Author name: editor

ಪ್ರಾದೇಶಿಕ ವಾರ್ತೆಗಳು

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ದ.ಕ ರಾಜ್ಯದಲ್ಲಿ ಅಗ್ರಸ್ಥಾನ- ಭರತ್ ಮುಂಡೋಡಿ. *ಗ್ಯಾರಂಟಿ ಯೋಜನೆಯಲ್ಲಿದ.ಕ ಜಿಲ್ಲೆಗೆ ರೂ 1464.22 ಕೋಟಿ ಅನುದಾನ. *ಗೃಹ ಜ್ಯೋತಿ ಯೋಜನೆಯಲ್ಲಿ ಶೇ 98 ಪ್ರಗತಿ.

ಮಂಗಳೂರು;ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಳಿಕ ಕರ್ನಾಟಕ ರಾಜ್ಯ ಜಿಡಿಪಿ ಸೂಚ್ಯಂಕದ ಪ್ರಕಾರ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳು ಕಳೆಯುವುದರೊಳಗೆ ಎಲ್ಲಾ ಗ್ಯಾರಂಟಿ ಯೋಜನೆ ಗಳನ್ನು ಜಾರಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ದಕ್ಷಿಣ ಕನ್ನಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಶನಿವಾರ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯಲ್ಲಿಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ವಿವರಣೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ನನಗೆ ನೀಡಿದ ಬಳಿಕ ತಾಲೂಕು ಸಮಿತಿಗಳನ್ನು ರಚನೆ ಮಾಡಿಕಚೇರಿಗಳನ್ನು ಆರಂಭಿಸಿದೆ.ಬಳಿಕ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗಿದೆ.ಗೃಹ ಜ್ಯೋತಿ ಯೋಜನೆಯಲ್ಲಿದ.ಕ ಜಿಲ್ಲೆ ಶೇ 98 ಪ್ರಗತಿ ಸಾಧಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.ಈ ಯೋಜನೆಯ ಮೂಲಕ 5.51 ಲಕ್ಷ ಫಲಾನುಭವಿಗಳಿಗೆ 2023-24 ನೆ ಸಾಲಿನಲ್ಲಿ ರೂ. 276.87 ಕೋಟಿ,ಹಾಗೂ 2024ರ ನವೆಂಬರ್ ವರೆಗೆ282.3ಕೋಟಿ ರೂ ಮೊತ್ತದ ಉಚಿತ ವಿದ್ಯುತ್ ನೀಡಲಾ ಗಿದೆ.ಗೃಹಲಕ್ಷ್ಮಿ ಯೋಜನೆಯಲ್ಲಿ 3,72,300 ಮಹಿಳೆಯರು ರೂ.943.41ಕೋಟಿ ಆರ್ಥಿಕ ಸಹಾಯ ಪಡೆದಿರುತ್ತಾರೆ. ಶಕ್ತಿ ಯೋಜನೆ ಯಲ್ಲಿ 6 ಕೋಟಿ 79 ಲಕ್ಷ ಮಹಿಳೆಯರು ಪ್ರಯಾಣ ಮಾಡಿ 219.86 ಕೋಟಿ ಆರ್ಥಿಕ ನೆರವು ಪಡೆದಿರುತ್ತಾರೆ‌.ಯುವನಿಧಿ ಯೋಜನೆ ಯಡಿ 4240 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 3643 ಫಲಾನುಭವಿಗಳು ರೂ 3,87,94,500 ನಿರುದ್ಯೋಗ ಭತ್ತೆ (ಅಕ್ಟೋಬರ್‌ 2024 ರವರೆಗೆ) ಪಡೆದಿರುತ್ತಾರೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ 2,59,730 ಪಡಿತರ ಚೀಟಿ ಹೊಂದಿದವರ ಖಾತೆಗೆ 5.61 ಲಕ್ಷ ಅರ್ಹ ಫಲಾನುಭವಿಗಳಿದ್ದು 282.03 ಕೋಟಿ ವರ್ಗಾವಣೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಗೆ 1464 ಕೋಟಿ 21 ಲಕ್ಷದ 94,500 ಹಣ ಬಂದಿದೆ.ನಮ್ಮ ರಾಜ್ಯದ ಬಜೆಟ್ ಗಾತ್ರ 3 ಲಕ್ಷದ 78ಸಾವಿರ ಕೋಟಿ ರೂಪಾಯಿ. ಆದರೆ ವಾರ್ಷಿಕ 56000 ಕೋಟಿ ರೂಪಾಯಿ ಹಣವನ್ನು ನಮ್ಮ ಪಂಚ ಗ್ಯಾರಂಟಿ ಯೋಜನೆಗಳಿಗೆ ವ್ಯಯ ಮಾಡಬೇಕಿದೆ. ರಾಜ್ಯದ ಜನತೆಗೆ ನೀಡಿರುವ ಉಚಿತ ವಿದ್ಯುತ್ ಬಿಲ್ ಯೋಜನೆ, ವಿದ್ಯಾವಂತ ನಿರುದ್ಯೋಗಿ ಭತ್ಯೆ, ಶಕ್ತಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆ, ಅನ್ನ ಭಾಗ್ಯ ಯೋಜನೆಯಲ್ಲಿ 5 ಕೆಜಿ ಇದ್ದ ಅಕ್ಕಿಯನ್ನು 10 ಕೆಜಿಗೆ ಏರಿಕೆ, ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡುವ ಗೃಹಲಕ್ಷ್ಮಿ ಯೋಜನೆ ಇದೆಲ್ಲ ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ“ ಎಂದು ಭರತ್ ಮುಂಡೋಡಿ ಹೇಳಿದರು. ಸರಕಾರದಲ್ಲಿ ಹಣವಿಲ್ಲ ಅಭಿವೃದ್ಧಿ ಕಾರ್ಯ ನಿಂತಿದೆ ಎಂದು ಬಿಜೆಪಿ ಸಹಿತ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ,ರಾಜ್ಯ ಬಜೆಟ್ ನಲ್ಲಿ ರೂ3,32,000 ಕೋಟಿ ಇತರ ಯೋಜನೆಗಳಿಗೆ ಇರಿಸಲಾಗಿದೆ.ಪ್ರತಿ ವಿಧಾನ ಸಭಾವಕ್ಷೇತ್ರದ ಅಭಿವೃದ್ಧಿಗೆ ರೂ 10 ,ಕೋಟಿ ನೀಡುವ ಬಗ್ಗೆ ಈಗಾಗಲೇ ಮುಖ್ಯ ಮಂತ್ರಿ ಭರವಸೆ ನೀಡಿದ್ದಾರೆ.ಜಿಡಿಪಿಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ಯೋಜನೆ ಗಳಲ್ಲಿ ಮಧ್ಯವರ್ತಿ ಗಳಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತಿದೆ. ಈ ಯೋಜನೆಗಳಿಂದ ಯಾರೂ ದಿವಾಳಿ ಯಾಗುವುದಿಲ್ಲ,ಬದಲಾಗಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಜನರ ಕೈಗೆ ಹಣ ಹೋಗಿದೆ.ಅತ್ತೆ ಸೊಸೆ ಇಬ್ಬರು ಸೇರಿ ಕುಟುಂಬದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎನ್ನುವುದಕ್ಕೆ ರಾಜ್ಯದಲ್ಲಿ ಉದಾಹರಣೆಇದೆ.ಕರಾವಳಿ ಉತ್ಸವದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಮಳಿಗೆ ಆರಂಭಿಸ ಲಾಗುವುದು ಎಂದು ಅವರು ಹೇಳಿದರು. ನಬಾರ್ಡ್ ಮೂಲಕ ಅಪೆಕ್ಸ್ ಬ್ಯಾಂಕ್ ಗಳಿಗೆ ಶೇ 50 ಅನುದಾನ ಕಡಿತ ಮಾಡಿರು ವುದರಿಂದ ರೈತರಿಗೆ ಬರಬೇಕಾದ ಸಾಲಕ್ಕೆ ಕಡಿತವಾಗುತ್ತಿದೆ.ಆದಾಯ ತೆರಿಗೆ ಇಲಾಖೆಯ ಕೆಲವು ತಾಂತ್ರಿಕ ಕಾರಣಗಳಿಂದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಯಾಗಿದೆ ಇದನ್ನು ಸರಿಪಡಿಸಬೇಕಾಗಿದೆ.“ದಕ್ಷಿಣ ಕನ್ನಡದ ಪತ್ರಕರ್ತರ ಸಂಘಗ್ರಾಮ ವಾಸ್ತವ್ಯದ ಮೂಲಕ ಗ್ರಾಮದ ಜನರಿಗೆ ನೆರವಾಗುವ ಶ್ಲಾಘನೀಯ ಕಾರ್ಯ ಮಾಡುತ್ತಿದೆ.ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಮಡಪ್ಪಾಡಿಯಲ್ಲಿ ನಡೆದಿದ್ದ ಗ್ರಾಮ ವಾಸ್ತವ್ಯದಿಂದ ಊರಿಗೆ ಸುಸಜ್ಜಿತ ರಸ್ತೆ ಸಹಿತ ಅನೇಕ ಯೋಜನೆಗಳು ಜಾರಿಯಾಗಿವೆ. ಇದಕ್ಕಾಗಿ ಅಭಿನಂದನೆಗಳು“ ಎಂದರು.ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿ ತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಕರಾವಳಿ ಉತ್ಸವ ಬ್ಯಾನರ್ ಬಿಡುಗಡೆ.

