ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಆರೋಗ್ಯ ಶಿಕ್ಷಣದಿಂದ ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ: ದೀಕ್ಷಾ ಎಂ. ಶೆಟ್ಟಿಗೆ ಪಿಎಚ್‌ಡಿ

ಸುರತ್ಕಲ್: ಹದಿಹರೆಯದವರಲ್ಲಿ ಕಂಡುಬರುವ ಸ್ಥೂಲಕಾಯ (Obesity) ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ. ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮೈಸೂರಿನ *ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (JSS AHER)ನ *ನಿರ್ವಹಣಾ ಅಧ್ಯಯನ ವಿಭಾಗ (Faculty of Management Studies)ದಿಂದ ನಿರ್ವಹಣಾ ಶಾಸ್ತ್ರ (Management) ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಗಿದೆ.“ಹದಿಹರೆಯದವರ ಸ್ಥೂಲಕಾಯದ ಕುರಿತು ಜ್ಞಾನ, ಮನೋಭಾವ ಮತ್ತು ಆಚರಣೆಗಳನ್ನು ನಿರ್ಧರಿಸುವ ಅಧ್ಯಯನ ಹಾಗೂ ಸ್ಥೂಲಕಾಯ ನಿರ್ವಹಣೆಯಲ್ಲಿ ಆರೋಗ್ಯ ಶಿಕ್ಷಣದ ಪರಿಣಾಮದ ಮೌಲ್ಯಮಾಪನ” ಎಂಬ ವಿಷಯದ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.ಈ ಸಂಶೋಧನೆಯನ್ನು ಡಾ. ಕನಕವಳ್ಳಿ ಕೆ. ಕುಂದೂರಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ.ದೀಕ್ಷಾ ಎಂ. ಶೆಟ್ಟಿ ಅವರು ಬಾಳ ಮಾಧವ ಶೆಟ್ಟಿ ಮತ್ತು ಮೀರಾವಾಣಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.

