ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಜೂ.೨೭ರಂದು ರೆಡ್‌ಕ್ರಾಸ್‌ನಿಂದರಕ್ತದಾನಿಗಳಿಗೆ ಸನ್ಮಾನ

ಮಂಗಳೂರು : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜೂ.೨೭ರಂದು ಬೆಳಗ್ಗೆ ೧೦.೩೦ಕ್ಕೆ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್.ಡಿ.ಎಸ್. ಮತ್ತು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ರಕ್ತದಾನ ಉಪ ಸಮಿತಿ ನಿರ್ದೇಶಕ ಪುಷ್ಪರಾಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…………………………..

ಪ್ರಾದೇಶಿಕ ವಾರ್ತೆಗಳು

ಯುವ ಜನತೆಯಲ್ಲಿ ಯೋಗದ ಬಗ್ಗೆ ಅರಿವು-ದ.ಕ.ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂವರ್ಧನೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಾನ, ಪ್ರಥಮ ಚಿಕಿತ್ಸಾ ತರಬೇತಿ ಸಹಿತ ಆರೋಗ್ಯ ರಕ್ಷಣೆ ಸಂಬAಧಿತ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೆಡ್‌ಕ್ರಾಸ್ ಸಂಸ್ಥೆ ಯೋಗದ ಬಗ್ಗೆಯೂ ಯುವ ಜನತೆಯಲ್ಲಿ ಅರಿವು ಮೂಡಿಸುತ್ತಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ವಿಭಾಗ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ಎಸ್‌ಡಿಎಂ ಲಾ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಪ್ರೊ.ಡಾ.ಕುಣಾಲ್ ಮತ್ತು ಯೋಗ ತಜ್ಞೆ ಪಾರ್ವತಿ ಕುಣಾಲ್ ಇವರು ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.ಎಸ್‌ಡಿಎಂ ಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮಹೇಶ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು.ರೆಡ್‌ಕ್ರಾಸ್ ಸೊಸೈಟಿಯ ಖಜಾಂಜಿ ಗುರುದತ್ ನಾಯಕ್, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ನಿರ್ದೇಶಕ ಪಿ.ಬಿ.ಹರೀಶ್ ರೈ , ಕಾಲೇಜಿನ ಉಪ ಪ್ರಾಂಶುಪಾಲೆ ಬಾಲಿಕಾ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉಮೇಶ್ ಗಟ್ಟಿ, ಸಂಯೋಜಕಿ ಡಾ.ಅನ್ನಪೂರ್ಣ ಶೇಟ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಡಿಂಪಲ್ ಮೇಸ್ತ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ.ಪುಷ್ಪರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿನಯವೇ ಯಶಸ್ಸಿನ ಅಡಿಪಾಯ- ಅಮ್ಮ. ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು

ಮಂಗಳೂರು: ವಿನಯವೇ ಯಶಸ್ಸಿನ ಅಡಿಪಾಯ ಮತ್ತು ವಿನಯವಿರುವೆಡೆಯಲ್ಲಿ ಮಾತ್ರ ಜೀವನದ ನಿಜವಾದ ಸಾಫಲ್ಯ ಇದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ನುಡಿದರು.ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಂಗಳೂರು ಬ್ರಹ್ಮಸ್ಥಾನ ಮಹೋತ್ಸವ’ದ ಎರಡನೇ ದಿನದಂದು ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಜೀವನವು ನದಿಯ ಹರಿವಿನಂತಿದ್ದು, ತನ್ನದೇ ಆದ ಏರಿಳಿತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿರುತ್ತದೆ ಎಂಬುದನ್ನು ಒಪ್ಪಿಕೊಂಡು, ಶರಣಾಗತಿ ಭಾವನೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು” ಎಂದು ಕರೆ ನೀಡಿದರು. > “ಮಣ್ಣಿನ ಅಡಿಯಲ್ಲಿ ಹೂತ ಬೀಜ ಮಾತ್ರವೇ ಮುಂದೆ ಹಣ್ಣು ಕೊಡುವ ಮರವಾಗಿ ಬೆಳೆಯಲು ಸಾಧ್ಯ. ಅದೇ ರೀತಿ, ವಿನಯವಿರುವೆಡೆಯಲ್ಲಿ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ” ಎಂದು ಅಮ್ಮ ಮಾರ್ಮಿಕವಾಗಿ ಹೇಳಿದರು. ಬ್ರಹ್ಮಚಾರಿ ಡಾ. ಗಣೇಶ್ ಉಡುಪ ಇವರು ಪ್ರವಚನ ನೀಡಿದರು.ಬೆಳಗ್ಗೆ 11 ಗಂಟೆಯ ಸುಮಾರಿಗೆ ಅಮ್ಮನವರು ವೇದಿಕೆಗೆ ಆಗಮಿಸಿದಾಗ, ಗಣ್ಯರು ಮಾಲೆಗಳನ್ನು ಅರ್ಪಿಸಿ ಅವರನ್ನು ಸ್ವಾಗತಿಸಿದರು. ಮಂಗಳೂರು ಚಿನ್ಮಯ ಮಿಷನ್‌ನ ಸ್ವಾಮಿ ಗಹನಾನಂದ, ಇಸ್ಕಾನ್ ಮುಖ್ಯಸ್ಥ ಪ್ರಭು ಗುಣಾಕರ ದಾಸ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಬಿ. ರವೀಂದ್ರ ಶೆಟ್ಟಿ, ಇಂದುಮತಿ ಮಲ್ಯ, ಎ.ಸಿ. ಕುಂದರ್, ಸಾಧು ಸಾಲ್ಯಾನ್, ವಿ.ಎಲ್. ರೇಗೋ ಮತ್ತು ಆತ್ಮಾರಾಮ್ ರೇವಣಕರ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಅಮ್ಮನವರಿಗೆ ಮಾಲಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್,ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಡಾ.ವೈ.ಸನತ್ ಹೆಗಡೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗಡೆ,ಡಾ ವಸಂತ್ ಕುಮಾರ್ ಪೆರ್ಲ, ದಿಲೀಪ್ ಕುಮಾರ್,ರಾಜನ್, ರೋಜಾ ರಾಜನ್,ಗಿರೀಶ್ ರೇವಣಕರ್ ಮೊದಲಾದವರು ಉಪಸ್ಥಿತರಿದ್ದರುಡಾ ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಅಮ್ಮನವರ ನೇತೃತ್ವದಲ್ಲಿ ಭಜನೆ ಮತ್ತು ಧ್ಯಾನ ನೆರವೇರಿತು. ವಿಶೇಷ ಪೂಜೆಗಳನ್ನೊಳಗೊಂಡ ಈ ಎರಡು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ‘ಅಮಲ ಭಾರತಂ’ ಅಭಿಯಾನದ ಅಂಗವಾಗಿ ಯಜ್ಞದ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು. ಮೇ 31 ಮತ್ತು ಜೂನ್ 1 ರಂದು ಕೇರಳದ (ಕೋಝಿಕೋಡ್) ನಲ್ಲಿ ನಡೆಯಲಿರುವ ಎರಡು ದಿನಗಳ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಮ್ಮನವರು ಅಲ್ಲಿಗೆ ಪ್ರಯಾಣಿಸಲಿದ್ದಾರೆ.ಫೋಟೋ -ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಮುಲ್ಲಕಾಡಿನ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಯಲ್ಲಿ ಯಕ್ಷ ಧ್ರುವ-ಯಕ್ಷ ಶಿಕ್ಷಣ

“ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಮಾತು ಸ್ಪಷ್ಟವಾಗುತ್ತದೆ; ಏಕಾಗ್ರತೆ ಹೆಚ್ಚಾಗುತ್ತದೆ. ಏಳೆಂಟು ಸಾವಿರ ವಿದ್ಯಾರ್ಥಿಗಳು ಈ ಕಲೆಯನ್ನು ಕಲಿತು ತಮ್ಮ ಬದುಕಿನಲ್ಲಿ ಔನ್ನತ್ಯವನ್ನು ಪಡೆದಿದ್ದಾರೆ” ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ತಾರಮಾರ್ ಹೇಳಿದರು. ಇವರು ಮುಲ್ಲಕಾಡಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಯಕ್ಷಧ್ರುವ -ಯಕ್ಷಶಿಕ್ಷಣ ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸಂಧ್ಯಾರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ನಂತರ ಯಕ್ಷಗುರುಗಳಾದ ರಾಕೇಶ್ ರೈ ಅಡ್ಕ ಅವರು ಯಕ್ಷಗಾನದ ಹೆಜ್ಜೆ ಕಲಿಸಿದರು.ಕಾರ್ಯಕ್ರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷರಾದ ತಾರಾನಾಥ ಬೋಳಾರ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ, ಖಜಾಂಚಿ ಗೋಪಿನಾಥ ಶೆಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎ. ಎಸ್. ವೀಣಾ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ರೇಣುಕಾ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಿ. ಉಸ್ಮಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎ. ಎಸ್ ವೀಣಾ ವಂದಿಸಿದರು. ಶಿಕ್ಷಕ ನಾಗರಾಜ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.ಫೋಟೋ -ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಬಂಟ ಸಮಾಜ ಬಾಂಧವವರೇ,ನಿಮ್ಮ ಅಮೂಲ್ಯವಾದ ಮತವನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ದೀಪಕ್ ಶೆಟ್ಟಿ ಮತ್ತವರ ಟೀಮ್ ಗೆ ನೀಡಿ ಗೆಲ್ಲಿಸಬೇಕಾಗಿ ನಿಮ್ಮಲ್ಲಿ ವಿನಮ್ರ ವಿನಂತಿ.