ಮಂಗಳೂರು:ಡಿಸೆಂಬರ್ 21 ರಿಂದ ಆರಂಭ ವಾಗುವ ಕರಾವಳಿ ಉತ್ಸವದ ಕುರಿತು ಜನರಿಗೆ ಮಾಹಿತಿ ನೀಡಲು ಖಾಸಗಿ ಬಸ್ ಗಳಲ್ಲಿ ಬ್ಯಾನರ್ ಅಳವಡಿಸುವ ಕಾರ್ಯಕ್ರಮಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲಾಡ್ ಸ್ಟೇಟ್ ಬ್ಯಾಂಕ್ ಬಳಿ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ಕರಾವಳಿ ಉತ್ಸವಕ್ಕೆ ಹೆಚ್ಚಿನ ಪ್ರಚಾರ ನೀಡಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ಈ ಕಾರ್ಯಕ್ರಮವನ್ನು ಆಯೋಜಿಸಿದೆ.ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ರಾಕೇಶ್, ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಾದ ದಿಲ್ ರಾಜ್ ಆಳ್ವ, ಅಬ್ದುಲ್ ರಝಕ್, ಶರತ್ ಮರೋಳಿ, ಜಯಶೀಲಾ ಅಡ್ಯ0ತ್ಯಾಯ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಂಪಿಗೆ ರೆಸಾರ್ಟ್ ಉದ್ಘಾಟಿಸಿ ಡಾ.ಎಂ.ಮೋಹನ ಆಳ್ವ ಬಣ್ಣನೆ: ಹುಟ್ಟೂರಿಗೆ ಬಹುದೊಡ್ಡ ಕೊಡುಗೆ

