ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಉಡುಪಿಯ ಪಲಿಮಾರು ಮಠದ ಪೂಜ್ಯ ಸ್ವಾಮೀಜಿಯವರೊಂದಿಗೆ ಪ್ರಯಾಗ್ ರಾಜ್‌ ಕುಂಭ ಮೇಳದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ

ಮಂಗಳೂರು: ಮಹಾಕುಂಭ ಮೇಳದಲ್ಲಿ ಪ್ರಯಾಗ್ ರಾಜ್ ನ ಪಲಿಮಾರು ಮಾಧ್ವ ಮಠದಲ್ಲಿ ಶ್ರೀ ಶ್ರೀ ಶ್ರೀ ವಿಧ್ಯಾಧೀಶ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಕೇಂದ್ರೀಯ ಸಮಿತಿಯ ತಂಡವನ್ನು ಪೂಜ್ಯ ಸ್ವಾಮೀಜಿಯವರ ಶಿಷ್ಯ ವೃಂದದವರು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಊಟ ಫಲಹಾರಗಳನ್ನು ನೀಡಿ ಸತ್ಕರಿಸಿದರು. ಹಾಗೂ ಬ್ರಾಹ್ಮೀ ಮುಹೂರ್ತದಲ್ಲಿ ತ್ರಿವೇಣಿ ಸಂಗಮದ ಪುಣ್ಯ ತೀರ್ಥ ಸ್ನಾನವು ಸ್ವಾಮೀಜಿಯವರನೇತೃತ್ವದಲ್ಲಿ ನೆರವೇರಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಸಿಎ ಸುರೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ತಂಡದಲ್ಲಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಫೆ.8ರಂದು ಸದಾಶಿವ ಶೆಟ್ಟಿ ಸೇವಾ ಬಳಗದ ವತಿಯಿಂದ ಸಹಾಯ ಹಸ್ತ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ

ಮಂಗಳೂರು: “ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ವತಿಯಿಂದ ಫೆ.8ರಂದು ಶನಿವಾರ ಸಂಜೆ 4 ಗಂಟೆಯಿಂದ ಮೀಂಜ ಬಂಟರ ಸಂಘ ಮೈದಾನ ಚಿಗುರುಪಾದೆಯಲ್ಲಿ ನಡೆಯುವ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ ಹಾಗೂ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ತುಳುನಾಡ ಕಣ್ಮಣಿ, ಕೊಡುಗೈ ದಾನಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಶೆಟ್ಟಿ ಕನ್ಯಾನರವರಿಗೆ ಅಭಿನಂದನಾ ಕಾರ್ಯಕ್ರಮವು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ಜಾನಪದ ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 4000ಕ್ಕಿಂತ ಮೇಲ್ಪಟ್ಟು ಜನಸಾಮಾನ್ಯರು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಇದೆ. ಹಾಗೂ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಉಚಿತ ಅರೋಗ್ಯ ಕುಟುಂಬ ವಿಮೆ (5 ಲಕ್ಷ) ಆಂಬುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ ಚೇರ್, ಹೊಲಿಗೆ ಮಿಷನ್, ಕ್ಯಾನ್ಸ‌ರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಕಾರ ನಡೆಯಲಿದೆ“ ಎಂದು ಸೇವಾ ಬಳಗದ ಉಪಾಧ್ಯಕ್ಷ ಕೆ. ನಾರಾಯಣ್ ನಾಯ್ಕ್ ನಡುಹಿತ್ತಿಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಲ್ಲ ಕುಂಬಳೆ ಇದರ ಆಡಳಿತ ಮೊತ್ತೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ವಹಿಸಲಿರುವರು. ಆಶೀರ್ವಚನವನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ನೀಡಲಿರುವರು.ಉದ್ಘಾಟನೆಯನ್ನು ಗೌರವಾನ್ವಿತ ವಿಧಾನ ಸಭಾ ಅಧ್ಯಕ್ಷರಾದ ಎ.ಎನ್.ಶಂಸೀರ್ ಮಾಡಲಿರುವರು. ಸಹಾಯ ಹಸ್ತ ಆರೋಗ್ಯ ವಿಮ ಉದ್ಘಾಟನೆಯನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಮಾಡಲಿರುವರು.ಡಾ.ಎಂ.ಶಾಂತಾರಾಮ್ ಶೆಟ್ಟಿ, ರೆ.ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್‌ಜೆ, ಉಸ್ತಾದ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಪಸ್ಥಿತಿಯಿರಲಿದ್ದಾರೆ.ಮುಖ್ಯಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಕಾಸರಗೋಡು ಎಸ್ಪಿ ಡಿ.ಶಿಲ್ಪಾ, ರಘುರಾಮ್ ಶೆಟ್ಟಿ ಕುಳೂರು ಕನ್ಯಾನ, ಸುಜಾತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸತೀಶ್ ಕುಂಪಲ, ಐಕಳ ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಸತೀಶ್ ಶೆಟ್ಟಿ ಪಟ್ಲ , ಐ.ಸುಬ್ಬಯ್ಯ ರೈ, ಗುರುಕಿರಣ್, ರಕ್ಷಿತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.ಚಿತ್ರಗಳು ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

“ಫೆ.22ರಂದು ಹೊಂಬೆಳಕು ಎರಡನೇ ಆವೃತ್ತಿಯ ಕಾರ್ಯಕ್ರಮ“-ಮಂಜುನಾಥ ಭಂಡಾರಿ

ಮಂಗಳೂರು: “ಫೆ.22ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಆಶ್ರಯದಲ್ಲಿ ಎರಡನೇ ಆವೃತ್ತಿಯ “ಹೊಂಬೆಳಕು“ ಕಾರ್ಯಕ್ರಮ ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 355 ಗ್ರಾಮ ಪಂಚಾಯತ್ ನ 6082 ಮಂದಿ ಚುನಾಯಿತ ಸದಸ್ಯರಿದ್ದಾರೆ. 2000-2500 ಮಂದಿ ಪಂಚಾಯತ್ ನೌಕರರಿದ್ದಾರೆ. ಅವರೆಲ್ಲರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿಗಳ ಸಹಕಾರದೊಂದಿಗೆ ಹೊಂಬೆಳಕು ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ“ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಳೆದ ಬಾರಿ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆದಿದ್ದ ಮೊದಲನೇ ಆವೃತ್ತಿಯ ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿತ್ತು. ಹೀಗಾಗಿ ಮತ್ತದೇ ಉತ್ಸಾಹದಿಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಲು ಒಪ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳನ್ನು ಹಾಗೂ ಪಕ್ಷ ಬೇಧವಿಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ಗ್ರಾಮ ಪಂಚಾಯತ್ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಜನರಿಗೆ ಬಹಳಷ್ಟು ಹತ್ತಿರವಾಗಿರುವವರು. ಅವರನ್ನು ರಿಲ್ಯಾಕ್ಸ್ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಶಿಸ್ತುಬದ್ಧ ಪ್ರಥಮ ತಂಡಕ್ಕೆ 50,000 ರೂ., ದ್ವಿತೀಯ 25,000 ರೂ. ಬಹುಮಾನ ನೀಡಲಾಗುವುದು. ಪಥ ಸಂಚಲನಕ್ಕೆ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಅನ್ನು ನೀಡಲಾಗಿದೆ.ವಾಲಿಬಾಲ್, ಉಪ್ಪಿನ ಮೂಟೆ, ಲಿಂಬೆ ಚಮಚ ಇತ್ಯಾದಿ ಕ್ರೀಡೆಗಳ ಜೊತೆಗೆ ದೇಶಭಕ್ತಿಗೀತೆ, ಸಮೂಹ ನೃತ್ಯ, ಜಾನಪದ ನೃತ್ಯ ಇತ್ಯಾದಿ ಸ್ಪರ್ಧೆ ಇರಲಿದೆ.ಪ್ರತೀ ತಾಲೂಕಿನ ಉತ್ತಮ ಗ್ರಾಮ ಪಂಚಾಯತ್ ಗೆ ಪುರಸ್ಕಾರ ನೀಡಲಾಗುವುದು. ಕ್ರೀಡಾಳುಗಳಿಗೆ ಟಿ ಶರ್ಟ್, ಊಟ ಉಪಚಾರ ವ್ಯವಸ್ಥೆ ಇರಲಿದೆ.ಕಳೆದ ಬಾರಿ ಸರಕಾರದಿಂದ 10 ಲಕ್ಷ ರೂ. ಹಣ ಬಂದಿತ್ತು, ಈ ಬಾರಿ ಹೆಚ್ಚಿನ ಅನುದಾನದ ಭರವಸೆ ಇದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ ಕುಳಾಲು, ಗೌರವ ಸಲಹೆಗಾರ ಹರೀಶ್ ಕುಮಾರ್, ಲಾರೆನ್ಸ್ ಡಿಸೋಜ, ಪ್ರವೀಣ್ ಆಳ್ವ, ಟ್ರಸ್ಟ್ ಸದಸ್ಯ ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಶತಮಾನೋತ್ಸವ ಸಮಾರಂಭದ ಉದ್ಘಾಟನೆ

ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಇದೇ 2025ರ ಫೆಬ್ರವರಿ 9ರ ಭಾನುವಾರದಂದು ಬಿಜೈ ಚರ್ಚ್ ಸಭಾಂಗಣದಲ್ಲಿ ಶತಮಾನೋತ್ಸವದ ಉದ್ಘಾಟನೆ ನೆರವೇರಲಿದೆ. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಞರ್ ಅತೀ ವಂದನೀಯ ಫಾ| ಮ್ಯಾಕ್ಸಿಮ್ ನೊರೊನ್ಹಾರವರು ಶತಮಾನೋತ್ಸವದ ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ. ಮಂಗಳೂರ್ ಸೆಂಟ್ರಲ್ ಕೌನ್ಸಿಲ್‌ನ ಆಧ್ಯಾತ್ಮಿಕ ಸಲಹೆಗಾರ ವಂದನೀಯ ಫಾ| ಫ್ರಾನ್ಸಿಸ್ ಡಿಸೋಜಾರವರು ಶತಮಾನೋತ್ಸವದ ಘೋಷಣಾ ವಾಕ್ಯವನ್ನು ಬಿಡುಗಡೆ ಮಾಡುವರು. ಬಿಜೈ ಚರ್ಚ್ನ ಧರ್ಮಗುರು ವಂದನೀಯ ಫಾ| ಡಾ| ಜೆ.ಬಿ.ಸಲ್ಡಾನ್ಹಾ ಇವರು ಶತಮಾನೋತ್ಸವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಭಾರತದ ಪ್ರಾದೇಶಿಕ ಮಂಡಳಿಯ ಸಂಯೋಜಕ ಬ್ರ| ವಾಲ್ಟರ್ ಮಾರ್ಟಿಸ್, ಸೆಂಟ್ರಲ್ ಕೌನ್ಸಿಲ್ ಇದರ ಮಾಜಿ ಅಧ್ಯಕ್ಷ ಬ್ರ| ಗಿಲ್ಬರ್ಟ್ ಪಿಂಟೊ, ಸೆಂಟ್ರಲ್ ಕೌನ್ಸಿಲ್ ಹಾಲಿ ಅಧ್ಯಕ್ಷ ಬ್ರ| ಜ್ಯೋ ಕುವೆಲ್ಲೊ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.ವಿಶ್ವದ ಅತಿ ದೊಡ್ಡ ಕ್ಯಾಥೊಲಿಕ್ ಸಮಾನ ಮನಸ್ಕ ಸೇವಾ ಸಂಸ್ಥೆಯಾದ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನ ಬೆಂದೂರ್ ಚರ್ಚ್ನಲ್ಲಿ ಜನವರಿ 1926ರಲ್ಲಿ ಅಸ್ತಿತ್ವಕ್ಕೆ ಬಂತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕದ ಸ್ಥಾಪನೆಯಾಯಿತು. ನಂತರ 1926 ಇಸವಿಯ ಮೇ ತಿಂಗಳಲ್ಲಿ ಇನ್ನೂ ಎರಡು ಘಟಕಗಳು ರೊಸಾರಿಯೊ ಕೆಥಡ್ರಾಲ್ ಮತ್ತು ಬಿಜೈ ಚರ್ಚ್ನಲ್ಲಿ ಅಸ್ತಿತ್ವಕ್ಕೆ ಬಂದವು. ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಪ್ರಮುಖ ಸೇವಾ ಕೆಲಸವೆಂದರೆ ಬಡವರು ಮತ್ತು ನಿರ್ಗತಿಕರನ್ನು ಬೇಟಿಯಾಗುವುದು ಮತ್ತು ಅವರಿಗೆ ತಮ್ಮದೇ ಪರಿಸರದಲ್ಲಿ ಪರಿಹಾರವನ್ನು ವಿತರಿಸುವುದು. ಹೀಗೆ ಪರಿಹಾರವನ್ನು ವಿತರಿಸುವಾಗ ಎಸ್.ಎಸ್.ವಿ.ಪಿ. ಅವರ ಆತ್ಮಗೌರವ ಮತ್ತು ಅನಾಮಧೇಯತೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಪ್ರತೀ ಘಟಕವು ತಮ್ಮ ಪರಿಸರದಲ್ಲಿ ಕನಿಷ್ಠ 5 ಕುಟಂಬಗಳನ್ನು ದತ್ತು ಪಡೆದು ಅವರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಇಂದು ಮಂಗಳೂರು ಸೆಂಟ್ರಲ್ ಕೌನ್ಸಿಲ್ ಇದರ ಆಶ್ರಯದಲ್ಲಿ ಸೇವೆ ಮಾಡುವ ಘಟಕಗಳು, 623 ದತ್ತು ಕುಟಂಬಗಳನ್ನು ಹಾಗೂ 1765 ಕುಟಂಬದ ಸದಸ್ಯರನ್ನು ಹೊಂದಿದೆ. 1926 ಇಸವಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನಲ್ಲಿ ಅಸ್ತಿತ್ವಗೊಂಡ ಮೇಲೆ ಅದು ಇಡೀ ಮಂಗಳೂರು ಧರ್ಮಪ್ರಾಂತ್ಯಕ್ಕೆಹರಡಿದೆ. ಇಂದು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ 111 ಘಟಕಗಳು ಮತ್ತು 3 ಯುವ ಘಟಕಗಳು ಸಕ್ರೀಯವಾಗಿವೆ. 1539 ಸದಸ್ಯ ಬಲ ಹೊಂದಿರುವ ಎಸ್.ಎಸ್.ವಿ.ಪಿ. ಬಡವರ ಸೇವೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ತೊಡಗಿಸಿಕೊಂಡಿದೆ. ಪ್ರಸ್ತುತ ಎಸ್.ಎಸ್.ವಿ.ಪಿ.ಯ ವಜ್ರಮಹೋತ್ಸವ ಆರೋಗ್ಯ ಯೋಜನೆ ತುಂಬಾ ಜನಪ್ರಿಯವಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು ಮತ್ತು ತುಂಬೆ ಇವರ ಸಹಯೋಗದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯು ದತ್ತು ಪಡೆದ ಕುಟುಂಬಗಳ ಸದಸ್ಯರಿಗೆ ಉಚಿತ ವೈದ್ಯಕೀಯ ಮತ್ತು ಡಯಾಲಿಸಿಸ್ ಆರೈಕೆಯನ್ನು ಒದಗಿಸುತ್ತದೆ.