Author name: editor

ಪ್ರಾದೇಶಿಕ ವಾರ್ತೆಗಳು

ವೈದ್ಯಕೀಯ ಜಗತ್ತು ಕಂಡ ಅಪ್ರತಿಮ ವೈದ್ಯ, ಅತ್ಯಂತ ಪ್ರತಿಭಾವಂತ, ಅನುಭವಿ, ಯಶಸ್ವಿ ಹೃದ್ರೋಗ ತಜ್ಞ ಮತ್ತು ಬಡ ರೋಗಿಗಳ ಪಾಲಿನ ಆಶಾಕಿರಣ ಡಾ. ನರಸಿಂಹ ಪೈ ಅವರ ವೈದ್ಯಕೀಯ ಸಮಾಜ ಸೇವೆಗೆ ಮಂಗಳೂರಿಗೆ ಮಂಗಳೂರೇ ಕೊಂಡಾಡುತ್ತಿದೆ. MP MLA’S NEWS PUBLIC VIEW. Special Report by Dr. Ashok Shetty BN

ನಗರದ ಖ್ಯಾತ ಹೃದ್ರೋಗ ತಜ್ಞ, ಕೆಎಂಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಕಾರ್ಡಿಯೋಲಜಿ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲೂ ಪ್ರಮುಖ ಹೃದ್ರೋಗ ವೈದ್ಯರಾಗಿ ಬಡ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ವೈದ್ಯ, ಜನ ಮೆಚ್ಚಿದ ಬೆಸ್ಟ್ ಡಾಕ್ಟರ್ ಎಂದೇ ಜನ ಮಾನಸದಲ್ಲಿ ಗುರುತಿಸಿಕೊಂಡಿರುವ ಮತ್ತು ಸುಪ್ರಸಿದ್ದ ಅಮೃತ ಪಾಲಿ ಕ್ಲಿನಿಕ್ ಜ್ಯೋತಿ ಮಂಗಳೂರಿನಲ್ಲಿ ಪ್ರತಿ ದಿನ ಹಲವಾರು ರೋಗಿಗಳಿಗೆ ಪರೀಕ್ಷೆ ಮಾಡಿ ಗುಣಮುಖರಾಗಿಸುವ ಅದ್ಭುತ ಕೈ ಗುಣದ ಯಶಸ್ವಿ ಹೃದ್ರೋಗ ಶಾಸ್ತ್ರಜ್ಞ, ದಣಿವರಿಯದ ನಿಸ್ವಾರ್ಥ ಸೇವಾ ಮನೋಭಾವದ ವೈದ್ಯಕೀಯ ಜಗತ್ತಿನ ಸೂಪರ್ ಡಾಕ್ಟರ್ ಡಾ. ಡಿ. ನರಸಿಂಹ ಪೈ ಅವರು ಬಡರೋಗಿಗಳ ಪಾಲಿಗೆ ಪ್ರತ್ಯಕ್ಷ ದೇವರು. ಇವರ ಬಗ್ಗೆ mp mlas newstv ಗೆ ಹಲವು ಮಂದಿ ಬರೇ ಗುಡ್ ಅಲ್ಲ ದಿ ಬೆಸ್ಟ್ ಡಾಕ್ಟರ್ ಎಂದಿದ್ದು, 2020 ರಲ್ಲೇ ಇವರಿಗೆ Mp MLA’s news 10ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್ ಹಾಲ್ ನಲ್ಲಿ ನಡೆದಾಗ ಬೆಸ್ಟ್ ಡಾಕ್ಟರ್ಸ್ ಅರ್ವಾಡ್ ನೀಡಿ ಗೌರವಿಸಲಾಗಿತ್ತು.ಉತ್ತಮ ವೈದ್ಯರು, ಸಹೃದಯಿಗಳು ಆಗಿರುವ ಡಾ. ನರಸಿಂಹ ಪೈ ಅವರು Mp MLA’s news ಮತ್ತು mpmlasnewstv 24*7 news portal ನ ಮಹಾಪೋಷಕರಾಗಿದ್ದು, ಬಡರೋಗಿಗಳಿಗೆ ಅವರು ನೀಡುತ್ತಿರುವ ಅನನ್ಯ ಸೇವೆ ಬಗ್ಗೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾದ ಹಿನ್ನಲೆಯಲ್ಲಿ ಅವರನ್ನು ಭೇಟಿಯಾಗಿ mp mlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಅಭಿನಂದನೆ ಸಲ್ಲಿಸಿದರು. ವೈದ್ಯಕೀಯ ಜಗತ್ತು ಕಂಡ ಅಪ್ರತಿಮ ವೈದ್ಯ, ಅತ್ಯಂತ ಪ್ರತಿಭಾವಂತ, ಅನುಭವಿ, ಯಶಸ್ವಿ ಹೃದ್ರೋಗ ತಜ್ಞ ಮತ್ತು ಬಡ ರೋಗಿಗಳ ಪಾಲಿನ ಆಶಾಕಿರಣ ಡಾ. ನರಸಿಂಹ ಪೈ ಅವರ ವೈದ್ಯಕೀಯ ಸಮಾಜ ಸೇವೆಗೆ ಮಂಗಳೂರಿಗೆ ಮಂಗಳೂರೇ ಕೊಂಡಾಡುತ್ತಿದೆ.

ಪ್ರಾದೇಶಿಕ ವಾರ್ತೆಗಳು

ಮಿಶ್ರ ಕೃಷಿ ಪದ್ಧತಿಯಿಂದ ಮಾತ್ರ ಕೃಷಿಯಲ್ಲಿ ಯಶಸ್ಸು ಸಾಧ್ಯ: ಜೋ ಪ್ರದೀಪ್ ಡಿಸೋಜಾ

ವಿಟ್ಲ ಪೆರುವಾಯಿ: ರೈತರು ಕೇವಲ ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿಸದೆ ಮಿಶ್ರ ಕೃಷಿ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜಾ ಹೇಳಿದರು. ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ್ದ ಕೃಷಿ ಮಾಹಿತಿ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಡಿಕೆಯೊಂದಿಗೆ ಉಪಬೆಳೆಗಳಾಗಿ ಕೊಕ್ಕೊ, ಬಾಳೆ, ಕಾಳುಮೆಣಸು ಹಾಗೂ ಆದಾಯದ ಪ್ರಮುಖ ಮೂಲವಾಗಿ ಮಲ್ಲಿಗೆ ಕೃಷಿಯನ್ನು ಕೈಗೊಳ್ಳುವುದರಿಂದ ರೈತರ ಆದಾಯ ಹೆಚ್ಚಿಸಿಕೊಳ್ಳಬಹುದು. ಅಡಿಕೆಗೆ ಬಾಧಿಸುವ ಕೊಳೆ ರೋಗ, ಹಳದಿ ಎಲೆ ರೋಗ ಹಾಗೂ ಸುಳಿ ಕೊಳೆ ರೋಗಗಳ ನಿಯಂತ್ರಣಕ್ಕೆ ಸಕಾಲದಲ್ಲಿ ಬೋರ್ಡೋ ದ್ರಾವಣ ಅಥವಾ ಶಿಲೀಂಧ್ರನಾಶಕ ಸಿಂಪಡಿಸಬೇಕು. ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಎನ್‌ಪಿಕೆ (NPK) ರಾಸಾಯನಿಕ ಗೊಬ್ಬರಗಳನ್ನು ಯೋಗ್ಯ ಪ್ರಮಾಣದಲ್ಲಿ ನೀಡಬೇಕು. ಇದರೊಂದಿಗೆ ಬೆಳೆ ವಿಮೆ ಮಾಡಿಸುವುದು ಅತ್ಯಗತ್ಯ ಎಂದು ಅವರು ರೈತರಿಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಚರ್ಚ್ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು ಹಾಗೂ ವಲಯದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಪೆರುವಾಯಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ, ವಲಯ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ತೋಮಸ್ ಮಸ್ಕರೇನಸ್, ಪೆರುವಾಯಿ ಘಟಕದ ಅಧ್ಯಕ್ಷ ಹಾಗೂ ವಲಯ ಖಜಾಂಚಿ ರಾಲ್ಫ್ ಡಿಸೋಜ, ಪರಿಸರ ಆಯೋಗದ ಸಂಚಾಲಕ ಕೆ. ವಿಲ್ಫ್ರೆಡ್ ಡಿಸೋಜ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕೃಷಿಕರು ಉಪಸ್ಥಿತರಿದ್ದರು. ಮನೋಹರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

Inauguration Ceremony of the M.Sc. Cybersecurity and Artificial Intelligence Programme. School of Information Technology Department of Computer science, St. Joseph’s University, Bengaluru On 18/07/2026, 9:30 A.M. to 10:15 A.M. Xavier Hall, PG Block, SJU, Bengaluru