ಮೂಡುಬಿದಿರೆ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಬುಧವಾರ ಶುಭಾರಂಭಗೊಂಡಿತು. ಡಾ.ಎಂ.ಮೋಹನ ಆಳ್ವ, ಉಮಾನಾಥ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಕೃಷ್ಣ ಜೆ.ಪಾಲೆಮಾರ್, ಕೆ.ಅಭಯಚಂದ್ರ ಜೈನ್, ಮಿಥುನ್ ರೈ,ತಿಮ್ಮಯ್ಯ ಶೆಟ್ಟಿ, ಕೆ.ಶ್ರೀಪತಿ ಭಟ್, ಶ್ರೀಧರ ಆಚಾರ್ಯ, ನಾರಾಯಣ ಪಿ.ಎಂ., ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಡಾ.ಸುಧಾಕರ ಶೆಟ್ಟಿ ಮತ್ತಿತರರು ಇದ್ದರು.ಹೋಟೆಲ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿದ ಪ್ರವೀಣ್ ಶೆಟ್ಟಿ ತಮ್ಮ ಅನುಭವವನ್ನು ಧಾರೆಯೆರೆದು ವಿಶ್ವದರ್ಜೆಯ ರೆಸಾರ್ಟ್ ನಿರ್ಮಿಸಿದ್ದಾರೆ. ಇದು ಹುಟ್ಟೂರಿಗೆ ಅವರು ನೀಡಿದ ಬಹುದೊಡ್ಡ ಕೊಡುಗೆ. ಅಚ್ಚುಕಟ್ಟುತನದಿಂದ ನಿರ್ಮಿಸಿದ ಈ ರೆಸಾರ್ಟ್‌ಗೆ ಉತ್ತಮ ಭವಿಷ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.ಪುಣೆಯ ಅತಿಥಿ ಗ್ರೂಫ್ ಆಫ್ ರೆಸ್ಟೋರೆಂಟ್ಸ್‌ನ ಸಹಸಂಸ್ಥೆಯಾಗಿ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡುಬಿದಿರೆಗೆ ಭೇಟಿ ನೀಡುವವರಿಗೆ ಸ್ಟಾರ್ ಹೋಟೆಲ್ ಸೌಲಭ್ಯ ಸಿಗಲಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇದು ನಿರ್ಮಾಣಗೊಂಡಿದ್ದು, ಇಲ್ಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.ಸಂಪಿಗೆ ರೆಸಾರ್ಟ್ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಮಾತನಾಡಿ, ಹುಟ್ಟೂರಿನಲ್ಲಿ ಸುಸಜ್ಜಿತ ರೆಸಾರ್ಟ್ ನಿರ್ಮಿಸಬೇಕೆಂಬ ಬಹುಕಾಲದ ಕನಸು ನನಸಾಗಿದೆ ಎಂದರು.ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಸದಸ್ಯ ಮಿಥುನ್ ರೈ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಕೆ.ಶ್ರೀಪತಿ ಭಟ್, ಶ್ರೀಧರ ಆಚಾರ್ಯ, ನಾರಾಯಣ ಪಿ.ಎಂ., ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಡಾ.ಸುಧಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ರವೀಂದ್ರ ಎಸ್.ಶೆಟ್ಟಿ, ಗಜಾನನ ಎಸ್.ಪೂಂಜ, ಪುರುಷೋತ್ತಮ ಶೆಟ್ಟಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು.

ಪ್ರಾದೇಶಿಕ ವಾರ್ತೆಗಳು

ಬೊಳಾಂತುರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ವಿಲೇವಾರಿ ಶಿಬಿರ. ರಮಾನಾಥ ರೈ ರವರ ಇಚ್ಚೆಯಂತೆ ವಲಯ ಮಟ್ಟದಲ್ಲಿ ಶಿಬಿರ: ಜಯಂತಿ ವಿ.ಪೂಜಾರಿ. ಕ್ರಿಯಾಶೀಲ ಅಧ್ಯಕ್ಷರಿಂದ ಉತ್ತಮ ಕಾರ್ಯಕ್ರಮ: ಚಂದ್ರಪ್ರಕಾಶ್ ಶೆಟ್ಟಿ ತುಂಬೆ. ರಾಜ್ಯದಲ್ಲಿಯೇ ಪ್ರಥಮ ಕಾರ್ಯಕ್ರಮ: ಅಬ್ಬಾಸ್ ಆಲಿ.