ಡಾ. ದೀಪಕ್ ಶೆಟ್ಟಿ ಅವರು ಆಡಳಿತ, ಸಂಘಟನೆ, ಸಂಸ್ಕೃತಿ, ಸಮಾಜಸೇವೆ ಮತ್ತು ನಾಯಕತ್ವ ಸಮನ್ವಯದ ಪ್ರತೀಕವಾಗಿದ್ದಾರೆ. ಬೆಂಗಳೂರು ಬಂಟರ ಸಂಘದ ಬೆಳವಣಿಗೆಗೆ ಹಲವು ದಶಕಗಳಿಂದ ಶ್ರಮಿಸುತ್ತಾ, ಕರಾವಳಿ ಸಂಸ್ಕೃತಿ, ಯಕ್ಷಗಾನ, ಕನ್ನಡ ಮತ್ತು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಅವರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಮರ್ಥ, ಅನುಭವಿ ಹಾಗೂ ದೂರದೃಷ್ಟಿಯ ನಾಯಕರು. ಡಾ. ದೀಪಕ್ ಶೆಟ್ಟಿ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್,ಎಂಬಿಎ,ಯಕ್ಷಗಾನ ಡಾಕ್ಟರೇಟ್ ಉನ್ನತ ಪದವಿ ಪಡೆದಿದ್ದಾರೆ.ಟೊಯೋಟಾ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ದೀಪಕ್ ಶೆಟ್ಟಿ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಬಾರ್ಕೂರು.ತಂದೆ ಹಿಮಕರ ಶೆಟ್ಟಿ (ನಿವೃತ್ತ ಶಿಕ್ಷಕರು),ತಾಯಿ ಶ್ರೀಮತಿ ವನಜಾ ಶೆಟ್ಟಿ (ನಿವೃತ್ತ ಶಿಕ್ಷಕಿ),ಪತ್ನಿ ಶ್ರೀಮತಿ ಸುಮಾ ಡಿ. ಶೆಟ್ಟಿ ಮತ್ತುಇಬ್ಬರು ಪುತ್ರರಿದ್ದಾರೆವೃತ್ತಿಪರ ಸಾಧನೆ-: ಡಾ. ದೀಪಕ್ ಶೆಟ್ಟಿ ಅವರು ಟೊಯೋಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು,ಭಾರತ ಹಾಗೂ ವಿವಿಧ ವಿದೇಶಗಳಲ್ಲಿ ವೃತ್ತಿಪರ ಸೇವೆ ಸಲ್ಲಿಸಿ ವಿಶಿಷ್ಟ ಅನುಭವ ಹೊಂದಿದ್ದಾರೆ.ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಬೆಂಗಳೂರು ಬಂಟರ ಸಂಘದಲ್ಲಿ ಸೇವಾ ಪಯಣ: ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರು ಬಂಟರ ಸಂಘದ ಯುವ ವಿಭಾಗದ ಮೂಲಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯ ಪ್ರವೇಶ ಮಾಡಿ,ಯುವ ವಿಭಾಗದ ಸಂಚಾಲಕರಾಗಿ ಮತ್ತು ಯುವ ವಿಭಾಗದ ಚೇರ್‌ಪರ್ಸನ್ ಆಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದಾರೆ. ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ, ಕೋಶಾಧಿಕಾರಿಯಾಗಿ ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡಿದ್ದಾರೆ. ಸಂಘದ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಪ್ರಮುಖ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.ಸಾಂಸ್ಕೃತಿಕ ನಾಯಕತ್ವ ಮತ್ತು ಸಾಮಾಜಿಕ ಸೇವೆ ಹಾಗೂ ಸಂಘಟನಾತ್ಮಕ ಜವಾಬ್ದಾರಿಗಳು: ಡಾ. ದೀಪಕ್ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.ಅಧ್ಯಕ್ಷರಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರುನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಯ್ಯಾರ ಕಿಞ್ಞಣ್ಣ ರೈ ಜನ್ಮಶತಮಾನೋತ್ಸವದ ಪ್ರಧಾನ ಸಂಚಾಲಕತ್ವ, ಡಿ.ಕೆ. ಚೌಟರ ಅಮೃತ ಮಹೋತ್ಸವದ ಮುಂದಾಳತ್ವ ವಹಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆಯಕ್ಷಗಾನ ಕ್ಷೇತ್ರದಲ್ಲಿ ಕೊಡುಗೆ:ಡಾ. ದೀಪಕ್ ಶೆಟ್ಟಿ ಅವರು ಯಕ್ಷಗಾನ ವೇಷಗಾರಿಕೆ ಮತ್ತು ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಲಾವಿರರಾಗಿ ಕಲಾಸೇವೆ ಸಲ್ಲಿಸಿದ್ದಾರೆ.ತೆಂಕು ಹಾಗೂ ಬಡಗು ತಿಟ್ಟಿನ ಹಿರಿಯ ಕಲಾವಿದರ ಸಂದರ್ಶನ ಮತ್ತು ವೀಡಿಯೋ ದಾಖಲಾತಿ,-ಯಕ್ಷಗಾನದ ನೂರು ರಾಗಗಳ ದಾಖಲಾತಿಯಾದ “ಶತಸಾನುರಾಗ” ದಾಖಲೀಕರಣ ರೂವಾರಿಯಾಗಿ ಹೊಸ ಇತಿಹಾಸ, ದಾಖಲೆ ಬರೆದಿದ್ದಾರೆ.ಯಕ್ಷಗಾನ ಕಲಾವಿದರು, ಸಂಘಟಕರು ಹಾಗೂ ಕಲಾಸಂಸ್ಥೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಕಲಾ ಪೋಷಕರಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಸಾಮಾಜಿಕ ಮತ್ತು ನಾಡು-ನುಡಿ ಹೋರಾಟಗಳು:ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರಿನಲ್ಲಿ “ಬೈಂದೂರು ಟು ಬದಿಯಡ್ಕ ಸಮಾಗಮ” ಎಂಬ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿ ಆಯೋಜನೆ ಮಾಡಿದ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಭವ್ಯ ಆಯೋಜನೆ,ತುಳು ಲಿಪಿ ಕಾರ್ಯಗಾರದ ಪ್ರಥಮ ಆಯೋಜನೆ. ಕನ್ನಡ ಮತ್ತು ತುಳು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳದ ಯಶಸ್ವಿ ಸಂಘಟನೆ. ಕಂಬಳ ನಿಷೇಧದ ಸಂದರ್ಭದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದೆ ಕರಾವಳಿಯ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕರಾವಳಿಗರ ಹೋರಾಟದ ನೇತೃತ್ವ,ಕುಂದಾಪ್ರ ಕನ್ನಡ ಪ್ರತಿಷ್ಠಾನದ ಆರಂಭ ಮತ್ತು ಅಧ್ಯಕ್ಷರಾಗಿ ಯಶಸ್ವಿ ನಾಯಕತ್ವ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ “ಕುಂದಾಪ್ರ ಕನ್ನಡ ಅಧ್ಯಯನ ಪೀಠ” ಸ್ಥಾಪನೆಗೆ ಮಹತ್ವದ ಕೊಡುಗೆ ಸಲ್ಲಿಸಿ ದ್ದಾರೆ.ಅಂತರರಾಷ್ಟ್ರೀಯ ಕನ್ನಡ ಸೇವೆ: ಡಾ.ದೀಪಕ್ ಶೆಟ್ಟಿ ಅವರು ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿ ಹೊಸ ಶಕೆ ಬರೆದಿದ್ದಾರೆ.ನಿರಂತರ 11 ವರ್ಷಗಳ ಕಾಲ ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವ ಜಾರಿ ಮಾಡಿ ಕನ್ನಡ ಅಭಿಮಾನ, ಕನ್ನಡ ದ ಜಾಗೃತಯನ್ನು ವಿದೇಶ ದಲ್ಲೂ ಮಾಡಿ ಜನ ಮನ್ನಣೆ ಗೆ ಪಾತ್ರರಾಗಿದ್ದಾರೆ.ಸಮಾಜಮುಖಿ ಸೇವೆ : ಡಾ. ದೀಪಕ್ ಶೆಟ್ಟಿ ಅವರು ಬಡವರ ಬಂಧು.ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ನೆರವು ನೀಡಿದ್ದಾರೆ.ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವಾರು ಕಲಾವಿದರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಿಗೆ ಬೆಂಬಲ ನೀಡಿದ್ದಾರೆ. ಯುವಜನರನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ನಿರಂತರ ಪ್ರಯತ್ನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಪ್ರತಿಧ್ವನಿ, ರಾಷ್ಟ್ರೀಯ ಪತ್ರಿಕೆ ಎಂಪಿ ಎಂಎಲ್ ಎ ನ್ಯೂಸ್ ನ್ ಮಹಾಪೋಷಕರಾಗಿರುವ ಡಾ. ದೀಪಕ್ ಶೆಟ್ಟಿ ಅವರು ನುಡಿದಂತೆ ನಡೆವ ಸಮರ್ಥ ನಾಯಕ. ಬೆಂಗಳೂರು ಬಂಟರ ಸಂಘದ ಸಮಸ್ತ ಮತದಾರ ಬಾಂಧವರೇ, ನಿಮ್ಮ ಅಮೂಲ್ಯ ಮತವನ್ನು ಡಾ. ದೀಪಕ್ ಶೆಟ್ಟಿ ಮತ್ತವರ ಟೀಮ್ ಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿ ಈ ಮೂಲಕ ವಿನಂತಿ