ಪ್ರಾದೇಶಿಕ ವಾರ್ತೆಗಳು

ಬರುತ್ತಿದ್ದಾಳೆ “ಶ್ರೀಮತಿ ಸತ್ಯಭಾಮ”. ಕೊಡಿಯಾಲ್ ಬೈಲ್ ಅವರ ಕಲಾಸಂಗಮದ ಹೊಸ ನಾಟಕ

ಆ ಪೋಸ್ಟರೇ ಹೊಸತನವನ್ನು ತುಂಬಿಕೊಂಡಿದೆ, ತಬ್ಬಿಕೊಂಡಿದೆ. “ಶ್ರೀಮತಿ ಸತ್ಯಭಾಮ” ಟೈಟಲ್ ಅನ್ನೇ ಆಭರಣ, ಸೀರೆಯಿಂದ ಅಲಂಕರಿಸಲಾಗಿದೆ. Born to Rule ಎಂಬ ಅಡಿಬರಹ ಹಾಗೂ ಸತ್ಯಭಾಮ ನಿಂತ ಭಂಗಿಯು ಆಕೆಯ ಪಾತ್ರ ಎಂಥದ್ದು ಎಂಬುದನ್ನೂ ಸೂಚಿಸುತ್ತದೆ. ಅವೆಲ್ಲವುಗಳಿಂದ ಮುಖ್ಯವಾಗಿ – ಕೈಲಾಸ – ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು ಎಂಬ ಒಂದು ವಾಕ್ಯದ ಮೂಲಕ ಈ ತಂಡವು ಪೌರಾಣಿಕ ಕಥೆಗಳ ಬಳಿಕ ಮತ್ತೆ ಸಾಮಾಜಿಕ ಕಥೆಗೆ ಹೊರಳಿದೆ ಎಂಬುದನ್ನು ವಿಭಿನ್ನವಾಗಿ ತಿಳಿಸುವ ಪ್ರಯತ್ನ ಮಾಡಿದೆ.ತುಳು ರಂಗಭೂಮಿಯ ಬದಲಾವಣೆಯ ಹರಿಕಾರ, ಹೊಸತನದ ರೂವಾರಿ ಎಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಎರಡು ಮೂರು ವರ್ಷಗಳಿಂದ ಪೌರಾಣಿಕ, ಐತಿಹಾಸಿಕ ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗ ಮತ್ತೆ ಸಾಮಾಜಿಕ ನಾಟಕಕ್ಕೆ ಮರಳಿದ್ದಾರೆ. ಈ ಹಿಂದೆಯೂ ಅವರು ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಕೋಡೆ – ಇನಿ- ಎಲ್ಲೆ, ಮೈತಿದಿ ಮುಂತಾದ ಸಾಮಾಜಿಕ ನಾಟಕಗಳ ಮೂಲಕ ಜನರ ಮನಸ್ಸು ಗೆದ್ದವರು. ಅದಾದ ಬಳಿಕ ಅವರಿಗೆ “ಶಿವದೂತೆ ಗುಳಿಗೆ” ನಾಟಕವು ಅಪಾರ ಖ್ಯಾತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದರ ಬೆನ್ನಿಗೆ “ಛತ್ರಪತಿ ಶಿವಾಜಿ” ನಾಟಕದ ಮೂಲಕ ಜನಮನ್ನಣೆ ಗಳಿಸಿದರು. ಈಗ ಈ ಬಾರಿ “ಶ್ರೀಮತಿ ಸತ್ಯಭಾಮ” ಎಂಬ ಸಾಮಾಜಿಕ ನಾಟಕದ ಮೂಲಕ ಜನರ ಮುಂದೆ ಬರಲಿದ್ದಾರೆ.“ಶ್ರೀಮತಿ ಸತ್ಯಭಾಮ” ನಾಟಕದ ಪೋಸ್ಟರ್ ಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಮುಖ್ಯವಾಗಿ ಸತ್ಯಭಾಮ ಪಾತ್ರಧಾರಿಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಯಾರು ಮಾಡಿರಬಹುದು ಈ ಪಾತ್ರವನ್ನು ಎಂಬ ಕುತೂಹಲವನ್ನು ತಣಿಸಲು ಸದ್ಯಕ್ಕಂತೂ ಕೊಡಿಯಾಲ್‌ಬೈಲ್ ಸಿದ್ದರಿಲ್ಲ. ತಂಡದಲ್ಲಿ ಯಾವೆಲ್ಲ ಪ್ರಮುಖ ಕಲಾವಿದರು ಇದ್ದಾರೆ ಎಂಬುದನ್ನೂ ಕಾದು ನೋಡಬೇಕಷ್ಟೆ.ಈ ನಾಟಕದಲ್ಲೂ ಅದ್ದೂರಿ ಸೆಟ್ಟಿಂಗ್, ವಿಶೇಷ ತಾಂತ್ರಿಕತೆ ಬಳಸಲು ಕೊಡಿಯಾಲ್ ಬೈಲ್ ಮುಂದಾಗಿದ್ದಾರೆ. ಅದ್ದೂರಿತನ, ತಾಂತ್ರಿಕತೆಯಿಂದಲೇ “ಶಿವಧೂತೆ ಗುಳಿಗೆ’ ಜನಮಚ್ಚುಗೆ ಪಡೆದಿದೆ. ಆದ್ದರಿಂದ ಹೊಸ ನಾಟಕದಲ್ಲೂ ಅದ್ದೂರಿತನಕ್ಕೆ ಕಿಂಚಿತ್ತೂ ಕೊರತೆಯಾಗಬಾರದು ಎಂದು ಕೊಡಿಯಾಲ್‌ಬೈಲ್ ವಿಶೇಷ ಆಸ್ಥೆ ವಹಿಸಿದ್ದಾರೆ. ಸಂಗೀತದ ವಿಷಯಕ್ಕೆ ಬಂದರೆ ಮತ್ತೆ ಅದೇ ಹೆಮ್ಮೆಯ ಎ. ಕೆ. ವಿಜಯ್ ಕೋಕಿಲಾ ಅವರೇ ಕೆಲಸ ಮಾಡಿದ್ದಾರೆ. ಇವರು ಕಲಾಸಂಗಮದ ಹೆಮ್ಮೆಯ ಮತ್ತು ಖಾಯಂ ಸಂಗೀತ ನಿರ್ದೇಶಕರಾಗಿದ್ದಾರೆ. ಕೊಡಿಯಾಲ್‌ಬೈಲ್ ಅವರ ಎಲ್ಲ ಯಶಸ್ವಿ ನಾಟಕಗಳ ಹಿಂದೆ ಈ ಸಂಗೀತ ನಿರ್ದೇಶಕರ ಕೊಡುಗೆ ಪ್ರಮುಖವಾಗಿದೆ.ಶ್ರೀಮತಿ ಸತ್ಯಭಾಮ ಮೇಕಪ್‌ಗೆ ಕುಳಿತಿದ್ದಾಳೆ. ಸದ್ಯದಲ್ಲೇ ಎದ್ದು ಬರಲಿದ್ದಾಳೆ ನಿಮ್ಮ ಮುಂದೆ. ಸ್ವಾಗತಿಸಲು ಸಿದ್ಧರಾಗಿ.ನವಂಬರ್ 1ರಂದು ಸುರತ್ಕಲ್ ನಲ್ಲಿ “ಶ್ರೀಮತಿ ಸತ್ಯಭಾಮ”ವಿಜಯಕುಮಾರ್ ಕೊಡಿಯಾಲ್ ಬೈಲ್ ಯಾವುದೇ ಹೊಸ ನಾಟಕಗಳನ್ನು ಮಾಡುವಾಗ ಅಲ್ಲಿ ಅದ್ದೂರಿತನವನ್ನು ಉಳಿಸಿಕೊಳ್ಳುತ್ತಾರೆ. ತಾಂತ್ರಿಕತೆಯನ್ನೂ ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಒಂದು ಹೊಸತನ ಹಾಗೂ ಭಿನ್ನತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಈಗ “ಶ್ರೀಮತಿ ಸತ್ಯಭಾಮ” ನಾಟಕದಲ್ಲೂ ಆ ಹೊಸತನ, ಅದ್ದೂರಿತನ ಕಂಡುಬರಲಿದೆ. ಪ್ರಸ್ತುತ ಅವರು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ “ಶ್ರೀಮತಿ ಸತ್ಯಭಾಮ” ನಮ್ಮ, ನಿಮ್ಮೆಲ್ಲರ ಊರಿಗೆ ಬರಲಿದ್ದಾಳೆ. ಹೀಗೆ ಸುತ್ತಾಡುತ್ತಾ ನವೆಂಬರ್ 1ರಂದು ರವಿವಾರ ಸಂಜೆ ಸುರತ್ಕಲ್‌ಗೆ ಬರುತ್ತಿದ್ದಾಳೆ. ಅಂದು ಶ್ರೀಮತಿ ಸತ್ಯಭಾಮಾಳ ಸಂಪೂರ್ಣ ಪರಿಚಯ ಪಡೆದುಕೊಳ್ಳಬಹುದು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರಿಗೆ ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಸರಕಾರದ ಸಮರ್ಪಕ ಸೌಲಭ್ಯಗಳು ಸಕಾಲದಲ್ಲಿ ದೊರೆಯದಿರುವುದು ವಿಷಾದನೀಯ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಬದಲಾವಣೆ ತರಲು ಸಂಘಟಿತ ಪ್ರಯತ್ನದ ಅಗತ್ಯತೆ ಇದೆ -ಬಂಟ್ವಾಳ ತಾಲೂಕು ಪತ್ರಿಕಾ ದಿನಾಚರಣೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್. ಆಶಯ.