ಬಂಟ್ವಾಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಬಾಳ್ತಿಲ,ಗೋಳ್ತಮಜಲು,ವೀರಕಂಭ,ಬೊಳಾಂತುರು ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಬೊಳಾಂತುರು ಗ್ರಾ.ಪಂ ಕಛೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತಿ ವಿ.ಪೂಜಾರಿರವರು ನನ್ನ ಮೇಲೆ ವಿಶ್ವಾಸ ಇಟ್ಟು ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿ ಮಾಜಿ ಸಚಿವರಾದ ರಮಾನಾಥ ರೈ ರವರು ನೇಮಕಮಾಡಿರುತ್ತಾರೆ.ಅವರ ಇಚ್ಚೆ ಏಂದರೆ ಪ್ರತೀ ಗ್ರಾಮದ ಬಡವರಿಗೂ ಪಂಚ ಗ್ಯಾರಂಟಿ ಯೋಜನೆಯ ಪ್ರಯೋಜನ ದೊರೆಯಬೇಕು.ಇದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ಆಶಯ.ಅದಕ್ಕೆ ಪೂರಕವಾಗಿ ಪ್ರತಿ ವಲಯದಲ್ಲಿ ಇದರ ಶಿಬಿರ ನಡೆಸಬೇಕು ಎಂದು ಸಲಹೆ ಸೂಚನೆ ನೀಡಿದ್ದರು ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಹಾಯದಿಂದ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತ ಇದೆ.ಇದು ನಾಲ್ಕನೇ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 10 ವಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.ಮುಖ್ಯ ಅತಿಥಿಯಾಗಿ ಅಗಮಿಸಿದ ಜಿಲ್ಲಾ ಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ರವರು ಮಾತನಾಡಿ ಕ್ರಿಯಾಶೀಲ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ರವರ ನೇತೃತ್ವದಲ್ಲಿ ಉತ್ತಮವಾದ ಕಾರ್ಯಕ್ರಮ ಇದು.ಪ್ರತೀ ಬಡವರ ಕಲ್ಯಾಣ ಈ ಶಿಬಿರದ ಮೂಲಕ ನಡೆಯಲಿ ಎಂದು ಶುಭಹಾರೈಸಿದರು.ತಾಲೂಕು ಪಂ ಮಾಜಿ ಉಪಾದ್ಯಕ್ಷರಾದ ಅಬ್ಬಸ್ ಆಲಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿಯೇ ಇಂತಹ ಕಾರ್ಯಕ್ರಮ ಪ್ರಥಮವಾಗಿ ಬಂಟ್ವಾಳದಲ್ಲಿ ನಡೆಯುತ್ತ ಇರೊದು ಇದರ ಪ್ರಯೋಜನ ಪ್ರತಿಯೋಬ್ಬರು ಪಡೆಯಿರಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು..ಮಾಜಿ ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ ಶುಭಹಾರೈಸಿದರು. ಬೊಳಂತುರು ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ಶಾಲಿನಿ ರವರ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಾ‌ಪಂ ಉಪಾದ್ಯಕ್ಷರಾದ ಯಾಕುಬ್, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ರೈ,ಅಶ್ರಫ್,ಅನ್ಸಾರ್,ಹಿತಾ ಶೆಟ್ಟಿ, ಮಹಾಲಕ್ಷ್ಮೀ,ಅನಿತಾ,ಸಂಧ್ಯಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ,ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರಾದ ನಾರಾಯಣ ನಾಯ್ಕ,ಅಲೆಸ್ಟರ್,ಪ್ರಮುಖರಾದ ವಿಶ್ವಾಜೀತ್ ರೈ,ತಾಲೂಕು ಗ್ಯಾರಂಟಿ ಯೋಜನೆಗಳ ಸದಸ್ಯರಾದ ಐಡಾ ಸುರೇಶ್,ಕಾಂಚಾಲಕ್ಷಿ,ಅಬ್ದುಲ್ ಕರೀಂ,ಕೃಷ್ಣಪ್ಪ ಪೂಜಾರಿ, ವಿನಯ್ ಕುಮಾರ್ ಸಿಂಧ್ಯಾ,ಸಿರಾಜ್ ಮದಕ,ಹರ್ಷನ್ ಬಿ,ಚಂದ್ರಶೇಖರ್ ಆಚಾರ್ಯ,ಸತೀಶ್ ಕೆ,. ಉಪಸ್ಥರಿದ್ದರು.ಬೊಳಾಂತುರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿ ,ಧನ್ಯವಾದ ಸಲ್ಲಿಸಿದರು..ಸುಮಾರು 200 ರಿಂದ 250 ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು..ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳುಉಪಸ್ಥಿತರಿದ್ದರು.ಚಿತ್ರ-ವರದಿ :ಸತೀಶ್, ಕಾರ್ತಿಕ್ ಸ್ಟುಡಿಯೋ, ಬಿ. ಸಿ. ರೋಡು

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳದಲ್ಲಿ ವಕೀಲರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆ.