ಪ್ರಾದೇಶಿಕ ವಾರ್ತೆಗಳು

‘St. Theresa’s School’ invites Dr. Rohan S. Monis for the Orientation Programme of Kindergarten Parents.

Mangaluru, June 20, 2026 St. Theresa’s School conducted an Orientation Programme for the parents of Kindergarten students on 20th June 2026 at 9:00 a.m. in the Msgr. Raymond Auditorium, marking the beginning of a fruitful partnership between the school and parents in nurturing the holistic development of young learners. The programme commenced with a prayer service seeking God’s blessings, led by Mrs. Priya and Mrs. Jesney. Mrs. Lidwin extended a warm welcome to the gathering, while Mrs. Seema gracefully compered the programme. Addressing the parents, the Principal, Sr. Lourdes, familiarised them with the rules and regulations of the school and emphasised the importance of positive parenting and a value-based family culture. She urged parents to speak positively about the school in the presence of their children so that they develop a healthy attitude towards learning. Highlighting the need to nurture values from an early age, she stressed the importance of raising children who are sensitive, disciplined, humble and respectful towards others. She also encouraged parents to help children accept correction with love and understanding and to work hand in hand with the school in shaping responsible and compassionate individuals. Mrs. Roshni introduced the Chief Guest, Dr. Rohan S. Monis – Chief Administrative Officer of Kanachur Medical College & an advocate for CPR & Organ Donation. In his insightful address, Dr. Monis spoke on various aspects of purposeful parenting, schooling, children’s emotional scaffolding and behaviour. He highlighted the vital role of parental love with right communication & emotional support and healthy family relationships in a child’s overall mind development. Speaking on “Learning Happens as a Rhythm,” he stressed the importance of creating a natural and balanced rhythm in a child’s life through adequate rest, movement, communication, limited screen time, structured routines, creating boundaries and ensuring proper mental and physical nourishment. Exploring the fact “Treat Your Child as a Little Adult,” he encouraged parents to communicate with children respectfully through clear explanations, meaningful choices, validation of their emotions and collaborative conflict resolution. Emphasising the need for emotional bonding & setting up boundaries. He spoke on “The Power of the Kissing Embrace,” urging parents, especially fathers, to express affection openly and create a loving environment for their children; by breaking the no touch technique that most of them were brought up with. He wished the Fathers an ‘Happy Early Father’s Day’ too. The vote of thanks was proposed by Mrs. Savitha. An interactive session followed, during which parents actively participated and had their queries and concerns addressed by Sr. Lourdes and Mrs. Gladys. The programme concluded with the National Anthem, heralding the successful beginning of a collaborative journey between the school and parents in fostering the all-round growth and development of every child.

