ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಯುನಿವರ್ಸಲ್ ಮೀಡಿಯಾ ಅವಾರ್ಡ್

ಮಂಗಳೂರು, ಫೆ. 21,ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಯುನಿವರ್ಸಲ್ ಮೀಡಿಯಾ ಅವಾರ್ಡ್ 2025 ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಭಾಜನರಾಗಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ದುಬೈ ನಲ್ಲಿ ಫೆಬ್ರವರಿ 24 ರಂದು ನಡೆಯುವ 47 ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಹಾಗೂ ಸಾಂಸ್ಕೃತಿಕ ವಿನಿಮಯ ಸಮ್ಮೇಳನ ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ದುಬೈ ಆಲ್ ಹಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಮೊಹಮ್ಮದ ಇಬ್ರಾಹಿಂ ಅಲ್ ಹಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಶ್ರೀನಿವಾಸ ನಾಯಕ್ ಇಂದಾಜೆ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ,, ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ಪತ್ರಕರ್ತರ ಗ್ರಾಮ ವಾಸ್ತವ್ಯ, ಬ್ರ್ಯಾಂಡ್ ಮಂಗಳೂರು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕುತ್ಲುರು ಸರಕಾರಿ ಶಾಲೆ, ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಅಭಾಸಾಪ ದ.ಕ.ಜಿಲ್ಲಾಧ್ಯಕ್ಷರಾಗಿ ಪಿ.ಬಿ.ಹರೀಶ್ ರೈ ಆಯ್ಕೆ

ಮಂಗಳೂರು : ಭಾರತದ ಎಲ್ಲ ಭಾಷೆಗಳ ಸಾಹಿತ್ಯ ಕ್ಷೇತ್ರದ ರಾಷ್ಟ್ರೀಯ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಪಿ.ಬಿ.ಹರೀಶ್ ರೈ ಪುನರಾಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಡಾ. ಎಂ.ಮೋಹನ ಆಳ್ವ , ಕಾರ್ಯದರ್ಶಿಯಾಗಿ ಸುಮಂಗಲ ರತ್ನಾಕರ ರಾವ್, ಉಪಾಧ್ಯಕ್ಷೆಯಾಗಿ ವೀಣಾ .ಟಿ .ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಲತೇಶ್ ಬಾಕ್ರಬೈಲ್, ಶ್ರೀಲಕ್ಷ್ಮಿ ಮಠದಮೂಲೆ, ಖಜಾಂಜಿಯಾಗಿ ಭಾಸ್ಕರ ರೈ ಕಟ್ಟ ಹಾಗೂ ಚಂದ್ರಶೇಖರ ಕುಳಮರ್ವ (ಮಾಧ್ಯಮ ಪ್ರಮುಖ), ಪ್ರಕಾಶ ನಾರಾಯಣ ಚಾರ್ಮಾಡಿ ( ಸಂಪರ್ಕ ಪ್ರಮುಖ), ಗೀತಾ ಲಕ್ಷ್ಮೀಶ( ಸಾಹಿತ್ಯ ಕೂಟ ಪ್ರಮುಖ),ರಮೇಶ ಮಯ್ಯ , ಡಾ. ಸುರೇಶ ನೆಗಳಗುಳಿ, ರವೀಂದ್ರ ಶೆಟ್ಟಿ ಬಳೆಂಜ ( ಸಮಿತಿ ಸದಸ್ಯರು ) ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ.ಸಾಮಾನ್ಯರ ಯಶೋಗಾಥೆ ಅನಾವರಣಗೊಳಿಸಿ ಬಾಳೆಪುಣಿವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅಭಿಪ್ರಾಯ

ಮಂಗಳೂರು: ಸಾಮಾಜಿಕ ಕಾಳಜಿ ಹಾಗೂ ವೃತ್ತಿ ಬದ್ಧತೆಯ ಪತ್ರಕರ್ತರಾಗಿದ್ದ ದಿ. ಗುರುವಪ್ಪ ಬಾಳೆಪುಣಿ ಅವರು ತಮ್ಮ ಬರಹಗಳ ಮೂಲಕ ಸಾಮಾನ್ಯ ಸಾಧಕರು ಬದುಕು ಕಟ್ಟಿಕೊಂಡ ಬಗೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಹಿರಿಯ ಪತ್ರಕರ್ತ ದಿ. ಗುರುವಪ್ಪ ಬಾಳೆಪುಣಿ ಅವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ವೈಯಕ್ತಿಕ ಬದುಕಿನಲ್ಲಿ ನೈತಿಕತೆ ಕಾಪಾಡಿಕೊಂಡಿದ್ದ ಬಾಳೆಪುಣಿ ತಾವು ಪತ್ರಿಕೆಯ ಮೂಲಕ ಪರಿಚಯಿಸಿದ ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರ ಬಗ್ಗೆ ಪುಸ್ತಕವಾಗಿ ಪ್ರಕಟಿಸುವ ಪ್ರಯತ್ನ ನಡೆಸಿದ್ದರು. ಈಗ ಅವರ ಅಗಲಿಕೆಯ ಬಳಿಕ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ನೋವಿನ ಸಂಗತಿ ಎಂದರು.ಕೃತಿಯ ಕುರಿತು ಮಾತನಾಡಿದ ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್ ‘ ಹತ್ತು ಮಂದಿ ಸಾಧಕರ ಬಗ್ಗೆ ಬರೆದಿರುವ ಬಾಳೆಪುಣಿ ಅವರ ಸಾಧನೆಯ ಜತೆಗೆ ಜೀವನದ ಮಜಲುಗಳನ್ನು ತೆರೆದಿಟ್ಟಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.ಕೃತಿ ಬಿಡುಗಡೆಗೊಳಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ ‘ ಬಾಳೆಪುಣಿ ಅವರ ವರದಿಯಿಂದ ಸಾಮಾನ್ಯವ್ಯಕ್ತಿಯಾದ ನಾನು ದೇಶದ ರಾಷ್ಟ್ರಪತಿ, ಪ್ರಧಾನಿ ಎದುರು ನಿಂತು ಸನ್ಮಾನ ಪಡೆಯುವ ಹಂತಕ್ಕೆ ಬೆಳೆದೆ. ಈಗ ಅವರ ಪುಸ್ತಕ ಬಿಡುಗಡೆ ಮಾಡುವ ಅವಕಾಶ ದೊರೆತದ್ದು ನನ್ನ ಭಾಗ್ಯ ’ಎಂದರು.ಮುಖ್ಯ ಅತಿಥಿಗಳಾಗಿದ್ದ ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಚಂದ್ರಶೇಖರ ಪಾತೂರು ಮತ್ತು ಪುಸ್ತಕ ಪ್ರಕಟಿಸಿದ ಅನಂತ ಪ್ರಕಾಶದ ಮಿಥುನ ಕೊಡೆತ್ತೂರು ಅವರು ಬಾಳೆಪುಣಿಯವರ ಜತೆಗಿನ ಒಡನಾಟವನ್ನು ಸ್ಮರಿಸಿದರು. ಕೃತಿಯ ಪ್ರಕಾಶಕ ಮಿಥುನಕೊಡೆತ್ತೂರುಮತ್ತು ಪುಟ ವಿನ್ಯಾಸ ನಡೆಸಿದ ಹರೀಶ್ ಕೊಡೆತ್ತೂರು ಅವರನ್ನು ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಅವರು ಸನ್ಮಾನಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ರಾಮಕೃಷ್ಣ ಆರ್. , ಹೊಸದಿಗಂತ ಪತ್ರಿಕೆಯ ಸಂಪಾದಕ ಪ್ರಕಾಶ್ ಇಳಂತಿಲ, ಗುರುವಪ್ಪ ಬಾಳೆಪುಣಿಯವರ ಪುತ್ರ ಮನೇಶ್ ಬಾಳೆಪುಣಿ, ಪತ್ನಿ ಜಯಂತಿ, ಕುಟುಂಬಸ್ಥರಾದ ಸುಧೀರ್, ಸುಂದರ ಸುರತ್ಕಲ್ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಫೆ.22 ಮತ್ತು ಫೆ.23 ರಂದು ಪಾಲೆಮಾರ್ ಗಾರ್ಡನ್ ನಲ್ಲಿ ಕ್ಷಾತ್ರ ಸಂಗಮ -3. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ವಿವರ ನೀಡಿದ ಮಾಜಿ ಸಚಿವ ಕೃಷ್ಣ ಜೆ .ಪಾಲೆಮಾರ್.

