ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪತ್ರಕ್ಕೆ ಸ್ಪಂದಿಸಿ ದಕ್ಷಿಣ ಕನ್ನಡದಲ್ಲಿನ ರೈಲ್ವೆ ಸಮಸ್ಯೆಗಳ ಕುರಿತು ಸಭೆ ನಡೆಸಲು ಒಪ್ಪಿಗೆ ನೀಡಿದ ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ

ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಪರವಾಗಿ ಮತ್ತು ಸಾಮಾನ್ಯ ನಾಗರಿಕರ ಪರವಾಗಿ ಸಂಸದರು ಕೋರಿದ ಮನವಿ ಮೇರೆಗೆ, ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ ಅವರು ದಿನಾಂಕ 17.07.2024 ರಂದು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ.ಬೆಳಿಗ್ಗೆ 09.00 ರಿಂದ 09.45 ರ ವರೆಗೆ ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದ ವೀಕ್ಷಣ, 10.00 ರಿಂದ 10.45 ರ ವರೆಗೆ ಮಂಗಳೂರು ಜಂಕ್ಷನ್ ರೇಲ್ವೆ ನಿಲ್ದಾಣದ ವೀಕ್ಷಣೆ ಹಾಗೂ 11.00 ರಿಂದ ಮಧ್ಯಾಹ್ನ 02.00 ರ ವರೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಮಂಗಳೂರು ವ್ಯಾಪ್ತಿಯ ರೇಲ್ವೆ ವಿವಿಧ ಬೇಡಿಕೆಗಳು, ಸಮಸ್ಯೆಗಳು ಹಾಗೂ ಅಭಿವೃದ್ಧಿಯ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ.ವಿಶೇಷವಾಗಿ ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯ ವಿಲೀನ, ಈ ವಿಲೀನದಿಂದ ರೈಲ್ವೆ ಮೂಲಸೌಕರ್ಯಗಳ ಸುಧಾರಣೆ ಮತ್ತು ಪ್ರಯಾಣಿಕರ ಅನುಕೂಲ ಸುಗಮವಾಗಲಿದೆ. ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಉನ್ನತೀಕರಣ: ಶಿರಾಡಿ ಘಾಟ್ ಭಾಗದ ಕಾರ್ಯಯೋಜನಾ ಅಧ್ಯಯನ ಮತ್ತು ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಭಾಗದ ಸಾಮರ್ಥ್ಯ ವೃದ್ಧಿಯ ಪ್ರಸ್ತಾಪಗಳ ಕುರಿತು ಕರಾವಳಿ ಭಾಗದ ಶಾಸಕರು, ಜನಪ್ರತಿನಿಧಿಗಳು, ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚೆ ನಡೆಯಲಿದೆ.ಈ ಸಭೆಯು ದಕ್ಷಿಣ ಕನ್ನಡದ ರೈಲ್ವೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.ಈ ಮಹತ್ವದ ಸಭೆಯು ದಕ್ಷಿಣ ಕನ್ನಡದ ರೈಲು ಸೇವೆಗಳ ಸುಧಾರಣೆ ಮತ್ತು ಭವಿಷ್ಯದ ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ.

ಪ್ರಾದೇಶಿಕ ವಾರ್ತೆಗಳು

ಜುಲೈ 14 ರಂದು ಚೆನ್ನೈ ಯಲ್ಲಿ ವಿಭಾ ಶ್ರೀನಿವಾಸ್ ನಾಯಕ್ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ

ಮಂಗಳೂರು, ಜುಲೈ 12,ಚೆನ್ನೈ ನಗರದ ಸಂಯುಕ್ತ ಗೌಡ ಸಾರಸ್ವತ ಸಭಾ ವತಿಯಿಂದ ಶ್ರೀ ಜೆ. ಎಸ್. ಪ್ರಭು ಹಾಗೂ ಶ್ರೀಮತಿ ರಮಾಬಾಯಿ ಪ್ರಭು ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಜುಲೈ 14 ಭಾನುವಾರ ದಂದು ಸಂಜೆ 6 ಗಂಟೆಯಿಂದ 7.45 ರ ವರೆಗೆ ಚೆನ್ನೈ ಟಿ ನಗರದ ಮ್ಯೂಸಿಕ್ ಹಾಲ್ ನಲ್ಲಿ ನಡೆಯಲಿದೆ.ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್ ನಾಯಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಿರಸಿಯ ಭರತ್ ಹೆಗ್ಡೆ ಹಾರ್ಮೋನಿಯಂ ಹಾಗೂ ಮೂಡಬಿದಿರೆಯ ವಿಗ್ನೇಶ್ ಪ್ರಭು ತಬಲ ದಲ್ಲಿ ಸಾಥ್ ನೀಡಲಿದ್ದಾರೆ.ಸಂಯುಕ್ತ ಗೌಡ ಸಾರಸ್ವತ ಸಭಾ ಅಧ್ಯಕ್ಷ ಡಾ. ಎಸ್. ದಿನೇಶ್ ನಾಯಕ್ ಅವರು ಸಂಗೀತ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಂದ ಬೃಹತ್ ಹಲಸು ಹಬ್ಬ ಹಾಗೂ ಆಹಾರೋತ್ಪನಗಳ ಮಹಾಮೇಳದ ಪ್ರಚಾರ ಪತ್ರ ಬಿಡುಗಡೆ

ಮಂಗಳೂರು :ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಗಸ್ಟ್ 3,4 ರಂದು ಏರ್ಪಡಿಸಲಾದ ಬಂಟ್ವಾಳ ಬೃಹತ್ ಹಲಸು ಹಬ್ಬ-ಹಣ್ಣುಗಳ ವಿವಿಧ ಆಹಾರೋತ್ಪನ್ನಗಳ ಮಹಾಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟದ ಪ್ರಚಾರ ಪತ್ರವನ್ನು ರಾಜ್ಯ ಸಭಾ‌ ಸದಸ್ಯರಾದ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನೇಶನಲ್ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮದ‌ ಅಧ್ಯಕ್ಷ ಆದಿರಾಜ ಜೈನ್ ಮೇಳದ ಬಗ್ಗೆ ಪ್ರಸ್ತಾವನೆ ಗೈದರು. ಪದ್ಮಶೇಖರ ಜೈನ್, ಭರತ್ ಕುಮಾರ್ ಬಲ್ಲೋಡಿಗುತ್ತು, ಮಾಯಿಲಪ್ಪ ಸಾಲಿಯಾನ್, ಶ್ರೇಯಾಂಶ ಕುಮಾರ್, ಮಾಣಿಕ್ಯ ರಾಜ್ ಜೈನ್, ಶಾಂತಿ ಪ್ರಸಾದ್ ಜೈನ್, ಸತೀಶ ಕುಮಾರ್ ಪಿಲಿಂಗಾಲು, ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಗಲಾಟೆ ಸಂಸಾರ ಕನ್ನಡ ವೆಬ್ ಸರಣಿಯ ಶೀರ್ಷಿಕೆಯ ಅನಾವರಣಗ್ರಾಮೀಣ ಕಲಾವಿದರ ಕೌಶಲ್ಯಕ್ಕೆ ವೇದಿಕೆ ನೀಡಿ : ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ : ತುಳುನಾಡಿನ ಗ್ರಾಮೀಣ ಭಾಗದ ಕಲಾವಿದರ ಕೌಶಲ್ಯಕ್ಕೆ ಸೂಕ್ತ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಇರುವ ಅವಕಾಶವನ್ನು ಪಡೆದುಕೊಂಡು ಕಲಾ ಚತುರತೆಯನ್ನು ಪ್ರದರ್ಶಿಸುವ ವಿಫುಲ ಅವಕಾಶವಿದೆ. ಕಿರುತೆರೆಯಲ್ಲಿ ಯುವ ಸಮುದಾಯವು ತಮ್ಮ ಪ್ರತಿಭಾ ಸಾಮರ್ಥ್ಯ ಪ್ರದರ್ಶಿಸಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿರಿ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರು, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ಮಂಗಳೂರಿನ ಶ್ರೀಗುರುನಮನಸಂತೃಪ್ತಿ ಫಿಲ್ಮ್ಸ್‌ನ ಗಲಾಟೆ ಸಂಸಾರ ಕನ್ನಡ ವೆಬ್ ಸೀರೀಸ್ ಶೀರ್ಷಿಕೆಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.ಶ್ರೀ ಚಂದ್ರಶೇಖರ ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್ ಅವರು ಗಲಾಟೆ ಸಂಸಾರ ಶೀರ್ಷಿಕೆಯೊಂದಿಗೆ ಉತ್ತಮವಾಗಿ ಧಾರವಾಹಿ ಮೂಡಿಬರಲಿ ಎಂದು ಶುಭ ಹಾರೈಸಿದರು.ಧಾರವಾಹಿಯ ನಿರ್ದೇಶಕ ದೇವಿಪ್ರಕಾಶ್ ಮಂಗಳೂರು ಸ್ವಾಗತಿಸಿ, ಪ್ರಸ್ತಾವನೆಗೈದರು, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು ವಂದಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರೋಟರಿ ಜಿಲ್ಲೆ 3181’ರ ವಲಯ -1ರ ನೂತನ ಸಹಾಯಕ ಗವರ್ನರ್ ಆಗಿ ಪತ್ರಕರ್ತ, ರಂಗ ಸಂಘಟಕ ಶರತ್ ಶೆಟ್ಟಿ ಆಯ್ಕೆ.