ಬಂಟ್ವಾಳ: ವಕೀಲರ ಸಂಘ(ರಿ), ಬಂಟ್ವಾಳ ಮತ್ತು ಅಧಿವಕ್ತಾ ಪರಿಷತ್ ಕರ್ನಾಟಕ – ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ – ಬಂಟ್ವಾಳ ಘಟಕ ಇವರ ಜಂಟಿ ಅಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರವನ್ನು ದಿನಾಂಕ 3/12/2024ನೇ ಮಂಗಳವಾರ ಸಂಜೆ ಗಂಟೆ 4.00 ಗೆ ಸರಿಯಾಗಿ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಭಾಗ್ಯಮ್ಮ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದಲ್ಲಿ ಕಾರ್ಕಳದ ಹಿರಿಯ ನ್ಯಾಯವಾದಿ ಎಂ ಕೆ ವಿಜಯ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರೊಫೆಸನಲ್ ಏಥಿಕ್ಸ್ ನ ಬಗ್ಗೆ ತಮ್ಮ ಅಪಾರ ಅನುಭವ ಮತ್ತು ಹಿರಿತನದ ಅನುಭವಗಳನ್ನು ಸೇರಿಸಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ. ಎನ್ ಹಾಗೂ ಅಧಿವಕ್ತಾ ಪರಿಷತ್ ಬಂಟ್ವಾಳದ ಅಧ್ಯಕ್ಷರು ಶ್ರೀಮತಿ ಉಮಾ.ಎನ್ ಸೋಮಯಾಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿದಲ್ಲಿ ಅಧಿವಕ್ತಾ ಪರಿಷತ್ ನ ಸಾಮಾಜಿಕ ಕಾರ್ಯದ ಅಂಗವಾಗಿ ವಕೀಲರ ದಿನಾಚರಣೆಯ ಪ್ರಯುಕ್ತ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಳ, ಪರಂಗಿಪೇಟೆ ಆಶ್ರಮಕ್ಕೆ 32,000/ ಮೌಲ್ಯದ ಫ್ರಿಜ್ ನ್ನು ಆಶ್ರಮದ ಸ್ಥಾಪಕರಾದ ಹರೀಶ್ ಪೆರ್ಗಡೆ ಯವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ ಕೆ ವಿಜಯ್ ಕುಮಾರ್ ಅವರನ್ನು ವಕೀಲರ ಸಂಘ (ರಿ) ಬಂಟ್ವಾಳದ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿ ಅಭ್ಯಾಗತರನ್ನು ಯುವ ವಕೀಲರು ಅದ ಸ್ವರ್ಣ ಗೌರಿಯವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಅಧಿವಕ್ತಾ ಪರಿಷತ್ ನ ಜಿಲ್ಲೆಯ ಸದಸ್ಯರಾದ ವೀರೇಂದ್ರ ಎಂ ಸಿದ್ದಕಟ್ಟೆ ಧನ್ಯವಾದ ಸಲ್ಲಿಸಿದರು. ನಿತಿನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು.ಚಿತ್ರ-ವರದಿ :ಸತೀಶ್ ಕಾರ್ತಿಕ್ ಸ್ಟುಡಿಯೋ, ಬಿ. ಸಿ. ರೋಡು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ

ಬಂಟ್ವಾಳ:ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ 2025ನೇ ಸಾಲಿನ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ ಪೂಂಜಾ ಮಾತನಾಡಿ,ನಾವು ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು. ಆ ಮೂಲಕ ಜೀವನ ಸಾರ್ಥಕ ಪಡಿಸಿದಾಗ ಮನಸ್ಸು ಉಲ್ಲಾಸಭರಿತ ವಾಗಿ ಶಾರೀರಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದು ಹೇಳುತ್ತಾ ಇದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು. ಇನ್ನೊರ್ವ ಮುಖ್ಯಅತಿಥಿ ನಿವೃತ್ತ ಪ್ರೊಫೆಸರ್ ಆಗಿರುವ ಡಾ.ಟಿ.ಕೆ ರವೀಂದ್ರನ್ ಮಾತನಾಡಿ,ನಿವೃತ್ತರಾದ ಮೇಲೆ ನಿಂತ ನೀರಾಗದೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಸಹಪಾಠಿಗಳೊಂದಿಗೆ ಬೆರೆಯುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುವುದರ ಮೂಲಕ ಕೆಲವೊಂದು ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಾಗ ಒತ್ತಡ ರಹಿತ ಜೀವನ ಸಾಧ್ಯ ಎಂದು ಹೇಳುತ್ತಾ ಈಗ ಕುಟುಂಬಗಳಲ್ಲಿ ಗಂಡ-ಹೆಂಡತಿ ಮಾತ್ರ ಇರುತ್ತಾರೆ, ಮಕ್ಕಳು ದೂರದಲ್ಲಿ ಉದ್ಯೋಗದಲ್ಲಿದ್ದಾಗ ಸಹಜವಾಗಿಯೇ ಮಾನಸಿಕ ಖಿನ್ನತೆ ಉಂಟಾಗುತ್ತದೆ ಅದಕ್ಕೆಇಂತಹ ಸಭೆಗಳಲ್ಲಿ ಸ್ನೇಹಿತರೊಂದಿಗೆ ಜೊತೆಯಾದಾಗ ಮನಸ್ಸು ಪ್ರಫುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾದ ಲ. ಪಿ. ಲೋಕನಾಥ ಶೆಟ್ಟಿ ಎಂ ಜೆ ಎಫ್ ರವರು ಮಾತನಾಡಿ ಒಂದೇ ಕುಟುಂಬದವರಂತೆ ನಮ್ಮ ಸಂಘಟನೆಯಲ್ಲಿ ನಾವು ತೊಡಗಿಸಿಕೊಂಡು ಕಾರ್ಯಪ್ರವೃತ್ತ ರಾಗುತ್ತಿದ್ದೇವೆ. ಇದರಿಂದ ನಮಗೆ ಸಂತೋಷದೊಂದಿಗೆ ನೆಮ್ಮದಿ ಸಿಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಗತ ವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ಓದಿ ಹೇಳಿದರು. ಸಂಘದ ಸದಸ್ಯರಲ್ಲಿ 75ವರ್ಷ ತುಂಬಿದ ಸದಸ್ಯರಾದ ಪ್ರಾರಂಭದಲ್ಲಿ ವಿ ಶಂಕರ್ ಪ್ರಾರ್ಥನೆ ಮಾಡಿದರು. ಗೋಪಾಲ ರಾವ್ ಸಂಚಯಗಿರಿ, ಕೆ ಎಚ್. ವಸಂತ ಕುಮಾರ್, ಅಪ್ಪಯ್ಯ ಶೆಟ್ಟಿ, ನರಸಿಂಹ ಭಟ್, ವೆಂಕಟ್ರಮಣ ಭಟ್, ಕು. ಆನಂದಿ, ಟಿ ಕೆ ದಯಾನಂದ, ದಾಮೋದರ ಶೆಟ್ಟಿಗಾರ್, ಶ್ರೀಮತಿ ಲಕ್ಶ್ಮಿ ನೇರಳಕಟ್ಟೆ, ಪದ್ಮನಾಭ ರಾವ್ ಕೈಕುಂಜೆ, ಮಾಧವ ಮಾರ್ಲ ಮೊಡಂಕಾಪು, ಜಿ ಎ ಭಾವ ಆಮುಂಜೆ, ಶ್ರೀಮತಿ ವನಿಲಾ ಅಲೆತ್ತೂರು, ಗೋಪಾಲಕೃಷ್ಣ ರೈ ಬರಿಮಾರ್, ಗೋವರ್ಧನ್ ಶೆಣೈ, ಶ್ರೀಮತಿ ಲಕ್ಶ್ಮಿ ಅಮ್ಮ ಬೊಕ್ಕಸ ಇವರನ್ನು ಶಾಲು ಪಲಪುಷ್ಪ ಸ್ಮರಣಿಕೆ (ಪುಸ್ತಕ )ಹಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಹೆಸರನ್ನು ಮಹಾಬಲೇಶ್ವರ ಹೆಬ್ಬಾರ್, ಜಯಂತ ಶೆಟ್ಟಿ, ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬಂಗೇರ, ಚಂದು ನಾಯ್ಕರವರು ಓದಿ ಹೇಳಿದರು ಸನ್ಮಾನಗೊಂಡವರಲ್ಲಿ ಜಿ ಎ ಬಾವ ಹಾಗೂ ಶ್ರೀಮತಿ ಲಕ್ಶ್ಮಿ ಅಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅನಂತರಾಮ ಹೆರಳೆಯವರು ಸಭಿಕರ ಭಾಷಣ ಮಾಡಿ ಸಲಹೆ ನೀಡಿದರು. ಉಪಾಧ್ಯಕ್ಷರರಾದ ಸಂಕಪ್ಪ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿ ರಾವ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಜತೆಕಾ ರ್ಯದರ್ಶಿ ಜಯರಾಮ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಟ್ಟಿ ಸಹಕರಿಸಿದರು. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲರಿಗೂ ಸಂಘದ ವತಿಯಿಂದ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮ.