ಮಂಗಳೂರು: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯು ಜುಲೈ 22ರ ಬುಧವಾರ ಬಿ.ಸಿ.ರೋಡಿನ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸಿ, ಸಂಘದ ಸದಸ್ಯರಿಗೆ ಗುರುತುಚೀಟಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಅನಂತಪದ್ಮನಾಭ ಮಾತನಾಡಿ, ಪತ್ರಕರ್ತರ ವರದಿಗಳು ಸಮಾಜಕ್ಕೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಜಾಗೃತಿ ಮೂಡಿಸಿ ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿಯನ್ನೂ ಹೊಂದಿವೆ ಎಂದು ಹೇಳಿದರು. ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಗಳಿದ್ದಂತೆ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಪರಸ್ಪರ ಸಹಕಾರದಿಂದ ಅಪರಾಧ ತಡೆ ಹಾಗೂ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು. ಸಾರ್ವಜನಿಕರು ತುರ್ತು ಸಹಾಯವಾಣಿ 112ರ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಸಮಾಜದ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನಿವೃತ್ತಿಯ ಬಳಿಕ ಪಿಂಚಣಿ ಸೇರಿದಂತೆ ಸಮರ್ಪಕ ಸೌಲಭ್ಯಗಳು ದೊರೆಯದಿರುವುದು ವಿಷಾದನೀಯ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ತರಲು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದರು.ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ ಕೈಗೊಂಡಿರುವ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಾಸರಗೋಡು ಕ್ಷೇಮಾಭಿವೃದ್ಧಿ ಕನ್ನಡ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪುರಸ್ಕೃತ ಹರೀಶ್ ಮಾಂಬಾಡಿ ಹಾಗೂ 2024ನೇ ಸಾಲಿನ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ಉತ್ತಮ ವರದಿ ಪ್ರಶಸ್ತಿ ವಿಜೇತ ಅಬ್ದುಲ್ ರಹಿಮಾನ್ ತಲಪಾಡಿ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಪುತ್ತೂರಿಗೆ ವರ್ಗಾವಣೆಗೊಂಡ ಉದಯವಾಣಿ ಹಿರಿಯ ವರದಿಗಾರ ಕಿರಣ್ ಸರಪಾಡಿ ಅವರಿಗೆ ಬೀಳ್ಕೊಡುಗೆ ನೀಡಿ, ಬಂಟ್ವಾಳಕ್ಕೆ ನೂತನ ಹಿರಿಯ ವರದಿಗಾರರಾಗಿ ಆಗಮಿಸಿದ ದಿನೇಶ್ ಇರಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸದಸ್ಯ ಹರೀಶ್ ಮಾಂಬಾಡಿ ವಂದಿಸಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶ್ ಕೆ. ಪುಣಚ, ಕೋಶಾಧಿಕಾರಿ ಚಂದ್ರಶೇಖರ ಕಲ್ಮಲೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಶಂಕರ ನೀರ್ಪಾಜೆ, ರತ್ನದೇವ್ ಪುಂಜಾಲಕಟ್ಟೆ, ವೆಂಕಟೇಶ ಬಂಟ್ವಾಳ ಹಾಗೂ ಸದಸ್ಯರಾದ ಗಣೇಶ್ ಪ್ರಸಾದ್ ಪಾಂಡೇಲು, ಯಾದವ ಕುಲಾಲ್ ಅಗ್ರಬೈಲ್, ಕಿಶೋರ್ ಪೆರಾಜೆ, ನಿಶಾಕಿರಣ್ ಬಾಳೆಪುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ದೇವಾಡಿಗರ ಮಹಾಮಂಡಳದ ಮಹಾ ಅಧಿವೇಶನದ ಪೂರ್ವಭಾವಿ ಸಭೆ

ಮಂಗಳೂರು: ವಿಶ್ವ ದೇವಾಡಿಗರ ಮಹಾಮಂಡಳದ ಆಶ್ರಯದಲ್ಲಿ ದಿನಾಂಕ 20-12-2026 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾಅಧಿವೇಶನದ ಪೂರ್ವಬಾವಿ ಸಭೆಯು ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ ಕಣ್ವತೀರ್ಥ ಕನ್ನಡ ಮೊಯಿಲಿ ಸಂಘ,ವಿಟ್ಲ, ಕಾರಿಂಜೆ ಚಿತ್ರಾಪುರ ವ್ಯಾಪಿಯ ದೇವಾಡಿಗ ಸಂಘಗಳ ಸಭೆ ,ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರುನ ಸಭಾ ವೇದಿಕೆಯಲ್ಲಿ ವಿಶ್ವ ಮಹಾ ಮಂಡಳದ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡುತ್ತಾ, ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದುವಿವರಿಸಿದರು ತನ್ನನ್ನು ಅಭಿನಂದಿಸಿದ ಬಗ್ಗೆ ಉತ್ತರವಾಗಿ ಈ ಸನ್ಮಾನವು ನನ್ನ ಜೊತೆ ಹಗಲಿರುಳು ಶ್ರಮಿಸುವ ನನ್ನ ತಂಡಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಕಾರ್ಯದರ್ಶಿ ಯಾದವ ದೇವಾಡಿಗರು ಪ್ರಸ್ತಾವನೆ ಮಂಡಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್,ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ವಿಶ್ವ ಮಹಾ ಮಂಡಳದ ಉಪಾಧ್ಯಕ್ಷ ಡಾ. ದೇವರಾಜ್ ಕೆ.,ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಉಪಾಧ್ಯಕ್ಷರು ಯಂ. ಎಚ್. ಕರುಣಾಕರ ದೇವಾಡಿಗ,ಮಹಾ ಮಂಡಳದ ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು, ಉಡುಪಿ ನಗರಪಾಲಿಕೆ ಮಾಜಿ ಸದಸ್ಯ ವಿಜಯ್ ಕೊಡವೂರು,ಸಮಯೋಚಿತವಾಗಿ ಮಾತನಾಡಿದರು.ಆಗಮಿಸಿರುವ ಎಲ್ಲಾ ಸಂಘದ ಅಧ್ಯಕ್ಷರು ಸಹಕರಿಸುವುದಾಗಿ ಆಶ್ವಾಸನೆ ನೀಡಿದರು.ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮೊಯಿಲಿ, ಕೋಶಾಧಿಕಾರಿ ಸುರೇಶ ಕೊಡವೂರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶ್ರೀಮತಿ ವೀಣಾ ಸ್ವಾಗತಿಸಿದರು. ರೋಹಿತಾಕ್ಷ ದೇವಾಡಿಗ ವಂದಿಸಿದರು , ಶ್ರೀಮತಿ ಯಶ್ವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವೈದ್ಯಕೀಯ ಜಗತ್ತು ಕಂಡ ಅಪ್ರತಿಮ ವೈದ್ಯ, ಅತ್ಯಂತ ಪ್ರತಿಭಾವಂತ, ಅನುಭವಿ, ಯಶಸ್ವಿ ಹೃದ್ರೋಗ ತಜ್ಞ ಮತ್ತು ಬಡ ರೋಗಿಗಳ ಪಾಲಿನ ಆಶಾಕಿರಣ ಡಾ. ನರಸಿಂಹ ಪೈ ಅವರ ವೈದ್ಯಕೀಯ ಸಮಾಜ ಸೇವೆಗೆ ಮಂಗಳೂರಿಗೆ ಮಂಗಳೂರೇ ಕೊಂಡಾಡುತ್ತಿದೆ. MP MLA’S NEWS PUBLIC VIEW. Special Report by Dr. Ashok Shetty BN

ನಗರದ ಖ್ಯಾತ ಹೃದ್ರೋಗ ತಜ್ಞ, ಕೆಎಂಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಕಾರ್ಡಿಯೋಲಜಿ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲೂ ಪ್ರಮುಖ ಹೃದ್ರೋಗ ವೈದ್ಯರಾಗಿ ಬಡ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ವೈದ್ಯ, ಜನ ಮೆಚ್ಚಿದ ಬೆಸ್ಟ್ ಡಾಕ್ಟರ್ ಎಂದೇ ಜನ ಮಾನಸದಲ್ಲಿ ಗುರುತಿಸಿಕೊಂಡಿರುವ ಮತ್ತು ಸುಪ್ರಸಿದ್ದ ಅಮೃತ ಪಾಲಿ ಕ್ಲಿನಿಕ್ ಜ್ಯೋತಿ ಮಂಗಳೂರಿನಲ್ಲಿ ಪ್ರತಿ ದಿನ ಹಲವಾರು ರೋಗಿಗಳಿಗೆ ಪರೀಕ್ಷೆ ಮಾಡಿ ಗುಣಮುಖರಾಗಿಸುವ ಅದ್ಭುತ ಕೈ ಗುಣದ ಯಶಸ್ವಿ ಹೃದ್ರೋಗ ಶಾಸ್ತ್ರಜ್ಞ, ದಣಿವರಿಯದ ನಿಸ್ವಾರ್ಥ ಸೇವಾ ಮನೋಭಾವದ ವೈದ್ಯಕೀಯ ಜಗತ್ತಿನ ಸೂಪರ್ ಡಾಕ್ಟರ್ ಡಾ. ಡಿ. ನರಸಿಂಹ ಪೈ ಅವರು ಬಡರೋಗಿಗಳ ಪಾಲಿಗೆ ಪ್ರತ್ಯಕ್ಷ ದೇವರು. ಇವರ ಬಗ್ಗೆ mp mlas newstv ಗೆ ಹಲವು ಮಂದಿ ಬರೇ ಗುಡ್ ಅಲ್ಲ ದಿ ಬೆಸ್ಟ್ ಡಾಕ್ಟರ್ ಎಂದಿದ್ದು, 2020 ರಲ್ಲೇ ಇವರಿಗೆ Mp MLA’s news 10ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್ ಹಾಲ್ ನಲ್ಲಿ ನಡೆದಾಗ ಬೆಸ್ಟ್ ಡಾಕ್ಟರ್ಸ್ ಅರ್ವಾಡ್ ನೀಡಿ ಗೌರವಿಸಲಾಗಿತ್ತು.ಉತ್ತಮ ವೈದ್ಯರು, ಸಹೃದಯಿಗಳು ಆಗಿರುವ ಡಾ. ನರಸಿಂಹ ಪೈ ಅವರು Mp MLA’s news ಮತ್ತು mpmlasnewstv 24*7 news portal ನ ಮಹಾಪೋಷಕರಾಗಿದ್ದು, ಬಡರೋಗಿಗಳಿಗೆ ಅವರು ನೀಡುತ್ತಿರುವ ಅನನ್ಯ ಸೇವೆ ಬಗ್ಗೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾದ ಹಿನ್ನಲೆಯಲ್ಲಿ ಅವರನ್ನು ಭೇಟಿಯಾಗಿ mp mlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಅಭಿನಂದನೆ ಸಲ್ಲಿಸಿದರು. ವೈದ್ಯಕೀಯ ಜಗತ್ತು ಕಂಡ ಅಪ್ರತಿಮ ವೈದ್ಯ, ಅತ್ಯಂತ ಪ್ರತಿಭಾವಂತ, ಅನುಭವಿ, ಯಶಸ್ವಿ ಹೃದ್ರೋಗ ತಜ್ಞ ಮತ್ತು ಬಡ ರೋಗಿಗಳ ಪಾಲಿನ ಆಶಾಕಿರಣ ಡಾ. ನರಸಿಂಹ ಪೈ ಅವರ ವೈದ್ಯಕೀಯ ಸಮಾಜ ಸೇವೆಗೆ ಮಂಗಳೂರಿಗೆ ಮಂಗಳೂರೇ ಕೊಂಡಾಡುತ್ತಿದೆ.

