ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ನಂಜನಗೂಡು ಶ್ರೀಕoಟೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜನಮನ ಸೂರೆಗೊಂಡ ಗಂಗಾಧರ್ ಗಾಂಧೀ ಗೀತಾ ಗಾಯನ ತಂಡ.

ಮೈಸೂರು -ವಿಶ್ವ ಪ್ರಸಿದ್ಧ ದಸರಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಯಲ್ಲಿ 29.09. 2025 ರಾತ್ರಿ ಗಂಗಾಧರ್ ಗಾಂಧಿ ಮತ್ತು ತಂಡದ ಕನ್ನಡ ಗೀತೆಗಳು ಸೇರಿದ ಜನಮನ ರಂಜಿಸಿ ನೆರೆದ ಪ್ರೇಕ್ಷಕರ ಮನಸೂರೆ ಗೊಳ್ಳುವಂತೆ ಮಾಡಿತು.ಸುಮಾರು ಒಂದೂವರೆ ಗಂಟೆಗಳ ಕಾಲ ಕನ್ನಡ ಗೀತಾ ಗಾಯನ ಕಾರ್ಯಕ್ರಮದಲ್ಲಿ ಬೆಳ್ಳಿ ತೆರೆಯ ಬಂಗಾರದ ಗೀತೆಗಳನ್ನು ಸಾದರ ಪಡಿಸಿದರು. ಲಕ್ಷ ಕೋಟಿ ನೀಡಿ ಸೆಲೆಬ್ರಿಟಿ ಗಳನ್ನು ಕರೆತಂದು ಕಾರ್ಯಕ್ರಮಗಳನ್ನು ಆಯೋಜಿಸುವ ಸರಕಾರ ಗಂಗಾಧರ್ ಗಾಂಧೀಯಂತಹ ಅಪ್ಪಟ ದೇಸಿ ಪ್ರತಿಭೆಗಳಿಗೆ ಅವಕಾಶ ನೀಡಿದರೆ ನಿಜವಾದ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಟ್ಟಂತೆ ಆದೀತು ಎಂಬ ಮಾತುಗಳು ಕೇಳಿಬಂದವು. *ಈ ದೇಶ ಚೆನ್ನಾ ಈ ಮಣ್ಣು ಚಿನ್ನಾ” ಎಂಬ ಗೀತೆಯೊಂದಿಗೆ ಆರಂಭಗೊಂಡ ಕನ್ನಡ ಗೀತಾ ಗಾಯನ ಕನ್ನಡ ಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತೆ “ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೇ ಗಂಧದ ಗುಡಿ” ಗೀತೆಯೊಂದಿಗೆ ವಿರಮಿಸಿದ ಗೀತಾಗಾಯನದಲ್ಲಿ ಮೈಸೂರಿನ ಸುಜಾತ ಜಯಕುಮಾರ, ದೃತಿ ಪಿ.ಶೆಟ್ಟಿ, ಸುಶೇಷ ಬಾಲಾಜಿ ಕನ್ನಡ ಚಿತ್ರ ರಂಗದ ಮಾಧುರ್ಯ ಪ್ರದಾನ ಗೀತೆಗಳಿಗೆ ಧ್ವನಿಯಾದರು. ರೇಷ್ಮಾ ಶೆಟ್ಟಿ ಗೊರೂರು ನಿರೂಪಣೆಯಲ್ಲಿ ಸುಂದರವಾಗಿ ಮೂಡಿಬಂಧ ಈ ಕಾರ್ಯಕ್ರಮಕ್ಕೆ ಮೈಸೂರಿನ ಯುವ ದಸರಾ ವೇದಿಕೆ ನೀಡಬೇಕಾಗಿತ್ತು ಎಂಬ ಮಾತುಗಳು ಕೇಳಿ ಬಂದವು. ಗಂಗಾಧರ್ ಗಾಂಧೀ ತಂಡ ನಿರಂತರ 12 ಗಂಟೆಗಳ ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ವಿಷಯ ಅರಿತ್ತಿದ್ದ ರಾಷ್ಟ್ರೀಯ ಬಸವ ದಳ ಮಂಡ್ಯ, ಅಧ್ಯಕ್ಷ, ನ್ಯಾಯವಾದಿ ಎಂ ಗುರುಪ್ರಸಾದ ಮಂಡ್ಯ ಮತ್ತು ಅವರ ಬಳಗ ಗಂಗಾಧರ್ ಗಾಂಧೀ ಮತ್ತು ತಂಡವರಾದ ಗಾಯಕಿ ಸುಜಾತಾ ಜಯಕುಮಾರ, ಗಾಯಕಿ ದೃತಿ ಪಿ.ಶೆಟ್ಟಿ ಹಾಗೂ ನಿರೂಪಕಿ ರೇಷ್ಮಾ ಶೆಟ್ಟಿ ಗೊರರುರನ್ನು ರೇಷ್ಮೆ ಶಾಲು, ಮೈಸೂರು ಪೇಟೆ, ಹಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಿತು.ಉಪನ್ಯಾಸಕಿ ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರೂಪಕಿ ಸವಿತಾ ಮತ್ತು ವೇದಿಕೆ ಉಸ್ತುವಾರಿ ಆದರ್ಶ್ ಮತ್ತಿತರರು ಉಪಸ್ಥಿತರಿದ್ದರು.ಡಾ.ಕೊಲಚಪ್ಪೆ ಗೋವಿಂದ ಭಟ್.

