ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಅ.23ರಂದು ಅರವಿಂದ ಬೋಳಾರ್ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅ.23ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಜನಪ್ರಿಯ ನಟ ಅರವಿಂದ ಬೋಳಾರ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಮಾದಕ ವ್ಯಸನಗಳ ಬಗ್ಗೆ ಯುವಜನತೆ ಜಾಗೃತರಾಗಿರಿ’ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ

ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಮಾದಕ ವ್ಯಸನಗಳ ವಿರುದ್ಧ ಯುವ ಜನರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನಿರ್ದೇಶನದಂತೆ ಮಂಗಳೂರಿನ ಅಮೃತ ವಿದ್ಯಾಲಯಂನಲ್ಲಿ ಜರುಗಿದ ಈ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮದ‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು “ಮಾದಕದ್ರವ್ಯ ವ್ಯಸನ ಮತ್ತು ಪರಿಹಾರೋಪಾಯಗಳು” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವೈದ್ಯರ ಸಲಹೆಯಂತೆ ಪಡೆಯುವ ಔಷಧಗಳು ಅಧಿಕೃತ. ವೈದ್ಯರ ಸಲಹೆ ಇಲ್ಲದೆ ಪಡೆಯುವ ಔಷಧಗಳು ಅಕ್ರಮ ಹಾಗೂ ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ. ಯುವಜನರು ಹಾಗೂ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಭರವಸೆಯನ್ನು ಹೊಂದಿ ಉತ್ತಮ ಶಿಕ್ಷಣವನ್ನು ನೀಡಲು ಮುಂದಾಗುವರು. ಅವರ ನಿರೀಕ್ಷೆಯಂತೆ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿ ಮುನ್ನಡೆಯುವಂತೆ ಅವರು ಕರೆಯಿತ್ತರು.ಇನ್ನೋರ್ವ ಅತಿಥಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಸಹಾಯಕ ನಿರ್ದೇಶಕರಾದ ಸೂರ್ಯನಾರಾಯಣ ಭಟ್ ಅವರು “ಆಧುನಿಕ ಸಮಾಜದಲ್ಲಿ ಸಮೂಹ ಮಾಧ್ಯಮಗಳ ಬಳಕೆ” ಬಗ್ಗೆ ಮಾತನಾಡಿ ಮಾಧ್ಯಮಗಳು ಬೆಳೆದುಬಂದ ಮೈಲಿಗಲ್ಲುಗಳ ಬಗ್ಗೆ ಮಾಹಿತಿ ನೀಡಿದರು.ನವೀನ ಮಾಧ್ಯಮದ ಕುರಿತು ಮಾತಾಡಿದ ಅವರು ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಾಗಿ ಮಾಧ್ಯಮಗಳು ಬಳಕೆಯಾಗುತ್ತವೆ. ಇದರಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಆದುದರಿಂದ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಅತ್ಯಂತ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.ಅಮೃತಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ಗೌರವ ಸಲಹೆಗಾರ ಡಾ. ಜೀವರಾಜ್ ಸೊರಕೆ ಅಮ್ಮ ಮತ್ತು ಆಶ್ರಮದ ಪರಿಚಯ ನೀಡಿದರು. ಕೇಂದ್ರದ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಅವರು 2018 ರಿಂದ ಅತ್ಯುತ್ತಮ ಕಾರ್ಯಕ್ರಮಗಳೊಂದಿಗೆ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬುವ ಕಾರ್ಯ ಯಶಸ್ವಿಯಾಗಿ ಈ ಕೇಂದ್ರದಿಂದ ನಡೆಯುತ್ತಿದೆ ಎಂದರು. ಅಮೃತ ವಿದ್ಯಾಲಯಂ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಅತಿಥಿಗಳ ಪರಿಚಯವಿತ್ತರು. ಅತಿಥಿಗಳು ಶ್ರೀ ಬ್ರಹ್ಮಸ್ಥಾನ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರಾಭಿವೃದ್ಧಿ ಸಮಿತಿ ಹಾಗೂ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಸ್ವಾಗತಿಸಿದರು, ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ವಂದಿಸಿದರು. ಪ್ರವೀಣ್ ಚಂದ್ರ ಶರ್ಮ ವಂದಿಸಿದರು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಗ್ಲೇಡಿಸ್ ಪಾಯ್ಸ್ ಪ್ರಥಮ

ಅಕ್ಟೋಬರ್ 12 ಮತ್ತು 13ರಂದು ಮಲೇಷ್ಯಾ ದಲ್ಲಿ ನಡೆದ 36ನೇ ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಬಂಟ್ವಾಳ ನಿವಾಸಿ ಶ್ರೀಮತಿ ಗ್ಲೇಡಿಸ್ ಪಾಯ್ಸ್ ರವರು 200 ಮೀ. ಓಟ, 400 ಮೀ. ಓಟ,ಉದ್ದ ಜಿಗಿತ ಹಾಗು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

‘ಎಸ್‌ಒಎಸ್’ ಕಿರುಚಿತ್ರದಿಂದ ಮಹತ್ವದ ಸಂದೇಶ : ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಅಭಿಪ್ರಾಯ

ಮಂಗಳೂರು : ಅತ್ಯಾಚಾರ, ಅಪಘಾತದಂತಹ ಘಟನೆ ಸಂಭವಿಸಿದಾಗ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎನ್ನುವ ಮಹತ್ವದ ಸಂದೇಶವನ್ನು ಎಸ್‌ಒಎಸ್ (ಸೇವ್ ಅವರ್ ಸೋಲ್ ) ಕಿರುಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಅರಿವು ಮೂಡಿಸಲು ಕೂಡಾ ಈ ಕಿರುಚಿತ್ರದಲ್ಲಿ ಪ್ರಯತ್ನಿಸಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಹೇಳಿದರು.ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಬುಧವಾರ ನಡೆದ ‘ಸೇವ್ ಅವರ್ ಸೋಲ್ ‘ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಡಿಸಿಪಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ .ಡಿ.ಎಸ್. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು.ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಎಸ್‌ಒಎಸ್ ಕಿರುಚಿತ್ರ ಅ.18ರಂದು ಯು ಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಯು.ಜಿ.ರಾಧ ತಿಳಿಸಿದರು.ಚಿತ್ರದ ನಿರ್ದೇಶಕ ಅಚಲ್ ಉಬರಡ್ಕ , ಸಹ ನಿರ್ದೇಶಕರಾದ ಗುರುಮೂರ್ತಿ ಅಮ್ಮಣ್ಣಾಯ , ರತ್ನ ಸಿಂಚನ, ಸಂಗೀತ ನಿರ್ದೇಶಕ ಸಾತ್ವಿಕ್ ಪಡಿಯಾರ್ , ಛಾಯಾಗ್ರಾಹಕ ಷಣ್ಮುಖ ಪ್ರಸಾದ್, ತಾಂತ್ರಿಕ ಸಲಹೆಗಾರ ಅನೀಶ್ ಗಾಣಿಗ , ಪ್ರಸಾದ ಕೊಲ ಉಪಸ್ಥಿತರಿದ್ದರು. ರಚನ ಗುಡಿಗಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಡಿ 7ರಂದು ಮುಂಬೈಯಲ್ಲಿ ವಿಶ್ವಬಂಟರ ಸಮಾಗಮ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳ ಒಗ್ಗಟ್ಟಿನಲ್ಲಿ “ವಿಶ್ವ ಬಂಟರ ಸಮಾಗಮ”ಬೃಹತ್ ಕಾರ್ಯಕ್ರಮ ನಡೆಸುವ ಕುರಿತುವಿಶೇಷ ಸಭೆ ಅ 15 ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಸಂಕಿರಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಾತನಾಡುತ್ತಾ ಕಳೆದ ವರ್ಷ ಉಡುಪಿಯಲ್ಲಿ ಎರಡು ದಿನಗಳ ವಿಶ್ವಮಟ್ಟದ ಬಂಟ ಸಮ್ಮಿಲನವನ್ನು ಆಯೋಜಿಸಿಕೊಂಡಿದ್ದು ಸುಮಾರು 75 ಸಾವಿರಕ್ಕೆ ಮಿಕ್ಕಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆದಿದೆ. ಮಂಬಯಿ ನಗರದಲ್ಲಿ 3 ವರ್ಷಗಳು ಹಿಂದೆ ಒಕ್ಕೂಟದ ಬಂಟ ಸಮ್ಮಿಲನ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಮುಂಬೈ ಮಹಾನಗರದಲ್ಲಿ ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳನ್ನು ಒಟ್ಟು ಸೇರಿಸುವ ಮಹಾನ್ ಉದ್ದೇಶದೊಂದಿಗೆ ಡಿಸೆಂಬರ್ 7ರಂದು ಶನಿವಾರ ಕುರ್ಲಾ ಬಂಟರ ಭವನದಲ್ಲಿ “ವಿಶ್ವ ಬಂಟರ ಸಮಾಗಮ” ಜಾಗತಿಕ ಮಟ್ಟದ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ,ಮುಖ್ಯ ಅತಿಥಿಯಾಗಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರ. ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ತೋನ್ಸೆ ಆನಂದ ಎಮ್.ಶೆಟ್ಟಿ ಯವರು ಪಾಲ್ಗೊಳ್ಳಲಿದ್ದು ಹಾಗೂ ಪ್ರತಿಷ್ಠಿತ ಉದ್ಯಮಿಗಳು ಸಮಾಜ ಸೇವಕರು ಜಗತ್ತಿನ ವಿವಿಧ ಬಂಟಸಂಘಗಳ ಅಧ್ಯಕ್ಷರು ಸೇರಿಕೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮವನ್ನು ಒಕ್ಕೂಟದ ಮಹಾದಾನಿ ಹೇರಂಬ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕರಾದ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಯಾಗಿ ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕೆ ಪ್ರಕಾಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಹಾಗೂ ವಿಶ್ವದ ಬಂಟರ ಸಂಘಗಳ ನೂತನ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಮಹಾನಗರದ ಬಂಟರ ಸಂಘಗಳಿಗೆ ನೃತ್ಯ ಸ್ಪರ್ಧೆ ನಡೆಯಲಿದ್ದು, ಒಟ್ಟು ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷರಾಗಿ ಡಾ ಆರ್ ಕೆ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಸ್ವಾಗತ ಸಮಿತಿಯ ಸಂಚಾಲಕರಾಗಿ ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುಬ್ಬಯ್ಯ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಂದೇಶ, ಶಶಿಧರ್ ಶೆಟ್ಟಿ ಇನ್ನಂಜೆ, ರವೀಂದ್ರನಾಥ ಭಂಡಾರಿ, ಇಂದ್ರಾಳಿ ದಿವಾಕರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಸುಕುಮಾರ್ ಶೆಟ್ಟಿ, ರಾಜೀವ ಭಂಡಾರಿ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ ಕರ್ನೂರು ಮೋಹನ್ ರೈ, ನವೀನ್ ಶೆಟ್ಟಿ ಇನ್ನ ಬಾಳಿಕೆ, ಸಭಾ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಅಶೋಕ್ ಪಕ್ಕಳ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟಕರಿಗೆ ಜವಾಬ್ದಾರಿ ನೀಡಲಾಗುವುದು ಎಂದು ನುಡಿದರು.ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡಿ ಬಂಟರ ಸಂಘದ ಪೂರ್ಣ ರೀತಿಯ ಸಹಕಾರವಿದ್ದು, ಈ ಕಾರ್ಯಕ್ರಮಕ್ಕೆ ಹೊಸ ದಾನಿಗಳು ಬರಬೇಕು. ಸಮಾಜದ ಮೇಲಿನ ಅಭಿಮಾನದಿಂದ ಕಾರ್ಯಕ್ರಮವನ್ನು ಸಮಾಜ ಬಾಂಧವರು ಯಶಸ್ವಿಗೊಳಿಸಬೇಕು ಎಂದು ನುಡಿದರು.ಕಾರ್ಯಕ್ರಮ ಸಮಿತಿಯ ಕಾರ್ಯ ಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿರುವ ಡಾ. ಆರ್ ಕೆ ಶೆಟ್ಟಿ ಮಾತನಾಡಿ ದಾನಿಗಳು ಸಹಕಾರ ನೀಡಿದರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಹೊಸತನ ನೀಡುವಲ್ಲಿ ರೂಪರೇಷೆಯನ್ನು ತಯಾರಿಸಲಿದ್ದೇವೆ ಸಮಾಜ ಬಾಂಧವರೆಲ್ಲರೂ ಸಹಕಾರ ನೀಡಬೇಕು ಎಂದು ನುಡಿದರುಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾದ ರತ್ನಾಕರ್ ಶೆಟ್ಟಿ ಮುಂಡ್ಕೂರು, ಡಾ ಆರ್ ಕೆ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಂದೇಶ್, ಶಶಿಧರ್ ಶೆಟ್ಟಿ ಇನ್ನಂಜೆ, ರವೀಂದ್ರನಾಥ ಭಂಡಾರಿ, ಇಂದ್ರಾಳಿ ದಿವಾಕರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಸುಕುಮಾರ್ ಶೆಟ್ಟಿ, ರಾಜೀವ ಭಂಡಾರಿ, ಕರ್ನೂರು ಮೋಹನ್ ರೈ, ನವೀನ್ ಶೆಟ್ಟಿ ಇನ್ನ ಬಾಳಿಕೆ, ಅಶೋಕ್ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.ಸಭೆಯ ಪ್ರಾರಂಭದಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.