ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

Rohan Corporation to Launch its New Residential Project ‘Rohan Nest’ at Babugudda, Attawar on March 24, 2025

Mangalore, March 22, 2025 – Rohan Corporation, a leading real estate developer in coastal Karnataka, is set to launch its latest residential project, Rohan Nest, with a groundbreaking ceremony on March 24, 2025, at 4:00 PM. The event will take place at the project site Attawar-Babugudda, Mangalore.Rohan Nest is a well planned residential development that promises to redefine urban living in Mangalore. The project features 58 thoughtfully designed 2 BHK apartments, spread across three floors, with each unit optimized for spatial efficiency and aesthetic appeal. The apartments, ranging from 695 to 715 square feet, are designed to cater to the needs of modern urban families, offering a perfect blend of comfort and functionality. The project boasts a range of premium amenities, including automatic passenger elevators, power backup, vitrified tile flooring, and surveillance cameras for enhanced security. Additionally, the development incorporates rainwater harvesting system and eco-friendly construction practices, aligning with Rohan Corporation’s commitment to sustainable living.Rohan Nest’s location in Attavar-Babugudda offers residents easy access to some of Mangalore’s most esteemed educational institutions, healthcare facilities, and recreational centers. The project is strategically positioned near landmarks such as KMC Hospital Attavar, Mangalore Central Railway Station, and D-Mart, making it an ideal choice for families and professionals alike.Rohan Corporation’s LegacyWith a legacy spanning over three decades, Rohan Corporation has established itself as a trusted name in the real estate sector. The company has successfully delivered numbers of projects across coastal Karnataka, consistently setting new benchmarks in quality and design. Rohan Nest is yet another testament to the company’s dedication to creating luxurious yet affordable living spaces that cater to the evolving needs of urban dwellers.For bookings and inquiries, please contact the Rohan Corporation sales office at +91 98454 90100 / Email: info@rohancorporation.in / Website: www.rohancorporation.in or visit their sales office at Rohan City, Bejai Main Road, Mangalore 575 004.

ಪ್ರಾದೇಶಿಕ ವಾರ್ತೆಗಳು

ವಿಕಸಿತ ಭಾರತ್ ಯೂತ್ ಪಾರ್ಲಿಮೆಂಟ್

ಮಂಗಳೂರು : ಕೇಂದ್ರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಸಂಘಟನ್, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿ.ವಿ. ಹಾಗೂ ಸೈಂಟ್ ಆಗ್ನೆಸ್ ಕಾಲೇಜು ವತಿಯಿಂದ ಎರಡು ದಿನಗಳ ವಿಕಸಿತ ಭಾರತ್ ಯೂತ್ ಪಾರ್ಲಿಮೆಂಟ್ ಶನಿವಾರ ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಆರಂಭಗೊಂಡಿತು.ಕಾರ್ಯಕ್ರಮ ಉದ್ಘಾಟಿಸಿದ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ವೆನಿಸ್ಸಾ ಮಾತನಾಡಿ ‘ ವಿದ್ಯಾರ್ಥಿಗಳು ದೇಶದ ಮುಂದಿನ ರೂವಾರಿಗಳು. ನಾಡಿನ ಸಮಗ್ರತೆ ಹಾಗೂ ಪರಂಪರೆಯನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಯುವ ಜನತೆಯ ಮೇಲಿದೆ..ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣದ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಗುರಿಯಾಗಬೇಕು ಎಂದರು.ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಲೋಕೇಶ್ ಕುಮಾರ್ ಅವರು ಯೂತ್ ಪಾರ್ಲಿಮೆಂಟ್ ಸ್ಪರ್ಧೆಯ ವಿವರ ನೀಡಿದರು.ಮಂಗಳೂರು ವಿ.ವಿ.ಯ ರಾಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ.ದಯಾನಂದ ನಾಯಕ್, ರಾಷ್ಟ್ರೀಯ ಸೇವಾ ಯೋಜನೆಯ ಡಾ.ಶೇಷಪ್ಪ ಅಮೀನ್.ಕೆ., ಸೈಂಟ್ ಆಗ್ನೆಸ್ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಡಾ.ಉದಯಕುಮಾರ್.ಬಿ., ನೆಹರು ಯುವ ಕೇಂದ್ರದ ಆಡಳಿತ ಸಹಾಯಕ ಜಗದೀಶ್. ಕೆ. ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.ಯೂತ್ ಪಾರ್ಲಿಮೆಂಟ್‌ನ ತೀರ್ಪುಗಾರರಾಗಿ ಪ್ರೊ.ದಯಾನಂದ ನಾಯಕ್, ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ,ಪುಷ್ಪರಾಜ್.ಬಿ.ಎನ್, ವಕೀಲ ನಿಶಾನ್.ಎನ್. ಮತ್ತು ರೂಪ ಧರ್ಮಯ್ಯ ಭಾಗವಹಿಸಿದ್ದರು. ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಯೂತ್ ಪಾರ್ಲಿಮೆಂಟ್‌ನಲ್ಲಿ ಪಾಲ್ಗೊಂಡು ‘ ಏಕ ದೇಶ-ಏಕ ಚುನಾವಣೆ’ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಿದರು.