ಶತಮಾನೋತ್ಸವದ ಸವಿನೆನಪಿಗಾಗಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಪ್ರಮುಖ ಯೋಜನೆಗಳೆಂದರೆ, ಎಸ್.ಎಸ್.ವಿ.ಪಿ.ಯ ದತ್ತು ಕುಟಂಬಗಳ ಸುಮಾರು 405 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು. ಆಸ್ರೊ – ನೂರು ಕುಟಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ.ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಇತಿಹಾಸ:1833 ಇಸವಿಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್‌ನ 22 ವರ್ಷದ ತರುಣ ಪೂಜ್ಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ 6 ಒಡನಾಡಿಗಳು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ 158 ದೇಶಗಳಲ್ಲಿ ಹರಡಿದೆ. 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು ಹತ್ತು ಲಕ್ಷಕ್ಕೂ ಮಿಕ್ಕಿ ಸ್ವಯಂಸೇವಕರು ದೀನ ದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 1863 ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಗೊಂಡು, ಪ್ರಸ್ತ್ತುತ ಭಾರತದಲ್ಲಿ 7225 ಘಟಕಗಳು ಮತ್ತು 65546 ಸದಸ್ಯರನ್ನು ಹೊಂದಿದೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಅಮೇರಿಕಾ ದ ಉದ್ಯಮಿಯಿಂದ 1.25 ಕೋಟಿ ದೇಣಿಗೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮಭಕ್ತರೂ,ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶ್ರೀ ಶಾರದಾ ಪ್ರಸಾದ್ ರವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಪ್ರಸಾದ್ ರವರು ಪಟ್ಲ ಸತೀಶ್ ಶೆಟ್ಟಿಯವರ ಗೃಹಪ್ರವೇಶಕ್ಕೆ ಆಗಮಿಸಿ ಅವರು ಮಾಡುವ ಸತ್ಕಾರ್ಯಗಳನ್ನು ಮೆಚ್ಚಿ ಗೃಹಪ್ರವೇಶದ ಶುಭದಿನವೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಒಂದು ಕೋಟಿ ಇಪ್ಪತ್ತೈದು ಲಕ್ಷ ಮೊತ್ತದ ದೇಣಿಗೆಯನ್ನು ನೀಡಿ ಆಶೀರ್ವದಿಸಿದರು.ಸಂಜೆ ನಡೆದ ಪಾವಂಜೆ ಮೇಳದ ಶ್ರೀ ದೇವಿಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ಶ್ರೀ ಶಾರದಾಪ್ರಸಾದ್ ಹಾಗೂ ಶ್ರೀಮತಿ ನಳಿನಿ ಶಾರದಾ ಪ್ರಸಾದ್ ದಂಪತಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರರು ಶಶೀ0ದ್ರ ಕುಮಾರ್ , ಪಟ್ಲ ಫೌಂಡೇಶನ್ ಪದಾಧಿಕಾರಿಗಳಾದ ಪಟ್ಲ ಗುತ್ತು ಮಹಾಬಲ ಶೆಟ್ಟಿ,CA ಸುದೇಶ್ ಕುಮಾರ್ ರೈ, CA ದಿವಾಕರ್ ರಾವ್, ಡಾ. ಸತೀಶ್ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ಲಕ್ಷ್ಮೀಶ್ ಭಂಡಾರಿ (ಭಂಡಾರಿ ಬಿಲ್ಡರ್ಸ್ ),ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಅಂತಾರಾಷ್ಟ್ರೀಯ ಯಶಸ್ವಿ ಉದ್ಯಮಿ, ಕಣಚೂರು ಹಾಸ್ಪಿಟಲ್ ಮತ್ತು ಕಣಚೂರು ಗ್ರೂಪ್ ನ ಚೇರ್ಮನ್ ಡಾ. ಹಾಜಿ ಯು.ಕೆ.ಮೋನು ಅವರ ಸಾಧನೆಗಳ ನೈಜ ಕಥೆ.