ಪ್ರಾದೇಶಿಕ ವಾರ್ತೆಗಳು

ಮಿಶ್ರ ಕೃಷಿ ಪದ್ಧತಿಯಿಂದ ಮಾತ್ರ ಕೃಷಿಯಲ್ಲಿ ಯಶಸ್ಸು ಸಾಧ್ಯ: ಜೋ ಪ್ರದೀಪ್ ಡಿಸೋಜಾ

ವಿಟ್ಲ ಪೆರುವಾಯಿ: ರೈತರು ಕೇವಲ ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿಸದೆ ಮಿಶ್ರ ಕೃಷಿ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜಾ ಹೇಳಿದರು. ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ್ದ ಕೃಷಿ ಮಾಹಿತಿ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಡಿಕೆಯೊಂದಿಗೆ ಉಪಬೆಳೆಗಳಾಗಿ ಕೊಕ್ಕೊ, ಬಾಳೆ, ಕಾಳುಮೆಣಸು ಹಾಗೂ ಆದಾಯದ ಪ್ರಮುಖ ಮೂಲವಾಗಿ ಮಲ್ಲಿಗೆ ಕೃಷಿಯನ್ನು ಕೈಗೊಳ್ಳುವುದರಿಂದ ರೈತರ ಆದಾಯ ಹೆಚ್ಚಿಸಿಕೊಳ್ಳಬಹುದು. ಅಡಿಕೆಗೆ ಬಾಧಿಸುವ ಕೊಳೆ ರೋಗ, ಹಳದಿ ಎಲೆ ರೋಗ ಹಾಗೂ ಸುಳಿ ಕೊಳೆ ರೋಗಗಳ ನಿಯಂತ್ರಣಕ್ಕೆ ಸಕಾಲದಲ್ಲಿ ಬೋರ್ಡೋ ದ್ರಾವಣ ಅಥವಾ ಶಿಲೀಂಧ್ರನಾಶಕ ಸಿಂಪಡಿಸಬೇಕು. ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಎನ್‌ಪಿಕೆ (NPK) ರಾಸಾಯನಿಕ ಗೊಬ್ಬರಗಳನ್ನು ಯೋಗ್ಯ ಪ್ರಮಾಣದಲ್ಲಿ ನೀಡಬೇಕು. ಇದರೊಂದಿಗೆ ಬೆಳೆ ವಿಮೆ ಮಾಡಿಸುವುದು ಅತ್ಯಗತ್ಯ ಎಂದು ಅವರು ರೈತರಿಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಚರ್ಚ್ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು ಹಾಗೂ ವಲಯದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಪೆರುವಾಯಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ, ವಲಯ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ತೋಮಸ್ ಮಸ್ಕರೇನಸ್, ಪೆರುವಾಯಿ ಘಟಕದ ಅಧ್ಯಕ್ಷ ಹಾಗೂ ವಲಯ ಖಜಾಂಚಿ ರಾಲ್ಫ್ ಡಿಸೋಜ, ಪರಿಸರ ಆಯೋಗದ ಸಂಚಾಲಕ ಕೆ. ವಿಲ್ಫ್ರೆಡ್ ಡಿಸೋಜ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕೃಷಿಕರು ಉಪಸ್ಥಿತರಿದ್ದರು. ಮನೋಹರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

Inauguration Ceremony of the M.Sc. Cybersecurity and Artificial Intelligence Programme. School of Information Technology Department of Computer science, St. Joseph’s University, Bengaluru On 18/07/2026, 9:30 A.M. to 10:15 A.M. Xavier Hall, PG Block, SJU, Bengaluru