In keeping with the current relevance of Artificial Intelligence and Cyber Security, the Department of Computer Science, St Joseph’s University, has launched a new postgraduate programme — Master of Science in Cyber Security and Artificial Intelligence (M.Sc. CS & AI).The chief guest of the Inauguration Programme was Mr. Sailesh A. J. Menezes. He is a Human Resource and Talent Management professional with senior HR leadership experience at IBM, Wipro Technologies, and Hewlett Packard Enterprise (HPE), and currently serves as Vice President and Regional HR Leader – India, Asia Pacific and Japan at Hewlett Packard Enterprise. He is also a Josephite alumnus, having completed his schooling, PUC, and degree at Joseph institutions. The ceremony began with students Mr. Joachim and Ms. Nisha’s rendition of a worship song followed by the auspicious lighting of the lamp by the dignitaries on the dais — Mr. Sailesh Menezes, the chief guest; Fr. Denzil Lobo SJ, Director, School of IT; Dr. AM Bojamma, Dean, School of IT; Dr. BG Prasanthi, Associate-Dean and Head of Department, Dept. of CS; Dr. Nithya, PG Coordinator; Dr. Mrinmoyee Bhattacharya, Programme Coordinator, M.Sc. CS & AI; and two students from the inaugural batch.Next, the audience listened to the thought-provoking words of Fr. Denzil, who spoke about AGI (Artificial General Intelligence) and ASI (Artificial Superintelligence) He noted that the emergence of AI can be seen as an exponential change with potential for both positive and negative impact, drawing on the comments of Sam Altman, Reid Hoffman, and other intellectuals in the field. He emphasized the need to look into where and how AI will bring about change in society. Quoting Hoffman, Fr. Denzil pointed out that AI cannot be seen as just another tool or piece of software, but rather as a strategic new way of running things — while AI provides information and predicts, it is humans who ought to make decisions. Fr. Denzil also observed that data has become the new oil, and there is a need to prioritize transparency and security of data. He offered three keys to success and innovation: 1. Be curious. 2. Build things — experiment, fail, improve, and repeat. 3. Be ethical — the important question is not can we build something, but should we build it. Mr. Sailesh Menezes offered his view that AI is more a force for good, though it can also be misused by humans to cause harm. He suggested that for AI to be a force for good and solve society’s problems, we must enable and allow it to do so. Reflecting on the uncertainty of the future, he noted that we don’t really know what the coming years will look like, given how rapidly times are changing — but offered valuable points on staying relevant. He emphasized that we need to be “translators” — translating technology into business outcomes is something organizations find valuable. He also noted that learnability, curiosity, and the ability to adapt are facets that will help us stay relevant as times change.Following the two talks, Ms. Saija Rao, 2nd year M. Sc. Computer Science, shared her experience at SJU. She spoke about the vibrant nature of associations and Bembala outreach, which enable students to engage with the lived realities of people outside urban contexts. She also spoke about the support and encouragement that faculty have been providing her. She said St. Joseph’s has shaped her values and perspective, enabling personal growth, independence, and confidence. The event concluded with the Vote of Thanks delivered by Dr. Mrinmoyee Bhattacharya.

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕೋರ್ಸ್ಗೆ ಚಾಲನೆ

ಬೆಂಗಳೂರು, ಜುಲೈ 18: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ವಿಜ್ಞಾನ ವಿಭಾಗವು ಹೊಸ ಎಂ.ಎಸ್ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ (Cybersecurity and Artificial Intelligence) ಸ್ನಾತಕೋತ್ತರ ಕೋರ್ಸ್ಗೆ ಶನಿವಾರ ಚಾಲನೆ ನೀಡಿತು. ವಿಶ್ವವಿದ್ಯಾಲಯದ ಪಿಜಿ ಬ್ಲಾಕ್ನ ಕ್ಸೇವಿಯರ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್ಪ್ರೈಸ್ (HPE) ಸಂಸ್ಥೆಯ ಭಾರತ, ಏಷ್ಯಾ-ಪೆಸಿಫಿಕ್ ಮತ್ತು ಜಪಾನ್ ವಿಭಾಗದ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಸೈಲೇಶ್ ಎ. ಜೆ. ಮಿನೆಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕರಾದ ಫಾ. ಡೆನ್ಜಿಲ್ ಲೋಬೊ ಎಸ್.ಜೆ. ಮಾತನಾಡಿ, ಕೃತಕ ಬುದ್ಧಿಮತ್ತೆ (AI) ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲ ತಂತ್ರಜ್ಞಾನವಾಗಿದ್ದು, ಅದನ್ನು ನೈತಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯೊಂದಿಗೆ ಬಳಸಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಕುತೂಹಲ, ನಿರಂತರ ಪ್ರಯೋಗ ಮತ್ತು ನೈತಿಕತೆ ಯಶಸ್ಸಿನ ಮೂರು ಪ್ರಮುಖ ಆಧಾರಗಳೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ ಸೈಲೇಶ್ ಮಿನೆಜಸ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ಸಮಾಜದ ಅಭಿವೃದ್ಧಿಗೆ ಮಹತ್ವದ ಸಾಧನವಾಗಿದ್ದು, ತಂತ್ರಜ್ಞಾನವನ್ನು ವ್ಯವಹಾರಿಕ ಫಲಿತಾಂಶಗಳಿಗೆ ಪರಿವರ್ತಿಸುವ ಸಾಮರ್ಥ್ಯ, ಕಲಿಯುವ ಮನೋಭಾವ, ಕುತೂಹಲ ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣಗಳು ಇಂದಿನ ಯುವಜನತೆಗೆ ಅತ್ಯಗತ್ಯವೆಂದು ಹೇಳಿದರು.ಸಮಾರಂಭದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಡಾ. ಎ. ಎಂ. ಬೋಜಮ್ಮ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಬಿ. ಜಿ. ಪ್ರಸಾಂತಿ, ಪಿಜಿ ಸಂಯೋಜಕಿ ಡಾ. ನಿತ್ಯಾ, ಕಾರ್ಯಕ್ರಮ ಸಂಯೋಜಕಿ ಡಾ. ಮೃಣ್ಮಯೀ ಭಟ್ಟಾಚಾರ್ಯ ಹಾಗೂ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡು, ವಂದನಾರ್ಪಣೆಯೊಂದಿಗೆ ಸಮಾಪ್ತಿಯಾಯಿತು.