ಮಂಗಳೂರು: ರಾಮಕ್ಷತ್ರಿಯ ಸೇವಾ ಸಂಘ(ರಿ) ಮಂಗಳೂರು ಇದರ ನೇತೃತ್ವದಲ್ಲಿ ಇದೇ ಬರುವ ತಾ 22 ಮತ್ತು 23 ಫೆಬ್ರವರಿ 2025 ರಂದು ಮೋರ್ಗನ್ಸ್‌ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್ ನಲ್ಲಿ “ಕ್ಷಾತ್ರ ಸಂಗಮ-3” ಎಂಬ ರಾಮಕ್ಷತ್ರಿಯರ ಸಮಾವೇಶ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಮಾಜವನ್ನು ಒಟ್ಟುಗೂಡಿಸುವುದು ಮತ್ತು ಯುವ ಜನತೆಗೆ ನಮ್ಮ ಸಮಾಜದ ಸಂಸ್ಕೃತಿ, ಆಚಾರ, ವಿಚಾರ, ಆಚರಣೆ, ಪರಂಪರೆಯನ್ನು ತಿಳಿಯಪಡಿಸುವುದೆಂದು ಸಮಾವೇಶದ ಮುಖ್ಯ ಸಂಚಾಲಕರಾದ ಶ್ರೀ ಜೆ.ಕೆ.ರಾವ್ ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ರಾಮಕ್ಷತ್ರಿಯ ಸಮಾಜದ ಎಲ್ಲಾ ಹಿರಿಯ, ಕಿರಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜದ ಯುವ ಸಮುದಾಯ, ಮಹನೀಯರು ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ರಾಮಕ್ಷತ್ರಿಯ ಸಮಾಜದ ಸುಮಾರು 52 ಸಂಘಗಳ ಪ್ರತಿನಿಧಿಗಳು ಮತ್ತು ಸದಸ್ಯರು ಈ ಸಮಾವೇಶಕ್ಕೆ ಆಹ್ವಾನಿತರು. ತಾ 22 ರಂದು ಬೆಳಗ್ಗೆ ಗಂಟೆ 9.00 ರಿಂದ ರಾಮತಾರಕ ಯಜ್ಞ ಮತ್ತು ಜಪ ನಡೆಯಲಿದೆ. ತದನಂತರ “ಹನುಮಾನ್ ಚಾಲೀಸ” ಕಂಠಪಾಠ ಸ್ಪರ್ಧೆ, ಪುಷ್ಪ ಜೋಡಣೆ, ರಂಗವಲ್ಲಿ ಸ್ಪರ್ಧೆಗಳು ನಡೆಯಲಿದೆ. ಇದರ ಜೊತೆ ವಧುವರ ಅನ್ವೇಷಣೆ ಮತ್ತು ಉದ್ದಿಮೆದಾರರ ಸಮಾವೇಶ ಕೂಡಾ ಇರಲಿದೆ ಎಂದು ತಿಳಿಸಿದರು. ಸಂಜೆ ಗಂಟೆ 4.00 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಜೆ ಕೃಷ್ಣ ಪಾಲೆಮಾರ್ ಉದ್ಘಾಟನೆ ನೆರವೇರಿಸಲಿರುವರು. ಸಂಘದ ಅಧ್ಯಕ್ಷರಾದ ಶ್ರೀ ಮುರಳೀಧರ್ ಸಿ.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಇವರಿಂದ ದಿಕ್ಕೂಚಿ ಭಾಷಣನಡೆಯಲಿದ್ದು ತದನಂತರ ರಾಮಕ್ಷತ್ರಿಯ ಸೇವಾ ಸಂಘ(ರಿ), ಮಂಗಳೂರು ಇದರ ಮಹಿಳಾ ಮತ್ತು ಯುವ ವೃಂದದ ಸದಸ್ಯರಿಂದ ‘ಕರ್ನಾಟಕ ವೈಭವ’ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.ತಾ 23 ರಂದು ರಾಮಕ್ಷತ್ರಿಯ ಸಮಾಜದ ಊರ, ಪರವೂರ ವಿವಿಧ ಸಂಘಗಳ ಸದಸ್ಯರಿಂದ ಪ್ರತಿಭಾ ಸ್ಪರ್ಧೆ ನಡೆಯಲಿದೆ. ಇದರ ಜೊತೆಯಲ್ಲಿ ರಾಮಕ್ಷತ್ರಿಯರ ಪಾರಂಪರಿಕ ಸಸ್ಯಹಾರಿ ಆಹಾರೋತ್ಸವ ಸ್ಪರ್ಧೆ ಕೂಡಾ ನಡೆಯಲಿದೆ. ಮಧ್ಯಾಹ್ನ ಗಂಟೆ 2.00 ರಿಂದ ಯುವ ಮತ್ತು ಮಹಿಳಾ ಸಮ್ಮೇಳನ, ಗಂಟೆ 3.00 ರಿಂದ ವಿಚಾರ ಗೋಷ್ಠಿ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಜೆ ಕೃಷ್ಣ ಪಾಲೆಮಾರ್ ವಹಿಸಲಿರುವರು. ಈ ಸಮಾವೇಶಕ್ಕೆ ವಿಶೇಷ ಅತಿಥಿಯಾಗಿ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಾಗೂ ಸಂಸದರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮತ್ತು ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಶ್ರೀ ಉಮನಾಥ್ ಕೋಟ್ಯಾನ್, ಶಾಸಕರು, ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ. ಇದರೊಂದಿಗೆ ಊರ ಪರವೂರ ಅನೇಕ ಗಣ್ಯರ ಘನ ಉಪಸ್ಥಿತಿ ಇರಲಿದ್ದಾರೆಂದು ತಿಳಿಸಿದರು.ಅಂದು ರಾಮಕ್ಷತ್ರಿಯ ಸಮಾಜದ ಅತೀ ಹಿರಿಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕೆಲವು ಗಣ್ಯರನ್ನು ಸನ್ಮಾನಿಸಲಾಗುವುದು. ಈ ಹಿಂದೆ 2014 ಮತ್ತು 2016 ರಲ್ಲಿ 2 ಬಾರಿ “ಕ್ಷಾತ್ರ ಸಂಗಮ”ವು ವಿಜೃಂಭಣೆಯಿಂದ ನಡೆದಿತ್ತು ಇದು ಮೂರನೇ ವರ್ಷದ ಕಾರ್ಯಕ್ರಮವಾಗಿದೆ ಎಂದರು, ಮುಂದಿನ ಕಾಲ ದ ದೇಶದ ಭದ್ರತೆಗೆ ಕೋಟೆಯನ್ನು ಕಟ್ಟಿದ್ದು ರಾಮಕ್ಷತ್ರಿಯರು ಇದರಿಂದಾಗಿ ನಮ್ಮ ಒಗ್ಗೂಡಿಸಲು ಇದೊಂದು ಉತ್ತಮ ಕಾರ್ಯವೆಂದು ಕೃಷ್ಣ.ಜೆ ಪಾಲೆಮಾರ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಜೆ‌.ಕೆ ರಾವ್, ಮುರಳಿಧರ್ ,ರವೀಂದ್ರ ಕೆ,ರವೀಂದ್ರ ರಾವ್ , ಕೃಷ್ಣ ಮುರಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣ. ‘ಸಮಾಜಮುಖಿ ಕಾರ್ಯದಿಂದ ಸಂಘಟನೆಗೆ ಶ್ರೇಯಸ್ಸು’ -ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು : ಸಮಾಜದ ಅಭಿವೃದ್ಧಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಶ್ರೇಯಸ್ಸು ಲಭಿಸುತ್ತದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.ನಗರದ ಓಶಿಯನ್‌ಪರ್ಲ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣಗೊಳಿಸಿ ಮಾತನಾಡಿದ ಅವರು ‘ ಸದಾ ಚಟುವಟಿಕೆಯಲ್ಲಿ ತೊಡಗಿ ಕೊಂಡಿರುವ ದ.ಕ. ಜಿಲ್ಲೆಯ ಪತ್ರಕರ್ತರ ಸಂಘ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಮಾಜಕ್ಕೆ ಮಾದರಿಯಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಪತ್ರಕರ್ತರ ಸಂಘದ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ‘ ಹಿರಿಯ ಪತ್ರಕರ್ತರ ಆದರ್ಶದಲ್ಲಿ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಮುನ್ನಡೆಯುತ್ತಿದೆ. ಇಲ್ಲಿನ ಪತ್ರಕರ್ತರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಪರ ಕಾಳಜಿಯನ್ನು ತೋರಿಸುತ್ತಿದ್ದಾರೆ’ಎಂದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ಪತ್ರಿಕೆಗಳು ಸಮಾಜದ ಮೇಲೆ ಬೀರುವ ಪರಿಣಾಮ ಮಹತ್ವದ್ದಾಗಿದೆ’ ಎಂದರು.ಮಂಗಳೂರು ಪ್ರೆಸ್ ಕ್ಲಬ್‌ಅಧ್ಯಕ್ಷ ಪಿ.ಬಿ.ಹರೀಶ್ ರೈ, ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರಘುರಾಮ, ಆನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಹರ್ಷ, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಬದಲ್ಲಿ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅವಶ್ಯ ಸಾಮಾಗ್ರಿ ಹಾಗೂ ವೆನ್ಲಾಕ್ ಸಮುದಾಯ ವಾಚನಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸುವ ಸುವರ್ಣ ಸಂಭ್ರಮ ಚಟುವಟಿಕೆಗಳಿಗೆ ಸಾಂಕೇತಿಕ ಚಾಲನೆ ನೀಡಲಾಯಿತು. ಸುವರ್ಣ ಸಂಭ್ರಮ ಲೋಗೋ ವಿನ್ಯಾಸ ಮಾಡಿದ ಚಿತ್ರಕಲಾವಿದ ಜಾನ್‌ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ನೈಂಟಿ ವಾರಿಯರ್ಸ್ ವಿನ್ನರ್.ರೋಯಲ್ ಸ್ಟೈಕರ್ಸ್ ರನ್ನರ್