ಡಾ.ಹಾಜಿ ಯು.ಕೆ.ಮೋನು ಅವರು ಜುಲೈ 13, 1955 ರಂದು ಮಂಗಳೂರಿನ ಕೊಣಾಜೆಯ ಪಟ್ಟೋರಿ ಗ್ರಾಮದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಆ ಪ್ರದೇಶದ ಸುತ್ತಮುತ್ತ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡರು. ಅವರು ಚಿಕ್ಕ ವಯಸ್ಸಿನಿಂದಲೇ ಮಂಗಳೂರು ಮತ್ತು ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಸಣ್ಣ ಪ್ರಮಾಣದ ಮರದ ವ್ಯಾಪಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಡಾ. ಮೋನು ಕೂಡ ಚೈತನ್ಯಶೀಲ ಮತ್ತು ಸ್ಥಿತಿಸ್ಥಾಪಕರಾಗಿದ್ದರು ಮತ್ತು ಎಂದಿಗೂ ಕಡಿಮೆಗೆ ತೃಪ್ತಿಪಡಲಿಲ್ಲ ಮತ್ತು ಅವರ ಪರಿಶ್ರಮದ ಕೆಲಸವು ಅವರು ತಮ್ಮ ವ್ಯವಹಾರವನ್ನು ವಿಸ್ತರಿಸುತ್ತಾ ಹೋದಂತೆ ಭಾರಿ ಲಾಭಾಂಶವನ್ನು ನೀಡಿತು. “ಧೈರ್ಯ, ಬುದ್ಧಿವಂತಿಕೆ, ಅನ್ವೇಷಣೆ, ಶ್ರಮಶೀಲತೆ ಮತ್ತು ಸಾಮರ್ಥ್ಯದ ಸಂಗಮವಿರುವಲ್ಲಿ ಸರ್ವಶಕ್ತನು ನಿಮ್ಮನ್ನು ಆಶೀರ್ವದಿಸುತ್ತಾನೆ” ಎಂಬ ನೀತಿಕಥೆಯನ್ನು ಮಂಡಿಸಿದಂತೆ ಡಾ. ಹಾಜಿ ಯು.ಕೆ. ಮೋನು ಅವರು ಕರ್ನಾಟಕದ ಮಂಗಳೂರಿನ ಕಣಚೂರು ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಮೂಹದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಕಳೆದ 4 ದಶಕಗಳಲ್ಲಿ ಅವರು ಯೋಜನೆ ರೂಪಿಸಿ ನಿರಂತರವಾಗಿ ಕೆಲಸ ಮಾಡಿದ್ದಾರೆ; ಮತ್ತು ಭಾರತದ ಒಳಗೆ ಮತ್ತು ಹೊರಗೆ ಶಿಕ್ಷಣ, ಸಾಮಾಜಿಕ ಕಾರ್ಯ, ಧಾರ್ಮಿಕ ಸೇವೆಗಳು ಮತ್ತು ವ್ಯವಹಾರಗಳ ಕ್ಷೇತ್ರಗಳಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಪ್ರಶಂಸೆಗಳನ್ನು ಗಳಿಸಿದ್ದಾರೆ. ಕೇವಲ ಮೂಲಭೂತ ಸಾಕ್ಷರತೆ ಇದ್ದರೂ, ತಮ್ಮ ಶ್ರಮದಾಯಕ ಕೆಲಸ, ಬದ್ಧತೆ, ಪರಿಶ್ರಮ ಮತ್ತು ವ್ಯಕ್ತಿತ್ವದ ಮೂಲಕ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ನಾವು ವಿರಳವಾಗಿ ಕಾಣುತ್ತೇವೆ. ಅವರ ಜೀವನದ ಆಯಾಮಗಳು ಸಂದಿಗ್ಧತೆ, ಹೆಮ್ಮೆ, ಅವಮಾನ, ಆಶ್ಚರ್ಯ, ಕುತೂಹಲ ಮತ್ತು ಇನ್ನೂ ಹೆಚ್ಚಿನ ಕ್ಷಣಗಳನ್ನು ಒಳಗೊಂಡಿವೆ, ಅದನ್ನು ಅವರು ವ್ಯಕ್ತಪಡಿಸಿದರು – ಗೆದ್ದರು ಮತ್ತು ಗೆದ್ದರು; ಇವು ಅವರ ಜೀವನದ ಅದ್ಭುತ ಪುಟಗಳಾಗಿದ್ದವು.ಕಣಚೂರ್ ಮೋನು, ಅವರು ಜನಸಾಮಾನ್ಯರಲ್ಲಿ ಪ್ರೀತಿಯಿಂದ ಪರಿಚಿತರಾಗಿದ್ದಾರೆ, ಅವರು ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರೂಪಿಸುತ್ತಾರೆ. ಅವರನ್ನು ಒಬ್ಬ ಕೈಗಾರಿಕೋದ್ಯಮಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಸಾಮಾಜಿಕ ಸೇವಕ, ರಾಜಕಾರಣಿ ಮತ್ತು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇರುವವರು ಎಂದು ಪ್ರಶಂಸಿಸಬಹುದು. ಅವರ ಕಠಿಣ ಪರಿಶ್ರಮ, ಪರಿಶ್ರಮ, ಬಡತನದ ವಿರುದ್ಧದ ಹೋರಾಟ ಮತ್ತು ಅವರ ಸಾಧನೆಗಳ ಹಿಂದಿನ ದಾರ್ಶನಿಕ ಅನ್ವೇಷಣೆಯ ಜೀವನ ಕಥೆಗಳನ್ನು ನೇರವಾಗಿ ಕೇಳಲು ಯೋಗ್ಯವಾಗಿದೆ.ಡಾ. ಹಾಜಿ ಯು.ಕೆ. ಮೋನು ಸ್ವಯಂ-ಶಿಕ್ಷಿತ ಮತ್ತು ಸ್ವಯಂ ನಿರ್ಮಿತ ಉದ್ಯಮಿ ಮತ್ತು ನಿರಂತರ ಕಲಿಕೆ ಮತ್ತು ಸುಧಾರಣೆಗಾಗಿ ಅವಿನಾಭಾವ ಉತ್ಸಾಹ ಹೊಂದಿರುವ ಶಿಕ್ಷಣತಜ್ಞ. ಅವರ ಸಹಾನುಭೂತಿ ಸ್ವಭಾವವು ಅವರ ಸಾಮಾಜಿಕ ಸೇವೆಯನ್ನು ತಲುಪಲು ಶಕ್ತಿಯನ್ನು ನೀಡುತ್ತದೆ; ಹೀಗಾಗಿ ಆರ್ಥಿಕವಾಗಿ ಹಿಂದುಳಿದ ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತದೆ, ಶುಲ್ಕ ರಿಯಾಯಿತಿಗಳು ಮತ್ತು ನಿಜವಾಗಿಯೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಅವರು ಬಡ ದಂಪತಿಗಳಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿದ್ದಾರೆ. ಅವರು