡ್ ಹಾಗೂ ತೃತೀಯ ಬಹುಮಾನವನ್ನು ಸಂತ ಜೋಸೆಫ್ ವಾರ್ಡ್ ಪಡೆದು ಕೊಂಡಿತು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ಸ್ವಾಗತಿಸಿ ಐ.ಸಿ.ವೈ. ಎಂ. ಅಧ್ಯಕ್ಷ ಆರ್ವಿನ್ ಮೊಂತೆರೊ ವಂದಿಸಿದರು. ರೀಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಚೆಂಡೆಯಲ್ಲಿ ಪುಳಿಂಚ ಪ್ರಶಸ್ತಿ ಪ್ರದಾನ – ಕೃತಿ ಬಿಡುಗಡೆ. ‘ಧರ್ಮ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಮೂಲ್ಯ’: ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ‘ಭಾರತದಲ್ಲಿ ಹಿಂದೂವಾಗಿ ಹುಟ್ಟುವುದು ಪುಣ್ಯವಾಗಿದ್ದು, ಧರ್ಮ ಪ್ರಸಾರಕ್ಕೆ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ. ಯಕ್ಷಗಾನಕ್ಕೆ ಪುಳಿಂಚ ರಾಮಯ್ಯ ಶೆಟ್ಟರ ಸೇವೆ ಸ್ಮರಣೀಯವಾಗಿದ್ದು, ಆ ಪರಂಪರೆಯನ್ನು ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ಮತ್ತವರ ಪತ್ನಿ ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದರು. ಅವರು ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ಚೆಂಡೆಯಲ್ಲಿ ಶ್ರೀ ಕಲ್ಲುರ್ಟಿ ದೈವಸ್ಥಾನ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೆಜ್ಜದಗುತ್ತು ದಿ.ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಬೊಳ್ನಾಡುಗುತ್ತು ದಿ.ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ಮೇ24,ಶನಿವಾರ ನಡೆದ ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ ಪ್ರದಾನ’ , ಮಂಗಳೂರು ಪುಳಿಂಚ ಚಿಟ್ಸ್(ಒಪಿಸಿ) ಪ್ರೈ.ಲಿಮಿಟೆಡ್ ನ ದಶಮ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.‘ಹಿಂದೂ ಧರ್ಮದ ನಾಶಕ್ಕೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಪಹಲ್ಗಾಮ್ ಘಟನೆಯು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ದೇಶಕ್ಕೆ ಒಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಕುರಿತು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು. ‘ಚೆಂಡೆ ಕಲ್ಲುರ್ಟಿ’ ಕೃತಿ ಬಿಡುಗಡೆ:ಸಮಾರಂಭದಲ್ಲಿ ಲೇಖಕ – ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬರೆದ ‘ಮಹಿಮೆಯ ಮಹಾಮಾತೆ ಚೆಂಡೆ ಕಲ್ಲುರ್ಟಿ’ ಕೃತಿಯನ್ನು ಹೊಸದಿಗಂತ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಎಸ್. ಪ್ರಕಾಶ್ ಬಿಡುಗಡೆಗೊಳಿಸಿದರು. ಅಲ್ಲದೆ ಮಂಗಳೂರಿನ ಪ್ರಸಿದ್ಧ ಜ್ಯೋತಿಷಿ ಮತ್ತು ದೈವಜ್ಞರಾದ ಶಶಿ ಕುಮಾರ್ ಪಂಡಿತ್ ಅವರು ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಶಿರಾಜ್ ರಾವ್ ಕಾವೂರು ರಚಿಸಿದ ‘ಚೆಂಡೆದಪ್ಪೆನ ಸುಗಿಪು’ ಕನ್ನಡ – ತುಳು ಭಕ್ತಿಗೀತೆಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಿದರು.ಉದ್ಘಾಟಕರಾದ ಕಲ್ಲಡ್ಕ ಪ್ರಭಾಕರ ಭಟ್ ಕೃತಿಕರ್ತರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮುಖ್ಯ ಅತಿಥಿಗಳಾಗಿದ್ದರು.ಪುಳಿಂಚ ಪ್ರಶಸ್ತಿ -2025 ಪ್ರದಾನ:ಪುಳಿಂಚ ಸೇವಾ ಪ್ರತಿಷ್ಠಾನವು ಕೀರ್ತಿಶೇಷ ಕಲಾವಿದ ಪುಳಿಂಚ ರಾಮಯ್ಯ ಶೆಟ್ಟಿ ಅವರ ಹೆಸರಿನಲ್ಲಿ ತ್ರೈವಾರ್ಷಿಕವಾಗಿ ನೀಡುವ ಪಂಚಮ ಪುಳಿಂಚ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು.ಕಳೆದ ವರ್ಷ ನಿಧನರಾದ ಯಕ್ಷಗಾನದ ಹಾಸ್ಯ ಕಲಾವಿದ ದಿ.ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಮರಣೋತ್ತರ ಪುಳಿಂಚ ಪ್ರಶಸ್ತಿ ನೀಡಲಾಯಿತು.ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ. 25,000/- ನಗದು, ಶಾಲು – ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ನೀಡಿ ಗಣ್ಯರು ಸನ್ಮಾನಿಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.ಚೆಂಡೆ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಮತ್ತು ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ ಪ್ರಸ್ತಾವನೆಗೈದರು. ಕಲಾವಿದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಸಂಸ್ಮರಣಾ ಭಾಷಣ ಮಾಡಿದರು. ಟ್ರಸ್ಟ್ ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ ವಂದಿಸಿದರು. ಯಕ್ಷಗಾನ ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು.ಸಾಂಸ್ಕೃತಿಕ ರಂಜನೆ:ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ‘ಕುರುಬನ ರಾಣಿ’ ಹಾಸ್ಯ ಪ್ರಸಂಗ, ‘ಬಲೆ ತೆಲಿಪುಲೆ’ ಹಾಸ್ಯ ವೈಭವ, ‘ಪುದರ್ ದೀತಿಜಿ’ ತುಳು ನಾಟಕ ಜರಗಿತು. ಬಳಿಕ ಚೆಂಡೆ ಕಲ್ಲುರ್ಟಿ ದೈವದ ಕೋಲ ಸೇವೆ ಮತ್ತು ಹರಕೆಯ ಕೋಲ ನಡೆಯಿತು.

ಕರಾವಳಿ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಸಭಾಧ್ಯಕ್ಷ ಯು ಟಿ ಖಾದರ್

ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹಾರೈಸಿದ್ದಾರೆ.ಅಲ್ಲದೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದಕ್ಕೆ ಸಂತಸ ವ್ಯಕ್ತಪಡಿಸುತ್ತಾ,ಇದಕ್ಕಾಗಿ ಶ್ರಮಿಸಿದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ,ಶಿಕ್ಷಕ-ಶಿಕ್ಷಕಿಯರಿಗೆ,ಪೋಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.ಬಹಳ ವಿಶೇಷವಾಗಿ ಅವರ ಮಂಗಳೂರು ಕ್ಷೇತ್ರ ವ್ಯಾಪ್ತಿಯ ನರಿಂಗಾನ ಗ್ರಾಮದ ಪುಂಡಕೈ ನಿವಾಸಿ ಶ್ರೀಮತಿ ಸರಸ್ವತಿ ಹಾಗೂ ಚಂದ್ರಶೇಖರ್ ದಂಪತಿಗಳ ಪುತ್ರಿ ಕುಮಾರಿ ಅಪೇಕ್ಷಾ ರಾಜ್ಯದಲ್ಲಿಯೇ ಹತ್ತನೇ ರ‍್ಯಾಂಕ್ ಗಳಿಸಿದ್ದಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತಾ,ಕುಮಾರಿ ಅಪೇಕ್ಷಾ ರ ಭವಿಷ್ಯ ಉಜ್ವಲವಾಗಲಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹಾರೈಸಿದ್ದಾರೆ.ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ಆತಂಕ, ಹತಾಶೆಗೆ ಒಳಗಾಗುವುದು ಬೇಡ, ನಿಮ್ಮೆದುರು ಮತ್ತೆ ಪರೀಕ್ಷೆ ಬರೆಯುವ ಅವಕಾಶಗಳಿವೆ. ಮರಳಿ ಪ್ರಯತ್ನಿಸಿದರೆ ಯಶಸ್ಸು ಖಂಡಿತಾ ಸಿಗಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಕರಾವಳಿ ಸುದ್ದಿ, ಪ್ರಾಪರ್ಟಿ ಪೇಜ್

ಎಸ್‌ಬಿಎಸ್ ಫಾರ್ಮ್‌ಹೌಸ್ ಮಂಗಳೂರು – ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ಒಂದು ನೆಮ್ಮದಿಯ ತಾಣ

ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಂತತೆಯಿಂದ ಸಮಯ ಕಳೆಯಲು ತಕ್ಕ ಸ್ಥಳವನ್ನು ಹುಡುಕುತ್ತಿದ್ದೀರಾ? ಮಂಗಳೂರಿನ ಕಿನ್ನಿಗೋಳಿ ಬಳಿ ಇರುವ ಎಸ್‌ಬಿಎಸ್ಫಾರ್ಮ್‌ಹೌಸ್ (Sugandhi Bhoja Shetty Farm House ) ನಿಮಗೆ ಸರಿಯಾದ ಆಯ್ಕೆ. ಇದು ನಗರದ ಜೀವನದ ಜಂಜಾಟದಿಂದ ದೂರವಿದ್ದು, ನಿಸರ್ಗದ ಸೌಂದರ್ಯವನ್ನು ಅನುಭವಿಸಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ರಚಿಸಲು ಶಾಂತವಾದ ಪರಿಸರವನ್ನು ಹೊಂದಿದೆ. ನಿಸರ್ಗದ ಸೌಂದರ್ಯದಲ್ಲಿ ವಿಶ್ರಾಂತಿ ಎಸ್‌ಬಿಎಸ್ ಫಾರ್ಮ್‌ಹೌಸ್ ತೆಂಗಿನ ತೋಟ , ಎತ್ತರದ ಮರಗಳು ಮತ್ತು ತಾಜಾ ಗಾಳಿಯಿಂದ ಆವರಿತವಾಗಿದೆ. ಇಲ್ಲಿ ನೀವು ದಿನನಿತ್ಯದ ಒತ್ತಡ ಮತ್ತು ಗದ್ದಲವನ್ನು ಮರೆತು, ನಿಜವಾದ ವಿಶ್ರಾಂತಿಯ ಅನುಭವ ಪಡೆಯಬಹುದು. ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದು ಅಥವಾ ಹುಲ್ಲಿನ ಮೇಲೆ ನಡೆಯುವುದು—ಇದಕ್ಕೆಲ್ಲ ನಿಸರ್ಗದ ಶಾಂತಿಯೇ ಸಾಥಿ. ಇದು ಶಾಂತವಾದ ಸ್ಥಳವಾದರೂ, ತುಂಬಾ ಸುಲಭವಾಗಿ ತಲುಪಬಹುದಾಗಿದೆ. ಕಿನ್ನಿಗೋಳಿ, ಮುಲ್ಕಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ) ಇವೆಲ್ಲದರ ಹತ್ತಿರವಿರುವ ಈ ಸ್ಥಳ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಹ ಸುಂದರವಾದ ತಾಣವಾಗಿದೆ. ಮೋಜು ಮತ್ತು ಆಚರಣೆಗಳಿಗೆ ( Event ) ಸೂಕ್ತ ಸ್ಥಳ ನೀವು ಹುಟ್ಟುಹಬ್ಬದ ಪಾರ್ಟಿ, ವಾರಾಂತ್ಯದ ಗೆಟ್-ಟುಗೆದರ್ ಅಥವಾ ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು ಆಯೋಜಿಸುತ್ತಿದ್ದರೆ, ಅದನ್ನು ಮಾಡಲು ಎಸ್‌ಬಿಎಸ್ ಫಾರ್ಮ್‌ಹೌಸ್ ಸೂಕ್ತ ಸ್ಥಳವಾಗಿದೆ.  ನೀವು ಆನಂದಿಸಬಹುದಾದದ್ದು ಇಲ್ಲಿದೆ: ಇಲ್ಲಿ ಯಾವುದೇ ಅಡಚಣೆಗಳಿಲ್ಲದೆ ಮೋಜು, ನಿಸರ್ಗ ಮತ್ತು ನೆಮ್ಮದಿಯನ್ನು ಸಂಪೂರ್ಣವಾಗಿ ಆನಂದಿಸಬಹುದು. ವಾರಾಂತ್ಯದವಾಸ್ತವ್ಯಕ್ಕಾಗಿಒಳ್ಳೆಯಸ್ಥಳ ಎಸ್‌ಬಿಎಸ್ ಫಾರ್ಮ್‌ಹೌಸ್ ಒಂದು ದಿನದ ಭೇಟಿಗೆ ಮಾತ್ರವಲ್ಲ, ವಾರಾಂತ್ಯವನ್ನು ಚೆನ್ನಾಗಿ ಕಳೆಯಲು ಸಹ ಉತ್ತಮ ಸ್ಥಳವಾಗಿದೆ.  ನೀವು ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬಹುದು, ತಾಜಾ ಗಾಳಿಯನ್ನು ಆನಂದಿಸಬಹುದು ಮತ್ತು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ವಿಶೇಷವಾಗಿ ನೀವು ಹೊರಾಂಗಣದಲ್ಲಿ ಆಡಲು ಇಷ್ಟಪಡುವ ಮಕ್ಕಳನ್ನು ಹೊಂದಿದ್ದರೆ, ವಿರಾಮ ತೆಗೆದುಕೊಳ್ಳಲು ಇದು ಪರಿಪೂರ್ಣ ಸ್ಥಳವಾಗಿದೆ. ಸಣ್ಣಮದುವೆ ಸಮಾರಂಭಗಳಿಗೆಸುಂದರತಾಣ ನೀವು ಸಣ್ಣ ಮದುವೆ ಸಮಾರಂಭ, ನಿಶ್ಚಿತಾರ್ಥ ಅಥವಾ ಪೂರ್ವ-ವಿವಾಹ ಫೋಟೋಶೂಟ್ ಅನ್ನು ಯೋಜಿಸುತ್ತಿದ್ದರೆ, ಎಸ್‌ಬಿಎಸ್ ಫಾರ್ಮ್‌ಹೌಸ್ ಒಂದು ಸುಂದರವಾದ ಆಯ್ಕೆಯಾಗಿದೆ. ಫಾರ್ಮ್‌ನ ಹಸಿರು ಪರಿಸರ ಮತ್ತು ಶಾಂತ ವಾತಾವರಣವು ನಿಮ್ಮ ಹತ್ತಿರದ ಪ್ರೀತಿಪಾತ್ರರ ಜೊತೆಗೆ ಸರಳ ಮತ್ತು ಸುಂದರವಾದ ಆಚರಣೆಗೆ ಉತ್ತಮ ಸ್ಥಳವಾಗಿದೆ. ಬನ್ನಿ, ಅನುಭವಿಸಿ – ಎಸ್‌ಬಿಎಸ್ಫಾರ್ಮ್‌ಹೌಸ್ ಸಣ್ಣ ಭೇಟಿ, ವಾರಾಂತ್ಯದ ವಾಸ್ತವ್ಯ ಅಥವಾ ಸಣ್ಣ ಆಚರಣೆ – ಯಾವ ಕಾರಣಕ್ಕೂ ಇರಲಿ, ಎಸ್‌ಬಿಎಸ್ ಫಾರ್ಮ್‌ಹೌಸ್ ನಿಮಗೆ ಸೂಕ್ತವಾದ ತಾಣವಾಗಿದೆ. ಇದು ಪ್ರಕೃತಿ, ಸೌಕರ್ಯ ಮತ್ತು ಸಂತೋಷವನ್ನು ಒಟ್ಟಿಗೆ ಸೇರಿಸುವ ಸ್ಥಳವಾಗಿದೆ. ಸಂಪರ್ಕ ವಿವರಗಳು ವೆಬ್‌ಸೈಟ್: www.sbsfarmhousemangalore.com ಸ್ಥಳ:    ಕಟೀಲು ದೇವಸ್ಥಾನದ ಹತ್ತಿರ    ಕಲ್ಲಕುಮೇರ್, ಕೊಂಡೆಮೂಲ ಗ್ರಾಮ    ಕಿನ್ನಿಗೋಳಿ, ಕಟೀಲು    ಮಂಗಳೂರು-574148 Location Map: https://g.co/kgs/RTgjmnW ಮೊಬೈಲ್:    +91 63606 05001    +91 63606 15001

Scroll to Top