ಮಂಗಳೂರು -ಫೆಬ್ರವರಿ 15 ಮತ್ತು 16 ರಂದು ಕ್ರಿಕೆಟ್ ಕಾಶಿ ಉರ್ವಾ ಮೈದಾನದಲ್ಲಿ ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಷನ್ CSCA ಅಧ್ಯಕ್ಷ ವಿನೋದ್ ಪಿಂಟೋ ತಾಕೋಡೆ ಇವರ ನಾಯಕತ್ವದಲ್ಲಿ CPL ಸೀಸನ್ ಟು ಕ್ರಿಕೆಟ್ ಪಂದ್ಯಾಟವು ಬಹು ವಿಜೃಂಭಣೆಯಿಂದ ನೆರವೇರಿತು.ರೋಹನ್ ಕಾರ್ಪೊರೇಷನ್ ಮಾಲಕರಾದ ರೋಹನ್ ಮೊಂತೇರೋರವರ ಅಧ್ಯಕ್ಷತೆಯಲ್ಲಿ ಕ್ರಿಕೆಟ್ ಪಂದ್ಯಾಟದ ಉದ್ಗಾಟನಾ ಸಮಾರಂಭ ನೆರವೇರಿತು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ಲೋಟಸ್ ,ಪ್ರಾಪರ್ಟಿ ಮ್ಮಾನೆಜಿಂಗ್ ಪಾರ್ಟ್ನರ್ ಸಂಪತ್ ಶೆಟ್ಟಿ, ಉದ್ಯಮಿ ರಘ ಪ್ರಶಾಂತ್ ಪಿಂಟೋ ಬಿಜಯ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಪಿಂಟೊ ಹಾಜರಿದ್ದು ಸ್ಟ್ಯಾನಿ ಅಲ್ವಾರಿಸ್ ಹಾಗೂ ರೋಹನ್ ಮೊಂತೇರೊ ರವರು ಮಾತನಾಡಿ ಶುಭ ಹಾರೈಸಿದರು. CSCA ಅಧ್ಯಕ್ಷರಾದ ವಿನೋದ್ ಪಿಂಟೋ ತಾಕೋಡೆ ಗಣ್ಯರನ್ನು ಸ್ವಾಗತಿಸಿದ್ದು ಜೈಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.ಈ ಸಂಧರ್ಭದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ತೀರ್ಪುಗಾರರಾಗಿ 40 ವರುಷ ಸೇವೆ ನೀಡಿದ ರೊಲ್ಯಾಂಡ್ ಪಿಂಟೋರವರನ್ನು ವಿಷೇಶವಾಗಿ ಸನ್ಮಾನಿಸಲಾಯಿತು.ಮಂಗಳೂರು ಡಯಾಸಿಸ್ ಗೆ ಒಳ ಪಟ್ಟ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಎಲ್ಲಾ ಹತ್ತು ತಂಡದ ಮಾಲಕರನ್ನು ಸನ್ಮಾನಿಸಲಾಯಿತು.ಎರಡು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾಟಗಳು ಸಾಗಿ ಬಂದವು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಅಗಮಿಸಿ ಶುಭ ಹಾರೈಸಿದರು.ಪ್ರಮುಖವಾಗಿ ಅನಿವಾಸಿ ಉದ್ಯಮಿ ಐವರಿ ಗ್ರ್ಯಾಂಡ್ ರಿಯಲ್ ಎಸ್ಟೇಟ್ ಮೂಲಕರಾದ ಮೈಕಲ್ ಡಿಸೋಜರವರು ಸರಿ ಸುಮಾರು ಒಂದು ಗಂಟೆಯ ಕಾಲ ಆಟಗಾರರೊಡನೆ ಬೆರೆತು ಪಂದ್ಯಾಟ ವೀಕ್ಷಿಸಿದರು. ಫೆ.16 ರಾತ್ರಿ 9:30 ಕ್ಕೆ ಪಂದ್ಯಾಟಗಳು ಕೊನೆಗೊಂಡು ಸಮಾರೋಪ ಸಮಾರಂಭ ನಡೆಸಲಾಯಿತು,ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಡಯಾಸಿಸ್ ನ PRO ರೋಯ್ ಕ್ಯಾಸ್ತೆಲಿನೋ ವಹಿಸಿಕೊಂಡರೆ,ಮುಖ್ಯ ಅತಿಥಿಗಳಾಗಿ ಅನಿವಾಸಿ ಉದ್ಯಮಿ ಚಲನಚಿತ್ರ ನಿರ್ಮಾಪಕ ಲೆಪ್ಟಿನೆಂಟ್ ಜನರಲ್ ಅಂಬ್ಯಾಸಿಡರ್ ಪ್ರ್ಯಾಂಕ್ ಪೆರ್ನಾಂಡಿಸ್,ನಿಧಿ ಲ್ಯಾಂಡ್ ಚೇರ್ಮನ್ ಮತ್ತು M.D ಪ್ರಶಾಂತ್ ಸನಿಲ್ ಇವರು ಹಾಜರಿದ್ದರು.ಈ ಸಂಧರ್ಭದಲ್ಲಿ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರ್ತಿ ವಿಲೋನಾ ಡಿಕುನ್ನಾ ಅವರನ್ನು ಸನ್ಮ್ಮಾನಿಸಲಾಯಿತು.CSCA ಅಧ್ಯಕ್ಷ ವಿನೋದ್ ಪಿಂಟೋ ಅಗಮಿಸಿದ ಗಣ್ಯರನ್ನು ಸ್ವಾಗತಿಸಿ,ಗ್ರೀಷ್ಮಾ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದ ತಂಡಗಳ ವಿವರ :1) ಅನಿಲ್ ಮೂಲಕತ್ವದ ನೈಂಟಿ ವಾರಿಯರ್ಸ್ ಕೂಳೂರು ಒಂದು ಲಕ್ಷ ನಗದು ಹಾಗೂ ಟ್ರೋಫಿ2) ಮರ್ವಿನ್ ಲೋಬೊ, ಜಿತೇಶ್, ರೋಶನ್ ಇವರ ಮಾಲಕತ್ವದ ರೋಯಲ್ ಸ್ಟೈಕರ್ಸ್ ತಂಡವು 60 ಸಾವಿರ ನಗದು ಹಾಗೂ ಟ್ರೋಫಿ3) ಲೈನಲ್ ಹಾಗೂ ನವೀನ್ ಮಾಲಕತ್ವದ ಎಲ್ ಡೋ ರಾಡೋ ತಂಡವು 20 ಸಾವಿರ ನಗದು ಹಾಗೂ ಟ್ರೋಫಿ4) ರಿಚ್ಚರ್ಡ್ ಹಾಗೂ ರಾಜೇಶ್ ಮಾಲಕತ್ವದಜೆಬಿ ವಾರಿಯರ್ಸ್ ತಂಡವು 20 ಸಾವಿರ ನಗದು ಹಾಗೂ ಟ್ರೋಫಿವೈಯುಕ್ತಿಕ ಬಹುಮಾನಗಳುಬೆಸ್ಟ್ ಅಲ್ಲ್ರೌಂಡರ್- ಜೀವನ್ ನೈಂಟಿ ವಾರಿಯರ್ಸ್,ಮೆನ್ ಆಫ಼್ ದಿ ಟೂರ್ನಮೆಂಟ್- ಗ್ಲೆನ್ಸನ್ ನೈಂಟಿ ವಾರಿಯರ್ಸ್,ಇಮ್ಯಾಜಿನ್ ಪ್ಲೇಯರ್- ನಿತಿನ್ ರೋಯಲ್ ಸ್ಟ್ರೈಕರ್ಸ್ ,ಬೆಸ್ಟ್ ಬ್ಯಾಟ್ಸಮನ್ – ಫ್ರಾನ್ಸಿಸ್ ರೋಯಲ್ ಸ್ಟೈಕರ್ಸ್,ಬೆಸ್ಟ್ ಫೀಲ್ಡರ್- ವಿಶ್ವಾಸ್ FM ಸ್ಟ್ರೆಕರ್ಸ್, ಆರೆಂಜ್ ಕ್ಯಾಪ್ ಹೋಲ್ಡರ್ – ಫ್ರಾನ್ಸಿಸ್ ರೋಯಲ್ ಸ್ಟ್ರೆಕರ್ಸ್,ಪರ್ಪಲ್ ಕ್ಯಾಪ್ ಹೋಲ್ಡರ್- ಮೇಲ್ರೊಯ್ ನೈಂಟಿ ವಾರಿಯರ್ಸ್

