ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬಂಟರ ಸಂಘ ಸಜೀಪ ವಲಯದಿಂದ ಕ್ರೀಡಾಕೂಟ, ಸಾಧಕರಿಗೆ ಸನ್ಮಾನ, ಬಂಟರ ಸಮ್ಮಿಲನ

ಬಂಟರ ಸಂಘ ಸಜೀಪ ವಲಯ ಇದರ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟ, ವಲಯದ ಸಾಧಕರಿಗೆ ಗೌರವ ಸನ್ಮಾನ ಮತ್ತು ವಲಯ ಬಂಟರ ಸಮ್ಮಿಲನ ಕಾರ್ಯಕ್ರಮವು ದಿನಾಂಕ 26/4/2025 ರಂದು ಸಂಕೇಶದಲ್ಲಿ ನಡೆಯಿತು . ರಾತ್ರಿ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮವು ವಿವಿಧ ರೀತಿಯ ವಿನೋದ ಕಾರ್ಯಕ್ರಮಗಳು ಮತ್ತು ನೃತ್ಯ ಪ್ರದರ್ಶನಗಳೊಂದಿಗೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮವು ಶ್ರೀ ಸುರೇಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಮಾಜದ ಹಿರಿಯರಾದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಶ್ರೀ ಎ.ಸಿ.ಭಂಡಾರಿ, ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು , ವಿವಿಧ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾದ ಮಹನೀಯರು ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳು ಸೇರಿದಂತೆ ಹದಿನೆಂಟು ಸಾಧಕರಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸನ್ಮಾನ ಮಾಡಲಾಯಿತು.ವಿವಿಧ ಕ್ರೀಡಾ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ವೇದಿಕೆಯಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ, ಬಂಟ್ವಾಳ ಯುವ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ನಿಶಾನ್ ಆಳ್ವ, ಬಂಟ್ವಾಳ ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರಮಾ.ಎಸ್.ಭಂಡಾರಿಮುಂಬೈ ಉದ್ಯಮಿ ಗಳಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಸಂತೋಷ್ ಶೆಟ್ಟಿ ದಲಂದಿಲ, ರೋಹಿತ್ ಶೆಟ್ಟಿ ನಗ್ರಿಗುತ್ತು, ಜಯರಾಮ ಹೆಗ್ಡೆ ಕುಡುವಪಾಲು, ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ ಮತ್ತು ಜಯರಾಮ ಅಡ್ಯಂತಾಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ರಾಧಾಕೃಷ್ಣ ಆಳ್ವ ಸ್ವಾಗತಿಸಿ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಮನೋಜ್ ಆಳ್ವ ದಲಂದಿಲ ಧನ್ಯವಾದ ಸಮರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