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೊರೇಷನ್’ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ನ ಭೂಮಿಪೂಜೆ

ಮಂಗಳೂರು, ಮಾರ್ಚ್ 22, 2025 : ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್ ರೋಹನ್ ಕಾರ್ಪೊರೇಷನ್, ತನ್ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ ಇದರ ಭೂಮಿಪೂಜೆಯು ಮಾರ್ಚ್ 24, 2025, ಸಂಜೆ 4:00 ಗಂಟೆಗೆ ಮಂಗಳೂರಿನ ಅತ್ತಾವರ-ಬಾಬುಗುಡ್ಡ ಪ್ರದೇಶದಲ್ಲಿ ನಡೆಯಲಿದೆ. ರೋಹನ್ ನೆಸ್ಟ್:ರೋಹನ್ ನೆಸ್ಟ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಒಂದು ವಾಸಯೋಗ್ಯ ನಿವೇಶನವಾಗಿದೆ. ಈ ಪ್ರಾಜೆಕ್ಟ್ 58 ಉತ್ತಮವಾಗಿ ವಿನ್ಯಾಸಗೊಳಿಸಲಾದ 2 ಬಿ.ಎಚ್.ಕೆ. ಅಪಾರ್ಟ್’ಮೆಂಟ್’ಗಳನ್ನು ಒಳಗೊಂಡಿದೆ, ಇದು ಮೂರು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪ್ರತಿ ಘಟಕವು ಸ್ಥಳಾವಕಾಶ ಮತ್ತು ಸೊಗಸನ್ನು ಹೊಂದಿದೆ. 695 ರಿಂದ 715 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್’ಮೆಂಟ್’ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಇದು ಸೌಕರ್ಯ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ಹೊಂದಿದೆ.ಸ್ವಯಂಚಾಲಿತ ಲಿಫ್ಟ್’ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಮತ್ತು ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಮಳೆನೀರಿನ ಸಂಗ್ರಹಣಾ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ಪದ್ಧತಿಗಳನ್ನು ಒಳಗೊಂಡಿದೆ.ಅತ್ತಾವರ-ಬಾಬುಗುಡ್ಡದಲ್ಲಿರುವ ರೋಹನ್ ನೆಸ್ಟ್‌, ಮಂಗಳೂರಿನ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಮನರಂಜನಾ ಕೇಂದ್ರಗಳಿಗೆ ಸನಿಹದಲ್ಲಿದೆ. ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಮತ್ತು ಡಿ-ಮಾರ್ಟ್’ನಂತಹ ಪ್ರಮುಖ ಸ್ಥಳಗಳು ಹತ್ತಿರದಲ್ಲಿವೆ.ರೋಹನ್ ಕಾರ್ಪೊರೇಷನ್‌:ಮೂರು ದಶಕಗಳಿಗೂ ಹೆಚ್ಚು ಕಾಲದ ಪರಂಪರೆಯನ್ನು ಹೊಂದಿರುವ ರೋಹನ್ ಕಾರ್ಪೊರೇಷನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರನ್ನು ಗಳಿಸಿದೆ. ಕಂಪನಿಯು ಕರಾವಳಿ ಕರ್ನಾಟಕದಾದ್ಯಂತ ಹತ್ತು-ಹಲವು ಪ್ರಾಜೆಕ್ಟ್’ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಗುಣಮಟ್ಟ ಮತ್ತು ವಿನ್ಯಾಸಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಷನ್ ದೂರವಾಣಿ ಸಂಖ್ಯೆ: +91 98454 90100 ಅಥವಾ ಈಮೇಲ್: info@rohancorporation.in / ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ಮುಖ್ಯ ರಸ್ತೆ, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಆಫೀಸನ್ನು ಸಂಪರ್ಕಿಸಬಹುದಾಗಿದೆ.