ಪ್ರಾದೇಶಿಕ ವಾರ್ತೆಗಳು

ಫೆ.20ರಂದು ದಿ.ಬಾಳೆಪುಣಿ ಅವರ‘ ದೊಡ್ಡವರು ಇವರು ಸನ್ಮಾನ್ಯರು ’ ಕೃತಿ ಬಿಡುಗಡೆ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತ ದಿ.ಗುರುವಪ್ಪ .ಎನ್.ಟಿ.ಬಾಳೆಪುಣಿ ಇವರ ‘ ದೊಡ್ಡವರು ಇವರು ಸನ್ಮಾನ್ಯರು ’ ಕೃತಿ ಬಿಡುಗಡೆ ಸಮಾರಂಭ ಫೆ.20ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕೃತಿ ಬಿಡುಗಡೆ ಮಾಡಲಿದ್ದಾರೆ. ಹೊಸದಿಗಂತ ದೈನಿಕದ ಸಿಇಒ ಪಿ.ಎಸ್.ಪ್ರಕಾಶ್ ಕೃತಿ ಪರಿಚಯ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಪ್ರಕಾಶಕರನ್ನು ಸನ್ಮಾನಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಚಂದ್ರಶೇಖರ ಪಾತೂರು, ಕಿನ್ನಿಗೋಳಿಅನಂತ ಪ್ರಕಾಶದ ಮಿಥುನ್ ಕೊಡೆತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಮುಮ್ತಾಜ್ ಅಲಿ, ಆಯಿಷಾ ರೆಹಮತ್ ಪರಿಚಯ ನನಗಿಲ್ಲ, ಆದರೂ ಕೇಸಲ್ಲಿ ಫಿಕ್ಸ್ ಮಾಡಿದ್ರು!”-ಶಾಫಿ ನಂದಾವರ ಆರೋಪ