ವ್ಯಾಪಾರ ಹಿತಾಸಕ್ತಿಗಳ ವಿಶಾಲ ಕ್ಷೇತ್ರವನ್ನು ಮತ್ತು ವೈವಿಧ್ಯಮಯ ಸಾಮಾಜಿಕ ಉದ್ಯಮಗಳನ್ನು ಸಹ ಒಳಗೊಂಡಿದ್ದು, ಹಲವಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸಿದ್ದಾರೆ. ಅವರು ಬರ್ಮಾ, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾ, ಮಲೇಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ, ಇಂಡೋನೇಷ್ಯಾದಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದಾರೆ. ಸಾಧನೆಯ ಹಾದಿಯಲ್ಲಿ ಅವರ ಆರಂಭಿಕ ದಿನಗಳಲ್ಲಿ ಹಲವಾರು ತೊಂದರೆಗಳು ಮತ್ತು ಸವಾಲುಗಳನ್ನು ಎದುರಿಸಿದ್ದರೂ; ಅವರ ಅಚಲ ಸಮರ್ಪಣೆ, ನಿರಂತರ ಕಠಿಣ ಪರಿಶ್ರಮ ಮತ್ತು ಶ್ರೇಷ್ಠತೆಯ ಬಗೆಗಿನ ಆಳವಾದ ಬದ್ಧತೆಯು ಯುವ ಪೀಳಿಗೆಗೆ ಸ್ಫೂರ್ತಿ ಪಡೆಯಲು ಮತ್ತು ಪ್ರಗತಿ ಸಾಧಿಸಲು ಅವರನ್ನು ಮಾದರಿಯನ್ನಾಗಿ ಮಾಡುತ್ತದೆ. ಸಮಾಜಕ್ಕೆ ಅವರ ಕೊಡುಗೆಗಳು ಮತ್ತು ಪುರಸ್ಕಾರಗಳು ನಿಜವಾಗಿಯೂ ಶ್ಲಾಘನೀಯ.ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಜಾಗದಲ್ಲಿ; ಅವರು ಜಿಲ್ಲಾ ವಕ್ಫ್ ಮಂಡಳಿ ಸಮಿತಿಯ ಅಧ್ಯಕ್ಷರು, ದಕ್ಷಿಣ ಭಾರತೀಯ ಪ್ಲೈವುಡ್ ತಯಾರಕರ ಸಂಘದ ಉಪಾಧ್ಯಕ್ಷರು, ಕರ್ನಾಟಕ ಟಿಂಬರ್ ಆಮದುದಾರರ ಸಂಘದ ಉಪಾಧ್ಯಕ್ಷರು ಮತ್ತು ಕೊಣಾಜೆ ಮಂಗಳೂರಿನ ಲಯನ್ಸ್ ಕ್ಲಬ್ ಆಫ್ ಮಂಗಳಗಂಗೋತ್ರಿಯ ಸಕ್ರಿಯ ಸದಸ್ಯರಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಉದ್ಯಮಶೀಲತಾ ಉದ್ಯಮಗಳಲ್ಲಿ, ಅವರು ಸಿಂಗಾಪುರ, ದುಬೈ, ಮ್ಯಾನ್ಮಾರ್, ಆಫ್ರಿಕಾ ಮತ್ತು ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಿಸಿರುವ ಯಶಸ್ವಿ ವ್ಯಾಪಾರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ.ಅವರ ವ್ಯವಹಾರ ಉದ್ಯಮಗಳಲ್ಲಿ ಇವು ಸೇರಿವೆ: ಯು.ಕೆ. ಮೋನು ಟಿಂಬರ್ಸ್, ಕಣಚೂರು ವುಡ್ ಇಂಡಸ್ಟ್ರೀಸ್ ಮತ್ತು ಕಣಚೂರು ಸೀಸನಿಂಗ್ ಇಂಡಸ್ಟ್ರೀಸ್. ಶಿಕ್ಷಣ ನೀಡುವಲ್ಲಿ ಅವರ ಉತ್ಸಾಹದಿಂದ ಡಾ. ಹಾಜಿ ಯು.ಕೆ. ಮೋನು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ: ಕಣಚೂರು ಪಬ್ಲಿಕ್ ಸ್ಕೂಲ್, ಕಣಚೂರು ಪ್ರಿ-ಯೂನಿವರ್ಸಿಟಿ ಕಾಲೇಜ್ ಫಾರ್ ವುಮೆನ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್; ಇವೆಲ್ಲವೂ ಸಮುದಾಯದ ಶಿಕ್ಷಣ ಮತ್ತು ಯೋಗಕ್ಷೇಮಕ್ಕೆ ಅಪಾರ ಕೊಡುಗೆ ನೀಡಿವೆ.ಡಾ. ಹಾಜಿ ಯು.ಕೆ. ಮೋನು ಅವರಿಗೆ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ನೀಡಲಾಗಿದೆ – ಸಮಾಜಕ್ಕೆ ಅವರ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ. ಅವರು ತಮ್ಮ ಸಾಧನೆಯನ್ನು ಸಾಧನೀಯ ಹೆಜ್ಜೆಗಳಲ್ಲಿ ನಡೆದು ಯೋಜಿಸಿದ್ದಾರೆ ಮಾತ್ರವಲ್ಲದೆ ಅದನ್ನು ವಾಸ್ತವಗೊಳಿಸಿದ್ದಾರೆ. ಅವರು ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಾರೆ ಮತ್ತು ಇಂದು ಬಹುಸಂಖ್ಯೆಯ ಮಕ್ಕಳಿಗೆ ಮಂಗಳೂರಿನ ನಾಟೆಕಲ್‌ನಲ್ಲಿರುವ ಏಕೀಕೃತ ಕ್ಯಾಂಪಸ್‌ನಲ್ಲಿ ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಮತ್ತು ಉನ್ನತ ಶಿಕ್ಷಣ (ಆರೋಗ್ಯ) ದಂತಹ ಅತ್ಯುತ್ತಮ ಶಿಕ್ಷಣವನ್ನು ಒದಗಿಸಿದ್ದಾರೆ;ಇವರ ಉದ್ಯಮಗಳು ಪ್ರಪಂಚದಾದ್ಯಂತ ಸೇವೆ ಸಲ್ಲಿಸುತ್ತಿದೆ.