ಪ್ರಾದೇಶಿಕ ವಾರ್ತೆಗಳು

Rohan Corporation Distributes Safety Shoes to the Civic Workers of Mangaluru City Corporation

Mangaluru: In a step towards ensuring health and safety, the prestigious builder Rohan Corporation organized a social initiative on September 29, distributing 100 pairs of safety shoes to the civic workers of Mangaluru City Corporation.The program was held at the Comissionar’s office of Mangaluru City Corporation. Mr Ravichandra Nayak, Commissioner of the City Corporation, was present at the event. Mr Maxim Lobo, Marketing Manager at Rohan Corporation, handed over the safety shoes to the civic workers.“Civic workers are truly the backbone of our society. They are the silent heroes whose dedication and hard work keep our city clean, safe, and functioning every day. Ensuring their safety through initiatives like this is not just a responsibility, but a heartfelt commitment to honour their contribution and well-being,” said Mr Maxim.The City Commissioner appreciated Rohan Corporation’s exemplary social welfare initiative focusing on worker safety and encouraged more such efforts in the future.

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೊರೇಶನ್ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸುರಕ್ಷತಾ ಪಾದರಕ್ಷೆಗಳ ವಿತರಣೆ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೊರೇಶನ್ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಳಜಿ ವಹಿಸುವ ಉದ್ದೇಶದಿಂದ, ಸೆಪ್ಟೆಂಬರ್ 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು.ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ ಪಾದರಕ್ಷೆಗಳನ್ನು ಹಸ್ತಾಂತರಿಸಿದರು.“ಪೌರ ಕಾರ್ಮಿಕರು ನಮ್ಮ ಸಮಾಜದ ಬೆನ್ನೆಲುಬು. ಅವರ ಶ್ರಮದಿಂದಲೇ ನಗರ ಸ್ವಚ್ಛವಾಗಿರುತ್ತದೆ. ಅವರ ಸುರಕ್ಷತೆಗಾಗಿ ನಾವು ಕೈಗೊಂಡಿರುವ ಈ ಉಪಕ್ರಮ ನಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ” ಎಂದು ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಹೇಳಿದರು.ಮಹಾ ನಗರ ಪಾಲಿಕೆ ಆಯುಕ್ತರು ಈ ಸಂದರ್ಭದಲ್ಲಿ, ಪೌರ ಕಾರ್ಮಿಕರ ಸುರಕ್ಷತೆಯ ಕಡೆ ಗಮನ ಹರಿಸಿರುವ ರೋಹನ್ ಕಾರ್ಪೊರೇಶನ್ ನ ಸಮಾಜಮುಖಿ ಕಾರ್ಯವನ್ನು ಮೆಚ್ಚಿ, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಪ್ರಾದೇಶಿಕ ವಾರ್ತೆಗಳು

