Author name: editor

ಪ್ರಾದೇಶಿಕ ವಾರ್ತೆಗಳು

“ಪಿಲಿಪಂಜ” ತುಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಮಂಗಳೂರು: ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದ ತುಳು ಸಿನಿಮಾದ “ಫಸ್ಟ್ ಲುಕ್ ಪೋಸ್ಟರನ್ನು ಜ: 27 ಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವ ವನದುರ್ಗೆಎಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ವೇದಮೂರ್ತಿ ಬಿ ಕೆ ವಿಘ್ಣೇಶ್ ಭಟ್ ಅವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಾಶೀರ್ವಾದ ನೀಡಿದರು.ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀಧರ್ ಭಟ್, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ಇದರ ಸಂಚಾಲಕರಾದ ಸಂದೀಪ್ ವಿ ಪೂಜಾರಿ, ಚಿತ್ರದ ನಿರ್ಮಾಪಕರಾದ ಪ್ರತೀಕ್ ಯು ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ ನಟ ರಮೇಶ್ ರೈ ಕುಕ್ಕುವಳ್ಳಿ, ಪ್ರೊಡಕ್ಷನ್ ಮೆನೇಜರ್ ಕಾರ್ತಿಕ್ ಶೆಟ್ಟಿ, ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು.” ಪಿಲಿಪಂಜ” ಚಲನಚಿತ್ರವು ಎರಡು ಹಂತದ ಚಿತ್ರೀಕರಣವನ್ನು ಮುಗಿಸಿದ್ದು, ಇನ್ನು ಹಾಡಿನ ಚಿತ್ರೀಕರಣ ಬಾಕಿ ಇದ್ದು ಫ್ರೆಬ್ರವರಿ ಮೊದಲ ವಾರದಲ್ಲಿ ಅದನ್ನೂ ಮಾಡಿ ಮುಗಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವಪ್ರಕಾಶ್ ಪೂಂಜ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ರಕ್ಷಣ್ ಮಾಡೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ವಿಜಯಹರಿ ರೈ, ದಯಾನಂದ ಬೆಟ್ಟಂಪಾಡಿ, ರೂಪಶ್ರೀ ವರ್ಕಾಡಿ, ಜಯಶೀಲ, ರಾಧಿಕಾ,ಭಾಸ್ಕರ್ ಮಣಿಪಾಲ, ಹಾಗೂ ನಾಯಕಿಯಾಗಿ ದಿಶಾರಾಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.ನಿರ್ಮಾಣ ಪ್ರತೀಕ್ ಯು ಪೂಜಾರಿ, ಕಥೆ- ನಿರ್ದೇಶನ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲೆಂಟೀನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಜಗನ್ನಾಥ ಶೆಟ್ಟಿ ಬಾಳ, ಸಾಹಸ ಸುರೇಶ್ ಶೆಟ್ಟಿ ಮತ್ತು ನವೀನ್ ಲೋಬೋ,ನೃತ್ಯ ನಿರ್ದೇಶನ ರಾಜೇಶ್ ಕಣ್ಣೂರು, ಪ್ರೊಡಕ್ಷನ್ ಮನೇಜರ್ ಕಾರ್ತಿಕ್ ಶೆಟ್ಟಿ.