ಮಂಗಳೂರು: ರೋಟರಿ ಜಿಲ್ಲೆ 3181 ರ ವಲಯ -1 ರ ನೂತನ ಸಹಾಯಕ ಗವರ್ನರ್ ಆಗಿ ಪತ್ರಕರ್ತ, ರಂಗ ಸಂಘಟಕ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ರಂಗ ನಟ, ಯಕ್ಷಗಾನ ಕಲಾವಿದ, ಕಳೆದ 26 ವರ್ಷಗಳಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ರಂಗಭೂಮಿ ಸಂಘಟನೆಗೆ 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹುಟ್ಟೂರು ಸಂಕಲಕರಿಯ ವಿಜಯಾ ಯುವಕ ಸಂಘ, ಸಂಕಲಕರಿಯ ಹಾಲು ಉತ್ಪಾದಕರ ಸಂಘ, ಮುಲ್ಕಿ ವಲಯ ಪತ್ರಕರ್ತರ ಸಂಘ, ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಐಕಳ ಪೊಂಪೈ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ವಿದ್ಯಾರ್ಥಿ ಸಂಘ, ಕಿನ್ನಿಗೋಳಿ ರೋಟರಾಕ್ಟ್ ಗಳಲ್ಲಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಸಮಾಜ ಸೇವಕರಾಗಿರುವ ಇವರಿಗೆ Mp mla’s ನ್ಯೂಸ್ ಶುಭ ಹಾರೈಸುತ್ತದೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.

ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್, ಡಾ. ಸಿ.ಎನ್. ಮಂಜುನಾಥ್, ಹಿರಿಯ ಬಾಲಿವುಡ್ ನಟ ಗುಲ್ಶನ್ ಗ್ರೋವರ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಸದಾನಂದ ಪೂಜಾರಿಯವರು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೂತ್ರರೋಗ ವಿಭಾಗದ ಮುಖ್ಯಸ್ಥರಾಗಿದ್ದು, ಸಾವಿರಾರು ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಸಮಾಜಮುಖಿಯಾಗಿ ಸಾಗಿ ಬಡವರ ಪಾಲಿನ ಕರುಣಾಮಯಿ ಎಂದೇ ಜನಜನಿತರಾಗಿದ್ದಾರೆ. ಇವರಿಗೆ Mp mla’s news ಸೌಹಾರ್ದ ಸಂಗಮದಲ್ಲಿ ಬೆಸ್ಟ್ ಡಾಕ್ಟರ್ ಅವಾರ್ಡ್ ನೀಡಿ ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

ಜುಲೈ 12 ರಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಚೇರಿ ಶುಭಾರಂಭ.