ಪ್ರಾದೇಶಿಕ ವಾರ್ತೆಗಳು

ವಿಶ್ವ ಬಂಟ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು : ವಿಶ್ವ ಬಂಟ ಪ್ರತಿಷ್ಠಾನದಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ವಿತರಣಾ ಸಮಾರಂಭ ನಗರದ ಮೋತಿಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಒಟ್ಟು 165 ವಿದ್ಯಾರ್ಥಿಗಳಿಗೆ 36.70 ಲಕ್ಷ ರೂ.ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ನೀಡಲಾಯಿತು. ವಿದ್ಯಾರ್ಥಿ ದತ್ತಿ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 9 ವಿದ್ಯಾರ್ಥಿಗಳಿಗೆ 1.75 ಲಕ್ಷ ರೂ.ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಖಜಾಂಜಿ ಸಿಎ ಸುದೇಶ್ ಕುಮಾರ್ ರೈ.ಬಿ., ಯೋಜನಾ ನಿರ್ದೇಶಕ ಡಾ.ಸಂಜೀವ .ಬಿ.ರೈ, ಜೈರಾಜ್.ಬಿ.ರೈ, ರಾಮಕೃಷ್ಣ ಮಾಣಾ , ಬೂಡಿಯಾರ್ ರಾಧಾಕೃಷ್ಣ ರೈ, ಚಂದ್ರಶೇಖರ ಭಂಡಾರಿ, ಡಾ.ಪ್ರಶಾಂತ್ ಕುಮಾರ್ ರೈ, ಬಲರಾಜ್ ರೈ, ಜ್ಯೋತಿ ಆಳ್ವ, ಶಂಕರಿ ರೈ, ವರಲಕ್ಷ್ಮಿ ಮಲ್ಲಿ ಉಪಸ್ಥಿತರಿದ್ದರು.ವಿಶ್ವ ಬಂಟ ಪ್ರತಿಷ್ಠಾನ ಕಳೆದ 28 ವರ್ಷಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರ ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸಿದೆ. ವಿದ್ಯಾರ್ಥಿ ವೇತನದ ಜತೆಗೆ ಬಡವರಿಗೆ ವೈದ್ಯಕೀಯ ನೆರವು ನೀಡುತ್ತಿದ್ದು, ಒಟ್ಟು 5 ಲಕ್ಷ ರೂ.ಹಣವನ್ನು 21 ಮಂದಿಗೆ ಒದಗಿಸಲಾಗಿದೆ. ಪ್ರತಿಷ್ಠಾನವು ಪ್ರತಿ ವರ್ಷ ಓರ್ವ ಯಕ್ಷಗಾನ ಕಲಾವಿದನನ್ನು ಸನ್ಮಾನಿಸಿ 25,000 ರೂ. ನಗದು ಹಾಗೂ ಉತ್ತಮ ಕ್ರೀಡಾಳುಗಳನ್ನು ಗುರುತಿಸಿ ಗೌರವ ಧನ ನೀಡುತ್ತಾ ಬಂದಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿಈ ಸಂದರ್ಭ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್‌ ದುರ್ಬಳಕೆ ತಡೆಗೆ ಕ್ರಮ: ಪೊಲೀಸ್‌ ಕಮಿಷನರ್‌

ಮಂಗಳೂರು: ಪತ್ರಕರ್ತರ ನಕಲಿ ಐಡಿ ಕಾರ್ಡ್‌ ದುರ್ಬಳಕೆ ಮಾಡುವ ಹಾಗೂ ಮೀಡಿಯಾ ನಕಲಿ ಸ್ಟಿಕ್ಕರ್‌ ಅಳವಡಿಸಿಕೊಂಡಿರುವ ವಾಹನಗಳನ್ನು ಪತ್ತೆ ಹಚ್ಚುವಂತೆ ಸಂಚಾರಿ ಪೊಲೀಸರಿಗೆ ಪೊಲೀಸ್‌ ಕಮಿಷನರ್‌ ಅನುಪಮ್‌ ಆಗರ್ವಾಲ್ ಸೂಚಿಸಿದ್ದಾರೆ.ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ, ಮೀಡಿಯಾ, ಪ್ರೆಸ್ ಸ್ಟಿಕರ್ ದುರ್ಬಳಕೆ ಗೆ ಕಡಿವಾಣ ಹಾಕುವಂತೆ ಹಾಗು ಕರ್ತವ್ಯ ನಿರ್ವಹಿಸುವ ಸಂದರ್ಭ ಪತ್ರಕರ್ತರಿಗೆ ಭದ್ರತೆ ಖಾತ್ರಿ ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಐಡಿ ಕಾರ್ಡ್ ದುರ್ಬಳಕೆ ಪ್ರಕರಣಗಳು ಕಂಡು ಬರುತ್ತಿವೆ. ಗುರುವಾರ ರಾತ್ರಿ ಕೊಡಿಯಾಲ್ ಬೈಲ್ ಬಳಿ ನಡೆದ ಸರಣಿ ಅಪಘಾತದಲ್ಲಿ ಕಾರು ಒಂದರಲ್ಲಿ ಮಾಧ್ಯಮ ಹೆಸರು ದುರ್ಬಳಕೆ ಮಾಡಿ ಸ್ಥಳದಲ್ಲಿ ನಕಲಿ ಐ ಡಿ ಕಾರ್ಡ್ ಪತ್ತೆ ಯಾಗಿದೆ. ಮಾಧ್ಯಮ ಕಾರ್ಡ್ ಗಳ ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಲವಾರು ವಾಹನಗಳಲ್ಲಿ ಮೀಡಿಯಾ ಹಾಗೂ ಪ್ರೆಸ್ ಸ್ಟಿಕರ್ ಬಳಕೆ ಕಂಡು ಬರುತ್ತಿದೆ. ಇಂತಹ ಮಾಧ್ಯಮ ಸ್ಟಿಕರ್ ಬಳಕೆ ಮಾಡಿ ಕಾನೂನು ಬಾಹಿರ ಕೃತ್ಯ ಗಳು ನಡೆಯುವ ಸಾಧ್ಯತೆ ಇದೆ. ಇಂತಹ ವಾಹನಗಳ ತಪಾಸಣೆ ನಡೆಸಬೇಕು. ಪತ್ರಕರ್ತರು ನಿರ್ಭೀತಿಯಿಂದ, ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ಭದ್ರತೆ ಖಾತ್ರಿಪಡಿಸಬೇಕು ಎಂದು ಸಂಘ ಮನವಿ ಮಾಡಿತ್ತು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್‌ ಕ್ಲಬ್‌ ಉಪಾಧ್ಯಕ್ಷ ಮುಹಮ್ಮದ್‌ ಆರೀಫ್‌ ಪಡುಬಿದ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಖಪಾಲ್‌ ಪೊಳಲಿ, ರಾಜೇಶ್‌ ದಡ್ಡಂಗಡಿ, ಸದಸ್ಯರಾದ ಪ್ರಸನ್ನ ಪೂಜಾರಿ, ಶಶಿಕಾಂತ್‌ ಜೆ., ಸಂದೀಪ್‌ ಕುಮಾರ್‌ ಇದ್ದರು.