ಗೌರವ ಕಾರ್ಯದರ್ಶಿ ಉಳ್ತೂರು ಮೋಹನದಾಸ್ ಶೆಟ್ಟಿ ವಂದಿಸಿದರು.ಈ ಅದ್ದೂರಿಯ ಬೃಹತ್ ಕಾರ್ಯಕ್ರಮದಲ್ಲಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ತೋನ್ಸೆ ಆನಂದ್ ಎಂ. ಶೆಟ್ಟಿ, ಮಹಾ ನಿರ್ದೇಶಕ ಡಾ. ಕೆ.ಪ್ರಕಾಶ್ ಶೆಟ್ಟಿ, ಮಹಾ-ನಿರ್ದೇಶಕ ಶಶಿಧರ್ ಶೆಟ್ಟಿ ಬರೋಡ,ಮಹಾ-ನಿರ್ದೇಶಕಕೆ. ಎಂ. ಶೆಟ್ಟಿ ವಿ. ಕೆ. ಗ್ರೂಪ್ಸ್, ಮಹಾ-ನಿರ್ದೇಶಕ ರಾಜೇಶ್ ಎನ್. ಶೆಟ್ಟಿ ರಾಕ್ಷೀ ಡೆವಲಪರ್ಸ್, ಮಹಾ-ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ,ಮಹಾ-ನಿರ್ದೇಶಕ ಅರವಿಂದ್ ಆನಂದ್ ಶೆಟ್ಟಿ , ಮಹಾ-ನಿರ್ದೇಶಕ ಅಶೋಕ್ ಎಸ್. ಶೆಟ್ಟಿ ಮೆರಿಟ್, ಮಹಾ-ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿ ಪಂಜುರ್ಲಿ ಗ್ರೂಪ್ಸ್, ಹಾಗೂ ನಿರ್ದೇಶಕರು, ಮಹಾ ಪೋಷಕರು, ಪೋಷಕರು, ದಾನಿಗಳು, ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರು, ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರುಗಳು ಭಾಗವಹಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ( ರಿ )ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ವೇದವ್ಯಾಸ ರಾಮಕುಂಜ ಇವರ ನಿವಾಸದಲ್ಲಿ ಜರಗಿತು.ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿ ತಾಲೂಕು ಘಟಕಗಳ ಸಮಿತಿಯ ಪುನಾರಚನೆ,ಕೇಂದ್ರ ಸಮಿತಿಯ ಸಭೆಗೆ ಗೈರು ಹಾಜರಾಗುತ್ತಿರುವ ಪದಾಧಿಕಾರಿಗಳ ಬದಲಾವಣೆ,ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ, ಡಿಸೆಂಬರ್ ನಲ್ಲಿ ಜರಗುವ ತೃತೀಯ ವಾರ್ಷಿಕೋತ್ಸವದ ಬಗ್ಗೆ ಚರ್ಚಿಸಲಾಯಿತು.ತಾಲೂಕ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಕೇಂದ್ರಸಮಿತಿಯ ಪ್ರತಿ ತಿಂಗಳ ಸಭೆಯಲ್ಲಿ ಪ್ರತಿನಿಧಿಗಳಾಗಿ ತಪ್ಪದೆ ಹಾಜರಿರುವಂತೆ ತೀರ್ಮಾನಿಸಲಾಯಿತು.ಪ್ರತಿಷ್ಠಾನದ ಗೌರವಾಧ್ಯಕ್ಷ ಎ .ವಿ ನಾರಾಯಣ , ಮಹಿಳಾ ಪ್ರತಿನಿಧಿ ಪ್ರೊ.ವತ್ಸಲಾ ರಾಜ್ನಿ,ಸಹ ಸಂಚಾಲಕ ಭಾಸ್ಕರ ಬಾರ್ಯ, ಅನಾರು ಕೃಷ್ಣಶರ್ಮ, ಗುಂಡ್ಯಡ್ಕ ಈಶ್ವರ ಭಟ್, ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯಶಂಕರ ರೈ ಪುಣಚ, ರಾಜಮಣಿ ರಾಮಕುಂಜ ಬಂಟ್ವಾಳ, ಸೀತಾರಾಮ.ಕೆ, ಸೋಮನಾಥ ಬೇಕಲ್, ಚಂದ್ರಕಲಾ ಎಸ್‌.ಬಿ ಭಾಗವಹಿಸಿದ್ದರು.ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿ ಪ್ರೊ. ವೇದವ್ಯಾಸ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಯೂತ್ ರೆಡ್‌ಕ್ರಾಸ್ ಪ್ರಶಸ್ತಿ ಪ್ರದಾನ. ‘ಮಾನವೀಯ ಸೇವೆಯಿಂದ ಶಾಂತಿಯ ಸಂದೇಶ’ :ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಆಶಯ

ಮಂಗಳೂರು : ಮಹಾಯುದ್ಧಗಳಿಂದ ಜಗತ್ತು ಸಾಕಷ್ಟು ಸಾವು ನೋವುಗಳನ್ನು ಕಂಡಿದ್ದು, ಯುದ್ಧದಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎನ್ನುವ ಅರಿವು ಮೂಡಿದೆ. ಮಾನವೀಯ ಸೇವೆಯಿಂದ ಮಾತ್ರ ಜಾಗತಿಕ ಮಟ್ಟದಲ್ಲಿ ಶಾಂತಿಯ ಸಂದೇಶ ಪಸರಿಸಬಹುದು .ಇಂತಹ ಉದಾತ್ತ ಸೇವೆ ನೀಡುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ಮನುಷ್ಯರ ಹೃದಯಗಳನ್ನು ಬೆಸೆಯುತ್ತಿದೆ ಎಂದು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಇದರ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ಯೂತ್ ರೆಡ್‌ಕ್ರಾಸ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂಯೋಜನಾಧಿಕಾರಿಗಳಿಗೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ ‘ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಯೂತ್ ರೆಡ್‌ಕ್ರಾಸ್ ಪ್ರೇರಣೆ ನೀಡುತ್ತದೆ. ಮಾದಕ ವಸ್ತುಗಳ ಪಿಡುಗು ಯುವ ಸಮುದಾಯಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಯೂತ್ ರೆಡ್‌ಕ್ರಾಸ್‌ನಿಂದ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳುವುದು ಅವಶ್ಯ ಎಂದರು.ವಿ.ವಿ.ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ.ಯ ನಾಮ ನಿರ್ದೇಶಿತ ಸದಸ್ಯ ಬಿ.ನಿತ್ಯಾನಂದ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ನಿರ್ದೇಶಕ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಯೋಜನಾಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಮಕೃಷ್ಣ ಕಾಲೇಜಿನ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ನಟೇಶ್ ಆಳ್ವ ಪ್ರಶಸ್ತಿ ವಿಜೇತರ ವಿವರ ನೀಡಿದರು. ಮಂಗಳೂರು ವಿ.ವಿ.ಯೂತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್. ಸ್ವಾಗತಿಸಿ, ನಿರ್ದೇಶಕ ಸಚೇತ್ ಸುವರ್ಣ ವಂದಿಸಿದರು. ಪದವು ಕಾಲೇಜಿನ ಉಪ ಪ್ರಾಂಶುಪಾಲ ರೋಶನ್ ಸಾಂತುಮಯರ್ ಕಾರ್ಯಕ್ರಮ ನಿರೂಪಿಸಿದರು. ಬೆಸೆಂಟ್ ಕಾಲೇಜಿಗೆ ಉತ್ತಮ ಘಟಕ ಪ್ರಶಸ್ತಿ

ಪ್ರಾದೇಶಿಕ ವಾರ್ತೆಗಳು

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ಪುದ್ದರ್ ಅಗೇಲು ಸೇವೆ