ಪ್ರಾದೇಶಿಕ ವಾರ್ತೆಗಳು

Mangaluru to Welcome Bollywood Badshah Shah Rukh Khan for a Landmark Event Hosted by Rohan Corporation

Mangaluru: Rohan Corporation, one of Coastal Karnataka’s most respected and trusted real estate developers, has announced that Bollywood superstar and global entertainment icon Shah Rukh Khan will visit Mangaluru on June 25, 2026, as the special guest at an exclusive event titled “An Evening with Shah Rukh Khan.” The much-anticipated event will be held at Adyar Garden, Mangaluru, with entry commencing from 4:00 PM onwards. Bringing together an influential gathering of business leaders, industry stalwarts, dignitaries, invited guests, and registered members of the public, the evening is poised to be among the most significant corporate and entertainment events ever hosted in the region. Announcing the visit, Dr. Rohan Monteiro, Founder and Managing Director of Rohan Corporation, said the moment marks a defining milestone for the organization. “We are delighted to welcome Shah Rukh Khan to Mangaluru for this special evening. This is a moment of immense pride for Rohan Corporation, and we look forward to hosting a truly memorable experience for our guests and attendees,” he said. Dion Monteiro, Director of Rohan Corporation, underscored the scale of the event and the level of execution it demands. “This will be one of the most prominent corporate events ever hosted in Mangaluru. The occasion marks a landmark moment for our organization and for the city, bringing together distinguished guests for an evening of exceptional significance. We seek the cooperation of all concerned departments and the public in making the event a safe and memorable success,” he said. Rohan Corporation has confirmed that prior registration is mandatory for all attendees. Entry will be permitted only upon presentation of a valid registered pass issued by the organizers. The announcement of Shah Rukh Khan’s visit has generated tremendous excitement across the region and beyond, with the event expected to attract widespread attention from fans, business leaders, and the public alike. The evening is poised to become a landmark occasion in Mangaluru’s event landscape, further reinforcing the city’s growing stature as a destination capable of hosting events of national prominence and significance. About Rohan Corporation Rohan Corporation is one of Coastal Karnataka’s leading real estate development companies, renowned for delivering landmark residential, commercial, and mixed-use developments. Built on a foundation of trust, quality, innovation, and customer-centricity, the company has played a significant role in shaping the region’s evolving urban landscape while consistently setting new benchmarks in excellence. For any assistance, call: +91 90355 64026 ————————————————— *ಪತ್ರಿಕಾ ಪ್ರಕಟಣೆ* *ಕರಾವಳಿಯತ್ತ ಕಿಂಗ್ ಖಾನ್ ಹೆಜ್ಜೆ: ಮಂಗಳೂರಿನಲ್ಲಿ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮ* ಮಂಗಳೂರು: ಬಾಲಿವುಡ್‌ನ ಖ್ಯಾತ ನಟ ಹಾಗೂ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಅವರು ಜೂನ್ 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಪೂರ್ವ ನೋಂದಣಿ ಮಾಡಿಕೊಂಡಿರುವ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಮಾತನಾಡಿದ ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ, “ಭಾರತದ ಅತ್ಯಂತ ಜನಪ್ರಿಯ ಕಲಾವಿದರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರನ್ನು ಮಂಗಳೂರಿನ ನೆಲದಲ್ಲಿ ಸ್ವಾಗತಿಸುವ ಅವಕಾಶ ದೊರೆತಿರುವುದು ನಮಗೆ ಹೆಮ್ಮೆಯ ವಿಷಯ. ಈ ಕಾರ್ಯಕ್ರಮವು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಕ್ಷಣವಾಗಿದ್ದು, ಭಾಗವಹಿಸುವ ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವವನ್ನು ನೀಡಲಿದೆ” ಎಂದು ಹೇಳಿದರು. ಕಾರ್ಯಕ್ರಮದ ಸಿದ್ದತೆಗಳ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಿಯಾನ್ ಮೊಂತೇರೊ, “ಇದು ಮಂಗಳೂರಿನಲ್ಲಿ ನಡೆಯಲಿರುವ ಅತಿದೊಡ್ಡ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ. ನಮ್ಮ ಸಂಸ್ಥೆಗೆ ಮತ್ತು ನಗರಕ್ಕೆ ಮಹತ್ವದ ಕ್ಷಣವಾಗಿರುವ ಈ ಕಾರ್ಯಕ್ರಮವು ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಅಧಿಕೃತವಾಗಿ ನೋಂದಾಯಿತ ಪಾಸ್‌ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಶಾರುಖ್ ಖಾನ್ ಅವರ ಮಂಗಳೂರು ಭೇಟಿ ಘೋಷಣೆಯಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅಪಾರ ಕುತೂಹಲ ಮತ್ತು ನಿರೀಕ್ಷೆ ಮೂಡಿದ್ದು, ಈ ಕಾರ್ಯಕ್ರಮವು ಮಂಗಳೂರಿನ ಕಾರ್ಪೊರೇಟ್ ಹಾಗೂ ಸಾಮಾಜಿಕ ವಲಯದಲ್ಲಿ ವಿಶೇಷ ಗಮನ ಸೆಳೆಯುವ ನಿರೀಕ್ಷೆಯಿದೆ. ರೋಹನ್ ಕಾರ್ಪೊರೇಶನ್ ಬಗ್ಗೆ ರೋಹನ್ ಕಾರ್ಪೊರೇಶನ್ ಕರಾವಳಿ ಕರ್ನಾಟಕದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದ್ದು, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಗ್ರಾಹಕರ ವಿಶ್ವಾಸವನ್ನು ತನ್ನ ಪ್ರಮುಖ ಮೌಲ್ಯಗಳಾಗಿ ಹೊಂದಿದೆ. ಸಂಸ್ಥೆಯು ಹಲವು ವಸತಿ ಹಾಗೂ ವಾಣಿಜ್ಯ ಯೋಜನೆಗಳ ಮೂಲಕ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ 📞 : +91 90355 64026