ಪ್ರಾದೇಶಿಕ ವಾರ್ತೆಗಳು

ಆಕಾಶ್ ಎಜುಕೇಶನಲ್ ನಿಂದ ಇಂಜಿನಿಯರಿಂಗ್ ಆಕಾಂಕ್ಷಿಗಳಿಗೆ (KCET Plus) ಕೆಸಿಇಟಿಪ್ಲಸ್ ಪ್ರಾರಂಭ

ಮಂಗಳೂರು: ಪರೀಕ್ಷಾ ತರಬೇತಿ ಸೇವೆಗಳಲ್ಲಿ ರಾಷ್ಟ್ರದ ಮುಂಚೂಣಿಯ ವಿದ್ಯಾಸಂಸ್ಥೆಯಾದ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಕರ್ನಾಟಕದ XI & XII ತರಗತಿಯ ವಿದ್ಯಾರ್ಥಿಗಳಿಗೆ KCET (Karnataka Common Entrance Test) ಕೋರ್ಸುಗಳನ್ನು ಪ್ರಾರಂಭಿಸಿದೆ.ಈ ಕೋರ್ಸುಗಳು ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಇಂಗ್ಲಿಷ್‌ನಲ್ಲಿ ನಡೆಯುವ ಈ ಕೋರ್ಸ್ ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತವೆ.ಈ KCET ಕೋರ್ಸುಗಳು ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಗಳನ್ನು ವಿಸ್ತರಿಸುವ ಮತ್ತು ರಾಜ್ಯಗಳ ಪದವಿಪೂರ್ವ ಮಂಡಳಿಗಳ ವಿದ್ಯಾರ್ಥಿಗಳೊಂದಿಗೆ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಗುಣಮಟ್ಟದ ತರಬೇತಿಯನ್ನು ಒದಗಿಸುವ ಆಕಾಶ್ ಅವರ ಕಾರ್ಯತಂತ್ರದ ಭಾಗವಾಗಿದೆ. ಸತತವಾಗಿ ಮೂರು ವರ್ಷಗಳ ಕಾಲ KCETನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆ ಆಕಾಶ್ ಹೊಂದಿದೆ, 2021ರಲ್ಲಿ ಮೇಘನ್ ಎಚ್.ಕೆ., 2022ರಲ್ಲಿ ಅಪೂರ್ವ್ ಟಂಡನ್ ಮತ್ತು 2023ರಲ್ಲಿ ವಿಘ್ನೇಶ್ ಎನ್. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳುಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್‌ನ ವ್ಯಾಪಾರ ಮತ್ತು ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಅವರು, “ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರವಾದ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸಬಲರಾಗಿಸಲು ಆಕಾಶ್ ಆಳವಾದ ಬದ್ಧತೆಯನ್ನು ಹೊಂದಿದೆ ಎಂದರು. 10ನೆಯ ತರಗತಿಯಿಂದ 11ನೆಯ ತರಗತಿಗೆ ಪ್ರವೇಶಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, 10ನೆಯ ತರಗತಿಯ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶಗಳ ಘೋಷಣೆಯಾದ ನಂತರ ಜೂನ್-ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ (ಮೇನ್) 2027 (ಸಿಬಿಎಸ್‌ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಎರಡು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸನ್ನು ಆಕಾಶ್ ನಡೆಸುತ್ತಿದೆ. 11ನೆಯ ತರಗತಿಯಿಂದ 12ನೆಯ ತರಗತಿಗೆ ಪ್ರವೇಶಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, ಕೆಸಿಇಟಿ ಮತ್ತು ಜೆಇಇ (ಮೇನ್) 2026 (ಸಿಬಿಎಸ್‌ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಒಂದು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸು ಮಾರ್ಚ್-ಏಪ್ರಿಲ್ 2025ರಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭವಾಗುತ್ತದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (KCET) ಇಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ಬ್ಯಾಚಲರ್ ಆಫ್ ಯೋಗ &ನ್ಯಾಚುರೋಪತಿ (BNYS), ಬಿ.ಎಸ್ಸಿ. ನರ್ಸಿಂಗ್, ಮತ್ತು ಬ್ಯಾಚಲರ್ ಆಫ್ ವೆಟರಿನರಿ ಸೈನ್ಸ್ &ಅನಿಮಲ್ ಹಸ್ಬೆಂಡ್ರಿ (B.V.Sc. & A.H.)