ಪ್ರಾದೇಶಿಕ ವಾರ್ತೆಗಳು

ತುಳುವೆರೆ ಆಯಾನೊ ಕೂಟ ಕುಡ್ಲ ಅಧ್ಯಕ್ಷರಾಗಿ ಶಮಿನ ಆಳ್ವ ಆಯ್ಕೆ

ಮಂಗಳೂರು : ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ತುಳುವೆರೆ ಆಯಾನೊ ಕೂಟ ಕುಡ್ಲ ಇದರ ಮಹಾಸಭೆಯು ಇತ್ತೀಚೆಗೆ ಸ್ವರೂಪ ಅಧ್ಯಯನ ಕೇಂದ್ರ ಕೋಡಿಯಾಲ್ ಬೈಲ್ ಇಲ್ಲಿ ನಡೆಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶಮಿನ ಆಳ್ವ ಮರು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಭೂಷಣ್ ಕುಲಾಲ್, ಖಜಾಂಜಿಯಾಗಿ ಅಮೂಲ್ಯ ಶೆಟ್ಟಿ ಇವರು ಆಯ್ಕೆಯಾದರು. ಅಂತೆಯೇ ಉಪಾಧ್ಯಕ್ಷರಾಗಿ ಗೋಪಾಡ್ಕರ್, ಹರಿಪ್ರಸಾದ್ ರೈ, ರಾಜೇಶ್ ಅಮಿನ್ , ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ರೋಹಿಣಿ ಶೆಟ್ಟಿ, ಶ್ರೀಮತಿ ಭಾರತೀ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಆಳ್ವ, ರಾಜೇಶ್ ಹೆಗ್ಡೆ ಪೊಳಲಿ, ಕುಸುಮ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪ್ರೆಸ್ ಕ್ಲಬ್ ಅತಿಥಿ ಡಾ. ಆರ್.ಕೆ.ನಾಯರ್ ಸನ್ಮಾನ ಸ್ವೀಕರಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಮಂಗಳೂರು- ಆರಂಭದಲ್ಲಿ ಗಿಡಗಳನ್ನು ನೆಡಲು ಶುರು ಮಾಡಿದಾಗ ಜನರು ನನ್ನನ್ನು ಹುಚ್ಚನೆಂದು ಕರೆಯುತ್ತಿದ್ದರು. ಆದರೆ, ಇದೀಗ 12 ರಾಜ್ಯಗಳಲ್ಲಿ 121 ಕಾಡುಗಳನ್ನು ಬೆಳೆಸಿದ್ದೇನೆ. 122ನೇ ಕಾಡನ್ನು ರಾಜಸ್ತಾನದಲ್ಲಿ ಆರಂಭಿಸಿರುವುದಾಗಿ ಹೆಸರಾಂತ ಪರಿಸರವಾದಿ, ಗ್ರೀನ್‌ ಹೀರೋ ಆಫ್‌ ಇಂಡಿಯಾ ಡಾ.ಆರ್‌.ಕೆ. ನಾಯರ್‌ ಹೇಳಿದ್ದಾರೆ.ಮಂಗಳೂರು ಪ್ರೆಸ್‌ ಕ್ಲಬ್‌ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪ್ರೆಸ್‌ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಗುಜರಾತ್‌ನ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಸಣ್ಣ ಕಾಡು ಬೆಳೆಸಿ ನೋಡಿದೆ. ಇದು ಅತ್ಯಂತ ಯಶಸ್ವಿಯಾಗಿದ್ದು, ಬೇರೆ ಕಡೆಗಳ ಇಂಡಸ್ಟ್ರಿಯಲ್‌ ಎಸ್ಟೇಟ್‌ಗಳಿಂದಲೂ ಇದೇ ರೀತಿಯ ಕಾಡು ಬೆಳೆಸಲು ಬೇಡಿಕೆ ಬರತೊಡಗಿತು. ಇದಾದ ಬಳಿಕ ಮಹಾರಾಷ್ಟ್ರದ ಕೆಮಿಕಲ್‌ ಡಂಪಿಂಗ್‌ ಯಾರ್ಡ್‌ನಲ್ಲಿ ಗಿಡಗಳನ್ನು ನೆಡುತ್ತಾ, ಜಗತ್ತಿನ ಅತಿ ದೊಡ್ಡ ಮಿಯಾವಕಿ ಕಾಡು ಸೃಷ್ಟಿಸಿದೆ ಎಂದರು. ಗುಜರಾತ್‌ನಲ್ಲಿ ಪರ್ವತದ ಮೇಲೆ ಕಾಡು ಬೆಳೆಯಲು ಸಾಧ್ಯವೇ ಇಲ್ಲ ಎಂಬಂಥ ಜಾಗದಲ್ಲೂ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಉದ್ಘಾಟನೆ ನೆರವೇರಿಸಿದಾಗ ಅಲ್ಲಿನ ಗಿಡಗಳು 18 ಅಡಿಗೂ ಹೆಚ್ಚು ಬೆಳೆದು ದಟ್ಟ ಕಾಡಾಗಿತ್ತು. ಈ ಸ್ಮೃತಿ ವನಕ್ಕೆ ಸ್ವತಃ ರಾಷ್ಟ್ರಪತಿಗಳೇ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಡಾ.ಆರ್‌.ಕೆ. ನಾಯರ್‌ ಹೇಳಿದರು. ಸುಳ್ಯದಿಂದ ರಾಷ್ಟ್ರ ಮಟ್ಟಕ್ಕೆ:ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. 