500 ಮೀ. ರಸ್ತೆ ಕೆಲಸ ಬಾಕಿ – ಆರು ತಿಂಗಳಿನಿಂದ ಕಾಮಗಾರಿ. ಸರಿಪಳ್ಳ-ಕನ್ನಗುಡ್ಡೆ ರಸ್ತೆ: ಅಪೂರ್ಣ ಕಾಮಗಾರಿಯಿಂದ ಸಂಕಷ್ಟ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರದಿಂದ ಸರಿಪಳ್ಳವಾಗಿ ಕನ್ನಗುಡ್ಡೆ-ನೂಜಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು ಸಾರ್ವಜನಿಕರಿಗೆ ಬಹುಸಮಸ್ಯೆಯಾಗಿ ಪರಿಣಮಿಸಿದೆ. ರಾ.ಹೆ.ಯಿಂದ ನೂಜಿಗೆ ಸುಮಾರು 3 ಕಿ.ಮೀ. ಇದೆ. ಇಲ್ಲಿನ 4ಡಿ ಬಸ್ ತಿರುವು ಪಡೆಯುವ ಸರಿಪಳ್ಳ ಭಾಗದಿಂದ ನೂಜಿವರೆಗೆ ಸುಮಾರು 500 ಮೀ. ಕಾಂಕ್ರೀಟ್ ರಸ್ತೆ ಕೆಲಸ ಬಾಕಿ ಇದೆ. ಕಳೆದ ಆರು ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದ್ದು, ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆಗಾಲವೂ ಆರಂಭಗೊಳ್ಳುತ್ತಿದ್ದು, ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.ಕಾಮಗಾರಿ ನಿಟ್ಟಿನಲ್ಲಿ ರಸ್ತೆಯನ್ನು ಅಗೆದಿದ್ದು, ಒಂದು ಪಾರ್ಶ್ಚದಲ್ಲಿ ಕಾಂಕ್ರೀಟ್ ಅಳವಡಿಸಲಾಗಿದೆ. ರಸ್ತೆಯ ಅಲ್ಲಲ್ಲಿ ಎತ್ತರ-ತಗ್ಗು ಇದೆ. ವಿದ್ಯುತ್ ಕಂಬ ರಸ್ತೆ ಮಧ್ಯ ಭಾಗದಲ್ಲಿದ್ದು ಅಪಾಯ ಸೂಚಿಸುತ್ತಿದೆ. ಇಲ್ಲಿನ ಮನೆಗಳಿಗೆ ನಿರ್ಮಿಸಲು ಉದ್ದೇಶಿಸಿದ ತಡೆಗೋಡೆ ಅರ್ಧದಲ್ಲೇ ಬಾಕಿಯಾಗಿದೆ. ಪ್ರತೀ ದಿನ ಅನೇಕ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಳೆ ಬಂದರೆ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗುವ ಸಾಧ್ಯತೆ ಇದೆ. ಮನೆಗಳಿಗೆ ಸಂಪರ್ಕ ಪಡೆಯುವ ರಸ್ತೆಗಳೂ ಬಂದ್ ಆಗಿದೆ. ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಪ್ರತಿಕ್ರಿಯಿಸಿ ಈ ರಸ್ತೆಯ ಕಾಮಗಾರಿಗೆ ವಿಸ್ತರಣೆ ನಡೆಸುವ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಸ್ಥಳೀಯರ ಜತೆ ಅನೇಕ ಬಾರಿ ಮಾತುಕತೆ ನಡೆಸಲಾಗಿದೆ. ಪಾಲಿಕೆ ಸದ್ಯ ಆಡಳಿತಾಧಿಕಾರಿ ಆಡಳಿತದಲ್ಲಿದೆ. ಅನುದಾನ ಹೊಂದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಬಂದ Pwd ಅನುದಾನ ಸ್ಥಗಿತಗೊಳಿಸಬಾರದು ಎಂದು ಸಚಿವರಿಗೆ ಪತ್ರ ನೀಡಿದ್ದೇನೆ. ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಅನುದಾನದ ಅಗತ್ಯವಿದೆ ಎನ್ನುತ್ತಾರೆ.ಕೃಪೆ:ಉದಯವಾಣಿ

ಪ್ರಾದೇಶಿಕ ವಾರ್ತೆಗಳು

ಪೈವಳಿಕೆಯಲ್ಲಿ ಹಗ್ಗ ಜಗ್ಗಾಟ: ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡಕ್ಕೆ ಪ್ರಶಸ್ತಿ

ಸುರತ್ಕಲ್: ಬಂಟರ ಸಂಘ ಪೈವಳಿಕೆ ಮಂಜೇಶ್ವರ ಇದರ ಆಶ್ರಯದಲ್ಲಿ ಮಹಿಳೆಯರ ಅಂತರ್ ರಾಜ್ಯ ಮಟ್ಟದ ಬಂಟರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡವು 25 ಸಾವಿರ ನಗದಿನೊಂದಿಗೆ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.ಕಯ್ಯಾರು ಎಸ್ ಆರ್ ಎ ಎಲ್ ಪಿ ಶಾಲಾ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದೆ.ಫೈನಲ್ ಪಂದ್ಯಾಟದಲ್ಲಿ ಸುರತ್ಕಲ್ ಬಂಟರ ಮಹಿಳಾ ತಂಡವು ಕುಂಜತ್ತೂರು ಮಹಿಳಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿತ್ತು‌ .ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಸದಾಶಿವ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ, ಪೈವಳಿಕೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುರತ್ಕಲ್ ತಂಡದ ನಾಯಕಿ ಬಬಿತಾ ಶೆಟ್ಟಿ ಮತ್ತು ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ವೈಷ್ಣವಿ ಅಡಪ ಪಡೆದರು. ತಂಡದ ಕೋಚ್ ನಿನಾದ್ ಜಯರಾಮ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ

ಪ್ರಾದೇಶಿಕ ವಾರ್ತೆಗಳು

ಭ್ರಾತೃತ್ವದ ಸಂದೇಶ ಸಾರಿದ ಪೋಪ್ ಪ್ರಾನ್ಸಿಸ್ : ಡಾ.ಸುರೇಶ್ ನೆಗಳಗುಳಿ

ಮಂಗಳೂರು: ಕೆಥೋಲಿಕ್ ಕ್ರೈಸ್ತರ ಪರಮೋಚ್ಚ ‌ಧರ್ಮಗುರು ಪೋಪ್ ಫ್ರಾನ್ಸಿಸ್ ‌ಅವರಿಗೆಪಿಂಗಾರ ಬಳಗದ ವತಿಯಿಂದ ಗೌರವ ನಮನ ಕಾರ್ಯಕ್ರಮನಗರದ ಬಿಷಪ್ ಹೌಸ್ ಚರ್ಚ್ ಬಿಲ್ಡಿಂಗ್ ನಲ್ಲಿ ನಡೆಯಿತು.ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ.ಸುರೇಶ ನೆಗಳಗುಳಿ ಮಾತನಾಡಿ ” ಮನುಕುಲದ ಸೇವೆಗೆ ಬದುಕು ಮುಡಿಪಾಗಿರಿಸಿದ ಪೋಪ್ ಫ್ರಾನ್ಸಿಸ್ ಅವರು ವಿಶ್ವ ಭ್ರಾತೃತ್ವದ ಸಂದೇಶ ಪಸರಿಸಿದ ಮಹಾನ್ ಚೇತನ” ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ” ಶಾಂತಿ, ಸಹಬಾಳ್ವೆಯ ಜತೆಗೆ ಪರಿಸರ ಜಾಗೃತಿ ಮೂಡಿಸಿದ ಪೋಪ್ ಫ್ರಾನ್ಸಿಸ್ ತಮ್ಮ ಸೇವೆಯ ಮೂಲಕ ವಿಶ್ವದೆಲ್ಲೆಡೆ ಜನತೆಯ ಪ್ರೀತಿ ಸಂಪಾದಿಸಿದ್ದರು ಎಂದರು.ಅನುಪಮ ಮಾಸಿಕದ ಮಹಮ್ಮದ್ ಮೊಹಿಸಿನ್, ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ಕೆ.ವಸಂತ ರಾವ್ ನುಡಿ ನಮನ ಸಲ್ಲಿಸಿದರು.ಉದ್ಯಮಿ‌ ಎಡೋಲ್ಫ ಡಿಸೋಜ, ಗೋಲ್ಡಿನ್ ಡಿಸೋಜ, ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.ಪಿಂಗಾರ ಬಳಗದ ಮುಖ್ಯಸ್ಥ‌ ರೇಮಂಡ್ ಡಿಕೂನಾ ಸ್ವಾಗತಿಸಿದರು.ರಿಯಾನಾ ಡಿಕೂನಾ ಕಾರ್ಯಕ್ರಮ ನಿರೂಪಿಸಿದರು:

ಪ್ರಾದೇಶಿಕ ವಾರ್ತೆಗಳು

ವಿಶ್ವ ದರ್ಜೆಯ ಸೌಲಭ್ಯದ ರೋಹನ್ ಇಥೋಸ್ ಗೆ ಭೂಮಿ ಪೂಜೆ

ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು.ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು.ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ, ಬಹುತೇಕ ಎಲ್ಲ ಫ್ಲಾಟ್‌ಗಳೂ ಮಾರಾಟಗೊಂಡಿವೆ, ಕಂಕನಾಡಿಯ ಪ್ರಮುಖ ಆಯಕಟ್ಟಿನ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಇಥೋಸ್‌ನ ಉಳಿದ ಫ್ಲಾಟ್‌ಗಳೂ ಕೂಡಾ ಶೀಘ್ರ ಮಾರಾಟಗೊಳ್ಳಲಿವೆ, ಜನರ ಅಭಿರುಚಿಗೆ ತಕ್ಕಂತೆಯೇ, ಸದೃಢವಾದ ಹಾಗೂ ಸಮಕಾಲೀನ ಶೈಲಿಯ ಕಟ್ಟಡಗಳನ್ನು ನಿರ್ಮಿಸುವ ಕಾರಣ ಇದು ಸಾಧ್ಯವಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ಮಾತನಾಡಿ, ಕಂಕನಾಡಿ ಪ್ರದೇಶದಲ್ಲಿ ಫಾದರ್ ಮುಲ್ಲರ್‍ಸ್ ಆಸ್ಪತ್ರೆ ಒಂದು ಹೆಗ್ಗುರುತಾಗಿದೆ, ಈಗ ನಿರ್ಮಾಣಗೊಳ್ಳಲಿರುವ ರೋಹನ್ ಇಥೋಸ್ ಇನ್ನೊಂದು ಆಕರ್ಷಕ ಹೆಗ್ಗುರುತಾಗಿ ಮೂಡಿಬರಲಿರುವುದು ಖಚಿತ. ರೋಹನ್ ಮೊಂತೇರೊ ಅವರು ಅವರ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಇಷ್ಟು ಎತ್ತರಕ್ಕೇರಿದ್ದಾರೆ ಎಂದರು.ಮಾಜಿ ಶಾಸಕ ಜೆ.ಆರ್.ಲೋಬೊ, ಪತ್ರಕರ್ತ ವಾಲ್ಟರ್ ನಂದಳಿಕೆ ಶುಭಹಾರೈಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ, ನಿಕಟಪೂರ್ವ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಜೆಸಿಂತಾ ಆಲ್ಪ್ರೆಡ್, ವಕೀಲ ಜಗದೀಶ್ ಶೇಣವ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಭಾಸ್ಕರ್, ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೊನ್ ಮೊಂತೆರೊ ಉಪಸ್ಥಿತರಿದ್ದರು.ಸಾಹಿಲ್ ಝಹೀರ್ ನಿರೂಪಿಸಿದರು, ರೋಹನ್ ಮೊಂತೇರೊ ವಂದಿಸಿದರು.ವಿಶ್ವದರ್ಜೆಯ ಸೌಲಭ್ಯದ ರೋಹನ್ ಇಥೋಸ್ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯ ನಿವೇಶನದಲ್ಲಿ ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ.15 ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 3, 4 ಬಿಎಚ್‌ಕೆಯ ಫ್ಲಾಟ್‌ಗಳಿದ್ದು ಒಟ್ಟು 28 ಅಪಾರ್ಟ್‌ಮೆಂಟ್‌ಗಳಿರಲಿವೆ.ಇನ್‌ಫಿನಿಟಿ ಸ್ವಿಮ್ಮಿಂಗ್ ಫೂಲ್, ಆಧುನಿಕ ಜಿಮ್, ಇಂಡೋರ್‌ಗೇಮ್ಸ್, ಯೋಗಾ ರೂಮ್, ಮಕ್ಕಳ ಆಟದ ವಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಹೊಂದಿದೆ. ತಳ ಮತ್ತು ಕೆಳ ಅಂತಸ್ತುಗಳಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ.ಅಪಾರ್ಟ್‌ಮೆಂಟ್‌ಗಳು ವಾಸ್ತು ಪ್ರಕಾರವಾಗಿದ್ದು ಸಿಸಿ ಕೆಮರಾ, ಸ್ವಯಂಚಾಲಿತ ಲಿಫ್ಟ್, ಜನರೇಟರ್ ಮತ್ತು ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ರೋಹನ್ ಇಥೋಸ್ ಯೋಜನೆ ಹೊಸ ಟ್ರೆಂಡ್, ಗುಣಮಟ್ಟ ಮತ್ತು ಗ್ರಾಹಕರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿದೆ. ಆಸ್ಪತ್ರೆಗಳು, ಪೂಜಾ ಸ್ಥಳಗಳು, ರೈಲ್ವೆ ಸ್ಟೇಶನ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಉದ್ಯಾನ ಮತ್ತು ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ಸಮೀಪದಲ್ಲೇ ಇವೆ.ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. https://rohancorporation.in/

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ಬಿಡುಗಡೆ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ನ ಗೃಹ ಪತ್ರಿಕೆ ” ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ” ಇದರ ಈ ವರ್ಷದ ಪ್ರಥಮ ಸಂಚಿಕೆಯನ್ನು ಚಿತ್ರ ನಿರ್ದೇಶಕ, ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.ಸಿನಿಮಾ ಸೇರಿದಂತೆ ಕಲೆ ಹಾಗೂ ಕಲಾವಿದರ ಬೆಳವಣಿಗೆಯಲ್ಲಿ ಪತ್ರಿಕಾ ಮಾಧ್ಯಮ ಮಹತ್ವದ ಪಾತ್ರ ವಹಿಸಿದೆ. ಇದರಿಂದ ಕಲಾವಿದರು ಹಾಗೂ ಪತ್ರಕರ್ತರ ಮಧ್ಯೆ ಉತ್ತಮ ಬಾಂಧವ್ಯ ಬೆಳೆದಿದೆ” ಎಂದು ಅವರು‌ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ನ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಕಾರ್ಯದರ್ಶಿ ಪುಷ್ಪರಾಜ್.ಬಿ.ಎನ್. ಉಪಸ್ಥಿತರಿದ್ದರು. ‌ಕಾರ್ಯಕಾರಿ ಸಮಿತಿ ಸದಸ್ಯ‌ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರ

ಪ್ರಾದೇಶಿಕ ವಾರ್ತೆಗಳು

KANACHUR empowers the graduates of MANGALORE UNIVERSITY with CPR & First Aid skills.

Mangalore, 22nd April : In a first of its kind skill empowerment program at Mangalore University, the leadership team lead by Dr PL Dharma – Hon’ble VC, Mangalore University & Dr Jayaraj Amin – Hon’ble Chairman, Dept of Political Science, Mangalore University inaugurated a ‘CPR & FIRST AID’ program, in association with Kanachur Institute of Medical Sciences, Natekal, Mangaluru. Dr. Rohan Monis – Cheif Administrative Officer, Kanachur Hospital & Research Centre was the Guest of Honor; Dr Srinivas (JR III) & Dr Ubedulla (JR I) from Dept of Emergency Medicine, KIMS were the resource persons. In his welcome address, Dr Jayaraj Amin expressed his gratefulness to Kanachur Institute for bringing together a team & a program for empowering their graduates with a community based essential skill. Dr Rohan lauded the efforts of the leadership team of Mangalore University for taking this leap into empowering the graduates with a life saving skill that will improve social well-being; also educating them that India’s Emergency Helpline no is 112. Dr PL Dharma expressed that emergencies happen everywhere but are we equipped with the basics? encouraging the students to do more and be more with no gender and religious boundaries, in their minds.Dr Srinivas & Dr Ubedulla did a didactic session with hands on demonstration of CPR skills. The graduates were thrilled and feedback was great._Cardio Pulmonary Resuscitaiton (CPR) is an emergency procedure that is done when someone’s heartbeat has stopped. Kanachur Institute of Medical Sciences advocates CPR skills – a vital life saving procedure._

ಪ್ರಾದೇಶಿಕ ವಾರ್ತೆಗಳು

ಮೇ1ರಂದು ಓಂ ಸಾಯಿ ಮಂದಿರ ಗರಡಿ ಬಳಿ ಶ್ರೀ ಲಲಿತ ಸಹಸ್ರ ನಾಮ ಕದಳಿ ಯಾಗ

ಮೇ1ರಂದು ಓಂ ಸಾಯಿ ಮಂದಿರ ಕಂಕನಾಡಿ ಗರಡಿ ಬಳಿ ಶ್ರೀ ಲಲಿತ ಸಹಸ್ರ ನಾಮ ಕದಳಿ ಯಾಗ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗಂಗಾಧರ ಶಾಂತಿಯವರು ವಿನಂತಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ‘ನೋವೇಶನ್ 2025’ ಅಂತರರಾಷ್ಟ್ರೀಯ ಸಮ್ಮೇಳನದ ಯಶಸ್ವಿ ಆಯೋಜನೆ