ಕೋರ್ಸುಗಳ ಪ್ರವೇಶಕ್ಕೆ ಹೆದ್ದಾರಿಯಾಗಿದೆ.ಪ್ರಮುಖಅಂಶಗಳು : ಪಠ್ಯಕ್ರಮವನ್ನುಕೆಸಿಇಟಿ ಮತ್ತು ಜೆಇಇ ಪಠ್ಯಗಳನ್ನುಆಧರಿಸಿ ಸಿದ್ಧಪಡಿಸಲಾಗುವುದು., ಇಂಗ್ಲಿಷ್‌ನಲ್ಲಿಅಧ್ಯಯನ ಸಾಮಗ್ರಿಯನ್ನುಒದಗಿಸಲಾಗುವುದು, ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪರಿಣತರು ಸಿದ್ಧಪಡಿಸುತ್ತಾರೆ. XI& ಘXII ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್‌ಗಳನ್ನು ಒದಗಿಸಲಾಗುವುದು.ಪತ್ರಿಕಾಗೋಷ್ಠಿಯಲ್ಲಿ ಮಂಗಳೂರುಸಹಾಯಕ ನಿರ್ದೇಶಕ ಶ್ಯಾಮ ಪ್ರಸಾದ, ಬ್ರ್ಯಾಂಚ್‌ ಹೆಡ್‌ ವಿಶ್ವನಾಥ ಪಿ.ಜಿ. ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಾದೇಶಿಕ ವಾರ್ತೆಗಳು

ಮಾ.1-14: ಅಡ್ಯಾರ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವ

ಮಂಗಳೂರು: ಅಡ್ಯಾರು ಗ್ರಾಮದ ಗ್ರಾಮದೇವರಾದ ಮಹಾಲಿಂಗೇಶ್ವರ ಕ್ಷೇತ್ರವು ಯೋಗಿಯೋರ್ವರ ಪ್ರೇರಣೆಯಿಂದ ಅತ್ತಾವರ ಕೀರ್ತಿಶೇಷ ಸಂಕಪ್ಪ ಪೂಂಜರಿಂದ 400 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಕಾರಣೀಕದ ಶಿವಕ್ಷೇತ್ರ. ಊರ ಪರವೂರ ಭಕ್ತರ ಶ್ರದ್ಧಾಪೂರ್ವಕ ಸಹಕಾರದೊಂದಿಗೆ ಬೈದ್ಯಾವುಗುತ್ತು ಕುಟುಂಬಿಕರ ವಂಶ ಪಾರಂಪರಿಕ ಆಡಳಿತದೊಂದಿಗೆ ಭಕ್ತರನ್ನು ಅನುಗ್ರಹಿಸುವ ಈ ಪುಣ್ಯ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ಬಹಳ ಸುಂದರವಾಗಿ ಮೂಡಿಬಂದಿದ್ದು, ಮಾರ್ಚ್ 1 ರಿಂದ 14ರವರೆಗೆ ತನಕ ತಂತ್ರಿವರೇಣ್ಯರಾದ ವಾಮಂಜೂರು ಶ್ರೀ ಅನಂತ ಉಪಾಧ್ಯಾಯ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮಾರ್ಚ್ 1ರಂದು ಸಂಜೆ ಗಂಟೆ 3.30ಕ್ಕೆ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತಸರ ರಾಘವೇಂದ್ರ ಶಾಸ್ತ್ರಿಗಳಿಂದ ಉದ್ಘಾಟಿಸಲ್ಪಡುವ ಹಸಿರು ಹೊರಕಾಣಿಕೆ ಶೋಭಾಯಾತ್ರೆಯು ಅಡ್ಯಾರು ಸೋಮನಾಥ ಕಟ್ಟೆಯಿಂದ ಹೊರಟು ರಾಜಮಾರ್ಗದಲ್ಲಿ ಸಾಗಿ ಶ್ರೀ ಕ್ಷೇತ್ರವನ್ನು ತಲುಪಲಿದೆ. ಮಾರ್ಚ್ 6ರಂದು ಬೆಳಗ್ಗೆ ಗಂಟೆ 11.05ರಿಂದ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ,ಮಹಾಕಾಳಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ಆಗಿ ಮಾರ್ಚ್ 9ರಂದು ಬೆಳಗ್ಗೆ ಗಂಟೆ 11.05ಕ್ಕೆ ಬ್ರಹ್ಮಕಲಶಾಭಿಶೇಕ ನೆರವೇರಲಿದೆ. ಅದೇ ದಿನ ಸಂಜೆ ಧ್ವಜಾರೋಹಣ ಆಗಿ ಮಾರ್ಚ್ 14ರ ತನಕ ಜಾತ್ರೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಮಠಾಧೀಶರು ಆಶೀರ್ವಚನ ನೀಡಲಿದ್ದು ಬೇರೆ ಬೇರೆ ಕ್ಷೇತ್ರಗಳ ಸಾಧಕರು,ರಾಜಕೀಯ ನಾಯಕರು, ಕೊಡುಗೈ ದಾನಿಗಳು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಟ್ರಸ್ಟ್ ನ ದಿವಾಕರ ದಾಸ್ ಮಲ್ಲಿ, ದೇವಳದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಎನ್.ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರು, ಪುನರ್ ನಿರ್ಮಾಣ ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರಮೋದ್ ಕುಮಾರ್ ಶೆಟ್ಟಿ ಭಂಡಾರಿಂಜ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧ್ಯಕ್ಷ ದೇವಿಪ್ರಸಾದ್ ಸಾಮಾನಿ ಅಡ್ಯಾರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.ಫೋಟೋ – ಸತೀಶ್ ಕಾಪಿಕಾಡ್

