Author name: editor

ಪ್ರಾದೇಶಿಕ ವಾರ್ತೆಗಳು

ಕಿನ್ನಿಗೋಳಿ ಯುಗಪುರುಷದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡ ಭಾಷೆ, ಸಂಸ್ಕೃತಿ ಉಳಿಸೋಣ: ಕೆ. ಭುವನಾಭಿರಾಮ ಉಡುಪ

ಮೂಲ್ಕಿ: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಿ, ಉಳಿಸಬೇಕು ಕನ್ನಡ ಭಾಷೆಗೆ ಸ್ವಾಭಿಮಾನದ ಗೌರವವಿದೆ. ಮಕ್ಕಳಲ್ಲಿ ಕನ್ನಡ ಅಭಿಮಾನವನ್ನು ಬೆಳೆಸೋಣ ಎಂದು ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.ಅವರು ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಾಭಗಿತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆಯನ್ನು ವಹಿಸಿದ್ದರು.ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಎನ್ನುವ ವಿಷಯದಲ್ಲಿ ಪಾಂಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ವಿ. ಮಾತನಾಡಿ, ಕನ್ನಡ ನಶಿಸದ ಭಾಷೆಯಲ್ಲ, ಆತಂಕ ಬೇಡ ಓದುಗರು ಕಡಿಮೆಯಾದರೂ ಸಾಹಿತ್ಯ ಚಟುವಟಿಕೆ ಕಡಿಮೆಯಾಗಿಲ್ಲ. ಬರಹಗಾರರನ್ನು ಬೆಳೆಸಿ ಓದುಗರನ್ನು ಸೃಷ್ಟಿಸೋಣ ಎಳೆಯ ಮಕ್ಕಳಲ್ಲಿ ಸಾಹಿತ್ಯ ಅಭಿಮಾನವನ್ನು ಜಾಗೃತಗೋಳಿಸೋಣ ಕನ್ನಡಿಗರ ಹೋರಾಟದಿಂದ ಕನ್ನಡ ಭಾಷೆಗೆ ಸ್ಥಾನಮಾನ ಸಿಕ್ಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶಿವಾನಂದ ಪ್ರಭು ಅವರನ್ನು ರಾಜ್ಯೋತ್ಸವ ಗೌರವಾರ್ಪಣೆ ನೀಡಲಾಯಿತು.ಉದ್ಯಮಿ ಅಗರಿ ರಾಘವೇಂದ್ರರಾವ್ ಸುರತ್ಕಲ್, ಸಾಣೂರು ಅರುಣ್ ಶೆಟ್ಟಿಗಾರ್, ಸತೀಶ್ ಬಂಗೇರ, ಉಷಾ ಕಿರಣ್, ಸಾಹಿತ್ಯ ಸಂಘಟಕ ಪ್ರದೀಪ್ ಕುಮಾರ್, ಮೂಲ್ಕಿ ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೊಸ್ಸಿ ಪಿಂಟೋ, ಹಿರಿಯ ಸಾಹಿತಿ ಬಾಲಕೃಷ್ಣ ಉಡುಪ, ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್ ಉಪಸ್ಥಿತರಿದ್ದರು.ಸಂಭ್ರಮ ವಂದಿಸಿದರು. ಅಭಿಷೇಕ್ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ. 34 ಮಂದಿ ಅಭ್ಯರ್ಥಿಗಳು ಕಣದಲ್ಲಿ- ಇಬ್ಬರು ಅವಿರೋಧ ಆಯ್ಕೆ