In keeping with the current relevance of Artificial Intelligence and Cyber Security, the Department of Computer Science, St Joseph’s University, has launched a new postgraduate programme — Master of Science in Cyber Security and Artificial Intelligence (M.Sc. CS & AI).The chief guest of the Inauguration Programme was Mr. Sailesh A. J. Menezes. He is a Human Resource and Talent Management professional with senior HR leadership experience at IBM, Wipro Technologies, and Hewlett Packard Enterprise (HPE), and currently serves as Vice President and Regional HR Leader – India, Asia Pacific and Japan at Hewlett Packard Enterprise. He is also a Josephite alumnus, having completed his schooling, PUC, and degree at Joseph institutions. The ceremony began with students Mr. Joachim and Ms. Nisha’s rendition of a worship song followed by the auspicious lighting of the lamp by the dignitaries on the dais — Mr. Sailesh Menezes, the chief guest; Fr. Denzil Lobo SJ, Director, School of IT; Dr. AM Bojamma, Dean, School of IT; Dr. BG Prasanthi, Associate-Dean and Head of Department, Dept. of CS; Dr. Nithya, PG Coordinator; Dr. Mrinmoyee Bhattacharya, Programme Coordinator, M.Sc. CS & AI; and two students from the inaugural batch.Next, the audience listened to the thought-provoking words of Fr. Denzil, who spoke about AGI (Artificial General Intelligence) and ASI (Artificial Superintelligence) He noted that the emergence of AI can be seen as an exponential change with potential for both positive and negative impact, drawing on the comments of Sam Altman, Reid Hoffman, and other intellectuals in the field. He emphasized the need to look into where and how AI will bring about change in society. Quoting Hoffman, Fr. Denzil pointed out that AI cannot be seen as just another tool or piece of software, but rather as a strategic new way of running things — while AI provides information and predicts, it is humans who ought to make decisions. Fr. Denzil also observed that data has become the new oil, and there is a need to prioritize transparency and security of data. He offered three keys to success and innovation: 1. Be curious. 2. Build things — experiment, fail, improve, and repeat. 3. Be ethical — the important question is not can we build something, but should we build it. Mr. Sailesh Menezes offered his view that AI is more a force for good, though it can also be misused by humans to cause harm. He suggested that for AI to be a force for good and solve society’s problems, we must enable and allow it to do so. Reflecting on the uncertainty of the future, he noted that we don’t really know what the coming years will look like, given how rapidly times are changing — but offered valuable points on staying relevant. He emphasized that we need to be “translators” — translating technology into business outcomes is something organizations find valuable. He also noted that learnability, curiosity, and the ability to adapt are facets that will help us stay relevant as times change.Following the two talks, Ms. Saija Rao, 2nd year M. Sc. Computer Science, shared her experience at SJU. She spoke about the vibrant nature of associations and Bembala outreach, which enable students to engage with the lived realities of people outside urban contexts. She also spoke about the support and encouragement that faculty have been providing her. She said St. Joseph’s has shaped her values and perspective, enabling personal growth, independence, and confidence. The event concluded with the Vote of Thanks delivered by Dr. Mrinmoyee Bhattacharya.

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕೋರ್ಸ್ಗೆ ಚಾಲನೆ

ಬೆಂಗಳೂರು, ಜುಲೈ 18: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ವಿಜ್ಞಾನ ವಿಭಾಗವು ಹೊಸ ಎಂ.ಎಸ್ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ (Cybersecurity and Artificial Intelligence) ಸ್ನಾತಕೋತ್ತರ ಕೋರ್ಸ್ಗೆ ಶನಿವಾರ ಚಾಲನೆ ನೀಡಿತು. ವಿಶ್ವವಿದ್ಯಾಲಯದ ಪಿಜಿ ಬ್ಲಾಕ್ನ ಕ್ಸೇವಿಯರ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್ಪ್ರೈಸ್ (HPE) ಸಂಸ್ಥೆಯ ಭಾರತ, ಏಷ್ಯಾ-ಪೆಸಿಫಿಕ್ ಮತ್ತು ಜಪಾನ್ ವಿಭಾಗದ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಸೈಲೇಶ್ ಎ. ಜೆ. ಮಿನೆಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕರಾದ ಫಾ. ಡೆನ್ಜಿಲ್ ಲೋಬೊ ಎಸ್.ಜೆ. ಮಾತನಾಡಿ, ಕೃತಕ ಬುದ್ಧಿಮತ್ತೆ (AI) ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲ ತಂತ್ರಜ್ಞಾನವಾಗಿದ್ದು, ಅದನ್ನು ನೈತಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯೊಂದಿಗೆ ಬಳಸಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಕುತೂಹಲ, ನಿರಂತರ ಪ್ರಯೋಗ ಮತ್ತು ನೈತಿಕತೆ ಯಶಸ್ಸಿನ ಮೂರು ಪ್ರಮುಖ ಆಧಾರಗಳೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ ಸೈಲೇಶ್ ಮಿನೆಜಸ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ಸಮಾಜದ ಅಭಿವೃದ್ಧಿಗೆ ಮಹತ್ವದ ಸಾಧನವಾಗಿದ್ದು, ತಂತ್ರಜ್ಞಾನವನ್ನು ವ್ಯವಹಾರಿಕ ಫಲಿತಾಂಶಗಳಿಗೆ ಪರಿವರ್ತಿಸುವ ಸಾಮರ್ಥ್ಯ, ಕಲಿಯುವ ಮನೋಭಾವ, ಕುತೂಹಲ ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣಗಳು ಇಂದಿನ ಯುವಜನತೆಗೆ ಅತ್ಯಗತ್ಯವೆಂದು ಹೇಳಿದರು.ಸಮಾರಂಭದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಡಾ. ಎ. ಎಂ. ಬೋಜಮ್ಮ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಬಿ. ಜಿ. ಪ್ರಸಾಂತಿ, ಪಿಜಿ ಸಂಯೋಜಕಿ ಡಾ. ನಿತ್ಯಾ, ಕಾರ್ಯಕ್ರಮ ಸಂಯೋಜಕಿ ಡಾ. ಮೃಣ್ಮಯೀ ಭಟ್ಟಾಚಾರ್ಯ ಹಾಗೂ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡು, ವಂದನಾರ್ಪಣೆಯೊಂದಿಗೆ ಸಮಾಪ್ತಿಯಾಯಿತು.