ಮಂಗಳೂರು : ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಚೇರಿ ಅಂದರೆ ಸಂಸದರ ಕಚೇರಿಯು ಜುಲೈ 12 ರ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಸ್ಟೇಟ್ ಬ್ಯಾಂಕ್ ಬಳಿಯಿರುವ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದಲ್ಲಿ ಶುಭಾರಂಭಗಳ್ಳಲಿದೆ.

ಪ್ರಾದೇಶಿಕ ವಾರ್ತೆಗಳು

ಉರ್ವ ವೇಲ್ಸ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಪುನರ್ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ನೆರವು: ಶಾಸಕ ಕಾಮತ್

ಮಂಗಳೂರು: ತುಳುನಾಡಿನಲ್ಲಿ ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳು ಕಾರಣಿಕ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಧಾರ್ಮಿಕ ಆಚರಣೆಗಳು ನಿರಂಂತರವಾಗಿ ಮುಂದುವರಿಯಬೇಕು. ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧವಾಗುತ್ತಿರುವ ಉರ್ವ ವೇಲ್ಸ್ ಪೇಟೆ‌ ಶ್ರೀ ಬಬ್ಬುಸ್ವಾಮಿ‌ ಕ್ಷೇತ್ರದ ಕಾರ್ಯಗಳಿಗೆ‌ ತನ್ನಿಂದಾದ ಅಗತ್ಯ ನೆರವು ಒದಗಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.ಅವರು ಸೋಮವಾರ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಉರ್ವ ವೇಲ್ಸ್ ಪೇಟೆ ಇಲ್ಲಿನ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ದೈವ ದೇವರ ಕೆಲಸ ಮಾಡುವುದೆಂದರೆ ಅದೊಂದು ಪುಣ್ಯದ ಕೆಲಸ. ಶಾಸಕನಾಗಿ ನನಗೂ ಹಲವು ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಕೂಡ ವೇಲ್ಸ್ ಪೇಟೆಯ ಬಬ್ಬುಸ್ವಾಮಿ‌ ಕ್ಷೇತ್ರದ ಅಭಿವೃದ್ಧಿಗೆ ನೆರವು ದೊರೆಯುವಂತಾಗಲಿ ಎಂದವರು ಹೇಳಿದರು.ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ‌ ಶುಭ ಹಾರೈಸಿದರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು.ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಕ್ಷೇತ್ರದ ಗುರಿಕಾರ ಬಾಲಕೃಷ್ಣ ಯು.ಎಸ್‌. ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೋರೇಟರ್ ಗಳಾದ ಗಣೇಶ್ ಕುಲಾಲ್, ಕಿರಣ್ ಕುಮಾರ್ ಕೋಡಿಕಲ್, ಮನೊಜ್ ಕೋಡಿಕಲ್, ಸುರೇಖಾ ಶ್ರೀನಿವಾಸ್, ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್,ಉರ್ವ ಮಾರಿಯಮ್ಮ ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಕೋಡಿಕಲ್ ಚಾಮುಂಡೇಶ್ವರಿ ಕ್ಷೇತ್ರದ ಪ್ರಮುಖರಾದ ದೀಪಕ್, ಪ್ರಮುಖರಾದ ಬಾಬಾ ಅಲಂಕಾರ್‌,ರಾಧಾಕೃಷ್ಣ ಅಶೋಕನಗರ, ಕೃಷ್ಣ ಅಡಿಗ, ರವಿ ಕಾಪಿಕಾಡ್, ಅಮಿತಕಲಾ, ಸುಧಾಕರ ಆಳ್ವ, ಅರುಣ್ ಉರ್ವ, ಭುಜಂಗ ಶ್ರೀಯಾನ್, ರಮಾನಾಥ ಶೆಟ್ಟಿ, ವಿಠೋಬಾ ನೆಲ್ಲಿಪಾಡಿ, ಉದ್ಯಮಿ ದೀಪಕ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.ಸಮಿತಿಯ ಜೊತೆ ಕಾರ್ಯದರ್ಶಿ ರಘುವೀರ್ ಬಾಬು ಗುಡ್ಡೆ ಸ್ವಾಗತಿಸಿದರು. ರಘುವೀರ್ ಕದ್ರಿ ವಂದಿಸಿದರು. ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳುನಾಡು ಪ್ರತಿಷ್ಠಾನ(ರಿ) ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ರಾಜೇಶ್ ಅಮೀನ್ ನೇತೃತ್ವದಲ್ಲಿ ತಡರಾತ್ರಿ ಮಂಗಳೂರು ತಲುಪುವ ದೂರದೂರಿನ ಬಡ ಪ್ರಯಾಣಿಕರಿಗೆ ಉಚಿತವಾಗಿ ದಿನನಿತ್ಯ ಆಹಾರ ವಿತರಣೆ.