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪಮೂಡದಲ್ಲಿ ಅಕ್ಟೋಬರ್ 17 ರಂದು ಪುದ್ದರ್ ಆಗೇಲು ಸೇವೆ ಪಣೋಲಿಬೈಲು :ದಿನಾಂಕ 17/10/2024 ರ ಗುರುವಾರದಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ಪುದ್ದರ್ ಅಗೇಲು ಸೇವೆ ನಡೆಯಲಿರುವುದು.

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್ 27 ರಂದು ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ

ಮಂಗಳೂರು ಪಾಲ್ದನೆಯಲ್ಲಿರುವ ಸಂತ ರಾಪಾಯೆಲ್ ಮೇರಿ ಕಾನ್ವೆಂಟ್ ಹಾಗೂ ಸಂತ ತೆರೆಜಾ ಚರ್ಚು ಇದರ ಜಂಟಿ ಸಹಭಾಗಿತ್ವದಲ್ಲಿ ಹಾಗೂ ಜ್ಯುವೆಲ್ಸ್ ಗ್ರೂಪ್ ಇದರ ನೇತೃತ್ವದಲ್ಲಿ ಪರಿಸರದ ಜನರಿಗಾಗಿ ಪಾಧರ್ ಮುಲ್ರ‍್ಸ್ ಮೆಡಿಕಲ್ ಕಾಲೇಜು ಮಂಗಳೂರು ಇದರ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇದರ ಸಹಯೋಗದೊಂದಿಗೆ “ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನೀಡುವ ಶಿಬಿರ” ತಾ 27-10-2024 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 8-00 ರಿಂದ ಮಧ್ಯಾಹ್ನ ಗಂಟೆ 1 ರ ತನಕ ಪಾಲ್ದನೆ ಸಂತ ತೆರೆಜಾ ಚರ್ಚಿನ ಬಳಿ ಇರುವ ಸಂತ ರಾಫಯಲ್ ಮೇರಿ ಕಾನ್ವೆಂಟ್‌ನಲ್ಲಿ ನಡೆಯಲಿದೆ. ಶಿಬಿರದಲ್ಲಿ ಸ್ತನದ ಕ್ಯಾನ್ಸರ್, ಮುಟ್ಟಿನ ಸಮಸ್ಯೆ, ಗುಣವಾಗದ ಹುಣ್ಣು, ಅಜೀರ್ಣ, ರಕ್ತ ಹೀನತೆ, ಮೂಳೆ ನೋವು, ರಕ್ತ ಸ್ರಾವ ಮುಂತಾದ ಸಮಸ್ಯೆಗಳ ಕಾರಣ ಹುಡುಕುವುದು ಹಾಗೂ ಸ್ತಿçÃಯರ ಆರೋಗ್ಯ ಮತ್ತು ಪುರುಷರ ಆರೋಗ್ಯ ತಪಾಸಣೆ ಪ್ರತ್ಯೇಕವಾಗಿ ನಡೆಸಿ ತಜ್ಞರಿಂದ ಜಾಗೃತಿಯನ್ನು ನೀಡುವುದು ಮುಂತಾದುವುಗಳು ಲಭ್ಯವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇದರ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕೋರಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಕಾಪು ಮಾರಿಯಮ್ಮ ನಮ್ಮೆಲ್ಲರ ರಕ್ಷಕಿ” -ಕುಮಾರ ತಂತ್ರಿ: ಕಾಪು ಹೊಸ ಮಾರಿಗುಡಿ ನವದುರ್ಗ ಲೇಖನ ಯಜ್ಞಕ್ಕೆ ಚಾಲನೆ

ಮಂಗಳೂರು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನವದುರ್ಗ ಲೇಖನ ಯಜ್ಞ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ಅಡ್ಯಾ‌ರ್ ಗಾರ್ಡನ್‌ ನಲ್ಲಿ ಜರುಗಿತು.ಕಮಲ ಪ್ರಭಾಕರ್ ಭಟ್, ಅಶ್ವಿನಿ ಮುಹಿಲನ್, ಸುನಂದಾ ಪುರಾಣಿಕ್, ಮಮತಾ ಸುನೀಲ್ ಆಚಾರ್, ವೃಂದ ವೇದವ್ಯಾಸ ಕಾಮತ್, ನಿರ್ಮಿತ ಸತೀಶ್ ಪಟ್ಲ, ಶ್ರೀದುರ್ಗ ಹರೀಶ್ ಪೂಂಜಾ, ಮಮತಾ ಗಟ್ಟಿ, ಮಲ್ಲಿಕಾ ಪ್ರಸಾದ್ ಶೆಟ್ಟಿ ದೀಪ ಪ್ರಜ್ವಲನೆಗೈದರು.