ಕರ್ನಾಟಕ ವಾರ್ತೆಗಳು

ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಬಹಳ ಮುಖ್ಯ – ಕರ್ನಾಟಕದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್ ವಿಶ್ವನಾಥ್

ನಮ್ಮನ್ನು ಆಳುವವರು ಯಾರು? ಸರಕಾರ, ರಾಜ ಮಹರಾಜರುಗಳು ಯಾರೂ ಅಲ್ಲ. ಅಧಿಕಾರ ಅಂತಸ್ತುಗಳೂ ಅಲ್ಲ. ನನ್ನನ್ನು ಆಳುವುದು ನನ್ನ ಮನಸ್ಸು. ಅಂತಹ ಮನಸನ್ನು ಮುದವಾಗಿಡುವುದೇ ಸಾಹಿತ್ಯ, ಸಂಸ್ಕೃತಿ, ಕಲೆ, ನೃತ್ಯ. ಇದೆಲ್ಲದಕ್ಕೂ ಹೆಸರಿರುವ ನಾಡು ಮೈಸೂರು. ಅದೆಲ್ಲವನ್ನು ಕೂಡಾ ಜನರಿಗೆ ಪರಿಚಯಿಸಿ ಜನರು ಭಾಗವಹಿಸುವಂತೆ ಒಂದು ದೊಡ್ಡ ಅವಕಾಶ ಕಲ್ಪಿಸಿಕೊಟ್ಟವರು ಮೈಸೂರು ಯದುವಂಶದ ಅರಸರು. ಒಂದು ಗಂಟೆ ಎರಡು ಗಂಟೆೆ ಕೂತು ನಾಟಕ ನೋಡುವುದು ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಮನುಷ್ಯನಿಗೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ಸರಕಾರದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಹಾಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ದಿನಾಂಕ 25-01-2025ನೇ ಶನಿವಾರ ಕೆ.ಎಸ್.ನರಸಿಂಹ ಸ್ವಾಮಿ ಜನ್ಮದಿನ ಪ್ರಯುಕ್ತ ಮೈಸೂರು ಪುರಭವನದಲ್ಲಿ ಆಯೋಜಿಸಿದ “ಮಲ್ಲಿಗೆ ಕಂಪು” ವಿಚಾರ ಗೋಷ್ಠಿ- ಕವಿಗೋಷ್ಠಿ – ಕೃತಿ ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೈಸೂರಿನ ಪ್ರೇಮ ಕವಿಯ ಮಲ್ಲಿಗೆ ಕಂಪು ಕಾರ್ಯಕ್ರಮ ಆಯೋಜಿಸಲು ಮಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಗಂಗಾಧರ ಗಾಂಧಿ ತಂಡವನ್ನು ನಾನು ಅಭಿನಂದಿಸುವೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಮೈಸೂರು ಮಲ್ಲಿಗೆ ಕಂಪು ಸದಾ ಹಸಿರಾಗಿರಬೇಕು. ಆ ಮೂಲಕ ಮೈಸೂರು ಮಲ್ಲಿಗೆಯ ಕಂಪು ಜಗದಗಲ ಹಬ್ಬ ಬೇಕೆಂದು ಹೇಳಿದರು. ಇದಕ್ಕೂ ಮುನ್ನ ಕೆ.ವಿ. ಲಕ್ಷ್ಮಣ ಮೂರ್ತಿ ಸಾರಥ್ಯದಲ್ಲಿ ಮೂಡಿಬಂದ ಭೂತಾಯಿ, ಕವನ ಕೃಷಿಕ, ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ, ಮಾತೃ ಮಡಿಲು ಎಂಬ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆ.ಎಸ.ನರಸಿಂಹ ಸ್ವಾಮಿಯವರ ಸಾಹಿತ್ಯವನ್ನು ಓದಿ ಗೀತೆಗಳನ್ನು ಆಲಿಸಿ ಬೆಳೆದವರು ನಾವು.ಮತ್ತು ಅವರು ನಮ್ಮ ಮೆಚ್ಚಿನ ಕವಿ ಈ ಕಾರಣದಿಂದಾಗಿ ಅವರ ಜನ್ಮ ದಿನಾಚರಣೆಯನ್ನು ಅನೇಕ ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ.ಈ ಕಾರ್ಯಕ್ರಮವನ್ನು ಈ ಬಾರಿ ಅವರ ಜನ್ಮ ಜಿಲ್ಲೆ ಮೈಸೂರಿನಲ್ಲಿ ನಡೆಸಬೇಕು ಎಂಬ ಆಲೋಚನೆಯಿಂದ ಅವರು ಪ್ರಥಮ ಬಾರಿ ಉದ್ಯೋಗವನ್ನು ಆರಂಭಿಸಿದ ಮೈಸೂರಿನ ಪುರಭವನದಲ್ಲಿ ಆಯೋಜಿಸಿದ್ದೇವೆ.. ಇದು ನಮಗೂ ಸಂತಸ ತಂದಿದೆ ಮತ್ತು ಅವರ ಪುತ್ರ ಕೆ. ಎನ್. ಮಹಾಬಲ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತಂದಿದೆ.ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆಗೈದ ಡಾ. ಅಯುಬ್ ಅಹಮದ್‌ಜಿ, ಯಶೋಧಾ ಆರ್., ರಾಣಿಪ್ರಭ ಹೆಚ್. ಪಿ. ಮಾಧ್ಯಮ ಕ್ಷೇತ್ರದಲ್ಲಿ ಜಯಂತ್ ಜಿ, ಮತ್ತು ಸಂಘಟನಾ ಕ್ಷೇತ್ರದಲ್ಲಿ ಡಾ. ಪಳನಿಸ್ವಾಮಿ ಮೂಡುಗೂರು ಇವರಿಗೆ NSCDF ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರು ಮಹರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ, ಲೇಖಕ ಮತ್ತು ವಿಶ್ರಾಂತ IFS ಅಧಿಕಾರಿ ಕೆ.ವಿ.ಲಕ್ಷ್ಮಣ ಮೂರ್ತಿ, ಲೇಖಕ ಮತ್ತು ಕೆ.ಎಸ್.ನರಸಿಂಹಸ್ವಾಮಿ ಪುತ್ರ, ಕೆ. ಎನ್. ಮಹಾಬಲ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಭಾಗವಹಿಸಿದ್ದರು.ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಳ್ಳಿ ಮಾತನಾಡಿ ಕನ್ನಡ ಕಾವ್ಯ, ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಮುಂತಾದ ಹಲವು ರೂಪ ಪಡೆದು ಬದಲಾಗುತ್ತ ಬಂದರು ನವೋದಯದಲ್ಲಿ ಹೊರಹೊಮ್ಮಿದ ಕೆ.ಎಸ್. ನರಸಿಂಹ ಸ್ವಾಮಿಯವರು ಸರ್ವ ಕಾಲಕ್ಕೂ ಸಲ್ಲುವ ಕವಿ. ಅವರ ಮೈಸುರು ಮಲ್ಲಿಗೆ ಅಮರ ಕಾವ್ಯದಂತೆ ಎಂದು ಅವರು ಅಭಿಪ್ರಾಯ ಪಟ್ಟರು.ಕವಿಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್ ಕೊಳ್ಳೆಗಾಲ, ಪದ್ಮಾ ಆನಂದ್, dr. ಮಧುಸೂದನ್ ಎನ್., ಮು.ನಾ. ರಮೇಶ್, ಕೆ.ಟಿ.ಶ್ರೀಮತಿ, ಅನಂತ ಎಮ್. ತಾಮ್ಹನ್ಕರ್, ಗಿರೀಶ್ ವಿ., ಬಿ.ಕೆ ಮೀನಾಕ್ಷಿ, ಗು.ಚಿ. ರಮೇಶ್, ಮಂಜುಳಾ ನಾಗರಾಜು, ಕೆರೊಡಿ ಎಂ ಲೋಲಾಕ್ಷಮ್ಮ ., ಕೆ.ಎಂ. ಪ್ರಭು ಕಲ್ಲಹಳ್ಳಿ, ಕೃ. ಪಾ. ಮಂಜುನಾಥ್, ವಿ. ಮಂಜುಳಾ ಉಪದ್ಯಾಯಿನಿ, ಆಸರೆ ರಾಜೇಂದ್ರ ಪ್ರಸಾದ್ ಚಾಮರಾಜನಗರ, ಎಂ ಶಿವಕುಮಾರ ಕೆಂಪನಪುರ, ಡಾ. ಹೇಮಾಲತಾ ಪೀ.ಎನ್, ಡಾ. ಕಾವೇರಿ ಪ್ರಕಾಶ್, ಮಾ.ಮಹೇಶ ಮಲೆಯೂರು, ಶೀಲ ಸತ್ಯೇಂದ್ರ ಸ್ವಾಮಿ, ಓಂಕಾರ ಪ್ರಿಯ ಬಾಗೇಪಳ್ಳಿ, ಡಾ. ಕ್ಸೇವಿಯರ್ ಫ್ರಾನ್ಸಿಸ್ ದಾವಣಗೆರೆ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ರೇಶ್ಮಾ ಶೆಟ್ಟಿ ಗೋರುರು ನಿರೂಪಿಸಿದರು, ವರ್ಷಾ ನಿಖಿಲ್ ರಾಜ್ ಪ್ರಾರ್ಥನೆ ಗೀತೆ ಹಾಡಿದರು, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಂದಿಸಿದರು.ಬಳಿಕ ಗಂಗಾಧರ್ ಗಾಂಧಿ ತಂಡದಿಂದ ನಡೆದ ಗೀತ ಗಾಯನವು ಜನಮನ ಸೂರೆಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವಕ್ಕೆ ಚಾಲನೆ