ಮಂಗಳೂರು:ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮತ್ತು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಗಳಲ್ಲಿ ತಡರಾತ್ರಿ ವೇಳೆಗೆ ದೂರದೂರಿಂದ ಮಂಗಳೂರಿಗೆ ತಲುಪುವ ಹೊರಜಿಲ್ಲೆಗಳ ಬಡ ಪ್ರಯಾಣಿಕರು ಹಸಿವಿನಿಂದ ಬಳಲಬೇಕಾದ ಪರಿಸ್ಥಿತಿಯನ್ನು ಮನಗಂಡ ತುಳುನಾಡು ಪ್ರತಿಷ್ಠಾನ ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷ ಮತ್ತು ಆಯುಷ್ ಇಲಾಖೆಯ ಯುನಾನಿ ವಿಭಾಗದಲ್ಲಿ ಮುಲ್ಕಿ ಕೆರೆಕಾಡ್ ನಲ್ಲಿ ಉದ್ಯೋಗಿಯಾಗಿರುವ ರಾಜೇಶ್ ಅಮೀನ್ ಅವರು ಪ್ರತಿದಿನ ರಾತ್ರಿ 11ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ತನಕ ಆಹಾರದ ವ್ಯವಸ್ಥೆಯನ್ನು ಸ್ವತಃ ಬಡ ಪ್ರಯಾಣಿಕರಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ 2 ತಿಂಗಳಿಂದ ಅವರು ದೂರದೂರಿಂದ ಮಂಗಳೂರು ತಲುಪುವ ಬಡ ಪ್ರಯಾಣಿಕರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಬಡ ಪ್ರಯಾಣಿಕರ ಜೊತೆಗೆ, ನಿರಾಶ್ರಿತರಿಗೆ ಕೂಡಾ ಅವರು ಆಹಾರ ವಿತರಣೆ ಮಾಡುತ್ತಿದ್ದಾರೆ. ಪ್ರತಿ ರಾತ್ರಿ ಅವರು 25 ಮಂದಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಲಾಲ್ ಬಾಗ್ ಬಿಗ್ ಬಜಾರ್ ನ ಎದುರುಗಡೆ ಇರುವ ಕ್ಯಾಂಟೀನ್ ವೊಂದರ ಮಾಲಕಿ ಸಾವಿತ್ರಿ ಮತ್ತು ಕೆ ಎಸ್ ಆರ್ ಟಿ ಸಿ ಬಳಿಯ ಕ್ಯಾಂಟೀನ್ ಗಳ ಮಾಲಕರಾದ ರವಿ ಕಡಬ ಮತ್ತು ಲೋಕೇಶ್ ಬಾರೆಬೈಲ್ ಅವರು ತಮ್ಮ ಹೋಟೆಲ್ ನಿಂದ ಆಹಾರ ವ್ಯವಸ್ಥೆಯನ್ನು ಉಚಿತವಾಗಿ ರಾಜೇಶ್ ಅಮೀನ್ ಅವರಿಗೆ ನೀಡುತ್ತಿದ್ದೂ,ಅದನ್ನು ಅವರು ಬಡ ಪ್ರಯಾಣಿಕರಿಗೆ, ನಿರಾಶ್ರಿತರಿಗೆ ತುಳುನಾಡು ಪ್ರತಿಷ್ಠಾನ ಟ್ರಸ್ಟ್ ಮೂಲಕ ನೀಡುತ್ತೀರುವುದಾಗಿ Mp mla’s ನ್ಯೂಸ್ ಗೆ ತಿಳಿಸಿದ್ದಾರೆ. ರಾಜೇಶ್ ಅಮೀನ್ ಅವರ ಸಮಾಜ ಸೇವೆ ವ್ಯಾಪಕ ಜನ ಶ್ಲಾಘನೆಗೆ ಪಾತ್ರವಾಗಿದೆ. ರಾಜೇಶ್ ಅಮೀನ್ ಅವರು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟಿ ಸಿಟಿಯ ಸಕ್ರಿಯ ಸದಸ್ಯರಾಗಿದ್ದಾರೆ. ಹಲವು ಬಾರಿ ರಕ್ತದಾನ ಮಾಡಿರುವ ಅವರು ತುಳುನಾಡು ಪ್ರತಿಷ್ಠಾನದ ಮೂಲಕ ಸಮಾಜಸೇವೆ ಮಾಡುತ್ತಾ ಬಂದಿದ್ದು, ಬಡರೋಗಿಗಳಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗಾಗಿ ಉಚಿತ ಪುಸ್ತಕ ವಿತರಣೆ ಮೊದಲಾದ ನೆರವು ಒದಗಿಸಿದ್ದಾರೆ. ಇದರ ಜೊತೆಗೆ, ಕೆಲವು ಸಿನೆಮಾಗಳಲ್ಲಿ ಚಲನಚಿತ್ರ ಕಲಾವಿದರಾಗಿಯೂ ದುಡಿದ್ದಾರೆ. ಹಾಯ್ ತುಳುನಾಡು ಪತ್ರಿಕೆಯ ಸ್ಥಾಪಕ ಸಂಪಾದಕರಗಿಯೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಬೇಬಿ ಕುಂದರ್.

ಬಂಟ್ವಾಳ : ಬಂಟ್ವಾಳ ರೋಟರಿ ಕ್ಲಬ್ ನ 56ನೇ ಅಧ್ಯಕ್ಷರಾಗಿ ಬೇಬಿ ಕುಂದರ್ ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ(ಬೂಡಾ)ದ ಅಧ್ಯಕ್ಷರಾಗಿರುವ ಬೇಬಿ ಕುಂದರ್ ಅವರು ಸಮಾಜಮುಖಿ ಅಭಿವೃದ್ಧಿ ಆಡಳಿತದಿಂದ ಜನಜನಿತರಾಗಿದ್ದು, ಮಾಜಿ ಸಚಿವ ಬಿ. ರಮಾನಾಥ ರೈಯವರ ಪರಮಾಪ್ತರು ಹಾಗೂ ವಿಜಯಬ್ಯಾಂಕ್ ನ ಮಾಜಿ ಉದ್ಯೋಗಿ. ಇವರಿಗೆ Mp mla’s ನ್ಯೂಸ್ ಶುಭ ಹಾರೈಸುತ್ತದೆ.

Scroll to Top