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ ನ.9ರಂದು ನಡೆಯಲಿದೆ. 23 ಸ್ಥಾನಗಳಿಗೆ ಒಟ್ಟು 34 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.ನಾಮಪತ್ರ ಹಿಂಪಡೆಯುವ ಸಮಯ ಕೊನೆಗೊಂಡ ಹಿನ್ನಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಿದೆ.ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ ಕೆ.ಪೂಜಾರಿ, ಕೋಶಾಧಿಕಾರಿ ಸ್ಥಾನಕ್ಕೆ ವಿಜಯ್ ಕೋಟ್ಯಾನ್ ಪಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಪುಷ್ಪರಾಜ್ ಬಿ.ಎನ್ ಹಾಗೂ ಶ್ರವಣ್ ಕುಮಾರ್ ಕೆ. ಕಣದಲ್ಲಿದ್ದಾರೆ.ಉಪಾಧ್ಯಕ್ಷ 3 ಸ್ಥಾನಗಳಿಗೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಪಾಧ್ಯಕ್ಷತೆಗೆ ಮಹಮ್ಮದ್ ಆರೀಫ್, ಗಂಗಾಧರ ಕಲ್ಲಪಳ್ಳಿ, ಐ.ಬಿ. ಸಂದೀಪ್ ಕುಮಾರ್, ವಿಲ್‌ಫ್ರೆಡ್ ಡಿಸೋಜಾ, ರಾಜೇಶ್ ಶೆಟ್ಟಿ ಸ್ಫರ್ಧಿಸುತ್ತಿದ್ದಾರೆ.ಕಾರ್ಯದರ್ಶಿ 3 ಸ್ಥಾನಗಳಿಗೆ 4 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಎ. ಸಿದ್ದಿಕ್ ನೀರಾಜೆ, ರಾಜೇಶ್ ಕುಮಾರ್, ಸುರೇಶ್ ಡಿ ಪಳ್ಳಿ, ಸತೀಶ್ ಇರಾ ಸ್ಪರ್ಧಿಸುತ್ತಿದ್ದಾರೆ.ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯತ್ವಕ್ಕೆ ಇಬ್ಬರು ಕಣದಲ್ಲಿದ್ದಾರೆ.ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಮುಹಮ್ಮದ್ ಅನ್ಸಾರ್ ಇನೋಳಿ ಸ್ಪರ್ಧಿಸುತ್ತಿದ್ದಾರೆ.ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರ 15 ಸ್ಥಾನಗಳಿಗೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಅಶೋಕ್ ಶೆಟ್ಟಿ ಬಿ.ಎನ್, ಸಂದೇಶ್ ಜಾರ,ಗಿರೀಶ್ ಅಡ್ಪಂಗಾಯ, ಪ್ರಕಾಶ್ ಸುವರ್ಣ, ಸಂದೀಪ್ ಕುಮಾರ್ ಎಂ. ಲಕ್ಷ್ಮಿನಾರಾಯಣ ರಾವ್, ಹರೀಶ್ ಮೋಟುಕಾನ, ಶಶಿಧರ ಬಂಗೇರ, ದಿವಾಕರ ಪದ್ಮುಂಜ, ಕಿರಣ್ ಯು. ಸಿರ್ಸೀಕರ್, ಅಭಿಷೇಕ್ ಎಚ್.ಎಸ್, ಜಯಶ್ರೀ, ಮಂಜುನಾಥ್ ಕೆ.ಪಿ., ಭುವನೇಶ್ವರ ಜಿ. ಸಂದೀಪ್ ವಾಗ್ಲೆ, ಪ್ರವೀಣ್ ರಾಜ್ ಕೆ.ಎಸ್, ಹರೀಶ್ ಕೆ. ಆದೂರ್, ಲೋಕೇಶ್ ಸುರತ್ಕಲ್, ಶೇಕ್ ಜೈನುದ್ದೀನ್, ಸಂದೀಪ್ ಸಾಲ್ಯಾನ್, ಆರೀಫ್ ಕಲ್ಕಟ್ಟ ಕಣದಲ್ಲಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣಾಧಿಕಾರಿಗಳಾದ ವಾರ್ತಾಧಿಕಾರಿ ಖಾದರ್ ಷಾ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನ.1ರಂದು ದಿ.ಮನೋಹರ ಪ್ರಸಾದ್ ಸಂಸ್ಕರಣೆ

ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ, ದಿ.ಮನೋಹರ ಪ್ರಸಾದ್ ಸಂಸ್ಕರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನ.1 ರಂದು ಮಧ್ಯಾಹ್ನ 3.30ಕ್ಕೆ ಕುತ್ತಾರಿನನ ಹೋಟೆಲ್ ವೆಜಿನೇಷನ್ ಸಭಾಂಗಣದಲ್ಲಿ ನಡೆಯಲಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್.ಜಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾವಿದ ಕದ್ರಿ ನವನೀತ ಶೆಟ್ಟಿ ಅವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ ಕೆ., ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ, ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ನ ಉಳ್ಳಾಲ ಘಟಕದ ಅಧ್ಯಕ್ಷ ರಾಜೇಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ವಿದ್ಯಾಧರ ಶೆಟ್ಟಿ, ಛಾಯಾಗ್ರಾಹಕ ಅಶೋಕ್ ಉಳ್ಳಾಲ್, ಪವರ್ ಲಿಫ್ಟರ್ ಗೀತಾ ಬಾಯಿ ಇವರುಗಳನ್ನು ಸನ್ಮಾನಿಸಲಾಗುವುದೆಂದು ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.……………………………………………