ಮಂಗಳೂರು: ಮಂಗಳೂರಿನ ಸಂತ ತೆರೆಜಾ ಚರ್ಚು ಪಾಲ್ದನೆಯ ಕಾಲ್ವಾರಿ ವಾರ್ಡಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕ್ಯಾರೆಲ್ಸ್ ಹಾಗೂ ಇತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ ಆಲ್ಬನ್ ಡಿ’ಸೋಜಾ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾರ್ಡಿನ ಮುಖ್ಯಸ್ಥೆ ಜೆಸಿಂತಾ ಫೆರ್ನಾಂಡಿಸ್, ಪ್ರತಿನಿಧಿಗಳಾದ ವೆಲೆಂಟಾಯ್ನ್ ರೊಡ್ರಿಗಸ್, ವಿನ್ಸೆಂಟ್ ಬರೆಟ್ಟೊ ಸಹಕರಿಸಿ, ವಾರ್ಡಿನ ಮರಿಯೊ ರೇಗೊ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಅರುವ ಕೊರಗಪ್ಪ ಶೆಟ್ಟಿಯವರಿಗೆ ಸುಂದರ ರಾವ್ ಪ್ರಶಸ್ತಿ. ಕುಂಬ್ಳೆ ಸುಂದರ ರಾವ್ ಅವರದು ಪ್ರೇರಣಾದಾಯಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರದ ಸಾಧಕರಾಗಿದ್ದರು. ಅವರದು ಪ್ರೇರಣಾದಾಯಿ ವ್ಯಕ್ತಿತ್ವ’ ಎಂದು ಕರ್ನಾಟಕ ಜಾನಪದ – ಯಕ್ಷಗಾನ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಜಂಟಿಯಾಗಿ ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ಆಯೋಜಿಸಿದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಕುಂಬ್ಳೆ ಅವರು ವಾಕ್ ಸಾಹಿತಿ, ವಿದ್ವಾಂಸ, ಕಲಾವಿದರು; ಅವರ ಮಾತುಗಾರಿಕೆಯಲ್ಲಿ ಸಾಹಿತ್ಯಿಕ ಅಂಶ ಅಡಗಿತ್ತು. ತಾಳಮದ್ದಳೆಯಲ್ಲಿ ಅವರ ಮಾತುಗಾರಿಕೆ ಅಸಾಧಾರಣ. ಹವ್ಯಾಸಿ, ವೃತ್ತಿ ಕಲಾವಿದರೊಂದಿಗೆ ಒಡನಾಟ ಹೊಂದಿದ್ದ ಅವರದು ಸಾಮಾಜಿಕ ಜೀವನದಲ್ಲಿ ಸರಳ ವ್ಯಕ್ತಿತ್ವ, ಅವರ ಪಾತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಅಡಗಿತ್ತು. ಯುವಕರಿಗೆ ಸ್ಫೂರ್ತಿಯಾಗಿದ್ದ ಅವರು ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿ ಕುಂಬ್ಳೆತನವನ್ನು ಎತ್ತಿ ತೋರಿಸಿದ್ದಾರೆ’ ಎಂದರು. ಸಂಘ ಮತ್ತು ಸಾಂಸ್ಕೃತಿಕ ಒಡನಾಟ:ಕುಂಬ್ಳೆ ಸುಂದರ ರಾವ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, ‘ಕುಂಬ್ಳೆ ಮತ್ತು ನಾನು ಹಳೆ ಕಾಲದ ಒಡನಾಡಿಗಳು. ಅವರಿಂದಲೇ ನನಗೆ ಸಂಘದ ಮತ್ತು ಸಾಂಸ್ಕೃತಿಕ ಒಡನಾಟ ಸಿಕ್ಕಿತ್ತು’ ಎಂದು ಹೇಳಿದರು. ಕುಂಬ್ಳೆಯವರ ಸಹೋದರ ಮತ್ತು ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಗರಿ ಎಂಟರ್ಪ್ರೈಸಸ್ ಮಾಲಕ ಅಗರಿ ರಾಘವೇಂದ್ರರಾವ್, ಹಿರಿಯ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ, ಕುಂಬ್ಳೆ ಸುಂದರ್ ರಾವ್ ಕುಟುಂಬಸ್ಥರು ಇದ್ದರು.ಕೆನರಾ ಪದವಿ ಪೂರ್ವ ಕಾಲೇಜು ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಬಳ್ಕೂರು ಸನ್ಮಾನ ಪತ್ರ ವಾಚಿಸಿದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಲ್ಲಿ ಉಚ್ಚ ನ್ಯಾಯಾಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ.

ಬೆಂಗಳೂರು: ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕರರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ ಸೋಜರವರ ನೇತ್ರತ್ವದಲ್ಲಿ ವಿಧಾನ ಸಭೆಯ ಸಭಾದಕ್ಷರಾದ ಯು ಟಿ ಖಾದರ್ ರವರ ಸಮುಕ್ಷಮದಲ್ಲಿ ಮುಖ್ಯಮಂತ್ರಿಯವರಿಗೆ ಮಂಗಳೂರು ವಕೀಲರ ಸಂಘದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಮತ್ತು ಹಿರಿಯ ವಕೀಲರಾದ ಎಂ.ಪಿ ನೊರೂಂನ್ಹ ರವರು ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠ ವನ್ನು ಜರೂರಾಗಿ ಸ್ಥಾಪಿಸುವ ಬಗ್ಗೆ ಮನವರಿಕೆ ಮಾಡಿದರು . ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಾಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತಾರೆ. ನಿಯೋಗದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್,. ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ವಕೀಲರಾದ ಮೋನಪ್ಪ ಭಂಡಾರಿ, ಹಾಗೂ ಹಿರಿಯ ವಕೀಲರಾದ ಟಿ. ನಾರಾಯಣ ಪೂಜಾರಿ, ಯಶವಂತ ಮರೋಳಿ,ಉಪಾಧ್ಯಕ್ಷರಾದ ಸುಜಿತ್ ಕುಮಾರ್,ಬ0ಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಡಿ ಕೊಸ್ತಾ ಶ್ರೀಮತಿ ಶಾಲಿನಿ, ಶ್ರೀಮತಿ ಸುಮನಾ ಶರಣ್, ಸಂತೋಷ್ ಕುಮಾರ್, ದಿನಕರ್ ಶೆಟ್ಟಿ, ರಾಘವೇಂದ್ರ ರಾವ್, ಪ್ರಮೋದ್ ಕೆರ್ವಾಶೆ, ಜಗದೀಶ್ ಕೆ ಆರ್, ವಿಜಯ್ ಮಹಾತೇಶ್ ಸತೀಶ್ ಕುಮಾರ್, ವೀರೇಂದ್ರ ಸಿದ್ದಕಟ್ಟೆ ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ತೂಗು ಸೇತುವೆಗಳ ಜತೆ ಜನತೆ ಭಾವನಾತ್ಮಕ ಸಂಪರ್ಕ-ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್