ಪ್ರಾದೇಶಿಕ ವಾರ್ತೆಗಳು

ಮುಲ್ಕಿಯಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನದ ನಿರ್ಮಾಣ. ಮುಂಬೈಯಲ್ಲಿ ಸಮಾಲೋಚನ ಸಭೆಡಿಸೆಂಬರ್ ನಲ್ಲಿ ಲೋಕಾರ್ಪಣೆ: ಐಕಳ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯ ಕುರಿತು ಹಾಗೂ ಡಿಸೆoಬರ್ ದಿನಾಂಕ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಸಮಾಲೋಚನಾ ಸಭೆಯು “ಬಂಟರ ಸಂಘ ಮುಂಬೈಯ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣ, ಅನೆಕ್ಸ್ ಕಟ್ಟಡ, ಬಂಟರ ಭವನ, ಕುರ್ಲಾ ಮುಂಬೈ ಇಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು.ಸಭೆಯಲ್ಲಿ ಹಾಜರಿದ್ದ ದಾನಿಗಳು ಹಾಗೂ ಸದಸ್ಯರುಗಳಿಗೆ ಸಭಾಭವನ ನಿರ್ಮಾಣದ ಸಾಕ್ಷ್ಯಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಮತ್ತು ಸಭಾಭವನದ ಬಗ್ಗೆ ದಾನಿಗಳ ಹಾಗೂ ಸದಸ್ಯರುಗಳು ಅನಿಸಿಕೆಗಳನ್ನು ತಿಳಿಸಿದರು. ಸಭೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಎನ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ ದಂಪತಿಗಳು, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಶಂಕರ್ ಶೆಟ್ಟಿ ವಿರಾರ್, ಹರೀಶ್ ಶೆಟ್ಟಿ ಪಡುಕುದ್ರು, ಗಿರೀಶ್ ಶೆಟ್ಟಿ ತೆಳ್ಳಾರ್, ಸಿ ಎ ಸದಾಶಿವ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಚಂದ್ರಶೇಖರ ಎಸ್ ಶೆಟ್ಟಿ, ಡಾ. ಸದಾನಂದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿoಜೆ, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಆನಂದ್ ಡಿ. ಶೆಟ್ಟಿ ಎಕ್ಕಾರ್, ವಾಸು ಶೆಟ್ಟಿ ಬಿವಾಂಡಿ, ಜಯಂತ್ ಶೆಟ್ಟಿ ಥಾಣೆ, ಕೃಷ್ಣ ವಿ. ಶೆಟ್ಟಿ ಸಯನ್, ರತ್ನ ಪಿ. ಶೆಟ್ಟಿ, ಮನೋರಮ ಎನ್. ಬಿ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಲತಾ ಪಿ. ಶೆಟ್ಟಿ, ವಜ್ರಾಕ್ಷಿ ಪೂಂಜ ಮತ್ತು ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಪದಾಧಿಕಾರಿಗಳಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನದಾಸ್ ಶೆಟ್ಟಿ, ಚಂದ್ರಹಾಸ್ ಡಿ. ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಸಭಾಭವನ ನಿರ್ಮಾಣದ ಉಸ್ತುವಾರಿ ಇಂಜಿನಿಯರ್ ಗೋಪಾಲ್ ಭಟ್, ಒಕ್ಕೂಟದ ಲೆಕ್ಕಪರಿಶೋಧಕರಾದ ಸಿ. ಎ. ದಯಶರಣ್ ಶೆಟ್ಟಿ, ಸದಸ್ಯರಾದ ಮುಂಬೈ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರು ಅಡ್ವೋಕೇಟ್ ಡಿ. ಕೆ. ಶೆಟ್ಟಿ ಉಪಾಧ್ಯಕ್ಷರು ಐಕಳ ಕಿಶೋರ್ ಶೆಟ್ಟಿ ಕಾರ್ಯದರ್ಶಿ ಶೇಖರ್ ಶೆಟ್ಟಿ, ಬಂಟ್ಸ್ ಪೋರಂ ಮೀರಾ ರೋಡ್ ನ ಅಧ್ಯಕ್ಷರು ಉದಯ್ ಶೆಟ್ಟಿ ಮಲ್ಲಾರ್ ಬೀಡು, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಥಾಣೆ ಬಂಟ್ಸ್ ಅಸೋಶಿಯನ್ ನ ಮಾಜಿ ಅಧ್ಯಕ್ಷರು ಸುನಿಲ್ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ ಕುತ್ತೆತ್ತೂರು, ನವನೀತ್ ಶೆಟ್ಟಿ ಕದ್ರಿ, ಪ್ರವೀಣ್ ಶೆಟ್ಟಿ ವರಂಗ, ಶಾಲಿನಿ ಶೆಟ್ಟಿ ಶ್ರೀಶಕ್ತಿ ಫೌಂಡೇಶನ್ ಮೀರಾರೋಡ್ ನ ಅಧ್ಯಕ್ಷೆ, ಜಯಂತಿ ಶೆಟ್ಟಿ ನವಿ ಮುಂಬೈ, ಜ್ಯೋತಿ ಶೆಟ್ಟಿ ನವಿ ಮುಂಬೈ, ಚೇತನಾ ಸುರೇಶ್ ಶೆಟ್ಟಿ,ಸರೋಜ ಶೆಟ್ಟಿ, ಜಯಶ್ರೀ ಶೆಟ್ಟಿ, ಮಮತಾ ಭಂಡಾರಿ, ಶೋಭ ಶೆಟ್ಟಿ, ಅರುಣಾ ಶೆಟ್ಟಿ, ಉಷಾ ಶ್ರೀಧರ್ ಶೆಟ್ಟಿ,ಅನಿತಾ ಅಶೋಕ್ ಶೆಟ್ಟಿ,ಹರೀಶ್ ಶೆಟ್ಟಿ ಕಲ್ಯಾಣ್, ರವಿ ಶೆಟ್ಟಿ ಕಲ್ಯಾಣ್, ಸಿ. ಎ. ರಮೇಶ್ ಶೆಟ್ಟಿ, ಸಿ. ಎ. ಸುಕುಮಾರ್ ಶೆಟ್ಟಿ, ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೂನಾ, ಭಾಸ್ಕರ್ ಶೆಟ್ಟಿ CBD ಪನ್ವೆಲ್, ರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ರವೀಂದ್ರ ಶೆಟ್ಟಿ ಪಡುಬಿದ್ರಿ, ನಾಗೇಶ್ ಶೆಟ್ಟಿ ಐರೋಳಿ, ವಿಠ್ಠಲ್ ಆಳ್ವ, ಜಯ ಎ. ಶೆಟ್ಟಿ, ಧನಂಜಯ ಪಿ. ಶೆಟ್ಟಿ, ವನಿತಾ ನೋಂಡ, ಬಾಬಣ್ಣ ಶೆಟ್ಟಿ ಅನ್ನೇದಗುತ್ತು, ಸುಕೇಶ್ ಶೆಟ್ಟಿ ಅನ್ನೇದಗುತ್ತು, ಅಡ್ವೋಕೇಟ್ ಆರ್. ಜಿ. ಶೆಟ್ಟಿ, ಚಂದ್ರಶೇಖರ ಪಾಲೇತ್ತಾಡಿ, ವೈ ಟಿ ಶೆಟ್ಟಿ, ದಿನೇಶ್ ಕುಲಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಜಪೆಯಲ್ಲಿ ಗಿಡ ನೆಡುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ 58ನೆ ವಾರ್ಷಿಕ ದಿನಾಚರಣೆ