ಪ್ರಾದೇಶಿಕ ವಾರ್ತೆಗಳು

The true story of a successful businessman Dr.Haji U.K.Monu

He was born on 13th July, 1955, in Pattori Grama, Konaje, Mangaluru. Completed his elementary education and got into small tasks / works in and around the locality. He began working at a very early age with a small scale timber business in and around Mangalore. Mudigere and Chikamagalur. Dr Monu was also driven and resilient and never settled for less and his backbreaking work paid huge dividends as he scaled up his business and kept expanding.As the maxim expresses – “The Almighty will bless you where there is a confluence of courage, intelligence, quest, industriousness & ability.”Dr. Haji U.K. Monu is the Founder Chairman of Kanachur Group of Industries & Institutions, Mangalore, Karnataka, India. Over the last 4 decades he has planned and worked relentlessly; and achieved accolades for his outstanding contribution into the fields of education, social work, religious services and businesses both within and outside India. We rarely find the achievers who have done remarkable things through their painstaking work, commitment, perseverance and character though they have only basic literacy. His dimensions of life encompass moments of dilemma, pride, humiliation, wonder, curiosity and much more which he manifested – won over and triumphed; these were his incredible pages of life. Kanachur Monu, as he is fondly known among the masses, epitomizes grit and resilience. He can be appreciated as an industrialist, a founder of educational institutions, a social servant, a politician and one who believes in humane values. His life stories of hard work, perseverance, fight against poverty and the visionary quest behind his accomplishments are worth listening to, firsthand.Dr. Haji U.K. Monu a self-taught and a self-made entrepreneur and an educationist with an undying passion for constant learning and amelioration . His empathetic nature empowers his social service reach; thus helping many poor families who are economically backward, facilitating fee concessions and free education for really deserving students. He has held free mass marriages for poor couples. He has covered a vast sphere of business interests and diverse social ventures too, providing both direct and indirect employment to scores of people. He has business establishments in Burma, Papua New Guinea, Australia, Malaysia, Africa, South America, Indonesia.Inspite of facing numerous difficulties and challenges during his initial days towards the path of achievement; his undeterred dedication, relentless hard work, and in-depth commitment to excellence makes him a role model for the younger generations to draw inspiration from and to progress. His contributions and accolades to society are truly commendable. In the space of social and religious organizations; he has held several positions viz Chairman of the District Wakf Board Committee, Vice President of South Indian Plywood Manufacturers Association, Vice President of Karnataka Timber Importers Association, and an active member of Lions Club of Mangalagangothri, Konaje Mangalore. In his entrepreneurial ventures, he has established a successful business empire that spans across the globe; including Singapore, Dubai, Myanmar, Africa and Europe.His business ventures include : U.K. Monu timbers, Kanachur Wood Industries and Kanachur Seasoning Industries. In his passion