4ನೇ ವಯಸ್ಸಿನಲ್ಲೇ ನಮ್ಮ ಕುಟುಂಬ ಸುಳ್ಯಕ್ಕೆ ಬಂದು ಅಲ್ಲಿನ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತು. 12ನೇ ತರಗತಿ ಫೇಲಾದ ಬಳಿಕ ಗೆಳೆಯನೊಂದಿಗೆ ಮುಂಬೈಗೆ ತೆರಳಿ ಅಲ್ಲಿ ಮೆಡಿಕಲ್‌ ಅಂಗಡಿಯಲ್ಲಿ ಸೇಲ್ಸ್‌ ಮ್ಯಾನ್‌, ಹೊಟೇಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದೆ. ಬಳಿಕ ಗಾರ್ಮೆಂಟ್‌ನಲ್ಲಿ ಲೇಯರಿಂಗ್‌ ಕೆಲಸ ಶುರುಮಾಡಿ ಪ್ರೊಡಕ್ಷನ್‌ ಮ್ಯಾನೇಜರ್‌ ಹಂತಕ್ಕೆ ತಲುಪಿದೆ. ಅದಾದ ನಂತರ ಗುಜರಾತ್‌ನಲ್ಲಿ ಫ್ಯಾಕ್ಟರಿ ಮ್ಯಾನೇಜರ್‌ ಆಗಿ 10 ವರ್ಷ ಕೆಲಸ ಮಾಡಿ, ಸ್ವಂತ ಫ್ಯಾಕ್ಟರಿ ಶುರು ಮಾಡಿದೆ. ಸೌಪರ್ಣಿಕಾ ಎಕ್ಸ್‌ಪೋರ್ಟ್ಸ್‌ ಪ್ರೈ. ಲಿಮಿಟೆಡ್‌ ಈಗಲೂ ನಡೆಯುತ್ತಿದೆ. ಈ ನಡುವೆ ನನ್ನ ಎದುರಲ್ಲೇ ಮರವೊಂದು ಕಡಿದು ಬಿದ್ದಾಗ ಹಕ್ಕಿಗಳ ಆರ್ತನಾದ ಕೇಳಿ ತಳಮಳಗೊಂಡು ಕಾಡು ನೆಟ್ಟು ಬೆಳೆಸುವ ನಿರ್ಧಾರ ಮಾಡಿದೆ ಎಂದು ಆ ದಿನಗಳನ್ನು ಸ್ಮರಿಸಿದರು.ತುಳುವಿನಲ್ಲಿ ಪ್ರಾರ್ಥನೆ:ಪ್ರತಿಬಾರಿ ಗಿಡ ನೆಡಲು ಆರಂಭಿಸುವಾಗ ತುಳುವಿನಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದಿದ್ದೇನೆ. ನಾನು ನೆಟ್ಟು ಬೆಳೆಸಿದ ಕಾಡಿನಲ್ಲಿ ನಡೆಯುವಾಗ ಅಲ್ಲಿನ ಪಕ್ಷಿ, ಪ್ರಾಣಿ ಪ್ರಪಂಚವನ್ನು ನೋಡುವಾಗ ಸಾರ್ಥಕ ಭಾವ ಸಿಗುತ್ತದೆ. ಕಾಡಿನಲ್ಲಿನ ಮರಗಳು, ಪಕ್ಷಿಗಳ ಜತೆಗೂ ನಾನು ಮಾತುಕತೆ ನಡೆಸುತ್ತೇನೆ. ನಾನು ಹೋದಾಗಲೆಲ್ಲ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸ್ವಾಗತಿಸುತ್ತವೆ ಎಂದು ಡಾ.ನಾಯರ್‌ ಹರ್ಷ ವ್ಯಕ್ತಪಡಿಸಿದರು.ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ, ನಾಯಕ್‌ ಇಂದಾಜೆ,ಇಬ್ರಾಹಿಂ ಅಡ್ಕಸ್ಥಳ,ಪುಷ್ಪರಾಜ್ ಶೆಟ್ಟಿ ಬಿ.ಎನ್.,ಭಾಸ್ಕರ ರೈ ಕಟ್ಟ ಇದ್ದರು. ಆರ್‌.ಸಿ. ಭಟ್‌ ನಿರೂಪಿಸಿದರು.ಪಾದರಕ್ಷೆ ಹಾಕಲ್ಲ, ಮುಟ್ಟಾಳೆ ತಪ್ಪಿಸಿಲ್ಲ.ಕಳೆದ 19 ವರ್ಷಗಳಿಂದ ಪಾದರಕ್ಷೆಯನ್ನೇ ಹಾಕಿಲ್ಲ. ಏಳ‍ೆಂಟು ವರ್ಷಗಳಿಗೂ ಅಧಿಕ ಕಾಲದಿಂದ ತಲೆ ಮೇಲೆ ಅಡಕೆ ಹಾ‍ಳೆಯ ಮುಟ್ಟಾಳೆ ಧರಿಸುತ್ತಿದ್ದೇನೆ. ಮುಂಚೆ ಪ್ಯಾಂಟ್‌, ಶರ್ಟ್‌ ಧರಿಸುತ್ತಿದ್ದವನಿಗೆ ಈಗ ಪಂಚೆಯೇ ಪ್ರಿಯವಾಗಿದೆ. ಇದನ್ನೇ ಹಾಕಿಕೊಂಡು ಎಲ್ಲ ಏರ್‌ಪೋರ್ಟ್‌ಗಳಿಗೂ, ಎಲ್ಲ ಬಗೆಯ ವಿಮಾನಗಳಲ್ಲೂ ಹೋಗಿ ಬಂದಿದ್ದೇನೆ. ಈ ಭೂಮಿ ಮೇಲೆ ನಾವ್ಯಾರೂ ಶಾಶ್ವತ ಅಲ್ಲ. ನಮ್ಮ ಕೈಯಲ್ಲಿ ಪ್ರಕೃತಿ ಸಂರಕ್ಷಣೆ ಮಾಡಲು ಸಾಧ್ಯವಾಗದೆ ಇದ್ದರೂ ಪ್ರಕೃತಿಗೆ ಹಾಳು ಮಾಡುವ ಕೆಲಸ ಮಾತ್ರ ಮಾಡಬಾರದು ಎಂದು ಡಾ.ನಾಯರ್‌ ಮನವಿ ಮಾಡಿದ್ದಾರೆ.ಚಿತ್ರಗಳು – ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಇಂಜಿನೀಯರ್ ನಾಗೇಂದ್ರ ಅವರಿಗೆ ಡಾ| ರಾಜಕುಮಾರ್ ರವರ ಮಗಳಾದ ಪೂರ್ಣಿಮಾ ರಾಜ್ ಕುಮಾರ್ ರಿಂದ ಅದ್ದೂರಿ ಸನ್ಮಾನ

ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ನಗರದ ಟಾನ್ ಹಾಲ್ ನಲ್ಲಿ ಮಂಗಳೂರಿನ ದೊಡ್ಡ ಮನೆ ಅಪ್ಪು ಯುವ ಸೇನೆ ವತಿಯಿಂದ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂಧರ್ಭದಲ್ಲಿ ಸಾಧಕರಿಗಾಗಿ ಪ್ರತಿ ವರ್ಷ ಸನ್ಮಾನ ನೀಡುವ ನಿಟ್ಟಿನಲ್ಲಿ ಈ ಬಾರಿ ಇಂಜಿನಿಯರ್ ನಾಗೇಂದ್ರ ಅವರ ಹಲವು ಕ್ಷೇತ್ರದ ಸಾಧನೆಯನ್ನು ಗುರುತಿಸಿ, ಪೂರ್ಣಿಮಾ ರಾಜಕುಮಾರ್,ನಟಿ ಧನ್ಯ ರಾಮ್ ಕುಮಾರ್, ಸಾಹಿತಿ ಪ್ರೇಮಕವಿ ಕೆ.ಕಲ್ಯಾಣ್,ನಟ ಹಾಗೂ ನಿರ್ಮಾಪಕ ಡಿ ಸತ್ಯಪ್ರಕಾಶ್, ರಾಜ್ಯಪ್ರಶಸ್ತಿ ವಿಜೇತ ರಮೇಶಚಂದ್ರ ಸಂಘಟಕ ರಾದ ಜನಾರ್ಧನ್ ಬಾಬು,ಕೆ. ಉಮೇಶ್ ಹಾಗೂ ಚಾನೆಲ್ 9 ರ ಮಾಲಕರಾದ ಪ್ರಸಾದ್ ಸುವರ್ಣ ಇವರುಗಳಿಂದ ಅದ್ದೂರಿಯಾಗಿ ಗೌರವ ಸನ್ಮಾನ ಪಡೆದಿರುತ್ತಾರೆ. ಇವರ ಸಾಧನೆಗಳನ್ನು ವಿಡಿಯೋ ಮೂಲಕ ಎಲ್ ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳನ್ನು ಕೂಡ ಏಪ೯ಡಿಸಗಿತ್ತು ಮುಖ್ಯವಾಗಿ ಸಂಗೀತ ಸ್ಪರ್ಧೆ ಚಿತ್ರಕಲೆ, ರಂಗೋಲಿ, ಚೆಸ್ ಹಾಗೂ ಆದರ್ಶ ದಂಪತಿಗಳು ಸ್ಪರ್ಧೆಯನ್ನು ಮತ್ತು ರಕ್ತದಾನ ನೇತ್ರದಾನ ಶಿಬಿರ, ಮತ್ತು ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು

ಪ್ರಾದೇಶಿಕ ವಾರ್ತೆಗಳು

ಹೊಸಬೆಟ್ಟಿನಲ್ಲಿ ಶಾರದಾ ಮಾಸದ ಕೂಟತಾಳಮದ್ದಳೆಯ ಗತಕಾಲದ ಇತಿಹಾಸ ಅನಾವರಣ

ಮಂಗಳೂರು: ‘ಯಕ್ಷಗಾನ ತಾಳ ಮುದ್ದಳೆ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತಿದ್ದ ಕಾಲವೊಂದಿತ್ತು. ಈಗಿನ ಯುವ ಸಮುದಾಯಕ್ಕೆ ಅದರ ಕಲ್ಪನೆಯೂ ಇರಲಾರದು. ಆದರೆ ವಿನಯ ಆಚಾರ್ಯರ ನೇತೃತ್ವದಲ್ಲಿ ನಡೆದ ವಿಶಿಷ್ಟ ಪರಿಕಲ್ಪನೆಯ ಶಾರದಾ ಮಾಸದ ಕೂಟವು ತಾಳಮದ್ದಳೆಯ ಗತಕಾಲದ ಇತಿಹಾಸವು ಮರುಕಳಿಸುವಂತೆ ಮಾಡಿದೆ’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ ಸುರತ್ಕಲ್ ಸಮೀಪ ಹೊಸಬೆಟ್ಟು ಮಾರುತಿ ಬಡಾವಣೆಯ ಶಾರದಾ ಮಂದಿರದಲ್ಲಿ ಇಡೀ ರಾತ್ರಿ ನಡೆದ ಶಾರದಾ ಮಾಸದ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷಗಾನ ಹಿಮ್ಮೇಳ ವಾದನಗಳ ನುಡಿತದೊಂದಿಗೆ ಜರಗಿದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹೊಸಬೆಟ್ಟು ಗುರುರಾಜ ಆಚಾರ್ಯ ಜಾಗಟೆ ಬಾರಿಸುವುದರ ಮೂಲಕ ನೆರವೇರಿಸಿದರು. ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ, ಕರ್ಣಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ ಕುಳಾಯಿ, ಉಜ್ವಲ್ ಎಂ. ಕೆ. ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದ ಸಂಘಟಕರಾದ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ ನಿರೂಪಿಸಿದರು. ದಕ್ಷ ಯಜ್ಞ :ಉದ್ಘಾಟನೆ ಬಳಿಕ ಜರಗಿದ ಮೊದಲ ತಾಳಮದ್ದಳೆ ‘ದಕ್ಷಯಜ್ಞ’ ಪ್ರಸಂಗದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ (ಈಶ್ವರ), ಉಮೇಶ ನೀಲಾವರ (ದೇವೇಂದ್ರ), ಮನೋಹರ ಕುಂದರ್ (ದಕ್ಷ), ಸುಬ್ರಹ್ಮಣ್ಯ ಬೈಪಾಡಿತ್ತಾಯ (ಬ್ರಾಹ್ಮಣ), ಸುಮಂಗಳಾ ರತ್ನಾಕರ (ದಾಕ್ಷಾಯಿಣಿ), ಗಾಯತ್ರಿ ಬಿ.ಎಸ್. (ನಾರದ), ನಳಿನಿ ಮೋಹನ್ (ವೀರಭದ್ರ) ಅರ್ಥಧಾರಿಗಳಾಗಿದ್ದರು.ವೀರಮಣಿ ಕಾಳಗ:ಎರಡನೇ ಪ್ರಸಂಗ ‘ವೀರಮಣಿ ಕಾಳಗ’. ಶ್ರೀಧರ ಎಸ್.ಪಿ. (ಶತ್ರುಘ್ನ), ಗೋಪಾಲಕೃಷ್ಣ ಅನಂತಾಡಿ (ಹನೂಮಂತ), ಪ್ರಶಾಂತ ಕುಮಾರ (ವೀರಮಣಿ), ಜಯರಾಮ ದೇವಸ್ಯ (ಈಶ್ವರ), ರವಿಕುಮಾರ್ ಬಿ. (ಶ್ರೀರಾಮ) ಕಲಾವಿದರಾಗಿದ್ದರು. ಶಾಂಭವಿ ವಿಜಯ:ಬೆಳಗ್ಗಿನ ಜಾವ ನಡೆದ ‘ಶಾಂಭವಿ ವಿಜಯ’ ಯಕ್ಷಗಾನ ಕೂಟದಲ್ಲಿ ವಿನೋದ ಆಚಾರ್ಯ (ದೆವೇಂದ್ರ), ಮನೋಹರ ಕುಂದರ್ (ಶುಂಭ), ಚಂದ್ರಶೇಖರ ಕೊಡಿಪಾಡಿ (ಶಾಂಭವಿ), ಸುಬ್ರಮಣ್ಯ ಬೈಪಾಡಿತ್ತಾಯ (ಸುಗ್ರೀವ), ಉಮೇಶ ನೀಲಾವರ (ಧೂಮ್ರಾಕ್ಷ), ವಿನಯ ಆಚಾರ್ಯ ಹೊಸಬೆಟ್ಟು (ರಕ್ತಬೀಜ) ಪಾತ್ರಧಾರಿಗಳಾಗಿ ಭಾಗವಹಿಸಿದರು.ರಾತ್ರಿ ಗಂ.9.30 ಕ್ಕೆ ಆರಂಭವಾದ ತಾಳಮದ್ದಳೆ ಕೂಟದಲ್ಲಿ ಶಶಿಧರ ರಾವ್, ರಾಮ ಹೊಳ್ಳ, ಗಣೇಶ ಮಯ್ಯ, ವಾಸುದೇವ ಮಯ್ಯ, ಮಾಧವ ಮಯ್ಯ, ಎಸ್. ಎನ್. ಭಟ್ ಬಾಯಾರು, ವೇದವ್ಯಾಸ ರಾವ್, ಲಕ್ಷ್ಮೀಶ್ ಉಪಾಧ್ಯಾಯ, ರಾಘವೇಂದ್ರ ಹೆಜಮಾಡಿ, ಹರೀಶ ಹೆಬ್ಬಾರ್, ಸ್ಕಂದ ಮಯ್ಯ ಮೊದಲಾದವರು ಮರುದಿನ ಮುಂಜಾನೆ ವರೆಗೆ ಸಮಗ್ರ ಹಿಮ್ಮೇಳದಲ್ಲಿದ್ದು ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