Konkani Culture Takes Center Stage at CASK Reunion 2025

Mangalore, September 21, 2025: The spirit of Konkani culture was celebrated with great fervor at the CASK Reunion 2025, held following the association’s 112th Annual General Meeting. The event transformed St. Sebastian Hall into a vibrant hub of artistic expression and community joy.Anchored by the spirited hosting of Dr. Rohan Monis, Vice President of CASK, the afternoon was a curated showcase of Konkani heritage. The cultural program, guided by the dedication of Mrs. Flora Castelino, featured a diverse range of performances. A key highlight was the Bharatanatyam prayer dance by Remona Evette Pereira, which paid tribute to her recent 170-hour world record feat. In recognition of her exceptional achievements, CASK conferred upon her the prestigious CASK Mothiyam Puraskar. The audience was treated to a rich tapestry of performances, including a spoken tribute to Konkani heritage by Sancia, the traditional percussive rhythms of the Ghumot by Prajwal & Shavil, and lively folk dances like the Dekkni Naach by Melvita’s troupe and the Tonniyo Naach by Romith and team. The melodic strains of a Manddo performance by Franklin added a classic Goan touch to the festivities. In a gesture of appreciation for behind-the-scenes contributions, CASK office staff Ms. Prathima was honored for her unwavering commitment to the association’s objectives.The celebration concluded on a note of lighthearted camaraderie with a lively round of Housie Housie led by Ms. Jinette Dsouza. The reunion successfully blended tradition with celebration, reaffirming CASK’s vital role in nurturing community bonds and artistic excellence.

ಪ್ರಾದೇಶಿಕ ವಾರ್ತೆಗಳು

ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ “ಶಿಕ್ಷಕರ ದಿನ” ಆಚರಣೆ

ಗುರುವಾಯನಕೆರೆ: ಪ್ರತಿಷ್ಠಿತ ವಿದ್ವತ್ ಪಿಯು ಕಾಲೇಜ್ ನಲ್ಲಿ ಇಂದು ” *ಗುರುವಂದನಾ* ” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕ ವೃಂದಕ್ಕೆ ಗೌರವ ಸಮರ್ಪಣೆ ಮಾಡಿದರು. ವಿದ್ಯಾರ್ಥಿಗಳೇ ಏರ್ಪಡಿಸಿದ್ದ ಈ ಗುರುವಂದನಾ ಕಾರ್ಯಕ್ರಮ ಶಿಕ್ಷಕರ ದಿನಾಚರಣೆಯ ಭಾಗವಾಗಿ ಮೂಡಿ ಬಂದದ್ದು ವಿಶೇಷ. ಎಲ್ಲಾ ಶಿಕ್ಷಕರಿಗೂ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡ ವಿದ್ಯಾರ್ಥಿಗಳು ನಂತರ ಪ್ರತಿ ಶಿಕ್ಷಕರಿಗೂ ಆರತಿ ಬೆಳಗುವುದರ ಮೂಲಕ ಅವರಿಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಬಹಳ ವಿಶೇಷವಾಗಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಮಾ. ಕೀರ್ತನ್ ಹಾಗೂ ಕು. ಸೃಷ್ಟಿ ರವರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಶಿಕ್ಷಕರ ಗುಣಗಳನ್ನು ಕೊಂಡಾಡಿ, ಮಹಾದಾಸೆ ಹೊತ್ತು ಶಿಕ್ಷಣಾರ್ಥಿಗಳಾಗಿ ಬಂದ ಮಕ್ಕಳಿಗೆ ಶಿಕ್ಷಕರು ತಾಯಿ ಸಮಾನವಾಗಿ ಕಾಣುತ್ತಾರೆ ಎಂದರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಗುಣಗಾನ ಮಾಡಿ, ಆದರ್ಶ ಶಿಕ್ಷಕ ಹೇಗಿರಬೇಕೆಂಬುದನ್ನು ಒತ್ತಿ ಹೇಳಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಈ ಮಂಡಗಳಲೆಯವರು, ಶಿಕ್ಷಕರು ಮಾಡಬಹುದಾದ ಚಮತ್ಕಾರಗಳ ಬಗ್ಗೆ ಪ್ರಸ್ತಾಪಿಸಿ ಒಬ್ಬ ಶಿಕ್ಷಕ ಹೇಗೆ ತಮ್ಮ ಮಕ್ಕಳು ತಮ್ಮನ್ನು ತಾವೇ ಮುನ್ನಡೆಸಿಕೊಳ್ಳುವ ಬಗೆಯನ್ನು ಅರ್ಥೈಸಿ ಅಳವಡಿಸಿಕೊಳ್ಳಲು ಪ್ರೇರೇಪಿಸಬಹುದು ಎಂಬುದನ್ನು ಮನೋಜ್ಞವಾಗಿ ಎಲ್ಲರ ಮುಂದಿಟ್ಟರು. ಕೊನೆಯಲ್ಲಿ ಮಕ್ಕಳೇ ಪ್ರಸ್ತುತಪಡಿಸಿದ ಶಿಕ್ಷಕರ ಸೇವೆಯನ್ನು ಕೊಂಡಾಡುವ ಸಮೂಹ ಗೀತೆ ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಕೈಗನ್ನಡಿಯಂತಿತ್ತು.  ಕರುನಾಡ ಕನ್ನಡ ಕಲಾಸಿರಿ ಬಳಗ ಬೆಂಗಳೂರು ಇವರ ವತಿಯಿಂದ ನೀಡುವ “2025 ನೇ ಸಾಲಿನ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ” ಗೆ ಭಾಜನರಾಗಿರುವ ವಿದ್ವತ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ನೀಲಕಂಠ  ಅವರನ್ನು,  ಅವರ ಈ ಸಾಧನೆಗಾಗಿ  ಗೌರವಿಸಲಾಯಿತು.  “ವಿದ್ವತ್ ಶಿಕ್ಷಣ ಪ್ರತಿಷ್ಠಾನ” ದ ಕಾರ್ಯದರ್ಶಿಗಳಾದ ಶ್ರೀ ಪ್ರಜ್ವಲ್ ರೈ, ಆಡಳಿತ ಅಧಿಕಾರಿಗಳಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀ ಹರೀಶ್ ಕೆ . ಆರ್ ಹಾಗೂ ಎಲ್ಲಾ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ  ಸಮ್ಯಕ್  ತೇಜಸ್ವಿ ಮತ್ತು  ಚಂದನ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

