ಏಪ್ರಿಲ್ 15 ರಂದು ಪವಿತ್ರ ಶಿಲುಬೆ ಯಾತ್ರೆ
ಪ್ರಭು ಯೇಸುವಿನ ಜನನದ ಜುಬಿಲಿ ವರ್ಷದ ಪ್ರಯುಕ್ತ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಳವಾರು ಪೆಜಾರ್ ಸಂತ ಯೋಸಫರಿಗೆ ಸಮರ್ಪಿಸಿದ ಚರ್ಚಿನ ಮುಂದಾಳುತನದಲ್ಲಿ 240 ವರ್ಷಗಳ ಹಿಂದೆ ಬೂದಿ ಬುಧವಾರ (Ash Wednesday) ದಂದು ಪ್ರಾರಂಭಗೊಂಡು ನಿರಂತರವಾಗಿ ನಡೆಯುತ್ತಾ ಬಂದ ಪವಿತ್ರ ಶಿಲುಬೆ ಯಾತ್ರೆಯನ್ನು ಇದೇ ಬರುವ ತಾರೀಕು ಏಪ್ರಿಲ್ 15ರಂದು ಮಂಗಳವಾರ 241ನೇ ವರ್ಷದ ಚಾರಿತ್ರಿಕ ಶಿಲುಬೆಯ ಹಾದಿಯು “ಪವಿತ್ರ ಶಿಲುಬೆಯ ನೆರಳಲ್ಲಿ ಭರವಸೆಯ ಪಯಣಿಗರ ಈ ಧೈಯ ವಾಕ್ಯದೊಂದಿಗೆ” ನಡೆಯಲಿದೆ. ಆ ದಿನ ಬೆಳಗ್ಗೆ ಗಂಟೆ 9 ರಿಂದ ಸಂಜೆ 3ರ ವರೆಗೆ ದೇವರ ವಾಕ್ಯದ ಧ್ಯಾನಕೂಟ, ಸ್ತುತಿ ಆರಾಧನೆ ಹಾಗೂ ನಿರಂತರ ಬಿನ್ನಹ ಪ್ರಾರ್ಥನೆ ನಡೆಸಿಕೊಡುವವರು, ಕಾರಿಸ್ಮಾತಿಕ್ ಸಂಚಾಲನದ ಸದಸ್ಯರು ಸಂಜೆ 3 ಗಂಟೆಯಿಂದ ಕರುಣೆಯ ಜಪಸರ ಪ್ರಾರ್ಥನೆ ಹಾಗೂ 3.30 ಗಂಟೆಗೆ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್, ಕುಲಶೇಖರ ಕೊರ್ಡೆಲ್ ಚರ್ಚ್‌ನ ಧರ್ಮ ಗುರುಗಳು ನಡೆಸಿಕೊಡಲಿದ್ದಾರೆ. 5 ಗಂಟೆಗೆ ಸರಿಯಾಗಿ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಡಾ| ಪೀಟರ್ ಪಾಮ್ಸ್ ಸಲ್ದಾನರವರು ಅರ್ಪಿಸಲಿದ್ದಾರೆ. ತದನಂತರ ಚಾರಿತ್ರಿಕ ಶಿಲುಬೆಯ ಹಾದಿಯನ್ನು ಕಥೋಲಿಕ ಉಡುಪಿ ಧರ್ಮ ಪ್ರಾಂತ್ಯದ ತೊಟ್ಟಂ ಚರ್ಚಿನ ಧರ್ಮಗುರುಗಳು ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾ। ಡೆನಿಸ್ ಡೆಸಾರವರು ಪ್ರಭೋಧನೆಯನ್ನು ಭೋದಿಸುವರು. ನಂತರ ಪ್ರಭು ಯೇಸುವಿನ ಪವಿತ್ರ ಶರೀರಕ್ಕೆ ನಮನ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸರಿ ಸುಮಾರು 7 ಸಾವಿರ ಕಥೋಲಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಎಲ್ಲಾ ಕಾರ್ಯಕ್ರಮಗಳು ಶಿಸ್ತಿನಿಂದ ಹಾಗೂ ಸಾಂಗವಾಗಿ ನೆರವೇರಲಿವೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದ ನಂತರ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. 241ನೇ ವರ್ಷಗಳ ಹಿಂದೆ ವಿಭೂತಿಯ ಬುಧವಾರದಂದು ಈ ಚಾರಿತ್ರಿಕ ಶಿಲುಬೆಯ ಹಾದಿಯನ್ನು ಆರಂಭಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಚರ್ಚಿನ ಧರ್ಮಗುರುಗಳು ವಂ। ಫಾ। ಲಾರೆನ್ಸ್ ರೊನಾಲ್ಡ್ ಡಿಸೋಜಾ, ವಲಯದ ಶ್ರೇಷ್ಠ ಗುರು ವಂ। ಫಾ। ರೂಡಾಲ್ಫ್ ಡೆಸಾ, ಮಾಧ್ಯಮ ಸಲಹೆದಾರರು ಎಲಿಯಾಸ್ ಫೆರ್ನಾಂಡಿಸ್, ಉಪಾಧ್ಯಕ್ಷ ಅನಿಲ್ ಪೆರಿಸ್, ಕಾವ್ಯದರ್ಶಿ ಫಿಲೋಮೆನಾ ಫೆರ್ನಾಂಡಿಸ್, ವಲಯ ಪ್ರತಿನಿಧಿ ಪ್ರಮಿಳಾ ಪೆರಿಸ್, ವಾಲ್ಟರ್ ಮೊಂತೇರೊ, ಆಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.