ಮಂಗಳೂರು: “ನಾನು ಹಲವು ವರ್ಷಗಳಿಂದ ಪರವಾನಿಗೆ ಹೊಂದಿದ ಮರಳು ಮತ್ತು ಹಳೆ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರ ಮಾಡುತ್ತಾ ಬಂದಿದ್ದೇನೆ. ಧಾರ್ಮಿಕ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದೇನೆ. ಧಾರ್ಮಿಕವಾಗಿ ನಂದಾವರ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿಯೂ, ಪ್ರತಿಷ್ಠಿತ ಸಮಸ್ತ ಸಂಘಟನೆ ಅಧೀನದ ಸಜಿಪ ರೇಂಜ್ ಮದ್ರಸಾ ಮೆನೇಜ್‌ ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಶಂಶುಲ್ ಉಲಮಾ ಎಜ್ಯುಕೇಶನ್ ಟ್ರಸ್ಟ್ (ರಿ) ನಂದಾವರ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ದಿನಾಂಕ 06-10-2024ರಂದು ಉದ್ಯಮಿ ಮತ್ತಾಝ್ ಅಲಿ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕೂಳೂರು ನದಿಯಲ್ಲಿ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಆಯಿಷಾ ರೆಹಮತ್ ಎಂಬಾಕೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದರೆ ಇತರ ಆರೋಪಿಗಳ ಸ್ಥಾನದಲ್ಲಿ ನನ್ನನ್ನೂ ಸೇರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಬ್ಲಾಕ್ ಮೇಲ್ ಆರೋಪ ಹೊರಿಸಿ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು“ ಎಂದು ಶಾಫಿ ನಂದಾವರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.”ವ್ಯವಹಾರ ನಿಮಿತ್ತ ನಾನು ಬಾಗಲಕೋಟೆಗೆ ಹೋಗಿ ಅಕ್ಟೋಬರ್ 8ರಂದು ಹಿಂದಕ್ಕೆ ಬರುವಾಗ ಪೊಲೀಸರು ಬಂಧಿಸಿದ್ದರು. ಆದರೆ ಯಾಕೆ ಬಂಧಿಸಲಾಗಿದೆ ಎನ್ನುವ ಮಾಹಿತಿ ನನಗೆ. ಇರಲಿಲ್ಲ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದೆ. ಠಾಣೆಗೆ ಹೋದ ಬಳಿಕ ಮಮಾಝ್ ಅಲಿ ಅವರ ಆತ್ಮಹತ್ಯೆಗೆ ಆಯಿಷಾ ರೆಹಮತ್‌ಳನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ವಾಸ್ತವವಾಗಿ ನನಗೆ ಮತ್ತಾಝ್ ಅಲಿ ಹಾಗೂ ಆಯಿಷಾ ರೆಹಮತ್ ನವರ ಪರಿಚಯವೇ ಇರಲಿಲ್ಲ. ಅವರನ್ನು ಎಂದಿಗೂ ಭೇಟಿಯಾಗಿದ್ದಾಗಲೀ, ದೂರವಾಣಿ ಕರೆಯನ್ನು ಮಾಡಿದ್ದಾಗಲೀ ಮಾಡಿಲ್ಲ. ನಾನು ಇದುವರೆಗೂ ಯಾರೊಬ್ಬರಿಗೂ ಮೆಸೇಜ್ ಮಾಡಿದ ಉದಾಹರಣೆಯೂ ಇಲ್ಲ. ನಾನು ಇತರರಿಗೆ ಸಹಾಯ ಮಾಡಿದ್ದೇನೆ ಹೊರತು ಯಾರಿಂದಲೂ ಏನನ್ನೂ ಪಡೆದಿಲ್ಲ. ಇದುವರೆಗೆ ಇನ್ನೊಬ್ಬರ ಹಣದಲ್ಲಿ ಚಹಾವನೂ ಕುಡಿದಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಹಾಗಿದ್ದರೂ ನನ್ನ ಮೇಲೆ ಹಣಕ್ಕಾಗಿ ಬ್ಲಾಕ್‌ಮೇಲ್‌ನಂಥಹ ಗಂಭೀರವಾದ ಆರೋಪವನ್ನು ಹೊರಿಸಿ ಜೈಲಿಗೆ ಕಳಿಸಲಾಗಿದ್ದು ನೂರು ದಿನ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಅಪಪ್ರಚಾರವನ್ನು ಮಾಡಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪುರಾವೆ ಇಲ್ಲದೆ ಸುಳ್ಳು ಸುದ್ದಿ ಹರಡಿಸಲಾಗಿದೆ“ ಎಂದು ಅಳಲು ಹಂಚಿಕೊಂಡರು.”ಯಾವುದೇ ತಪ್ಪು ಮಾಡದಿದ್ದರೂ ಪೊಲೀಸ್ ಠಾಣೆ, ಜೈಲು, ನ್ಯಾಯಾಲಯಕ್ಕೆ ಅಲೆದಾಡುವಂತಾಯಿತು. ಈ ಸಮಯದಲ್ಲಿ ನನ್ನ ಆರೋಗ್ಯವು ತೀರಾ ಹದಗೆಟ್ಟು ಚಿಕಿತ್ಸೆಗೆ ಹಣವಿಲ್ಲದೆ ತುಂಬಾ ಕಷ್ಟಪಡಬೇಕಾಯಿತು. ನನ್ನ ಮೇಲೆ ಮಾಡಿದ ಸುಳ್ಳು ಆರೋಪದಿಂದಾಗಿ ನನಗೆ ಮಾತ್ರವಲ್ಲದೆ ನನ್ನ ಪತ್ನಿ. ನನ್ನ ನಾಲ್ವರು ಹೆಣ್ಮಕ್ಕಳು ಅಪಮಾನ ಎದುರಿಸುವಂತಾಯಿತು. ಶಾಲೆಯಲ್ಲೂ ಸ್ನೇಹಿತರಿಂದ ಮಕ್ಕಳಿಗೆ ಅವಮಾನಕಾರಿಯಾಗಿ ಮಾತುಗಳನ್ನು ಕೇಳುಬೇಕಾಯಿತು. ಇದರಿಂದಾಗಿ ಮನೆಯವರು ತಲೆ ಎತ್ತಿ ನಡೆಯದಂತಾಗಿದ್ದು ನಾವು ಜೀವಂತ ಇದ್ದರೂ ಸತ್ತಂತಾಗಿದೆ.ನಾನು ಪ್ರತಿನಿಧಿಸುತ್ತಿದ್ದ ಧಾರ್ಮಿಕ ಸಂಘಟನೆಯ ಮೇಲೂ ಪ್ರಶ್ನೆ ಏಳುವಂತಾಯಿತು. ಯಾವೊಂದೂ ತಪ್ಪನ್ನು ಮಾಡದಿದ್ದರೂ ನನ್ನ ಮೇಲೇಕೆ ಇಂತಹ ಆರೋಪ ಹೊರಿಸಲಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಈಗಲೂ ಜನರು ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದಿನಾಂಕ 12-02-2025 ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದೆ. ಆದರೆ ನೆಮ್ಮದಿಯ ಜೀವನ ಸಾಗಿಸಲೂ ಸಾಧ್ಯವಾಗುತ್ತಿಲ್ಲ. ಇತರರ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡುವುದು ಸುಲಭಆದರೆ ನಂತರ ಅವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ನಾನು ಮತ್ತು ನನ್ನ ಕುಟುಂಬದ ಪರಿಸ್ಥಿತಿ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಂತಹ ಪರಿಸ್ಥಿತಿ ತೇಜೋವಧೆ ಮಾಡುವವರಿಗೆ ಬಂದಾಗ ಅವರಿಗೂ ನಾವು ಸಮಾಜದಲ್ಲಿ ಅನುಭವಿಸಿದ ಯಾತನೆಯ ಅರಿವಾಗುತ್ತದೆ. ಈ ಪ್ರಕರಣ ತನಿಖೆ ನಡೆದು ನ್ಯಾಯ ಸಿಗುವ ವಿಶ್ವಾಸ ನನಗಿದೆ“ ಎಂದು ಹೇಳಿದರು.