ಮಂಗಳೂರು: ಹಲವು ಸವಾಲುಗಳ ನಡುವೆಯೂ ಜನರ ಪ್ರೀತಿ, ವಾತ್ಸಲ್ಯದಿಂದಾಗಿ 140ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ . ನಾನು ನಿರ್ಮಿಸಿದ ತೂಗು ಸೇತುವೆಗಳ ಜತೆ ಜನರು ಈಗಲೂ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ 40 ವರ್ಷಗಳ ವೃತ್ತಿ ಜೀವನದ ಸಾಧನೆಗಳನ್ನು ಮೆಲುಕು ಹಾಕಿದರು.ಹುಟ್ಟೂರು ಸುಳ್ಯದ ಅರಂಬೂರು ಗ್ರಾಮದಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರೂ ಸಿವಿಲ್ ಇಂಜಿನಿಯರ್ ಆದೆ. ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದೇನೆ. ಅತ್ಯಂತ ಕುಗ್ರಾಮದಲ್ಲಿ ನಿರ್ಮಿಸಿದ ತೂಗು ಸೇತುವೆಗಳು ಆ ಹಳ್ಳಿಗರಿಗೆ ಹೊರ ಪ್ರಪಂಚದ ಸಂಪರ್ಕ ಒದಗಿಸುವ ಜತೆಗೆ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಇದು ಸಂತಸ ತಂದುಕೊಟ್ಟ ವಿಚಾರ ಎಂದು ಅವರು ಹೇಳಿದರು.ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದಾಗ ನಕ್ಸಲರ ಮುಖಾಮುಖಿಯೂ ಆಗಿತ್ತು. ಆದರೆ ಅಲ್ಲಿನ ಬಡ ಜನರಿಗೆ ಸಹಾಯ ಮಾಡಬೇಕಾದ ಕಾರಣ ಹಿಂದೆ ಸರಿಯಲಿಲ್ಲ. ಒಂದು ಪ್ರದೇಶದಲ್ಲಂತೂ ಸೇತುವೆ ನಿರ್ಮಿಸುವುದು ಅತ್ಯಂತ ಸವಾಲಾಗಿತ್ತು. ಆ ಹಳ್ಳಿಗರು ದೇವರ ಮೇಲೆ ಭಾರ ಹಾಕಿ ಹೊಳೆ ದಾಟುವ ದುಃಸ್ಥಿತಿಯು ಮನ ಮುಟ್ಟಿತು. ಎಲ್ಲ ಸವಾಲುಗಳನ್ನು ಮೀರಿ ತೂಗು ಸೇತುವೆ ನಿರ್ಮಿಸಿದೆ. ಇದಾದ ಬಳಿಕ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ದೊಡ್ಡದು .ನನ್ನ ಇಂಜಿನಿಯರಿಂಗ್ ೆಲಸದಿಂದ ನಾನು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಜನರ ಸಂತೋಷದ ಕಣ್ಣೀರು ದೊಡ್ಡ ಪ್ರಶಸ್ತಿ ಎಂದು ಭಾರದ್ವಾಜ್ ಸ್ಮರಿಸಿದರು.ಅರಂಬೂರು ಗ್ರಾಮದಲ್ಲಿ 40 ವರ್ಷಗಳ ಹಿಂದೆ ಮೊದಲ ತೂಗು ಸೇತುವೆ ನಿರ್ಮಿಸಿದ್ದೆ. ಎರಡು ವರ್ಷಗಳ ಹಿಂದಷ್ಟೇ ಅಲ್ಲಿ ಕಾಂಕ್ರಿಟ್ ಸೇತುವೆ ನಿರ್ಮಿಸಲು ಮುಂದಾದಾಗ ತೂಗುಸೇತುವೆ ತೆಗೆದುಹಾಕಲು ಗ್ರಾಮಸ್ಥರು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ. ಪ್ರವಾಸಿಗರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ತೂಗು ಸೇತುವೆ ನೋಡಲು ಬರುತ್ತಿದ್ದಾರೆ .ಈಗ ತಂತ್ರಜ್ಞಾನ ಮುಂದುವರಿದಂತೆ ತೂಗು ಸೇತುವೆಗಳು ಕನಿಷ್ಠ 100 ವರ್ಷ ಬಾಳ್ವಿಕೆ ಬರುವಂತೆ ನಿರ್ಮಿಸಲಾಗುತ್ತಿದೆ ಎಂದರು.ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

Scroll to Top