ಪ್ರಾದೇಶಿಕ ವಾರ್ತೆಗಳು

ಮುಲ್ಕಿಯಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನದ ನಿರ್ಮಾಣ. ಮುಂಬೈಯಲ್ಲಿ ಸಮಾಲೋಚನ ಸಭೆಡಿಸೆಂಬರ್ ನಲ್ಲಿ ಲೋಕಾರ್ಪಣೆ: ಐಕಳ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯ ಕುರಿತು ಹಾಗೂ ಡಿಸೆoಬರ್ ದಿನಾಂಕ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಸಮಾಲೋಚನಾ ಸಭೆಯು “ಬಂಟರ ಸಂಘ ಮುಂಬೈಯ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣ, ಅನೆಕ್ಸ್ ಕಟ್ಟಡ, ಬಂಟರ ಭವನ, ಕುರ್ಲಾ ಮುಂಬೈ ಇಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು.ಸಭೆಯಲ್ಲಿ ಹಾಜರಿದ್ದ ದಾನಿಗಳು ಹಾಗೂ ಸದಸ್ಯರುಗಳಿಗೆ ಸಭಾಭವನ ನಿರ್ಮಾಣದ ಸಾಕ್ಷ್ಯಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಮತ್ತು ಸಭಾಭವನದ ಬಗ್ಗೆ ದಾನಿಗಳ ಹಾಗೂ ಸದಸ್ಯರುಗಳು ಅನಿಸಿಕೆಗಳನ್ನು ತಿಳಿಸಿದರು. ಸಭೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಎನ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ ದಂಪತಿಗಳು, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಶಂಕರ್ ಶೆಟ್ಟಿ ವಿರಾರ್, ಹರೀಶ್ ಶೆಟ್ಟಿ ಪಡುಕುದ್ರು, ಗಿರೀಶ್ ಶೆಟ್ಟಿ ತೆಳ್ಳಾರ್, ಸಿ ಎ ಸದಾಶಿವ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಚಂದ್ರಶೇಖರ ಎಸ್ ಶೆಟ್ಟಿ, ಡಾ. ಸದಾನಂದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿoಜೆ, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಆನಂದ್ ಡಿ. ಶೆಟ್ಟಿ ಎಕ್ಕಾರ್, ವಾಸು ಶೆಟ್ಟಿ ಬಿವಾಂಡಿ, ಜಯಂತ್ ಶೆಟ್ಟಿ ಥಾಣೆ, ಕೃಷ್ಣ ವಿ. ಶೆಟ್ಟಿ ಸಯನ್, ರತ್ನ ಪಿ. ಶೆಟ್ಟಿ, ಮನೋರಮ ಎನ್. ಬಿ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಲತಾ ಪಿ. ಶೆಟ್ಟಿ, ವಜ್ರಾಕ್ಷಿ ಪೂಂಜ ಮತ್ತು ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಪದಾಧಿಕಾರಿಗಳಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನದಾಸ್ ಶೆಟ್ಟಿ, ಚಂದ್ರಹಾಸ್ ಡಿ. ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಸಭಾಭವನ ನಿರ್ಮಾಣದ ಉಸ್ತುವಾರಿ ಇಂಜಿನಿಯರ್ ಗೋಪಾಲ್ ಭಟ್, ಒಕ್ಕೂಟದ ಲೆಕ್ಕಪರಿಶೋಧಕರಾದ ಸಿ. ಎ. ದಯಶರಣ್ ಶೆಟ್ಟಿ, ಸದಸ್ಯರಾದ ಮುಂಬೈ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರು ಅಡ್ವೋಕೇಟ್ ಡಿ. ಕೆ. ಶೆಟ್ಟಿ ಉಪಾಧ್ಯಕ್ಷರು ಐಕಳ ಕಿಶೋರ್ ಶೆಟ್ಟಿ ಕಾರ್ಯದರ್ಶಿ ಶೇಖರ್ ಶೆಟ್ಟಿ, ಬಂಟ್ಸ್ ಪೋರಂ ಮೀರಾ ರೋಡ್ ನ ಅಧ್ಯಕ್ಷರು ಉದಯ್ ಶೆಟ್ಟಿ ಮಲ್ಲಾರ್ ಬೀಡು, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಥಾಣೆ ಬಂಟ್ಸ್ ಅಸೋಶಿಯನ್ ನ ಮಾಜಿ ಅಧ್ಯಕ್ಷರು ಸುನಿಲ್ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ ಕುತ್ತೆತ್ತೂರು, ನವನೀತ್ ಶೆಟ್ಟಿ ಕದ್ರಿ, ಪ್ರವೀಣ್ ಶೆಟ್ಟಿ ವರಂಗ, ಶಾಲಿನಿ ಶೆಟ್ಟಿ ಶ್ರೀಶಕ್ತಿ ಫೌಂಡೇಶನ್ ಮೀರಾರೋಡ್ ನ ಅಧ್ಯಕ್ಷೆ, ಜಯಂತಿ ಶೆಟ್ಟಿ ನವಿ ಮುಂಬೈ, ಜ್ಯೋತಿ ಶೆಟ್ಟಿ ನವಿ ಮುಂಬೈ, ಚೇತನಾ ಸುರೇಶ್ ಶೆಟ್ಟಿ,ಸರೋಜ ಶೆಟ್ಟಿ, ಜಯಶ್ರೀ ಶೆಟ್ಟಿ, ಮಮತಾ ಭಂಡಾರಿ, ಶೋಭ ಶೆಟ್ಟಿ, ಅರುಣಾ ಶೆಟ್ಟಿ, ಉಷಾ ಶ್ರೀಧರ್ ಶೆಟ್ಟಿ,ಅನಿತಾ ಅಶೋಕ್ ಶೆಟ್ಟಿ,ಹರೀಶ್ ಶೆಟ್ಟಿ ಕಲ್ಯಾಣ್, ರವಿ ಶೆಟ್ಟಿ ಕಲ್ಯಾಣ್, ಸಿ. ಎ. ರಮೇಶ್ ಶೆಟ್ಟಿ, ಸಿ. ಎ. ಸುಕುಮಾರ್ ಶೆಟ್ಟಿ, ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೂನಾ, ಭಾಸ್ಕರ್ ಶೆಟ್ಟಿ CBD ಪನ್ವೆಲ್, ರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ರವೀಂದ್ರ ಶೆಟ್ಟಿ ಪಡುಬಿದ್ರಿ, ನಾಗೇಶ್ ಶೆಟ್ಟಿ ಐರೋಳಿ, ವಿಠ್ಠಲ್ ಆಳ್ವ, ಜಯ ಎ. ಶೆಟ್ಟಿ, ಧನಂಜಯ ಪಿ. ಶೆಟ್ಟಿ, ವನಿತಾ ನೋಂಡ, ಬಾಬಣ್ಣ ಶೆಟ್ಟಿ ಅನ್ನೇದಗುತ್ತು, ಸುಕೇಶ್ ಶೆಟ್ಟಿ ಅನ್ನೇದಗುತ್ತು, ಅಡ್ವೋಕೇಟ್ ಆರ್. ಜಿ. ಶೆಟ್ಟಿ, ಚಂದ್ರಶೇಖರ ಪಾಲೇತ್ತಾಡಿ, ವೈ ಟಿ ಶೆಟ್ಟಿ, ದಿನೇಶ್ ಕುಲಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಜಪೆಯಲ್ಲಿ ಗಿಡ ನೆಡುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ 58ನೆ ವಾರ್ಷಿಕ ದಿನಾಚರಣೆ