ಪ್ರಾದೇಶಿಕ ವಾರ್ತೆಗಳು

Profile of Dr. Santosh T. Soans for Wikipedia page

Introduction PassageSantosh Theodore Soans (born January 31, 1962) is an Indian pediatrician, pediatric intensivist, medical educator and profession leader. He was born in Kundapur town of Udupi district and is presently based in Mangalore. He is a practicing pediatrician and a specialist in pediatric critical care. As has over 35 years of experience as a medical educator and presently serves at AJ Institute of Medical Sciences and Research Centre, Mangalore as Professor, Head of the Department of Pediatrics and Chief of NICU / PICU.As a profession leader, he has been deeply involved in various professional bodies. He has served as the National President of Indian Academy of Pediatrics (IAP) and as Standing Committee Member of the Asia Pacific Pediatric Association (APPA). He is presently Standing Committee Member of International Pediatric Association (IPA) representing the Asia Pacific Region. He is a recipient of Outstanding Asian Pediatrician Award 2018, National IMA Doctor’s Day Award 2019 and IMA Karnataka State BC Roy Award 2019. BiographyEarly LifeSantosh T. Soans was born into a reputable Kannada-speaking Protestant Christian family on January 31, 1962, in Kundapur, a coastal town situated in Udupi district of Karnataka state. His father, Solomon Samuel Soans, is a retired businessman and his mother, Ratnamale, is a homemaker. He was the eldest among three sons. He also has an older sister. His family has been traditionally engaged in business and they own Prabhakar Tile Factory and the Sharon Hotel in Kundapur. Dr. L. C. Soans, an internationally renowned agricultural scientist of the famed Soans Farms in Moodbidri was his maternal uncle.Professional BackgroundDr. Santosh Soans studied medicine at Kasturba Medical College, Mangalore / Manipal. After completing his MBBS and MD in Pediatrics, he chose Pediatric Intensive Care as his specialization and has pioneered its advancement at the institutional and practitioner level in Karnataka. Before settling in Mangalore, he served for four years at the Royal Hospital, Muscat, Sultanate of Oman as Registrar of PICU and NICU. He also had a brief internship in UK. He is a Fellow of the Indian Academy of Pediatrics (FIAP) and a Fellow of the Royal College of Pediatrics and Child Health, UK (FRCPCH).Medical Educator and Academic Activities.Dr. Soans began his teaching career serving as faculty at KMC Manipal, followed by a long stint as Associate Professor at Father Muller Medical College, Mangalore. Since 2005, he has been serving at AJ Institute of Medical Sciences and Research Centre, Mangalore as Professor, Head of the Department of Pediatrics and Chief of NICU / PICU.He takes a keen interest in mentoring young doctors. He is invited as Faculty for Continuing Medical Education (CME) programmes all over India. He has authored five books, contributed chapters to medical text books and published articles in national and international medical journals and served as DM Examiner – Pediatric Critical Care.Profession LeadershipIn the year 1995, Dr. Soans began a lifelong association with Indian Academy of Pediatrics (IAP), the largest national professional body of pediatricians having over 48,000 members. In 2018, he had the rare distinction of becoming the second person from Karnataka state to serve as IAP National President in its nearly sixty-year history.He established the IAP Intensive Care Chapter in Karnataka and the Indian Society of Critical Care Medicine (ISCCM) branch in Dakshina Kannada district. In 2013, he served as National Chairman of IAP Intensive Care Chapter. He is also the Founding Chairman of IAP Medical Education Chapter (IAP-MEC) which was founded in 2021.In 2018 he was unanimously chosen as the Founder National President of the Organized Medicine Academic Guild of India (OM Guild), a pioneering confederation of 23 different national level medical specialty associations.He shares a long association with INDUS-EM, the Indo-US Emergency Medicine collaborative. He has organized numerous regional and national professional conferences to share professional knowledge.He has organized five conferences as Organizing Secretary: Criticon 2003 (450 delegates), Criticon 2005 (1000 delegates), Karnataka Pedicon 2009 (750 delegates), NCPCC 2012 (960 delegates) and Adolescon 2015 (390 delegates). He was the Organizing Chairman of INDUS-EM 2008 (3500 delegates), a multidisciplinary conference. He was the Scientific Committee Chairperson for National Pedicon at Mangalore 1996, Nagpur 2018, Noida 2022 and Kochi 2024. He is a much sought after speaker at national and international conferences.Dr. Soans was a key member of the team of doctors who spearheaded ‘PEDISATCON’, a series of satellite based CME programmes in 2007-2009. Organised in collaboration with Indian Space Research Organization (ISRO) under the auspices of IAP Hassan District Branch, this was well appreciated as a visionary initiative and a precursor to the modern era of internet enabled video conferencing.Pediatric ResearchHas authored and edited five books including Neonatal Drug Formulary, Pediatric Critical Care Protocols, IAP Text Book of Pediatric Intensive Care Protocols, IAP Text Book of Pediatric and Neonatal Emergencies, and IAP Clinical Cases in Pediatrics for Postgraduates. He was the editor of The Intensivist (2005-2008), the house magazine of IAP Pediatric Intensive Care Chapter and a senior editorial board member of Journal of Pediatric Critical Care. He has contributed chapters and articles to many national academic books and journals.Personal LifeDr. Santosh Soans is married to Sarita Soans, a homemaker. The couple has two children. Their son Nihal is an engineer employed in USA. Their daughter Nikita is a dermatologist and dermatosurgeon based in Bengaluru. Dr. Santosh Soans is a Rotarian and a Freemason.Awards and Recognitions• ‘Outstanding Asian Pediatrician Award 2018’, conferred by Asia Pacific Pediatric Association, Singapore.• ‘IMA Doctors Day Award 2019’ of Indian Medical Association, New Delhi.• ‘IMA KSB Doctors Day Award 2019’ of Indian Medical Association, Karnataka State Branch.• The Dr Santosh Soans Oration, is instituted in his name by IAP Karnataka Pediatric Intensive Care Chapter.• He has been formally felicitated on numerous occasions across India in recognition of his work in pediatricsBooks Authored• Neonatal Drug Formulary• Pediatric Critical Care Protocols• Text Book of Pediatric Intensive Care Protocols• IAP Text Book of Pediatric and Neonatal Emergencies• IAP Clinical Cases in Pediatrics for PostgraduatesPOSITIONS SERVED:International Pediatric Association (IPA)• Standing Committee Member (Asia Pacific Region) (2023-2025)• Scientific Chair, IPA Congress (2023)Asia

ಪ್ರಾದೇಶಿಕ ವಾರ್ತೆಗಳು

ಮಂಗಳೂರು, ಏರ್‌ಪೋರ್ಟ್ ರಸ್ತೆಯಲ್ಲಿರುವ ಸೆಂಚುರಿ ಮ್ಯಾಟ್ರೆಸ್‌ನ ಹೊಸ ಸ್ಲೀಪ್ ಸ್ಪೆಷಲಿಸ್ಟ್ ಅಂಗಡಿ ಉದ್ಘಾಟನೆ