ಬಳಿಕ ಮಾತಾಡಿದ ಕಾಪು ಮಾರಿಗುಡಿ ಕ್ಷೇತ್ರದ ಕುಮಾರ ತಂತ್ರಿಗಳು, “ಹೆತ್ತು ಹೊತ್ತ ತಾಯಿಗೆ ಸನಾತನ ಸಂಸ್ಕೃತಿ ಬಹಳಷ್ಟು ಗೌರವವನ್ನು ನೀಡಿದೆ. ಆದೇ ರೀತಿ ಇಡೀ ಲೋಕದ ತಾಯಿಯಾದ ಕಾಪುವಿನ ಮಾರಿಯಮ್ಮ ನಮ್ಮ ಸಂಕಷ್ಟಗಳನ್ನು ಕಳೆಯುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಅಮ್ಮನ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಕಾಪುವಿನ ಮಾರಿಯಮ್ಮ ಪ್ರತಿಷ್ಠಾಪನೆಗೊಂಡಿದ್ದು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಕೆಲಸ ಭರದಿಂದ ನಡೆಯುತ್ತಿದೆ.ಇಂದು ಅಮ್ಮನವರ ನವದುರ್ಗ ಲೇಖನ ಯಜ್ಞಕ್ಕೆ ಚಾಲನೆ ಸಿಕ್ಕಿದೆ. ನಾವೆಲ್ಲರೂ ನವದುರ್ಗ ಮಂತ್ರ ನಿತ್ಯ ಜಪಿಸುವ ಮೂಲಕ ತಾಯಿಯನ್ನೇ ನಮ್ಮ ರಕ್ಷಕಿಯನ್ನಾಗಿ ಪಡೆಯೋಣ” ಎಂದರು.ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಕಾಫು ಅವರು ಲೇಖನ ಯಜ್ಞದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡಿ, “ಲೇಖನ ಯಜ್ಞವನ್ನು ನಾವೆಲ್ಲರೂ ಮಾಡಬೇಕು. ತಾಯಿ ಎಂದರೆ ಪ್ರಕೃತಿ, ನಾವು ಪ್ರಕೃತಿಯ ಆರಾಧಕರು. ನಾವೆಲ್ಲರೂ ದೇವರನ್ನು ಮತ್ತು ದೇಶವನ್ನು ಆರಾಧನೆ ಮಾಡೋಣ“ ಎಂದರು.ಕಾಪುಶ್ರೀ ಹೊಸ ಮಾರಿಗುಡಿದೇವಸ್ಥಾನದಲ್ಲಿ ಫೆ.25ರಿಂದ ಮಾರ್ಚ್ 5ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನವದುರ್ಗ ಲೇಖನ ಯಜ್ಞ ಮತ್ತು ನವ ಚಂಡಿಕಾ ಯಾಗ ನಡೆಸಲು ದೇವಿಯ ಅಭಯವಾಗಿದೆ. 99,999 ಭಕ್ತರು ಈ ನವದುರ್ಗ ಲೇಖನ ಯಜ್ಞದಲ್ಲಿ ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಕಾರ್ಯಕ್ರಮದಲ್ಲಿ ನವದುರ್ಗ ಲೇಖನ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ವಿಶ್ವನಾಥ, ನವದುರ್ಗ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಸಂದೀಪ್ ಕುಮಾರ್ ಮಂಜ, ಎಂ ಬಿ ಪುರಾಣಿಕ್, ರಘುನಾಥ್ ಶೆಟ್ಟಿ ಕೊಪ್ಪಲಂಗಡಿ, ಸುವರ್ತನ್ ಉಡುಪಿ, ಸಂತೋಷ್ ರೈ ಬೋಳಿಯಾರ್, ಪಟ್ಲ ಸತೀಶ್ ಶೆಟ್ಟಿ, ಮಲ್ಲಿಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಮಣೀಶ್ ರೈ, ಅಶ್ವತ್ತಾಮ ಹೆಗ್ಡೆ, ಪ್ರದೀಪ್ ಆಳ್ವ ಕದ್ರಿ, ಸುಲತಾ ಜೆ ರೈ, ಸಂತೋಷ್ ಶೆಟ್ಟಿ ಶೆಡ್ಡೆ, ಅಕ್ಷಿತ್ ಸುವರ್ಣ ಸಹಕರಿಸಿದರು. ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿ ರಚನೆ ಮಾಡಲಾಯಿತು.ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.ದ.ಕ. ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮನ್ವಿತ್ ಶೆಟ್ಟಿ ಇರಾ ದೇವರನ್ನು ಸ್ತುತಿಸಿದರು. ಕೃಷ್ಣ ಶೆಟ್ಟಿ ತಾರೆಮಾರ್ ಧನ್ಯವಾದ ಸಮರ್ಪಿಸಿದರು.

Scroll to Top