ಮಂಗಳೂರು,ಜು.19; ಜುಲೈ1969 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕು‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಈ ಐತಿಹಾಸಿಕ ನಿರ್ಧಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು “ವರ್ಗ ಬ್ಯಾಂಕಿಂಗ್’ನಿಂದ “ಜನಸಾಮಾನ್ಯರ ಬ್ಯಾಂಕಿಂಗ್” ಆಗಿ ಪರಿವರ್ತಿಸಿತು ಎಂದು ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ತಿಳಿಸಿದ್ದಾರೆ.ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದ ವತಿಯಿಂದ ಬ್ಯಾಂಕ್ ರಾಷ್ಟ್ರೀಕರಣದ ದಿನದ 58ನೆ ವರ್ಷಾರಣೆಯ ಅಂಗವಾಗಿ ಬಜ್ಪೆ ಹಳೆ ವಿಮಾನ ನಿಲ್ದಾಣ ರಸ್ತೆಯ ಬಳಿ ಇರುವ ವಿಜಯ ಮಂಗಳ ಲೇಔಟ್ ನಲ್ಲಿ ರವಿವಾರ ‘ಭೂಮಿಯನ್ನು ಉಳಿಸಲು ಸಸಿ ನೆಡಿ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ,1980ರ ಏಪ್ರಿಲ್ 15ರಂದು ಇನ್ನೂ ಆರು ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳನ್ನು ಮತ್ತಷ್ಟು ಬಲಪಡಿಸಲಾಯಿತು.ಬ್ಯಾಂಕ್ ನೌಕರರು ಮತ್ತು ನಿವೃತ್ತರು ಪ್ರತಿವರ್ಷ ಜುಲೈ 19ರಂದು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿ ಸುವ ಮೂಲಕ ಆಚರಿಸುತ್ತಾ ಬಂದಿದ್ದಾರೆ. ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರಾದ ನಾವು, ಬ್ಯಾಂಕ್ ರಾಷ್ಟ್ರೀಕರಣದ ಉದಾತ್ತ ಗುರಿಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ ಎಂಬ ಹೆಮ್ಮೆಯನ್ನು ಹೊಂದಿದ್ದೇವೆ. ಆದ್ದರಿಂದ, ಈ ದಿನವನ್ನು ನಾವು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಈ ವರ್ಷ, ನಮ್ಮ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟವು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು “ಭೂಮಿಯನ್ನು ಉಳಿಸಲು ಒಂದು ಗಿಡ ನೆಡೋಣ” ಎಂಬ ವಿನೂತನ ಮತ್ತು ಶ್ರೇಷ್ಠ ಕಾರ್ಯಕ್ರಮದ ಮೂಲಕ ಆಚರಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂಆರ್ ಭಟ್ ಮಾತನಾಡುತ್ತಾ, ಬ್ಯಾಂಕ್ ಶಾಖೆಗಳು ದೇಶದ ಅತ್ಯಂತ ದೂರದ ಪ್ರದೇಶಗಳಿಗೂ ವಿಸ್ತರಿಸಲ್ಪಟ್ಟವು ಮತ್ತು ಸಮಾಜದ ಅತ್ಯಂತ ಬಡ ವರ್ಗ ದವರಿಗೂ ಬ್ಯಾಂಕಿಂಗ್ ಸೌಲಭ್ಯಗಳು ದೊರೆಯು ವಂತಾಯಿತು ಎಂದು ಎಂಆರ್ ಭಟ್ ತಿಳಿಸಿದ್ದಾರೆ.ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಾಯೋಜಕ ರಾದ ಮುದ್ರಾಣಿ ಹೋಮ್ಸ್‌ನ ಪಾಲುದಾರ ಗುರುರಾಜ್ ಶೆಣೈ, ವಿಜಯ ಮಂಗಳ ಹೌಸಿಂಗ್ ಸಹಕಾರ ಸಂಘದ ಅಧ್ಯಕ್ಷ ಕೆ. ಬಾಲಪ್ಪ ಶೆಟ್ಟಿ,ಪದಾಧಿಕಾರಿಗಳಾದ ಕೆ. ಜಯಂತ ಶೆಟ್ಟಿ, ಎಂ.ಶ್ರೀಧರ ಶೆಟ್ಟಿ, ಎಂ. ದಯಾನಂದ ಶೆಟ್ಟಿ ಹಾಗೂ ಕಮಲಾಕ್ಷ, ಮತ್ತು ಜಿಲ್ಲೆಯ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮೊದಲಾದವರು ಉಪಸ್ಥಿತರಿ ದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನಲ್ಲಿ 5ನೇ ರಾಷ್ಟ್ರೀಯ ಕೊಂಕಣಿ ಚಾರೋಳಿ ಸಾಹಿತ್ಯ ಸಮ್ಮೇಳನ 2026ಕ್ಕೆ ಭವ್ಯ ಉದ್ಘಾಟನೆ *ಚಾರೋಳಿ ಕವಿತೆಗಳು ಹೃದಯ ಮತ್ತು ಮನಸ್ಸಿನ ಭಾಷೆ: ಎಂ. ಪಿ. ನೊರೊನ್ಹಾ