ಮಂಗಳೂರು, ಫೆಬ್ರವರಿ 17, 2025: 35 ವರ್ಷಗಳಿಗೂ ಹೆಚ್ಚು ಕಾಲದ ಪರಂಪರೆಯನ್ನು ಹೊಂದಿರುವ ಭಾರತದ ಸ್ಲೀಪ್ ಸ್ಪೆಷಲಿಸ್ಟ್ ಸೆಂಚುರಿ ಮ್ಯಾಟ್ರೆಸ್, ಮಂಗಳೂರು, ಏರ್‌ಪೋರ್ಟ್ ರಸ್ತೆಯಲ್ಲಿ ತನ್ನ ಹೊಸ ಸೆಂಚುರಿ ಮ್ಯಾಟ್ರೆಸ್ ಸ್ಲೀಪ್ ಸ್ಪೆಷಲಿಸ್ಟ್ ಅಂಗಡಿಯ ಅದ್ಧೂರಿ ಉದ್ಘಾಟನೆಯನ್ನು ಹೆಮ್ಮೆಯಿಂದ ಘೋಷಿಸಿತು.ಸೆಂಚುರಿ ಫೈಬರ್ ಪ್ಲೇಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬ್ರಾಂಡ್ ಮತ್ತು ಮಾರ್ಕೆಟಿಂಗ್‌ನ ಜನರಲ್ ಮ್ಯಾನೇಜರ್ ಶ್ರೀ ವಿಜಯ್ ಕುಮಾರ್ ಮಿಕ್ಕಿಲಿನೇನಿ ಮತ್ತು ಕೆಲವು ಗೌರವಾನ್ವಿತ ಅತಿಥಿಗಳು ಹೊಸ ಅಂಗಡಿಯನ್ನು ಉದ್ಘಾಟಿಸಿದರು. ಇನ್‌ಲ್ಯಾಂಡ್ ಆರ್ಕೇಡ್, ಏರ್‌ಪೋರ್ಟ್ ರಸ್ತೆ, ಮಂಗಳೂರು-575008 ನಲ್ಲಿರುವ ಈ ಹೊಸ ಅಂಗಡಿಯು ಗ್ರಾಹಕರಿಗೆ ವರ್ಧಿತ ಶಾಪಿಂಗ್ ಅನುಭವವನ್ನು ಒದಗಿಸುವ ಭರವಸೆ ನೀಡುತ್ತದೆ, ನಿದ್ರೆ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಸೆಂಚುರಿ ಮ್ಯಾಟ್ರೆಸ್‌ನ ವ್ಯಾಪಕ ಶ್ರೇಣಿಯ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಗ್ರಾಹಕರು ಅನುಭವಿಸುವ ಮತ್ತು ಅವರ ನಿದ್ರೆಯ ಪರಿಹಾರಗಳನ್ನು ಆಯ್ಕೆ ಮಾಡುವ ವಿಧಾನವನ್ನು ಪರಿವರ್ತಿಸುವ ಸೆಂಚುರಿ ಮ್ಯಾಟ್ರೆಸ್‌ನ ಧ್ಯೇಯದಲ್ಲಿ ಈ ಹೊಸ ವಿಶೇಷ ಚಿಲ್ಲರೆ ವ್ಯಾಪಾರ ತಾಣವು ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಸೆಂಚುರಿ ಮ್ಯಾಟ್ರೆಸ್‌ಸ್ಲೀಪ್ ಸ್ಪೆಷಲಿಸ್ಟ್ ಸ್ಟೋರ್ ಗ್ರಾಹಕರಿಗೆ ವಿವಿಧ ಹಾಸಿಗೆಗಳನ್ನು ಅನ್ವೇಷಿಸಲು ಮತ್ತು ಪರೀಕ್ಷಿಸಲು, ನಿದ್ರೆಯ ತಂತ್ರಜ್ಞಾನದಲ್ಲಿ ಇತ್ತೀಚಿನದನ್ನು ಅನುಭವಿಸಲು ಮತ್ತು ವೈಯಕ್ತಿಕಗೊಳಿಸಿದ ಸಹಾಯವನ್ನು ಪಡೆಯಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.ವಿಶೇಷ ಉಡಾವಣಾ ಕೊಡುಗೆಯಲ್ಲಿ ಅಂಗಡಿಯು 15% ರಿಯಾಯಿತಿ ಮತ್ತು ಎಲ್ಲಾ ಹಾಸಿಗೆಗಳ ಮೇಲೆ ಬೆಡ್‌ಶೀಟ್ ಮತ್ತು ದಿಂಬು ಸೆಟ್‌ನ ಮೌಲ್ಯದ ಖಚಿತ ಉಚಿತ ಉಡುಗೊರೆಗಳನ್ನು ನೀಡುತ್ತಿದೆ. ಹೊಸ ಅಂಗಡಿಯ ಉದ್ಘಾಟನೆಯಲ್ಲಿ ಮಾತನಾಡಿದ ಶ್ರೀ ವಿಜಯ್ ಕುಮಾರ್ ಮಿಕ್ಕಿಲಿನೇನಿ, “ನಮ್ಮ ಸಮುದಾಯದ ಯೋಗಕ್ಷೇಮಕ್ಕಾಗಿ ಬಲವಾದ ವಕೀಲರಾಗಿ, ಆರೋಗ್ಯಕರ, ಹೆಚ್ಚು ಉತ್ಪಾದಕ ಜೀವನಕ್ಕೆ ಗುಣಮಟ್ಟದ ನಿದ್ರೆ ಅತ್ಯಗತ್ಯ ಎಂದು ನಾನು ದೃಢವಾಗಿ ನಂಬುತ್ತೇನೆ. ಇಂದು ನಾನು ನೋಡಿದ ಉತ್ಪನ್ನಗಳ ಶ್ರೇಣಿಯು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸಮಗ್ರ ನಿದ್ರೆಯ ಪರಿಹಾರಗಳನ್ನು ನೀಡುವ ಬ್ರ್ಯಾಂಡ್‌ನ ಬದ್ಧತೆಯನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ. ಸೆಂಚುರಿ ಮ್ಯಾಟ್ರೆಸ್‌ಗಳು ಮಂಗಳೂರಿನ ಅನೇಕ ಕುಟುಂಬಗಳಿಗೆ ಜೀವನ ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತದೆ ಎಂದು ನನಗೆ ವಿಶ್ವಾಸವಿದೆ.”ಸೆಂಚುರಿ ಮ್ಯಾಟ್ರೆಸ್‌ಗಳ ನಿರ್ದೇಶಕರಾದ ಶ್ರೀ ಉತ್ತಮ್ ಮಲಾನಿ ತಮ್ಮ ಸಂತೋಷವನ್ನು ಹಂಚಿಕೊಂಡರು, “ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ನಮ್ಮ ಹೊಸ ಅಂಗಡಿಯನ್ನು ನಿದ್ರೆಯ ಉತ್ಸಾಹಿಗಳು ಮತ್ತು ಸೌಕರ್ಯವನ್ನು ಬಯಸುವವರಿಗೆ ನಿದ್ರೆಯ ವಿಶೇಷ ಅಂಗಡಿಯಾಗಿ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ, ಗ್ರಾಹಕರು ಹೇಗೆ ಅನುಭವಿಸುತ್ತಾರೆ ಮತ್ತು ಅವರ ನಿದ್ರೆಯ ಪರಿಹಾರಗಳನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಮರು ವ್ಯಾಖ್ಯಾನಿಸಲು. ಗುಣಮಟ್ಟ, ನಾವೀನ್ಯತೆ ಮತ್ತು ಸಾಟಿಯಿಲ್ಲದ ಸೌಕರ್ಯಕ್ಕೆ ನಮ್ಮ ಅಚಲ ಬದ್ಧತೆಯು ನಮ್ಮ ಬ್ರ್ಯಾಂಡ್‌ನ ಮೂಲಾಧಾರವಾಗಿದೆ. ಈ ಅಂಗಡಿಯನ್ನು ಪ್ರಾರಂಭಿಸುವುದರೊಂದಿಗೆ, ನಮ್ಮ ಪ್ರೀತಿಯ ಗ್ರಾಹಕರ ಜೀವನವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿರುವ ತಲ್ಲೀನಗೊಳಿಸುವ ಪ್ರಯಾಣವನ್ನು ನಾವು ರೂಪಿಸುತ್ತಿದ್ದೇವೆ. ಈ ಹೊಸ ಸ್ಥಳವು ಹಾಸಿಗೆ ಶಾಪಿಂಗ್ ಅನುಭವವನ್ನು ಆಕರ್ಷಿಸುವ ಭರವಸೆ ನೀಡುತ್ತದೆ, ತಂತ್ರಜ್ಞಾನದ ವಿಶಿಷ್ಟ ಸಮ್ಮಿಲನ, ತಜ್ಞರ ಮಾರ್ಗದರ್ಶನವನ್ನು ನೀಡುತ್ತದೆ ಮತ್ತು ಸಮಗ್ರ ಅನುಭವವನ್ನು