ಮಂಗಳೂರು: ನಗರದ ಹೊಯ್ಗೆಬೈಲ್‌ನ ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಭಾನುವಾರ ಕುಲಶೇಖರ ಬಳಿಯ ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದಲ್ಲಿ ನಡೆಯಿತು.ವಜ್ರಮಹೋತ್ಸವ ಲಾಂಛನ ಅನಾವರಣಗೊಳಿಸಿದ ವಕೀಲ ರಾಘವೇಂದ್ರ ರಾವ್ ಮಾತನಾಡಿ ‘ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯುವ ಸಮುದಾಯ ಸಮಾಜದ ಆಸ್ತಿ. ಕಳೆದ 60 ವರ್ಷದಿಂದ ಇಂತಹ ಸೇವೆ ನೀಡಿರುವ ಜೈ ಭಾರತಿ ತರುಣ ವೃಂದ ಮಾದರಿ ಯುವ ಸಂಘಟನೆಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ಯುವ ಸಮುದಾಯಕ್ಕೆ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದಾ ಪ್ರೇರಣೆ ನೀಡಿರುವ ಜೈ ಭಾರತಿ ತರುಣ ವೃಂದ ಸ್ಥಳೀಯ ಯುವಕರ ಒಗ್ಗಟ್ಟಿನ ಪ್ರತೀಕವಾಗಿ ಬೆಳೆದಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದ ಮೇಲ್ವಿಚಾರಕಿ ರಶ್ಮಿತಾ ಮುಖ್ಯ ಅತಿಥಿಯಾಗಿದ್ದರು. ಜೈ ಭಾರತಿ ತರುಣ ವೃಂದದಅಧ್ಯಕ್ಷ ವಿಕ್ರಮ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೇಶವ ಕರ್ಕೇರ, ಕಾರ್ಯದರ್ಶಿ ಜಿತೇಂದ್ರ, ಕೋಶಾಧಿಕಾರಿ ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಜೈ ಭಾರತಿ ತರುಣ ವೃಂದದಿಂದ ವಿಶೇಷ ಮಕ್ಕಳ ಕೇಂದ್ರಕ್ಕೆ ದಿನಸಿ ಸಾಮಾಗ್ರಿ ನೀಡಲಾಯಿತು. ಕೇಂದ್ರದ ನಿವಾಸಿಗಳೊಂದಿಗೆ ಸಹಭೋಜನ ಏರ್ಪಡಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ದಿ.ಜಾರ್ಜ್ ಫೆರ್ನಾಂಡಿಸ್ ಸ್ಮರಣಾರ್ಥ ವಾಲಿಬಾಲ್ ಪಂದ್ಯಾಟ: ಜಾರ್ಜ್ ಫೆರ್ನಾಂಡಿಸ್ ಬದುಕು ದೇಶಕ್ಕೆ ಸದಾ ಆದರ್ಶ – ಡಾ.ನಾರಾಯಣ ಶೆಣೈ

ಮಂಗಳೂರು : ದೇಶ ಕಂಡ ಅಪ್ರತಿಮ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ಅವರು ಅಸಂಘಟಿತ ಕಾರ್ಮಿಕರಿಗೆ ಶಕ್ತಿ ತುಂಬಿದ ಮಹಾನ್ ಚೇತನ.ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದರೂ ಜನ ಸಾಮಾನ್ಯರಂತೆ ಬದುಕಿದ ಜಾರ್ಜ್ ಅವರ ಜೀವನಾದರ್ಶ ದೇಶಕ್ಕೆ ಮಾದರಿಯಾಗಿದೆ ಎಂದು ಎಂಐಟಿ ಮಣಿಪಾಲದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ನಾರಾಯಣ ಶೆಣೈ ಹೇಳಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಸಹಯೋಗದಲ್ಲಿ ದಿ.ಜಾರ್ಜ್ ಫೆರ್ನಾಂಡಿಸ್ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ನಗರದ ಮಂಗಳಾ ಕ್ರೀಡಾಂಗಣದ ಬಳಿ ನಡೆದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಂದ್ಯಾಟಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಜೆ.ಆರ್. ಲೋಬೊಮಾತ‌ನಾಡಿ” ಕೊಂಕಣ ರೈಲ್ವೆ ಯೋಜನೆ ಮೂಲಕ ಜಾರ್ಜ್ ಫೆರ್ನಾಂಡಿಸ್ ಅವರು ಕರಾವಳಿ ಕರ್ನಾಟಕದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.ಭೆಥನಿ‌ ಮಂಗಳೂರು ಪ್ರಾಂತ್ಯದ ಸಹ ಪ್ರಾಂತ್ಯಾಧಿಕಾರಿ ಭಗಿನಿ ಮಾರಿಯೊಲ ಡಿಸೋಜಾ ಬಿ.ಎಸ್.ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷೆ ಡಾ. ಜೆಸ್ಸಿ ಮರಿಯ ಡಿಸೋಜ, ಉದ್ಯಮಿ ಮ್ಯಾಕ್ಸಿಂ ಕ್ರಾಸ್ತಾ, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.ವೇದಿಕೆಯ ಸ್ಥಾಪಕ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ ಸ್ವಾಗತಿಸಿದರು. ಮಲ್ಲಿಕಟ್ಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರುತ್ ಸಿಲ್ವಿಯಾ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಹಿರಿಯ ಪತ್ರಕರ್ತ ದಿ.ಬಾಳೆಪುಣಿ ಅವರಿಗೆ ಶ್ರದ್ಧಾಂಜಲಿ ಸಭೆ

ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ದಿ. ಗುರುವಪ್ಪ ಎನ್.ಟಿ.ಬಾಳೆಪುಣಿ ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಸಭೆ ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ ಕಿತ್ತಳೆ ಮಾರುತ್ತಿದ್ದ ನನ್ನನ್ನು ಮೊದಲ ಬಾರಿಗೆ ಸಮಾಜಕ್ಕೆ ಪರಿಚಯಿಸಿದ್ದು ಬಾಳೆಪುಣಿ ಅವರು. ಹಳ್ಳಿಯ ಸಾಮಾನ್ಯ ವ್ಯಕ್ತಿಯಾಗಿದ್ದ ನಾನು ಬಾಳೆಪುಣಿ ಅವರ ಬರಹ ಹಾಗೂ ಪ್ರೋತ್ಸಾಹದಿಂದ ಪ್ರಧಾನಿ ಮೋದಿ ಅವರನ್ನು ಕಾಣುವಂತಾಯಿತು ಎಂದರು.ಹೊಸದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಪಿ.ಎಸ್. ಮಾತನಾಡಿ ನೇರ, ನಡೆನುಡಿಯ ನಿಷ್ಠುರವಾದಿ ಪತ್ರಕರ್ತ ಬಾಳೆಪುಣಿ ಅವರು ತಮ್ಮ ವರದಿಗಳ ಮೂಲಕ ಗ್ರಾಮೀಣ ಬದುಕನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ಚಿದಂಬರ ಬೈಕಂಪಾಡಿ, ರವಿ ಪೊಸವಣಿಕೆ, ಭಾಸ್ಕರ ರೈ ಕಟ್ಟ, ಬಾಳೆಪುಣಿ ಅವರ ಅಣ್ಣನ ಮಗ ಸುಧೀರ್ ನುಡಿ ನಮನ ಸಲ್ಲಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಅಂತಾರಾಷ್ಟ್ರೀಯ ವಾರ್ತೆಗಳು

ಉದ್ಯಮಿ, ಸಂಘಟಕ, ಸಮಾಜ ಸೇವಕ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರಿಗೆ ಪ್ರತಿಷ್ಠಿತ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್

ಅಬುಧಾಬಿ: ಅಬುಧಾಬಿಯ ಖ್ಯಾತ ಉದ್ಯಮಿ, ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆಯಾಗಿರುವ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಬರಲ್ ಸೆಂಟರ್ ಅಧ್ಯಕ್ಷರಾಗಿರುವ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈಯವರಿಗೆ ವಿಶ್ವವಾಣಿ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.ಒಮನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅಂತರಾಷ್ಟ್ರೀಯ ಸಾಧಕರ ಸಮ್ಮುಖ ಪ್ರಶಸ್ತಿ ಪ್ರದಾನ ನಡೆಯಲಿದೆ.ಪ್ರತಿಷ್ಠಿತ ಮಿತ್ರಂಪಾಡಿ ಮನೆತನದ ಜಯರಾಮ ರೈ ತನ್ನ ಸಂಘಟನಾ ಸಾಮರ್ಥ್ಯ, ಜನಪ್ರತೀತಿ, ಮಾನವೀಯ ಕಳಕಳಿ, ಕಲಾಪ್ರೇಮ ಹಾಗೂ ಪರೋಪಕಾರ ಸ್ವಭಾವಕ್ಕೆ ಹೆಸರಾದವರು.ಅಬುಧಾಬಿ ಕನ್ನಡಿಗರ ಒಗ್ಗಟ್ಟು ಸ್ಥಾಪಿಸಿ ಏಕಸೂತ್ರದಲ್ಲಿ ಒಟ್ಟುಗೂಡಿಸುವ ಕೆಲಸವನ್ನು ತನ್ನ ಸಾಂಸ್ಕೃತಿಕ ಸಂಘಟನೆ ಮೂಲಕ ಮಾಡಿರುವ ರೈಗಳು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ದ ಮೂಲಕ ಹಳ್ಳಿಹಳ್ಳಿಗೂ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ದೇಶ ವಿದೇಶಗಳಲ್ಲೂ ಕನ್ನಡದ ಕಂಪು ಪಸರಿಸಿದವರು.ಕೊರೋನಾ ದುರಿತ ಕಾಲದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಹೆಚ್ಚು ಬಡಕುಟುಂಬಗಳಿಗೆ ಅಕ್ಕಿ ವಿತರಿಸಿದ್ದು ಮಾತ್ರವಲ್ಲದೆ ಪುತ್ತೂರು ಜಾತ್ರೆ ಸಂದರ್ಭದಲ್ಲಿ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ, ಜಾಯಿಂಟ್ ವೀಲ್ ನಡೆಸುವ 60ಕ್ಕೂ ಹೆಚ್ಚು ಸದಸ್ಯರಿರುವ 9 ಕುಟುಂಬಕ್ಕೆ ಸುಮಾರು ಒಂದು ತಿಂಗಳ ಊಟೋಪಚಾರ ನೀಡಿದ ಆಶ್ರಯದಾತ. ಕರೋನಾ ಸಂಕಷ್ಟದಿಂದ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಅನೇಕ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಆರ್ಥಿಕ ನೆರವು ಒದಗಿಸಿದವರು.ವಿಶ್ವದಾಖಲೆ: ಕನ್ನಡ ನಾಡಿಗೆ ಕೊಡುಗೆ ನೀಡುವ ಜೊತೆಗೆ ಕನ್ನಡ ಭಾಷೆ ಪ್ರೇಮಿಯಾಗಿರುವ ಜಯರಾಮ ರೈಯವರು ಸಂಗೀತಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಡಾ| ಹರ್ಷ ಕುಮಾರ್ ರೈ ಅವರ ನಿರ್ಮಾಣದ ಅಷ್ಟ ಕ್ಷೇತ್ರ ಗಾನ ವೈಭವ ಎಂಬ ಕನ್ನಡ ಉಕ್ತಿಗೀತೆಯನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈ ಕನ್ನಡದ ಭಕ್ತಿ ಗೀತೆಯನ್ನು ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಿದ್ದು, ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್‌ ನಲ್ಲೂ ಕೂಡ ವಿಶ್ವದಾಖಲೆ.ದೂರದ ಗಲ್ಫ್ ರಾಷ್ಟ್ರದಲ್ಲಿ ಇದ್ದರೂ ಸದಾ ಭಾರತ ದೇಶ, ಕನ್ನಡ ನಾಡು, ನುಡಿ, ನೆಲ, ಜಲದಶ್ರೇಯೋಭಿವೃದ್ಧಿಗಾಗಿ ಸದಾ ತನ್ನನ್ನು ತಾನು ತೊಡಗಿಸಿಕೊಂಡು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರೈಯವರು ಈಗ ಬಿನ್ ಫರ್ದನ್ ಸಂಸ್ಥೆಯ ಸಿಎಫ್‌ಒ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. 2023 ರ ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ, ‘ಇಂಟರ್‌ನ್ಯಾಷನಲ್ ಐಕಾನ್ ಪ್ರಶಸ್ತಿ’, ‘ಟೋಸ್ಟ್ ಮಾಸ್ಟರ್’ ಅಂತರಾಷ್ಟ್ರೀಯ ಪ್ರಶಸ್ತಿಯಾದ ಡಿಟಿಎಂ ಮತ್ತು ‘ಟ್ರಿಪಲ್ ಕ್ರೌನ್’ ಪ್ರಶಸ್ತಿ ಸಹಿತ ಹತ್ತು ಹಲವು ಪ್ರಶಸ್ತಿಗಳು ಇವರ ಸಾಧನೆಗೆ ಸಂದಿವೆ. ಇವರು ಕೃಷಿ ಪ್ರಧಾನ ಕುಟುಂಬದ ಕೆದಂಬಾಡಿ ಗ್ರಾಮದ ದಿ| ಚೆನ್ನಪ್ಪ ರೈ ಮಿತ್ರಂಪಾಡಿ ಹಾಗೂ ದಿವಂಗತ ಡಿಂಬ್ರಿ ಗುತ್ತು ಶ್ರೀಮತಿ ಸರಸ್ವತಿ ಸಿ. ರೈ ಅವರ ಪುತ್ರ.

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವ ಸಂಭ್ರಮ: ಶಶಿಕಿರಣ್ ಶೆಟ್ಟಿಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿ

ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ಪುಣೆ-ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ನಿಟ್ಟೆ ಡಿಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಷ್ಕ್ರತ, ಬೆಲ್ಜಿಯಮ್‌ನ ಕಿಂಗ್ ಫಿಲಿಪ್ ಅವರಿಂದ ರ‍್ಡರ್ ಆಫ್ ಲಿಯೋಪೋಲ್ಡ್ ಕಮಾಂಡರ್ ಪದಕವನ್ನು,ಪಡೆದ ಬಂಟ ಸಮಾಜದ ದಿಗ್ಗಜ ವಿಶ್ವ ಶ್ರೇಷ್ಟ ಉದ್ಯೋಗಪತಿ ,ಅಗ್ರಮಾನ್ಯ ಸಮಾಜ ಸೇವಾ ಸಾಧಕರಾದ ಆಲ್ ಕರ‍್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ .ಆಲ್‌ಕರ‍್ಗೊ ಲಾಜಿಸ್ಟಿಕ್ಸ್‌ನ ಸಿ.ಎಸ್.ಆರ್ ವಿಭಾಗ ಅವಶ್ಯ ಫೌಂಡೇಶನ್‌ನ ಮುಖ್ಯಸ್ಥರಾದ ಶಶಿಕಿರಣ್ ಶೆಟ್ಟಿ ಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿಪ್ರಧಾನ ಮಾಡಿ , ವಿವಿಧ ಬಗೆಯ ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ರೀತಿಯಲ್ಲಿ ಫಲ ಪುಷ್ಪ ತರಕಾರಿ ಸೇರಿದಂತೆ, ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ ಶಾಲು, ಹಾರ , ದೇವರ ಮೂರ್ತಿ, ಶಿವಾಜಿ ಪ್ರತಿಮೆ ಸನ್ಮಾನ ಪತ್ರ ಸ್ಮರಣಿಕೆ ನೀಡಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ . ಡಾ ಕೆ .ಪ್ರಕಾಶ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯಾತಿಗಣ್ಯರು ಸನ್ಮಾನಿಸಿದರು.ಇವರ ಪರಿಚಯ ಹಾಗೂ ಸನ್ಮಾನ ಪತ್ರವನ್ನು ರಾಮಕೃಷ್ಣ ಶೆಟ್ಟಿ ಓದಿದರು.ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಯವರು ಕಾರ‍್ಯಕ್ರಮ ನಿರೂಪಿಸಿ ವಂದಿಸಿದರು.ವರದಿ: ಹರೀಶ್ ಮೂಡಬಿದ್ರಿ ಪುಣೆ

ಹೊರ ರಾಜ್ಯ ವಾರ್ತೆಗಳು

ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವ ಸಂಭ್ರಮ: ಡಾ.ಕೆ ಪ್ರಕಾಶ್ ಶೆಟ್ಟಿಯವರಿಗೆ ‘’ಬಂಟ ಛತ್ರಪತಿ’’ ಬಿರುದು ಸನ್ಮಾನ.

ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಬೆಂಗಳೂರು ಎಂ ಅರ್ ಜಿ ಗ್ರೂಪ್ ನ ಸಿ ಎಂ ಡಿ ,ಬಂಟ ಸಮಾಜದ ಮೇರು ವ್ಯಕ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಂಗಳೂರು ವಿಶ್ವ ವಿದ್ಯಾನೀಲಯದ ಡಾಕ್ಟರೇಟ್ ಪದಕ ಪುರಸ್ಕ್ರತ, ವಿಶ್ವ ಖ್ಯಾತಿಯ ಸಮಾಜ ಸೇವಕ ,ಕೊಡುಗೈ ದಾನಿ, ಎಲ್ಲಾ ಸಮಾಜದ ಶಕ್ತಿಯಾಗಿರುವ ಸಮಾಜೋದ್ದಾರಕ ಹಾಗೂ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಸಾಧನೆಯ ದಾರಿ ದೀಪ ,ಪ್ರೇರಣಾ ಶಕ್ತಿಯಾಗಿರುವ ಡಾ .ಕೆ ಪ್ರಕಾಶ್ ಶೆಟ್ಟಿಯವರನ್ನು ಸುವರ್ಣ ಮಹೋತ್ಸವ‘’ಬಂಟ ಛತ್ರಪತಿ ‘’ ಎಂಬ ಬಿರುದು ನೀಡಿ ,ಬಂಟ ಸಮಾಜದ ಇತಿಹಾಸದಲ್ಲೇ ದಾಖಲಾಗುವ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಯವರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ನೆರೆದ ಸಾವಿರಾರು ಸಂಖ್ಯೆಯ ಸಮಾಜ ಬಾಂಧವರ ನಡುವೆ ವಾದ್ಯಘೋಷ ,ನೃತ್ಯ ,ಪುಷ್ಪಾರ್ಚನೆ ,ವಿವಿದ ಸಮಿತಿಗಳ ಅಭಿನಂದನೆಗಳೊಂದಿಗೆ ಶಾಲು ಹಾರ ಪಂಡಪುರ ವಿಟ್ಟಲ್ ರುಕ್ಮಿಣಿ ಮೂರ್ತಿ ಶಿವಾಜಿ ಪ್ರತಿಮೆ ,ಸನ್ಮಾನ ಪತ್ರ ಸ್ಮರಣಿಕೆ ನೀಡಿ ಸನ್ಮಾನಿಸಿದರು .ಈ ಸಂದರ್ಭದಲ್ಲಿ ಇವರ ಸಮಾಜ ಸೇವಾ ಕಾರ್ಯದ ಸಾಕ್ಷಚಿತ್ರವನ್ನು ತೋರಿಸಲಾಯಿತು ,ಡಾ ಪ್ರಕಾಶ್ ಶೆಟ್ಟಿ ಯವರ ಪರಿಚಯ ,ಸನ್ಮಾನ ಪತ್ರವನ್ನು ಕು .ಶ್ರಾವ್ಯ ಸಂತೋಷ್ ಶೆಟ್ಟಿ ಯವರು ಓದಿದರು .ಈ ಸಂದರ್ಭದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ ಶಶಿಕಿರಣ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ , ರೂಪಿ ಬಾಸ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ ಲಿ ನ ಎನ್ ಬಿ .ಶೆಟ್ಟಿ ,ಬಿಸಿಸಿಐ ಕಾರ್ಯಕರಿ ಸಮಿತಿ ಸದಸ್ಯ ಪಿ ವಿ ಶೆಟ್ಟಿ, ವಿ ಕೆ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ಕರುಣಾಕರ್ ಎಂ ಶೆಟ್ಟಿ , ,ಸಾಯಿ ರಾಧ ಗ್ರೂಪ್ ಆಫ್ ಕಂಪನೀಸ್ ನ ಸಿ ಎಂ ಡಿ ರವಿ ಶೆಟ್ಟಿ ,ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ ,ಮಸ್ಕತ್ ಮಲ್ಟಿ ಟ್ರೇಡ್ ಅಂಡ್ ಕನ್ಷ್ಟ್ರಕ್ಶನ್ ಎಲ್ ಎಲ್ ಪಿ ಯ ಸಿ ಎಂ ಡಿ ದಿವಾಕರ್ ಶೆಟ್ಟಿ , ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ ,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರ ಹಾಸ ಶೆಟ್ಟಿ , ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ , ಮಾಲ್ವನ್ ತಡ್ಕ ಹಾಸ್ಪಿಟಾಲಿಟಿ ನ ಎಂ ಡಿ ಹಾಲಾಡಿ ಆದರ್ಶ್ ಶೆಟ್ಯಿ ,ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಹಿಳಾ ಕಾರ್ಯಧ್ಯಕ್ಷೆ ಚಿತ್ರಾ ರವಿ ಶೆಟ್ಟಿ,, ಸಾಗರ ಬಂಟರ ಸಂಘದ ಸುಧೀರ್ ಶೆಟ್ಟಿ,ಮುಂಬಯಿ ಬಂಟರ ಸಂಘದ ಸಿಟಿ ರಿಜಿನಲ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಜಯರಾಂ ಶೆಟ್ಟಿ ,ಹುಬಳ್ಳಿ ದಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ ,ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ,ಉಳ್ಳಾಲ ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ , ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಯವರು ಉಪಸ್ಥಿತರಿದ್ದರು .ಹಾಗೂ ಬಂಟರ ಸಂಘದ ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ ,ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ,ಸುವರ್ಣ ಮಹೋತ್ಸವ ಸಮಿತಿಯ ಎಲ್ಲ ಸಮಿತಿಗಳ ಸಮನ್ವಯಕರಾದ ಸುಧೀರ್ ಶೆಟ್ಟಿ ಕಣಂಜಾರು ,ಕೋಶಾಧಿಕಾರಿ ಹೆರ್ಡೆಬೀಡು ಪ್ರಶಾಂತ್ ಶೆಟ್ಟಿ ,ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ವರದಿ: ಹರೀಶ್ ಮೂಡಬಿದ್ರಿ ಪುಣೆ

Scroll to Top