‘ಕಾಸ್ಕ್’ ಸಂಸ್ಥೆಯ ಮಹಾಸಭೆ ಮತ್ತು ಪುನರ್ಮಿಲನ

ಸಪ್ಟೆಂಬರ್ 21ರಂದು ಬೆಂದೂರ್ ಚರ್ಚ್ ಸಭಾಂಗಣದಲ್ಲಿ ಕಾಸ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ನಡೆಯಿತು. ಮಹಾಸಭೆಯ ನಂತರ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ನೆರವೇರಿತು. ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಾನ್ಸಿಯಾ ಅವರ ಕೊಂಕಣಿ ಪರಂಪರೆಯ ನುಡಿನಮನ, ಪ್ರಜ್ವಲ್ ಮತ್ತು ಶವಿಲ್ ಅವರ ‘ಗುಮಟ್’ ವಾದನ, ಮೆಲ್ವಿಟಾ ಹಾಗೂ ತಂಡದಿಂದ ದೆಖ್ಣಿ ನಾಚ್, ರೋಮಿತ್ ಹಾಗೂ ತಂಡದಿಂದ ತೊಣಿಯೊ ನಾಚ್ ನಂತಹ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಫ್ರ್ಯಾಂಕ್ಲಿನ್ ಅವರ ‘ ಮಾಂಡೊ’ ಗಾಯನವು ಉತ್ಸವಕ್ಕೆ ಶಾಸ್ತ್ರೀಯ ಗೋವಾ ಸೊಬಗನ್ನು ನೀಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿಮಾ ಅವರನ್ನು ಗೌರವಿಸಲಾಯಿತು. ಜಾನೆಟ್ ಡಿಸೋಜಾ ನಡೆಸಿ ಕೊಟ್ಟ ಹೌಸಿ ಹೌಸಿ ಆಟದೊಂದಿಗೆ ಉಪಾಧ್ಯಕ್ಷರಾದ ಡಾ। ರೋಹನ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅ. 2: ಮಂಗಳಾದೇವಿ ದಸರಾ ಕವಿಗೋಷ್ಠಿ – 2025. ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ; ದಶ ಕವಿಗಳ ನವರಸ ರಂಜನೆ

ಮಂಗಳೂರು: ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿಮೇಳವನ್ನು ಏರ್ಪಡಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ.ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ.ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ (ತುಳು) ಇವರು ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸುವರು.ವಿಜಯದಶಮಿ ಪ್ರಯುಕ್ತ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ವಿದ್ಯಾರಂಭ ಮತ್ತು ತುಲಾಭಾರ, ಮಧ್ಯಾಹ್ನ ಹಾಗೂ ಸಂಜೆ ರಥೋತ್ಸವ ನಡೆಯುವುದು. ಮರುದಿನ ಅವಭೃತ ಮಂಗಳ ಸ್ನಾನದೊಂದಿಗೆ ಮಂಗಳಾದೇವಿ ದಸರಾ ಮಹೋತ್ಸವ ಸಂಪನ್ನಗೊಳ್ಳುವುದೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಸಮಿತಿಗೆ ಡಾ.ರಾಜೇಶ್ ಕದ್ರಿ ನೇಮಕ

ಮಂಗಳೂರು : ಕರ್ನಾಟಕ ಸರಕಾರವು ರಾಜ್ಯದಲ್ಲಿ ಕನ್ನಡ ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿದ್ದು , ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಹಾನಗರ ಪಾಲಿಕಾ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 6 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಿರುತ್ತದೆ. ಇವರಲ್ಲಿ ಡಾ.ರಾಜೇಶ್ ಕದ್ರಿ ಕೂಡ ಒಬ್ಬರು.ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಪತ್ರಕರ್ತ,ಪತ್ರಿಕೋದ್ಯಮಿಯಾಗಿದ್ದು,ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಬಂದಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಮೀರಾರೋಡ್ ಶ್ರೀ ಚಾಮುಂಡೇಶ್ವರಿ ಪ್ರಸನ್ನ ಸನ್ನಿಧಿ.ಸೆ.22-ಅ.2: ನವರಾತ್ರಿ ಉತ್ಸವ.

ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಭಕ್ತಾದಿಗಳಿಗೆ ವಿನಂತಿ.ಮೀರಾರೋಡ್,ಮೀರಾ ರೋಡ್ ಶಾಂತಿ ನಗರ ಪ್ರೇಮ್ ಜ್ಯೋತಿ ಸೊಸೈಟಿ, ಸೆಕ್ಟರ್ 4, ಸಿ-002, ಸಿ-19 ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸೆ. 22ರಿಂದ ಅ. 2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸೆ. 22ರಂದು ಬೆಳಿಗ್ಗೆ 6ರಿಂದ ಅರ್ಚಕ ಮೀರಾ ರೋಡ್ ಶ್ರೀಶ ಭಟ್ ನೇತೃತ್ವದಲ್ಲಿ ಗಣಪತಿಹೋಮ, ಕಲಶ ಪ್ರತಿಷ್ಠಾಪನೆ ನೆರವೇರಲಿದೆ.ಸೆ. 22ರಿಂದ ಪ್ರತೀ ರಾತ್ರಿ 7.30ರಿಂದ 9.30ರ ವರೆಗೆ ಸ್ಥಳೀಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.ಸೆ. 26ರಂದು ಬೆಳಿಗ್ಗೆ 7ರಿಂದ ಪಂಚಮಿ ಪೂಜೆ ಪ್ರಯುಕ್ತ ನಾಗದೇವರಿಗೆ ತನು-ತಂಬಿಲ ಸೇವೆ, 11ರಿಂದ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ಭಜನಾಮೃತ, ಮಧ್ಯಾಹ್ನ 12.30ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.ನವರಾತ್ರಿ ಪ್ರಯುಕ್ತ ಶ್ರೀದೇವಿಗೆ ಅರ್ಪಿಸಲಿರುವ ವಿವಿಧ ರೀತಿಯ ಸೇವೆಗಳಿಗಾಗಿ ಮುಂಚಿತವಾಗಿ ಸನ್ನಿಧಾನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top