ಪ್ರಾದೇಶಿಕ ವಾರ್ತೆಗಳು

ಕರಾವಳಿಯತ್ತ ಕಿಂಗ್ ಖಾನ್ ಹೆಜ್ಜೆ: ಮಂಗಳೂರಿನಲ್ಲಿ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮ

ಮಂಗಳೂರು: ಬಾಲಿವುಡ್‌ನ ಖ್ಯಾತ ನಟ ಹಾಗೂ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಅವರು ಜೂನ್ 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಪೂರ್ವ ನೋಂದಣಿ ಮಾಡಿಕೊಂಡಿರುವ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಮಾತನಾಡಿದ ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ, “ಭಾರತದ ಅತ್ಯಂತ ಜನಪ್ರಿಯ ಕಲಾವಿದರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರನ್ನು ಮಂಗಳೂರಿನ ನೆಲದಲ್ಲಿ ಸ್ವಾಗತಿಸುವ ಅವಕಾಶ ದೊರೆತಿರುವುದು ನಮಗೆ ಹೆಮ್ಮೆಯ ವಿಷಯ. ಈ ಕಾರ್ಯಕ್ರಮವು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಕ್ಷಣವಾಗಿದ್ದು, ಭಾಗವಹಿಸುವ ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವವನ್ನು ನೀಡಲಿದೆ” ಎಂದು ಹೇಳಿದರು. ಕಾರ್ಯಕ್ರಮದ ಸಿದ್ದತೆಗಳ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಿಯಾನ್ ಮೊಂತೇರೊ, “ಇದು ಮಂಗಳೂರಿನಲ್ಲಿ ನಡೆಯಲಿರುವ ಅತಿದೊಡ್ಡ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ. ನಮ್ಮ ಸಂಸ್ಥೆಗೆ ಮತ್ತು ನಗರಕ್ಕೆ ಮಹತ್ವದ ಕ್ಷಣವಾಗಿರುವ ಈ ಕಾರ್ಯಕ್ರಮವು ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಅಧಿಕೃತವಾಗಿ ನೋಂದಾಯಿತ ಪಾಸ್‌ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಶಾರುಖ್ ಖಾನ್ ಅವರ ಮಂಗಳೂರು ಭೇಟಿ ಘೋಷಣೆಯಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅಪಾರ ಕುತೂಹಲ ಮತ್ತು ನಿರೀಕ್ಷೆ ಮೂಡಿದ್ದು, ಈ ಕಾರ್ಯಕ್ರಮವು ಮಂಗಳೂರಿನ ಕಾರ್ಪೊರೇಟ್ ಹಾಗೂ ಸಾಮಾಜಿಕ ವಲಯದಲ್ಲಿ ವಿಶೇಷ ಗಮನ ಸೆಳೆಯುವ ನಿರೀಕ್ಷೆಯಿದೆ. ರೋಹನ್ ಕಾರ್ಪೊರೇಶನ್ ಬಗ್ಗೆ ರೋಹನ್ ಕಾರ್ಪೊರೇಶನ್ ಕರಾವಳಿ ಕರ್ನಾಟಕದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದ್ದು, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಗ್ರಾಹಕರ ವಿಶ್ವಾಸವನ್ನು ತನ್ನ ಪ್ರಮುಖ ಮೌಲ್ಯಗಳಾಗಿ ಹೊಂದಿದೆ. ಸಂಸ್ಥೆಯು ಹಲವು ವಸತಿ ಹಾಗೂ ವಾಣಿಜ್ಯ ಯೋಜನೆಗಳ ಮೂಲಕ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ 📞 : +91 90355 64026