ಮಂಗಳೂರು, ಜುಲೈ 19: ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಭಾನುವಾರ ನಡೆದ 5ನೇ ರಾಷ್ಟ್ರೀಯ ಕೊಂಕಣಿ ಚಾರೋಳಿ ಸಾಹಿತ್ಯ ಸಮ್ಮೇಳನ 2026 ಅನ್ನು ಪ್ರಧಾನ ಜಿಲ್ಲಾ ಸರ್ಕಾರಿ ಅಭಿಯೋಜಕರೂ ಹಿರಿಯ ವಕೀಲರೂ ಆದ ಎಂ. ಪಿ. ನೊರೊನ್ಹಾ ಉದ್ಘಾಟಿಸಿದರು.ಉದ್ಘಾಟನಾ ಭಾಷಣದಲ್ಲಿ ಅವರು, ಭಾರತ ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಕೊಂಕಣಿ ಭಾಷೆಗೆ ಹಲವು ರಾಜ್ಯಗಳಲ್ಲಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆ ದೊರೆತಿದೆ ಎಂದು ಹೇಳಿದರು.ಕಾವ್ಯವು ಹೃದಯ ಮತ್ತು ಮನಸ್ಸಿನ ಭಾಷೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ವೇಗದ ಯುಗದಲ್ಲಿ ಜನರು ಎಲ್ಲದರಲ್ಲೂ ಸಂಕ್ಷಿಪ್ತತೆಯನ್ನು ಬಯಸುತ್ತಿದ್ದಾರೆ. ಸಕ್ಕರೆರಹಿತ, ತಂತಿರಹಿತ, ಹಾನಿರಹಿತ, ನಿರ್ಭಯ ಎಂಬ ಪದಗಳು ಇಂದು ಸಾಮಾನ್ಯ ಬಳಕೆಯಲ್ಲಿವೆ. ಅದೇ ರೀತಿ ದೀರ್ಘ ಕವಿತೆಗಳನ್ನು ಓದಲು ಸಮಯವಿಲ್ಲದ ಕಾರಣ ನಾಲ್ಕು ಸಾಲಿನ ಚಾರೋಳಿ ಕವಿತೆಗಳು ಓದುಗರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಅವರು ಹೇಳಿದರು.ದೀರ್ಘ ಕವಿತೆಯ ಸಾರವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಅದಕ್ಕೆ ಭಾಷೆಯ ಮೇಲಿನ ಹಿಡಿತ, ವಿಷಯದ ಆಳವಾದ ಜ್ಞಾನ ಮತ್ತು ಅಪಾರ ಪ್ರತಿಭೆ ಅಗತ್ಯ ಎಂದು ಅವರು ಹೇಳಿದರು.ಕೊಂಕಣಿ ಚಾರೋಳಿ ಸಾಹಿತ್ಯದ ಬೆಳವಣಿಗೆಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ರೇಮಂಡ್ ಡಿಕುನ್ಹಾ ಮತ್ತು ಅವರ ತಂಡವನ್ನು ಎಂ. ಪಿ. ನೊರೊನ್ಹಾ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ರೇಮಂಡ್ ಡಿಕುನ್ಹಾ ಅವರ ಸಾಹಿತ್ಯ ಸೇವೆ ಮತ್ತು ತ್ಯಾಗವನ್ನು ಪ್ರಶಂಸಿಸಿ, ತಾವು ರಚಿಸಿದ ನಾಲ್ಕು ಸಾಲಿನ ಕೊಂಕಣಿ ಚಾರೋಳಿಯನ್ನು ವಾಚಿಸಿ ಸಭಿಕರ ಮೆಚ್ಚುಗೆ ಗಳಿಸಿದರು.ಚಾರೋಳಿ ಕವಿತೆಗಳು ಜೀವನ, ಸೌಂದರ್ಯ, ಪ್ರಕೃತಿ, ಪ್ರೀತಿ ಮತ್ತು ಸಂತೋಷವನ್ನು ಮಾತ್ರ ಪ್ರತಿಬಿಂಬಿಸದೆ, ಭಾರತೀಯ ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿಯನ್ನೂ ಹೊಂದಿರಬೇಕು ಎಂದು ಅವರು ಹೇಳಿದರು. ಸಮಾಜವನ್ನು ಉತ್ತಮ ಮೌಲ್ಯಗಳತ್ತ ಕೊಂಡೊಯ್ಯುವ ಜವಾಬ್ದಾರಿ ಕವಿಗಳ ಮೇಲಿದೆ ಎಂದು ಅಭಿಪ್ರಾಯಪಟ್ಟ ಅವರು, ಯುವಜನರನ್ನು ಚಾರೋಳಿ ಸಾಹಿತ್ಯದತ್ತ ಆಕರ್ಷಿಸುವ ಮೂಲಕ ಈ ಸಾಹಿತ್ಯ ಪ್ರಕಾರ ವಿಶ್ವದಾದ್ಯಂತ ಹರಡಲಿ ಎಂದು ಹಾರೈಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಮಂಡ್ ಡಿಕುನ್ಹಾ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು . ಚಾರೋಳಿ ಸಾಹಿತ್ಯವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ಜವಾಬ್ದಾರಿ ಸಾಹಿತ್ಯಾಸಕ್ತರ ಮೇಲಿದೆ ಎಂದು ಅವರು ಹೇಳಿದರು. ಯುವಜನರನ್ನು ಚಾರೋಳಿ ರಚನೆ ಮತ್ತು ಓದಿನತ್ತ ಪ್ರೇರೇಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಕಳೆದ ಆರು ವರ್ಷಗಳಿಂದ ತಾವು ಪ್ರತಿದಿನ ಕೊಂಕಣಿ ಚಾರೋಳಿಗಳನ್ನು ರಚಿಸಿ ಆನ್‌ಲೈನ್ ಮೂಲಕ ಪ್ರಕಟಿಸುತ್ತಿದ್ದು, ಈ ಮೂಲಕ ಚಾರೋಳಿ ಸಾಹಿತ್ಯದ ಪ್ರಸಾರಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಗಳೂರಿನ ಶ್ರೀಮತಿ ಅರುಂಧತಿ ವಿ. ರಾವ್ ಹಾಗೂ ಗೋವಾದ ಶ್ರೀಮತಿ ಅನ್ನಿ ಡಿ. ಕೊಲ್ವಾಲೆ ಅವರಿಗೆ ಕೊಂಕಣಿ ಚಾರೋಳಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಕೊಂಕಣಿ ಚಾರೋಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಗೋವಾದ ಶ್ರೀ ಎಲಿಯಾಸ್ ಫೆರ್ನಾಂಡಿಸ್ ಹಾಗೂ ಶ್ರೀ ಗೌರೀಶ್ ವರ್ನೇಕರ್ ಉಪಸ್ಥಿತರಿದ್ದರು.ಸೇಂಟ್ ಆನ್ಸ್ ಫ್ರೈರಿ, ಮಂಗಳೂರಿನ ಸುಪೀರಿಯರ್ ರೆವ. ಫಾ. ಜೆರಾಲ್ಡ್ ಲೋಬೊ, OFM Cap. ಪ್ರಾರ್ಥನಾ ವಿಧಿ ನಡೆಸಿ ಸಮ್ಮೇಳನಕ್ಕೆ ದೇವರ ಆಶೀರ್ವಾದ ಕೋರಿದರು.ಸಮ್ಮೇಳನದ ಅಧ್ಯಕ್ಷ ಶ್ರೀ ರೇಮಂಡ್ ಡಿಕುನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ರಿಯಾನಾ ಡಿಕುನ್ಹಾ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ನತಾಲಿಯಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.ಮಂಗಳೂರು, ಉಡುಪಿ, ಕಾರವಾರ, ಗೋವಾ, ಕೇರಳ, ಹೈದರಾಬಾದ್, ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ಮತ್ತು ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಚಾರೋಳಿ ಸಾಹಿತ್ಯದ ರಾಷ್ಟ್ರೀಯ ಉತ್ಸವಕ್ಕೆ ಮೆರುಗು ತಂದರು.