ಒದಗಿಸುತ್ತದೆ, ಗ್ರಾಹಕರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಪರಿಪೂರ್ಣ ಹಾಸಿಗೆಯನ್ನು ಹುಡುಕಲು ಅನುವು ಮಾಡಿಕೊಡುತ್ತದೆ” ಎಂದು ಶ್ರೀ ಉತ್ತಮ್ ಮಲಾನಿ ಹೇಳಿದರು. ಮೂರು ಬಗೆಯ ಅಗತ್ಯತೆಗಳು ಮತ್ತು ಬಜೆಟ್‌ಗಳನ್ನು ಹೊಸ ಅನುಭವ ಅಂಗಡಿಯಲ್ಲಿ ಪೂರೈಸಲಾಗುವುದು, ಇದು ಹಾಸಿಗೆಗಳು ಮತ್ತು ದಿಂಬುಗಳ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಅವರ ಉತ್ಪನ್ನ ಶ್ರೇಣಿಯು ತಂಪಾದ ಮತ್ತು ಆರಾಮದಾಯಕವಾದ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ನವೀನ CU ಸೆನ್ಸ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸ ಅಂಗಡಿಯು ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಕುತ್ತಿಗೆ ದಿಂಬುಗಳಿಂದ ಹಿಡಿದು ಅವರ ಹಾಸಿಗೆಗಳಿಗೆ ಪೂರಕವಾಗಿ ನಿಖರವಾಗಿ ರಚಿಸಲಾದ ವಿವಿಧ ದಿಂಬುಗಳವರೆಗೆ ವ್ಯಾಪಕವಾದ ನಿದ್ರೆಯ ಪರಿಕರಗಳನ್ನು ಹೊಂದಿರುತ್ತದೆ. ಸೆಂಚುರಿ ಹಾಸಿಗೆಗಳು ಸೆಂಚುರಿ ಪ್ರೊಟೆಕ್ಟ್ ಭರವಸೆಯೊಂದಿಗೆ ಬರುತ್ತವೆ ಮತ್ತು CertiPUR-US ಪ್ರಮಾಣೀಕರಣವನ್ನು ಹೊಂದಿವೆ, ಉತ್ಪಾದನಾ ಪ್ರಕ್ರಿಯೆಯಲ್ಲಿ ಹಾನಿಕಾರಕ ರಾಸಾಯನಿಕಗಳ ಅನುಪಸ್ಥಿತಿಯನ್ನು ಗ್ರಾಹಕರಿಗೆ ಖಚಿತಪಡಿಸುತ್ತವೆ. ಬ್ರ್ಯಾಂಡ್‌ನ ಪ್ರೀಮಿಯಂ ಹಾಸಿಗೆಗಳು ಹೆಚ್ಚಿನ ಸಾಂದ್ರತೆಯ ಮೆಮೊರಿ ಫೋಮ್ ಮತ್ತು ಸುಧಾರಿತ ಕಾಯಿಲ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ, ಇದು ಐಷಾರಾಮಿ ಮತ್ತು ಬೆಂಬಲದ ಸಾರಾಂಶವನ್ನು ನೀಡುತ್ತದೆ.ಸೆಂಚುರಿ ಮ್ಯಾಟ್ರೆಸ್‌ಗಳು ಭಾರತದಾದ್ಯಂತ 4500+ ಔಟ್‌ಲೆಟ್‌ಗಳು ಮತ್ತು 450+ ವಿಶೇಷ ಬ್ರಾಂಡ್ ಅಂಗಡಿಗಳಿಂದ ಬಹು-ಬ್ರಾಂಡ್ ಡೀಲರ್‌ಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ.ಸೆಂಚುರಿ ಬಗ್ಗೆ:3 ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿರುವ ಪರಂಪರೆಯೊಂದಿಗೆ, ಭಾರತದ ಸ್ಲೀಪ್ ಸ್ಪೆಷಲಿಸ್ಟ್ ಎಂದು ಜನಪ್ರಿಯವಾಗಿರುವ ಸೆಂಚುರಿ ಮ್ಯಾಟ್ರೆಸ್, ಭಾರತದ ವೇಗವಾಗಿ ಬೆಳೆಯುತ್ತಿರುವ ಹಾಸಿಗೆ ಬ್ರಾಂಡ್ ಮತ್ತು ಭಾರತದಲ್ಲಿ ಸೌಕರ್ಯ ಮತ್ತು ಹಾಸಿಗೆ ಉದ್ಯಮದ ನಿಜವಾದ ಪ್ರವರ್ತಕವಾಗಿದೆ. ಹೈದರಾಬಾದ್‌ನಲ್ಲಿ ತನ್ನ ಬೇರುಗಳನ್ನು ಹೊಂದಿದೆ; ಸೆಂಚುರಿ ಬ್ರ್ಯಾಂಡ್ ನಿರಂತರವಾಗಿ ಹೊಸತನವನ್ನು ಕಂಡುಕೊಂಡಿದೆ ಮತ್ತು ಹಾಸಿಗೆ ಕ್ಷೇತ್ರದಲ್ಲಿ ತನ್ನನ್ನು ತಾನು ಮುಂಚೂಣಿಯಲ್ಲಿ ಸ್ಥಾಪಿಸಿಕೊಂಡಿದೆ, ಅದೇ ಸಮಯದಲ್ಲಿ ತನ್ನ ಉತ್ಪನ್ನ ಶ್ರೇಣಿ ಮತ್ತು ಭೌಗೋಳಿಕ ಹೆಜ್ಜೆಗುರುತನ್ನು ಘಾತೀಯವಾಗಿ ವಿಸ್ತರಿಸುತ್ತಿದೆ. ಇಂದು, ಬ್ರ್ಯಾಂಡ್ ಸ್ಪ್ರಿಂಗ್ ಹಾಸಿಗೆಗಳು, ಫೋಮ್ ಹಾಸಿಗೆಗಳು, ಕಾಯಿರ್ ಹಾಸಿಗೆಗಳು, ಮೆಮೊರಿ ಫೋಮ್ ಹಾಸಿಗೆಗಳು ಮತ್ತು ಮೂಳೆ ಹಾಸಿಗೆಗಳಂತಹ ವ್ಯಾಪಕ ಶ್ರೇಣಿಯ ನಿದ್ರೆ ಪರಿಹಾರಗಳನ್ನು ನೀಡುತ್ತದೆ.ಸೆಂಚುರಿ ಆನ್‌ಲೈನ್ ಗ್ರಾಹಕರಿಗೆ ‘ಸ್ಲೀಪೇಬಲ್ಸ್ ಬೈ ಸೆಂಚುರಿ’ ಎಂಬ ಬ್ರಾಂಡ್ ಹೆಸರಿನಲ್ಲಿ ಪ್ರತ್ಯೇಕ ಉತ್ಪನ್ನ ಶ್ರೇಣಿಯನ್ನು ಹೊಂದಿದೆ. ಇದರ ಹೊರತಾಗಿ, ಬೆಳೆಯುತ್ತಿರುವ ಮಗುವಿನ ದೇಹದ ಅಗತ್ಯತೆಗಳು ವಯಸ್ಕರಿಗಿಂತ ಭಿನ್ನವಾಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಂಡ ಸೆಂಚುರಿ, ಬೆಡ್ಡಿ ಬೈ ಸೆಂಚುರಿ ಎಂಬ ಬ್ರಾಂಡ್ ಹೆಸರಿನಲ್ಲಿ ವಿಶೇಷ ಬೇಬಿ ಹಾಸಿಗೆ ಸಂಗ್ರಹವನ್ನು ಪ್ರಾರಂಭಿಸಿತು. ಸೆಂಚುರಿ ಮ್ಯಾಟ್ರೆಸ್ಸ್ ಭಾರತದ ಮೊದಲ ISO-ಪ್ರಮಾಣೀಕೃತ ಹಾಸಿಗೆ ಬ್ರಾಂಡ್ ಆಗಿದೆ. ಸೆಂಚುರಿ ಮ್ಯಾಟ್ರೆಸ್, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಏಜೆನ್ಸಿಯಾದ ಸೆರ್ಟಿಪುರ್-ಯುಎಸ್‌ನ ಗುಣಮಟ್ಟದ ಮಾನದಂಡಗಳು ಮತ್ತು ಪರಿಸರ ಮಾನದಂಡಗಳನ್ನು ಅನುಸರಿಸಲು ಸೆರ್ಟಿಪುರ್-ಯುಎಸ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.ಸೆರ್ಟಿಪುರ್-ಯುಎಸ್ ಪ್ರಮಾಣೀಕರಣವನ್ನು ಪಡೆದ ಕೆಲವೇ ಭಾರತೀಯ ಬ್ರ್ಯಾಂಡ್‌ಗಳಲ್ಲಿ ಕಂಪನಿಯು ಒಂದಾಗಿದೆ. ಶ್ರೀ ಮಲಾನಿ ಫೋಮ್ಸ್, (ಸೆಂಚುರಿ ಗುಂಪಿನ ಭಾಗ) ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ. ಚಿತ್ರಗಳು – ಸತೀಶ್ ಕಾಪಿಕಾಡ್

Scroll to Top