Rachana Awards 2023-25 -Nominations/Recommendations invited

RACHANA – Catholic Chamber of Commerce & Industry, established in 1998, has instituted five ‘Rachana Awards’ to honor outstanding individual Catholics originating from the Mangalore Diocese who have excelled in their respective fields.The five awards will be presented in the following fields:1.Rachana Agriculturist2.Rachana Entrepreneur3.Rachana Professional (Doctor, Advocate, Engineer, Chartered Accountant)4.Rachana NRI Entrepreneur/Professional5.Rachana Outstanding Woman (Entrepreneur/Professional/Agriculturist).Each award consists of a Title, a Citation, a Memento, and a Public Honour.Applications/Nominations/Recommendations, along with a photograph,should reach the office on or before 31.05.2025, to be addressed to: The President, RACHANA, First Floor, Pio Mall, Jail Road, Mangalore 575 004. Email: rachanamangalore@gmail.comA panel of 25 jury members will scrutinize the Nominations/Recommendations and select the most deserving candidates.The ‘RACHANA’ award ceremony will be held on Sunday, October 5, 2025 at6.00 pm at Milagres Jubilee Hall, Mangalore, in the presence of dignitaries and eminent personalities, and will be presided over by Most Rev. Dr. Peter Paul Saldanha, Bishop of Mangalore.Further clarifications regarding the awards may be obtained by contacting ‘RACHANA’ office between 10:00 am and 4:00 pm at Phone numbers: 83106 42093 / 99720 17484.-John B. Monteiro, President, Rachana, MangaloreVijay V. Lobo, Secretary, Rachana, Mangalore

Scroll to Top