ಪ್ರಾದೇಶಿಕ ವಾರ್ತೆಗಳು

ಸಿಎಸ್ಆರ್ ಅಡಿಯಲ್ಲಿ ಪಾರದೀಪ್ ಫಾಸ್ಪೆಟ್ಸ್ ನಿಂದ ವಿಶೇಷ ಮಕ್ಕಳ ಶಾಲೆಗೆ ವ್ಯಾನ್ ಕೊಡುಗೆ

ಪಣಂಬೂರು, ಅ. 24: ಸಿಎಸ್ಆರ್ ನಿಧಿಯಡಿ ಪಣಂಬೂರಿನ ಪಾರದೀಪ್ ಫಾಸ್ಪೆಟ್ಸ್ ನಿಂದ ಕುಲಶೇಖರದಲ್ಲಿರುವ ಶ್ರೀ ದುರ್ಗಾ ನಡೆಸುತ್ತಿರುವ ಐಕ್ಯಮ್ ವಿಶೇಷ ಮಕ್ಕಳ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯಾನ್ ನ ಕೊಡುಗೆ ನೀಡಲಾಯಿತು.ಪಿಪಿಎಲ್ ಕಂಪನಿಯ ಸಿಎಂಓ ಎಸ್. ಗಿರೀಶ್ ಅವರು ಸಂಸ್ಥೆಯ ವತಿಯಿಂದ ಸಿಎಸ್ ಆರ್ ಯೋಜನೆ ಹಮ್ಮಿ ಕೊಂಡು ಅಗತ್ಯ ವುಳ್ಳ ಈ ಶಾಲೆಗೆ ಕೊಡುಗೆ ನೀಡಲಾಗಿದೆ ಎಂದರು.ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ ವಿಶೇಷ ಸಾಮರ್ಥ್ಯದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಮೂಲಕ ಮುಖ್ಯ ವಾಹಿನಿ ಗೆ ತರ ಬೇಕಾಗಿದೆ ಎಂದರು.ದುರ್ಗಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕಮಲಾಕ್ಷಿ ಅವರು ಪಿಪಿಎಲ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಪಿಪಿ ಎಲ್ ಜೆ ಜಿ ಎಂ ಚೇತನ್ ಮೆಂಡೋನ್ಸ, ಸುರತ್ಕಲ್ ರೋಟರಿ ಕ್ಲಬ್ ಉಪಾಧ್ಯಕ್ಷ ರಮೇಶ್ ರಾವ್ ಮಧ್ಯ, ಕಾರ್ಯದರ್ಶಿ ರಾಮಮೋಹನ್. ವೈ., ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ಪಬ್ಲಿಕ್ ಇಮೇಜ್ ನಿರ್ದೇಶಕ ಡಾ. ರಾಜಮೋಹನ್ ರಾವ್. ಕೆ. ದುರ್ಗಾ ಟ್ರಸ್ಟ್ ಪದಾಧಿ ಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು. ದುರ್ಗಾ ಟ್ರಸ್ಟ್ ಕಾರ್ಯ ದರ್ಶಿ ಸಂತೋಷ್ ಕುಮಾರ್ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಗರಪಾಲಿಕೆ ವ್ಯಾಪ್ತಿಯ ನಿವೇಶನರಹಿತರಿಗೆ ವಸತಿ ಯೋಜನೆ ಜಾರಿಯಾಗಲಿ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ನಿವೇಶನ ರಹಿತರಿಗೆ G+ 3 ಮಾದರಿ ವಸತಿಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ನಿವೇಶನ ರಹಿತರ ಹೋರಾಟ ಸಮಿತಿ (CPIM ) ನೇತೃತ್ವದಲ್ಲಿ ಲಾಲ್ ಬಾಗ್ ನಲ್ಲಿರುವ ನಗರಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವ ಸುಮಾರು 7000ದಷ್ಟು ಮನೆ ನಿವೇಶನ ಆಕಾಂಕ್ಷಿಗಳ ಪರಿಸ್ಥಿತಿ ಡೋಲಾಯಮಾನವಾಗಿದೆ. ಕೇಂದ್ರ, ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತವು ನಿವೇಶನ ರಹಿತರಿಗೆ ಸೂರು ನೀಡುವ ಕುರಿತಾದ ಪತ್ರಿಕಾ ಪ್ರಕಟಣೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವಸತಿ ವಿತರಿಸಲಾಗಿದೆ ಎಂಬ ಆಕರ್ಷಕ ಹೇಳಿಕೆಗಳು ರಾರಾಜಿಸುತ್ತಿದೆ. ಆದರೆ ವಾಸ್ತವಿಕವಾಗಿ ಅದು ಕೇವಲ ಪ್ರಚಾರದ ತೆವಳಿಗಾಗಿಯೇ ಹೊರತು ಎಲ್ಲಿಯೂ ಜಾರಿಯಾಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಶಾಸಕರು ವಸತಿ ನೀಡುವ ಬದಲು ನಿವೇಶನ ರಹಿತರ ಹೆಸರಿನಲ್ಲಿ TDR ನೀಡಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ ಎಂದರು.ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನ ಇಡ್ಯಾದಲ್ಲಿ ಬಹುಮಹಡಿಗಳ ನಿವೇಶನ ರಹಿತರ ವಸತಿ ಸಂಕೀರ್ಣ ಕಾಮಗಾರಿ ಅರ್ಧದಲ್ಲೇ ನಿಂತು ಆರು ವರ್ಷಗಳು ಆದರೂ ಕೂಡ ಜನಪ್ರತಿನಿದಿಗಳಿಗೆ ಯಾವುದೇ ಸಂಬಂಧ ಇರದ ರೀತಿಯಲ್ಲಿ ಮೂಕರಾಗಿದ್ದಾರೆಶಕ್ತಿನಗರದಲ್ಲಿಯೂ ವಸತಿ ನಿರ್ಮಾಣ ಯೋಜನೆ ಅಂತಿಮಗೊಂಡಿಲ್ಲ. ಮ.ನ.ಪಾ.ದ ಅಡಳಿತ ಮತ್ತು ಜನಪ್ರತಿನಿಧಿಗಳ ಉಡಾಫೆ ಮನೋಭಾವವೇ ಇದಕ್ಕೆ ಕಾರಣ. ಈ ಎರಡು ಯೋಜನೆಗಳು ಅಲ್ಲದೆ ಟಿಡಿಆರ್‌ನಲ್ಲಿ ವಸತಿಹೀನರ ಹೆಸರಿನಲ್ಲಿ ನಾಲೈದು ಕಡೆ ಮಂಗಳೂರು ಮಹಾನಗರ ಪಾಲಿಕೆ ಜಾಗವನ್ನು ಪಡೆದಿದೆಯೇ ವಿನಾಃ ಕಾಮಗಾರಿಯ ಪ್ರಸ್ತಾಪ ಆಗಿರುವುದಿಲ್ಲ. ಬದಲಾಗಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಎಸಗಲಾಗಿದೆ ಎಂದರು.Dyfi ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಕಳೆದ ಜನವರಿ ತಿಂಗಳಿನಿಂದ ಮೂರು ಬಾರಿ ಪ್ರತಿಭಟನೆಯನ್ನು ನಡೆಸಲಾಗಿದೆ. ಆದರೆ ಕುಂಭಕರ್ಣ ನಿದ್ದೆಯಲ್ಲಿ ಇರುವ ಮಂಗಳೂರು ಮಹಾನಗರ ಪಾಲಿಕೆ ಯಾವುದೇ ರೀತಿಯಲ್ಲಿ ಸ್ಪಂಧಿಸುತ್ತಿಲ್ಲ.ಆದುದರಿಂದ ಮ.ನ.ಪಾ.ದ ಜನವಿರೋಧಿ ಧೋರಣೆ ವಿರೋಧಿಸಿ ತೀವೃ ಸ್ವರೂಪದ ಹೋರಾಟಮುಂದಿನ ದಿನಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರುಪ್ರತಿಭಟನೆಯಲ್ಲಿ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ , ಯುವಜನ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ ಸಭೆಯನ್ನುದ್ದೇಶಿಸಿ. ಮಾತನಾಡಿದರು.ಪ್ರತಿಭಟನೆಯ ನೇತೃತ್ವವನ್ನು ಹೋರಾಟ ಸಮಿತಿಯ ಅಧ್ಯಕ್ಷರಾದ ಅಸುಂತಾ ಡಿಸೋಜ, ನವೀನ್ ಕೊಂಚಾಡಿ , ಅಬ್ದುಲ್ ತಯ್ಯೂಬ್, ನಾಗೇಶ್ ಕೋಟ್ಯಾನ್,ಮನೋಜ್ ವಾಮಂಜೂರ್,ಯೋಗಿತಾ ಉಳ್ಳಾಲ್ ವಹಿಸಿದ್ದರು.ಪ್ರತಿಭಟನೆಯಲ್ಲಿ DHS ಮುಖಂಡರಾದ ಕೃಷ್ಣ ತಣ್ಣೀರುಬಾವಿ, ರಾದಾಕೃಷ್ಣ , ತಿಮ್ಮಯ್ಯ ಕೊಂಚಾಡಿ, DYFI ನ ಜಗದೀಶ ಬಜಾಲ್ , ನಾಸೀರ್ ಬೆಂಗ್ರೆ ಉಪಸ್ಥಿತರಿದ್ದರು.ಹೋರಾಟಸಮಿತಿಯ ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ ವಂದನಾರ್ಪನೆಗೈದರು.