ಮಂಗಳೂರು,ಜು.19; ಜುಲೈ1969 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕು‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಈ ಐತಿಹಾಸಿಕ ನಿರ್ಧಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು “ವರ್ಗ ಬ್ಯಾಂಕಿಂಗ್’ನಿಂದ “ಜನಸಾಮಾನ್ಯರ ಬ್ಯಾಂಕಿಂಗ್” ಆಗಿ ಪರಿವರ್ತಿಸಿತು ಎಂದು ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ತಿಳಿಸಿದ್ದಾರೆ.ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದ ವತಿಯಿಂದ ಬ್ಯಾಂಕ್ ರಾಷ್ಟ್ರೀಕರಣದ ದಿನದ 58ನೆ ವರ್ಷಾರಣೆಯ ಅಂಗವಾಗಿ ಬಜ್ಪೆ ಹಳೆ ವಿಮಾನ ನಿಲ್ದಾಣ ರಸ್ತೆಯ ಬಳಿ ಇರುವ ವಿಜಯ ಮಂಗಳ ಲೇಔಟ್ ನಲ್ಲಿ ರವಿವಾರ ‘ಭೂಮಿಯನ್ನು ಉಳಿಸಲು ಸಸಿ ನೆಡಿ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ,1980ರ ಏಪ್ರಿಲ್ 15ರಂದು ಇನ್ನೂ ಆರು ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳನ್ನು ಮತ್ತಷ್ಟು ಬಲಪಡಿಸಲಾಯಿತು.ಬ್ಯಾಂಕ್ ನೌಕರರು ಮತ್ತು ನಿವೃತ್ತರು ಪ್ರತಿವರ್ಷ ಜುಲೈ 19ರಂದು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿ ಸುವ ಮೂಲಕ ಆಚರಿಸುತ್ತಾ ಬಂದಿದ್ದಾರೆ. ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರಾದ ನಾವು, ಬ್ಯಾಂಕ್ ರಾಷ್ಟ್ರೀಕರಣದ ಉದಾತ್ತ ಗುರಿಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ ಎಂಬ ಹೆಮ್ಮೆಯನ್ನು ಹೊಂದಿದ್ದೇವೆ. ಆದ್ದರಿಂದ, ಈ ದಿನವನ್ನು ನಾವು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಈ ವರ್ಷ, ನಮ್ಮ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟವು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು “ಭೂಮಿಯನ್ನು ಉಳಿಸಲು ಒಂದು ಗಿಡ ನೆಡೋಣ” ಎಂಬ ವಿನೂತನ ಮತ್ತು ಶ್ರೇಷ್ಠ ಕಾರ್ಯಕ್ರಮದ ಮೂಲಕ ಆಚರಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂಆರ್ ಭಟ್ ಮಾತನಾಡುತ್ತಾ, ಬ್ಯಾಂಕ್ ಶಾಖೆಗಳು ದೇಶದ ಅತ್ಯಂತ ದೂರದ ಪ್ರದೇಶಗಳಿಗೂ ವಿಸ್ತರಿಸಲ್ಪಟ್ಟವು ಮತ್ತು ಸಮಾಜದ ಅತ್ಯಂತ ಬಡ ವರ್ಗ ದವರಿಗೂ ಬ್ಯಾಂಕಿಂಗ್ ಸೌಲಭ್ಯಗಳು ದೊರೆಯು ವಂತಾಯಿತು ಎಂದು ಎಂಆರ್ ಭಟ್ ತಿಳಿಸಿದ್ದಾರೆ.ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಾಯೋಜಕ ರಾದ ಮುದ್ರಾಣಿ ಹೋಮ್ಸ್‌ನ ಪಾಲುದಾರ ಗುರುರಾಜ್ ಶೆಣೈ, ವಿಜಯ ಮಂಗಳ ಹೌಸಿಂಗ್ ಸಹಕಾರ ಸಂಘದ ಅಧ್ಯಕ್ಷ ಕೆ. ಬಾಲಪ್ಪ ಶೆಟ್ಟಿ,ಪದಾಧಿಕಾರಿಗಳಾದ ಕೆ. ಜಯಂತ ಶೆಟ್ಟಿ, ಎಂ.ಶ್ರೀಧರ ಶೆಟ್ಟಿ, ಎಂ. ದಯಾನಂದ ಶೆಟ್ಟಿ ಹಾಗೂ ಕಮಲಾಕ್ಷ, ಮತ್ತು ಜಿಲ್ಲೆಯ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮೊದಲಾದವರು ಉಪಸ್ಥಿತರಿ ದ್ದರು.

Scroll to Top