ಸೇಂಟ್ ಅಲೋಶಿಯಸ್ (ಸ್ವಾಯತ್ತ ವಿಶ್ವವಿದ್ಯಾಲಯ), ಏಮಿಟ್(AIMIT) ಬೀರಿ ಕ್ಯಾಂಪಸಿನ ಎಂಬಿಎ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್ ನಡೆಸಿದ 8ನೇ ಅಂತರರಾಷ್ಟ್ರೀಯ ಸಮ್ಮೇಳನ ‘ನೋವೇಶನ್ 2025’: ಇಂಡಸ್ಟ್ರಿ 5.0, 6.0 ಮತ್ತು ಅದರ ಮುಂಬರುವ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು – ಭವಿಷ್ಯದ ವ್ಯವಸ್ಥಾ ಮಾದರಿಗಳ ಅಭಿವೃದ್ಧಿ ಎಂಬ ವಿಷಯದ ಮೇಲೆ ಎಪ್ರಿಲ್ 25, 2025ರಂದು ಏರ್ಪಡಿಸಲಾಯಿತು. ಉದ್ಘಾಟನೆಯ ಮುಖ್ಯ ಅತಿಥಿ ಎಂ.ಆರ್.ಪಿ.ಎಲ್.ನ ಮುಖ್ಯ ಜನರಲ್ ಮ್ಯಾನೇಜರ್(ಎಚ್.ಆರ್), ಶ್ರೀ ಸಂದೇಶ್ ಜೆ. ಕುಟೀನ್ಹೋ ಪ್ರಭು, ಮುಂದಿನ ದಶಕದಲ್ಲಿ (5.0) ಮತ್ತು ಅದರ ನಂತರದ ದಶಕದಲ್ಲಿ (6.0) ಸಂಭವಿಸಬಹುದಾದ ಬದಲಾವಣೆಗಳು ಮತ್ತು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನವ ಶಕ್ತಿಯನ್ನು ಸಜ್ಜುಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಉದ್ಯಮದ ಬದಲಾವಣೆಗಳ ಅಗತ್ಯತೆಗಳನ್ನು ಪೂರೈಸಲು ಅವರು ಚುರುಕುತನ (Agility), ಹೊಂದಾಣಿಕೆ (Adaptability), ಮತ್ತು ಸಾಮರಸ್ಯ (Alignment) ಎಂಬ ಮೂರು ಎ (AAA) ಸೂತ್ರಗಳನ್ನು ನೀಡಿದರು. ನ್ಯೂಯಾರ್ಕಿನ ಸ್ಟೇಟ್ ಯೂನಿವರ್ಸಿಟಿ ಆಫ್ ಆಲ್ಬನಿಯ ಪ್ರೊಫೆಸರ್ (ಡಾ.) ಡೇವಿಡ್ ಎಂ. ಸ್ಮಿತ್; ಮಾರಿಷಸ್ ಸರ್ಕಾರದ ಹಣಕಾಸು ಸಚಿವಾಲಯದ ಡಾ. ಯತಿನ್ ಮತ್ತು ಲೊಯೊಲಾ ಕಾಲೇಜ್ ಆಫ್ ಸೋಷಿಯಲ್ ಸೈನ್ಸಸ್ (ಸ್ವಾಯತ್ತ), ತಿರುವನಂತಪುರಂನ ಪ್ರಾಧ್ಯಾಪಕ ಡಾ. ಫಾ. ರಂಜಿತ್ ಜಾರ್ಜ್ ಎಸ್.ಜೆ. ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು. ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರೋನಾಲ್ಡ್ ನಜರೆತ್, ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು, ಏಮಿಟ್(AIMIT)ಯ ನಿರ್ದೇಶಕ ಡಾ. (ಫಾದರ್) ಕಿರಣ್ ಕೋತ್ ಎಸ್.ಜೆ., ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್’ನ ಡೀನ್ ಡಾ. ರಜನಿ ಸುರೇಶ್, ಸಭೆಯನ್ನು ಸ್ವಾಗತಿಸಿದರು ಮತ್ತು ಸಮ್ಮೇಳನದ ಅವಲೋಕನವನ್ನು ನೀಡಿದರು.60ಕ್ಕೂ ಹೆಚ್ಚು ಸಂಶೋಧನಾ ಪತ್ರಗಳನ್ನು ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಸ್ತುತಪಡಿಸಿದರು.

ಪ್ರಾದೇಶಿಕ ವಾರ್ತೆಗಳು

ಮೊತ್ತ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಯಕ್ಷಗಾನ ‘ವೀರಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