ಪ್ರಾದೇಶಿಕ ವಾರ್ತೆಗಳು

ಬೈಲೂರು: ‘ಊರು ಬೋಡು ಪುದರ್ ಬೊಡ್ಚಿ’ ನಾಟಕದ ಶುಭಮುಹೂರ್ತ

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ “ಊರು ಬೋಡು ಪುದರ್ ಬೊಡ್ಚಿ” ಇದರ ಶುಭ ಮುಹೂರ್ತ ಕಾರ್ಯಕ್ರಮ ಜುಲೈ 16ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.ಅರ್ಚಕರಾದ ನಾರಾಯಣ ಭಟ್ ಕೌಡೂರು ನಾಟಕ ಮುಹೂರ್ತದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ನಾಟಕದ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.ತಂಡದ ಸಾರಥಿ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು , ಪದ್ಮರಾಜ ಹೆಗ್ಡೆ, ಹರೀಶ್ ಶೆಟ್ಟಿ, ಹರಿಜೀವನ ಹೆಗ್ಡೆ, ಕುಟ್ಟಿ ಶೇರಿಗಾರ್, ಗುಣಕರ ಶೆಟ್ಟಿ, ಶರತ್ ಉಚ್ಚಿಲ, ದಿಲೀಪ್ ಶೆಟ್ಟಿ, ಸದಾನಂದ ಸಾಲಿಯನ್, ಪ್ರಸಾದ್ ಐಸಿರ, ಗುರುರಾಜ್ ಮಾಡ, ಕೃಷ್ಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸುಬ್ರಮಣ್ಯ ಬೈಲೂರು, ವಿಶ್ವೇಶ್ ಕೌಡೂರು, ಸುರೇಶ್ ಶೆಟ್ಟಿ, ಚೈತನ್ಯ ಕಲಾವಿದರು ತಂಡದ ಸದಸ್ಯರು ಮತ್ತಿತರರು ಉಪಸ್ಥಿರಿದ್ದರು

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಅವರಿಗೆ ಬೀಳ್ಕೊಡುಗೆ

ಮಂಗಳೂರು: ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಿಶೋರ್‌ಚಂದ್ರ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಕಚೇರಿ ಸಭಾಂಗಣದಲ್ಲಿ ನಡೆಯಿತು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ವಿಜಯಬ್ಯಾಂಕ್‌ನ ಎಜಿಎಂ ಆಗಿ, ಖಾಯಂ ಜನತಾ ನ್ಯಾಯಾಲಯದ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದ ಕಿಶೋರ್‌ಚಂದ್ರ ಹೆಗ್ಡೆ ಅವರು ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿಯಾಗಿ ಸಂಸ್ಥೆಯ ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಾರ್ಯನಿರ್ವಹಣೆ, ಬದ್ಧತೆ, ಸಮರ್ಪಿತ ಸೇವೆ ರೆಡ್‌ಕ್ರಾಸ್‌ಗೆ ಸದಾ ಸ್ಪೂರ್ತಿದಾಯಕವಾಗಿದೆ’ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ.ಸಚ್ಚಿದಾನಂದ ರೈ, ಖಜಾಂಜಿ ಗುರುದತ್.ಎಂ.ನಾಯಕ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ,ಡಾ.ಸುಮನ.ಬಿ., ರಾಘವೇಂದ್ರ ರಾವ್, ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

Scroll to Top