ಪ್ರಾದೇಶಿಕ ವಾರ್ತೆಗಳು

ಗೌರಿಶಂಕರ್ ಸೀವೇಜ್ ಮೂವರ್ಸ್ 13 ವರ್ಷಗಳಿಂದ ಸ್ವಚ್ಛತಾ ಸೇವೆ ಪರಿಸರ ಸಹ್ಯತೆ, ಒಳಚರಂಡಿ ನೈರ್ಮಲ್ಯ ಖಚಿತ

ಮಂಗಳೂರು: ಹದಿಮೂರು ವರ್ಷಗಳಿಂದ ಪರಿಣಿತ ಸಿಬ್ಬಂದಿಗಳೊಂದಿಗೆ ಗ್ರಾಹಕರ ವಿಶ್ವಾಸನೀಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಪರಿಸರ ಸುಸ್ಥಿರತೆಯ ತುರ್ತು ಸಮಸ್ಯೆಯನ್ನು ನಿಭಾಯಿಸುವ ಹಾಗೂ ನಿರ್ಮಲ ಪರಿಸರ ಸ್ಥಾಪನೆಗೆ ಗೌರಿಶಂಕರ್ ಸೀವೇಜ್ ಮೂವರ್ಸ್ (ಕೊಳಚೆ ಸಾಗಾಟಗಾರರು) ಪ್ರವರ್ತಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.ಸಮರ್ಥ ಕೊಳಚೆ ನಿರ್ವಹಣಾ ಪರಿಹಾರಗಳಲ್ಲಿ ಪರಿಣತಿ ಹೊಂದಿರುª ಕಂಪೆನಿಯು ತನ್ನ ನವೀನ ವಿಧಾನಗಳು ಮತ್ತು ಕ್ಲೀನರ್ ಸಮುದಾಯಗಳಿಗೆ ಬದ್ಧತೆಗಾಗಿ ಗಮನ ಸೆಳೆದಿದೆ. ಪರಿಸರ ಜವಾಬ್ದಾರಿಯ ತತ್ವಗಳ ಮೇಲೆ ಸ್ಥಾಪಿತವಾದ ಗೌರಿಶಂಕರ್ ಸಿವೇಜ್ ಮೂವರ್ಸ್ ಸಂಸ್ಥೆಯು ಒಳಚರಂಡಿ ತ್ಯಾಜ್ಯ ತೆಗೆಯುವ ಪ್ರಕ್ರಿಯೆಗಳನ್ನು ಸುವ್ಯಸ್ಥಿತಗೊಳಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಾರೆ. ದಕ್ಷತೆಯನ್ನು ಹೆಚ್ಚಿಸುವಾಗ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತಾರೆ. ಅವರ ಸಮಗ್ರ ಸೇವೆಗಳಲ್ಲಿ ಒಳಚರಂಡಿ ಸಂಸ್ಮರಣೆ, ತ್ಯಾಜ್ಯ ವಿಲೇವಾರಿ ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳು ಸೇರಿವೆ, ಕಠಿಣ ಪರಿಸರ ನಿಯಮಗಳ ಅನುಸರಣೆಯನ್ನು ಖಚಿತಪಡಿಸುತ್ತದೆ. ಎಲ್ಲಾ ಡ್ರೈನೇಜ್ ಬ್ಲಾಕ್ ಸಮಸ್ಯೆಗಳಿಗೆ ಪರಿಹಾರವಾಗಿ ಮಿನಿ ಜೆಟ್ ಸಕ್ಕರ್ ಮತ್ತು ಸ್ಯೂವೇಜ್ ಮೂವರ್, ಚೇಂಬರ್ ಬ್ಲಾಕ್ ಕ್ಲೀನಿಂಗ್, ಪೈಪ್‍ಲೈನ್ ಕ್ಲೀನಿಂಗ್, ಲೀಚ್ ಪಿಟ್ ಕ್ಲೀನಿಂಗ್ ಎಲ್ಲಾ ಎಸ್‍ಟಿಪಿ ಕ್ಲೀನಿಂಗ್, ಕೊಳಚೆನೀರಿನ ಸಮಸ್ಯೆಗಳಿಗೆ ಪರಿಹಾರವನ್ನು ಈ ಸಂಸ್ಥೆಯು ಒದಗಿಸುತ್ತದೆ. ಅಲ್ಲದೆ ಪಿಡಬ್ಲ್ಯೂಡಿ ಕಂಟ್ರಾಕ್ಟರ್, ಒಳಚರಂಡಿ ಕಾಮಗಾರಿ, ಸಿವಿಲ್ ಲೈಸನ್ಸ್ ಹೊಂದಿರುತ್ತದೆ, ಮಂಗಳೂರು, ಪುತ್ತೂರು, ಸುಳ್ಯ, ಮಡಿಕೇರಿಯಲ್ಲಿ ಸಂಸ್ಥೆಯು ಸೇವೆಯನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿರುತ್ತದೆ.ಸಂಪರ್ಕಿಸುವ ವಿಳಾಸ: ಗೌರಿಶಂಕರ್ ಸೀವೇಜ್ ಮೂವರ್ಸ್, ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ, ಕಡೆಕಾರ್, ಜಪ್ಪಿನಮೊಗರು, ಮಂಗಳೂರು.

ಪ್ರಾದೇಶಿಕ ವಾರ್ತೆಗಳು

ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ‘ಹೇ ಪ್ರಭು’ ಬಹುಭಾಷಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ ಸುಧಾಕರ್ ಶೆಟ್ಟಿ.

ಬೆಂಗಳೂರು: ವೆಂಕಟ್ ಭಾರಧ್ವಜ್ ನಮ್ಮ ದೇಶ ಕಂಡ ಪ್ರತಿಭಾವಂತ ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದಾರೆ. ಇವರ ನಿರ್ದೇಶನದ ಭಾರೀ ನಿರೀಕ್ಷೆಯ ಹೇ ಪ್ರಭು ಬಹುಭಾಷಾ ಚಿತ್ರವಾಗಿದೆ. ಇದರಲ್ಲಿ ಮೂಡಬಿದ್ರೆ ಮೂಲದ ಪುಣೆಯ ಹೊರನಾಡ ಕನ್ನಡ ರತ್ನ,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಗ್ರಾಮೀಣ, ಆರೋಗ್ಯ ಮತ್ತು ವೈದ್ಯಕೀಯ ಸಂದೇಶ ಸಾರುವ ಚಿತ್ರವಾಗಿರುವುದ್ದರಿಂದ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಾಗಿದೆ. ಪ್ರಸಿದ್ದ ವೈದ್ಯ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ವೈದ್ಯಕಿಯ ಜಗತ್ತು ಸೇರಿದತೆ ಕರ್ನಾಟಕ, ಮಹಾರಾಷ್ಟ್ರದ ಜನ ‘ಹೇ ಪ್ರಭು’ ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

Scroll to Top