ಮಂಗಳೂರು: ಪ್ರಪಂಚದ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿ, ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಬೆಳ್ಳಿಪರದೆಗೆ ತರಲಾಗಿದೆ. ಏ.18ರಂದು ಇದನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಕರವಾಳಿಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಕಡೆಗಳಲ್ಲೂ ಹಂತಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಖ್ಯಾತ ಸಂಗೀತ, ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಹೇಳಿದರು.ಅವರು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿ, ನನ್ನ ಅಜ್ಜ ಯಕ್ಷಗಾನ ಕಲಾವಿದರಾಗಿದ್ದು, ಒಮ್ಮೆಲೆ ಐದು ವಾದ್ಯಗಳನ್ನು ನುಡಿಸಬಲ್ಲ ಸಾಮೃಥ್ಯದವರು. ನನ್ನ ತಂದೆ ಸೇರಿ ಇಡೀ ಕುಟುಂಬದಲ್ಲಿ ಎಲ್ಲರೂ ಯಕ್ಷಗಾನ ಕಲಾವಿದರಾಗಿದ್ದಾರೆ. ಯಕ್ಷಗಾನವನ್ನು ಎಲ್ಲೋ ಮಿಸ್ ಮಾಡುತ್ತಿದ್ದೇನೆ ಎಂದೆನಿಸಿತು. ಸುಮಾರು ಹನ್ನೆರಡು ವರ್ಷಗಳ ಮುಂಚೆ ಪ್ರಯತ್ನಿಸಿದ್ದೆ. ಆದರೆ ಆಗ ನನ್ನ ಕಿಸೆಯಲ್ಲಿ ದುಡ್ಡಿರಲಿಲ್ಲ, ಅನುಭವವೂ ಇರಲಿಲ್ಲ. ಆದರೆ ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿತು ಎಂದರು. ಎಲ್ಲರೂ ಇದನ್ನು ಸಿನಿಮಾ ಆಂಗಲ್‌ನಲ್ಲಿ ನೋಡುತ್ತಿದ್ದರು, ಆದರೆ ಇದು ಬರೇ ಸಿನಿಮಾ ಅಲ್ಲ, ಇದು ತುಳುನಾಡಿನ ಕಲೆ. ಆದ್ದರಿಂದ ಇದನ್ನು ಅದೇ ಶೈಲಿಯಲ್ಲಿ ನೋಡಿದರೆ, ವೀಕ್ಷಕನ ದೃಷ್ಟಿಕೋನ ಬದಲಾಗುತ್ತೆ. ಅದ್ಭುತ ಜ್ಞಾನ ಭಂಡಾರವನ್ನೇ ಹೊಂದಿರುವ ಯಕ್ಷಗಾನವನ್ನು ಯಾಕೆ ಇಷ್ಟಕ್ಕೇ ಸೀಮಿತವಾಗಿಟ್ಟುಕೊಳ್ಳಬೇಕು, ಇದನ್ನು ಪ್ರಪಂಚದ ಮುಂದೆ ತರಬೇಕು ಎನ್ನುವ ನಿಟ್ಟಿನಲ್ಲಿ ಈ ಚಿತ್ರ ರೂಪಿಸಲಾಗಿದೆ. ಬಾಹುಬಲಿಯನ್ನು ಮೀರಿಸುವ ಎಲ್ಲಾ ಲಕ್ಷಣವನ್ನು ಈ ಚಿತ್ರ ಹೊಂದಿದೆ. ಇಲ್ಲಿ ಯಕ್ಷಗಾನ ಮಾತ್ರವಲ್ಲ ಕಲಾವಿದರ ಬದುಕೂ ಕೂಡಾ ಅನಾವರಣಗೊಂಡಿದೆ. 1500 ಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯನ್ನು ವಿಜ್ರಂಭಣೆಯಿಂದ ವಿಶ್ವದ ಮುಂದೆ ಮೆರೆಸುವ ಒಂದು ಪ್ರಯತ್ನ. ಇದು ಕೇವಲ ಮನೋರಂಜನೆ ಉದ್ದೇಶವಷ್ಟೇ ಅಲ್ಲದೆ ಭವಿಷ್ಯದ ಅನೇಕ ಚಿತ್ರಗಳಿಗೆ ದಾರಿ ತೋರುವ, ಪರಂಪರೆ ಉಳಿಸುವ, ಭವಿಷ್ಯದ ಪೀಳಿಗೆಗೆ ನಮ್ಮ ಕಲೆಯನ್ನು ಪರಿಚಯಿಸುವ ಒಂದು ಹೊಸ ಆರಂಭ. ಇದರಲ್ಲಿ ಹೆಚ್ಚಾಗಿ ಯಕ್ಷ ಕಲಾವಿದರೇ ಅಭಿನಯಿಸಿದ್ದಾರೆ‌ ಎಂದರು ರವಿ ಬಸ್ರೂರು.ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾವಿದರನ್ನೇ ಬಳಸಿ, ಯಕ್ಷಗಾನೀಯವಾಗಿ ಚಲನಚಿತ್ರವನ್ನು ಹೇಗೆ ಮಾಡಬಹುದು ಎನ್ನುವುದನ್ನು ಬಸ್ರೂರು ತೋರಿಸಿಕೊಟ್ಟಿದ್ದಾರೆ. ಕಾಂತಾರ ಚಲನಚಿತ್ರ ಬಂದ ಮೇಲೆ ದೈವಾರಾಧನೆಗೆ ವಿಶ್ವಮಟ್ಟದ ಮನ್ನಣೆ ಸಿಕ್ಕಿತು. ಅದೇ ರೀತಿ ಈ ಚಿತ್ರದಲ್ಲಿ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಈ ಚಿತ್ರದಲ್ಲಿ ಮನ್ನಣೆ ಸಿಕ್ಕಿದೆ. ಈ ಚಿತ್ರದಲ್ಲಿ ನಾನೂ ಒಂದು ಹಾಡನ್ನು ಯಕ್ಷಗಾನ ಶೈಲಿಯಲ್ಲೇ ಹಾಡಿದ್ದು ವಿಶೇಷ. ಈ ಚಿತ್ರದಲ್ಲಿ ಯಕ್ಷಗಾನಕ್ಕೆ ಎಲ್ಲಿಯೂ ಲೋಪ, ಅಪಚಾರ ಆಗದ ಹಾಗೆ ನೋಡಲಾಗಿದೆ. ಮುಂದಿನ ಜನಾಂಗಕ್ಕೆ ಮಾತ್ರವಲ್ಲ ಯಕ್ಷಗಾನದ ಮೇಲೆ ಆಸಕ್ತಿ ಇಲ್ಲದವನೂ ಕೂಡ ಆಸಕ್ತಿ ಬೆಳೆಸುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಝನ್ಸಾಲೆ ಮಾತನಾಡಿ, ಆರೇಳು ಗಂಟೆ ಇರುವ ಯಕ್ಷಗಾನವನ್ನು ಎರಡೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಆದರೆ ಚಿತ್ರದಲ್ಲಿ ಯಕ್ಷಗಾನಕ್ಕೆ ಎಲ್ಲೂ ಲೋಪವಾಗಿಲ್ಲ. ಅವರ ಚಿತ್ರದ ಉದ್ದೇಶ ಉತ್ತಮವಾಗಿದ್ದು, ನಾವದಕ್ಕೆ ಪ್ರೋತ್ಸಾಹಿಸೋಣ ಎಂದರು.ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಸಿನಿಮಾದ ಮೂಲಕ ಯಕ್ಷಗಾನದ ಕಂಪನ್ನು ವಿಶ್ವದೆಲ್ಲೆಡೆ ರವಿ ಬಸ್ರೂರು ಪಸರಿಸಿದ್ದಾರೆ. ನಾವು ಇಲ್ಲಿ ಯಕ್ಷಗಾನ ಶೈಲಿಯಲ್ಲೇ ಭಾಗವತಿಕೆ ಮಾಡಿದ್ದೇವೆ ಎಂದರು.ರವಿ ಬಸ್ರೂರು ತಂಡದ ಪರಿಶ್ರಮದಲ್ಲಿ ಮೂಡಿಬಂದ ಈ ಚಲನಚಿತ್ರವನ್ನು ಎನ್‌.ಎಸ್‌. ರಾಜಕುಮಾರ್ ನಿರ್ಮಿಸಿದ್ದಾರೆ. ಗೀತಾ ರವಿ ಬಸ್ರೂರು, ಅನೂಪ್ ಗೌಡ, ಅನುಲ್ ಕುಮಾರ್ ಪೂವ್ವಾಡಿ ಸಹ‌ ನಿರ್ಮಾಪಕರಾಗಿ, ರವಿ ಬಸ್ರೂರು ಸಂಗೀತ, ಕಿರಣ್ ಕುಮಾರ್ ಆರ್ ಛಾಯಾಗ್ರಹಣ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಟ ಡಾ. ಶಿವರಾಜ್ ಕುಮಾರ್ ಕೂಡಾ ಬಣ್ಣ ಹಚ್ಚಿದ್ದು ಸುಮಾರು 900 ಕಲಾವಿದರಿದ್ದಾರೆ‌. ಪಟ್ಲ ಸತೀಶ್ ಶೆಟ್ಟಿ ಮತ್ತು ಜನ್ಸಾಲೆರಾಘವೇಂದ್ರ ಈ ಸಿನಿಮಾದಲ್ಲಿ ಹಾಡಿದ್ದಾರೆ.ಚಿತ್ರ: ಸತೀಶ್ ಕಾಪಿಕಾಡ್

Scroll to Top