ಪ್ರಾದೇಶಿಕ ವಾರ್ತೆಗಳು

ಜೂನ್ 28ರಂದು ಮಂಗಳಾದೇವಿ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಮಾರ್ಗದರ್ಶಿ -Cracking the UPSC Examination

ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವರ ಸಹಯೋಗದಲ್ಲಿ “ಮಾರ್ಗದರ್ಶಿ – Cracking the UPSC Examination” ಎಂಬ ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು 2026ರ ಜೂನ್ 28ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಹಾಗೂ ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಅರುಣ್ ಜೇಜಿ ಚಕ್ರವರ್ತಿ, IPS, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, IPS ಹಾಗೂ ಮಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಶಶಿಕಾಂತ್ ಸೋಮನಾಥ್ ವಿಭೂತೆ, IFS ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. UPSC ಮಾಸ್ಟರ್ ಟ್ರೈನರ್ಗಳಾದ ಶ್ರೀ ಮೋಹನ್ ಕೃಷ್ಣಮೂರ್ತಿ ಹಾಗೂ ಶ್ರೀ ಚಂದ್ರಮೋಹನ್ ಇನಗಂಟಿ, ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇದರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಜಾಗತಿಕ ಮಟ್ಟದ ಗೂಗಲ್ ಪ್ರಮಾಣಿತ ಶಿಕ್ಷಣತಜ್ಞ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞರಾದ ಶ್ರೀ ಡಾನ್ ಪ್ರಕಾಶ್ ಮತ್ತು ಮಂಗಳೂರು IAS ಸಂಸ್ಥಾಪಕರಾದ ಶ್ರೀ ಸಂತೋಷ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ. UPSC ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ತಜ್ಞರೊಂದಿಗೆ ನೇರ ಪ್ರಶ್ನೋತ್ತರ, ಪ್ರೇರಣಾತ್ಮಕ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ. ಈ ಕಾರ್ಯಕ್ರಮವು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು IAS ಸಂಸ್ಥಾಪಕರಾದ ಶ್ರೀ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಮತ್ತು ಸರಿಯಾದ ತಯಾರಿ ವಿಧಾನ, ಮಾರ್ಗದರ್ಶನ ಹಾಗೂ ಸ್ಪಷ್ಟತೆಯನ್ನು ಅಭ್ಯರ್ಥಿಗಳಿಗೆ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಪ್ರವೇಶ, ಊಟ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಅವಕಾಶಗಳು ಲಭ್ಯವಾಗಲಿವೆ. ನಾಗರಿಕ ಸೇವೆ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ. 200 ಆಗಿರುತ್ತದೆ.ಪ್ರಕಟಣೆ: ಮಂಗಳೂರು IAS ಸಹಯೋಗದಲ್ಲಿ ರಚನಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು“Different but NOT Difficult Exams” ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಸಂತೋಷ್ ರಾವ್ – ಸಂಸ್ಥಾಪಕರು, ಮಂಗಳೂರು ಐಎಎಸ್ಫಾ. ರೋಶನ್ ರೊಸಾರಿಯೊ OFM (CAP) – ನಿರ್ದೇಶಕರು, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್ರೊಯ್ ಕ್ಯಾಸ್ಟೆಲಿನೊ – ಅಧ್ಯಕ್ಷರು, ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಆ್ಯಲ್ರನ್ ರೊಡ್ರಿಗಸ್ – ಕಾರ್ಯದರ್ಶಿ, ರಚನಾ

ಪ್ರಾದೇಶಿಕ ವಾರ್ತೆಗಳು

ಪಾಲೇಮಾರ್ ಕನ್ಫವೆನ್ಷನಲ್ ಹಾಲ್ ನ ಆವರಣ, ಮೇರಿಹಿಲ್ ಇಲ್ಲಿ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆ

.ಮಂಗಳೂರು -ಮನಸ್ಸು,ನಮ್ಮ ಶರೀರ ನಮ್ಮ ಅಧ್ಯಾತಿಕತೆ ಅದರ ಜೊತೆಗೆ ಸ೦ಸ್ಕಾರ , ಸಮಾಜ ಸೇವೆ ಇ೦ದಿನ ಜೀವನಕ್ಕೆಅನಿವಾರ್ಯ, ಯೋಗದಿ೦ದ ರೋಗ ಮುಕ್ತ ಜೀವನವನ್ನು ನಾವು ಪಡೆಯಬೇಕು ಎ೦ದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ )ಕರ್ನಾಟಕ, ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇ ಶನ್ (ರಿ)ಮಂಗಳೂರು ಮಹಾನಗರ ಇದರ ವತಿಯಿಂದ ಪಾಲೇಮಾರ್ ಕನ್ಫವೆನ್ಷನಲ್ ಹಾಲ್ ನ ಆವರಣ,ಮೇರಿಹಿಲ್ ಇಲ್ಲಿ ನಡೆದ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆಯುನ್ನು ಉದ್ಯಮಿ ಹಾಗೂ ಸಮಾಜ ಸೇವಾಕರ್ತರಾದ ಪ್ರಶಾಂತ ಪೈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮೂಲಕ ಉದ್ಘಾಟನೆ ಮಾಡಿದರು.ಯೋಗದ ಮಹತ್ವವನ್ನು ತಿಳಿದುಕೊ೦ಡು ಹಾಗೂ ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡು ಆರೋಗ್ಯಕರ ಜೀವನವನ್ನು ಅನುಭವಿಸಬೇಕು ಎ೦ದು ಮುಖ್ಯ ಆತಿಥಿ ಮಾಜಿ ಮೇಯರ್ ಜಯಾನಂದ ಅಂಚನ್ ರವರು ಮಾತನಾಡಿದರು.. ಯೋಗಭ್ಯಾಸ ಮಾಡುವುದರಿ೦ದ ಸಾವಧನತೆ ಮತ್ತು ಭಾವನತ್ಮಕ ನಿಯ೦ತ್ರಣವನ್ನು ಬೆಳೆಸುವ ಮೂಲಕ ಮಾನಸಿಕ ಮತ್ತು ಅ೦ತರಿಕ ಶಾ೦ತಿ ಮತ್ತು ವಿಶ್ರಾ೦ತಿಯ ಭಾವನೆಯನ್ನು ಉತ್ತೇಜಿಸುತ್ತದೆ ಎ೦ದು ಕುಮಾರಿ ಆರಾಧ್ಯ ಅವರು ಯೋಗ ದಿನದ ಮಹತ್ವದ ಬಗ್ಗೆ ಬೌದ್ಧಿಕ ನೀಡಿದರು.ಪ್ರಾರಂಭದಲ್ಲಿ ಭಜನೆ ಯನ್ನು ವೀರಾಂಜನೇಯ ಶಾಖೆ ಅಡ್ಯಾರ್ ಇಲ್ಲಿನ ಯೋಗ ಬಂಧುಗಳು ನಡೆಸಿ ಕೊಟ್ಟರು.ಅಮೃತ ವಚನ ವನ್ನು ಶಿವಪ್ಪ ಅವರು ನಡೆಸಿಕೊಟ್ಟರು. ಪಂಚಾಗ ಪಠಣ ವನ್ನು ಶ್ರೀಮತಿ ಪ್ರಪುಲ್ಲ ಇವರು ನಡೆಸಿಕೊಟ್ಟರು.ಮಾನಸಿಕ ಸಿದ್ಧತೆ, ಉಸಿರಾಟದ ಕ್ರಿಯೆ, ಗಣಪತಿ ನಮಸ್ಕಾರ ವನ್ನು ಸುರೇಂದ್ರ ಹಾಗೂ ಪ್ರಾತ್ಯಕ್ಷಿತೆ ಯನ್ನು ರೇಣುಕಾ ಹಾಗೂ ಸದಾಶಿವ ಅವರು ನಡೆಸಿಕೊಟ್ಟರು.ಭಾಸ್ಕರ್ ,ಉಮಾ ,ರಾಮಕೃಷ್ಣ, ಸುಮಿತ್ರ, ಲೋಕೇಶ್ ಜಯಂತಿ ದಂಪತಿಗಳು ಅಗ್ನಿ ಹೋತ್ರ ಕಾರ್ಯಕ್ರಮ ನಡೆಸಿದರು.ಆಯುಷ್ ಪಠ್ಯ ಕ್ರಮ ದ ಯೋಗಭ್ಯಾಸವನ್ನು ಹಿರಿಯ ಶಿಕ್ಷಕರಾದ ಶಿವಾನಂದ ಹಾಗೂ ಪ್ರತ್ಯಕ್ಷಿಕೆಯನ್ನು ವಿನೀತ್ , ಭವ್ಯ ಅವರು ನಡೆಸಿಕೊಟ್ಟರು.ಕಾರ್ಯಕ್ರಮದ ಸಂಚಾಲಕರಾದ ಮಹಾಬಲ ಅವರು ವಂದನಾರ್ಪಣೆ ಮಾಡಿದರು.ಶ್ರೀಮತಿ ದಿವ್ಯಶ್ರೀ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಅನ್ನಪೂರ್ಣೇ ಮಂತ್ರ ಹೇಳಿ ಪ್ರಸಾದ ಸ್ವೀಕರಿಸಿಸಲಾಯಿತು.ಸಮಿತಿ ಪ್ರಮುಖರಾದ ರವೀಶ್, , ಆನಂದ, ಗೋಕುಲ್ ನಾಥ , ಪ್ರಕಾಶ್ , ದಾಮೋದರ , ಪ್ರವೀಣ್ , ಉಮೇಶ್ ಪೊಳಲಿ, ವೇಣುಗೋಪಾಲ್ ,ಜನಾರ್ಧನ್ ,ಉಮೇಶ್ ಕದ್ರಿ, ಪ್ರಸಾದ್ ನಂಬಿಯರ್, ಗೀತಾ ,ಪುಷ್ಪಾ ಲತಾ,ಭಾರತಿ , ವಿಶಾಲಕ್ಷಿ ಲೀಲಾ ,ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.ಕದ್ರಿ, ಕಂಕನಾಡಿ, ಪೊಳಲಿ, ಹಳೆಯಂಗಡಿ, ಮಂಗಳೂರು ನಗರದ ಯೋಗ ಬಂಧುಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆ ಯ ಬಂಧುಗಳು, ಸಾರ್ವಜನಿಕರು ಸುಮಾರು ಒಟ್ಟು 500ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Scroll to Top