for imparting education Dr. Haji U.K. Monu has established several educational institutions: Kanachur Public School ,Kanachur Pre-University College for Women, Kanachur Institute of Management and Science, Kanachur Institute of Medical Sciences, Kanachur Institute of Physiotherapy, Kanachur College of Nursing Sciences and Kanachur Institute of Allied Health Sciences; all of which have contributed immensely to the education and well-being of the community.Dr. Haji UK Monu has been conferred with a series of Awards and Recognitions in his lifetime – accolading his contribution to the society and selfless service. He has not only envisioned and planned his story but also made it a reality. He has created job opportunities for thousands of people and also provided the best of education i.e. primary, secondary, college and higher education (healthcare) at the unitary campus at Natekal, Mangaluru to multitudes of children, who are in pompous positions today; serving the world over.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಆರ್ಥೋಪೆಡಿಕ್ ‌ಅಸೋಸಿಯೇಶನ್ ನ ನಿಯೋಜಿತ ಅಧ್ಯಕ್ಷರಾಗಿ ಡಾ.ಬಿ.ಸಚ್ಚಿದಾನಂದ ರೈ ಆಯ್ಕೆ

ಮಂಗಳೂರು : ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ನ 2025-26ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ಮಂಗಳೂರಿನ ಡಾ.ಬಿ. ಸಚ್ಚಿದಾನಂದ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌ ಬೆಂಗಳೂರಿನಲ್ಲಿ ಫೆ.2 ರಂದು ನಡೆದ ಅಸೋಸಿಯೇಷನ್ ನ 49ನೇ ವಾರ್ಷಿಕ ಸಮಾವೇಶದಲ್ಲಿ ಈ ಆಯ್ಕೆ ನಡೆಯಿತು.ಡಾ.ಸಚ್ಚಿದಾನಂದ ರೈ ಅವರು ಕೆನರಾ ಆರ್ಥೋಪೆಡಿಕ್ ಅಸೋಸಿಯೇಷನ್ ನ ಅಧ್ಯಕ್ಷ ರಾಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ಮಂಗಳೂರು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಜೆಟ್ 2025-26 ಬಗ್ಗೆ ಕ್ಯಾಪ್ಟನ್ ಕಾರ್ಣಿಕ್ ಅಭಿಪ್ರಾಯ ಇಲ್ಲಿದೆ

1.ಆತ್ಮ ವಿಶ್ವಾಸದೊಂದಿಗೆ ನಮ್ಮ ದೇಶವನ್ನು ಆತ್ಮ ನಿರ್ಭರತೆಯತ್ತ ಕೊಂಡೊಯ್ಯುವ 2025-26 ರ ಬಜೆಟನ್ನು ನೀಡಿರುವ ಕೇಂದ್ರ ವಿತ್ತ ಮಂತ್ರಿ ಶ್ರೀಮತಿ ನಿರ್ಮಲ ಸೀತಾರಾಮನ್ ರನ್ನು ದೇಶದ ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತೇನೆ. 2.ಮಧ್ಯಮ ವರ್ಗದ ಹಿತಾಸಕ್ತಿಯನ್ನು ಪರಿಗಣಿಸಿ ತೆರಿಗೆಯನ್ನು ಸರಳೀಕರಿಸಿ 1 ಲಕ್ಷ ಕೋಟಿಗೂ ಹೆಚ್ಚಿನ ರಿಲೀಫ್ ನೀಡಿರುವ ಸ್ವಾಗತಾರ್ಹ ಬಜೆಟ್.3.ಬದಲಾದ ವಿಶ್ವ ನಾಯಕತ್ವ, ಬದಲಾಗಬಹುದಾದ ವಿಶ್ವ ವ್ಯಾಪಾರದ ನಿಯಮಗಳು, ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡುವ ಅನಿವಾರ್ಯತೆಯನ್ನು ಗಮನದಲ್ಲಿ ಇರಿಸಿ ಆತ್ಮ ನಿರ್ಭರತೆಯತ್ತ ವಿಶೇಷ ಆದ್ಯತೆಯಿಂದ ಕೃಷಿ, ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಗತಿಶೀಲ ಬಜೆಟ್.5.2014ರಲ್ಲಿ ಕೇವಲ 2.5 ಲಕ್ಷಕ್ಕೆ ಸೀಮಿತವಾಗಿದ್ದ ಆದಾಯ ತೆರಿಗೆಯ ವ್ಯಾಪ್ತಿ ಯನ್ನು ಕೇವಲ 12 ವರ್ಷಗಳ ಅವಧಿಯಲ್ಲಿ 12ಲಕ್ಷ ಕ್ಕೆ (+ Rs75000/-) ಏರಿಸಿ ಮಧ್ಯಮ ವರ್ಗದ ಬಹು ವರ್ಷಗಳ ಕನಸನ್ನು ನನಸು ಗೊಳಿಸಿದ ಶ್ಲಾಘನೀಯ ಬಜೆಟ್.6.ಪರೋಕ್ಷ ತೆರಿಗೆಗಳ ಇನ್ನಷ್ಟು ಸರಳಗೊಳಿಸುವ ಪ್ರಯತ್ನ ಇರುವ ಭವಿಷ್ಯದ ಸ್ಪಷ್ಟ ದೃಷ್ಟಿ ಕೋನವಿರುವ ಬಜೆಟ್. 7.ಸರಕಾರದ ಕೈಯಲ್ಲಿ ಹಣ ಇರಿಸಿ ದುಂದುವೆಚ್ಚ ಮಾಡುವುದಕ್ಕಿಂತ ಜನತೆಯ ಕೈಯಲ್ಲಿ ಹೆಚ್ಚು ಹಣವಿರುವಂತೆ ಮಾಡಿ ಉಳಿತಾಯ, ಹೂಡಿಕೆ ಹಾಗೂ ಅಗತ್ಯವಸ್ತುಗಳಿಗಾಗಿ ವೆಚ್ಚ ಮಾಡಲು ಅವಕಾಶ ನೀಡಿ ಆರ್ಥಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಆಶಾ ದಾಯಕ ಬಜೆಟ್.-ಕ್ಯಾಪ್ಟನ್ ಗಣೇಶ್ ಕಾರ್ಣಿಕ್ಮಾಜಿ ಶಾಸಕವಿಧಾನ ಪರಿಷತ್ತು

ಪ್ರಾದೇಶಿಕ ವಾರ್ತೆಗಳು

ಇದು ಬಡವರ, ಮಧ್ಯಮ ವರ್ಗ, ಮಹಿಳೆಯರು ಹಾಗೂ ರೈತರ ಪರವಾದ ಬಜೆಟ್ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು, ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್,ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಜನಪರ ಹಾಗೂ ರೈತ ಪರ ಬಜೆಟ್ ಆಗಿದೆ. ಅದರಲ್ಲೂ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ವ್ಯಾಪ್ತಿಯನ್ನು 12 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದ ಮಧ್ಯಮ ವರ್ಗದ ಬಹಳಷ್ಟು ಅನುಕೂಲ ವಾಗಲಿದೆ. ಇದಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ. ಸರ್ಕಾರ ರಾಜ್ಯಗಳೊಂದಿಗೆ ಸಹಭಾಗಿತ್ವದಲ್ಲಿ 100 ಜಿಲ್ಲೆಗಳನ್ನು ಒಳಗೊಂಡಿರುವಂತೆ ಈ ಯೋಜನೆ ರೈತಾಪಿ ವರ್ಗಕ್ಕೆ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು.

Scroll to Top